ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/02/2020

By blogger on ಗುರುವಾರ, ಫೆಬ್ರವರಿ 6, 2020

                                                         

                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/02/2020

ಗುರುಮಠಕಲ್ ಠಾಣೆ ಗುನ್ನೆ ನಂ:- 22/2020 ಕಲಂ: 87 ಕೆ.ಪಿ. ಆಕ್ಟ್:- ದಿನಾಂಕ 06.02.2020 ರಂದು ಸಂಜೆ 5:20 ಗಂಟೆಗೆ ಸುಮಾರಿಗೆ ಈ ಮೇಲ್ಕಂಡ ಆರೋಪಿತರು ಚಿಂತಕುಂಟಾ ಗ್ರಾಮದ ಹನುಮಾನ ದೇವರ ಗುಡಿಯ ಮುಂದಿನ ದೊಡ್ಡ ಕಟ್ಟೆಯ ಮೇಲೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ್ ಎಲೆಗಳ ಸಹಾಯದಿಂದ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ಸಾಹೇಬರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳೀ ಮಾಡಿ ಆರೋಪಿತರನ್ನು ಹಿಡಿದು ಅವರ ವಶದಲ್ಲಿದ್ದ 2325/- ಮತ್ತು 52 ಇಸ್ಪೀಟ್ ಎಲೆಗಳನ್ನು ಸೇರಿ ಒಟ್ಟು 2325/- ರೂ ಬೆಲೆಯ ಮುದ್ದೆ ಮಾಲನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ನೀಡಿದ್ದು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾತದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆ ಗುನ್ನೆ ನಂ: 22/2020ಕಲಂ: 87 ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

ಗುರಮಠಕಲ ಪೊಲೀಸ್ ಠಾಣೆ ಗುನ್ನೆ ನಂ:- 21/2020 ಕಲಂ 302, 201 ಐಪಿಸಿ:- ಮೃತ ಜಿತೇಶನು ದಿನಾಂಕ 04.02.2020 ರಂದು ಬೆಳಿಗ್ಗೆ 10:30 ಗಂಟೆಯ ಸುಮರಿಗೆ ಬಾಂಬೆಯಿಂದ ಕೊಂಕಲ್ಗೆ ಬಂದು ನಯಾಬುರ್ಜ ಗ್ರಾಮದಲ್ಲಿ ಸಂಬಂಧಿಕರ ಮೋಟಾರು ಸೈಕಲನ್ನು ತೆಗೆದುಕೊಂಡು ಮಕ್ತಲಗೆ ಹೋಗಿ ನಿನ್ನೆ ದಿನಾಂಕ 05.02.2020 ರಂದು ಬೆಳಿಗ್ಗೆ 11:00 ಗಂಟೆಗೆ ಮನೆಗೆ ಬಂದಿದ್ದು. ನಿನ್ನೆ ಸಂಜೆ 05:00 ಗಂಟೆಯ ಸುಮಾರಿಗೆ ಮೋಟಾರು ಸೈಕಲ್ ನಂಬರ ಎ.ಪಿ-22-ಎ.ಎಮ್-4836 ನೇದ್ದನ್ನು ತೆಗೆದುಕೊಂಡು ಹೋರಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು ಇಂದು ದಿನಾಂಕ 06.02.2020 ರಂದು ಬೆಳಿಗ್ಗೆ 06:00 ಗಂಟೆಗೆ ಫಿರ್ಯಾದಿಯ ಚಿಕ್ಕಪ್ಪನ ಮಗನಾದ ನಿಂಗಪ್ಪನು ಫಿರ್ಯಾದಿಯ ಮನೆಗೆ ಬಂದು ನಿನ್ನ ಮಗ ಜಿತೇಶನಿಗೆ ನನ್ನ ಮಗಳಾದ ಶಂಕ್ರಮ್ಮ ನಿನ್ನೆ ರಾತ್ರಿ 08:00 ಗಂಟೆಗೆ ಫೋನ್ ಮಾಡಿದಾಗ ಗುರುಮಠಕಲ್ನಲ್ಲಿದ್ದೆನೆ ಮನೆಗೆ ಬರುತ್ತೇನೆಂದು ಹೇಳಿದ್ದು ಪುನಃ ರಾತ್ರಿ 9:30 ಗಂಟೆಗೆ ಫೋನ್ ಮಾಡಿದಾಗ ಸ್ವೀಚ್ ಆಫ್ ಅಂತಾ ಹೇಳಿರುತ್ತದೆ. ನಿನ್ನ ಮಗ ನಿನ್ನ ಮನೆಯಲ್ಲಿದ್ದಾನೆನು ಎಂದು ಕೇಳಿದ್ದು ಅದಕ್ಕೆ ಫಿರ್ಯಾದಿಯು ಬಂದಿಲ್ಲ ಎಂದು ಹೇಳಿ ತಮ್ಮ ಹೊಲಕ್ಕೆ ಹೋಗಿ ಮರಳಿ ಬೆಳಿಗ್ಗೆ 9:00 ಗಂಟೆಗೆ ಮನೆಗೆ ಬಂದಾಗ ಮೃತ ಜಿತೇಶನು ಬೋರಬಂಡಾದ ಹತ್ತಿರ ಧರ್ಮಪೂರ ಘಾಟನಲ್ಲಿ ಸತ್ತು ಬಿದ್ದಿದ್ದ ಸುದ್ದಿ ಗೊತ್ತಾಗಿ ಘಟನಾ ಸ್ಥಳಕ್ಕೆ ಬಂದು ನೋಡಿದಾಗ ರಸ್ತೆಯ ತಿರುವಿನಲ್ಲಿಯ ತಡೆಗೋಡೆಯಿಂದ ಕೆಳಗೆ ಮೃತ ಜಿತೇಶನು ಬೋರಲಾಗಿ ಸತ್ತು ಬಿದ್ದಿದ್ದು ಆತನಿಂದ ಸ್ವಲ್ಪ ದೂರದಲ್ಲಿ ಮೋಟಾರು ಸೈಕಲ್ ನಂಬರ ಎ.ಪಿ-22-ಎ.ಎಮ್-4836 ಜಖಂಗೊಂಡು ಬಿದ್ದಿತ್ತು. ಮೃತನಿಗೆ ತಲೆಯ ಹಿಂಬಾಗದಲ್ಲಿ ರಕ್ತಗಾಯ, ಕುತ್ತಿಗೆಯ ಎಡ ಮತ್ತು ಬಲ ಮತ್ತು ಎಡಕಿನ ಹಿಂಬಾಗದಲ್ಲಿ ರಕ್ತ ಕಂದುಗಟ್ಟಿದ ಗಾಯ, ಹಣೆ, ಮುಖಕ್ಕೆ ಎದೆಗೆ ಹಾಗೂ ಬಲಗಾಲು ಮುಂಗಾಲಿನಲ್ಲಿ, ಎಡಗಾಲಿನ ಬೆರಳಿಗೆ ರಕ್ತಗಾಯಗಳಾಗಿದ್ದವು. ಬಲ ಕಿವಿಯಿಂದ ರಕ್ತ ಸ್ರಾವ ಸಹ ಆಗಿತ್ತು. ಮೃತ ಜಿತೇಶನಿಗೆ ಯಾರೋ ದುಷ್ಕಮರ್ಿಗಳು ಯಾವುದೋ ದುರುದ್ದೇಶದಿಂದ ಎಲೋ ಕೊಲೆ ಮಾಡಿ ಧರ್ಮಪೂರ ಘಾಟ ತಿರುವು ರಸ್ತೆಯಲ್ಲಿ ಮೋಟಾರು ಸೈಕಲ್ ಸಮೇತ ಬಿಸಾಡಿದಂತೆ ಕಂಡು ಬರುತ್ತದೆ. ಆತ ರಸ್ತೆ ಅಪಘಾತ ಕಾಲಕ್ಕೆ ಗಾಯಗೊಂಡು ಮೃತಪಟ್ಟಿರುತ್ತಾನೋ ಅಥವಾ ಯಾರಾದರೂ ಕೊಲೆ ಮಾಡಿದ್ದಾರೋ ಹೇಗೆ ಎಂಬುದನ್ನು ಪತ್ತೆ ಹಚ್ಚುವುದು ಮತ್ತು  ನನ್ನ ಮಗನನ್ನು ಕೊಲೆ ಮಾಡಿದ್ದರೆ ಕೊಲೆಗಡುಕರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲು ಕೋರಿದೆ ಅಂತಾ ದೂರಿನ ಸಾರಾಂಶವಿರುತ್ತದೆ.

ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ:- 13/2020 ಕಲಂ: 143, 147, 148, 323, 324, 326, 307, 504, 506 ಸಂಗಡ 149  ಐಪಿಸಿ  :- ಇಂದು ದಿನಾಂಕ:06.02.2020 ರಂದು 01:00 ಎ.ಎಮ್ ಕ್ಕೆ ಪಿರ್ಯಾಧಿ ಶ್ರೀ. ಶ್ರೀ. ಸಂಗಪ್ಪ ತಂದೆ ರಾಯಪ್ಪ ಕುರೇರ ವ:35 ವರ್ಷ ಜಾ: ಹಿಂದೂ ಕುರುಬರ ಉ: ಒಕ್ಕಲುತನ ಸಾ:  ಕುರೇರ ದೊಡ್ಡಿ ಅಂಬಾನಗರ ಕಕ್ಕೆರಾ  ಸಾ:ಸುರಪುರ ಇತನು ಠಾಣೆಗೆ ಹಾಜರಾಗಿ ಹೇಳಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಹೇಳಿಕೆಯ ಸಾರಾಂಶವೆನೆಂದರೆ ನಮ್ಮ ತಂದೆತಾಯಿಯವರಿಗೆ ನಾವು ನಾಗಪ್ಪ, ಶರಬಣ್ಣ,ಶಿವನೇಪ್ಪ ,ನಾನು ಸನ್ಯಾಸೆಪ್ಪ, ಬಸವರಾಜ ಅಂತಾ 6 ಜನ ಗಂಡು ಮಕ್ಕಳಿದ್ದು ಎಲ್ಲರದು ಮದುವೆ ಯಾಗಿದ್ದು ನಾವೇಲ್ಲರು ನಮ್ಮ ಹೆಂಡತಿ ಮಕ್ಕಳೊಂದಿಗೆ ಬೇರೆ ಬೇರೆ ಇದ್ದು ನಮ್ಮ ತಂದೆ ತಾಯಿಯವರು ತಮ್ಮನಾದ ಬಸವರಾಜ ಇತನ ಹತ್ತಿರ  ಇರುತ್ತಾರೆ ಎಲ್ಲರ ಮನೆಗಳು ಒಂದಕ್ಕೊಂದು ಹತ್ತಿಕೊಂಡು ಇರುತ್ತವೆ ನನ್ನ ಅಣ್ಣಂದಿರಾದ ಶರಬಣ್ಣ, ಶಿವನೆಪ್ಪ ಇವರಿಬ್ಬರ ಮನೆಗಳು ಯು.ಕೆ.ಪಿ ಕ್ಯಾಂಪ್ ಹತ್ತಿರ ಕೆಳಗಿನ ಕುರೇರ ದೊಡ್ಡಿಯಲ್ಲಿ ಇರುತ್ತವೆ.  ದಿನಾಂಕ:02.02.2020 ರಂದು ರವಿವಾರ ದಿವಸ ನನ್ನ ತಂದೆಯ  ಅಣ್ಣತಮ್ಮಕಿಯ ಅಕ್ಕನಾಗಬೇಕಾದ ಹಡಗಲ್ಲರ ದೊಡ್ಡಿಯ ಚಂದಮ್ಮ ಗಂಡ ಜೆಟ್ಟೆಪ್ಪ ಇವರು ಸತ್ತಿದ್ದರಿಂದ ನನ್ನ ತಮ್ಮನಾದ ಸನ್ಯಾಸೆಪ್ಪ ಹಾಗೂ ಅವನ ಹೆಂಡತಿ ಜೆಜೆಮ್ಮ @ ಸಾಮವ್ವ    ರವರು ಅಲ್ಲಿಗೆ ಹೋಗಿದ್ದು ಚಂದಮ್ಮನವರ ಅಂತ್ಯ ಕ್ರಿಯೆಯು ದಿನಾಂಕ 03.02.2020 ರಂದು ಇದ್ದುದ್ದರಿಂದ ನನ್ನ ತಮ್ಮ ಸನ್ಯಾಸೆಪ್ಪ ಹಾಗೂ ಅವನ ಹೆಂಡತಿ ಜೆಜೆಮ್ಮ @ ಸಾಮವ್ವ ರವರು ರವಿವಾರ ದಿವಸ ಅಲ್ಲಿಯೆ ಉಳಿದುಕೊಂಡಿದ್ದು ಆಗ ದಿನಾಂಕ 02.02.2020 ರಂದು ಸಾಯಂಕಾಲ ಚಂದಮ್ಮಳ ಮಗನಾದ ನಂದಪ್ಪನ ಮಗ ಸಿದ್ದಪ್ಪನು ನನ್ನ ತಮ್ಮನಿಗೆ ಸುಳೆ ಮಗನೆ ನಮ್ಮ ಮನೆಗೆ ಏಕೆ ಬಂದಿದಿ ಚಂದಮ್ಮ ನಮ್ಮ ಅಜ್ಜಿ ನಿನಗೇನಾಗಬೇಕು ಅಂತಾ ಹಳೆಯ ವೈಮನಸಿನಿಂದ ಜಗಳ ತೆಗೆದು ಹೊಡೆಯಲಿಕ್ಕೆ ಹೋಗಿದ್ದು ಆಗ ಅಲ್ಲಿದ್ದ ಚಂದಮ್ಮಳ ಅಂತ್ಯ ಕ್ರಿಯೆಗಾಗಿ ಬಂದಿದ್ದ ಜನರು ಬಿಡಿಸಿದ್ದು  ಆದರು ಕೂಡ ಸಿದ್ದಪ್ಪನು ನನ್ನ ತಮ್ಮ ಸನ್ಯಾಸಪ್ಪನಿಗೆ ಸುಳೆ ಮಗನೆ ನಿನ್ನ ಜೀವ ನನ್ನ ಕೈಯಲ್ಲಿದೆ ಇವತ್ತು ಜನರು ಬಿಡಿಸಿಕೊಂಡಿದ್ದಕ್ಕೆ ಉಳಿದುಕೊಂಡಿದಿ ಇಂದಲ್ಲ ನಾಳೆ ನಿನ್ನನ್ನು ಕೊಲೆ ಮಾಡಿಯೆ ಬಿಡುತ್ತೆನೆ ಅಂತಾ ಕೊಲೆ ಬೇದರಿಕೆ ಹಾಕಿದ್ದು ಈ ವಿಷಯವನ್ನು ನನ್ನ ತಮ್ಮ ಸನ್ಯಾಸೆಪ್ಪನು ಚಂದಮ್ಮಳ ಅಂತ್ಯೆ ಕ್ರಿಯೆ ಮುಗಿಸಿಕೊಂಡು ಬಂದ ನಂತರ ದಿನಾಂಕ:03.02.2020 ರಂದು ನನ್ನ ಮುಂದೆ ಹಾಗೂ ನಮ್ಮ ಅಣ್ಣಂದಿರ ಮುಂದೆ ಹೇಳಿದ್ದು ಸಿದ್ದಪ್ಪ ಹಾಗೂ ಅವರ ಮನೆಯವರು ನಮ್ಮ ಮೇಲೆ ವೈಮನಸ್ಸು ಹೊಂದಿದ್ದು ಇರುತ್ತದೆ. 
ಹಿಗಿದ್ದು ನಿನ್ನೇ ದಿನಾಂಕ: 05.02.2020ರಂದು ಸಂಜೆ 7.30 ಗಂಟೆಯ ಸುಮಾರಿಗೆ ನನ್ನ ಅಣ್ಣ ನಾಗಪ್ಪ ತಂದೆ ರಾಯಪ್ಪ ಕುರೇರ್ ತಮ್ಮ ಸನ್ಯಾಸೆಪ್ಪ ತಂದೆ ರಾಯಪ್ಪ ಕುರೇರ್ ಮತ್ತು ನನ್ನ ತಂದೆ ರಾಯಪ್ಪ ತಂದೆ ಸನ್ಯಾಸೆಪ್ಪ ಹಾಗೂ ನಮ್ಮ ಅಳಿಯ ಮಾಳಪ್ಪ ತಂದೆ ನಂದಪ್ಪ ಮುರಡ್ಡಿ ಇವರೆಲ್ಲರೂ ನನ್ನ ತಮ್ಮ ಸನ್ಯಾಸೆಪ್ಪನ ಮನೆಯ ಮುಂದೆ ಮಾತನಾಡುತ್ತಾ ಕುಳಿತ್ತಿದ್ದಾಗ 1) ಸಿದ್ದಪ್ಪ ತಂದೆ ನಂದಪ್ಪ ಹಡಗಲರ್ 2)ಜೆಟ್ಟೆಪ್ಪ ತಂದೆ ನಂದಪ್ಪ ಹಡಗಲರ್ 3)ಜೆಟ್ಟಪ್ಪ ತಂದೆ ಚೆನಬಸಪ್ಪ ಹಡಗಲ್ಲರ್ 4) ನಿಂಗಪ್ಪ ತಂದೆ ಚನಬಸಪ್ಪ ಹಡಗಲ್ಲರ 5) ಮಾಳಪ್ಪ ತಂದೆ ಪರಮಣ್ಣ ಮಲಮುತ್ತಿ 6) ಪರಮಣ್ಣ ತಂದೆ ನಿಜಪ್ಪ ಕುರೇರ್ 7) ಮಾನಪ್ಪ ತಂದೆ ನಿಜಪ್ಪ ಕುರೇರ್ 8) ನಿಜಪ್ಪ ತಂದೆ ಶರಬಣ್ಣ ಕುರೇರ್ 9) ಚೆನ್ನಪ್ಪ ತಂದೆ ಸಾತಪ್ಪ ಕುರೇರ್ 10) ನರಸಪ್ಪ ತಂದೆ ಸಂಗಪ್ಪ ಕುರೇರ್ 11) ಶಂಕ್ರಪ್ಪ ತಂದೆ ಸಂಗಪ್ಪ ಕುರೇರ್ 12) ಹಣಮಪ್ಪ ತಂದೆ ಶಂಕ್ರೆಪ್ಪ ಕುರೇರ್ 13) ಅಂಬರೆಶ ತಂದೆ ಸಂಗಪ್ಪ ಕುರೆರ್ 14) ಸಂಗಪ್ಪ ತಂದೆ ನರಸಪ್ಪ ಕುರೇರ್ 15) ಶೇಖಪ್ಪ ತಂದೆ ಮಾನಪ್ಪ ಹಡಗಲ್ಲರ್ 16) ಅಂಬರೇಶ ತಂದೆ ಪರಮಣ್ಣ ಕುರೇರ್ ಸಾ. ಹಡಗಲ್ಲರ ದೊಡ್ಡಿ ಮತ್ತು ಮೇಲಿನ ಕುರೇರ್ ದೊಡ್ಡಿ ಇವರೆಲ್ಲರೂ ತಮ್ಮ ಕೈಯಲ್ಲಿ ಕಲ್ಲು ಬಡಿಗೆ, ಕೊಡ್ಲಿ, ರಾಡುಗಳನ್ನು ಹಿಡಿದುಕೊಂಡು ನಮಗೆ ಕೊಲೆ ಮಾಡುವ ಉದ್ದೇಶದಿಂದ ಗುಂಪಾಗಿ ಕೆಕೆ ಹಾಕುತ್ತಾ ಬಂದವರೆ ನನ್ನ ತಮ್ಮ ಸನ್ಯಾಸೆಪ್ಪ ಹಾಗೂ ಅಣ್ಣ ನಾಗಪ್ಪ ನನ್ನ ತಂದೆ ರಾಯಪ್ಪ ಹಾಗೂ ಅಳಿಯ ಮಾಳಪ್ಪ ರವರಿಗೆ ಸುಳೆ ಮಕ್ಕಳೆ ನಿಮ್ಮದು ಸೊಕ್ಕು ಬಹಳ ಆಗಿದೆ ನಾಚಿಕೆ ಇಲ್ಲದೆ ಚಂದಮ್ಮಳು  ತಿರಿಕೊಂಡಾಗ ಅವರ ಮನೆಗೆ ಬಂದಿರಿ ಅವತ್ತೆ ಸನ್ಯಾಸೆಪ್ಪನಿಗೆ ಕೊಲೆ ಮಾಡಬೇಕೆಂದರೆ ಅಲ್ಲಿ  ಸೇರಿದ ಜನರು ಬಿಡಿಸಿದರು ಸುಳೆ ಮಕ್ಕಳೆ ಇವತ್ತು ನಿಮಗೆ ಕೊಲೆ ಮಾಡಿಯೇ ಬಿಡುತ್ತವೆ ಯಾವ ಸುಳೆ ಮಗ ಬಂದು ಬಿಡಿಸಿಕೊಳ್ಳುತ್ತಾನೆ ನಾವು ನೋಡಿಕೊಳ್ಳುತ್ತೆವೆ ಅಂತ ಅಂದವರೆ ಅವರಲ್ಲಿಯ ಸಿದ್ದಪ್ಪ ತಂದೆ ನಂದಪ್ಪ ಇತನು ತನ್ನ ಕೈಯಲ್ಲಿಯ ಕೊಡ್ಲಿಯಿಂದ ನನ್ನ ಅಣ್ಣ ನಾಗಪ್ಪನ ತಲೆಯ ಮೇಲ್ಬಾಗ ಮತ್ತು ಪಕ್ಕದಲ್ಲಿ ಹೊಡೆದು ಭಾರಿ ರಕ್ತ ಗಾಯ ಪಡಿಸಿದ್ದು  ಇದರಿಂದ ನನ್ನ ಅಣ್ಣನ ತಲೆಯ ಮೇಲೆ ರಕ್ತ ಸೊರ ಹತ್ತಿದ್ದು ಜೆಟ್ಟೆಪ್ಪ ತಂದೆ ನಂದಪ್ಪ ಮತ್ತು ಜೆಟ್ಟಪ್ಪ ತಂದೆ ಚನ್ನಬಸಪ್ಪ ಇವರಿಬ್ಬರೂ ತಮ್ಮ ಕೈಯಲ್ಲಿಯ ಕಬ್ಬಿಣದ ರಾಡುಗಳಿಂದ ನನ್ನಣ್ಣ ನಾಗಪ್ಪನ ಎದೆಯ ಮೇಲೆ ,ಬೆನ್ನಿಗೆ ,ಹೊಟ್ಟೆಯ ಮೇಲೆ ಹೊಡೆದು ಗುಪ್ತ ಗಾಯ ಪಡಿಸಿದ್ದು  ನಿಂಗಪ್ಪ ತಂದೆ ಚನ್ಬಸಪ್ಪ ಮತ್ತು ಮಾಳಪ್ಪ ತಂದೆ ಪರಮಣ್ಣ ಇವರುಗಳು ನನ್ನ ಅಣ್ಣ ನಾಗಪ್ಪನ ಮೇಲೆ ಕಲ್ಲುಗಳನ್ನು ಬಿಸಿದ್ದು ಆ ಕಲ್ಲುಗಳು ನನ್ನ ಅಣ್ಣನಿಗೆ ಬಡಿದು ಗುಪ್ತ ಗಾಯಗಳಾಗಿದ್ದು ನನ್ನ ತಮ್ಮ ಸನ್ಯಾಸೆಪ್ಪನಿಗೆ ಪರಮಣ್ಣ ತಂದೆ ನಿಜಪ್ಪ ಕುರೇರ್ ಇತನು ತನ್ನ ಕೈಯಲ್ಲಿಯ ಕೊಡ್ಲಿಯಿಂದ ಜೊರಾಗಿ ತಲೆಯ ಮೇಲೆ ಹೋಡೆದಿದ್ದು ಇದರಿಂದ ನನ್ನ ತಮ್ಮನ ತಲೆಯ ಮೇಲೆ ಭಾರಿ ರಕ್ತ ಗಾಯವಾಗಿ ರಕ್ತ ಸೊರ ಹತ್ತಿದ್ದು ಮಾನಪ್ಪ ತಂದೆ ನಿಜಪ್ಪ ಹಾಗೂ ನಿಜಪ್ಪ ತಂದೆ ಶರಬಣ್ಣ ಇವರುಗಳು ತಮ್ಮ ಕೈಯಲ್ಲಿಯ ಬಡಿಗೆಗಳಿಂದ ಎಡಗಾಲು ಮೊಳಕಾಲ ಮೇಲೆ ತಲೆಯ ಮೇಲೆ ಹೋಡೆದು ರಕ್ತ ಗಾಯ ಮತ್ತು ಗುಪ್ತ ಗಾಯ ಮಾಡಿದ್ದು ಅಂಬರೇಶ ತಂದೆ ಪರಮಣ್ಣ ಇತನು ತನ್ನ ಕೈಯಲ್ಲಿಯ ರಾಡಿನಿಂದ ನನ್ನ ತಮ್ಮ ಸನ್ಯಾಸೆಪ್ಪನ ಬೆನ್ನಿನ ಮೇಲೆ ಹೊಡೆದು ಗುಪ್ತ ಗಾಯ ಪಡಿಸಿದ್ದು ನನ್ನ ತಂದೆ ರಾಯಪ್ಪ ತಂದೆ ಸನ್ಯಾಸೆಪ್ಪ ಇವರಿಗೆ ಶೇಖಪ್ಪ ತಂದೆ ಮಾನಪ್ಪ ಇತನು ರಾಡಿನಿಂದ ಎಡಗೈ ಮೊಳಕೈ ಮೇಲೆ ಹೊಡೆದಿದ್ದು ಇದರಿಂದ ರಕ್ತ ಗಾಯವಾಗಿದ್ದು ಸಂಗಪ್ಪ ತಂದೆ ನರಸಪ್ಪ ಮತ್ತು ಅಂಬರೇಶ ತಂದೆ ಸಂಗಪ್ಪ ಇವರುಗಳು ತಮ್ಮ ಕೈಯಲ್ಲಿಯ ಬಡಿಗೆಗಳಿಂದೆ ಎದೆಯ ಮೇಲೆ ಬೆನ್ನಿಗೆ ಹೊಡೆದು ಗುಪ್ತ ಗಾಯ ಮಾಡಿದ್ದು ಆಗ ಬಿಡಿಸಲು ಹೊದ ನನ್ನ ಅಳಿಯ ಮಾಳಪ್ಪ ತಂದೆ  ನಂದಪ್ಪ ಮುರಡ್ಡಿ ಇವರಿಗೆ ಹಣಮಪ್ಪ ತಂದೆ ಸಂಗಪ್ಪ ಇತನು ತನ್ನ ಕೈಯಲ್ಲಿಯ ರಾಡಿನಿಂದ ತಲೆಯ ಮೇಲೆ ಹೊಡೆದು ರಕ್ತ ಗಾಯ ಪಡಿಸಿದ್ದು ಚನ್ನಪ್ಪ ತಂದೆ ಸಾತಪ್ಪ, ನರಸಪ್ಪ ತಂದೆ ಸಂಗಪ್ಪ ಶಂಕ್ರಪ್ಪ ತಂದೆ ಸಂಗಪ್ಪ ಇವರೆಲ್ಲರೂ ಅಳಿಯ ಮಾಳಪ್ಪನಿಗೆ ನೇಲಕ್ಕೆ ಕೇಡವಿ ಮೈಮೇಲೆಲ್ಲ ಒದ್ದು, ತುಳಿದು, ಗುಪ್ತ ಗಾಯ ಮಾಡಿದ್ದು  ಆಗ ಇವರೆಲ್ಲರು ಚಿರಾಡಲು ಅಲ್ಲಿಯೆ ಇದ್ದ ನಾನು ಮತ್ತು ನನ್ನ ಅಣ್ಣ ಶರಬಣ್ಣ ತಂದೆ ರಾಯಪ್ಪ ಕುರೇರ್, ಬಸವರಾಜ ತಂದೆ ನಿಂಗಯ್ಯ ಕುರಿ, ಮುಕ್ಕಣ್ಣ ತಂದೆ ಅಯ್ಯಪ್ಪ ಕುರಿ ಹಾಗೂ ಇತರರು ಹೊಗಿ  ನೊಡಿ ಬಿಡಿಸಿದ್ದು ನಾವು ಹೊಗಿ ಬಿಡಿಸದಿದ್ದರೆ ಅವರೆಲ್ಲರೂ ನನ್ನ ಅಣ್ಣ,ತಂದೆ,ತಮ್ಮ,ಅಳಿಯನಿಗೆ ಕೊಲೆ ಮಾಡಿಯೆ ಬಿಡುತ್ತಿದ್ದರು ನನ್ನ ಅಣ್ಣ,ತಂದೆ,ತಮ್ಮ,ಅಳಿಯನಿಗೆ ಉಪಚಾರಕ್ಕಾಗಿ ಕಕ್ಕೆರಾ ಸರಕಾರಿ ಆಸ್ಪತ್ರೆಗೆ ನಾವೆಲ್ಲರು ಕೂಡಿ ಕರೆದುಕೊಂಡು ಹೊಗಿದ್ದು ವೈದ್ಯರು ಪ್ರಥಮ ಉಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಕೆರೊಡಿ ಆಸ್ಪತ್ರೆ ಬಾಗಲಕೊಟಿಗೆ ಕರೆದುಕೊಂಡು ಹೊಗಲು ತಿಳಿಸಿದ್ದರಿಂದ ನಮ್ಮ ಮಾವ ಸಿದ್ದಣ್ಣ ತಂದೆ ಭೀಮಣ್ಣ ಮುರಡ್ಡಿ ಇವರು ಅವರಿಗೆ ಬಾಗಲಕೊಟಿಗೆ ಕರೆದುಕೊಂಡು ಹೊಗಿದ್ದು ನನ್ನ ಅಣ್ಣ,ತಂದೆ,ತಮ್ಮ,ಅಳಿಯನಿಗೆ ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಭಾರಿ ರಕ್ತ  ಗಾಯ ಮತ್ತು ಗುಪ್ತ ಗಾಯ ಗೋಳಿಸಿದ ಮೇಲೆ ನಮೂದಿಸಿದ 16 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:13/2020 ಕಲಂ: 143, 147, 148, 323, 324, 326, 307, 504, 506 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕೊಡೇಕಲ್  ಪೊಲೀಸ್ ಠಾಣೆ ಗುನ್ನೆ ನಂ:- 15/2020 ಕಲಂ: 379 ಐ.ಪಿ.ಸಿ:- ಇಂದು ದಿನಾಂಕ 06.02.2020 ರಂದು  10:00 ಎಮ್ ಗಂಟೆಗೆ ಪಿಯರ್ಾಬಸವರಾಜ ತಂದೆ ನಾಗಪ್ಪ ಬಂಡಿಗೌಡ್ರ ವ:22 ವರ್ಷ ಜಾ: ಹಿಂದೂ ನೇಕಾರ ಉ: ತಂಗಡಗಿ ಮೋಟರ್ ನಲ್ಲಿ ಮ್ಯಾನೆಜರ್ ಸಾ: ಕೊಡೇಕಲ್ಲ ತಾ: ಹುಣಸಗಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ಬಂದ ಫಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು, ಅದರ ಸಾರಾಂಶವೆನೆಂದರೆ, ನಾನು ತಂಗಡಿಗೆ ಮೋಟರ್ ಇವರ  ಸೋರೊಮ್ನಲ್ಲಿ ಮ್ಯಾನೇಜರ ಅಂತ ಕೆಲಸ ಮಾಡುತ್ತಿದ್ದು. ಈಗ 10-11 ತಿಂಗಳ ಹಿಂದುಗಡೆ ಪಲ್ಸರ್-220 ಮೊಟಾರ ಸೈಕಲ್ ನಂಬರ ಏಂ-33ಘಿ-5718 ನೇದ್ದನ್ನು ಖರಿದಿ ಮಾಡಿದ್ದು. ಈ ಮೋಟರ್ ಸೈಕಲ್ನ್ನು ನಾನು ನನ್ನ ಮನೆಯಿಂದ ನಾನು ಕೆಲಸ ಮಾಡುವ ಸೋವರೂಮ್ಗೆ ತಂದು ನನ್ನ ಕೆಸಲ ಮುಗಿದ ನಂತರ ಕೊಡೇಕಲ್ಲ ಗ್ರಾಮದ ಕೇರಿಯಲ್ಲಿರುವ  ನನ್ನ ಮನೆಯ ಮುಂದೆ ನನ್ನ ಮೋಟರ್ ಸೈಕಲ್ಗೆ ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸುತ್ತಿದ್ದು ಇರುತ್ತದೆ.
       ಹೀಗಿರುವಾಗ  ನಾನು ದಿನಾಂಕ 30.01.2020 ರಂದು ಸೋರೂಮ್ದಲ್ಲಿಯ ನನ್ನ ಕೆಲಸವನ್ನು ಮುಗಿಸಿಕೊಂಡು ರಾತ್ರಿ 9:00 ಗಂಟೆಗೆ  ಮನೆಗೆ ಬಂದು ನನ್ನ ಮೋಟರ್ ಸೈಕಲ್ ನಂ: ಕೆಎ-33 ಘಿ-5718 ನೇದ್ದನ್ನು ಮನೆಯ ಮುಂದೆ ನಿಲ್ಲಿಸಿಹ್ಯಾಂಡಲ್ ಲಾಕ್ ಮಾಡಿ ಮನೆಯ ಒಳಗೆ ಹೋಗಿ ಊಟ ಮಾಡಿ ಮಲಗಕೊಂಡಿದ್ದು. ಮರುದಿನ ದಿನಾಂಕ:31.01.2020 ರಂದು ಬೆಳಗ್ಗೆ 7:00 ಗಂಟೆಯ ನನ್ನ ತಾಯಿಯಾದ ನೀಲಮ್ಮ ಇವರು ಮನೆಯ ಮುಂದಿನ ಕಸಗೂಡಿಸಲು ಹೋದಾಗ ನಾನು ನನ್ನ ಮನೆಯ ಮುಂದೆ ನಿಲ್ಲಿಸಿದ ನನ್ನ ಮೋಟರ್ ಸೈಕಲ್ ಕಾಣಸದಿದ್ದರಿಂದ ಬಂದು ನನಗೆ ಎಬ್ಬಿಸಿ ನೀನು ಮನೆಯ ಮುಂದೆ ನಿಲ್ಲಿಸಿ ಮೋಟರ್ ಸೈಕಲ್ ಕಾಣಿಸುತ್ತಿಲ್ಲಾ ಅಂತಾ ತಿಳಿಸಿದ್ದು. ನಾನು ನೋಡಿ ಗಾಬರಿಯಾಗಿ ಅಕ್ಕಪಕ್ಕದ ಮನೆಯವರಾದ ಸಂಗಮೇಶ ತಂದೆ ಪರಸಪ್ಪ ಕಿರದಳ್ಳಿ, ಸಂಗಮೇಶ  ತಂದೆ ದೇವಪ್ಪ ಕಿರದಳ್ಳಿ ಇವರಿಗೆ ಕೇಳಿದ್ದು. ಇವರು ಕೂಡಾ ನೋಡಿಲ್ಲಾ ಅಂತಾ ತಿಳಿಸಿದ್ದು. ಯಾರೋ ಕಳ್ಳರು  ನಾನು ನನ್ನ ಮನೆಯ ಮುಂದೆ ನಿಲ್ಲಿಸಿದ  ಮೋಟರ್ ಸೈಕಲ್ ಹ್ಯಾಂಡಲ್  ಲಾಕ್ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು. ಅಂದಿನಿಂದ ಇವತ್ತಿನವರೆಗೆ ಅಕ್ಕಪಕ್ಕದ ಹಳ್ಳಗಳಿಗೆ ಹಾಗೂ ಇತರ ಕಡೆಗೆ ಹೋಗಿ ಹುಡುಕಾಡಿದ್ದು ಆದರೂ ಕೂಡಾ ನನ್ನ ಮೋಟರ್ ಸೈಕಲ್ ಸಿಕ್ಕಿರುವದಿಲ್ಲಾ. ನನ್ನ ಪಲ್ಸರ್- 220 ಎಫ್ ಮೋಟರ್ ಸೈಕಲ್ ಏಂ-33ಘಿ-5718, ಚೆಸ್ಸಿ ನಂಬರ ಒಆ2ಂ13ಇಙ4ಏಅಏ04104ಇಂಜೀನ್ ನಂ: ಆಏಙಅಏಏ74322 ಇದ್ದು ಅಂದಾಜು ಕಿಮ್ಮತ್ತು 48,000/- ನೇದ್ದನ್ನು ದಿನಾಂಕ: 30.01.2020 ರ ರಾತ್ರಿ 9:00 ಗಂಟೆಯಿಂದ ದಿನಾಂಕ:31.01.2020 ರ ಬೆಳಗ್ಗೆ7:00 ಗಂಟೆಯ ಮಧ್ಯದ  ವೇಳೆಯಲ್ಲಿ ಯಾರೋ ಕಳ್ಳರು ಹ್ಯಾಂಡಲ್ ಲಾಕ್ ಮುರಿದು ಕಳುವುಮಾಡಿಕೊಂಡು ಹೋಗಿದ್ದು. ನಾನು ಕಳುವಾದ ನನ್ನ ಮೋಟರ್ ಸೈಕಲ್ನ್ನು ನೋಡಿದಲ್ಲಿ ಗುತರ್ಿಸುತ್ತೇನೆ.ಇಂದಿನ ವರೆಗೆ ನನ್ನ ಮೋಟರ್ ಸೈಕಲ್ ಸಿಗಬಹುದೆಂದು ಹುಡುಕಾಡಿದ್ದರಿಂದ ದೂರು ಕೊಡಲು ತಡವಾಗಿದ್ದು. ಕಾರಣ ಕಳುವಾದ ನನ್ನ ಮೊಟಾರು ಸೈಕಲ್ನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಕಳ್ಳರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಾರಾಂಶದ  ಮೇಲಿಂದ ಠಾಣೆಯ ಗುನ್ನೆ ನಂ 15/2020 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 36/2020. ಕಲಂ 379 ಐ.ಪಿ.ಸಿ.ಮತ್ತು ಕಲಂ.44 (1) ಕೆ.ಎಮ್.ಎಮ್.ಸಿ.ಆರ್ ರೂಲ್:-    ದಿನಾಂಕ: 06-02-2020 ರಂದು 10:00 ಎ.ಎಮ್.ಕ್ಕೆ ಆರೋಪಿತರು ತಮ್ಮ ಲಾರಿ ನಂಬರ ಕೆಎ.39-9973 ನೇದ್ದರಲ್ಲಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಸರಕಾರಕ್ಕೆ ಯಾವುದೇ ತೆರಿಗೆ ತುಂಬದೇ ಅಕ್ರಮವಾಗಿ ಸಾಗಿಸುತ್ತಿದ್ದಾಗ ಫಿಯರ್ಾದಿದಾರರು ದೇವದುರ್ಗ ಕ್ರಾಸ ಹತ್ತಿರ ರಸ್ತೆಯ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಹೋಗಿ ದಾಳಿಮಾಡಿ ಮರಳು ತುಂಬಿದ ಲಾರಿಯನ್ನು ವಶಪಡಿಸಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರ ಆಧಾರದ ಮೇಲಿಂದ  ಠಾಣೆ ಗುನ್ನೆ ನಂ.36/2019 ಕಲಂ. 379 ಐ.ಪಿ.ಸಿ. ಮತ್ತು ಕಲಂ 44(1) ಕೆ.ಎಮ್.ಎಮ್.ಸಿ.ಆರ್  ಅಡಿಯಲ್ಲಿ  ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 04/2020 ಕಲಂ: 110 (ಇ)&(ಜಿ) ಸಿ.ಆರ್.ಪಿ.ಸಿ:- ಮಾನ್ಯರವರ ಬಳಿಗೆ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ, ನಾನು ಆನಂದರಾವ್ ಪಿ.ಐ     ಸುರಪೂರ ಪೊಲೀಸ ಠಾಣೆ, ಸರಕಾರಿ ತಪರ್ೆ ಫಿರ್ಯಾದಿ ಏನೆಂದರೆ, ಇಂದು ದಿನಾಂಕ: 06/02/2020 ರಂದು 06:45 ಎ.ಎಂ. ಸುಮಾರಿಗೆ ತಿಂಥಣಿ ಜಾತ್ರಾ ಬಂದೊಬಸ್ತ ಕರ್ತವ್ಯದಲ್ಲಿದ್ದ ಸಮಯದಲ್ಲಿ ಗ್ರಾಮದ ಶ್ರಿ ಮೌನೇಶ್ವರ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಎದುರುದಾರನು ರಸ್ತೆಯಲ್ಲಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯ್ಯುತ್ತಾ, ಅಸಭ್ಯವಾಗಿ ವತರ್ಿಸುತ್ತಾ, ಕೈಯಲ್ಲಿ ಕಲ್ಲು ಹಿಡಿದುಕೊಂಡು ಇವತ್ತು ಧಮ್ಮಿದರೆ ನನ್ನ ಹತ್ತಿರ ಬನ್ನಿ ಅಂತಾ ಅನ್ನುತ್ತಾ ಹೋಗಿ ಬರುವ ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನುಂಟು ಮಾಡುತ್ತಾ ಜಾತ್ರೆಯಲ್ಲಿ ಗುಂಡಾ ಗೀರಿ ಪ್ರದರ್ಶನ ಮಾಡುತ್ತಾ ಹೋಗಿ ಬರುವ ಭಕ್ತರೊಂದಿಗೆ ಕಿರಕಿರಿ ಮಾಡುತ್ತಿದ್ದು ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಜಾತ್ರೆಯಲ್ಲಿ ಗಲಾಟೆ ಮಾಡಿ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಕಂಡು ಬಂದಿದ್ದರಿಂದ ಸದರಿಯವನನ್ನು ಸ್ಥಳದಲ್ಲಿಯೇ ವಶಕ್ಕೆ ತಗೆದುಕೊಂಡು ಠಾಣೆಗೆ ತಂದಿದ್ದು ಇರುತ್ತದೆ. ಸದರಿಯವನು ಸಾರ್ವಜನಿಕರ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಕಂಡು ಬಂದ್ದಿದ್ದರಿಂದ ಅವನ ವಿರುದ್ಧ ಮುಂಜಕಾಗೃತಾ ಕ್ರಮದ ಅಡಿಯಲ್ಲಿ ಕ್ರಮ ಜರೂಗಿಸುವ ಕುರಿತು ಸರಕಾರದ ತಪರ್ೆಯಾಗಿ ಠಾಣೆ ಪಿ.ಎ.ಆರ್ ನಂ. 04/2020 ಕಲಂ 110 (ಇ)&(ಜಿ) ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿ ಭಂದನ ಕ್ರಮ ಜರುಗಿಸಿದ್ದು, ಈ ವರದಿಯನ್ನು ನಿವೇಧಿಸಿಕೊಂಡಿದ್ದು ಇರುತ್ತದೆ

ಭೀಗುಡಿ ಠಾಣೆ ಗುನ್ನೆ ನಂ:- 10/2020 ಕಲಂ 78[3] ಕೆಪಿ ಯ್ಯಾಕ್ಟ:- ಇಂದು ದಿನಾಂಕ 06/02/2020 ರಂದು 6.40 ಪಿ.ಎಮ್ ಕ್ಕೆ ದಿಗ್ಗಿ ಗ್ರಾಮದ ಹಣಮಂತ ದೇವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಮಲ್ಲಣ್ಣ ಈತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ, ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ 1) ನಗದು ಹಣ ರೂಪಾಯಿ 6300=00, 2) ಒಂದು ಮಟಕಾ ನಂಬರ ಬರೆದ ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 6.50 ಪಿಎಮ್ ದಿಂದ 7.50 ಪಿಎಮ್ ಅವಧಿಯವರೆಗೆ ಜಪ್ತಿಪಡಿಸಿಕೊಂಡು 8.15 ಪಿ.ಎಮ್ ಕ್ಕೆ ಠಾಣೆಗೆ ಬಂದು ವರದಿ ತಯಾರಿಸಿ ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 9.30 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ 10/2020 ಕಲಂ 78[3] ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 11/2020 ಕಲಂ 32, 34 ಕೆ.ಇ ಎಕ್ಟ್:- ಇಂದು ದಿನಾಂಕ: 06/02/2020 ರಂದು 8-45 ಪಿ.ಎಮ್ ಕ್ಕೆ ಆರೋಪಿತನು ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಹೋತಪೇಟ ನಡುವಿನ ತಾಂಡಾದಲ್ಲಿ ತನ್ನ ಚಹಾದ ಹೋಟಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು, ದಾಳಿ ಸಮಯದಲ್ಲಿ ಆರೋಪಿತನು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ 90 ಎಮ್ಎಲ್ ನ 45 ಓರಿಜಿನಲ್ ಚಾಯ್ಸ್ ವಿಸ್ಕಿಯ ಪೌಚಗಳು ಅ.ಕಿ. 1350/- ಜಪ್ತಿಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!