ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23/02/2020

By blogger on ಸೋಮವಾರ, ಫೆಬ್ರವರಿ 24, 2020


                                     ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23/02/2020

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 17/2020 ಕಲಂ: 279,337,304(ಎ) ಐಪಿಸಿ17/2020 ಕಲಂ: 279,337,304(ಎ) ಐಪಿಸಿ:- ಇಂದು ದಿನಾಂಕ: 23/02/2020 ರಂದು ಸಾಯಂಕಾಲ 7 ಪಿಎಮ್ ಸುಮಾರಿಗೆ ಹೊಸೂರು-ತೇಕರಾಳ ರೋಡಿನ ಮೇಲೆ ಟ್ರ್ಯಾಕ್ಟರ ಪಲ್ಟಿಯಾಗಿ ಒಬ್ಬ ಮನುಷ್ಯ ಮೃತಪಟ್ಟಿದ್ದು, ಮೃತನ ಶವವನ್ನು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಕ್ಕೆ ತಂದಿರುತ್ತಾರೆ ಎಂದು 8-30 ಪಿಎಮ್ ಕ್ಕೆ ಮೌಖಿಕ ಮಾಹಿತಿ ಬಂದಿದ್ದರಿಂದ ನಮ್ಮ ಠಾಣೆಯ ಶ್ರೀ ಗಂಗಾಧರ ಪಾಟೀಲ ಎ.ಎಸ್.ಐ ರವರು 9 ಪಿಎಮ್ ಕ್ಕೆ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿ ಫಿರ್ಯಾಧಿ ಶ್ರೀಮತಿ ನಿಂಗಮ್ಮ ಗಂಡ ಬಾಲಪ್ಪ ಕಿರಿಹೈಯಾಳ, ವ:22, ಜಾ:ಮಾದಿಗ, ಉ:ಮನೆಕೆಲಸ ಸಾ:ಉಳ್ಳೆಸೂಗೂರು ತಾ:ವಡಗೇರಾ ಇವರ ಹೇಳಿಕೆ ಫಿರ್ಯಾಧಿಯನ್ನು 10 ಪಿಎಮ್ ದ ವರೆಗೆ ಪಡೆದುಕೊಂಡು ಪ್ರಕರಣ ದಾಖಲ ಮಾಡಲು ಪಿಸಿ 290 ರವರ ಸಂಗಡ ಪೊಲೀಸ್ ಠಾಣೆಗೆ ಕಳುಹಿಸಿದ್ದು, ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶವೇನಂದರೆ ನನ್ನ ಗಂಡ ಬಾಲಪ್ಪ ತಂದೆ ಭೀಮರಾಯ ಈತನು ಸಂಟ್ರಿಂಗ್ ಕೆಲಸ ಮಾಡಿಕೊಂಡು ಇರುತ್ತಾನೆ. ನನ್ನ ತವರು ಮನೆ ಕಿರಿ ಹೈಯಾಳ ಗ್ರಾಮ ಇರುತ್ತದೆ. ಹೀಗಿದ್ದು ನನ್ನ ತವರು ಮನೆಯಲ್ಲಿ ನಮ್ಮ ದೊಡ್ಡಮ್ಮಳಿಗೆ ಮೈಯಲ್ಲಿ ಹುಷಾರಿಲ್ಲದ್ದರಿಂದ ನಿನ್ನೆ ದಿವಸ ಮಾತಾಡಿಸಲು ನಾನು ಕಿರಿ ಹೈಯಾಳಕ್ಕೆ ಹೋಗಿದ್ದೇನು. ನನ್ನ ಗಂಡನು ಊರಲ್ಲಿ ಇದ್ದನು. ಇಂದು ದಿನಾಂಕ: 23/02/2020 ರಂದು ನನ್ನ ಗಂಡ ಬಾಲಪ್ಪ ಮತ್ತು ನಮ್ಮೂರ ಜಲಾಲ ತಂದೆ ಮಕ್ತುಮಸಾಬ, ಮರಿಲಿಂಗಪ್ಪ ತಂದೆ ಮಲ್ಲಪ್ಪ ಗೋಟೆ ಮೂರು ಜನ ಸೇರಿ ನನ್ನ ತವರೂರು ಕಿರಿಹೈಯಾಳ ಗ್ರಾಮಕ್ಕೆ ಬಂದು ಸಾಯಂಕಾಲದ ವರೆಗೆ ಸೆಂಟ್ರಿಂಗ್ ಕೆಲಸ ಮಾಡಿ ಸಾಯಂಕಾಲ ನಮ್ಮೂರ ಶರಣಪ್ಪ ತಂದೆ ಮಲ್ಲಪ್ಪ ದನಕಾಯಿ ಜಾ:ಅಗಸರ ಈತನ ಟ್ರ್ಯಾಕ್ಟರದಲ್ಲಿ ಸೆಂಟ್ರಿಂಗ ಸಾಮಾನುಗಳು ಹೇರಿಕೊಂಡು ಉಳ್ಳೆಸೂಗೂರುಕ್ಕೆ ಹೋದರು. ನಾನು ತವರು ಮನೆಯಲ್ಲಿ ಉಳಿದುಕೊಂಡಿದ್ದೇನು. ನನ್ನ ಗಂಡ ಹೋದ ಅರ್ಧ ತಾಸಿನ ನಂತರ ಅಂದ್ರೆ ರಾತ್ರಿ 7 ಗಂಟೆ ಸುಮಾರಿಗೆ ನಮ್ಮೂರ ಮರಿಲಿಂಗಪ್ಪ ತಂದೆ ಮಲ್ಲಪ್ಪ ಗೋಟೆ ಈತನು ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಿನ್ನ ಗಂಡ ಮತ್ತು ನಾವು ಸೆಂಟ್ರಿಂಗ ಕೆಲಸ ಮಾಡಿ ಸೆಂಟ್ರಿಂಗ ಸಾಮಾನುಗಳು ಟ್ರ್ಯಾಕ್ಟರದಲ್ಲಿ ತುಂಬಿಕೊಂಡು ಊರಿಗೆ ಹೋಗುತ್ತಿದ್ದಾಗ ಹೊಸುರು-ತೇಕರಾಳ ರೋಡಿನ ಮಧ್ಯದಲ್ಲಿ ಕೆನಾಲ ಹತ್ತಿರ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರ ಪಲ್ಟಿ ಮಾಡಿದ್ದರಿಂದ ನಿನ್ನ ಗಂಡನು ಸ್ಥಳದಲ್ಲಿಯೇ ಸತ್ತಿರುತ್ತಾನೆ ಎಂದು ಹೇಳಿದ್ದರಿಂದ ಗಾಬರಿಯಾದ ನಾನು ಅಲ್ಲಿಂದ ಸ್ಥಳಕ್ಕೆ ಬಂದಿದ್ದು, ಇದೆ ಸುದ್ದಿಯನ್ನು ಸದರಿ ಮರಲಿಂಗಪ್ಪನು ನನ್ನ ಗಂಡನ ಅಣ್ಣಂದಿರಾದ ಸಿದ್ದಪ್ಪ ಮತ್ತು ರಾಮಲಿಂಗಪ್ಪ ಇವರಿಗೆ ಫೊನ ಮಾಡಿ ಹೇಳಿದ್ದರಿಂದ ಅವರು ಕೂಡಾ ಉಳ್ಳೆಸೂಗುರಿಂದ ಸ್ಥಳಕ್ಕೆ ಬಂದರು. ನಾವೆಲ್ಲರೂ ಹೋಗಿ ನನ್ನ ಗಂಡನಿಗೆ ನೋಡಲಾಗಿ ಎದೆಗೆ ಮಧ್ಯಭಾಗದಲ್ಲಿ ಭಾರಿ ಒಳಪೆಟ್ಟಾಗಿ, ಹಣೆಗೆ, ಮೂಗಿಗೆ ಮತ್ತು ಅಲ್ಲಲ್ಲಿ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಸತ್ತಿದ್ದನು. ಘಟನೆ ಬಗ್ಗೆ ಅಲ್ಲಿಯೇ ಇದ್ದ ಮರಿಲಿಂಗಪ್ಪನಿಗೆ ಕೇಳಲಾಗಿ ಅವರು ಹೇಳಿದ್ದೇನಂದರೆ ನಾವು ಕಿರಿ ಹೈಯಾಳದಲ್ಲಿ ಕೆಲಸ ಮುಗಿಸಿಕೊಂಡು ಸೆಂಟ್ರಿಂಗ ಸಾಮಾನುಗಳನ್ನು ಶರಣಪ್ಪ ತಂದೆ ಮಲ್ಲಪ್ಪ ದನಕಾಯಿ ಜಾ:ಅಗಸರ ಸಾ:ಉಳ್ಳೆಸೂಗೂರು ಈತನ ಟ್ರ್ಯಾಕ್ಟರ ನಂ. ಕೆಎ 32 ಟಿ 6367 ಟ್ರ್ಯಾಲಿ ನಂ. ಇರುವುದಿಲ್ಲ ಸದರಿ ಟ್ರ್ಯಾಕ್ಟರದಲ್ಲ್ಲಿ ಲೋಡ ಮಾಡಿಕೊಂಡು ಉಳ್ಳೆಸೂಗುರುಕ್ಕೆ ಹೊರಟೇವು. ಟ್ರ್ಯಾಲಿಯಲ್ಲಿ ಸೆಂಟ್ರಿಂಗ್ ಸಾಮಾನುಗಳು ತುಂಬಿದ್ದರಿಂದ ಜಾಗ ಇಲ್ಲದ್ದರಿಂದ ನಾವು ಮೂರು ಜನ ಟ್ರ್ಯಾಕ್ಟರ ಇಂಜನದಲ್ಲಿ ಸೈಡಿಗೆ ಕುಳಿತುಕೊಂಡೆವು. ರಾತ್ರಿ 7 ಗಂಟೆ ಸುಮಾರಿಗೆ ಹೊಸೂರು-ತೇಕರಾಳ ರೋಡ ಕ್ಯಾನಾಲ ಹತ್ತಿರ ಹೋಗುತ್ತಿದ್ದಾಗ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮಲೇ ಬಲಕ್ಕೆ ಕಟ್ ಹೊಡೆದು ಪಲ್ಟಿ ಮಾಡಿದ್ದರಿಂದ ನಾವು ಕೆಳಗಡೆ ಬಿದ್ದು ಬಿಟ್ಟೆವು. ಅಪಘಾತದಲ್ಲಿ ನನಗೆ ಟೊಂಕಕ್ಕೆ ಒಳಪೆಟ್ಟಾಯಿತು. ನಿನ್ನ ಗಂಡನಿಗೆ ನೋಡಲಾಗಿ ಬಲಗಡೆ ಎದೆಯ ಮಧ್ಯಭಾಗದಲ್ಲಿ ಭಾರಿ ಒಳಪೆಟ್ಟು ಆಗಿ, ಹಣೆ, ಮೂಗಿಗೆ ಮತ್ತು ಅಲ್ಲಲ್ಲಿ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು ಎಂದು ಹೇಳಿದನು. ಮೃತ ನನ್ನ ಗಂಡನ ಶವವನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಗೆ ತಂದು ಶವಗಾರ ಕೋಣೆಯಲ್ಲಿ ಹಾಕಿರುತ್ತೇವೆ. ಕಾರಣ ಸದರಿ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಪಲ್ಟಿ ಮಾಡಿದ್ದರಿಂದ ನನ್ನ ಗಂಡ ಬಾಲಪ್ಪನಿಗೆ ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸಂಗಡ ಇದ್ದ ಮರಿಲಿಂಗಪ್ಪನಿಗೆ ಟೊಂಕಕ್ಕೆ ಒಳಪೆಟ್ಟಾಗಿದ್ದು, ಸದರಿ ಟ್ರ್ಯಾಕ್ಟರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ 10-30 ಪಿಎಮ್ ಕ್ಕೆ ಠಾಣಾ ಗುನ್ನೆ ನಂ. 17/2020 ಕಲಂ: 279,337,304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಸೈದಾಪುರ ಪೊಲೀಸ ಠಾಣೆ ಗುನ್ನೆ ನಂ:- 17/2020 ಕಲಂ. 279,337,338 ಐಪಿಸಿ ದಿನಾಂಕ 23-02-2020 ರಂದು ಮಧ್ಯಾನ್ಹ 1-15 ಗಂಟೆಗೆ ಸೈದಾಪೂರ ಸರಕಾರಿ ಆಸ್ಪತ್ರೆಯಿಂದ ಪೊನ್ ಮೂಲಕ ಎಮ್.ಎಲ್ ಸಿ ಬಂದಿದ್ದು ಎಮ್.ಎಲ್.ಸಿ ಕುರಿತು ಆಸ್ಪತ್ರೆ ಭೆಟಿ ನೀಡಿದ್ದು ಅಲ್ಲಿ ಉಪಚಾರ ಪಡೆಯುತಿದ್ದ ಗಾಯಾಳು ವಿಜಯಕುಮಾರ ತಂದೆ ಈರಣ್ಣ ದೊರೆ ವಯಾ|| 30 ವರ್ಷ ಜಾ|| ಎಸ್.ಟಿ.  ಉ|| ಗೃಹರಕ್ಷಕ ಧಳ  ಸಾ|| ಸೈದಾಪೂರ ತಾ|| ಜಿ|| ಯಾದಗಿರಿ ಇವರು ಪಿಯರ್ಾಧಿ ನೀಡಿದ ಸಾರಂಶವೆನೆಂದರೆ, ಮದ್ಯಾಹ್ನ 12-30 ಗಂಟೆ ಸುಮಾರಿಗೆ ಯಾದಗಿರಿ- ರಾಯಚೂರ ಮುಖ್ಯ ರಸ್ತೆಯ ಮೇಲೆ ರಾಚನಳ್ಳಿ ಕ್ರಾಸ ಹತ್ತಿರ ರೋಡಿನ ಮೇಲೆ ವಾಹನಗಳನ್ನು ನಿಲ್ಲಿಸಿ ಚೆಕ ಮಾಡುತ್ತಿದಾಗ  ರಾಯಚೂರ ಕಡೆಯಿಂದ ಬಂದ ಹೊಂಡಾ ಶೈನ ಕಂಪನಿಯ ಟಿ.ಎಸ್.-11 ಇಸಿ-5134 ಮೋಟಾರ ಸೈಕಲ್ ಸವಾರನು ತನ್ನ ಮೋಟರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ರೋಡಿನ ಮೇಲೆ ಬೀಳಿಸಿ ಅಪಘಾತಪಡಿಸಿರುತ್ತಾನೆ. ಚಾಲಕನ ಹೆಸರು ಕೆಳಲಾಗಿ ಅವನ ಹೆಸರು ಮಹ್ಮದ ಫಿರೋಜ ತಂದೆ ಮಹ್ಮದ ಇಕ್ಬಾಲ ವಯ || 30 ವರ್ಷ, ಜಾ|| ಮುಸ್ಲಿಂ, ಉ|| ಚಸ್ಮಾ ಅಂಗಡಿ ಕೆಲಸ ಸಾ|| ಬಾಪುನಗರ ಮ.ನಂ.2-3-512/27/30 ಅಂಬರ ಪೇಟ ಹೈದ್ರಾಬಾದ ಹಾ||ವ|| ಸಿ.ಟಿ.ಟಾಕೀಸ್ ಏರಿಯಾ ರಾಯಚೂರ ಅಂತಾ ಇದ್ದು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತಪಡಿಸಿದ್ದು ಅಪಘಾತದಲ್ಲಿ ತಲೆಗೆ ಭಾರಿ ಒಳಪೆಟ್ಟಾಗಿದ್ದು ಮತ್ತು ಸಾದಾ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ  ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.
:-
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-. 53/2020 ಕಲಂ  87 ಕೆ.ಪಿ. ಕಾಯ್ದೆ:- ಇಂದು ದಿನಾಂಕ:23/02/2020 ರಂದು05-45 ಪಿ.ಎಮ್. ಕ್ಕೆ ಶ್ರೀ ಆನಂದರಾವ್ಎಸ್ಎನ್ ಪಿ.ಐ ಸುರಪೂರ  ಪೊಲೀಸ್ಠಾಣೆರವರು4 ಜನಆರೋಪಿತರೊಂದಿಗೆಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ಠಾಣೆಗೆ ಬಂದು ವರದಿ ನೀಡಿದ್ದು, ಸಾರಾಂಶವೆನೆಂದರೆ , ಇಂದು ದಿನಾಂಕ:23-02-2020 ರಂದು4 ಪಿ.ಎಂ. ಸುಮಾರಿಗೆ ಸುರಪೂರ ಪೊಲೀಸ್ಠಾಣಾ ವ್ಯಾಪ್ತಿಯಬೈರಿಮಡ್ಡಿಗ್ರಾಮದ ಸರಕಾರಿ ಶಾಲೆಯ ಪಕ್ಕದಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಮೇಲೆ ಹೇಳಿದ ಆರೋಪಿತರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವಾಗ ದಾಳಿ ಮಾಡಿ4 ಜನಆರೋಪಿತರೊಂದಿಗೆಠಾಣೆಗೆ ಬಂದು ವರದಿ ನಿಡಿದ್ದರ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 52/2020 ಕಲಂ 279,337,338 ಐಪಿಸಿ:- ಇಂದು ದಿನಾಂಕ:22/02/2020 ರಂದು 11 ಪಿ.ಎಂ ಸುಮಾರಿಗೆಠಾಣೆಯಲ್ಲಿದ್ದಾಗ ಸರಕಾರಿಆಸ್ಪತ್ರೆ ಸುರಪೂರದಿಂದ ಎಮ್ಎಲ್ಸಿ ಇದೆಅಂತಾ ಪೋನ ಮೂಲಕ ಮಾಹಿತಿ ತಿಳಿಸಿದ ಮೇರೆಗೆಆಸ್ಪತ್ರೆಗೆ 11-15 ಪಿ.ಎಂ ಕ್ಕೆ ಬೇಟಿ ನೀಡಿ ಗಾಯಾಳುದಾರನ ತಂದೆಯಾದಪಾಮಯ್ಯಾತಂದೆ ಸೋಮಲಿಂಗಪ್ಪ ಬೂತರ ಸಾ:ಕಕ್ಕೇರಾಈತನ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ ದಿನಾಂಕ:23-02-2020 ರಂದು 00-30 ಎ.ಎಂ.ಕ್ಕೆ ಠಾಣೆಗೆ ಬಂದಿದ್ದು ಸಾರಾಂಶವೆನೆಂದರೆ ದಿನಾಂಕ:22-02-2020 ರಂದು ಸಾಯಂಕಾಲ ಸುಮಾರಿಗೆ ನಾನು ನಮ್ಮ ಮನೆಯಲ್ಲಿರುವಾಗ ನನ್ನ ಮಗನಾದ ಪರಮಣ್ಣತಂದೆ ಪಾಮಯ್ಯಾ ಬೂತರ ವಯಾ:30 ವರ್ಷಈತನು  ಅರಳಳ್ಳಿಗೆ ಹೋಗಿ ಬರುತ್ತೆನೆಅಂತಾ ಮೋಟಾರ ಸೈಕಲ್ ನಂಬರ ಕೆಎ-33 ಎಮ್-6745 ನೇದ್ದನ್ನುತಗೆದುಕೊಂಡುಕಕ್ಕೇರಾದಿಂದ ಹೋಗಿದ್ದನು. ಅಂದಾಜುರಾತ್ರಿ 9 ಗಂಟೆ ಸುಮಾರಿಗೆ ನಾನು ಮನೆಯಲ್ಲಿರುವಾಗ ನಮ್ಮ ಅಳಿಯನಾದ ಸೋಮು ತಂದೆಯಂಕಪ್ಪಗೌಡಗೇರಾ ಸಾ:ಕಕ್ಕೇರಾಈತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಇಂದು ದಿನಾಂಕ:22-02-2020 ರಂದುರಾತ್ರಿ 08-30 ಗಂಟೆ ಸುಮಾರಿಗೆ  ನಿಮ್ಮ ಮಗನಾದ ಪರಮಣ್ಣಈತನು ಮೋಟಾರ ಸೈಕಲ್ ನಂಬರ ಕೆಎ-33 ಡಬ್ಲೂ- 9381 ನೇದ್ದನ್ನು ನಡೆಸಿಕೊಂಡು  ಸುರಪೂರ-ಲಿಂಗಸೂರ ಮುಖ್ಯರಸ್ತೆಯತಿಂಥಣಿಕ್ರಾಸಕಮಾನ ಹತ್ತಿರದೇವಾಪೂರಕಡೆಗೆ ಹೋಗುತ್ತಿರುವಾಗದೇವಾಪೂರಕಡೆಯಿಂದಒಂದುಕಾರ ಚಾಲಕನು ಪರಮಣ್ಣಈತನ ಮೋಟಾರ ಸೈಕಲ್ಗೆಎದುರಿನಿಂದಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು, ಅದೆ ಸಮಯಕ್ಕೆಅದೇರಸ್ತೆಯ ಮುಖಾಂತರ ಹೋಗುತ್ತಿದ್ದ ನಾನು ಘಟನೆಯನ್ನು ನೋಡಿ ಪರಮಣ್ಣನನ್ನು ಎಬ್ಬಿಸಿ ನೋಡಲು ಪರಮಣ್ಣನ ಬಲ ಕಪಾಳಕ್ಕೆ ತೆರಚಿದಗಾಯ, ಬಲಗೈ ಹತ್ತಿರ ಹಾಗೂ ಬಲ ತೊಡೆಯ, ಬಲಗಾಲಿನ ಮೀನು ಕಂಡದ ಕೇಳಗೆ ಪಾದದ ಹತ್ತಿರ ಎಲುಬು ಮುರಿದು ಭಾರಿರಕ್ತಗಾಯವಾಗಿರುತ್ತವೆ. ಅಪಘಾತ ಮಾಡಿದಕಾರ ಚಾಲಕ ಕಾರನ್ನು ಸ್ಥಳದಲ್ಲಿಯೆ  ನಿಲ್ಲಿಸಿದ್ದು ಅದರ ನಂಬರ ಕೆಎ-33 ಎಮ್-6745 ಇದ್ದುಅದರ ಚಾಲಕನ ಹೆಸರುಅಮಜಾದತಂದೆರಫದುಲ್ಲಾಜಂಗೋಲಿ ವಯಾ:28 ಜಾತಿ:ಮುಸ್ಲಿಂ ಸಾ:ಯಾದಗಿರಿಇರುತ್ತದೆ. ನಾನು ಪರಮಣ್ಣನನ್ನುಉಪಚಾರಕುರಿತುಆಸ್ಪತ್ರೆಗೆಕರೆದುಕೊಂಡು ಹೋಗುತ್ತೆನೆ ನೀನು ಆಸ್ಪತ್ರೆಕಡೆಗೆ ಬೇಗ ಬಾ ಅಂತಾ ವಿಷಯ ತಿಳಿಸಿದಾಗ ನಾನು ನಮ್ಮ ಸಂಬಂಧಿಕರಾದ ಮಾನಪ್ಪತಂದೆ ಮಲ್ಲಪ್ಪಕಾಡಮಗೇರಾ, ಮಲ್ಲಪ್ಪತಂದೆಅಂಬ್ರಣ್ಣ ಮ್ಯಾಲಿನ ಮನಿ ಎಲ್ಲರೂಕೂಡಿ ಸುರಪೂರ ಸರಕಾರಿಆಸ್ಪತ್ರೆಗೆ ಬಂದು ನೋಡಲು ನನ್ನ ಮಗ ಪರಮಣ್ಣಿಗೆ ಮೇಲೆ ಹೇಳಿದಂತೆ ಗಾಯಗಳಾಗಿದ್ದವು. ಘಟನೆಯ ಬಗ್ಗೆ ಸೋಮು ಈತನಿಗೆ ವಿಚಾರಿಸಲು ಮಗನಾದ ಪರಮಣ್ಣಈತನುರಾತ್ರಿ 08-30 ಗಂಟೆ ಸುಮಾರಿಗೆ ಮೊಟಾರ ಸೈಕಲ್ ನಡೆಸಿಕೊಂಡು ಸುರಪೂರ-ಲಿಂಗಸೂರ ಮುಖ್ಯರಸ್ತೆಯತಿಂಥಣಿಕ್ರಾಸಕಮಾನ ಹತ್ತಿರದೇವಾಪೂರಕಡೆಗೆ ಹೋಗುತ್ತಿರುವಾಗದೇವಾಪೂರಕಡೆಯಿಂದಕಾರ ನಂಬರ ಕೆಎ-33 ಎಮ್-6745 ನೇದ್ದರಚಾಲಕನಾದಅಮಜಾದಈತನುತನ್ನಕಾರನ್ನುಅತೀ ವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದು ಮಗ ಪರಮಣ್ಣಈತನ ಮೋಟಾರ ಸೈಕಲ್ಗೆಎದುರಿನಿಂದಡಿಕ್ಕಿ ಪಡಿಸಿದಾಗ ಪರಮಣ್ಣಈತನು ಮೋಟಾರ ಸೈಕಲ್ ಸಮೇತ ಬಿದ್ದಿದ್ದುಇರುತ್ತದೆ. ಅಪಘಾತ ಪಡಿಸಿದ ಕಾರಿನ ಬಲಗಡೆ ಬಾಗಕ್ಕೆ ಹಾಗೂ ಮೋಟಾರ ಸೈಕಲ್ ಬಂಪರ್ ಹೆಂಡಲ್ಜಖಂಗೊಂಡಿದ್ದುಇರುತ್ತವೆ. ಸದರಿಘಟನೆಯುಕಾರ ಚಾಲಕ ಅಮಾಜಾದಈತನುತನ್ನಕಾರನ್ನುಅತೀ ವೇಗ ಮತ್ತುಅಲಕ್ಷತನದಿಂದ ನಡೆಸಿ ಮೊಟಾರ ಸೈಕಲ್ಗೆಎದುರಿನಿಂದಡಿಕ್ಕಿ ಪಡಿಸಿದ್ದರಿಂದ ಸಂಬವಿಸಿದ್ದು ಇರುತ್ತದೆಕಾರ ಚಾಲ ಅಮಜಾದಈತನ ಮೇಲೆ ಕಾನೂನು ಕ್ರಮಜರುಗಿಸಬೇಕುಅಂತಾಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 54/2020 ಕಲಂ 279,  338 ಐಪಿಸಿ :- ಇಂದು ದಿನಾಂಕ:23/02/2020 ರಂದು 9 ಪಿ.ಎಂ. ಕ್ಕೆ ಠಾಣೆಯಎಸ್.ಹೆಚ್ಡಿಕರ್ತವ್ಯದಲ್ಲಿದ್ದಾಗಇಂದು ದಿನಾಂಕ:23-02-2020 ರಂದು 5 ಪಿ.ಎಂ. ಸುಮಾರಿಗೆ ಹಸನಾಪೂರದ ನಮ್ಮ ಮನೆಯಲ್ಲಿರುವಾಗ ನಮ್ಮಅಣ್ಣನ ಮಗನಾದ ಶೇಖಪ್ಪತಂದೆ ಬೀಮಪ್ಪ ಕೊಂಬಿನ ಸಾ:ರುಕ್ಮಾಪೂರಈತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಇಂದು ದಿನಾಂಕ:23-02-2020 ರಂದು ನನ್ನತಮ್ಮನಾದ ಪರಶುರಾಮತಂದೆ ಬೀಮಪ್ಪ ಕೊಂಬಿನ ವಯಾ:19 ವರ್ಷಈತನುತಮ್ಮ ಗೇಳೆಯನ ಪಲ್ಸರ್ ಮೋಟಾರ ಸೈಕಲ್ ನಂಬರ ಕೆಎ  ನೇದ್ದನ್ನುತಗೆದುಕೊಂಡು ಬೋನಾಳ ಗ್ರಾಮದಿಂದ ಸುರಪೂರಕ್ಕೆ ಹೋಗುವ ಕುರಿತು  ಪೇಠಅಮ್ಮಾಪೂರ-ಸುರಪೂರ ಮುಖ್ಯರಸ್ತೆಯ ತಳವಾರಗೇರಾ ಗ್ರಾಮದ ಹತ್ತಿರ 04-30 ಪಿ.ಎಂ.ಸುಮಾರಿಗೆ ಮೋಟಾರ ಸೈಕಲ್ನ್ನುಅತೀ ವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಹೋರಟಿರುವಾಗಒಮ್ಮೇಲೆರೋಡ ಮೇಲ್ ಮೋಟಾರ ಸೈಕಲ್ ಸಮೇತ ಸ್ಕಿಡ್ಡಾಗಿ ಬಿದ್ದಿದ್ದು ಆಗ ಅದೆ ಸಮಯಕ್ಕೆಅದೇರಸ್ತೆಯ ಮುಖಾಂತರ ಹೋಗುತ್ತಿದ್ದರುಕ್ಮಾಪೂರಗ್ರಾಮದ ಬಸವರಾಜತಂದೆ ಹಣಮಂತ ಕೊಂಬಿನ ಈತನುಘಟನೆಯನ್ನುಕಂಡು ಮೋಟಾರ ಸೈಕಲ್ ಸಮೇತ ಬಿದ್ದಿದ್ದತಮ್ಮ ಪರಶುರಾಮಈತನನ್ನು ಎಬ್ಬಿಸಿ ನನಗೆ ಪೋನ ಮಾಡಿ ವಿಷಯ ತಿಳಿಸಿದಾಗ ನಾನು ನಾನು ತಳವಾರಗೇರಾ ಘಟನಾ ಸ್ಥಳಕ್ಕೆ ಬಂದುತಮ್ಮ ಪರಶುರಾಮನಿಗೆ ನೋಡಲು ಅವನ ತಲೆಯಎಡಬಾಗದ ಮತ್ತು ಹಣೆಯ ಹತ್ತಿರ, ಬಲಬಾಗದ ಮೊಣಕಾಲ ಹತ್ತಿರ, ಭಾರಿರಕ್ತಗಾಯವಾಗಿ ಬಾಯಿಯ ಮೇಲಿನ ಹಲ್ಲುಗಳು ಮುರಿದುಗಾಯ ಹೊಂದಿದ್ದು ಪರಶುರಾಮಈತನನ್ನುಉಪಚಾರಕುರಿತು 108 ಅಂಬುಲೇನ್ಸ ವಾಹನದಲ್ಲಿ ಸರಕಾರಿಆಸ್ಪತ್ರೆ ಸುರಪೂರಕ್ಕೆಕರೆದುಕೊಂಡು ಬರುತ್ತಿದ್ದೆನೆಆಸ್ಪತ್ರೆಕಡೆಗೆ ಬಾ ಅಂತಾ ಪೋನ ಮಾಡಿ ವಿಷಯ ತಿಳಿಸಿದಾಗ ನಾನು ಸರಕಾರಿಆಸ್ಪತ್ರೆ ಸುರಪೂರಕ್ಕೆ ಹೋಗಿದ್ದುಅಲ್ಲಿ ಪರಶುರಾಮತಾಯಿಯಾದ ಮಲ್ಲಮ್ಮಗಂಡ ಬೀಮಪ್ಪ ಕೊಂಬಿನ ಹಾಗೂ ಪರಶುರಾಮನಕಾಕನಾದ ಮಾನಪ್ಪತಂದೆರಾಮಪ್ಪ ಕೊಂಬಿನ ಇವರುಆಸ್ಪತ್ರೆಗೆ ಬಂದಿದ್ದು ಪರಶುರಾಮಈತನನ್ನು ನೋಡಲು  ಮೇಲೆ ಹೇಳಿದಂತೆ ಪರಶುರಾಮಈತನಿಗೆ ಮೇಲೆ ಹೇಳಿದಂತೆ ಗಾಯಗಳಾಗಿದ್ದನ್ನು ನೋಡಿದೆವು. ನಂತರ ಪರಶುರಾಮನನ್ನು ವೈಧ್ಯಾಧಿಕಾರಿಗಳ ಸಲಹೇ ಮೇರೆಗೆ ಹೆಚ್ಚಿನಉಪಚಾರಕುರಿತು ಕಲಬುರಗಿಆಸ್ಪತ್ರೆಗೆ ಕಳಿಸಿಕೊಟ್ಟಿದ್ದು ಠಾಣೆಗೆ ಬಂದಿದ್ದುಇರುತ್ತದೆ. ಕಾರಣ ಮುಂದಿನ ಕಾನೂನು ಕ್ರಮಜರುಗಿಸಲು ವಿನಂತಿಅಂತಾಕೊಟ್ಟಅಜರ್ಿ ಸಾರಾಂಶದ ಮೇಲಿಂದಠಾಣಾಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದ 

ಗೋಗಿ ಪೊಲೀಸ ಠಾಣೆ ಗುನ್ನೆ ನಂ:-. 14/2020 ಕಲಂ, 87 ಕೆ.ಪಿ ಆ್ಯಕ್ಟ್:- ದಿನಾಂಕ 23-02-2020 ರಂದು 4-10 ಪಿಎಮ್ ಕ್ಕೆ ಆರೋಪಿತರೆಲ್ಲರೂ ಸೂರಪ್ಪಗೌಡ ತಂ: ತಾಯಣ್ಣ ಬಿರಾದಾರ ಇವರ ಮನೆಯ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ಜೂಜಾಟ ಆಡುತ್ತಿದ್ದಾಗ ಮಾನ್ಯ ಸೋಮಲಿಂಗ ಒಡೆಯರ ಪಿಎಸ್ಐ ಗೋಗಿ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 08 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 11200/-ರೂ. ಹಾಗು 52 ಇಸ್ಪೇಟ ಎಲೆಗಳನ್ನು 4-20 ಪಿಎಮ್ ದಿಂದ 5-20 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 6-00 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರಪಡಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 7-00 ಪಿಎಂ ಕ್ಕೆ ಠಾಣೆ ಗುನ್ನೆ ನಂ:  14/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 18/2020 ಕಲಂ 32, 34 ಕೆ.ಇ ಎಕ್ಟ್:- ಇಂದು ದಿನಾಂಕ: 23/02/2020 ರಂದು 4-55 ಪಿ.ಎಮ್ ಕ್ಕೆ ಆರೋಪಿತನು ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಭೀ.ಗುಡಿಯ ಕೋರಿಕೆ ಬಸ್ ನಿಲ್ದಾಣದ ಹತ್ತಿರ ಇರುವ ತನ್ನ ಚಹಾದ ಹೋಟಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಮಾನ್ಯ ಎಸ್.ಪಿ ಸಾಹೇಬರು ಯಾದಗಿರಿ ಹಾಗೂ ಮಾನ್ಯ ಪಿ.ಐ ಸಾಹೇಬರು ಡಿಸಿಐಬಿ ಘಟಕ ಯಾದಗಿರಿ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು, ದಾಳಿ ಸಮಯದಲ್ಲಿ ಆರೋಪಿತನು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ 1) 90 ಎಂಎಲ್ ನ 90 ಓರಿಜಿನಲ್ ಚ್ವೈಸ್ ವಿಸ್ಕಿ ಪೌಚಗಳು, ಅ.ಕಿ. ಒಂದಕ್ಕೆ 30.32 ರೂ, 2)  180 ಎಂಎಲ್ ನ 12 ಬ್ಯಾಗ್ಪೈಪರ್ ವಿಸ್ಕಿ ಪೌಚಗಳು, ಅ.ಕಿ. ಒಂದಕ್ಕೆ 90.21 ರೂ, 3) 180 ಎಮ್ಎಲ್ ನ 15  ಓಲ್ಡ ಟವರೈನ್ ವಿಸ್ಕಿ ಪೌಚಗಳು, ಅ.ಕಿ. ಒಂದಕ್ಕೆ 74.13 ರೂ, 4) 180 ಎಮ್ಎಲ್ ನ 14 ಮೆಕ್ಡೌಲ ವಿಸ್ಕಿ ಪೌಚಗಳು, ಅ.ಕಿ. ಒಂದಕ್ಕೆ 90.21 ರೂ, 5) 180 ಎಮ್ಎಲ್ ನ 6 ಮೆಕ್ಡೌಲ್ ವಿಸ್ಕಿ ಬಾಟಲಗಳು ಅ.ಕಿ. ಒಂದಕ್ಕೆ 162.22 ರೂ, 6) 650 ಎಮ್ಎಲ್ ನ 14 ಕಿಂಗ್ ಫಿಷರ್ ಬೀಯರ್ ಬಾಟಲಗಳು ಅ.ಕಿ. ಒಂದಕ್ಕೆ 145 ರೂ ಹೀಗೆ ಒಟ್ಟು 9190/- ರೂ ಮೌಲ್ಯದ ಸರಾಯಿಯನ್ನು, ಮತ್ತು ಸರಾಯಿ ಮಾರಾಟ ಮಾಡಿದ್ದರಿಂದ ಬಂದ 3050=00 ರೂಪಾಯಿ ನಗದು ಹಣ ಜಪ್ತಿಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 19/2020 ಕಲಂ 32, 34 ಕೆ.ಇ ಎಕ್ಟ್:- ಇಂದು ದಿನಾಂಕ: 23/02/2020 ರಂದು 7-45 ಪಿ.ಎಮ್ ಕ್ಕೆ ಆರೋಪಿತನು ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಶಿರವಾಳ ಮಡ್ನಾಳ ಕ್ಯಾಂಪದಲ್ಲಿ ತನ್ನ ಪಾನ್ ಶಾಪ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು, ದಾಳಿ ಸಮಯದಲ್ಲಿ ಆರೋಪಿತನು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ 1) 90 ಎಂಎಲ್ ನ 48 ಓರಿಜಿನಲ್ ಚ್ವೈಸ್ ವಿಸ್ಕಿ ಪೌಚಗಳು, ಅ.ಕಿ. 1455.36 2) 180 ಎಂಎಲ್ ನ 23 ಬ್ಯಾಗ್ಪೈಪರ್ ವಿಸ್ಕಿ ಪೌಚಗಳು, ಅ.ಕಿ. 2074.83 3) 180 ಎಮ್ಎಲ್ ನ 21  ಓಲ್ಡ ಟವರೈನ್ ವಿಸ್ಕಿ ಪೌಚಗಳು, ಅ.ಕಿ. 1556.73 4) 90 ಎಮ್ಎಲ್ ನ 48 ಮೆಕ್ಡೌಲ ವಿಸ್ಕಿ ಪೌಚಗಳು, ಅ.ಕಿ. 3211.68 ರೂ ಹೀಗೆ ಒಟ್ಟು 8298.6/- ರೂ ಜಪ್ತಿಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!