ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/02/2020
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 31/2020 ಕಲಂ 302 ಸಂಗಡ 34 ಐಪಿಸಿ ಮತ್ತು ಕಲಂ 3(1),(ಆರ್)(ಎಸ್), 3(2),(ಗಿ) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್-1989:- ಇಂದು ದಿನಾಂಕ 22.02.2020 ರಂದು ಶ್ರೀ ಬಾಲ್ಯಾ@ ಬಾಲು ತಂದೆ ರೂಮ್ಯಾ ನಾಯಾಕ ಪವ್ಹಾರ ವಃ 45 ವರ್ಷ ಜಾತಿಃ ಲಮಾಣಿ ಉಃ ಒಕ್ಕಲುತನ ಸಾಃ ಬೋರಬಂಡ ತಾಃ ಗುರುಮಠಕಲ ಜಿಃ ಯಾದಗಿರಿ ಇವರು ನೀಡಿದ ಹೇಳಿಕೆ ಫಿಯರ್ಾದಿ ಸಂಕ್ಷಿಪ್ತ ಸಾರಾಂಶವೇನೆಂದರೆ ತನ್ನ ಮಗ ಮೋಹನ್ ಪವ್ಹಾರ 19 ವರ್ಷ ಈತನು ಪ್ರತಿದಿನದಂತೆ ಇಂದು ಗುರುಮಠಕಲ್ ಪಟ್ಟಣದ ಕಾಲೇಜಿಗೆ ತನ್ನ ಸ್ನೇಹಿತರೊಂದಿಗೆ ಹೋಗಿರುತ್ತಾನೆ. ಗುರುಮಠಕಲ್ ಪಟ್ಟಣದ ನ್ಯೂಲುಕ್ ಹೇರ್ ಕಟಿಂಗ್ ಅಂಗಡಿ ಮುಂದೆ ಮೋಹನ್ ಮತ್ತು ವೆಂಕಟೇಶ ತಂದೆ ಕಿಷ್ಟ್ಯಾ ರಾಠೋಡ್ ಇಬ್ಬರೂ ಮಾತನಾಡುತ್ತ ನಿಂತಾಗ ತಹೆರಿಂ ತಂದೆ ಮುಬಿನ್ ಮತ್ತು ಮಹಿಪಾಲ ತಂದೆ ಭೀಮಶಪ್ಪ ಸಾ|| ಇಬ್ಬರೂ ಗುರುಮಠಕಲ್ ಇವರು ಹಾಸ್ಟೆಲ್ ಊಟದ ವಿಷಯ ಹಾಗೂ ಹಳೆ ದ್ವೇಷದಿಂದ ಇಂದು ಮಧ್ಯಾಹ್ನ 12.10 ಗಂಟೆ ಸುಮಾರಿಗೆ ಮೋಹನ್ ಪವ್ಹಾರ್ ಈತನಿಗೆ ಜಾತಿ ನಿಂದನೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಕಲ್ಲು ಮತ್ತು ಚಾಕುವಿನಿಂದ ಹೊಡೆದಿರುತ್ತಾರೆ. ಗಾಯಾಳು ಮೋಹನ್ ಈತನಿಗೆ ಅವನ ಸ್ನೇಹಿತರು ಗುರುಮಠಕಲ್ ಸರಕಾರಿ ಆಸ್ಪತ್ರೆಗೆ ಕರೆದುಕೊಂಡೋದಾಗ ವೈದ್ಯಾಧಿಕಾರಿಗಳು ಮೋಹನನಿಗೆ ಪರೀಕ್ಷಿಸಿ ಅದಾಗಲೇ ಮೃತಪಟ್ಟಿರುತ್ತಾನೆ. ಅಂತಾ ತಿಳಿಸಿರುತ್ತಾರೆಂದು ವಗೈರೆ ದೂರು.
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 32/2020 ಕಲಂ 143, 147, 323, 324, 326, 504, 506 ಸಂ. 149 ಐಪಿಸಿ:- ಇಂದು ದಿನಾಂಕ 22.02.2020 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ಪಿರ್ಯಾಧಿ ಮತ್ತು ಆಕೆಯ ನೆಗಣಿ ಮನೆ ಮುಂದೆ ಕಳಿತಾಗ ಆರೋಪಿತರು ಗೋಪಾಲಪೂರ ಸೀಮಾಂತರದ ಜಮೀನು ಸವರ್ೆ ನಂ. 48 ವಿಸ್ತೀರ್ಣ 2 ಎಕರೆ ಜಮೀನು ರಜಿಸ್ಟರ ವಿಷಯದಲ್ಲಿ ಅಕ್ರಮಕೂಟ ರಚಿಸಿಕೊಂಡು ಬಂದು ಪಿರ್ಯಾದಿಯ ನೆಗೆಣಿ ಸಂಗಡ ಜಗಳ ಮಾಡಿ ಕಟ್ಟಿಗೆಯಿಂದ ಬಾಯಿಗೆ ಹೊಡೆದು ಮೆಲಿನ ಹಲ್ಲು ಮುರಿದು, ತೆಲೆಗೆ ಹೊಡೆದು ರಕ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:-. 52/2020 ಕಲಂ ಮನುಷ್ಯ ಕಾಣೆ:- ಃ ಇಂದು 22/02/2020 ರಂದು 12.00 ಪಿ ಎಮ್ ಕ್ಕೆ ಪಿಯರ್ಾದಿ ಶ್ರೀ ಮತಿ ಸಾಬಮ್ಮ ಗಂಡ ನಾಗಪ್ಪ ಕೋನೇರ ವ|| 45 ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಸಾ|| ಹಳಿಸಗರ ತಾ|| ಶಹಾಪೂರ ಇವರು ಠಾಣೆಗೆ ಬಂದು ಒಂದು ದೂರ ಅಜರ್ಿ ಸಲ್ಲಿಸಿದ್ದು ಸದರ ಅಜರ್ಿಯ ಸಾರಂಶವೆನಂಧರೆ, ನಾನು ಮತ್ತು ನನ್ನ ಗಂಡ ನಾಗಪ್ಪ ತಂದೆ ಅಂಬ್ಲಪ್ಪ ಕೋನೇರ ವ|| 55 ವರ್ಷ ಸಾ|| ಹಳಿಸಗರ ತಾ|| ಶಹಾಪೂರ ನಮಗೆ 5 ಜನ ಮಕ್ಕಳಿದ್ದು ಅದರಲ್ಲಿ ಮೂರು ಜನ ಹೆಣ್ಣು ಮಕ್ಕಳು, ಇಬ್ಬರೂ ಗಂಡು ಮಕ್ಕಳಿದ್ದು ಎರಡು ಜನ ಹೆಣ್ಣು ಮಕ್ಕಳಿಗೆ ಮದುವೆಮಾಡಿ ಕೊಟ್ಟಿದ್ದು, ಒಕ್ಕಲುತನ ಕೆಲಸ ಮಾಡಿಕೊಂಡು ಮಕ್ಕಳೊಂದಿಗೆ ಉಪಜೀವಿಸಿತ್ತುದ್ದ, ನನ್ನ ಗಂಡ ನಾಗಪ್ಪ ಇತನು ಸಂಸಾರ ಸಲುವಾಗಿ ಅಲಲ್ಲಿ ಕೈ ಸಾಲ ಮಾಡಿಕೊಂಡು ಸಾಲದ ವಿಷಯವಾಗಿ ಬಹಳ ಟೇನಶ್ನ ಮಾಡಿಕೊಂಡು, ಅದೆ ವಿಷಯಕ್ಕೆ ಆಗಾಗ ಮನೆಯಲ್ಲಿ ಹೋದಾರುಡುತಿದ್ದ,
ಹೀಗೆ ಮೂರು ತಿಂಗಳಿಂದೆ ನನ್ನ ಗಂಡ ಮನೆಯಲ್ಲಿ ಸಾಲದ ವಿಷಯದಲ್ಲಿ ಹೋದಾರಾಡಿ ಮನೆ ಬಿಟ್ಟು ಹೋಗಿದ್ದು ಇರುತ್ತದೆ ನಾವೂ ಅಂದು ಸಾಯಾಂಕಾಲ ರಸ್ತಾಪೂರದಲ್ಲಿ ಇರುವ ನಮ್ಮ ಮಗಳಾದ ಶೀವಮ್ಮ ಇವಳಿಗೆ ಪೋನ ಮಾಡಿ ಕೆಳಿದಾಗ ಸದರ ಶೀವಮ್ಮ ತಿಳಿಸಿದ್ದೇನಂದರೆ ಅಪ್ಪಾ ಮನೆಗೆ ಬಂದು ಹೋಲಕ್ಕೆ ಕ್ರೀಮಿನಸಕ ಔಷದಿ ತರುವದಿದೆ ಅಂತಾ 1000/- ರೂ ಸಾಲ ತೆಗಿದುಕೊಂಡು ಹೋಗಿದ್ದ ಇರುತ್ತದೆ ಅಂತಾ ತಿಳಿಸಿದ್ದು ಇರುತ್ತದೆ, ಯಾರೋ ಯಾದಗಿರ ತಾಲೂಕಿನ ಅಬ್ಬೆ ತುಮುಕರದಲ್ಲಿ ಇದ್ದಾನೆ ಅಂತಾ ತಿಳಿಸಿದ್ದ ನಾವೂ ಅಬ್ಬೆ ತುಮಕೂರಗೆ ಹೋಗಿ ನೋಡಲಾಗಿ ಸದರ ನನ್ನ ಗಂಡ ಅಲ್ಲಿ ಇರಲಿಲ್ಲಾ, ನಾವೂ ನಮ್ಮ ಸಂಬಂದಕರಿಗೆ ವಿಚಾರಮಾಡಿ ಎಲ್ಲಾ ಕಡೆ ಹುಡಕಾಡಿ ಇಂದು ದಿನಾಂಕ 22/02/2020 ರಂದು ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದು ಇರುತ್ತದೆ ಕಾರಣ ಮಾನ್ಯರವರು ಕಾಣೆಯಾದ ನನ್ನ ಗಂಡ ನಾಗಪ್ಪ ಇವರನ್ನು ಹುಡುಕಿ ಕೊಡಲು ಮಾನ್ಯರವಲ್ಲಿ ವಿನಂತಿ. ಅಂತ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 52/2020 ಕಲಂ ಮನುಷ್ಯ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ 53/2020 ಕಲಂಃ ಕಲಂ 279,337,338 ಐಪಿಸಿ :- ಇಂದು ದಿನಾಂಕ 22/02/2020 ರಂದು 1.30 ಪಿಎಂ ಕ್ಕೆ ಅಜರ್ಿದಾರರಾದ ಮೀನಾಕ್ಷಿ ಗಂಡ ಲಕ್ಷ್ಮಣ ತಂತಣ್ಣನವರ ವ|| 26ವರ್ಷ ಜಾ|| ಕುರುಬರ ಉ|| ಮನೆಗೆಲಸ ಸಾ|| ಸೈದಾಪೂರ ತಾ|| ಯಾದಗೀರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿಯನ್ನು ತಂದು ನೀಡಿದ್ದು ಅದರ ಸಾರಾಂಶವೇನೆಂದರೆ, ನನಗೆ ನಮ್ಮ ತಂದೆಯವರು ದಿನಾಂಕ 15/02/2020 ರಂದು ನನ್ನ ಗಂಡನ ಮನೆಯಿಂದ ತವರುಮನೆಗೆ ಕರೆದುಕೊಂಡು ಬಂದಿದ್ದು ನಾನು ತವರುಮನೆಯಾದ ರಾಕಂಗೇರಾ ಗ್ರಾಮದಲ್ಲಿದ್ದೆನು. ಹೀಗಿದ್ದು ದಿನಾಂಕ 17/02/2020 ರಂದು 3.00 ಪಿ.ಎಂ ಸುಮಾರಿಗೆ ನಾನು ಮತ್ತು ನಮ್ಮ ತಂದೆಯವರಾದ ಭೀಮರಾಯ ತಂದೆ ಗಾಳೆಪ್ಪ ಚಲವಾದಿ ವ|| 55ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ರಾಕಂಗೇರಾ ಶಹಾಪೂರ ಇಬ್ಬರೂ ಕೂಡಿ ನಮ್ಮ ತಂದೆಯವರ ಮೋಟಾರ ಸೈಕಲ್ ನಂ ಕೆಎ 33 ಕ್ಯೂ 9939 ನೇದ್ದರಲ್ಲಿ ಶಹಾಪೂರ ಬಜಾರಕ್ಕೆ ಬಂದು ಬಜಾರ ಮಾಡಿಕೊಂಡು ರಾಕಂಗೇರಾ ಗ್ರಾಮದ ನಮ್ಮ ತಂದೆಯವರ ಮನೆಗೆ ಹೋಗುತ್ತಿದ್ದಾಗ 6.00 ಪಿಎಂ ಸುಮಾರಿಗೆ ಶಹಾಪೂರ ಸುರಪೂರ ಮುಖ್ಯರಸ್ತೆಯ ಮೇಲೆ ಶಹಾಪೂರ ಸಕರ್ಾರಿ ಆಸ್ಪತ್ರೆ ದಾಟಿ ಸ್ವಲ್ಪ ಮುಂದೆ ರಾಕಂಗೇರಾ ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಟಂ ಟಂ ಅಟೋ ನಂ ಕೆಎ 33 ಎ 6725 ನೇದ್ದರ ಚಾಲಕನು ತನ್ನ ಅಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಾವು ಹೋಗುತ್ತಿದ್ದ ಸೈಕಲ್ ಮೋಟಾರಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಾನು ಮತ್ತು ನಮ್ಮ ತಂದೆಯು ಕೆಳಗೆ ಬಿದ್ದಿದ್ದು ನನಗೆ ಬಲಗಡೆಯ ಹಣೆಗೆ ರಕ್ತಗಾಯ, ಬಲಗಾಲಿಗೆ ತರಚಿದ ಗಾಯ, ಬಲಗೈಗೆ ಭಾರೀ ಒಳಪೆಟ್ಟಾಗಿ ಕೈ ಮುರಿದಿದ್ದು, ನಮ್ಮ ತಂದೆಯಾದ ಭೀಮರಾಯನಿಗೆ ಬಲಗಡೆ ಹಣೆಗೆ ರಕ್ತಗಾಯ, ಬಲಗಾಲಿನ ತೊಡೆಗೆ ಮತ್ತು ಬಲಗಾಲಿನ ಮೊಣಕಾಲಿನ ಕೆಳಗೆ ಭಾರೀ ಒಳಪೆಟ್ಟಾಗಿ ಕಾಲು ಮುರಿದಿದ್ದು, ಬಲಗೈಗೆ ಭಾರಿ ಒಳಪೆಟ್ಟಾಗಿ ಕಾಲು ಮುರಿದಿದ್ದು ಮತ್ತು ಕೈಗೆ ಕಾಲಿಗೆ ತರಚಿದ ಗಾಯಗಳಾಗಿದ್ದು ನಾವು ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದಾಗ ಅಲ್ಲಿಯೇ ಹೋಗುತ್ತಿದ್ದ ರಾಕಂಗೇರಾ ಗ್ರಾಮದ ಅಯ್ಯಪ್ಪ ತಂದೆ ಧರ್ಮಣ್ಣ ಪೂಜಾರಿ ಈತನು ಬಂದು ನಮಗೆ ಎಬ್ಬಿಸಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸಕರ್ಾರಿ ಆಸ್ಪತ್ರೆ ಶಹಾಪೂರಕ್ಕೆ ತಂದು ಸೇರಿಕೆ ಮಾಡಿ ನಮ್ಮ ಅಣ್ಣನಾದ ಶೇಖಪ್ಪನಿಗೆ ಫೋನ ಮಾಡಿ ವಿಷಯ ತಿಳಿಸಿದ್ದರಿಂದ ನಮ್ಮ ಅಣ್ಣನಾದ ಶೇಖಪ್ಪನು ಆಸ್ಪತ್ರೆಗೆ ಬಂದಿದ್ದು ನಮಗೆ ಹೆಚ್ಚಿನ ಗಾಯಗಳಾಗಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನನಗೆ ಸದ್ಯ ಸ್ವಲ್ಪ ಆರಾಮವಾಗಿದ್ದು ನಮ್ಮ ತಂದೆಯವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಅಪಘಾತವಾದ ದಿನ ದೂರು ದಾಖಲಿಸಲು ಸಾಧ್ಯವಾಗದ ಕಾರಣ ಅವಸರದಲ್ಲಿ ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ಹೋಗಿದ್ದು ಇಂದು ದಿನಾಂಕ 22/02/2020 ರಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದು ಇರುತ್ತದೆ. ನಮಗೆ ಅಪಘಾತಪಡಿಸಿದ ಟಂ ಟಂ ಅಟೋ ನಂ ಕೆಎ 33 ಎ 6725 ನೇದ್ದರ ಚಾಲಕನ ಹೆಸರು ಕೇಳಿ ತಿಳಿದುಕೊಳ್ಳಲಾಗಿ ಮಾನಪ್ಪ ತಂದೆ ರಾಮಣ್ಣ ಕೋಲಕುಂದಿ ಸಾ|| ತಿಪನಟಗಿ ಅಂತಾ ತಿಳಿದು ಬಂದಿದ್ದು ಸದರಿ ಚಾಲಕನು ತನ್ನ ಅಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಸಾದಾ ಮತ್ತು ಭಾರೀ ಗಾಯ ಮಾಡಿ ನಮ್ಮ ತಂದೆಗೆ ಭಾರೀ ಸ್ವರೂಪದ ಗಾಯವಾಗಲು ಕಾರಣನಾಗಿದ್ದು ಸದರಿ ಅಟೋ ಚಾಲಕನಾದ ಮಾನಪ್ಪ ತಂದೆ ರಾಮಣ್ಣ ಕೋಲಕುಂದಿ ಸಾ|| ತಿಪನಟಗಿ ಈತನ ಮೇಲೆ ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 53/2020 ಕಲಂ 279,337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 54/2020 ಕಲಂ 78(3) ಕೆಪಿ.ಯಾಕ್ಟ:- ಇಂದು ದಿನಾಂಕ 22/02/2020 ರಂದು ಶ್ರೀ ಹನುಮರಡ್ಡೆಪ್ಪ ಪಿಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಬಾಪೂಗೌಡ ನಗರ ಕಾಲೋನಿಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಒಬ್ಬ ವ್ಯಕಿಯನ್ನು ಹಿಡಿದು ವಿಚಾರಿಸಲಾಗಿ ಅವನ ಹೆಸರು ಹಣಮರೆಡ್ಡಿ ತಂದೆ ಬಸನಗೌಡ ಬಿರಾದಾರ ವ|| 38ವರ್ಷ ಜಾ|| ರೆಡ್ಡಿ ಉ|| ಮಟಕಾ ನಂಬರ ಬರೆದುಕೊಳ್ಳುವುದು ಸಾ|| ಟಿ.ವಡಗೇರಾ ತಾ|| ಶಹಾಪೂರ ಈತನಿಂದ ನಗದು ಹಣ 3330/- ರೂಪಾಯಿ 1 ಬಾಲ್ ಪೆನ್ ಮತ್ತು ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಸಿಕ್ಕಿದ್ದು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿ ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 22/02/2020 ರಂದು 8.40 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 54/2020 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:-. 55/2020 ಕಲಂ 78(3) ಕೆಪಿ.ಯಾಕ್ಟ:- ಇಂದು ದಿನಾಂಕ 22/02/2020 ರಂದು ಶ್ರೀ ಹನುಮರಡ್ಡೆಪ್ಪ ಪಿಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಹತ್ತಿಗುಡೂರ ಗ್ರಾವ್ಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿಐ ಸಾಹೇಬರು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು ದಾಳಿ ಮಾಡುವ ಕುರಿತು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಒಬ್ಬ ವ್ಯಕಿಯನ್ನು ಹಿಡಿದು ವಿಚಾರಿಸಲಾಗಿ ಅವನ ಹೆಸರು ಮಲ್ಲಪ್ಪ ತಂದೆ ದಂಡಪ್ಪ ಕನಕಗಿರಿ ವ|| 36ವರ್ಷ ಜಾ|| ಮಾದರ ಉ|| ಮಟಕಾ ನಂಬರ ಬರೆದುಕೊಳ್ಳುವುದು ಮತ್ತು ಕೂಲಿ ಕೆಲಸ ಸಾ|| ಹತ್ತಿಗುಡೂರ ತಾ|| ಶಹಾಪೂರ ಈತನಿಂದ ನಗದು ಹಣ 2150/- ರೂಪಾಯಿ 1 ಬಾಲ್ ಪೆನ್ ಮತ್ತು ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಸಿಕ್ಕಿದ್ದು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿ ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 22/02/2020 ರಂದು 10.20 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 55/2020 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಪಿಎಆರ್ ನಂ 07/2020 ಕಲಂ 107 ಸಿಆರ್ಪಿಸಿ :- ಇಂದು ದಿನಾಂಕ: 22/02/2020 ರಂದು 5.30 ಪಿಎಂ ಕ್ಕೆ ಠಾಣೆಯ ಶ್ರೀ ಹುಸೇನಪ್ಪ ಹೆಚ್ಸಿ 103 ರವರು ಠಾಣೆಗೆ ಹಾಜರಾಗಿ ಒಂದು ವರದಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 22/02/2020 ರಂದು 4.00 ಪಿಎಮ್ ಸುಮಾರಿಗೆ ಬೀಟ ಮಾಹಿತಿ ಸಂಗ್ರಹ ಕುರಿತು ಕನ್ಯಾಕೊಳ್ಳೂರ ಗ್ರಾಮಕ್ಕೆ ಹೋದಾಗ ಮಾಹಿತಿ ಬಂದಿದ್ದೇನೆಂದರೆ, ಕನ್ಯಾಕೊಳ್ಳೂರ ಗ್ರಾಮದಲ್ಲಿ ತಿಪ್ಪೆ ಜಾಗದ ವಿಷಯದಲ್ಲಿ ಎರಡು ಗುಂಪಿನವರ ಮಧ್ಯ ತಕರಾರು ಉಂಟಾಗಿ ಸದರಿ ತಿಪ್ಪೆ ಜಾಗವು ನಮಗೆ ಸಂಬಂಧಿಸಿದ್ದು ಅಂತಾ 1 ನೇ ಪಾಟರ್ಿಯ ಜನರು ಮತ್ತು 2ನೇ ಪಾಟರ್ಿಯವರು ತಕರಾರು ಮಾಡುತ್ತಿದ್ದುದು ಕಂಡು ಬಂದಿದ್ದು ಸದರಿ ತಿಪ್ಪೆ ಜಾಗದ ವಿಷಯದಲ್ಲಿ ಮತ್ತೆ ತಕರಾರು ಉಂಟಾಗಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತಿ ಕದಡುವ ಸಂಭವ ಕಂಡು ಬಂದಿದ್ದು ತಕರಾರಿಗೆ ಕಾರಣರಾದ 1ನೇ ಪಾಟರ್ಿಯವರಾದ 1) ಮಾನಪ್ಪ ತಂದೆ ಮಲ್ಲಪ್ಪ ಕಾಲೇಗಾರ 2) ನಾಗಪ್ಪ ತಂದೆ ಮಲ್ಲಪ್ಪ ಕಾಲೇಗಾರ 3) ಮಲ್ಲಪ್ಪ ತಂದೆ ಭೀಮಪ್ಪ ಹೊಸಮನಿ 4) ಮಾನಪ್ಪ ತಂದೆ ಮಲ್ಲಪ್ಪ ಕಡಾಚನೋರ ಸಾ|| ಎಲ್ಲರೂ ಕನ್ಯಾಕೊಳ್ಳೂರ ತಾ|| ಶಹಾಪೂರ ರವರು ಸದರಿ ತಿಪ್ಪೆ ಜಾಗದ ವಿಷಯದಲ್ಲಿ ತಕರಾರು ಮಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡುವ ಸಾಧ್ಯತೆ ಕಂಡು ಬಂದಿದ್ದರಿಂದ ಇಂದು ದಿನಾಂಕ: 22/02/2020 ರಂದು 5.30 ಪಿಎಮ್ ಕ್ಕೆ ಠಾಣೆಗೆ ಬಂದು ಸದರಿಯವರ ವಿರುದ್ದ ಮುಂಜಾಗ್ರತ ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಪಿಎಆರ್ ನಂ 07/2020 ಕಲಂ 107 ಸಿಆ
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಪಿಎಆರ್ ನಂ 08/2020 ಕಲಂ 107 ಸಿಆರ್ಪಿಸಿ :- ಇಂದು ದಿನಾಂಕ: 22/02/2020 ರಂದು 6.00 ಪಿಎಂ ಕ್ಕೆ ಠಾಣೆಯ ಶ್ರೀ ಹುಸೇನಪ್ಪ ಹೆಚ್ಸಿ 103 ರವರು ಠಾಣೆಗೆ ಹಾಜರಾಗಿ ಒಂದು ವರದಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 22/02/2020 ರಂದು 4.00 ಪಿಎಮ್ ಸುಮಾರಿಗೆ ಬೀಟ ಮಾಹಿತಿ ಸಂಗ್ರಹ ಕುರಿತು ಕನ್ಯಾಕೊಳ್ಳೂರ ಗ್ರಾಮಕ್ಕೆ ಹೋದಾಗ ಮಾಹಿತಿ ಬಂದಿದ್ದೇನೆಂದರೆ, ಕನ್ಯಾಕೊಳ್ಳೂರ ಗ್ರಾಮದಲ್ಲಿ ತಿಪ್ಪೆ ಜಾಗದ ವಿಷಯದಲ್ಲಿ ಎರಡು ಗುಂಪಿನವರ ಮಧ್ಯ ತಕರಾರು ಉಂಟಾಗಿ ಸದರಿ ತಿಪ್ಪೆ ಜಾಗವು ನಮಗೆ ಸಂಬಂಧಿಸಿದ್ದು ಅಂತಾ 1 ನೇ ಪಾಟರ್ಿಯ ಜನರು ಮತ್ತು 2ನೇ ಪಾಟರ್ಿಯವರು ತಕರಾರು ಮಾಡುತ್ತಿದ್ದುದು ಕಂಡು ಬಂದಿದ್ದು ಸದರಿ ತಿಪ್ಪೆ ಜಾಗದ ವಿಷಯದಲ್ಲಿ ಮತ್ತೆ ತಕರಾರು ಉಂಟಾಗಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತಿ ಕದಡುವ ಸಂಭವ ಕಂಡು ಬಂದಿದ್ದು ತಕರಾರಿಗೆ ಕಾರಣರಾದ 1ನೇ ಪಾಟರ್ಿಯವರಾದ 1) ಭೀಮಪ್ಪ ತಂದೆ ಮರೆಪ್ಪ ಹೊಸಮನಿ 2) ನಿಂಗಪ್ಪ ತಂದೆ ಮರೆಪ್ಪ ಹೊಸಮನಿ 3) ಸೋಮಲಿಂಗಪ್ಪ ತಂದೆ ಮರೆಪ್ಪ ಹೊಸಮನಿ 4) ಮಲ್ಲಪ್ಪ ತಂದೆ ಮರೆಪ್ಪ ಹೊಸಮನಿ ಸಾ|| ಎಲ್ಲರೂ ಕನ್ಯಾಕೊಳ್ಳೂರ ತಾ|| ಶಹಾಪೂರ ರವರು ಸದರಿ ತಿಪ್ಪೆ ಜಾಗದ ವಿಷಯದಲ್ಲಿ ತಕರಾರು ಮಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡುವ ಸಾಧ್ಯತೆ ಕಂಡು ಬಂದಿದ್ದರಿಂದ ಇಂದು ದಿನಾಂಕ: 22/02/2020 ರಂದು 6.00 ಪಿಎಮ್ ಕ್ಕೆ ಠಾಣೆಗೆ ಬಂದು ಸದರಿಯವರ ವಿರುದ್ದ ಮುಂಜಾಗ್ರತ ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಪಿಎಆರ್ ನಂ 08/2020 ಕಲಂ 107 ಸಿಆರ್ ಪಿಸಿ ನೇದ್ದರಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
ಹುಣಸಗಿ ಠಾಣೆ ಗುನ್ನೆ ನಂ:-. 4/2020 107 ಸಿ.ಆರ್.ಪಿ.ಸಿ:- ದಿನಾಂಕ:22/02/2020 ರಂದು 19.45 ಗಂಟೆಗೆ ಠಾಣೆಯ ಮಾಣಿಕರೆಡ್ಡಿ ಹೆಚ್.ಸಿ-67 ರವರು ಠಾಣೆಗೆ ಬಂದು ಒಂದು ಲಿಖಿತ ದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ:17,18/02/2020 ರಂದು ಅರಕೇರಾ(ಜೆ) ಗ್ರಾಮದಲ್ಲಿ ನಡೆಯುವ ಗ್ರಾಮದೇವತೆಯ ಜಾತ್ರೆಯ ಬಂದೋಬಸ್ತ ಕರ್ತವ್ಯಕ್ಕೆಂದು ಮಾನ್ಯ ಪಿ.ಎಸ್.ಐ ಸಾಹೇಬರು ಹುಣಸಗಿ ಠಾಣೆ, ನಾನು ಮತ್ತು ನಮ್ಮ ಠಾಣೆಯ ಸತ್ಯಪ್ಪ ಎ.ಎಸ್.ಐ, ವಿರೇಂದ್ರ ಪಿಸಿ-264 ರವರು ಕೂಡಿಕೊಂಡು, ಗ್ರಾಮಕ್ಕೆ ಹೋಗಿ ಬಂದೋಬಸ್ತ ಕರ್ತವ್ಯ ನಿರ್ವಹಿಸುತ್ತಿರುವಾಗ, ದಿನಾಂಕ:18/02/2020 ರಂದು ಬೆಳಗಿನ ಜಾವ 4.30 ಗಂಟೆಯಿಂದಾ 05.00 ಗಂಟೆಯ ಮದ್ಯದ ಅವಧಿಯಲ್ಲಿ ಅದೇ ಗ್ರಾಮದ ದೊಡ್ಡಪ್ಪಗೌಡ ತಂದೆ ಅಂಬ್ರಪ್ಪಗೌಡ ಮಾಲಿ ಪಾಟೀಲ ಸಂಗಡ ಇತರೆ 38 ಜನರು ಕೂಡಿಕೊಂಡು, ಒಮ್ಮೇಲೆ ಗುಂಪಗೂಡಿ, ಯಾವದೋ ಒಂದು ಪ್ರಾಣಿ ಬಲಿ ಕೊಡಲು ಪ್ರಯತ್ನ ಮಾಡುತ್ತಿದ್ದಾಗ ಪಿ.ಎಸ್.ಐ ಸಾಹೇಬರು, ನಾನು ಮತ್ತು ಸಂಗಡ ಇದ್ದ ಎಲ್ಲಾ ಪೊಲೀಸ ಸಿಬ್ಬಂದಿಯವರು ಕೂಡಿ, ಕೂಡಿದ ಗುಂಪನ್ನು ಚದುರಿಸಿದ್ದು ಇರುತ್ತದೆ. ಇಂದು ದಿನಾಂಕ:22/02/2020 ರಂದು ನಾನು ಅರಕೇರಾ (ಜೆ) ಗ್ರಾಮಕ್ಕೆ ಬೇಟಿ ಕೊಟ್ಟಾಗ ಸ್ಥಳಿಯ ವಿದ್ಯಮಾನಗಳಿಂದಾ ಮತ್ತು ಪೊಲೀಸ ಬಾತ್ಮಿದಾರರಿಂದ ತಿಳಿದು ಬಂದಿದ್ದು ಏನೆಂದರೆ, ಗ್ರಾಮದ ದೊಡ್ಡಪ್ಪಗೌಡ ತಂದೆ ಅಂಬ್ರಪ್ಪಗೌಡ ಮಾಲಿ ಪಾಟೀಲ ಸಂಗಡ ಇತರೆ 38 ಜನರು ಮುಂಬರುವ ದಿನಗಳಲ್ಲಿ ಯಾವುದೇ ದಾಮರ್ಿಕ ಕಾರ್ಯಕ್ರಮ ಜಾತ್ರೆ ಹಾಗೂ ಹಬ್ಬ ಹರಿದಿನಗಳ ಸಮಯದಲ್ಲಿ ಮತ್ತೇ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಕೃತ್ಯಗಳನ್ನು ಮಾಡಿ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ಹಾನಿ, ಪ್ರಾಣ ಹಾನಿ ಮಾಡುವ ಸಂಭವ ಹೆಚ್ಚಾಗಿ ಕಂಡು ಬಂದಿರುತ್ತದೆ. ಕಾರಣ ಮುಂಜಾಗೃತಾ ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆ ಸದರಿಯವರ ವಿರುದ್ದ ಕಲಂ:107 ಸಿ.ಆರ್.ಪಿ.ಸಿ ಪ್ರಕಾರ ಮುಂಜಾಗೃತೆ ಕ್ರಮ ಕೈಕೊಂಡಿದ್ದು ಇದೆ.
ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 21/2020 ಕಲಂ: 279, 337, 338 ಐಪಿಸಿ:- ಇಂದು ನಾನು ಪಿಎಸ್ಐ ಸಾಹೇಬರ ಆದೇಶದಂತೆ ಎಮ್ಎಲ್ಸಿ ವಿಚಾರಣೆ ಕುರಿತು ಸಮೂದಾಯ ಆರೋಗ್ಯ ಕೇಂದ್ರ ಹುಣಸಗಿಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಪಡಯುತ್ತಿದ್ದ ಗಾಯಾಳು ಮಂಜುನಾಥ ತಂದೆ ಪರಮಣ್ಣಗೌಡ ಬಿರಾದಾರ ವ:20 ವರ್ಷ ಜಾ: ಕುರುಬರ ಉ: ಕೂಲಿಕೆಲಸ ಸಾ: ಮಂಜಲಾಪೂರ ಹಳ್ಳಿ ತಾ: ಹುಣಸಗಿ ಇತನಿಗೆ ವಿಚಾರಿಸಿ ಸದರಿಯವನ ಹೇಳಿಕೆಯನ್ನು 11:30 ಎಎಮ್ ದಿಂದ 12:30 ಪಿಎಮ್ ದವರೆಗೆ ಆಸ್ಪತ್ರೆಯಲ್ಲಿ ಪಡೆದುಕೊಂಡು ಸದರ ಪಿರ್ಯಾಧಿಯ ಹೇಳಿಕೆಯೊಂದಿಗೆ ಮರಳಿ ಠಾಣೆಗೆ 1:30 ಪಿಎಮ್ ಕ್ಕೆ ಬಂದಿದ್ದು. ಸದರ ಪಿರ್ಯಾಧಿಯ ಹೇಳಿಕೆಯ ಸಾರಾಂಶವೆನೆಂದರೆ ನಾನು ನನ್ನ ತಂದೆ ತಾಯಿಯೊಂದಿಗೆ ಕೂಲಿಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ ನನಗೆ ಶ್ರೀನಿವಾಸಪೂರದ ಶಿವಲಿಂಗಪ್ಪ ತಂದೆ ಯಮನಪ್ಪ ಕೂಚಬಾಳ ರವರ ಪರಿಚಯವಿದ್ದು ಅವನು ನನಗೆ ಗೆಳೆಯನಾಗಬೇಕು ನಾನು ಈ ದಿವಸ ಮುಂಜಾನೆ 9:00 ಗಂಟೆಯ ಸುಮಾರಿಗೆ ನಮ್ಮೂರಲ್ಲಿ ನಮ್ಮ ಮನೆಯಲ್ಲಿದ್ದಾಗ ನನ್ನ ಗೆಳೆಯ ಶಿವಲಿಂಗಪ್ಪನು ತನ್ನ ಪಲ್ಸರ್ ಬೈಕ್ ನಂ:ಕೆಎ-33 ಎಸ್-2268 ನೇದ್ದನ್ನು ತೆಗೆದುಕೊಂಡು ನಮ್ಮೂರಿಗೆ ಬಂದು ನನಗೆ ಕಕ್ಕೇರಾದಲ್ಲಿ ಕೆಲಸವಿದೆ. ಹೋಗಿ ಬರೋಣ ಬಾ ಅಂತಾ ಅಂದಿದ್ದರಿಂದ ನಾನು ಆಯಿತು ಅಂತ ಅಂದು ನಾನು ಗೆಳೆಯ ಶಿವಲಿಂಗಪ್ಪನ ಮೋಟರ್ ಸೈಕಲ್ ಮೇಲೆ ಹಿಂದೆ ಕುಳಿತ್ತಿದ್ದು ಶಿವಲಿಂಗಪ್ಪನು ಮೋಟರ್ ಸೈಕಲ್ ನಡೆಸುತ್ತಿದ್ದು. ನಮ್ಮೂರಿನಿಂದ ಬೆಳಗ್ಗೆ 9:25 ಗಂಟೆಗೆ ಕಕ್ಕೇರಾಕ್ಕೆ ಹೋಗಲು ಬಿಟ್ಟಿದ್ದು, ನಾವು ನಿಂಗಾಪುರ ಹತ್ತಿರದ ಕ್ಯಾನಲ್ ಸಮೀಪ ಹುಣಸಗಿ-ಕಕ್ಕೇರಾ ರಸ್ತೆಯ ಮೇಲೆ 9:30 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ನನ್ನ ಗೆಳೆಯ ಶಿವಲಿಂಗಪ್ಪನು ಮೋಟರ್ ಸೈಕಲ್ನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸ ಹತ್ತಿದ್ದು ಆಗ ನಾನು ಅವನಿಗೆ ನಿದಾನವಾಗಿ ನಡೆಸು ಅಂದರೂ ಕೂಡಾ ಅವನು ಮೋಟರ್ ಸೈಕಲ್ನ್ನು ಅತೀವೇಗವಾಗಿಯೇ ನಡೆಸ ಹತ್ತಿದ್ದು. ಅದೇ ವೇಳೆಗೆ ಎದುರಿನಿಂದ ಕಕ್ಕೇರಾ ಕಡೆಯಿಂದ ಹುಣಸಗಿ ಕಡೆಗೆ ಬರಲು ಒಬ್ಬ ಮೋಟರ್ ಸೈಕಲ್ ಸವಾರನು ತನ್ನ ಮೋಟರ್ ಸೈಕಲ್ನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಾನು ಕುಳಿತ ಗೆಳೆಯ ಶಿವಲಿಂಗಪ್ಪನ ಮೋಟರ್ ಸೈಕಲ್ಗೆ ಎದರಿನಿಂದ ಡಿಕ್ಕಿ ಪಡಿಸಿದ್ದು ಇದರಿಂದ ನಾವು ಮತ್ತು ಎದುರಿನಿಂದ ಬರುತ್ತಿದ್ದ ಮೋಟರ್ ಸೈಕಲ್ ಸವಾರನು ಮೋಟರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು. ಆಗ ಅಲ್ಲಿಯೇ ಇದ್ದ ನಮ್ಮೂರ ಬಸಪ್ಪ ತಂದೆ ತಿಮ್ಮಪ್ಪ್ಪ ಹಾದಿಮನಿ, ತಿಪ್ಪಣ್ಣ ತಂದೆ ಬಿರಪ್ಪ ಮೇಟಿ, ಮತ್ತು ಶ್ರೀನಿವಾಸಪೂರ ತಾಂಡಾದ ವೆಂಕಟೇಶ ತಂದೆ ಜೈರಾಮ ರಾಠೋಡ ಹಾಗೂ ನಿಂಗಪ್ಪ ತಂದೆ ಟೀಕಾನಾಯಕ ರಾಠೋಡ ಇವರುಗಳು ನಮ್ಮ ಹತ್ತಿರ ಬಂದು ನನಗೆ ಹಾಗೂ ನನ್ನ ಗೆಳೆಯ ಶಿವಲಿಂಗಪ್ಪನಿಗೆ ಮತ್ತು ಎದುಗಡೆಯಿಂದ ಬರುತ್ತಿದ್ದ ಮೋಟರ್ ಸೈಕಲ್ ಸವಾನಿಗೆ ಎಬ್ಬಸಿದ್ದು. ನೋಡಲಾಗಿ ಎದುರುಗಡೆಯಿಂದ ಬರುತ್ತಿದ್ದ ಮೋಟರ್ ಸೈಕಲ್ ಸವಾರನು ನನಗೆ ಪರಿಚಯದ ರಾಜು ತಂದೆ ರಾಮಪ್ಪ ರಾಠೋಡ ಸಾ: ಶ್ರೀನಿವಾಸಪುರ ತಾಂಡಾ ಇದ್ದು ಇವನು ನಡೆಯಿಸಿಕೊಂಡ ಬಂದ ಮೋಟರ್ ಸೈಕಲ್ ನಂ:ಕೆಎ-33 ವಾಯ್-3232 ಇದ್ದು. ಈ ಅಪಘಾತವು ನಾನು ಕುಳಿತ ಮೋಟರ್ ಸೈಕಲ್ ನಂ:ಕೆಎ-33 ಎಸ್- 2268 ನೇದ್ದರ ಸವಾರ ಶಿವಲಿಂಗಪ್ಪ ತಂದೆ ಯಮನಪ್ಪ ಕೂಚಬಾಳ ಸಾ: ಶ್ರೀನಿವಾಸಪೂರ ಹಾಗೂ ಎದುರುಗಡೆಯಿಂದ ಬರುತ್ತಿದ್ದ ಮೋಟರ್ ಸೈಕಲ್ ನಂ:ಕೆಎ-33 ವಾಯ್ 3232 ನೇದ್ದರ ಸವಾರ ರಾಜು ತಂದೆ ರಾಮಪ್ಪ ರಾಠೋಡ ಸಾ: ಶ್ರೀನಿವಾಸಪೂರ ತಾಂಡಾ ಇವರಿಬ್ಬರ ನಿರ್ಲಕ್ಷತನದಿಂದಲೇ ಸಂಬವಿಸಿದ್ದು ಈ ಅಪಘಾತದಲ್ಲಿ ನನಗೆ ಬಲಗಾಲಿನ ಪಾದದ ಮೇಲೆ ರಕ್ತಗಾಯವಾಗಿದ್ದು ಬಲಗಾಲು ಮೊಳಕಾಳಿಗೆ ತೆರೆಚಿದ ಗಾಯವಾಗಿದ್ದು ಟೊಂಕಕ್ಕೆ ಗುಪ್ತಪೆಟ್ಟಾಗಿದ್ದು. ನಾನು ಕುಳಿತ ಮೋಟರ್ ಸೈಕಲ್ ನಡೆಸುತ್ತಿದ್ದ ಶಿವಲಿಂಗಪ್ಪ ಕೂಚಬಾಳ ಇತನಿಗೆ ಬಲಗಾಲಿನ ಹೆಬ್ಬಟ್ಟಿನ ಮೇಲೆ ಭಾರಿ ರಕ್ತಗಾಯವಾಗಿ ತುಂಡಾದಂತೆ ಆಗಿದ್ದು. ಮತ್ತು ಬಲಗಾಲ ಮೀನುಗಂಡದ ಮೇಲೆ ಭಾರಿ ರಕ್ತಗಾಯವಾಗಿದ್ದು ಬಲಗೈ ಮೊಳಕೈ ಮೇಲೆ ಭಾರಿ ಒಳಪೆಟ್ಟಾಗಿ ಬಾವು ಬಂದಿದ್ದು. ಎದುರುಗಡೆಯಿಂದ ಬರುತ್ತಿದ್ದ ಮೋಟರ್ ಸೈಕಲ್ ಸವಾರ ರಾಜು ತಂದೆ ರಾಮಪ್ಪ ರಾಠೋಡ ಇತನಿಗೆ ಬಲಗಾಲಿನ ಮೊಳಕಾಲು ಹತ್ತಿರ ಭಾರಿ ರಕ್ತಗಾಯವಾಗಿ ಎಲಬು ಹೊರಗೆ ಬಂದಿದ್ದು. ಹಾಗೂ ಬಲಗೈಗೆ ತೆರೆಚಿದ ಗಾಯವಾಗಿದ್ದು ನಮಗೆ ಗಾಯಗಳಾಗಿದ್ದನ್ನು ನೋಡಿ ಅಲ್ಲಿಯೇ ಇದ್ದ ನಮ್ಮೂರ ಬಸಪ್ಪ ತಂದೆ ತಿಮ್ಮಪ್ಪ್ಪ ಹಾದಿಮನಿ, ತಿಪ್ಪಣ್ಣ ತಂದೆ ಬಿರಪ್ಪ ಮೇಟಿ, ಮತ್ತು ಶ್ರೀನಿವಾಸಪೂರ ತಾಂಡಾದ ವೆಂಕಟೇಶ ತಂದೆ ಜೈರಾಮ ರಾಠೋಡ ಹಾಗೂ ನಿಂಗಪ್ಪ ತಂದೆ ಟೀಕಾನಾಯಕ ರಾಠೋಡ ಇವರುಗಳು 108 ವಾಹನಕ್ಕೆ ಫೊನ್ ಮಾಡಿ ತಿಳಿಸಿದ್ದು ಸ್ವಲ್ಪ ಹೊತ್ತಿನಲ್ಲಿ 108 ವಾಹನ ನಮಗೆ ಅಪಘಾತವಾದ ಸ್ಥಳಕ್ಕೆ ಬಂದು ಅದರಲ್ಲಿ ನಮಗೆ ಮೂರು ಜನರಿಗೆ ಕೂಡಿಸಿಕೊಂಡು ಉಪಚಾರಕ್ಕಾಗಿ ಇಲ್ಲಿಗೆ ತಂದು ಸೇರಿಕೆ ಮಾಡಿದ್ದು ನಾನು ಇಲ್ಲಿಯೇ ಉಪಚಾರ ಹೊಂದುತ್ತಿದ್ದು. ನನ್ನ ಗೆಳೆಯ ಶಿಲಿಂಗಪ್ಪನಿಗೆ ಹಾಗೂ ರಾಜು ಇತನಿಗೆ ಹುಣಸಗಿ ಆಸ್ಪತ್ರೆಯ ವೈದ್ಯರು ಪ್ರಥಮೋಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಬೇರೆ ಆಸ್ಪತ್ರೆಗೆ ಕಳುಹಿಸಿದ್ದು. ಈ ಅಪಘಾತವು ನಾನು ಕುಳಿತ ಮೋಟರ್ ಸೈಕಲ್ ನಂ:ಕೆಎ-33 ಎಸ್- 2268 ನೇದ್ದರ ಸವಾರ ಶಿವಲಿಂಗಪ್ಪ ತಂದೆ ಯಮನಪ್ಪ ಕೂಚಬಾಳ ಸಾ: ಶ್ರೀನಿವಾಸಪೂರ ಹಾಗೂ ಎದುರುಗಡೆಯಿಂದ ಬರುತ್ತಿದ್ದ ಮೋಟರ್ ಸೈಕಲ್ ನಂ:ಕೆಎ-33 ವಾಯ್ 3232 ನೇದ್ದರ ಸವಾರ ರಾಜು ತಂದೆ ರಾಮಪ್ಪ ರಾಠೋಡ ಸಾ: ಶ್ರೀನಿವಾಸಪೂರ ತಾಂಡಾ ಇವರಿಬ್ಬರ ನಿರ್ಲಕ್ಷತನದಿಂದಲೇ ಅಪಘಾತ ಸಂಬವಿಸಿದ್ದು ಇವರಿಬ್ಬರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸ ಬೇಕು ಅಂತ ಪಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:21/2020 ಕಲಂ 279, 337 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using