ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/02/2020

By blogger on ಮಂಗಳವಾರ, ಫೆಬ್ರವರಿ 11, 2020


                                     ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11/02/2020 
ಯಾದಗಿರಿ ಗ್ರಾಮೀಣ ಠಾಣೆ ಗುನ್ನೆ ನಂ:- 22/2020 ಕಲಂ ಕಲಂ 323, 504, 506, 498(ಎ) ಸಂಗಡ 34 ಐಪಿಸಿ:- ಇಂದು ದಿನಾಂಕ 11-02-2020 ರಂದು 5 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀಮತಿ ನಾಗಮ್ಮಾ ಗಂಡ ರಾಜಶೇಖರ ಚಿಮಿಟಗೇರ ವಯಾ26 ಜಾ: ಕಬ್ಬಲಿಗೇರ ಉ: ಮನೆಗೆಲಸ ಸಾ: ಯರಗೋಳ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಝರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಅದರ ಸಾರಾಂಶನೆಂದೆರೆ ನನ್ನ ತವರು ಮನೆಯು ಚಿತಾಪೂರ ತಾಲೂಕಿನ ಕಮರಡಗಿ ಗ್ರಾಮವಿರುತ್ತದೆ. ನನ್ನ ತಂದೆ ತಾಯಿ ಇಬ್ಬರೂ ಮೃತಪಟ್ಟಿದ್ದು ನನಗೆ ಈಗ 4 ವರ್ಷಗಳ ಹಿಂದೆ ಯರಗೋಳ ಗ್ರಾಮದ ರಾಜಶೇಖರ ತಂದೆ ದುರ್ರಪ್ಪಾ ಚಿಮಿಟಿಗೇರ ಎಂಬುವವನೊಂದಿಗೆ ಮದುವೆಯಾಗಿರುತ್ತದೆ. ನಮಗೆ ಈಗ ಶ್ರಾವಣಿ ಅಂತಾ 3 ವರ್ಷದ ಒಬ್ಬಳು ಮಗಳಿರುತ್ತಾಳೆ. ನಮ್ಮ ಮನೆಯಲ್ಲಿ ನಾನು ನನ್ನ ಗಂಡನಾದ 1) ರಾಜಶೇಖರ ತಂದೆ ದುರ್ರಪ್ಪಾ ಚಿಮಿಟಿಗೇರ ಮಾವನಾದ 2) ದುರ್ರಪ್ಪಾ ತಂದೆ ಸಣ್ಣಸಾಬಣ್ಣಾ ಚಿಮಿಟಗೇರ ಮತ್ತು ಅತ್ತೆಯಾದ 3) ಯಲ್ಲಮ್ಮಾ ಗಂಡ ದುರ್ರಪ್ಪಾ ಚಿಮಿಟಗೇರ ಎಲ್ಲರೂ ಒಟ್ಟಾಗಿಯೇ ಇರುತ್ತೆವೆ. ನನಗೆ ಮದುವೆಯಾಗಿ ಸುಮಾರು 3 ತಿಂಗಳವರೆಗೆ ನಾನು ಮತ್ತು ನನ್ನ ಗಂಡ ಅನೋನ್ಯವಾಗಿ ಸಂಸಾರ ಮಾಡಿಕೊಂಡು ಹೋಗಿರುತ್ತೆವೆ, ನಂತರ ಮೇಲ್ಕಂಡವರೆಲ್ಲರೂ ಕೂಡಿಕೊಂಡು ನೀನು ನೋಡುವದಕ್ಕೆ ಸರಿಯಾಗಿ ಇಲ್ಲಾ, ನೀನು ನಮ್ಮ ಮನೆಯಲ್ಲಿ ಮತ್ತು ಹೊಲದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲಾ, ನೀನು ನಮ್ಮ ಮನೆಗೆ ತಕ್ಕ ಸೊಸೆಯಲ್ಲಾ, ನೀನು ನಮ್ಮ ಮನೆ ಬಿಟ್ಟು ಎಲ್ಲಾದರೂ ಹೋಗು ರಂಡಿ, ಬೋಸಡಿ ಅಂತಾ ದಿನಾಲು ಬೈದು ಕೈಯಿಂದ ಹೊಡೆಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕೊಳ ಕೊಡುತ್ತಿದ್ದರು, ಮತ್ತು ನನ್ನ ಗಂಡನು ಒಮ್ಮೊಮ್ಮೆ ಮನೆ ಬಿಟ್ಟು ಸುಮಾರು ಒಂದು 15 ದಿವಸ ಎಲ್ಲಿಯಾದರೂ ಹೇಳದೇ ಕೇಳದೆ ಮನೆಯಿಂದ ಹೋಗುತ್ತಿದ್ದನು. ಈ ವೇಳೆಯಲ್ಲಿ ಮನೆಯಲ್ಲಿ ರೇಷನ್ ಇಲ್ಲದೇ ನಾನು ಎಷ್ಟೋ ಸಲ ಉಪವಾಸ ಇರುತ್ತಿದ್ದೆನು. ಕೇಳದರೇ ನನ್ನ ಗಂಡನು ನನ್ನನ್ನು ಮನಬಂದಂತೆ ಹೊಡೆಯುತ್ತಿದ್ದನು. ನನ್ನ ಗಂಡ ಮತ್ತು ನನ್ನ ಅತ್ತೆ ಮಾವ ನನಗೆ ನೀಡುವ ಕಿರುಕುಳ ನನ್ನ ತವರು ಮನೆಯವರಿಗೆ ವಿಷಯ ಗೊತ್ತಾಗಿ ಸುಮಾರು 2-3 ಸಲ ನನ್ನ ತವರು ಮನಯೆವರು ಬಂದು ನ್ಯಾಯಯಪಂಚಾಯತ ಮಾಡಿದ್ದು ಇರುತ್ತದೆ. ಆದರೂ ಕೂಡಾ ನನ್ನ ಗಂಡ ಮತ್ತು ಗಂಡನ ಮನೆಯವರು ನನಗೆ ಕಿರುಕುಳ ಕೊಡುವುದು ತಪ್ಪಿರಲಿಲ್ಲಾ. ಮುಂದೆ ನಾನು ನನ್ನ ತವರುಮನೆಯಲ್ಲಿ ಈಗ ಎರಡೂವರೆ ವರ್ಷದ ಹಿಂದೆ ನನ್ನ ಮಗುವಿಗೆ ಜನ್ಮ ನೀಡಿದೇನು. 
      ಹೀಗಿರುವಾಗ ನಿನ್ನೆ ದಿನಾಂಕ 04-02-2020 ರಂದು ನನ್ನ ಸಹೋದರರಾದ ಸೂರ್ಯಕಾಂತ ತಂದೆ ಬಸಣ್ಣಾ ತಳವಾರ, ಮಲ್ಲಿಕಾಜರ್ುನ ತಂದೆ ಬಸಣ್ಣಾ ತಳವಾರ, ಭೀಮರಾಯ ತಂದೆ ಬಸಣ್ಣಾ ತಳವಾರ ಎಲ್ಲರೂ ಕೂಡಿ ನನಗೆ ನನ್ನ ಗಂಡನ ಮನೆಗೆ ಬಿಟ್ಟು ಬರುವ ಸಲುವಾಗಿ ಬೆಳಗ್ಗೆ ನನ್ನ ತವರು ಗ್ರಾಮದಿಂದ ಯರಗೋಳ ಗ್ರಾಮಕ್ಕೆ ಕರೆದುಕೊಂಡು ಬಂದರು. ಆಗ ಮನೆಯಲ್ಲಿ ನನ್ನ ಗಂಡ ಹಾಗೂ ನನ್ನ ಅತ್ತೆ ಮಾವ ಎಲ್ಲರೂ ಇದ್ದರು. ನನ್ನ ಸಹೋದರರು ನನ್ನನ್ನು ನನ್ನ ಗಂಡನ ಮನೆಯಲ್ಲಿ ಬಿಟ್ಟು ನನ್ನ ಗಂಡ ಮತ್ತು ಅತ್ತೆ ಮಾವ ಇವರಿಗೆ ಹೇಳಿ ಅವರು ಮತ್ತೆ ತಮ್ಮೂರಿಗೆ ಹೋದರು. ರಾತ್ರಿ 7 ಗಂಟೆ ಸುಮಾರಿಗೆ ನನ್ನ ಗಂಡನು ಕುಡಿದ ನಶೆಯಲ್ಲಿ ಮನೆಗೆ ಬಂದು ಏ ರಂಡಿ ಮತ್ತೇಕೆ ನಮ್ಮ ಮನೆಗೆ ಬಂದಿದ್ದಿ ನೀನು ನಮ್ಮ ಮನೆಯಲ್ಲಿದ್ದರೇ ಇವತ್ತು ನಿನಗೆ ಇಲ್ಲಿಯೇ ಖಲಾಸ ಮಾಡುತ್ತೆನೆ ಅಂತಾ ನನಗೆ ಕೈಯಿಂದ ಹೊಡೆದು ನೆಲಕ್ಕೆ ಹಾಕಿ ಕಾಲಿನಿಂದ ಒದ್ದನು. ಆದರೂ ಕೂಡಾ ನಾನು ನನ್ನಷ್ಟಕ್ಕೆ ಸುಮ್ಮನಿದ್ದೆನು. ಮರುದಿನ ದಿನಾಂಕ 05-02-2020 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ  ಪುನ: ನನ್ನ ಗಂಡನು ನನ್ನ ಜೋತೆಯಲ್ಲಿ ಜಗಳಾ ಮಾಡಿ ಭೋಸಡಿ ಇವತ್ತ ನಿನ್ನ ತವರು ಮನೆಗೆ ಹೋದರೇ ಸರಿ ಇಲ್ಲಾಂದ್ರೆ ನಿನಗೆ ಒಂದು ಗತಿ ಕಾಣಿಸುತ್ತೆನೆ ಅಂತಾ ಅಲ್ಲಿಯೇ ಇದ್ದ ಒಂದು ಬಡಿಗೆ ತೆಗಡದುಕೊಂಡು ನನ್ನ ಕಾಲಿಗೆ ಮತ್ತು ಬೆನ್ನಿಗೆ ಹೊಡೆದು ನನಗೆ ಮನೆಯಿಂದ ಹೊರಹಾಕಲು ಪ್ರಯತ್ನಪಟ್ಟಾಗ ನಾನು ಎಷ್ಟೇ ನಿರಾಕರಿಸಿದರೂ ಕೂಡಾ ಅವನು ನನ್ನನ್ನು ಹಾಗೂ ನನ್ನ ಮಗಳನ್ನು ಬಲವಂತವಾಗಿ ಮನೆಯಿಂದ ಹೊರಹಾಕಿದ್ದು ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 22/2020 ಕಲಂ 323, 504, 506, 498(ಎ) ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- : 12/2020 ಕಲಂ: 279,338 ಐಪಿಸಿ:- ಇಂದು ದಿನಾಂಕ: 11/02/2020 ರಂದು 12-30 ಪಿಎಮ್ ಕ್ಕೆ ಶ್ರೀಮತಿ ಶರಣಮ್ಮ ಗಂಡ ಬಸ್ಸಯ್ಯ ಸ್ವಾಮಿ, ವ:45, ಜಾ:ಜಂಗಮ, ಉ:ಮನೆಕೆಲಸ ಸಾ:ಚಟಾನ ಏರಿಯಾ ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದೇನಂದರೆ ನನಗೆ 1) ಮಹಾದೇವಿ, 2) ಶಿವಕುಮಾರ ಮತ್ತು 3) ವಿರೇಶ ಹೀಗೆ ಒಟ್ಟು 3 ಜನ ಮಕ್ಕಳಿರುತ್ತಾರೆ. ನಾನು ನನ್ನ ಗಂಡ-ಮಕ್ಕಳೊಂದಿಗೆ ಮನೆಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ.  ಹೀಗಿದ್ದು ದಿನಾಂಕ: 07/02/2020 ರಂದು ಸಾಯಂಕಾಲ ನಾನು ಮನೆಯಲ್ಲಿದ್ದಾಗ ನನ್ನ ಮಗ ಶಿವಕುಮಾರ ವ:18 ವರ್ಷ ಈತನು ಹಾಲಗೇರಾ ಯಲ್ಲಮ್ಮ ಆಯಿ ಜಾತ್ರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ನಮ್ಮ ಮೋಟರ್ ಸೈಕಲ್ ನಂ. ಕೆಎ 33 ವೈ 4229 ನೇದ್ದರ ಮೇಲೆ ಹೋದನು. ಅವನು ರಾತ್ರಿಯಾದರು ಮನೆಗೆ ವಾಪಸ ಬರಲಿಲ್ಲ. ರಾತ್ರಿ ಅಲ್ಲಿಯೇ ಜಾತ್ರೆಯಲ್ಲಿ ಉಳಿದುಕೊಂಡಿರಬಹುದು ಎಂದು ತಿಳಿದು ಸುಮ್ಮನಾದೆವು. ಮರು ದಿವಸ ದಿನಾಂಕ: 08/02/2020 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಮ್ಮ ಮನೆ ಬಾಜುದವರಾದ ಲೋಕೇಶ ತಂದೆ ಸಿದ್ದಯ್ಯ ಸ್ವಾಮಿ ಇವರು ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಾನು ಮತ್ತು ನನ್ನ ಸ್ನೇಹಿತ ಶರಣಯ್ಯ ತಂದೆ ರಾಚಯ್ಯ ಹಿರೆಮಠ್ ಇಬ್ಬರೂ ಹಾಲಗೇರಾದಿಂದ ನಮ್ಮ ಮೋಟರ್ ಸೈಕಲ್ ಮೇಲೆ ಯಾದಗಿರಿಗೆ ಹೊರಟಿದ್ದೇವು. ನಮ್ಮ ಮುಂದುಗಡೆ ನಿನ್ನ ಮಗ ಶಿವಕುಮಾರನು ತನ್ನ ಮೋಟರ್ ಸೈಕಲ್ ಮೇಲೆ ಹೋಗುತ್ತಿರುವಾಗ ಯಾದಗಿರಿ-ವಡಗೇರಾ ಮೇನ ರೋಡ ಹುಲಕಲ್ (ಜೆ) ಕ್ರಾಸ ಸಮೀಪ 6 ಎಎಮ್ ಸುಮಾರಿಗೆ ಶಿವಕುಮಾರನು ಮೋಟರ್ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೊರಟಾಗ ಎದುರುಗಡೆಯಿಂದ ಯಾವುದೋ ಒಂದು ಲಾರಿ ಬರುತ್ತಿದ್ದಾಗ ಶಿವಕುಮಾರನು ಮೋಟರ್ ಸೈಕಲ್ ಸಿಡ್ಡ ಮಾಡಿಕೊಂಡು ಬಿದ್ದುಬಿಟ್ಟನು. ನಾವು ಹೋಗಿ ನೋಡಿದಾಗ ಮುಖಕ್ಕೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು, ತೆಲೆಗೆ ಭಾರಿ ಒಳಪೆಟ್ಟಾಗಿ ಬೆವೋಹಷ ಆಗಿರುತ್ತಾನೆ. ನಾವು ಆತನಿಗೆ 108 ಅಂಬ್ಯೂಲೇನ್ಸಗೆ ಫೊನ ಮಾಡಿ ಕರೆಸಿ, ಅದರಲ್ಲಿ ಹಾಕಿಕೊಂಡು ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ತರುತ್ತಿದ್ದೇವೆ ಎಂದು ಹೇಳಿದರು. ಆಗ ಗಾಬರಿಯಾದ ನಾನು ನನ್ನ ಗಂಡನಿಗೆ ವಿಷಯ ತಿಳಿಸಿ, ಇಬ್ಬರೂ ಸರಕಾರಿ ಆಸ್ಪತ್ರೆಗೆ ಬಂದು ನೋಡಿದಾಗ ಘಟನೆ ನಿಜವಿದ್ದು, ನನ್ನ ಮಗ ಶಿವಕುಮಾರನಿಗೆ ಈ ಮೇಲಿನಂತೆ ಗಾಯಗಳಾಗಿದ್ದವು. ಅಲ್ಲಿಯೇ ಇದ್ದ ಲೊಕೇಶ ಮತ್ತು ಅವನ ಗೆಳೆಯ ಶರಣಯ್ಯ ಇವರಿಗೆ ಕೇಳಿದಾಗ ಯಾದಗಿರಿ-ವಡಗೇರಾ ಮೇನ ರೋಡ ಹುಲಕಲ್ ಕ್ರಾಸ ಸಮೀಪ ಶಿವಕುಮಾರನು ಮೋಟರ್ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೊರಟಾಗ ಎದುರುಗಡೆಯಿಂದ ಯಾವುದೋ ಒಂದು ಲಾರಿ ಬರುತ್ತಿದ್ದಾಗ ಶಿವಕುಮಾರನು ತನ್ನ ಮೋಟರ್ ಸೈಕಲ್ ಒಮ್ಮೆಲೆ ಎಡಗಡೆ ಸೈಡ ತೆಗೆದುಕೊಳ್ಳುವಾಗ ಮೋಟರ್ ಸೈಕಲ್ ಅವನ ನಿಯಂತ್ರಣ ತಪ್ಪಿ ಸ್ಕಿಡ್ಡಾಗಿ ಬಿದ್ದುಬಿಟ್ಟನು. ನಾವು ಹೋಗಿ ನೋಡಿದಾಗ ಶಿವಕುಮಾರನಿಗೆ ಮುಖಕ್ಕೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು, ತೆಲೆಗೆ ಭಾರಿ ಒಳಪೆಟ್ಟಾಗಿ ಬೆವೋಹಷ ಆಗಿದ್ದನು ಅಂತಾ ಹೇಳಿದರು. ವೈದ್ಯಾಧಿಕಾರಿಗಳು ಯಾದಗಿರಿ ರವರು ಅರ್.ಟಿ.ಎ ಎಮ್.ಎಲ್.ಸಿ ಮಾಡಿದಾಗ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದರು. ಆಗ ನಾವು ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ದೂರು ಕೊಡುವುದಿದ್ದರೆ ಪೊಲೀಸ್ ಠಾಣೆಗೆ ಬಂದು ಕೊಡುತ್ತೇವೆ ಎಂದು ತಿಳಿಸಿರುತ್ತೇವೆ. ಈಗ ನಮ್ಮ ಹಿರಿಯರಿಗೆ ವಿಚಾರ ಮಾಡಿದಾಗ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡು ಎಂದು ಹೇಳಿದ್ದರಿಂದ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ನನ್ನ ಮಗನಿಗೆ ಕಲಬುರಗಿ ಸರಕಾರಿ ದವಾಖಾನೆಯಲ್ಲಿ ತೋರಿಸಿದಾಗ ಅಲ್ಲಿನ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ಇಲ್ಲವೆ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿರುತ್ತಾರೆ. ಆದರೆ ನಮಗೆ ಹಣಕಾಸಿನ ಅಡಚಣೆ ಇದ್ದುದ್ದರಿಂದ ನನ್ನ ಮಗ ಶಿವಕುಮಾರನಿಗೆ ಪುನಃ ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ನನ್ನ ಮಗ ಶಿವಕುಮಾರನು ಕೋಮಾ ಸ್ಥಿತಿಯಲ್ಲಿರುತ್ತಾನೆ. ಕಾರಣ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕಂಪ್ಯೂಟರ್ ಟೈಪ ಮಾಡಿದ ಫಿರ್ಯಾಧಿ ಸಾರಾಂಶದ ಮೇಲಿಂದ ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 12/2020 ಕಲಂ: 279,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 01/2020 ಕಲಂ107 ಸಿ. ಆರ್. ಪಿ.ಸಿ:- ನಾನು ಹುಲಿಗೆಪ್ಪ ಹೆಚ್.ಸಿ-03 ಎಸ್.ಹೆಚ್.ಓ ವಡಗೇರಾ ಪೊಲೀಸ್ ಠಾಣೆ ಮಾನ್ಯರವರಲ್ಲಿ ನಿವೇದಿಸಿಕೊಳ್ಳುವುದೆನೆಂದರೆ, ಇಂದು ದಿನಾಂಕ 10.02.2020 ರಂದು 4 ಗಂಟೆಯ ಗಂಟೆಯ ಸುಮಾರಿಗೆ ನಮ್ಮ ಠಾಣೆಯ ಪ್ರಕಾಶ ಹೆಚ್.ಸಿ 18 ವಡಗೇರಾ ಪೊಲೀಸ್ ಠಾಣೆ ರವರು ವಡಗೇರಾ ಪಟ್ಟಣದಲ್ಲಿ ದಿನಾಂಕ:11/02/2020 ರಂದು ಶ್ರೀ ದ್ಯಾವಮ್ಮ ದೇವಿಯ ಜಾತ್ರೆಯ ಪ್ರಯುಕ್ತ ಗುಪ್ತ ಮಾಹಿತಿ  ಸಂಗ್ರಹಿಸುವ ಕುರಿತು ಬೇಟಿ ನೀಡಿದ್ದು, ಪೊಲೀಸ್ ಬಾತ್ಮೀದಾರರಿಂದ ಮತ್ತು ಗುಪ್ತ ಮಾಹಿತಿಯಿಂದ ತಿಳಿದುಬಂದಿದ್ದೇನಂದರೆ, ದಿನಾಂಕ:11/02/2020 ರಂದು ಬೆಳಗ್ಗೆ ದ್ಯಾವಮ್ಮ ದೇವಿಯನ್ನು ಗಂಗಾ ಸ್ನಾನಕ್ಕೆ ಬಂಡಿಯಲ್ಲಿ ಕೂಡಿಸಿಕೊಂಡು ಹೋಗುವಾಗ ಬಂಡಿ ಎಳೆಯುವ ಪದ್ದತಿ ಇರುವುದರಿಂದ ಬಂಡಿ ಎಳೆಯುವದಕ್ಕಾಗಿ ಬೇಡರ (ದೊರಿ) ಜನಾಂಗದವರು ನಾವು ಮೊದಲು ಬಂಡಿ ಎಳೆಯುತ್ತೇವೆ ಅಂತ ಅನ್ನುಕೊಳ್ಳುತ್ತಾ 1ನೇ ಪಾಟರ್ಿಯವರಾದ 1) ಮಲ್ಲಪ್ಪ ತಂದೆ ಮರೆಪ್ಪ ಲಪಾಟಿ (ಇಟಗಿ) 2)ಮುದುಕಪ್ಪ ತಂದೆ ತಿಮ್ಮಯ್ಯ ಪಿಡ್ಡೇಗೌಡರ 3) ಶಿದ್ದಲಿಂಗಪ್ಪ ತಂದೆ ತಿಮ್ಮಯ್ಯ ಗೌಂಡಿ 4)ಕಂಬಯ್ಯ ತಂದೆ ಮರೆಪ್ಪ ಇಟಗಿ 5)ಅಮಾತೆಪ್ಪ ತಂದೆ ಹಣಮಂತ ಪಿಡ್ಡೇಗೌಡರ 6) ಚಂದಪ್ಪ ತಂದೆ ತಿಮ್ಮಯ್ಯ ಇಟಗಿ 7)ಬಸವರಾಜ ನೀಲಹಳ್ಳಿ 8)ಮಲ್ಲಣ್ಣ ನೀಲಹಳ್ಳಿ 9)ಮಲ್ಲಣ್ಣ ಕೊಪ್ಪುರ 10)ಮಲ್ಲಪ್ಪ ಪಿಡ್ಡೆಗೌಡರ 11)ಮಲ್ಲಪ್ಪ ಜಿಲರ್ಿ 12)ದೇವಪ್ಪ ತಂದೆ ಮರೆಪ್ಪ ಬುಸೇನಿ 13)ವೆಂಕಟೇಶ ನೀಲಹಳ್ಳಿ 14)ಬುಡ್ಡಪ್ಪ ಹೊಸುರ 15)ಭೀಮಣ್ಣ ರಾಮನಾಳ 16)ಭೀಮಶಪ್ಪ ಕುಮನೂರ 17)ದೇವಪ್ಪ ಶಿರವಾಳ 18)ಶರಣಪ್ಪ ಪಿಡ್ಡೇಗೌಡರ 19)ಶಿವಪ್ಪ ಪಿಡ್ಡೇಗೌಡರ 20)ಯಲ್ಲಪ್ಪ ಶಿರವಾಳ ಸಾ:ಎಲ್ಲರೂ ವಡಗೇರಾ ಸಾ:ಎಲ್ಲರೂ ವಡಗೇರಾ ಅದೆ ಬಂಡಿಯನ್ನು ಕುರುಬ ಜನಾಂಗದವರು 2ನೇ ಪಾಟರ್ಿಯವರಾದ 1)ಬಸವರಾಜ ತಂದೆ ಸಿದ್ದನಗೌಡ ಕಾಡಂನೊರ 2)ಮಲ್ಲಿಕಾಜರ್ುನ ತಂದೆ ಶಿವಣ್ಣ ಕರಿಕೆಳ್ಳಿ 3)ದೇವಪ್ಪ ತಂದೆ ಗಂಗಪ್ಪ ಕಡೇಚೂರ 4)ಮಲ್ಲಪ್ಪ ತಂದೆ ಇದೇಪ್ಪ ನಸಲವಾಯಿ ವಯಾ:25 ವರ್ಷ 5)ಮಲ್ಲಯ್ಯ ತಂದೆ ಸಾಬಣ್ಣ 6)ಭೀಮಣ್ಣ ತಂದೆ ಕರೆಪ್ಪ ಬೂದನಾಳ 7)ಶಿವುಕುಮಾರ ತಂದೆ ಬಸನಗೌಡ ಕೊಂಕಲ್ 8)ಬಸವರಾಜ ತಂದೆ ಹಣಮಂತ ದೇವದುರ್ಗ 9)ಶಿವರಾಜ ತಂದೆ ಶಿವಪ್ಪ ಗೋನಾಲ 10)ಪಂಪಣ್ಣ ತಂದೆ ಹೊನ್ನಪ್ಪ ಜಡಿ 11)ಮರೆಪ್ಪ ತಂದೆ ಸಿದ್ದಪ್ಪ ಜಡಿ 12)ಬೀರಪ್ಪ ತಂ/ ಮಲ್ಲಪ್ಪ ಜಡಿ 13)ನಿಂಗಪ್ಪ ತಂದೆ ಹೊನ್ನಪ್ಪ ಕರಿಕಳ್ಳಿ 14)ಬಸವರಾಜ ತಂದೆ ನಿಂಗಪ್ಪ ಪೂಜಾರಿ 15)ಮಹಾದೇವಪ್ಪ ತಂ/ಸಿದ್ದಪ್ಪ ಗೋನಾಲ 16)ಹಣಮಂತ್ರಾಯ ತಂ/ಶಿವರಾಯ ಜಡಿ 17)ಶರಣಪ್ಪ ತಂ/ಹಣಮಂತ್ರಾಯ ಜಡಿ 18)ಸಿದ್ದಪ್ಪ ತಂ/ಚಂದಪ್ಪ ಕಡೇಚೂರ 19)ಶಿವರಾಜ ತಂ/ಬಸಪ್ಪ ಕಡೇಚೂರ 20)ಮಲ್ಲು ತಂದೆ ಹೈಯಾಳಪ್ಪ ಡಾವಣದೂರ ಸಾ: ಎಲ್ಲರೂ ವಡಗೇರಾ ನಾವು ಮೊದಲು ಬಂಡಿ ಎಳೆಯುತ್ತೇವೆ ಅಂತ ಅಂದುಕೊಳ್ಳುತ್ತಾ ಗ್ರಾಮದಲ್ಲಿ ತಿರುಗಾಡುತ್ತಿರುವುದು ಪೊಲೀಸ್ ಬಾತ್ಮೀ ಇರುವುದರಿಂದ ಈಗಾಗಲೇ ಈ ಬಗ್ಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಹಾಗೂ ಸಿ.ಪಿ.ಐ ಮತ್ತು ಪಿ.ಎಸ್.ಐ ಸಾಹೇಬರ ನೇತೃತ್ವದಲ್ಲಿ 02 ಬಾರಿ ಪೊಲೀಸ್ ಠಾಣೆಗೆ ಕರೆಯಿಸಿ ಶಾಂತಿ ಸಭೆಯನ್ನು ಕೈಕೊಂಡು ಎರಡು ಜನಾಂಗದವರ ಸಮಕ್ಷಮ ದೇವಿಯ ಬಂಡಿ ಎಳೆಯುವದನ್ನು ಬಿಟ್ಟು ಈ ಬಾರಿ ದೇವಿಯನ್ನು ಟ್ರ್ಯಾಕ್ಟರ್ದಲ್ಲಿ ಕೂಡಿಸಿ ಮೆರವಣಿಗೆ ಮುಖಾಂತರ ಗಂಗಾ ಸ್ನಾನಕ್ಕೆ ಹೋಗಿ ಗಂಗಾ ಸ್ನಾನ ಮುಗಿಸಿಕೊಂಡು ಮರಳಿ ಬರುವಾಗ ಕೂಡಾ ದೇವಿಯನ್ನು ಟ್ರ್ಯಾಕ್ಟರ್ ದಲ್ಲಿ ಕೂಡಿಸಿಕೊಂಡು ಮೆರವಣಿಗೆಯ ಮುಖಾಂತರ ದೇವಸ್ಥಾನಕ್ಕೆ ಬರುವುದು ಅಂತ ಶಾಂತಿ ಸಭೆಯಲ್ಲಿ ಶಾಂತಿ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಜನರಿಗೂ ತಿಳಿಸಿ ಹೇಳಿದ್ದು ಅದಕ್ಕೆ ಗ್ರಾಮದ ಎಲ್ಲಾ ಮುಖಂಡರು ಒಪ್ಪಿ ಸಹಿ ಮಾಡಿದ್ದು ಇರುತ್ತದೆ. ಆದರೂ ಕೂಡಾ ಕೆಲವು ಜನರು ಜಾತ್ರೆಯ ಪ್ರಯುಕ್ತ ಒಬ್ಬರ ಮೇಲೆ ಒಬ್ಬರು ಬಿನ್ನಾಭಿಪ್ರಾಯ ಬೆಳೆಸಿಕೊಂಡಿರುತ್ತಾರೆ. ಸದರಿಯವರು ಯಾವುದೇ ಸಮಯದಲ್ಲಿ ಗ್ರಾಮದಲ್ಲಿ ಗಲಾಟೆ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದು ಸಾರ್ವಜನಿಕ ಶಾಂತತಾ ಭಂಗವುಂಟು ಮಾಡುವ ಮತ್ತು ಆಸ್ತಿಹಾನಿ, ಜೀವ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳು ಕಂಡುಬಂದ ಹಿನ್ನೆಲೆಯಲ್ಲಿ ಇದಾವುದಕ್ಕೂ ಆಸ್ಪದವನ್ನಿಯದೆ ಸದರಿಯವರಿಂದ ಜರುಗಬಹುದಾದ ಸಂಭವನಿಯ ಸಂಜ್ಞೇಯ ಅಪರಾಧಗಳನ್ನು ತಡೆಗಟ್ಟುವ ಸಾಧ್ಯತೆ ಇದೆ ಅಂತಾ ಕಂಡು ಬಂದ ಮೇರೆಗೆ ಮರಳಿ 4-30 ಪಿ.ಎಮ್ಕ್ಕೆ  ಠಾಣೆಗೆ ಬಂದು ಸದರಿ ಈ ಮೇಲ್ಕಾಣಿಸಿದವರ ಮೇಲೆ  ಮುಂಜಾಗೃತ ಕ್ರಮವನ್ನು ಕೈಕೊಳ್ಳಲು ಮಾನ್ಯರವರಲ್ಲಿ ವಿನಂತಿ. ಅಂತ ಕೊಟ್ಟ ವರದಿಯ ಆಧಾರದ ಮೇಲಿಂದ ವಡಗೇರಾ ಪೊಲೀಸ್ ಠಾಣೆ ಪಿ.ಎ.ಆರ್. ನಂ: 01/2020 ಕಲಂ: 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 02/2020 ಕಲಂ107 ಸಿ. ಆರ್. ಪಿ.ಸಿ:-      ನಾನು ಹುಲಿಗೆಪ್ಪ ಹೆಚ್.ಸಿ-03 ಎಸ್.ಹೆಚ್.ಓ ವಡಗೇರಾ ಪೊಲೀಸ್ ಠಾಣೆ ಮಾನ್ಯರವರಲ್ಲಿ ನಿವೇದಿಸಿಕೊಳ್ಳುವುದೆನೆಂದರೆ, ಇಂದು ದಿನಾಂಕ 10.02.2020 ರಂದು 5 ಗಂಟೆಯ ಗಂಟೆಯ ಸುಮಾರಿಗೆ ನಮ್ಮ ಠಾಣೆಯ ಪ್ರಕಾಶ ಹೆಚ್.ಸಿ 18 ವಡಗೇರಾ ಪೊಲೀಸ್ ಠಾಣೆ ರವರು ವಡಗೇರಾ ಪಟ್ಟಣದಲ್ಲಿ ದಿನಾಂಕ:11/02/2020 ರಂದು ಶ್ರೀ ದ್ಯಾವಮ್ಮ ದೇವಿಯ ಜಾತ್ರೆಯ ಪ್ರಯುಕ್ತ ಗುಪ್ತ ಮಾಹಿತಿ  ಸಂಗ್ರಹಿಸುವ ಕುರಿತು ಬೇಟಿ ನೀಡಿದ್ದು, ಪೊಲೀಸ್ ಬಾತ್ಮೀದಾರರಿಂದ ಮತ್ತು ಗುಪ್ತ ಮಾಹಿತಿಯಿಂದ ತಿಳಿದುಬಂದಿದ್ದೇನಂದರೆ, ದಿನಾಂಕ:11/02/2020 ರಂದು ಬೆಳಗ್ಗೆ ದ್ಯಾವಮ್ಮ ದೇವಿಯನ್ನು ಗಂಗಾ ಸ್ನಾನಕ್ಕೆ ಬಂಡಿಯಲ್ಲಿ ಕೂಡಿಸಿಕೊಂಡು ಹೋಗುವಾಗ ಬಂಡಿ ಎಳೆಯುವ ಪದ್ದತಿ ಇರುವುದರಿಂದ ಬಂಡಿ ಎಳೆಯುವದಕ್ಕಾಗಿ ಬೇಡರ (ದೊರಿ) ಜನಾಂಗದವರು ನಾವು ಮೊದಲು ಬಂಡಿ ಎಳೆಯುತ್ತೇವೆ ಅಂತ ಅನ್ನುಕೊಳ್ಳುತ್ತಾ 1ನೇ ಪಾಟರ್ಿಯವರಾದ 1)ಬಸವರಾಜ ತಂದೆ ಸಿದ್ದನಗೌಡ ಕಾಡಂನೊರ 2)ಮಲ್ಲಿಕಾಜರ್ುನ ತಂದೆ ಶಿವಣ್ಣ ಕರಿಕೆಳ್ಳಿ 3)ದೇವಪ್ಪ ತಂದೆ ಗಂಗಪ್ಪ ಕಡೇಚೂರ 4)ಮಲ್ಲಪ್ಪ ತಂದೆ ಇದೇಪ್ಪ ನಸಲವಾಯಿ ವಯಾ:25 ವರ್ಷ 5)ಮಲ್ಲಯ್ಯ ತಂದೆ ಸಾಬಣ್ಣ 6)ಭೀಮಣ್ಣ ತಂದೆ ಕರೆಪ್ಪ ಬೂದನಾಳ 7)ಶಿವುಕುಮಾರ ತಂದೆ ಬಸನಗೌಡ ಕೊಂಕಲ್ 8)ಬಸವರಾಜ ತಂದೆ ಹಣಮಂತ ದೇವದುರ್ಗ 9)ಶಿವರಾಜ ತಂದೆ ಶಿವಪ್ಪ ಗೋನಾಲ 10)ಪಂಪಣ್ಣ ತಂದೆ ಹೊನ್ನಪ್ಪ ಜಡಿ 11)ಮರೆಪ್ಪ ತಂದೆ ಸಿದ್ದಪ್ಪ ಜಡಿ 12)ಬೀರಪ್ಪ ತಂ/ ಮಲ್ಲಪ್ಪ ಜಡಿ 13)ನಿಂಗಪ್ಪ ತಂದೆ ಹೊನ್ನಪ್ಪ ಕರಿಕಳ್ಳಿ 14)ಬಸವರಾಜ ತಂದೆ ನಿಂಗಪ್ಪ ಪೂಜಾರಿ 15)ಮಹಾದೇವಪ್ಪ ತಂ/ಸಿದ್ದಪ್ಪ ಗೋನಾಲ 16)ಹಣಮಂತ್ರಾಯ ತಂ/ ಶಿವರಾಯ ಜಡಿ 17)ಶರಣಪ್ಪ ತಂ/ಹಣಮಂತ್ರಾಯ ಜಡಿ 18)ಸಿದ್ದಪ್ಪ ತಂ/ಚಂದಪ್ಪ ಕಡೇಚೂರ 19)ಶಿವರಾಜ ತಂ/ಬಸಪ್ಪ ಕಡೇಚೂರ  20)ಮಲ್ಲು ತಂದೆ ಹೈಯಾಳಪ್ಪ ಡಾವಣದೂರ ಸಾ: ಎಲ್ಲರೂ ವಡಗೇರಾ ಸಾ:ಎಲ್ಲರೂ ವಡಗೇರಾ ಅದೆ ಬಂಡಿಯನ್ನು ಕುರುಬ ಜನಾಂಗದವರು 2ನೇ ಪಾಟರ್ಿಯವರಾದ 1) ಮಲ್ಲಪ್ಪ ತಂದೆ ಮರೆಪ್ಪ ಲಪಾಟಿ (ಇಟಗಿ) 2)ಮುದುಕಪ್ಪ ತಂದೆ ತಿಮ್ಮಯ್ಯ ಪಿಡ್ಡೇಗೌಡರ 3) ಶಿದ್ದಲಿಂಗಪ್ಪ ತಂದೆ ತಿಮ್ಮಯ್ಯ ಗೌಂಡಿ 4) ಕಂಬಯ್ಯ ತಂದೆ ಮರೆಪ್ಪ ಇಟಗಿ 5)ಅಮಾತೆಪ್ಪ ತಂದೆ ಹಣಮಂತ ಪಿಡ್ಡೇಗೌಡರ 6) ಚಂದಪ್ಪ ತಂದೆ ತಿಮ್ಮಯ್ಯ ಇಟಗಿ 7)ಬಸವರಾಜ ನೀಲಹಳ್ಳಿ 8)ಮಲ್ಲಣ್ಣ ನೀಲಹಳ್ಳಿ 9)ಮಲ್ಲಣ್ಣ ಕೊಪ್ಪುರ 10)ಮಲ್ಲಪ್ಪ ಪಿಡ್ಡೆಗೌಡರ 11)ಮಲ್ಲಪ್ಪ ಜಿಲರ್ಿ 12)ದೇವಪ್ಪ ತಂದೆ ಮರೆಪ್ಪ ಬುಸೇನಿ 13)ವೆಂಕಟೇಶ ನೀಲಹಳ್ಳಿ 14)ಬುಡ್ಡಪ್ಪ ಹೊಸುರ 15)ಭೀಮಣ್ಣ ರಾಮನಾಳ 16)ಭೀಮಶಪ್ಪ ಕುಮನೂರ 17)ದೇವಪ್ಪ ಶಿರವಾಳ 18)ಶರಣಪ್ಪ ಪಿಡ್ಡೇಗೌಡರ 19)ಶಿವಪ್ಪ ಪಿಡ್ಡೇಗೌಡರ 20)ಯಲ್ಲಪ್ಪ ಶಿರವಾಳ ಸಾ: ಎಲ್ಲರೂ ವಡಗೇರಾ ನಾವು ಮೊದಲು ಬಂಡಿ ಎಳೆಯುತ್ತೇವೆ ಅಂತ ಅಂದುಕೊಳ್ಳುತ್ತಾ ಗ್ರಾಮದಲ್ಲಿ ತಿರುಗಾಡುತ್ತಿರುವುದು ಪೊಲೀಸ್ ಬಾತ್ಮೀ ಇರುವುದರಿಂದ ಈಗಾಗಲೇ ಈ ಬಗ್ಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಹಾಗೂ ಸಿ.ಪಿ.ಐ ಮತ್ತು ಪಿ.ಎಸ್.ಐ ಸಾಹೇಬರ ನೇತೃತ್ವದಲ್ಲಿ 02 ಬಾರಿ ಪೊಲೀಸ್ ಠಾಣೆಗೆ ಕರೆಯಿಸಿ ಶಾಂತಿ ಸಭೆಯನ್ನು ಕೈಕೊಂಡು ಎರಡು ಜನಾಂಗದವರ ಸಮಕ್ಷಮ ದೇವಿಯ ಬಂಡಿ ಎಳೆಯುವದನ್ನು ಬಿಟ್ಟು ಈ ಬಾರಿ ದೇವಿಯನ್ನು ಟ್ರ್ಯಾಕ್ಟರ್ದಲ್ಲಿ ಕೂಡಿಸಿ ಮೆರವಣಿಗೆ ಮುಖಾಂತರ ಗಂಗಾ ಸ್ನಾನಕ್ಕೆ ಹೋಗಿ ಗಂಗಾ ಸ್ನಾನ ಮುಗಿಸಿಕೊಂಡು ಮರಳಿ ಬರುವಾಗ ಕೂಡಾ ದೇವಿಯನ್ನು ಟ್ರ್ಯಾಕ್ಟರ್ ದಲ್ಲಿ ಕೂಡಿಸಿಕೊಂಡು ಮೆರವಣಿಗೆಯ ಮುಖಾಂತರ ದೇವಸ್ಥಾನಕ್ಕೆ ಬರುವುದು ಅಂತ ಶಾಂತಿ ಸಭೆಯಲ್ಲಿ ಶಾಂತಿ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಜನರಿಗೂ ತಿಳಿಸಿ ಹೇಳಿದ್ದು ಅದಕ್ಕೆ ಗ್ರಾಮದ ಎಲ್ಲಾ ಮುಖಂಡರು ಒಪ್ಪಿ ಸಹಿ ಮಾಡಿದ್ದು ಇರುತ್ತದೆ. ಆದರೂ ಕೂಡಾ ಕೆಲವು ಜನರು ಜಾತ್ರೆಯ ಪ್ರಯುಕ್ತ ಒಬ್ಬರ ಮೇಲೆ ಒಬ್ಬರು ಬಿನ್ನಾಭಿಪ್ರಾಯ ಬೆಳೆಸಿಕೊಂಡಿರುತ್ತಾರೆ. ಸದರಿಯವರು ಯಾವುದೇ ಸಮಯದಲ್ಲಿ ಗ್ರಾಮದಲ್ಲಿ ಗಲಾಟೆ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದು ಸಾರ್ವಜನಿಕ ಶಾಂತತಾ ಭಂಗವುಂಟು ಮಾಡುವ ಮತ್ತು ಆಸ್ತಿಹಾನಿ, ಜೀವ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳು ಕಂಡುಬಂದ ಹಿನ್ನೆಲೆಯಲ್ಲಿ ಇದಾವುದಕ್ಕೂ ಆಸ್ಪದವನ್ನಿಯದೆ ಸದರಿಯವರಿಂದ ಜರುಗಬಹುದಾದ ಸಂಭವನಿಯ ಸಂಜ್ಞೇಯ ಅಪರಾಧಗಳನ್ನು ತಡೆಗಟ್ಟುವ ಸಾಧ್ಯತೆ ಇದೆ ಅಂತಾ ಕಂಡು ಬಂದ ಮೇರೆಗೆ ಮರಳಿ 5-00 ಪಿ.ಎಮ್ಕ್ಕೆ  ಠಾಣೆಗೆ ಬಂದು ಸದರಿ ಈ ಮೇಲ್ಕಾಣಿಸಿದವರ ಮೇಲೆ  ಮುಂಜಾಗೃತ ಕ್ರಮವನ್ನು ಕೈಕೊಳ್ಳಲು ಮಾನ್ಯರವರಲ್ಲಿ ವಿನಂತಿ. ಅಂತ ಕೊಟ್ಟ ವರದಿಯ ಆಧಾರದ ಮೇಲಿಂದ ವಡಗೇರಾ ಪೊಲೀಸ್ ಠಾಣೆ ಪಿ.ಎ.ಆರ್. ನಂ: 02/2020 ಕಲಂ: 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ವಡಗೇರಾ ಠಾಣೆ ಗುನ್ನೆ ನಂ:-. 03/2020 ಕಲಂ. 107 ಸಿ. ಆರ್. ಪಿ.ಸಿ:-       ನಾನು ಸಣ್ಣ ಸಾಯಬಣ್ಣ ಹೆಚ್.ಸಿ-87 ಎಸ್.ಹೆಚ್.ಓ ವಡಗೇರಾ ಪೊಲೀಸ್ ಠಾಣೆ ಮಾನ್ಯರವರಲ್ಲಿ ನಿವೇದಿಸಿಕೊಳ್ಳುವುದೆನೆಂದರೆ, ಇಂದು ದಿನಾಂಕ: 11/02/2020 ರಂದು ಬೆಳಗ್ಗೆ 8.00 ಗಂಟೆ ಸುಮಾರಿಗೆ ಪ್ರಕಾಶ ಹೆಚ್.ಸಿ 18 ರವರು ಹೊರಟೂರು ಗ್ರಾಮಕ್ಕೆ ಗುಪ್ತ ಮಾಹಿತಿ ಸಂಗ್ರಹಿಸಲು ಭೇಟಿ ನೀಡಿ ಹೊಸ ಬೀಟ್ ಸದಸ್ಯರಿಗೆ ಗ್ರಾಮದಲ್ಲಿ ಸದ್ಯದ ಪರಿಸ್ಥಿತಿ ಮತ್ತು ಆಗುಹೋಗುಗಳ ಬಗ್ಗೆ ವಿಚಾರಿಸಿದಾಗ ತಿಳಿದುಬಂದಿದ್ದೇನಂದರೆ ಹೋದ ವರ್ಷ ಹಾಲಗೇರಾ ಜಾತ್ರೆಯಲ್ಲಿ ದಿನಾಂಕ: 20/02/2019 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ಮಾಳಪ್ಪ ತಂದೆ ಶಿವಬಸಪ್ಪ ಹೊನಗುಡಿ, ವ:22, ಜಾ:ಮಾದಿಗ (ಎಸ್.ಸಿ), ಉ:ಒಕ್ಕಲುತನ ಸಾ:ಹೊರಟೂರ ಈತನು ಯಲ್ಲಮ್ಮಾಯಿ ಗುಡಿ ಮುಂದೆ ನಿಂತವನಿಗೆ ಹಳೆ ವೈಮನಸ್ಸಿನಿಂದ ಕುರುಬ ಜನಾಂಗದವರಾದ ನಾಗಪ್ಪ ತಂದೆ ಹಣಮಂತ ಲಿಂಗೇರಿ ಮತ್ತು ಇತರರು ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಬಿದರ ಬಡಿಗೆಗಳನ್ನು ಹಿಡಿದುಕೊಂಡು ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ ಬಗ್ಗೆ ವಡಗೇರಾ ಪೊಲೀಸ್ ಠಾಣೆ 20/2019 ಕಲಂ: 143, 147, 148, 504, 323, 324, 506 ಸಂ 149 ಐಪಿಸಿ ಮತ್ತು ಕಲಂ: 3 (1) (ಆರ್) (ಎಸ್) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್-1989 ಪ್ರಕಾರ ಪ್ರಕರಣ ದಾಖಲಾಗಿರುತ್ತದೆ. ಈಗ ಗ್ರಾಮದಲ್ಲಿ ಸದರಿ ಪ್ರಕರಣದ ಆರೋಪಿತರಾದ 1) ನಾಗಪ್ಪ ತಂದೆ ಹಣಮಂತ ಲಿಂಗೇರಿ, ವ:25, 2) ಮಾಳಪ್ಪ ತಂದೆ ಸಿದ್ದಪ್ಪಗೌಡ ಲಿಂಗೇರಿ, ವ: 30, 3) ಶಿವಪ್ಪ ತಂದೆ ನಿಂಗಪ್ಪಗೌಡ, ವ:25, 4) ಪ್ರಭು ತಂದೆ ಸಿದ್ದಪ್ಪ ನಾಲ್ವಡಗಿ, ವ:21, 5) ಬೀರಪ್ಪ ತಂದೆ ಜಂಭಣ್ಣ ಪೂಜಾರಿ, ವ:38, 6) ಮಾಳಪ್ಪ ತಂದೆ ಮರಿಲಿಂಗಪ್ಪ ಪೂಜಾರಿ, ವ:40, 7) ನಿಂಗಪ್ಪ ತಂದೆ ಮರಿಲಿಂಗಪ್ಪ ಪೂಜಾರಿ, ವ:28, 8) ತಿಮ್ಮಯ್ಯ ತಂದೆ ಮಲ್ಲರಾಯಪ್ಪ ಪೂಜಾರಿ, ವ:25 9) ಸಾಬಣ್ಣ ತಂದೆ ಮರಿಲಿಂಗಪ್ಪ ಕಾವಲೇರ, ವ:20, 10) ಹಣಮಂತ ತಂದೆ ನಾಗಪ್ಪ ಲಿಂಗೇರಿ, ವ:22, 11) ಚಂದ್ರಾಮಪ್ಪ ತಂದೆ ನಿಂಗಪ್ಪ ಪೂಜಾರಿ, ವ:52, 12) ಬಸಪ್ಪ ತಂದೆ ರಾಡ ಶರಣಪ್ಪ ಲಿಂಗೇರಿ, ವ:25 ಎಲ್ಲರೂ ಜಾ:ಕುರುಬರ ಸಾ:ಹೊರಟೂರು ಇವರೆಲ್ಲರೂ ಸೇರಿ ಪ್ರಕರಣದ ಫಿರ್ಯಾಧಿ ಮತ್ತು ಇತರ ಸಂಬಂಧಿಕರಿಗೆ ವಿನಾಕಾರಣ ಈ ಮಕ್ಕಳು ನಮ್ಮ ಮೇಲೆ ಕೇಸು ಮಾಡಿರುತ್ತಾರೆ ಊರಲ್ಲಿ ಹೇಗೆ ಬಾಳುವೆ ಮಾಡುತ್ತಾರೆ ಇವರಿಗೆ ಒಂದು ಕೈ ನೋಡೊಣ ಎಂದು ಅಂದಾಡುತ್ತಾ ಅವರು ಕಂಡಕಂಡಲ್ಲಿ ಬೈಯುವುದು ಅವರಿಗೆ ನೋಡಿ ಕ್ಯಾಕರಿಸಿ ಉಗಿಯುವುದು ಮಾಡುತ್ತಿದ್ದಾರೆ. ಯಾವುದೇ ಸಮಯದಲ್ಲಿ ಗುನ್ನೆ ನಂ. 20/2019 ರ ಫಿರ್ಯಾಧಿ ಮಾಳಪ್ಪ ಮತ್ತು ಇತರರೊಂದಿಗೆ ಜಗಳ ಮಾಡಿ ಹಲ್ಲೆ ಮಾಡುವ ಸಾಧ್ಯತೆಗಳು ದಟ್ಟವಾಗಿರುತ್ತವೆ. ಆದ್ದರಿಂದ ಇವರಿಗೆ ಹೀಗೆಯೆ ಬಿಟ್ಟಲ್ಲಿ ಸದರಿಯವರು ಗುಂಪು ಘರ್ಷಣೆ ಮಾಡಿ ಗ್ರಾಮದಲ್ಲಿ ಫಿರ್ಯಾಧಿ ಮಾಳಪ್ಪ ಮತ್ತು ಸಂಗಡಿಗರೊಂದಿಗೆ ಯಾವುದೇ ಸಮಯದಲ್ಲಿ ಹೊಡೆದಾಡ, ಬಡೆದಾಟ ಮಾಡಿಕೊಂಡು ಆಸ್ತಿಹಾನಿ ಮತ್ತು ಜೀವಹಾನಿ ಮಾಡುವ ಇರಾದೆವುಳ್ಳವರಾಗಿದ್ದು, ಗ್ರಾಮದಲ್ಲಿ ಗುಂಪು ಘರ್ಷಣೆ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದು ಸಾರ್ವಜನಿಕ ಶಾಂತತಾ ಭಂಗವುಂಟು ಮಾಡುವ ಸಾಧ್ಯತೆಗಳು ಕಂಡಬಂದ ಹಿನ್ನೆಲೆಯಲ್ಲಿ ಇದಾವುದಕ್ಕೂ ಆಸ್ಪದವನ್ನಿಯದೆ ಸದರಿಯವರಿಂದ ಜರುಗಬಹುದಾದ ಸಂಭವನಿಯ ಸಂಜ್ಞೇಯ ಅಪರಾಧಗಳನ್ನು ತಡೆಗಟ್ಟುವ ಕುರಿತು ಅವರ ಮೇಲೆ ಸೂಕ್ತ ಮುಂಜಾಗ್ರತಾ ಕ್ರಮ ಜರುಗಿಸುವುದು ಅತ್ಯವಶ್ಯಕವಾಗಿರುವುದರಿಂದ 1-30 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ಈ ಮೇಲ್ಕಾಣಿಸಿದವರ ಮೇಲೆ ಮುಂಜಾಗೃತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು, ಅದರ ಸಾರಾಂಶದ ಮೇಲಿಂದ ವಡಗೇರಾ ಪೊಲೀಸ್ ಠಾಣೆ ಪಿ.ಎ.ಆರ್. ನಂ: 03/2020 ಕಲಂ: 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:-  30/2020 ಕಲಂ: 78(3) ಕೆಪಿ ಯಾಕ್ಟ:- ಇಂದು ದಿನಾಂಕ 11/02/2020 ರಂದು 03-10 ಪಿ.ಎಮ್ ಕ್ಕೆ  ಸುದರ್ಶನರಡ್ಡಿ ಪಿಎಸ್ಐ ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ  ವರದಿ ಸಲ್ಲಿಸಿದೆನೆಂದರೆ ಇಂದು ದಿನಾಂಕ: 11/02/2020 ರಂದು 13.30 ಗಂಟೆಗೆ ಸುಮಾರಿಗೆ ಠಾಣೆಯಲ್ಲಿದ್ದಾಗ ಕೆಂಭಾವಿ ಪಟ್ಟಣದ ಟಿಪ್ಪು ಸುಲ್ತಾನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ 1) ಶಿವಲಿಂಗಪ್ಪ ಹೆಚ್ಸಿ 185 2) ಬೀರಪ್ಪ ಪಿಸಿ-195 ರವರನ್ನು ಕರೆದು ಸದರಿ ವಿಷಯ ತಿಳಿಸಿ ಭೀರಪ್ಪ ಪಿಸಿ-195 ರವರಿಂದ ಇಬ್ಬರು ಪಂಚರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ  ವ|| 36 ಜಾ|| ಪರಿಶಿಷ್ಟ ಜಾತಿ ಉ|| ಕೂಲಿ ಸಾ|| ಕೆಂಭಾವಿ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ವ|| 46 ಜಾ|| ಪ.ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಠಾಣೆಗೆ ಕರೆಯಿಸಿ ಅವರಿಗೂ ಸಹ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ 13.45 ಗಂಟೆಗೆ ಹೊರಟು 13.50 ಗಂಟೆಗೆ ಕೆಂಭಾವಿ ಪಟ್ಟಣದ ಟಿಪ್ಪು ಸುಲ್ತಾನ ಚೌಕ ಹತ್ತಿರ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ಬೆಳಿಗ್ಗೆ 14.00 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಅಕ್ಬರ ತಂದೆ ಮಹ್ಮದ್ ಜಿಲಾನಿ ವ|| 28 ಜಾ|| ಮುಸ್ಲೀಂ ಉ|| ಕೂಲಿಕೆಲಸ ಸಾ|| ಕೆಂಭಾವಿ  ತಾ||  ಸುರಪುರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 2410/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಇವುಗಳನ್ನು 14.00 ಗಂಟೆಯಿಂದ 15.00 ಗಂಟೆವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡೆನು. ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 15.10 ಗಂಟೆಗೆ ಠಾಣೆಗೆ ಬಂದಿದ್ದು ಸದರಿ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ಆದೇಶಿಸಲಾಗಿದೆ ಅಂತ ವರದಿ ನೀಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 40/2020. ಕಲಂ 78 (3) ಕೆ.ಪಿ.ಆಕ್ಟ:- ಆರೋಪಿತರು ದಿನಾಂಕ: 11-02-2020 ರಂದು 6:00 ಗಂಟೆಗೆ ಶಹಾಪೂರದ ಹಳೆ ತರಕಾರಿ ಮಾರುಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಹೊಗಿ ಬರುವ ಸಾರ್ವಜನಿಕರನ್ನು ಕೂಗಿ  ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಅವರಿಂದ ಒಟ್ಟು 710/- ರೂ. ನಗದು ಹಣ ಒಮದು ಬಾಲ್ ಪೆನ್. ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ ಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯು ಅ ಸಂಜ್ಞೇಯ ವಾಗಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 8:30 ಪಿ.ಎಮ್.ಕ್ಕೆ ಠಾಣೆ ಗುನ್ನೆ ನಂ. 40/2020 ಕಲಂ.78 (3) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಇಸಿಕೊಂಡು ತನಿಖೆ ಕೈಗೊಂಡೆಎನು.
                                                                   
ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ:-  06/2020 ಕಲಂ: 143 147 148 323 324 326 307 354 504
506 427 ಸಂಗಡ 149 ಐಪಿಸಿ  :- :-  ಇಂದು ದಿನಾಂಕ 11/02/2020 ರಂದು ಸಾಯಂಕಾಲ 6 ಗಂಟೆಗೆ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಇದೆ ಅಂತಾ ಪೋನ್ ಮೂಲಕ ತಿಳಿಸಿದ ಮೇರೆಗೆ ನಾನು ಆಸ್ಪತ್ತೆಗೆ  ಬೇಟಿ ನೀಡಿ ಅಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಪೈಕಿ ಪ್ರೀಯಾಂಕ ತಂದೆ ಗೋಪಾಲ ಚವ್ಹಾಣ ಸಾ- ಮಳಖೇಡ ಈಕೆಯು ಹೇಳಿಕೆ ಪಿಯರ್ಾದಿ ಕೋಟ್ಟಿದ್ದೆನಂದರೆ ನಮ್ಮ ತಂಗಿಗೆ ಯಾದಗಿರಿ ತಾಲೂಕಿನ ಕುರಕುಂಬಳ ತಾಂಡಾದ ರೂಪಸಿಂಗ ಇತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಈ ಸಂಬಂದ ನಾವು ಯಾದಗಿರಿಗೆ ಬಂದು ಹೋಗುವುದು ಮಾಡುತ್ತಿದ್ದೇವು . ಯಾದಗಿರಿಯ ಮುದ್ನಾಳ ದೊಡ್ಡ ತಾಂಡದ ಆನಂದ ತಂದೆ ಹಿರ್ಯಾ ರಾಠೋಡ ಇತನು ಮಳಖೇಡದ ಸಿಮೇಂಟ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಇದ್ದಾಗ ಅವನು ನಮಗೆ ಪರಿಚಯವಾಗಿದ್ದು ಅವನು ನನ್ನೊಂದಿಗೆ ಪ್ರೀತಿಯಿಂದ ಮಾತನಾಡುವುದು ನನಗೆ ಚುಡಾಯಿಸುವುದು ನನ್ನನ್ನು ಹಿಂಬಾಲಿಸುವುದು ಮಾಡುತ್ತಿದ್ದರಿಂದ ವಿಷಯ ನಮ್ಮ ಮನೆಯವರಿಗೆ ಗೊತ್ತಾಗಿ ಅವರಿಗೂ ನಮ್ಮ ಮದ್ಯ ಜಗಳವಾಗಿದ್ದು ಈ ಬಗ್ಗೆ ಮಳಖೇಡ ಪೊಲೀಸ್ ಠಾಣೆಯಲ್ಲಿ 3-4 ತಿಂಗಳ ಹಿಂದೆ ಕೇಸು ಕೂಡಾ ಅಗಿದ್ದು ಇರುತ್ತದೆ. ಇಂದು ದಿನಾಂಕ 11/02/2020 ರಂದು ನಾನು ಮತ್ತು ನನ್ನ ಅಜ್ಜಿ ಬೇಬಿಬಾಯಿ ಗಂಡ ಶಂಕರ ರಾಠೋಡ ಇಬ್ಬರು ಕೂಡಿ ಒಂದು ಬಾಡಿಗೆ ಕಾರು ಮುಗಿಸಿಕೊಂಡು ಯಾದಗಿರಿಗೆ ಹೋಗಿ ಒಂದು ಹೋಸ ಶಾಲೆ ತೆರೆಯುವ ಗೋಸ್ಕರ ಆನ್ ಲೈನ್ ಮೂಲಕ ಅಜರ್ಿ ಹಾಕಲು ಬಂದಿದ್ದು ಯಾದಗಿರಿಯ ಸುಭಾಸ ಚೌಕ ಹತ್ತಿರ ಇರುವ ಎಸ್.ಬಿ.ಐ ಬ್ಯಾಂಕ ಮೇಲಗಡೆ ಇರುವ ದುಗರ್ಾ ಕಂಪ್ಯೋಟರ್ಸ ಅಂಗಡಿಯಲ್ಲಿ ಅಜರ್ಿ ಹಾಕುತ್ತಿರುವಾಗ ಆನಂದ ರಾಠೋಡ ಹಾಗು ಇತರ 9 ಜನರು ಸೇರಿ ಗುಂಪು ಕಟ್ಟಿಕೊಂಡು ಏಕೋದ್ದೇಶದಿಂದ ಕೈಯಲ್ಲಿ ಕಬ್ಬಿಣದ ರಾಡು ಮತ್ತು ಬಡಿಗೆ ಹಿಡಿದುಕೊಂಡು ನಾವು ಇದ್ದ ಸ್ಥಳದಲ್ಲಿ ಅಂದರೆ ದುಗರ್ಾ ಕಂಪ್ಯೋಟರ ಅಂಗಡಿಗೆ ನುಗ್ಗಿ ನನಗೆ ಮತ್ತು ನನ್ನ ಅಜ್ಜಿಗೆ ಅವಾಚ್ಯವಾಗಿ ಹೊಲಸು ಶಬ್ದಗಳಿಂದ ಬೈದಾಡಿ ಆನಂದ ರಾಠೋಡ ಮತ್ತು ಅರವಿಂದ ರಾಠೋಡ ಹಾಗು ಇತರರು ಕಬ್ಬಿಣದ ರಾಡಿನಿಂದ ಮನಬಂದಂತೆ ಹಲ್ಲೆ ಮಾಡಿ ನನ್ನ ಅಜ್ಜಿಗೆ ಆನಂದ ಇತನು ಕಬ್ಬಿಣದ ರಾಡಿನಿಂದ ಜೋರಾಗಿ ತಲೆಯ ಮೇಲೆ ಭಾರಿ ರಕ್ತ ಮಾಡಿ ಅವರ ಜೋತೆ ಇದ್ದ ಹೆಣ್ಣು ಮಕ್ಕಳು ಕೂಡಾ ಮನಬಂದಂತೆ ಕೈಯಿಂದ ಹೊಡೆ ಬಡೆ ಮಾಡಿ ಕೂದಲು ಹಿಡಿದು ಜಗ್ಗಾಡಿ ಹೊಡೆದಿರುತ್ತಾರೆ. ನನಗೂ ಕೂಡಾ ಕಬ್ಬಿಣದ ರಾಡಿನಿಂದ ಎರಡು ಕೈಗಳೀಗೆ ಜೋರಾಗಿ ಹೊಡೆದು ಗುಪ್ತಾವಾದ ಪೆಟ್ಟು ಮಾಡಿದ್ದು ಅಲ್ಲದೆ ನನ್ನ ಕೈಹಿಡಿದು ಏಳಾದಾಡಿ ಅಪಮಾನ ಮಾಡಿರುತ್ತಾನೆ. ನೀವು ನಮಗೆ ಮಳಖೇಡಗೆ ಬಂದಾಗ ನಮ್ಮ ಮೇಲೆ ಕೇಸು ಮಾಡಿಸಿರುತ್ತಿರಿ ಈಗ ಇಲ್ಲಿಂದ ಬದುಕಿ ಹೋಗಿರಿ ನೋಡೋಣ ಅಂತಾ ಜೀವದ ಬೆದರಿಕೆ ಹಾಕಿದ್ದು ನನಗೆ ಮತ್ತು ನನ್ನ ಅಜ್ಜಿಗೆ ಕಬ್ಬಿಣದ ರಾಡುಗಳಿಂದ ನಮಗೆ ಕೋಲೆ ,ಮಾಡಲು ಪ್ರಯತ್ನಿಸಿರುತ್ತಾರೆ. ಸದರಿಯವರು ಹಿಂದಿನ ಹಳೆಯ ವೈಷಮ್ಯದಿಂದ ನಮ್ಮ ಮೇಲೆ ಈ ದಿನ ಮಾರಣಾಂತಿಕವಾಗಿ ಹಲ್ಲೆ ಮಾಡಿ ದು:ಖಾಪತಗೊಳಿಸಿದ್ದು ಅಲ್ಲದೆ ನಾವು ಬಾಡಿಗೆ ತಂದಿರು ಕಾರಿನ ಗ್ಲಾಸುಗಳನ್ನು ಮತ್ತು ಬಾನಟ್ಗೆ ಅದೆ ಕಬ್ಬಿಣದ ರಾಡುಗಳಿಂದ ಹೊಡೆದು ಕಾರು ಜಕಂಗೋಳಿಸಿರುತ್ತಾರೆ. ಕಾರಣ ಸದರಿ ಈ ಮೇಲೆ ತೋರಿಸಿದ ಆರೋಪಿತರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ದೂರನ್ನು ಪಡೆದುಕೊಂಡು ಮರಳಿ ಠಾಣೆಗೆ 7-45 ಪಿ.ಎಂಕ್ಕೆ ಬಂದು ಪಿಯರ್ಾದಿಯ ದೂರಿನ ಮೇಲಿಂದ ಠಾಣಾ ಗುನ್ನೆ ನಂ 06/2020 ಕಲಂ ಕಲಂ: 143 147 148 323 324 326 307 354 504 506 427 ಸಂಗಡ 149 ಐಪಿಸಿ  

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 01/2020 174 ಸಿ.ಆರ್.ಪಿ.ಸಿ :- ದಿ:11/02/2020 ರಂದು 13.30 ಗಂಟೆಗೆ ವಿಜಯಪೂರ ಬಿ.ಎಲ್.ಡಿ.ಇ ಆಸ್ಪತ್ರೆಯ ಓ.ಪಿ ಪೊಲೀಸ್ ಠಾಣೆಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ಕೊಟ್ಟು, ಮೃತನ ಹೆಂಡತಿಯಾದ ಮಂಜುಳಾ ಗಂಡ ಪ್ರಕಾಶ ದಂಡಿನ ಇವರಿಗೆ ವಿಚಾರಣೆ ಮಾಡಲು ಒಂದು ಟೈಪ್ ಮಾಡಿದ ದೂರು ಹಾಜರಪಡಿಸಿದ್ದೆನೆಂದರೆ, ನನ್ನ ಗಂಡನಾದ ಪ್ರಕಾಶ ಹುಣಸಗಿ ಸೀಮಾಂತರದ ಹೊಲ ಸವರ್ೆ ನಂ:277/1 ರಲ್ಲಿ ಒಂದು ಎಕರೆ 8 ಗುಂಟೆ ಜಮೀನದಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡಿದ್ದು, ಒಕ್ಕಲತನ ಕೆಲಸಕ್ಕಾಗಿ ಹುಣಸಗಿ ಪಿ.ಕೆ.ಜಿ.ಬಿ ಬ್ಯಾಂಕಿನಲ್ಲಿ 35,000/- ರೂ.ಗಳು ಬೆಳೆ ಸಾಲ ಮಾಡಿದ್ದು ಅಲ್ಲದೆ, ಊರಲ್ಲಿ ಕೆಲವರ ಕಡೆ ಕೈಗಡ ಸಾಲ ಮಾಡಿದ್ದು, ಈ 2-3 ವರ್ಷಗಳಿಂದ ಸರಿಯಾಗಿ ಮಳೆಯಾಗದೇ ಬೆಳೆ ಬಾರದೆ ಇದ್ದುದ್ದಕ್ಕೆ ಸಾಲವನ್ನು ತೀರಿಸಲಾಗದೆ ಚಿಂತೆ ಮಾಡುತ್ತಾ ಸಾಲದ ಬಾದೆಯನ್ನು ತಾಳದೆ ಇಂದು ದಿನಾಂಕ: 11/02/2020 ರಂದು ಬೆಳಿಗ್ಗೆ 06.00 ಗಂಟೆಗೆ ಮನೆಯಲ್ಲಿ ಕವಳಿಗೆ ಹೊಡೆಯುವ ಕ್ರಿಮಿನಾಶಕವನ್ನು ಸೇವನೆ ಮಾಡಿ ಉಪಚಾರ ಪಡೆಯುತ್ತ ಬಿ.ಎಲ್.ಡಿ.ಇ ಆಸ್ಪತ್ರೆ ವಿಜಯಪೂರದಲ್ಲಿ ಮೃತಪಟ್ಟಿದ್ದು ಅಂತಾ  ಇತ್ಯಾದಿ ದೂರನ್ನು ಪಡೆದುಕೊಂಡು ಮರಳಿ ಠಾಣೆಗೆ ಬಂದು  ಕ್ರಮ ಜರುಗಿಸಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!