ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/02/2020

By blogger on ಸೋಮವಾರ, ಫೆಬ್ರವರಿ 10, 2020


                                   ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/02/2020
ವಡಗೇರಾ  ಠಾಣೆ ಗುನ್ನೆ ನಂ:- 01/2020 ಕಲಂ107 ಸಿ. ಆರ್. ಪಿ.ಸಿ:- ನಾನು ಹುಲಿಗೆಪ್ಪ ಹೆಚ್.ಸಿ-03 ಎಸ್.ಹೆಚ್.ಓ ವಡಗೇರಾ ಪೊಲೀಸ್ ಠಾಣೆ ಮಾನ್ಯರವರಲ್ಲಿ ನಿವೇದಿಸಿಕೊಳ್ಳುವುದೆನೆಂದರೆ, ಇಂದು ದಿನಾಂಕ 10.02.2020 ರಂದು 4 ಗಂಟೆಯ ಗಂಟೆಯ ಸುಮಾರಿಗೆ ನಮ್ಮ ಠಾಣೆಯ ಪ್ರಕಾಶ ಹೆಚ್.ಸಿ 18 ವಡಗೇರಾ ಪೊಲೀಸ್ ಠಾಣೆ ರವರು ವಡಗೇರಾ ಪಟ್ಟಣದಲ್ಲಿ ದಿನಾಂಕ:11/02/2020 ರಂದು ಶ್ರೀ ದ್ಯಾವಮ್ಮ ದೇವಿಯ ಜಾತ್ರೆಯ ಪ್ರಯುಕ್ತ ಗುಪ್ತ ಮಾಹಿತಿ  ಸಂಗ್ರಹಿಸುವ ಕುರಿತು ಬೇಟಿ ನೀಡಿದ್ದು, ಪೊಲೀಸ್ ಬಾತ್ಮೀದಾರರಿಂದ ಮತ್ತು ಗುಪ್ತ ಮಾಹಿತಿಯಿಂದ ತಿಳಿದುಬಂದಿದ್ದೇನಂದರೆ, ದಿನಾಂಕ:11/02/2020 ರಂದು ಬೆಳಗ್ಗೆ ದ್ಯಾವಮ್ಮ ದೇವಿಯನ್ನು ಗಂಗಾ ಸ್ನಾನಕ್ಕೆ ಬಂಡಿಯಲ್ಲಿ ಕೂಡಿಸಿಕೊಂಡು ಹೋಗುವಾಗ ಬಂಡಿ ಎಳೆಯುವ ಪದ್ದತಿ ಇರುವುದರಿಂದ ಬಂಡಿ ಎಳೆಯುವದಕ್ಕಾಗಿ ಬೇಡರ (ದೊರಿ) ಜನಾಂಗದವರು ನಾವು ಮೊದಲು ಬಂಡಿ ಎಳೆಯುತ್ತೇವೆ ಅಂತ ಅನ್ನುಕೊಳ್ಳುತ್ತಾ 1ನೇ ಪಾಟರ್ಿಯವರಾದ 1) ಮಲ್ಲಪ್ಪ ತಂದೆ ಮರೆಪ್ಪ ಲಪಾಟಿ (ಇಟಗಿ) 2)ಮುದುಕಪ್ಪ ತಂದೆ ತಿಮ್ಮಯ್ಯ ಪಿಡ್ಡೇಗೌಡರ 3) ಶಿದ್ದಲಿಂಗಪ್ಪ ತಂದೆ ತಿಮ್ಮಯ್ಯ ಗೌಂಡಿ 4)ಕಂಬಯ್ಯ ತಂದೆ ಮರೆಪ್ಪ ಇಟಗಿ 5)ಅಮಾತೆಪ್ಪ ತಂದೆ ಹಣಮಂತ ಪಿಡ್ಡೇಗೌಡರ 6) ಚಂದಪ್ಪ ತಂದೆ ತಿಮ್ಮಯ್ಯ ಇಟಗಿ 7)ಬಸವರಾಜ ನೀಲಹಳ್ಳಿ 8)ಮಲ್ಲಣ್ಣ ನೀಲಹಳ್ಳಿ 9)ಮಲ್ಲಣ್ಣ ಕೊಪ್ಪುರ 10)ಮಲ್ಲಪ್ಪ ಪಿಡ್ಡೆಗೌಡರ 11)ಮಲ್ಲಪ್ಪ ಜಿಲರ್ಿ 12)ದೇವಪ್ಪ ತಂದೆ ಮರೆಪ್ಪ ಬುಸೇನಿ 13)ವೆಂಕಟೇಶ ನೀಲಹಳ್ಳಿ 14)ಬುಡ್ಡಪ್ಪ ಹೊಸುರ 15)ಭೀಮಣ್ಣ ರಾಮನಾಳ 16)ಭೀಮಶಪ್ಪ ಕುಮನೂರ 17)ದೇವಪ್ಪ ಶಿರವಾಳ 18)ಶರಣಪ್ಪ ಪಿಡ್ಡೇಗೌಡರ 19)ಶಿವಪ್ಪ ಪಿಡ್ಡೇಗೌಡರ 20)ಯಲ್ಲಪ್ಪ ಶಿರವಾಳ ಸಾ:ಎಲ್ಲರೂ ವಡಗೇರಾ ಸಾ:ಎಲ್ಲರೂ ವಡಗೇರಾ ಅದೆ ಬಂಡಿಯನ್ನು ಕುರುಬ ಜನಾಂಗದವರು 2ನೇ ಪಾಟರ್ಿಯವರಾದ 1)ಬಸವರಾಜ ತಂದೆ ಸಿದ್ದನಗೌಡ ಕಾಡಂನೊರ 2)ಮಲ್ಲಿಕಾಜರ್ುನ ತಂದೆ ಶಿವಣ್ಣ ಕರಿಕೆಳ್ಳಿ 3)ದೇವಪ್ಪ ತಂದೆ ಗಂಗಪ್ಪ ಕಡೇಚೂರ 4)ಮಲ್ಲಪ್ಪ ತಂದೆ ಇದೇಪ್ಪ ನಸಲವಾಯಿ ವಯಾ:25 ವರ್ಷ 5)ಮಲ್ಲಯ್ಯ ತಂದೆ ಸಾಬಣ್ಣ 6)ಭೀಮಣ್ಣ ತಂದೆ ಕರೆಪ್ಪ ಬೂದನಾಳ 7)ಶಿವುಕುಮಾರ ತಂದೆ ಬಸನಗೌಡ ಕೊಂಕಲ್ 8)ಬಸವರಾಜ ತಂದೆ ಹಣಮಂತ ದೇವದುರ್ಗ 9)ಶಿವರಾಜ ತಂದೆ ಶಿವಪ್ಪ ಗೋನಾಲ 10)ಪಂಪಣ್ಣ ತಂದೆ ಹೊನ್ನಪ್ಪ ಜಡಿ 11)ಮರೆಪ್ಪ ತಂದೆ ಸಿದ್ದಪ್ಪ ಜಡಿ 12)ಬೀರಪ್ಪ ತಂ/ ಮಲ್ಲಪ್ಪ ಜಡಿ 13)ನಿಂಗಪ್ಪ ತಂದೆ ಹೊನ್ನಪ್ಪ ಕರಿಕಳ್ಳಿ 14)ಬಸವರಾಜ ತಂದೆ ನಿಂಗಪ್ಪ ಪೂಜಾರಿ 15)ಮಹಾದೇವಪ್ಪ ತಂ/ಸಿದ್ದಪ್ಪ ಗೋನಾಲ 16)ಹಣಮಂತ್ರಾಯ ತಂ/ಶಿವರಾಯ ಜಡಿ 17)ಶರಣಪ್ಪ ತಂ/ಹಣಮಂತ್ರಾಯ ಜಡಿ 18)ಸಿದ್ದಪ್ಪ ತಂ/ಚಂದಪ್ಪ ಕಡೇಚೂರ 19)ಶಿವರಾಜ ತಂ/ಬಸಪ್ಪ ಕಡೇಚೂರ 20)ಮಲ್ಲು ತಂದೆ ಹೈಯಾಳಪ್ಪ ಡಾವಣದೂರ ಸಾ: ಎಲ್ಲರೂ ವಡಗೇರಾ ನಾವು ಮೊದಲು ಬಂಡಿ ಎಳೆಯುತ್ತೇವೆ ಅಂತ ಅಂದುಕೊಳ್ಳುತ್ತಾ ಗ್ರಾಮದಲ್ಲಿ ತಿರುಗಾಡುತ್ತಿರುವುದು ಪೊಲೀಸ್ ಬಾತ್ಮೀ ಇರುವುದರಿಂದ ಈಗಾಗಲೇ ಈ ಬಗ್ಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಹಾಗೂ ಸಿ.ಪಿ.ಐ ಮತ್ತು ಪಿ.ಎಸ್.ಐ ಸಾಹೇಬರ ನೇತೃತ್ವದಲ್ಲಿ 02 ಬಾರಿ ಪೊಲೀಸ್ ಠಾಣೆಗೆ ಕರೆಯಿಸಿ ಶಾಂತಿ ಸಭೆಯನ್ನು ಕೈಕೊಂಡು ಎರಡು ಜನಾಂಗದವರ ಸಮಕ್ಷಮ ದೇವಿಯ ಬಂಡಿ ಎಳೆಯುವದನ್ನು ಬಿಟ್ಟು ಈ ಬಾರಿ ದೇವಿಯನ್ನು ಟ್ರ್ಯಾಕ್ಟರ್ದಲ್ಲಿ ಕೂಡಿಸಿ ಮೆರವಣಿಗೆ ಮುಖಾಂತರ ಗಂಗಾ ಸ್ನಾನಕ್ಕೆ ಹೋಗಿ ಗಂಗಾ ಸ್ನಾನ ಮುಗಿಸಿಕೊಂಡು ಮರಳಿ ಬರುವಾಗ ಕೂಡಾ ದೇವಿಯನ್ನು ಟ್ರ್ಯಾಕ್ಟರ್ ದಲ್ಲಿ ಕೂಡಿಸಿಕೊಂಡು ಮೆರವಣಿಗೆಯ ಮುಖಾಂತರ ದೇವಸ್ಥಾನಕ್ಕೆ ಬರುವುದು ಅಂತ ಶಾಂತಿ ಸಭೆಯಲ್ಲಿ ಶಾಂತಿ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಜನರಿಗೂ ತಿಳಿಸಿ ಹೇಳಿದ್ದು ಅದಕ್ಕೆ ಗ್ರಾಮದ ಎಲ್ಲಾ ಮುಖಂಡರು ಒಪ್ಪಿ ಸಹಿ ಮಾಡಿದ್ದು ಇರುತ್ತದೆ. ಆದರೂ ಕೂಡಾ ಕೆಲವು ಜನರು ಜಾತ್ರೆಯ ಪ್ರಯುಕ್ತ ಒಬ್ಬರ ಮೇಲೆ ಒಬ್ಬರು ಬಿನ್ನಾಭಿಪ್ರಾಯ ಬೆಳೆಸಿಕೊಂಡಿರುತ್ತಾರೆ. ಸದರಿಯವರು ಯಾವುದೇ ಸಮಯದಲ್ಲಿ ಗ್ರಾಮದಲ್ಲಿ ಗಲಾಟೆ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದು ಸಾರ್ವಜನಿಕ ಶಾಂತತಾ ಭಂಗವುಂಟು ಮಾಡುವ ಮತ್ತು ಆಸ್ತಿಹಾನಿ, ಜೀವ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳು ಕಂಡುಬಂದ ಹಿನ್ನೆಲೆಯಲ್ಲಿ ಇದಾವುದಕ್ಕೂ ಆಸ್ಪದವನ್ನಿಯದೆ ಸದರಿಯವರಿಂದ ಜರುಗಬಹುದಾದ ಸಂಭವನಿಯ ಸಂಜ್ಞೇಯ ಅಪರಾಧಗಳನ್ನು ತಡೆಗಟ್ಟುವ ಸಾಧ್ಯತೆ ಇದೆ ಅಂತಾ ಕಂಡು ಬಂದ ಮೇರೆಗೆ ಮರಳಿ 4-30 ಪಿ.ಎಮ್ಕ್ಕೆ  ಠಾಣೆಗೆ ಬಂದು ಸದರಿ ಈ ಮೇಲ್ಕಾಣಿಸಿದವರ ಮೇಲೆ  ಮುಂಜಾಗೃತ ಕ್ರಮವನ್ನು ಕೈಕೊಳ್ಳಲು ಮಾನ್ಯರವರಲ್ಲಿ ವಿನಂತಿ. ಅಂತ ಕೊಟ್ಟ ವರದಿಯ ಆಧಾರದ ಮೇಲಿಂದ ವಡಗೇರಾ ಪೊಲೀಸ್ ಠಾಣೆ ಪಿ.ಎ.ಆರ್. ನಂ: 01/2020 ಕಲಂ: 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ವಡಗೇರಾ  ಠಾಣೆ ಗುನ್ನೆ ನಂ:- : 02/2020 ಕಲಂ107 ಸಿ. ಆರ್. ಪಿ.ಸಿ:- ನಾನು ಹುಲಿಗೆಪ್ಪ ಹೆಚ್.ಸಿ-03 ಎಸ್.ಹೆಚ್.ಓ ವಡಗೇರಾ ಪೊಲೀಸ್ ಠಾಣೆ ಮಾನ್ಯರವರಲ್ಲಿ ನಿವೇದಿಸಿಕೊಳ್ಳುವುದೆನೆಂದರೆ, ಇಂದು ದಿನಾಂಕ 10.02.2020 ರಂದು 5 ಗಂಟೆಯ ಗಂಟೆಯ ಸುಮಾರಿಗೆ ನಮ್ಮ ಠಾಣೆಯ ಪ್ರಕಾಶ ಹೆಚ್.ಸಿ 18 ವಡಗೇರಾ ಪೊಲೀಸ್ ಠಾಣೆ ರವರು ವಡಗೇರಾ ಪಟ್ಟಣದಲ್ಲಿ ದಿನಾಂಕ:11/02/2020 ರಂದು ಶ್ರೀ ದ್ಯಾವಮ್ಮ ದೇವಿಯ ಜಾತ್ರೆಯ ಪ್ರಯುಕ್ತ ಗುಪ್ತ ಮಾಹಿತಿ  ಸಂಗ್ರಹಿಸುವ ಕುರಿತು ಬೇಟಿ ನೀಡಿದ್ದು, ಪೊಲೀಸ್ ಬಾತ್ಮೀದಾರರಿಂದ ಮತ್ತು ಗುಪ್ತ ಮಾಹಿತಿಯಿಂದ ತಿಳಿದುಬಂದಿದ್ದೇನಂದರೆ, ದಿನಾಂಕ:11/02/2020 ರಂದು ಬೆಳಗ್ಗೆ ದ್ಯಾವಮ್ಮ ದೇವಿಯನ್ನು ಗಂಗಾ ಸ್ನಾನಕ್ಕೆ ಬಂಡಿಯಲ್ಲಿ ಕೂಡಿಸಿಕೊಂಡು ಹೋಗುವಾಗ ಬಂಡಿ ಎಳೆಯುವ ಪದ್ದತಿ ಇರುವುದರಿಂದ ಬಂಡಿ ಎಳೆಯುವದಕ್ಕಾಗಿ ಬೇಡರ (ದೊರಿ) ಜನಾಂಗದವರು ನಾವು ಮೊದಲು ಬಂಡಿ ಎಳೆಯುತ್ತೇವೆ ಅಂತ ಅನ್ನುಕೊಳ್ಳುತ್ತಾ 1ನೇ ಪಾಟರ್ಿಯವರಾದ 1)ಬಸವರಾಜ ತಂದೆ ಸಿದ್ದನಗೌಡ ಕಾಡಂನೊರ 2)ಮಲ್ಲಿಕಾಜರ್ುನ ತಂದೆ ಶಿವಣ್ಣ ಕರಿಕೆಳ್ಳಿ 3)ದೇವಪ್ಪ ತಂದೆ ಗಂಗಪ್ಪ ಕಡೇಚೂರ 4)ಮಲ್ಲಪ್ಪ ತಂದೆ ಇದೇಪ್ಪ ನಸಲವಾಯಿ ವಯಾ:25 ವರ್ಷ 5)ಮಲ್ಲಯ್ಯ ತಂದೆ ಸಾಬಣ್ಣ 6)ಭೀಮಣ್ಣ ತಂದೆ ಕರೆಪ್ಪ ಬೂದನಾಳ 7)ಶಿವುಕುಮಾರ ತಂದೆ ಬಸನಗೌಡ ಕೊಂಕಲ್ 8)ಬಸವರಾಜ ತಂದೆ ಹಣಮಂತ ದೇವದುರ್ಗ 9)ಶಿವರಾಜ ತಂದೆ ಶಿವಪ್ಪ ಗೋನಾಲ 10)ಪಂಪಣ್ಣ ತಂದೆ ಹೊನ್ನಪ್ಪ ಜಡಿ 11)ಮರೆಪ್ಪ ತಂದೆ ಸಿದ್ದಪ್ಪ ಜಡಿ 12)ಬೀರಪ್ಪ ತಂ/ ಮಲ್ಲಪ್ಪ ಜಡಿ 13)ನಿಂಗಪ್ಪ ತಂದೆ ಹೊನ್ನಪ್ಪ ಕರಿಕಳ್ಳಿ 14)ಬಸವರಾಜ ತಂದೆ ನಿಂಗಪ್ಪ ಪೂಜಾರಿ 15)ಮಹಾದೇವಪ್ಪ ತಂ/ಸಿದ್ದಪ್ಪ ಗೋನಾಲ 16)ಹಣಮಂತ್ರಾಯ ತಂ/ ಶಿವರಾಯ ಜಡಿ 17)ಶರಣಪ್ಪ ತಂ/ಹಣಮಂತ್ರಾಯ ಜಡಿ 18)ಸಿದ್ದಪ್ಪ ತಂ/ಚಂದಪ್ಪ ಕಡೇಚೂರ 19)ಶಿವರಾಜ ತಂ/ಬಸಪ್ಪ ಕಡೇಚೂರ  20)ಮಲ್ಲು ತಂದೆ ಹೈಯಾಳಪ್ಪ ಡಾವಣದೂರ ಸಾ: ಎಲ್ಲರೂ ವಡಗೇರಾ ಸಾ:ಎಲ್ಲರೂ ವಡಗೇರಾ ಅದೆ ಬಂಡಿಯನ್ನು ಕುರುಬ ಜನಾಂಗದವರು 2ನೇ ಪಾಟರ್ಿಯವರಾದ 1) ಮಲ್ಲಪ್ಪ ತಂದೆ ಮರೆಪ್ಪ ಲಪಾಟಿ (ಇಟಗಿ) 2)ಮುದುಕಪ್ಪ ತಂದೆ ತಿಮ್ಮಯ್ಯ ಪಿಡ್ಡೇಗೌಡರ 3) ಶಿದ್ದಲಿಂಗಪ್ಪ ತಂದೆ ತಿಮ್ಮಯ್ಯ ಗೌಂಡಿ 4) ಕಂಬಯ್ಯ ತಂದೆ ಮರೆಪ್ಪ ಇಟಗಿ 5)ಅಮಾತೆಪ್ಪ ತಂದೆ ಹಣಮಂತ ಪಿಡ್ಡೇಗೌಡರ 6) ಚಂದಪ್ಪ ತಂದೆ ತಿಮ್ಮಯ್ಯ ಇಟಗಿ 7)ಬಸವರಾಜ ನೀಲಹಳ್ಳಿ 8)ಮಲ್ಲಣ್ಣ ನೀಲಹಳ್ಳಿ 9)ಮಲ್ಲಣ್ಣ ಕೊಪ್ಪುರ 10)ಮಲ್ಲಪ್ಪ ಪಿಡ್ಡೆಗೌಡರ 11)ಮಲ್ಲಪ್ಪ ಜಿಲರ್ಿ 12)ದೇವಪ್ಪ ತಂದೆ ಮರೆಪ್ಪ ಬುಸೇನಿ 13)ವೆಂಕಟೇಶ ನೀಲಹಳ್ಳಿ 14)ಬುಡ್ಡಪ್ಪ ಹೊಸುರ 15)ಭೀಮಣ್ಣ ರಾಮನಾಳ 16)ಭೀಮಶಪ್ಪ ಕುಮನೂರ 17)ದೇವಪ್ಪ ಶಿರವಾಳ 18)ಶರಣಪ್ಪ ಪಿಡ್ಡೇಗೌಡರ 19)ಶಿವಪ್ಪ ಪಿಡ್ಡೇಗೌಡರ 20)ಯಲ್ಲಪ್ಪ ಶಿರವಾಳ ಸಾ: ಎಲ್ಲರೂ ವಡಗೇರಾ ನಾವು ಮೊದಲು ಬಂಡಿ ಎಳೆಯುತ್ತೇವೆ ಅಂತ ಅಂದುಕೊಳ್ಳುತ್ತಾ ಗ್ರಾಮದಲ್ಲಿ ತಿರುಗಾಡುತ್ತಿರುವುದು ಪೊಲೀಸ್ ಬಾತ್ಮೀ ಇರುವುದರಿಂದ ಈಗಾಗಲೇ ಈ ಬಗ್ಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಹಾಗೂ ಸಿ.ಪಿ.ಐ ಮತ್ತು ಪಿ.ಎಸ್.ಐ ಸಾಹೇಬರ ನೇತೃತ್ವದಲ್ಲಿ 02 ಬಾರಿ ಪೊಲೀಸ್ ಠಾಣೆಗೆ ಕರೆಯಿಸಿ ಶಾಂತಿ ಸಭೆಯನ್ನು ಕೈಕೊಂಡು ಎರಡು ಜನಾಂಗದವರ ಸಮಕ್ಷಮ ದೇವಿಯ ಬಂಡಿ ಎಳೆಯುವದನ್ನು ಬಿಟ್ಟು ಈ ಬಾರಿ ದೇವಿಯನ್ನು ಟ್ರ್ಯಾಕ್ಟರ್ದಲ್ಲಿ ಕೂಡಿಸಿ ಮೆರವಣಿಗೆ ಮುಖಾಂತರ ಗಂಗಾ ಸ್ನಾನಕ್ಕೆ ಹೋಗಿ ಗಂಗಾ ಸ್ನಾನ ಮುಗಿಸಿಕೊಂಡು ಮರಳಿ ಬರುವಾಗ ಕೂಡಾ ದೇವಿಯನ್ನು ಟ್ರ್ಯಾಕ್ಟರ್ ದಲ್ಲಿ ಕೂಡಿಸಿಕೊಂಡು ಮೆರವಣಿಗೆಯ ಮುಖಾಂತರ ದೇವಸ್ಥಾನಕ್ಕೆ ಬರುವುದು ಅಂತ ಶಾಂತಿ ಸಭೆಯಲ್ಲಿ ಶಾಂತಿ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಜನರಿಗೂ ತಿಳಿಸಿ ಹೇಳಿದ್ದು ಅದಕ್ಕೆ ಗ್ರಾಮದ ಎಲ್ಲಾ ಮುಖಂಡರು ಒಪ್ಪಿ ಸಹಿ ಮಾಡಿದ್ದು ಇರುತ್ತದೆ. ಆದರೂ ಕೂಡಾ ಕೆಲವು ಜನರು ಜಾತ್ರೆಯ ಪ್ರಯುಕ್ತ ಒಬ್ಬರ ಮೇಲೆ ಒಬ್ಬರು ಬಿನ್ನಾಭಿಪ್ರಾಯ ಬೆಳೆಸಿಕೊಂಡಿರುತ್ತಾರೆ. ಸದರಿಯವರು ಯಾವುದೇ ಸಮಯದಲ್ಲಿ ಗ್ರಾಮದಲ್ಲಿ ಗಲಾಟೆ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದು ಸಾರ್ವಜನಿಕ ಶಾಂತತಾ ಭಂಗವುಂಟು ಮಾಡುವ ಮತ್ತು ಆಸ್ತಿಹಾನಿ, ಜೀವ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳು ಕಂಡುಬಂದ ಹಿನ್ನೆಲೆಯಲ್ಲಿ ಇದಾವುದಕ್ಕೂ ಆಸ್ಪದವನ್ನಿಯದೆ ಸದರಿಯವರಿಂದ ಜರುಗಬಹುದಾದ ಸಂಭವನಿಯ ಸಂಜ್ಞೇಯ ಅಪರಾಧಗಳನ್ನು ತಡೆಗಟ್ಟುವ ಸಾಧ್ಯತೆ ಇದೆ ಅಂತಾ ಕಂಡು ಬಂದ ಮೇರೆಗೆ ಮರಳಿ 5-00 ಪಿ.ಎಮ್ಕ್ಕೆ  ಠಾಣೆಗೆ ಬಂದು ಸದರಿ ಈ ಮೇಲ್ಕಾಣಿಸಿದವರ ಮೇಲೆ  ಮುಂಜಾಗೃತ ಕ್ರಮವನ್ನು ಕೈಕೊಳ್ಳಲು ಮಾನ್ಯರವರಲ್ಲಿ ವಿನಂತಿ. ಅಂತ ಕೊಟ್ಟ ವರದಿಯ ಆಧಾರದ ಮೇಲಿಂದ ವಡಗೇರಾ ಪೊಲೀಸ್ ಠಾಣೆ ಪಿ.ಎ.ಆರ್. ನಂ: 02/2020 ಕಲಂ: 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಠಾಣೆ ಗುನ್ನೆ ನಂ:- 41/2020 ಕಲಂ 32(3) 15(ಎ) ಕನರ್ಾಟಕ ಅಭಕಾರಿ ಕಾಯ್ದೆ 1965:- ಕೇಸಿನ ಸಂಕ್ಷಿಪ್ತ ಸಾರಾಂಶ : ಇಂದು ದಿನಾಂಕ: 10/02/2020 ರಂದು 8:15 ಎ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀ ಶರಣಪ್ಪ ಹವಲ್ದಾರ ಪಿ.ಎಸ್.ಐ (ಅವಿ) ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲು ನೊಂದಿಗೆ ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:10/02/2020 ರಂದು 6-30 ಎ.ಎಂ.ಕ್ಕೆ ತಿಂಥಣಿ ಗ್ರಾಮದ ಕೈಲಾಸ ಕಟ್ಟೆಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಆರೋಪಿತನು ಒಂದು  ಪ್ಲಾಸ್ಟೀಕ ಚೀಲದಲ್ಲಿದ್ದ ಮದ್ಯವನ್ನು ಸಂಗ್ರಹಿಸಿ ಮದ್ಯ ಮಾರಾಟ ಮಾಡಲು ಪರವಾನಿಗೆ ಇಲ್ಲದೆ ಚಿಲ್ಲರೆಯಾಗಿ ಮಾರಾಟ ಮಾಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನಿಂದ 90 ಎಮ್ಎಲ್ನ 41 ಓರಿಜನಲ್ ಚಾಯಿಸ್ ಡಿಲಕ್ಷ ವಿಸ್ಕಿ ಪೌಚಗಳಿದ್ದು ಪ್ರತಿಯೊಂದಕ್ಕೆ 30.32=00 ರೂಗಳಿದ್ದು ಹೀಗೆ ಒಟ್ಟು 3690/- ಎಮ್ಎಲ್ ಮಧ್ಯವಿದ್ದು ಅದರ  ಒಟ್ಟು ಅ.ಕಿ 1243.12/-ರೂಗಳು 2) ನಗದು ಹಣ 645/- ರೂಗಳು 3) 4 ಪ್ಲಾಸ್ಟೀಕ ಗ್ಲಾಸುಗಳು ಅ.ಕಿ 00=00 ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ ಠಾಣೆ ಗುನ್ನೆ ನಂ:- 03/2020 ಕಲಂ. 174 ಸಿಆರ್ಪಿಸಿ:-      ಇಂದು ದಿನಾಂಕ:10/02/2020 ರಂದು 8:30 ಎ ಎಮ್ ಕ್ಕೆ ಪಿಯರ್ಾದಿದಾರಳಾದ ಶ್ರೀಮತಿ ನಿಂಗಮ್ಮ ಗಂಡ ಪೀರಪ್ಪ ಹಲಗಿ ಸಾ:ಯರಗೋಳ ತಾ:ಜಿ:ಯಾದಗಿರಿ ಇವರ ಹೇಳಿಕೆ ಸಾರಾಂಶವೆನೆಂದರೆ ನನಗೆ 2 ಜನ ಗಂಡು ಮಕ್ಕಳು ಮತ್ತು 4 ಜನ ಹೆಣ್ಣು ಮಕ್ಕಳೀರುತ್ತಾರೆ. ಇಬ್ಬರೂ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನಾವು ಪ್ರತಿ ವರ್ಷ ತಿಂಥಣಿ ಶ್ರೀ ಮೌನೇಶ್ವರ ಜಾತ್ರೆಗೆ ಬರುತ್ತಿದ್ದು ಅದರಂತೆ ಈ ವರ್ಷವು ಕೂಡಾ ದಿನಾಂಕ:08/02/2020 ರಂದು ನಮ್ಮ ಕುಟುಂಬ ಸಮೇತ ತಿಂಥಣಿ ಗ್ರಾಮದ ಶ್ರೀ ಮೌನೇಶ್ವರ ಜಾತ್ರೆಗೆ ಬಂದಿದ್ದು. ಇಂದು ಮುಂಜಾನೆ 10 ಗಂಟೆ ಸುಮಾರಿಗೆ ಸ್ನಾನ ಮಾಡಿ ದೇವರ ದರ್ಶನಕ್ಕೆ ಹೋಗಬೇಕೆಂದು ತಿಂಥಣಿ ಗ್ರಾಮದಲ್ಲಿರುವ ಕೃಷ್ಣಾ ನದಿಗೆ ಸ್ನಾನ ಮಾಡಲು ಹೋಗಿದ್ದೆವು. ನಾವು ಎಲ್ಲರೂ ಸ್ನಾನ ಮಾಡಿ ನದಿಯ ದಂಡೆಯಲ್ಲಿ ಕುಳಿತ್ತಿರುತ್ತೆವೆ. ನನ್ನ ಗಂಡ ಫೀರಪ್ಪ ಈತನು ಈಜಾಡಲು ನದಿಯ ಮದ್ಯದಲ್ಲಿ ಹೋಗಿದ್ದನು. ನಾವು ಅಷ್ಟು ಒಳಗೆ ಹೋಗಬೇಡ ದಂಡಿಯಲ್ಲಿ ಬಂದು ಸ್ನಾನ ಮಾಡು ಅಂತ ಒದರಿ ಹೇಳಿರುತ್ತೆವೆ ಆಗ ಆಯ್ತು ದಂಡಿಗೆ ಬರುತ್ತೆನೆ ಅಂತ ಹೇಳಿ ಈಜುತ್ತಾ ಬರುತ್ತಾ ಇದ್ದನು ಆಗ ಅಲ್ಲೆ ಒಮ್ಮಂದೊಮ್ಮೆಲೇ ಕಾಣೆಯಾದನು ನಾವು ಹೊರಗೆ ಬಂದಿರಬಹುದೆಂದು ಎಲ್ಲಾ ಕಡೆ ಹುಡುಕಾಡಿದೇವು ಮತ್ತು ನದಿಯ ದಂಡೆಯಲ್ಲಿ ತಿರುಗಾಡಿ ನೋಡಿದೇವು ಅಲ್ಲಿ ಕೂಡ ಸಿಗಲಿಲ್ಲ. ಮತ್ತು ನದಿಯ ನೀರಿನಲ್ಲಿ ಕೂಡಾ ಹುಡುಕಾಡಿದರು ಸಿಗಲಿಲ್ಲ. ನಮಗೆ ಗಾಬರಿಯಾಗಿ ನಿನ್ನೆ ದಿನಾಂಕ:09/02/2020 ರಂದು 12:30 ಪಿ.ಎಮ್ ಕ್ಕೆ ಸುರಪೂರ ಪೊಲೀಸ್ ಠಾಣೆಯಲ್ಲಿ ನನ್ನ ಗಂಡ ಫೀರಪ್ಪನು ನದಿ ನೀರಿನಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿರುತ್ತೆವೆ. ಸುರಪೂರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 39/2020 ಕಲಂ ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ. ನಂತರ ನಾವು ನದಿಯ ದಂಡೆಯಲ್ಲಿ ಹುಡುಕುತ್ತಿರುವಾಗ ಇಂದು ದಿನಾಂಕ:10/02/2020 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ನದಿಯಲ್ಲಿ ನನ್ನ ಗಂಡನ ಶವ ನೀರಿನ ಮೇಲೆ ತೆಲುತ್ತಾ ಬಂದು ಆಗ ನಾನು ನನ್ನ ಮಗ ಮರಗಪ್ಪ ಮತ್ತು ಮೈದುನ ಚಂದ್ರಶೇಖರ ಮತ್ತು ಸಂಬಂಧಿಯ ಮಗ ದೇವಿಂದ್ರಪ್ಪ ಇವರಿಗೆ ಹೇಳಿದಾಗ ಎಲ್ಲರೂ ಕೂಡಿ ನನ್ನ ಗಂಡನ ಶವವನ್ನು ನದಿಯ ದಂಡೆಯ ಮೇಲೆ ತಂದು ಹಾಕಿರುತ್ತೆವೆ. ನನ್ನ ಗಂಡನು ನದಿಯ ನೀರಿನಲ್ಲಿ ಸ್ನಾನ ಮಾಡಲು ಹೋದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದು. ನನ್ನ ಗಂಡನ ಸಾವಿನಲ್ಲಿ ನನಗೆ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲ. ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತ ಹೇಳಿಕೆ ನೀಡಿದ್ದ ಸಾರಾಂಶದ ಮೇಲಿಂಗ ಠಾಣಾ ಯು.ಡಿ.ಆರ್ ನಂ.03/2020 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 

ಗುರಮಠಕಲ್ ಗ್ರಾಮೀಣ ಠಾಣೆ ಗುನ್ನೆ ನಂ:-. 24/2020 ಕಲಂ:279, 304(ಎ) ಐಪಿಸಿ &ಕಲಂ: 187 ಐ.ಎಮ್.ವಿ ಆಕ್ಟ್:- ಇಂದು ದಿನಾಂಕ 10.02.2020 ರಂದು ಬೆಳಿಗ್ಗೆ 5:00 ಗಂಟೆಯ ಸುಮಾರಿಗೆ ನನ್ನ ಮಗ ರಾಮು ಈತನು ಅಜರ್ೆಂಟ ಕೆಲಸವಿದೆ ಎಂದು ಊರಿಗೆ ಹೋಗುವುದಾಗಿ ಹೇಳಿ ಲೋಕಪಲ್ಲಿಯಿಂದ ಕೊಂಕಲ್ ಕಡೆಗೆ ಹೋದನು. ನಂತರ ಮುಂಜಾನೆ 10:00 ಗಂಟೆಯ ಸುಮಾರಿಗೆ ನಾನು ಲೋಕಪಲ್ಲಿಯಲ್ಲಿದ್ದಾಗ ನಮ್ಮ ಅಣ್ಣ-ತಮ್ಮಕಿಯವರಾದ ಬಾಬು ಕೊಂಡಲ ಈತನು ನನಗೆ ಫೋನ್ ಮಾಡಿ ನಿನ್ನ ಮಗ ರಾಮು ನಮ್ಮೂರಿನ ಪೋಲಮ್ಮ ದೇವಿ ಗುಡಿಯ ಹತ್ತಿರ ಕಬ್ಬಿನ ಟ್ರ್ಯಾಕ್ಟರನ ಟೈರ್ ಒಳಗಾಗಿ ಗಾಯಗೊಂಡಿದ್ದು ಆತನಿಗೆ ಕೊಂಕಲನ ಸರಕಾರಿ ದವಾಖಾನೆಯಲ್ಲಿ ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದಾರೆಂಬ ಬಗ್ಗೆ ನನಗೆ ಗೊತ್ತಾಗಿದೆ ನೀನು ಕೂಡಲೇ ಬಾ ಅಂತಾ ತಿಳಿಸಿದರಿಂದ ನಾನು ಸಮಯ ಮಧ್ಯಾಹ್ನನ 12:10 ಗಂಟೆಯ ಸುಮಾರಿಗೆ ನಮ್ಮೂರಿಗೆ ಬಂದು ಬಾಬು ಕೊಂಡಲನನಿಗೆ ವಿಚಾರಿಸಿದಾಗ ಆತ ತಿಳಿಸಿದ್ದೆನೇಂದರೆ ಇಂದು ದಿನಾಂಕ 10.02.2020 ರಂದು ಬೆಳಿಗ್ಗೆ 9:30 ಗಂಟೆಯ ಸುಮಾರಿಗೆ ಪಾಡಪಲ್ಲಿ ಕಡೆಯಿಂದ ಒಂದು ಕಬ್ಬು ತುಂಬಿದ ಟ್ರ್ಯಾಕ್ಟರ ಬಂದಿದ್ದು ನಮ್ಮೂರಿನ ಪೋಲಮ್ಮ ದೇವಿಯ ಗುಡಿಯ ಹತ್ತಿರ ಟ್ರ್ಯಾಕ್ಟರನ ಟ್ರ್ಯಾಲಿಯ ಗಾಲಿಯು ಹೊಟ್ಟೆಯ ಮೇಲಿಂದ ಮೈ ಮೇಲೆ ಹೋಗಿ ಕೈ ಕಾಲುಗಳಲ್ಲಿ ಗಾಯವಾಗಿದ್ದರಿಂದ ಆತನಿಗೆ ಕೊಂಕಲ್ ದವಾಖಾನೆಯಿಂದ ಹೆಚ್ಚಿನ ಉಪಚಾರಕ್ಕಾಗಿ 108 ಆಂಬುಲೆನ್ಸ್ನಲ್ಲಿ ರಾಯಚೂರಗೆ ತೆಗೆದುಕೊಂಡು ಹೋಗುತ್ತಿದ್ದಾಗ ಸಮಯ ಬೆಳಿಗ್ಗೆ 11:20 ಗಂಟೆಗೆ ದಾರಿಯಲ್ಲಿ ನಂದೆಪಲ್ಲಿಯ ಹತ್ತಿರ ಸತ್ತು ಹೋಗಿದ್ದಾನೆ ಆತನನ ಮೃತ ದೇಹವನ್ನು ಸೈದಾಪೂರನ ಸರಕಾರಿ ದವಾಖಾನೆಯ ಶವಗಾರ ಕೊಣೆಯಲ್ಲಿ ಇಟ್ಟಿದ್ದ ಬಗ್ಗೆ ಆಂಬುಲೆನ್ಸನಲ್ಲಿ ಹೋದ ಅನೀಲ ತಂದೆ ಮಾಣಿಕೆಪ್ಪ ಕೊಂಡಾಲ ಈತ ನನಗೆ ಫೋನ್ ಮಾಡಿ ತಿಳಿಸಿದ್ದನು ಎಂದು ನನಗೆ ತಿಳಿಸಿದ.
       ನಂತರ ನಾನು ಮತ್ತು ನಮ್ಮೂರಿನ ಇತರರು ಕೂಡಿಕೊಂಡು ಸೈದಾಪೂರ ಸರಕಾರಿ ದವಾಖಾನೆಯ ಶವಗಾರ ಕೊಣೆಯಲ್ಲಿಟ್ಟಿದ್ದ ನನ್ನ ಮಗನಾದ ರಾಮು ಈತನ ಮೃತ ದೇಹವನ್ನು ನೋಡಿದಾಗ ಕೆಳ ತುಟಿಯಲ್ಲಿ ರಕ್ತಗಾಯ, ಎಡಗೈ ಮೊಳಕೈಯಲ್ಲಿ ಮತ್ತು ಮಣಿಕಟ್ಟಿನ ಕೆಳಗೆ ಮುಂಗೈಯಲ್ಲಿ ತರಚಿ ರಕ್ತ ಕಂದುಗಟ್ಟಿದ ಗಾಯ, ಎಡ ಹೊಟ್ಟೆಯ ಮೇಲೆ ಒಕ್ಕಳ ಹತ್ತಿರ ಟ್ರ್ಯಾಕ್ಟರ ಹೋಗಿ ಅಲ್ಪ-ಸ್ವಲ್ಪ ಚರ್ಮ ಸುಲಿದಂತಾಗಿದ್ದು, ಬಲಗಾಯ ಮೊಳಕಾಲಿನನಲ್ಲಿ ಮುರಿದಂತಾಗಿ ಭಾರಿ ರಕ್ತಗಾಯವಾಗಿದ್ದು, ಬಲಗಾಲ ಪಾದದಲ್ಲಿ ಮತ್ತು ಎಡಗಾಲ ಪಾದದಲ್ಲಿ ರಕ್ತಗಾಯಗಳಾಗಿದ್ದು ಅಲ್ಲದೇ ಅಲ್ಲಲ್ಲಿ ತರಚಿದ ರಕ್ತಗಾಯಗಳು ಕಂಡು ಬಂದಿರುತ್ತವೆ. 
ಇಂದು ದಿನಾಂಕ 10.02.2020 ರಂದು ಸಮಯ ಬೆಳಿಗ್ಗೆ 9:30 ಗಂಟೆಯ ಸುಮಾರಿಗೆ ನಮ್ಮೂರಿನ ಪೋಲಮ್ಮ ದೇವಿಯ ಗುಡಿಯ ಹತ್ತಿರ ಪಾಡಪಲ್ಲಿ ಕಡೆಯಿಂದ ಕಬ್ಬು ತುಂಬಿಕೊಂಡ ಬಂದ ಟ್ರ್ಯಾಕ್ಟರನ ಟ್ರ್ಯಾಲಿಯು ನನ್ನ ಮಗನ ಹೊಟ್ಟೆಯ ಮೇಲಿಂದ ಹೊಗಿದ್ದರಿಂದ ಭಾರಿ ಒಳಪೆಟ್ಟಾ ಮತ್ತು ಭಾರಿ ರಕ್ತಗಾಯಗಳಾಗಿ ಚಿಕಿತ್ಸೆ ಕುರಿತು ರಾಯಚೂರಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ನಂದೆಪಲ್ಲಿಯ ಹತ್ತಿರ ಸಮಯ ಬೆಳಿಗ್ಗೆ 11:20 ಗಂಟೆಗೆ ಮೃತಪಟ್ಟಿದ್ದು, ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ಟ್ರ್ಯಾಕ್ಟರ ಚಾಲನೆ ಮಾಡಿಕೊಂಡು ಹೋಗಿ ನನ್ನ ಮಗನ ಸಾವಿಗೆ ಕಾರಣನಾದ ಟ್ರ್ಯಾಕ್ಟರ ನಂಬರ ಕೆಎ-39-ಟಿ-5942 ನೇದ್ದರ ಓಡಿ ಹೊದ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ.

ಹುಣಸಗಿ  ಪೊಲೀಸ್ ಠಾಣೆ ಗುನ್ನೆ ನಂ:-   16/2020 279, 337, 338, 304(ಎ)  ಐಪಿಸಿ & 187 ಐಎಂವಿ ಕಾಯ್ದೆ :- ದಿನಾಂಕ:09/02/2020 ರಂದು 18.45 ಗಂಟೆಯ ಸುಮಾರಿಗೆ ಪಿಯರ್ಾದಿ ಠಾಣೆಗೆ ಬಂದು ಒಂದು ಹೇಳಿಕೆ ಕೊಟ್ಟಿದ್ದು ಏನೆಂದರೆ, ದಿನಾಂಕ:07/02/2020 ರಂದು ಮದ್ಯಾಹ್ನ 3.00 ಗಂಟೆಯ ಸುಮಾರಿಗೆ ನನ್ನ ಗಂಡನಾದ ದೇವಿದ್ರಪ್ಪನು ತನ್ನ ಬಜಾಜ ಪ್ಲಾಟಿನ್ ಕೆಂಪು ಬಣ್ಣದ ಮೋಟಾರ್ ಸೈಕಲ್ ನಂ. ಕೆಎ-33 5992 ನೇದ್ದರ ಮೇಲೆ ಹೊಲದಿಂದಾ ಮನೆಗೆ ಹೆಬ್ಬಾಳ(ಬಿ)-ಕಚಕನೂರ ರೋಡಿನ ಮೇಲೆ ಕಚಕನೂರ ಕಡೆಗೆ ಬರುವಾಗ ಎದರುಗಡೆಯಿಂದಾ ಒಂದು ಸ್ವಿಪ್ಟ ಸಿಲ್ವರ ಬಣ್ಣದ ಕಾರ ನಂಬರ ಇಲ್ಲದ್ದನ್ನು ಚಾಲಕನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಪಿಯರ್ಾದಿ ಗಂಡನ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ ದೇವಿಂದ್ರಪ್ಪನಿಗೆ ಎಡಗಾಲಿಗೆ ಭಾರಿ ಒಳಪೆಟ್ಟಾಗಿದ್ದು, ಸ್ಥಳದಲ್ಲಿದ್ದ ಚಾಲಕ ಆಸ್ಪತ್ರೆಗೆ ತೋರಿಸುತ್ತೇನೆ ಅಂತಾ ಹೇಳಿ ಹುಣಸಗಿ ಸರಕಾರಿ ದವಾಖಾನೆಗೆ ತಂದು ಉಪಚಾರ ಮಾಡಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆಂದು ವಿಜಯಪುರ ಬಾಗ್ಯವಂತಿ ದವಾಖಾಣೆಗೆ ಕಳಿಸಿದ್ದು, ಇದುವರಗೆ ಬಂದು ಕಾರ ಚಾಲಕ ದವಾಖಾನೆಗೆ ತೋರಿಸದೆ, ಇದ್ದುದ್ದಕ್ಕೆ ನಾವು ತಡವಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದು, ನಂಬರ ಇಲ್ಲದ ಸಿಲ್ವರ ಬಣ್ಣದ ಸ್ವಿಪ್ಟ ಕಾರ ಚಾಲಕನ ಮೇಲೆ ಕಾನೂನ ರೀತಿ ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ಹೇಳಿಕೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ.    
    ಇಂದು ದಿನಾಂಕ: 10/02/2020 ರಂದು 08.00 ರಂದು ಗಂಟೆಗೆ ಎಸ್.ಹೆಚ್.ಓ ಜಲನಗರ ಪೊಲೀಸ ಠಾಣೆ ವಿಜಯಪುರ ರವರಿಂದಾ ಪ್ರಕರಣದಲ್ಲಿ ಗಾಯಾಳು ದೇವಿಂದ್ರಪ್ಪ ತಂದೆ ಗುರಪ್ಪಗೌಡ ಹಿರೂರ ಸಾ: ಕಚಕನೂರ ಈತನು ಉಪಚಾರಕ್ಕೆಂದು ಬಾಗ್ಯವಂತಿ ದವಾಖಾನೆಯಲ್ಲಿ ಸೇರಿಕೆಯಾಘಿ ಉಪಚಾರ ಪಡೆಯುತ್ತಿದ್ದಾಗ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ:10/02/2020 ರಂದು 06.30 ಗಂಟೆಗೆ ಮೃತಪಟ್ಟಿರುತ್ತಾನೆ ಎಂದು ಎಂಎಲ್ಸಿ ಮಾಹಿತಿ ತಿಳಿಸಿದ ಮೇರೆಗೆ ಎಂಎಲ್ಸಿ ಯಾದಿಯ ಪ್ರತಿಯನ್ನು ಲಗತ್ತಿಟ್ಟು ಮಾನ್ಯ ನ್ಯಾಯಾಲಯಕ್ಕೆ ಪ್ರಕರಣದಲ್ಲಿ ಕಲಂ.304(ಎ) ಐಪಿಸಿ ಅಳವಡಿಸಿಕೊಳ್ಳಲು ಪರವಾನಿಗೆ ಕುರಿತು ವಿನಂತಿಸಿಕೊಂಡಿದ್ದು ಇರುತ್ತದೆ. ಪ್ರಕರಣದಲ್ಲಿ ಈ ಶೀಘ್ರವರದಿಯನ್ನು ಸಲ್ಲಿಸಲಾಗುತ್ತಿದೆ ಅಂತಾ ವಿನಂತಿ.
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ:- 16/2020 ಕಲಂ: 279, 337, 338 ಐಪಿಸಿ ಸಂಗಡ 187 ಐಎಮ್ವ್ಹಿ ಆಕ್ಟ್ :- ನಾನು ಎಮ್ಎಲ್ಸಿ ವಿಚಾರಣೆ ಕುರಿತು ಬಾಗಲಕೋಟೆ ಗುಳೇದ ಆಸ್ಪತ್ರೆಗೆ ನಿನ್ನೆ ದಿನಾಂಕ:09.02.2020 ರಂದು 9:30 ಪಿಎಮ್ಕ್ಕೆ ಭೇಟಿ ನೀಡಿ ಸದರಿ ಆಸ್ಪತ್ರೆೆಯಲ್ಲಿ ಉಪಚಾರ ಹೊಂದುತ್ತಿರುವ ಗಾಯಾಳು/ಪಿಯರ್ಾದಿ ಹಣಮಂತ ತಂದೆ ಬಸಣ್ಣ ಮಾಲಿಗೌಡರ ವ:36 ವರ್ಷ ಉ:ಒಕ್ಕಲುತನ ಜಾ:ಹಿಂದೂ ಬೇಡರ ಸಾ:ಬೆಣಸಿಗಡ್ಡಿ ಹಾ.ವ:ನಾರಾಯಣಪೂರ ತಾ:ಹುಣಸಗಿ ಈತನ ಹೇಳಿಕೆಯನ್ನು ನಿನ್ನೆ ರಾತ್ರಿ 10:00 ಪಿಎಮ್ದಿಂದ 11:00 ಪಿಎಮ್ದ ವರೆಗೆ ಸದರಿ ಆಸ್ಪತ್ರೆಯಲ್ಲಿ ಪಡೆದುಕೊಂಡು ಮರಳಿ ಠಾಣೆ ಇಂದು ದಿನಾಂಕ:10.02.2020 ರಂದು 1:00 ಪಿಎಮ್ ಕ್ಕೆ ಬಂದಿದ್ದು ಆಸ್ಪತ್ರೆಯಲ್ಲಿ ಪಡೆದ 

ಪಿರ್ಯಾಧಿಯ ಹೇಳಿಕೆಯ ಸಾರಾಂಶವೆನೆಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದೇನೆ. ನನ್ನ ಸ್ವಂತ ಊರು ಬೆಣಸಿಗಡ್ಡಿ ಗ್ರಾಮವಿದ್ದು, ನನ್ನ ಹೆಂಡತಿಯ ತವರೂರು ನಾರಾಯಣಪೂರ ಇದ್ದುದರಿಂದ ನಾನು ನನ್ನ ಹೆಂಡತಿ ಊರು ನಾರಾಯಣಪೂರದಲ್ಲಿ ಇರುತ್ತೇನೆ. ನನ್ನದೊಂದು ಮೋಟರ್ ಸೈಕಲ್ ಇದ್ದು ಅದರ ನಂ: ಕೆಎ-33 ಕೆ-5126 ಇದ್ದು ಅದನ್ನು ನನ್ನ ಕೆಲಸಗಳಿಗಾಗಿ ನಾನೇ ಉಪಯೋಗಿಸುತ್ತೇನೆ.
    ಹೀಗಿದ್ದು ನಿನ್ನೆ ದಿನಾಂಕ:08.02.2020 ರಂದು ಶನಿವಾರ ದಿವಸ ನಾನು ಮತ್ತು ನನ್ನ ಹೆಂಡತಿಯಾದ ಅಮರಮ್ಮ @ ಹೊನ್ನಮ್ಮ ಗಂಡ ಹಣಮಂತ ಮಾಲಿಗೌಡರ ಇಬ್ಬರೂ ಕೂಡಿ ನಮ್ಮ ಮೋಟರ್ ಸೈಕಲ್ ನಂ:ಕೆಎ-33 ಕೆ-5126 ನೇದ್ದರ ಮೇಲೆ ಮೊಮ್ಮಗನಾದ 3 ವರ್ಷದ ಧರ್ಮರಾಜ ತಂದೆ ಯಂಕಪ್ಪ ಅಂಗಡಿ ಸಾ:ಏದಲಭಾವಿ ಇವನನ್ನು ಕರೆದುಕೊಂಡು ತಿಂಥಣಿ ಮೌನೇಶ್ವರ ಜಾತ್ರೆಗೆ ಬೆಳಿಗ್ಗೆ ಹೋಗಿ ತಿಂಥಣಿಯಲ್ಲಿ ಜಾತ್ರೆ ಮಾಡಿಕೊಂಡು ಮರಳಿ ನಮ್ಮ ಊರಿಗೆ ಹೋಗಲು ನಮ್ಮ ಮೋಟರ್ ಸೈಕಲ್ ನಂ:ಕೆಎ-33 ಕೆ-5126 ನೇದ್ದನ್ನು ನಾನೇ ಚಲಾಯಿಸಿಕೊಂಡು ಶಾಂತಪೂರ ಕ್ರಾಸ್-ಬಲಶೆಟ್ಟಿಹಾಳ ರಸ್ತೆಯ ಮೇಲೆ ಕಕ್ಕೇರಾ ಪಟ್ಟಣದ ಸಮೀಪದ ಸೋಮಣ್ಣ ತಂದೆ ಹೊನ್ನಪ್ಪ ಪುಟ್ಟೇರ ಇವರ ಮನೆಯ ಹತ್ತಿರ ಸಾಯಂಕಾಲ 7:00 ಗಂಟೆಯ ಸುಮಾರಿಗೆ ಬರುತ್ತಿರುವಾಗ ಎದುರುನಿಂದ ಕಕ್ಕೇರಾ ಕಡೆಯಿಂದ ಶಾಂತಪೂರ ಕ್ರಾಸ್ ಕಡೆಗೆ ಬರಲು ಒಬ್ಬ ಆಟೋ ಚಾಲಕನು ತನ್ನ ಆಟೋವನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬಂದವನೇ ನನ್ನ ಮೋಟರ್ ಸೈಕಲಗೆ ಡಿಕ್ಕಿ ಪಡಿಸಿದ್ದು ಇದರಿಂದ ನಾನು ಮತ್ತು ಹಿಂದೆ ಕುಳಿತಿದ್ದ ನನ್ನ ಹೆಂಡತಿ ಅಮರಮ್ಮ @ ಹೊನ್ನಮ್ಮ ಹಾಗೂ ನಮ್ಮ ಮೊಮ್ಮಗ ಧರ್ಮರಾಜ ತಂದೆ ಯಂಕಪ್ಪ ಅಂಗಡಿ ಮೂರು ಜನರು ಪುಟಿದು ರಸ್ತೆಯ ಪಕ್ಕದಲ್ಲಿ ಮೋಟರ್ ಸೈಕಲ್ ಸಮೇತ ಬಿದ್ದಿದ್ದು ನನ್ನ ಮೋಟರ್ ಸೈಕಲ್ ಹಿಂದೆ ತಮ್ಮ ಮೋಟರ್ ಸೈಕಲ್ ಮೇಲೆ ಬರುತ್ತಿದ್ದ ಅಮರೇಶ ತಂದೆ ಸೋಮನಿಂಗಪ್ಪ ಗುತ್ತೇದಾರ ಸಾ:ಬೆಣಸಿಗಡ್ಡಿ ಮತ್ತು ಪರಶುರಾಮ ತಂದೆ ಭೀಮರಾಯ ಹುಣಸಗಿ ಸಾ:ಏದಲಭಾವಿ ಇವರು ನಮಗೆ ಅಪಘಾತವಾದುದ್ದನ್ನು ನೋಡಿ ತಮ್ಮ ಮೋಟರ್ ಸೈಕಲ್ನ್ನು ನಿಲ್ಲಿಸಿ ನಮ್ಮ ಹತ್ತಿರ ಬಂದು ನಮಗೆ ಎಬ್ಬಿಸಿ ವಿಚಾರಿಸಿದ್ದು ನಮಗೆ ಅಪಘಾತ ಪಡಿಸಿದ ಆಟೋ ಚಾಲಕನು ಆಟೋವನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ಓಡಿ ಹೋಗಿದ್ದು ಚಾಲಕನ ಹೆಸರು ಮಲ್ಲಪ್ಪ ತಂದೆ ಭೀಮಣ್ಣ @ ಭೀಮರಾಯ ವಗ್ಗರ ಸಾ:ಹುಣಸಿಹೊಳಿ ಅಂತಾ ಗೊತ್ತಾಗಿದ್ದು ನಮಗೆ ಅಪಘಾತ ಪಡಿಸಿದ ಆಟೋವನ್ನು ನೋಡಲಾಗಿ ಕಪ್ಪು & ಹಳದಿ ಬಣ್ಣದ ಆಪೇ ಆಟೋ ಇದ್ದು ಅದರ ಮೇಲೆ ನೊಂದಣಿ ಸಂಖ್ಯೆ ಬರೆದಿರುವುದಿಲ್ಲಾ, ಅದರ ಚಸ್ಸಿ ನಂಬರ್ನ್ನು ನೋಡಲಾಗಿ ಒಃಘಿ0003ಃಈಘಿಒ981408 & ಇಂಜಿನ ನಂಬರ್ ಖ9ಒ2127340 ಇದ್ದು ಅಪಘಾತದಲ್ಲಿ ನನಗೆ ಬಲಗೈ ಹಸ್ತದ ಮೇಲೆ ಸೀಳಿದ ನಮೂನೆಯ ತೆರಚಿದ ರಕ್ತಗಾಯವಾಗಿದ್ದು ಬಲಗಡೆ ಭುಜಕ್ಕೆ ಮತ್ತು ಬಲಗಾಲ ಮೊಣಕಾಲಿಗೆ, ಬಲ ಪಕ್ಕೆಲುಬಿಗೆ ತೆರಚಿದ & ಗುಪ್ತ ಗಾಯಗಳಾಗಿದ್ದು ಬಲಗಾಲಿನ ಪಾದದ ಮೇಲ್ಭಾಗದಲ್ಲಿ ಎಲುಬು ಮುರಿದು ಮಾಂಸ ಖಂಡ ಹೊರಗೆ ಬಂದಿದ್ದು ಬಲಗಾಲ ಪಾದಕ್ಕೆ ತೆರಚಿದ ಗಾಯವಾಗಿದ್ದು ನನ್ನ ಹೆಂಡತಿ ಅಮರಮ್ಮ @ ಹೊನ್ನಮ್ಮ ಇವಳಿಗೆ ಬಲಗೈ ಹಸ್ತದ ಮೇಲ್ಭಾಗದಲ್ಲಿ ಭಾರೀ ಒಳಪೆಟ್ಟಾಗಿ ಮುರಿದಿದ್ದು ಹಸ್ತದ ಮೇಲ್ಭಾಗದಲ್ಲಿ ತೆರಚಿದ ಗಾಯಗಳಾಗಿದ್ದು ನಮ್ಮ ಮೊಮ್ಮಗ ಧರ್ಮರಾಜನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ನಂತರ ನನಗೆ ಮತ್ತು ನನ್ನ ಹೆಂಡತಿ ಅಮರಮ್ಮ @ ಹೊನ್ನಮ್ಮ ಹಾಗೂ ಮೊಮ್ಮಗ ಧರ್ಮರಾಜನಿಗೆ ಈ ಅಪಘಾತವನ್ನು ನೋಡಿದ ಅಮರೇಶ ತಂದೆ ಸೋಮನಿಂಗಪ್ಪ ಗುತ್ತೇದಾರ ಸಾ:ಬೆಣಸಿಗಡ್ಡಿ ಮತ್ತು ಪರಶುರಾಮ ತಂದೆ ಭೀಮರಾಯ ಹುಣಸಗಿ ಸಾ:ಏದಲಭಾವಿ ರವರು ಉಪಚಾರಕ್ಕಾಗಿ ಒಂದು ವಾಹನದಲ್ಲಿ ಕರೆದುಕೊಂಡು ಬಂದು ಕಕ್ಕೇರಾ ಸರಕಾರಿ ಆಸ್ಪತ್ರೆಗೆ ಸೇರಿಕೆಮಾಡಿದ್ದು ಕಕ್ಕೇರಾ ಆಸ್ಪತ್ರೆಯ ವೈದ್ಯರು ಮೊಮ್ಮಗ ಧರ್ಮರಾಜನಿಗೆ ಅಲ್ಲಿಯೇ ಉಪಚರಿಸಿದ್ದು ನನಗೆ ಮತ್ತು ನನ್ನ ಹೆಂಡತಿಗೆ ಪ್ರಥಮ ಉಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಬಾಗಲಕೋಟಕ್ಕೆ ಹೋಗಲು ತಿಳಿಸಿದ್ದರಿಂದ ಸುದ್ದಿ ತಿಳಿದು ಕಕ್ಕೇರಾ ಆಸ್ಪತ್ರೆಗೆ ಬಂದಿದ್ದ ನನ್ನ ತಮ್ಮನಾದ ಗಯ್ಯಪ್ಪ ತಂದೆ ಬಸಪ್ಪ ಮಾಲಿಗೌಡರ ಈತನು ಬಂದು ನಮಗೆ ನೋಡಿ ನನಗೆ & ನನ್ನ ಹೆಂಡತಿಯನ್ನು ಕರೆದುಕೊಂಡು ನಿನ್ನೆಯ ದಿನ ರಾತ್ರಿ ಇಲ್ಲಿಗೆ ಬಂದು ಸೇರಿಕೆಮಾಡಿದ್ದು ನಾನು & ನನ್ನ ಹೆಂಡತಿ ಇಬ್ಬರೂ ಇನ್ನೂ ಉಪಚಾರ ಹೊಂದುತ್ತಿದ್ದು ಈ ಅಪಘಾತವು ಆಟೋ ಚಸ್ಸಿ ನಂಬರ್ ಒಃಘಿ0003ಃಈಘಿಒ981408 & ಇಂಜಿನ ನಂಬರ್ ಖ9ಒ2127340 ನೇದ್ದರ ಚಾಲಕ ಮಲ್ಲಪ್ಪ ತಂದೆ ಭೀಮಣ್ಣ @ ಭೀಮರಾಯ ವಗ್ಗರ ಸಾ:ಹುಣಸಿಹೊಳಿ ಈತನ ನಿರ್ಲಕ್ಷತನದಿಂದಲೇ ಸಂಭವಿಸಿದ್ದು ಅವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಹೇಳಿಕೆಯ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ: 16/2020 ಕಲಂ: 279, 337, 338 ಐಪಿಸಿ ಸಂಗಡ 187 ಐಎಮ್ವ್ಹಿ ಆಕ್ಟ್ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!