ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/02/2020

By blogger on ಭಾನುವಾರ, ಫೆಬ್ರವರಿ 2, 2020

                               

                          ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/02/2020

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 18/2020 ಕಲಂ 279 ಐಪಿಸಿ:-ದಿನಾಂಕ 01/02/2020 ರಂದು ಬೆಳಿಗ್ಗೆ 8-00 ಗಂಟೆಗೆ ಫಿರ್ಯಾಧಿ ಮತ್ತು ಆರೋಪಿತನು ಇಬ್ಬರೂ ಕೂಡಿಕೊಂಡು ತಮ್ಮ ಲಾರಿ ನಂ ಜೆ.ಎಚ್-02-ಎಸಿ-9638 ನೆದ್ದರಲ್ಲಿ ಛತ್ರಶಾಲಾ ಸಿಮೇಟ ಫ್ಯಾಕ್ಟರಿಯಲ್ಲಿ ಸಿಮೆಂಟ ತುಂಬಿಕೊಂಡು ಛತ್ರಶಾಲಾದಿಂದ ರಾಯಚೂರಿಗೆ ಬರುವಾಗ ಮಾರ್ಗಮಧ್ಯ ಮೈಲಾಪೂರ ಗ್ರಾಮ ದಾಟಿದ ನಂತರ ಆರ್.ಹೊಸಳ್ಳಿ-ಬಳಿಚಕ್ರ ರೋಡಿನ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಓಡಿಸಿಕೊಂಡು ಹೋಗುವಾಗ ಲಾರಿ ಪಲ್ಟಿಯಾಗಿ ಅಪಘಾತವಾಗಿದ್ದರಿಂದ ಲಾರಿಯ ಬಾಡಿ, ಚೆಸ್ಸಿ, ಕ್ಯಾಬಿನ್ ಮತ್ತು ಇತರೇ ಭಾಗಗಳು ಜಖಂ ಆದ ಆದ ಬಗ್ಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 07/2020 ಕಲಂ 379 ಐಪಿಸಿ ಮತ್ತು 44(1) ಕೆಎಮ್ಎಮ್ಸಿ ರೂಲ್ 1994 :- ಇಂದು ದಿನಾಂಕ: 02/02/2020 ರಂದು 1.20 ಪಿ.ಎಂ.ಕ್ಕೆ ಫಿಯರ್ಾದಿ ಸಿಪಿಐ ರವರು ಭೀ.ಗುಡಿಯ ಕೃಷಿ ಸಂಶೋಧನಾ ಕೇಂದ್ರದ ಹತ್ತಿರ ನಿಂತಾಗ ಶಹಾಪೂರ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಬಂದಿದ್ದು ಅದರ ರಾಯಲ್ಟಿ ನೋಡಲಾಗಿ ಟಿಪ್ಪರ ನಂ ಕೆಎ:36 ಬಿ-2895 ನೇದ್ದಕ್ಕೆ ರಾಯಲ್ಟಿ ನಂ: 22101480 ಹಾಗೂ ಎಮ್.ಡಿ.ಪಿ ನಂ: ಙಖಂಓಖಂಔಖ142800002275 ನೇದ್ದು ನೀಡಿದ್ದು ಇರುತ್ತದೆ. ಜಿಪಿಎಸ್ ಚೆಕ್ ಮಾಡಿ ಪರಿಶೀಲಿಸಿ ನೋಡಲಾಗಿ ಸದರಿ ಒಂದು ರಾಯಲ್ಟಿ ಮೇಲೆ ಇಂದು ದಿನಾಂಕ:02/02/2020 ರಂದು 7.40 ಎ.ಎಮ್.ಕ್ಕೆ ಶಾರದಳ್ಳಿ ಗ್ರಾಮದಲ್ಲಿ ಒಂದನೇ ಟ್ರಿಪ್ ಮರಳನ್ನು ಅನ್ಲೋಡ ಮಾಡಿದ್ದು ಎರಡನೇ ಟ್ರಿಪ್ ಮರಳು ಲೋಡ ಮಾಡಿಕೊಂಡು ಹೊರಟಿದ್ದು ಇರುತ್ತದೆ. ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕ ಒಂದೇ ರಾಯಲ್ಟಿ ಪಡೆದು ಅದರ ಮೇಲೆ ಒಂದಕ್ಕಿಂತ ಹೆಚ್ಚು ಟ್ರಿಪ್ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಟಿಪ್ಪರ ನಂ ಕೆಎ-36 ಬಿ-2895 ನೇದ್ದನ್ನು ಜಪ್ತಿಪಡಿಸಿಕೊಂಡು ಅದರ ಚಾಲಕನಾದ ವಸಂತ ತಂದೆ ಯಂಕಣ್ಣ ಈತನೊಂದಿಗೆ ಸದರಿ ಟಿಪ್ಪರನ್ನು ಭೀ.ಗುಡಿ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿ ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಭೀ.ಗುಡಿ ಠಾಣೆ ಗುನ್ನೆ ನಂ. 07/2020 ಕಲಂ 379 ಐಪಿಸಿ ಮತ್ತು 44(1) ಕೆಎಮ್.ಎಮ್.ಸಿ ರೂಲ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 23/2020 ಕಲಂ ಮನುಷ್ಯ ಕಾಣೆ:- ಇಂದು ದಿ: 02/02/2020 ರಂದು ಶ್ರೀಮತಿ ಶಿವಲೀಲಾ ಗಂಡ ಅಮಲಪ್ಪ ಯಾಳಗಿ ವಯಸ್ಸು; 30 ಜಾತಿ: ಬೇಡರ ಉ: ಕೂಲಿ ಕೆಲಸ ಸಾ: ಪತ್ತೆಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನನಗೆ  ಮೂರು ಜನ ಹೆಣ್ಣು ಮಕ್ಕಳು ಹಾಗು ಒಬ್ಬ ಗಂಡು ಮಗನಿರುತ್ತಾನೆ. ನನ್ನ ಗಂಡನು ಕೆಂಭಾವಿಯಲ್ಲಿ ಕೂಲಿಕೆಲಸಕ್ಕೆಂದು ಹೋಗುವದು ಬರುವದು ಮಾಡುತ್ತಿದ್ದನು. ಹೀಗಿದ್ದು ದಿನಾಂಕ 17/01/2020 ರಂದು ಮುಂಜಾನೆ 08 ಗಂಟೆಗೆ ನನ್ನ ಗಂಡನಾದ ಅಮಲಪ್ಪ ತಂದೆ ಬಲವಂತ್ರಾಯ ಯಾಳಗಿ ವ|| 42 ಜಾ|| ಬೇಡರ ಉ|| ಕೂಲಿಕೆಲಸ ಸಾ|| ಪತ್ತೆಪೂರ ಈತನು ಕೂಲಿಕೆಲಸಕ್ಕೆಂದು ಕೆಂಭಾವಿಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದನು. ದಿನ ರಾತ್ರಿ ಮನೆಗೆ ಬರುವನು ಆ ದಿನ ಬಾರದೇ ಇದ್ದಾಗ ಎಲ್ಲಿಯಾದರೂ ಹೋಗಿರಬಹುದು ನಾಳೆ ಬರುತ್ತಾನೆ ಅಂತ ಸುಮ್ಮನಿದ್ದೆವು. ಮರುದಿನವಾದರೂ ನನ್ನ ಗಂಡನು ಮನೆಗೆ ಬಾರದೇ ಇದ್ದಾಗ ಗಾಬರಿಯಾಗಿ ನಾನು ಹಾಗು ನಮ್ಮ ಮಾವ ಸಂಗಪ್ಪ ಹಾಗು ಮೈದುನ ಮಲಕಪ್ಪ ಎಲ್ಲರೂ ಕೂಡಿ ಕೆಂಭಾವಿ ತುಂಬಾ ಹುಡುಕಾಡಿದರೂ ನನ್ನ ಗಂಡ ಎಲ್ಲಿಯೂ ಸಿಗಲಿಲ್ಲ. ನಂತರ ನಮ್ಮ ಸಂಬಂದಿಕರ ಗ್ರಾಮಗಳಾದ ಬಾಣತಿಹಾಳ, ರಬನಳ್ಳಿ, ಕಾದ್ಯಾಪೂರ, ಸುರಪೂರ ಹಾಗು ಕುಂಟೋಜಿ ಗ್ರಾಮಗಳಿಗೆ ಬೇಟಿ ನೀಡಿ ನನ್ನ ಗಂಡನ ಬಗ್ಗೆ ವಿಚಾರಿಸಲು ಸದರಿಯವನು ಎಲ್ಲಿಯೂ ಬಂದಿರುವದಿಲ್ಲ ಅಂತ ತಿಳಿಸಿದರು.. ನನ್ನ ಗಂಡನ ಹತ್ತಿರ ಯಾವದೇ ಮೋಬೈಲ್ ಇರುವದಿಲ್ಲ. ಹೀಗೆ  ಸುಮಾರು ಕಡೆಗಳಲ್ಲಿಯೂ ನನ್ನ ಗಂಡನಿಗೆ  ಹುಡುಕಾಡಿದರೂ ನನ್ನ ಗಂಡ ಎಲ್ಲಿಯೂ ಸಿಕ್ಕಿರುವದಿಲ್ಲ. ಸದರಿ ನನ್ನ ಗಂಡನ  ಚಹರೆ ಪಟ್ಟಿ, ದುಂಡನೆಯ ಮುಖ, ಕಪ್ಪು ಬಣ್ಣ, ಉದ್ದನೆಯ ಮೂಗು, ಸಾದಾರಣ ಮೈಕಟ್ಟು, ಎತ್ತರ 5 ಪೀಟ 5 ಇಂಚ, ಇದ್ದು ನಮ್ಮೂರಿನಿಂದ ಹೋಗುವಾಗ ಒಂದು ಬಿಳಿ ನೇಹರು ಶರ್ಟ ಹಾಗು ನೀಲಿ ಬಣ್ಣದ ಲುಂಗಿ ಮತ್ತು ಒಂದು ಟಾವೆಲ ಉಟ್ಟುಕೊಂಡು ಹೋಗಿದ್ದು ಇರುತ್ತದೆ. ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 23/2020 ಕಲಂ: ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 11/2020 ಕಲಂ 32,34 ಕೆ,ಇ ಯಾಕ್ಟ್:-   ಇಂದು ದಿನಾಂಕ: 02-02-2020 ರಂದು ಸಾಯಂಕಾಲ 06-30 ಗಂಟೆಗೆ ಮಾನ್ಯ ಶ್ರೀ ದೇವಿಂದ್ರಪ್ಪ ದೂಳಕೇಡ ಸಿಪಿಐ ಸಾಹೇಬರು ಗುರಮಿಠಕಲ್ ರವರು ಜ್ಞಾಪನ ಪತ್ರದೊಂದಿಗೆ ಮದ್ಯದ ಬಾಟಲಿಗಳ ಜಪ್ತಿಪಂಚನಾಮೆ ಮತ್ತು ಆರೋಪಿತನನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ  ಮೇಲಿಂದ ಠಾಣಾ ಗುನ್ನೆ ನಂ. 11/2020 ಕಲಂ. 32, 34 ಕೆ.ಇ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 326 504 506 341 ಸಂಗಡ 34 ಐಪಿಸಿ & 3(1)(ಆರ್), 3(1)(ಎಸ್), 3(2)(5) ಎಸ್.ಸಿ/ಎಸ್.ಟಿ ಕಾಯ್ದೆ:- ಇಂದು ದಿನಾಂಕ:02/02/2020 ರಂದು 18.50 ಗಂಟೆಗೆ ಹುಣಸಗಿ ಸರಕಾರಿ ದವಾಖಾನೆಯಿಂದಾ ಪೋನ ಮುಖಾಂತರ ಎಂ.ಎಲ್.ಸಿ ಮಾಹಿತಿ ತಿಳಿಸಿದ ಮೇರೆಗೆ ಆಸ್ಪತ್ರಗೆ ಬೇಟಿ ಕೊಟ್ಟು ಗಾಯಳು ಪಿಯರ್ಾದಿಗೆ ವಿಚಾರಿಸಲು ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಹಾಜರಪಡಿಸಿದ್ದು ಏನೆಂದರೆ, ಇಂದು ದಿ:02/02/2020 ರಂದು ನಾನು ಕೆಲಸ ಮಾಡುವ ನಮ್ಮ ಹೊಲದ ಮಾಲಿಕ ಯಮನಪ್ಪ ಸುರಪುರ ಇವರು ಪೋನ ಮಾಡಿ ನಮ್ಮ ಹೊಲಕ್ಕೆ ದೇವತ್ಕಲ್ದವರು ರಾಶಿ ಮಾಡಲು ಬಂದಿದ್ದಾರೆ ನೋಡಿ ಬಾ ಅಂತಾ ಹೇಳಿದಾಗ ನಾನು ಹೊಲಕ್ಕೆ ಹೋಗಿ ರಾಶಿ ಮಾಡುವದನ್ನು ನೋಡುವಾಗ ಆರೋಪಿತರು ಜ್ಯಾತಿ ಎತ್ತಿ ಪಿಯರ್ಾದಿಗೆ ಬೈದು ಕೊಡಗೋಲಿನಿಂದಾ ಹೊಡೆದು ಕಿವಿಗೆ ಭಾರಿ ರಕ್ತಗಾಯ ಮಾಡಿ ತಡೆದು ನಿಲ್ಲಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಇತ್ಯಾದಿಯಾಗಿ ಇದ್ದ ದೂರನ್ನು ಪಡೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ದೂರಿನ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ.   

ಶಹಾಪೂರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 33/2019. ಕಲಂ 379 ಐ.ಪಿ.ಸಿ.ಮತ್ತು ಕಲಂ.44 (1) ಕೆ.ಎಮ್.ಎಮ್.ಸಿ.ಆರ್ ರೂಲ್:- ದಿನಾಂಕ: 02-02-2020 ರಂದು 5:00 ಪಿ.ಎಮ್.ಕ್ಕೆ ಆರೋಪಿತರು ತಮ್ಮ ಲಾರಿ ನಂಬರ ಕೆ.ಎ.39-9969 ನೇದ್ದರಲ್ಲಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಸರಕಾರಕ್ಕೆ ಯಾವುದೇ ತೆರಿಗೆ ತುಂಬದೇ ಅಕ್ರಮವಾಗಿ ಸಾಗಿಸುತ್ತಿದ್ದಾಗ ಫಿಯರ್ಾದಿದಾರರು ಹತ್ತಿಗೂಡೂರ ಹತ್ತಿರ ರಸ್ತೆಯ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಹೋಗಿ ದಾಳಿಮಾಡಿ ಮರಳು ತುಂಬಿದ ಲಾರಿಯನ್ನು ವಶಪಡಿಸಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರ ಆಧಾರದ ಮೇಲಿಂದ  ಠಾಣೆ ಗುನ್ನೆ ನಂ.33/2019 ಕಲಂ. 379 ಐ.ಪಿ.ಸಿ. ಮತ್ತು ಕಲಂ 44(1) ಕೆ.ಎಮ್.ಎಮ್.ಸಿ.ಆರ್  ಅಡಿಯಲ್ಲಿ  ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ. 09/2020 ಕಲಂ: 279 ಐಪಿಸಿ:-02/02/2020 ರಂದು 3 ಪಿಎಮ್ ಕ್ಕೆ ಶ್ರೀ ಶಿವಣ್ಣ ತಂದೆ ಮಲ್ಲಣ್ಣ ಭಜಂತ್ರಿ ಸಾ:ಚಿತ್ತಾಪೂರ ಜಿ:ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿಸಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ಮೇಲ್ಕಾಣಿಸಿದ ಅಪಾದಿತ ಕೆ.ಸಿ ಬಜಂತ್ರಿ ಇವರು ನನ್ನ ತಮ್ಮನಾಗಬೇಕು. ಮೊದಲು ಲಾರಿ ಚಾಲಕ ಅಂತಾ ಕೆಲಸ ಮಾಡುತ್ತಿದ್ದ. ಈಗ ಸುಮಾರು 8 ತಿಂಗಳ ಹಿಂದೆ ಮೇಲ್ಕಾಣಿಸಿದ ಟ್ರ್ಯಾಂಕರನ್ನು ಅಶೋಕ ಲಿಲ್ಯಾಂಡ ಕಂಪನಿಯಿಂದ ಇಂಡೋಜಾ ಹಣಕಾಸು ಸಂಸ್ಥೆಯಿಂದ ಖರೀದಿ ಮಾಡಿದನು. ಗಾಡಿ ಅವನ ಹೆಸರಿಗೆ ನೊಂದಾಯಿತವಾಗಿರುತ್ತದೆ. ಹೀಗಿರುವಾಗ ದಿನಾಂಕ: 30/07/2019 ರಂದು ನನ್ನ ತಮ್ಮ ತನ್ನ ಟ್ಯಾಂಕರನಲ್ಲಿ ಸಿಮೆಂಟ್ ತುಂಬಲು ಓರಿಯಂಟಲ್ ಸಿಮೆಂಟ್ ಫ್ಯಾಕ್ಟರಿಗೆ ತನ್ನ ಪರಿಚಯದ ಲಕ್ಷ್ಮಣ ಡ್ರೈವರ ಈತನನ್ನು ಲೋಡ ಮಾಡಿ ಟ್ರಾನ್ಸಪೋರ್ಟ ಹತ್ತಿರ ನಿಲ್ಲಿಸಲು ತಿಳಿಸಿದ ಮೇರೆಗೆ ಲಕ್ಷ್ಮಣ ಈತನು ನಮ್ಮ ತಮ್ಮನ ಟ್ಯಾಂಕರನ್ನು ಓರಿಯಂಟಲ್ ಸಿಮೆಂಟ್ ಫ್ಯಾಕ್ಟರಿಯಲ್ಲಿ ಲೋಡ ಮಾಡಿ ಸಿಮೆಂಟಗೆ ಸಂಬಂಧಪಟ್ಟ ಎಲ್.ಆರ್ ನಲ್ಲಿ ತನ್ನ ಹೆಸರೆ ಬರೆಸಿ, ಟ್ರಾನ್ಸಪೋರ್ಟ ಎಲ್.ಆರ್ ನಲ್ಲಿ ಕೂಡಾ ತನ್ನ ಹೆಸರನ್ನು ಬರೆಸಿ, ಟ್ರಾನ್ಸಪೋರ್ಟ ಹತ್ತಿರ ಲೋಡ ಮಾಡಿದ ಗಾಡಿಯನ್ನು ವೈಷ್ಣವಿ ಟ್ರಾನ್ಸಪೋರ್ಟ ಹತ್ತಿರ ನಿಲ್ಲಿಸಿದ. ನನ್ನ ತಮ್ಮ ಸ್ವಲ್ಪ ವಿಶ್ರಾಂತಿ ಪಡೆದು ಲೋಡ ಮಾಡಿದ ಸಿಮೆಂಟ್ ಟ್ಯಾಂಕರನ್ನು ಹೊಸಪೇಟಕ್ಕೆ 31/07/2019 ರಂದು ಬೆಳಗ್ಗೆ 1-30 ಗಂಟೆಗೆ ಬಿಟ್ಟು ವಡಗೇರಾ ತಾಲೂಕಿನ ಖಾನಾಪೂರ ಮುಖಾಂತರ ತಡಿಬಿಡಿ ಕಡೆ ಹೋಗುತ್ತಿರುವಾಗ ಖಾನಾಪೂರದಿಂದ 2 ಕಿ. ಮೀ ಅಂತರದ ಮೇಲೆ ಎದುರುಗಡೆಯಿಂದ ಒಂದು ಲಾರಿ ಮಧ್ಯ ರಸ್ತೆ ಮೇಲೆ ಬಂದ ಕಾರಣ ನಿಸ್ಕಾಳಜಿತನದಿಂದ ಬಾಜು ರೋಡಿಗೆ ಗಾಡಿ ಸೈಡ ತಗೊಳಲಾಗಿ ಹಾಗೆಯೇ ಟ್ಯಾಂಕರ ಕುಸಿದು ಗಾಲಿಗಳು ಮೇಲಾಗಿ ಟ್ಯಾಂಕರ ಜಮೀನಿಗೆ ಹೊಂದಿ ಪಲ್ಟಿಯಾಗಿತ್ತು. ಆದರೆ ಯಾರಿಗೂ ಕೂಡಾ ಈ ಅಪಘಾತದಿಂದ ಯಾರಿಗೂ ಕೂಡಾ ಜೀವ ಹಾನಿಯಾಗದ ಕಾರಣ ಇದರ ಬಗ್ಗೆ ಭೀಮಳ್ಳಿ ಇನ್ಸುರೇನ್ಸ ಸವರ್ೆಯರ ಕರೆತಂದು ಪಂಚನಾಮೆ ಮಾಡಿಸಿ, ತಮಗೆ ತಿಳಿಸದೆ ಗಾಡಿ ಎತ್ತಿಕೊಂಡು ರಿಪೇರಿಗೆ ಟಿವಿಎಸ್ ದಲ್ಲಿ ಬಿಟ್ಟಿದ್ದು ಇತ್ತು. ಆದರೆ ಇನ್ಸುರೇನ್ಸ ಕಂಪನಿಯವರು ಈ ಅಪಘಾತದ ಬಗ್ಗೆ ಪೊಲೀಸ್ ತನಿಖೆ ಆಗುವವರೆಗೂ ಯಾವುದೇ ಕ್ರಮ ಕೈಕೊಳ್ಳುವುದಿಲ್ಲ ಅಂತಾ ನಮಗೆ ತಿಳಿಸಿದ್ದು ಇತ್ತು. ಪುನಃ ಇನ್ಸುರೇನ್ಸ ಕಂಪನಿಯ ತನಿಖಾಧಿಕಾರಿಗಳಾದ ಬಿ. ಎಸ್ ಮಾಲಗತ್ತಿ ನಿವೃತ್ತ ಡಿವೈ.ಎಸ್.ಪಿ ಇವರ ಹತ್ತಿರ ಬಂದಾಗ ಅಪಘಾತ ನಡೆದ ಬಗ್ಗೆ ಪೊಲೀಸ್ ತನಿಖೆಯಾಗಬೇಕಾಗುತ್ತದೆಂದು ನಮಗೆ ತಿಳಿಸಿದ್ದು, ಅದರ ಪ್ರಕಾರ ಈ ಅಪಘಾತದ ಬಗ್ಗೆ ನಾವು ಹೇಳಿದ್ದನ್ನು ನಮ್ಮ ಸಮಕ್ಷಮದಲ್ಲಿ ಟೈಪ ಮಾಡಿಸಿದ್ದು, ಅದನ್ನು ನಮಗೆ ಓದಿ ಹೇಳಿದ್ದು, ಈ ಅಪಘಾತ ನಡೆದ ಬಗ್ಗೆ ಸವಿಸ್ತಾರ ಮಾಹಿತಿ ಸರಿ ಇರುತ್ತದೆ ಅಂತಾ ನಾನು ಅದಕ್ಕೆ ರುಜು ಮಾಡಿರುತ್ತೇನೆ. ಸದರಿ ಅಪಘಾತವು ನನ್ನ ತಮ್ಮನ ನಿಸ್ಕಾಳಜಿತನದ ಚಾಲನೆಯಿಂದ ಸೈಡಿಗೆ ಮಣ್ಣಿನ ರೋಡಿನ ಮೇಲೆ ಭಾರವಾದ ಟ್ಯಾಂಕರನ್ನು ತೆಗೆದುಕೊಂಡು ಹೋದ ಕಾರಣ ಪಲ್ಟಿಯಾಗಿರುತ್ತದೆ. ಪಲ್ಟಿಯಾದ ಟ್ಯಾಂಕರನ್ನು ಈ ಮೇಲ್ಕಾಣಿಸಿದ ಸಾಕ್ಷೀದಾರರ ಸಹಾಯದಿಂದ ಒಂದು ಕ್ರೇನ ಅನ್ನು ರಾಯಚೂರಿನಿಂದ ತರಿಸಿ, ಅದನ್ನು ಎತ್ತಿ ಟಿವಿಎಸ್ ಕಂಪನಿಗೆ ಬಿಟ್ಟಿದ್ದು, ಸದರಿ ಟ್ಯಾಂಕರ ಟಿವಿಎಸ್ ಕಂಪನಿಯಲ್ಲಿದೆ. ಆದ್ದರಿಂದ ಮೇಲ್ಕಂಡ ವಿಷಯದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಿ, ಪಂಚನಾಮೆ ನಡೆಸಿ, ಕ್ರಮ ಕೈಕೊಳ್ಳಲು ನನ್ನ ದೂರು ಇರುತ್ತದೆ. ಯಾರಿಗೂ ಕೂಡಾ ಗಾಯ ಆಗದ ಕಾರಣ ನಾವು ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಬಂದಿರಲಿಲ್ಲ. ಆದರೆ ಇನ್ಸೂರೇನ್ಸ ಕಂಪನಿಯವರು ಕಡ್ಡಾಯವಾಗಿ ಅಪಘಾತದ ಬಗ್ಗೆ ತನಿಖೆಯಾಗಬೇಕೆಂದು ಈ ದೂರನ್ನು ಸಲ್ಲಿಸುತ್ತಿದ್ದೇವೆ ಎಂದು ಕೊಟ್ಟ ಕಂಪ್ಯೂಟರ ಟೈಪ ಮಾಡಿದ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 09/2020 ಕಲಂ: 279 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 35/2018 ಕಲಂ: 87 ಕೆ.ಪಿ.ಕಾಯ್ದೆ:- ಇಂದು ದಿನಾಂಕ:02-02-2020 ರಂದು 7:15 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಚೇತನ್ ಪಿ.ಎಸ್.ಐ (ಕಾ&ಸೂ)  ಸಾಹೇಬರುಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ 13 ಜನಆರೋಪಿತರನ್ನುಠಾಣೆಗೆತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆಇಂದು ದಿನಾಂಕ:02-02-2020 ರಂದು 02-30 ಪಿ.ಎಮ್.ಕ್ಕೆಠಾಣೆಯಲ್ಲಿದ್ದಾಗಖಚಿತವಾದ ಮಾಹಿತಿ ಬಾತ್ಮಿ ಬಂದಿದ್ದೆನೆಂದರೆ ಹೇಮನೂರ ಸೀಮಾಂತರ ಕೇನಲ್ರಸ್ತೆಯ ಮಾರ್ಗ ಮಧ್ಯದಲ್ಲಿ  ಕೆಲವು ಜನರು ಕೋಳಿ ಪಂದ್ಯದಲ್ಲಿ ಹಣವನ್ನು ಪಣಕ್ಕಿಟ್ಟುಜೂಜಾಟಆಡುತ್ತಿದ್ದಾರೆಅಂತಾ ಮಾಹಿತಿಖಚಿತ ಬಂದ ಮೇರೆಗೆಠಾಣೆಯಲ್ಲಿ ಹಾಜರಿದ್ದ ಸಿಬ್ಬಂಧಿಯವರಾದ 1) ಶ್ರೀ ನಿಂಗಪ್ಪ ಹೆಚ್ಸಿ-118 2) ಶ್ರೀ ರವಿಕುಮಾರ ಸಿಪಿಸಿ-289 3) ಶ್ರೀ ಶರಣು ಸಿಪಿಸಿ-224 4) ಪರಮೇಶ ಸಿಪಿಸಿ-142 5) ಶ್ರೀ ವಿರೇಶ ಸಿಪಿಸಿ-374 6) ಶ್ರೀ ಮಂಜುನಾಥ ಸಿಪಿಸಿ-271 7) ಶ್ರೀ ಬಸಪ್ಪ ಸಿಪಿಸಿ-393 ಎಲ್ಲರಿಗೂ ವಿಷಯ ತಿಳಿಸಿ ಠಾಣೆಯ ಶ್ರೀ ಪರಮೇಶ ಸಿಪಿಸಿ-142 ರವರಿಗೆಇಬ್ಬರು ಪಂಚರನ್ನುಕರೆದುಕೊಂಡು ಬರಲು ತಿಳಿಸಿದ ಪ್ರಕಾರ ಪರಮೇಶ ಸಿಪಿಸಿ-142 ರವರುಇಬ್ಬರು ಪಂಚರಾದ 1) ಶ್ರೀ ತಿರುಪತಿತಂದೆರಾಮಣ್ಣಕರಿಗುಡ್ಡಾ ವಯಾ:40 ವರ್ಷ ಉ:ಒಕ್ಕಲುತನ ಜಾತಿ:ಬೇಡರ ಸಾ:ಚೌಡೇಶ್ವರಿಹಾಳ 2) ಶ್ರೀ ಸೋಪಿಸಾಬ ತಂದೆ ಬಾಸುಮಿಯ್ಯಾ ನಾಯ್ಕೋಡಿ ವಯಾ:28 ವರ್ಷ ಉ:ಕೂಲಿ ಜಾತಿ: ಮುಸ್ಲಿಂ ಸಾ:ಹೆಮನೂರತಾ:ಸುರಪೂರಇವರನ್ನು 02:45 ಪಿ.ಎಂ.ಕ್ಕೆ ಠಾಣೆಗೆ ಬರಮಾಡಿಕೊಂಡು ಬಂದಿದ್ದು ಸದರಿಯವರಿಗೆ ವಿಷಯವನ್ನು ತಿಳಿಸಿ ದಾಳಿ ಕಾಲಕ್ಕೆ ನಮ್ಮೋಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಸದರಿ ಪಂಚರೊಂದಿಗೆಎಲ್ಲರೂಕೂಡಿಠಾಣೆಯಿಂದ 3 ಪಿ.ಎಮ್.ಕ್ಕೆಒಂದು ಖಾಸಗಿ ವಾಹನದಲ್ಲಿ ಹೊರಟು 03-45 ಪಿ.ಎಮ್.ಕ್ಕೆ ಹೇಮನೂರ ಸಿಮಾಂತರ ಕೇನಾಲ್ರಸ್ತೆಯ ಮಾರ್ಗ ಮಧ್ಯದ ವೆಂಕೊಬ ಬಿರಾದಾರಇವರ ಹೊಲದ ಹತ್ತಿರ ಹೋಗಿ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸ್ವಲ್ಪ ನಡೆದುಕೊಂಡು ಹೋಗಿ ಗಿಡಗಳ ಮರೆಯಾಗಿ ನಿಂತು ನೋಡಲಾಗಿ ವೆಂಕೊಬ ಬಿರಾದಾರಇವರ ಹೊಲದ ಪಕ್ಕದಲ್ಲಿರುವಕೇನಾಲದ ಸಾರ್ವಜನಿಕರಸ್ತೆಯಲ್ಲಿಜನರು ಗುಂಪಾಗಿ ಕೋಳಿ ಪಂದ್ಯವಾಡುತ್ತಾ ಅವುಗಳ ಮೇಲೆ ಹಣವನ್ನು ಪಣಕ್ಕಿಟ್ಟುಜೂಜಾಟವಾಡುತ್ತಿದ್ದದ್ದನ್ನುಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು 4 ಪಿ.ಎಮ್.ಕ್ಕೆಒಮ್ಮೆಲೆಅವರ ಮೇಲೆ ದಾಳಿಮಾಡಲಾಗಿ ಒಟ್ಟು 13 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ1) ನಿಂಗಪ್ಪತಂದೆ ಹಣಮಂತ್ರಾಯ ಕನ್ನಳ್ಳಿ ವಯಾ: 20 ವರ್ಷಜಾತಿ:ಬೇಡರ ಉ:ಕೂಲಿ ಸಾ:ದೇವರಗೋನಾಲಅಂತ ತಿಳಿಸಿದ್ದು ಆತನಅಂಗಶೋಧನೆ ಮಾಡಲಾಗಿ ಹತ್ತಿರ 220/- ನಗದು ಹಣ ಸಿಕ್ಕಿದ್ದು 2) ಪರಶುರಾಮತಂದೆ ಬಾಲದಂಡಪ್ಪ ಕನ್ನೊಳ್ಳಿ ವಯಾ: 22 ವರ್ಷಜಾತಿ:ಬೇಡರ ಉ:ಒಕ್ಕಲುತನ ಸಾ:ದೇವರಗೋನಾಲ ಆತನ ಹತ್ತಿರ 200/- ನಗದು ಹಣ ಸಿಕ್ಕಿದ್ದು 3) ಹಣಮಂತ್ರಾಯತಂದೆ ಗಾಳೆಪ್ಪ ಕರಿಗುಡ್ಡದವರ ವಯಾ:20 ವರ್ಷಜಾತಿ:ಬೇಡರ ಉ:ಒಕ್ಕಲುತನ ಸಾ:ಚೌಡೆಶ್ವರಹಾಳ  ಆತನ ಹತ್ತಿರ 240/- ನಗದು ಹಣ ಸಿಕ್ಕಿದ್ದು 4) ಶಿವಪ್ಪ ತಂದೆ ಪರಮಣ್ಣಕಾಟೇನವರ ವಯಾ:35 ವರ್ಷ ಉ:ಒಕ್ಕಲುತನ ಜಾ:ಬೇಡರ ಸಆ:ಬಿಜಾಸಪೂರಈತನ ಹತ್ತಿರ 180/- ನಗದು ಹಣ ಸಿಕ್ಕಿದ್ದು 5)  ಮೌನೇಶತಂದೆ ಬೀಮಣ್ಣಕಾಟೇನವರ ವಯಾ:23 ಜಾತಿ:ಬೇಡರ ಉ:ಒಕ್ಕಲುತನ ಸಾ:ಬಿಜಾಸಪೂರಈತನ ಹತ್ತಿರ 220/- ನಗದು ಹಣ ಸಿಕ್ಕಿದ್ದು ಈತನ ಹತ್ತಿರ 160/- ನಗದು ಹಣ ಸಿಕ್ಕಿದ್ದು 6) ಬೀರಪ್ಪತಂದೆದಂಡಪ್ಪಎಮ್ಮೇರ ವಯಾ:22 ವರ್ಷಜಾತಿ:ಕುರುಬರ ಉ:ಗೌಂಡಿಕೆಲಸ ಸಾ:ಗಂಗನಾಳ ತಾ:ಶಹಾಪೂರ 7) ದೇವಪ್ಪತಂದೆ ಹಣಮಂತ ನರಬೋಳಿ ವಯಾ:28 ವರ್ಷಜಾತಿ:ಬೇಡರ ಉ:ಕೂಲಿ ಕೆಲಸ ಸಾ:ಮದರಕಲ್ತಾ:ಶಹಾಪೂರಈತನ ಹತ್ತಿರ 140/- ನಗದು ಹಣ ಸಿಕ್ಕಿದ್ದು 8) ವೆಂಕಟೇಶತಂದೆಗೋವಿಂದಪ್ಪ ಪೂಜಾರಿ ವಯಾ:20 ವರ್ಷಜಾತಿ:ಬೇಡರ ಉ:ಒಕ್ಕಲುತನ ಸಾ:ವಾಗಣಗೇರಾಈತನ ಹತ್ತಿರರೂ. 380 ನಗದು ಹಣಇರುತ್ತದೆ 9) ಹಸನಸಾಬ ತಂದೆ ಬಾಸುಮಿಯ್ಯಾ ನಾಯ್ಕೋಡಿ ವಯಾ: 28 ವರ್ಷಜಾತಿ:ಮುಸ್ಲಿಂ ಉ:ಒಕ್ಕಲುತನ ಸಾ:ಹೇಮನೂರ 180/- ನಗದು ಹಣ ಸಿಕ್ಕಿದ್ದು. 10) ಗೋಪಾಲ ತಂದೆ ಬಸಪ್ಪ ಶಿಬರಬಂಡಿ ವಯಾ:26 ವರ್ಷಜಾತಿ:ಕಬ್ಬಲಿಗ ಉ:ಒಕ್ಕಲುತನ ಸಾ:ವೇಂಕಟಾಪೂರಅಂತಾ ತಿಳಿಸಿದ್ದು ಈತನ ಹತ್ತಿರರೂ. 230/- ನಗದು ಹಣಇರುತ್ತದೆ. 11) ವೆಂಕಟೇಶತಂದೆ ಸೋಮರಾಯ ಮೀನಗಾರ ವಯಾ: 20 ವರ್ಷಜಾ:ಮಾದಿಗ ಉ:ಒಕ್ಕಲುತನ ಸಾ:ಮರಕಲ್ತಾ:ಶಹಾಪೂರಈತನ ಹತ್ತಿರ ರೂ.280/- ನಗದು ಹಣಇರುತ್ತದೆ. 12) ಹಣಮಂತತಂದೆ ಸೋಮರಾಯ ಮೀನುಗಾರ ವಯಾ|| 20 ವರ್ಷಜಾ: ಮಾದಿಗ ಉ: ಕೂಲಿ ಸಾ:ಮರಕಲ್ತಾ:ಶಹಾಪೂರಈತನ ಹತ್ತಿರ ರೂ.140/- ನಗದು ಹಣಇರುತ್ತದೆ. 13) ಬೀಮು ತಂದೆಅಪ್ಪಣ್ಣ ಮೀನಗಾರ ವಯಾ: 27 ಜಾತಿ:ಮಿನುಗಾರ ಉ: ಕೂಲಿ ಸಾ: ಹರವಾಳ ತಾ:ಜೇವರಗಿಈತನ ಹತ್ತಿರ ರೂ.300/- ನಗದು ಹಣಇರುತ್ತದೆ ಹೀಗೆ ಒಟ್ಟು ನಗದು ಹಣ 2870=00 ಹಾಗೂ ಕಣದಲ್ಲಿ 4 ಹುಂಜಗಳು ಇದ್ದು ಅವುಗಳ ಅ.ಕಿ.800/-ರೂ ಮತ್ತು 4 ಕತ್ತಿಗಳು ಅ.ಕಿ 00=00  12 ಮೊಟಾರ ಸೈಕಲಗಳು ಹೀಗೆ ಒಟ್ಟು 1,13,670=00 ರೂ ನೇದ್ದವುಗಳನ್ನು ಪಂಚರ ಸಮಕ್ಷಮಜಪ್ತಿ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು 4 ಪಿ.ಎಮ್.ದಿಂದ 5-30 ಪಿ.ಎಮ್.ದ ವರೆಗೆ ಮಾಡಿ 13 ಜನಆರೋಪಿತರು ಮತ್ತು ಮುದ್ದೇಮಾಲುಗಳನ್ನು ವಶಕ್ಕೆ ತಗೆೆದುಕೊಂಡು ಮರಳಿ ಠಾಣೆಗೆ 07:15 ಪಿ.ಎಂ.ಕ್ಕೆ ಬಂದುತಮ್ಮ ವಶಕ್ಕೆ ಒಪ್ಪಿಸುತ್ತಿದ್ದರ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ
ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 08/2020 ಕಲಂ 379 ಐಪಿಸಿ ಮತ್ತು 44(1) ಕೆಎಮ್ಎಮ್ಸಿ ರೂಲ್ 1994:- 02/02/2020 ರಂದು 9.45 ಪಿಎಮ್ ಕ್ಕೆ ಭೀ.ಗುಡಿಯ ಅಗ್ರಿ ಕಾಲೇಜ ಸ್ಟೇಡಿಯಂ ಕ್ರಾಸ್ ಹತ್ತಿರ ಇದ್ದಾಗ ಅದೇ ಸಮಯಕ್ಕೆ ಶಹಾಪುರ ಕಡೆಯಿಂದ ಒಂದು ಮರಳು ತುಂಬಿದ ಟ್ರಕ್ ನಂಬರ್:ಕೆಎ-29, ಬಿ-8487 ಅದರಲ್ಲಿ ಅಂದಾಜು 15000/- ರೂ ಕಿಮ್ಮತ್ತಿನ 12 ಮೆಟ್ರಿಕ್ ಟನ್ ಮರಳು ತುಂಬಿಕೊಂಡು ಬಂದಾಗ ಟ್ರಕ್ ಚಾಲಕನಿಗೆ ಹಿಡಿದು ವಿಚಾರಿಸಲಾಗಿ ತಾನು ಮತ್ತು ಟ್ರಕ್ ಮಾಲಿಕ ಸಕರ್ಾರಕ್ಕೆ ರಾಜಧನ(ರಾಯಲ್ಟಿ)ವನ್ನು ಕಟ್ಟದೇ ಟ್ರಕ್ದಲ್ಲಿ ಪರತಾಪುರ ಸೀಮಾಂತರದಲ್ಲಿ ಬರುವ ಕೃಷ್ಣಾ ನದಿಯಲ್ಲಿ ಕಳ್ಳತನದಿಂದ ಮರಳು ಲೋಡ ಮಾಡಿಕೊಂಡು ಅಕ್ರಮವಾಗಿ ಸಾಗಿಸಿದ್ದು ಇರುತ್ತದೆ ಅಂತಾ ತಿಳಿಸಿದ್ದರಿಂದ ಪಂಚರ ಸಮಕ್ಷಮ 10 ಪಿ.ಎಮ್. ದಿಂದ 11 ಪಿ.ಎಮ್ ವರೆಗೆ ಜಪ್ತಿ ಪಂಚನಾಮೆ ಕೈಕೊಂಡು ಆರೋಪಿ ಮತ್ತು ಮರಳು ತುಂಬಿದ ಟ್ರಕ್ಕನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದರಿಂದ ಭೀ.ಗುಡಿ ಠಾಣೆ ಗುನ್ನೆ ನಂ. 08/2020 ಕಲಂ 379 ಐಪಿಸಿ ಮತ್ತು 44(1) ಕೆಎಮ್.ಎಮ್.ಸಿ ರೂಲ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ 34/2020.ಕಲಂ 323 324 504 506 ಸಂ 34 ಐ.ಪಿ.ಸಿ.:- ದಿನಾಂಕ 02/02/2020 ರಂದು 20-30 ಗಂಟೆಗೆ ಪಿಯರ್ಾದಿ ಶ್ರೀ ಶೇಖ ಸಾದಿಕ ತಂದೆ ಶೇಖ್ ಯಾಕೂಬ ಮಡಕಿ ವ|| 39 ಜಾ|| ಮುಸ್ಲಿಂ ಉ|| ಚಾಲಕ ಸಾ|| ಇಜೇರಿ ತಾ|| ಜೇವಗರ್ಿ ಹಾ|| ವ|| ಆದಿಲ್ ಪೂರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನಮ್ಮೂರಾದ ಇಜೇರಿಗ್ರಾಮದ ನಮ್ಮ ಹೋಲದ ಸಂಬಂದವಾಗಿ ನಮ್ಮ ಅಣ್ಣತಮಕಿಯವರಾದ ರಾಜಮತ ತಂದೆ ಸೈಯದ ಹುಸೇನ್ ಮಡಕಿ ಇತನಿಗು ಮತ್ತು ನಮಗು ತಕರಾರು ಇದ್ದು ನಮ್ಮೊಂದಿಗೆ ಆಗಾಗ ತಕರಾರು ಮಾಡುತ್ತ ಬಂದಿದ್ದು ನಾನು ಹೋಗಲಿ ಅಂತ ಸುಮ್ಮನಾಗಿದ್ದೆನು. 
        ಹೀಗಿದ್ದು ದಿನಾಂಕ 26/01/2020 ರಂದು ರಾತ್ರಿ 7-30 ಗಂಟೆಗೆಯ ಸುಮಾರಿಗೆ ನಾನು ನಮ್ಮ ಮನೆಯ ಕಡೆಗೆ ಶಹಾಪೂರ-ಸುರಪೂರ ರಸ್ತೆಯ ಮೇಲೆ ಜೋಗುರ ಕಾಂಪ್ಲೆಕ್ಸ ಮುಂದೆ ಹೋಗುತ್ತಿರುವಾಗ ನಮ್ಮ ಅಣ್ಣತಮಕಿಯ 1] ರಾಜಮತ ತಂದೆ ಸೈಯದ ಹುಸೇನ ಮಡಕಿ, 2] ಖಾಜಾಲಾಲ್ ತಂದೆ ಸೈಯದ ಹುಸೇನ ಮಡಕಿ ಇಬ್ಬರು ಸಾ|| ಇಜೇರಿ ಗ್ರಾಮ ಇವರು ಬಂದವರೆ ಲೇ ಸಾದೀಕ್ಯಾ ಬಾಡಕೋ ಸೂಳಿಮಗನೆ ಊರಲ್ಲಿನ ಹೋಲದ ಸಂಬಂದವಾಗಿ ತಕರಾರು ಮಾಡುತಿ ಬಾರಲೆ ಅಂತ ಅಂದಾಗ, ಆಗ ನಾನು ನಾವು ಯಾಕ ತಕರಾರು ಮಾಡತಿವಿ ನಿವೆ ತಕರಾರು ಮಾಡುತ್ತಿರಿ ಅಂತ ಅಂದಾಗ  ಎದರು ಮಾತನಾಡುತ್ತೆನೆಲೆ ಸೂಳಿ ಮಗನೆ ಅಂತ ಅಂದವರೆ, ರಾಜಮತ ಈತನು ಅಲ್ಲೆ ಬಿದ್ದಿದ್ದ ಒಂದು ಕಲ್ಲಿನಿಂದ ನನಗೆ ಎಡಗೈ ಮೋಳಕೈ ಮೇಲೆ ಹೋಡೆದು ರಕ್ತಗಾಯ ಮಾಡಿದನು. ಖಾಜಾಲಾಲ್ ತಂದೆ ಸೈಯದ ಹುಸೇನ್ ಈತನು ತನ್ನ ಕೈಯಿಂದ ನನ್ನ ಬಲಗೈ ಹಸ್ತದ ಕಿಲಿಗೆ, ಎದೆಗೆ ಹೋಡೆದು ಗುಪ್ತಗಾಯ ಮಾಡಿದನು, ಆಗ ಅಲ್ಲೆ ಹೋರಟಿದ್ದ ಮಹ್ಮದ್ ಯುಸುಫ್ ತಂದೆ ಮಹ್ಮದ್ ಹನೀಫ್ ವನದುಗರ್ಾ, ಸೈಯದ ಚುನ್ನು ತಂದೆ ಸೈಯದ್ ರುಕ್ಮುದ್ದಿನ್ ಮೀರವಾಲೆ, ಸಾ|| ಇಬ್ಬರು ಶಹಾಪೂರ ಇವರು ಸದರಿ ಜಗಳವನ್ನು ನೋಡಿ ಬಂದು ಜಗಳ ಬಿಡಿಸಿಕೊಂಡರು. ಆಗ ರಾಜಮತ ಮತ್ತು ಖಾಜಾಲಾಲ್ ಇಬ್ಬರು ಕೂಡಿ ಇವತ್ತು ಉಳಿದುಕೊಂಡಿದಲೆ ಸೂಳಿ ಮಗನೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವ ಬೆದರಿಕೆ ಹಾಕಿ ಹೋದರು, ಸದರಿ ಜಗಳವು ಜೋಗುರ ಕಾಂಪ್ಲೆಕ್ಸ ಮುಂದೆ ರಾತ್ರಿ 7-30 ಗಂಟೆಗೆ ಜೋಗು ಕಾಂಪ್ಲೆಕ್ಸ ಲೈಟಿನ ಬೆಳಕಿನಲ್ಲಿ ಜರುಗಿರುತ್ತದೆ. ನಂತರ ನಾನು ಸರಕಾರಿ ಆಸ್ಪತ್ರೆ ಶಹಾಪೂರದಲ್ಲಿ  ಉಪಚಾರ ಪಡೆದಿದ್ದು, ನಮ್ಮ ಊರಿನ ಹೀರಿಯರೊಂದಿಗೆ ವಿಚಾರ ಮಾಡಿ ತಡವಾಗಿ ಇಂದು ಠಾಣೆಗೆ ಬಂದು ದೂರು ಸಲ್ಲಿಸಿದ್ದು ಸದರಿ ಅಜರ್ಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 34/2019 ಕಲಂ 323.324.504.506. ಸಂ.34. ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು
AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA:- ¦JDgÀ £ÀA. 04/2020 PÀ®A 107 ¹.Dgï.¦.¹:- ನಾನು ಕೃಷ್ಣ ಸುಬೇದಾರ ಪಿ.ಎಸ್.(.ವಿ) ಯಾದಗಿರಿ ನಗರ ಠಾಣೆ ಮಾನ್ಯರಲ್ಲಿ ಸಲ್ಲಿಸುವ ವರದಿ ಏನೆಂದರೆ,  ದಿನಾಂಕ 31/01/2020 ರಂದು ಕೆ.ಮೊಹ್ಮದ ಅಕ್ಬರ ಮತ್ತು ಇತರರು ಠಾಣೆಗೆ ಹಾಜರಾಗಿ ದಿನಾಂಕ 02/02/2020 ರಂದು ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು  ವಿರೋದಿಸಿ ಸಾಯಂಕಾಲ 7-00 ಗಂಟೆಯಿಂದ 9-00 ಗಂಟೆಯವರಗೆ ಯಾಕೂಬ ಬುಕಾರಿ ದರ್ಗಾದಿಂದ ಗಾಂಧಿ ವೃತ್ತದ ವರಗೆ ಮೇಣದ ಬತ್ತಿ ಬೆಳಗಿಸುವ ಮಾನವ ಸರಪಳಿ ಮಾಡುವುದ್ದಾಗಿ ಅರ್ಜಿ ನೀಡಿದ್ದು ಇರುತ್ತದೆ. ನಂತರ  ಇಂದು ದಿನಾಂಕ 02/02/2020 ರಂದು ಸಾಯಂಕಾಲ 7-00 ಗಂಟೆಯಿಂದ 9-00 ಗಂಟೆಯವರಗೆ 1) ಕೆ.ಮೊಹ್ಮದ ಅಕ್ಬರ.2) ಶೇಖ ಜಹೀರುದ್ದೀನ 3)ಅಬ್ದುಸ್ ಸಲೀಂ ಸಗ್ರೀ 4) ಮನಸೂರ ಆಹ್ಮದ ಅಫಘಾನ 5) ಇನಾಯತ ಉರ್ ರೇಹಮಾನ್ 6) ಗುಲಾಮ ಜಿಲಾನಿ ಅಪಘಾನ 7) ಶೇಖ ದಾವುದ ಖುರೇಷಿ 8) ಗುಲಾಮ ಸಮದಾನಿ ಮೂಸಾ9) ನೂರುದ್ದೀನ ಜಾಗೀರದಾರ 10) ಶೇಖ ಸಾದ್ದೀಕ್ 11)ಮೊಹ್ಮದ ಯಾಕೂಬ 12) ಶೇಫಿಯುಜಮಾನ ಮೇಹತರ್ 12) ಅನ್ವಾರ ಹುಸೇನ ಪಟೇಲ್ 13)ಬುರಹನುದ್ದೀನ್ ಆಹ್ಮದ (ಅಜ್ಜುಎಲ್ಲಾರು ಸಾ: ಯಾದಗಿರಿ ರವರು ಎಲ್ಲರು  ಸೇರಿ  ತಮ್ಮ ನೇತೃತ್ವದಲ್ಲಿ ಸುಮಾರು 2000 ಸಾವಿರ ಜನರನ್ನು ಸೇರಿಸಿ ಯಾಕೂಬ ಬುಕಾರಿ ದರ್ಗಾದಿಂದ ಗಾಂಧಿ ವೃತ್ತದ ವರೆಗೆ ಮೇಣದ ಬತ್ತಿ ಬೆಳಗಿಸುವ ಮುಖಾಂತರ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ವಿರೋದಿಸಿ   ಮಾನವ ಸರಪಳಿ ಕಾರ್ಯಕ್ರಮ ಮಾಡಿದ್ದು ಇರುತ್ತದೆ. ಸದರಿ ಮೇಲ್ಕಂಡ ಜನರು ಮುಂದೆಯು ಸಹ ಇದೇರೀತಿ ಬಹಳಷ್ಟು ಜನರನ್ನು ಸೇರಿಸಿ ಪ್ರತಿಭಟನೆ, ಸಭೆ ಸಮಾರಂಭ, ಕಾರ್ಯಕ್ರಮ, ಧರಣಿ ಸತ್ಯಗ್ರಹ ಮಾಡುವ ಸಾದ್ಯತೆಗಳಿರುತ್ತವೆ ರೀತಿ ಮಾಡುವುದ್ದರಿಂದ ಸಾರ್ವಜನಿಕ ನೇಮ್ಮದಿಗೆ ತೊಂದರೆ ಉಂಟಾಗಿ, ಗಲಾಟೆ ಗದ್ದಲಗಳಾಗಿ ಸಾರ್ವಜನಿಕ ಶಾಂತತೆಗೆ ಭಂಗ ಉಂಟಾಗಿ ಪ್ರಾಣ ಹಾನಿ ಆಸ್ತಿ ಹಾನಿಯಾಗುವ ಸಾದ್ಯತೆಗಳಿರುತ್ತವೆ. ಕಾರಣ ಸದರಿಯವರಿಂದ ಮುಂದೆ ಜರುಗಬಹುದಾದ ಸಂಭವನೀಯ ಅಪರಾಧ ತಡೆಗಟ್ಟುವಗೊಸ್ಕರ ಮುಂಜಾಗೃತ ಕ್ರಮವಾಗಿ ಇಂದು ದಿನಾಂಕ; 02/00/2020 ರಂದು 9-30 ಪಿ.ಎಮ್ ಕ್ಕೆ ಠಾಣೆಯ ಪಿ..ಆರ್ ನಂ. 04/2020 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ. ಕಾರಣ ಮಾನ್ಯರವರು ಸದರಿ ಆರೋಪಿತರ ವಿರುದ ಕಲಂ.116(2) ಸಿ.ಆರ್.ಪಿ.ಸಿ ಪ್ರಕಾರ ಸದ್ವರ್ತನೆಗಾಗಿ ಇಂಟೆರಿಯಮ ಬಾಂಡ ಪಡೆದುಕೊಳ್ಳಲು ವಿನಂತಿ



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!