ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/02/2020

By blogger on ಸೋಮವಾರ, ಫೆಬ್ರವರಿ 3, 2020

                                 

                                     ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/02/2020

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 24/2020 ಕಲಂ: 87 ಕೆಪಿ ಆಕ್ಟ:- ಇಂದು ದಿನಾಂಕ: 03.02.2020 ರಂದು 14.00 ಘಂಟೆಗೆ ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ಕಿರದಳ್ಳಿ ತಾಂಡಾದ ಸೇವಾಲಾಲ ಗುಡಿಯ ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33 ಜಿ 0074 ನೇದ್ದರಲ್ಲಿ ಸದರ ಸೇವಾಲಾಲ ಗುಡಿಯ ಪಕ್ಕದಲ್ಲಿ ಮರೆಯಾಗಿ ನಿಂತು ಆರೋಪಿತರು ಜೂಜಾಟ ಆಡುವ ಬಗ್ಗೆ ಖಚಿತಪಡಿಸಿಕೊಂಡು 14.50 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 07 ಜನ ಆರೋಪಿತರು ಸಿಕ್ಕಿದ್ದು  ಮತ್ತು ಒಟ್ಟು 11650- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳು ಸಿಕ್ಕಿದ್ದು ಸದರಿಯವುಗಳನ್ನು 14.50 ಪಿ.ಎಂ ದಿಂದ  15.15 ಪಿ.ಎಂದವರಗೆ ಪಂಚರ ಸಮಕ್ಷಮ ವಶಪಡಿಸಿಕೊಂಡು ಠಾಣೆಗೆ 16.20 ಪಿ.ಎಮ್ ಕ್ಕೆ ಬಂದು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ್ದು ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು 07.00 ಪಿಎಮ್ ಕ್ಕೆ ಸದರಿ ವರದಿ ಆಧಾರದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 24/20 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 09/2020 ಕಲಂ 279, 338 ಐ.ಪಿ.ಸಿ:- ದಿನಾಂಕ:30/01/2020 ರಂದು ಮದ್ಯಾಹ್ನ ಸಗರ ಸೋಪಿ ಶರ್ಮತ ದೇವರ ದರ್ಶನ ಮಾಡಿಕೊಂಡು ಫಿಯರ್ಾದಿಯ ಮಗಳು ಅಫ್ಸಾನಾಬೇಗಂ ಇವಳು ತನ್ನ ಮೈದುನನಾದ ಆರೋಪಿ ಸದ್ದಾಮ ಹುಸೇನ್ ಈತನ ಹೋಂಡಾ ಶೈನ್ ಮೋಟರ್ ಸೈಕಲ್ ನಂ:ಕೆಎ-32, ಇಕ್ಯೂ-6827 ನೇದ್ದರ ಮೇಲೆ ಅವನ ಹಿಂದೆ ಕುಳಿತು ಸಗರದಿಂದ ಭೀ.ಗುಡಿಯ ಕಡೆಗೆ ಮದ್ಯಾಹ್ನ 4 ಗಂಟೆ ಸುಮಾರಿಗೆ ದಿಗ್ಗಿ ಗ್ರಾಮ ಇನ್ನು ಸ್ವಲ್ಪ ಮುಂದೆ ಇರುವಾಗ ಸಗರ-ಭೀ.ಗುಡಿ ರೋಡಿನ ಮೇಲೆ ಹೊರಟಾಗ ದೊಡ್ಡ ತೆಗ್ಗಿನಲ್ಲಿ ಸದ್ದಾಮ ಹುಸೇನ ಈತನು ತನ್ನ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿ ತೆಗ್ಗಿಗೆ ಹಾಕಿದ್ದರಿಂದ ತೆಗ್ಗಿನಲ್ಲಿ ಮೋಟರ್ ಸೈಕಲ್ ಜಂಪ್ ಆಗಿ ಹಿಂದೆ ಕುಳಿತ ಅಫ್ಸಾನಾಬೇಗಂ ಇವಳು ಕೆಳಗೆ ಬಿದ್ದು ಅವಳ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿದ್ದು ಇಲ್ಲಿಯವರೆಗೆ ವೈದ್ಯಕೀಯ ಉಪಚಾರ ಮಾಡಿಸಿ ಸದರಿ ಘಟನೆಯ ಬಗ್ಗೆ ಮನೆಯವರೊಂದಿಗೆ ವಿಚಾರ ಮಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಅದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 14/2020 87  ಕೆ.ಪಿ ಯಾಕ್ಟ:- ದಿನಾಂಕ:02/02/2020 ರಂದು 21.50 ಗಂಟೆಯ ಸುಮಾರಿಗೆ ಆರೋಪಿತರು  ಹೆಬ್ಬಾಳ(ಕೆ) ಗ್ರಾಮದ ಪರಮಾನಂದ ದೇವರ ಪಾದಗಟ್ಟಿ ಹತ್ತಿರ ಕಟ್ಟಿಯ ಮೇಲೆ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಗುಂಪಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಶೀಭದ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಹೆಚ್.ಸಿ- 130 133 83 07 ಪಿಸಿ-233 87 ರವರೊಂದಿಗೆ ದಾಳಿ ಮಾಡಿ 6 ಜನರಿಗೆ ಹಿಡಿದುಕೊಂಡಿದ್ದು, ಆರೋಪಿತರಿಂದ ಮತ್ತು ಖಣದಿಂದಾ ಒಟ್ಟು 10550=00 ರೂ ನಗದು ಹಣ, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.
ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- 15/2020 ಕಲಂ 32, 34 ಕೆ ಇ ಆಕ್ಟ:- :-  ಇಂದು ದಿನಾಂಕ.03/02/2020 ರಂದು 7-30 ಪಿಎಂಕ್ಕೆ ಶ್ರೀ ಕೃಷ್ಣ ಸುಬೇದಾರ ಪಿ.ಎಸ್ಐ (ಅ.ವಿ) ಸಾಹೇಬರು ರವರು ಸಾಬರೆಡ್ಡಿ ಪಿಸಿ-379 ರವರೊಂದಿಗೆ ಠಾಣೆಗೆ ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯನ್ನು ಜ್ಞಾಪನ ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ.03/02/2019 ರಂದು 3-45 ಪಿಎಂ ಸುಮಾರಿಗೆ ಠಾಣೆಯಲ್ಲಿರುವಾಗ ಮಾನ್ಯ ಎಸ್.ಪಿ ಸಾಹೇಬರು ಯಾದಗಿರಿ ಮತ್ತು ಶ್ರೀ ಸದಾಶಿವ ಸೋನಾವಣೆ ಪಿ.ಐ ಡಿ.ಸಿ.ಐ.ಬಿ ಘಟಕ ಯಾದಗಿರಿ ಹಾಗೂ ತಂಡದ ಮಾರ್ಗದರ್ಶನದಲ್ಲಿ ಯಾದಗಿರಿ ನಗರದ ಚಿತ್ತಾಪೂರ ರಸ್ತೆಗೆ ಇರುವ ಶ್ರೀ ಸಾಯಿ ಸಮರ್ಥ ದಾಬಾ/ರೆಸ್ಟೋರೆಂಟದಲ್ಲಿ ಸಕರ್ಾರದ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ಅಧಿಕಾರಿ ಮತ್ತು ಸಿಬ್ಬಂದಿ ಮತ್ತು ಪಂಚರೊಂದಿಗೆ ಠಾಣೆಯಿಂದ 4-30 ಪಿಎಂಕ್ಕೆ ಠಾಣೆ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ಹೋರಟು  4-45 ಪಿಎಂಕ್ಕೆ ವಿಕಾಸ ಪೆಟ್ರೋಲಬಂಕದಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಸಾಯಿ ಸಮರ್ಥ ದಾಬಾ/ರೆಸ್ಟೋರೆಂಟದಲ್ಲಿ 5-00 ಪಿಎಮ್ ಕ್ಕೆ ಹೋಗಿ  ನೋಡಲಾಗಿ ದಾಬಾದಲ್ಲಿ ಕೌಂಟರ ಹತ್ತಿರ ಮಧ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಒಮ್ಮೇಲೆ ದಾಳಿ ಮಾಡಿ ಹಿಡಿದು ಅಲ್ಲಿದ್ದ ಇಬ್ಬರು ವ್ಯಕ್ತಿಗಳ ಹೆಸರು ಮತ್ತು ವಿಳಾಸ ವಿಚಾರಿಸಲು 1) ಕೃಷ್ಣ @ಕಿಟ್ಟಿ ತಂದೆ ದೇವಣ್ಣ ನಾನೇಕ ವ;42 ಜಾ; ಬೇಡರು ಉ; ದಾಬಾ ಮಾಲೀಕ ಸಾ; ವಾಲ್ಮೀಕಿ ನಗರ ಯಾದಗಿರಿ. 2) ಮಂಜುನಾಥ ತಂದೆ ರವೀಂದ್ರಕುಮಾರ ನಾಯಕ ವ;26 ಜಾ; ಬೇಡರು ಉ; ದಾಬಾದಲ್ಲಿ ಮ್ಯಾನೇಜರ ಸಾ; ವಾಲ್ಮೀಕಿ ನಗರ ಯಾದಗಿರಿ ಅಂತಾ ತಿಳಿಸಿದರು. ಸದರಿಯವರ ಹತ್ತಿರ ಸ್ಥಳದಲ್ಲಿ ಕಾಟನ ಬಾಕ್ಸನಲ್ಲಿ 1) 3 ಮೆಕಡೊವೆಲ್ ವಿಸ್ಕಿ 180 ಎಂ.ಎಲ್ ಒಂದಕ್ಕೆ 162.00 ರೂ.ದಂತೆ ಒಟ್ಟು 486=00 ರೂ. 2) 2 ಇಂಪಿರಿಯಲ್ ಬ್ಲೂ ವಿಸ್ಕಿ 180 ಎಮ.ಎಲ್ ಒಂದಕ್ಕೆ 162/-ರೂ. ದಂತೆ ಒಟ್ಟು 324=00 ರೂ. 3) 1 ರಾಯಲ ಸ್ಟಾಗ ವಿಸ್ಕಿ 180 ಎಮ.ಎಲ್ 234=00 ರೂ. 4) 3 ಡಿ.ಎಸ್.ಪಿ ಬ್ಲಾಕ ವಿಸ್ಕಿ 180 ಎಮ.ಎಲ್ ಒಂದಕ್ಕೆ 143/-ರೂ. ದಂತೆ ಒಟ್ಟು 429=00 ರೂ. 5) 3 ಬ್ಲೆಂಡರ ಸ್ಪ್ರೈಡ್ ವಿಸ್ಕಿ 180 ಎಮ.ಎಲ್ ಒಂದಕ್ಕೆ 385/-ರೂ. ದಂತೆ ಒಟ್ಟು 1155=00 ರೂ. 6) 4 ರಾಯಲ ಸ್ಟಾಗ ವಿಸ್ಕಿ 90 ಎಮ.ಎಲ್ ಒಂದಕ್ಕೆ 129/-ರೂ. ದಂತೆ ಒಟ್ಟು 516=00 ರೂ. 7) 6 ಇಂಪಿರಿಯಲ್ ಬ್ಲೂ ವಿಸ್ಕಿ 90 ಎಮ.ಎಲ್ ಒಂದಕ್ಕೆ 90/-ರೂ. ದಂತೆ ಒಟ್ಟು 540=00 ರೂ. 8) 3 ಬ್ಲೆಂಡರ ಸ್ಪ್ರೈಡ ವಿಸ್ಕಿ 90 ಎಮ.ಎಲ್ ಒಂದಕ್ಕೆ 180/-ರೂ. ದಂತೆ ಒಟ್ಟು 540=00 ರೂ. 9) 7 ಬ್ಯಾಗಪೈಪರ ವಿಸ್ಕಿ 180 ಎಮ.ಎಲ್ ಒಂದಕ್ಕೆ 90/-ರೂ. ದಂತೆ ಒಟ್ಟು 630=00 ರೂ. 10) 6 ಮೆಕಡೊವೆಲ ರಮ್ 180 ಎಮ.ಎಲ್ ಒಂದಕ್ಕೆ 90/-ರೂ. ದಂತೆ ಒಟ್ಟು 540=00 ರೂ. 11) 9 ಯು.ಎಸ್ ವಿಸ್ಕಿ 90 ಎಮ.ಎಲ್ ಒಂದಕ್ಕೆ 30/-ರೂ. ದಂತೆ ಒಟ್ಟು 270=00 ರೂ. 12) 3 ಮೆಕಡೊವೆಲ್ ವಿಸ್ಕಿ 90 ಎಮ.ಎಲ್ ಒಂದಕ್ಕೆ 62/-ರೂ. ದಂತೆ ಒಟ್ಟು 186=00 ರೂ. 13) 5 ಮೆಕಡೊವೆಲ್ ರಮ್ 90 ಎಮ.ಎಲ್ ಒಂದಕ್ಕೆ 45/-ರೂ. ದಂತೆ ಒಟ್ಟು 225=00 ರೂ. 14) 3 ಬ್ಯಾಗಪೈಪರ ವಿಸ್ಕಿ 90 ಎಮ.ಎಲ್ ಒಂದಕ್ಕೆ 56/-ರೂ. ದಂತೆ ಒಟ್ಟು 168=00 ರೂ. 15) 3 ಡಿ.ಎಸ್.ಪಿ ಬ್ಲಾಕ ವಿಸ್ಕಿ 90 ಎಮ.ಎಲ್ ಒಂದಕ್ಕೆ 77/-ರೂ. ದಂತೆ ಒಟ್ಟು 231=00 ರೂ. 16) 3 ಬಕಾಡೀ  275 ಎಮ.ಎಲ್ ಒಂದಕ್ಕೆ 80/-ರೂ. ದಂತೆ ಒಟ್ಟು 240=00 ರೂ. 17) 5 ಬ್ರಿಜ್ಜರ 275 ಎಮ.ಎಲ್ ಒಂದಕ್ಕೆ 115/-ರೂ. ದಂತೆ ಒಟ್ಟು 575=00 ರೂ. 18) 6 ಸ್ಟ್ರೋಮ ಬಿಯರ 650 ಎಮ.ಎಲ್ ಒಂದಕ್ಕೆ 150/-ರೂ. ದಂತೆ ಒಟ್ಟು 900=00 ರೂ. 19) 23 ಕಿಂಗಫಿಶರ ಸ್ಟ್ರಾಂಗ ಬಿಯರ 650 ಎಮ.ಎಲ್ ಒಂದಕ್ಕೆ 145/-ರೂ. ದಂತೆ ಒಟ್ಟು 3335=00 ರೂ. 20) 8 ಕಿಂಗಫಿಶರ ಪ್ರಿಮಿಯಮ್ 650 ಎಮ.ಎಲ್ ಒಂದಕ್ಕೆ 140/-ರೂ. ದಂತೆ ಒಟ್ಟು 1120=00 ರೂ. ಹೀಗೆ ಒಟ್ಟು 12,644/- ರೂ. ಕಿಮತ್ತಿನವುಗಳಿದ್ದು ಸದರಿಯವರಿಗೆ  ಮದ್ಯವನ್ನು ಮಾರಾಟ ಮಾಡುವುದಕ್ಕೆ ಯಾವುದೇ ಸಕರ್ಾರದ ಪರವಾನಿಗೆ ಇದ್ದರೇ ಹಾಜರುಪಡಿಸುವಂತೆ ವಿಚಾರಿಸಲು ಅವನು ಯಾವುದೇ ಪರವಾನಿಗೆ ಇರುವುದಿಲ್ಲ. ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು. ನಂತರ ಜಪ್ತಿಪಡಿಸಿಕೊಂಡ ಮೇಲ್ಕಂಡ ಮಧ್ಯದ ಬಾಟಲಿಗಳಲ್ಲಿ ತಲಾ ಒಂದೊಂದನ್ನು ಶ್ಯಾಂಪಲ್ಗಾಗಿ ಎಫ್.ಎಸ್.ಎಲ್. ಪರೀಕ್ಷೆ ಕುರಿತು ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲಿದು ವೈ.ಟಿ. ಅಂತಾ ಅರಗಿನಿಂದ ಸೀಲು ಮಾಡಿ ಪಂಚರ ಸಹಿವುಳ್ಳ ಚೀಟಿ ಅಂಟಿಸಿ ಪ್ರತ್ಯೇಕವಾಗಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ನಂತರ ಉಳಿದ ಎಲ್ಲಾ ಮುದ್ದೆಮಾಲನ್ನು ಮುಂದಿನ ಪುರಾವೆ ಕುರಿತು ಕಾಟನ ಬಾಕ್ಸನಲ್ಲಿ ಹಾಕಿ ತಾಬೆಗೆ ತೆಗೆದುಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 03/02/2020 ರಂದು 5-00 ಪಿಎಂ ದಿಂದ 6-30 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟ್ಯಾಪನಲ್ಲಿ ಗಣಕೀಕರಣ ಮಾಡಿ ನಂತರ 7-00 ಪಿಎಂಕ್ಕೆ ಜಿಲ್ಲಾ ಪೊಲೀಸ ಕಛೇರಿಯಲ್ಲಿ ಪ್ರಿಂಟ್ ತೆಗೆದು ಸಹಿ ಮಾಡಿಸಿ ಪ್ರಕರಣ ದಾಖಲು ಮಾಡಿಕೊಳ್ಳಲು ಮುದ್ದೆಮಾಲು ಮತ್ತು ಜಪ್ತಿ ಪಂಚನಾಮೆಯನ್ನು ಜ್ಞಾಪನ ಪತ್ರದೊಂದಿಗೆ ಕಳಿಸಿಕೊಟ್ಟಿದ್ದು ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.15/2020 ಕಲಂ.32, 34, ಕೆ.ಇ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ:- 36/2020 ಕಲಂ: 338, 304(ಎ) ಐಪಿಸಿ:- ಇಂದು ದಿನಾಂಕಃ 03/02/2020 ರಂದು 10-15 ಪಿ.ಎಮ್ ಕ್ಕೆ ಶ್ರೀ ಮತಿ ಪರಮಣ್ಣ ತಂದೆ ಬಸಪ್ಪ ಐದಬಾವಿ ಸಾ: ಶಾಂತಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ನನ್ನ ಮಗನಾದ ದೇವಿಂದ್ರಪ್ಪ ಇತನು ಕಕ್ಕೇರಾ ರಸ್ತೆಯ ಕಡೆಗೆ ಇರುವ ನಮ್ಮ ಹೊಲಕ್ಕೆ ನೀರು ಬಿಡಲು ಹೋಗಿ ಹೊಲದಿಂದ ಮರಳಿ ನಮ್ಮ ಹಿರೋ ಡಿಲಕ್ಸ್ ಮೋಟಾರ ಸೈಕಲ್ ನಂಬರ ಕೆ.ಎ 33 ಎಸ್ 7603 ನೇದ್ದರ ಮೇಲೆ ತನ್ನ ಗೆಳೆಯನಾದ ನಮ್ಮೂರಿನ ಬನ್ನಪ್ಪ ತಂದೆ ಮಲ್ಲಪ್ಪ ಗುಡಗುಂಟಿ ಇತನಿಗೆ ಕೂಡಿಸಿಕೊಂಡು ಕಕ್ಕೇರಾ-ಶಾಂತಪೂರ ಮುಖ್ಯರಸ್ತೆಯ ಮುಖಾಂತರ ಮರಳಿ ಮನೆಗೆ ಬರುತ್ತಿರುವಾಗ ರಾತ್ರಿ 8-00 ಪಿ.ಎಮ್ ಸುಮಾರಿಗೆ ನಮ್ಮೂರ ಸಿಮಾಂತರದ ಬಾಳು ಶಾಲೆಯ ಕ್ರಾಸ್ ಸಮೀಪ ಒಂದು ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರ ಟ್ರ್ಯಾಲಿ ಚೆಸ್ಸಿ ನಂ. ಊಏಂ 117-2013 ನೇದ್ದಕ್ಕೆ ಹಿಂಭಾಗದಲ್ಲಿ ಮುಂಜಾಗೃತಾ ಕ್ರಮಗಳನ್ನು ಸೂಚಿಸುವ ಇಂಡಿಕೇಟರ, ರೇಡಿಯಮ್ಗಳನ್ನು ಹಚ್ಚದೇ ನಿಕ್ಷ್ಕಾಳಜಿತನದಿಂದ ರಸ್ತೆಯ ಮೇಲೆ ನಿಲ್ಲಿಸಿ ಹೋಗಿರುವದರಿಂದ ನನ್ನ ಮಗನು ಮೋ.ಸೈಕಲ್ ನಡೆಸಿಕೊಂಡು ಬರುವಾಗ ಕತ್ತಲಿನಲ್ಲಿ ಟ್ರ್ಯಾಲಿ ಕಾಣದೇ ಹಿಂದಿನಿಂದ ಮೋ.ಸೈಕಲ್ ಟ್ರ್ಯಾಲಿಗೆ ಡಿಕ್ಕಿಯಾಗಿದ್ದರಿಂದ ನನ್ನ ಮಗನ ಎಡಗಣ್ಣಿನ ಹುಬ್ಬಿಗೆ, ಎಡಕಪಾಳಕ್ಕೆ ಹಾಗು ಎದೆಗೆ ಭಾರಿ ಗುಪ್ತಗಾಯವಾಗಿ, ಕಿವಿ, ಮೂಗಿನಿಂದ ರಕ್ತಸ್ರಾವವಾಗಿ ಸ್ಥಳದಲ್ಲೆ ಮೃತಪಟ್ಟಿದ್ದು, ಮೋ.ಸೈಕಲ್ ಮೇಲೆ ಹಿಂದುಗಡೆ ಕುಳಿತಿದ್ದ ಬನ್ನಪ್ಪನಿಗೂ ಭಾರಿ ಗಾಯಗಳಾಗಿರುತ್ತವೆ. ಕಾರಣ ಟ್ರ್ಯಾಲಿ ಚೆಸ್ಸಿ ನಂ. ಊಏಂ 117-2013 ನೇದ್ದಕ್ಕೆ ಹಿಂಭಾಗದಲ್ಲಿ ಮುಂಜಾಗೃತಾ ಕ್ರಮಗಳನ್ನು ಸೂಚಿಸುವ ಇಂಡಿಕೇಟರ, ರೇಡಿಯಮ್ಗಳನ್ನು ಹಚ್ಚದೇ ನಿಕ್ಷ್ಕಾಳಜಿತನದಿಂದ ರಸ್ತೆಯ ಮೇಲೆ ನಿಲ್ಲಿಸಿ ಹೋಗಿರುವ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 36/2020 ಕಲಂ. 338, 304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!