ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/02/2020

By blogger on ಶುಕ್ರವಾರ, ಫೆಬ್ರವರಿ 7, 2020

       

                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/02/2020

ಸೈದಾಪೂರ ಠಾಣೆ ಗುನ್ನೆ ನಂ:- 12/2020 ಕಲಂ 78 (3) ಕೆ.ಪಿ ಕಾಯ್ದೆ:- ದಿನಾಂಕ: 07-02-2020 ರಂದು ಸಾಯಂಕಾಲ 04-40 ಗಂಟೆಗೆ ಪಿ.ಎಸ್.ಐ ಸಾಹೇಬರು ಕೂಡ್ಲೂರ ಗ್ರಾಮದ ಹರಿಜನವಾಡದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 2000=00 ರೂಪಾಯಿಗಳು, ಒಂದು ಮಟಕಾ ಬರೆದ ಚೀಟಿ ಒಂದು ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.12/2020 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಪಿಎಆರ್ ನಂ 04/2020 ಕಲಂ 107 ಸಿಆರ್ಪಿಸಿ  :- ಇಂದು ದಿನಾಂಕ: 07/02/2020 ರಂದು 9.30 ಎಎಂ ಕ್ಕೆ ಠಾಣೆಯ ಶ್ರೀ ಭೀಮಣ್ಣ ಹೆಚ್ಸಿ 122 ರವರು ಠಾಣೆಗೆ ಹಾಜರಾಗಿ ಒಂದು ವರದಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 07/02/2020 ರಂದು 8.00 ಎಎಮ್ ಸುಮಾರಿಗೆ ಬೀಟ ಮಾಹಿತಿ ಸಂಗ್ರಹ ಕುರಿತು ಬಸವಂತಪೂರ ಗ್ರಾಮಕ್ಕೆ ಹೋದಾಗ ಮಾಹಿತಿ ಬಂದಿದ್ದೇನೆಂದರೆ, ಬಸವಂತಪೂರ ಗ್ರಾಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ ಗೋಡೆ ಕಟ್ಟಡದ ವಿಷಯದಲ್ಲಿ ಎರಡು ಗುಂಪಿನವರ ಮಧ್ಯ ತಕರಾರು ಉಂಟಾಗಿ ಸದರಿ ಕಂಪೌಂಡ ಜಾಗವು ನಮಗೆ ಸಂಬಂಧಿಸಿದ್ದು ಅಂತಾ 1 ನೇ ಪಾಟರ್ಿಯ ಜನರು ಮತ್ತು 2ನೇ ಪಾಟರ್ಿಯವರು ತಕರಾರು ಮಾಡುತ್ತಿದ್ದುದು ಕಂಡು ಬಂದಿದ್ದು ಸದರಿ ಕಂಪೌಂಡ ಜಾಗದ ವಿಷಯದಲ್ಲಿ ಮತ್ತೆ ತಕರಾರು ಉಂಟಾಗಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತಿ ಕದಡುವ ಸಂಭವ ಕಂಡು ಬಂದಿದ್ದು ತಕರಾರಿಗೆ ಕಾರಣರಾದ 1ನೇ ಪಾಟರ್ಿಯವರಾದ 1) ಬಸವರಾಜ ತಂದೆ ಮಲ್ಲನಗೌಡ ಪೊಲೀಸ್ ಪಾಟೀಲ್ 2) ಗಂಗಮ್ಮ ಗಂಡ ನಾಗಣ್ಣಗೌಡ ಪೊಲೀಸ್ ಪಾಟೀಲ್ 3) ಶರಣಪ್ಪ ತಂದೆ ಖಂಡಪ್ಪ ಪೊಲೀಸ್ ಪಾಟೀಲ್ 4) ನಿಂಗರಾಜ ತಂದೆ ಮಲ್ಲಣ್ಣಗೌಡ ಪೊಲೀಸ್ ಪಾಟೀಲ್ 5) ಮಲ್ಲಪ್ಪ ತಂದೆ ಹಯ್ಯಾಳಪ್ಪ ಅಚ್ಚಕೇರಿ 6) ಭೀಮಪ್ಪ ತಂದೆ ಮಲ್ಲಪ್ಪ ಅಚ್ಚಕೇರಿ ಸಾ|| ಎಲ್ಲರೂ ಬಸವಂತಪೂರ ತಾ|| ಶಹಾಪೂರ ರವರು ಸದರಿ ಕಂಪೌಂಡ ಜಾಗದ ವಿಷಯದಲ್ಲಿ ತಕರಾರು ಮಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡುವ ಸಾಧ್ಯತೆ ಕಂಡು ಬಂದಿದ್ದರಿಂದ ಇಂದು ದಿನಾಂಕ: 07/02/2020 ರಂದು 9.30 ಎಎಮ್ ಕ್ಕೆ ಠಾಣೆಗೆ ಬಂದು ಸದರಿಯವರ ವಿರುದ್ದ ಮುಂಜಾಗ್ರತ ಕ್ರಮ ಜರುಗಿಸಲು ಮುಂಜಾಗ್ರತ ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಪಿಎಆರ್ ನಂ 04/2020 ಕಲಂ 107 ಸಿಆರ್ ಪಿಸಿ ನೇದ್ದರಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.

ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ:- ಪಿಎಆರ್ ನಂ 05/2020 ಕಲಂ 107 ಸಿಆರ್ಪಿಸಿ  :- ಇಂದು ದಿನಾಂಕ: 07/02/2020 ರಂದು 9.30 ಎಎಂ ಕ್ಕೆ ಠಾಣೆಯ ಶ್ರೀ ಭೀಮಣ್ಣ ಹೆಚ್ಸಿ 122 ರವರು ಠಾಣೆಗೆ ಹಾಜರಾಗಿ ಒಂದು ವರದಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 07/02/2020 ರಂದು 8.00 ಎಎಮ್ ಸುಮಾರಿಗೆ ಬೀಟ ಮಾಹಿತಿ ಸಂಗ್ರಹ ಕುರಿತು ಬಸವಂತಪೂರ ಗ್ರಾಮಕ್ಕೆ ಹೋದಾಗ ಮಾಹಿತಿ ಬಂದಿದ್ದೇನೆಂದರೆ, ಬಸವಂತಪೂರ ಗ್ರಾಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ ಗೋಡೆ ಕಟ್ಟಡದ ವಿಷಯದಲ್ಲಿ ಎರಡು ಗುಂಪಿನವರ ಮಧ್ಯ ತಕರಾರು ಉಂಟಾಗಿ ಸದರಿ ಕಂಪೌಂಡ ಜಾಗವು ನಮಗೆ ಸಂಬಂಧಿಸಿದ್ದು ಅಂತಾ 1 ನೇ ಪಾಟರ್ಿಯ ಜನರು ಮತ್ತು 2ನೇ ಪಾಟರ್ಿಯವರು ತಕರಾರು ಮಾಡುತ್ತಿದ್ದುದು ಕಂಡು ಬಂದಿದ್ದು ಸದರಿ ಕಂಪೌಂಡ ಜಾಗದ ವಿಷಯದಲ್ಲಿ ಮತ್ತೆ ತಕರಾರು ಉಂಟಾಗಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತಿ ಕದಡುವ ಸಂಭವ ಕಂಡು ಬಂದಿದ್ದು ತಕರಾರಿಗೆ ಕಾರಣರಾದ 2ನೇ ಪಾಟರ್ಿಯವರಾದ 1) ಭೀಮಣ್ಣಗೌಡ ತಂದೆ ನಿಂಗನಗೌಡ ಪೊಲೀಸ್ ಪಾಟೀಲ್ 2) ಮರಿಗೌಡ ತಂದೆ ದೇವರಾಜ ಚಿಕ್ಕಮೇಟಿ 3) ಮರೆಪ್ಪ ತಂದೆ ರಂಗಪ್ಪ ನಸಲಾಯಿ 4) ಹಯ್ಯಾಳಪ್ಪ ತಂದೆ ಮುದಕಪ್ಪ ಅಚ್ಚಕೇರಿ 5) ಸಕ್ರೆಪ್ಪ ತಂದೆ ಬಸಪ್ಪ ನಾಟೇಕಾರ ಸಾ|| ಎಲ್ಲರೂ ಬಸವಂತಪೂರ ತಾ|| ಶಹಾಪೂರ ರವರು ಸದರಿ ಕಂಪೌಂಡ ಜಾಗದ ವಿಷಯದಲ್ಲಿ ತಕರಾರು ಮಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡುವ ಸಾಧ್ಯತೆ ಕಂಡು ಬಂದಿದ್ದರಿಂದ ಇಂದು ದಿನಾಂಕ: 07/02/2020 ರಂದು 10.00 ಎಎಮ್ ಕ್ಕೆ ಠಾಣೆಗೆ ಬಂದು ಸದರಿಯವರ ವಿರುದ್ದ ಮುಂಜಾಗ್ರತ ಕ್ರಮ ಜರುಗಿಸಲು ಮುಂಜಾಗ್ರತ ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಪಿಎಆರ್ ನಂ 05/2020 ಕಲಂ 107 ಸಿಆರ್ ಪಿಸಿ ನೇದ್ದರಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:-  ಕಲಂ.143 448 354 504 427 ಸಂ. 149 ಐಪಿಸಿ :- ಇಂದು ದಿನಾಂಕ:07/02/2020 ರಂದು 13.30 ಗಂಟೆಗೆ ನಿರ್ಮಲಾ ಗಂಡ ರಾಮಲಿಂಗ @ ಗೌಡಪ್ಪ ಬೂದಿಹಾಳ ವಯ:25 ವರ್ಷ ಜಾ:ಬೇಡರ ಉ:ಮನೆಕೆಲಸ ಸಾ;ಗುಳಬಾಳ ತಾ:ಹುಣಸಗಿ ಜಿ:ಯಾದಗಿರ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ಅಜರ್ಿ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದರೆ ಆರೋಪಿತರು ದಿನಾಂಕ:06/02/2020 ರಂದು ಪಿಯರ್ಾದಿ ಮನೆಯಲ್ಲಿದ್ದಾಗ ಅವರ ಮನೆಗೆ ಬಂದು ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದಾ ಬೈದು ಕೈಯನ್ನು ಹಿಡಿದು ಎಳದಾಡಿ ಮಂಚಕ್ಕೆ ಒಗೆದಿದ್ದು, ನಂತರ ರಾತ್ರಿ 12.00 ಗಂಟೆಯ ಸುಮಾರಿಗೆ ಆರೋಪಿತರು ಪಿಯರ್ಾದಿ ಮನೆಯಲ್ಲಿ ಇಲ್ಲದ ಸಮಯವನ್ನು ನೋಡಿ ಮನಯಲ್ಲಿ ಸಾಮಾನುಗಳನ್ನು ಹಾಳು ಮಾಡಿ, ಕಾಳು ಕಡಿ ಚಲ್ಲಾಡಿ ಹೋಗಿರುತ್ತಾರೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ.    

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 37/2019 ಕಲಂ 32(3) 15(ಎ) ಕನರ್ಾಟಕ ಅಭಕಾರಿ ಕಾಯ್ದೆ 1965:- : ಇಂದು ದಿನಾಂಕ: 07/02/2020 ರಂದು 5 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀ ಆನಂದರಾವ್ ಪಿ.ಐ ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲು ನೊಂದಿಗೆ ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:07/02/2020 ರಂದು 3-30 ಪಿ.ಎಂ.ಕ್ಕೆ ತಿಂಥಣಿ ಗ್ರಾಮದ ಶ್ರೀ ಕಾಮಣ್ಣಸಾಬ ಮಠದ ಹತ್ತಿರ  ಜಾತ್ರೆಯಲ್ಲಿ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಆರೋಪಿತನು  ಒಂದು  ಪ್ಲಾಸ್ಟೀಕ ಚೀಲದಲ್ಲಿದ್ದ ಮದ್ಯವನ್ನು ಸಂಗ್ರಹಿಸಿ  ಮದ್ಯ ಮಾರಾಟ ಮಾಡಲು ಪರವಾನಿಗೆ ಇಲ್ಲದೆ ಚಿಲ್ಲರೆಯಾಗಿ ಮಾರಾಟ ಮಾಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನಿಂದ 90 ಎಮ್ಎಲ್ನ 70 ಓರಿಜನಲ್ ಚಾಯಿಸ್ ಡಿಲಕ್ಷ ವಿಸ್ಕಿ ಪೌಚಗಳಿದ್ದು ಪ್ರತಿಯೊಂದಕ್ಕೆ 30.32=00 ರೂಗಳಿದ್ದು ಹೀಗೆ ಒಟ್ಟು 6300/- ಎಮ್ಎಲ್ ಮಧ್ಯವಿದ್ದು ಅದರ  ಒಟ್ಟು ಅ.ಕಿ 2122.40/-ರೂಗಳು 2) ನಗದು ಹಣ 3200/- ರೂಗಳು 3) 4 ಪ್ಲಾಸ್ಟೀಕ ಗ್ಲಾಸುಗಳು ಅ.ಕಿ 00=00 ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಶೋರಾಪೂರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 38/2020 ಕಲಂ: 78 () ಕೆ.ಪಿ. ಕಾಯ್ದೆ  :-        ಇಂದು ದಿನಾಂಕ: 07/02/2020 ರಂದು 8-20 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಚೇತನ್ ಪಿ.ಎಸ್.ಐ (ಕಾ&ಸೂ)ಸಾಹೇಬರು ಒಬ್ಬ ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಹಾಗು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:07/02/2020 ರಂದು 6 ಪಿ.ಎಮ್. ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಠಾಣಾ ವ್ಯಾಪ್ತಿಯ ವಾಗಣಗೇರಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿದ್ದ ಠಾಣೆಯ ಸಿಬ್ಬಂದಿಯವರಾದ 1) ಶ್ರೀ ಪರಮೇಶ ಸಿಪಿಸಿ-142, 3) ಶ್ರೀ ಬಸಪ್ಪ ಸಿಪಿಸಿ-393 ಇವರಿಗೆ ವಿಷಯ ತಿಳಿಸಿ ಪರಮೇಶ ಸಿಪಿಸಿ ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಪರಮೇಶ ಸಿಪಿಸಿ ರವರು ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದ್ರಿ ವ|| 56 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ ಸಾ|| ದೇವಾಪೂರ 2) ಕೃಷ್ಣಪ್ಪ ತಂದೆ ಅಯ್ಯಪ್ಪ ಡೊಳ್ಳ ವ|| 55 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ವೆಂಕಟಾಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಅವರಿಗೆ ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 06:15 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0094 ನೇದ್ದರಲ್ಲಿ ಹೊರಟು 06:45 ಪಿ.ಎಮ್ ಕ್ಕೆ ವಾಗಣಗೇರಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗಿ ವಾಹನ ಮರೆಯಾಗಿ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 06-50 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಹಣಮಗೌಡ ತಂದೆ ಭೀಮನಗೌಡ ಬಿರಾದಾರ ವಯಾ:48 ವರ್ಷ ಉ:ಹೊಟೆಲ್ ಕೆಲಸ ಜಾ:ಬೇಡರು ಸಾ:ವಾಗಣಗೇರಾ ತಾ:ಸುರಪೂರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ  ನಗದು ಹಣ 1440=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 6-50 ಪಿ.ಎಮ್ ದಿಂದ 7-50 ಪಿ.ಎಮ್ದ ವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸಿ ಆದೇಶ ನೀಡಿದ್ದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


ಕೆಂಭಾವಿ ಠಾಣೆ ಗುನ್ನೆ ನಂ;- 28/2020 ಕಲಂ: 143.147.323.354.498(ಎ).504.506 ಸಂಗಡ 149 ಐ.ಪಿ.ಸಿ:- ಇಂದು ದಿನಾಂಕ 07.02.2020 ರಂದು 08-15 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀಮತಿ ಅನ್ನಪೂರ್ಣ ಗಂಡ ವಿರೂಪಾಕ್ಷಿ ಸಜ್ಜನ ವಯಾ|| 31 ವರ್ಷ ಉ|| ಹೊಲಮನೆಗೆಲಸ ಜಾ|| ಹಿಂದೂ ಗಾಣಿಗ ಸಾ|| ಕಾರಟಗಿ ತಾ|| ಗಂಗಾವತಿ ಹಾ||ವ|| ಮುದನೂರ ಕ್ಯಾಂಪ  ರವರು ಠಾಣೆಗೆ ಹಾಜರಾಗಿ  ಸಲ್ಲಿಸಿದ  ಸಾರಾಂಶವೆನೆಂದರೆ ನಮ್ಮ ತಂದೆ ತಾಯಿಗೆ ನಾವು ಒಟ್ಟು ಮೂರು ಜನ ಹೆಣ್ಣು ಮಕ್ಕಳು ಇದ್ದು ಹಿರಿಯವಳು ನಾನೇ ಇದ್ದು  ನನಗೆ ಗಂಗಾವತಿ ತಾಲೂಕಿನ ಕಾರಟಗಿ ಗ್ರಾಮದ ವಿರೂಪಾಕ್ಷಿ ಸಜ್ಜನ ಇವರೊಂದಿಗೆ ಮದುವೆ ಮಾಡಿದ್ದು ಇರುತ್ತದೆ.. ಮದುವೆಯಾದಾಗಿನಿಂದ ನಾನು ಹಾಗು ನನ್ನ ಗಂಡ ವಿರೂಪಾಕ್ಷಿ  ನಾವಿಬ್ಬರೂ ಸುಮಾರು  4 ವರ್ಷಗಳವರೆಗೆ ಚೆನ್ನಾಗಿದ್ದೆವು. ನಮ್ಮಿಬ್ಬರ ಅನೂನ್ಯದಿಂದ ಸದ್ಯ ನನಗೆ ಪವನಕುಮಾರ ಎಂಬ 11 ವರ್ಷದ ಗಂಡು ಮಗನಿರುತ್ತಾನೆ. ನಂತರದ ಮೂರು-ನಾಲ್ಕು ವರ್ಷಗಳಿಂದ ನನ್ನ ಗಂಡ 1] ವಿರೂಪಾಕ್ಷಿ ತಂದೆ ವೀರಬದ್ರಪ್ಪ ಸಜ್ಜನ ಹಾಗು ಅವರ ಅಣ್ಣಂದಿರಾದ 2] ಈರಪ್ಪ ತಂದೆ ವೀರಬದ್ರಪ್ಪ ಸಜ್ಜನ 3] ದೊಡಪ್ಪ ತಂದೆ ವೀರಬದ್ರಪ್ಪ ಸಜ್ಜನ 4] ಶಿವ ಪ್ಪ ತಂದೆ ವೀರಬದ್ರಪ್ಪ ಸಜ್ಜನ ಮತ್ತು ತಮ್ಮನಾದ 5] ಮಲ್ಲಪ್ಪ ತಂದೆ ವೀರಬದ್ರಪ್ಪ ಸಜ್ಜನ ಹಾಗು ನನ್ನ ಗಂಡನ ಅಣ್ಣನ ಹೆಂಡತಿಯಾದ 6] ಶಶಿಕಲಾ ಗಂಡ ಈರಪ್ಪ ಸಜ್ಜನ ಹಾಗು ನನ್ನ ಗಂಡನ ಅಣ್ಣನ ಮಕ್ಕಳಾದ 7] ಜಗದೀಶ ತಂದೆ ಗುರುಪಾದಪ್ಪ ಸಜ್ಜನ ಮತ್ತು 8] ಶ್ರೀಕಾಂತ ತಂದೆ ಈರಪ್ಪ ಸಜ್ಜನ ಸಾ|| ಎಲ್ಲರು ಕಾರಟಗಿ ತಾ|| ಗಂಗಾವತಿ ಈ ಎಲ್ಲಾ ಜನರು ಸೇರಿ ದಿನಾಲು ನನಗೆ ನೀನು ಸರಿಯಾಗಿ ಇಲ್ಲ ನಿನಗೆ ಯಾವದೇ ಅಡುಗೆ ಮಾಡಲು ಬರುವದಿಲ್ಲ ಅಂತ ಎಲ್ಲರೂ ಸೂಳಿ, ರಂಡಿ ಅಂತ ಬೈಯುವದು ಮಾಡುತ್ತಾ ಮಾನಸಿಕವಾಗಿ ಹಿಂಸೆ ನೀಡಲು ಪ್ರಾರಂಭಿಸಿದರು. ಈ ವಿಷಯದ ಬಗ್ಗೆ ನಾನು ನಮ್ಮ ತಂದೆ ತಾಯಿಯವರಲ್ಲಿ ಪೋನ ಮೂಲಕ ತಿಳಿಸಿದ್ದು ನಮ್ಮ ತಂದೆಯವರು ಆಯಿತು ನಂತರ ನಾನು ಊರಿಗೆ ಬಂದು ವಿಚಾರಿಸುತ್ತೇನೆ ಅಂತ ಅಂದಿದ್ದರು. ಆದರೂ ಸಹಿತ ನನಗೆ ಬಹಾಳ ತೊಂದರೆ ಹಾಗು ಮಾನಸಿಕ ಕಿರುಕುಳ ನೀಡುತ್ತಿದ್ದರಿಂದ ನಾನು  ಸದರಿಯವರ ಮಾನಸಿಕ ಕಿರುಕುಳ ತಾಳಲಾರದೇ ಸುಮಾರು ಮೂರು ವರ್ಷಗಳ ಹಿಂದೆ ನಾನು ನನ್ನ ಮಗನ ಸಮೇತ ನನ್ನ ತವರು ಮನೆಯಾದ ಮುದನೂರ ಗ್ರಾಮಕ್ಕೆ ಬಂದು ವಿಷಯವನ್ನು ನಮ್ಮ ತಂದೆಯವರ ಮುಂದೆ ತಿಳಿಸಿದ್ದು ಇರುತ್ತದೆ. ನಂತರ ನಮ್ಮ ತಂದೆಯವರು ನೋಡೋಣ ನಿನ್ನ ಗಂಡ ನಮ್ಮೂರಿಗೆ ಬಂದರೆ ವಿಚಾರಿಸೋಣ ಅಂತ ಅಂದಿದ್ದರು. ಸದರಿಯವನು ಸುಮಾರು ಮೂರು ವರ್ಷವಾದರೂ ನನಗೆ ಹಾಗು ನನ್ನ ಮಗನಿಗೆ ನೋಡಲು ಬಾರದೇ ಇದ್ದಾಗ ನಾನು ನನ್ನ ಗಂಡನ ಮೆಲೆ ನನ್ನ ಉಪಜೀವನಕ್ಕಾಗಿ ಮಾನ್ಯ ನ್ಯಾಯಾಲಯದ ಮೊರೆ ಹೋಗಿದ್ದು ಇರುತ್ತದೆ.  ಹೀಗಿದ್ದು ದಿನಾಂಕ 04/02/2020 ರಂದು ರಾತ್ರಿ 10 ಗಂಟೆಗೆ ನಾನು ಹಾಗು ನನ್ನ ಮಗ ಮತ್ತು ನನ್ನ ತಂದೆ ತಾಯಿ ಎಲ್ಲರೂ ಊಟ ಮಾಡಿ ಮಲಗಿಕೊಂಡಿದ್ದೇವು. ಅದೇ ದಿನ ಅಂದರೆ ದಿನಾಂಕ 05/02/2020 ರಂದು ರಾತ್ರಿ 1 ಗಂಟೆಗೆ ನಮ್ಮ  ಮನೆಯ ಬಾಗಿಲು ಬಡೆದ ಸಪ್ಪಳವಾಗಿ ನಾನು ನಮ್ಮ ಮನೆಯ ಬಾಗಿಲು ತೆರೆದಾಗ ನನ್ನ ಗಂಡ 1] ವಿರೂಪಾಕ್ಷಿ ತಂದೆ ವೀರಬದ್ರಪ್ಪ ಸಜ್ಜನ ಹಾಗು ಅವರ ಅಣ್ಣಂದಿರಾದ 2] ಈರಪ್ಪ ತಂದೆ ವೀರಬದ್ರಪ್ಪ ಸಜ್ಜನ 3] ದೊಡಪ್ಪ ತಂದೆ ವೀರಬದ್ರಪ್ಪ ಸಜ್ಜನ 4] ಶಿವಪ್ಪ ತಂದೆ ವೀರಬದ್ರಪ್ಪ ಸಜ್ಜನ ಮತ್ತು ಗಂಡನ ತಮ್ಮನಾದ 5] ಮಲ್ಲಪ್ಪ ತಂದೆ ವೀರಬದ್ರಪ್ಪ ಸಜ್ಜನ ಹಾಗು ನನ್ನ ಗಂಡನ ಅಣ್ಣನ ಹೆಂಡತಿಯಾದ 6] ಶಶಿಕಲಾ ಗಂಡ ಈರಪ್ಪ ಸಜ್ಜನ ಅಲ್ಲದೇ ನನ್ನ ಗಂಡನ ಅಣ್ಣನ ಮಕ್ಕಳಾದ 7] ಜಗದೀಶ ತಂದೆ ಗುರುಪಾದಪ್ಪ ಸಜ್ಜನ ಮತ್ತು 8] ಶ್ರೀಕಾಂತ ತಂದೆ ಈರಪ್ಪ ಸಜ್ಜನ ಸಾ|| ಎಲ್ಲರು ಕಾರಟಗಿ ತಾ|| ಗಂಗಾವತಿ ಈ ಎಲ್ಲಾ ಜನರು ಬಂದಿದ್ದು ಆಗ ನಾನು ಏಕೇ ಈ ರಾತ್ರಿಯಲ್ಲಿ ನಮ್ಮ ಮನೆಗೆ ಬಂದಿದ್ದೀರಿ ಅಂತ ಕೇಳಿದಾಗ ಏನಲೇ ಸೂಳಿ ನೀನು ಎಷ್ಟು ದಿನ ಇಲ್ಲಿ ಇರುತ್ತೀ ಅಂತ ಅಂದಾಗ ನನಗೆ ಕಿರುಕುಳ ನೀಡಿದ್ದರೀರಿ ಅದಕ್ಕಾಗಿ ನಾನು ಇಲ್ಲಿ ಇದ್ದೀನಿ ಅಂತ ಅನ್ನುತ್ತಾ ನೀನು ಇಲ್ಲಿ ಬಂದು ನನ್ನ ಮೇಲೆ ಕೇಸ ಮಾಡಿದಿಯಾ ರಂಡಿ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ನನ್ನ ಕೂದಲು ಹಿಡಿದು ಹೊರಗೆ ಎಳೆದುಕೊಂಡು ಈ ಸೂಳಿಯದು ಬಹಾಳ ಆಗಿದೆ ಅಂತ ಎಲ್ಲರು ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅವರಲ್ಲಿಯ ಜಗದೀಶ ಮತ್ತು ಶ್ರೀಕಾಂತ ಇವರು ನನ್ನ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾರೆ. ಅಲ್ಲದೇ ಎಲ್ಲರೂ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಮನೆಯಲ್ಲಿದ್ದ ನಮ್ಮ ತಂದೆ ಶರಣಪ್ಪ ಸಜ್ಜನ ಹಾಗು ತಾಯಿಯಾದ ದುಂಡಾಬಾಯಿ ಹಾಗು ಪಕ್ಕದ ಮನೆಯ ನಮ್ಮ ಸಂಬಂದಿ ಸಿದ್ದು ತಂದೆ ಶ್ರೀಶೈಲ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರು ಹೊಡೆಯುವದನ್ನು ಬಿಟ್ಟು ಸೂಳಿ ನನ್ನ ಮೇಲೆ ಮಾಡಿದ ಕೇಸ್ ವಾಪಸ್ಸ ಪಡೆದರೆ ಸರಿ ಇಲ್ಲದಿದ್ದರೆ  ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು.  ಕಾರಣ ಮೇಲ್ಕಾಣಿಸಿದ ಎಲ್ಲ ಜನರು ನಾನು ಸರಿಯಾಗಿ ಇಲ್ಲ ಹಾಗು ಅಡುಗೆ ಮಾಡಲು ಬರುವದಿಲ್ಲ ಅಂತ ಮಾನಸಿಕವಾಗಿ ಹಾಗು ದೈಹಿಕವಾಗಿ ಕಿರುಕುಳ ನೀಡಿ ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ಕಾರಣ ಸದರಿಯವರ  ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಈ ವಿನಂತಿ ಅಜರ್ಿ ಇರುತ್ತದೆ. ಅಂತಾ ಕೊಟ್ಟ ಪಿರ್ಯಾದಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 28/2020 ಕಲಂ 143.147.323.354.498(ಎ).504.506 ಸಂಗಡ 149 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 29/2020 ಕಲಂ: 341.323.354.504.506 ಸಂಗಡ 34 ಐ.ಪಿ.ಸಿ:- ಇಂದು ದಿನಾಂಕ 07.02.2020 ರಂದು 09-30 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀಮತಿ ಅನ್ನಪೂರ್ಣ ಗಂಡ ಶಿವನಗೌಡ ಮರೆಡ್ಡಿ ವ|| 34 ಜಾ|| ರಡ್ಡಿ ಉ|| ಮನೆಗೆಲಸ ಸಾ|| ಕರಡಕಲ್ ತಾ|| ಸುರಪೂರ ಹಾ:ವ: ತಾಳಿಕೋಟಿ ಆದ ನಾನು ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನಂದರೆ ನನಗೆ ಸುಮಾರು 20 ವರ್ಷಗಳ ಹಿಂದೆ ಕರಡಕಲ್ ಗ್ರಾಮದ ಶಿವನಗೌಡ ತಂದೆ ಸಂಗನಗೌಡ ಮರಡ್ಡಿ ಈತನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು ನನಗೆ ಸದ್ಯ 1) ರೆಖಾ ವಯಾ: 17 ವರ್ಷ 2) ಕಾವ್ಯ ವಯಾ: 13 ವರ್ಷ ಮತ್ತು 3) ಪೂಜಾ ವಯಾ: 9 ವರ್ಷ ಎನ್ನುವ ಮೂರು ಜನ ಹೆಣ್ಣು ಮಕ್ಕಳಿದ್ದು ನನ್ನ ಮನೆಯವರು ನನಗೆ ಹೊಡೆ ಮಾಡುತ್ತಿದ್ದರಿಂದ ನಾನು ನನ್ನ ಮಕ್ಕಳೊಂದಿಗೆ ತಾಳಿಕೊಟಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಪ್ರತಿ ವರ್ಷ ಕರಡಕಲ್ಗೆ ಬಂದು ನನ್ನ ಹೊಲದ ಲೀಜಿನ ಹಣ ತೆಗೆದುಕೊಂಡು ಹೊಗುತ್ತೇನೆ. 
      ಹೀಗಿದ್ದು ದಿನಾಂಕ 07.02.2020 ರಂದು ಮದ್ಯಾಹ್ನ 12.30 ಗಂಟೆ ಸುಮಾರಿಗೆ ನಾನು ನಮ್ಮ ಹೊಲದ ಲೀಜಿನ ಹಣ ತೆಗೆದುಕೊಳ್ಳಲು ಕರಕಡಲ್ ಗ್ರಾಮಕ್ಕೆ ಬಂದು ನಮ್ಮ ಭಾವನಾದ ಜಗನ್ನಾಥರೆಡ್ಡಿ ಇವರ ಮನೆಯ ಹತ್ತಿರ ಬಂದು ನನ್ನ ಹೊಲದ ಲೀಜಿನ ಹಣ ಕೊಡಿ ಅಂತಾ ಕೇಳಿದಾಗ ಅಲ್ಲೇ ಇದ್ದ ಬಾವನ ಮಗನಾದ 1) ನಿಂಗನಗೌಡ ತಂದೆ ಜಗನ್ನಾಥರಡ್ಡಿ ಮರಡ್ಡಿ, ಬಾವನಾದ 2) ಜಗನ್ನಾಥ ತಂದೆ ಸಂಗನಗೌಡ ಮರಡ್ಡಿ,  ನಾದಿನಿಯಾದ 3) ಪಾರ್ವತಿ ಗಂಡ ಬಾಪುಗೌಡ ಪೊಲೀಸ್ ಪಾಟೀಲ ಹಾಗೂ ಬಾವನ ಹೆಂಡತಿಯಾದ 4) ಲಕ್ಷ್ಮೀ ಗಂಡ ಜಗನ್ನಾಥರಡ್ಡಿ ಮರೆಡ್ಡಿ ಇವರೆಲ್ಲರೂ ಕೂಡಿ ಬಂದವರೆ ಎಲಾ ಸೂಳೆ ಮಗಳಾ ನಮ್ಮ ಹೊಲದಲ್ಲಿ ನೀನು ಲೀಜಿನ ಪಾಲು ಕೇಳುತ್ತಿಯಾ ಅಂತಾ ಅವಾಚ್ಯವಾಗಿ ಬೈದು ನೀನು ನಮ್ಮ ಮನೆಯ ತನಕೆ ಬಂದು ಪಾಲು ಕೇಳುತ್ತಿಯಾ ಎಸ್ಟು ಇರಬೇಕು ನಿನಗೆ ಅಂತಾ ಅಂದು ಎಲ್ಲರೂ ಕೂಡಿ ನನಗೆ ಕಪಾಳಕ್ಕೆ, ಬೆನ್ನಿಗೆ, ಹೊಟ್ಟೆಗೆ ಹೊಡೆ ಬಡೆ ಮಾಡುತ್ತಿರುವಾಗ ಅವರ ಪೈಕಿ ನಿಂಗನಗೌಡ ಈತನು ನನಗೆ ತಡೆದು ನಿಲ್ಲಿಸಿ ನಿನ್ನದು ಬಹಳ ಸೊಕ್ಕು ಆಗಿದೆ ಅಂತಾ ಮಾನಬಂಗ ಮಾಡುವ ಉದ್ದೇಶದಿಂದ ಸೀರೆ ಹಿಡಿದು ಎಳೆದಾಡಿದಲ್ಲದೇ ಅಲ್ಲೇ ಬಿದ್ದಿದ್ದ ಕಟ್ಟಿಗೆಯಿಂದ ನನ್ನ ಬಲಕೂ ಮುಷ್ಠಿಯ ಹತ್ತಿರ ಹೊಡೆದು ಒಳಪೆಟ್ಟು ಮಾಡಿದ್ದು ಇರುತ್ತದೆ. ಅಲ್ಲದೇ ಪಾರ್ವತಿ ಮತ್ತು ಲಕ್ಷ್ಮೀ ಇಬ್ಬರೂ ನನಗೆ ಕೂದಲು ಹಿಡಿದು ತಲೆಗೆ ಹೊಡೆ ಬಡೆ ಮಾಡಿದ್ದು ಇರುತ್ತದೆ. ನಂತರ ಎಲ್ಲರೂ ಕೂಡಿ ನನಗೆ ಕೈಯಿಂದ ಹೊಡೆ ಬಡೆ ಮಾಡುತ್ತಿದ್ದಾಗ  ನಾನು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ಸಿದ್ದನಗೌಡ ಮಾಲಹಳ್ಳಿ ಹಾಗು ತಿಪ್ಪರಾಜು ಕುಲಕಣರ್ಿ ಇಬ್ಬರೂ ಕೂಡಿ ನನಗೆ ಹೊಡೆಯುವುದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರು ನನಗೆ ಹೊಡೆಯುವದನ್ನು ಬಿಟ್ಟು ಸೂಳೇ ಇನ್ನು ಮುಂದೆ ಲೀಜಿನ ಹಣ ಕೇಳಲು ಈ ಕಡೆ ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿದರು. ಕಾರಣ ಮೇಲ್ಕಾಣಿಸಿದ ನಾಲ್ಕು ಜನರು ನನಗೆ ಅವಾಚ್ಯವಾಗಿ ಬೈಯ್ದು ಕೈಯಿಂದ ಹೊಡೆಬಡೆ ಮಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಜೀವದ ಭಯ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಈ ವಿನಂತಿ ಅಜರ್ಿ ಇರುತ್ತದೆ. ಅಂತಾ ಕೊಟ್ಟ ಪಿರ್ಯಾದಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 29/2020 ಕಲಂ 341.323.354.504.506 ಸಂಗಡ 34 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!