ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/02/2020

By blogger on ಶನಿವಾರ, ಫೆಬ್ರವರಿ 8, 2020


                              ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/02/2020

ಯಾದಗಿರ ನಗರ ಠಾಣೆ ಗುನ್ನೆ ನಂ:- 18/2020 ಕಲಂ. ಮನುಷ್ಯಕಾಣೆ:- ಇಂದು ದಿನಾಂಕ; 08/02/2020 ರಂದು 2-15 ಪಿಎಮ್ ಕ್ಕೆ ಪಿರ್ಯಾಧಿದಾರರಾದ ಶ್ರೀಮತಿ ಸಾರೀಕಾ ಗಂಡ ಶೇಖರೆಡ್ಡಿ ವ;40 ಜಾ; ರೆಡ್ಡಿ ಉ; ಬ್ಯೂಟಿ ಪಾರ್ಲರ ಸಾ; ವಿಶಾಖಪಟ್ಟಣಂ ಹಾ.ವ; ಮಾತಾ ಮಾಣಿಕೇಶ್ವರಿ ನಗರ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಾನು, ನನ್ನ ಗಂಡ ಶೇಖರೆಡ್ಡಿ ಹಿಗೇ 10 ವರ್ಷಗಳ ಹಿಂದೆ ವಿಶಾಖಪಟ್ಟಣಂದಿಂದ ಯಾದಗಿರಿಗೆ ಬಂದು ನೆಲೆಸಿದ್ದು ನನ್ನ ಗಂಡ ಶೇಖರೆಡ್ಡಿ ಈತನು ಯಾದಗಿರಿಯ ಗಂಜ ಏರಿಯಾದಲ್ಲಿ ಸ್ವತಃ ಗ್ಯಾರೆಜ ಇಟ್ಟುಕೊಂಡು ಇದ್ದನು. ನಮಗೆ ಇಬ್ಬರು ಹೆಣ್ಣು ಮಕ್ಕಳಿದ್ದು 1) ವಿನಿಲಾ ವ;21 ವರ್ಷ 2) ವಿನುತ್ನಾ ವ;18 ವರ್ಷ ಇರುತ್ತಾರೆ. ನಾನು ಮಾತಾಮಾಣಿಕೇಶ್ವರಿ ನಗರದಲ್ಲಿ ಬ್ಯೂಟಿ ಪಾರ್ಲರ ಇಟ್ಟುಕೊಂಡಿರುತ್ತೇನೆ. ನನ್ನ  ಗಂಡನು ಗ್ಯಾರೆಜ ಕೆಲಸ ಮಾಡುವಾಗ ಕೆಲಸದಲ್ಲಿ ನಷ್ಟ ಉಂಟಾಗಿದ್ದರಿಂದ ಅಲ್ಲಲ್ಲಿ ಸಾಲ ಮಾಡಿಕೊಂಡಿದ್ದನು. ಅಂದಾಜು 8-10 ಲಕ್ಷ ರೂಪಾಯಿ ವರೆಗೆ ಸಾಲ ಮಾಡಿಕೊಂಡಿದ್ದನು. ಸಾಲ ಹೇಗೆ ತೀರಿಸಲಿ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತಿದೆ ಸಾಲ ತೀರಿಸಲು ಆಗುತ್ತಿಲ್ಲ ಅಂತಾ ಮನೆಯಲ್ಲಿ ನಮಗೆ ಹೇಳುತ್ತಿದ್ದನು. ಆಗ ನಾವು ಇವತ್ತಿಲ್ಲ ನಾಳೆ ದುಡಿದು ಸಾಲ ತೀರಿಸೋಣಾ ಅಂತಾ ಸಮಾಧಾನ ಮಾಡುತ್ತಿದ್ದೇವು. ಸಾಲ ಕೊಟ್ಟವರು ಆಗಾಗ ಮನೆಗೆ ಬಂದು ಹಣ ಕೇಳುತ್ತಿದ್ದರು. ಹಿಗೀದ್ದು ನನ್ನ ಗಂಡ ಶೇಖರೆಡ್ಡಿ ಈತನು ದಿನಾಂಕ; 09/12/2019 ರಂದು ದಿನವೀಡಿ ನನ್ನ ಗಂಡನಿಗೆ ಫೋನ ಕಾಲ್ಗಳು ಬಹಳ ಬರುತ್ತಿದ್ದರಿಂದ ನಾನು ರಾತ್ರಿ 9-00 ಗಂಟೆ ಸುಮಾರಿಗೆ ನನ್ನ ಗಂಡನಿಗೆ  ಯಾರು ಫೋನ ಮಾಡುತ್ತಿದ್ದಾರೆ ಅಂತಾ  ಕೇಳಿದಾಗ ನನ್ನ ಗಂಡನು ಸಾಲ ಕೊಟ್ಟವರು ಫೋನ ಮಾಡುತ್ತಿದ್ದಾರೆ ಅಂತಾ ಹೇಳಿ ಒಂದು ಬ್ಯಾಗ ತೆಗೆದುಕೊಂಡು ಹೊರಗಡೆ ಹೋದನು. ನಾವು ಆಗ ಕೆಲಸದ ಮೇಲೆ ಹೋಗಿದ್ದು ಬರುತ್ತಾನೆ ಅಂತಾ ಸುಮ್ಮನಾದೆವು. ನಂತರ ನನ್ನ ಗಂಡನ ಮೊಬೈಲ ನಂ.7349231346 ನೇದ್ದಕ್ಕೆ ಫೋನ ಮಾಡಿ ವಿಚಾರಿಸಲು ನಾನು ಗ್ಯಾರೆಜದಲ್ಲಿ ಇದ್ದೆನೆ ಬರುತ್ತೇನೆ ಅಂತಾ ಹೇಳಿದನು. ನಂತರ ಬೆಳೆಗ್ಗೆ  ದಿನಾಂಕ; 10/12/2019 ರಂದು 10-00 ಎಎಮ್ ಸುಮಾರಿಗೆ ನನ್ನ ಗಂಡನು ನನಗೆ ಫೋನ ಮಾಡಿ ನಾನು ಸಾಲ ಬಹಳ ಮಾಡಿದ್ದು ಸಾಲ ನೀಡಿದವರು ನನಗೆ ಹಣ ಕೇಳುತ್ತಿದ್ದು ಸಾಲ ತೀರಿಸಲು ಆಗದ ಕಾರಣ ನಾನು ಬೇರೆ ಕಡೆಗೆ ಬಂದಿರುತ್ತೇನೆ ಒಂದು ವಾರದ ನಂತರ ಬರುತ್ತೇನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಮನೆಗೆ ಬರದೇ ಕಾಣೆಯಾಗಿರುತ್ತಾನೆ. ಆದ್ದರಿಂದ ಎಲ್ಲಾಕಡೆ ವಿಚಾರಿಸಿ ಹುಡುಕಾಡಲಾಗಿ ನನ್ನ ಗಂಡ ಶೇಖರೆಡ್ಡಿ ಈತನು ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುತ್ತಿದ್ದು  ಕಾಣೆಯಾದ ನನ್ನ ಗಂಡನ ಚಹರೆ ಪಟ್ಟಿ :- ಸಾದ ಕಪ್ಪು ಬಣ್ಣ, ದುಂಡನೆಯ ಮುಖ,  ಎತ್ತರ 5 ಪೀಟ್ 6 ಇಂಚು ಎತ್ತರ, ಸಧೃಢವಾದ ಮೈಕಟ್ಟು, ಮೈಮೇಲೆ ನೀಲಿಬಣ್ಣದ ಚಕ್ಸಶರ್ಟ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ ಧರಿಸಿದ್ದು, ಕನ್ನಡ ಮತ್ತು ಹಿಂದಿ, ತೆಲುಗು ಭಾಷೆ ಮಾತನಾಡುತ್ತಾನೆ. ನನ್ನ ಗಂಡ  ಶೇಖರೆಡ್ಡಿ ತಂ. ಸತ್ಯಂರೆಡ್ಡಿ ಈತನು ಸಾಲ ಮಾಡಿದ್ದು ಸಾಲ ತೀರಿಸಲು ಆಗದ ಕಾರಣ ಎರಡು ತಿಂಗಳ ಹಿಂದೆ ಮನೆಯಿಂದ ಹೋಗಿದ್ದು ಇಲ್ಲಿಯವರೆಗೆ ಬರದೇ ಕಾಣೆಯಾಗಿದ್ದು, ಕಾಣೆಯಾದ ನನ್ನ ಗಂಡನಿಗೆ ಪತ್ತೆ  ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.18/2020 ಕಲಂ. ಮನುಷ್ಯಕಾಣೆಯಾದ ಬಗ್ಗೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

ಯಾದಗಿರ ಗ್ರಾಮೀಣ ಠಾಣೆ ಗುನ್ನೆ ನಂ:- 21/2019 ಕಲಂ 32, 34 ಕೆ.ಇ. ಆ್ಯಕ್ಟ:- ದಿನಾಂಕ 08/02/2020 ರಂದು ಸಾಯಂಕಾಲ 6-20 ಪಿ.ಎಮ್ ಕ್ಕೆ ಆರೋಪಿತನು ತಮ್ಮ ಅಂಗಡಿಯಲ್ಲಿ ಮಧ್ಯದ ಪ್ರೇಶರ್ ಶೀಲ್ಡ ಪಾಕೇಟಗಳನ್ನು ಇಟ್ಟುಕೊಂಡು ಸರಕಾರದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುವಾಗ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ 1) 90 ಎಮ್.ಎಲ್ ದ 50 ಓರಿಜನಲ್ ಚೌಯಿಸ್ ವಿಸ್ಕಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು, ಒಂದು ಪಾಕೆಟಿಗೆ  30.32/- ರೂ ಯಂತೆ ಒಟ್ಟು  50 ಓರಿಜನಲ್ ಚೌಯಿಸ್ ವಿಸ್ಕಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳ ಕಿಮ್ಮತ್ತು 1516/- ರೂ ಕಿಮ್ಮತ್ತಿನ ಪಾಕೇಟಗಳು ಜಪ್ತಿ ಮಾಡಿಕೊಂಡಿರುವ ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ.

ಯಾದಗಿರ ಗ್ರಾಮೀಣ ಠಾಣೆ ಗುನ್ನೆ ನಂ:- 20/2019 ಕಲಂ 32, 34 ಕೆ.ಇ. ಆ್ಯಕ್ಟ :- ದಿನಾಂಕ 08/02/2020 ರಂದು ಸಾಯಂಕಾಲ 5-00 ಪಿ.ಎಮ್ ಕ್ಕೆ ಆರೋಪಿತನುು ತಮ್ಮ ಅಂಗಡಿಯಲ್ಲಿ ಮಧ್ಯದ ಪ್ರೇಶರ್ ಶೀಲ್ಡ ಪಾಕೇಟಗಳನ್ನು ಮತ್ತು ಮಧ್ಯದ ಬಿಯರ ಬಾಟಲಿಗಳನ್ನು ಇಟ್ಟುಕೊಂಡು ಸರಕಾರದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುವಾಗ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ 1) 90 ಎಮ್.ಎಲ್ ದ 45 ಓರಿಜನಲ್ ಚೌಯಿಸ್ ವಿಸ್ಕಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು, ಒಂದು ಪಾಕೆಟಿಗೆ  30.32/- ರೂ ಯಂತೆ ಒಟ್ಟು  45 ಓರಿಜನಲ್ ಚೌಯಿಸ್ ವಿಸ್ಕಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು ಕಿಮ್ಮತ್ತು 1364.4/- ರೂ ಕಿಮ್ಮತ್ತಿನ ಪಾಕೇಟಗಳು ಮತ್ತು 2)330 ಎಮ್.ಎಲ್.ದ 7 ಕೆ.ಎಫ್. ಬಿಯರ್ ಬಾಟಲಿಗಳು, ಒಂದು ಬಿಯರ್ ಬಾಟಲಿಗೆ 80/ರೂ ಯಂತೆ ಒಟ್ಟು 7 ಕೆ.ಎಫ್. ಬಿಯರ್ ಬಾಟಲಿಗಳ ಕಿಮ್ಮತ್ತು 560/ರೂ ಒಟ್ಟು 1924.4/ರೂ ಕಿಮ್ಮತ್ತಿನ ಮಧ್ಯವನ್ನು ಜಪ್ತಿ ಮಾಡಿಕೊಂಡಿರುವ ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 37/2020.ಕಲಂಃ 78(3) ಕೆ.ಪಿ.ಆ್ಯಕ್ಟ:-       ಇಂದು ದಿನಾಂಕ 08/02/2020 ರಂದು 16-30 ಗಂಟೆಗೆ ಸ|| ತ|| ಪಿಯರ್ಾದಿ ಹನುಮರಡ್ಡೆಪ್ಪ ಪಿಐ ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 08/02/2020 ರಂದು 13-00 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ದೋರನಳ್ಳಿ ಗ್ರಾಮದ ಬಿದರಾಣಿ ಕಾಸ್ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಒಬ್ಬ ವ್ಯೆಕ್ತಿ ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳೂತ್ತಿದ್ದಾನೆ ಅಂತ ಮಾಹಿತಿ ಬಂದಮೇರೆಗೆ ಠಾಣೆಯ ಚಂದ್ರಕಾಂತ ಪಿ.ಎಸ್.ಐ. (ಕಾ.ಸೂ) ಸಿಬ್ಬಂದಿಯವರಾದ ಹೋನ್ನಪ್ಪ ಹೆಚ್,ಸಿ, 101, ನಾರಾಯಣ ಹೆಚ್.ಸಿ. 49. ಗೋಕುಲ್ ಹುಸೇನ್ ಪಿ.ಸಿ. 172. ಬಾಗಣ್ಣ ಪಿ.ಸಿ.194. ಜೀಪ ಚಾಲಕ ನಾಗರೆಡ್ಡಿ ಎ.ಪಿ.ಸಿ.161, ರವರಿಗೆ ಮಾಹಿತಿ ವಿಷಯ ತಿಳಿಸಿ. ಅವರಲ್ಲಿ ಗೋಕುಲ್ ಹುಸೇನ್ ಪಿ.ಸಿ. 172. ರವರಿಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ತಿಳಿಸಿದ್ದರಿಂದ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಮಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು ಕರೆದುಕೊಂಡು ಬಂದು ನನ್ನ ಮುಂದೆ 13-20 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಬಾತ್ಮಿ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೊತೆಯಲ್ಲಿ ಬಂದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು.
        ಮಾನ್ಯ ಡಿವೈ,ಎಸ್,ಪಿ, ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ಸದರಿಯವನ ಮೇಲೆ ದಾಳಿ ಮಾಡಲು ನಾನು ಪಂಚರು ಠಾಣೆಯ ಸಿಬ್ಬಂದಿಯವರು ಠಾಣೆಯ ಜೀಪ ನಂ ಕೆಎ-33-ಜಿ-0138 ನ್ನೆದ್ದರಲ್ಲಿ ಕುಳಿತುಕೊಂಡು ಠಾಣೆಯಿಂದ 13-30 ಗಂಟೆಗೆ ಹೊರಟು ಸದರಿ ಜೀಪನ್ನು ನಾಗರೆಡ್ಡಿ ಎ.ಪಿ.ಸಿ., 161, ಇವರು ಚಾಲಾಯಿಸುತ್ತ ದೋರನಳ್ಳಿ ಗ್ರಾಮದ ಶಾಲೆಯ ಹತ್ತೀರ ಸ್ವಲ್ಪ ದೂರದಲ್ಲಿ 14-00 ಗಂಟೆಗೆ ಹೋಗಿ ಜೀಪನಿಲ್ಲಿಸಿ ಜೀಪಿನಿಂದ ಎಲ್ಲರು ಇಳಿದು ನಡೆದುಕೊಂಡು ಹೋಗಿ ಮನೆಗಳ ಗೋಡೆಯ ಮರೆಯಲ್ಲಿನಿಂತು ನಿಗಾಮಾಡಿ ನೊಡಲಾಗಿ ಬಿದರಾಣಿ ಕ್ರಾಸ್ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ 1 ರೂ ಆಡಿದರೆ 80 ರೂಪಾಯಿ ಬರುತ್ತದೆ ಅಂತ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದನು ಆಗ ನಾವೆಲ್ಲರೂ ಸದರಿಯವನು ಸಾರ್ವಜನಿಕರಿಂದ ಹಣಪಡೆದು ಮಟಕಾ ಅಂಕಿ ಅಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು 14-20 ಗಂಟೆಗೆ ನಾವೆಲ್ಲರೂ ದಾಳಿ ಮಾಡಿದಾಗ ಸಾರ್ವಜನಿಕರಿಗೆ ಕೂಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವನು ಸಿಕ್ಕಿಬಿದ್ದಿದ್ದು, ಮಟಕಾ ಅಂಕಿಗಳನ್ನು ಬರೆಸಲು ಬಂದ ಜನರು ಓಡಿ ಹೋಗಿರುತ್ತಾರೆ, ನಾನು, ಪಂಚರ ಸಮಕ್ಷವದಲ್ಲಿ ದಾಳಿಯಲ್ಲಿ ಸಿಕ್ಕ ಸದರಿ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಶೇಖಪ್ಪ ತಂದೆ ಸಾಯಬಣ್ಣ ಪಾಲ್ಕಿ ವ|| 26 ಜಾ|| ಕಬ್ಬಲಿಗ ಉ|| ಮಟಕಾಬರೆದುಕೊಳ್ಳುವದು ಸಾ|| ದೋರನಳ್ಳಿ ಅಂತ ಹೇಳಿದನು. ಸದರಿಯವನ ಅಂಗಶೋಧನೆ ಮಾಡಿದಾಗ 1) ನಗದು ಹಣ 460/- ರೂಪಾಯಿ 2) ಒಂದು ಬಾಲ್ ಪೆನ್ ಅಂ:ಕಿ: 00-00 ರೂ 3) 2 ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಅಂ:ಕಿ: 00-00 ರೂ ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ತಾಬೆಗೆ ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೆಯನ್ನು 14-30 ರಿಂದ 15-30 ರವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆಮಾಡಿ. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 16-00 ಗಂಟೆಗೆ ಬಂದು ವರದಿಯನ್ನು ತಯಾರಿಸಿ ಜಪ್ತಿ ಪಂಚನಾಮೆ, ಮುದ್ದೆಮಾಲನ್ನು ಮತ್ತು ಒಬ್ಬ ಆರೋಪಿಯನ್ನು 16-30 ಗಂಟೆಗೆ ಮುಂದಿನ ಕ್ರಮಕೈಕೊಳ್ಳುವಂತೆ ವರದಿ ಹಾಜರಪಡಿಸಿದ್ದು ಸದರಿ ವರದಿಯ ಸಾರಾಂಶವು ಅಸಂಜ್ಞ ಅಪರಾದ ವಾಗಿದ್ದರಿಂದ ಠಾಣೆಯ ಎನ್,ಸಿ,ನಂ 13/2020 ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ದಾಖಲಿಸಿಕೊಂಡು. ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಹುಲಗಪ್ಪ ಪಿ.ಸಿ.344. ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 17-00 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 37/2020 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 01/2020 ಕಲಂ. 174 ಸಿಆರ್ಪಿಸಿ:-ದಿನಾಂಕ: 08-02-2020 ರಂದು ಸಾಯಂಕಾಲ 05-30  ಗಂಟೆಗೆ  ಪಿಯರ್ಾದಿದಾರಳಾದ ಶ್ರೀಮತಿ ನಿರ್ಮಲಾ ಗಂಡ ಬಂದಪ್ಪ ಕಾಳಬೆಳಗುಂದಿ ವ|| 50 ವರ್ಷ ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಸೈದಾಪೂರ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ನಾನು ಈ ಮೇಲ್ಕಾಣಿಸಿದ ಹೆಸರು ವಿಳಾಸದ ನಿವಾಸಿಯಾಗಿದ್ದು ಕೂಲಿ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪಜೀವನ ಮಾಡಿಕೊಂಡಿರುತ್ತೇನೆ. ನನಗೆ ಇಬ್ಬರು ಗಂಡು ಮಕ್ಕಳಿದ್ದು 1) ಸಾಬರೆಡ್ಡಿ ವ|| 25 ವರ್ಷ 2) ನಾಗಪ್ಪ ವ|| 22 ವರ್ಷ ಅಂತಾ ಮಕ್ಕಳಿರುತ್ತಾರೆ ಇಬ್ಬರು ಕೂಡ ಕೂಲಿ ಕೆಲಸ ಮಾಡಿಕೊಂಡು ಇರುತ್ತಾರೆ.ನನ್ನ ಮಗ ನಾಗಪ್ಪ ಇತನು ಆಗಾಗ ಕೂಡಿಯುತಿದ್ದನು ಕೂಡಿದು ಮನೆಗೆ ಬಂದಾಗ ನಾನು ಸಾಯುತ್ತೇನೆ ಅಂತಾ ಹೇಳುತಿದ್ದನು ಆಗ ನಾವು ಆತನಿಗೆ ಯಾಕೆ ಏನಾಗಿದೆ ಆ ತರ ಮಾಡಬಾರದು ಅಂತಾ ಹೇಳುತಿದ್ದನು ಕೂಡಿದಾಗ ಇದೆ ರೀತಿ ಆಗಾಗ ಹೇಳುತಿದ್ದನು ಕೂಡಿದಾಗ ಸುಮ್ಮನೆ ಮಾತಾಡುತ್ತಾನೆ ಅಂತಾ ನಾವು ಸುಮ್ಮನಿರುತಿದ್ದೆವು. ಇಂದು ದಿನಾಂಕ: 08-02-2020 ರಂದು ಬೆಳಿಗ್ಗೆ 10-00 ಗಂಟೆಗೆ ನನ್ನ ಮಗ ನಾಗಪ್ಪ ಇತನು ನನಗೆ 100 ರೂಪಾಯಿ ಕೊಡು ನಾನು ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ನನ್ನ ಹತ್ತಿರ 100 ರೂಪಾಯಿ ತೆಗೆದುಕೊಂಡು ಮದ್ಯಾಹ್ನ ಊಟಕ್ಕೆ ಬರುತ್ತೇನೆ. ಅಂತಾ ಹೇಳಿ ಹೋದನು. ಮದ್ಯಾಹ್ನ ಆದರೂ ಕೂಡ ನನ್ನ ಮಗ ನಾಗಪ್ಪ ಇತನು ಮನೆಗೆ ಊಟಕ್ಕೆ ಬರಲಿಲ್ಲ. ಆಗ ನಾನು ನನ್ನ ದೊಡ್ಡ ಮಗ ಸಾಬರಡ್ಡಿ ಇಬ್ಬರು ಕೂಡಿ ಮೋಟರ ಸೈಕಲ್ ಮೇಲೆ ನಮ್ಮ ಹೊಲಕ್ಕೆ ಹೋಗಿ ನನ್ನ ಮಗ  ನಾಗಪ್ಪ ಇತನಿಗೆ ನೋಡಲಾಗಿ ಆತನು ನಮ್ಮ ಹೊಲದಲ್ಲಿರುವ ಹುಣಸೆ ಗಿಡಕ್ಕೆ ನೇಣು ಹಾಕಿಕೊಂಡಿದ್ದನು. ಆಗ ಸಮಯ  ಮದ್ಯಾಹ್ನ 02-00 ಗಂಟೆ ಆಗಿತ್ತು.  ದಿನಾಂಕ: 08-02-2020 ರಂದು ಮದ್ಯಾಹ್ನ 01-30 ಗಂಟೆ ಸುಮಾರಿಗೆ ನನ್ನ ಮಗ ನಾಗಪ್ಪ ತಂದೆ ಬಂದಪ್ಪ ಕಾಳಬೆಳಗುಂದಿ ವ|| 22 ವರ್ಷ ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಸೈದಾಪೂರ ಇತನು ತನ್ನ ಜೀವನ ಬೇಜಾರು ಮಾಡಿಕೊಂಡು ನಮ್ಮ ಹೊಲದಲ್ಲಿ ಹುಣಸೆ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನನ್ನ ಮಗನ ಮರಣದಲ್ಲಿ ಯಾರ ಮೇಲೆ ಯಾವುದೆ ಸಂಶಯ ವಗೈರೆ ಇರುವದಿಲ್ಲ ತಾವು ಮುಂದಿನ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಪಿಯರ್ಾದಿ.ಪಿಯರ್ಾಧಿ ಸಾರಂಶದ ಮೇಲಿಂದ ಠಾಣಾ ಯುಡಿಆರ್ ನಂ.01/2020 ಕಲಂ.174 ಸಿಆರ್.ಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!