ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/02/2020

By blogger on ಬುಧವಾರ, ಫೆಬ್ರವರಿ 12, 2020


                                       ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12/02/2020
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- .41/2020 ಕಲಂ 392 ಐಪಿಸಿ:- ಇಂದು ದಿನಾಂಕ: 12/02/2020 ರಂದು 2.00 ಪಿ.ಎಂ.ಕ್ಕೆ ಶ್ರೀ ಶಾಮನಾರಾಯಣ ತಂ/ ನಂದಲಾಲ ಮೌರ್ಯ ಸಾ|| ಸಾತರ, ಸರಾಯಿ ಮಮರೇಜ್, ಫೂಲಪುರ್ ತಾ|| ಹಂಡಿಯಾ ಜಿ|| ಅಲಹಾಬಾದ ಹಾ.ವ|| ಎ-1 ಪ್ಲಾಟ್, ಎಂ.ಡಿ.ಸಿ.ಐ, ಜಕೆಕುರ, ಚೌರಸ್ತಾ ಉಮಗರ್ಾರವರು ಠಾಣೆಗೆ ಹಾಜರಾಗಿ ಹಿಂದಿಯಲ್ಲಿ ನೀಡಿದ ಹೇಳಿಕೆಯನ್ನು ಕನ್ನಡದಲ್ಲಿ ಟೈಪ್ ಮಾಡಿಸಿದ್ದು ಸದರಿ ಹೇಳಿಕೆ ಸಾರಾಂಶ ಏನೆಂದರೆ, ದಿನಾಂಕ:10/02/2020 ರಂದು ಕನರ್ಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಕಾರಟಗಿಯ  ಪಟ್ಟಣದ ಮೆ.ಕೇದಾರನಾಥ ಆಗ್ರೋ ಫುಡ್ಸ ಇಂದ ಅಶೋಕಾ ಲೈಲ್ಯಾಂಡ್ ಲಾರಿ ಸಂ. ಕೆಎ-33 ಬಿ-0004 ರಲ್ಲಿ 25 ಕಿಲೋ ಗ್ರಾಂ. ಒಟ್ಟು 500 ಪಾಕೇಟ್ಗಳನ್ನು ಲೋಡ ಮಾಡಿ ರಾತ್ರಿಯಾಗಿದ್ದರಿಂದ ಕಾರಟಗಿಯಲ್ಲಿ ಮಲಗಿ ದಿನಾಂಕ: 11/02/2020 ರಂದು ಬೆಳಿಗ್ಗೆ 10.00 ಎ.ಎಂ.ಕ್ಕೆ ಕಾರಟಗಿ ಇಂದ ಉಮಗರ್ಾಕ್ಕೆ ಹೊರಟು 2.00 ಪಿ.ಎಂ ಸುಮಾರಿಗೆ ಹತ್ತಿಗುಡೂರ ದಾಟಿ ರಸ್ತಾಪುರ ಕಮಾನ್ ಇನ್ನೂ 500 ಮೀಟರ ಅಂತರದಲ್ಲಿದ್ದಾಗ ನನ್ನ ಹಿಂದಿನಿಂದ ಒಂದು ಮೋಟರ ಸೈಕಲದಲ್ಲಿ ಇಬ್ಬರು ವ್ಯಕ್ತಿಗಳು ಹಿಂಬಾಲಿಸಿಕೊಂಡು ಬಂದು ನನ್ನ ಲಾರಿಗೆ ಕೈ ಮಾಡಿದಾಗ ನಾನು ನನ್ನ ಲಾರಿಯನ್ನು ನಿಲ್ಲಿಸಿದೆನು. ಸ್ವಲ್ಪ ಸಮಯದಲ್ಲಿ ಇನ್ನೊಂದು ಮೋಟರ ಸೈಕಲದಲ್ಲಿ ಇಬ್ಬರು ಬಂದಿದ್ದು, ಅವರಲ್ಲಿ ಒಬ್ಬನು ಮೋಟರ ಸೈಕಲದಿಂದ ಇಳಿದಾಗ ಇನ್ನೊಬ್ಬನು ಮೋಟರ ಸೈಕಲ ನಡೆಸಿಕೊಂಡು ಶಹಾಪುರ ಕಡೆಗೆ ಹೋದನು. ನಂತರ ಅವರಿಬ್ಬರು ನನಗೆ ಲಾರಿಯಿಂದ ಕೆಳಗೆ ಇಳಿಸಿ ಲಾರಿಯಲ್ಲಿ ಏನಿದೆ ಅಂತಾ ಇತ್ಯಾದಿ ವಿಚಾರಿಸಿ, ನಿನ್ನ ಹತ್ತಿರ ಇರುವ ಹಣ ಕೊಡು ಅಂತಾ ಕೇಳಿದರು ಆಗ ನಾನು ನನ್ನ ಹತ್ತಿರ ಹಣ ಇರುವುದಿಲ್ಲ ಅಂತಾ ಹೇಳಿ ನಾನು ಲಾರಿಯಲ್ಲಿ ಹತ್ತಿದೆನು. ಅಗ ಅವರಿಬ್ಬರು ಲಾರಿಯಲ್ಲಿ ಹತ್ತಿ ನನಗೆ ಕೈಯಿಂದ ಹೊಡೆದು ಹಣ ಕೊಡಲಿಲ್ಲ ಅಂದರೆ ನಿನ್ನನ್ನು ಖಲಾಸ್ ಮಾಡುತ್ತೇವೆ ಅಂತಾ ಹೆದರಿಸಿ ನನ್ನ ಪ್ಯಾಂಟಿನ್ ಎಡ ಜೇಬಿನಲ್ಲಿನ ಪಸರ್ಿನಲ್ಲಿದ್ದ ನಗದು ಹಣ 20,050=00 ರೂ.ಗಳನ್ನು ತೆಗೆದುಕೊಂಡು ಲಾರಿಯಿಂದ ಇಳಿದು ಹೋಗುತ್ತಾ ನೀನೇನಾದರೂ ಪೊಲೀಸ್ ಠಾಣೆಗೆ ಹೋದರೆ ನಿನಗೆ ಖಲಾಸ ಮಾಡುತ್ತೇವೆ ಅಂತಾ ಹೆದರಿಸಿ ಮೋಟರ ಸೈಕಲದಲ್ಲಿ ಕುಳಿತು ಶಹಾಪುರ ಕಡೆಗೆ ಹೋದರು. ನಂತರ ನಾನು ವಿಷಯವನ್ನು ಎಸ್.ಎಲ್.ಟಿ ಟ್ರಾನ್ಸಪೋರ್ಟನ ಸೂಪರವೈಜರ್ ಅನೀಲ್ ತಂ/ ಶಂಕರ ರಾಠೋಡ ಇವರಿಗೆ ಫೋನ್ ಮಾಡಿ ತಿಳಿಸಿದಾಗ ಅವರು ಹತ್ತಿರದ ಪೊಲೀಸ್ ಠಾಣೆಗೆ ಹೋಗು ಅಂತಾ ಹೇಳಿದರು ಆಗ ನನಗೆ ಭಯವಾಗಿದೆ ನಾನು ಉಮಗರ್ಾಕ್ಕೆ ಬರುತ್ತೇನೆ ಅಂತಾ ಹೇಳಿ ಲಾರಿಯನ್ನು ನಡೆಸಿಕೊಂಡು 6.30 ಪಿ.ಎಂ.ಸುಮಾರಿಗೆ ಉಮಗರ್ಾಕ್ಕೆ ಹೋಗಿ ಎಸ್.ಎಲ್.ಟಿ ಮಿಲನಲ್ಲಿ ಲಾರಿಯನ್ನು ನಿಲ್ಲಿಸಿದೆನು. ನಂತರ ವಿಜಯ ತಂ/ ಶೇಷೆರಾವ ಪವಾರನು ಈತನು ಬಂದು ಮಣಿಕಂಠ ತಂ/ ನರೇಂದ್ರ ರಾಠೋಡ ಇವರು ನಿನಗೆ ಶಹಾಪುರಕ್ಕೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ ಬಾ ಹೋಗೋಣ ಅಂತಾ ಹೇಳಿ ಇಂದು ದಿನಾಂಕ: 12/02/2020 ರಂದು ರಾತ್ರಿ 00.30 ಎ.ಎಂ.ಕ್ಕೆ ಉಮಗರ್ಾ ಇಂದ ಶಹಾಪುರಕ್ಕೆ ಕರೆದುಕೊಂಡು ಬಂದಿರುತ್ತಾರೆ. ಘಟನೆಯಲ್ಲಿ ನನಗೆ ಯಾವುದೇ ಗಾಯವಗೈರೆ ಆಗಿರುವುದಿಲ್ಲ ಕಾರಣ ನಾನು ಆಸ್ಪತ್ರೆಗೆ ಹೋಗುವುದಿಲ್ಲ ಮತ್ತು ಭಯದಲ್ಲಿ ಆರೋಪಿತರು ತಂದ ಮೋಟರ ಸೈಕಲ್ ನಂಬರ ನೋಡಿರುವುದಿಲ್ಲ ಆದರೆ ನಾನು ಲಾರಿಯಿಂದ ಇಳಿದ ಸಮಯದಲ್ಲಿ ಅವರಿಬ್ಬರ ಫೋಟೊವನ್ನು ನನ್ನ ಮೊಬೈಲಿನಲ್ಲಿ ತೆಗೆದಿರುತ್ತೇನೆ. ಘಟನೆ ಜರುಗಿದ ನಂತರ ನಾನು ಭಯದಲ್ಲಿ ಉಮಗರ್ಾಕ್ಕೆ ಹೋಗಿ ಮರಳಿ ಬರಲು ತಡವಾಗಿರುತ್ತದೆ. ಕಾರಣ ನನಗೆ ಹೊಡೆ ಬಡೆ ಮಾಡಿ ನನ್ನಿಂದ 20,050=00 ರೂ. ಹಣ ಕಿತ್ತಿಕೊಂಡವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.41/2020 ಕಲಂ 392 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.   
        
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 41/2018. ಕಲಂ. 279,337,338 ಐ.ಪಿ.ಸಿ. & 187 ಐಎಂವಿ ಯಾಕ್ಟ:- ,      ಇಂದು ದಿನಾಂಕ: 12/02/2020 ರಂದು ಮದ್ಯಾಹ್ನ 13-30 ಗಂಟೆಗೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ. ಇದೆ ಅಂತ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ 13-45 ಗಂಟೆಗೆ ಹೋಗಿ ಗಾಯಾಳುದಾರನಾದ ಶ್ರೀ  ಸಂತೋಷ ತಂದೆ ಬಸವರಾಜ ತಂಬಾಕೆ ವ|| 31 ಜಾ|| ಲಿಂಗಾಯತ ಉ|| ಬಸ್ಸ ಚಾಲಕ ಶಹಾಪೂರ ಡಿಪೊ ಸಾ|| ಲೋಕಾಪೂರ ತಾ|| ಮುದೋಳ ಜಿ|| ಬಾಗಲಕೊಟ ಹಾ|| ವ|| ಹಳಿಪೇಟ ಶಹಾಪೂರ ಇವರ ಹೇಳಿಕೆಯನ್ನು 14-00 ಗಂಟೆಯಿಂದ 15-20 ಗಂಟೆಯ ವರೆಗೆ ಪಡೆದುಕೊಂಡು ಮರಳಿ ಠಾಣೆಗೆ 16-00 ಗಂಟೆಗೆ ಬಂದು ಸದರಿ ಹೇಳಿಕೆಯ ಸಾರಾಂಶವೆನೆಂದರೆ, ಹೀಗಿದ್ದು ನನಗೆ ಮಾರ್ಗ ಸಂಖ್ಯೆ 13/14 ನೇದ್ದಕ್ಕೆ ಬಸ್ಸ ನಂ ಕೆಎ-33ಎಫ್-0358 ನೇದ್ದು ಮತ್ತು ನನಗೆ ಚಾಲಕನಾಗಿ, ಹಾಗೂ ನಿವರ್ಾಹಕನಾಗಿ ರಮೇಶ ತಂದೆ ಈರಪ್ಪ ಹೋಸಮನಿ ಇಬ್ಬರಿಗು ಕರ್ತವ್ಯಕ್ಕೆ ನೆಮಿಸಿದ್ದರಿಂದ ನಾನು ದಿನಾಂಕ 12/02/2020 ರಂದು ಬೇಳಿಗ್ಗೆ ಬಸ್ಸನ್ನು ತೆಗೆದುಕೊಂಡು ಶಹಾಪೂರ ದಿಂದ 7-00 ಗಂಟೆಗೆ ರಾಯಚೂರ-ಬೀಜಾಪೂರಕ್ಕೆ ಹೋರಟು ನಿವರ್ಾಹಕನಾಗಿ ರಮೇಶ ಈತನು ಇದ್ದನು ರಾಯಚೂರಕ್ಕೆ ಹೋಗಿ ಮರಳಿ ಬೀಜಾಪೂರಕ್ಕೆ ಹೋಗುತ್ತಿರುವಾಗ ರಾಯಚೂರ-ಶಹಾಪೂರ ಮುಖ್ಯ ರಸ್ತೆಯ ಮೇಲೆ ರಸ್ತಾಪೂರ ಕ್ರಾಸ್ ದಾಟಿ ಅಂದಾಜು 200 ಮೀಟರ ಅಂತರದಲ್ಲಿ ಶಹಾಪೂರಕಡೆಗೆ ಮದ್ಯಾಹ್ನ 12-30 ಗಂಟೆಯಸುಮಾರಿಗೆ ಹೋಗುತ್ತಿರುವಾಗ ಎದರುಗಡೆಯಿಂದ ಅಂದರೆ ಶಹಾಪೂರ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಬಸ್ಸಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ಸದರಿ ಅಪಗಾತದಲ್ಲಿ 1] ನನಗೆ ಸೊಂಟಕ್ಕೆ, ಹೋಟ್ಟೆಯ ಕೆಳಗೆ ಭಾರಿ ಗುಪ್ತಗಾಯ, ಎಡಗಾಲ ಮೋಳಕಾಲು ಕೆಳಗೆ ಗುಪ್ತಗಾಯ, ಬಸ್ಸಿನ ನಿವರ್ಾಹಕನಾದ 2] ರಮೇಶ ತಂದೆ ಈರಪ್ಪ ಈತನಿಗೆ ನೋಡಲಾಗಿ ಬಲಗಡೆ ಏದೆಗೆ, ಎಡಗಾಲ ಮೋಳಕಾಲು ಕೇಳಗೆ ಗುಪ್ತಗಾಯ, ಬಸ್ಸಿನಲ್ಲಿದ್ದ ಪ್ರಯಾಣಿಕರಾದ 3] ಗಂಗಣ್ಣ ತಂದೆ ಮರೆಪ್ಪ ಗಣಿಕಲ್ ಈತನಿಗೆ ಎದೆಗೆ ಗುಪ್ತಗಾಯ, 4] ಅಂದೆರಮ್ಮ ಗಂಡ ಗಂಗಣ್ಣ ಗಣಿಕಲ್ ಇವರಿಗೆ ಎದೆಗೆ, ಬಲಗಡೆ ಹೊಟ್ಟೆಗೆ, ಎಡಮೋಳಕಾಲ ಕೆಳಗೆ ಗುಪ್ತಗಾಯ, 5] ಮಲ್ಲಯ್ಯ ತಂದೆ ಭೀಮಪ್ಪ ದೊಡ್ಡಮನಿ ಈತನಿಗೆ ಮೂಗಿನ ಹತ್ತಿರ ಗುಪ್ತಗಾಯ, 6] ಮಲ್ಲಮ್ಮ ಗಂಡ ಹಣಮಂತ ದೊರಿ ಇವರಿಗೆ ಬಲಗಾಲಿನ ಮೋಳಕಾಲು ಕೆಳಗೆ ಗುಪ್ತಗಾಯ, 7] ಲಕ್ಷ್ಮೀ ಗಂಡ ರಂಗಪ್ಪ ದೋರಿ ಇವಳಿಗೆ ಕುತ್ತಿಗೆಗೆ ಗುಪ್ತಗಾಯ, 8] ಅಜಯಸಿಂಗ ತಂದೆ ಶೇಖಂದರಸಿಂಗ್ ಇವರಿಗೆ ತಲೆಗೆ, ಎಡಗಾಲಿನ ಮೋಳಕಾಲಿನ ಕೆಳಗೆ  ಗುಪ್ತಗಾಯ, 9] ಎಂ.ಡಿ. ಇಸ್ಮಾಯಿಲ ಸಾಬ ತಂದೆ ದಾದುಸಾಬ ದಾವಣಿಗೇರಿ ಇವರಿಗೆ ಎದೆಗೆ ಗುಪ್ತಗಾಯ, ಬಗಾಲಿನ ಮೋಳಕಾಲಿಗೆ ಭಾರಿ ಗುಪ್ತಗಾಯ, 10] ಶಂಕರ ತಂದೆ ಚಂದಪ್ಪ ಶಿಲ್ಪಿ ಇವರಿಗೆ ಹಣೆಗೆ ರಕ್ತಗಾಯ, ಕುತ್ತಿಗೆಗೆ, ಎಡಗಾಲಿಗೆ ಗುಪ್ತಗಾಯ, 11] ಭೀಮರಾಯ ತಂದೆ ಯಮನಪ್ಪ ಹಂಗರಿಗಿ ಇವರಿಗೆ ಎದೆಗೆ ಗುಪ್ತಗಾಯ, ಎಡಗಾಲಿಗೆ ತರಚಿದಗಾಯ, 12] ಚಂದ್ರಾಕಾಂತ ತಂದೆ ಯಮನಪ್ಪಮ ದೋರಿ ಇವರಿಗೆ ಬಲಕಣ್ಣಿಗೆ ಭಾರಿ ರಕ್ತಗಾಯ, ಎದೆಗೆ ಗುಪ್ತಗಾಯ, 13] ಅರುಣಕುಮಾರ ತಂದೆ ಚಂದ್ರಕಾಂತ ದೊರಿ ಈತನಿಗೆ ಬಲಗಡೆ ಎದೆಗೆ ಗುಪ್ತಗಾಯ, 14] ಬಸವರಾಜ ತಂದೆ ಸತೀಶ ಪಾಟೀಲ್ ಇವರಿಗೆ ತುಟಿಗೆ, ಎಡಗಡೆ ಕುತ್ತಿಗೆಗೆ ಗುಪ್ತಗಾಯ 15] ಮಾರ್ತಂಡಪ್ಪ ತಂದೆ ಮೈಲಾರೆಪ್ಪ ಚಿಕ್ಕಮೇಟಿ ಇವರಿಗೆ ಗಂಟಲಿಗೆ, ಎಡಮೊಳಕಾಲಿನ ಕೆಳಗೆ ಗುಪ್ತಗಾಯವಾಗಿರುತ್ತದೆ, ನಮಗೆ ಅಪಘಾತ ಮಾಡಿದ ಟಿಪ್ಪರ ಚಾಲಕನಿಗೆ ನೋಡಿ ಹೆಸರು ವಿಚಾರಿಸಲಾಗಿ ತನ್ನ ಹೆಸರು ಬಸವರಾಜ ತಂದೆ ಬಸಲಿಂಗಪ್ಪ ಸಾ|| ವಿಬೂತಿಹಳ್ಳಿ ಅಂತ ತಿಳಿಸಿ ಸ್ವಲ್ಪ ನಿಂತಹಾಗೆ ಮಾಡಿ ಓಡಿಓದನು, ಅಪಘಾತಮಾಡಿದ ಟಿಪ್ಪರ ನೋಡಲಾಗಿ ಅದರ ನಂ ಕೆಎ-51ಸಿ-5778 ನೇದ್ದು ಇದ್ದು. ಟಿಪ್ಪರ ಮತ್ತು ನಮ್ಮ ಬಸ್ಸ ನಂ ಕೆಎ-33-ಎಫ್-0358 ನೇದ್ದು ಜಕಂ ಗೊಂಡಿರುತ್ತದೆ, ಸದರಿ ಅಪಘಾತವು ಮದ್ಯಾಹ್ನ 12-30 ಗಂಟೆಗೆ ರಸ್ತಾಪೂರ ಕ್ರಾಸ್ ಹತ್ತಿರ ಜರುಗಿರುತ್ತದೆ. ಆಗ ಅಂಬುಲೇನ್ಸಕ್ಕೆ ಪೋನ ಮಾಡಿದ್ದರಿಂದ ಅಂಬುಲೇನ್ಸ ಬಂದ ನಂತರ ಅಂಬುಲ್ಸದಲ್ಲಿ ಬಂದು ಶಹಾಪೂರದ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ಇರುತ್ತದೆ.
       ಆದ್ದರಿಂದ ಟಿಪ್ಪರ ನಂ ಕೆಎ-51ಸಿ-5778 ನೇದ್ದರ ಚಾಲಕ ಬಸವರಾಜನು ತನ್ನ ಟಿಪ್ಪರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಬಸ್ಸಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಗಾಯಗೊಳಿಸಿದವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 42/2019 ಕಲಂ: 279,337,338 ಐಪಿಸಿ ಮತ್ತು 187 ಐಎಂವಿ ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.                


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 14/2020 ಕಲಂ: 32, 34 ಕೆ.ಇ ಎಕ್ಟ್ 1965:- ಇಂದು ದಿನಾಂಕ: 12/02/2020 ರಂದು 9:30 ಪಿ.ಎಮ್.ಕ್ಕೆ ಶ್ರೀ.ಮೌನೇಶ್ವರ ಎ.ಎಸ್.ಐ. ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಶಂವೇನೆಂದರೆ, ದಿನಾಂಕ:12/02/2020 ರಂದು ಮಾನ್ಯ ಎಸ್.ಪಿ ಸಾಹೇಬರು ಯಾದಗಿರಿ ರವರು ಜಿಲ್ಲಾ ಅಪರಾಧ ಪತ್ತೆ ದಳ ತಂಡದವರು ಶ್ರೀ ಸದಾಶಿವ ಸೋನಾವನೆ ಪಿ.ಐ ಡಿ.ಸಿ.ಐ.ಬಿ ಮತ್ತು ಶ್ರೀ ಶಿವರಾಜ ಆರ್.ಎಸ್.ಐ ಡಿ.ಎ.ಆರ್ ರವರ ಮಾರ್ಗದರ್ಶನದಲ್ಲಿ ನಾನು ಮೌನೇಶ್ವರ ಎ.ಎಸ್.ಐ ವಡಗೇರಾ ಪೊಲೀಸ್ ಠಾಣೆ ನನಗೆ ಕರೆದುಕೊಂಡು ಬೆಂಡೆಬೆಂಬಳ್ಳಿ ಗ್ರಾಮಕ್ಕೆ ಎಕ್ಸೈಜ್ ರೇಡ ಕುರಿತು ಕರೆದುಕೊಂಡು ಹೋಗಿದ್ದು, ಅಲ್ಲಿ ನಮಗೆ ಪೊಲೀಸ್ ಓ.ಪಿ ಪಕ್ಕದಲ್ಲಿರುವ ವೆಂಕಟೇಶ ತಂದೆ ತಿಮ್ಮಯ್ಯ ಕಲಾಲ ಈತನು ಅನಧಿಕೃತವಾಗಿ ಯಾವುದೇ ಲೈಸನ್ಸ ಹೊಂದದೆ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ನಾವೆಲ್ಲರೂ ಸೇರಿಕೊಂಡು ಸಾಯಂಕಾಲ 6:30 ಗಂಟೆಗೆ ಸದರಿಯವನ ಅಂಗಡಿಗೆ ಹೋಗಿ ಪರಿಶೀಲಿಸಿ, ನೋಡಲಾಗಿ ಕೆಲವು ಜನರು ಕುಳಿತುಕೊಂಡು ಸರಾಯಿ ಕುಡಿಯುತ್ತಿದ್ದರು. ಅವನಿಗೆ ಎಲ್ಲಿಂದ ತಂದಿ ಅಂತಾ ಕೇಳಲಾಗಿ ನಾನು ಅನಧಿಕೃತವಾಗಿ ಅಂಗಡಿಯಿಂದ ತೆಗೆದುಕೊಂಡು ಮಾರಾಟ ಮಾಡುತ್ತಿದ್ದೇನೆ ಅಂತಾ ತಿಳಿಸಿದನು. ಅವನ ಹೆಸರು ಕೇಳಲಾಗಿ ವೆಂಕಟೇಶ ತಂದೆ ತಿಮ್ಮಯ್ಯ ಕಲಾಲ, ವ:24, ಜಾ:ಇಳಗೇರ, ಉ:ಸರಾಯಿ ಮಾರಾಟ ಸಾ:ಬೆಂಡೆಬೆಂಬಳ್ಳಿ ಅಂತಾ ತಿಳಿಸಿದನು. ಆಗ ಅವನ ಹತ್ತಿರ ಇದ್ದ 5775/- ರೂ. ಕಿಮ್ಮತ್ತಿನ ಸರಾಯಿಯನ್ನು ಜಪ್ತಿ ಮಾಡಿಕೊಂಡು ಅಲ್ಲಿಂದ ಮತ್ತೊಂದೆಡೆಗೆ ಸರಾಯಿ ಮಾರಾಟ ಮಾಡುತ್ತಿದ್ದಾರೆ ಅಂತಾ ಬಾತ್ಮಿದಾರರು ಮಾಹಿತಿ ನೀಡಿದ ಮೇರೆಗೆ ಅಲ್ಲಿ ಹೋಗಿ ಮರೆಗೆ ನಿಂತು ಕಿರಾಣಿ ಅಂಗಡಿ ವ್ಯಾಪಾರಸ್ಥನಿಗೆ ಸರಾಯಿ ಕೇಳಲಾಗಿ ಅವನು ಬಾಟಲಿಗಳನ್ನು ತೆಗೆಯುವಷ್ಟರಲ್ಲಿ ಅವನಿಗೆ ಹಿಡಿದು ಎಲ್ಲಿಂದ ತಂದಿ ಅಂತಾ ವಿಚಾರಿಸಿದಾಗ ಮತ್ತು ನಿನ್ನ ಹತ್ತಿರ ಸರಕಾರದ ಪರವಾನಿಗೆ ಇದೆಯೇ ಅಂತಾ ಕೇಳಲಾಗಿ ಅವನ ಹತ್ತಿರ ಯಾವುದೇ ಪರವಾನಿಗೆ ಇರುವುದಿಲ್ಲ ಅಂತಾ ಅನಧಿಕೃತವಾಗಿ ಮಾರಾಟ ಮಾಡುತ್ತೇನೆ ಅಂತಾ ತಿಳಿಸಿದನು. ಅವನ ಹೆಸರು ಕೇಳಲಾಗಿ ಮೌನೇಶ ತಂದೆ ಬಸವರಾಜ ಇಳಗೇರ @ ಕಲಾಲ ವ:46 ಸಾ:ಬೆಂಡೆಬೆಂಬಳ್ಳಿ ಅಂತಾ ಹೇಳಿ ಓಡಿ ಹೋದನು. ಅಂಗಡಿಯಲ್ಲಿದ್ದ 3853/- ರೂ. ಕಿಮ್ಮತ್ತಿನ ಸರಾಯಿ ಬಾಟಲ ಮತ್ತು ಪಾಕಿಟಗಳನ್ನು ಜಪ್ತಿ ಮಾಡಿಕೊಂಡು ಆ ನಂತರ ಆರೋಪಿ ವೆಂಕಟೇಶ ತಂದೆ ತಿಮ್ಮಯ್ಯ ಈತನನ್ನು ಜಪ್ತಿ ಪಂಚನಾಮೆಯೊಂದಿಗೆ ಕರೆದುಕೊಂಡು ಠಾಣೆಗೆ ಬಂದೆನು. ವೆಂಕಟೇಶ ತಂದೆ ತಿಮ್ಮಯ್ಯ ಕಲಾಲ, ವ:24, ಜಾ:ಇಳಗೇರ, ಉ:ಸರಾಯಿ ಮಾರಾಟ ಸಾ:ಬೆಂಡೆಬೆಂಬಳ್ಳಿ ಈತನ  ಹತ್ತಿರ ದೊರೆತ ಸರಾಯಿ 1) 6 ಕಿಂಗಫಿಶರ್ ಸ್ಟ್ರಾಂಗ 650 ಎಮ್.ಎಲ್ ಬಾಟಲಿಗಳು ಬೆಲೆ 145ಘಿ6=870/- 2) 15 ಒಲ್ಡ್ ಟವರೇನ 180 ಎಮ್.ಎಲ್ ಪೌಚುಗಳು ಬೆಲೆ 74ಘಿ15=1110/- 3) 17 ಓರಿಜಿನಲ್ ಚಾಯಿಸ್ 90 ಎಮ್.ಎಲ್. ಪೌಚುಗಳು 30ಘಿ17=510/- 4) 9 ಮ್ಯಾಕ್ಡುವೆಲ್ 90 ಎಮ್.ಎಲ್. ಪೌಚುಗಳು 45ಘಿ9=405/- 5) 96 ಓರಿಜಿನಲ್ ಚಾಯಿಸ್ 90 ಎಮ್.ಎಲ್. ಪೌಚುಗಳು 30ಘಿ96=2880/- ಮತ್ತು ಆರೋಪಿತನಾದ ಮೌನೇಶನ ಹತ್ತಿರ ದೊರೆತ ಸರಾಯಿ 1)26 ಓರಿಜಿನಲ್ ಚಾಯಿಸ್ 90 ಎಮ್.ಎಲ್. ಪೌಚುಗಳು 30.32ಘಿ26=788.32/-, 2) 9 ಕಿಂಗಫಿಶರ್ ಸ್ಟ್ರಾಂಗ 650 ಎಮ್.ಎಲ್ ಬಾಟಲಿಗಳು ಬೆಲೆ 145ಘಿ9=1305/-, 3) 22 ಕಿಂಗಫಿಶರ್ ಸ್ಟ್ರಾಂಗ 330 ಎಮ್.ಎಲ್ ಬಾಟಲಿಗಳು ಬೆಲೆ 80ಘಿ22=1760/- ಈ ಬಗ್ಗೆ ಪ್ರತ್ಯೇಕ ಜಪ್ತಿ ಪಂಚನಾಮೆ ಕೈಗೊಳ್ಳಲಾಗಿದೆ. ಮತ್ತು ಸ್ಯಾಂಪಲ್ ಮುದ್ದೇಮಾಲನ್ನು ರಸಾಯನಿಕ ಪರೀಕ್ಷೆ ಕುರಿತು ಸಂಗ್ರಹಿಸಲಾಗಿದೆ. ಕಾರಣ ಸದರಿ ಆಪಾಧಿತರು ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದು, ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಸರಕಾರಿ ತಫರ್ೆಯಿಂದ ಈ ದೂರು ಸಲ್ಲಿಸಲಾಗಿದೆ ಎಂದು ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:14/2020 ಕಲಂ:32, 34 ಕೆ.ಇ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು. 

ಗುರಮಠಕಲ್ ಪೊಲೀಸ ಠಾಣೆ ಗುನ್ನೆ ನಂ:- 25/2020 ಕಲಂ 323, 324, 354, 504, 506 ಐಪಿಸಿ  :- ಇಂದು ದಿನಾಂಕ 12.02.2020 ರಂದು ಸಾಯಂಕಾಲ 6.15 ಗಂಟೆ ಸುಮಾರಿಗೆ ಪಿರ್ಯಾಧಿ ಮನೆಯಲ್ಲಿದ್ದಾಗ ಆರೋಪಿತನು ಪಿರ್ಯಾಧಿ ಮನೆಗೆ ಬಂದು ಏ ಬೋಸಡಿ ಈ ಮನೆಗೆ ಯಾರಿಗೆ ಕೋಡುತ್ತಿ ಅಂತಾ ಅವಾಚ್ಯಾಗಿ ಬೈದು ಪಿರ್ಯಾಧಿ ಯಾಕೆ ಬೈಯುತ್ತಿ ಅಂತಾ ಕೇಳಿದರೆ ಅವಳಿಗೆ ಕೈಯಿಂದ ಕಪಾಳಕ್ಕೆ ಹೊಡೆದು ನಂತರ ಮರಳಿ ತನ್ನ ಮನೆಗೆ ಹೋಗಿದ್ದು ನಂತರ ಪುನಃ ಸಮಯ ರಾತ್ರಿ 8.10 ಗಂಟೆ ಸುಮಾರಿಗೆ ಪಿರ್ಯಾಧಿ ಮನೆಗೆ ಬಂದು ಪಿರ್ಯಾಧಿಗೆ ಕೈಹಿಡಿದು ಎಳೆದಾಡಿ ಕೈ ಮುಷ್ಠಿ ಮಾಡಿ ಬೆನ್ನಿನ ಮೇಲೆ ಗುದ್ದಿ ಬಿಡಿಸಲು ಬಂದ ಪಿರ್ಯಾಧಿ ಮೊಮ್ಮಕ್ಕಳಿಗೆ ಕಬ್ಬಿಣದ ರಾಡಿನಿಂದ ಮತ್ತು ಕೈಯಿಂದ ಹೊಡೆದು ರಕ್ತಗಾಯ, ಗುಪ್ತಪೆಟ್ಟು ಮಾಡಿದ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 13/2020 ಕಲಂ 78 (3) ಕೆ.ಪಿ ಕಾಯ್ದೆ :- ಇಂದು ದಿನಾಂಕ: 12-02-2020 ರಂದು 04-00 ಪಿಎಮ್ ಕ್ಕೆ ಪಿ.ಎಸ್.ಐ ರವರು ಠಾಣೆಗೆ ಬಂದು 02-00 ಪಿ.ಎಕ್ ಕ್ಕೆ ಆನೂರ (ಬಿ) ಗ್ರಾಮದಲ್ಲಿ ಮಟಕಾ ಜೂಜಾಟದ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.13/2020 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 14/2020 ಕಲಂ 87 ಕೆ.ಪಿ ಕಾಯ್ದೆ:- ಇಂದು ದಿನಾಂಕ: 12-02-2020 ರಂದು 08-10 ಪಿಎಮ್ ಕ್ಕೆ ಪಿ.ಎಸ್.ಐ ರವರು ಠಾಣೆಗೆ ಬಂದು ನಾಗರಬಂಡಿ ಸಾಯಂಕಾಲ 05-45 ಗಂಟೆಗೆ ಅಂದರ ಬಾಹರ ಇಸ್ಪೆಟ  ಜೂಜಾಟದ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.14/2020 ಕಲಂ.87 ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!