ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/02/2020
ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- 16/2020 ಕಲಂ 78(3) ಕೆ.ಪಿ ಎಕ್ಟ್ :- ನಿನ್ನೆ ದಿನಾಂಕ.03/02/2020 ರಂದು 8-45 ಪಿಎಂಕ್ಕೆ ಶ್ರೀ ಕೃಷ್ಣ ಸುಬೇದಾರ ಪಿ.ಎಸ್.ಐ(ಅ.ವಿ) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆಯನ್ನು ತಮ್ಮ ಜ್ಞಾಪನಾ ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಸಾರಾಂಶವೆನೆಂದರೆ, ದಿನಾಂಕ.03/02/2020 ರಂದು 7-05 ಪಿಎಂ ಸುಮಾರಿಗೆ ನಾನು ಯಾದಗಿರಿ ನಗರದ ಚಿತ್ತಾಪೂರ ರಸ್ತೆಗೆ ಇರುವ ಸದರಿ ಶ್ರೀ ಸಾಯಿ ಸಮರ್ಥ ದಾಬಾ/ರೆಸ್ಟೋರೆಂಟದಲ್ಲಿದ್ದಾಗ ಮಾನ್ಯ ಎಸ್.ಪಿ ಸಾಹೇಬರು ಯಾದಗಿರಿ ಮತ್ತು ಶ್ರೀ ಸದಾಶಿವ ಸೋನಾವಣೆ ಪಿ.ಐ ಡಿ.ಸಿ.ಐ.ಬಿ ಘಟಕ ಯಾದಗಿರಿ ಹಾಗೂ ತಂಡದ ಮಾರ್ಗದರ್ಶನದಲ್ಲಿ ಯಾದಗಿರಿ ನಗರದ ಚಿತ್ತಾಪೂರ ರಸ್ತೆಗೆ ಇರುವ ಸದರಿ ಶ್ರೀ ಸಾಯಿ ಸಮರ್ಥ ದಾಬಾ/ರೆಸ್ಟೋರೆಂಟದಲ್ಲಿ ಸದರಿ ದಾಬಾದ ಮ್ಯಾನೇಜರನಾದ ಮಂಜುನಾಥ ಈತನು ತನ್ನ ಮೊಬೈಲದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ಅಧಿಕಾರಿ ಮತ್ತು ಸಿಬ್ಬಂದಿಯವರು ಕೂಡಿಕೊಂಡು ಸದರಿಯವನ ಮೇಲೆ ದಾಳಿ ಮಾಡಿದಾಗ ಸಾಯಿ ಸಮರ್ಥ ದಾಬಾ/ರೆಸ್ಟೋರೆಂಟದಲ್ಲಿದ್ದ ಮಂಜುನಾಥ ಈತನ ಮೇಲೆ 7-15 ಪಿಎಮ್ ಕ್ಕೆ ದಾಳಿ ಮಾಡಿ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಮಂಜುನಾಥ ತಂದೆ ರವೀಂದ್ರಕುಮಾರ ನಾಯಕ ವ;26 ಜಾ; ಬೇಡರು ಉ; ದಾಬಾದಲ್ಲಿ ಮ್ಯಾನೇಜರ ಸಾ; ವಾಲ್ಮೀಕಿ ನಗರ ಯಾದಗಿರಿ ಅಂತಾ ತಿಳಿಸಿದನು. ಅವನ ಹತ್ತಿರ ಇದ್ದ ಮೊಬೈಲ ಜಪ್ತಿಪಡಿಸಿಕೊಂಡು ಪರಿಶಿಲಿಸಲು ಆತನ ಹತ್ತಿರವಿದ್ದ ಒಪ್ಪೋ ಮೊಬೈಲ ನಂ.7892646315 ನೇದ್ದರಲ್ಲಿ ಕಲ್ಯಾಣ ಮತ್ತು ಮುಂಬಯಿ ಮಟಕಾ ಎಂಬುವ 1=00 ರೂಪಾಯಿಗೆ 80=00 ರೂ. ಅಂತಾ ಇರುವ ಅಂಕಿ ಸಂಖ್ಯೆಗಳು, ಮೊಬೈಲ ವಾಟ್ಸಪ ಮತ್ತು ಮೇಸೆಜಗಳಲ್ಲಿ ಇದ್ದು ಅವುಗಳನ್ನು ಒಂದು ಹಾಳೆಯಲ್ಲಿ ನಕಲು ಮಾಡಿಕೊಂಡು ಅವನಲ್ಲಿದ್ದ ಸದರಿ ಮೊಬೈಲನ್ನು ಮತ್ತು 50,220/- ರೂ ಹಣವನ್ನು ಜಪ್ತಿಪಡಿಸಿಕೊಂಡು, ಜಪ್ತಿ ಪಂಚನಾಮೆ ಮುದ್ದೆಮಾಲು, ಆರೋಪಿತನನ್ನು ಈ ಜ್ಞಾಪನ ಪತ್ರದೊಂದಿಗೆ ಹಾಜರುಪಡಿಸುತ್ತಿದ್ದು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಿದ್ದರ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಕುರಿತು ಪತ್ರ ಬರೆದುಕೊಂಡು ವಿನಂತಿಸಿಕೊಂಡಿದ್ದು ಪಿಸಿ 398 ರವರು ಇಂದು ದಿನಾಂಕ; 04/02/2020 ರಂದು 2-10 ಪಿಎಂಕ್ಕೆ ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ತಂದು ಹಾಜರುಪಡಿಸಿದ್ದು ನ್ಯಾಯಾಲಯದ ಪರವಾನಿಗೆ ಹಾಗೂ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 16/2020 ಕಲಂ.78(3) ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 20/2020 ಕಲಂ. ಮಹಿಳೆ ಕಾಣೆಯಾದ ಬಗ್ಗೆ :- ಇಂದು ದಿನಾಂಕ 04.02.2020 ರಂದು ಬೆಳಿಗ್ಗೆ 11.45 ಎ.ಎಂ ಕ್ಕೆ ಪಿರ್ಯಾಧಿ ಶ್ರೀ ನಾಗಪ್ಪ ತಂದೆ ದೇವಿಂದ್ರಪ್ಪ ಬೋಯಿನ್ ಈತನು ಠಾಣೆಗೆ ಹಾಜರಾಗಿ ಪಿರ್ಯಾಧಿ ನೀಡಿದ್ದೆನೆಂದರೆ ದಿನಾಂಕ 28.01.2020 ಸಾಯಂಕಾಲ 7.15 ಗಂಟೆ ಸುಮಾರಿಗೆ ನನ್ನ ತಂಗಿ ಮಲ್ಲಮ್ಮ ತಂದೆ ದೇವಿಂದ್ರಪ್ಪ ಬೋಯಿನ್ ಮನೆ ಹಿಂದೆ ಇರುವ ದೊಡ್ಡಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಇಲ್ಲಿಯವರೆಗೆ ಮನಗೆ ಬಂದಿರುವುದಿಲ್ಲ ಸದರಿಯವಳಿಗೆ ಎಲ್ಲಾ ಕಡೆ ಹುಡುಕಾಡಿದರು ಇಲ್ಲಿಯವರೆಗೆ ಸಿಕ್ಕಿರುವುದಿಲ್ಲ, ಕಾಣೆಯಾದ ನನ್ನ ತಂಗಿ ಹುಡುಕಿಕೋಡಬೆಕು ಅಂತಾ ಕೊಟ್ಟ ಪಿರ್ಯಾಧಿಯ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 20/2020 ಕಲಂ: ಮಹಿಳೆ ಕಾಣೆಯಾದ ಬಗ್ಗೆ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 107 ಸಿ.ಆರ್.ಪಿ.ಸಿ :- ದಿನಾಂಕ:04/02/2020 ರಂದು 10.00 ಗಂಟೆಗೆ ಠಾಣೆಯ ಮಂಜುನಾಥ ಪಿಸಿ-119 ರವರು ಠಾಣೆಗೆ ಬಂದು ಒಂದು ಲಿಖಿತ ದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ:04/02/2020 ರಂದು ನಾನು ಮಂಜಲಾಪುರ ಹಳ್ಳಿ ಗ್ರಾಮಕ್ಕೆ ಬೇಟಿಗೆಂದು ಹೋದಾಗ ಗ್ರಾಮದಲ್ಲಿ ಸ್ಥಳಿಯ ವಿದ್ಯಮಾನಗಳಿಂದಾ ಮತ್ತು ಪೊಲೀಸ ಬಾತ್ಮಿದಾರರಿಂದಾ ತಿಳಿದು ಬಂದಿದ್ದೇನೆಂದರೆ, ಗ್ರಾಮದ ಶಿವಮ್ಮ ಗಂಡ ನರಸಪ್ಪ ಸುರಪುರ ಮತ್ತು ಸಂಗಡಿಗರು ಮತ್ತು ದೇವತ್ಕಲ್ ಗ್ರಾಮದ ನಿಂಗಮ್ಮ ಗಂಡ ದುರಗಪ್ಪ ಚಿಗರಿಮೇಟಿ ಮತ್ತು ಸಂಗಡಿಗರ ಮದ್ಯ ಮಂಜಲಾಪುರ ಹಳ್ಳಿ ಸೀಮೆಯ ಹೊಲ ಸವರ್ೆ ನಂ.18 ರಲ್ಲಿ 6 ಎಕರೆ 17 ಗುಂಟೆಯ ಜಮೀನದ ಪಾಲಿನ ವಿಷಯದಲ್ಲಿ ಸುಮಾರು ದಿನಗಳಿಂದಾ ತಕರಾರು ಇದ್ದು, ಸದರಿ ಹೊಲದಲ್ಲಿ ಬೆಳೆದ ತೊಗರಿ ರಾಶಿ ಮಾಡುವ ಸಲುವಾಗಿ ಮುಂದಿನ ದಿಗಳಲ್ಲಿ ತಮ್ಮ ತಮ್ಮಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ಹಾನಿ, ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವ ಹೆಚ್ಚಾಗಿ ಕಂಡು ಬಂದಿರುತ್ತದೆ. ಕಾರಣ ಮೇಲ್ಕಂಡವರ ಮೇಲೆ ಮುಂಜಾಗೃತಾ ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆ ಸದರಿಯವರ ವಿರುದ್ದ ಕಲಂ:107 ಸಿ.ಆರ್.ಪಿ.ಸಿ ಪ್ರಕಾರ ಮುಂಜಾಗೃತೆ ಕ್ರಮ ಕೈಕೊಂಡಿದ್ದು ಇದೆ.
ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 12/2020 ಕಲಂ:78 () ಕೆ.ಪಿ ಕಾಯ್ದೆ:- ನಿನ್ನೆ ದಿನಾಂಕ 03.02.2020 ರಂದು 4:00 ಪಿ.ಎಮ್.ಕ್ಕೆ ಶ್ರೀ ವೀರಭದ್ರಯ್ಯ ಹಿರೇಮಠ ಸಿಪಿಐ ಸಾಹೇಬರು ಹುಣಸಗಿ ವೃತ್ತ ರವರು ಹಾಜರುಪಡಿಸಿದ ಜಪ್ತಿ ಪಂಚನಾಮೆ ಮತು ಜ್ಞಾಪನಾ ಪತ್ರದ ಸಾರಾಂಶವೆನೆಂದರೆ ದಿನಾಂಕ:03.02.2020 ರಂದು 1:00 ಪಿಎಮ್ಕ್ಕೆ ಶ್ರೀ ವೀರಭದ್ರಯ್ಯ ಹಿರೇಮಠ ಸಿಪಿಐ ಹುಣಸಗಿ ವೃತ್ತ ರವರು ವೃತ್ತ ಕಛೇರಿಯಲ್ಲಿದ್ದಾಗ ಕೊಡೆಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಕ್ಕೇರಾ ಹಿರೇಹಳ್ಳ ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟವನ್ನು ಬರೆದುಕೊಳ್ಳುತ್ತಿದ್ದಾನೆ ಎಂಬ ಖಚಿತ ಮಾಹಿತಿ ಬಂದ ಮೇರೆಗೆ ಪಂಚರಾದ 1) ಶ್ರೀ ಗೋವಿಂದ ತಂದೆ ನಾರಾಯಣನಾಯ್ಕ ರಾಠೋಡ ಸಾ:ಹುಣಸಗಿ ತಾಂಡಾ 2) ಮಾಂತೇಶ ತಂದೆ ಮರೆಪ್ಪ ಹೊಸಮನಿ ಇಬ್ಬರೂ ಸಾ:ಹುಣಸಗಿ ರವರಿಗೆ & ಸಿಬ್ಬಂದಿಯವರಾದ 1) ಶಿವಪ್ಪ ಹೆಚ್ಸಿ-136, 2) ಶ್ರೀಶೈಲ್ ಹೆಚ್ಸಿ-130, 3) ಬಸವಾಜ ಪಿಸಿ-173, 4) ವಿಕಾಶ ಎಪಿಪಿ-144 ರವರೊಂದಿಗೆ ಸರಕಾರಿ ಜೀಪ ನಂ:ಕೆಎ-33 ಜಿ-164 ನೇದ್ದರಲ್ಲಿ ದಿನಾಂಕ:03.02.2020 ರಂದು 1:30 ಪಿಎಮ್ಕ್ಕೆ ಹೊರಟು ಭಾತ್ಮೀ ಬಂದ ಸ್ಥಳಕ್ಕೆ 1:50 ಪಿಎಮ್ಕ್ಕೆ ತಲುಪಿ ಗುಡಿಸು ಮರೆಗೆ ಜೀಪನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲಾಗಿ ಹಿರೇಹಳ್ಳದ ಬಸ್ ನಿಲ್ದಾಣದ ಸಮೀಪದ ರೋಡಿನ ದಂಡೆಗೆ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಜನರಿಗೆ ಇದು ಕಲ್ಯಾಣಿ ಮಟಕಾ ಜೂಜಾಟ ಒಂದು ಹಚ್ಚಿದರೆ 80 ರೂ ಬರುತ್ತದೆ ಅಂತಾ ಹೇಳಿ ಜನರಿಂದ ಹಣ ಪಡೆದುಕೊಂಡು ಸಣ್ಣ ಸಣ್ಣ ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆಯುವುದನ್ನು ಖಚಿತಪಡಿಸಿಕೊಂಡು ಸಿಪಿಐ ಸಾಹೇಬರು ಹಾಗೂ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 2:00 ಪಿಎಮ್ಕ್ಕೆ ದಾಳಿ ಮಾಡಿ ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದ ರಂಗಪ್ಪ ತಂದೆ ಮಾನಪ್ಪ ರಾಜವಾಳ ವ:28 ವರ್ಷ ಜಾ: ಬೇಡರ ಉ:ಮಟಕಾ ಬರೆಯುವುದು ಸಾ:ಹಿರೇಹಳ್ಳ ಕಕ್ಕೇರಾ ತಾ:ಸುರಪೂರ ಈತನಿಗೆ ಹಿಡಿದುಕೊಂಡು ವಿಚಾರಿಸಲಾಗಿ ನಾನು ಪಡೆದುಕೊಂಡ ಹಣ & ಮಟಕಾ ಚೀಟಿಗಳನ್ನು ಕಕ್ಕೇರಾದ ಇಫರ್ಾನ ತಂದೆ ಬಾಬುಸಾಬ ಈತನಿಗೆ ಕೊಡುವುದಾಗಿ ತಿಳಸಿದ್ದು ಇರುತ್ತದೆ. ದಾಳಿಯಲ್ಲಿ ಹಿಡಿದ ವ್ಯಕ್ತಿಯಿಂದ 910/- ನಗದು ಹಣ, ಒಂದು ಮಟಕಾ ನಂಬರ್ ಬರೆದ ಚೀಟಿ, ಒಂದು ಬಾಲ್ ಪೆನ್ ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿಪಂಚನಾಮೆಯನ್ನು ಸ್ಥಳದಲ್ಲಿ ಪಂಚರ ಸಮಕ್ಷಮ ದಿನಾಂಕ:03.02.2020 ರಂದು 2:00 ಪಿಎಮ್ದಿಂದ 3:00 ಪಿಎಮ್ ವರೆಗೆ ಪೂರೈಸಿ, ಸಿಪಿಐ ಸಾಹೇಬರು ಹುಣಸಗಿ ವೃತ್ತ ರವರು ತಾವು ಪೂರೈಸಿದ ಜಪ್ತಿ ಪಂಚನಾಮೆ, ಮುದ್ದೇಮಾಲು ಹಾಗೂ ಆರೋಪಿತನೊಂದಿಗೆ 4:00 ಪಿಎಮ್ಕ್ಕೆ ಠಾಣೆಗೆ ಹಾಜರಾಗಿ ಸದರಿ ಆರೋಪಿಯ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಿದ್ದು ಕಾರಣ ಸಿಪಿಐ ಸಾಹೇಬರು ಹುಣಸಗಿ ವೃತ್ತ ರವರು ಹಾಜರ ಪಡಿಸಿದ ಸದರಿ ಜಪ್ತಿ ಪಂಚನಾಮೆಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದು. ಕಲಂ 78 (3) ಕೆಪಿ ಎಕ್ಟ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಬೇಕಾ ಇದ್ದು. ಕಲಂ 78 (3) ಕೆಪಿ ಎಕ್ಟ ಅಸಂಜ್ಞೆಯ ಅಪರಾಧವಾಗಿದ್ದರಿಂದ ನಿನ್ನೆ ಠಾಣಾ ಎಸ್ಹೆಚ್ಓ ಕರ್ತವ್ಯದಲ್ಲಿದ್ದ ಹೆಚ್ಸಿ-135 ಸಂಗಪ್ಪ ರವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪರವಾನಿಗೆಗಾಗಿ ಯಾದಿ ಬರೆದುವಿನಂತಿಸಿಕೊಂಡಿದ್ದು. ಇಂದು ದಿನಾಂಕ: 04.02.2020 ರಂದು 5:00 ಪಿ ಎಂ ಕ್ಕೆ ಪಿಸಿ-251 ಕಜ್ಜಪ್ಪ ರವರು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಬಂದು ಪರವಾನಿಗೆ ಯಾದಿಯನ್ನು ಹಾಜರಪಡಿಸಿದ್ದು. ನಿನ್ನೆ ಸಿಪಿಐ ಸಾಹೇಬರು ರವರು ಹಾಜರ ಪಡಿಸಿದ ಜಪ್ತಿ ಪಂಚನಾಮೆ ಮತ್ತು ವರದಿಯ ಸಾರಾಂಶದ ಮೇಲಿಂದ ಇಂದು ಠಾಣಾ ಗುನ್ನೆ ನಂ: 12/2020 ಕಲಂ: 78 (111) ಕೆ.ಪಿ. ಎಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using