ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/02/2020

By blogger on ಶುಕ್ರವಾರ, ಫೆಬ್ರವರಿ 21, 2020


                              ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21/02/2020

ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 17/2020 ಕಲಂ 41(ಡಿ), 102 ಸಿಆರ್ಪಿಸಿ ಮತ್ತು 379 ಐಪಿಸಿ:- ಇಂದು ದಿನಾಂಕ:21/02/2020 ರಂದು ಫಿಯರ್ಾದಿದಾರರು ಹಳ್ಳಿಭೇಟಿ ಮತ್ತು ಪೆಟ್ರೊಲಿಂಗ ಕುರಿತು ಹೊರಟಾಗ ಮದ್ರಕಿ ಕ್ರಾಸ್ ಹತ್ತಿರ ಆರೋಪಿತನು ಮೋ.ಸೈಕಲ್ ಮೇಲೆ ಹೊರಟಾಗ ಪೊಲೀಸ್ ಜೀಪ್ ನೋಡಿ ಮೋ.ಸೈ ತಿರುಗಿಸಿಕೊಂಡು ಓಡಿ ಹೊರಟಾಗ ಅವನಿಗೆ ಬೆನ್ನಟ್ಟಿ ಹಿಡಿದು ಅವನಿಂದ ದಾಖಲಾತಿ ಇಲ್ಲದ ಒಂದು ಹೋಂಡಾ ಶೈನ್ ಮೋಟರ್ ಸೈಕಲ್ ನಂ:ಕೆಎ-33, ವಿ-3380 ನೇದ್ದನ್ನು ಜಪ್ತಿ ಮಾಡಿದ್ದು, ಅಲ್ಲದೇ ಸದರಿ ಆರೋಪಿತನು ದಿನಾಂಕ:01/01/2020 ರಂದು ಯಾದಗಿರಿಯ ಕಪಿಲಾ ಲಾಡ್ಜ್ ಮುಂದೆ ನಿಂತ ಒಂದು ಹೀರೋ ಪ್ಯಾಶನ್ ಎಕ್ಸ್-ಪ್ರೋ ಮೋಟರ್ ಸೈಕಲ ನಂ:ಕೆಎ-33, ಆರ್-6190 ನೇದ್ದನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದರಿಂದ ಅವನ ವಶದಲ್ಲಿದ್ದ ಮೋಟರ್ ಸೈಕಲನ್ನು ಪಂಚರ ಸಮಕ್ಷಮ ಜಪ್ತಿ ಮಾಡಿ ಆರೋಪಿತನ ವಿರುಧ್ಧ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 20/2020 ಕಲಂ: 341, 323, 324, 355, 504, 506 ಸಂಗಡ 34 ಐಪಿಸಿ:- ಇಂದು ದಿನಾಂಕ:21.02.2020 ರಂದು 11:00 ಎಎಮ್ಕ್ಕೆ ಪಿಯರ್ಾದಿ  ಶ್ರೀ ಗುಂಡುರಾವ ತಂದೆ ಕೃಷ್ಣಾನಾಯ್ಕ ರಾಠೋಡ ವ:28 ವರ್ಷ ಜಾ:ಹಿಂದೂ ಲಂಬಾಣಿ ಉ:ಕೂಲಿಕೆಲಸ ಸಾ:ಹುಣಸಗಿ ತಾಂಡಾ ಹಾ.ವ:ಮೇಲಿನತಾಂಡಾ ರಾಜನಕೋಳೂರ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ತಮ್ಮ ಹೇಳಿಕೆ ಪಿಯರ್ಾದಿಯನ್ನು ಟೈಪ ಮಾಡಿಸಿದ್ದು ಅದರ ಸಾರಾಂಶ ಏನೆಂದರೆ,  ನನ್ನ ಸ್ವಂತ ಊರು ಹುಣಸಗಿ ತಾಂಡಾ ಇದ್ದು ನಾನು ಮೇಲಿನತಾಂಡಾ ರಾಜನಕೋಳೂರದ ಅನ್ನಪೂರ್ಣ @ ಅಪ್ಪೀಬಾಯಿ ಎಂಬುವವರನ್ನು ಮದುವೆಯಾಗಿದ್ದು ಈಗ 5 ವರ್ಷಗಳಿಂದ ನಾನು & ನನ್ನ ಹೆಂಡತಿ ಮೇಲಿನ ತಾಂಡಾ ರಾಜನಕೋಳೂರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಉಪಜೀವಿಸುತ್ತೇವೆ. 
      ಈಗಿರುವಾಗ ನಿನ್ನೆ ದಿನಾಂಕ:20.02.2020 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ನಾನು ನಮ್ಮ ಬೀಗರ ಹೊಲಕ್ಕೆ ಭತ್ತದ ಬೆಳೆಗೆ ನೀರು ಬಿಡಲು ನಮ್ಮ ತಾಂಡಾದ ಲಕ್ಷ್ಮೀಬಾಯಿ ಗಂಡ ಚಂದ್ರಶೇಖರ ರಾಠೋಡ ರವರ ಮನೆಯ ಪಕ್ಕದ ಕಾಲುದಾರಿಯ ಮೇಲಿಂದ ನಡೆದುಕೊಂಡು ಹೋಗುತ್ತಿರುವಾಗ ಅಲ್ಲಿಯೇ ತಮ್ಮ ಮನೆಯ ಮುಂದೆ ಕಳಿತಿದ್ದ  ಲಕ್ಷ್ಮೀಬಾಯಿ ಗಂಡ ಚಂದ್ರಶೇಖರ ರಾಠೋಡ ಮತ್ತು ಅವರ ತಾಯಿ ನಾಗುಬಾಯಿ ಗಂಡ ಧೀರುನಾಯ್ಕ ಚವ್ಹಾಣ ಸಾ:ನಡುವಿನ ತಾಂಡಾ ಕೋಳಿಹಾಳ ಹಾಗೂ ಲಕ್ಷ್ಮೀಬಾಯಿಯ ಅಣ್ಣನಾದ ರಾಜು ತಂದೆ ಧೀರುನಾಯ್ಕ ಚವ್ಹಾಣ ಸಾ:ನಡುವಿನ ತಾಂಡಾ ಕೋಳಿಹಾಳ ಇವರೆಲ್ಲರೂ ನನ್ನನ್ನು ನೋಡಿದವರೇ ನನ್ನ ಹತ್ತಿರ ಬಂದು ನನಗೆ ತಡೆದುನಿಲ್ಲಿಸಿ ಸೂಳೀ ಮಗನೇ ಬೇರೆ ತಾಂಡಾದಿಂದ ಬಂದು ನಮ್ಮ ತಾಂಡಾದಲ್ಲಿ ಧಿಮಾಕು ಮಾಡಹತ್ತೀದಿ, ನಿನ್ನ ಸೊಕ್ಕು ಬಾಳ ಆಗಿದೆ ಶಾಲೆಯಲ್ಲಿ ನಮ್ಮ ಹುಡುಗನೊಂದಿಗೆ ನಿಮ್ಮ ಹುಡುಗ ಜಗಳ ಮಾಡಿದ್ದು ಆದರೂ ನಿಮ್ಮ ಹುಡುಗನಿಗೆ ಬುದ್ದಿವಾದ ಹೇಳದೇ ಕೇಳಲು ನಿಮ್ಮ ಮನೆಗೆ ಬಂದಿದ್ದಕ್ಕೆ ನನಗೆ ನಿಮ್ಮ ಕಡೆಯವರು ಹೊಡೆಬಡೆಮಾಡಿದ್ದು, ಇವತ್ತು ನಿನಗೆ ಬಿಡುವುದಿಲ್ಲಾ ಅಂತಾ ಅಂದವರೇ ಅವರಲ್ಲಿಯ ಲಕ್ಷ್ಮೀಬಾಯಿ ಗಂಡ ಚಂದ್ರಶೇಖರ ಇವರು ನನಗೆ ಅಲ್ಲಿಯೇ ಬಿದ್ದಿದ್ದ ಒಂದು ಬಡಿಯನ್ನು ತೆಗೆದುಕೊಂಡು ನನ್ನ ಎಡಗೈ ಮೊಣಕೈ ಮೇಲೆ ಹೊಡೆದು ತೆರಚಿದ ರಕ್ತಗಾಯ ಪಡಿಸಿದ್ದು, ರಾಜು ತಂದೆ ಧೀರುನಾಯ್ಕ ಚವ್ಹಾಣ ಈತನು ನನ್ನ ತೆಕ್ಕೆಗೆ ಬಿದ್ದು ನೆಲಕ್ಕೆ ಕೆಡವಿದ್ದು ನಾನು ನೆಲಕ್ಕೆ ಬಿದ್ದಾಗ ರಾಜು ಈತನು ಚಪ್ಪಲಿಯಿಂದ ನನ್ನ ಬೆನ್ನಿನ ಮೇಲೆ ಹೊಡೆದಿದ್ದು ಮತ್ತು ನಾಗುಬಾಯಿ ಗಂಡ ಧೀರುನಾಯ್ಕ ಚವ್ಹಾಣ ಇವರು ನನ್ನ ಎದೆಯ ಮೇಲೆ, ಹೊಟ್ಟೆಯ ಮೇಲೆ, ಬಲಗಾಲ ತೊಡೆಯ ಮೇಲೆ ಕಾಲಿನಿಂದ ಒದ್ದು, ತುಳಿದು ಗುಪ್ತಗಾಯ ಪಡಿಸಿದ್ದು ಆಗ ನಾನು ಚೀರಾಡಲು ಅದೇ ವೇಳೆಗೆ ತಮ್ಮ ಹೊಲದ ಕಡೆಯಿಂದ ಬರುತ್ತಿದ್ದ ನಮ್ಮ ತಾಂಡಾದ ಶಂಕರಲಾಲ ತಂದೆ ತಿರುಪತಿ ಪವ್ಹಾರ, ಜಗಧೀಶ ತಂದೆ ತಿರುಪತಿ ಪವ್ಹಾರ, ಅಪ್ಪಾಜೀ ತಂದೆ ತುಕಾರಾಮ ಪವ್ಹಾರ ಇವರು ನೋಡಿ ನನಗೆ ಹೊಡೆಯುವುದನ್ನು ಬಿಡಿಸಿದ್ದು ಇವರು ಬಂದು ಬಿಡಿಸದಿದ್ದರೆ ಅವರೆಲ್ಲರೂ ನನಗೆ ಇನ್ನೂ ಹೊಡೆ-ಬಡೆ ಮಾಡುತ್ತಿದ್ದರು. ಹೋಗುವಾಗ ಅವರೆಲ್ಲರೂ ನನಗೆ ಸೂಳೀ ಮಗನೇ ಇವತ್ತು ನಮ್ಮ ಕೈಯಲ್ಲಿ ಉಳಿದೀದಿ ಇನ್ನೊಂದು ಸಲ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವದ ಬೆದರಿಕೆ ಹಾಕಿದ್ದು ನಂತರ ನಾನು ನಿನ್ನೆ ದಿನ ರಾತ್ರಿ ರಾಜನಕೋಳೂರ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಹೊಂದಿ ಈ ದಿವಸ ವಿಚಾರಮಾಡಿ ತಡವಾಗಿ ಬಂದು ದೂರು ಕೊಡುತ್ತಿದ್ದು ನನಗೆ ತಡೆದು ನಿಲ್ಲಿಸಿ, ಅವಾಚ್ಛ ಶಬ್ಧಗಳಿಂದ ಬೈದು, ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ ಮೂರು ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 20/2020 ಕಲಂ: 341, 323, 324, 355, 504, 506 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 10/2020 ಕಲಂ: 78 (3) ಕೆ.ಪಿ ಯಾಕ್ಟ್:- ಇಂದು ದಿನಾಂಕ:21.02.2020 ರಂದು 5:00 ಪಿ.ಎಮ್ಕ್ಕೆ ಸರಕಾರಿ ತಪರ್ೆ ಶ್ರೀ ಅಜರ್ುನಪ್ಪ ಅರಕೇರಾ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಠಾಣೆಯಲ್ಲಿ ಇದ್ದಾಗ 1;00 ಗಂಟೆಗೆ ನಾರಾಯಣಪೂರ ವಾಲ್ಮಿಕಿ ವೃತ್ತದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೆಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 10/2020 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. 
      ನಂತರ ಮಾನ್ಯ ಪಿಎಸ್ಐ ಸಾಹೇಬರು 7:10 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಆರೋಪಿ ಹಾಗೂ ಒಂದು ಬಾಲ್ ಪೆನನ್ನು, ಮೂರು ಅಂಕಿ ಸಂಖ್ಯೆಗಳನ್ನು ಬರೆದ ಮಟಕಾ ಚೀಟಿ ಹಾಗೂ ನಗದು ಹಣ 1350/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. 
ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 
1) ಶಂಕರಪ್ಪ ತಂದೆ ಸೋಮಲಪ್ಪ ರಾಠೊಡ ವ:32 ವರ್ಷ ಉ:ಕೂಲಿ ಕೆಲಸ ಜಾ:ಹಿಂದು ಲಮಾಣಿ ಸಾ:ನಾರಾಯಣಪೂರ

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 48/2020 ಕಲಂ 323, 324, 354, 504, 506 ಸಂ.34 ಐಪಿಸಿ;-: ಇಂದು ದಿನಾಂಕ: 21/02/2020 ರಂದು 9 ಎ.ಎಂ. ಸುಮಾರಿಗೆ ಠಾಣೆಯಲ್ಲಿದ್ದಾಗ ಪಿಯರ್ಾದಿ ಶ್ರೀಮತಿ ಹಣಮಂತಿ ಗಂಡ ಹಣಮ ಗಡ್ಡೆಸೂಗುರು ವಯಾ:40 ವರ್ಷ ಜಾತಿ:ಬೇಡರ ಉ:ಕೂಲಿ ಸಾ:ಕನರ್ಾಳ ದೂರು ಅಜರ್ಿ ಸಾರಾಂಶವೆನೆಂದರೆ ದಿನಾಂಕ:20-02-2020 ರಂದು ಬೆಳಿಗ್ಗೆ 08:15 ಸುಮಾರಿಗೆ ನಮ್ಮ ಗ್ರಾಮದ ಹನುಮಾನ ದೇವಸ್ಥಾನ ಹತ್ತಿರ ಶ್ರೀದೇವಿ ಜಾತ್ರಾ ಇದ್ದ ಪ್ರಯುಕ್ತ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರ ದರ್ಶನ ಮಾಡಿ ಮರಳಿ ಹನುಮಾನ ಗುಡಿ ಹಿಂದೆ ಬರುವಾಗ ಆಗ ನಮ್ಮ ಗ್ರಾಮದವರಾದ 1) ಮಾನಸಪ್ಪ ತಂದೆ ಹನಮಯ್ಯಾ ವಯಸ್ಸು 55 ಜಾತಿ:ಬೇಡರ 2) ರಂಗಪ್ಪ ತಂದೆ ಮಾನಸಪ್ಪ ವಯಸ್ಸು 27 ಜಾತಿ: ಬೇಡರ 3) ಆಂಜನೇಯ ತಂದೆ ಬುಡಪ್ಪ ವಯಸ್ಸು :23 ಜಾತಿ:ಬೇಡರ 4) ವಜ್ರದಯ್ಯಾ ತಂದೆ ತಿಮ್ಮಣ್ಣ ವಯಸ್ಸು: 50 ಜಾತಿ:ಬೇಡರ ಸಾ:ಕನರ್ಾಳ ಮೇಲಿನ ನಾಲ್ಕು ಜನ ಸೇರಿ ನಾನು ಹನುಮಾನ ಗುಡಿ ಹಿಂದೆ ಹೋಗುವಾಗ ಅಲ್ಲಿ ನಿಂತಿದ್ದ ಮಾನಸಪ್ಪ ಮತ್ತು ಮೂರು ಜನ ಸೇರಿ ಈ ಬೋಸಡಿ ಸುಳಿದು ಬಾಳಾಗದ ಈ ಸುಳಿನ ಇವತ್ತು ಜೀವ ತಗೆದು ಬೀಡೊಣ ಅನ್ನುತ್ತಾ ನಾಲ್ಕು ಜನ ನನ್ನ ಕೈ ಹಿಡಿದು ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿ ನೆಲಕ್ಕೆ ಕೆಡವಿದರು ಆಗ ನಾನು ಚಿರಾಡುತ್ತಿರುವಾಗ ಮಾನಸಪ್ಪನು ಒಂದು ಬಡಿಗೆಯನ್ನು ತಗೆದುಕೊಂಡು ನನ್ನ ಬೆನ್ನಿಗೆ ಹೊಡೆದನು. ಆಂಜನೇಯ ಈತನು ಅಲ್ಲೆ ಬಿದ್ದ ಒಂದು ಕಲ್ಲಿನಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತ ಗಾಯ ಪಡಿಸಿದನು. ಆಗ ಎಲ್ಲರೂ ಕೆಳಗೆ ಬಿದ್ದ ನನಗೆ ಕಾಲಿನಿಂದ ಒದೆಯುತ್ತಿರುವಾಗ ಗ್ರಾಮದ ಪೊಲೀಸ್ ಗೌಡರ ಸೋಸೆಯಾದ ರೇಣುಕಮ್ಮ ಗಂಡ ಮಲ್ಲಣಗೌಡ ಮತ್ತು ಹಣಮಂತಿ ಗಂಡ ಜಂಬಣ್ಣ ಕನ್ನಳ್ಳಿ ಹಾಗೂ ಬೀಮವ್ವ ಗಂಡ ಮಲ್ಲಯ್ಯಾ ಇವರು ಬಂದು ಜಗಳ ಬಿಡಿಸಿದರು. ಆಗ ಅವರು ಇವತ್ತು ಉಳದಿ ರಂಡಿ ಇನ್ನೊಮ್ಮೆ ಸಿಕ್ಕರೆ ನಿನ್ನ ಜೀವ ಸಹೀತ ಹೊಡೆಯದೆ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋಗಿರುತ್ತಾರೆ. ನನ್ನ ಗಂಡ ಹಣಮಂತ ಈತನು ಹೊಲದಿಂದ ರಾತ್ರಿ ಮನೆಗೆ ಬಂದಿದ್ದರಿಂದ ಗಂಡ  ಹಣಮಂತ ಈತನಿಗೆ ವಿಚಾರ ಮಾಡಿ ಇಂದು ಠಾಣೆಗೆ ತಡವಾಗಿ ಬಂದು ದೂರು ಅಜರ್ಿ ನಿಡಿದ್ದು ಇರುತ್ತದೆ. ಕೊಟ್ಟ ಅಜರ್ಿಯ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೂಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 49/2020 ಕಲಂ: 279, 304(ಎ), 379 ಐಪಿಸಿ ಮತ್ತು ಕಲಂ. 44(1) ಕೆ.ಎಮ್.ಎಮ್.ಸಿ ರೂಲ್ 1994:- ಇಂದು ದಿನಾಂಕಃ 21/02/2020 ರಂದು 10-30 ಎ.ಎಮ್ ಕ್ಕೆ ಶ್ರೀಮತಿ ದ್ಯಾವಮ್ಮ ಗಂಡ ಬಸಪ್ಪ ಹುಬ್ಬಳ್ಳಿ ಸಾ: ರತ್ತಾಳ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾಧಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ಮಗನಾದ ಮರೆಪ್ಪ ತಂದೆ ಬಸಪ್ಪ ಹುಬ್ಬಳ್ಳಿ ವಯ: 24 ವರ್ಷ ಸಾ: ರತ್ತಾಳ ಇತನು ಸುಮಾರು 1 ವರ್ಷದಿಂದ ಸುರಪೂರ ನಗರದ ಹಸನಾಪೂರ ನಿವಾಸಿಯಾದ ಭೀಮರಾಯ ತಂದೆ ಸಿದ್ದಪ್ಪ ಇವರ ಟ್ರ್ಯಾಕ್ಟರ ನಂಬರ ಕೆ.ಎ 33 ಟಿ.ಎ 8142 ನೇದ್ದರ ಮೇಲೆ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು. ನಿನ್ನೆ ದಿನಾಂಕಃ 20/02/2020 ರಂದು ರಾತ್ರಿ 7 ಗಂಟೆಯ ಸುಮಾರಿಗೆ ನನ್ನ ಮಗ ಮರೆಪ್ಪನು ರತ್ತಾಳ ಗ್ರಾಮದಿಂದ ಹಸನಾಪೂರಕ್ಕೆ ಹೋಗಿದ್ದು, ಹೋಗುವಾಗ ಮನೆಯಲ್ಲಿ ತನ್ನ ಮಾಲಿಕರು ರಾತ್ರಿ ಟ್ರ್ಯಾಕ್ಟರ ನಡೆಸಿಕೊಂಡು ಚೌಡೇಶ್ವರಿಹಾಳ ಹಳ್ಳಕ್ಕೆ ಹೋಗಿ ಒಂದು ಲೋಡ ಮರಳನ್ನು ತುಂಬಿಕೊಂಡು ಬರೋಣಾ ಅಂತ ಹೇಳಿರುವ ಬಗ್ಗೆ ತಿಳಿಸಿ ಹೋಗಿದ್ದನು. ನಂತರ ರಾತ್ರಿ ನಾವು ಮನೆಯಲ್ಲಿ ಮಲಗಿದ್ದು ಇಂದು ದಿನಾಂಕಃ 21/02/2020 ರಂದು ಮುಂಜಾನೆ 7 ಗಂಟೆಯ ಸುಮಾರಿಗೆ ನನ್ನ ಮಗನು ನಡೆಸುವ ಟ್ರ್ಯಾಕ್ಟರ ಮಾಲಿಕರ ಮಗನಾದ ಬಾಲರಾಜ ಇತನು ಫೋನ ಮಾಡಿ ತಿಳಿಸಿದ್ದೆನೆಂದರೆ, ಇಂದು ನಿಮ್ಮ ಮಗನಾದ ಮರೆಪ್ಪನು ನಮ್ಮ ಟ್ರ್ಯಾಕ್ಟರದಲ್ಲಿ ಚೌಡೇಶ್ವರಿಹಾಳ ಸಿಮಾಂತರದ ಸಕರ್ಾರಿ ಹಳ್ಳದಿಂದ ಮರಳು ತುಂಬಿಕೊಂಡು ಹೇಮನೂರ, ಶಖಾಪೂರ ಮಾರ್ಗವಾಗಿ ಹಸನಾಪೂರ ಕಡೆಗೆ ಟ್ರ್ಯಾಕ್ಟರ ನಡೆಸಿಕೊಂಡು ಬರುವಾಗ ಬೆಳಗಿನ ಜಾವ 5-00 ಗಂಟೆಯ ಸುಮಾರಿಗೆ ಶಖಾಪೂರ ಸಿಮಾಂತರದಲ್ಲಿ ಬರುವ ಹಳ್ಳದ ಹತ್ತಿರ ಮರೆಪ್ಪನು ಟ್ರ್ಯಾಕ್ಟರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುವಾಗ ಟ್ರ್ಯಾಲಿಯ ಸ್ಟ್ಯಾಂಡಿಗೆ ಹಾಕಿರುವ ಸಣ್ಣ ರಾಡ್ ಆಕಸ್ಮಿಕವಾಗಿ ಬಿದ್ದು ಸ್ಟ್ಯಾಂಡ ನೆಲಕ್ಕೆ ಹತ್ತಿ ಶಬ್ದ ಬರಲಾರಂಭಿಸಿದರಿಂದ ಮರೆಪ್ಪನು ಟ್ರ್ಯಾಕ್ಟರ ನಡೆಸುತ್ತ ನಿಕ್ಷ್ಕಾಳಜಿತನದಿಂದ ಹಿಂದಕ್ಕೆ ತಿರುಗಿ ನೋಡಿದಾಗ ವೇಗದಲ್ಲಿ ಟ್ರ್ಯಾಕ್ಟರ ಬಲಕ್ಕೆ ತಿರುಗಿ ರಸ್ತೆಯ 
ಪಕ್ಕದಲ್ಲಿರುವ ಬಸಿಗಾಲುವೆಯಲ್ಲಿ ಬಿದ್ದಿದ್ದರಿಂದ ನಿನ್ನ ಮಗ ಮರೆಪ್ಪನು ಟ್ರ್ಯಾಕ್ಟರ ಇಂಜಿನ ಕೆಳಗಡೆ ಸಿಕ್ಕಿಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತ ತಿಳಿಸಿದ್ದರಿಂದ ಗಾಬರಿಯಾಗಿ ನಾವು ಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ಸಂಗತಿ ನಿಜವಿದ್ದು ನನ್ನ ಮಗನು ಟ್ರ್ಯಾಕ್ಟರ ಇಂಜಿನ್ ಕೆಳಗಡೆ ಸಿಕ್ಕಿ ಹಾಕಿಕೊಂಡು ಮೃತಪಟ್ಟಿರುತ್ತಾನೆ. ಪಲ್ಟಿಯಾದ ಟ್ರ್ಯಾಕ್ಟರ ನಂಬರ ನೋಡಲಾಗಿ ಟ್ರ್ಯಾಕ್ಟರ ನಂಬರ ಕೆ.ಎ 33 ಟಿ.ಎ 8142 ಇದ್ದು ಅದರೊಂದಿಗೆ ಇರುವ ಟ್ರ್ಯಾಲಿಯ ಮೇಲೆ ನಂಬರ ಇರುವದಿಲ್ಲ. 
ಕಾರಣ ನನ್ನ ಮಗನಿಗೆ ಟ್ರ್ಯಾಕ್ಟರ ಮಾಲಿಕನಾದ ಭೀಮರಾಯ ತಂದೆ ಸಿದ್ದಪ್ಪ ಹಸನಾಪೂರ ಇವರು ರಾತ್ರಿ ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಬರುವಂತೆ ಹೇಳಿದ್ದರಿಂದ ನನ್ನ ಮಗನು ಚೌಡೇಶ್ವರಿಹಾಳ ಸಿಮಾಂತರದಿಂದ ಮರಳು ತುಂಬಿಕೊಂಡು ಟ್ರ್ಯಾಕ್ಟರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುವಾಗ ಪಲ್ಟಿಯಾಗಿ ಮೃತಪಟ್ಟಿದ್ದು ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 49/2020 ಕಲಂ. 279, 304(ಎ), 379 ಐಪಿಸಿ ಮತ್ತು ಕಲಂ. 44(1) ಕೆ.ಎಮ್.ಎಮ್.ಸಿ ರೂಲ್ 1994 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು. 

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 50/2020 ಕಲಂ 143, 147, 148, 323, 324, 354, 448, 504, 506 ಸಂ. 149 ಐಪಿಸಿ:- ಇಂದು ದಿನಾಂಕ:21/02/2020 ರಂದು 2 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ  ಪೀಯರ್ಾದಿ ಶ್ರೀ ಬಸವರಾಜ ತಂದೆ ಸಾಬಣ್ಣ ಹವಲ್ದಾರ ವ|| 35 ವರ್ಷ ಜಾ|| ಬೇಡರು ಉ|| ಹಮಾಲಿಕೆಲಸ ಸಾ|| ಡೊಣ್ಣಿಗೇರಿ ಸುರಪುರ ತಾ|| ಸುರಪುರ ಇದ್ದು ಅಜರ್ಿ ಸಾರಾಂಶ ವೆನಂದರೆ, ನಮ್ಮ ಓಣಿಯ ದೇವಮ್ಮ ಗಂಡ ಮಾನಪ್ಪ ಪುಜಾರಿ ಇವಳ ಮಗಳಾದ ರಂಗಮ್ಮ ಇವಳನ್ನು ನಮ್ಮ ಅಣ್ಣನ ಮಗನಾದ ಮರೆಪ್ಪ ತಂದೆ ಗೋಪಾಲ ಇತನು ರಂಗಮ್ಮಳನ್ನು ಒಡಿಸಿಕೊಂಡು ಹೊಗಿ ಮದುವೆ ಆಗಿದ್ದು ಇರುತ್ತದೆ. ನಂತರ ಮಾನಪ್ಪ ತಂದೆ ಯಂಕಪ್ಪ ಪುಜಾರಿ ಮತ್ತು ಅವರ ಮಾವನಾದ ಚನ್ನಬಸಪ್ಪ ತಂದೆ ಹಣಮಂತ್ರಾಯ ಬಿರಾದಾರ ಸಾ|| ಬೈಲಾಪುರ ಸಿದ್ದಾಪುರ ಇವರುಗಳು ನಮ್ಮ ಸಂಗಂಡ ತಂಟೆ ತಕರಾರು ಮಾಡುತ್ತಿದ್ದರು ಆಗ ನಾವು ಅವರಿಗೆ ಏನು ಅನ್ನದೆ ಸುಮ್ಮನಿದ್ದೇವು ಈಗ 6 ತಿಂಗಳ ಹಿಂದೆ ನಮ್ಮ ಅಣ್ಣನ ಮಗ ಮರೆಪ್ಪ ಮರಣಹೊಂದಿದ್ದು ಇರುತ್ತದೆ.
ಹಿಗಿದ್ದು ದಿನಾಂಕ:19/02/2020 ರಂದು 4:00 ಪಿಎಂ ಸುಮಾರಿಗೆ ನಾನು ಮತ್ತು ನಮ್ಮ ಅಣ್ಣನ ಹೆಂಡತಿಯಾದ ಅನಿತಾ ಗಂಡ ಮರೆಪ್ಪ ಹವಲ್ದಾರ ವ|| 28 ವರ್ಷ ಇಬ್ಬರು ಮನೆಯಲ್ಲಿ ಮಾತನಾಡುತ್ತಾ ಕುಳಿತಿರವಾಗ ಸುರಪೂರದ ಡೊಣ್ಣಿಗೇರಿ ಓಣಿ ಮತ್ತು ಬೈಲಾಪೂರ ಸಿದ್ದಾಪುರ ದವರಾದ 1) ಮಾನಪ್ಪ ತಂದೆ ಯಂಕಪ್ಪ ಪುಜಾರಿ ಜಾ|| ಬೇಡರು 2) ದೇವಮ್ಮ ಗಂಡ ಮಾನಪ್ಪ ಪುಜಾರಿ ಜಾ|| ಬೇಡರು 3) ವೆಂಕಟೇಶ ತಂದೆ ಮರೆಪ್ಪ ಪುಜಾರಿ 4) ಚನ್ನಬಸಪ್ಪ ತಂದೆ ಹಣಮಂತ್ರಾಯ ಬಿರಾದಾರ ಜಾ|| ಬೇಡರು ಸಾ|| ಬೈಲಾಪುರ ಸಿದ್ದಾಪುರ 5) ರಮೇಶ ತಂದೆ ಚನ್ನಬಸಪ್ಪ ಬಿರಾದಾರ ಜಾ|| ಬೇಡರು ಸಾ|| ಬೈಲಾಪುರ ಸಿದ್ದಾಪುರ ಎಲ್ಲರು ಗುಂಪುಕಟ್ಟಿಕೊಂಡು ಅವರ ಕೈಯಲ್ಲಿ ಬಡಿಗೆ, ಕಲ್ಲು ಹಿಡಿದುಕೊಂಡು ಮನೆಗೆ ಬಂದರವರೇ ಹಳೆ ವೈಶಮ್ಯದಿಂದ ನನಗೆ ಮಾನಪ್ಪ ಇತನು ನನ್ನೆ ಎದೆಗೆ ಮೇಲಿನ ಅಂಗಿ ಹಿಡಿದು ಜೊಗ್ಗಾಡಿ ನೇಲಕ್ಕೆ ಕೆಡವಿ ಕೈಯಿಂದ ಕಪಾಳಕ್ಕೆ ಹೊಡದು ಕಾಲಿನಿಂದ ಒದ್ದನು ಮತ್ತು ದೇವಮ್ಮಳು ಒಂದು ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದಳು, ನಮ್ಮ ಅತಿಗೆ ಅನಿತಾಳಿಗೆ, ವೆಂಕಟೇಶನು ಒಂದು ಬಡಿಗೆಯಿಂದ ಹೊಟ್ಟೆಗೆ ಬೆನ್ನಿಗೆ ಹೊಡೆದು ಸಿರೆ ಹಿಡಿದು ಎಳೆದಾಡಿ ಮಾನ ಭಂಗ ಮಾಡುತ್ತಿರುವಾಗ ನಾನು ನಮ್ಮ ಅತಿಗೆಗೆ ಏಕೆ ಹೊಡೆಯುತ್ತಿರಿ ಅಂತಾ ಅಂದಿದಕ್ಕೆ ಚನ್ನಬಸಪ್ಪನು ಕಾಲಿನಿಂದ ಒದ್ದು ಕೈಯಿಂದ ಹೊಡೆದನು ಮತ್ತು ರಮೇಶ ಇತನು ಒಂದು ಕಲ್ಲಿನಿಂದ ಹೊಟ್ಟೆಗೆ ಗುಪ್ತಗಾಯ ಮಾಡಿ ಹೊಡೆ ಬಡೆ ಮಾಡುತ್ತಿರುವಾಗ ಅದೇ ಸಮಯಕ್ಕೆ ನಮ್ಮ ಓಣಿಯ ಹೊಂಕಲೆಪ್ಪ ತಂದೆ ಹಣಮಂತ ಹಂಪನಾಳ, ಅಂಬ್ರೇಶ ತಂದೆ ಅಮರಪ್ಪ ಬಂಡೊಳ್ಳಿ ಇಬ್ಬರು ಕೂಡಿ ಬಂದು ಜಗಳ ನೋಡಿ ಬಿಡಿಸಿದರು. ಆಗ ಅವರು ಇವತ್ತ ಉಳಿದಿರಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವ ಸಹಿತಾ ಬಿಡುವದಿಲ್ಲ ಅಂತಾ ಜೀವ ಬೇದರಿಕೆ ಹಾಕಿ ಹೊರಟು ಹೊದರು. ನನಗೆ ನಮ್ಮ ತಂದೆ ಇಲ್ಲದೆ ಇದ್ದುದ್ದರಿಂದ ನಮ್ಮ ಓಣಿಯ ಹೊಂಕಲೆಪ್ಪ ಮತ್ತು ಅಂಬ್ರೇಶ ಇವರ ಜೊತೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿರುತ್ತೇನೆ. ಕಾರಣ ನನಗೆ ಮತ್ತು ನಮ್ಮ ಅತಿಗೆಗೆ ಹೊಡೆ ಬಡೆ ಮಾಡಿ ಮಾನ ಭಂಗ ಮಾಡಿ ಅವಚ್ಯ ಶಬ್ದಗಳಿಂದ ಬೈದು ಜೀವ ಬೇದರಿಕೆ ಹಾಕಿ ಗುಪ್ತ ಪೆಟ್ಟು ಪಡಿಸಿದ ಮೇಲೆ ಹೇಳಿದ ಐದು ಜನರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂ 50/2020 ಕಲಂ: 143, 147, 148, 323, 324, 354, 448, 504, 506 ಸಂ. 149 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:-. 51/2020 ಕಲಂ: 78 () ಕೆ.ಪಿ. ಕಾಯ್ದೆ  :-        ಇಂದು ದಿನಾಂಕ: 21/02/2020 ರಂದು 8-20 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಆನಂದರಾವ್ ಎಸ್.ಎನ್ ಪಿಐ ಸಾಹೇಬರು ಒಬ್ಬ ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಹಾಗು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:21/02/2020 ರಂದು 6 ಪಿ.ಎಮ್. ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಠಾಣಾ ವ್ಯಾಪ್ತಿಯ ಬೈರಿಮಡ್ಡಿ ಗ್ರಾಮದ ಚಿಕ್ಕಯ್ಯ ತಾತನ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿದ್ದ ಠಾಣೆಯ ಸಿಬ್ಬಂದಿಯವರಾದ 1) ಶ್ರೀ ಮನೋಹರ ಹೆಚ್ಸಿ-105, 2) ಶ್ರೀ ಮಂಜುನಾಥ ಹೆಚ್ಸಿ-176 3) ಸುಭಾಸ್ ಸಿಪಿಸಿ-174, 4) ಶರಣಪ್ಪ ಸಿಪಿಸಿ-224 ಇವರಿಗೆ ವಿಷಯ ತಿಳಿಸಿ ಸುಭಾಸ್ ಸಿಪಿಸಿ ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸುಭಾಸ್ ಸಿಪಿಸಿ ರವರು ಇಬ್ಬರು ಪಂಚರಾದ 1) ಶ್ರೀ ದೇವಪ್ಪ ತಂದೆ ಮರೆಪ್ಪ ಬನ್ನೆಟ್ಟಿ ವಯಾ:42 ವರ್ಷ ಜಾ|| ಕುರುಬರು ಉ|| ಒಕ್ಕಲುತನ ಸಾ|| ಬೈರಿಮಡ್ಡಿ ತಾ:ಸುರಪೂರ 2) ಶ್ರೀ ಅಮರೇಶ ತಂದೆ ಮಲ್ಲಿಕಾಜರ್ುನ ಕೋಳುರ ವ|| 29 ವರ್ಷ ಜಾ|| ಬೇಡರು ಉ|| ಆಟೋ ಚಾಲಕ ಸಾ|| ಬೈರಿಮಡ್ಡಿ ತಾ:ಸುರಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಅವರಿಗೆ ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 06:15 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0238 ನೇದ್ದರಲ್ಲಿ ಹೊರಟು 06:45 ಪಿ.ಎಮ್ ಕ್ಕೆ ಬೈರಿಮಡ್ಡಿ ಗ್ರಾಮದ ಚಿಕ್ಕಯ್ಯ ತಾತನ ಗುಡಿಯ ಹತ್ತಿರ ಹೋಗಿ ವಾಹನ ಮರೆಯಾಗಿ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಚಿಕ್ಕಯ್ಯ ತಾತನ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 06-50 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಅಜರ್ುನ ತಂದೆ ನಿಂಗಪ್ಪ ಯಕ್ಷಂತಿ ವಯಾ:28 ವರ್ಷ ಉ:ಒಕ್ಕಲುತನ ಜಾ:ಕುರುಬರು ಸಾ:ಬೈರಿಮಡ್ಡಿ ತಾ:ಸುರಪೂರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ  ನಗದು ಹಣ 1150=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 6-50 ಪಿ.ಎಮ್ ದಿಂದ 7-50 ಪಿ.ಎಮ್ದ ವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರು ಪಡಿಸಿಆದೇಶ ನೀಡಿದ್ದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

                                      
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 3/2020 174 ಸಿ.ಆರ್.ಪಿ.ಸಿ:-  ಇಂದು ದಿನಾಂಕ: 21/2/2020 ರಂದು 3-00 ಪಿಎಮ್ ಕ್ಕೆ ಅಜರ್ಿದಾರಳಾದ ಶ್ರೀಮತಿ ಮರೆಮ್ಮ ಗಂ: ಗುರಪ್ಪ ಬಾವುರ ಸಾ|| ಗುಂಡಾಪೂರ ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದನೆಂದರೆ, ನನಗೆ 1) ಚೆನ್ನಪ್ಪ 2) ಹೊನ್ನಪ್ಪ 3) ಪರಶುರಾಮ ಅಂತಾ ಮೂರು ಜನ ಗಂಡು ಮಕ್ಕಳಿದ್ದು ಮೂವರಿಗೂ ಮದುವೆಯಾಗಿದ್ದು ಬೇರೆ ಬೇರೆಯಾಗಿ ಸಂಸಾರ ಮಾಡಿಕೊಂಡಿರುತ್ತಾರೆ.  ಈಗ 4-5 ವರ್ಷಗಳ ಹಿಂದೆ ನನ್ನ ಗಂಡ ಮೃತಪಟ್ಟಿದ್ದು ನನ್ನ ಗಂಡನ ಹೆಸರಿನಲ್ಲಿ ಗುಂಡಾಪೂರ ಸೀಮೆಯಲ್ಲಿ ಹೊಲ ಸವರ್ೆ ನಂ: 29  ವಿಸ್ತೀರ್ಣ 9 ಎಕರೆ ಜಮೀನನ್ನು ನನ್ನ ಮೂರು ಜನ ಮಕ್ಕಳು ಪಾಲು ಮಾಡಿಕೊಂಡಿದ್ದು  ತಲಾ ಮೂರು-ಮೂರು ಎಕರೆ ಬಂದಿದ್ದು ಒಕ್ಕಲುತನ ಕೆಲಸ ಮಾಡಿಕೊಂಡಿದ್ದರು.  ನನ್ನ ಕೊನೆಯ ಮಗನಾದ ಪರಶುರಾಮ ಈತನ ಮನೆಯಲ್ಲಿ ನಾನು ಇದ್ದೇನು.  ಪರಶುರಾಮ ಈತನಿಗೆ ಇಬ್ಬರೂ ಹೆಂಡತಿಯರಿದ್ದು ಮೊದಲನೆ ಹೆಂಡತಿ ಲಕ್ಷ್ಮೀ ( ಭೀಮಬಾಯಿ ) ಎರಡನೇ ಹೆಂಡತಿ ಪೂಜಾ ಅಂತಾ ಹೆಸರು ಇರುತ್ತದೆ.  ನನ್ನ ಮಗನ ಮೊದಲ ಹೆಂಡತಿಯಾದ ಲಕ್ಷ್ಮೀ ಇವಳು ನಮ್ಮ ಸಂಬಂಧಿಕರಲೇ ಇದ್ದು ನಮ್ಮ ಮನೆಯಲ್ಲಿ ( ನನ್ನ ಮಗ ಜೊತೆ ನಡಿಯದೇ ) ತವರು ಮನೆಯಾದ ಕಾಡಮಗೇರಿಯಲ್ಲಿ ಇರುತ್ತಾಳೆ.  ಈಗ ಸುಮಾರು 8-9 ತಿಂಗಳ ಹಿಂದೆ ಪೂಜಾ ಇವಳೊಂದಿಗೆ ಮದುವೆ ಮಾಡದ್ದು ನನ್ನ ಮಗನು ತನಗೆ ಬಂದ ಹೊಲದಲ್ಲೇ ಮನೆ ಇದ್ದು ವಾಸವಾಗಿರುತ್ತೇವೆ.  ನನ್ನ ಮಗನು 3 ಎಕರೆ ಜಮೀನಿನಲ್ಲಿ ತೊಗರಿ ಬೆಳೆ & ತರಕಾರಿ ಮಾಡಿಕೊಂಡಿದ್ದು ಇರುತ್ತದೆ.  ಹೊಲದಲ್ಲಿ ಮೂರು ಕೊಳವೆ ಬಾವಿ (ಬೊರವೆಲ್) ಹಾಕಿಸಿದ್ದು ಒಂದರ್ಲಿ ಮಾತ್ರ ಸ್ವಲ್ಪ ನೀರು ( 1 ಇಂಚು ) ಇರುತ್ತದೆ.  ನನ್ನ ಮಗ ಪರಶುರಾಮ ಇತನು ಕೃಷಿ ಚಟುವಟಿಕೆಗಾಗಿ ಮತ್ತು ಸಂಸಾರ ಅಡಚಣೆಗಾಗಿ ಎಸ್.ಬಿ.ಐ ಗೋಗಿಯಲ್ಲಿ 1 ಲಕ್ಷ ರೂಪಾಯಿ ಮತ್ತು ಚಾಮನಾಳ ಸೋಸೈಟಿಯಲ್ಲಿ 20 ಸಾವಿರ ರೂ. ಸಾಲ ಹಾಗೂ ಊರಮಂದಿಯಲ್ಲಿ ಕೈಗಡ ಅಂತಾ 4 ಲಕ್ಷ ರೂ ಸಾಲ ಮಾಡಿದ್ದಾನೆ ನನ್ನ ಮಗನು ಹೊಲದಲ್ಲಿ ಹಾಕಿದ ಬೆಳೆ ಎರಡು ಮೂರು ವರ್ಷದಿಂದ ಸರಿಯಾಗಿ ಬಾರದೇ ಸಾಲ ಹೇಗೆ ತೀರಿಸಬೇಕು ಅಂತಾ ಚಿಂತೆ ಮಾಡುತ್ತಿದ್ದನು.  ಅದಕ್ಕೆ ನಾವು ಸಮಾದಾನ ಹೇಳುತ್ತಿದ್ದೆವು. ಹೀಗಿದ್ದು ದಿನಾಂಕ: 15-02-2020 ರಂದು ನಾನು ಹೊರಗಡೆ ಹೋಗಿದು ನನ್ನ ಮಗ ಪರಶುರಾಮ ಇತನು ಕೂಡ ಹೊರಗಡೆ ಹೋಗಿ ಮರಳ 8-30 ಎಎಮ್ ಸುಮಾರಿಗೆ ಮನೆಗೆ ಬಂದು ನನ್ನ ಸೊಸೆಯ ಮುಂದೆ ನಮ್ಮ ಹೊಲದಲ್ಲಿ ಇದ್ದ ಕ್ರಿಮಿನಾಶಕ ಔಷದಿಯನ್ನು ಸೇವನೆ ಮಾಡಿರುತ್ತೇನೆ ಅಂತಾ ನನ್ನ ಸೊಸೆಯ ಮುಂದೆ ಅಂದಿದ್ದು ಆಗ ನನ್ನ ಸೊಸೆ ಗಾಬರಿಗೊಂಡು ನನ್ನ ಮಗನಿಗೆ ಸೊಸೆ ಪೂಜಾ ಮತ್ತು ಹೊನ್ನಪ್ಪ ಕೂಡಿ ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಧನ್ವಂತರಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ: 21/02/2020 ರಂದು 12-30 ಪಿಎಮ್ ಸುಮಾರಿಗೆ ಮೃತಪಟ್ಟಿದ್ದು ನನ್ನ ಮಗನ ಶವ ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದಿರುತ್ತೇವೆ ನನ್ನ ಮಗನ ಸಾವಿನಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ವಗೈರೆ ಇರುವುದಿಲ್ಲಾ.  ಕಾರಣ ಮುಂದಿನ ಕ್ರಮ ಜರುಗಿಸಬೇಕೆಂದು ಮಾನ್ಯರವರಲ್ಲಿ ವಿನಂತಿ ಅಂತಾ ಅಜರ್ಿಯ ಮೇಲಿಂದ ಠಾಣೆ ಯು.ಡಿ.ಆರ್ ನಂ: 03/2020 ಕಲಂ, 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ ಠಾಣೆ ಗುನ್ನೆ ನಂ:-13/2020  ಕಲಂ: 279, 337, 338, 304(ಎ) ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ್ :-  ಇಂದು ದಿನಾಂಕ: 21/02/2020 ರಂದು 8-30 ಪಿಎಮ್ ಕ್ಕೆ ಅಜರ್ಿದಾರನಾದ ಶ್ರೀ ಬಸವಂತ್ರಾಯ ತಂ: ಬಸಣ್ಣಗೌಡ ಪೊಲೀಸ್ ಬಿರಾದಾರ ವಯ|| 56 ವರ್ಷ ಜಾ|| ಕುರುಬರ ಉ|| ಕೃಷಿ ಸಾ|| ಸೈದಾಪೂರ ಇವರು ಠಾಣೆಗೆ ಹಾಜರಾಗಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಮ್ಮೂರ ನಿಂಗಣ್ಣಗೌಡ ಪೊಲೀಸ್ ಪಾಟೀಲ್ ಇವರ ಸಂಬಂಧಿಕರ ಊರಾದ ಸಿಂದಗಿ ತಾಲ್ಲೂಕಿನ ಅನಿಮಡಿ ಗ್ರಾಮದಲ್ಲಿ ಅವರ ಸಂಬಂಧಿಕರು ಅವರ ಸಂಬಂಧಿಕರು ತೀರಿಕೊಂಡಿದ್ದರಿಂದ ಅಂತ್ಯ ಸಂಸ್ಕಾರಕ್ಕೆ ಹೋಗಲು ಇಂದು ದಿನಾಂಕ: 21/02/2020 ರಂದು ಬೆಳಿಗ್ಗೆ 9-00 ಎಎಮ್ ಕ್ಕೆ ನಮ್ಮ ಊರ ಸಿದ್ದಪ್ಪ ತಂ: ಯಲ್ಲಪ್ಪ ತಳವಾರ ಇತನ ಆಟೋ ನಂ:ಕೆಎ-33 ಎ-0738 ನೇದ್ದರಲ್ಲಿ ಅನಿಮಡಿ ಗ್ರಾಮಕ್ಕೆ ಹೋಗಲು ನನ್ನ ಹೆಂಡತಿ ಗಂಗಮ್ಮ ಗಂ: ಬಸವಂತ್ರಾಯ ವಯ|| 46 ವರ್ಷ ಹಾಗೂ ನಮ್ಮೂರ ನೀಲಮ್ಮ ಗಂಡ ಚಂದಪ್ಪ, ಸೂಗಮ್ಮ ಗಂಡ ಮಲ್ಲಪ್ಪ, ಮಹಾದೇವಮ್ಮ ಗಂಡ ನಿಂಬೆಣ್ಣ, ಅಯ್ಯಮ್ಮ ಗಂಡ ಸಾಬಣ್ಣ, ಲಲಿತಮ್ಮ ಗಂಡ ಶರಣಪ್ಪ ಪೂಜಾರಿ, ನಿಂಗಮ್ಮ ಗಂಡ ದೇವಿಂದ್ರಪ್ಪ ಪೂಜಾರಿ, ನಿಂಗಮ್ಮ ಗಂಡ ಸಿದ್ದಪ್ಪ ಪೂಜಾರಿ, ಮಾನಮ್ಮ ಗಂಡ ಸಿದ್ದಣ್ಣ, ಹಾಗೂ ಹುಲಕಲ್ ಗ್ರಾಮದ ನೀಲಮ್ಮ ಬಿರಾದಾರ, ಅಯ್ಯಮ್ಮ ಬೋಸ್ಗಿ ಇವರೆಲ್ಲರೂ ಕೂಡಿ ಆಟೋದಲ್ಲಿ ಕುಳಿತು ಗೋಗಿ ಮುಖಾಂತರ ಹೋಗಲು ತಯಾರಾಗಿ ಸಿದ್ದಪ್ಪ ತಂದೆ ಯಲ್ಲಪ್ಪ ತಳವಾರ ಇತನು ಆಟೋವನ್ನು ನಡೆಸಿಕೊಂಡು ನಮ್ಮೂರಿನಿಂದ ಹೋದರು.  ನಂತರ ನಾನು ಸಾಯಂಕಾಲ 7-15 ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರ ನಿಂಗಣ್ಣಗೌಡ ತಂದೆ ಪರಮಣ್ಣಗೌಡ ಇತನು ಪೋನ್ ಮಾಡಿ ಬೆಳಿಗ್ಗೆ ಅನಿಮಾಡಿಗೆ ಬಂದ ಆಟೋ ಸಿದ್ದಪ್ಪ ತಂದೆ ಯಲ್ಲಪ್ಪ ತಳವಾರ ಇತನ ಆಟೋ ಸೈದಾಪೂರಕ್ಕೆ ಬರುವಾಗ ಚಾಮನಾಳ ಗೋಗಿ (ಕೆ) ನಡುವೆ ರಬ್ಬನಳ್ಳಿ ಗ್ರಾಮದ ಕ್ಯಾನೆಲ್ ಹತ್ತಿರ ಆಟೋ ಚಾಲಕ ತನ್ನ ಆಟೋವನ್ನು ಅತಿವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ನಡೆಸಿ ರೋಡಿನ ಎಡಗಡೆ ಬಾಜು ಪಲ್ಟಿ ಮಾಡಿದ್ದು ಅಪಘಾತದಲ್ಲಿ ನಿನ್ನ ಹೆಂಡತಿ ಗಂಗಮ್ಮ ಇವಳಿಗೆ ತಲೆಗೆ ಪೆಟ್ಟಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾಳೆ ಉಳಿದವರಿಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದು ಇರುತ್ತದೆ.  ಗಾಯಾಳುಗಳು 108 ವಾಹನದಲ್ಲಿ ಶಹಾಪೂರ ಆಸ್ಪತ್ರೆಗೆ ಹೋಗಿರುತ್ತಾರೆ.  ನಿನ್ನ ಹೆಂಡತಿ ಶವವನ್ನು ಬೇರೆ ಒಂದು ಆಟೋದಲ್ಲಿ ಹಾಕಿಕೊಂಡು ಶಹಾಪೂರ ಆಸ್ಪತ್ರೆಗೆ ಬರುತ್ತೇವೆ ನೀನು ಬಾ ಅಂತಾ ನನಗೆ ಸುದ್ದಿ ತಿಳಿಸಿದರು.  ನಾನು ಸಹಿತ 8-00 ಪಿಎಮ್ ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ಶಹಾಪೂರ ಆಸ್ಪತ್ರೆಯಲ್ಲಿ ನನ್ನ ಹೆಂಡತಿಯ ಶವ ಇದ್ದು ಆಕೆಗೆ ಭಾರೀ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು ನಿಂಗಪ್ಪಗೌಡ ಈತನಿಂದ ತಿಳಿಯಿತು. 
           ಉಪಚಾರ ಪಡೆಯುತ್ತಿದ್ದ ಶರಣಪ್ಪ ಪೂಜಾರಿ, ನಿಂಗಮ್ಮ ಪೂಜಾರಿ, ನಿಂಗಮ್ಮ ಗಂಡ ಸಿದ್ದಪ್ಪ ಪೂಜಾರಿ, ಮಾನಮ್ಮ ಗಂಡ ಸಿದ್ದಣ್ಣ ಇವರಿಗೆ ಭಾರೀ ಗಾಯಗಳಾಗಿದ್ದು ಇರುತ್ತದೆ. ಆಟೋದಲ್ಲಿ ಕುಳಿತ ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಇರುತ್ತದೆ.  ಆದುದರಿಂದ ಅತಿವೇಗ ನಿಷ್ಕಾಳಜಿತನದಿಂದ ಆಟೋ ನಂ: ಕೆಎ-33 ಎ-0738 ನೇದ್ದರ ಚಾಲಕ ಸಿದ್ದಪ್ಪ ತಂದೆ ಯಲ್ಲಪ್ಪ ತಳವಾರ ಸಾ|| ಸೈದಾಪೂರ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಅಜರ್ಿ ಮೇಲಿಂದ ಠಾಣೆ ಗುನ್ನೆ ನಂ: 13/2020 ಕಲಂ, 279, 337, 338 304(ಎ) ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!