ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/02/2020

By blogger on ಸೋಮವಾರ, ಫೆಬ್ರವರಿ 17, 2020


                                  ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 16/02/2020

ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 06/2020  ಕಲಂ 279,  338 ಐಪಿಸಿ  :- :-  ದಿನಾಂಕ 16/02/2020 ರಂದು ಮದ್ಯರಾತ್ರಿ 2 ಎ.ಎಂ.ದ ಸುಮಾರಿಗೆ ಯಾದಗಿರಿ ರೇಲ್ವೇ ಸ್ಟೇಷನ್ ಹತ್ತಿರ ಮುಖ್ಯ ರಸ್ತೆ   ಮೇಲೆ  ಈ ಕೇಸಿನ ಫಿಯರ್ಾದಿ ಗಾಯಾಳು ಅಲ್ತಾಫ್ ಹುಸೇನ್ ತಂದೆ ನಿಜಾಮುದ್ದೀನ್ ಪೀರಗಲ್ ವಯ;42 ವರ್ಷ, ಜಾ;ಮುಸ್ಲಿಂ, ಉ;ಆಟೋ ಚಾಲಕ, ಸಾ;ಕಾಲಾಚೌಕ್, ಯಾದಗಿರಿ  ಇವರು  ರಸ್ತೆ ಬದಿಯಲ್ಲಿ ನಿಂತಿದ್ದಾಗ  ಆರೋಪಿತನು ತನ್ನ ಕಾರ್ ನಂಬರ ಕೆಎ-33, ಎಮ್-6841 ನೇದ್ದನ್ನು ರೇಲ್ವೇ ಸ್ಟೇಷನ್ ಕಡೆಯಿಂದ  ಶಾಸ್ತ್ರಿ ಚೌಕ್ ಕಡೆಗೆ  ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಪಿಯರ್ಾದಿಗೆ ನೇರವಾಗಿ ಬಲಗಾಲಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಬಲಗಾಲಿನ ಮೊಣಕಾಲು ಕೆಳಗೆ ಭಾರೀ ಒಳಪೆಟ್ಟಾಗಿ ಮುರಿದಿದ್ದು  ಇರುತ್ತದೆ. ಈ ಘಟನೆ ಬಗ್ಗೆ ಪಿಯರ್ಾದಿ ಗಾಯಾಳು ತನ್ನ ಮನೆಯವರಲ್ಲಿ ವಿಚಾರಿಸಿ ತಡವಾಗಿ ಇಂದು ದಿನಾಂಕ 16/02/2020 ರಂದು ದೂರು ನೀಡಿದ್ದು ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.06/2020 ಕಲಂ 279,  338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- , 32/2020  ಕಲಂ: 32, 34 ಕೆ. ಇ ಯಾಕ್ಟ :- ಇಂದು ದಿನಾಂಕ 16.02.2020 ರಂದು 02.15 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀ ಸುದರ್ಶನರಡ್ಡಿ ಪಿಎಸ್ಐ ಕೆಂಭಾವಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದೆನೆಂದರೆ, ಇಂದು ದಿನಾಂಕ: 16.02.2020 ರಂದು 12.30 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಮಲ್ಲಾ(ಬಿ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಯಾವದೇ ಲೈಸನ್ಸ ಇಲ್ಲದೆ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಭಾತ್ಮಿ ಬಂದ ಮೇರೆಗೆ ನಾನು ಹಾಗೂ ಸಿಬ್ಬಂದಿಯವರಾದ ಭೀರಪ್ಪ ಪಿಸಿ-195  ಹಾಗೂ ಜೀಪ ಚಾಲಕ ಪೆದ್ದಪ್ಪಗೌಡ ಪಿ.ಸಿ-214 ರವರನ್ನು ಹಾಗೂ ಭೀರಪ್ಪ ಪಿಸಿ-195 ರವರ ಮೂಖಾಂತರ ಪಂಚ ಜನರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವ|| 38 ಜಾ|| ಪ ಜಾತಿ ಉ||ಕೂಲಿ ಸಾ|| ಕೆಂಭಾವಿ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ವ|| 48 ಜಾ|| ಪ ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ:ಕೆಎ 33 ಜಿ 0174 ನೇದ್ದರಲ್ಲಿ ಠಾಣೆಯಿಂದ 12.45 ಪಿ.ಎಮ್ ಕ್ಕೆ ಹೊರಟು ಮಲ್ಲಾ(ಬಿ) ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಜೀಪ ನಿಲ್ಲಿಸಿ ಎಲ್ಲರು ಕೆಳಗೆ ಇಳಿದು ಶಾಲೆಯ ಮರೆಯಾಗಿ ನಿಂತು ನೋಡಲಾಗಿ ಸದರಿ ಶಾಲೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸರಾಯಿ ಮಾರಾಟ ಮಾಡುವದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 12..50 ಪಿ.ಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಸರಾಯಿ ಮಾರಾಟ ಮಾಡುವ ವ್ಯಕ್ತಿಯನ್ನು ಹಿಡಿದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ರೆಡ್ಡೆಪ್ಪ @ರೆಡ್ಡಿ ತಂದೆ ಹುಸನಯ್ಯ ಈಳಗೇರ ವಯಾ: 44 ವರ್ಷ ಜಾತಿ: ಈಳಗೇರ ಉ: ಕೂಲಿಕೆಲಸ ಸಾ: ಮಲ್ಲಾ(ಬಿ) ತಾ: ಸುರಪೂರ ಅಂತಾ ತಿಳಿಸಿದ್ದು ಸದರಿ ಆರೊಪಿತನನ್ನು ವಶಕ್ಕೆ ಪಡೆದು ಸದರಿ ಸ್ಥಳದಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಸರಾಯಿ ಪೌಚ್ಗಳನ್ನು ಪಂಚರ ಸಮಕ್ಷಮದಲ್ಲಿ ಪೌಚ್ಗಳನ್ನು ಪರಿಶೀಲಿಸಿ ನೋಡಲು ಔಐಆ ಖಿಂಗಿಇಖಓ ಘಊಖಏಙ  ಯ 180 ಎಮ್ಎಲ್ನ 25 ಪೌಚಗಳು ಇದ್ದು, ಒಂದು ಪೌಚ್ನ ಬೆಲೆ 74.13/-ರೂ.ಗಳು ಇದ್ದು ಒಟ್ಟು 25 ಪೌಚ್ಗಳ ಬೆಲೆ 1853.25/-ರೂ.ಗಳು ಕಿಮ್ಮತ್ತು ಆಗುತ್ತಿದ್ದು, ಹಾಗೂ ಃಂಉಕಕಇಖ ಘಊಖಏಙ ಯ 180 ಎಮ್.ಎಲ್ ನ 19 ಪೌಚಗಳು ಇದ್ದು ಒಂದು ಪೌಚ್ನ ಬೆಲೆ 90.21/-ರೂಗಳು ಇದ್ದು ಒಟ್ಟು 19 ಪೌಚಗಳು ಬೆಲೆ 1713.99/- ರೂಗಳು ಇದ್ದು ಸದರಿ ಪೌಚ್ಗಳನ್ನು ಇಂದು ದಿನಾಂಕ: 16.02.2020 ರಂದು 12.50 ಪಿ.ಎಮ್ದಿಂದ 01.50 ಪಿ.ಎಮ್ದವರೆಗೆ ಪಂಚರ ಸಮಕ್ಷಮ ಜಪ್ತಪಡಿಸಿಕೊಂಡು ಸದರಿ ಎರಡು ಸರಾಯಿ ಪೌಚ್ಗಳಲ್ಲಿ ಒಂದೊಂದು ಪ್ರತ್ಯೇಕವಾಗಿ ಸರಾಯಿ ಪೌಚನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ಪಂಚರ ಸಮಕ್ಷಮದಲ್ಲಿ ಪ್ರತ್ಯೇಕವಾಗಿ ಬಿಳಿ ಬಟ್ಟೆಯಲ್ಲಿ ಹೊಲೆದು ಅದರ ಮೇಲೆ ಇಂಗ್ಲೀಷ ಅಕ್ಷರದ  ಏ ಅಂತ ಶೀಲ ಮಾಡಿ ಜಪ್ತಪಡಿಸಿಕೊಂಡಿದ್ದು ಇರುತ್ತದೆ. ಕಾರಣ ಈ ಮೇಲೆ ನಮೂದಿಸಿದ ಆರೋಪಿ ಮತ್ತು ಮುದ್ದೆಮಾಲು ಸಮೇತ 02.15 ಪಿ.ಎಂಕ್ಕೆ ಕೆಂಭಾವಿ ಪೊಲೀಸ್ ಠಾಣೆಗೆ ಬಂದಿದ್ದು ಸದರಿ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ಅದೇಶ ನೀಡಿದ್ದರಿಂದ ಕೆಂಭಾವಿ ಠಾಣೆ ಗುನ್ನೆ ನಂ 33/2020 ಕಲಂ 32.34 ಕೆ.ಇ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ 05/2020 ಕಲಂ 174 ಸಿ.ಆರ್.ಪಿ.ಸಿ:- ಇಂದು ದಿನಾಂಕ 16/02/2020 ರಂದು ಮದ್ಯಾಹ್ನ 03-00 ಪಿ.,ಎಂಕ್ಕೆ ಪಿಯರ್ಾದಿ ಶ್ರೀ ಮತಿ ಗುರುಬಾಯಿ ಗಂ ಮಾಹಂತಯ್ಯ ಸ್ವಾಮಿ ವ|| 40 ವರ್ಷ ಉ|| ಹೋಟೇಲ ಸಾ|| ಆಲ್ದಾಳ ತಾ|| ಶಹಾಪೂರ ಇದ್ದು ನಾನು ಮತ್ತು ನನ್ನ ಗಂಡ ಮಾಹಂತಯ್ಯ ನನ್ನ ಮಕ್ಕಳಾದ ನಾಗಯ್ಯ ವ|| 16 ವರ್ಷ, ಮಲ್ಲಯ್ಯ ವ|| 14  ವರ್ಷ ಎಲ್ಲರೂ ಹೋಟೆಲ ಇಟ್ಟಿಕೊಂಡು ಜೀವನ ನಡೆಸುತ್ತಿದ್ದು, ನನ್ನ ಗಂಡ ಮಾಹಂತಯ್ಯ ಸ್ವಾಮಿ ಇವರು ಬಹಳ ಕುಡಿತ ಚಟವಿದ್ದು ಅವರಲ್ಲಿ ಇವರಲ್ಲಿ ಹಣ ವಸಲುಮಾಡಿಕೊಂಡು ಕುಡಿದು ನಿಶೆಯಲ್ಲಿ ಊರ ಊರ ತಿರುಗುತ್ತಿದ್ದರು ಇದರಿಂದ ನನ್ನ ಗಂಡ ಮಾಹಂತಯ್ಯ ಸ್ವಾಮಿ ಇವರಿಗೆ ಕಿಡ್ನಿ ಮತ್ತು ಲೀವರ್ ಪೇಲಾಗಿದ್ದು ನಾವೂ ಆಸ್ಪತ್ರೆಗೆ ತೋರಿಸಿದ್ದರು ಅರಾಮ ಆಗಿರಲಿಲ್ಲಾ ಇದ್ದರಿಂದಾಗಿ ಮಾನಿಸಿಕವಾಗಿ ಬಳಲುತ್ತಿದ್ದ, 
              ಹೀಗಿದ್ದು  ದಿನಾಂಕ 16/02/2020 ರಂದು 1:30 ಪಿ.ಎಂ ಸುಮಾರಿಗೆ ಶಹಾಪೂರ ತಾಲೂಕಿನ ಬೇನಕನಳ್ಳಿ ಗ್ರಾಮದ ಪೀರ ಶಹಾಪೂರ ಇವರ ಹೋಲದ ಹತ್ತಿರ ರೈಲ್ವೆ ರೋಡಿನ ಪಕ್ಕದಲ್ಲಿ ಒಂದು ಗಿಡದ ಕೇಳಗೆ ಹೋಗಿ ನೋಡಲಾಗಿ, ಸದರ ಶವವನ್ನು ಗುತರ್ಿಸಿದ್ದು, ನನ್ನ ಗಂಡ ಮಾಹಂತಯ್ಯ ಸ್ವಾಮಿ ತಂದೆ ರೇವಯ್ಯ ಸ್ವಾಮಿ ಇವರು ಶವಯು ಕೋಳೆತ ಸ್ಥಿತಿಯಲ್ಲಿ ಇದ್ದು, ಈ ಬಗ್ಗೆ ಸ್ಥಳಿಯರಾದ ಗುರುಣ್ಣ ತಂದೆ ರಂಗಣ್ಣ ದಳಪತಿ ಸಾ|| ಬೆನಕನಳ್ಳಿ  ಇವರಿಗೆ ವಿಚಾರಿಸಲಾಗಿ ಸದರ ವ್ಯಕ್ತಿಯು ಹೀಗೆ 4-5 ದಿನಗಳಿಂದ ಇದೆ ಏರಿಯಾದಲ್ಲಿ ತಿರುಗಾಡುತಿದ್ದು, ಹೀಗೆ ದಿನಾಂಕ 14-02-2020 ರಂದು ಮದ್ಯಾಹ್ನ 2:00 ಪಿ.ಎಂ ಸುಮರಿಗೆ ನಾನು ಪೀರ ಶಹಾಪೂರ ಇವರ ಹೋಲದ ಹತ್ತಿರ ರೈಲ್ವೆ ರೋಡಿನ ಪಕ್ಕದಲ್ಲಿ ಒಂದು ಗಿಡದ ಕೆಳಗೆ ಕುಡಿದ ನಿಶೆಯಲ್ಲಿ ಕುಳಿತ್ತಿದ್ದ ನಾನು ಸದರಿಯವನಿಗೆ ಊಟ ಮತ್ತು ಬಿಸ್ಕಟ್ಟು ಕೊಟ್ಟು ಹೋಗಿದ್ದು ಇರುತ್ತದೆ ಅಂತಾ ತಿಳಸಿದ್ದು ಇರುತ್ತದೆ, ದಿನಾಂಕ 14/02/2020 14:00 ಪಿ.ಎಂ ದಿಂದ 16/02/2020 ರಂದು 01:00 ಪಿ.ಎಂ ದ ಮದ್ಯದೋಳಗೆ ಕುಡಿದ ನಿಶೆಯಲ್ಲಿ ಸರಿಯಾಗಿ ಊಟಮಾಡದೆ ಆರಾಮ ಇಲ್ಲದ ಕಾರಣ ಮೃತ ಪಟ್ಟಿದ್ದು ಇರುತ್ತದೆ. 
      ಕಾರಣ ಮಾನ್ಯರವರು ನನ್ನ ಗಂಡ ಮಾಹಂತಯ್ಯ ಸ್ವಾಮಿ ತಂದೆ ರೇವಯ್ಯ ಸ್ವಾಮಿ ಇವರು ದಿನಾಂಕ 14/02/2020 2:00 ಪಿ.ಎಂ ದಿಂದ 16/02/2020 ರಂದು 01:00 ಪಿ.ಎಂದ ಮದ್ಯದೋಳಗೆ ಕುಡಿದ ನಿಶೆಯಲ್ಲಿ ಸರಿಯಾಗಿ ಊಟಮಾಡದೆ ಆರಾಮ ಇಲ್ಲದ ಕಾರಣ ಮೃತ ಪಟ್ಟಿದ್ದು ಇರುತ್ತದೆ, ಇವರ ಸಾವಿನ ಕುರಿತು ಯಾವೂದೆ ರೀತಿಯಾ ಯಾರ ಮೇಲೆ ಸಂಶಾಯ ವಗೇರಾ ಇರುವದಿಲ್ಲಾ ಮುಂದಿನ ಕ್ರಮ ಜರುಗಿಸಲಿಲು ಮಾನ್ಯರವರಲ್ಲಿ ವಿನಂತಿ ಅಂತಾ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಯು,ಡಿ,ಆರ್, ನಂ-05/2020 ಕಲಂ 174 ಸಿ.ಆರ್.ಪಿ.ಸಿ. ನೇದ್ದರ ಪ್ರಕಾರ ಯು.ಡಿ,ಆರ್. ಧಾಖಲಿಸಿಕೊಂಡು ತನಿಕೆ ಕೈಕೊಂಡೆನು. 

ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 28/2020 ಕಲಂ: 32, 34 ಕೆಇ ಆಕ್ಟ್:- ಇಂದು ದಿನಾಂಕ 16.02.2020 ರಂದು ಸಂಜೆ 05:00 ಗಂಟೆಗೆ ಆರೋಪಿತನು ಅಕ್ರಮವಾಗಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲಿಗಳನ್ನು ಗುರುಮಠಕಲ್ ಪಟ್ಟಣದ ಚಪೆಟ್ಲಾ ಕ್ರಾಸ್ನ ಹತ್ತಿರ ಅಂಬೆಡ್ಕರ ಭವನದ ಹತ್ತಿರ ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದಾಗ ಪಿ.ಎಸ್. ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ತನ್ನ ವಶದಲ್ಲಿದ್ದ ವಿವಿಧ ನಮೂನೆಯ ಒಟ್ಟು 2860/- ರೂ ಬೆಲೆಯ ಮುದ್ದೆ ಮಾಲನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಪಿ.ಎಸ್.ಐ ರವರು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು ಕೈಕೊಂಡು ಮರಳಿ ಠಾಣೆಗೆ ಬಂದು ಆರೋಪಿತನ ವಿರುದ್ಧ ಕಾನೂನು ಕ್ರಮಕ್ಕಾಗಿ ವರದಿ ನೀಡಿದ್ದು ಆ ಬಗ್ಗೆ ಠಾಣಾ ಗುನ್ನೆ ನಂ: 28/2020 ಕಲಂ: 32, 34 ಕೆಇ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು. 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!