ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/02/2020

By blogger on ಶನಿವಾರ, ಫೆಬ್ರವರಿ 29, 2020


                                      ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/02/2020
ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 22/2020 ಕಲಂ: 279, 304(ಎ) ಐಪಿಸಿ :- ಇಂದು ದಿನಾಂಕ:27.02.2020 ರಂದು ಮದ್ಯಾಹ್ನ 2:45 ಪಿಎಮ್ಕ್ಕೆ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ರಾಜನಕೋಳೂರ ರವರು ಫೋನ್ ಮಾಡಿ ರಸ್ತೆ ಅಪಘಾತದಲ್ಲಿ ಜಾಕೀರ ಹುಸೇನ ತಂದೆ ಮೌಲಾಸಾಬ ತಾಳಿಕೋಟಿ ವ:27 ವರ್ಷ ಜಾ:ಮುಸ್ಲೀಂ ಉ:ಲಾರಿ ಚಾಲಕ ಸಾ:ದೇವರ ಹುಲಗಬಾಳ ತಾ:ಮುದ್ದೇಬಿಹಾಳ ಈತನು ಮೃತಪಟ್ಟಿದ್ದು ಆತನ ಶವವು ತಮ್ಮ ಆಸ್ಪತ್ರೆಗೆ ತಂದು ಹಾಕಿದ್ದು ತಾವು ಬಂದು ಮುಂದಿನ ಕ್ರಮ ಜರುಗಿಸಬೇಕು ಅಂತಾ ತಿಳಿಸಿದ್ದರಿಂದ ನಾನು ಹೆಚ್ಸಿ-100, ಪಿಸಿ-132 ರವರೊಂದಿಗೆ ರಾಜನಕೋಳೂರ ಸರಕಾರಿ ಆಸ್ಪತ್ರೆಗೆ ಹೋಗಿದ್ದು ಸ್ವಲ್ಪ ಹೊತ್ತಿನಲ್ಲಿಯೇ ಮೃತನ ತಂದೆಯಾದ ಮೌಲಾಸಾಬ ತಂದೆ ಲಾಳೇಸಾಬ ತಾಳಿಕೋಟಿ ವ:53 ವರ್ಷ ಜಾ:ಮುಸ್ಲೀಂ ಉ:ಒಕ್ಕಲುತನ ಸಾ:ದೇವರ ಹುಲಗಬಾಳ ತಾ:ಮುದ್ದೇಬಿಹಾಳ ಈತನು ಆಸ್ಪತ್ರೆಗೆ ಬಂದಿದ್ದು ಸದರಿಯವನಿಗೆ ಅಪಘಾತದ ಬಗ್ಗೆ ವಿಚಾರಿಸಲಾಗಿ ತಾನು ಈ ಬಗ್ಗೆ ಲಿಖಿತ ಪಿಯರ್ಾದಿ ಸಲ್ಲಿಸುವುದಾಗಿ ತಿಳಿಸಿ 3:45 ಪಿಎಮ್ಕ್ಕೆ
ಪಿಯರ್ಾದಿಯು ಲಿಖಿತ ಪಿಯರ್ಾದಿ ಅಜರ್ಿಯನ್ನು ಕೊಟ್ಟಿದ್ದು ಸದರಿ ಪಿಯರ್ಾದಿಯ ಲಿಖಿತ ಅಜರ್ಿಯೊಂದಿಗೆ  4:00 ಪಿಎಮ್ಕ್ಕೆ ಮರಳಿ ಠಾಣೆಗೆ ಬಂದಿದ್ದು ಸದರಿ ಪಿಯರ್ಾದಿಯ ಲಿಖಿತ ಪಿಯರ್ಾದಿಯ ಸಾರಾಂಶ ಏನೆಂದರೆ, ನಾನು ಒಕ್ಕಲುತನ ಕೆಲಸಮಾಡಿಕೊಂಡು ಉಪಜೀವಿಸುತ್ತೇನೆ. ನನಗೆ ಜಾಕೀರ ಹುಸೇನ ಅಂತಾ ಒಬ್ಬ ಗಂಡು ಮಗ ಹಾಗೂ ಶಾಹೀರಾಬಾನು, ಬಿಸ್ಮಿಲ್ಲಾ ಬೇಗಂ ಅಂತಾ ಇಬ್ಬರು ಹೆಣ್ಣು ಮಕ್ಕಳು ಇದ್ದು ನನ್ನ ಮಗ ಜಾಕೀರ ಹುಸೇನ ಇವರಿಗೆ ಬಲಶೆಟ್ಟಿಹಾಳ ಗ್ರಾಮದ ಬಶೀರಾ ಬೇಗಂ ಇವರೊಂದಿಗೆ ಮದುವೆಯಾಗಿದ್ದು ನನ್ನ ಸೊಸೆ ಬಶೀರಾ ಬೇಗಂ ಇವರು ಹೆರಿಗೆಗಾಗಿ ತನ್ನ ತವರು ಊರಿಗೆ ಬಂದಿದ್ದು ಈ ದಿವಸ ನನ್ನ ಸೊಸೆಯು ಮುಂಜಾನೆ ನನ್ನ ಮಗನಿಗೆ ಫೋನ್ ಮಾಡಿ ನಾನು ಹೆರಿಗೆಗಾಗಿ ಕೋಳೂರ ಸರಕಾರಿ ದವಾಖಾನೆಗೆ ಸೇರಿಕೆಯಾಗಿದ್ದು, ಡಾಕ್ಟರ್ ಇವತ್ತು ಹೆರಿಗೆ ಆಗುತ್ತದೆ ಅಂತಾ ತಿಳಿಸಿದ್ದು, ನೀನು ಕೋಳೂರು ಆಸ್ಪತ್ರೆಗ ಬಾ ಅಂತಾ ತಿಳಿಸಿದ್ದರಿಂದ ನನ್ನ ಮಗ ಜಾಕೀರ ಹುಸೇನನು ಈ ದಿವಸ ಮುಂಜಾನೆ ತನ್ನ ಸೈಕಲ್ ಮೋಟರ್ ಸೈಕಲನ್ನು ತೆಗೆದುಕೊಂಡು ಕೋಳೂರು ಸರಕಾರಿ ಆಸ್ಪತ್ರೆಗೆ ಬಂದಿದ್ದು ಇರುತ್ತದೆ. ನಂತರ ನಾನು ಈ ದಿವಸ ಮದ್ಯಾಹ್ನ 2:30 ಗಂಟೆ ಸುಮಾರಿಗೆ ನಮ್ಮೂರಲ್ಲಿ ಇದ್ದಾಗ ಬಲಶೆಟ್ಟಿಹಾಳ ಗ್ರಾಮದ ನಮ್ಮ ಸಂಬಂಧಿ ರಾಜೇಸಾಬ ತಂದೆ ಇಮಾಮಸಾಬ ನವಲಗುಂದ ಈತನು ನನಗೆ ಫೋನ್ ಮಾಡಿ ನಾನು & ನಮ್ಮ ಸಂಬಂಧಿ ದಸ್ತಗೀರಸಾಬ ತಂದೆ ಸೋಪಿಸಾಬ ಮುಲ್ಲಾ ಇಬ್ಬರೂ ಕೊಡೆಕಲ್ಲಿಗೆ ಹೋಗಿ ಮರಳಿ ನಮ್ಮ ಊರಿಗೆ ಹೋಗಲು ಒಂದು ಆಟೋದಲ್ಲಿ 2:15 ಗಂಟೆ ಸುಮಾರಿಗೆ ಹುಣಸಗಿ-ನಾರಾಯಣಪೂರ ಮುಖ್ಯ ರಸ್ತೆಯ ಮೇಲೆ ಕೊಡೆಕಲ್ಲ ಕೆ.ಇ.ಬಿ ಹತ್ತಿರ ಹೋಗುತ್ತಿರುವಾಗ ಎದುಗಡೆಯಿಂದ ಕೋಳೂರು ಕಡೆಯಿಂದ ಒಬ್ಬ ಮೋಟರ್ ಸೈಕಲ್ ಸವಾರನು ತನ್ನ ಮೋಟರ್ ಸೈಕಲನ್ನು ಅತೀ ವೇಗವಾಗಿ & ಅಲಕ್ಷತದಿಂದ ನಡೆಸಿಕೊಂಡು ಬಂದು ಮೋಟರ್ ಸೈಕಲ್ನ ಮೇಲೆ ನಿಯಂತ್ರಣ ಕಳೆದುಕೊಂಡು ರಸ್ತೆಯ ಕವರ್ಿಂಗ್ ಸಮೀಪ ಮೋಟರ್ ಸೈಕಲ್ ಸಮೇತ ಬಿದ್ದಿದ್ದು, ನಾವು ಆಟೋ ನಿಲ್ಲಿಸಿ ಹೋಗಿ ನೋಡಲಾಗಿ ಸದರಿ ಮೋಟರ್ ಸೈಕಲ್ ಸವಾರನು ನಿಮ್ಮ ಮಗ ಜಾಕೀರ ಹುಸೇನ ಆಗಿದ್ದು, ಅವನಿಗೆ ತಲೆಯ ಭಾರೀ ರಕ್ತಗಾಯವಾಗಿ ಕಿವಿಗಳಲ್ಲಿ & ಮೂಗಿನಲ್ಲಿ ರಕ್ತ ಸ್ರಾವವಾಗಿ ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದರಿಂದ ನಾನು & ದಸ್ತಗೀರಸಾಬ ಮುಲ್ಲಾ ಇಬ್ಬರೂ ಕೂಡಿ ಒಂದು ವಾಹನದಲ್ಲಿ ಜಾಕೀರ ಹುಸೇನನಿಗೆ ಹಾಕಿಕೊಂಡು ಉಪಚಾರಕ್ಕಾಗಿ ರಾಜನಕೋಳೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಆಸ್ಪತ್ರೆಯ ಸಮೀಪ ನಿಮ್ಮ ಮಗನು 2:25 ಗಂಟೆ ಸುಮಾರಿಗೆ ಸತ್ತಿದ್ದು ಅವನ ನಡೆಸುತ್ತಿದ್ದ ಮೋಟರ್ ಸೈಕಲ್ ಅಲ್ಲಿಯೇ ಬಿದ್ದಿದ್ದು ನೀವು ಕೂಡಲೇ ಬರಬೇಕು ಅಂತಾ ತಿಳಿಸಿದ್ದರಿಂದ ನಾನು & ನನ್ನ ಹೆಂಡತಿ ಕೂಡಲೇ ನಮ್ಮೂರಿನಿಂದ ಮೋಟರ್ ಸೈಕಲ್ ತೆಗೆದುಕೊಂಡು ರಾಜನಕೋಳೂರ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗನ ಶವವು ಆಸ್ಪತ್ರೆಯ ಮುಂದೆ ಇದ್ದು ರಾಜೇಸಾಬ ಇವರು ಫೋನ್ ನಲ್ಲಿ ತಿಳಿಸಿದಂತೆ ನನ್ನ ಮಗನ ತಲೆಯ ಮೇಲೆ ಭಾರೀ ರಕ್ತಗಾಯ, ಮೂಗಿನಲ್ಲಿ & ಕಿವಿಯಲ್ಲಿ ರಕ್ತ ಸ್ರಾವವಾಗಿದ್ದು ನನ್ನ ಮಗನು ನಡೆಸುತ್ತಿದ್ದ ಮೋಟರ್ ಸೈಕಲ್ ಕೆಂಪು ಬಣ್ಣದ ಹೊಂಡಾ ಶೈನ್ ಇದ್ದು, ಅದಕ್ಕೆ ನೊಂದಣಿ ಸಂಖ್ಯೆ ಬರೆಸಿರುವುದಿಲ್ಲಾ, ಚಸ್ಸಿ ನಂ: ಒಇಙಎಅ65ಃಂಏಖಿ106020,  ಇಂಜಿನ ನಂಬರ: ಎಅ65ಇ-ಖಿ 2306182 ಇದ್ದು ಈ ಅಪಘಾತವು ನನ್ನ ಮಗನಾದ ಜಾಕೀರ ಹುಸೇನ ತಂದೆ ಮೌಲಾಸಾಬ ತಾಳಿಕೋಟಿ ವ:27 ವರ್ಷ ಜಾ:ಮುಸ್ಲೀಂ ಉ:ಲಾರಿ ಚಾಲಕ ಈತನು ತನ್ನ ಮೋಟರ್ ಸೈಕಲನ್ನು ಅತೀವೇಗವಾಗಿ & ನಿರ್ಲಕ್ಷತನದಿಂದ ಅಡ್ಡಾ-ದಿಡ್ಡಿಯಾಗಿ ನಡೆಸಿಕೊಂಡು ಹೋಗಿ ರಸ್ತೆಯ ಕವರ್ಿಂಗ್ನಲ್ಲಿ ಮೋಟರ್ ಸೈಕಲನ ಮೇಲೆ ನಿಯಂತ್ರಣ ಕಳೆದುಕೊಂಡಿದ್ದರಿಂದ ಸಂಭವಿಸಿದ್ದು ತಾವು ಮುಂದಿನ ಕಾನೂನಿನ ಕ್ರಮ ಜರುಗಿಸಲು ಬೇಕು ಅಂತಾ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:22/2020 ಕಲಂ:279, 304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 23/2020 ಕಲಂ 454,380 ಐಪಿಸಿ:- ಇಂದು ದಿನಾಂಕ: 27.02.2020 ರಂದು 05-00 ಪಿ.ಎಮ್ಕ್ಕೆ ಫಿಯರ್ಾದಿ ಠಾಣೆಗೆ ಬಂದು ಹಾಜರಾಗಿ  ಒಂದು ಗಣಕಯಂತ್ರದಲ್ಲಿ ಟೈಪ ಮಾಡಿಸಿದ ದೂರು ಅಜರ್ಿ ನೀಡಿದ್ದು ಸಾರಾಂಶವೇನೆಂಧರೆ, ದಿನಾಂಕ.25.02.2020 ರಂದು ಬೆಳಿಗ್ಗೆ ಫಿಯರ್ಾದಿ ಮತ್ತು ಆತನ ಹೆಂಡತಿ ಮನೆ ಬಾಗಿಲು ಹಾಕಿಕೊಂಡು ಬಳಿಚಕ್ರ ಗ್ರಾಮದಲ್ಲಿ ಕೂಲಿಕೆಸಕ್ಕೆ ಹೋಗಿ ಕೂಲಿಕೆಲಸದಿಂದ ಮರಳಿ ಸಾಯಂಕಾಲ 04:00 ಗಂಟೆ ಸುಮಾರಿಗೆ ಮನೆಗೆ ಬಂದು ನೋಡಲಾಗಿ ಯಾರೊ ಅಪರಿಚಿತರು ಅಂದಾಜು ಮದ್ಯಾಹ್ನ 2.30 ರಿಂದ 3.00 ಗಂಟೆಯ ಒಳಗೆ ಮನೆಯ ಕೀಲಿಯನ್ನು ಮುರಿದು ಮನೆಯಲ್ಲಿದ್ದ ಪೆಟ್ಟಿಗೆ ಬೀಗವನ್ನು ಮುರಿದು  ಅದರಲ್ಲಿರುವ 55000=00 ರೂಪಾಯಿಗಳು, ಅರ್ದ ತೋಲೆ ಬಂಗಾರ ಜೀರಮಣಿ ಅಂದಾಜು ಕಿಮ್ಮತ್ತು 15000=00 ರೂಪಾಯಿಗಳು ಮತ್ತು  ಅರ್ದ ತೋಲೆ ಬಂಗಾರದ ಬೋರಮಳ ಸರಾ  ಅಂದಾಜು ಕಿಮ್ಮತ್ತು- 15000=00 ರೂಪಾಯಿಗಳು ಹಾಗೂ ಹತ್ತು ತೋಲಿ 2 ಬೆಳ್ಳಿ ಕಾಲು ಚೈನಗಳು ಅಂದಾಜು ಕಿಮಾತು 4000=00ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ.   ಅಂತ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.23/2020 ಕಲಂ.454,380 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 24/2020, ಕಲಂ, 143,147,148, 504 448,323,,354..506.ಸಂಗಡ 149 ಐ ಪಿ ಸಿ :-    ಇಂದು ದಿನಾಂಕ 27-02-2020 ರಂದು  6.00 ಪಿ.ಎಮ್.ಕ್ಕೆ ಫಿಯರ್ಾಧಿದಾರಳಾದ ಶ್ರೀಮತಿ ಮಲ್ಲಮ್ಮ ಗಂಡ ರಾಚಪ್ಪ  ಚೆಲ್ಲಿಮನಿ ವ|| 65 ಜಾತಿ ಕಬ್ಬಲಿಗೇರ ಉ|| ಮನೆ ಕೆಲಸ ಮತ್ತು ಕೂಲಿ ಸಾ|| ನಾಗ್ಲಾಪೂರ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ದೂರು ಅಜರ್ಿ ನೀಡಿದ್ದು, ಸಾರಾಂಶವೆನೆಂದರೆ, ನಮ್ಮೂರ ಬೇಡರ ಸಮಾಜದವರು ಮೊಬೈಲ್ದಲ್ಲಿ ಕಬ್ಬೇರ ಸೂಳೇ ಮಕ್ಕಳಿಗೆ ಕೊಡಲಿಯಿಂದ ಕಡಿಯುತ್ತಿವಿ ನಾವು ನಾಯಕರು ಅಂತ ಮೊಬೈಲ್ದಲ್ಲಿ ಹರಿದಾಡುತ್ತಿದುದ್ದ್ದನ್ನು ನೋಡಿ ನಿನ್ನೆ ದಿನ ನಮ್ಮ ಸಮಾಜದವರು ಬೇಡರ ಸಮಾಜದವರುಗೆ ಕೇಳುವ ವೇಳೆಯಲ್ಲಿ ಒಬ್ಬರಿಗೊಬ್ಬರು ಬಾಯಿ ಮಾತಿನ ತಂಟೆ ತಕರಾರು ಮಾಡಿಕೊಂಡಿದ್ದು.  
  ದಿನಾಂಕ 26-02-2020 ರಂದು ಮುಂಜಾನೆ 8.30 ಗಂಟೆಯ ಸುಮಾರಿಗೆ ಫಿಯರ್ಾದಿದಾರಳು ಮೊಮ್ಮಕ್ಕಳೊಂದಿಗೆ ಮನೆಯಲ್ಲಿದ್ದಾಗ 1) ಹೇಮರೆಡ್ಡಿ ತಂದೆ ಮಲ್ಲೇಶಪ್ಪ ಜೆಜಪ್ಪನೊರ 30 ವರ್ಷ ಸಂಗಡ 15-20 ಜನರು ಕೈ ಯಲ್ಲಿ ಬಡಿಗಿ ಹಿಡಿದುಕೊಂಡು ಬಂದು ಫಿಯರ್ಾದಿಯ ತಲೆಯ ಕೂದಲು ಹಿಡಿದು ದರದರಾನೆ ಹೊರಗೆ ಎಳೆದುಕೊಂಡು ಬಂದು ಏ  ರಂಡಿ ನಿಮ್ಮ ಕಬ್ಬೇರ ಸೂಳೇ ಮಕ್ಕಳದು ಬಾಳ ಆಗಿದೆ ಅಂತ ಅಂದು ಇವರು ನನ್ನ ಸೀರೆ ಕುಬಸ ಜಗ್ಗಾಡಿ, ಕೈಯಿಂದ ಕಪಾಳಕ್ಕೆ, ಬಡಿಗೆಯಿಂದ ಬೆನ್ನಿಗೆ ಹೊಡೆದು ಗುಪ್ತ ಗಾಯ ಮಾಡಿದ್ದು ಗೌರಮ್ಮ ಗಂಡ ಮಲ್ಲರೆಡ್ಡಿ ಇವಳಿಗೆ ಕೈಯಿಂದ ಕಪಾಳಕ್ಕೆ ಬಡಿಗೆಯಿಂದ ಬೆನ್ನಿಗೆ ಹೊಡೆದಿದ್ದು. ದೇವಿಕಿಯಮ್ಮ ಗಂಡ ನಾಗರಡ್ಡಿ ಚೇಲಿಮನಿ, ಬಸಮ್ಮ ಗಂಡ ಮಲ್ಲರೆಡ್ಡಿ ಕಟ್ಟೇರ್ ಬುಗ್ಗಮ್ಮ ಗಂಡ ಬನ್ನಪ್ಪ ಚೇಲಿಮನಿ, ಇವರ ಮನೆಗಳಿಗೆ ಹೊಕ್ಕು ಇವರಿಗೆ ಹೊಡಿ ಬಡಿ ಮಾಡಿ ಈ ಕಬ್ಬೇರ ಸೂಳಿ ಮಕ್ಕಳದು ಬಹಳ ಆಗಿದೆ ಇವರಿಗೆ ಜೀವ ಸಮೇತ ಬಿಡಬಾರದು ಇವರಿಗೆ ಊರು ಖಾಲಿ ಮಾಡಿಸಬೇಕು ಅಂತ  ಜೀವಬೆದರಿಕೆ ಹಾಕಿದ್ದು ಇರುತ್ತದೆ ಊರಲ್ಲಿ ನಮ್ಮ ಜನಾಂಗದವರಿಗೆ ವಿಚಾರಿಸಿ ಇಂದು ತಡವಾಗಿ ಪಿರ್ಯಾದಿ ನೀಡಿರುತ್ತೇನೆ. ನಮ್ಮಗೆ ಹೊಡೆ ಬಡಿ ಮಾಡಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ವಿನಂತಿ ಇರುತ್ತದೆ. ಅಂತಾ ಪಿಯರ್ಾದಿ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆಯ ಗುನ್ನೆ ನಂ 24/2020, ಕಲಂ. 143,147,148,504,448,323,,354.506.ಸಂಗಡ 149 ಐ ಪಿ ಸಿನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು,

ಭಿಗುಡಿ ಪೊಲೀಸ ಠಾಣೆ ಗುನ್ನೆ ನಂ:- 23/2020 ಕಲಂ 78[3] ಕೆಪಿ ಯ್ಯಾಕ್ಟ:- :  ಇಂದು ದಿನಾಂಕ 27/02/2020 ರಂದು ಭೀ.ಗುಡಿಯ ಜ್ಯೋತಿಧಾಬಾ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ರಾಜು ತಂದೆ ಧಾರು ರಾಠೋಡ  ಈತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ನಂಬರ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ. ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 1510=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 10.15 ಎಎಮ್ ದಿಂದ 11.15 ಎಎಮ್ ವರೆಗೆ ಪಂಚನಾಮೆ ಮೂಲಕ ವಶಪಡಿಸಿಕೊಂಡು 11.30 ಎಎಮ್ ಕ್ಕೆ ಠಾಣೆಗೆ ತಂದು ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 02 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ 23/2020 ಕಲಂ 78[3] ಕೆ ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 24/2020 ಕಲಂ 78[3] ಕೆಪಿ ಎಕ್ಟ:- ಇಂದು ದಿನಾಂಕ 27/02/2020 ರಂದು 12 ಪಿಎಮ್ ಕ್ಕೆ ಶಿರವಾಳ ಗ್ರಾಮದ ಅಂಬೇಡ್ಕರ ಚೌಕ್ ಹತ್ತಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಒಬ್ಬ ವ್ಯಕ್ತಿ ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ ನಾನು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ನೋಡಲಾಗಿ ಶಿರವಾಳ ಗ್ರಾಮದ ಅಂಬೇಡ್ಕರ ವೃತ್ತದ ಹತ್ತಿರ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ನಂಬರ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ. ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿರುವದನ್ನು ಖಚಿತಪಡಿಸಿಕೊಂಡು ಮರಳಿ ಠಾಣೆಗೆ ಬಂದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 3.30 ಪಿಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 4.30 ಪಿಎಮ್ ಕ್ಕೆ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 4500=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 04.30 ಪಿಎಮ್ ದಿಂದ 05.30 ಪಿಎಮ್ ವರೆಗೆ ಪಂಚನಾಮೆ ಮೂಲಕ ವಶಪಡಿಸಿಕೊಂಡು 6 ಪಿಎಮ್ ಕ್ಕೆ ಠಾಣೆಗೆ ತಂದು ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ ಬಗ್ಗೆ.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 60/2020 ಕಲಂ 78[3] ಕೆ.ಪಿ ಆಕ್ಟ:- ಇಂದು ದಿನಾಂಕ 27/02/2020 ರಂದು ಸಾಯಂಕಾಲ 16-45 ಗಂಟೆಗೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಹನುಮರೆಡ್ಡೆಪ್ಪ ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ಒಬ್ಬ ವ್ಯಕ್ತಿಯೊಂದಿಗೆ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 27/02/2020 ರಂದು ಮದ್ಯಾಹ್ನ 13-15 ಗಂಟೆಗೆ ಠಾಣೆಯಲ್ಲಿದ್ದಾಗ
ಶಹಾಪೂರ ನಗರದ ಕನ್ಯಾಕೊಳ್ಳುರ ಬೇಸ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ  ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗಿದ್ದರಿಂದ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮದ್ಯಾಹ್ನ 14-00 ಗಂಟೆಗೆ ಅನುಮತಿ ಪಡೆದುಕೊಂಡು ನಂತರ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಮದ್ಯಾಹ್ನ 14-50 ಗಂಟೆಗೆ ದಾಳಿ ಮಾಡಿ  ಆರೋಪಿ ಅಜೀಮ್ ತಂದೆ ಖಾಜಾ ಹುಸೇನ್ ಯಡ್ರಾ ವಯ 22 ವರ್ಷ ಜಾತಿ ಮುಸ್ಲಿಂ ಉಃ ಮಟಕಾ ನಂಬರ ಬರೆದುಕೊಳ್ಳುವದು ಸಾಃ ಸುಮಿತ್ರಾ ಶಾಲೆ ಹತ್ತಿರ ಶಹಾಪೂರ ಹಾಲಿವಸತಿ ಬಡೇ ಬಸೀದ ಹತ್ತಿರ ಗೋಗಿ ಪೇಠ. ಈತನಿಂದ  ನದು ಹಣ 1050 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ಮದ್ಯಾಹ್ನ 15-00 ಗಂಟೆಯಿಂದ ಸಾಯಂಕಾಲ 16-00 ಗಂಟೆಯ ಅವಧಿಯಲ್ಲ ಜಪ್ತಿ ಪಂಚನಾಮೆ ಜಪ್ತಿ ಪಡಿಸಿಕೊಂಡಿರುತ್ತದೆ ಸದರಿ ಆರೋಪಿತನ ವಿರುದ್ದ  ಕ್ರಮ ಕೈಕೊಳ್ಳಲು ಸೂಚಿಸಿದ ಮೇರೆಗೆ ಫಿಯರ್ಾದಿಯವರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 60/2020 ಕಲಂ 78 (3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 58/2020 ಕಲಂ 379,420 ಐಪಿಸಿ  :- ಇಂದು ದಿನಾಂಕ:19/01/2020 ರಂದು 6 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಶರಣಪ್ಪತಂದೆರಾಜಣ್ಣಕೋರಿ ವಯಾ:48 ವರ್ಷ ಉ:ಒಕ್ಕಲುತನ ಜಾತಿ:ಲಿಂಗಾಯತ ಸಾ:ಚನ್ನಪಟ್ಟಣತಾ:ಸುರಪೂರಇವರುಠಾಣೆಗೆ ಬಂದುಒಂದುಗಣಕೀಕೃತಅಜರ್ಿ ನಿಡಿದ್ದು ಸಾರಾಂಶವೆನಂದರೆ ಸುರಪೂರದಲ್ಲಿರುವಕೇನರಾ ಬ್ಯಾಂಕಿನಲ್ಲಿ ನಾನು ಟ್ಯಾಕ್ಟರ ಸಲುವಾಗಿ ಲೋನ ಮಾಡಿದ್ದುಇರುತ್ತದೆ.  ಇಂದು ದಿನಾಂಕ:27-02-2020 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾನು ನಮ್ಮಚನ್ನಪಟ್ಟಣಗ್ರಾಮ ಬಿಟ್ಟು ಸುರಪೂರಕೇನರ್ಯಾ ಬ್ಯಾಂಕಿಗೆಟ್ಯಾಕ್ಟರಗೆ ಮಂಜೂರಾದ ಲೋನ ಹಣವನ್ನು ತಗೆದುಕೊಳ್ಳಲು ಸುರಪೂರಕ್ಕೆಕೇನರಾ ಬ್ಯಾಂಕಿಗೆ ಬೆಳಿಗ್ಗೆ 10-45 ಗಂಟೆಗೆ ಬಂದು ಬ್ಯಾಂಕಿನಿಂದಒಟ್ಟು 90000=00 ಹಣವನ್ನು ನನ್ನಖಾತೆ ನಂಬರ 1406101028331 ರಿಂದ ಹಣಡ್ರಾ ಮಾಡಿಕೊಂಡು ನಾನು ಮನೆಯಿಂದತಂದಿದ್ದ ಬಟ್ಟಿ ಕೈ ಚೀಲದಲ್ಲಿಇಟ್ಟುಕೊಂಡು ಬ್ಯಾಂಕಿನಿಂದ ಹೊರಗಡೆ ಬಂದು ಬ್ಯಾಂಕಿನ ಮುಂದುಗಡೆ ನಿಲ್ಲಿಸಿದ ನನ್ನ ಸೈಕಲ್ ಮೋಟಾರ ನಂಬರ: ಕೆಎ-33 ಜೆ-7376 ಹತ್ತಿರ ಹೋಗಿ ನನ್ನ ಹಣವಿದ್ದಕೈಚಿಲನ್ನು ಸೈಕಲ್ ಮೋಟಾರಟ್ಯಾಂಕಿನಕವರನಲ್ಲಿಟ್ಟು ಮೊಟಾರ ಸೈಕಲ್ ಚಾಲು ಮಾಡಿಕೊಂಡು ಬೆಳಿಗ್ಗೆ ಅಂದಾಜು 11-45 ಗಂಟೆ ಸುಮಾರಿಗೆ ಬ್ಯಾಂಕಿನಿಂದ ಹೊರಟುಗಾಂಧಿಚೌಕದಲ್ಲಿ ಹೋಗುತ್ತಿರುವಾಗಇಬ್ಬರುಅಪರಿಚಿತ ವ್ಯಕ್ತಿಗಳು ನನ್ನ ಮೊಟಾರ ಸೈಕಲ್ ಹತ್ತಿರ ಬಂದವರೆಅದರಲ್ಲಿಒಬ್ಬ ವ್ಯಕ್ತಿಯು ನನಗೆ  ಕೈ ಮಾಡಿಯಣ್ಣಾ ನಿನ್ನರೊಕ್ಕ ಕೆಳಗೆ ಬಿದ್ದಾವ ನೋಡುಅಂತಾ ಹೇಳಿದಾಗ ನಾನು ಗಾಡಿ ನಿಲ್ಲಿಸಿ ಹಿಂದೆ ಹೊಳ್ಳಿ ನೋಡಿದಾಗಗಾಡಿ ಹಿಂದೆಚಿಲ್ಲರೆ 10 ರೂಪಾಯಿಯ ಹಾಗೂ 50 ರೂಪಾಯಿ ನೋಟುಗಳು ಬಿದ್ದಿದ್ದು, ಅವುಗಳನ್ನು ನೋಡಿಅವರಿಗೆ ಅವು ನನ್ನದುಡ್ಡುಅಲ್ಲಅಂತಾಅಂದಾಗಅವರು ಮತ್ತೆ ನೀಮ್ಮುವೆ ನೋಡುಅಣ್ಣಾತೋಗೊಅಂತಾ ಹೇಳಿದಾಗ ನಾನು ಸೈಕಲ್ ಮೋಟಾರ ಮೇಲಿಂದ ಬಗ್ಗಿ ಅವುಗಳನ್ನು ತಗೆದುಕೊಳ್ಳುತ್ತಿರುವಾಗ ಅವರಲ್ಲಿಯ  ಕೆಂಪು ಅಂಗಿ ಧರಿಸಿದ ಒಬ್ಬ ವ್ಯಕ್ತಿ  ನನ್ನ ಮೊಟಾರ ಸೈಕಲ್ಟ್ಯಾಂಕಕವರಿನಲ್ಲಿಟ್ಟಿದ್ದ 90 ಸಾವೀರ ರೂಗಳ ಕೈಚೀಲವನ್ನುತಗೆದುಕೊಂಡುಓಡಲು ಪ್ರಾರಂಬಿಸಿದನು ಅವನ ಜೋತೆಇನ್ನೊಬ್ಬ ಬಿಳಿ ಪಟ್ಟಾ ಪಟ್ಟಿ ಅಂಗಿ ತೊಟ್ಟಿದ್ದ ವ್ಯಕ್ತಿಇಬ್ಬರುಒಡುತ್ತಿರುವಾಗ ನಾನು ಗಾಭರಿಗೊಂಡುಚೀರಿ ಮೋಟಾರ ಸೈಕಲ್ ಇಳಿದು ಅವರಿಬ್ಬರ  ಬೆನ್ನು ಹತ್ತಲುಅವರು ನನ್ನಿಂದಗಾಂಧಿಚೌಕದಲ್ಲಿರುವ ಬೆಕರಿ ಸಂಧಿಯಲ್ಲಿ ತಪ್ಪಿಸಿಕೊಂಡು ಓಡಿ ಹೋದರು. ನಂತರ ನನಗೆ ಏನು ತೋಚದೆಇರುವದರಿಂದಊರಲ್ಲಿದ್ದ ನನ್ನ ಹೆಂಡತಿಯಾದ ಸುಗಮ್ಮ ಮಕ್ಕಳಾದ ಮಲ್ಲಿಕಾಜರ್ುನ ಹಾಗೂ ಶಿವಕುಮಾರ ಇವರಿಗೆ ವಿಷಯ ತಿಳಿಸಿ ಅವರು ಸುರಪೂರಕ್ಕೆ ಬಂದ  ನಂತರಅವರೊಂದಿಗೆ ವಿಚಾರ ಮಾಡಿಠಾಣೆಗೆತಡವಾಗಿ ಬಂದುದೂರು ನಿಡಿದ್ದುಇರುತ್ತದೆ. ನನ್ನ ಹಣ ಕಳವು ಮಾಡಿದಇಬ್ಬರು ವ್ಯಕ್ತಿಗಳು ಅಂದಾಜು 25 ರಿಂದ 26 ವರ್ಷದವರಿದ್ದುಒಬ್ಬನು ಕೆಂಪು ಬಣ್ಣದ ಅಂಗಿ ಇನ್ನೊಬ್ಬನು ಬಿಳಿ ಪಟ್ಟ ಪಟ್ಟಿ ಅಂಗಿ ತೊಟ್ಟಿರುತ್ತಾನೆ. ಇಬ್ಬರುಅಪರಿಚಿತ ವ್ಯಕ್ತಿಗಳು ನನ್ನ ಗಮನ ಬೇರೆಕಡೆ ಸೆಳೆದು ಮೋಸ ಮಾಡಿ ನನ್ನ ಮೊಟಾರ ಸೈಕಲ್ಟ್ಯಾಂಕಕವರಿನಲ್ಲಿಟ್ಟಿದ್ದಒಟ್ಟು 90 ಸಾವಿರ ನಗದು ಹಣವನ್ನು ಕಳವು ಮಾಡಿದವರ ಮೇಲೆ ದೂರು ದಾಖಲಿಸಿ ನನ್ನ ಕಳುವಾದ ಹಣ ಪತ್ತೆ ಮಾಡಿಕೊಡಲು ವಿನಂತಿಅಂತಾಕೊಟ್ಟಅಜರ್ಿ ಸಾರಾಂಶದ ಮೇಲಿಂದಠಾಣಾಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದೆ                                                                      
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 59/2020 ಕಲಂ  87 ಕೆ.ಪಿ.ಕಾಯ್ದೆ  :- ಇಂದು ದಿನಾಂಕ:27/02/2020 ರಂದು 8-15ಪಿ.ಎಮ್. ಕ್ಕೆ ಶ್ರೀ ಚೇತನ್ ಪಿ.ಎಸ್.ಐ (ಕಾ&ಸೂ) ಸುರಪೂರ  ಪೊಲೀಸ್ ಠಾಣೆ ರವರು ಇಬ್ಬರು ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ಠಾಣೆಗೆ ಬಂದು ವರದಿ ನೀಡಿದ್ದು, ಸಾರಾಂಶವೆನೆಂದರೆ ಇಂದು ದಿನಾಂಕ:27-02-2020 ರಂದು 5-30 ಪಿ.ಎಂ. ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪುರ ಠಾಣೆ ವ್ಯಾಪ್ತಿಯ ದೇವಿಕೇರಾ ಸೀಮಾಂತರದ ಪೂಲ ಹತ್ತಿರ ಸಾರ್ವಜನಿಕ  ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ನಾನು ಸಂಗಡ ಠಾಣೆಯ ಶ್ರೀ ಶರಣಪ್ಪ 

ಪಿ.ಎಸ್.ಐ (ಅ&ವಿ) ಹಾಗೂ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಗೋಪಾಲ ಹೆಚ್ಸಿ-183 3) ಶ್ರೀ ನಿಂಗಪ್ಪ 
ಹೆಚ್ಸಿ-118 4) ಶ್ರೀ ಶರಣಗೌಡ ಸಿಪಿಸಿ-218 5)ಶ್ರೀ ವಿರೇಶ ಸಿಪಿಸಿ-374 6) ಶ್ರೀ ಬಸಯ್ಯಾಸ್ವಾಮಿ ಸಿಪಿಸಿ-129 7) ಶ್ರೀ ಪರಮೇಶ ಸಿಪಿಸಿ-142 8) ಶ್ರೀ ಶಬ್ಬಿರ ಸಿಪಿಸಿ-201 9) ಈರಣ್ಣ ಹೆಚ್ಸಿ-28 10) ಶ್ರೀ ಅಮರಪ್ಪ ಸಿಪಿಸಿ-176 11) ಶ್ರೀ ಸುಭಾಸ ಸಿಪಿಸಿ-174  ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದ್ರಿ ವ|| 56 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ ಸಾ|| ದೇವಾಪೂರ 2) ಕೃಷ್ಣಪ್ಪ ತಂದೆ ಅಯ್ಯಪ್ಪ ಡೊಳ್ಳ ವ|| 55 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ವೆಂಕಟಾಪೂರಇವರನ್ನು 05-45 ಪಿ.ಎಂ.ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 6 ಪಿ.ಎಮ್ ಕ್ಕೆ ಠಾಣೆಯ ಜೀಪ ನಂಬರ ಕೆಎ-33 ಜಿ-0094 ನೇದ್ದರಲ್ಲಿ ಹೊರಟು 06-30 ಪಿ.ಎಮ್ ಕ್ಕೆ ದೇವಿಕೇರಾ ಪೂಲ ಹತ್ತಿರ  ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಪೂಲ ಪಕ್ಕದಲ್ಲಿರುವ  ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಬ್ಯಾಟರಿ ಬೆಳಕಿನಲ್ಲಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 06-35 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿ ಇಬ್ಬರು ಸಿಕ್ಕಿದ್ದು ಸಿಕ್ಕಿದ್ದು 5-6 ಜನರು  ಓಡಿ ಹೋಗಿದ್ದು ಸಿಕ್ಕ ಇಬ್ಬರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ಭಿಮರಾಯ ತಂದೆ ಹಣಮಂತ ಕನರ್ಾಳ ವಯಾ:30 ವರ್ಷ ಉ:ಹಮಾಲಿ ಜಾತಿ:ಬೇಡರ ಸಾ:ತಿಮ್ಮಾಫೂರ ಇವನ ಹತ್ತಿರ 600=00 ರೂಗಳು ದೊರೆತವು 2) ಗಿರಿಮಲ್ಲಪ್ಪ ತಂದೆ ಮಲ್ಲಪ್ಪ ಶೆಟ್ಟಿ ವಯಾ:22 ವರ್ಷ ಉ:ಅಟೋ ಡ್ರೈವರ ಜಾತಿ:ಹೊಲೆಯ ಸಾ:ಹೇಮನೂರ ಇವನ ಹತ್ತಿರ 300=00 ರೂಗಳು ದೊರೆತವು ಇದಲ್ಲದೆ ಪಣಕ್ಕೆ ಇಟ್ಟ ಹಣ 460/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 1360/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 06:35 ಪಿ.ಎಮ್.ದಿಂದ 07-35 ಪಿ.ಎಮ್ ವರೆಗೆ ಬ್ಯಾಟರಿ ಲೈಟಿನ ಬೆಳಕಿನಲ್ಲಿ ಬರೆದುಕೊಂಡಿದ್ದು ಇರುತ್ತದೆ. ಸದರಿಯವರಿಂದ ಓಡಿ ಹೋದವರ ಹೆಸರು ವಿಳಾಸ ಕೇಳಿ ತಿಳಿದುಕೊಂಡಿದ್ದು 1) ಯಲ್ಲಪ್ಪ ತಂದೆ ಸಿದ್ದಪ್ಪ ತಿಮ್ಮಾಪೂರ 2) ಬೀಮಣ್ಣ ಪೂಜಾರಿ ಜಾತಿ:ವಡ್ಡರ ಸಾ:ತಿಮ್ಮಾಪೂರ 3) ರಮೇಶ ಜಾತಿ:ಬಣಜೇಗರ ಉ:ಪಾನ ಶಾಪ ಅಂಗಡಿ ಸಾ:ತಿಮ್ಮಾಪೂರ 4) ರಾಮು ಉ:ಪೇಂಟರ ಕೆಲಸ ಸಾ:ತಿಮ್ಮಾಪೂರ  5) ಬೀಮಾಶಂಕರ ತಂದೆ ಶಿವಣ್ಣ ಉ: ಟ್ಯಾಕ್ಟರ ಡ್ರೈವರ ಸಾ:ಕನರ್ಾಳ 6) ಬಸವರಾಜ ತಂದೆ ಬೀಮಣ್ಣ ಉ:ಗೌಂಡಿ ಸಾ: ತಿಮ್ಮಾಪೂರ ಅಂತಾ ಇರುತ್ತದೆ. ಸದರಿ ಸಿಕ್ಕ ಇಬ್ಬರೊಂದಿಗೆ ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ, 2 ಜನ ಆರೋಪಿತರನ್ನು ಮತ್ತು ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಒಟ್ಟು 8 ಜನ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ನೀಡಿದ್ದರ  ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ 
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 39/2020 ಕಲಂ: 87 ಕೆಪಿ ಆಕ್ಟ :- ಇಂದು ದಿನಾಂಕ: 27.02.2020 ರಂದು 13.00 ಘಂಟೆಗೆ ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ತಿಪನಟಗಿ ಗ್ರಾಮದ ಹನುಮಾನ ದೇವರ ಗುಡಿಯ  ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33 ಜಿ 0074 ನೇದ್ದರಲ್ಲಿ ಸದರ ಹನುಮಾನ ದೇವರ ಗುಡಿಯ ಪಕ್ಕದಲ್ಲಿ ಮರೆಯಾಗಿ ನಿಂತು ಆರೋಪಿತರು ಜೂಜಾಟ ಆಡುವ ಬಗ್ಗೆ ಖಚಿತಪಡಿಸಿಕೊಂಡು 14.05 ಗಂಟೆಗೆ ದಾಳಿ ಮಾಡಿದ್ದು ದಾಳಿಯಲ್ಲಿ 08 ಜನ ಆರೋಪಿತರು ಸಿಕ್ಕಿದ್ದು  ಮತ್ತು ಒಟ್ಟು 12,400- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳು ಸಿಕ್ಕಿದ್ದು ಸದರಿಯವುಗಳನ್ನು 02.05 ಪಿ.ಎಂ ದಿಂದ  03.05 ಪಿ.ಎಂದವರಗೆ ಪಂಚರ ಸಮಕ್ಷಮ ವಶಪಡಿಸಿಕೊಂಡು ಠಾಣೆಗೆ 03.45 ಪಿ.ಎಮ್ ಕ್ಕೆ ಬಂದು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ್ದು ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು 06 ಪಿಎಮ್ ಕ್ಕೆ ಸದರಿ ವರದಿ ಆಧಾರದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 39/20 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 40/2020 ಕಲಂ: 279,337,338 ಐ.ಪಿ.ಸಿ ಸಂ 187 ಐ ಎಮ್ ವಿ ಆಕ್ಟ್:- ಇಂದು ದಿನಾಂಕ 27/02/2020 ರಂದು ಯುನೈಟೆಡ್ ಆಸ್ಪತ್ರೆ ಕಲಬುಗರ್ಿಯಿಂದ ಆರ್ ಟಿ ಎ ಎಮ್ ಎಲ್ ಸಿ ವಸೂಲಾದ ಮೇರೆಗೆ ಆಸ್ಪತ್ರೆಗ ಬೇಟಿ ನೀಡಿ ಗಾಯಾಳು ಮಾತನಾಡುವ ಸ್ತಿತಿಯಲ್ಲಿ ಇರದೇ ಇರುವದರಿಂದ ಗಾಯಾಳುವಿನ ಹೆಂಡತಿ ಶರಣಮ್ಮ ಗಂಡ ವಿಠಲ ಗೌಂಡಿ ವಯಾ|| 38 ಜಾ|| ಹಿಂದು ಹೊಲೆಯ ಉ|| ಕೂಲಿಕೆಲಸ ಸಾ|| ಮಲ್ಲಾ[ಕೆ] ತಾ|| ಸುರಪುರ  ಇವರ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದಿದ್ದು ಸದರ ಹೇಳಿಕೆ ಸಾರಾಂಶವೇನಂದರೆ ನಿನ್ನೆ ದಿನಾಂಕ 26/02/2020 ರಂದು ಮುಂಜಾನೆ 09 ಗಂಟೆಯ ಸುಮಾರಿಗೆ ನನ್ನ ಗಂಡ ವಿಠಲ ಹಾಗು ನಮ್ಮೂರ ನಮ್ಮ ಜನಾಂಗದ ಮಲ್ಲಿಕಾಜರ್ುನ ತಂದೆ ಅಯ್ಯಪ್ಪ ಗೌಂಡಿ ಇಬ್ಬರೂ ಕೂಡಿಕೊಂಡು ನಮ್ಮ ಮೋಟರ ಸೈಕಲ ಮೇಲೆ ಏವೂರ ಗ್ರಾಮಕ್ಕೆ ಗೌಂಡಿ ಕೆಲಸಕ್ಕೆಂದು ಹೋದರು. ರಾತ್ರಿ 07-30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರ ಬಸನಗೌಡ ತಂದೆ ಶಿವಪ್ಪಗೌಡ ಮೇಟಿ ಇವರು ನಮ್ಮ ಮನೆಗೆ ಪೋನ ಮಾಡಿ ತಿಳಿಸಿದ್ದೇನಂದರೆ ನನ್ನ ಗಂಡ ವಿಠಲ ಹಾಗು ಮಲ್ಲಿಕಾಜರ್ುನ ಗೌಂಡಿ ಇಬ್ಬರೂ ಕೂಡಿಕೊಂಡು ತಮ್ಮ ಕೆಲಸ ಮುಗಿಸಿ ಮರಳಿ ಊರಿಗೆ ಬರುವ ಕುರಿತು ನಮ್ಮ ಮೋಟರ ಸೈಕಲ ಮೇಲೆ ಬರುತ್ತಿದ್ದು ಸದರ ಮೋಟರ ಸೈಕಲ ನನ್ನ ಗಂಡನೇ ನಡೆಸುತ್ತಿದ್ದು ಆಗ ಇಬ್ಬರೂ ಕೂಡಿಕೊಂಡು ಮಲ್ಲಾ ಶಹಾಪೂರ ಮುಖ್ಯ ರಸ್ತೆಯ ಮಲ್ಲಾ ಬಿ ಹತ್ತಿರದ ಇಟ್ಟಂಗಿ ಬಟ್ಟೆಯ ಹತ್ತಿರ ರೋಡಿನಲ್ಲಿ ಬರುತ್ತಿದ್ದಾಗ ಟ್ರ್ಯಾಕ್ಟರ ಅಪಘಾತವಾಗಿದೆ  ಅಂತ ತಿಳಿಸಿದಾಗ ಕೂಡಲೇ ನಾನು ಹಾಗು ನಮ್ಮ ಮಾವ ಮಾನಪ್ಪ ತಂದೆ ರಾಮಪ್ಪ ಗೌಂಡಿ ಇಬ್ಬರು ಕೂಡಿ ಸದರ ಸ್ಥಳಕ್ಕೆ ಬಂದು ನೋಡಲು ನನ್ನ ಗಂಡ ವಿಠಲ ಹಾಗು ಮೋಟರ ಸೈಕಲ ಹಿಂದೆ ಕುಳಿತ ಮಲ್ಲಿಕಾಜರ್ುನ ಗೌಂಡಿ ಇಬ್ಬರೂ ರೋಡಿನ ಪಕ್ಕದಲ್ಲಿ ಬಿದ್ದಿದ್ದು ನನ್ನ ಗಂಡನಿಗೆ ನೋಡಲಾಗಿ ಎಡಗಾಲ ಹಿಂಬಡಿಗೆ ಭಾರೀ ರಕ್ತಗಾಯವಾಗಿ ಕತ್ತರಿಸಿದ್ದು ಅಲ್ಲದೇ ಮೊಳಕಾಲ ಕೆಳಗೆ ಹಾಗು ಮೊಳಕಾಲಿನ ಚಿಪ್ಪಿನ ಹತ್ತಿರ ಭಾರೀ ರಕ್ತಗಾಯ ಹಾಗು ಗುಪ್ತಗಾಯಗಳಾಗಿ ಕಾಲು ಮುರಿದಿರುತ್ತದೆ. ಅಲ್ಲದೇ ಎಡಗೈ ಮೊಳಕೈ ಹಾಗು ಬುಜಕ್ಕೆ ಭಾರೀ ಗುಪ್ತಗಾಯವಾಗಿರುತ್ತದೆ. ಹಾಗು ತಲೆಗೆ ರಕ್ತಗಾಯ ಹಾಗು ಗುಪ್ತಗಾಯವಾಗಿರುತ್ತದೆ. ಮತ್ತು ಮಲ್ಲಿಕಾಜರ್ುನ ಗೌಂಡಿ ಈತನಿಗೆ ಎಡಭುಜಕ್ಕೆ ರಕ್ತಗಾಯವಾಗಿ ಭಾರೀ ಗುಪ್ತಗಾಯವಾಗಿರುತ್ತದೆ. ಅಲ್ಲದೇ ತಲೆಗೆ ಭಾರೀ ಒಳಪೆಟ್ಟಾಗಿರುತ್ತದೆ. ನಂತರ ಸದರಿ ಘಟನೆಯನ್ನು ಕಂಡ ಬಸನಗೌಡ ಮೇಟಿ ಇವರಿಂದ ಕೇಳಿ ತಿಳಿಯಲಾಗಿ ನನ್ನ ಗಂಡ ವಿಠಲ ಹಾಗು ಮಲ್ಲಿಕಾಜರ್ುನ ಗೌಂಡಿ ಇಬ್ಬರೂ ಕೂಡಿಕೊಂಡು ತಮ್ಮ ಮೋಟರ ಸೈಕಲ ಮೇಲೆ ಬರುತ್ತಿದ್ದಾಗ ಮುಂದೆ ಒಂದು ಟ್ರ್ಯಾಕ್ಟರ ಹೋಗುತ್ತಿದ್ದು ಆಗ ಸದರ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀ ವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಹೊರಟವನು ಒಮ್ಮಲೇ ರೋಡಿನ ಬಲಭಾಗಕ್ಕೆ ಅಡ್ಡ ತಮದಾಗ  ನನ್ನ ಗಂಡನ ಮೋಟರ ಸೈಕಲಗೆ ಟ್ರ್ಯಾಕ್ಟರ್ ಟ್ರಾಲಿ ಬಡಿದು ಅಪಘಾತವಾಗಿದ್ದು ಇರುತ್ತದೆ ಅಂತ ತಿಳಿಸಿದನು.  ನಂತರ ನನ್ನ  ಗಂಡನ ಮೋಟರ ಸೈಕಲಗೆ ಡಿಕ್ಕಿಪಡಿಸಿದ ಅಲ್ಲಿಯೇ ನಿಂತಿದ್ದ ಟ್ರ್ಯಾಕ್ಟರ್ ಇಂಜನ ನಂಬರ ನೋಡಲಾಗಿ ಕೆಎ-33 ಟಿಬಿ-1046 ಹಾಗು ಟ್ರಾಲಿ ನಂಬರ ಕೆಎ-33 ಟಿ- 4628 ಅಂತ ಇದ್ದು  ಓಡಿಹೋದ ಟ್ರ್ಯಾಕ್ಟರ ಚಾಲಕನ ಬಗ್ಗೆ ವಿಚಾರಿಸಿ ತಿಳಿಯಲಾಗಿ ಆತನ ಹೆಸರು ಇರಫಾನ ತಂದೆ ಬಂದಗೀಸಾಬ ನಾಶಿ ಸಾ|| ಕೆಂಭಾವಿ ಅಂತ ಗೊತ್ತಾಯಿತು. ನಂತರ ನನ್ನ ಗಂಡ ವಿಠಲ ಹಾಗು ಮಲ್ಲಿಕಾಜರ್ುನ ಗೌಂಡಿ ಇವರಿಗೆ ಉಪಚಾರ ಕುರಿತು ಕಲಬುಗರ್ಿಯ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಮಾನ್ಯರವರು ನನ್ನ ಗಂಡನಿಗೆ ಅಪಘಾತ ಪಡಿಸಿದ ಟ್ರ್ಯಾಕ್ಟರ್ ನಂಬರ ಕೆಎ-33 ಟಿಬಿ-1046 ಹಾಗು ಟ್ರಾಲಿ ನಂಬರ ಕೆಎ-33 ಟಿ- 4628 ನೇದ್ದರ ಚಾಲಕ ಇರಫಾನ ತಂದೆ ಬಂದಗೀಸಾಬ ನಾಶಿ ಸಾ|| ಕೆಂಭಾವಿ ಈತನ ವಿರುದ್ದ ಸೂಕ್ತ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 40/2020 ಕಲಂ 279,337,338 ಐಪಿಸಿ ಸಂಗಡ 187 ಐಎಮ್ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 41/2020 ಕಲಂ:341,323.504.506 ಸಂಗಡ 34 ಐ.ಪಿ.ಸಿ:- ಇಂದು ದಿನಾಂಕ 27/02/2020 ರಂದು ಸಾಯಾಂಕಾಲ 08.30 ಗಂಟೆಗೆ ಪಿರ್ಯಾದಿ ಶ್ರೀಮತಿ ಸುನಂದ ಗಂಡ ಬಸವರಾಜ ಬಾಚಿಮಟ್ಟಿ ವ|| 50 ವರ್ಷ ಉ|| ಹೊಲಮನೆಗೆಲಸ ಜಾ|| ರೆಡ್ಡಿ ಸಾ|| ಚಿಗರಿಹಾಳ ತಾ|| ಸುರಪುರ ರವರು ಠಾಣೆಗ ಹಾಜರಾಗಿ ಸಲ್ಲಿಸಿದ ಅಜರ್ಿ ಸಾರಾಂಶವೆನೆಂದರೆ ನಮಗೆ ಹಾಗೂ ನಮ್ಮ ತಮ್ಮನ ಹೆಂಡತಿಯಾದ ಲಲಿತಾ ಬಾಚಿಮಟ್ಟಿ ಇಬ್ಬರ ಮದ್ಯ ಆಸ್ತಿ ವಿಷಯದಲ್ಲಿ ತಕರಾರು ಆಗಿ ಸದರಿಯವಳು ನನ್ನ ಮೇಲೆ ಹಗೆತನ ಸಾಧಿಸುತ್ತಿದ್ದಳು. ಹೀಗಿದ್ದು ದಿನಾಂಕ 26/02/2020 ರಂದು ಬೆಳಿಗ್ಗೆ 11.30 ಗಂಟೆ ಸುಮಾರಿಗೆ ನಾನು ನಮ್ಮ ತಮ್ಮನಾದ ಶಿವರಡ್ಡಿ ಇವರ ಹೊಲ ಸವರ್ೆ ನಂ 263 ನೇದ್ದರಲ್ಲಿ ಹೋದಾಗ ಸದರ ಹೊಲದಲ್ಲಿ ಹಾದು ಹೋಗುತ್ತಿದ್ದಾಗ 1] ಲಲಿತಾ ಗಂಡ ಶಿವರಡ್ಡಿ ಬಾಚಿಮಟ್ಟಿ 2] ರಾಮನಗೌಡ ತಂದೆ ಶಿವರಡ್ಡಿ ಬಾಚಿಮಟ್ಟಿ 3] ವಿರೂಪಾಕ್ಷಿ ತಂದೆ ಅಮರಪ್ಪ ಬಾಚಿಮಟ್ಟಿ ಈ ಮೂರು ಜನರು ಬಂದವರೇ ನನಗೆ ತಡೆದು ನಿಲ್ಲಿಸಿ ಎಲಾ ಸೂಳಿ, ಈ ಹೊಲದಲ್ಲಿ  ಯಾಕೆ ಬಂದಿದ್ದಿಯಾ ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ಯಾಕೆ ನಮ್ಮ ತಮ್ಮನ ಹೊಲದಲ್ಲಿ ಹಾದು ಹೋದರೆ ಏನು ಆಗುತ್ತದೆ ಅಂತ ಅಂದಾಗ  ಸದರ ಮೂರು ಜನರು ನನಗೆ ಎಲಾ, ಸೂಳಿ ನಿನ್ನದು ಸೊಕ್ಕು ಬಹಳ ಆಗಿದೆ ಅಂತಾ ಅವಾಚ್ಯವಾಗಿ ಎಲ್ಲರೂ ಬೈಯುತ್ತಿದ್ದಾಗ ಅವರಲ್ಲಿಯ ರಾಮನಗೌಡ ಹಾಗು ವಿರೂಪಾಕ್ಷಿ ಈ ಎರಡು ಜನರು ನನಗೆ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿದರು. ಮತ್ತು ಎಲ್ಲರೂ ಕೂಡಿ ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೋಗುತ್ತಿದ್ದ ನಮ್ಮೂರ ಪರಶುರಾಮ ತಂದೆ ಹಣಮಂತ್ರಾಯ ದೊರಿ ಹಾಗು ರಾಮಣ್ಣ ಹರಿಜನ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರೆಲ್ಲರೂ ನನಗೆ ಹೊಡೆಯುವದನ್ನು ಬಿಟ್ಟು ಇವತ್ತು ಇಷ್ಟಕ್ಕೆ ಬಿಟ್ಟಿದ್ದೇವೆ ಮುಂದೆ ನಿನ್ನ ಜೀವ ನನ್ನ ಕೈಯಲ್ಲಿದೆ ಅಂತ ಜೀವದ ಭಯ ಹಾಕಿ ಹೋದರು. . ಕಾರಣ ಮೇಲ್ಕಾಣಿಸಿದ ಮೂರು ಜನರು ನನಗೆ ಹೊಲದ ಕಡೆ ಯಾಕೆ ಬಂದಿದ್ದಿಯಾ ಅಂತಾ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈಯ್ದು ಕೈಯಿಂದ ಹೊಡೆಬಡೆ ಮಾಡಿ  ಜೀವದ ಭಯ ಹಾಕಿದ್ದು ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 41/2020 ಕಲಂ 341,323,504,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ ಠಾಣೆ ಗುನ್ನೆ ನಂ:- ಕಲಂ, 279, 338, ಐಪಿಸಿ ಸಂ: 187 ಐಎಂವಿ ಯಾಕ್ಟ:- ಇಂದು ದಿನಾಂಕ: 27/02/2020 ರಂದು 09.30 ಪಿಎಂ ಕ್ಕೆ ಅಜರ್ಿದಾರ ಶ್ರೀ. ದೇವರಾಜ ತಂದೆ ಗುರುನಾಥ ಜಾಧವ ವಯಾ:21 ವರ್ಷ ಉ: ವಿದ್ಯಾಥರ್ಿ ಜಾ: ಲಂಬಾಣಿ ಸಾ: ಹೋಸ್ಕೇರಾ ಬಾಂಗ್ಲಾ ತಾಂಡಾ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದುರು ಅಜರ್ಿ ನೀಡಿದ್ದು,  ಅದರ ಸಾರಂಶ ಏನಂದರೆ, ನನ್ನ ತಂದೆಯವರಾದ ಗುರುನಾಥ ತಂದೆ ಪೋಮುನಾಯ್ಕ ಜಾಧವ ವಯಾ:50 ವರ್ಷ ಉ: ಕೂಲಿ ಜಾ: ಲಂಬಾಣಿ ಸಾ: ಹೋಸ್ಕೇರಾ ಬಾಂಗ್ಲಾ ತಾಂಡಾ ಇವರು ಮೋಟಾರ್ ಸೈಕಲ್ ನಂ: ಕೆಎ-33 ಜೆ-894 ನೆದ್ದರ ಮೇಲೆ ದಿನಾಂಕ: 20/02/2020 ರಂದು ಗೋಗಿ ಗೆ ಹೋಗಿದ್ದರು. ಉತ್ತರ ಭಾರದ ಟೂರಗೆ ಹೋಗಿದ್ದೇನು. ಅಂದು ದಿನಾಂಕ:20/02/2020 ರಂದು ರಾತ್ರಿ 08.30 ಪಿಎಂ ಸುಮಾರಿಗೆ ನಾನು ಉತ್ತಾರಖಾಂಡ ರಾಜ್ಯದಲ್ಲಿ ಕಾಲೇಜು ಟೂರದಲ್ಲಿ ಇದ್ದಾಗ ನಮ್ಮ ಪರಿಚಯದವರಾದ ರಮೇಶ ತಂದೆ ಶಂಕರ ಚವ್ಹಾಣ ಗೋಗಿ ರಾಮಾನಾಯ್ಕ ತಾಂಡಾ ಇವರು ನನಗೆ ಪೋನ ಮಾಡಿ ನಮ್ಮ ತಂದೆಯವರಾದ ಗುರುನಾಥ ತಂದೆ ಪೋಮುನಾಯಕ ಜಾದವ ಇವರು ಗೋಗಿ ಯಿಂದ ಹೋಸ್ಕಾರಾ ತಾಂಡಾ ಕಡೆಗೆ ಬರುತ್ತಿರುವಾಗ ಗೋಗಿ-ಹೋಸ್ಕೆರಾ ಮಧ್ಯದ ರಸ್ತೆಯ ಮೇಲೆ ಪಿರಾಗೋಳ ತೊಟದ ಬಾಜು ರೋಡಿನ ಮೇಲೆ ಒಂದು ಬುಲೇರೋ ವಾಹನ ನಂಬರ ಕೆಎ-33-ಎಮ್-3094 ನೇದ್ದು ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಎದುರಿನಿಂದ ನಡೆಸಿಕೊಂಡು ಬಂದು ನಮ್ಮ ತಂದೆಯವರು ನಡೆಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ ನಂ: ಕೆಎ-33 ಜೆ-894 ಡಿಕ್ಕಿ ಹೊಡೆದು ಸ್ವಲ್ಪ ನಿಂತಂತೆ ಮಾಡಿ ನಾನು ಹತ್ತಿರ ಹೋಗಿ ನೋಡುವಷ್ಟರಲ್ಲಿ ಬೋಲೆರೋ ವಾಹನ ಚಾಲಕ ತನ್ನ ವಾಹನವನ್ನು ತಗೆದುಕೊಂಡು ಸ್ಥಳದಿಂದ ಓಡಿ ಹೋಗಿರುತ್ತಾನೆ. ಅಪಘಾತ ಮಾಡಿದಾಗ ಅಂದಾಜು ಸಮಯ 08.00 ಪಿಎಂ ಆಗಿತ್ತು. ನಿಮ್ಮ ತಂದೆಯವರಿಗೆ ಬಲಗಾಲಿಗೆ ತೋಡೆಗೆ, ಮೋಳಕಾಲಿಗೆ, ಮೋಳಕಾಲಿನ ಕೆಳಗೆ ಭಾರಿ ರಕ್ತಗಾಯವಾಗಿರುತ್ತದೆ. ಅಂತಾ ತಿಳಿಸಿದ ಆಗ ನಾನು ನಮ್ಮ ಚಿಕ್ಕಪ್ಪ ರೂಪಸಿಂಗ್ ತಂದೆ ಪೋಮುನಾಯ್ಕ ಜಾಧವ, ಇವರಿಗೆ ಪೋನ ಮಾಡಿ ವಿಷಯ ತಿಳಿಸಿದೆನು. ಆಗ ನಮ್ಮ ಚಿಕ್ಕಪ್ಪ ರುಪಸಿಂಗ್, ಮತ್ತು ನಮ್ಮ ತಾಂಡಾದ ನೇಹರು ತಂದೆ ರುಕ್ಮು ಚವ್ಹಾಣ, ವಿಶ್ವನಾಥ ತಂದೆ ಠಾಕರೂ ಚವ್ಹಾಣ ಎಲ್ಲರೂ ಕೂಡಿ ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ತಂದೆಯವರು, ರೋಡಿನಲ್ಲಿ ಬಿದ್ದು ಭಾರಿ ಗಾಯಹೊಂದಿದ್ದರು, ಅಂಬೂಲೆನ್ಸ ವಾಹನ ಮೂಲಕ ನಮ್ಮ ತಂದೆಯವರಿಗೆ ಗೋಗಿ ಸರಕಾರಿ ಆಸ್ಪತ್ರೆಗೆ ನಂತರ ಯುನೈಟೆಡ್ ಆಸ್ಪತ್ರೆಗೆ ಕಲಬುರಗಿಗೆ ಕರೆದುಕೊಂಡು ಹೋಗಿದ್ದು, ನಂತರ ಮೀರಜ ಜಿ.ಎಸ್. ಕುಲಕಣರ್ಿ ಆಸ್ಪತ್ರೆಗೆ ಸೇರಿಕೆ ಮಾಡಿ ದ ಕಾರಣ ಪೊಲೀಸ್ ಠಾಣೆಗೆ ಬರಲು ತಡವಾಗಿರುತ್ತದೆ. ಕಾರಣ ನಮ್ಮ ತಂದೆಯವರಿಗೆ ಅಪಘಾತ ಮಾಡಿದ ಬುಲೇರೋ ವಾಹನ ನಂ: ಕೆಎ-33-ಎಮ್-3094 ನೆದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 16/2020 ಕಲಂ, 279, 338 ಐಪಿಸಿ ಸಂ: ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!