ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 28/02/2020

By blogger on ಶನಿವಾರ, ಫೆಬ್ರವರಿ 29, 2020


                                   ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 28/02/2020
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 19/2020 ಕಲಂ: 504,505(2),506 ಐಪಿಸಿ:- ಇಂದು ದಿನಾಂಕ: 28/02/2020 ರಂದು 4-45 ಪಿಎಮ್ ಕ್ಕೆ ಶ್ರೀ ಗುಂಡಪ್ಪ ಹೆಚ್.ಸಿ 37 ವಡಗೇರಾ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 28/02/2020 ರಂದು ತಮ್ಮ ಸೂಕ್ತ ಆದೇಶದಂತೆ ಬೆಳಗ್ಗೆ 10-30 ಗಂಟೆ ಸುಮಾರಿಗೆ ನಾನು ವಡಗೇರಾ ಪಟ್ಟಣದಲ್ಲಿ ಬೀಟ ಕರ್ತವ್ಯ ಕುರಿತು ಹೊದೆನು. ಸದರಿ ವಡಗೇರಾ ಪಟ್ಟಣದಲ್ಲಿ ತಿರುಗಾಡಿ ಹೊಸ ಬೀಟ್ ಸದಸ್ಯರಿಗೆ ಭೇಟಿಯಾಗಿ ಮಾಹಿತಿ ಸಂಗ್ರಹಿಸಿ, ಬೀಟ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬೀಟ ಸದಸ್ಯರು ಮತ್ತು ಗ್ರಾಮಸ್ಥರಾದ 1) ದಾವುದ ತಂದೆ ಪೀರಸಾಬ ಖುರೇಷಿ, 2) ಮಹ್ಮದ ರಫಿಕ ಖತಾಲಿ, 3) ಅಬ್ದುಲ ತಂದೆ ಖಾಸಿಂಸಾಬ ಚಿಗಾನೂರ, 4) ಫಕೀರ ಅಹ್ಮದ ಮರಡಿ, 5) ಚಾಂದ ತಂದೆ ಸೈಯದ ನಾಯ್ಕೋಡಿ ಮತ್ತು ಇತರರಿಂದ ಮಾಹಿತಿ ತಿಳಿದುಬಂದಿದ್ದೇನಂದರೆ ಪ್ರಾಣೇಶ ತಂದೆ ಅಂಬ್ಲಪ್ಪ ರಾವುರಕರ್ ಸಾ:ವಡಗೇರಾ ಈತನು ದಿನಾಂಕ: 25/02/2020 ರಂದು ಮದ್ಯಾಹ್ನ ಸಮಯದಲ್ಲಿ ಮುಸ್ಲಿಂ ಸಮಾಜದವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಅಕ್ಬರ ಇದ್ದ ನಮ್ಮ ಹೆಣ್ಣು ಮಕಳನ್ನು ಎಲ್ಲಾ ಹಾಳು ಮಾಡಿದ, ಟಿಪ್ಪು ಜಯಂತಿ ಮಾಡುತ್ತಿರಿ, ಜಯಂತಿ ಮಾಡುವುದು ನಿಮ್ಮ ಖುರಾನದಲ್ಲಿಯೇ ಇಲ್ಲ. ನೀವು ತುರ್ಕರು ಸರಿಯಾಗಿ ಶಿಕ್ಷಣ ಕಲಿಯಿರಿ. ನಿಮಗೆ ಅಧಿಕಾರ ಮಾಡಲು ಯಾರೂ ಬಿಡುವುದಿಲ್ಲ. ನಿಮ್ಮನ್ನು ಅಡ್ಡಡ್ಡ ಹಾಕಿ ಕಡಿಯುತ್ತಾರೆ. ನೀವು ಏನು ದೇಶ ಆಳತ್ತಿರಿಲೇ ಸೂಳೆ ಮಕ್ಕಳೆ, ಹೋಗ್ರಿ ಪಾಕಿಸ್ತಾನಕ್ಕೆ ಹೋಗಿ ಸಾಯಿರಿ ಅಂತಾ ಮುಂತಾಗಿ ಮೊಬೈಲನಲ್ಲಿ ಆಡಿಯೋ ರೇಕಾರ್ಡ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುತ್ತಾನೆ ಎಂದು ಖಚಿತವಾದ ಮಾಹಿತಿ ತಿಳಿಸಿದರು. ಸದರಿಯವನು ಅನ್ಯ ಧರ್ಮದವರ ಭಾವನೆಗಳಿಗೆ ಧಕ್ಕೆ ತರುವುದಲ್ಲದೆ ಎರಡು ಸಮುದಾಯದವರ ಮಧ್ಯ ದ್ವೇಷ ಬೆಳೆಸುವ ಹೇಳಿಕೆಯನ್ನು ಕೊಟ್ಟಿರುತ್ತಾನೆ. ಮತ್ತು ಅನ್ಯ ಸಮುದಾಯದವರಿಗೆ ಜೀವ ಬೆದರಿಕೆ ಕೂಡಾ ಹಾಕಿರುತ್ತಾನೆ. ಆದ್ದರಿಂದ ಸದರಿ ಪ್ರಾಣೇಶ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 19/2020 ಕಲಂ: 504,505(2),506 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 03/2020 ಕಲಂ 107 ಸಿಆರ್ ಪಿಸಿ:-ಈ ಮೂಲಕ ನಾನು ಸುವಣರ್ಾ ಪಿ.ಎಸ್.ಐ ಸೈದಾಪೂರ ಪೊಲೀಸ್ ಠಾಣೆ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಇಂದು ದಿನಾಂಕ: 28.02.2020 ರಂದು ಬೆಳಿಗ್ಗೆ 9 ಗಂಟೆಗೆ ನಾಗ್ಲಾಪೂರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸದ್ಯದ ಪರಿಸ್ಥಿತಿಯ ಬಗ್ಗೆ ಪೊಲೀಸ್ ಬಾತ್ಮಿದಾರರಿಗೆ ವಿಚಾರಿಸಲಾಗಿ ತಿಳಿದು ಬಂದಿದ್ದೇನೆಂದರೆ, ನಾಗ್ಲಾಪೂರ ಗ್ರಾಮದಲ್ಲಿ ಮೊಬೈಲ್ ನಲ್ಲಿ ಟಿಕಟಾಕ ಮಾಡಿ ಒಂದು ಜಾತಿಯ ಜನರಿಗೆ ಅಪಮಾನ ಮಾಡಿದ್ದರಿಂದಾಗಿ ಎರಡೂ ಜಾತಿಯ ಜನರ ಮಧ್ಯ ಕಲಹವುಂಟಾಗಿ ಪರಸ್ಪರ ಎರಡೂ ಜಾತಿಯ ಜನರ ಮೇಲೆ  ಸೈದಾಪೂರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.22/2020 ಮತ್ತು 24/2020 ನೇದ್ದರಲ್ಲಿ ಗುನ್ನೆ ಮತ್ತು ಪ್ರತಿಗುನ್ನೆಗಳು ದಾಖಲಾಗಿದ್ದು ಇರುತ್ತದೆ. ಸದರಿ ವಿಷಯವಾಗಿ ಗ್ರಾಮದ ಕಬ್ಬಲಿಗ ಸಮಾಜದವರಾದ ಮೊದಲನೆ ಪಾಟರ್ಿಯ ಜನರಾದ 1)ಭದ್ರಪ್ಪ ತಂದೆ ಬನ್ನಪ್ಪ ಬೋಳೋರ, 2) ಗೋಪಾಲ ತಂದೆ ಸಣ್ಣ ಹಣಮಂತ ಬೈನ್ 3) ಸಾಬಯ್ಯ ತಂದೆ ರಾಮಯ್ಯ ಸೀಕಿಣಿ 4) ಹಣಮಂತ ತಂದೆ  ಬನ್ನಪ್ಪ ಸೀಕಿರಿ ಎಲ್ಲರೂ ಸಾ: ಬಳಿಚಕ್ರ ಮತ್ತು 5)ಚಂದ್ರಪ್ಪ ತಂದೆ ಸಣ್ಣ ರಾಚಪ್ಪ 6)ಮಲ್ಲಪ್ಪ ತಂದೆ ಸಣ್ಣ ರಾಚಪ್ಪ 7)ಮಹಾದೇವಪ್ಪ ತಂದೆ ಭೀಮಶಪ್ಪ ಶೇಲ್ಲೆತಿಪ್ಪಯ್ಯನವರ 8)ಈರಪ್ಪ ತಂದೆ ನಾಗರೆಡ್ಡಿ ಚೇಲಿಮನಿ 9)ನರಸಪ್ಪ ತಂದೆ ಮಹಾದೇವಪ್ಪ ಪಿಟೀಲ್ 10)ಮಲ್ಲಪ್ಪ ತಂದೆ ಮಹಾದೇವಪ್ಪ ಪಿಟೀಲ್ 11)ನರಸಿಂಹ ತಂದೆ ಭೀಮಶಪ್ಪ ಶಲ್ಲೇ ತಿಪ್ಪಯ್ಯನವರ 12)ಸಾಬರೆಡ್ಡಿ ತಂದೆ ಮಲ್ಲರೆಡ್ಡಿ ಪಿಟ್ಲೋರ 13)   ಕಾಳಪ್ಪ ತಂದೆ ಮಲ್ಲರೆಡ್ಡಿ ಕಟ್ಟೇರ 14)ನಾಗಪ್ಪ ತಂದೆ ಸಣ್ಣ ಬುಗ್ಗಪ್ಪ ಈರಪ್ಪನ್ನೋರ 15)ಭೀಮಾ ತಂದೆ ನಾಗರೆಡ್ಡಿ ಚೆಲಿಮನಿ ಎಲ್ಲರೂ ಸಾ: ನಾಗ್ಲಾಪೂರ ಇವರು ಮತ್ತು ಎರಡನೇ ಪಾಟರ್ಿಯವರಾದ ಗುನ್ನೆ ನಂ.24/2020 ನೇದ್ದರಲ್ಲಿನ ಆರೋಪಿತರಾದ ನಾಗ್ಲಾಪೂರ ಗ್ರಾಮದ ಬೇಡ ಜನಾಂಗದವರ ಮಧ್ಯೆ ವೈಮನಸ್ಸು ಇದ್ದು, ಎರಡೂ ಕೋಮಿನ ಜನರು ಯಾವ ಸಮಯದಲ್ಲಾದರೂ ಜಗಳ ಮಾಡಿಕೊಂಡು ಜೀವ ಮತ್ತು ಆಸ್ತಿ-ಪಾಸ್ತಿಗೆ ಧಕ್ಕೆ ಉಂಟು ಮಾಡಿಕೊಳ್ಳುವ ಸಂಭವ ಕಂಡು ಬಂದಿರುತ್ತದೆ. ಆದ್ದರಿಂದ ನಾನು ಮರಳಿ 04.00 ಪಿಎಂ ಗಂಟೆಗೆ ಠಾಣೆಗೆ ಬಂದು ಮೇಲ್ಕಂಡ ಜನರ ಮೇಲೆ ಮುಂಜಾಗೃತ ಕ್ರಮವಾಗಿ ಸೈದಾಪೂರ ಪೊಲೀಸ್ ಠಾಣೆ ಪಿ.ಎ.ಆರ್, ನಂ.03/2020 ಕಲಂ.107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಸದರಿ ಎಲ್ಲಾ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಬರ ಮಾಡಿಕೊಂಡು ಕಲಂ 116(3) ಸಿಆರ್ಪಿಸಿ ಅಡಿಯಲ್ಲಿ ಇಂಟಿರಿಯಮ್ ಬಾಂಡ ಬರೆಯಿಸಿಕೊಳಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 04/2020 ಕಲಂ 107 ಸಿಆರ್ ಪಿಸಿ:- ಈ ಮೂಲಕ ನಾನು ಸುವಣರ್ಾ ಪಿ.ಎಸ್.ಐ ಸೈದಾಪೂರ ಪೊಲೀಸ್ ಠಾಣೆ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಇಂದು ದಿನಾಂಕ: 28.02.2020 ರಂದು ಬೆಳಿಗ್ಗೆ 9 ಗಂಟೆಗೆ ನಾಗ್ಲಾಪೂರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸದ್ಯದ ಪರಿಸ್ಥಿತಿಯ ಬಗ್ಗೆ ಪೊಲೀಸ್ ಬಾತ್ಮಿದಾರರಿಗೆ ವಿಚಾರಿಸಲಾಗಿ ತಿಳಿದು ಬಂದಿದ್ದೇನೆಂದರೆ, ನಾಗ್ಲಾಪೂರ ಗ್ರಾಮದಲ್ಲಿ ಮೊಬೈಲ್ ನಲ್ಲಿ ಟಿಕಟಾಕ ಮಾಡಿ ಒಂದು ಜಾತಿಯ ಜನರಿಗೆ ಅಪಮಾನ ಮಾಡಿದ್ದರಿಂದಾಗಿ ಎರಡೂ ಜಾತಿಯ ಜನರ ಮಧ್ಯ ಕಲಹವುಂಟಾಗಿ ಪರಸ್ಪರ ಎರಡೂ ಜಾತಿಯ ಜನರ ಮೇಲೆ  ಸೈದಾಪೂರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.22/2020 ಮತ್ತು 24/2020 ನೇದ್ದರಲ್ಲಿ ಗುನ್ನೆ ಮತ್ತು ಪ್ರತಿಗುನ್ನೆಗಳು ದಾಖಲಾಗಿದ್ದು ಇರುತ್ತದೆ. ಸದರಿ ವಿಷಯವಾಗಿ ಗ್ರಾಮದ ಕಬ್ಬಲಿಗ ಸಮಾಜದವರಾದ ಎರಡನೆ ಪಾಟರ್ಿಯ ಜನರಾದ 1)ಹೇಮರೆಡ್ಡಿ ತಂದೆ ಮಲ್ಲೇಶಪ್ಪ ಜೆಜಪ್ಪನೊರ 30 ವರ್ಷ 2)ಸಾಬಯ್ಯ ತಂದೆ ಹಣಮಂತ ಬೂಸಯ್ಯನೋರ ವ|| 35 3)ಮಲ್ಲಿಕಾಜರ್ುನ ತಂದೆ ಭೀಮಪ್ಪ ಬೂಸಯನೋರ ವ|| 43 4)ಆಶಪ್ಪ ತಂದೆ ಭೀಮಪ್ಪ ರಾಮಚಂದ್ರ ವ|| 50 ವರ್ಷ 5)ಭೀಮರಾಯ ತಂದೆ ಚಂದ್ರಪ್ಪ ಬೂಸಯನೋರ ವ|| 52 6)ಅಂಜಪ್ಪ ತಂದೆ ಬೀಮರಾಯ ದಿಡ್ಡಿ-ವಯ|| 21 ವರ್ಷ 7)ಯಲ್ಲಪ್ಪ ತಂದೆ ಸಾಬಯ್ಯ ಜೆಕ್ಕಿ ವ|| 30 8)ಬೂಸಯ್ಯ ತಂದೆ ನರಸಪ್ಪ ಬೂಸಯ್ಯನೊರ ವ|| 25 9)ಸಾಬಯ್ಯ ತಂದೆ ನರಸಪ್ಪ ಬೂಸಯ್ಯನೊರ ವ||28 10) ರಾಮಪ್ಪ ತಂದೆ ಆಶಪ್ಪ ರಾಮಚಂದ್ರ ವ||23 11) ಭೀಮರಾಯ ತಂದೆ ಹಣಮಂತ ತಬಿಕಿ ವಯ:50 ವರ್ಷ 12) ಭೀಮರಾಯ ತಂದೆ ಮಲ್ಲರೆಡ್ಡಿ ದಿಡ್ಡಿ ವ|| 25 13)ಲಚ್ಚಮಯ್ಯ ತಂದೆ ಸಂಜಿವಪ್ಪ ವ|| 48 14) ಪರುಶುರಾಮ ತಂದೆ ಹಣಮಂತ ಕೋಟಿಗೇರಿ ವ|| 25 15)ಈರಪ್ಪ ತಂದೆ ಹಣಮಂತ ಕೊಟಗೇರಿ ವ|| 26 ಎಲ್ಲರೂ ಜಾ: ಬೇಡರ ಎಲ್ಲರೂ ಸಾ: ನಾಗ್ಲಾಪೂರ ಇವರು ಮತ್ತು ಮೊದಲನೆ ಪಾಟರ್ಿಯವರಾದ ಗುನ್ನೆ ನಂ.22/2020 ನೇದ್ದರಲ್ಲಿನ ಆರೋಪಿತರಾದ ನಾಗ್ಲಾಪೂರ ಮತ್ತು ಬಳಿಚಕ್ರ ಗ್ರಾಮದ ಕಬ್ಬಲಿಗ ಜನಾಂಗದವರ ಮಧ್ಯೆ ವೈಮನಸ್ಸು ಇದ್ದು, ಎರಡೂ ಕೋಮಿನ ಜನರು ಯಾವ ಸಮಯದಲ್ಲಾದರೂ ಜಗಳ ಮಾಡಿಕೊಂಡು ಜೀವ ಮತ್ತು ಆಸ್ತಿ-ಪಾಸ್ತಿಗೆ ಧಕ್ಕೆ ಉಂಟು ಮಾಡಿಕೊಳ್ಳುವ ಸಂಭವ ಕಂಡು ಬಂದಿರುತ್ತದೆ. ಆದ್ದರಿಂದ ನಾನು ಮರಳಿ 05.00 ಪಿ.ಎಂಕ್ಕೆ. ಠಾಣೆಗೆ ಬಂದು ಮೇಲ್ಕಂಡ ಜನರ ಮೇಲೆ ಮುಂಜಾಗೃತ ಕ್ರಮವಾಗಿ ಸೈದಾಪೂರ ಪೊಲೀಸ್ ಠಾಣೆ ಪಿ.ಎ.ಆರ್, ನಂ.04/2020 ಕಲಂ.107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಸದರಿ ಎಲ್ಲಾ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಬರ ಮಾಡಿಕೊಂಡು ಕಲಂ 116(3) ಸಿಆರ್ಪಿಸಿ ಅಡಿಯಲ್ಲಿ ಇಂಟಿರಿಯಮ್ ಬಾಂಡ ಬರೆಯಿಸಿಕೊಳಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ 

ಭಿಗುಡಿ ಪೊಲೀಸ ಠಾಣೆ ಗುನ್ನೆ ನಂ:- 25/2020 ಕಲಂ 41(ಡಿ), 102 ಸಿಆರ್ಪಿಸಿ ಮತ್ತು 379 ಐಪಿಸಿ:-:- ಇಂದು ದಿನಾಂಕ:28/02/2020 ರಂದು 9 ಎಎಮ್ ಕ್ಕೆ ಫಿಯರ್ಾದಿದಾರರು ಪೆಟ್ರೊಲಿಂಗ ಮಾಡುತ್ತಿದ್ದಾಗ ಭೀ.ಗುಡಿಯ ಬಲಭೀಮೇಶ್ವರ ಕಮಾನ ಹತ್ತಿರ ಆರೋಪಿತನು ಮೋ.ಸೈಕಲ್ ನ ಕೆಎ: 32 ಡಬ್ಲು 2612 ನೇದ್ದರ ಮೇಲೆ 3 ನೀರಿನ ಕರೆಂಟ್ ಮೋಟರಗಳನ್ನು ಇಟ್ಟುಕೊಂಡು ಹೋಗುತ್ತಿದ್ದು, ಪೊಲೀಸ್ ಜೀಪ್ ನೋಡಿ ಮರಳಿ ಗೋಗಿ ಕಡೆಗೆ ಹೋಗುತ್ತಿದ್ದಾಗ ಸಂಶಯ ಬಂದು ಸದರಿಯವನಿಗೆ ಹಿಡಿದು ವಿಚಾರಿಸಲಾಗಿ 03 ವಿ-ಗಾರ್ಡ ಕಂಪನಿಯ ಮೋಟರಗಳಿದ್ದು ಒಂದೊಂದಕ್ಕೆ ಅಂದಾಜು 5000-00 ರೂ ಕಿಮ್ಮತ್ತು ಆಗಬಹುದು. ಸದರಿ ಕರೆಂಟ್ ಮೋಟರ್ಗಳ ಬಗ್ಗೆ ವಿಚಾರಿಸಲಾಗಿ ಒಮ್ಮೆ ಬೀಗರ ಊರಿಗೆ ಒಯ್ಯುತ್ತಿರುವದಾಗಿ ಮತ್ತು ಒಮ್ಮೆ ರಿಪೇರಿ ಮಾಡಿಕೊಂಡು ಬರಲು ಶಹಾಪೂರಕ್ಕೆ ಹೋಗುತ್ತಿರುವದಾಗಿ ಹಾರಿಕೆ ಉತ್ತರ ನೀಡತೊಡಗಿದನು. ಸದರಿ ನೀರಿನ್ ಮೋಟರ್ ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಹೊರಟ ಬಗ್ಗೆ ಸಂಶಯ ಬಂದಿದ್ದರಿಂದ ಮುದ್ದೆಮಾಲಿನೊಂದಿಗೆ ವಶಕ್ಕೆ ಪಡೆದು ಆರೋಪಿತನ ವಿರುಧ್ಧ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.

ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:-   03/2020 174 ಸಿ.ಆರ್.ಪಿ.ಸಿ:- ದಿ:27/02/2020 ರಂದು 23.00 ಗಂಟೆಗೆ ಬಾಗಲಕೋಟ ಕೆರೋಡಿ ಆಸ್ಪತ್ರೆಯಿಂದಾ ಮಹಿಬೂಬಸಾಬ ತಂದೆ ಮಶಾಕಸಾಬ ಖುರೇಶಿ ಸಾ:ಹುಣಸಗಿ ಈತನು 20.30 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಎಂದು ಎಂ.ಎಲ್.ಸಿ ಮಾಹಿತಿ  ಬಂದಿದ್ದರಿಂದಾ ಠಾಣೆಯ ಮಾಣಿಕರೆಡ್ಡಿ ಹೆಚ್.ಸಿ-67 ರವರಿಗೆ ನೇಮಿಸಿ ಕಳಿಸಿದ್ದು, ಸದರಿಯವರು ಇಂದು ದಿ:28/02/2020 ರಂದು 17.00 ಗಂಟೆಗೆ ಬಂದು ಮೃತನ ಹೆಂಡತಿಯಾದ ಮೌಲನಾಭೀ ಖುರೇಶಿ ಇವರ ಹೇಳಿಕೆ ಹಾಗೂ ಮೃತನ ಶವ ಪಂಚನಾಮೆ ಹಾಜರಪಡಿಸಿದ್ದು, ಮೌಲನಾಭಿ ರವರು ಹೇಳಿಕೆ ಕೊಟ್ಟಿದ್ದು ಸಾರಾಂಶವೇನೆಂದರೆ, ದಿನಾಂಕ:11/02/2020 ರಂದು ಬೆಳಗಿನ ಜಾವ 3.00 ಗಂಟೆಯ ಸುಮಾರಿಗೆ ಮೃತನು ಮನೆಯ ಮಾಳಿಗೆ ಮೇಲಿಂದಾ ಕಾಲಮಡಿಗೆಂದು ಕೆಳಗಡೆ ಇಳಿಯುವಾಗ ಲುಂಗಿ ಅಡ್ಡ ಬಂದು ಕಾಲಿಗೆ ಸಿಕ್ಕಿಬಿದ್ದದ್ದರಿಂದಾ ಆಯ ತಪ್ಪಿ ಪಾವಟಣಗಿ ಮೇಲೆ ಹಿಂದಕ್ಕೆ ಬಿದ್ದು ಭಾರಿ ಒಳಪೆಟ್ಟಾಗಿ ಮೂರ್ಚ ಹೋಗಿದ್ದು ಉಪಚಾರಕ್ಕೆಂದು ಕೆರೋಡಿ ದವಾಖಾನೆಯಲ್ಲಿ ಉಪಚಾರ ಪಡೆಯುತ್ತಾ, ಉಪಚಾರ ಫಲಕಾರಿಯಾಗದೆ ದಿ:27/02/2020 ರಂದು 20.30 ಗಂಟೆಗೆ  ಮೃತಪಟ್ಟಿರುತ್ತಾನೆ ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
  
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 62/2020. ಕಲಂ 87 ಕೆ.ಪಿ.ಆಕ್ಟ:- ಆರೋಪಿತರು ದಿನಾಂಕ: 28-02-2020 ರಂದು 8:35 ಪಿ.ಎಮ್.ಕ್ಕೆ ಮದರಕಲ್ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ   ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಇಸ್ಪೀಟ ಜೂಜಾಟ ಆಡುತ್ತಿದ್ದಾಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಅವರಿಂದ ಒಟ್ಟು 2110/- ರೂ. ನಗದು ಹಣ ಮತ್ತು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 62/2020 ಕಲಂ.87 ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಇಸಿಕೊಂಡು ತನಿಖೆ ಕೈಗೊಂಡೆಎ

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 61/2020.ಕಲಂಃ 78(3) ಕೆ.ಪಿ.ಆ್ಯಕ್ಟ:- ಇಂದು ದಿನಾಂಕ 28/02/2020 ರಂದು 20-30 ಗಂಟೆಗೆ ಸ|| ತ|| ಪಿಯರ್ಾದಿ ಧರ್ಮಣ್ಣ ಎ.ಎಸ್.ಐ. ಸಾಹೇಬರು ಠಾಣೆಗೆ ಬಂದು ಇಬ್ಬರು ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 28/02/202 ರಂದು ಸಾಯಂಕಾಲ 16-00 ಗಂಟೆಗೆ ಠಾಣೆಯಲ್ಲಿದ್ದಾಗ, ಶಹಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೊಂಗಂಡಿ ಗ್ರಾಮದ ದೇವಮ್ಮ ದೇವಿ ಗುಡಿಯ ಮುಂದೆ ಇಬ್ಬರು ವೆಕ್ತಿಗಳು ಸಾರ್ವಜನಿಕ ಖುಲ್ಲಾ ಜಾಗದಲ್ಲಿ, ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಳ್ಳುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೆರೆಗೆ, ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪುರ ರವರಿಗೆ ಪತ್ರ ವ್ಯವಹಾರ ಮಾಡಿ ಮದ್ಯಾಹ್ನ 17-00 ಗಂಟೆಗೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಶರಣಪ್ಪ ಹೆಚ್,ಸಿ,164, ಭೀಮಣ್ಣ ಹೆಚ್,ಸಿ,122, ರವರಿಗೆ ಮಾಹಿತಿ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಭೀಮಣ್ಣ ಹೆಚ್,ಸಿ,122, ರವರಿಗೆ ಸಾಯಂಕಾಲ 17-10 ಗಂಟೆಗೆ ಕಳುಹಿಸಿಕೊಟ್ಟಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ಪಂಚರಾದ 1] ಶರಣು ತಂದೆ ಶಿವಪ್ಪ ಅಂಗಡಿ ವಯ 26 ವರ್ಷ ಜಾತಿ ಲಿಂಗಾಯತ ಉಃ ಕೂಲಿ ಕೆಲಸ ಸಾಃ ಹಳಿ ಸಗರ ಶಹಾಪೂರ  2] ಶ್ರೀ ಅಮಲಪ್ಪ ತಂದೆ ಭೀಮಪ್ಪ  ಐಕೂರ ವಯ 46 ವರ್ಷ ಜಾತಿ ಪ.ಜಾತಿ ಉಃ  ಕೂಲಿ ಕೆಲಸ ಸಾಃ ದೇವಿ ನಗರ ಶಹಾಪೂರ ಇವರನ್ನು 17-20 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ನಾನು ವಿಷಯ ತಿಳಿಸಿ ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು.
       ನಾನು ಮತ್ತು ಮೇಲ್ಕಂಡ ಸಿಬ್ಬಂದಿಯವರು, ಹಾಗೂ ಪಂಚರು ಖಾಸಗಿ ಜೀಪ ನೇದ್ದರಲ್ಲಿ, ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ. ದಾಳಿ ಕುರಿತು ಠಾಣೆಯಿಂದ 17-30 ಗಂಟೆಗೆ ಹೊರಟೇವು. ನೇರವಾಗಿ ಕೊಂಗಂಡಿ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ 18-00 ಗಂಟೆಗೆ ಹೋಗಿ ಜೀಪ್ ನಿಲ್ಲಿಸಿ ಎಲ್ಲರು ಇಳಿದು ಅಲ್ಲಿಂದ  ನಡೆದುಕೊಂಡು ದೇವಮ್ಮ ದೇವಿಗುಡಿಯ ಮುಂದೆ ಇರುವ ಸಾರ್ವಜನಿಕ ಕುಲ್ಲಾ ಜಾಗೆಯಲ್ಲಿ 2 ಜನ ವ್ಯಕ್ತಿಗಳು ಸಾರ್ವಜನಿಕರಿಗೆ ಕೂಗಿ ಕರೆಯುತ್ತ ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳುತ್ತಿದ್ದು ಮತ್ತು  ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದರು. ಇಬ್ಬರಲ್ಲಿ ಒಬ್ಬನು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದನು ಇನ್ನೋಬ್ಬನು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತ ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ 1 ರೂ ಆಡಿದರೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಸಾರ್ವಜನಿಕರಿಗೆ ಕೂಗಿ ಕರೆಯುತಿದ್ದನು. ಆಗ ನಾವೆಲ್ಲರೂ ಸದರಿಯವರು ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತಪಡಿಸಿಕೊಡು 18-20 ಗಂಟೆಗೆ ನಾವೆಲ್ಲರೂ ದಾಳಿ ಮಾಡಿದಾಗ ಮಟಕಾ ಅಂಕಿಗಳನ್ನು ಬರೆಸಲು ಬಂದ ಜನರು ಓಡಿ ಹೋಗಿರುತ್ತಾರೆ. ದಾಳಿಯಲ್ಲಿ ಸಾರ್ವಜನಿಕರಿಂದ ಹಣ ಪಡೆದು ಕೊಳ್ಳುತ್ತಿರುವನು ಸಿಕ್ಕಿಬಿದ್ದಿದ್ದು ಹಾಗೂ ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತ ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಕೂಗಿ ಕರೆಯುತ್ತಿದ್ದ ವೆಕ್ತಿ ಸಿಕ್ಕಿಬಿದ್ದಿದ್ದು. ಸಾರ್ವಜನಿಕರಿಂದ ಹಣ ಪಡೆದು ಕೊಳ್ಳೂತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ದೇವಪ್ಪ ತಂದೆ ಶೀವಪ್ಪ ಕರಿಗುಡ್ಡ ವ|| 30 ಜಾ|| ಬೇಡರ ಉ|| ಮಟಕಾಬರೆದುಕೊಳ್ಳುವದು ಸಾ|| ಕೊಂಗಂಡಿ ಅಂತ ಹೇಳಿದನು. ಸದರಿಯವನ ಅಂಗಶೋಧನೆ ಮಾಡಿದಾಗ 1) ನಗದು ಹಣ 560/- ರೂಪಾಯಿ ಸಿಕ್ಕಿದ್ದು ಎರಡನೆಯವನು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತ ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಕೂಗಿ ಕರೆಯುತ್ತಿದ್ದ ವೆಕ್ತಿ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಪ್ರಭುಲಿಂಗ ತಂದೆ ಹಣಮಂತ ಕೆರಿಕೊಡಿ ವ|| 38 ಜಾ|| ಬೇಡರ ಉ|| ಮಟಕಾಬರೆದುಕೊಳ್ಳುವದು ಸಾ|| ಸಿದ್ದಾಪೂರ ತಾ|| ಸುರಪೂರ ಅಂತ ಹೆಳಿದನು ಈತನ ಅಂಗ ಸೋದನೆ ಮಾಡಿದಾಗ 2) ಒಂದು ಬಾಲ್ ಪೆನ್ ಅಂ:ಕಿ: 00-00 ರೂ 3) 2 ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಅಂ:ಕಿ:00-00 ರೂ ನೇದ್ದವುಗಳು ಸಿಕ್ಕಿದ್ದು ದಾಳಿಯಲ್ಲಿ ಸಿಕ್ಕಿದ ನಗದು ಹಣ 560/- ರೂಪಾಯಿ ಮತ್ತು ಒಂದು ಬಾಲ್ ಪೆನ್ ಮತ್ತು 2 ಮಟಕಾ ಅಂಕಿ ಸಂಖ್ಯೆಗಳು ಬರೆದ ಚೀಟಿಗಳನ್ನು  ಪಂಚರ ಸಮಕ್ಷಮದಲ್ಲಿ  ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ತಾಬೆಗೆ ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೆಯನ್ನು 18-30 ರಿಂದ 19-30 ರವರೆಗೆ ಜಪ್ತಿ ಪಂಚನಾಮೆಮಾಡಿ. ದಾಳಿಯಲ್ಲಿ ಸಿಕ್ಕ ವ್ಯಕ್ತಿಗಳನ್ನು ತಾಬೆಗೆ ತೆಗೆದು ಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 20-00 ಗಂಟೆಗೆ ಬಂದು ಜಪ್ತಿ ಪಂಚನಾಮೆ, ಮುದ್ದೆಮಾಲನ್ನು ಮತ್ತು ಇಬ್ಬರು ಆರೋಪಿತರನ್ನು ಹಾಜರು ಪಡಿಸಿ 20-20 ಗಂಟೆಗೆ ವರದಿಯನ್ನು ತಯ್ಯಾರಿಸಿ ಮುಂದಿನ ಕ್ರಮಕೈಕೊಳ್ಳುವಂತೆ  ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 61/2020 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 42/2020 ಕಲಂ: 78(3) ಕೆಪಿ ಯಾಕ್ಟ:- ಇಂದು ದಿನಾಂಕ 28/02/2020 ರಂದು 04 ಪಿ.ಎಮ್ ಕ್ಕೆ  ಶ್ರೀ ವೀರಭದ್ರಯ್ಯ. ಎಸ್. ಹಿರೇಮಠ ಸಿಪಿಐ ಹುಣಸಗಿ ವೃತ್ತ ರವರು  ಠಾಣೆಗೆ ಹಾಜರಾಗಿ  ಜ್ಞಾಪನ ನೀಡಿದ್ದೇನಂದರೆ ಇಂದು ದಿನಾಂಕ:28.02.2020 ರಂದು 3 ಗಂಟೆಗೆ ಕೆಂಭಾವಿ ಪೊಲೀಸ್ ಠಾಣೆಯ ಹದ್ದಿಯ ಪೈಕಿ ಕಿರದಳ್ಳಿ ಗ್ರಾಮದ ಹತ್ತಿರ ಪೆಟ್ರೋಲಿಂಗ್ ಕರ್ತವ್ಯದ ಮೇಲೆ ಇದ್ದಾಗ ಕಿರದಳ್ಳಿ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಭಾತ್ಮೀ ಬಂದಿದ್ದು, ಬಾತ್ಮಿ ಬಂದ ಮೇರೆಗೆ ನಾನು ಖುದ್ದಾಗಿ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಮಟಕಾ ನಂಬರ ಬರೆದುಕೊಳ್ಳುವ ಬಗ್ಗೆ 03-30 ಗಂಟೆಗೆ ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು ನಂತರ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ  ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿ ಜ್ಞಾಪನ ನೀಡಿದ ಪ್ರಕಾರ ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು 09 ಪಿ ಎಮ್ ಕ್ಕೆ ಪರವಾನಿಗೆ ಪಡೆದು ಠಾಣಾ ಗುನ್ನೆ ನಂಬರ 42/2020 ಕಲಂ 78[3] ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ಧಾಖಲಿಸಿ ದಾಳಿ ಕೈಕೊಂಡಿದ್ದು ದಾಳಿಯಲ್ಲಿ ಆರೋಪಿ ಗಣೇಶ ತಂದೆ ಗಂಗಾಧರ ವಿಶ್ವಕರ್ಮ ವ|| 35 ಜಾ|| ವಿಶ್ವಕರ್ಮ ಉ|| ಕೂಲಿಕೆಲಸ ಸಾ|| ಕಿರದಳ್ಳಿ ಈತನಿಗೆ ದಸ್ತಗಿರಿ ಮಾಡಿ ಆತನಿಂದ ಪಂಚರ ಸಮಕ್ಷಮ 7500/- ರೂಪಾಯಿ ನಗದು ಹಣ ಹಾಗು ಒಂದು ಮಟಕಾ ಚೀಟಿ ಹಾಗು ಒಂದು ಬಾಲಪೆನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ ಇರುತ್ತದೆ.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 11/2020  ಕಲಂ 279,  338 ಐಪಿಸಿ:- ಇಂದು ದಿನಾಂಕ 28/02/2020 ರಂದು ರಂದು 3 ಪಿ.ಎಂ.ದ ಸುಮಾರಿಗೆ ಈ ಕೇಸಿನ ಗಾಯಾಳು ಹಾಗು ಆರೋಪಿತನಾದ ಬೀಮಶೆಪ್ಪ @ ಬೀಮಪ್ಪ ಈತನು ತನ್ನ ಆಟೋ ನಂಬರ ಕೆಎ-33, 8581 ನೇದ್ದನ್ನು ರಾಮಸಮುದ್ರ ಕಡೆಯಿಂದ ಯಾದಗಿರಿಗೆ ಬರುವಾಗ ಮಾರ್ಗ ಮದ್ಯೆ  ಮುಂಡರಗಿ ಗ್ರಾಮದ ಮುಖ್ಯ ರಸ್ತೆಯ ಮೇಲೆ ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ  ಸ್ಕಿಡ್ ಮಾಡಿ ಅಪಘಾತ ಮಾಡಿದ್ದರಿಂದ ಈ ಅಪಘಾತದಲ್ಲಿ ಆತನ ತಲೆಗೆ ಭಾರೀ ಒಳಪೆಟ್ಟಾಗಿದ್ದು ಮತ್ತು ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಇರುತ್ತದೆ. ಈ ಘಟನೆ ಬಗ್ಗೆ ಪಿಯರ್ಾದಿ ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.11/2020 ಕಲಂ 279,  338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!