ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/02/2020

By blogger on ಶನಿವಾರ, ಫೆಬ್ರವರಿ 15, 2020


                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/02/2020

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 23/2020 ಕಲಂ 341, 323, 504, 506 ಸಂ 34 ಐಪಿಸಿ:- ದಿನಾಂಕ 14/02/2020 ರಂದು ರಾತ್ರಿ 10-00 ಗಂಟೆಗೆ ಫಿಯರ್ಾಧಿ ಮತ್ತು ಆತನ ಮನೆಯವರೆಲ್ಲರೂ ಮನೆ ಮುಂದೆ ಮಾತಾಡುತ್ತಾ ಕಳಿತಿರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಏ ಬೋಸಡಿ ಮಕ್ಕಳೇ ನೀವು ನಮ್ಮ ತಂಗಿಗೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲಾ, ನಿಮಗೆ ಬಹಳ ಸೊಕ್ಕುಯಿದೆ ಅಂತಾ ಅವಾಚ್ಯವಾಗಿ ಬೈದು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಫಿರಾಧಿಗೆ ಮತ್ತು ಅವನ ಮನೆಯವರಿಗೆ ಕೈಯಿಂದ ಹೊಡೆದು, ಕಾಲಿನಿಂದ ಒದ್ದು, ಜೀವದ ಭಯ ಹಾಕಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 47/2020. ಕಲಂ 279, 338 ಐ.ಪಿ.ಸಿ.:- ಆರೋಪಿತನು ದಿನಾಂಕ:14-02-2020 ರದು 12:30 ಗಂಟೆ ಸುಮಾರಿಗೆ ಶಹಾಪೂರ ಸುರಪೂರ ಮುಖ್ಯ ರಸ್ತೆಯ ಹಿಲ್ ಟೌನ ದಾಬಾದ ಹತ್ತಿರ ಸುರಪೂರ ಕಡೆಯಿಂದ ತನ್ನ ಟಾಟಾ ಎ.ಸಿ. ವಾಹನ ನಂ. ನಂ. ಕೆ.ಎ.13-ಎ-7452  ನೇದ್ದನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ತನ್ನ ಮುಂದೆ ಫಿಯರ್ಾದಿಯವರ್ದ ನಮ್ಮ ತಂದೆಯವರು ಕುಳಿತು ಹೊರಟ ಆಟೋ ನಂ. ಕೆ.ಎ.33-ಎ-9928  ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಫಿಯರ್ಾದಿಯ ತಂದೆಗೆ ಭಾರೀ ಗಾಯ ಪಡಿಸಿದ್ದು ಅವನ ಮೇಲೆ   ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿ ಇದ್ದ ಫಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 47/2020 ಕಲಂ.279, 338 ಐ.ಪಿ.ಸಿ. ಅಡಿಯಲ್ಲಿ ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 06/2019 ಕಲಂ: 109 ಸಿ.ಆರ್.ಪಿ.ಸಿ:- ನಾನು ಶರಣಪ್ಪ ಪಿ.ಎಸ್.ಐ (ಅ.ವಿ) ಸುರಪೂರ ಪೊಲೀಸ್ಠಾಣೆತಮ್ಮಲ್ಲಿಕೊಡುವ ವರದಿ ಏನೆಂದರೆಇಂದು ದಿನಾಂಕ:15-02-2020 ರಂದು ಬೆಳಿಗ್ಗೆ ಸುಮಾರಿಗೆ ನಾನು ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮನೋಹರ ಹೆಚ್ಸಿ-105 2) ಶ್ರಿ ಸುಭಾಸ ಸಿಪಿಸಿ-174 ಸುರಪೂರ ಪೊಲೀಸ್ಠಾಣೆಇವರನ್ನು ಸಂಗಡಕರೆದುಕೊಂಡು ಸುರಪೂರ ಪಟ್ಟಣದಅಪರಾಧ ವಿಭಾಗದಕುರಿತು ಪೆಟ್ರೋಲಿಂಗಕರ್ತವ್ಯ ಮಾಡುತ್ತಾ ನಸುಕಿನ 5 ಗಂಟೆ ಸುಮಾರಿಗೆಕುಂಬಾರ ಪೇಠ ಹತ್ತಿರ ಹೋಗುತ್ತಿರುವಾಗಕುಂಬಾರ ಪೇಠಚೌಕದರಸ್ತೆಯ ಪಕ್ಕದಲ್ಲಿರುವಅಂಗಡಿ ಮುಗ್ಗಟ್ಟುಗಳ ಮುಂದುಗಡೆಒಬ್ಬ ವ್ಯಕ್ತಿಅನುಮಾನರೀತಿಯಲ್ಲಿತೀರುಗಾಡುತ್ತಿದ್ದು ನಮ್ಮನ್ನುಕಂಡಕೂಡಲೆ ಮರೆ ಮಾಚುತ್ತಾಓಡಲು ಪ್ರಯತ್ನಿಸುತ್ತಿರುವಾಗಅವನನ್ನು ಗಮನಿಸಿ ಸಿಬ್ಬಂಧಿಯವರ ಸಹಾಯದಿಂದಅವರನ್ನು ಹಿಡಿದು ವಿಚಾರಿಸಲಾಗಿಅವರುತಮ್ಮ ಹೆಸರುತಡವರಿಸುತ್ತಾ ಹೆಸರು ಹೇಳಲು ಹಿಂಜರಿಯುತ್ತಿದ್ದುದರಿಂದಅವರನ್ನು ಕೂಲಂಕುಷವಾಗಿ ವಿಚಾರಿಸಲಾಗಿ ಅವನು ತನ್ನ ಹೆಸರು  ಮಹ್ಮದ ಅಲೀ ತಂದೆ ಸಾಬುದ್ದಿನ ಕವಿತಾಳ ವಯಾ:26 ವರ್ಷ ಉ:ವಿಧ್ಯಾಥರ್ಿ ಜಾತಿ: ಮುಸ್ಲಿಂ ಸಾ: ಸಿದ್ದಾಪೂರ(ಬಿ) ತಾ:ಹುಣಸಗಿಅಂತಾ ತಿಳಿಸಿದ್ದು ಸದರಿಯವನನ್ನುಅಲ್ಲೇ ಬಿಟ್ಟರೆಯಾವುದಾದರೂ ಸ್ವತ್ತಿನಅಪರಾಧ ಮಾಡುಬಹುದೆಂದು ಮನಗಂಡು ಸದರಿಯವರನ್ನು ಸ್ಥಳದಲ್ಲೇ ವಶಕ್ಕೆ ತೆಗೆದುಕೊಂಡುಅವರ ವಿರುದ್ದ ಮುಂಜಾಗೃತಕ್ರಮಾಕ್ಕಾಗಿ ಮರಳಿ ಠಾಣೆಗೆ 08-30 ಗಂಟೆಗೆ ಬಂದು ಬಂದು ಸದರಿಯವರ ವಿರುದ್ದಠಾಣೆ ಪಿಎಆರ್ ನಂಬರ:06/2020 ಕಲಂ.109 ಸಿಆರ್ಪಿಸಿ ನೇದ್ದರಡಿಯಲ್ಲಿದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:-  16/2020 ಕಲಂ. 279,337,338 ಐಪಿಸಿ :- ದಿನಾಂಕ 14-02-2020 ರಂದು ರಾತ್ರಿ 10-35 ಗಂಟೆಗೆ ರಾಯಚೂರದ ಶ್ರೀ ಶಿವಂ ಆಸ್ಪತ್ರೆಯಿಂದ ಪೊನ್ ಮೂಲಕ ಎಮ್.ಎಲ್ ಸಿ ಬಂದಿದ್ದು ಎಮ್.ಎಲ್.ಸಿ ಕುರಿತು ಆಸ್ಪತ್ರೆ ಭೆಟಿ ನೀಡಿ ಅಲ್ಲಿ ಉಪಚಾರ ಪಡೆಯುತಿದ್ದ ಗಾಯಾಳುಗಳನ್ನು ವಿಚಾರಿಸಿ ಅವರಲ್ಲಿ ಶೇಷಾದ್ರಿ ತಂದೆ ಮಲ್ಲಣ್ಣಗೌಡ ಮಾನಸಗಲ್ ವಯಾ|| 46 ವರ್ಷ ಜಾ|| ಈಳಿಗೇರ ಉ|| ಒಕ್ಕಲುತನ ಸಾ|| ಮೈಲಾಪುರ ಅಗಸಿ ಯಾದಗಿರಿ ತಾ|| ಜಿ|| ಯಾದಗಿರಿ ಇವರು ಪಿಯರ್ಾಧಿ ನೀಡಿದ ಸಾರಂಶವೆನೆಂದರೆ  ದಿನಾಂಕ: 14-02-2020 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾವು ನಮ್ಮ ಕಾರ ನಂ.ಕೆಎ-33 ಎಮ್. 7332 ನೇದ್ದರಲ್ಲಿ ನಮ್ಮ ಸಂಬಧಿಕರ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ರಾಯಚೂರಕ್ಕೆ ಹೋಗಿದ್ದು ರಾಯಚೂರದಿಂದ ವಾಪಸ ಯಾದಗಿರಿಗೆ ಸಾಯಂಕಾಲ 04-30 ಗಂಟೆಗೆ ಯಾದಗಿರಿ ರಾಯಚೂರ ಮುಖ್ಯ ರಸ್ತೆಯ ಮೆಲೆ ಕಡೆಚೂರ ಕ್ರಾಸ ಹತ್ತಿರ ಹೋಗುತ್ತಿರುವಾಗ ಎದರುಗಡೆಯಿಂದ ಬೂದಿ ಲಾರಿ ಟ್ಯಾಂಕರ ಕೆಎ-32 ಡಿ-0385 ನೆದ್ದನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತಪಡಿಸಿದ್ದು ಅಪಘಾತದಲ್ಲಿ ನಮಗೆ ಭಾರಿ ಮತ್ತು ಸಾದಾ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ  ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.
                                       
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 15/2020 ಕಲಂ: 279,337,338 ಐಪಿಸಿ ಸಂ 187 ಐಎಮ್ವಿ ಎಕ್ಟ್:- ಇಂದು ದಿನಾಂಕ: 15/02/2020 ರಂದು 4-30 ಪಿಎಮ್ ಕ್ಕೆ ಶ್ರೀ ತಿಪ್ಪಣ್ಣ ತಂದೆ ಬಸಲಿಂಗಪ್ಪ ಬೆಂಡೆಬೆಂಬಳ್ಳಿ, ವ:30, ಜಾ:ಮಾದಿಗ, ಉ:ಕೂಲಿ ಸಾ:ಹಾಲಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ದಿನಾಂಕ: 10/02/2020 ರಂದು ಉಳ್ಳೆಸೂಗೂರು ಗ್ರಾಮದ ನಮ್ಮ ಆಯಿ ಅಂದರೆ ಸ್ವಂತ ನಮ್ಮ ಅಮ್ಮನ ಅಮ್ಮ ಮರೆಮ್ಮ ಗಂಡ ಪರಮಪ್ಪ ಇವಳು ತೀರಿಕೊಂಡಿದ್ದಳು. ಆದ್ದರಿಂದ ನಮ್ಮ ಆಯಿ ಅಂತ್ಯಕ್ರಿಯೆಗೆ ನಮ್ಮೂರಿನಿಂದ ನಾನು ಮತ್ತು ನಮ್ಮ ತಾಯಿಯಾದ ಯಲ್ಲಮ್ಮ ಗಂಡ ಬಸಲಿಂಗಪ್ಪ ಹಾಗೂ ಸಂಬಂಧಿಕರಾದ ಮಲ್ಲಿಕಾಜರ್ುನ ತಂದೆ ರಾಚಪ್ಪ ಮ್ಯಾಗೆರಿ, ಮಲ್ಲಪ್ಪ ತಂದೆ ಬಸಣ್ಣ ಅಜರ್ುಣಗಿ, ಚನ್ನಮ್ಮ ಗಂಡ ಮಲ್ಲಿಕಾಜರ್ುನ, ದುರ್ಗಮ್ಮ ಗಂಡ ಗಾಳೆಪ್ಪ, ಲಕ್ಷ್ಮೀ ಗಂಡ ನಿಂಗಪ್ಪ ಡೂರ್ರೆ ಮತ್ತು ಅವಳ ಗಂಡನಾದ ನಿಂಗಪ್ಪ ತಂದೆ ಹಣಮಂತ ಡೂರ್ರೆ ಎಲ್ಲರೂ ಸೇರಿ ನಮ್ಮೂರ ನಾಗಪ್ಪ ತಂದೆ ಬಸವರಾಜ ಈತನ ಟಂ ಟಂ ಅಟೋ ನಂ. ಕೆಎ 33/7054 ನೇದ್ದನ್ನು ಬಾಡಿಗೆ ಮುಗಿಸಿಕೊಂಡು ಉಳ್ಳೆಸೂಗೂರು ಗ್ರಾಮಕ್ಕೆ ಹೋಗಿ ನಮ್ಮ ಆಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಅಂತ್ಯಕ್ರಿಯೇ ಮುಗಿದ ನಂತರ ನಾವು ತಂದ ಟಂ ಟಂ ದಲ್ಲಿ ನಾವು ಬೆಳಗ್ಗೆ ಬಂದ ಜನರು ಕುಳಿತುಕೊಂಡು ಉಳ್ಳೆಸೂಗೂರದಿಂದ ಮರಳಿ ಹಾಲಗೇರಾಕ್ಕೆ ಹೊರಟೆವು. ಸದರಿ ಟಂ ಟಂ ಅನ್ನು ನಾಗಪ್ಪ ತಂದೆ ಬಸವರಾಜ ಸಾ:ಹಾಲಗೇರಾ ಈತನು ಚಲಾಯಿಸಿಕೊಂಡು ಹೊರಟನು. ಹಾಲಗೇರಾ-ಉಳ್ಳೆಸೂಗೂರು ರೋಡ ಹೊರಟೂರ ಗ್ರಾಮದ ಕೆರೆ ಪಕ್ಕದಲ್ಲಿ ರೋಡಿನ ಮೇಲೆ ಸಾಯಂಕಾಲ 6-30 ಗಂಟೆ ಸುಮಾರಿಗೆ ನಾವು ಕುಳಿತು ಹೊರಟ ಟಂ ಟಂ ನಿಧಾನವಾಗಿ ಹೋಗುತ್ತಿದ್ದಾಗ ಎದರುಗಡೆಯಿಂದ ಒಂದು ಟ್ರ್ಯಾಕ್ಟರದಲ್ಲಿ ಅದರ ಚಾಲಕನು ಹತ್ತಿ ತುಂಬಿಕೊಂಡು ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತು ಹೊರಟ ಟಂ ಟಂ ಗೆ ಡಿಕ್ಕಪಡಿಸಿದಾಗ ಟಂ ಟಂ ದಲ್ಲಿದ್ದವರ ಪೈಕಿ ಕೆಲವರು ಕೆಳಗೆ ಬಿದ್ದರು, ಇನ್ನು ಕೆಲವರು ಟಂ ಟಂ ದಲ್ಲಿಯೇ ಸಿಕ್ಕಿ ಹಾಕಿಕೊಂಡು ಗಾಯಗೊಂಡರು. ಅಪಘಾತದಲ್ಲಿ ನನಗೆ ಎಡಗಾಲ ಮೊಳಕಾಲಿಗೆ ತರಚಿದ ಗಾಯವಾಗಿತ್ತು. ನಮ್ಮ ತಾಯಿ ಯಲ್ಲಮ್ಮಳಿಗೆ ಎಡ ಕಣ್ಣಿನ ಹತ್ತಿರ ತರಚಿದ ಗಾಯವಾಗಿತ್ತು. ಮಲ್ಲಿಕಾಜರ್ುನ ಈತನಿಗೆ ಬಲಗಾಲಿಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ಎಲುಬು ಮುರಿದಿತ್ತು. ಮಲ್ಲಪ್ಪ ಅಜರ್ುಣಗಿ ಈತನಿಗೆ ಹಲ್ಲು ಮುರಿದಿತ್ತು. ಇನ್ನುಳಿದ ಚನ್ನಮ್ಮ ಗಂಡ ಮಲ್ಲಿಕಾಜರ್ುನ, ದುರ್ಗಮ್ಮ ಗಂಡ ಗಾಳೆಪ್ಪ, ಲಕ್ಷ್ಮೀ ಗಂಡ ನಿಂಗಪ್ಪ ಡೂರ್ರೆ ಮತ್ತು ಅವಳ ಗಂಡನಾದ ನಿಂಗಪ್ಪ ತಂದೆ ಹಣಮಂತ ಡೂರ್ರೆ ಇವರಿಗೆ ಅಲ್ಲಲ್ಲಿ ಸಣ್ಣ ಪುಟ್ಟ ತರಚಿದ ರಕ್ತ ಮತ್ತು ಗುಪ್ತಗಾಯಗಳಾಗಿದ್ದವು. ಟ್ರ್ಯಾಕ್ಟರ ಚಾಲಕನು ಸ್ವಲ್ಪ ಮುಂದೆ ಹೋಗಿ ತನ್ನ ಟ್ರ್ಯಾಕ್ಟರ ನಿಲ್ಲಿಸಿ, ನಮ್ಮ ಹತ್ತಿರ ಬಂದು ನಮಗೆ ನೋಡಿದಾಗ ನಾವು ಅವನಿಗೆ ಹೆಸರು ವಿಳಾಸ ಕೇಳಿದಾಗ ಅವನು ತನ್ನ ಹೆಸರು ಮರೆಪ್ಪ ತಂದೆ ಚಂದಪ್ಪ ಮಡಿವಾಳ ಸಾ:ಉಳ್ಳೆಸೂಗೂರು ಎಂದು ಹೇಳಿ ಜನ ಸೇರುವುದು ನೋಡಿ ಅಲ್ಲಿಂದ ಓಡಿ ಹೋದನು. ಟ್ರ್ಯಾಕ್ಟರಕ್ಕೆ ನೊಂದಣಿ ನಂ. ಕಾಣುತ್ತಿಲ್ಲ ಇಂಜನ್ ನಂ. ಚಎಎಖ00011 ಇದ್ದು, ಟ್ರ್ಯಾಲಿ ನಂ. ಕೆಎ ಟಿಎ 3467 ಇರುವುದಾಗಿ ಅಲ್ಲಿದ್ದವರು ನೋಡಿ ನನಗೆ ಹೇಳಿರುತ್ತಾರೆ. ನಮ್ಮಲ್ಲಿಯೇ ಯಾರೋ 108 ಅಂಬ್ಯುಲೇನ್ಸಗೆ ಕರೆ ಮಾಡಿದ್ದರಿಂದ 108 ಅಂಬ್ಯುಲೇನ್ಸ ಬಂದಾಗ ನಾವೆಲ್ಲರು ಅದರಲ್ಲಿ ಕುಳಿತು ಉಪಚಾರಕ್ಕಾಗಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾದೆವು. ಇಲ್ಲಿನ ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಡಿದಾಗ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದು ನಮಗೆ ವಿಚಾರಿಸಿದಾಗ ನಾವು ನಮ್ಮ ಹಿರಿಯರಿಗೆ ವಿಚಾರ ಮಾಡಿ, ಅವರು ದೂರು ಕೊಡು ಅಂತಾ ಹೇಳಿದರೆ ಠಾಣೆಗೆ ಬಂದು ಕೊಡುತ್ತೇವೆ ಎಂದು ತಿಳಿಸಿರುತ್ತೇವೆ. ಈಗ ನಮ್ಮ ಹಿರಿಯರಿಗೆ ವಿಚಾರಣೆ ಮಾಡಿದ್ದು, ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿ ಎಂದು ಹೇಳಿದ್ದರಿಂದ ಈಗ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಹತ್ತಿ ತುಂಬಿದ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತು ಹೊರಟ ಟಂ ಟಂ ಗೆ ಡಿಕ್ಕಿಪಡಿಸಿ ನಮಗೆ ಭಾರಿ ಮತ್ತು ಸಾದಾಗಾಯಪಡಿಸಿ ಓಡಿ ಹೋಗಿರುತ್ತಾನೆ. ಸದರಿ ಟ್ರ್ಯಾಕ್ಟರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 15/2020 ಕಲಂ: 279,337,338 ಐಪಿಸಿ ಸಂ 187 ಐಎಮ್ವಿ ಎಕ್ಟ್ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!