ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 25/02/2020
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ ನಂ.04/2020 ಕಲಂ 174(ಸಿ) ??.???????:- ಇಂದು ದಿನಾಂಕ,25/02/2020 ರಂದು 11-30 ಎಎಂಕ್ಕೆ ಪಿರ್ಯಾದಿ ರಜೀಯಾ ಬೇಗಂ ಗಂ. ಕರೀಂಸಾಬ ಮುಲ್ಲಾನೊರ ವಃ45 ಜಾಃ ಮುಸ್ಲಿಂ ಉಃ ಮನೆಕೆಲಸ ಸಾಃ ತಡಬಿಡಿ ಹಾಃ ವಃ ಮಾತಾ ಮಾಣಿಕೇಶ್ವರಿ ನಗರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ಕೊಟ್ಟಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನನಗೆ ಒಬ್ಬ ಗಂಡು ಮಗ ಅಬ್ದುಲ ಬಾಷಾ ತಂ.ಕರೀಂಸಾಬ ಮುಲ್ಲಾನೊರ ವಃ 27 ಜಾಃ ಮುಸ್ಲಿಂ ಉಃ ಗೌಂಡಿ ಕೆಲಸ ಸಾಃ ತಡಬಿಡಿ ಹಾಃವಃ ಯಾದಗಿರಿ ಇತನು ಇತನ ಮದುವೆ ಆಗಿ ಮೂರು ವರ್ಷಗಳಾಗಿದ್ದು ಒಂದೂವರೆ ವರ್ಷದ ಮಹಮ್ಮದ ರುಹಾನ ಅಂತಾ ಗಂಡು ಮಗನಿರುತ್ತಾನೆ. ನಾವು ನನ್ನ ಮಕ್ಕಳಾದ ಇಮಾಮಬೀ ಮತ್ತು ಹೀನಾ ಇವರ ಮದುವೆ ಮದುವೆ ಸಮಯದಲ್ಲಿ ಹೋದ ವರ್ಷ ಅಂದರೆ ಡಿಸೆಂಬರದಲ್ಲಿ ಸುಮಾರು ಐದು ಲಕ್ಷ್ಯದಷ್ಟು ಸಾಲ ಮಾಡಿದ್ದೆವು ಐದು ಲಕ್ಷ್ಯ ಸಾಲದಲ್ಲಿ ಕುರುಕುಂದಿ ಬಾಷಾ ಎಂಬುವವರ ಹತ್ತಿರ ಒಂದು ಲಕ್ಷ್ಯ ರೂ ನನ್ನ ಮಗ ಅಬ್ದುಲ ಬಾಷಾ ಸಾಲ ತೆಗೆದುಕೊಂಡಿದ್ದನು.
ನನ್ನ ಮಗ ಅಬ್ದುಲ ಬಾಷಾ ಇತನು ಬೆಂಗಳುರಿನಲ್ಲಿ ಗೌಂಡಿ ಕೆಲಸ ಮಾಡಿಕೊಂಡಿದ್ದನು. ಕುರಕುಂದಿ ಬಾಷ ಇತನು ಒಂದು ಲಕ್ಷ್ಯ ರೂ ಸಾಲದ ಹಣ ಕೊಡುವಂತೆ ನನ್ನ ಮಗನಿಗೆ ಆಗಾಗ ಪೋನ ಮಾಡಿ ಕೇಳುತ್ತಿದ್ದನು ನಂತರ ದಿನಾಂಕ.23/02/2020 ರಂದು ನನ್ನ ಮಗ ಅಬ್ದುಲ ಬಾಷಾ ಇತನು ಪೋನ ಮಾಡಿ ತಿಳಿಸಿದ್ದೆನೆಂದರೆ, ಬಾಷಾ ಕುರಕುಂದಿ ಮತ್ತು ಇನ್ನೂ ಐದು ಜನರು ಬೆಂಗಳುರಿಗೆ ನಮ್ಮ ಹತ್ತಿರ ಬಂದು ಒಂದು ಲಕ್ಷ್ಯ ರೂ ಸಾಲದ ಹಣ ಕೇಳುತ್ತಿದ್ದಾರೆ ಅಂತಾ ತಿಳಿಸಿದನು. ನಂತರ ನಿನ್ನೆ ದಿನಾಂಕ.24/02/2020 ರಂದುಬೆಳಿಗ್ಗೆ ನನ್ನ ಮಗ ಮತ್ತು ಸೊಸೆ ಹೀನಾ ಕೌಸರ ಇವರನ್ನು ಬೆಂಗಳೂರಿನಿಂದ ಕುರಕುಂದಿ ಬಾಷಾ ಮತ್ತು ಇತರರು ಯಾದಗಿರಿಗೆ ಕರೆದುಕೊಂಡು ಬಂದ ವಿಷಯ ಮದ್ಯಾಹ್ನ 12 ಗಂಟೆ ಸುಮಾರಿಗೆ ಕುರಕುಂದಿ ಬಾಷಾ ಇತನು ನನಗೆ ಪೋನ ಮಾಡಿದ್ದನು. ಆಗ ನಾನು ಅವನಿಗೆ ಮನೆಗೆ ಬರುವಂತೆ ಹೇಳಿದಾಗ ಮನೆಗೆ ಬರಲಿಲ್ಲಾ ಆಗ ಮದ್ಯಾಹ್ನ 2 ಗಂಟೆ ಸುಮಾರಿಗೆ ನನ್ನ ಮಗ ಅಬ್ದುಲ ಬಾಷಾ ಇತನು ನನಗೆ ಪೋನ ಮಾಡಿ ಕುರುಕುಂದಿ ಬಾಷಾ ಇತನು ನನಗೆ ಬೆಂಗಳೂರಿನಿಂದ ಸಾಲದ ಹಣದ ವಿಷಯವಾಗಿ ಕರೆದುಕೊಂಡು ಬಂದಿದ್ದಾನೆ ಅಂತಾ ತಿಳಿಸಿ ನಂತರ ನನ್ನ ಇನ್ನೋಬ್ಬ ಅಳಿಯ ಮೌಲಾಲಿ ಶೇಖ ಮಕ್ತಲ ಇತನಿಗೂ ಕೂಡಾ ಪೋನ ಮಾಡಿರುತ್ತೇನೆ ಎಂದು ತಿಳಿಸಿದನು ಆಗ ನಾನು ಮನಗೆ ಬಾ ಇಲ್ಲಿಯೇ ಕುಳಿತು ಎಲ್ಲರೂ ಮಾತನಾಡೋಣ ಅಂತ ಹೇಳಿದೆನು ಮದ್ಯಾಹ್ನ 3 ಗಂಟೆ ಸುಅಮರಿಗೆ ಕುರುಕುಂದಿ ಬಾಷಾ ಇತನು ನನಗೆ ಮತ್ತೆ ಪೋನ ಮಾಡಿ ನಿನ್ನ ಮಗ ಅಬ್ದುಲ ಬಾಷಾ ಇತನು ಮನೆಗೆ ಬಂದಿದ್ದಾನೆ ಹೇಗೆ ಅಂತಾ ಕೇಳಿದನು ಆಗ ನಾನು ಅವನಿಗೆ ಇನ್ನೂ ಮನೆಗೆ ಬಂದಿಲ್ಲಾ ಎಲ್ಲಿದ್ದಾನೆ ಹೇಳು ಅಂತಾ ಕೇಳಿದಾಗ ಕರೆದುಕೊಂಡು ಬರುತ್ತೇನೆ ಅತ್ತೇ ಅಂತಾ ಹೇಳಿ ಪೋನ ಕಟ ಮಾಡಿದೆನು. ನಂತರ ಮದ್ಯಾಹ್ನ 3 ಗಂಟೆಯ ಮೇಲೆ ನನ್ನ ಅಳಿಯ ಮೌಲಾಲಿ ಶೇಖ ಇತನು ನನಗೆ ಪೋನ ಮಾಡಿ ಶಹನಷಾ ಬಾಬಾ ದಗರ್ಾ ಹತ್ತಿರ ಜೋಪಡಿ ಪಟ್ಟಿಯವರು ಪೋನ ಮಾಡಿದ್ದು ಅವರು ಯಾರು ಅಂತ ಗೊತ್ತಿಲ್ಲಾ ಅಬ್ದುಲ ಬಾಷಾ ಇತನ ಪೋನದಿಂದ ಇ ಪೋನ ಇದ್ದವರು ಬಿದ್ದಿದ್ದಾರೆ ಅಂತಾ ಬರಲು ತಿಳಿಸಿದ್ದಾರೆ ನೀನು ಹೋಗಿ ನೋಡು ನಾನು ಕುಡಾ ಯಾದಗಿರಿಗೆ ಬರುತ್ತಿದ್ದೇನೆಕುರುಕುಂದಿ ಬಾಷಾ ಇತನ ಹಣ ಹೇಗಾದರೂ ಮಾಡಿ ಸ್ವಲ್ಪ ದಿವಸದಲ್ಲಿ ಮುಟ್ಟಿಸೊಣ ಅದಕ್ಕಾಗಿ ಅವರಿಗೆ ಕಾಲಾವಕಾಶ ಕೇಳಲು ಬರುತ್ತಿದ್ದೇನೆ ಅಂತ ತಿಳಿಸಿದನು ನಾನು ಗಾಬರಿಯಾಗಿ ಜೋಪಡಿ ಪಟ್ಟಿ ಹತ್ತಿರ ಹೋಗಿ ನೋಡಲಾಗಿ ಅಲ್ಲಿದ್ದವರು ನನಗೆ ತಿಳಿಸಿದ್ದೆನಂದರೆ, ಒಬ್ಬನು ಬಿದ್ದಿದ್ದು ಅವನಿಗೆ ಯಾರೂ ಕೆಲವರು ಬಂದು ತಮಗೂ ಕೂಡಾ ಪೋನ ಬಂದಿರುತ್ತದೆ ನಾವು ಇವರ ಕಡೆಯವರಿದ್ದು ಅಂತ ಹೇಳಿ ಅಟೋದಲ್ಲಿ ಹಾಕಿಕೊಂಡು ಸರಕಾರಿ ದವಾಖಾನೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಅಟೋದಲ್ಲಿ ಹಾಕಿಕೊಂಡು ಹೋದರು. ನಂತರ ನಾನು ಸರಕಾರಿ ಆಸ್ಟತ್ರೆಗೆ ಬಂದಾಗ ಅಮದಾಜು ಸಮಯ ಸಾಯಂಕಾಲ 4-30 ಆಗಿರಬಹುದು ಆಗ ಆಸ್ಪತ್ರೆಯಲ್ಲಿ ನನ್ನ ಸೊಸೆ ಹೀನಾ ಕೌಸರ, ಅವಳ ಅಕ್ಕ ಕನೀಜ ಫಾತೀಮಾ, ಅವಳ ಗಂಡ ಹುಸೆನ, ನನ್ನ ಮೈದುನ ಖಾಜಾ ಇದ್ದರು ಆಗ ನಾನು ಅವರಿಗೆ ಏನಾಯಿತು ಅಂತಾ ಕೇಳಿದಾಗ ಜೋಪಡಿ ಪಟ್ಟಿಯವರು ನಮಗೂ ಕೂಡಾ ಪೋನ ಮಾಡಿದ್ದರಿಂದ ಅಲ್ಲಿಗೆ ಹೋಗಿ ನಮ್ಮ ಅಠೋದಲ್ಲಿ ಅಬ್ದುಲ ಬಾಷಾ ಇತನಿಗೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಆಗ ಡಾಕ್ಟರರವರು ನೋಡಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ ಅಂತಾ ತಿಳಿಸಿದರು. ದಿನಾಂಕ.23/02/2020 ರಂದು ಕುರುಕುಂದಿ ಬಾಷಾ ಮತ್ತು ಇತರರು ಕುಡಿಕೊಂಡು ಒಂದು ಲಕ್ಷ್ಯ ರೂಪಾಯಿ ಸಾಲದ ಹಣದ ವಿಷಯವಾಗಿ ಬೆಂಗಳೂರಿನಲ್ಲಿದ್ದ ನನ್ನ ಮಗ ಅಬ್ದುಲ ಬಾಷಾಇತನ ಹತ್ತಿರ ಹೋಗಿದ್ದು ನಂತರ ಬೆಂಗಳೂರಿನಿಂದ ನಿನ್ನೆ ದಿನಾಂಕ.24/02/2020 ರಂದು ಬೆಳಿಗ್ಗೆ ರೈಲ್ವೇ ಮೂಲಕ ನನ್ನ ಮಗನಿಗೆ ಮತ್ತು ನನ್ನ ಸೊಸೆಗೆ ಯಾದಗಿರಿಗೆ ಕರೆದುಕೊಂಡು ಬಂದಿದ್ದು ನನ್ನ ಸೊಸೆಗೆ ಅವಳ ಅಕ್ಕ ಕನೀಜ ಫಾತೀಮಾ ಇವರ ಮನೆಯಲ್ಲಿ ಬಿಟ್ಟಿದ್ದು ಇರುತ್ತದೆ ನಂತರ ನನ್ನ ಮಗ ಅಬ್ದುಲ ಬಾಷಾ ಇತನು ಮೃತ ಪಟ್ಟಿದ್ದು ಹೇಗೆ ಮೃತಪಟ್ಟಿರುತ್ತಾನೆ ಅಂತಾ ತಿಳಿದು ಬಂದಿರುವುದಿಲ್ಲಾ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು ನನ್ನ ಮಗನ ಸಾವಿನಲ್ಲಿ ಸಂಶಯ ಇರುತ್ತದೆ ಈ ಬಗ್ಗೆ ನಮ್ಮ ಸಂಭಂದಿಕರಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದುಅಜರ್ಿ ನೀಡಿದ್ದು ಸದರಿ ಘಟನೆ ನಿನ್ನೆ ದಿನಾಂಕ.24/02/2020 ರಂದು ಮದ್ಯಾಹ್ನ 2 ಗಂಟೆ ಇಂದ 4 ಗಂಟೆಯ ಮದ್ಯದ ಅವದಿಯಲ್ಲಿ ಜರುಗಿದ್ದು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ.04/2020 ಕಲಂ.174(ಸಿ) ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 18/2019 ಕಲಂ. 279. 304(ಎ) ಐಪಿಸಿ:- ದಿನಾಂಕ: 25-02-2020 ರಂದು ಬೆಳಿಗ್ಗೆ 06-15 ಗಂಟೆಗೆ ಪಿಯರ್ಾಧಿ ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೇನೆಂದರೆ ದಿನಾಂಕ: 24-02-2020 ರಂದು ಸಾಯಂಕಾಲ 06-20 ಗಂಟೆಗೆ ನನ್ನ ಮಗ ಮತ್ತು ನನ್ನ ಮೊಮ್ಮಗಳು ನಯನ ವ|| 4 ವರ್ಷ ಇಬ್ಬರು ಕೂಡಿ ನಾವು ಕಾಳಬೆಳಗುಂದಿಯ ಬನದೇಶ್ವರ ದೇವಸ್ಥಾನಕ್ಕೆ ಹೋಗಿ ಬರುತ್ತೆವೆ ಅಂತಾ ಹೇಳಿ ನಮ್ಮ ಹೋಮಿನಿ ಗಾಡಿ ನಂಬರ. ಕೆಎ-33 ಎಮ್.4285 ನೇದ್ದರಲ್ಲಿ ಕಣೆಕಲ್ ಗ್ರಾಮದಿಂದ ಕಾಳಬೆಳಗುಂದಿ ಗ್ರಾಮದ ಕಡೆಗೆ ಹೋದರು.
ದಿನಾಂಕ: 24-02-2020 ರಂದು ಸಾಯಂಕಾಲ 06-40 ಗಂಟೆ ಸುಮಾರಿಗೆ ನಾನು ಮನೆಯಲ್ಲಿ ಇರುವಾಗ ನನ್ನ ಮಗ ಬಸಯ್ಯಸ್ವಾಮಿ ಇತನು ಪೊನ ಮಾಡಿ ತಿಳಿಸಿದ್ದೆನೆಂದರೆ ನಾನು ಮತ್ತು ನಯನ ಇಬ್ಬರು ಕಾಳಬೆಳಗುಂದಿಗೆ ದೇವಸ್ಥಾನಕ್ಕೆ ಹೋಗುವಾಗ ಕಾಳಬೆಳಗುಂದಿ ಹತ್ತಿರ ರೋಡಿನ ಮೇಲೆ ಸಾಯಂಕಾಲ 06-30 ಗಂಟೆಗೆ ಈರಪ್ಪ ಜೋಗಿ ಇವರ ಹೊಲದ ಹತ್ತಿರ ಹೋಗುತ್ತಿರುವಾಗ ರೋಡ್ ಟರ್ನಗೆ ನಾನು ಗಾಡಿಯನ್ನು ಒಮ್ಮಲೆ ಕಟ್ ಮಾಡಿದ್ದರಿಂದ ನಮ್ಮ ಹೋಮಿನಿ ಗಾಡಿ ಪಲ್ಟಿಯಾಗಿ ರೋಡಿನ ಪಕ್ಕದಲ್ಲಿ ಅಪಘಾತವಾಗಿ ಬಿದ್ದಿರುತ್ತದೆ ಅಪಘಾತದಲ್ಲಿ ಗಾಡಿಯಲಿದ್ದ ನಯನ ಈಕೆಯು ಸ್ಥಳದಲ್ಲಿ ಮೃಪಟ್ಟಿರುತ್ತಾಳೆ ಅಂತಾ ತಿಳಿಸಿದ್ದರಿಂದ ಆಗ ನಾನು ಮತ್ತು ನನ್ನ ಮೈದುನನ ಮಗ ಹಂಪಯ್ಯಸ್ವಾಮಿ ಇಬ್ಬರೂ ಕೂಡಿ ಕಣೆಕಲ್ ಗ್ರಾಮದಿಂದ ಮೋಟರ ಸೈಕಲ್ ಮೇಲೆ ಕಾಳಬೆಳಗುಂದಿಯ ಹತ್ತಿರ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮೊಮ್ಮಗಳು ನಯನ ಈಕೆಯು ಹೋಮಿನಿ ಪಲ್ಟಿಯಾಗಿದ್ದರಿಂದ ಅಪಘಾತದಲ್ಲಿ ಎದೆಗೆ ಭಾರಿ ರಕ್ತಗಾಯ ಮತ್ತು ಹೊಟ್ಟೆಗೆ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದಳು ನನ್ನ ಮಗಮ ಬಸಯ್ಯಸ್ವಾಮಿ ಈತನಿಗೆ ಯಾವುದೆ ಗಾಯಗಳು ಆಗಿರಲಿಲ್ಲ ಆಗ ನಾನು ನನ್ನ ಮಗನಿಗೆ ಹೇಗಾಯಿತು ಅಂತಾ ಕೇಳಲಾಗಿ ನಾವು ನನ್ನ ಗಾಡಿಯಲ್ಲಿ ಕಣೆಕಲ್ ದಿಂದ ಕಾಳಬೆಳಗುಂದಿಗೆ ದೇವಸ್ಥಾನಕ್ಕೆ ರೋಡಿನ ಮೇಲೆ ಈರಪ್ಪ ಜೋಗಿ ಇವರ ಹೊಲದ ಹತ್ತಿರ ಹೋಗುತ್ತಿರುವಾಗ ರೋಡ ಟರ್ನ ಇರುವದರಿಂದ ಗಾಡಿ ಒಮ್ಮಲೆ ಕಟ್ ಮಾಡಿದ್ದರಿಂದ ಹೋಮಿನಿ ಗಾಡಿ ಪಲ್ಟಿಯಾಗಿರುತ್ತದೆ ಅಂತಾ ತಿಳಿಸಿದ್ದು ಇರುತ್ತದೆ ಗಾಡಿ ನೋಡಲಾಗಿ ಪಲ್ಟಿಯಾಗಿ ರೋಡಿನ ಪಕ್ಕದಲ್ಲಿ ಪಲ್ಟಿಯಾಗಿ ಬಿದ್ದಿತ್ತು ಅದರ ನಂಬರ ಕೆಎ-33 ಎಮ್-4285 ಅಂತಾ ಇದ್ದು ಗಾಡಿ ಜಖಂಗೊಂಡಿರುತ್ತದೆ.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 19/2020, ಕಲಂ, 323.324.354.504.506.ಸಂಗಡ 34 ಐ ಪಿ ಸಿ:- ಇಂದು ದಿನಾಂಕ 25-02-2020 ರಂದು ಮದ್ಯಾಹ್ನ 01-30 ಗಂಟೆಗೆ ಪಿಯರ್ಾಧಿದಾರನಾದ ವೀರಣ್ಣಗೌಡ ತಂದೆ ಅಯ್ಯನಗೌಡ ಪೊಲೀಸ್ ಪಾಟಿಲ್ ವ|| 48 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಶೆಟ್ಟಿಹಳ್ಳಿ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ನೀಡಿದ ಸಾರಂಶವೆನೆಂದರೆ ನಮ್ಮ ಗ್ರಾಮ ಸಿಮಾಂತರದಲ್ಲಿ ನಮ್ಮದು ಹೊಲ ಇದ್ದು ಹೊಲ ಸವರ್ೆ ನಂಬರ 54/6 ರಲ್ಲಿ ನಾವು ಜೊಳ ಬಿತ್ತನೆ ಮಾಡಿದ್ದು ಇರುತ್ತದೆ ಈಗ ಜೊಳ ಕಟಾವು ಮಾಡಲಿಕ್ಕೆ ಬಂದಿರುತ್ತದೆ ಅದಕ್ಕೆ ನಾನು ಕೂಲಿ ಕಾಮರ್ಿಕರಾದ ಸೀತಪ್ಪ ಚಹ್ವಾಣ, ಯಲ್ಲಪ್ಪ ತಂದೆ ಬಸಪ್ಪ, ಇವರಿಗೆ ಜೊಳಕಟಾವು ಮಾಡುವದು ಇದೆ ಅಂತಾ ಹೆಳಿದ್ದರಿಂದ ಅವರು ಊರಿಗೆ ಬಂದಿದ್ದು ಅವರು ಮತ್ತು ನಾನು ಹಾಗೂ ನನ್ನ ಹೆಂಡತಿ ಮಂಜುಳಾ ಎಲ್ಲರು ಕೂಡಿ ನಮ್ಮ ಹೊಲ ಸವರ್ೆ ನಂ.54/6 ರಲ್ಲಿ ಹೋಗಿ ಜೊಳ ಕಟಾವು ಮಾಡುತಿದ್ದೆವು, ನಮ್ಮ ಹೊಲದಲ್ಲಿ ಬೆಳಿಗ್ಗೆ 10-00 ಗಂಟೆಗೆ ನಾವು ಜೊಳ ಕಟಾವು ಮಾಡುತ್ತಿರುವಾಗ ನನ್ನ ತಮ್ಮನಾದ ಬಾಪುಗೌಡ ತಂದೆ ಅಯ್ಯನಗೌಡ ವ|| 47 ವರ್ಷ ಮತ್ತು ಆತನ ಹೆಂಡತಿ ನಿರ್ಮಲಾ ವ|| 37 ವರ್ಷ ಇವರು ಬಂದು ನನ್ನ ಹೆಂಡತಿಗೆ ಏನಲೆ ಸೂಳೆ ಇದು ಯಾರ ಹೊಲ ಅಂತಾ ಜೊಳ ಕಟಾವು ಮಾಡಲು ಬಂದಿದಿ ಸೂಳೆ ಮಗಳೆ ರಂಡಿ ಬೋಸಡಿ ಅಂತಾ ಅವಾಚ್ಯವಾಗಿ ಬೈದರು ಆಗ ನನ್ನ ಹೆಂಡತಿ ಯಾಕೆ ಬೈಯುತ್ತಿರಿ ಅಂತಾ ಕೇಳಿದ್ದಕ್ಕೆ ಬಾಪುಗೌಡ ಇತನು ನನ್ನ ಹೆಂಡತಿಗೆ ಕೂದಲು ಹಿಡಿದು ಜಗ್ಗಾಡಿ ಕೆಳಗೆ ಬಿಳಿಸಿ ಕಾಲಿನಿಂದ ಹೊಟ್ಟೆಗೆ ಒದ್ದು ಆಕೆ ಕೆಳಗೆ ಬಿಳಿಸಿ ಆಕೆಯ ಸಿರೆ ಸೇರಗನ್ನು ಹಿಡಿದು ಎಳದಾಡಿ ಅವಮಾನ ಮಾಡಿದನು, ಆಗ ನಿರ್ಮಲಾ ಈಕೆಯು ನನ್ನ ಹೆಂಡತಿಗೆ ಕಟ್ಟಿಗೆಯನ್ನು ತೆಗೆದುಕೊಂಡು ಬೆನ್ನಿಗೆ ಮತ್ತು ತಲೆಗೆ ಹೋಡೆದಿದ್ದರಿಂದ ನನ್ನ ಹೆಂಡತಿ ಮೂಛರ್ೆ ಹೋದಳು, ಆಗ ನಮ್ಮ ಹೊಲಕ್ಕೆ ಜೊಳ ಕಟಾವು ಮಾಡಲು ಬಂದ ಕೂಲಿ ಕಾಮರ್ಿಕರಾದ ಸೀತಪ್ಪ ಚವ್ಹಾಣ, ಯಲ್ಲಪ್ಪ ತಂದೆ ಬಸಪ್ಪ ಆಲ್ದತರ್ಿ ಇವರು ಬಂದು ಜಗಳವನ್ನು ಬಿಡಿಸುತ್ತಿರುವಾಗ ಅವರ ಕೈಯಲಿದ್ದ ಕೂಡಗೋಲನ್ನು ತೆಗೆದುಕೊಂಡು ನಿಮಗೆ ಜೀವ ಸಹಿತ ಬಿಡುವದಿಲ್ಲ ಮಕ್ಕಳೆ ನಿಮಗೆ ಕೂಡಗೋಲು ತೆಗೆದುಕೊಂಡು ಖಲಾಸ ಮಾಡುತ್ತೆವೆ ಇನ್ನೊಂದು ಸಲ ಈ ಹೊಲದ ಹತ್ತಿರ ಬಂದರೆ ನಿಮಗೆ ಮುಗಿಸಿ ಬಿಡುತ್ತೆವೆ ಅಂತಾ ಜೀವದ ಬೇದರಿಕೆ ಹಾಕಿ ಹೋದರು ಜಗಳದಲ್ಲಿ ನನ್ನ ಹೆಂಡತಿ ಮುಛರ್ೆ ಹೋಗಿದ್ದರಿಂದ ನಾನು 108 ಅಂಬುಲೆನ್ಸಗೆ ಪೊನ್ ಮಾಡಿದ್ದರಿಂದ ಅಂಬುಲೆನ್ಸ ಸ್ಥಳಕ್ಕೆ ಬಂದಾಗ ನನ್ನ ಹೆಂಡತಿಗೆ ವೈದ್ಯಕೀಯ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸೈದಾಪೂರಕ್ಕೆ ತಂದು ಸೇರಿಕೆ ಮಾಡಿದ್ದು ಇರುತ್ತದೆ ವೈದ್ಯರು ನನ್ನ ಹೆಂಡತಿಗೆ ಹೆಚ್ಚಿನ ಉಪಚಾರ ಕುರಿತು ರಾಯಚೂರಿಗೆ ಹೋಗುವಂತೆ ತಿಳಿಸಿರುತ್ತಾರೆ. ಜಗಳ ಆದ ಬಗ್ಗೆ ಮನೆಯಲ್ಲಿ ವಿಚಾರ ಮಾಡಿಕೊಂಡು ಠಾಣೆಗೆ ಬಂದಿರುತ್ತೇನೆ ಕಾರಣ ನಮಗೆ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹಿಡೆ ಬಡೆ ಮಾಡಿ ಸೀರೆ ಸೇರಗು ಹಿಡಿದು ಎಳದಾಡಿ ಅವಮಾನ ಮಾಡಿ ಜೀವದ ಬೇದರಿಕೆ ಹಾಕಿದವರ ಮೇಲೆ ದೂರು ದಾಖಲು ಮಾಡಬೇಕಂತ ಮಾನ್ಯರವರಲ್ಲಿ ವಿನಂತಿ ಇರುತ್ತದೆ ಅಂತಾ ಪಿಯರ್ಾದಿ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆಯ ಗುನ್ನೆ ನಂ 19/2020, ಕಲಂ, 323.324.354.504.506. ಸಂಗಡ 34 ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು,
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 56/2020 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್:- ಇಂದು ದಿನಾಂಕ 25/02/2020 ರಂದು ಬೆಳಗಿನ ಜಾವ 06-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಹನುಮರಡ್ಡೆಪ್ಪ ಆರಕ್ಷಕ ನಿರೀಕ್ಷಕರು, ಶಹಾಪೂರ ಪೊಲೀಸ್ ಠಾಣೆ ರವರು, ಅಕ್ರಮವಾಗಿ ಮರಳು ಲೋಡ ಮಾಡಿಕೊಂಡು ಹೋಗುತಿದ್ದ ಒಂದು ಲಾರಿ ನಂ ಟಿಎಸ್-05-ಯುಸಿ-6279 ನೇದ್ದು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 25/02/2020 ರಂದು ಬೆಳಗಿನ ಜಾವ ಶಹಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ತಡೆಗಟ್ಟುವ ಕಾಯರ್ಾಚರಣೆ ಕುರಿತು ನಾನು, ಜೊತೆಯಲಿ ಠಾಣೆಯ ಸಿಬ್ಬಂದಿ ಮಲ್ಲಣ್ಣ ಹೆಚ್.ಸಿ 79, ಭಾಗಣ್ಣ ಪಿ.ಸಿ 194 ಮತ್ತು ಜೀಪ ಚಾಲಕ ನಾಗರಡ್ಡಿ ಎ.ಪಿ.ಸಿ 161 ರವರೆಲ್ಲರೂ ಕೂಡಿ ಠಾಣೆಯಿಂದ ಬೆಳಗಿನ ಜಾವ 03-00 ಗಂಟೆಗೆ ಹೊರಟು ದೇವದುರ್ಗ ಕ್ರಾಸ್ ಹತ್ತಿರ ಹೋಗಿ ಮರಳು ತುಂಬಿಕೊಂಡು ಬರುತಿದ್ದ ವಾಹನಗಳನ್ನು ತಪಾಸಣೆ ಮಾಡಲು ನಿಂತಿದ್ದಾಗ 3-45 ಗಂಟೆಯ ಸುಮಾರಿಗೆ ದೇವದುರ್ಗ ಕಡೆಯಿಂದ ಒಂದು ಲಾರಿ ನಂ ಟಿಎಸ್-05-ಯುಸಿ-6279 ನೇದ್ದು ಬಂದಾಗ ಸದರಿ ವಾಹನವನ್ನು ನಿಲ್ಲಿಸಿ ವಾಹನ ಚಾಲಕನಿಗೆ ಹೆಸರು ವಿಳಾಸ ಇತ್ಯಾದಿಯಾಗಿ ವಿಚಾರಿಸಲಾಗಿ ತನ್ನ ಹೆಸರು ಬಸವರಾಜ ತಂದೆ ಜಗನ್ನಾಥ ದುಗಾಣಿ ವಯ 27 ವರ್ಷ ಜಾತಿ ಲಿಂಗಾಯತ ಉಃ ಚಾಲಕ ಸಾಃ ಲಾಡಗೇರಿ ಬಸವಣ್ಣ ದೇವರ ಗುಡಿಯ ಹತ್ತಿರ ಬೀದರ ಅಂತ ಹೇಳಿದ್ದು ಸದರಿ ಮರಳು ಸಾಗಿಸುತಿದ್ದ ಬಗ್ಗೆ ದಾಖಲಾತಿ ವಿಚಾರಿಸಿದಾಗ ಸದರಿ ಚಾಲಕನು ತಮ್ಮ ಲಾರಿಯ ಮಾಲಿಕರು ಹೇಳಿದಂತೆ ಮರಳು ಸಾಗಾಣಿಕೆ ಪರವಾನಿಗೆ ಪತ್ರ ಪಡೆಯದೆ ಕೃಷ್ಣಾ ನದಿಯಿಂದ ಮರಳು ಲೋಡ ಮಾಡಿಕೊಂಡು ಮಾರಾಟ ಮಾಡಲು ಬೀದರಗೆ ತೆಗೆದುಕೊಂಡು ಹೋಗುತಿದ್ದೆನೆ ಅಂತ ಹೇಳಿದನು. ವಾಹನದ ಚಾಲಕ ಮತ್ತು ವಾಹನದ ಮಾಲಿಕ ಇಬ್ಬರೂ ಸೇರಿ ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಲೋಡ ಮಾಡಿಕೊಂಡು ಮಾರಾಟ ಮಾಡಲು ಸಾಗಿಸುತಿದ್ದ ಬಗ್ಗೆಖಚಿತವಾಗಿದ್ದರಿಂದ ಸದರಿ ಸ್ಥಳಕ್ಕೆ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮದಲ್ಲಿ ಮರಳು ತುಂಬಿದ ಲಾರಿ ನಂ ಟಿಎಸ್-05-ಯುಸಿ-6279 ನೇದ್ದು ಅಂ.ಕಿ 8 ಲಕ್ಷ ರೂಪಾಯಿ ಮತ್ತು ಅದರಲ್ಲಿ ಅಂದಾಜು 16 ಕ್ಯೂಬಿಕ್ ಮೀಟರನಷ್ಟು ಮರಳು ಇದ್ದು ಮರಳಿನ ಅಂ.ಕಿ 21,600=00 ನೇದ್ದನ್ನು ಮುಂಜಾನೆ 04-00 ಗಂಟೆಯಿಂದ 05-00 ಗಂಟಯ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡಿದ್ದು ಸದರಿ ಲಾರಿ ಚಾಲಕ ಮತ್ತು ಮಾಲಿಕನ ವಿರುದ್ದ ಕ್ರಮ ಕೈಕೊಳ್ಳುವ ಕುರಿತು ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 56/2020 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 57/2020 ಕಲಂ379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್:- ದಿನಾಂಕ 25/02/2020 ರಂದು 9-00 ಎ.ಎಂ. ಕ್ಕೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಹನುಮರೆಡೆಪ್ಪ ಪಿ.ಐ. ಶಹಾಪುರ ಪೊಲಿಸ್ ಠಾಣೆ ರವರು, ಒಂದು ಮರಳು ತುಂಬಿದ ಲಾರಿ ನಂ ಟಿಎಸ್-15ಯುಡಿ-4193 ಮತ್ತು ಸದರಿ ಲಾರಿ ಒಬ್ಬ ಚಾಲಕನನ್ನು ಹಾಜರಪಡಿಸಿ ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 25/02/2020 ರಂದು ಅಕ್ರಮ ಮರಳು ತಡೆಗಟ್ಟುವ ಕುರಿತು ನಾನು ಮತ್ತು ಸಂಗಡ ಶ್ರೀ ಮಲ್ಲಣ್ಣ ಹೆಚ್,ಸಿ,79, ಭೀಮನಗೌಡ ಪಿ.ಸಿ.402. ಮತ್ತು ಠಾಣೆಯ ಜೀಪ್.ನಂ. ಕೆಎ-33 ಜಿ-0138 ನೇದ್ದರ ಚಾಲಕ ನಾಗರೆಡ್ಡಿ ಎ.ಪಿ.ಸಿ-161 ರವರನ್ನು ಕರೆದುಕೊಂಡು ಬೆಳಿಗ್ಗೆ 6-20 ಗಂಟೆಗೆ ಠಾಣೆಯಿಂದ ಹೊರಟು ಪೇಟ್ರೋಲಿಂಗ ಮಾಡುತ್ತ 7-00 ಗಂಟೆಗೆ ಹತ್ತಿಗುಡೂರದ ದೇವದುರ್ಗ ಕ್ರಾಸ್ ಹತ್ತಿರ ಹೋಗಿ ಬೆಳಿಗೆ 7-10 ಗಂಟೆಗೆ ದೇವದುರ್ಗ ಕಡೆಯಿಂದ ಒಂದು ಲಾರಿ ಬರುತ್ತಿರುವದನ್ನು ನೋಡಿ ಅದಕ್ಕೆ ಕೈಮಾಡಿ ನಿಲ್ಲಸಿ ನೋಡಲಾಗಿ ಮರಳು ಲೋಡ್ ಮಾಡಿದ ಲಾರಿ ಇದ್ದು ಸದರಿ ಲಾರಿ ನೋಡಲಾಗಿ ಅಶೋಕ ಲೈಲ್ಯಾಂಡ ಕಂಪನಿಯ ಲಾರಿ ನಂ ಟಿಎಸ್-15ಯುಡಿ-4193 ಅಂತಾ ಇದ್ದು, ಸದರಿ ಲಾರಿ ಚಾಲಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಇಮ್ರಾನ್ಅಲಿ ತಂದೆ ಫೈಯಾಜ ಅಲಿ ರೋಷನ್ವಾಲೆ ಜಾ|| ಮುಸ್ಲಿಂ ಉ|| ಚಾಲಕ ಸಾ|| ಜನವಾಡ ತಾ||ಜಿ|| ಬಿದರ ಅಂತಾ ಹೇಳಿದನು, ಸದರಿ ಲಾರಿ ಚಾಲನಿಗೆ ಮರಳನ್ನು ಲಾರಿಯಲ್ಲ್ಲಿ ಲೋಡ ಮಾಡಿ ಸಾಗಿಸುತ್ತಿರುವ ಬಗ್ಗೆ ಕಾಗದ ಪತ್ರಗಳನ್ನು ಹಾಜರ ಪಡಿಸಲು ಹೇಳಿದಾಗ ತನ್ನ ಹತ್ತಿರ ಯಾವುದೆ ಕಾಗದ ಪತ್ರ ಇರುವುದಿಲ್ಲ ನಮ್ಮ ಲಾರಿ ಮಾಲೀಕರಾದ ಸಂತೋಷ ತಂದೆ ಸಂಜುಕುಮಾರ ಸಾ|| ಲಾಡಗೇರಿ ಬಿದರ ಇವರು ಕಳ್ಳತನದಿಂದ ಕೃಷ್ಣ ನದಿಯಲ್ಲಿ ಮರಳನ್ನು ತುಂಬಿಕೊಂಡು ಬಿದರಗೆ ತಗೆದುಕೊಂಡು ಹೋಗಿ ಮಾರಾಟ ಮಾಡಲು ತಿಳಿಸಿರುತ್ತಾರೆ ಅಂತಾ ಹೇಳಿದನು. ಸದರಿ ಲಾರಿ ನಂ ಟಿಎಸ್-15ಯುಡಿ-4193 ನೇದ್ದರ ಅ.ಕಿ|| 8 ಲಕ್ಷ ರೂಪಾಯಿ, ಸದರಿ ಲಾರಿಯಲ್ಲ್ಲಿ ಅಂದಾಜು 6 ಬ್ರಾಸ್ನಷ್ಟು ಮರಳು ಇದ್ದು, ಅಂದಾಜು ಕಿಮ್ಮತ್ತು 9000=00 ರೂಪಾಯಿ ಮೌಲ್ಯದ ಮರಳನ್ನು ಯಾವದೆ ಧಾಖಲಾತಿ ಪಡೆಯದೆ, ಅಕ್ರಮವಾಗಿ ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಲಾರಿಯ ಚಾಲಕ ಮತ್ತು ಮಾಲಿಕನು ಸೇರಿ ಸದರಿ ಲಾರಿಯಲ್ಲಿ ಮರಳು ಲೊಡ ಮಾಡಿಕೊಂಡು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದು ಖಚಿತವಾಗಿದ್ದರಿಂದ ಸದರಿ ಮರಳು ತುಂಬಿದ ಲಾರಿ ಚಾಲಕನಿಗೆ ವಶಕ್ಕೆ ತೆಗೆದುಕೊಂಡು ಸದರಿ ಲಾರಿ ಚಾಲಕನ ಸಹಾಯದಿಂದ ಲಾರಿಯನ್ನು ಬೆಳಗ್ಗೆ 8-30 ಎ.ಎಂ.ಕ್ಕೆ ಶಹಾಪೂರ ಪೊಲೀಸ್ ಠಾಣೆಗೆ ಬಂದು, ಮರಳು ತುಂಬಿದ ಲಾರಿ ಮತ್ತು ಒಬ್ಬ ಆರೋಪಿತನನ್ನು ಹಾಜರ ಪಡಿಸಿ ಲಾರಿ ಚಾಲಕ ಮತ್ತು ಮಾಲಿಕನ ವಿರುದ್ದ ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಕ್ರಮ ಕೈಕೊಳ್ಳುವಂತೆ ಬೆಳಗ್ಗೆ 9-00 ಎ.ಎಂ.ಕ್ಕೆ ಸರಕಾರದ ಪರವಾಗಿ ಫಿಯರ್ಾದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 57/2020 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 58/2020. ಕಲಂ 78 (3) ಕೆ.ಪಿ.ಆಕ್ಟ:- ಆರೋಪಿತರು ದಿನಾಂಕ: 25-02-2020 ರಂದು 3:20 ಗಂಟೆಗೆ ಶಹಾಪೂರದ ನಗರದ ಕುಂಬಾರ ಓಣಿಯ ಮೇಲಿನ ಗ್ರೌಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಹೊಗಿ ಬರುವ ಸಾರ್ವಜನಿಕರನ್ನು ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಫಿಯರ್ಾದಿದಾರರು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಅವರಿಂದ ಒಟ್ಟು 1650/- ರೂ. ನಗದು ಹಣ ಒಂದು ಬಾಲ್ ಪೆನ್. ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ ಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 58/2020 ಕಲಂ.78 (3) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 59/2020 ಕಲಂ 78(3) ಕೆಪಿ.ಯಾಕ್ಟ :- ಇಂದು ದಿನಾಂಕ 25/02/2020 ರಂದು 5.40 ಪಿಎಂ ಕ್ಕೆ ಶ್ರೀ ಧರ್ಮಣ್ಣ ಎ.ಎಸ್.ಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಹಳೆಪೇಠ ಏರಿಯಾದಲ್ಲಿನ ರಾಘವೇಂದ್ರ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು ಎ.ಎಸ್.ಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಒಬ್ಬ ವ್ಯಕಿಯನ್ನು ಹಿಡಿದು ವಿಚಾರಿಸಲಾಗಿ ಅವನ ಹೆಸರು ಸದ್ದಾಂ ತಂದೆ ಅಬ್ದುಲಭಾಷಾ ಟಪ್ಪೆ ವ|| 32ವರ್ಷ ಜಾ|| ಮುಸ್ಲಿಂ ಉ|| ಮಟಕಾ ನಂಬರ ಬರೆದುಕೊಳ್ಳುವುದು ಮತ್ತು ಕೂಲಿ ಕೆಲಸ ಸಾ|| ಹಯ್ಯಾಳ(ಬಿ) ತಾ|| ಶಹಾಪೂರ ಈತನಿಂದ ನಗದು ಹಣ 1390/- ರೂಪಾಯಿ 1 ಬಾಲ್ ಪೆನ್ ಮತ್ತು ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಸಿಕ್ಕಿದ್ದು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿ ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 25/02/2020 ರಂದು 7.40 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 59/2020 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 36/2020 ಕಲಂ: 78(3) ಕೆಪಿ ಯಾಕ್ಟ:- ಇಂದು ದಿನಾಂಕ 25/02/2020 ರಂದು 08 ಎ.ಎಮ್ ಕ್ಕೆ ಸುದರ್ಶನರಡ್ಡಿ ಪಿಎಸ್ಐ ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದೆನೆಂದರೆ ಇಂದು ದಿನಾಂಕ: 25/02/2020 ರಂದು ಬೆಳಿಗ್ಗೆ 6 ಗಂಟೆಗೆ ಸುಮಾರಿಗೆ ಠಾಣೆಯಲ್ಲಿದ್ದಾಗ ಕಿರದಳ್ಳಿ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ ಎಸ್ ಪಿ ಸಾಹೇಬರು ಸುರಪೂರ ಹಾಗು ಮಾನ್ಯ ಸಿಪಿಐ ಸಾಹೇಬರು ಹುಣಸಗಿ ರವರ ಮಾರ್ಗದರ್ಶನಂತೆ ಸಿಬ್ಬಂದಿಯವರಾದ 1) ಶಿವಲಿಂಗಪ್ಪ ಹೆಚ್ಸಿ 185 2) ಬೀರಪ್ಪ ಪಿಸಿ-195 ರವರನ್ನು ಕರೆದು ಸದರಿ ವಿಷಯ ತಿಳಿಸಿ ಭೀರಪ್ಪ ಪಿಸಿ-195 ರವರಿಂದ ಇಬ್ಬರು ಪಂಚರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವ|| 36 ಜಾ|| ಪರಿಶಿಷ್ಟ ಜಾತಿ ಉ|| ಕೂಲಿ ಸಾ|| ಕೆಂಭಾವಿ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ವ|| 46 ಜಾ|| ಪ.ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಠಾಣೆಗೆ ಕರೆಯಿಸಿ ಅವರಿಗೂ ಸಹ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ ಬೆಳಿಗ್ಗೆ 06-15 ಗಂಟೆಗೆ ಹೊರಟು 06-40 ಗಂಟೆಗೆ ಕಿರದಳ್ಳಿ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ಬೆಳಿಗ್ಗೆ 06-45 ಗಂಟೆಗೆ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ರವಿ ತಂದೆ ಕೃಷ್ಣಾಚಾರಿ ಜೋಶಿ ವ|| 43 ಜಾ|| ಬ್ರಾಹ್ಮಣ ಉ|| ಕೂಲಿಕೆಲಸ ಸಾ|| ಕಿರದಳ್ಳಿ ತಾ|| ಸುರಪುರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 8063/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಇವುಗಳನ್ನು ಬೆಳಿಗ್ಗೆ 06-40 ಗಂಟೆಯಿಂದ 07-40 ಗಂಟೆವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡೆನು. ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 08 ಗಂಟೆಗೆ ಠಾಣೆಗೆ ಬಂದಿದ್ದು ಸದರಿ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ಆದೇಶಿಸಲಾಗಿದೆ ಅಂತ ವರದಿ ನೀಡಿದ್ದು ಇರುತ್ತದೆ.
ಸದರ ವರಧಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 10-30 ಎಎಮ್ ಕ್ಕೆೆ ಠಾಣೆ ಗುನ್ನೆ ನಂ 36/2020 ಕಲಂ 78(3) ಕೆ.ಪಿ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using