ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/02/2020

By blogger on ಮಂಗಳವಾರ, ಫೆಬ್ರವರಿ 18, 2020

   

                                      ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 18/02/2020

ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 08/2020  ಕಲಂ 279,  304(ಎ) ಐಪಿಸಿ ಸಂ.187 ಐಎಂವಿ ಆ್ಯಕ್ಟ್:- ಇಂದು ದಿನಾಂಕ 18/02/2020 ರಂದು ಮದ್ಯಾಹ್ನ 12-50 ಪಿ.ಎಂ.ಕ್ಕೆ ಯಾದಗಿರಿ ಜಿಜಿಎಚ್ ನಿಂದ ಆರ್.ಟಿ.ಎ ಡೆತ್ ಎಮ್.ಎಲ್.ಸಿ ಮಾಹಿತಿ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿದ್ದು,  ಅಪಘಾತದಲ್ಲಿ ಮೃತನಾದ ಸಾಬಣ್ಣ  ಇವರ ಪತ್ನಿಯಾದ  ಪಿಯರ್ಾದಿ ಶ್ರೀಮತಿ ಮಹಾದೇವಮ್ಮ ಗಂಡ ಸಾಬಣ್ಣ ಅಲ್ಲೂರ ವಯ;20 ವರ್ಷ, ಜಾ;ಕಬ್ಬಲಿಗ, ಉ;ಕೂಲಿ, ಸಾ;ಹತ್ತಿಕುಣಿ  ತಾ;ಜಿ;ಯಾದಗಿರಿ ಇವರು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಹಾಜರಿದ್ದು ಅವರಿಗೆ ವಿಚಾರಿಸಲಾಗಿ ಈ ಘಟನೆಯ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದನ್ನು  ಸಮಯ  1-30 ಪಿ.ಎಂ.ದಿಂದ 2-30 ಪಿ.ಎಂ.ದ ವೆರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ನನ್ನ ಗಂಡನೊಂದಿಗೆ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಮಗೆ ಒಬ್ಬಳು 03 ತಿಂಗಳ ಹೆಣ್ಣು ಮಗಳಿರುತ್ತಾಳೆ. ಅವಳಿಗೆ ಮೈಯಲ್ಲಿ ಅರಾಮ ತಪ್ಪಿದ ಕಾರಣ ನಿನ್ನೆ ಬೆಂಗಳೂರಿನಿಂದ ಹೊರಟು ಇಂದು ಬೆಳಿಗ್ಗೆ ನಮ್ಮೂರಿಗೆ ಬಂದಿದ್ದೆವು. ನನ್ನ ಮಗಳಿಗೆ ಯಾದಗಿರಿಯ ಖಾಸಗಿ ಆಸ್ಪತ್ರೆಗೆ ತೋರಿಸಿಕೊಂಡು ಬಂದರಾಯಿತು ಅಂತಾ ನಾನು ಮತ್ತು ನನ್ನ ಗಂಡ ಇಬ್ಬರು ಇಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ನಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಡಬ್ಲ್ಯು-0969 ನೇದ್ದನ್ನು ತೆಗೆದುಕೊಂಡು ಅದರ ಮೇಲೆ ಯಾದಗಿರಿಗೆ ಬಂದೆವು. ಯಾದಗಿರಿಯ ವಾತ್ಸಲ್ಯ  ಮಕ್ಕಳ ಆಸ್ಪತ್ರೆಯಲ್ಲಿ ನನ್ನ ಮಗಳಿಗೆ ತೋರಿಸಿದಾಗ ಆಗ ವೈದ್ಯರು ನಮ್ಮ ಮಗುವಿಗೆ ಹೆಚ್ಚಿನ ಉಪಚಾರಕ್ಕಾಗಿ ರಾಯಚೂರಿಗೆ ಹೋಗಲು ತಿಳಿಸಿದಾಗ ಅದಕ್ಕೆ ನನ್ನ ಗಂಡನು ಮುದ್ನಾಳದಲ್ಲಿ ಇರುವ ನನ್ನ ಅಕ್ಕಳಿಗೆ ಈ ವಿಷಯ ತಿಳಿಸಿ ಬರುತ್ತೇನೆ ನಂತರ ರಾಯಚೂರಿಗೆ ಹೋಗೋಣ ನೀನು ಈ ಆಸ್ಪತ್ರೆಯಲ್ಲಿ ಇರು ಅಂತಾ ಹೇಳಿ ಹೋಗಿದ್ದು ಇರುತ್ತದೆ. ಸಮಯ ಮದ್ಯಾಹ್ನ ಅಂದಾಜು 12-50 ಪಿ.ಎಂ.ದ ಸುಮಾರಿಗೆ ನನಗೆ ನಮ್ಮೂರಿನ ನಮ್ಮ ಸಂಬಂಧಿಕರಾದ ಬಸವರಾಜ ತಂದೆ ಸಾಬಣ್ಣ ಅಲ್ಲೂರ ಇವರು ಪೋನ್ ಮಾಡಿ ನನಗೆ ತಿಳಿಸಿದ್ದೇನೆಂದರೆ ನಾನು ಮತ್ತು ನಮ್ಮ ಸಂಬಂಧಿ ಶ್ರೀ ಸಾಬಣ್ಣ ತಂದೆ ಸಿದ್ದಪ್ಪ ಸೋಮಣ್ಣೇರ ಸಾ;ಹತ್ತಿಕುಣಿ ಇಬ್ಬರು ಸೇರಿಕೊಂಡು ಕೆಲಸದ ನಿಮಿತ್ಯ ಯಾದಗಿರಿ ಡಿಸಿ ಕಛೇರಿಗೆ ಹೋಗಿ ಮರಳಿ ಯಾದಗಿರಿ ನಗರದ ಕಡೆಗೆ ಬರುವಾಗ ಮಾರ್ಗ ಮದ್ಯೆ ಡಾನ್ ಬೋಸ್ಕೋ ಶಾಲೆ ದಾಟಿದ ನಂತರ ವಾಡಿ-ಯಾದಗಿರಿ ಮುಖ್ಯ ರಸ್ತೆ ಮೇಲೆ ಬರುವ ಗ್ರೀನ್ ಸಿಟಿ ಗಾರ್ಡನ್ ಹತ್ತಿರ ಮುಂದಿನ ಮುಖ್ಯ ರಸ್ತೆ ಮೇಲೆ ನಮ್ಮ ಮುಂದೆ ಯಾದಗಿರಿ ಕಡೆಗೆ ಹೊರಟಿದ್ದು ನಾವುಗಳು ನೋಡು ನೋಡುತ್ತಿದ್ದಂತೆ ನಿನ್ನ ಗಂಡ ಸಾಬಣ್ಣ ಈತನ ಮೋಟಾರು ಸೈಕಲ್ಗೆ ಆತನ ಎದುರುಗಡೆ ಬರುತ್ತಿದ್ದ ಒಬ್ಬ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ನಿನ್ನ ಗಂಡನ ಮೋಟಾರು ಸೈಕಲ್ ನೇದ್ದಕ್ಕೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ನಿನ್ನ ಗಂಡನು ಮೋಟಾರು ಸೈಕಲ್ ಸಮೇತ ರಸ್ತೆ ಪಕ್ಕಕ್ಕೆ ಹೋಗಿ ಬಿದ್ದೆನು. ಆಗ ನಾವಿಬ್ಬರು ನಮ್ಮ ಮೋಟಾರು ಸೈಕಲ್ ನಿಲ್ಲಿಸಿ ನಿನ್ನ ಗಂಡನ ಹತ್ತಿರ ಹೋಗಿ ನೋಡಲಾಗಿ ಈ ಅಪಘಾತದಲ್ಲಿ ನಿನ್ನ ಗಂಡನ ತಲೆಯ ಹಿಂಭಾಗಕ್ಕೆ ಭಾರೀ ರಕ್ತಗಾಯವಾಗಿ ಕಿವಿಗಳಲ್ಲಿ ರಕ್ತ ಬರುತ್ತಿದ್ದು ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿ ಮೂಚರ್ೆ ಹೋಗಿರುತ್ತಾನೆ. ನಿನ್ನ ಗಂಡನಿಗೆ ಅಪಗಾತಪಡಿಸಿದ ಮೋಟಾರು ಸೈಕಲ್ ಸವಾರನು ಘಟನಾ ಸ್ಥಳದಿಂದ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದು ಅದರ ಮೋಟಾರು ಸೈಕಲ್ ನಂಬರ ಕೆಎ-33, ಕೆ-1353 ನೇದ್ದು ಇರುತ್ತದೆ ಅಪಘಾತ ಪಡಿಸಿದ ಸವಾರನು ಅವಸರ ಅವಸರವಾಗಿ ತನ್ನ ಮೋಟಾರು ಸೈಕಲ್ ಚಾಲು ಮಾಡಿಕೊಂಡು ಮೋಟಾರು ಸೈಕಲ್ ಸಮೇತ ಓಡಿ ಹೋಗಿದ್ದು ಆತನನ್ನು ನಾವುಗಳು ಮತ್ತೆ ನೋಡಿದಲ್ಲಿ ಗುತರ್ಿಸುತ್ತೇವೆ. ಈ ಘಟನೆಯು ಇಂದು ದಿನಾಂಕ 18/02/2020 ರಂದು 12 ಪಿ.ಎಂ.ಕ್ಕೆ ಜರುಗಿದ್ದು ಇರುತ್ತದೆ. ಸ್ಥಳಕ್ಕೆ ಅಂಬುಲೆನ್ಸ್ ಬಂದಿದ್ದು ನಾವಿಬ್ಬರು ನಿನ್ನ ಗಂಡನಿಗೆ 108 ಅಂಬುಲೆನ್ಸ್ ನಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಉಪಚಾರಕ್ಕಾಗಿ ಕರೆದುಕೊಂಡು ಬಂದಿದ್ದು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ವೈದ್ಯರು ನಿನ್ನ ಗಂಡನಿಗೆ ಉಪಚಾರ ನೀಡುತ್ತಾ ಪರೀಕ್ಷಿಸಿದ್ದು ಅಪಘಾತದಲ್ಲಾದ ಗಾಯಗಳ ಬಾಧೆಯಿಂದ ಸಮಯ 12-45 ಪಿ.ಎಂ.ಕ್ಕೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ  ಈ ಘಟನೆ ಬಗ್ಗೆ ನಿಮ್ಮ ಮಾವನವರಾದ ಮಹಾದೇವಪ್ಪ ಇವರಿಗೆ ತಿಳಿಸಿದ್ದು ನೀವು ಕೂಡ ಕೂಡಲೇ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬರಬೇಕು ಅಂತಾ ತಿಳಿಸಿದಾಗ ನನಗೆ ಗಾಬರಿಯಾಗಿ ಒಂದು ಖಾಸಗಿ ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ನನ್ನ ಗಂಡನಿಗೆ ಶವಗಾರ ಕೋಣೆಯಲ್ಲಿ ಹಾಕಿದ್ದು ಆತನ ಮೃತ ದೇಹವನ್ನು ನಾನು ಗುತರ್ಿಸಿರುತ್ತೇನೆ. ನನಗೆ ಈ ಮೇಲೆ ಬಸವರಾಜರವರು ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಸ್ವಲ್ಪ ಸಮಯದ ನಂತರ ನನ್ನ ಮಾವನವರಾದ ಮಹಾದೇವಪ್ಪ ಇವರು ಕೂಡ ಆಸ್ಪತ್ರೆಗೆ ಬಂದಿರುತ್ತಾರೆ.        ಹೀಗಿದ್ದು ಇಂದು  ದಿನಾಂಕ 18/02/2020 ರಂದು 12 ಪಿ.ಎಂ ದ ಸುಮಾರಿಗೆ ವಾಡಿ-ಯಾದಗಿರಿ ಮುಖ್ಯ ರಸ್ತೆ ಮೇಲೆ ಬರುವ ಗ್ರೀನ್ ಸಿಟಿ ಗಾರ್ಡನ್ ಹತ್ತಿರ ಮುಂದಿನ ಮುಖ್ಯ ರಸ್ತೆ ಮೇಲೆ ನನ್ನ ಗಂಡನ ಮೋಟಾರು ಸೈಕಲ್ ನಂಬರ ಕೆಎ-33, ಡಬ್ಲ್ಯು-0969  ನೇದ್ದಕ್ಕೆ ಮೋಟಾರು ಸೈಕಲ್ ನಂ.ಕೆಎ-33, ಕೆ-1353 ನೇದ್ದರ ಸವಾರನು ತನ್ನ ಮೋಟಾರು ಸೈಕಲನ್ನು  ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು  ನನ್ನ ಗಂಡನ ಮೋಟಾರು ಸೈಕಲ್ ನೇದ್ದಕ್ಕೆ  ಡಿಕ್ಕಿಕೊಟ್ಟು  ಅಪಘಾತ ಮಾಡಿ, ಘಟನಾ ಸ್ಥಳದಿಂದ ಮೋಟಾರು ಸೈಕಲ್ ಸಮೇತ ಓಡಿ ಹೋಗಿದ್ದು  ಸದರಿ ಅಪಘಾತದಲ್ಲಿ ನನ್ನ ಗಂಡನ ತಲೆಯ ಹಿಂಭಾಗಕ್ಕೆ ಭಾರೀ ರಕ್ತಗಾಯವಾಗಿ ತಲೆಯಿಂದ, ಎರಡು ಕಿವಿಗಳಿಂದ ರಕ್ತ ಹೊರಬಂದು  ಅಲ್ಲಲ್ಲಿ ತರಚಿದ ಗಾಯಗಳಾಗಿ ಉಪಚಾರ ಕುರಿತು ಸೇರಿಕೆ ಮಾಡಿದಾಗ ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರ ಬಗ್ಗೆ ವೈದ್ಯರು ತಿಳಿಸಿದ್ದು ಈ ಘಟನೆಗೆ ಕಾರಣನಾದ ಮೋಟಾರು ಸೈಕಲ್ ನಂ.ಕೆಎ-33, ಕೆ-1353 ನೇದ್ದರ ಸವಾರನ  ಮೇಲೆ ಕಾನೂನಿನ ಮುಂದಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 08/2020  ಕಲಂ 279, 304(ಎ) ಐಪಿಸಿ ಸಂಗಡ 187 ಐಎಂವಿ ಆ್ಯಕ್ನೇದ್ದರಲ್ಲಿ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 07/2020  ಕಲಂ 279,  338,  304(ಎ) ಐಪಿಸಿ :- ಇಂದು ದಿನಾಂಕ 18/02/2020 ರಂದು ಬೆಳಿಗ್ಗೆ 7 ಎ.ಎಂ.ಕ್ಕೆ  ಯಾದಗಿರಿ ಜಿಜಿಎಚ್ ನಿಂದ ಆರ್.ಟಿ.ಎ ಡೆತ್ ಎಮ್.ಎಲ್.ಸಿ ಮಾಹಿತಿ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿದ್ದು,  ಅಪಘಾತದಲ್ಲಿ ಗಾಯಗೊಂಡ ಗಾಯಾಳು ವಿಚಾರಣೆ ನಂತರ ಈ ಕೇಸಿನಲ್ಲಿ ಮೃತನಾದ ಭಾಗಪ್ಪ ಇವರ ತಂದೆಯಾದ  ಪಿಯರ್ಾದಿ ಶ್ರೀ ಸಾಬಣ್ಣ ತಂದೆ ಭಾಗಪ್ಪ ಚವಟಿಗೇರ ವಯ;54 ವರ್ಷ, ಜಾ;ಕಬ್ಬಲಿಗ, ಉ;ಕೂಲಿ, ಸಾ;ಬಂಡಿಗೇರ ಓಣಿ ಯಾದಗಿರಿ ಇವರು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಹಾಜರಿದ್ದು ಈ ಘಟನೆಯ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದನ್ನು  ಸಮಯ  7-30 ಎ.ಎಂ.ದಿಂದ 8-30 ಎ.ಎಂ.ದ ವೆರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ನನಗೆ ಒಬ್ಬ ಗಂಡು ಮಗ ಭಾಗಪ್ಪ ವಯ;22 ವರ್ಷ ಇರುತ್ತಾನೆ ಈತನು ಕೂಡ ಅಲ್ಲಲ್ಲಿ  ಕೂಲಿ ಕೆಲಸ ಮಾಡಿಕೊಂಡು ಇರುತ್ತಾನೆ. ನನ್ನ ಮಗನಿಗೆ ಇನ್ನು  ಮದುವೆಯಾಗಿರುವುದಿಲ್ಲ. ಹೀಗಿದ್ದು ಇಂದು ದಿನಾಂಕ 18/02/2020 ರಂದು ಸಮಯ ಬೆಳಿಗ್ಗೆ  ಅಂದಾಜು 5-30 ಎ.ಎಂ.ದ ಸುಮಾರಿಗೆ ನಾನು  ಮನೆಯಲ್ಲಿದ್ದಾಗ  ನನ್ನ ಮಗನಾದ ಭಾಗಪ್ಪ ಈತನು ತನ್ನ ಸ್ನೇಹಿತನಾದ ನಮ್ಮ ಓಣಿಯ ಸುರೇಶ ತಂದೆ ಗೋರಕನಾಥ ಮೇದಾರ ಈತನೊಂದಿಗೆ ಕೂಲಿ ಕೆಲಸಕ್ಕೆ ಹೋಗಿ  ಬರುತ್ತೇನೆಂದು ನನಗೆ ಹೇಳಿ ಹೋಗಿದ್ದು ಇರುತ್ತದೆ. ಸ್ವಲ್ಪ ಸಮಯದ ನಂತರ ನನಗೆ ಸುರೇಶ ಈತನು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಾನು ಮತ್ತು ನಿಮ್ಮ ಮಗ ಭಾಗಪ್ಪ ಇಬ್ಬರು ಹತ್ತಿಕುಣಿ ಕ್ರಾಸ್ ಹತ್ತಿರ ಚಹಾ ಕುಡಿದು ನಮ್ಮ ಕೆಲಸದ ನಿಮಿತ್ಯ ಗಂಗಾನಗರದ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದಾಗ ನಾವುಗಳು ನೋಡು ನೋಡುತ್ತಿದ್ದಂತೆ ಒಬ್ಬ ಮೋಟಾರು ಸೈಕಲ್ ಸವಾರನು ಗಂಗಾನಗರ ಕಡೆಯಿಂದ ಯಾದಗಿರಿ ಕಡೆಗೆ ತನ್ನ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮಿಬ್ಬರಲ್ಲಿ ನಿಮ್ಮ ಮಗನಿಗೆ ನೇರವಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿರುತ್ತಾನೆ ಸದರಿ ಅಪಘಾತದಲ್ಲಿ ನಿಮ್ಮ ಮಗನು ರಸ್ತೆಯ ಮೇಲೆ ಹಾಗೆಯೇ ಡಿಕ್ಕಿಕೊಟ್ಟ ರಭಸಕ್ಕೆ ಚಿತ್ತನಾಗಿ ಬಿದ್ದಾಗ ತಲೆಯ ಹಿಂಭಾಗಕ್ಕೆ ಭಾರೀ ರಕ್ತಗಾಯವಾಗಿ ತಲೆಯಿಂದ, ಎರಡು ಕಿವಿಗಳಿಂದ ರಕ್ತ ಹೊರಬರುತ್ತಿದ್ದು ಮುಖಕ್ಕೆ ಅಲ್ಲಲ್ಲಿ ತರಚಿದ ಗಾಯಗಳಾಗಿ ಮೂಚರ್ೆ ಹೋಗಿರುತ್ತಾನೆ ಇದೇ ಮಾರ್ಗವಾಗಿ ಹೊರಟಿದ್ದ ನಮ್ಮ ಓಣಿಯವರಾದ ಶ್ರೀ ಸಿದ್ದಲಿಂಗಪ್ಪ ತಂದೆ ಚಂದಪ್ಪ ನಾಯಕ ಹಾಗೂ ಆಕಾಶ ತಂದೆ ದಯಾನಂದ ನಿಂಬಗರ್ಿ ಇವರುಗಳು ಬಂದು ನನಗೆ ಅಪಘಾತದ ಬಗ್ಗೆ ವಿಚಾರಿಸಿರುತ್ತಾರೆ. ಅಪಘಾತಪಡಿಸಿದ ಮೋಟಾರು ಸೈಕಲ್ ಸ್ಥಳದಲ್ಲಿದ್ದು ಅದರ ನಂಬರ ಕೆಎ-33, ಎಕ್ಸ್-5284 ನೇದ್ದು ಇದ್ದು ಅದರ ಸವಾರನು ಕೂಡ ಸ್ಥಳದಲ್ಲಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸುರೇಶ ತಂದೆ ತಿಮ್ಮಯ್ಯ ತೆಲಗರ ಸಾ;ಹನುಮಾನ ನಗರ, ಯಾದಗಿರಿ ಅಂತಾ ತಿಳಿಸಿದ್ದು ಆತನಿಗೂ ಕೂಡ ಸದರಿ ಅಪಘಾತದಲ್ಲಿ ಎಡಗಾಲು ಪಾದದ ಮೇಲೆ ಭಾರೀ ಗುಪ್ತಗಾಯವಾಗಿ ಮುರಿದಿದ್ದು ಇರುತ್ತದೆ. ಮೋಟಾರು ಸೈಕಲ್ ಹಿಂಬದಿ ಸವಾರ ಮರಗಪ್ಪ ತಂದೆ ಬಸಪ್ಪ ನೀಡಿಗಿ ಈತನಿಗೆ ಯಾವುದೇ ಗಾಯ, ವಗೈರೆ ಆಗಿರುವುದಿಲ್ಲ, ಈ ಅಪಘಾತವು ಯಾದಗಿರಿ-ಸೇಡಂ ಮುಖ್ಯ ರಸ್ತೆಯ ಗಂಗಾನಗರ ಹಳ್ಳದ ಬ್ರಿಡ್ಜ್ ರಸ್ತೆ ಮೇಲೆ ಇಂದು ಬೆಳಿಗ್ಗೆ  ಅಂದಾಜು 6 ಎ.ಎಂ.ಕ್ಕೆ ಜರುಗಿದ್ದು ಇರುತ್ತದೆ.  ನಾವುಗಳು ನಿಮ್ಮ ಮಗನಿಗೆ ಮತ್ತು ಸುರೇಶನಿಗೆ ಉಪಚಾರ ಕುರಿತು ಒಂದು ಖಾಸಗಿ ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು ನೀವು ಕೂಡಲೇ ಆಸ್ಪತ್ರೆಗೆ ಬರಬೇಕು ಅಂದಾಗ ನನಗೆ ಗಾಬರಿಯಾಗಿ ಒಂದು ಖಾಸಗಿ ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗನು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಅಪಘಾತದಲ್ಲಾದ ಗಾಯಗಳ ಬಾದೆಯಿಂದ ಚಿಕಿತ್ಸೆಗೆ ಸ್ಪಂದಿಸದೇ ಸಮಯ 6-46 ಎ.ಎಂ.ಕ್ಕೆ ಮೃತ ಪಟ್ಟ ಬಗ್ಗೆ ವೈದ್ಯರು ತಿಳಿಸಿರುತ್ತಾರೆ. ನನ್ನ ಮಗನ ಮೃತದೇಹವನ್ನು ನಾನು ಗುತರ್ಿಸಿದ್ದು ಇರುತ್ತದೆ. ನನಗೆ ಈ ಮೇಲೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ.  ಹೀಗಿದ್ದು ಇಂದು  ದಿನಾಂಕ 18/02/2020 ರಂದು ಬೆಳಿಗ್ಗೆ 6 ಎ.ಎಂ ದ ಸುಮಾರಿಗೆ  ಯಾದಗಿರಿ-ಸೇಡಂ ಮುಖ್ಯ ರಸ್ತೆಯ ಗಂಗಾನಗರ ಹಳ್ಳದ ಬ್ರಿಡ್ಜ್ ರಸ್ತೆ ಮೇಲೆ ಮೋಟಾರು ಸೈಕಲ್ ನಂಬರ ಕೆಎ-33, ಎಕ್ಸ್-5284  ನೇದ್ದರ ಸವಾರ ಸುರೇಶ ತಂದೆ ತಿಮ್ಮಯ್ಯ ತೆಲಗರ ಸಾ;ಹನುಮಾನ ನಗರ, ಯಾದಗಿರಿ ಈತನು ತನ್ನ ಮೋಟಾರು ಸೈಕಲನ್ನು  ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು  ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದ ನನ್ನ ಮಗ ಭಾಗಪ್ಪನಿಗೆ ಡಿಕ್ಕಿಕೊಟ್ಟು  ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ತಲೆಯ ಹಿಂಭಾಗಕ್ಕೆ ಭಾರೀ ರಕ್ತಗಾಯವಾಗಿ ತಲೆಯಿಂದ, ಎರಡು ಕಿವಿಗಳಿಂದ ರಕ್ತ ಹೊರಬಂದು  ಮುಖಕ್ಕೆ ಅಲ್ಲಲ್ಲಿ ತರಚಿದ ಗಾಯಗಳಾಗಿ ಉಪಚಾರ ಕುರಿತು ಸೇರಿಕೆಯಾಗಿ ಚಿಕಿತ್ಸೆಗೆ ಸ್ಪಂದಿಸದೇ ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ ಘಟನೆಗೆ ಕಾರಣನಾದ ಮೋಟಾರು ಸೈಕಲ್ ನಂ.ಕೆಎ-33, ಎಕ್ಸ್-5284 ನೇದ್ದರ ಸವಾರನ  ಮೇಲೆ ಕಾನೂನಿನ ಮುಂದಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 8-45 ಎ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 07/2020  ಕಲಂ 279, 338, 304(ಎ) ಐಪಿಸಿ ನೇದ್ದರಲ್ಲಿ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.    


ಯಾದಿಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 21/2020 ಕಲಂ. ಮನುಷ್ಯಕಾಣೆ:- ಇಂದು ದಿನಾಂಕ; 18/02/2020 ರಂದು 6-00 ಪಿಎಮ್ ಕ್ಕೆ ಪಿರ್ಯಾಧಿದಾರರಾದ ಶ್ರೀಮತಿ ಮಲ್ಲಮ್ಮ @ ಸುವರ್ಣ ಗಂಡ ಮಲ್ಲಣ್ಣಗೌಡ ಮಾಲಿಪಾಟೀಲ ವ;40 ಜಾ; ಲಿಂಗಾಯತ ಉ; ಮನೆಗೆಲಸ ಸಾ; ಗುತ್ತಿಪೇಠ ಶಹಾಪೂರ ಹಾ.ವ; ಅಜೀಜ ಕಾಲೋನಿ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಾನು, ನನ್ನ ಗಂಡ ಮಲ್ಲಣ್ಣಗೌಡ ಮಾಲಿಪಾಟೀಲ ಹಿಗೇ 16 ವರ್ಷಗಳ ಹಿಂದೆ ಶಹಾಪೂರದಿಂದ ಯಾದಗಿರಿಗೆ ಬಂದು ನೆಲೆಸಿದ್ದು ನನ್ನ ಗಂಡ ಮಲ್ಲಣ್ಣಗೌಡ ಈತನು ಚಾಲಕ ಅಂತಾ ಕೆಲಸ ಮಾಡಿಕೊಂಡಿದ್ದು ನಮಗೆ ಮೂರು ಮಕ್ಕಳಿದ್ದು 1) ಸೃಷ್ಠಿ ವ; 19 ವರ್ಷ 2) ರಕ್ಷಿತಾ ವ; 16 ವರ್ಷ 3) ಸಿದ್ದಾರ್ಥ ವ;14 ವರ್ಷ ಇರುತ್ತಾರೆ. ನನ್ನ ಗಂಡ ಮಲ್ಲಣ್ಣಗೌಡ ಈತನು ಸ್ವಃತ ಕಾರ ಹೊಂದಿದ್ದು ಈಗೇ 1 ವರ್ಷಗಳ ಹಿಂದೆ ನನ್ನ ಗಂಡನಿಗೆ ಅನಾರೋಗ್ಯದ ಕಾರಣವಾಗಿ ಚಾಲನೆ ಮಾಡುವುದು ಬೇಡ ಅಂತಾ ಕಾರ ಮಾರಾಟ ಮಾಡಿದ್ದು ಇರುತ್ತದೆ. ಆರೋಗ್ಯ ಸರಿಯಾದ ಮೇಲೆ ನನ್ನ ಗಂಡನು ಅವರಿವರ ಹತ್ತಿರ ಕಾರ ಚಾಲನೆ ಮಾಡಿಕೊಂಡಿದ್ದು ಬಂದ ಹಣದಲ್ಲಿ ನಾವೆಲ್ಲರೂ ಸುಖವಾಗಿದ್ದೆವು. ಹಿಗೀದ್ದು ನನ್ನ ಗಂಡ ಮಲ್ಲಣ್ಣಗೌಡ ಈತನು ದಿನಾಂಕ; 06/02/2020 ರಂದು ಬೆಳಗ್ಗೆ 11-00 ಗಂಟೆ ಸುಮಾರಿಗೆ ಶಹಾಪೂರದಲ್ಲಿರುವ ನಮ್ಮ ಅತ್ತೆ, ಮೈದುನ, ನಾದಿನಿ ರವರ ಹತ್ತಿರ ಹೋಗಿ ಸ್ವಲ್ಪ ದಿನಗಳವರೆಗೆ ಅಲ್ಲೆ ಇದ್ದು ಬರುತ್ತೇನೆ ಅಂತಾ ಹೇಳಿ ತನ್ನ ಮೊಬೈಲ ಫೋನ ನಂಬರ. 9008281417 ನೇದ್ದನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದನು. ನನ್ನ ಗಂಡ ಮಲ್ಲಣ್ಣಗೌಡ ಈತನು ಆಗಾಗ ಶಹಾಪೂರಕ್ಕೆ ನಮ್ಮ ಅತ್ತೆ, ಮೈದುನ, ನಾದಿನಿ ರವರ ಹತ್ತಿರ ಹೋಗಿ ಸ್ವಲ್ಪ ದಿನ ಅಲ್ಲೇ ಇದ್ದು ಬರುತ್ತಿದ್ದರಿಂದ ಹೋಗಿ ಮತ್ತೆ ಬರುತ್ತಾನೆ ಅಂತಾ ನಾವು ಸುಮ್ಮನಾದೆವು. ನಂತರ ಸುಮಾರು ಒಂದು ವಾರ ಕಳೆದರು ಕೂಡಾ ನನ್ನ ಗಂಡ ಮಲ್ಲಣ್ಣಗೌಡ ಈತನು ಮನೆಗೆ ಬಂದಿರುವುದಿಲ್ಲ. ಆಗ ನಾನು ನನ್ನ ಮೈದುನನಾದ ವಿಶ್ವನಾಥ ತಂದೆ ಸಿದ್ದಲಿಂಗಪ್ಪಗೌಡ ಈತನಿಗೆ ಫೋನ ಮಾಡಿ ನನ್ನ ಗಂಡನ ಬಗ್ಗೆ ವಿಚಾರಿಸಲು ನನ್ನ ಗಂಡ ಮಲ್ಲಣಗೌಡನು ಇಲ್ಲಿಗೆ ಬಂದಿರುವುದಿಲ್ಲ ಅಂತಾ ತಿಳಿಸಿದನು. ನಂತರ ವಿಷಯ ತಿಳಿದ ನಮ್ಮ ಅತ್ತೆ ಅಮೃತಾಬಾಯಿ, ಮೈದುನ ವಿಶ್ವನಾಥ, ನೇಗೆಣಿ ವೀಣಾ, ನಾದಿನಿ ಫ್ರಭಾವತಿ ರವರು ಹಾಗೂ ನಮ್ಮ ಸೋದರಮಾವನಾದ ಬಸವರಾಜಪ್ಪಗೌಡ ತಂದೆ ರೇವಪ್ಪಗೌಡ ಹಳಿಮನಿ ರವರು ಯಾದಗಿರಿಗೆ ಬಂದಿದ್ದು ಎಲ್ಲರೂ ಕೂಡಿಕೊಂಡು ನನ್ನ ಗಂಡ ಮಲ್ಲಣ್ಣಗೌಡ ಈತನಿಗೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ. ನನ್ನ ಗಂಡ ಮಲ್ಲಣ್ಣಗೌಡ ಈತನು ಶಹಾಪೂರಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಮನೆಗೆ ಬರದೇ ಕಾಣೆಯಾಗಿರುತ್ತಾನೆ. ಆದ್ದರಿಂದ ಎಲ್ಲಾಕಡೆ ವಿಚಾರಿಸಿ ಹುಡುಕಾಡಲಾಗಿ ನನ್ನ ಗಂಡ ಮಲ್ಲಣ್ಣಗೌಡ ಈತನು ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುತ್ತಿದ್ದು  ಕಾಣೆಯಾದ ನನ್ನ ಗಂಡನ ಚಹರೆ ಪಟ್ಟಿ :- ಸಾದ ಕಪ್ಪು ಬಣ್ಣ, ಉದ್ದನೆಯ ಮುಖ,  ಎತ್ತರ 5 ಪೀಟ್ 8 ಇಂಚು ಎತ್ತರ, ಸಧೃಢವಾದ ಮೈಕಟ್ಟು, ಮೈಮೇಲೆ ಬಿಳಿಬಣ್ಣದ ಶರ್ಟ, ಕಪ್ಪು ಬಣ್ಣದ ಪ್ಯಾಂಟ ಧರಿಸಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ನನ್ನ ಗಂಡ  ಮಲ್ಲಣ್ಣಗೌಡ ತಂದೆ ಸಿದ್ದಲಿಂಗಪ್ಪಗೌಡ ಈತನು ಶಹಾಪೂರದ ಗುತ್ತಿಪೇಠದಲ್ಲಿರುವ ಅವರ ತಾಯಿಯವರ ಹತ್ತಿರ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿದ್ದು ಇಲ್ಲಿಯವರೆಗೆ ಬರದೇ ಕಾಣೆಯಾಗಿದ್ದು, ಕಾಣೆಯಾದ ನನ್ನ ಗಂಡನಿಗೆ ಪತ್ತೆ  ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.21/2020 ಕಲಂ. ಮನುಷ್ಯಕಾಣೆಯಾದ ಬಗ್ಗೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ  ಪೊಲೀಸ ಠಾಣೆ ಗುನ್ನೆ ನಂ:- 51/2020. ಕಲಂ 498(ಎ) 324 504 506 ಸಂ 149 ಐ.ಪಿ.ಸಿ.:-     ಇಂದು ದಿನಾಂಕ: 18-02-2020 ರಂದು 17-00 ಪಿ.ಎಮ್.ಕ್ಕೆ ಶ್ರೀ ರಾಮಣ್ಣ ಪಿ.ಸಿ.424 ರವರು ಕೋರ್ಟ ಕರ್ತವ್ಯ ಮುಗಿಸಿಕೊಂಡು ಠಾಣೆಗೆ ಬಂದು  ಒಂದು ಖಾಸಗಿ ಧಾವೆ ನಂ.28/2020 ನೆದ್ದನ್ನು ಹಾಜರು ಪಡಿಸಿದ್ದು ಸದರಿ ಖಾಸಗಿ ಧಾವೆಯ ಸಾರಾಂಶವೇನಂದರೆ ಫಿಯರ್ಾದಿ ಶ್ರೀಮತಿ ಮಂಜುಳಾ ಇವಳಿಗೆ ದಿನಾಂಕ:15-12-2014 ರಂದು ವಿಜಯಕುಮಾರ ತಂದೆ ರಾಮಜೀ ರಾಠೋಡ ರವರೊಂದಿಗೆ ಮದುವೆಯಾಗಿದ್ದು ಇರುತ್ತದೆ. ವೈವಾಹಿಕ ಜೀವನದಲ್ಲಿ ಗಂಡನ ಮನೆಯಲ್ಲಿ ಆರೋಪಿತರಾದ ಫಿಯರ್ಾದಿಯ  ಗಂಡ ವಿಜಯಕುಮಾರ ರಾಠೋಡ ಸಾ: ಬಂಡೆಗುಡ್ಡ ಸೀತಾರಾಮ ತಾಂಡಾ ತಾ: ದೇವದುರ್ಗ ಜಿ: ರಾಯಚೂರ ಇವರಿಗೆ ಅವರ ಗಂಡನಾದ ವಿಜಯಕುಮಾರ  ತಂದೆ ರಾಮಜೀ ರಾಠೋಡ ಡಿ.ಆರ್.ಎಫ್.ಓ ರವರು ಮತ್ತು ಗಂಡನ ತಂದೆ ರಾಮಜೀ ತಂದೆ ಚೆನ್ನಪ್ಪನಾಯ್ಕ ರಾಠೋಡ ,ಅತ್ತೆಯಾದ ರುಕ್ಮಿಣೀ ಗಂಡ ರಾಮಜೀ ರಾಠೋಡ ಗಂಡ ಅಣ್ಣನಾದ ರಾಜು ತಂದೆ ರಾಮಜೀ ರಾಠೋಡ ಮತ್ತು ಗಂಡನ ಚಿಕ್ಕಪ್ಪನ ಮಗನಾದ ಭೀಮಾ ತಂದೆ ಸಂಗಪ್ಪ ರಾಠೋಡ ಇವರೆಲ್ಲರೂ ಕೂಡಿ ಕೌಟುಂಬಿಕ ಕಿರುಕುಳ ನೀಡಿ ಮನೆಯಿಂದ ಹೊರಗೆ ಹಾಕಿದ್ದು ಅದಕ್ಕಾಗಿ ಫಿಯರ್ಾದಿದಾರಳು ತವರು ಮನೆಯಲ್ಲಿ ಬಂದು ವಾಸವಾಗಿದ್ದು ಇರುತ್ತದೆ. 2019 ನೇ ಪೆಬ್ರುವರಿ ತಿಂಗಳಲ್ಲಿ ಹೆರಿಗೆಯಾಗಿದ್ದರಿಂದ ತವರು ಮನೆಯಲ್ಲಿಯೇ ವಾಸವಾಗಿದ್ದು. ಗಂಡನ ಮನೆಯವರು ಮರಳಿ ಕರೆದುಕೊಂಡು ಹೋಗಿರುವುದಿಲ್ಲ. ಮೂರು ತಿಂಗಳಾದ ನಂತರ ಗಂಡನ ಮಗೆಗೆ ಹೋದರೆ ಅವರು ಮನೆಯಲ್ಲಿ ಸೇರಿಸಿಕೊಂಡಿರುವುದಿಲ್ಲ. ಅದಕ್ಕಾಗಿ ಫಿಯರ್ಾದಿಯು ವಕೀಲರ ಮುಖಾಂತರ ತಿಳುವಳಿಕೆ ನೊಟೀಸ ಕಳುಹಿಸಿ ಘನ ನ್ಯಾಯಾಲಯದಲ್ಲಿ ಉಪಜೀವನಕ್ಕಾಗಿ ಅಜರ್ಿ ಹಾಕಿದ್ದು ಇರುತ್ತದೆ. ಈ ವಿಷಯ ತಿಳಿದ ಆರೋಪಿತರೆಲ್ಲರೂ ಕೂಡಿ ದಿನಾಂಕ 12-01-2020 ರಂದು ಸಂಜೆ 5:00 ಗಂಟೆಗೆ ಆರೋಪಿ 01, 3  ರಿಂದ 5 ರವರು ಫಿಯರ್ಾದಿಯ ತವರು ಮನೆಗೆ ಬಂದು ಆರೋಪಿತರು ನಿನ್ನ ವಿರುದ್ಧ ಡೈವರ್ಸ ಅಜರ್ಿ ಹಾಕಿದ್ದು ನೀನು ಒಪ್ಪಿಗೆ ಕೊಡು  ಸಹಿ ಮಾಡು ಎಂದು ಒತ್ತಾಯಿಸಿ ಫಿಯರ್ಾದಿ ಒಪ್ಪದಿದ್ದಕ್ಕೆ ಆರೋಪಿ ನಂ. 01 ರವರು ತನ್ನ ಪೋನಿನಿಂದ ತನ್ನ ತಂದೆಗೆ ಫೋನ ಹಚ್ಚಿ ಫಿಯರ್ಾದಿಗೆ ಕೊಟ್ಟಿದ್ದು ಆಗ ಆರೋಪಿ ನಂ. 01 ರವರ ತಂದೆ ರಾಮಜೀ ಇವರು ಬೋಸಡಿ ನೀನು ನನ್ನ ಮಗನಿಗೆ ಡೈವರ್ಸ ಕೊಡು ಇಲ್ಲದಿದ್ದರೆ ನೋಡು ನಾನು ಪೊಲೀಸ ಸಬ ಇನ್ಸಪೆಕ್ಟರ ಇದ್ದೇನೆ. ನಿಮ್ಮೆಲ್ಲರ ಮೇಲೆ ಸುಳ್ಳು ಕೇಸ ಹಾಕಿ ಒದ್ದ ಒಳಗೆ ಹಾಕಿಸುತ್ತೇನೆ ಅಂತಾ  ಹೆದರಿಸಿ ಅಲ್ಲದೇ ಆರೋಪಿ ನಂ 4 ರವರು ಕೂಡ ಹೆದರಿಸಿದ್ದು ಇರುತ್ತದೆ. ಆರೋಪಿ ನಂ. 01 ರವರು ಹೊಡೆದು ತಳ್ಳಿ ಜೀವದ ಬೆದರಿಕೆ ಹಾಕಿರುತ್ತಾರೆ ಆ ಸಮಯಕ್ಕೆ ಫಿಯರ್ಾದಿಯ ತಂದೆ ಹಾಗೂ ಮಾವನವರು ಬಂದು ಬಿಡಿಸಿಕೊಂಡಿದ್ದು ಇರುತ್ತದೆ ಹೀಗೆ ಫಿಯರ್ಾದಿಗೆ ಕೌಟುಂಬಿಕ ಕಿರುಕುಳ ನೀಡಿರುತ್ತಾರೆ ಅಂತಾ ಇತ್ಯಾದಿ ಇದ್ದ ಖಾಸಗಿ ಧಾವೆಯನ್ನು ಸ್ವೀಕರಿಸಿಕೊಂಡು ಫಿಯರ್ಾದಿಯ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ.51/2020 ಕಲಂ 498 (ಎ) 324, 504, 506 , ಸಂಗಡ 149 ಐ.ಪಿ.ಸಿ.ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು                       
         
ಗೊಗಿ ಪೊಲೀಸ ಠಾಣೆ ಗುನ್ನೆ ನಂ:- 10/2020 ಕಲಂ, 87 ಕೆ.ಪಿ ಆ್ಯಕ್ಟ್:- ದಿನಾಂಕ 18/02/2020 ರಂದು 05.20 ಪಿಎಮ್ ಕ್ಕೆ ಆರೋಪಿತರೆಲ್ಲರೂ ಗೋಗಿ ಕೆ ಗ್ರಾಮದ ಕೆರಿ ಒಡ್ಡಿನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ಜೂಜಾಟ ಆಡುತ್ತಿದ್ದಾಗ ಮಾನ್ಯ ಸೋಮಲಿಂಗ ಒಡೆಯರ ಪಿಎಸ್ಐ ಗೋಗಿ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 04 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 9600=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು 05.30 ಪಿಎಮ್ ದಿಂದ 06.30 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡು 07.10 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರಪಡಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 08.15 ಪಿಎಂ ಕ್ಕೆ ಠಾಣೆ ಗುನ್ನೆ ನಂ 10/2020 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 29/2020 ಕಲಂ 379 ಐಪಿಸಿ:- ಇಂದು ದಿನಾಂಕ 18.02.2020 ರಂದು ಸಾಯಂಕಾಲ 7.30 ಪಿ.ಎಂ ಕ್ಕೆ ಪಿರ್ಯಾಧಿಯು ಸಿಬ್ಬಂದಿ ಮತ್ತು ಇಬ್ಬರೂ ಪಂಚರ ಸಮಕ್ಷಮ ಬೂದುರು ಕ್ರಾಸ ಹತ್ತಿರ ಅಕ್ರಮವಾಗಿ ಮರಳಿ ತುಂಬಿಕೊಂಡು ಗುರುಮಠಕಲ ಪಟ್ಟಣಕ್ಕೆ ಮಾರಾಟ ಮಾಡಲು ಬರುತ್ತಿದ್ದ ಟ್ರ್ಯಾಕ್ಟರ ನಂ. ಎಪಿ-36-ಎಪಿ-2350 ಟ್ರಾಲಿ ನಂ. ಕೆಎ-36-ಎ9609 ನೆದ್ದರ ಮೆಲೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು 80-100 ಮೀಟರ ಅಂತರದಲ್ಲಿ ನೀಲ್ಲಿಸಿ ಓಡಿ ಹೋಗಿದ್ದು ಸದರಿ ಟ್ರ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಓಡಿ ಹೋದ ಚಾಲಕನ ಮೇಲೆ ಕಾನೂನು ಕ್ರಮಕ್ಕಾಗಿ ವರದಿ ನೀಡಿದ್ದು ಇರುತ್ತದೆ.
                                      
ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 09/2020 ಕಲಂ: 79,80 ಕೆ.ಪಿ ಯಾಕ್ಟ್:- ದಿನಾಂಕ:18/02/2020 ರಂದು 8:20 ಪಿ.ಎಂ ಕ್ಕೆ ಶ್ರೀ ವೆಂಕಟೇಶ ಡಿ.ಎಸ್.ಪಿ ಸಾಹೇಬರು ಸುರಪೂರ ರವರು ಠಾಣೆಗೆ ಹಾಜರಾಗಿ ಜ್ಞಾಫನ ಪತ್ರ ನೀಡಿದ್ದು ಇದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಪೂರ ಗ್ರಾಮದ ಯಲ್ಲಾಲಿಂಗ ಮಠದ ಹಿಂದಿನ ಕೆ.ಬಿ.ಜೆಎನ್.ಎಲ್ ಜಾಗೆಯಲ್ಲಿನ ಕಟ್ಟಿಸಿರುವ ಬಸನಗೌಡ ತಂದೆ ಹಣಮಗೌಡ ಗೌಡರ ಇವರ ಜನತಾ ಮನೆಯಲ್ಲಿ ಇಸ್ಪೆಟ ಜೂಜಾಟ ಆಡುತ್ತಿದ್ದಾರೆ ಖಚಿತ ಬಾತ್ಮಿ ಬಂದ ಮೇರೆಗೆ ಜೂಜಾಟ ಆಡುವವರ ಮೇಲೆ ಎಪ್.ಐ ಆರ್ ದಾಖಲಿಸಲು ದಾಳಿಮಾಡುವ ಕುರಿತು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು ಕಾರಣ ನೀವು ಎಪ್ ಐ ಆರ್ ದಾಖಲಿಸಲು ಸೂಚಿಸಿದ ಅಂತಾ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 09/2020 ಕಲಂ 79,80, ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ. 
        ನಂತರ ಮಾನ್ಯ ಡಿ ಎಸ್ ಪಿ ಸಾಹೇಬರು 9:50 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದು 12 ಜನ ಆರೋಪಿತರು ನಗದು ಹಣ 71620/- ರೂ, 52 ಇಸ್ಪೆಟ ಎಲೆಗಳು ಹಾಗೂ ಎರಡು ಬರಕಾಗಳನ್ನು ಜಪ್ತುಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಫನ ಪತ್ರ ನೀಡಿದ್ದು ಇರುತ್ತದೆ. 
ಆರೋಪಿತರ ಹೆಸರು ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 
1) ಯಮನಪ್ಪ ತಂದೆ ಚಂದಪ್ಪ ಗೌಡರ ವ:40 ವರ್ಷ ಸಾ:ನಾರಾಯಣಪೂರ 
2) ಹುಸೇನ ತಂದೆ ಇಬ್ರಾಹಿಂ ಮುಲ್ಲಾ ವ:26 ವರ್ಷ ಸಾ: ನಾರಾಯಣಪೂರ 
3) ಯಮನೂರಿ ತಂದೆ ಬೀರಪ್ಪ ಬಿರಾದಾರ ವ: 30ವರ್ಷ ಸಾ:ನಾರಾಯಣಪೂರ 
4)ನೀಲಕಂಠ ತಂದೆ ಈಶ್ವರಪ್ಪ ಕೊಡೆಕಲ್ಲ ವ:38 ವರ್ಷ ಸಾ: ನಾರಾಯಣಪೂರ 
5)ಸಂತೋಷ ತಂದೆ ಸಂಗಪ್ಪ ಪೂಜಾರಿ ವ:23 ವರ್ಷ ಸಾ:ನಾರಾಯಣಪೂರ 
6)ರಮೇಶ ತಂದೆ ಗಂಗಪ್ಪ ಚವ್ಹಾಣ ವ:32 ವರ್ಷ ಸಾ: ಬಸರಗೀಡದ ತಾಂಡಾ 
7) ವಿಶ್ವನಾಥ ತಂದೆ ಯಲ್ಲಪ್ಪ ಭಜಂತ್ರಿ ವ:25 ವರ್ಷ ಸಾ:ನಾಲತವಾಡ 
8) ರಮೇಶ ತಂದೆ ಚಂದಪ್ಪ ಗೌಡರ ವ:35 ವರ್ಷ ಸಾ:ನಾರಾಯಣಪೂರ 
9) ರವಿ ತಂದೆ ಛತ್ರಪ್ಪ ಜಾದವ ವ:38 ವರ್ಷ ಸಾ: ಜಂಗಿರಾಂಪೂರ ತಾಂಡಾ 
10) ಬಸವರಾಜ ತಂದೆ ಸುಭಾಶ್ ಗಡ್ಡಿ ವ:22 ವರ್ಷ ಸಾ: ನಾಲತವಾಡ 
11) ವೆಂಕಟೇಶ ತಂದೆ ನಿಂಗಪ್ಪ ಹಾಲಬಾವಿ ವ:22 ವರ್ಷ ಸಾ: ನಾರಾಯಣಪೂರ 
12) ಅರುಣಕುಮಾರ ತಂದೆ ಶರಣಗೌಡ ನಾಡಗೌಡರ ವ:29 ವರ್ಷ ಸಾ: ಹಿರೇಜಾವೂರ 
ಮೂರು ಜನ ಆರೋಪಿತರು ಓಡಿಹೋಗಿರುತ್ತಾರೆ ಅವರ ಹೆಸರು ಈ ಕೇಳಗಿನಂತೆ ಇರುತ್ತದೆ 
1).ಆಂಜನೇಯ ತಂದೆ ಹಣಮಂತ ಗೊಳಸಂಗಿ ವ:35 ವರ್ಷ ಜಾ:ಹಿಂದೂ ಬೇಡರ, 
2). ಶಿವಪ್ಪ ತಂದೆ ಬೀರಪ್ಪ ಬಿರಾದಾರ ವ:36 ವರ್ಷ ಜಾ:ಹಿಂದು ಕುರಬರ, 
3).ಬಸವರಾಜ ತಂದೆ ನಾಗಪ್ಪ ದೇಸಾಯಿ ವ: 43ವರ್ಷ ಜಾ:ಹಿಂದೂ ಬೇಡರ ಸಾ:ಎಲ್ಲರೂ ನಾರಾಯಣಪೂರ




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!