ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/03/2020

By blogger on ಬುಧವಾರ, ಮಾರ್ಚ್ 4, 2020


                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/03/2020
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- ಯು.ಡಿ ಆರ್.ನಂ.05/2020 ಕಲಂ 174 ??.??? ????:- ಇಂದು ದಿನಾಂಕ.02/03/2020 ರಂದು 12 ಪಿಎಂಕ್ಕೆ ಶ್ರೀ ಮಲ್ಲಿಕಾಜರ್ುನ ತಂದೆ ಬಸಲಿಂಗಪ್ಪ ಈಟೇ ವಃ35 ಜಾಃ ಹೊಲೆಯ ಉಃ ಅಟೋ ಚಾಲಕ ಸಾಃ ಅಂಭೇಡ್ಕರ ನಗರ ಯಾದಗಿರಿ ಠಾಣೆಗೆ ಹಾಜರಾಗಿ ಒಂದು ಹೇಳಿಕೆಯನ್ನು ನೀಡಿದ್ದು ಸಾರಾಂಶವನೆಂದರೆ, ನಾನು ಯಾದಗಿರಿ ನಗರದಲ್ಲಿ ಆಟೋ ಚಾಲನೆ  ಮಾಡಿಕೊಂಡು ಉಪಜೀವಿಸುತ್ತೇನೆ. ಮತ್ತು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ರಾತ್ರಿ ಪಾಳೆ ಸೆಕ್ಯೂರಿಟಿ ಗಾರ್ಡ ಆಗಿ ಎರಡು ವರ್ಷದಿಂದ ಕೆಲಸ ಮಾಡುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ.01/03/2020 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನಾನು ಕೆಲಸಕ್ಕೆಂದು ಸಕರ್ಾರಿ ಆಸ್ಪತ್ರೆಗೆ ಹೋದಾಗ ಆಸ್ಪತ್ರೆಯ ಮುಂದೆ ಒಬ್ಬ ವಯಸ್ಸಾದ ಮುದುಕ ಮನುಷ್ಯ ಅಂದಾಜ ವಯಸ್ಸು 60-65 ಇರಬಹುದು ಸದರಿಯವನು ಮಲಗಿಕೊಂಡಿದ್ದು ನೋಡಿ ನಾನು ಮತ್ತು ಅಲ್ಲಿದ್ದ ಮಲ್ಲಪ್ಪ ತಂ. ಸಣ್ಣಬಾಗಪ್ಪ ಅರಿಕೇರಿ ಕೂಡಿಕೊಂಡು ಹೋಗಿ ನೋಡಲಾಗಿ ಎದ್ದೇಳಲಿಲ್ಲಾ. ಮಲಗಿದಲ್ಲಿಯೇ ಮೃತಪಟ್ಟಿದ್ದನು ಸದರಿಯವನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ. ಸಾದಾ ಕಪ್ಪುಬಣ್ಣ, ಸಾದಾರಣ ಮೈಕಟ್ಟು,  ಮೈಮೇಲೆ ಬಿಳಿ ಬಣ್ಣದ ಅಂಗಿ, ಮತ್ತು ಕಪ್ಪು, ಬಿಳಿ, ನೀಲಿ ಬಣ್ಣದ ಚಕ್ಸ ಲುಂಗಿ ಇರುತ್ತದೆ. ಸದರಿಯವನು   ನಿನ್ನೆ ದಿನಾಂಕ 01/03/2020 ರಂದು ಸಾಯಂಕಾಲ 06-00 ಗಂಟೆಯಿಂದ 8-00 ಗಂಟೆಯ ಅವಧಿಯಲ್ಲಿ ಮೃತಪಟ್ಟಿರಬಹುದು ಅಂತಾ ತಿಳಿದು ಬಂದಿದ್ದು ಮೃತನಿಗೆ ವಯಸ್ಸಾದಂತೆ ಕಂಡು ಬರುತ್ತಿದ್ದು, ಅನಾರೋಗ್ಯದಿಂದ, ನಿಶಕ್ತನಾಗಿ ಯಾವುದೋ ಕಾಯಿಲೆಯಿಂದ ಹೊಟ್ಟೆಗೆ ಆಹಾರವಿಲ್ಲದೆ ಮೃತಪಟ್ಟಂತೆ ಕಂಡು ಬರುತ್ತದೆ.  ಜಿಲ್ಲಾ ಸಕರ್ಾರಿ ಆಸ್ಪತ್ರೆ ಯಾದಗಿರಿಯಲ್ಲಿ ಇರಿಸೋಣ ಅಂತಾ  ಶವವನ್ನು ಸಕರ್ಾರಿ ಆಸ್ಪತ್ರೆಯ ಶವಗಾರ ಕೋಣೆಗೆ ಸಾಗಿಸಿದೆವು. ನಂತರ ಆಸ್ಪತ್ರೆಯವರಿಂದ ತಿಳಿದುಬಂದಿದ್ದೆನೆಂದರೆ ಸದರಿ ಮೃತ ವ್ಯಕ್ತಿಯು ಅನಾರೋಗ್ಯದ ಕಾರಣ ಆಗಾಗ ಆಸ್ಪತ್ರೆಗೆ ಬಂದು ತೋರಿಸಿಕೊಂಡು ಹೋಗುತ್ತಿದ್ದು ಆಗ ಮೃತನ ಹೆಸರು ಪ್ರಕಾಶ  ಯರಗಡ ಹೈದ್ರಾಬಾದ ಇತನು ಬ್ರಾಹ್ಮಣನಿದ್ದು ಹೈದ್ರಾಬಾದನಲ್ಲಿ ಹನಮಾನ ದೇವರ ಗುಡಿ ಪೂಜಾರಿ ಕೆಲಸ ಮಾಡುತ್ತಿದ್ದ ಅಂತಾ ತೆಲುಗು ಬಾಷೆಯಲ್ಲಿ ಈ ಹಿಂದೆ ಆಸ್ಪತ್ರೆಗೆ ತೋರಿಸಿಕೊಳ್ಳಲು ಬಂದಾಗ ಹೆಳಿರುತ್ತಾನೆ ಅಂತಾ ಆಸ್ಪತ್ರೆಯವರಿಂದ ತಿಳಿದುಬಂದಿರುತ್ತದೆ. ಸದರಿಯವನು ಊರುರು ಅಲೆದಾಡಿಕೊಂಡು ಯಾದಗಿರಿಗೆ ಬಂದಿದ್ದು ಅಪರಿಚಿತ ವ್ಯಕ್ತಿಯಾಗಿದ್ದು ಅನಾರೋಗ್ಯದಿಂದ, ನಿಶಕ್ತನಾಗಿ ಹೊಟ್ಟೆಗೆ ಆಹಾರವಿಲ್ಲದೆ ಯಾವುದೋ ಕಾಯಿಲೆಯಿಂದ ಮೃತಪಟ್ಟಂತೆ ಕಂಡು ಬರುತ್ತದೆ. ಇಲ್ಲಿಯವರೆಗೆ ಸದರಿಯವನ ವಾರಸುದಾರರು ಯಾರು ಅಂತಾ ಗೊತ್ತಾಗಿರುವುದಿಲ್ಲಾ. ಮೃತ ವ್ಯಕ್ತಿಯ ಹೆಸರು ಮಾತ್ರ ಗೊತ್ತಾಗಿದ್ದು ಇರುತ್ತದೆ. ಕಾರಣ ಸದರಿಯವನಿಗೆ ಯಾರು ವಾರಸುದಾರರು ಇಲ್ಲದ ಕಾರಣ ಇಂದು ದಿನಾಂಕ 02/03/2020 ರಂದು  ಮದ್ಯಾಹ್ನ 12-00 ಗಂಟೆಗೆ ನಾನು ಠಾಣೆಗೆ ಬಂದು ಈ ದೂರು ನೀಡುತ್ತಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ.05/2020 ಕಲಂ.174 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 66/2020.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್.:- ಇಂದು ದಿನಾಂಕ 02/03/2020 ರಂದು 12.15 ಎ.ಎಂ ಕ್ಕೆ  ಠಾಣೆಗೆ ಬಂದು ಸ.ತ. ಶ್ರೀ ಚಂದ್ರಕಾಂತ ಪಿಎಸ್ಐ. ಶಹಾಪೂರ ಠಾಣೆರವರು ಒಂದು ಮರಳು ತುಂಬಿದ ಟ್ರ್ಯಾಕ್ಟರ್, ಜಪ್ತಿ ಪಂಚನಾಮೆ, ಒಬ್ಬ ವ್ಯಕ್ತಿಯನ್ನು ಹಾಜರಪಡಿಸಿ ವರದಿ ಕೊಟ್ಟ ಸಾರಾಂಶವೆನೆಂದರೆ ದಿನಾಂಕ 01/03/2020 ರಂದು 9.15 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ ಇಬ್ರಾಹಿಂಪೂರ ಹಳ್ಳದ ಕಡೆಯಿಂದ ಇಬ್ರಾಹಿಂಪೂರ ಗ್ರಾಮದ ಮುಖಾಂತರ ಒಂದು ಟ್ರ್ಯಾಕ್ಟರದಲ್ಲಿ ಮರಳು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಗುಂಡಳ್ಳಿ ತಾಂಡಾದ ಕಡೆಗೆ ಬರುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ದೇವರಾಜ ಪಿಸಿ 282 ರವರಿಗೆ ಇಬ್ಬರು ಪಂಚರನ್ನು ಠಾಣೆಗೆ ಕರೆದುಕೊಂಡು ಬರಲು ತಿಳಿಸಿದೆನು. ದೇವರಾಜ ಪಿಸಿ 282 ರವರು ಹೋಗಿ ಇಬ್ಬರು ಪಂಚರಾದ 1) ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 26 ವರ್ಷ ಜಾ|| ಲಿಂಗಾಯತ ಉ|| ಕೂಲಿ ಸಾ|| ಹಳಿಸಗರ ಶಹಾಪೂರ 2) ಶ್ರೀ ನಿಂಗರಾಜ ತಂದೆ ಭೀಮರಾಯ ವ|| 24ವರ್ಷ ಜಾ|| ಲಿಂಗಾಯತ ಉ|| ಕೂಲಿ ಸಾ|| ಮಂಡಗಳ್ಳಿ ಹಾ|| ವ|| ಇಂದಿರಾ ನಗರ ಶಹಾಪೂರ ರವರನ್ನು ಕರೆದುಕೊಂಡು ಠಾಣೆಗೆ ಬಂದಿದ್ದು ಪಂಚರಿಗೆ ಸದರಿ ವಿಷಯ ತಿಳಿಸಿ ನಮ್ಮೊಂದಿಗೆ ಪಂಚರಾಗಿ ಬಂದು ದಾಳಿಗೆ ಸಹಕರಿಸಬೇಕು ಅಂತಾ ಕೇಳಿಕೊಂಡ ಮೇರೆಗೆ ಅವರು ಒಪ್ಪಿಕೊಂಡರು. ನಂತರ ನಾನು ಠಾಣೆಯ ಸಿಬ್ಬಂದಿ ಜನರಾದ ಭೀಮನಗೌಡ ಪಿಸಿ 402, ದೇವರಾಜ ಪಿಸಿ 282 ಮತ್ತು  ಶಿವರಾಜ ಪಿಸಿ 150 ರವರಿಗೆ ವಿಷಯ ತಿಳಿಸಿ ದಾಳಿ ಕುರಿತು ಅವರಿಗೆ ಮತ್ತು ಪಂಚರಿಗೆ ಕರೆದುಕೊಂಡು ಠಾಣೆಯಿಂದ 9.25 ಪಿ.ಎಂ ಕ್ಕೆ  ಠಾಣೆಯ ಜೀಪ್ ನಂ ಕೆಎ 32 ಜಿ 618 ನೇದ್ದರಲ್ಲಿ ಹೊರಟು ಇಬ್ರಾಹಿಂಪೂರ ಗ್ರಾಮದ ಅಬ್ದುಲಭಾಷಾ ದಗರ್ಾದ ಹತ್ತಿರ 9.50 ಪಿ.ಎಂ ಕ್ಕೆ ಹೋಗಿದ್ದು ದಗರ್ಾದ ಹತ್ತಿರ ಮರೆಯಲ್ಲಿ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ನಿಂತೆವು. ನಿಂತಾಗ ಇಬ್ರಾಹಿಂಪೂರ ಹಳ್ಳದ ಕಡೆಯಿಂದ  9.55 ಪಿ.ಎಂ ಕ್ಕೆ ಒಂದು ಮರಳು ತುಂಬಿದ ಟ್ರ್ಯಾಕ್ಟರ ಬಂತು ನಾವು ಅದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರೊದಿಗೆ ಕೈಮಾಡಿ ನಿಲ್ಲಿಸಿ ಟ್ರ್ಯಾಕ್ಟರ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ರಾಮಯ್ಯ @ ಸಣ್ಣರಾಮಯ್ಯ ತಂದೆ ಬಸಣ್ಣ ಕೂಡ್ಲೂರ ವ|| 42ವರ್ಷ ಜಾ|| ಬೇಡರ ಉ|| ಚಾಲಕ ಸಾ|| ಇಬ್ರಾಹಿಂಪೂರ ತಾ||  ಶಹಾಪೂರ ಅಂತಾ ತಿಳಿಸಿದ್ದು, ನಂತರ ಸದರಿ ಟ್ರ್ಯಾಕ್ಟರ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಗಿ ಪತ್ರ(ರಾಜಧನ) ತೆಗೆದುಕೊಂಡು ಬರಲು ಹೇಳಿದಾಗ ಟ್ರ್ಯಾಕ್ಟರ ಚಾಲಕನು ಯಾವುದೇ ಕಾಗದ ಪತ್ರ ಇರುವದಿಲ್ಲಾ ಸದರಿ ಟ್ರ್ಯಾಕ್ಟರ ಚಾಲಕ ಹಾಗೂ ಮಾಲೀಕ ನಾನೇ ಇದ್ದು ನಾನು ಸಕರ್ಾರಕ್ಕೆ ಯಾವುದೇ ರಾಜಧನ ಭರಿಸದೇ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಇಬ್ರಾಹಿಂಪೂರ ಗ್ರಾಮದ ಹತ್ತಿರ ಇರುವ ಹಳ್ಳದಿಂದ ತುಂಬಿ ತೆಗೆದುಕೊಂಡು ಹೋಗುತ್ತಿದ್ದೇನೆ ಅಂತ ಹೇಳಿದ್ದು ಸದರಿ ಟ್ರ್ಯಾಕ್ಟರ ಚಾಲಕನಿಗೆ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ನಂತರ ಸದರಿ ಟ್ರ್ಯಾಕ್ಟರ ನಂಬರ ನೋಡಲಾಗಿ ಅದು ಮಹಿಂದ್ರಾ 575 ಕಂಪನಿಯ ಟ್ರ್ಯಾಕ್ಟರ ಇದ್ದು ಟ್ರ್ಯಾಕ್ಟರಗೆ ನಂಬರ ಇರುವುದಿಲ್ಲ ಅದರ ಇಂಜಿನ್ ನಂ ಓಎಈ2ಒಃಎ0375 ಮತ್ತು ಚಸ್ಸಿ ನಂ ಒಃಓಎಂಂಐಂಃಎಓಈ01321 ನೇದ್ದು ಟ್ರಾಲಿ ಸಮೇತ ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲ ಅದರಲ್ಲಿ ಅಂದಾಜು 1 ಬ್ರಾಸ್ ಮರಳು ತುಂಬಿದ್ದು ಅದರ ಅ|| ಕಿ|| 1500=00 ರೂ ಆಗಬಹುದು ಮತ್ತು ಮರಳು ಸಾಗಾಣಿಕೆ ಮಾಡುತ್ತಿದ್ದ ಮಹಿಂದ್ರಾ 575 ಟ್ರ್ಯಾಕ್ಟರ ಇಂಜಿನ್ ನಂ ಓಎಈ2ಒಃಎ0375 ಮತ್ತು ಚಸ್ಸಿ ನಂ ಒಃಓಎಂಂಐಂಃಎಓಈ01321 ಅ|| ಕಿ|| 4,00,000-00 ರೂ ಇರಬಹುದು. ಸದರಿ  ಟ್ರ್ಯಾಕ್ಟರ ಚಾಲಕ ಮತ್ತು ಮಾಲೀಕ ಇಬ್ಬರೂ ಕೂಡಿ ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ 10.00 ಪಿ.ಎಮ್. ದಿಂದ 11.00 ಪಿ.ಎಮ್ದ ವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿ ಟ್ರ್ಯಾಕ್ಟರನ್ನು ಚಾಲಕನ ಮೂಲಕ ಸಿಬ್ಬಂದಿಯವರ ಸಹಾಯದಿಂದ ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ಠಾಣೆಗೆ 11.45 ಪಿಎಂ ಕ್ಕೆ ತಂದು ನಿಲ್ಲಿಸಿ ವರದಿಯನ್ನು ತಯ್ಯಾರಿಸಿ ಸದರಿ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ ಮುಂದಿನ ಕ್ರಮ ಕೈಕೊಳ್ಳಲು ದಿನಾಂಕ 2/3/2020 ರಂದು 12.15 ಎ.ಎಂ.ಕ್ಕೆ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 66/2020 ಕಲಂ 379. ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 20/2020 ಕಲಂ: 78(3) ಕೆ.ಪಿ.ಆಕ್ಟ್:- ಇಂದು ದಿನಾಂಕ: 02/03/2020 ರಂದು 2-45 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 02/03/2020 ರಂದು ಸಮಯ 12-15 ಗಂಟೆಗೆ ನಾನು ಮತ್ತು ಸಿಬ್ಬಂದಿಯವರಾದ ಶ್ರೀ ಪ್ರಕಾಶ ಹೆಚ.ಸಿ 18, ಶ್ರೀ ಸಾಬರೆಡ್ಡಿ ಪಿಸಿ 290 ರವರು ಠಾಣೆಯಲ್ಲಿದ್ದಾಗ ನನಗೆ ಬಾತ್ಮಿ ಬಂದಿದ್ದೇನಂದರೆ ಟಿ. ವಡಗೇರಾ ಗ್ರಾಮದ ಹನುಮಾನ ದೇವರ ಗುಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಹೊರಟು ಸಮಯ ಮದ್ಯಾಹ್ನ 1 ಗಂಟೆಗೆ ಟಿ. ವಡಗೇರಾ ಗ್ರಾಮದ ಹನುಮಾನ ದೇವರ ಗುಡಿಯಿಂದ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಮರೆಯಾಗಿ ನಿಂತು ನೋಡಲಾಗಿ ಹನುಮಾನ ದೇವಸ್ಥಾನ ಮುಂದಗಡೆ ಸಾರ್ವಜನಿಕ ಕಟ್ಟೆಯ ಮೇಲೆ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಬರೆಸಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ಚೀಟಿಗಳನ್ನು ಬರೆದುಕೊಳ್ಳುತ್ತಿದ್ದಾಗ ಸಮಯ 1-05 ಪಿಎಮ್ ಕ್ಕೆ ನಾನು ಮತ್ತು ಸಿಬ್ಬಂದಿಯವರು ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಲ್ಲಿಕಾಜರ್ುನ ತಂದೆ ಭೀಮರಾಯ ಸಗರ, ವ:28, ಜಾ:ಲಿಂಗಾಯತ, ಉ:ಕೂಲಿ ಸಾ:ಟಿ. ವಡಗೇರಾ ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ 1) ಮಟಕಾ ಅಂಕಿಗಳನ್ನು ಬರೆದ ಒಂದು ಚೀಟಿ ಅ.ಕಿ.00=00, 2) ನಗದು ಹಣ 2500/- ರೂ., 3) ಒಂದು ಬಾಲ ಪೆನ್ನ ಅ.ಕಿ.00=00 ಹೀಗೆ ಒಟ್ಟು 2500/- ರೂ. ಮುದ್ದೇಮಾಲನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿಯವನಿಗೆ ಪಿ.ಎಸ್.ಐ ಸಾಹೇಬರು ಮಟ್ಕಾ ನಂಬರಗಳನ್ನು ಬರೆದ ಚೀಟಿ ಮತ್ತು ಹಣ ಯಾರಿಗೆ ಕೊಡುತ್ತಿ ಎಂದು ಕೇಳಿದಾಗ ಅಮೀರ ಪಟೇಲ್ ತಂದೆ ಖಾಜಾಪಟೇಲ್ ಸಾ:ಟಿ. ವಡಗೇರಾ ಎಂಬ ಬುಕ್ಕಿಗೆ ಕೊಡುವುದಾಗಿ ಹೇಳಿರುತ್ತಾನೆ. ಸದರಿ ಘಟನೆ ಸ್ಥಳವು ಹನುಮಾನ ದೇವರ ಗುಡಿ ಮುಂದಗಡೆ ಇರುವ ಸಾರ್ವಜನಿಕ ಕಟ್ಟೆಯ ಮೇಲೆ ಇರುತ್ತದೆ. ನಂತರ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೇಮಾಲನ್ನು ಹಾಜುರುಪಡಿಸಿದ್ದು ಇರುತ್ತದೆ. ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಗುನ್ನೆ ದಾಖಲ ಮಾಡಿಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡು ಅನುಮತಿ ಪಡೆದುಕೊಂಡು ಇಂದು ದಿನಾಂಕ: 02/03/2020 ರಂದು 4-30 ಪಿಎಮ್ ಕ್ಕೆ ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 20/2020 ಕಲಂ:78 (3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 02/2020 ಕಲಂ 107 ಸಿ.ಆರ್.ಪಿ.ಸಿ:- ಮಾನ್ಯ ನ್ಯಾಯಾಲಯದ ಹದ್ದಿಯ ಪೈಕಿ ಯಾದಗಿರಿ (ಗ್ರಾ) ಠಾಣೆಯ ಹದ್ದಿಯ ಹಳ್ಳಿಗಳ ಭೇಟಿ ಕುರಿತು ಇಂದು ದಿನಾಂಕ 02/03/2020 ರಂದು ಬೆಳಿಗ್ಗೆ 8-15 ಎ.ಎಂ.ದ ಸುಮಾರಿಗೆ ಠಾಣೆಯಿಂದ ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ರಾಜು ಸಿ.ಹೆಚ್.ಸಿ-33, ಪ್ರಭುಗೌಡ ಸಿ.ಪಿ.ಸಿ-361 ರವರೊಂದಿಗೆ ಮುಂಡರಗಿ, ರಾಮಸಮುದ್ರ ಗ್ರಾಮಗಳಿಗೆ ಬೇಟಿ ನೀಡಿ ಅಲ್ಲಿಂದ ಕುರುಕುಂಬಳ ತಾಂಡಾಕ್ಕೆ ಬೆಳಿಗ್ಗೆ 8-45 ಎ.ಎಂ.ಕ್ಕೆ ಬೇಟಿ ನೀಡಿ ತಾಂಡಾದ ಆಗು ಹೋಗುಗಳ ವಿಚಾರಿಸಲಾಗಿ ಭಾತ್ಮೀದಾರರಿಂದ ತಿಳಿದು ಬಂದಿದ್ದೆನೆಂದರೆ ಸದರಿ ಗ್ರಾಮದ ಒಂದನೇ ಪಾಟರ್ಿಯವನಾದ ಪೂಲಸಿಂಗ ತಂದೆ ಸುಬ್ಬಣ್ಣ ಪವ್ಹಾರ ಮತ್ತು ಎರಡನೇ ಪಾಟರ್ಿಯವನಾದ ಹರಿಶ್ಚಂದ್ರ ತಂದೆ ಸುಬ್ಬಣ್ಣ ಪವ್ಹಾರ ಸಾಃ ಇಬ್ಬರೂ ಕುರುಕುಂಬಳ ತಾಂಡಾ ಇವರ ಮಧ್ಯ ಹಿರಿಯರ ಆಸ್ತಿ ಹೊಲ ಸವರ್ೆ ನಂ 18/1 ನೆದ್ದರ ಆಕಾರ 2 ಎಕರೆ 20 ಗುಂಟೆ ಜಮೀನು ಸಂಬಂಧ ನನಗೆ ಪಾಲು ಬರುತ್ತದೆ, ನಿನಗೆ ಪಾಲು ಬರುತ್ತದೆ ಅಂತಾ ವೈಮನಸ್ಸಿನಿಂದ ಎರಡು ಪಾಟರ್ಿಯ ಜನರು ತಮ್ಮ ತಮ್ಮ ಕೈಯಲ್ಲಿ ಕಲ್ಲು ಮತ್ತು ಬಡಿಗೆಗಳನ್ನು ಹಿಡಿದುಕೊಂಡು ತಾಂಡಾದಲ್ಲಿ ತಿರುಗಾಡುತ್ತಾ ಸಾರ್ವಜನಿಕರ ಶಾಂತಿಯನ್ನು ಕದಡುತ್ತಾ ಗ್ರಾಮದಲ್ಲಿ ತಿರುಗಾಡುತ್ತಿದ್ದಾರೆ, ಮತ್ತು ಎರಡು ಪಾಟರ್ೀಯ ಜನರು ಯಾವುದೇ ಸಮಯದಲ್ಲಿ ಆಸ್ತಿ ಹಾನಿ ಮತ್ತು ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವವಿರುತ್ತದೆ ಅಂತಾ ಬಾತ್ಮಿದಾರರಿಂದ ತಿಳಿದು ಬಂದಿದ್ದರಿಂದ ನಂತರ ಮರಳಿ ಠಾಣೆಗೆ ಬೆಳಿಗ್ಗೆ 9-15 ಎ.ಎಮ್ ಕ್ಕೆ ಬಂದು ಸದರಿ ಒಂದನೇ ಪಾಟರ್ಿಯವನಾದ ಪೂಲಸಿಂಗ ತಂದೆ ಸುಬ್ಬಣ್ಣ ಪವ್ಹಾರ ಮತ್ತು ಎರಡನೇ ಪಾಟರ್ಿಯವನಾದ ಹರಿಶ್ಚಂದ್ರ ತಂದೆ ಸುಬ್ಬಣ್ಣ ಪವ್ಹಾರ ಸಾಃ ಇಬ್ಬರೂ ಕುರುಕುಂಬಳ ತಾಂಡಾ ಇವರ ವಿರುದ್ದ ಮುಂಜಾಗೃತಾ ಕ್ರಮವಾಗಿ ಠಾಣೆ ಪಿ.ಎ.ಆರ್. ನಂ 02/2020 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 28/2020 ಕಲಂ 143, 447, 504, 506 ಸಂಗಡ 149 ಐಪಿಸಿ:- ಅರಳಹಳ್ಳಿ ಸೀಮಾಂತರದಲ್ಲಿರುವ ಸವರ್ೆ ನಂ:16 ರಲ್ಲಿ 15 ಎಕರೆ 03 ಗುಂಟೆ ಹೊಲದ ಮಾಲಿಕರು ಫಿಯರ್ಾದಿ ಇದ್ದು ಸದರಿ ಹೊಲದಲ್ಲಿ ಜೋಳದ ಬೆಳೆ ಬಿತ್ತಿದ್ದು ಇರುತ್ತದೆ. ಆರೋಪಿತರು ದಿನಾಂಕ:01/03/2020 ರಂದು ರಾತ್ರಿ 12 ಗಂಟೆ ಸುಮಾರಿಗೆ ಫಿಯರ್ಾದಿ ಹೊಲದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಜೋಳದ ಬೆಳೆ ಕಟಾವು ಮಾಡಿದ್ದು ಇಂದು ದಿನಾಂಕ:02/03/2020 ರಂದು ಮುಂಜಾನೆ 10.30 ಗಂಟೆ ಸುಮಾರಿಗೆ ಫಿಯರ್ಾದಿಯು ಹೊಲಕ್ಕೆ ಹೋಗಿ ಆರೋಪಿತರಿಗೆ ವಿಚಾರಿಸಿದಾಗ ಆರೋಪಿತರು ಫಿಯರ್ಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿಯರ್ಾದಿ ಅಜಿ 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!