ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 01/02/2020

By blogger on ಶನಿವಾರ, ಫೆಬ್ರವರಿ 1, 2020

                        
                                ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 01/02/2020

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ.108/2019 ಕಲಂ.323,324,354,504,506, ಸಂ. 34 ಐಪಿಸಿ ಮತ್ತು  ಕಲಂ.3(1)ಡಿತಿ, 3(2)ತ-ಚಿ  ಛಿ/ಣ ಕಂ ಂಛಿಣ-1989:- ದಿನಾಂಕ28/12/2019 ಬೆಳಿಗ್ಗೆ 11.00 ಗಂಟೆಗೆ ಚಂದ್ರಕಲಾ ತಂದೆ ಲಕ್ಷ್ಮಣ ವಯಾ:20 ಜಾತಿ:ಲಂಬಾಣಿ ಉ:ಕೂಲಿಕೆಲಸ ಸಾ: ರಾಜೀವಗಾಂಧಿನಗರ ಯಾದಗಿರಿ ರವರ ದೂರು  ಅಜರ್ಿ ಏನೆಂದರೆ ದಿನಾಂಕ26/12/2019 ರಂದು ಸಾಯಂಕಾಲ ನಾನು ಮನೆಯಲ್ಲಿದ್ದಾಗ ನನ್ನ ತಮ್ಮ ಮಂಗೇಶ ವಯಾ: 12 ವರ್ಷ ಈತನು ಹೊರಗಡೆ ಆಟ ಆಡಲು ಮನೆಯಿಂದ ಹೊರೆಗೆ ಹೋದನು. ಸ್ವಲ್ಪ ಹೊತ್ತಿನ ನಂತರ ಮೌಲು ಎಂಬಾತನು ನನಗೆ ಪೊನ ಮಾಡಿ ನಿನ್ನ ತಮ್ಮನಿಗೆ ಜಗ್ಗು ಮತ್ತು ಅವನ ಹೆಂಡತಿ ಲಕ್ಷ್ಮಿ ಇವರು  ಹೊಡೆಬಡೆ ಮಾಡುತ್ತಿದ್ದಾರೆ ಅಂತಾ ತಿಳಿಸಿದಾಗ ನಾನು  ಮನೆಯಿಂದ ಹೊರಡಗಡೆ ಓಡಿ ಹೋಗಿ ನೋಡಲು ಜಗ್ಗು ಈತನ ಮನೆಯ ಮುಂದೆ ಜಗ್ಗು ಮತ್ತು ಅವನ ಹೆಂಡತಿ ಲಕ್ಷ್ಮಿ ಇಬ್ಬರು ಸೇರಿ ಅವಾಚ್ಚ ಬೈಯಿತ್ತಾ ಜಗ್ಗು ಈತನು ತನ್ನ ಕೈಯಲ್ಲಿದ್ದ ಬಿಯರ್ ಮದ್ಯದ ಬಾಟಲಿಯಿಂದ ನನ್ನ  ತಮ್ಮನ ಎಡ ಕಿವಿಗೆ ಹೊಡೆದು ಬಾರಿ ರಕ್ತಗಾಯಗೊಳಿಸಿದ್ದು ಮತ್ತು ಜಗ್ಗುನ ಹೆಂಡತಿ ಲಕ್ಷ್ಮಿ ಇವಳು ರಾಡಿನಿಂದ  ಮೈಮೇಲೆ ಅಲ್ಲಲ್ಲಿ ಹೊಡೆದು  ಗುಪ್ತಗಾಯ ಮಾಡಿರುತ್ತಾಳೆ. ಆಗ ನಾನು ಜಗಳ ಬಿಡಿಸಲು ಹೋದಾಗ  ಜಗ್ಗು ಈತನು ಲೇ ಬೋಸಡಿ ರಂಡಿ ನೀನು ನಡುವೆ ಬರತ್ತೀಯಾ  ಅಂತಾ ತೆಲೆ ಮೇಲಿನ ಕೂದಲು ಹಿಡಿದು ಜಗ್ಗಾಡಿ ಬೆನ್ನು ಮೇಲೆ ಗುದ್ದಿ ಮೈ ಮೇಲಿನ ಬಟ್ಟೆ  ಹಿಡಿದು ಜಗ್ಗಾಡಿ ಹಲ್ಲೆ ಮಾಡಿರುತ್ತಾನೆ.  ಲಕ್ಷ್ಮಿ ಇವಳು ಕೈಯಿಂದ ನನಗೆ ಹೊಡೆ ಬಡೆ ಮಾಡಿರುತ್ತಾಳೆ. ಇಬ್ಬರು ಸೇರಿ ಲೇ ಬೋಸಡಿ ಮಕ್ಕಳೆ ಇನ್ನೂಮ್ಮೆ ನಮ್ಮ ಮನೆಯ ಮಂದೆ ಆಟ ಆಡಲು ಬಂದರೆ ನಿನ್ನ ಜೀವ ಸಹಿತ ಬಿಡವುದಿಲ್ಲಾ ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ. ಸದರಿ ಘಟನೆಯು ದಿನಾಂಕ 26/12/2019 ರಂದು ಸಾಯಂಕಾಲ ಸುಮಾರು 5.20 ಗಂಟೆಗೆ ಜರುಗಿದ್ದು   ಅಂತಾ ಪಿರ್ಯಾದಿ ಅಜರ್ಿ ನೀಡಿದ್ದರ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 108/2019 ಕಲಂ 323.324.354.504.506 ಸಂ 34 ಐಪಿಸಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
      ಇಂದು ದಿನಾಂಕ.01/02/2020 ರಂದು 3-00 ಪಿಎಂಕ್ಕೆ ಪಿರ್ಯಾದಿ ಚಂದ್ರಕಲಾ ತಂದೆ ಲಕ್ಷ್ಮಣ ವಯಾ:20 ಜಾತಿ:ಲಂಬಾಣಿ ಉ:ಕೂಲಿಕೆಲಸ ಸಾ: ರಾಜೀವಗಾಂಧಿನಗರ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆಯನ್ನು ನೀಡಿದ್ದು ಸಾರಾಂಶದವೆನೆಂದರೆ, ದಿನಾಂಕ.28/12/2019 ರಂದು ನಾನು ಠಾಣೆಯಲ್ಲಿ ದೂರು ಅಜರ್ಿ ನೀಡುವಾಗ ಸದರಿ ಜಗ್ಗು ಮತ್ತು ಲಕ್ಷ್ಮೀ ಇವರು ರಾಜೀವ ಗಾಂಧಿ ನಗರದ ಮನೆಯನ್ನು ಬಿಟ್ಟು ಹೋಗಿದ್ದು ಆದ್ದರಿಂದ ವಿಳಾಸ, ಜಾತಿ ಮತ್ತು ಇತರೆ ಮಾಹಿತಿ ತಿಳಿದು ಬಾರದೆ ಇದ್ದುದ್ದರಿಂದ ಅಂದು ಅಜರ್ಿಯಲ್ಲಿ  ನಮೂದಿಸಿರುವುದಿಲ್ಲಾ. ದಿನಾಂಕ. 26/12/2019 ರಂದು ಸಾಯಂಕಾಲ 5-20 ಗಂಟೆ ಸುಮಾರಿಗೆ ಜಗಳಾ ತೆಗೆದು ನನ್ನ ತಮ್ಮ ಮಂಗೇಶ ಮತ್ತು ನನಗೆ ಹೊಡೆ ಬಡೆ ಮಾಡಿದವರ ಹೆಸರು ಜಗ್ಗು@ಜಗನ್ನಾಥ ತಂ. ಮಲ್ಲಪ್ಪ ಜಾತಿ:ಕಬ್ಬಲಿಗ ಮತ್ತು ಅವನ ಹೆಂಡತಿ ಲಕ್ಷ್ಮೀ ಗಂ. ಜಗ್ಗು@ಜಗನ್ನಾಥ ಜಾತಿ: ಕಬ್ಬಲಿಗ ಸಾಃ ಇಬ್ಬರೂ ರಾಜೀವಗಾಂಧಿ ನಗರ ಯಾದಗಿರಿ ಹಾಃವಃ ಮೈಲಾಪೂರ ಬೇಸ್ ಯಾದಗಿರಿ ಅಂತಾ ನಂತರ ಈಗ ಗೊತ್ತಾಗಿದ್ದು ಇರುತ್ತದೆ ಅಂತಾ ಹೇಳಿಕೆ ನೀಡಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿಯ ಪಿರ್ಯಾದಿದಾರಳಾದ ಚಂದ್ರಕಲಾ ತಂ. ಲಕ್ಷ್ಮಣ ರಾಠೋಡ ಮತ್ತು ಗಾಯಾಳು ಮಂಗೇಶ ತಂ. ಲಕ್ಷ್ಮಣ ರಾಠೋಡ ಇವರು ಪರಿಶಿಷ್ಟ ಜಾತಿಯ ಲಂಬಾಣಿ ಜಾತಿಗೆ ಸೇರಿದವಾರಾಗಿದ್ದು ಪ್ರಕರಣದಲ್ಲಿಯ ಆರೋಪಿತರಾದ ಜಗ್ಗು@ಜಗನ್ನಾಥ ತಂ. ಮಲ್ಲಪ್ಪ ಜಾತಿ:ಕಬ್ಬಲಿಗ ಮತ್ತು ಅವನ ಹೆಂಡತಿ ಲಕ್ಷ್ಮೀ ಗಂ. ಜಗ್ಗು@ಜಗನ್ನಾಥ ಜಾತಿ: ಕಬ್ಬಲಿಗ ಸಾಃ ಇಬ್ಬರೂ ರಾಜೀವಗಾಂಧಿ ನಗರ ಯಾದಗಿರಿ ಹಾಃವಃ ಮೈಲಾಪೂರ ಬೇಸ್ ಯಾದಗಿರಿ ಇವರು ಕಬ್ಬಲಿಗ ಜಾತಿಗೆ ಸೇರಿದವರಾಗಿದ್ದರಿಂದ ಸದರಿ ಗುನ್ನೆ ನಂ. ಪ್ರಕರಣದಲ್ಲಿ  108/2019 ಕಲಂ.323,324,354,504,506, ಸಂ.34 ಐಪಿಸಿ ನೇದ್ದರಲ್ಲಿ ಕಲಂ.3(1)ಡಿತಿ, 3(2)ತ-ಚಿ  ಛಿ/ಣ ಕಂ ಂಛಿಣ-1989 ನೇದ್ದನ್ನು ಅಳವಡಿಸಿಕೊಂಡು ಮಾನ್ಯ ಜಿಲ್ಲಾ ಮತ್ತು ಶೆಷನ್ ನ್ಯಾಯಾಲಯ ಯಾದಗಿರಿ ರವರಲ್ಲಿ ಲೇಟರ ಮೂಲಕ ವಿನಂತಿಸಿಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 03/2020 ಕಲಂ: 110 (ಇ)&(ಜಿ) ಸಿ.ಆರ್.ಪಿ.ಸಿ :- ಮಾನ್ಯರವರ ಬಳಿಗೆ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ, ನಾನು ಸಿದ್ದಾರೂಡ ಹೆಚ್ಸಿ-83    ಸುರಪೂರ ಪೊಲೀಸ ಠಾಣೆ ಆದ ನಾನು ಸರಕಾರಿ ತಪರ್ೆ ಫಿರ್ಯಾದಿ ಏನೆಂದರೆ, ಇಂದು ದಿನಾಂಕ: 01/02/2020 ರಂದು ಗ್ರಾಮ ಬೇಟಿ ಕುರಿತು ಠಾಣೆಯಿಂದ ಮುಂಜಾನೆ 6 ಗಂಟೆ ಸುಮಾರಿಗೆ ಹೊರಟು ಅಲ್ದಾಳ ಗ್ರಾಮಕ್ಕೆ 06:45 ಎ.ಎಂ. ಸುಮಾರಿಗೆ ನೀಡಿದ ಸಮಯದಲ್ಲಿ ಗ್ರಾಮದ ಶ್ರಿ ದುರ್ಗಮ್ಮ ದೇವಿ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಎದುರುದಾರನು ರಸ್ತೆಯಲ್ಲಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯ್ಯುತ್ತಾ, ಅಸಭ್ಯವಾಗಿ ವತರ್ಿಸುತ್ತಾ, ಕೈಯಲ್ಲಿ ಕಲ್ಲು ಹಿಡಿದುಕೊಂಡು ಇವತ್ತು ಧಮ್ಮಿದರೆ ನನ್ನ ಹತ್ತಿರ ಬನ್ನಿ ಅಂತಾ ಅನ್ನುತ್ತಾ ಹೋಗಿ ಬರುವ ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನುಂಟು ಮಾಡುತ್ತಾ ಗುಂಡಾ ಗೀರಿ ಪ್ರದರ್ಶನ ಮಾಡುತ್ತಾ ಹೋಗಿ ಬರುವ ಸಾರ್ವಜನಿಕರೊಂದಿಗೆ ಕಿರಕಿರಿ ಮಾಡುತ್ತಿದ್ದು ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಸಾರ್ವಜನಿಕ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಕಂಡು ಬಂದಿದ್ದರಿಂದ ಸದರಿಯವನನ್ನು ಸ್ಥಳದಲ್ಲಿಯೇ ವಶಕ್ಕೆ ತಗೆದುಕೊಂಡು ಠಾಣೆಗೆ ತಂದಿದ್ದು ಇರುತ್ತದೆ. ಸದರಿಯವನು ಸಾರ್ವಜನಿಕರ ಶಾಂತತೆಗೆ ಭಂಗ ಉಂಟು ಮಾಡುವ ಸಾದ್ಯತೆ ಕಂಡು ಬಂದ್ದಿದ್ದರಿಂದ ಅವನ ವಿರುದ್ಧ ಮುಂಜಕಾಗೃತಾ ಕ್ರಮದ ಅಡಿಯಲ್ಲಿ ಕ್ರಮ ಜರೂಗಿಸುವ ಕುರಿತು ಸರಕಾರದ ತಪರ್ೆಯಾಗಿ ಠಾಣೆ ಪಿ.ಎ.ಆರ್ ನಂ. 03/2020 ಕಲಂ 110 (ಇ)&(ಜಿ) ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿ ಭಂದನ ಕ್ರಮ ಜರುಗಿಸಿದ್ದು, ಈ ವರದಿಯನ್ನು ನಿವೇಧಿಸಿಕೊಂಡಿದ್ದು ಇರುತ್ತದೆ.  

ಕೋಡೆಕಲ ಪೊಲೀಸ್ ಠಾಣೆ ಗುನ್ನೆ ನಂ:- 11/2020 ಕಲಂ: 323 324 504 506 ಸಂ 34 ಐಪಿಸಿ:-ಇಂದು ದಿನಾಂಕ:01.02.2020 ರಂದು 1:00 ಪಿಎಮ್ ಕ್ಕೆ ಪಿರ್ಯಾಧಿ ಶ್ರೀ. ತಮ್ಮಣ್ಣ ತಂದೆ ದ್ಯಾವಪ್ಪ ಮಾಲಿ ಬಿರೆದಾರ ವ:55 ವರ್ಷ ಜಾ: ಹಿಂದೂ ಬೇಡರ ಉ: ಒಕ್ಕಲುತನ ಸಾ: ಬೆಣಸಿಗಡ್ಡಿ ಸಾ:ಹುಣಸಗಿ ಇತನು ಠಾಣೆಗೆ ಹಾಜರಾಗಿ ಹೇಳಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಹೇಳಿಕೆಯ ಸಾರಾಂಶವೆನೆಂದರೆ ನಮ್ಮ ತಂದೆಯ ಕಾಲದಿಂದ ಇಲ್ಲಯವರೆಗೆ ನಾವು ನಮ್ಮೂರ ದ್ಯಾಮವ್ವ ದೇವರ ಪುಜೆ ಮಾಡುತ್ತಾ ಬಂದಿದ್ದು ಇರುತ್ತದೆ. ದಿ:04.02.2020 ರಂದು ನಮ್ಮೂರಲ್ಲಿ ಹುಲಗಮ್ಮ ದೇವರ ಜಾತ್ರೆ ಇದ್ದುದರಿಂದ ನಾನು ನಿನ್ನೆ ದಿನಾಂಕ:31.01.2020 ರಂದು ಗ್ರಾಮ ದೇವತೆ ಗುಡಿಯ ಒಳಗಿನ ಜೈಯಿಸ್ಗಳಿಗೆ ಮತ್ತು ಕಂಬಗಳಿಗೆ ಎಣ್ಣೆ ಹಚ್ಚಿದ್ದು ಇರುತ್ತದೆ. 
ಹೀಗಿರುವಾಗ ಇಂದು ದಿನಾಂಕ:01.02.2020 ರಂದು ಮುಂಜಾನೆ 7:30 ಗಂಟೆಯ ಸುಮಾರಿಗೆ ನಾನು ನಮ್ಮೂರ ಗ್ರಾಮದೇವತೆ ಗುಡಿಯ ಮುಂದೆ ಗುಡಿಯ ಗೋಡೆಗಳಿಗೆ ಬಣ್ಣ ಹಚ್ಚುವ ಸಲುವಾಗಿ ತಯಾರಿ ಮಾಡಿಕೊಳ್ಳಲು ಗುಡಿಯ ಮುಂದೆ ನಮ್ಮೂರ ಪರಮಣ್ಣಗೌಡ ತಂದೆ ರಂಗಪ್ಪಗೌಡ ಮಾಲಿ ಬಿರೆದಾರ ಇವರೊಂದಿಗೆ ಮಾತಾನಾಡುತ್ತಾ ನಿಂತಿದ್ದಾಗ ನಮ್ಮೂರಿನ ನಮ್ಮ ಜಾತಿಯ ಸಂಗಪ್ಪ ತಂದೆ ಹಣಮಂತ್ರಾಯ ಮಾಲಿ ಬಿರೆದಾರ ಹಾಗೂ ನಂದಪ್ಪ ತಂದೆ ಅಂಬ್ರಪ್ಪ ಮಾಲಿ ಬಿರೆದಾರ ಇವರಿಬ್ಬರೂ ಕೂಡಿ ನನ್ನ ಹತ್ತಿರ ಗ್ರಾಮದೇವತೆ ಗುಡಿಯ ಮುಂದೆ ಬಂದವರೆ ನನಗೆ ಎಲೆ ತಮ್ಯಾ ಸೂಳ್ಯಾ ಮಗನೇ ನೀನು ಯಾರಿಗೆ ಕೇಳಿ ಗ್ರಾಮ ದೇವತೆ ಗುಡಿಗೆ ಬಣ್ಣ-ಸುಣ್ಣ ಮಾಡುತ್ತಿ ಸೂಳ್ಯಾ ಮಗನೇ ಗುಡಿಯೇನು ನಿಮ್ಮಪ್ಪದೇನು ನಮಗೆ ಹೇಳದೆ ಕೇಳದೇ ನೀನು ದೇವರ ಗುಡಿಗೆ ಬಣ್ಣ ಹಚ್ಚಿತ್ತಿದ್ದಿ ಸೂಳ್ಯಾ ಮಗನೇ ನೀನು ನಮಗೆ ಕೇಳದೆ ಬಣ್ಣ ಹಚ್ಚಿಸುತ್ತಿದ್ದಿ ನಿನ್ನ ಸೊಕ್ಕು ಬಹಳ ಆಗಿದೆ ಸೂಳ್ಯಾ ಮಗನೇ ಇವತ್ತು ನಿನಗೆ ಬಿಡುವದಿಲ್ಲಾ ಅಂತ ಅಂದವರೇ ಅವರಿಬ್ಬರೂ ನನ್ನ ತೆಕ್ಕೆಗೆ ಬಿದ್ದು ನೆಲಕ್ಕೆ ಕಡವಿ ಅವರಲ್ಲಿ ಸಂಗಪ್ಪನು ಅಲ್ಲಿಯೇ ಬಿದ್ದಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ನನ್ನ ಬಲಗಾಲು ಮೊಳಕಾಲು ಮೇಲೆ ಹೊಡೆದು ರಕ್ತಗಾಯ ಮಾಡಿದ್ದು ಮತ್ತು ನಂದಪ್ಪ ತಂದೆ ಅಂಬ್ರಪ್ಪ ಇತನು ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ಎಡ ಬುಜದ ಮೇಲೆ ಹೊಡೆದು ಗುಪ್ತಗಾಯ ಮಾಡಿದ್ದು. ನಂತರ ಇಬ್ಬರೂ ನನಗೆ ಎದೆಯ ಮೇಲೆ ಹೊಟ್ಟೆಯ ಮೇಲೆ ಒದ್ದು ತುಳಿದು ಗುಪ್ತಗಾಯ ಪಡಿಸಿದ್ದು. ಆಗ ನಾನು ನನ್ನನ್ನು ಉಳಿಸಿರಪ್ಪೋ ಅಂತಾ ಚಿರಾಡಲು ಅಲ್ಲಿಯೇ ಇದ್ದ ನಮ್ಮೂರ ಪರಮಣ್ಣಗೌಡ ತಂದೆ ರಂದಪ್ಪಗೌಡ ಮಾಲಿ ಬಿರೆದಾರ, ಗುಂಡಪ್ಪ ತಂದೆ ಗಂಗಪ್ಪ ಮಾಲಿ ಬಿರೆದಾರ, ಪರಮಣ್ಣ ತಂದೆ ಹಣಮಂತ್ರಾಯ ಮಾಲಿ ಬಿರೆದಾರ ಇವರುಗಳು ಬಂದು ನನಗೆ ಅವರು ಹೊಡೆಯುವದನ್ನು ನೋಡಿ ಬಂದು ಬಿಡಿಸಿದ್ದು. ಇವರು ಬಂದು ಬಿಡಿಸದಿದ್ದರೆ ನನಗೆ ಅವರಿಬ್ಬರೂ ಇನ್ನೂ ಹೊಡೆಯುತ್ತಿದ್ದರು ಹೋಗುವಾಗ ಅವರಿಬ್ಬರೂ ನನಗೆ ಸೂಳ್ಯಾ ಮಗನೇ ತಮ್ಯಾ ಇವತ್ತು ನಮ್ಮ ಕೈಯಲ್ಲಿ ಉಳಿದಿದಿ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವದ ಬೇದರಿಕೆ ಹಾಕಿ ಹೋಗಿದ್ದು ವಿನಃ ಕಾರಣ ನನಗೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ ಇಬ್ಬರ ಮೇಲೆ ಕಾನೂನ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:11/2020 ಕಲಂ:323 324 504 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು .
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 15/2020 ಕಲಂ 279, 338 ಐಪಿಸಿ:-ದಿನಾಂಕ 01/02/2020 ರಂದು ರಾತ್ರಿ 2-30 ಗಂಟೆಗೆ ಆರೋಪಿತನು ತನ್ನ ಲಾರಿ ಟ್ಯಾಂಕರ ನಂ ಕೆ.ಎ-36-ಬಿ-2565 ನೆದ್ದರಲ್ಲಿ ಶಕ್ತಿನಗರದಿಂದ ಬೂದಿಯನ್ನು ತುಂಬಿಕೊಂಡು ಸಾಗರ ಪ್ಯಾಕ್ಟರಿಗೆ ತೆಗೆದುಕೊಂಡು ಹೋಗುವಾಗ ಮಾರ್ಗಮಧ್ಯ ಹತ್ತಿಕುಣಿ ಗ್ರಾಮ ದಾಟಿದ ನಂತರ ತನ್ನ ಹತ್ತಿಕುಣಿ-ಸೆಡಂ ರೋಡಿನ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಓಡಿಸಿಕೊಂಡು ಹೋಗುವಾಗ ಸೌದಾಗರ ತಾಂಡಾ ಕ್ರಾಸ್ ಹತ್ತಿರ ಬೂದಿ ಲಾರಿ ಟ್ಯಾಂಕರ ಪಲ್ಟಿಯಾಗಿ ಅಪಘಾತವಾಗಿದ್ದರಿಂದ ಆರೋಪಿನಿಗರ ರಕ್ತಗಾಯ ಮತ್ತು ಭಾರಿ ಗುಪ್ತಗಾಯ ಆದ ಬಗ್ಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂಬರ 32/2020 ಕಲಂ 87  ಕೆ.ಪಿ ಆಕ್ಟ:- ಇಂದು ದಿನಾಂಕ 01/02/2020 ರಂದು ಸಾಯಂಕಾಲ 18-45  ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚಂದ್ರಕಾಂತ ಪಿ.ಎಸ್.ಐ (ಕಾಸು) ಶಹಾಪೂರ ಪೊಲೀಸ್ ಠಾಣೆ ಇವರು  4 ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ದಿನಾಂಕ 01/02/2020 ರಂದು ಮದ್ಯಾಹ್ನ 14-30 ಗಂಟೆಗೆ ಠಾಣೆಯಲ್ಲಿದ್ದಾಗ  ಶಹಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಚಟ್ನಳ್ಳಿ ಗ್ರಾಮದ ಬಸವಣ್ಣ ದೇವರ ಗುಡಿಯ ಹತ್ತಿರ  ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ  ಎಂಬ ಜೂಜಾಟ ಆಡುತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ, ಫಿರ್ಯಾದಿಯವರು ಠಾಣೆಯ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಹೋಗಿ  ಸಾಯಂಕಾಲ 16-10 ಗಂಟೆಗೆ ದಾಳಿ ಮಾಡಿದಾಗ  4 ಜನ ಆರೋಪಿತರು ಸಿಕ್ಕಿದ್ದು ಸದರಿಯವರಿಂದ ನಗದು ಹಣ 1150 ರಊಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ  ಸಾಯಂಕಾಲ 16-15 ಗಂಟೆಯಿಂದ 17-15 ಗಂಟೆಯ ಅವಧಿಯವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲಿಸಿದ್ದು, ಸದರಿ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ 13/2020 ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ನೊಂದಣಿ ಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ  ಅನುಮತಿ ಪಡೆದುಕೊಂಡು ರಾತ್ರಿ 20-15 ಗಂಟೆಗೆ  ಫಿರ್ಯಾದಿಯವರ ವರದಿ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 32/2020 ಕಲಂ 87 ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.        
 ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 04/2020  ಕಲಂ 279,  338 ಐಪಿಸಿ ಸಂ. 187 ಐಎಂವಿ ಆ್ಯಕ್ಟ್:- ಇಂದು ದಿನಾಂಕ 01/02/2020 ರಂದು 6-15 ಪಿ.ಎಂ.ಕ್ಕೆ  ಯಾದಗಿರಿ ಜಿಜಿಎಚ್ನಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು  ಶ್ರೀಮತಿ ನಿಂಗಮ್ಮ ಗಂಡ ಮರಿಲಿಂಗಪ್ಪ ರಾಮಪ್ಪನೋರ ವಯ;30 ವರ್ಷ, ಜಾ;ಪ.ಜಾತಿ(ಹೊಲೆಯ), ಉ;ಹೊಲಮನಿ ಕೆಲಸ, ಸಾ;ಹೊನಗೇರಾ ತಾ;ಜಿ;ಯಾದಗಿರಿ ಇವರಿಗೆ ವಿಚಾರಿಸಿದ್ದು ಸದರಿಯವರು ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದನ್ನು  ಸಮಯ  6-30 ಪಿ.ಎಂ.ದಿಂದ 7-30 ಪಿ.ಎಂ.ದ ವೆರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಹೊಲಮನಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪಜೀವಿಸುತ್ತೇನೆ.  ಹೀಗಿದ್ದು ದಿನಾಂಕ 01/02/2020 ರಂದು  ಬೆಳಿಗ್ಗೆ  ಸುಮಾರಿಗೆ  ನಮ್ಮ ಸಂಬಂಧಿಕರಿಗೆ ಮಾತನಾಡಿಸಲು ನಮ್ಮೂರಿನಿಂದ  ನಾಯ್ಕಲ್ ಗ್ರಾಮಕ್ಕೆ ಹೋಗಿದ್ದು ಇರುತ್ತದೆ. ನಾಯ್ಕಲ್ ಗ್ರಾಮಕ್ಕೆ ಹೋಗಿ ಮರಳಿ ಮದ್ಯಾಹ್ನ  ನಾಯ್ಕಲ್ ಗ್ರಾಮದಿಂದ ಯಾದಗಿರಿಗೆ ಬಂದು ಹಳೆ ಬಸ್ ನಿಲ್ದಾಣದ ಹತ್ತಿರ ಇಳಿದು ಆಟೋ ಸ್ಟ್ಯಾಂಡ್ ಕಡೆಗೆ ಹೋಗಬೇಕೆಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದಾಗ ನಾನು ನೋಡು ನೋಡುತ್ತಿದ್ದಂತೆ ನನ್ನ ಎದುರಿಗೆ ಹಳೆ ಬಸ್ ನಿಲ್ದಾಣದ ಕಡೆಯಿಂದ ರೇಲ್ವೇ ಸ್ಟೇಷನ್ ಕಡೆಗೆ ಹೋಗುತ್ತಿದ್ದ ಒಬ್ಬ ಆಟೋ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ನನಗೆ ನೇರವಾಗಿ ಡಿಕ್ಕಿ ಪಡಿಸಿದನು. ಸದರಿ ಅಪಘಾತದಲ್ಲಿ ನನಗೆ ಎಡಗಾಲಿನ ಪಾದದ ಮೇಲೆ ಬಾರೀ ಗುಪ್ತಗಾಯವಾಗಿ  ಕಾಲು  ಉಬ್ಬಿಕೊಂಡು ಬಂದಿರುತ್ತದೆ ಮತ್ತು  ತಲೆಗೆ ಗುಪ್ತಗಾಯವಾಗಿದ್ದು  ಇರುತ್ತದೆ. ಅದೇ ಸಮಯಕ್ಕೆ ಹಳೆ ಬಸ್ ನಿಲ್ದಾಣದ ಹತ್ತಿರವಿದ್ದ ನಮ್ಮೂರಿನ ನಮ್ಮ ಸಂಬಂಧಿ ಶ್ರೀ ಮಲ್ಲಿಕಾಜರ್ುನ ತಂದೆ ಬಸಣ್ಣ ಡೊಳ್ಳೆನೋರ ಈತನು ಅಪಘಾತವನ್ನು ಕಂಡು ನನ್ನ ಹತ್ತಿರ ಬಂದು ವಿಚಾರಿಸಿರುತ್ತಾನೆ. ನನಗೆ ಅಪಘಾತ ಪಡಿಸಿದ ಆಟೋ ನಂಬರ ಕೆಎ-33, ಎ-1177 ನೇದ್ದು ಇದ್ದು ಅದರ ಚಾಲಕನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದು ನಮಗೆ ನೋಡುತ್ತಲೇ ಆಟೋವನ್ನು ಚಾಲು ಮಾಡಿಕೊಂಡು ಘಟನಾ ಸ್ಥಳದಿಂದ ತನ್ನ ಆಟೋದೊಂದಿಗೆ ಪರಾರಿಯಾಗಿರುತ್ತಾನೆ. ಆತನಿಗೆ ಮತ್ತು ಆಟೋವನ್ನು ಮತ್ತೆ ನಾವು ನೋಡಿದರೆ ಗುತರ್ಿಸುತ್ತೇವೆ. ನಮ್ಮ ಸಂಬಂಧಿ ಮಲ್ಲಿಕಾಜರ್ುನ ಈತನು ಈ ಘಟನೆ ಬಗ್ಗೆ ನನ್ನ ಗಂಡನಿಗೆ ಪೋನ್ ಮಾಡಿ ವಿಷಯ ತಿಳಿಸಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬರಲು ತಿಳಿಸಿದ್ದು ನನಗೆ ಒಂದು ಖಾಸಗಿ ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರ ಕುರಿತು ಸೇರಿಕೆ ಮಾಡಿರುತ್ತಾನೆ. ಈ ಘಟನೆಯು ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದ ಹತ್ತಿರ ಮುಖ್ಯ ರಸ್ತೆ ಮೇಲೆ ಸಮಯ ಅಂದಾಜು 3 ಪಿ.ಎಂ.ಕ್ಕೆ ಜರುಗಿದ್ದು ಇರುತ್ತದೆ. ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ನನ್ನ ಗಂಡ ಮರಿಲಿಂಗಪ್ಪ ಮತ್ತು ನನ್ನ ಸಂಬಂಧಿ ಶ್ರೀ ನಾಗಪ್ಪ ತಂದೆ ರಾಮಣ್ಣ ರಾಮಪ್ಪನೋರ ಇವರುಗಳು ಬಂದು ನನಗೆ ವಿಚಾರಿಸಿದ್ದು ಇರುತ್ತದೆ. ನನ್ನ ಗಂಡ ಈ ಘಟನೆ ಬಗ್ಗೆ ಕೇಸು ಮಾಡಲು ತಿಳಿಸಿದ್ದರಿಂದ ತಡವಾಗಿ ಪಿಯರ್ಾದು ಹೇಳಿಕೆಯನ್ನು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ  ನೀಡಿದ್ದು ಇರುತ್ತದೆ.      ಹೀಗಿದ್ದು  ಇಂದು ದಿನಾಂಕ 01/02/2020  ರಂದು ಮದ್ಯಾಹ್ನ 3 ಪಿ.ಎಂ.ಕ್ಕೆ   ಯಾದಗಿರಿ ನಗರ ಹಳೆ ಬಸ್ ನಿಲ್ದಾಣದ ಹತ್ತಿರ  ಆಟೋ ನಂಬರ ಕೆಎ-33, ಎ-1177 ನೇದ್ದರ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಅಪಘಾತ ಮಾಡಿ, ಘಟನಾ ಸ್ಥಳದಿಂದ ಆಟೋ ಸಮೇತ ಪರಾರಿಯಾಗಿದ್ದು  ಆತನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಪಿಯರ್ಾದು ಹೇಳಿಕೆ ಪಡೆದುಕೊಂಡು  ಮರಳಿ ಠಾಣೆಗೆ 7-45 ಪಿ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 04/2020  ಕಲಂ 279, 338 ಐಪಿಸಿ ಸಂಗಡ 187 ಐಎಂವಿ ಆ್ಯಕ್ಟ್ ನೇದ್ದರ ಅಡಿಯಲ್ಲಿ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.   
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- ಕಲಂ, 279, 337, 338, ಐಪಿಸಿ:- ಇಂದು ದಿನಾಂಕ: 01/02/2020 ರಂದು 02.30 ಪಿಎಂ ಕ್ಕೆ ಶಹಾಪೂರ ಸರಕಾರಿ ಆಸ್ಪತ್ರೆ ಇಂದ ಆರ್.ಟಿ.ಎ ಎಂ.ಎಲ್.ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ ಮಲ್ಲಪ್ಪ ಹೆಚ್.ಸಿ-65 ರವರು ಶಹಾಪುರ ಸರಕಾರಿ ಆಸ್ಪತ್ರೆಗೆ ಬೇಟಿ ಮಾಡಿ ಪಿರ್ಯಾದಿ ಶ್ರೀ. ಗಣೇಶ ತಂದೆ ಹಿರಲಾಲ ಜಾಧವ ವಯಾ: 20 ಉ: ವಿದ್ಯಾಥರ್ಿ ಜಾ: ಲಂಬಾಣಿ ಉ: ಸಿಂಗಾನಾಯ್ಕ ತಾಂಡಾ ಉಕ್ಕನಾಳ ತಾ; ಶಹಾಪೂರ ಜಿ: ಯಾದಗಿರಿ ಇವರ ಹೇಳಿಕೆ ಪಡೆದುಕೊಂಡಿದ್ದು, ಸದರಿ ಹೇಳಿಕೆ ಸಾರಂಶ ಏನಂದರೆ, ದಿನಾಂಕ: 01/02/2020 ರಂದು ನಾನು ಮತ್ತು ನಮ್ಮ ಸಂಬಂದಿಕರಾದ ಕಿರಣ ತಂದೆ ಹರಿಶ್ಚಂದ್ರ ರಾಠೋಡ ವಯಾ:28 ವರ್ಷ ಸಾ: ಖೇಮುನಾಯ್ಕ ತಾಂಡಾ ಉಕ್ಕನಾಳ ಇವರೊಂದಿಗೆ ಅವರ ಮೋಟಾರ್ ಸೈಕಲ್ ನಂ: ಕೆಎ-33-ಎಕ್ಷ-6479 ನೇದ್ದರ ಮೇಲೆ ಗ್ಯಾಸ್ ಸಿಲೆಂಡರ ತರಲು ಶಹಾಪೂರಕ್ಕೆ ಹೋಗಿದ್ದೇವು, ಮರಳಿ ಬರುವಾಗ 01.30 ಪಿಎಂ ಸುಮಾರಿಗೆ ಶಹಾಪೂರ ಸಿಂದಗಿ ಮೇನ್ ರೋಡಿನ ರಬ್ಬನಳ್ಳಿ ಹತ್ತಿರ ರೊಡಿನ ಮೇಲೆ ನಮ್ಮ ಎದುರಿನಿಂದ ಒಬ್ಬ ಮೊಟಾರ್ ಸೈಕಲ್ ಸವಾರನು ಕೂಡ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದ, ನಾನು ಕುಳಿತು ಹೊರಟಿದ್ದ ವಾಹನ ನಡೆಸುತ್ತಿದ್ದ ಕಿರಣ ಈತನು ಕೂಡ ತನ್ನ ಮೋಟಾರ್ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಇಬ್ಬರು ಮೊಟಾರ್ ಸೈಕಲ ಚಾಲಕರು ತಮ್ಮ ಮೋಟಾರ್ ಸೈಕಲ ಗಳನ್ನು ಮುಖಾಮುಖಿ ಡಿಕ್ಕಿ ಪಡೆಸಿದರು ಆಗ ನಾವು ನಮ್ಮ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದೇವು, ಎದರುಗಡೆಯಿಂದ ಬಂದ ವಾಹನ ಸವಾರನು ವಾಹನ ಸಮೇತವಾಗಿ ಬಿದ್ದನು, ನಾನು ಎದ್ದು ನೋಡಲಾಗಿ ನನಗೆ ಯಾವುದೆ ಗಾಯಗಳು ಆಗಿರಲಿಲ್ಲ, ನಮ್ಮ ಮೊಟಾರ್ ಸೈಕಲ ನಡೆಸುತ್ತಿದ್ದ ಕಿರಣ ರಾಠೋಡ ಈತನಿಗೆ ನೋಡಲಾಗಿ ಅವನ ಬಲಗಾಲಿನ ಮೊಳಕಾಲಿಗೆ ಮತ್ತು ಬಲಗಾಲಿನ ತೋಡೆಗೆ ಭಾರಿಗಾಯವಾಗಿ ಮೂಳೆ ಮುರಿದಿರುತ್ತದೆ. ತೋಗಲು ಕಿತ್ತಿರುತ್ತದೆ. ಎದರುಗಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಅಪಘಾತ ಮಾಡಿದ ಮೊಟಾರ್ ಸೈಕಲ್ ನಂಬರ ನೊಡಲಾಗಿ ಅದರ ನಂ: ಕೆಎ-33-ಆರ್-8056 ಅಂತಾ ಇದ್ದು ಅದನ್ನು ನಡೆಸಿದವನಿಗೆ ನೋಡಿ ವಿಚಾರಿಸಲಾಗಿ, ತನ್ನ ಹೆಸರು ಹಣಮಂತ ತಂದೆ ಪರಮಣ್ಣ ಇಜೇರಿ ವಯಾ:28 ಉ: ಒಕ್ಕಲುತನ ಜಾ: ಕುರುಬರ ಸಾ: ಗುಂಡಾಪೂರ ಅಂತಾ ತಿಳಿಸಿದನು, ಸದರಿಯವನಿಗೆ ಬಲಗಾಲಿನ ಮುಂಗಾಲಿನ ಕಪ್ಪಗಂಡಿಯ ಹತ್ತಿರ ರಕ್ತಗಾಯ ಆಗಿದ್ದು, ಬಲಗೈ ಹೆಬ್ಬೆರಳಿನ ಮೇಲೆ ಗುಪ್ತಗಾಯ ಆಗಿತ್ತು, ಅಷ್ಟರಲ್ಲಿ, ಯಾರೋ 108 ಅಂಬೂಲೆನಸ್ಗೆ ಪೋನ ಮಾಡಿದ್ದು, 108 ವಾಹನ ಬಂದು ಗಾಯಾಳುದಾರರಿಗೆ ಶಹಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು, ಶಹಾಪೂರ ಆಸ್ಪತ್ರೆಗೆ ಅಪಘಾತದ ಸುದ್ದಿ ತಿಳಿದು ಬಂದಿದ್ದ ಮಂಜುನಾಥ ತಂದೆ ಪೂರು ರಾಠೋಡ ಸಾ: ಖೆಮುನಾಯ್ಕ ತಾಂಡಾ ಇವರು ಕಿರಣ ಈತನಿಗೆ ಹೆಚ್ಚಿನ ಉಪಚಾರಕ್ಕೆ ಕಲಬುರಗಿಗೆ ಕರೆದುಕೊಂಡು ಹೊಗಿರುತ್ತಾರೆ.         ನಾನು ಕುಳಿತು ಹೊರಟಿದ್ದ ಮೊಟಾರ್ ಸೈಕಲ್ ನಂ: ಕೆಎ-33-ಎಕ್ಷ-6479 ನೇದ್ದನ್ನು ಅತೀವೇಗ ಮತ್ತು ಲಕ್ಷತನದಿಂದ ನಡೆಸಿ ಅಪಘಾತ ಮಾಡಿದ ಕಿರಣ ತಂದೆ ಹರಿಶ್ಚಂದ್ರ ರಾಠೋಡ ವಯಾ:28 ವರ್ಷ ಸಾ: ಖೇಮುನಾಯ್ಕ ತಾಂಡಾ ಉಕ್ಕನಾಳ ಮತ್ತು ಎದರುಗಡೆಯಿಂದ ಮೋಟಾರ್ ಸೈಕಲ್ ನಂ; ಕೆಎ-33-ಆರ್-8056 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಅಪಘಾತ ಮಾಡಿದ ಹಣಮಂತ ತಂದೆ ಪರಮಣ್ಣ ಇಜೇರಿ ವಯಾ:28 ಉ: ಒಕ್ಕಲುತನ ಜಾ: ಕುರುಬರ ಸಾ: ಗುಂಡಾಪೂರ ಇವರಿಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಮರಳಿ ಠಾಣೆಗೆ ಇಂದು ದಿನಾಂಕ:01/02/2020 ರಂದು 07.30. ಪಿಎಂ ಕ್ಕೆ ಬಂದು ಗೋಗಿ ಠಾಣೆ ಗುನ್ನೆ ನಂ: 09/2020 ಕಲಂ, 279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 16/2020 ಕಲಂ 32, 34 ಕೆ.ಇ. ಆ್ಯಕ್ಟ:- ಇಂದು ದಿನಾಂಕ 01-02-2020 ರಂದು 5-00 ಪಿ.ಎಂ ಕ್ಕೆ ನಾನು ಡಿ.ಪಿ.ಓ ದಲ್ಲಿದ್ದಾಗ ಮಾನ್ಯ ಎಸ.ಪಿ ಸಾಹೇಬರು ನಮಗೆ ತಿಳಿಸಿದ್ದೆನೆಂದರೆ ಕಂಕರಮಶೀನ ತಾಂಡಾದ ಹೈವೇ ಧಾಬಾದಲ್ಲ್ಲಿ ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಭಾತ್ಮಿ ಬಂದಿರುತ್ತದೆ ಅಂತಾ ತಿಳಿಸಿದ ಮೇರೆಗೆ ಮಾನ್ಯ ಎಸ್.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ನಾನು ಸದಾಶಿವ ಸೋನಾವನೆ ಪಿ.ಐ ಡಿ.ಸಿ.ಐ.ಬಿ ಮತ್ತು ಶಿವರಾಜ ಆರ್.ಎಸ.ಐ ಡಿ.ಎ.ಆರ್ ಹಾಗೂ ಸಿಬ್ಬಂದಿ ಜನರಾದ ಮಹಾಂತೇಶ ಕೋನಾಡಿ ಎ.ಪಿ.ಸಿ-95 ಕೂಡಿಕೊಂಡು ಸರಕಾರಿ ಜೀಪ ನಂ ಕೆಎ- 33 ಜಿ-127 ನೇದ್ದರಲ್ಲಿ ಕುಳಿತುಕೊಂಡು ಮಾನ್ಯರವರ ಆದೇಶದಂತೆ 5-15 ಪಿ.ಎಮ ಕ್ಕೆ ಯಾದಗಿರಿ ಬಿಟ್ಟು ಕಂಕರಮಶೀನ ತಾಂಡಾದ ಹೈವೇ ಧಾಬಾದ ಕಡೆಗೆ  ಹೊರಟು ಸದರಿ ಧಾಬಾಕ್ಕೆ 5-45 ಪಿ.ಎಮ ಕ್ಕೆ ತಲುಪಿ ಮರೆಯಲ್ಲಿ ನಿಂತು ಧಾಬಾದಲ್ಲಿ ನೋಡಲಾಗಿ ಒಬ್ಬನು ಧಾಬಾದಲ್ಲಿ ಗಿರಾಕಿಗಳಿಗೆ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದನು. ಸದರಿಯವನಿಗೆ ಹಿಡಿದುಕೊಂಡು ಅವನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ರವಿ ತಂದೆ ಲಿಂಬು ರಾಠೋಡ ವಯಾಃ 35 ವರ್ಷ ಜಾಃ ಲಂಬಾಣಿ ಸಾಃ ಕಂಕರ ಮಶೀನ ತಾಂಡಾ ಅಂತಾ ಹೇಳಿದನು, ಆತನಿಗೆ ನಿನ್ನ ಹತ್ತಿರ ಮಾರಾಟ ಮಾಡಲಿಕ್ಕೆ ಲೈಸನ್ಸ ಸರಕಾರದಿಂದ ಪರವಾನಿಗೆ ಪಡೆದುಕೊಂಡಿಯಾ ಅಂತಾ ಕೇಳಲಾಗಿ ಸದರಿಯವನು ಯಾವದೇ ರೀತಿ ಅನುಮತಿ ಇಲ್ಲದೇ ನಾನು ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದೇನೆ ಅಂತಾ ಹೇಳಿದನು,  ಸದರಿಯವನಿಗೆ ಸ್ಥಳದಲ್ಲಿ ಹಿಡಿದುಕೊಂಡು ಅವನ ಹತ್ತಿರ ಇದ್ದ 28,200/ರೂ ಕಿಮ್ಮತ್ತಿನ ವಿವಿಧ ನಮೂನೆಯ ಮಧ್ಯದ ಬಾಟಲಿ ಮತ್ತು ಪಾಕೇಟಗಳು ಮತ್ತು ಮಧ್ಯ ಮಾರಾಟ ಮಾಡಿದ ನಗದು ಹಣ 2600/ರೂ ದೊರೆತವು, ಸದರಿ ಎಲ್ಲಾ ಮಧ್ಯದ ಬಾಟಲಿ ಮತ್ತು ಪಾಕೇಟಗಳು ಮತ್ತು ಮಧ್ಯ ಮಾರಾಟ ಮಾಡುತ್ತಿದ್ದ ರವಿ ಇತನಿಗೆ  ಮುಂದಿನ ಕ್ರಮಕ್ಕಾಗಿ ತಮ್ಮ ಬಳಿಗೆ ಒಪ್ಪಿಸಿದ್ದು, ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಲು ನನ್ನ ವರದಿಯನ್ನು ಸಲ್ಲಿಸಲಾಗಿದೆ. 
. ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 16/2020 ಕಲಂ 32, 34 ಕೆ.ಈ. ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 34/2020 ಕಲಂ 379 ಐ.ಪಿ.ಸಿ.  ಮತ್ತು ಕಲಂ. 44(1) ಕೆ,ಎಮ್,ಎಮ್,ಸಿ,ಆರ್.ಆಕ್ಟ 1994:- ಇಂದು ದಿನಾಂಕ:01-02-2020 ರಂದು 8-15 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಚೇತನ್ ಪಿ.ಎಸ್.ಐ (ಕಾ&ಸೂ)ಸುರಪೂರ ಪೊಲೀಸ್ ಠಾಣೆ ರವರು  ಒಂದು ಮರಳು ತುಂಬಿದ ಟ್ಯಾಕ್ಟರನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ  ನಿಡಿದ್ದು ಸಾರಾಂಶವೆನೆಂದರೆ, ದಿನಾಂಕ:01-02-2020 ರಂದು 5-15 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಯಾರೋ ಒಬ್ಬ ವ್ಯಕ್ತಿಯು ತಮ್ಮ ಟ್ಯಾಕ್ಟರದಲ್ಲಿ ಹೇಮನೂರ ಸೀಮಾಂತರದ ಕೃಷ್ಣಾ ನಧಿ ಪಾತ್ರದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ಲಕ್ಷ್ಮಿಪೂರ ಕ್ರಾಸ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಠಾಣೆಯಲ್ಲಿದ್ದ ಸಿಬ್ಬಂಧಿಯವರಾದ ಶ್ರೀ ಸೋಮಯ್ಯ ಸಿಪಿಸಿ-235, ಶ್ರೀ ದಯಾನಂದ ಸಿಪಿಸಿ-337 ಇವರಿಗೆ ವಿಷಯ ತಿಳಿಸಿ ಸೋಮಯ್ಯ ಸಿಪಿಸಿ ರವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಸೋಮಯ್ಯಾ ಸಿಪಿಸಿ ರವರು ಇಬ್ಬರು ಪಂಚರಾದ 1) ಶ್ರೀ ಅಯ್ಯಪ್ಪ ತಂದೆ ಮಾಳಪ್ಪ ಕುರುಕುಂದಿ ವಯಾ:29 ವರ್ಷ ಉ:ಒಕ್ಕಲುತನ ಜಾತಿ:ಕುರುಬರ ಸಾ:ಹಸನಾಪೂರ ತಾ:ಸುರಪುರ 2) ಶ್ರೀ ಬಾಲಕೃಷ್ಣ ತಂದೆ ಭೀಮರಾಯ ನಂಬಾ ವಯಾ:33 ವರ್ಷ ಉ:ಒಕ್ಕಲುತನ ಜಾ:ಕುರುಬರ ಸಾ:ಹಸನಾಪೂರ ತಾ:ಸುರಪುರ ಇವರನ್ನು 05:30 ಪಿ.ಎಮ್.ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿ ಪಂಚರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಸಿಬ್ಬಂಧಿಯವರು ಕೂಡಿಕೊಂಡು ನಮ್ಮ ಸಕರ್ಾರಿ ಜೀಪ ನಂಬರ ಕೆಎ-33 ಜಿ-0094 ನೇದ್ದರಲ್ಲಿ ಕುಳಿತುಕೊಂಡು 05-45 ಪಿ.ಎಮ್  ಸುಮಾರಿಗೆ ಠಾಣೆಯಿಂದ ಹೊರಟು 6-15 ಪಿ.ಎಮ್ ಸುಮಾರಿಗೆ ಲಕ್ಷ್ಮಿಪೂರ ಕ್ರಾಸ ಹತ್ತಿರ ಹೋಗಿ ಜೀಪ ನಿಲ್ಲಿಸಿ ನಿಂತುಕೊಂಡಿದ್ದು ಅಂದಾಜು 06:30 ಪಿ.ಎಮ್ ಸುಮಾರಿಗೆ ಲಕ್ಷ್ಮಿಪೂರ ಗ್ರಾಮದ ಕಡೆಯಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ನಾನು ಸಿಬ್ಬಂಧಿಯವರ ಸಹಾಯದಿಂದ ಟ್ಯಾಕ್ಟರ ಚಾಲಕನಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಟ್ಯಾಕ್ಟರ ಚಾಲಕನು ನಮ್ಮ ಪೊಲೀಸ್ ಜೀಪ್ನ್ನು ನೋಡಿ ತನ್ನ ಟ್ಯಾಕ್ಟರನ್ನು ಸೈಡಿಗೆ ನಿಲ್ಲಿಸಿ ಅಲ್ಲಿಂದ ಓಡಿ ಹೋದನು. ನಾವು ಸದರಿ ಟ್ಯಾಕ್ಟರನ್ನು ಪಂಚರ ಸಮಕ್ಷಮ ಪರೀಶಿಲಿಸಿ ನೋಡಲು ಒಂದು ಸ್ವರಾಜ್ಯ ಕಂಪನಿ ಟ್ಯಾಕ್ಟರ ಇದ್ದು ಅದರ ನಂಬರ ಕೆಎ-46 /6603 ಇದ್ದು ಅದರ ಟ್ರಾಲಿ ನಂಬರ ಕೆಎ-33 ಟಿಎ-9201 ಇದ್ದು. ಸದರಿ ಟ್ಯಾಕ್ಟರದಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆ. ಸದರಿ ಮರಳು ತುಂಬಿದ ಟ್ಯಾಕ್ಟರನ್ನು ಪಂಚರ ಸಮಕ್ಷಮ ಸಾಯಂಕಾಲ 6-45 ಪಿ.ಎಮ್ ದಿಂದ 7-45 ಪಿ.ಎಮ್. ವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಬರೆದುಕೊಂಡು ಟ್ಯಾಕ್ಟರನ್ನು  ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ.    
    ಕಾರಣ ಸದರಿ ಟ್ಯಾಕ್ಟರ ಚಾಲಕನು ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 1600/- ರೂ.ಗಳ ಕಿಮ್ಮತ್ತಿನ ಅಂದಾಜು 02 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಮರಳು ತುಂಬಿದ ಟ್ಯಾಕ್ಟರನ್ನು ಖಾಸಗಿ ಚಾಲಕರ ಸಹಾಯದಿಂದ ಠಾಣೆಗೆ 08:15 ಪಿ.ಎಮ್.ಕ್ಕೆ ತಂದು ಒಪ್ಪಿಸಿ ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 10/2020 ಕಲಂ 32,34 ಕೆ,ಇ ಯಾಕ್ಟ್ ಮತ್ತು 284 ಐಪಿಸಿ:-01-02-2020 ರಂದು ಸಾಯಂಕಾಲ 06-00 ಗಂಟೆಗೆ ಮಾನ್ಯ ಶ್ರೀ ಎನ್.ವೈ.ಗುಂಡುರಾವ ಪಿ.ಎಸ್.ಐ ಸಾಹೇಬರು ಜ್ಞಾಪನ ಪತ್ರದೊಂದಿಗೆ ಮದ್ಯ ಮತ್ತು ಸೇಂಧಿ ಜಪ್ತಿಪಂಚನಾಮೆ ಯನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ  ಮೇಲಿಂದ ಠಾಣಾ ಗುನ್ನೆ ನಂ. 10/2020 ಕಲಂ. 32, 34 ಕೆ.ಇ ಕಾಯ್ದೆ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 05/2020  ಕಲಂ 279, 337,  338 ಐಪಿಸಿ:- ನಿನ್ನೆ ದಿನಾಂಕ 31/01/2020 ರಂದು ಬೆಳಿಗ್ಗೆ 10 ಎ.ಎಂ.ದ ಸುಮಾರಿಗೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಯಾದಗಿರಿ ನಗರದ ಎಸ್.ಎಲ್.ವಿ ಗ್ರಾನೈಟ್ ಅಂಗಡಿಯ ಮುಂದೆ ಈ ಕೇಸಿನ ಫಿಯರ್ಾದಿ ಗಾಯಾಳು ಮರೆಪ್ಪ ತಂದೆ ಹಣಮಂತ ಮುಸಂಡೇರ ಸಾ;ಕೊಹಿಲೂರ ಇವರು ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಕಡೆಯಿಂದ ಗಂಜ್ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದಾಗ ಆರೋಪಿತ ಮೋಟಾರು ಸೈಕಲ್ ನಂಬರ ಕೆಎ-33, ವಿ-2349 ನೇದ್ದನ್ನು ಗಂಜ್ ಕಡೆಯಿಂದ ಹೊಸಳ್ಳಿ ಕ್ರಾಸ್ ಕಡೆಗೆ  ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಪಿಯರ್ಾದಿಗೆ ನೇರವಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಸೊಂಟಕ್ಕೆ ಭಾರೀ ಒಳಪೆಟ್ಟಾಗಿದ್ದು ಇರುತ್ತದೆ. ಮೋಟಾರು ಸೈಕಲ್ ಹಿಂಬದಿ ಸೀಟಿನಲ್ಲಿದ್ದ ಆರೋಪಿತನ ಹೆಂಡತಿ ಮಹಾದೇವಿ ಮತ್ತು ಆರೋಪಿತನಿಗೆ ಸಣ್ಣ-ಪುಟ್ಟ ತರಚಿದ ರಕ್ತಗಾಯಗಳಾಗಿರುತ್ತವೆ ಈ ಘಟನೆ ಬಗ್ಗೆ ಪಿಯರ್ಾದಿ ಗಾಯಾಳು ತನ್ನ ಮನೆಯವರಲ್ಲಿ ವಿಚಾರಿಸಿ ತಡವಾಗಿ ಇಂದು ದಿನಾಂಕ 01/02/2020 ರಂದು 8-15 ಪಿ.ಎಂ.ಕ್ಕೆ ಹಾಜರಾಗಿ ದೂರು ನೀಡಿದ್ದು ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.05/2020 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.
ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ. 03/2020 ಕಲಂ 174 ಸಿ.ಆರ್.ಪಿ.ಸಿ:-   ಮೃತ ರೇವಣಸಿದ್ದಪ್ಪ ಈತನು ಪ್ರತಿ ವರ್ಷದಂತೆ ಈ ವರ್ಷವು ಕೂಡ ಶಿವ ಮಾಲೆ ಧರಿಸುವ ಕುರಿತು ತನ್ನ ತಾಯಿ ಮತ್ತು ತಂದೆಗೆ ತಿಳಿಸಿ ಅವರಿಂದ ಖಚರ್ಿಗೆ ದುಡ್ಡ ಕೇಳಿದ್ದು ಅವರು ತಮ್ಮ ಬಳಿ ದುಡ್ಡು ಇಲ್ಲ ಅಂತಾ ಹೇಳಿ ತಿಳಿಸಿದ್ದರಿಂದ ಆತ ಗುರುಮಠಕಲಗೆ ಬಂದು ತನ್ನ ಅಜ್ಜಿ ಶಂಕ್ರೇಮ್ಮ ಈಕೆಯ ಹತ್ತಿರ ಬಂದು ಖಚರ್ಿಗೆ ದುಡ್ಡು ಪಡೆದುಕೊಂಡು ಶಿವಮಾಲೆ ಧರಿಸಿದ್ದು ನಂತರ ದಿನಾಂಕ 26.01.2020 ರಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಮೃತನು ಪುನಃ ತನ್ನ ಅಜ್ಜಿ ಶಂಕ್ರೇಮ್ಮ ಈಕೆಯ ಹತ್ತಿರ ಹೋಗಿ ತನಗೆ ಖಚರ್ಿಗೆ ಮತ್ತೋದಿಷ್ಟು ದುಡ್ಡು ಬೇಕು ಅಂತಾ ಕೇಳಿದ್ದಕ್ಕೆ ಆಕೆ ತನ್ನ ಬಲ್ಲಿ ದುಡ್ಡ ಎಲ್ಲಿಂದ ಬರುತ್ತದೆ ಅಂತಾ ಹೇಳಿ ತನ್ನಲ್ಲಿ ಸದ್ಯ ದುಡ್ಡಿಲ್ಲ ಅಂತಾ ಸಮಧಾನ ಹೇಳಿ ಕಳುಹಿಸಿದ್ದು ಅದೇ ವಿಷಯಕ್ಕೆ ಸಂಬಂಧಿಸಿದಂತೆ ಮೃತನು ತನಗೆ ಖಚರ್ಿಗೆ ದುಡ್ಡು ಕೋಡುತ್ತಿಲ್ಲ ಎಂಬುವ ವಿಚಾರವಾಗಿ ಮನನೊಂದು ಗುರುಮಠಕಲ ಪಟ್ಟಣದ ಖಾಸ ಮಠದ ಹತ್ತಿರ ಅರಣ್ಯ ಪ್ರದೇಶಕ್ಕೆ ಹೋಗಿ ಅಲ್ಲಿ ಮರ ಒಂದಕ್ಕೆ ತನ್ನ ಲುಂಗಿಯಿಂದ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು ಆ ಬಗ್ಗೆ ಇಂದು ದಿನಾಂಕ 01.02.2020 ರಂದು ಮದ್ಯಾಹ್ನ 12.00 ಗಂಟೆಯ ಸುಮಾರಿಗೆ ವಿಷಯ ಗೊತ್ತಾಗಿ ಮೃತನ ತಾಯಿ ಬಂದು ಮೃತ ದೇಹವನ್ನು ನೋಡಿ ಗುತರ್ಿಸಿ ಹೇಳಿಕೆ ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ. 03/2020 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!