ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/02/2020

By blogger on ಸೋಮವಾರ, ಫೆಬ್ರವರಿ 17, 2020


                                ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 17/02/2020

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 16/2020 ಕಲಂ: 302 ಐಪಿಸಿ:- ಇಂದು ದಿನಾಂಕ: 17/02/2020 ರಂದು 2-15 ಪಿ.ಎಮ್ ಕ್ಕೆ ಜಿ.ಜಿ.ಹೆಚ್ ಯಾದಗಿರಿ ಯಿಂದ ಡೆತ್ ಎಮ್.ಎಲ್.ಸಿ ಮಾಹಿತಿ ಬಂದಿದ್ದು ನಾನು 2-45 ಪಿ.ಎಮ್ ಕ್ಕೆ ಜಿ.ಜಿ.ಹೆಚ್ ಯಾದಗಿರಕ್ಕೆ ಬೇಟಿನೀಡಿ ಡೆತ್ ಎಮ್.ಎಲ್.ಸಿ ಸ್ವೀಕರಿಸಿಕೊಂಡು ಮೃತನ ಸಂಬಂಧಿಕರಿಗೆ ವಿಚಾರಿಸಿದಾಗ ಶ್ರೀ ಶಿವರಾಜ ತಂದೆ ಸಿದ್ದಯ್ಯ ಗೋಡಿಹಾಳ ವ|| 35 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಕಾಡಂಗೇರಾ(ಬಿ) ತಾ|| ವಡಗೇರಾ ಜಿ|| ಯಾದಗಿರಿ ಇವರು ಕನ್ನಡದಲ್ಲಿ ಕಂಪ್ಯೂಟರ್ ಟೈಪ್ ಮಾಡಿದ ಫಿಯರ್ಾದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ ನಾವು 4 ಜನ ಗಂಡು ಮಕ್ಕಳಿದ್ದು ನಾನು ಹಿರಿಯವನಾಗಿರುತ್ತೇನೆ. ರಂಗಪ್ಪ, ಮಲ್ಲಪ್ಪ ಮತ್ತು ನಾಗರಾಜ ಹೆಸರಿನ 3 ಜನ ತಮ್ಮಂದಿರು ಇರುತ್ತಾರೆ. ರಂಗಪ್ಪ ಇವನು ಮೂಗನಿದ್ದು, ಮಲ್ಲಪ್ಪನು ಒಕ್ಕಲುತನ ಮಾಡಿಕೊಂಡಿದ್ದು, ನಾಗರಾಜನು ನಮ್ಮೂರಲ್ಲಿ ಚಹಾ ಡಬ್ಬಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಾನೆ. ನಾಗರಾಜನಿಗೆ ಇನ್ನು ಮದುವೆ ಆಗಿರುವುದಿಲ್ಲ. ಹೀಗಿದ್ದು ನಮ್ಮ ಅಣ್ಣ ತಮ್ಮಕಿಯ ಸಾಬಣ್ಣ ತಂದೆ ಮಲ್ಲಯ್ಯ ಗೋಡಿಹಾಳ ಇವರ ಮನೆಯು ನಮ್ಮ ಮನೆಯ ಪಕ್ಕದಲ್ಲಿ ಇರುತ್ತದೆ. ಸಾಬಣ್ಣನು ಆಗಾಗ ವಿನಾಕಾರಣ ನಮ್ಮೊಂದಿಗೆ ಜಗಳ ಮಾಡುತ್ತಿದ್ದನು. ನಾವು ಮನೆಯ ಮುಂದೆ ಅಡ್ಡಾಡಿದರೆ, ಕಸ ಚಲ್ಲಿದರೆ ಸಾಬಣ್ಣನು ತಕರಾರುಮಾಡಿ ಜಗಳಕ್ಕೆ ಬರುತ್ತಿದ್ದನು. ಸಾಬಣ್ಣನು ಹೆಚ್ಚಾಗಿ ನಮ್ಮ ತಮ್ಮ ನಾಗರಾಜನಿಗೆ ನೋಡಿ ಬೈಯುವದು, ಕ್ಯಾಕರಿಸಿ ಉಗಿಯುವುದು ಮಾಡುತ್ತಾ ಮಗನೆ ನಿನಗೆ ಖಲಾಸ್ ಮಾಡುತ್ತೇನೆ ಎಂದು ಜೀವ ಭಯ ಹಾಕುತ್ತಿದ್ದನು. ಇಂದು ದಿನಾಂಕ: 17/02/2020 ರಂದು ನನ್ನ ತಾಯಿ ದೇವಿಂದ್ರಮ್ಮ ಮತ್ತು ನಮ್ಮ ತಮ್ಮ ಮಲ್ಲಪ್ಪನ ಹೆಂಡತಿ ಮಂಜಮ್ಮ ಇಬ್ಬರು ವಡಗೇರಾ ಸಮಕ್ಕೆ ಹೋಗಿದ್ದರು. ಮಲ್ಲಪ್ಪನು ಹೊಲಕ್ಕೆ ಹೋಗಿದ್ದನು. ನಾನು ಊರಲ್ಲಿಯೇ ಇದ್ದೆನು. ಮದ್ಯಾಹ್ನ 01.00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರ ಸಿದ್ದಪ್ಪ ಕಾವಲೇರ ಇಬ್ಬರು ನಮ್ಮೂರ ಹುಚ್ಚಪ್ಪನ ಹೋಟೆಲ ಹತ್ತಿರ ನಿಂತಿದ್ದಾಗ ನಮ್ಮೂರ ತಿಪ್ಪಣ್ಣ ತಂದೆ ನಾಗಪ್ಪ ಪಂಚಾಯತಿ ಈತನು ಓಡಿ ಬಂದು ನಿನ್ನ ತಮ್ಮ ನಾಗರಾಜನಿಗೆ ಸಾಬಣ್ಣನು ಕೊಡಲಿಯಿಂದ ತೆಲೆಗೆ ಹೊಡೆದಿದ್ದಾನೆ ನೀವು ಬನ್ನಿ ಅಂತಾ ಕರೆದಾಗ ನಾನು ಮತ್ತು ಸಿದ್ದಪ್ಪ ಇಬ್ಬರು ಓಡಿ ಬಂದು ನೋಡಲಾಗಿ ನನ್ನ ತಮ್ಮ ನಾಗರಾಜನು ನಮ್ಮ ಮನೆಯ ಮುಂದೆ ಹಾಕಿದ ಪತ್ರಾಸ್ ಕೆಳಗೆ ಮಂಚದ ಮೇಲೆ ಮಲಗಿಕೊಂಡವನಿಗೆ ಸಾಬಣ್ಣ ತಂದೆ ಮಲ್ಲಯ್ಯ ಗೋಡಿಹಾಳ ಸಾ|| ಕಾಡಂಗೇರಾ(ಬಿ) ಈತನು ಕೊಡಲಿ ತುಂಬಿನಿಂದ ಬಲಗಡೆ ತಲೆಗೆ, ಮೆಲಕಿಗೆ ಮತ್ತು ಬಲಕಿವಿಯ ಪಕ್ಕ ಕಪಾಳಕ್ಕೆ ಹೊಡೆದು ಭಾರೀ ಗುಪ್ತ ಮತ್ತು ರಕ್ತಗಾಯ ಮಾಡಿದ್ದನು. ನನ್ನ ತಮ್ಮನ ಎರಡು ಕಿವಿಗಳಿಂದ ರಕ್ತ ಬರುತ್ತಿತ್ತು. ಅಲ್ಲಿಯೇ ಇದ್ದ ತಿಪ್ಪಣ್ಣ ಮತ್ತು ದೇವಪ್ಪ ಇವರು ತಿಳಿಸಿದ್ದೇನೆಂದರೆ, ಸಾಬಣ್ಣನು ಕೈಯಲ್ಲಿ ಕೊಡಲಿ ಹಿಡಿದುಕೊಂಡು ಬಂದು ಈ ಸೂಳೆ ಮಗ ನಾಗರಾಜನದು ಬಹಾಳ ಆಗ್ಯಾದ ಬ್ಯಾಡಂದರು ನಮ್ಮ ಮನೆಯ ಮುಂದೆ ಅಡ್ಡಾಡುತ್ತಾನೆ ಮತ್ತು ನಾನು ಕೊಡಬೇಕಾದ ಚಹಾ ಬಾಕಿ ಹಣ ಕೊಡು ಎಂದು ಧಮಕಿ ಹಾಕಿ ದಿನಾಲು ಕಿರಿಕಿರಿ ಮಾಡುತ್ತಾನೆ ಇವತ್ತು ಈ ಸೂಳೆ ಮಗನಿಗೆ ಮುಗಿಸಿಯೇ ಬಿಡುತ್ತೇನೆ ಎಂದು ಒದರಾಡಿ ಕೊಡಲಿ ತುಂಬಿನಿಂದ ಮಲಗಿಕೊಂಡಿದ್ದ ನಾಗರಾಜನ ಬಲಗಡೆ ತಲೆಗೆ, ಮೆಲಕಿಗೆ ಮತ್ತು ಬಲಕಿವಿಯ ಪಕ್ಕ ಕಪಾಳಕ್ಕೆ ಹೊಡೆದು ಭಾರೀ ಗುಪ್ತ ಮತ್ತು ರಕ್ತ ಗಾಯ ಮಾಡಿದನು ಅಂತಾ ತಿಳಿಸಿದರು. ನಂತರ ನಾನು ಮತ್ತು ಸಿದ್ದಪ್ಪ ಇಬ್ಬರು ಕೂಡಿಕೊಂಡು ನನ್ನ ತಮ್ಮ ನಾಗರಾಜನಿಗೆ ನಮ್ಮೂರ ಮೋನಪ್ಪ ಈತನ ಆಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಗೆ ಬಂದಿದ್ದು ಇಲ್ಲಿನ ವೈದ್ಯಾಧಿಕಾರಿಗಳು ನೋಡಿ ನನ್ನ ತಮ್ಮ ನಾಗರಾಜನು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ಆಗ ಸಮಯ ಮದ್ಯಾಹ್ನ 2 ಗಂಟೆಯಾಗಿತ್ತು. ಕಾರಣ ಮನೆಯ ಮುಂದೆ ಅಡ್ಡಾಡುವುದು ಮಾಡುತ್ತಿದ್ದಾನೆ ಮತ್ತು ನನಗೆ ಹೋಟೆಲ ಚಹಾ ಬಾಕಿ ಕೇಳುತ್ತಾನೆ ಎಂದು ಅದೇ ಒಂದು ವೈಶಮ್ಯದಿಂದ ಸಾಬಣ್ಣನು ನನ್ನ ತಮ್ಮ ನಾಗರಾಜನಿಗೆ ಕೊಡಲಿಯ ತುಂಬಿನಿಂದ ಹೊಡೆದು ಕೊಲೆ ಮಾಡಿರುತ್ತಾನೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಫಿಯರ್ಾದಿಯನ್ನು 3-45 ಪಿ.ಎಮ್ ಕ್ಕೆ ಸ್ವೀಕೃತ ಮಾಡಿಕೊಂಡು ಅಲ್ಲಿಂದ ಹೊರಟು 4-15 ಪಿ.ಎಮ್ ಕ್ಕೆ ವಡಗೇರಾ ಪೊಲೀಸ್ ಠಾಣೆಗೆ ಬಂದು ಸದರಿ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 16/2020 ಕಲಂ: 302 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 


ಶೊರಾಪೂರ ಪೊಲೀಸ ಠಾಣೆ ಗುನ್ನೆ ನಂ:- 42/2020 ಕಲಂ 323, 324, 504, 506 ಸಂಗಡ 34 ಐಪಿಸಿ:- ದಿನಾಂಕ:17/02/2020 ರಂದು 2:30 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗಪ್ರಕಾಶತಂದೆಕರಿಬಸಪ್ಪಕೋರಿ ವ|| 30 ವರ್ಷಜಾ|| ಮಾದಿಗ ಉ|| ಕೂಲಿಕೆಲಸ ಸಾ|| ಸೂಗುರತಾ|| ಸುರಪೂರಇವರದೂರುಅಜರ್ಿ ಸಾರಾಂಶವೇನೆಂದರೆ, ದಿನಾಂಕ:21/02/2020 ರಂದು ನಮ್ಮೂರ ಪಕ್ಕದ ಬೇವಿನಾಳ ಗ್ರಾಮದಲ್ಲಿ ಶ್ರೀ ಹುಲಿಗಮ್ಮದೇವಿಯಜಾತ್ರೆಇದ್ದುದರಿಂದ, ಬೆವಿನಾಳ ಗ್ರಾಮದವರು ಪ್ರತಿ ವರ್ಷದಂತೆ ನಮ್ಮೂರ ಸಿಮಾಂತರದ ಕೃಷ್ಣಾನದಿಯಿಂದದೇವಿಯಕೊಂಡದಕಟ್ಟಿಗೆಯನ್ನುಎತ್ತಿನ ಬಂಡಿಯಲ್ಲಿತೆಗೆದುಕೊಂಡು ನಮ್ಮೂರಒಣಿಯಿಂದ ಪುಜೆ ಮಾಡಿಸಿಕೊಂಡು ಹೊಗುವ ಸಮಯದಲ್ಲಿ ನಮ್ಮೂರ ನಮ್ಮ ಸಮಾಜದವರು ಹಲಗಿ ಬಡೆಯುತ್ತಾ ಮೆರವಣಿಗೆ ಮಾಡಿ ನಮ್ಮೂರ ದಾಟಿಸಿ ಕಳುಹಿಸುತ್ತಿದ್ದೇವು. ಹಿಗಿದ್ದು ದಿನಾಂಕ:16/02/2020 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನಾನು ಮತ್ತು ನಮ್ಮಅಣ್ಣತಮ್ಮಕಿಯಾದ ಬಸವರಾಜತಂದೆ ನಿಂಗಪ್ಪತೋಟದ, ಭಾಗಪ್ಪತಂದೆಆದಪ್ಪ ಹೊಸಮನಿ ಮೂವರು ನಮ್ಮೂರಡಾ|| ಅಂಬೇಡ್ಕರ ಸಮುದಾಯ ಭವನ ಹತ್ತಿರಇರುವ ನಮ್ಮ ಪಾನ ಶಾಪ್ಅಂಗಡಿಯ ಮುಂದೆಇರುವಾಗ ಬೇವಿನಾಳ ಗ್ರಾಮದವರಾದ 1) ಬಸನಗೌಡತಂದೆ ಭೀಮನಗೌಡ ಮಾಲಿ ಪಾಟೀಲ್ಜಾ|| ಬೇಡರು 2) ಹಳ್ಳೇಪ್ಪ ತಂದೆ ಬಸವರಾಜಜಾ|| ಬೇಡರು 3) ಸೋಪಣ್ಣತಂದೆರುದ್ರಪ್ಪಜಾ|| ಬೇಡರು, ಮೂವರುಕೂಡಿ ನಮ್ಮಅಂಗಡಿಗೆ ಬಂದು ಸೋಪು ಕರಿದಿ ಮಾಡಿದ್ದು, ನಾನು ಹಣ ಪಡೆದುಕೊಂಡಾಗ ಮೂವರು ನಮ್ಮೂರಿಲ್ಲಿಕಮ್ಮಿರೇಟನಲ್ಲಿಕೊಡುತ್ತಾರೆ ನೀವು ಹೆಚ್ಚಿಗೆ ತಗೆದುಕೊಳ್ಳುತ್ತಿರಿ ಸೂಳೆ ಮಗನೆ ಅಂತಾಅವಾಚ್ಯವಾಗಿ ಬೈದಾಗ ನಾನು ನಮಗೆ ಅವಾಚ್ಯವಾಗಿ ಬೈಯ್ಯ ಬೇಡಿರಿಅಂತಾ ಹೇಳಿದ್ದಕ್ಕೆ ಅವರು ನಿಮಗೆ ಸೊಕ್ಕು ಬಹಳ ಬಂದಿದೆ ಮಕ್ಕಳೆ ಅಂತಾಅಂದವರೆಅವರಲ್ಲಿಯ ಬಸನಗೌಡಇತನು ನನ್ನಎದೆಯ ಮೇಲಿನ ಅಂಗಿ ಹಿಡಿದುಅಲ್ಲೆ ಬಿದ್ದಒಂದುಕಟ್ಟಿಗೆಯನ್ನುತಗೆದುಕೊಂಡವನೇ ನನ್ನ ಬೆನ್ನಿಗೆಎಡಗೈ ಮುಂಗೈ ಕೆಳಗೆ, ಹೊಡೆದುಗುಪ್ತಗಾಯ ಮಾಡಿ ಹೊಡೆಯುತ್ತಿರುವಾಗಅಲ್ಲೆಇದ್ದ ಬಸವರಾಜತೋಟದ, ಭಾಗಪ್ಪ ಹೊಸಮನಿ ಇಬ್ಬರು ಜಗಳ ಬಿಡಿಸಲು ಬಂದಾಗ ಬಸವರಾಜನಿಗೆ ಹೆಳ್ಳೆಪ್ಪ ಇತನುಒಂದು ಬಡಿಗೆಯಿಂದ ಸೊಂಟದ ಹತ್ತಿರ, ಬಲ ಬುಜಕ್ಕೆ, ಬಲಗೈ ಹಸ್ತದ ಮೇಲೆ ಹೊಡೆದು ಗುಪ್ತ ಮಾಡಿದನು. ಭಾಗಪ್ಪನಿಗೆ ಸೋಪಣ್ಣಇತನು ಸೊಂಟಕ್ಕೆ, ತುಟಿಗೆತರಚಿದಗಾಯ ಮಾಡಿ ನಮ್ಮ ಮೂವರಿಗೂ ಹೊಡೆ ಬಡೆ ಮಾಡುತ್ತಿರುವಾಗ ನಮ್ಮಅಣ್ಣನಾದರಾಮಪ್ಪತಂದೆ ಹಣಮಂತಕೊರಿ, ದೊಡ್ಡಪ್ಪನ ಮಗನಾದರಮೇಶತಂದೆ ಬಸಪ್ಪ ಪುಜಾರಿ, ಕಾಕನ ಮಗನಾದ ಹುಲಿಗೆಪ್ಪತಂದೆ ಮಲ್ಲಪ್ಪ ಹೊಸಮನಿ ಇವರು ಬಂದು ಜಗಳ ಬಿಡಿಸಿದರು. ಆಗ ಅವರುಇನ್ನೊಮ್ಮ ನಮ್ಮತಂಟೆಗೆ ಬಂದರೆಜೀವ ಸಹಿತ ಬಿಡುವದಿಲ್ಲ ಅಂತಾಜೀವ ಬೇದರಿಕೆ ಹೊದರು. ನಂತರ ನಾವು ಸುರಪೂರ ಸರಕಾರಿಆಸ್ಪತ್ರೆಗೆ ಬಂದುಚಿಕಿತ್ಸೆ ಪಡೆದುಕೊಂಡು ಮರಳಿ ಊರಿಗೆ ಹೊಗಿ ನಮ್ಮದೊಡ್ಡಪ್ಪನಾದ ಬಸಪ್ಪ ಪುಜಾರಿ, ಕಾಕನಾದ ಮಲ್ಲಪ್ಪ ಹೊಸಮನಿ ಇವರಿಗೆ ವಿಚಾರಿಸಿ ಇಂದುತಡವಾಗಿಠಾಣೆಗೆ ಬಂದುದೂರುಅಜರ್ಿ ನೀಡಿದ್ದುಇರುತ್ತದೆ. ಕಾರಣ ನಮಗೆ ಹೊಡೆ ಬಡೆ ಮಾಡಿದ 1) ಬಸನಗೌಡತಂದೆ ಭೀಮನಗೌಡ ಮಾಲಿ ಪಾಟೀಲ್ಜಾ|| ಬೇಡರು 2) ಹಳ್ಳೇಪ್ಪ ತಂದೆ ಬಸವರಾಜಜಾ|| ಬೇಡರು 3) ಸೋಪಣ್ಣತಂದೆರುದ್ರಪ್ಪಜಾ|| ಬೇಡರು ಇವರುಗಳ ಮೇಲೆ ಕಾನೂನು ಕ್ರಮಜರುಗಿಸಲು ವಿನಂತಿ.ಅಂತಾಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆ ನಂ 42/2020 ಕಲಂ: 323, 324, 504, 506 ಸಂ. 34 ಐಪಿಸಿ ನೇದ್ದರಅಡಿಯಲ್ಲಿ ಪ್ರಕರಣದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಶೊರಾಪೂರ ಪೊಲೀಸ ಠಾಣೆ ಗುನ್ನೆ ನಂ:- 43/2020 ಕಲಂ 323, 324, 504, 506 ಸಂಗಡ 34 ಐಪಿಸಿ:- ಇಂದು ದಿನಾಂಕ:17/02/2020 ರಂದು 2:30 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗಬಸವರಾಜತಂದೆ ಸೋಮಯ್ಯ ಮಾಲಿಪಾಟೀಲ್ ವ|| 42 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಬೇವಿನಾಳ ತಾ|| ಸುರಪೂರಇವರದೂರುಅಜರ್ಿ ಸಾರಾಂಶವೇನೆಂದರೆ, ದಿನಾಂಕ:21/02/2020 ರಂದು ನಮ್ಮೂರಲ್ಲಿ ಶ್ರೀ ಹುಲಿಗಮ್ಮದೇವಿಯಜಾತ್ರೆಜರುಗುತ್ತಿದ್ದು ಸದರಿಜಾತೆಗೆ ಪ್ರತಿ ವರ್ಷದ ನಿಯಮದಂತೆ ಈ ವರ್ಷವುಕೂಡಾಜಾಲಹಳ್ಳಿಯ ಕೃಷ್ಣಾನದಿ ಮಾರ್ಗವಾಗಿ 3 ಎತ್ತಿನ ಬಂಡಿಗಳಲ್ಲಿ ಮೆರವಣಿಗೆ ಸಹಿತಾ ಬಾಜಾಬಜಂತ್ರಿಯೊಂದಿಗೆ ಸೂಗುರ ಮಾರ್ಗವಾಗಿ ಬೇವಿನಾಳ ಎಸ್.ಹೆಚ್ಗ್ರಾಮಕ್ಕೆ ಹೊಗುತಿದ್ದುಇರುತ್ತದೆ.
ಹಿಗಿದ್ದು ದಿನಾಂಕ:16/02/2020 ರಂದು ಸಾಯಂಕಾಲ 6:45 ಗಂಟೆ ಸುಮಾರಿಗೆ ಸೂಗುರುಗ್ರಾಮದ ಹರಿಜನ ವಾರ್ಡದಊಟಿ ಬಾಲಪ್ಪನ ಮನೆಯ ಮುಂದೆ ನಾನು ಮತ್ತು ನಮ್ಮಅಣ್ಣನ ಮಗನಾದ ಬಸನಗೌಡತಂದೆ ಭೀಮನಗೌಡ ಮಾಲಿ ಪಾಟೀಲ್ಜಾ|| ಬೇಡರು, ನಮ್ಮ ಅಳಿಯನಾದ ಹಳ್ಳೇಪ್ಪ ತಂದೆ ಬಸವರಾಜಜಾ|| ಬೇಡರು, ನಮ್ಮಗ್ರಾಮದ ಸೋಪಣ್ಣತಂದೆರುದ್ರಪ್ಪಜಾ|| ಬೇಡರು, ಎಲ್ಲರು ನಿಂತಿರುವಾಗ ಸೂಗುರುಗ್ರಾಮದವರಾದ 1) ರಾಮಪ್ಪತಂದೆ ಹಣಮಂತಕುರಿಜಾ|| ಮಾದಿಗ, 2) ರಾಮಪ್ಪತಂದೆ ಬಸಪ್ಪ ಪುಜಾರಿಜಾ|| ಮಾದಿಗ, 3) ಹಣಮಂತತಂದೆರಾಮಪ್ಪಯಾದಗಿರಿ, 4) ಹೊಳೆಪ್ಪ ತಂದೆ ಹಣಮಂತ ಹೊಸಮನಿ ಇವರೆಲ್ಲರುಕೂಡಿ ನಮ್ಮ ಹತ್ತಿರ ಬಂದವರೇ ನಮ್ಮಗ್ರಾಮದ ಪ್ರಕಾಶನ ಸಂಗಡತಕಾರಾರು ಮಾಡಿರುತ್ತಿರಿಅಂತಾ ಸುಳೇ ಮಕ್ಕಳೇ ಅಂತಾಅವಾಚ್ಯವಾಗಿ ಬೈಯುತ್ತಿರುವಾಗ ನಾನು ಅವರಿಗೆ ಏಕೆ ಬೈಯುತ್ತಿರಿಅಂತಾ ಕೇಳದ್ದಕ್ಕೆ ಅವರೆಲ್ಲರು ನಿಂದು ಬಹಳ ಆಗಿದೆ ನೀನೇನು ಕೇಳುತ್ತಿ ಸುಳೇ ಮಗನೆ ಅಂತಾಅವಾಚ್ಯಾಗಿ ಬೈದವರೇಅವರಲ್ಲಿಯರಾಮಪ್ಪಕುರಿಈತನು ನನಗೆ ಎದೆಯ ಮೇಲಿನ ಅಂಗಿ ಹಿಡಿದುಕೈಯಿಂದ ಕಪಾಳಕ್ಕೆ ಹೊಡೆದನು, ರಾಮಪ್ಪ ಪುಜಾರಿಇತನುಒಂದು ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದುಗುಪ್ತಗಾಯ ಮಾಡಿದನು, ಹಣಮಂತಯಾದಗಿರಿಇತನು ನನ್ನ ಕಾಲಿಗೆ ಒದ್ದನು, ಹೊಳೆಪ್ಪ ಈತನು ನೆಲಕ್ಕೆ ಕೆಡವಿ ಕೈಯಿಂದ ಕಪಾಳಕ್ಕೆ, ಎದೆಗೆ ಹೊಡೆದನು. ಅಲ್ಲೆಇದ್ದ ಬಸನಗೌಡ, ಹಳೇಪ್ಪ, ಸೋಪಣ್ಣ ಇವರುಗಳು ಬಂದು ಜಗಳವನ್ನು ನೋಡಿ ಬಿಡಿಸಿದರು, ಇವರು ಬಂದು ಬಿಡಿಸಿದ್ದಾರೆ ಅಂತಾಇವತ್ತು ಬಿಟ್ಟಿವಿ, ಇನ್ನೊಮ್ಮೆ ನಮ್ಮತಂಟೆಗೆ ಬಂದರೆ ನೀನ್ನಜೀವ ಸಹಿತ ಬಿಡುವದಿಲ್ಲ ಅಂತಾಅವಾಚ್ಯವಾಗಿ ಬೈದು ಹೊರಟು ಹೊದರು. ನನಗೆ ಗುಪ್ತ ಪೆಟ್ಟಾಗಿದ್ದು ನಾನು ಉಪಚಾರ ಪಡೆದುಕೊಂಡಿರುವದಿಲ್ಲ. ನಮ್ಮಅಣ್ಣ ಭೀಮನಗೌಡ ಮಾಲಿಪಾಟೀಲ್ಇವರಜೊತೆ ವಿಚಾರ ಮಾಡಿಇಂದುತಡವಾಗಿದೂರು ಸಲ್ಲಿಸಿರುತ್ತೇನೆ. ಕಾರಣ ನಮಗೆ ಹೊಡೆ ಬಡೆ ಮಾಡಿದರಾಮಪ್ಪ, ರಾಮಪ್ಪ, ಹಣಮಂತ ಮತ್ತು ಹೊಳೆಪ್ಪ ಈ 4 ಜನರ  ಮೇಲೆ ಕಾನೂನು ಕ್ರಮಜರುಗಿಸಲು ವಿನಂತಿ. ಅಂತಾಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆ ನಂ 43/2020 ಕಲಂ: 323, 324, 504, 506 ಸಂ. 34 ಐಪಿಸಿ ನೇದ್ದರಅಡಿಯಲ್ಲಿ ಪ್ರಕರಣದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಭಿಗುಡಿ ಪೊಲೀಸ ಠಾಣೆ ಗುನ್ನೆ ನಂ:- 15/202020 ಕಲಂ 384, 506 ಐಪಿಸಿ:-ಫಿಯರ್ಾದಿಯು 2015 ರಲ್ಲಿ ಕೃಷಿ ವಿದ್ಯಾಥರ್ಿಗಳ ಅಖಿಲ ಭಾರತ ಪ್ರವಾಸದ ಮುಖ್ಯ ಲೀಡರ ಆಗಿದ್ದು ಕೆಲವು ಬಿಲ್ಗಳು ಸಿಗದ ಖಚರ್ುಗಳನ್ನು ಸರಿದೂಗಿಸುವುದಕ್ಕಾಗಿ ಬಿಲ್ಗಳನ್ನು ಅಡ್ಜಸ್ಟ್ ಮಾಡಿದ್ದು ಈ ಪ್ರವಾಸದಲ್ಲಿ ಹಣದ ದುರ್ಬಳಕೆಯಾಗಿದೆ ಎಂದು ಇಲಾಖಾ ಮೇಲಾಧಿಕಾರಿಗಳು ಫಿಯರ್ಾದಿಯಿಂದ ಹಣವನ್ನು ಕಟ್ಟಿಸಿಕೊಂಡು ಒಂದು ವರ್ಷದ ವಾಷರ್ಿಕ ಬಡ್ತಿಯನ್ನು ತಡೆ ಹಿಡಿದಿರುತ್ತಾರೆ. ಆರೋಪಿತನು ನೀನು ಹಣ ದುರುಪಯೋಗ ಮಾಡಿದ್ದಕ್ಕೆ ಕೃ.ವಿ.ರಾ.ನವರು ನಿನ್ನ ಮೇಲೆ ಕ್ರಮ ತೆಗೆದುಕೊಂಡಿದ್ದು ಗೊತ್ತಾಗಿದೆ. ನನಗೂ ಹಣ ಕೊಡು ಇಲ್ಲವಾದರೆ ನಿನ್ನ ಮೇಲೆ ಕೇಸ್ ಮಾಡುತ್ತೇನೆ ಎಂದು ಹಲವಾರು ಬಾರಿ ಲಕ್ಷಗಟ್ಟಲೆ ಹಣ ಕೇಳುವದರ ಜೊತೆಗೆ ನನ್ನೊಂದಿಗೆ ಇನ್ನೂ 3 ಜನರಿದ್ದಾರೆ, ಅವರೊಂದಿಗೆ ಹಂಚಿಕೊಳ್ಳಬೇಕು ಎಂದು ಹೇಳಿರುತ್ತಾನೆ. ಈ ವಿಷಯವನ್ನು ಮುಂದಿಟ್ಟುಕೊಂಡು ಫಿಯರ್ಾದಿಯಿಂದ ಹಣ ಪಡೆದುಕೊಳ್ಳಬೇಕು ಎಂಬ ಮುಖ್ಯ ಉದ್ದೇಶದಿಂದ ದಿನಾಂಕ:15/08/2018 ರಂದು 7 ಪಿ.ಎಮ್. ಸುಮಾರಿಗೆ ಭೀ.ಗುಡಿಯ ಸಿದ್ದಾರೂಢ ಮಠದ ಹತ್ತಿರ ಕರೆಸಿ 5 ಲಕ್ಷ ರೂಪಾಯಿ ಕೊಡುವಂತೆ, ಹಣ ಕೊಡದಿದ್ದರೆ ನಿನ್ನ ಮೇಲೆ ಕೇಸ್ ಮಾಡಿ ಜೈಲಿಗೆ ಕಳಿಸುತ್ತೇನೆ ಎಂದು ಹೇಳಿರುತ್ತಾನೆ. ಫಿಯರ್ಾದಿಒಯು ಇದಾವುದಕ್ಕೂ ಒಪ್ಪದ ಕಾರಣ ಆರೋಪಿತನು ಕೋರ್ಟ ಮೂಲಕ ಭೀ.ಗುಡಿ ಪೊಲೀಸ್ ಠಾಣೆಯಲ್ಲಿ ಕೇಸ್ ಮಾಡಿರುತ್ತಾನೆ. ಈಗ ಹಣ ಕೊಟ್ಟರೆ ಕೇಸ್ ವಾಪಾಸ್ ತೆಗೆದುಕೊಳ್ಳುತ್ತೇನೆ, ಇಲ್ಲವಾದರೆ ಇಲ್ಲ, ನೀನು ಹಣ ಕೊಡದಿದ್ದರೆ ನಿನ್ನ ಕೈಕಾಲು ಮುರಿಯುತ್ತೇನೆ. ನೀನು ಹೊರಗಿನವನು, ನಾನು ಏನು ಮಾಡಿದರೂ ನಡೆಯುತ್ತೆ ಎಂದು ಹೇಳುವುದರ ಜೊತೆಗೆ ಜೀವ ಬೆದರಿಕೆ ಹಾಕಿರುತ್ತಾನೆ. ನೀನು ಈ ಊರಲ್ಲಿ ಹೇಗೆ ಬದುಕುತ್ತೀಯೋ ನಾನು ನೋಡುತ್ತೇನೆ ಎಂದು ಧಮಕಿ ಹಾಕಿದ ಬಗ್ಗೆ ಫಿಯರ್ಾದಿ ಇರುತ್ತದೆ

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 48/2020. ಕಲಂ 78(3) ಕೆ.ಪಿ.ಆಕ್ಟ:-    ಆರೋಪಿತನು ದಿನಾಂಕ:17-02-2020 ರದು 3:05 ಪಿ.ಎಮ್.ಕ್ಕೆ ಆರೋಪಿತನು ಸಾರ್ವಜನಿಕ  ಸ್ಥಳದಲ್ಲಿ ಹೋಗಿ ಬರುವ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಫಿಯರ್ಾದಿಯವರು ಸಿಬ್ಬಂದಿಯವರೊಂದಿಗೆ ಹೋಗಿ ಪಂಚರ ಸಮಕ್ಷಮ ದಾಳಿಮಾಡಿ ಹಿಡಿದು ಆತನಿಂದ 1) ನಗದು ಹಣ 1520/- ರೂ.,2) ಒಂದು ಬಾಲ್ ಪೆನ್ 3) ಒಂದು ಮಟಕಾ ನಂಬರ ಬರೆದ ಚೀಟಿ ಅ.ಕಿ.00=00  ನೇದ್ದವುಗಳನ್ನು ವಶ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಸದರಿ ಅಪರಾದವು ಅ ಸಂಜ್ಞೇಯ ವಾಗಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಸದರಿ ವರದಿಯ   ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 48/2020 ಕಲಂ.78(3)ಕೆ.ಪಿ.ಆಕ್ಟ . ಅಡಿಯಲ್ಲಿ ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.
                                      
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 49/2020. ಕಲಂ 379 ಐ.ಪಿ.ಸಿ.ಮತ್ತು ಕಲಂ.44 (1) ಕೆ.ಎಮ್.ಎಮ್.ಸಿ.ಆರ್ ರೂಲ್:- ದಿನಾಂಕ: 17-02-2020 ರಂದು 08:00 ಪಿ.ಎಮ್.ಕ್ಕೆ ಆರೋಪಿತರು ತಮ್ಮ ಟಿಪ್ಪರ ನಂ. ಕೆ.ಎ.20ಟಿ.ಆರ್.3271 ನೇದ್ದರಲ್ಲಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಸರಕಾರಕ್ಕೆ ಯಾವುದೇ ತೆರಿಗೆ ತುಂಬದೇ ಅಕ್ರಮವಾಗಿ ಸಾಗಿಸುತ್ತಿದ್ದಾಗ ಫಿಯರ್ಾದಿದಾರರು ದೋರನಹಳ್ಳಿ ದಾಟಿ ಬಿದರಾಣಿ ಕ್ರಾಸ ಹತ್ತಿರ   ರಸ್ತೆಯ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಹೋಗಿ ದಾಳಿಮಾಡಿ ಮರಳು ತುಂಬಿದ ಟಿಪ್ಪರನ್ನು ವಶಪಡಿಸಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರ ಆಧಾರದ ಮೇಲಿಂದ  ಠಾಣೆ ಗುನ್ನೆ ನಂ.49/2019 ಕಲಂ. 379 ಐ.ಪಿ.ಸಿ. ಮತ್ತು ಕಲಂ 44(1) ಕೆ.ಎಮ್.ಎಮ್.ಸಿ.ಆರ್  ಅಡಿಯಲ್ಲಿ  ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 34/2020 ಕಲಂ  11(ಡಿ) ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ 1960 ಸಂಗಡ ಕಲಂ 177 ಐ.ಎಮ್.ವಿ ಎಕ್ಟ್:- ಇಂದು ದಿನಾಂಕ 17.02.2020 ರಂದು ಸಾಯಾಂಕಾಲ 17.15 ಗಂಟೆಗೆ ಶ್ರೀ ಸುದರ್ಶನರಡ್ಡಿ ಪಿ.ಎಸ್.ಐ ಕೆಂಭಾವಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ ಇಂದು ದಿನಾಂಕ 17/02/2020 ರಂದು ಸಾಯಾಂಕಾಲ 15.15 ಗಂಟೆಯ ಸುಮಾರಿಗೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದ್ದಿದ್ದೇನೆಂದರೆ ಕೆಂಭಾವಿ ಕಡೆಯಿಂದ ಒಂದು ಟಾಟಾ-ಎಸಿ ನಂ ಕೆಎ-32/ಸಿ-3603 ವಾಹನದಲ್ಲಿ ಒಂದರ ಮೇಲೊಂದು ದನಗಳನ್ನು ಹಾಕಿಕೊಂಡು ಪ್ರಾಣಿಗಳಿಗೆ ಹಿಂಸೆ ಯಾಗುವ ರೀತಿಯಲ್ಲಿ ಸಾಗಾಣಿಕೆ ಮಾಡಲು ತಾಳಿಕೋಟಿ ಕಡೆಗೆ ತೆಗೆದುಕೊಂಡು ಹೋಗುತಿದ್ದಾರೆ, ಅಂತ ಮಾಹಿತಿ ಬಂದ ಮೇರೆಗೆ ನಾನು ಇಬ್ಬರೂ ಪಂಚರಾದ 1] ಶ್ರೀ ಸೋಮು ತಂದೆ ಬಸಪ್ಪ ಮೋಪಗಾರ ವಯ:26 ವರ್ಷ, ಜಾತಿ: ವಡ್ಡರ ಉ:ಕೂಲಿ ಕೆಲಸ ಸಾ:ಸಂಜೀವ ನಗರ ಕೆಂಭಾವಿ ತಾ: ಸುರಪೂರ 2] ಶ್ರೀ ಮಂಜುನಾಥ ತಂದೆ ಹಳ್ಳೆಪ್ಪ ಮೊಪಾಗಾರ ವಯ: 20 ವರ್ಷ ಜಾತಿ: ವಡ್ಡರ ಉ:ಕೂಲಿ ಕೆಲಸ ಸಾ:ಸಂಜೀವ ನಗರ ತಾ:ಸುರಪೂರ ಇವರಿಗೆ ಠಾಣೆಗೆ ಕರೆಯಿಸಿ ಸದರಿಯವರಿಗೆ ವಿಷಯ ತಿಳಿಸಿ ಸಿಬ್ಬಂದಿಯವರಾದ ಭೀರಪ್ಪ ಪಿ.ಸಿ-195, ಹಾಗೂ ಜೀಪ ಚಾಲಕನಾದ ಪೆದ್ದಪ್ಪಗೌಡ ಪಿಸಿ-244, ಇವರಿಗೆ ವಿಷಯ ತಿಳಿಸಿ ನಾವೆಲ್ಲರೂ ಕೂಡಿ ಠಾಣೆಯ ಸರಕಾರಿ ಜೀಪ್ ನಂ:ಕೆಎ-33, ಜಿ-0174 ನೇದ್ದರಲ್ಲಿ ಎಲ್ಲರೂ ಕುಳಿತುಕೊಂಡು ಠಾಣೆಯಿಂದ ಸಾಯಾಂಕಾಲ 15.30 ಗಂಟೆಗೆ ಹೊರಟು ಕೆಂಭಾವಿ-ತಾಳಿಕೊಟಿ ಮುಖ್ಯ ರಸ್ತೆಯ ಮೇಲೆ ಪತ್ತೆಪೂರ ಕ್ರಾಸ್ ಹತ್ತಿರ 15.40 ಗಂಟೆಗೆ ಹೋಗಿ ನಿಂತಿದ್ದಾಗ, ಕೆಂಭಾವಿ ಕಡೆಯಿಂದ ಒಂದು ಟಾಟಾ ಎ.ಸಿ ನಂಬರ ಕೆಎ-32/ಸಿ-3603 ವಾಹನವು 15.45 ಗಂಟೆಗೆ ಬಂದಿದ್ದು ಆಗ ಸದರಿ ವಾಹನವನ್ನು ನಾವು ಮತ್ತು ಪಿ.ಎಸ್.ಐ ಸಾಹೇಬರು ನಿಲ್ಲಿಸಿ ವಾಹನ ಚಾಲಕನಿಗೆ ಸದರಿ ವಾಹನದಲ್ಲಿ ಏನು ಇದೆ ಅಂತ ಕೇಳಿದಾಗ ಆತನು ದನಗಳನು ಇದ್ದಾವೆ ಮಾರಾಟಕ್ಕೆ ತೆಗೆದುಕೊಂಡು ಹೋಗುತಿದ್ದೆವೆ ಅಂತ ಹೇಳಿದನು ನಂತರ ಆತನಿಗೆ ದನಗಳನ್ನು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಪ್ರಾಧಿಕಾರದಿಂದ ಪರವಾನಿಗೆ ಪಡೆದಿದ್ದರೆ ದಾಖಲಾತಿಳನ್ನು ತೋರಿಸು ಎಂದು ಕೇಳಿದಾಗ ಯಾವುದೇ ದಾಖಲಾತಿಗಳು ಇಲ್ಲ ಅಂತ ಹೇಳಿದನು. ಆಗ ಚಾಲಕನ ಹೆಸರು ವಿಚಾರಿಸಲು ಚಾಂದಸಾಬ ತಂದೆ ಕಾಸಿಮಸಾಬ ಚೌದ್ರಿ ವ: 32 ವರ್ಷ, ಜಾ:ಮುಸ್ಲಿಂ, ಉ:ಚಾಲಕ, ಸಾ:ಯಾಳಗಿ ತಾ: ಸುರಪೂರ ಅಂತಾ ತಿಳಿಸಿದನು. ಮತ್ತು ಕ್ಲೀನರ ಹೆಸರು ವಿಚಾರಿಸಲು ಅವನು ತನ್ನ ಹೆಸರು ಶಬ್ಬಿರ ಅಹೆಮದ ತಂದೆ ಅಮೀನಸಾ ಚೌದ್ರಿ  ವ:20 ವರ್ಷ, ಜಾ:ಮುಸ್ಲಿಂ, ಉ:ಕ್ಲೀನರ್, ಸಾ:ಮದಿನಾ ಮಸುತಿ ಕಲಕೇರಿ ತಾ: ತಾಳಿಕೋಟಿ ಅಂತಾ ತಿಳಿಸಿ ಈ ದನಗಳನ್ನು ಇಂದು ದಿನಾಂಕ:17/02/2020 ರಂದು ಕೆಂಭಾವಿ ಕೃಷಿ ಮಾರುಕಟ್ಟೆಯಲ್ಲಿ ದನಗಳನ್ನು ಖರೀದಿ ಮಾಡಿದ್ದು, ಈ ದಿನ ತಾಳಿಕೋಟಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತಿದ್ದೆವೆ ಅಂತ ಹೇಳಿದರು. ಸದರಿ ವಾಹನದ ನಂಬರ್ ನೋಡಲು ಟಾಟಾ ಎ.ಸಿ ನಂಬರ ಕೆಎ-32/ಸಿ-3603 ನೇದ್ದು ಇದ್ದು ಅದರಲ್ಲಿ ನೋಡಲು ವಾಹನದಲ್ಲಿ ದನಗಳು ಇದ್ದು ಒಂದರ ಮೇಲೆ ಒಂದು ಬಿದ್ದಿದ್ದವು. ಅವುಗಳ ಕಾಲುಗಳನ್ನು ಕಟ್ಟಿ ಒಂದರ ಮೇಲೆ ಒಂದು ಹಾಕಿಕೊಂಡು ಹಿಂಸಾತ್ಮಕವಾಗಿ ತೆಗೆದುಕೊಂಡು ಸಾಗಾಣಿಕೆ ಮಾಡಲು ಹೋಗುತಿದ್ದರು. ಆಗ ಪಿ,ಎಸ್,ಐ ಸಾಹೇಬರು ಇಲ್ಲಿ ಸಂಚಾರಕ್ಕೆ ಅಡ ತಡೆಯಾಗಬಾರದೆಂಬ ಉದ್ದೇಶದಿಂದ ಮತ್ತು ಇಲ್ಲಿ ಹೆಚ್ಚಿಗೆ ಸ್ಥಳಾವಕಾಶ ಇರಲಾರದರಿಂದ ದನಗಳನ್ನು ಇಳಿಸುವುದು ಬೇಡ ಅಂತ ಹೇಳಿ ಸದರಿ ವಾಹನ ಸಮೇತ ಸಾಯಾಂಕಾಲ 16.00 ಗಂಟೆಗೆ ಕೆಂಭಾವಿ ಪೊಲೀಸ್ ಠಾಣೆಯ ಆವರಣದಲ್ಲಿ ಬಂದು ವಾಹನದಲ್ಲಿದ್ದ ಎಲ್ಲಾ ದನಗಳನ್ನು ವಾಹನದಿಂದ ಕೆಳಗಡೆ ಇಳಿಸಿ ನಾವು ಮತ್ತು ಪಿ.ಎಸ್.ಐ ಸಾಹೇಬರು ಸದರಿ ದನಗಳನ್ನು ಒಂದೊಂದಾಗಿ ಪರಿಶೀಲಿಸಿ ನೊಡಲಾಗಿ ಆಕಳು [03] 1] ಕಪ್ಪು ಬಣ್ಣದ ಆಕಳು 3 ಅ.ಕಿ. 15,000=00 ಮತ್ತು ಮತ್ತು ಹೋರಿ(01) ಕೆಂಪು ಬಣ್ಣದ ಸಣ್ಣ ಹೋರಿ ಅ.ಕಿ. 1000=00 ಹೀಗೆ ಒಟ್ಟು 03 ಆಕಳು ಮತ್ತು 01 ಸಣ್ಣ ಹೋರಿ ಹೀಗೆ ಒಟ್ಟು 04 ದನಗಳು ಇದ್ದು ಅವುಗಳ ಒಟ್ಟು ಅ.ಕಿ 16,000/- ರೂಪಾಯಿ ಆಗುತ್ತದೆ, ಮತ್ತು ಸದರಿ ಟಾಟಾ ಎಸಿ ವಾಹನ ನಂ: ಕೆಎ-32/ಸಿ-3603 ನೇದ್ದು ಅ.ಕಿ 50,000=00 ರೂಪಾಯಿ ಸದರಿ 04 ದನಗಳು ಹಾಗೂ ವಾಹನವನ್ನು ನಮ್ಮ ತಾಬೆಗೆ ತೆಗೆದುಕೊಂಡು 16.00 ಗಂಟೆಯಿಂದ 17.00 ಗಂಟೆಯವರೆಗೆ ಜಪ್ತಿ ಪಂಚನಾಮೆ ಕೈಕೊಂಡು, 17.15 ಗಂಟೆಗೆ ಟಾಟಾ ಎ.ಸಿ ವಾಹನ ಮತ್ತು ವಾಹನ ಚಾಲಕನಾದ ಚಾಂದಸಾಬ ತಂದೆ ಕಾಸಿಮಸಾಬ ಚೌದ್ರಿ ವ: 32 ವರ್ಷ, ಜಾ:ಮುಸ್ಲಿಂ, ಉ:ಚಾಲಕ, ಸಾ:ಯಾಳಗಿ ತಾ: ಸುರಪೂರ ಹಾಗೂ ಕ್ಲೀನರ ಹೆಸರು ಶಬ್ಬಿರ ಅಹೆಮದ ತಂದೆ ಅಮೀನಸಾ ಚೌದ್ರಿ ವ:20 ವರ್ಷ, ಜಾ:ಮುಸ್ಲಿಂ, ಉ:ಕ್ಲೀನರ್, ಸಾ:ಮದಿನಾ ಮಸುತಿ ಕಲಕೇರಿ ತಾ: ತಾಳಿಕೋಟಿ ಇಬ್ಬರ ಮೇಲೆ ಮುಂದಿನ ಕ್ರಮಕ್ಕಾಗಿ ಸಕರ್ಾರಿ ತಫರ್ೆ ಫಿರ್ಯಾದಿದಾರನಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 34/2020 ಕಲಂ 11(ಡಿ) ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ 1960 ಸಂಗಡ ಕಲಂ 177 ಐ.ಎಮ್.ವಿ ಎಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!