ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/02/2020

By blogger on ಬುಧವಾರ, ಫೆಬ್ರವರಿ 5, 2020

                   
                                   ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/02/2020

ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ.17/2020 ಕಲಂ 392 ಐಪಿಸಿ:-ಫಿಯರ್ಾದಿ ಸಾರಾಂಂಶವೇನೆಂದರೆ, ಸುಮಾರು ದಿವಸಗಳಿಂದ ನಾನು ನಮ್ಮೂರಿನ ನಮ್ಮ ಜನಾಂಗದ ಆಷಿಪ್ ಈತನ ಲಾರಿ ನಂ ಕೆ.ಎ 56-6640, ನೇದ್ದರ ಮೇಲೆ ಚಾಲಕನಾಗಿ ಕೆಲಸ ಮಾಡಿಕೊಂಡು ಇದ್ದೇನೆ. ನಮ್ಮ ಲಾರಿಯ ಮೇಲೆ ನಮ್ಮೂರಿನ ಅಸನ್ ತಂದೆ ನದಾಫ್ ಈತನು ಕ್ಲಿನ್ನರ ಅಂತಾ ಕೆಲಸ ಮಾಡಿಕೊಂಡು ಇದ್ದಾನೆ. ಹೀಗಿದ್ದು, ನಾನು ಹಾಗೂ ಕ್ಲಿನ್ನರ್ ಇಬ್ಬರು ಕೂಡಿ ದಿನಾಂಕ 26/01/2020 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ, ಸದರಿ ಲಾರಿಯಲ್ಲಿ ರಾಯಚೂರದಿಂದ ಅಕ್ಕಿ ಲೋಡ್ ಮಾಡಿಕೊಂಡು, ಯಾದಗಿರಿ ಮಾರ್ಗವಾಗಿ, ಬಾಂಬೆಗೆ ಹೋಗುವಾಗ, ಯಾದಗಿರಿ-ವಾಡಿ ರೋಡಿನ ಮೇಲೆ ಡಾನ್ ಬಾಸ್ಕೋ ಶಾಲೆಯ ಹತ್ತಿರ ಯಾರೋ ಇಬ್ಬರು ಮೋಟರ್ ಸೈಕಲ್ ಮೇಲೆ ನಮ್ಮ ಹಿಂದಿನಿಂದ ಬಂದು, ನಮ್ಮ ಲಾರಿಗೆ ಕೈ ಮಾಡಿ ನಿಲ್ಲಿಸಿ, ಮೋಟರ್ ಸೈಕಲ್ ಅಡ್ಡವಾಗಿ ನಿಲ್ಲಿಸಿದರು. ಅವರು ನಮಗೆ ವಿನಾ ಕಾರಣ ಲೇ ಸೋಳೆ ಮಗನೆ ಡ್ರೈವರ್ ಯಾದಗಿರಿ ಸಿ.ಟಿಯಲ್ಲಿ ನಿನ್ನ ಲಾರಿ ನನ್ನ ಮೋಟರ್ ಸೈಕಲ್ಗೆ ಡಿಕ್ಕಿ ಮಾಡಿ ಹಾಗೆಯೇ ನಿಲ್ಲಿಸದೆ ಬಂದೆಯ ಮಗನೇ ಅಂತಾ ಅಂದರು. ಆಗ ನಾವು ಯಾವುದೇ ಗಾಡಿಗೆ ನಾವು ಡಿಕ್ಕಿ ಪಡಿಸಿಲ್ಲ ಅಂತಾ ಅಂದರೂ ಕೇಳದೆ ನನಗೆ ಹಾಗೂ ನಮ್ಮ ಕ್ಲಿನ್ನರ್ ಅಸನ್ ತಂದೆ ನದಾಫ್ ಈತನಿಗೆ ಕೈಯಿಂದ ಕಪಾಳಕ್ಕೆ, ಒಂದೆರಡು ಏಟು ಹೊಡೆದು, ಜೇಬಿಗೆ ಕೈ ನನ್ನ ಹತ್ತಿರ ಇದ್ದ ಲಾರಿ ಬಾಡಿಗೆಯ ಹಣ 14,000/ ರೂ|| ಗಳನ್ನು ಕಸೆದುಕೊಂಡು ಹೋದರು. ನಮ್ಮ ಲಾರಿಯ ಬೆಳಕಿನಲ್ಲಿ ಅವರ ಮೋಟರ್ ಸೈಕಲ್ ನೋಡಲಾಗಿ ಎಫ್.ಜೆಡ್ ಕಂಪನಿಯ ಮೋಟರ್ ಸೈಕಲ್ ಇದ್ದು, ಅದರ ನಂ- ಟಿ.ಎಸ್ 09 ಇಹೆಚ್ 8995, ಅಂತಾ ಇತ್ತು. ಅವರಿಬ್ಬರು ಸುಮಾರು 25 ರಿಂದ 30 ವರ್ಷದವರಿದ್ದು, ಪ್ಯಾಂಟ್ ಶಟರ್್ ಧಿರಿಸಿದ್ದರು. ಮುಂದೆ ಅವರನ್ನು ನೋಡಿದಲ್ಲಿ ನಾನು ಗುತರ್ಿಸುತ್ತೇನೆ. ಇಲ್ಲಿ ನಡೆದ ಘಟನೆಯ ಬಗ್ಗೆ ನಾವು ಯಾದಗಿರಿ ಕಂಟ್ರೋಲ್ ರೂಮ್ ಹಾಗೂ ನಮ್ಮ ಮಾಲಿಕನಿಗೆ ಪೋನ್ ಮಾಡಿ ವಿಷಯ ತಿಳಿಸಿದೆವು. ಆಗ ಅವರು ಆಯಿತು, ಮೊದಲು ನೀವು ಅರ್ಜಂಟ್ ಆಗಿ ಬಾಂಬೆಗೆ ಹೋಗಿ ಮಾಲು ಡೆಲಿವರಿ ಮಾಡಿರಿ, ಮುಂದೆ ಈ ಬಗ್ಗೆ ನೋಡೋಣ ಅಂತಾ ಅಂದಿದ್ದರಿಂದ ನಾವು ಬಾಂಬೆಗೆ ಹೋಗಿ ಲಾರಿ ಅನ್ ಲೋಡ್ ಮಾಡಿ, ಅಲ್ಲಿಂದ ಮತ್ತೆ ಹೈದ್ರಬಾದಗೆ ಲೋಡ್ ಮಾಡಿಕೊಂಡು ಹೋಗಿ, ಅನ್ ಲೋಡ್ ಮಾಡಿ, ರಾಯಚೂರಿಗೆ ಬಂದು ಅಕ್ಕಿ ಲೋಡ್ ಮಾಡಿಕೊಂಡು ಇಂದು ಬಾಂಬೆಗೆ ಹೋಗುವಾಗ ಯಾದಗಿರಿ ನಗರ ಠಾಣೆಗೆ ಬಂದು ದೂರು ನೀಡುತ್ತಿದ್ದು ಇರುತ್ತದೆ. ಲಾರಿ ಲೋಡ್ ಹಾಗೂ ಅನ್ ಮಾಡಿಕೊಂಡು ಠಾಣೆಗೆ ಬಂದು ದೂರು ನೀಡುವಲ್ಲಿ ತಡವಾಗಿರುತ್ತದೆ. ನಮಗೆ ಹೊಡೆ ಬಡೆ ಮಾಡಿ, ನನ್ನ ಹತ್ತಿರ ಇದ್ದ ಹಣ ಕಸೆದುಕೊಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಹೇಳಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಹೇಳಿಕೆ ನಿಜವಿದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 17/2020 ಕಲಂ 392 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 10/2020 ಕಲಂ: 279,337,338 ಐಪಿಸಿ:- ಇಂದು ದಿನಾಂಕ: 05/02/2020 ರಂದು 5 ಪಿಎಮ್ ಕ್ಕೆ ಶ್ರೀ ದೇವಪ್ಪ ತಂದೆ ಮಾಹದೇವಪ್ಪ ಅಗಸಿಮುಂದಿನ, ವ:32, ಜಾ:ಕಬ್ಬಲಿಗ, ಉ:ಕೂಲಿ ಸಾ:ಹಂದರಕಿ ತಾ:ಸೇಡಂ, ಜಿ:ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದೇನಂದರೆ ಯಾದಗಿರಿ ಜಿಲ್ಲೆಯ ಶೋರಾಪೂರ ತಾಲೂಕಿನ ತಿಂಥಿಣಿ ಗ್ರಾಮದ ಮೌನೇಶ್ವರರ ಜಾತ್ರೆ ಇದ್ದುದ್ದರಿಂದ ನಿನ್ನೆ ದಿನಾಂಕ: 04/02/2020 ರಂದು ಬೆಳಗ್ಗೆ ನಮ್ಮೂರಿನಿಂದ ಎಲ್ಲಾ ಭಕ್ತಾಧಿಗಳು ನಡೆದುಕೊಂಡು ಪಾದಯಾತ್ರೆ ಮೂಲಕ ತಿಂಥಿಣಿಗೆ ಹೊರಟಿದ್ದರು. ಅವರೊಂದಿಗೆ ನಾನು ಮತ್ತು ಕಾಶಪ್ಪ ತಂದೆ ತಿಪ್ಪಣ್ಣ, ಯಲ್ಲಪ್ಪ ತಂದೆ ಭೀಮಣ್ಣ ಹಾಗೂ ದಾನಪ್ಪ ತಂದೆ ದೇವಿಂದ್ರಪ್ಪ ಮತ್ತು ಇತರರು ಕೂಡಿ ಬೆಳಗ್ಗೆ 7 ಗಂಟೆಗೆ ನಮ್ಮೂರಿನಿಂದ ತಿಂಥಿಣಿಗೆ ಪಾದಯಾತ್ರೆ ಹೊರಟೆವು. ನಾವು ಪಾದಯಾತ್ರೆ ಮಾಡುತ್ತಾ ಶಹಾಪೂರ ತಾಲೂಕಿನ ಖಾನಾಪೂರ ಗ್ರಾಮದ ಹತ್ತಿರ ಯಾದಗಿರಿ-ಶಹಾಪೂರ ಮೇನ ರೋಡ ಖಾನಾಪೂರ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ರೋಡಿನ ಎಡಬಾಜುದಲ್ಲಿ ನಾವು ಪಾದಯಾತ್ರಿಗಳು ನಡೆದುಕೊಂಡು ಹೊರಟಿದ್ದು, ಎಲ್ಲರೂ ಸ್ವಲ್ಪ ಮುಂದೆ ಹೋಗುತ್ತಿದ್ದರು. ನಾನು ಮತ್ತು ಕಾಶಪ್ಪ ಇಬ್ಬರೂ ಸ್ವಲ್ಪ ಹಿಂದುಗಡೆ ನಡೆದುಕೊಂಡು ಹೊರಟಿದ್ದೆವು. ಸಾಯಂಕಾಲ 7-20 ಗಂಟೆ ಸುಮಾರಿಗೆ ಶರಣಬಸಪ್ಪ ತಂದೆ ಸುಭಾಶ ಉಪ್ಪಾರ ಸಾ:ಖಾನಾಪೂರ ಈತನು ತನ್ನ ಮೋಟರ್ ಸೈಕಲ್ ನಂ. ಕೆಎ 33 ಎಸ್ 4224 ನೇದ್ದನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನಗೆ ಮತ್ತು ಕಾಶಪ್ಪನಿಗೆ ಹಿಂದಿನಿಂದ ಡಿಕ್ಕಿಪಡಿಸಿದಾಗ ನಾವು ಕೆಳಗಡೆ ಬಿದ್ದೇವು. ಮೋಟರ್ ಸೈಕಲ್ ಸವಾರನು ಸಿಡಿದು ರೋಡಿನ ಮೇಲೆ ಬಿದ್ದನು. ಅಪಘಾತದಲ್ಲಿ ನನಗೆ ಟೊಂಕಕ್ಕೆ ಮತ್ತು ಬಲಗಾಲಿಗೆ ಒಳಪೆಟ್ಟಾಗಿತ್ತು. ಕಾಶಪ್ಪನಿಗೆ ಎಡಗಾಲಿಗೆ ಭಾರಿ ಗಾಯವಾಗಿ ಎಲುಬು ಮುರಿದಿತ್ತು. ಬಲ ಮೊಣಕಾಲಿಗೆ ಮತ್ತು ತೆಲೆಗೆ ಅಲ್ಲಲ್ಲಿ ಪೆಟ್ಟುಗಳಾಗಿದ್ದವು. ಶರಣಬಸಪ್ಪನಿಗೂ ಕೂಡಾ ತೆಲೆಗೆ ಮತ್ತು ಅಲ್ಲಲ್ಲಿ ಭಾರಿ ರಕ್ತಗಾಯಗಳಾಗಿದ್ದವು. ಸಂಗಡ ಇದ್ದ ಯಲ್ಲಪ್ಪ ಮತ್ತು ದಾನಪ್ಪ ಇವರು ನಮಗೆ ನೋಡಿ 108 ಅಂಬ್ಯುಲೇನ್ಸಗೆ ಫೋನ ಮಾಡಿ ಕರೆಸಿ, ನಮಗೆ ಗಾಯಾಳುಗಳಿಗೆ ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದರು. ಕಾಶಪ್ಪ ಮತ್ತು ಶರಣಬಸಪ್ಪನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋದರು. ನಾನು ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆದಿರುತ್ತೇನೆ. ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಡಿದಾಗ ವಡಗೇರಾ ಪೊಲೀಸರು ವಿಚಾರಣೆ ಮಾಡಲು ಬಂದಾಗ ನಾವು ನಮ್ಮ ಹಿರಿಯರಿಗೆ ವಿಚಾರ ಮಾಡಿ ದೂರು ಕೊಡುವುದಿದ್ದರೆ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತೆವೆ ಎಂದು ತಿಳಿಸಿರುತ್ತೇವೆ. ಈಗ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಅವರು ಪೊಲೀಸ್ ಕೇಸ ಮಾಡು ಎಂದು ಹೇಳಿದ್ದರಿಂದ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಮೋಟರ್ ಸೈಕಲ್ ನಂ. ಕೆಎ 33 ಎಸ್ 4224 ನೇದ್ದರ ಸವಾರ ಶರಣಬಸ್ಸಪ್ಪ ಈತನು ತನ್ನ ಮೋಟರ್ ಸೈಕಲ್ನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮಗೆ ಹಿಂದಿನಿಂದ ಡಿಕ್ಕಿಪಡಿಸಿ ಭಾರಿ ಗಾಯಗೊಳಿಸಿ, ತಾನು ಭಾರಿ ಗಾಯಗೊಂಡಿರುತ್ತಾನೆ. ಆದ್ದರಿಂದ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 10/2020 ಕಲಂ: 279,337,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.  

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 11/2020 ಕಲಂ: 379 ಐಪಿಸಿ:- ಇಂದು ದಿನಾಂಕ: 05/02/2020 ರಂದು 5-30 ಪಿಎಮ್ ಕ್ಕೆ ಶ್ರೀ ಸಂಜೀವ ಕಂದಾಯ ನಿರೀಕ್ಷಕರು ವಡಗೇರಾ ರವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ಮಾನ್ಯ ತಹಸಿಲ್ದಾರರು, ವಡಗೇರಾ ರವರಾದ ಶ್ರೀ ಸುರೇಶ ಅಂಕಲಗಿ  ಹಾಗೂ ಗ್ರಾಮ ಲೇಖಪಾಲಕರಾದ ಸಿದ್ದನಗೌಡ ಹಾಗೂ ಗ್ರಾಮ ಸಹಾಯಕ ಮಲ್ಲೇಶಿ ವಾಲಿಕಾರ ಇವರ ಜೊತೆಗೂಡಿ ಇಂದು ದಿನಾಂಕ: 05/02/2020 ರಂದು 10:30 ಗಂಟೆಯ ಸುಮಾರು ಯಾದಗಿರಿಯಿಂದ ವಡಗೇರಾ ಕ್ಕೆ ಬರುತ್ತಿರುವಾಗ ಗಡ್ಡೆಸೂಗೂರು ಹತ್ತಿರ ಒಂದು ಟಿಪ್ಪರ್ ನಂ. ಕೆಎ-36 ಬಿ-5649 ಬರುತ್ತಿದ್ದನ್ನು ನೋಡಿ ತಡೆಹಿಡಿದು ಪರಿಶೀಲಿಸಲಾಗಿ ಟಿಪ್ಪರ್ ಚಾಲಕನು ಸ್ಥಳದಿಂದ ಓಡಿ ಹೋಗಿದ್ದು ಟಿಪ್ಪರ್ ದಲ್ಲಿ ಮರಳು ತುಂಬಿದ್ದು ಕಂಡು ಬಂದಿದ್ದು ಅದಕ್ಕೆ ಸಂಬಂಧಪಟ್ಟ ರಾಜಧನ ಹಣ ಭರಿಸದೆ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿರುವುದು ತಿಳಿದು ಬಂದಿದ್ದರಿಂದ ಸದರಿ ಟಿಪ್ಪರ್ ಅನ್ನು ಮಾನ್ಯ ತಹಸಿಲ್ದಾರ ರವರು ನಮಗೆ ವಡಗೇರಾ ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸಿ ಎಂದು ಆದೇಶಿಸಿದ್ದರಿಂದ ವಡಗೇರಾ ಠಾಣೆಯ ಪ್ರಕಾಶ ಹೆಚ್.ಸಿ ರವರು ಮತ್ತು ನಾವು ಸದರಿ ಟಿಪ್ಪರ್ ಅನ್ನು ಪೊಲೀಸ್ ಠಾಣೆಗೆ ತಂದಿದ್ದು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಈ ಮೂಲಕ ವಿನಂತಿ ಇರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 11/2020 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ  ಪೊಲೀಸ್ ಠಾಣೆ ಗುನ್ನೆ ನಂ:- 26/2020 ಕಲಂ: 143,147,148,323,324,504,506 ಸಂಗಡ 149 ಐಪಿಸಿ  :- ಇಂದು ದಿನಾಂಕ 05/02/2020 ರಂದು ಫಿಯರ್ಾದಿ ಅಜರ್ಿದಾರರಾದ ಶ್ರೀ ವಿಜಯಕುಮಾರ ತಂದೆ ತಿರುಪತಿ ಚವ್ಹಾಣ ವ:38 ವರ್ಷ, ಜಾ:ಲಮಾಣಿ ಉ:ಕೂಲಿ, ಸಾ||ಮುದನೂರ ತಾಂಡಾ ತಾ||ಹುಣಸಗಿ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ಮೊನ್ನೆ ದಿನಾಂಕ:03/02/2020 ರಂದು ನಮ್ಮ ಹುಡುಗರು ಹಾಗು ಸಿದ್ರಾಮ ಚವ್ಹಾಣ ಇವರ ಮಕ್ಕಳು ಜಗಳಾ ಮಾಡಿದ್ದರಿಂದ ನನ್ನ  ಹಾಗು ಸಿದ್ರಾಮ ಚವ್ಹಾಣ  ಇವರ ಮದ್ಯ ಬಾಯಿಮಾತಿನ ತಕರಾರು ಆಗಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 05/02/2020 ರಂದು ಬೆಳಿಗ್ಗೆ 6 ಗಂಟೆಗೆ ನಾನು ಸಿದ್ರಾಮ ತಂದೆ ಲಕ್ಷ್ಮಣ ಚವ್ಹಾಣ ಇವರ ಮನೆಗೆ ಹೋಗಿ ನನ್ನ ಬಗ್ಗೆ ಜನರ ಮುಂದೆ ಏಕೇ ಮಾತನಾಡುತ್ತೀ ಅಂತ ಕೇಳಿದಾಗ ಅವರ ಮನೆಯಲ್ಲಿದ್ದ ನಮ್ಮ ತಾಂಡಾದ 1] ಲಕ್ಷ್ಮಣ ತಂದೆ ಲಕ್ಕಪ್ಪ ಚವ್ಹಾಣ 2] ಸಿದ್ರಾಮ ತಂದೆ ಲಕ್ಷ್ಮಣ ಚವ್ಹಾಣ 3] ಸೋಮಿಬಾಯಿ ಗಂಡ ಮಹಾಂತೇಶ ಚವ್ಹಾಣ 4] ಮಂಗಲಾಬಾಯಿ ಗಂಡ ಶಿವು ಚವ್ಹಾಣ 5] ಪವಿತ್ರಾ ಗಂಡ ಸಿದ್ರಾಮ ಚವ್ಹಾಣ 6] ಗೀತಾ ಗಂಡ ಶಂಕ್ರು ಚವ್ಹಾಣ 7] ತಾರಾಬಾಯಿ ಗಂಡ ಥಾವರು ಚವ್ಹಾಣ 8] ದಾನಾಬಾಯಿ ಗಂಡ ಲಕ್ಷ್ಮಣ ಚವ್ಹಾಣ 9] ಥಾವರಪ್ಪ ತಂದೆ ಲಕ್ಕಪ್ಪ ಚವ್ಹಾಣ ಸಾ|| ಎಲ್ಲರೂ ಮುದನೂರ ತಾಂಡಾ ಈ ಎಲ್ಲಾ ಜನರು ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ಗುಂಪು ಕಟ್ಟಿಕೊಂಡು ಬಂದವರೆ ಏನಲೇ ಮಗನೇ ನಮ್ಮ ಮನೆಗೆ ನಮಗೆ ಭಯ ಹಾಕುತ್ತೀಯಾ ಸೂಳೇ ಮಗನೇ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಸಿದ್ರಾಮ ಈತನು ಈ ಸೂಳೇ ಮಗನ ಸೊಕ್ಕು ಬಹಾಳ ಆಗಿದೆ ಅಂತ ಅನ್ನುತ್ತಾ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಹಣೆಗೆ ಹೊಡೆದು ರಕ್ತಗಾಯ ಹಾಗು ಬಲಗಾಲ ತೊಡೆಗೆ ಹೊಡೆದು ಗುಪ್ತಗಾಯ ಪಡಿಸಿದನು. ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ನನ್ನ ಹೆಂಡತಿ ಲಕ್ಷ್ಮೀಬಾಯಿ ಇವಳು ಬಿಡಿಸಿಕೊಳ್ಳಲು ಮದ್ಯ ಬಂದಾಗ ಅವಳಿಗೂ ಸಹ ಪವಿತ್ರಾ ಇವಳು ಕಲ್ಲಿನಿಂದ ಬೆನ್ನಿಗೆ ಗುದ್ದಿ ಗುಪ್ತಗಾಯ ಪಡಿಸಿದಳು. ನಂತರ ನಾವಿಬ್ಬರೂ ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ನಮ್ಮ ಅಣ್ಣ ತಮ್ಮಂದಿರಾದ ಸಿದ್ರಾಮ ಚವ್ಹಾಣ, ಬಾಬು ಚವ್ಹಾಣ ಹಾಗು ರಡ್ಡಿ ಚವ್ಹಾಣ ಇವರು ಬಿಡಿಸಲು ಬಂದಾಗ ತಮ್ಮ ಸಿದ್ರಾಮ ಈತನಿಗೆ ಥಾವರಪ್ಪ ಈತನು ಬಡಿಗೆಯಿಂದ ಎಡಗೈಗೆ ಹೊಡೆದು ಗುಪ್ತಗಾಯ ಪಡಿಸಿದನು. ನಂತರ ಸದರಿಯವರೆಲ್ಲರೂ ಹೊಡೆಯುವದನ್ನು ಬಿಟ್ಟು ಮಗನೇ ಇನ್ನು ಮುಂದೆ ನಮ್ಮ ಮನೆಯ ಕಡೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋಗಿದ್ದು ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 26/2020 ಕಲಂ 143,147,148,323,324,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 27/2020 ಕಲಂ: 279,337,338 ಐ.ಪಿ.ಸಿ  :- ಇಂದು ದಿನಾಂಕ 05.02.2020 ರಂದು 03.00 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀ ಸಿದ್ದಣಗೌಡ ತಂದೆ ಯಂಕಣಗೌಡ ಮಾಲಿ ಪಾಟೀಲ ವ|| 60 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಮಾಳಹಳ್ಳಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ  ಅಜರ್ಿ ಸಾರಾಂಶವೆನೆಂದರೆ ಸುರಪೂರದಲ್ಲಿ ಕೆಲಸವಿದ್ದ ನಿಮಿತ್ಯ ನಾನು ಹಾಗು ನನ್ನ ಮಗ ಯಂಕಣಗೌಡ ತಂದೆ ಸಿದ್ದಣಗೌಡ ಮಾಲಿ ಪಾಟೀಲ ಇಬ್ಬರೂ ಕೂಡಿಕೊಂಡು ಇಂದು ದಿನಾಂಕ 05/02/2020 ರಂದು 10.30 ಎಎಮ್ ಸುಮಾರಿಗೆ ನಮ್ಮ ಮೋಟರ ಸೈಕಲ ನಂಬರ ಕೆಎ-34 ಇಎ-1079 ನೇದ್ದರಲ್ಲಿ ಸುರಪೂರಕ್ಕೆ ಹೋಗುವ ಕುರಿತು ಹೆಗ್ಗಣದೊಡ್ಡಿ ಕ್ರಾಸ ಹತ್ತಿರ ಹೋಗುತ್ತಿದ್ದಾಗ ಎದುರಿನಿಂದ ಒಂದು ಲಾರಿ ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟರ್ ಸೈಕಲಗೆ ಬಲವಾಗಿ ಡಿಕ್ಕಿಪಡಿಸಿದ್ದು ನಾನು ಹಾಗು ಮಗ ಯಂಕಣಗೌಡ ಇಬ್ಬರೂ ಮೋಟರ್ ಸೈಕಲ ಸಮೇತ ಕೆಳಗೆ ಬಿದ್ದಿದ್ದು ನನಗೆ ಬಲ ಕಪಾಳಕ್ಕೆ ತರಚಿದ ರಕ್ತಗಾಯವಾಗಿ ಬಲಗಾಲ ತೊಡೆಯಲ್ಲಿ ಭಾರೀ ಗುಪ್ತಗಾಯವಾಗಿ ಕಾಲು ಮುರಿದಂತಾಗಿರುತ್ತದೆ. ಅಲ್ಲದೇ ಮಗ ಯಂಕನಗೌಡ ಈತನಿಗೂ ಸಹ ಬಲಗಾಲ ಮೊಳಕಾಲಿಗೆ ತರಚಿದ ಗಾಯವಾಗಿ ಬಲಗಣ್ಣಿನ ಹುಬ್ಬಿನ ಹತ್ತಿರ ಗುಪ್ತಗಾಯವಾಗಿರುತ್ತದೆ. ನಂತರ ನಮಗೆ ಅಪಘಾತ ಪಡಿಸಿದ ಲಾರಿ ನಂಬರ ನೋಡಲಾಗಿ ಟಿಎಸ್-07 ಯುಜಿ-3335 ಅಂತ ಇದ್ದು ಅಲ್ಲಿಯೇ ಇದ್ದ ಚಾಲಕನಿಗೆ ವಿಚಾರಿಸಲು ಆತನ ತನ್ನ ಹೆಸರು ಭಿಕ್ಷಾಪತಿ ತಂದೆ ರಾಮಲು ಸಾ: ಕೊಂಡಬಿಮನಪಲ್ಲಿ ತೆಲಂಗಾಣ ರಾಜ್ಯ ಅಂತಾ ತಿಳಿಸಿದ್ದು ಇರುತ್ತದೆ. ನಂತರ ಉಪಚಾರ ಕುರಿತು ಕೆಂಭಾವಿ ಆಸ್ಪತ್ರೆಗೆ ಬಂದು ಉಪಚಾರ ಪಡೆದುಕೊಂಡು ಹೆಚ್ಚಿನ ಉಪಚಾರ ಕುರಿತು ಬಾಗಲಕೊಟ ಪಟ್ಟೆದ ಆಸ್ಪತ್ರೆಗೆ ಹೊಗುತ್ತಿದ್ದು ಕಾರಣ ನಮಗೆ ಅಪಘಾತಕ್ಕೆ ಲಾರಿ ನಂಬರ. ಟಿಎಸ್/07-ಯು.ಜಿ-3335 ನೇದ್ದರ ಚಾಲಕ ಭಿಕ್ಷಾಪತಿ ತಂದೆ ರಾಮಲು ಈತನ ಅತೀವೇಗ ಮತ್ತು ಅಲಕ್ಷತನ ಚಾಲನಯೇ ಕಾರವಿದ್ದು ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 27/2020 ಕಲಂ 279.337.338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ನಾರಾಯಣಪೂರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 05/2020 ಕಲಂ: 379 ಐಪಿಸಿ :- ಇಂದು ದಿನಾಂಕ 05/02/2020 ರಂದು 11:00 ಎ.ಎಂ.ಕ್ಕೆ  ಪಿಯರ್ಾದಿ ಸಂಜೀವಪ್ಪ ತಂದೆ ಹುಲಗಪ್ಪ ಹುಲಿಕೇರಿ ವ:28 ವರ್ಷ ಉ:ಒಕ್ಕಲುತನ ಜಾ:ಹಿಂದು ಬೇಡರ ಸಾ:ನಾರಾಯಣಪೂರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆನೆಂದರೆ ದಿನಾಂಕ 30/01/2020 ರ 8:00 ಪಿ.ಎಂ.ದಿಂದ 8:30 ಪಿ.ಎಂ ದ ಮದ್ಯದ ಅವದಿಯಲ್ಲಿ  ಪಿಯರ್ಾದಿದಾರರು ನಾರಾಯಣಪೂರ ಸೀಮಾಂತರದಲ್ಲಿಯ ತಮ್ಮ ಹೊಲ ಸವರ್ೆ ನಂ 104 ರಲ್ಲಿ ಇರುವ  ಜನತಾ ಮನೆಯ ಮುಂದಿನ ಜಾಗೆಯಲ್ಲಿ ನಿಲ್ಲಿಸಿದ ತಮ್ಮ ಸ್ಪೆಲಂಡರ ಪ್ಲಸ್ ಮೋಟರ ಸೈಕಲ್ ನಂ ಕೆ.ಎ.33 ವಾಯ-3578.ಅ.ಕಿ 46000/-  ರೂ ನೇದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋದ ಬಗ್ಗೆ ಪಿಯರ್ಾದಿ.  

ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ:- 04/2020 ಕಲಂ: 323, 324 504, 506, 354 ಸಹ ಕಲಂ: 149 ಐ.ಪಿ.ಸಿ:- ಇಂದು ದಿನಾಂಕ: 05.02.2020 ರಂದು ಸಂಜೆ 5.30 ಗಂಟೆ ಸುಮಾರಿಗೆ ಶ್ರೀಮತಿ ಲಕ್ಷ್ಮಿ ಗಂಡ ಜಗನ್ನಾಥ ಗುಂಗುರಿ ,ವಯಾ-28 ಸಾ- ಮೈಲಾಪೂರ ಅಗಸಿ ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ಹಾಜರಪಡಿಸಿದ್ದು ಅದರ ಸಾರಂಶವೇನೆಂಧರೆ ನಮ್ಮ ಮನೆಯ ಸ್ವಲ್ಪ ದೂರದಲ್ಲಿ ಸಲೀಂ ತಂದೆ ಅಬ್ದುಲ್ ಗಪೂರ್ ಇವರ ಮನೆ  ಇದ್ದು ಪವಿತ್ರಾ ಗಂಡ ಸಲಿಂ ಈಕೆಯ ತಮ್ಮ ಆಗಾಗೆ ನಮ್ಮ ಮನೆಗೆ ಬಂದು ಬಾಗಿಲು ಬಡೆಯುವುದು , ಕಲ್ಲಿನಿಂದ ಹೊಡೆಯುವುದು ಮಾಡುತ್ತಿದ್ದನು ನಾವು ಚಿಕ್ಕ ಹುಡುಗ ಇದ್ದಾನೆ ಅಂತಾ ತಿಳಿದು ಸುಮ್ಮನಾಗಿದ್ದೇವು . ಈ ವಿಷಯವನ್ನು ಪವಿತ್ರಾ ಈಕೆಗೆ ನಿಮ್ಮ ತಮ್ಮ ಈ ರೀತಿ ನಮ್ಮ ಮನೆಯ ಮುಂದೆ ಬಂದು ವಿನಾಕಾರಣ ಬಾಗಿಲಿಗೆ ಹೊಡೆಯುವುದು ಕಲ್ಲು ಬಿಸುವುದು ಮಾಡುತ್ತಿದ್ದು ಅವನಿಗೆ ಸ್ವಲ್ಪ ಬುದ್ದಿ ಹೇಳಿ ಅಂದಿದ್ದಕ್ಕೆ ನನಗೆ ಪವಿತ್ರಾ , ಆಕೆಯ ಅತ್ತೆ ಅಂಜುಬಾಯಿ , ಅವಳ ತಾಯಿ ಶಾಂತಿಬಾಯಿ , ಇವರೆಲ್ಲರು ಕೂಡಿ ನನ್ನ ಜೊತೆ ಜಗಳ ಮಾಢಿ ಮನ ಬಂದಂತೆ ರಂಡಿ ಸೂಳಿ ಅಂತಾ ಅವಾಚ್ಯವಾಗಿ ಬೈದು ಇಲ್ಲಿ ಜೀವನ ಮಾಡಬೇಕಾದರೆ ಇದೆಲ್ಲಾ ಸಹಿಸಿಕೊಂಡು ಹೋಗಬೇಕು ಅಂತಾ ದಬ್ಬಾಳಿಕೆ ಮಾಡಿರುತ್ತಾರೆ.
          ಹೀಗಿದ್ದು ದಿನಾಂಕ 26/12/2019 ರಂದು ನಾನು ಮನೆಯಲ್ಲಿದ್ದಾಗ ಸಾಯಂಕಾಲ 4-30 ಗಂಟೆಗೆ ಪವಿತ್ರಾ ಈಕೆಯ ತಮ್ಮ ಮತ್ತೆ ಪುನ: ನಮ್ಮ ಮನೆಯ ಹತ್ತಿರ ಬಂದು ಕಲ್ಲಿನಿಂದ ಕಿಟಕಿಗೆ ಭಾಗಿಲಿಗೆ ಹೊಡೆಯುತ್ತಿದ್ದನು ಹಿಂಗ್ಯಾಕೆ ಮಾಡುತ್ತಿ ಅಂತಾ ಅವನಿಗೆ ನಾನು ಬೆದರಿಸಿ ಕಳಿಸಿದಾಗ ಅವನು ಅಳುತ್ತಾ ಮನೆಗೆ ಹೋಗಿ ಅವನ ತಾಯಿ ಶಾಂತಿಬಾಯಿ , ಅಕ್ಕ ಪವಿತ್ರಾ ,ಚಂದ್ರಕಲಾ , ಅವರ ಮಾವ ಸಲಿಂ ಹಾಗು ಅತ್ತೆಯಾದ ಅಂಜುಬಾಯಿ ಇವರೆಲ್ಲರು ಕೂಡಿಕೊಂಡು ಏಕಾಎಕಿ ನಮ್ಮ ಮನೆಯ ಹತ್ತಿರ ಬಂದು ಏನಲ್ಲೇ ಸೂಳಿ ನಿಮ್ಮದು ಬಹಳ ಆಗ್ಯಾದ ಸುಮ್ಮ ಸುಮ್ಮನೆ ನಮ್ಮ ಮಗನಿಗೆ ಬದಲಾಮ ಮಾಡುತ್ತಿದ್ದಿ ಅಂತಾ ಜಗಳ ಮಾಢಿ ನಾವೋಂದು ತಾವೂಂದು ಅಂತಾ ಬಾಯಿ ಮಾತಿನ ಜಗಳ ಮಾಡುತ್ತಿದ್ದಾಗ ಪವಿತ್ರಾ ಗಂಡ ಸಲಿಂ ಈಕೆಯು ನನ್ನ ಕೈ ಒತ್ತಿಯಾಗಿ ಹಿಡಿದುಕೊಂಡಿದ್ದು ಆಕೆಯ ತಂಗಿ ಚಂದ್ರಕಲಾ ಈಕೆಯು ಕೈಮುಷ್ಠಿ ಮಾಡಿ ಬೆನ್ನಿಗೆ ಮತ್ತು ಹೊಟ್ಟಿಗೆ ಗುದ್ದಿರುತ್ತಾಳೆ . ಅಂಜುಬಾಯಿ ಮತ್ತು ಶಾಂತಿಬಾಯಿ ಇವರು ನನ್ನತಲೆ ಮೇಲೆ ಕೂದಲು ಹಿಡಿದು ಜಗ್ಗಾಡಿ ಕೆಳಗಡೆ ನೂಕಿಕೊಟ್ಟು ಕಾಲಿನಿಂದ ಒದ್ದಿರುತ್ತಾರೆ. ಮತ್ತು ಪವಿತ್ರಾ ಈಕೆಯು ನಳದ ಪೈಪಿನಿಂದ ನನ್ನ ಎರಡು ತೋಡೆ ಮೇಲೆ ಹೊಡೆದಿರುತ್ತಾಳೆ ಆಗ ಸಲಿಂ ತಂದೆ ಗಫೂರ ಈತನು ನನ್ನ ಹತ್ತಿರ ಬಂದು ಕೈಹಿಡಿದು ಜಗ್ಗಾಡಿ ಅಪಮಾನ ಮಾಡಿ ನೀವ ಇಲ್ಲಿ ಜೀವನ ಮಾಡಬೇಕಾದರೆ ನಾವು ಹೇಳಿದಂತೆ ಕೇಳಬೇಕು ಇಲ್ಲಾ ಅಂದರೆ ನಿಮಗೆ ಜೀವ ಸಮೇತ ಬಿಡಲ್ಲಾ ಇಲ್ಲಿಂದ ಓಡಿಸಿ ಕಳುಸುತ್ತೇವೆ.ಎಂದು ಜೀವದ ಬೆದರಿಕೆ ಹಾಕಿರುತ್ತಾನೆ. ನನಗೆ ಹೊಡೆಯುತ್ತಿದ್ದಾಗ ಅದೆ ಸಮಯಕ್ಕೆ ನನ್ನ ಗಂಡ ಜಗನ್ನಾಥ ಇವರು ಬಂದು ನೋಡಿ ಯಾಕೆ ಈ ರೀತಿ ಮಾಡುತ್ತಿದ್ದಿರಿ ಅಂತಾ ಕೇಳಿದಕ್ಕೆ ಎಲ್ಲರೂ ಕೂಡಿ ನನ್ನ ಗಂಡನಿಗೂ ಕೂಡಾ ಕೈಯಿಂದ ಹೊಡೆ ಬಡೆ ಮಾಡಿ ಸಲಿಂ ಈತನು ನಳದ ಪ್ಲಾಸ್ಟಿಕ ಪೈಪನಿಂದ ಎಡಕೈಗೆ ಮತ್ತು ಬೆನ್ನಿಗೆ ಹೊಡೆದಿರುತ್ತಾನೆ
ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 19/2020 ಕಲಂ 279, 338 ಐಪಿಸಿ:-ದಿನಾಂಕ 02/02/2020 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾಧಿಯು ತನ್ನ ಮಗಳಿಗೆ ಆರಾಮವಿಲ್ಲದ ಕಾರಣ ತನ್ನ ಮಗಳಾದ ಭಾಗ್ಯಶ್ರೀ ಇವಳನ್ನು ದವಾಖಾನೆಗೆ ತೋರಿಸಿಕೊಂಡು ಬರುವ ಕುರಿತು ಹೊರುಂಚಾ-ಅಲ್ಲಿಪೂರ ರೋಡಿನ ಮೇಲೆ ಬದ್ದುನಾಯಕ ಇವನ ಹೊಲದ ಹತ್ತಿರ ನಡೆದುಕೊಂಡು ಹೋಗುವಾಗ ಹಿಂದುಗಡೆಯಿಂದ ಆರೋಪಿತನು ತನ್ನ ಮೋಟಾರ ಸೈಕಲ್ ನಂ ಕೆ.ಎ-33-ವೈ-5150 ನೆದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಓಡಿಸಿಕೊಂಡು ಬಂದು ಫಿರ್ಯಾಧಿ ಮಗಳಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಫಿರ್ಯಾಧಿ ಮಗಳಿಗೆ ಭಾರಿ ರಕ್ತಗಾಯ, ಮತ್ತು ಭಾರಿ ಗುಪ್ತಗಾಯ ಆದ ಬಗ್ಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂಬರ 35/2020 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್:- ಇಂದು ದಿನಾಂಕ 05/02/2020 ರಂದು  ಮುಂಜಾನೆ 10-30 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ವೆಂಕಟೇಶ ಪೊಲೀಸ್ ಉಪ-ಅಧೀಕ್ಷಕರು, ಸುರಪೂರ ಉಪ ವಿಭಾಗ ರವರು, ಒಂದು ಮರಳು ತುಂಬಿದ ಲಾರಿ  ನಂ ಎಮ್.ಹೆಚ್.-24-ಎಪ್-9108 ನೇದ್ದು ಮತ್ತು ಅದರ ಚಾಲಕ ಹಾಗೂ ಮೂಲ ಜಪ್ತಿ ಪಂಚನಾಮೆಯೊಂದಿಗೆ ವರದಿ ಹಾಜರ ಪಡಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ಫಿಯರ್ಾದಿಯವರು ದಿನಾಂಕ 04/02/2020 ರಂದು ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸಿ ಇಂದು ದಿನಾಂಕ 05/02/2020 ರಂದು ಬೆಳಗಿನ  ಜಾವ 05-30 ಗಂಟೆಗೆ ಸುರಪೂರ ಪೊಲೀಸ್ ಉಪ ವಿಭಾಗದ ಕಾರ್ಯಲಯದಲ್ಲಿದ್ದಾಗ, ದೇವದುರ್ಗದಿಂದ- ಹತ್ತಿಗೂಡುರ ಕಡೆಗೆ ಒಂದು ಟಿಪ್ಪರದಲ್ಲಿ ಅಕ್ರಮವಾಗಿ ಮರಳು ಲೊಡ ಮಾಡಿಕೊಂಡು ಬರುತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ, ಉಪವಿಭಾಗದ ಕಾರ್ಯಲದಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಯವರಾದ ದೇವಿಂದ್ರಪ್ಪ ಪಿ.ಸಿ 184, ನಿಂಗಣ್ಣಗೌಡ ಪಿ.ಸಿ-365 ಮತ್ತು ಜೀಪ್ ಚಾಲಕ ಚಂದಪ್ಪಗೌಡ ಎ.ಪಿ.ಸಿ-143 ರವರಿಗೆ ಕಾಯಾಲಯಕ್ಕೆ ಕರೆಯಿಸಿಕೊಂಡು ಸದರಿಯವರಿಗೆ ವಿಷಯ ತಿಳಿಸಿ ದಾಳಿ ಕುರಿತು ಸರಕಾರಿ ಜೀಪ್ ನಂ ಕೆಎ-33-ಜಿ-0253 ನೇದ್ದರಲ್ಲಿ ಸುರಪೂರ ಉಪವಿಭಾಗದ ಕಾಯರ್ಾಲಯದಿಂದ ಮುಂಜಾನೆ 06-20 ಗಂಟೆಗೆ ತಮ್ಮ ಸಿಬ್ಬಂದಿಯವರೊಂದಿ ಹೊರಟು ಮುಂಜಾನೆ 07-00 ಗಂಟೆಗೆ  ಗಂಟೆಗೆ ದೇವದುರ್ಗ ಕ್ರಾಸ್ಗೆ ಬಂದಿದ್ದು. ಇಬ್ಬರೂ ಪಂಚರಾದ ಶ್ರೀ ಸಿದ್ರಾಮಪ್ಪ ತಂದೆ ಬಸಣ್ಣ ಅಂಗಡಿ ವಯ 37 ವರ್ಷ ಜಾತಿ ಲಿಂಗಾಯತ  ಉಃ ಖಾಸಗಿ ಕೆಲಸ ಸಾಃ ಹತ್ತಿಗೂಡುರ ತಾಃ ಶಹಾಪೂರ ಜಿಃ ಯಾದಗಿರಿ.ಶ್ರೀ ಲಿಂಗರಾಜ ತಂದೆ ಭೀಮರಾಯ ಬೇವಿನಹಳ್ಳಿ ವಯ 25 ವರ್ಷ ಜಾತಿ  ಲಿಂಗಾಯತ ಉಃ ಆಟೋ ಚಾಲಕ ಸಾಃ ಇಂದಿರಾ ನಗರ ಶಹಾಪೂರ ತಾಃ ಶಹಾಪೂರ ಜಿಃ ಯಾದಗಿರಿ ರವರ ಸಮಕ್ಷಮದಲ್ಲಿ ಮರಳು ತುಂಬಿಕೊಂಡು ಬರುತಿದ್ದ ವಾಹನಗಳನ್ನು ನಿಗಾ ಮಾಡುತ್ತಾ ನಿಂತಿದ್ದಾಗ, ಮುಂಜಾನೆ 08-00 ಗಂಟೆಗೆ ದೇವದುರ್ಗ ಕಡೆಯಿಂದ ಒಂದು ಲಾರಿ ನಂ ಎಮ್.ಹೆಚ್.-24-ಎಪ್-9108 ನೇದ್ದು ಬಂದಿದ್ದು ಸದರಿ ಲಾರಿಯಿಂದ ಕೆಳಗಡೆ ನೀರಿನ ಹನಿಗಳು ಬಿಳುತಿದ್ದರಿಂದ ಸಂಶಯ ಬಂದು  ಸದರಿ ವಾಹನವನ್ನು  ಕೈ ಮಾಡಿ ನಿಲ್ಲಿಸಿ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಿದ್ದು, ಸದರಿ ಲಾರಿಯಲ್ಲಿ ಲೋಡ ಇದ್ದ ಬಗ್ಗೆ ವಿಚಾರಿಸಿದಾಗ ಮರಳು ಇದೆ ಅಂತ ಹೇಳಿದ್ದು ಸದರಿ ಮರಳು ಸಾಗಿಸುತಿದ್ದ ಬಗ್ಗೆ ದಾಖಲಾತಿ ವಿಚಾರಿಸಿದ್ದು, ಸದರಿ ಚಾಲಕನು ತನ್ನ ವಾಹನ ಮಾಲಿಕ ಸಂತೋಷ ತಂದೆ ಶರಣಪ್ಪ ಹಜಾರೆ ಸಾಃಬೀದರ ಇವರು ಹೇಳಿದಂತೆ ಕೃಷ್ಣಾ ನದಿಯ ಸೀಮಾಂತರದಿಂದ ಮರಳು ಸಾಗಾಣಿಕೆ ಪರವಾನಿಗೆ ಪತ್ರ  ಹೊಂದದೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತಿದ್ದೆನು ಅಂತ ತಿಳಿಸಿದ್ದು ಸದರಿ ಚಾಲಕ ಮತ್ತು ಮಾಲಿಕ ಇಬ್ಬರೂ ಸೇರಿ ತಮ್ಮ ಸ್ವಂತ ಲಾಭಕ್ಕಾಗಿ ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಲೋಡ ಮಾಡಿಕೊಂಡು ಮಾರಾಟ ಮಾಡಲು ತೆಗೆದುಕೊಂಡು ಹೋಗುತಿದ್ದ ಬಗ್ಗೆ ದೃಡಪಟ್ಟಿದ್ದರಿಂದ ಸದರಿ ಪಂಚರ ಸಮಕ್ಷಮದಲ್ಲಿ ಮುಂಜಾನೆ 08-15 ಗಂಟೆಯಿಂದ 09-15 ಗಂಟೆಯ ಅವಧಿಯವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ 35/2020 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ.                                                            ಸಹಿ/-ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!