ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 30-01-2020

By blogger on ಶುಕ್ರವಾರ, ಜನವರಿ 31, 2020

                              
                              ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 30-01-2020  

 ಯಾದಗಿರ ನಗರ ಠಾಣೆ ಗುನ್ನೆ ನಂ:-. ಪಿ.ಎ.ಆರ್ ನಂ. 03/2020 ಕಲಂ 109 ಸಿ.ಆರ್.ಪಿ.ಸಿ:- ಮಾನ್ಯರವಲ್ಲಿ ನಾನು ಕೃಷ್ಣಾ ಸುಬೇದಾರ ಪಿ.ಎಸ್.ಐ ಯಾದಗಿರಿ ನಗರ ಠಾಣೆ ತಮ್ಮಲ್ಲಿ ಸಲ್ಲಿಸುವ ವರದಿ ಏನೆಂದರೆ, ಇಂದು ದಿನಾಂಕ 30/01/2020 ರಂದು ಮಧ್ಯಾಹ್ನ 04-00 ಗಂಟೆಯ ಸುಮಾರಿಗೆ ನಾನು ಪೆಟ್ರೋಲಿಂಗ್ ಅಪರಾಧ ವಿಭಾಗದ ಸಿಬ್ಬಂಧಿ ಜನರಾದ ಶಿವಶಂಕರ ಹೆಚ್.ಸಿ 175, ಮತ್ತು ಬಸವರಾಜ ಪಿ.ಸಿ 153 ರವರನ್ನು ಸಂಗಡ ಕರೆದುಕೊಂಡು ಯಾದಗಿರಿ ನಗರದಲ್ಲಿ ಪೆಟ್ರೋಲಿಂಗ್ ಕುರಿತು ಹೊರಟು ವಿಶ್ವರಾದ್ಯ ನಗರ, ಲಕ್ಷ್ಮೀನಗರ, ಗಾಂಧಿನಗರ ತಾಂಡಾ, ಚಿತ್ತಾಪೂರ ರಸ್ತೆ, ಹಳೆಯ ಬಸ್ ನಿಲ್ದಾಣ, ಹೊಸಾ ಬಸ್ ನಿಲ್ದಾಣ, ಅಜೀಜ್ ಕಾಲೋನಿಯಲ್ಲಿ ತಿರುಗಾಡುತ್ತ ಮಧ್ಯಾಹ್ನ 04-30 ಗಂಟೆಯ ಸುಮಾರಿಗೆ ಜೈನ್ ಕಾಲೋನಿ ಕಡೆಗೆ ಹೋದಾಗ ಅಲ್ಲಿ ಮಂದಿರ ಹತ್ತಿರ ಒಂದು ಮನೆಯ ಮುಂದೆ ಯಾರೋ ಇಬ್ಬರು ಸಂಶಯವಾಗಿ ತಿರುಗಾಡುತ್ತಿದ್ದರು. ನಮ್ಮ ಪೊಲೀಸ್ ಜೀಪ್ ನೋಡಿ ತಮ್ಮ ಇರುವಿಕೆಯನ್ನು ಮರೆಮಾಚುತ್ತಿರುವಾಗ, ಸದರಿಯವರಿಗೆ ನಾವು ನೋಡಿ ಹಿಡಿದು ವಿಚಾರಿಸಲು ಮೊದಲು ತಮ್ಮ ಹೆಸರು ಹೇಳದೇ ತಡವರಿಸತೊಡಗಿದರು. ಅವರ ಮೇಲೆ ನಮಗೆ ಬಲವಾಗಿ ಸಂಶಯ ಬಂದಿದ್ದರಿಂದ ಅವರನ್ನು ವಶಕ್ಕೆ ತೆಗೆದುಕೊಂಡು, ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ಮಾಡಲಾಗಿ ತಮ್ಮ ಹೆಸರು 1) ರಾಜಕಿರಣ @ ಚಿನ್ನ ತಂದೆ ಗುರುಲಿಂಗಪ್ಪ ಈಟೆ ವಯಾ 18 ವರ್ಷ, ಜಾ|| ಪ.ಜಾತಿ ಉ|| ಡಿ.ಜೆ ಆಫ್ರೇಟರ್ ಸಾ|| ಅಂಬೇಡ್ಕರ ನಗರ ಯಾದಗಿರಿ, ಮತ್ತು 2) ಏಸುರಾಜ ತಂದೆ ಬಾಬುರಾವ್ ಹಲಕಟ್ಟಿ ವಯಾ 23 ವರ್ಷ ಜಾ|| ಕ್ರಿಶ್ಚಿಯನ್ ಉ|| ಪೇಟಿಂಗ್ ಸಾ|| ಠಾಣಗುಂದಿ ತಾ|| ಜಿ|| ಯಾದಗಿರಿ ಅಂತಾ ತಿಳಿಸಿದರು. ಕಾರಣ ಸದರಿಯವರು ಸಂಶಯಾಸ್ಪದವಾಗಿ ತಿರುಗಾಡುತ್ತಿದದ್ದು ಕಂಡು ಬಂದಿದ್ದು, ಅವರಿಗೆ ಹೀಗೆ ಬಿಟ್ಟಲ್ಲಿ ಯಾವುದಾದರು ಸ್ವತ್ತಿನ ಅಪರಾಧ ಮಾಡುವ ಸಾದ್ಯತೆಗಳು ಇದ್ದುದ್ದರಿಂದ ಮುಂಜಾಗ್ರತೆ ಕ್ರಮ ಕುರಿತು ಇಂದು ಸಾಯಂಕಾಲ 05-00 ಗಂಟೆಗೆ ಸದರಿಯವರ ವಿರುದ್ದ ಠಾಣೆ ಪಿ.ಎ.ಆರ್ ನಂ 03/2020 ಕಲಂ 109 ಸಿ.ಆರ್.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಸೈದಾಪೂರ  ಪೊಲೀಸ್ ಠಾಣೆ ಗುನ್ನೆ ನಂ:- 08/2020 ಕಲಂ. 379 ಐಪಿಸಿ :- ದಿನಾಂಕ: 26-12-2019 ರಂದು  ಯಾದಗಿರಿಯಿಂದ ಮೋಟರ ಸೈಕಲ್ ಪಲ್ಸರ್ ಕೆಎ-33 ವೈ- 2234 ನೇದ್ದನ್ನು ತೆಗೆದುಕೊಂಡು ನಾನು ಒಬ್ಬನೆ ಕಾಳಬೆಳಗುಂದಿಗೆ ರಾಮಸಮುದ್ರ ಮಾರ್ಗವಾಗಿ ಹೋಗುತಿದ್ದೆನು  ರಾಮಸಮುದ್ರ ಕ್ರಾಸನಲ್ಲಿ ನಾನು ಮೋಟರ ಸೈಕಲ್ ಮೇಲೆ ಹೋಗುತ್ತಿರುವಾಗ ಯಾರೋ ಒಬ್ಬ ವ್ಯಕ್ತಿ ನನಗೆ  ಕೈ ಮಾಡಿ ಗಾಡಿ ನಾನು ಯಲೇರಿಗೆ ಬರುತ್ತೆನೆ ಅಂತಾ ಹೇಳಿದ್ದರಿಂದ ನಾನು ಅವನನ್ನು ನನ್ನ ಮೋಟರ ಸೈಕಲ್ ಮೇಲೆ ಕೂಡಿಸಿಕೊಂಡು ಹೋಗುತಿದ್ದೆನು ನಾನು ಕಾಳಬೆಳಗುಂದಿ ಬನದೇಶ್ವರ ಗುಡಿ ಇನ್ನು ಮುಂದೆ ಇರುವಾಗ ನನಗೆ ಮೂತ್ರ ಬಂದಿದ್ದರಿಂದ ಮೋಟರ ಸೈಕಲನ್ನು ನಿಲ್ಲಿಸಿ ನಾನು ರೋಡಿನ ಪಕ್ಕಕ್ಕೆ ಮೂತ್ರ ಮಾಡಲು ಮದ್ಯಾಹ್ನ 01-30 ಗಂಟೆ ಸುಮಾರಿಗೆ ಹೋದಾಗ ನನ್ನ ಹಿಂದೆ ಕುಳಿತುಕೊಂಡು ಬಂದ ವ್ಯಕ್ತಿ ನನ್ನ ಮೋಟರ ನನ್ನ ಮೋಟರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ ಯಾವನೋ ಕಳ್ಳನು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ. ಅದರ ಅ|| ಕಿ|| 45000=00 ಇರುತ್ತದೆ ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 09/2020 ಕಲಂ.323,354,504,506, ಐಪಿಸಿ  :- ದಿನಾಂಕ 30-01-2020 ರಂದು ಬೆಳಿಗ್ಗೆ 11-00 ಗಂಟೆಗೆ 6 ನೇ ತರಗತಿ (ಬಿ) ವಿಭಾಗದಲ್ಲಿ ಮಾಠಮಾಡುತ್ತಿದ್ದಾಗ ಏಕಾಎಕಿ ಬಂದು ಮಾತಾಡದೇ ನನ್ನ ಮೇಲೆ ದೈಹಿಕವಾಗಿ ಜಡಿ ಹಿಡಿದು ಕಪಾಳಕ್ಕೆ ಹೋಡೆದು ಮತ್ತು ಕಾಲಿನಿಂದ ಹೊಟ್ಟೆಗೆ ಒದ್ದು ತೋಡೆಗೆ ಒದ್ದು ಮತ್ತು ಅವಾಚ್ಯ ಶಬ್ದದಿಂದ ನಿಂದಿಸಿ ಜಡೆಯನ್ನು ಗೋಡೆಗೆ ಮಕ್ಕಳ ಸಮ್ಮಖದಲ್ಲಿ ನೂಕಿದ್ದಾನೆ ಈ ಘಟನೆಯನ್ನು ನೋಡಿ ಮಕ್ಕಳು ಚಿರಾಡಿ ಅಳುತ್ತಿದ್ದಾಗ ಮಕ್ಕಳನ್ನು ಕೂಡಾ ನೂಕಿದ್ದಾನೆ ಅಲ್ಲಿರುವ ಕೇಲವು ಮಕ್ಕಳು ಮುಖ್ಯ ಗುರುಗಳಿಗೆ, ಸಹ ಶಿಕ್ಷಕರಿಗೆ ತಿಳಿಸಿದಾಗ ಅವರು ಬಂದಾಗ ನಾನು ಮೂಛರ್ೇಹೋಗಿದ್ದೆನೆ ನಂತರ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ನನಗೆ ಮೂಛರ್ೇಯ್ಲಿರುವಾಗ ಪಿ,ಹೆಚ್,ಸಿ ಬಳಿಚಕ್ರಕ್ಕೆ ದಾಖಲು ಮಾಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಚಿಕಿತ್ಸೆಯ ಎರಡು ಗಂಟೆಯ ನಂತರ ನನಗೆ ಪ್ರಜ್ಞೆ ಬಂದಿದೆ ಆಗ ಎಲ್ಲಾ ವಿಷಯಗಳನ್ನು ಮುಖ್ಯ ಗುರುಗಳು ಹಾಗೂ ಸಂಘದ ಅದ್ಯಕ್ಷಕರು ನನಗೆ ಧೈರ್ಯ ಹೇಳಿರುತ್ತಾರೆ ಆದರೂ ನನಗೆ ಆತನಿಂದ ಅಂದರೆ ಸೋಮಶೇಖರ ರಾಠೋಡ ಇತನಿಂದ ಜೀವ ಭಯ ಹಾಗೂ ಮಾನಸಿಕವಾಗಿ ತೋಂದರೆ ಇರುತ್ತದೆ. ಈ ಹಿಂದೆ 3 ತಿಂಗಳ ಹಿಂದೆ ಕೂಡಾ ಇದೆ ರೀತಿ ನನ್ನನ್ನು ಮಾನಸಿಕವಾಗಿ, ದೈಹಿಕವಾಗಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುತ್ತಾನೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 32/2020 ಕಲಂ  78 () ಕೆ.ಪಿ. ಕಾಯ್ದೆ :- ಇಂದು ದಿನಾಂಕ: 30/01/2020 ರಂದು 09:15 ಎ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಆನಂದರಾವ್ ಪಿ.ಐ ಸಾಹೇಬರು ಒಬ್ಬ ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಹಾಗು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ದಿನಾಂಕ:30-01-2020 ರಂದು 06-45 ಎ.ಎಂ. ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪುರ ಠಾಣಾ ವ್ಯಾಪ್ತಿಯ ರಂಗಂಪೇಠದ ಡಾ|| ಬಿ.ಆರ್.ಅಂಬೇಡ್ಕರ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಒಳ್ಳುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ 1) ಚಂದ್ರಾಮ ಸಿಪಿಸಿ-175 2) ಸೋಮಯ್ಯಾ ಸಿಪಿಸಿ-235  3) ಸುಭಾಸ ಸಿಪಿಸಿ-174 ಇವರಿಗೆ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಪ್ರಕಾಶ ತಂದೆ ಮಲ್ಲಪ್ಪ ದದ್ದರೆ ವಯಾ:47 ವರ್ಷ ಉ:ಟ್ಯಾಕ್ಟರ ಸೇಲ್ಸಮೆನ್ ಜಾತಿ:ಮಾದಿಗ ಸಾ:ಹೊನಗುಂಟಾ ಹಾವ:ರತ್ತಾಳ ತಾ:ಸುರಪೂರ  2) ಶ್ರೀ ಯಲ್ಲಪ್ಪ ತಂದೆ ದುರ್ಗಪ್ಪ ಮೈಸೂರ ವಯಾ: 28 ವರ್ಷ ಉ:ಕೂಲಿ ಜಾತಿ:ಮಾದಿಗ ಸಾ:ರತ್ತಾಳ ತಾ:ಸುರಪೂರ ಇವರನ್ನು 07:00 ಎ.ಎಮ್. ಕ್ಕೆ ಠಾಣೆಗೆ ಬರಮಾಡಿಕೊಂಡು ಸದರಿಯವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು, ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಎಲ್ಲರೂ ಕೂಡಿ ಠಾಣೆಯ ಜೀಪ್ ನಂಬರ ಕೆಎ-33 ಜಿ-0238 ನೇದ್ದರಲ್ಲಿ ಹೊರಟು 07:25 ಎ.ಎಮ್ ಕ್ಕೆ ರಂಗಂಪೇಠ ಡಾ:ಅಂಬೇಡ್ಕರ ಸರ್ಕಲ್ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಎಲ್ಲರು ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ ಕೂಗಿ ಕರೆದು 1 ರೂ ಗೆ 80 ರೂ ಗೆಲ್ಲಿರಿ, ಅದೃಷ್ಠವಂತರಾಗಿರಿ ಅಂತಾ ಕೂಗಿ ಕರೆದು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ನೋಡಿ ಖಚಿತಪಡಿಸಿಕೊಂಡು  07:30 ಎ.ಎಮ್. ಕ್ಕೆ ಎಲ್ಲರು ಅವನ ಮೇಲೆ ದಾಳಿ ಮಾಡಿ ಹಿಡಿಯಲು ಸಾರ್ವಜನಿಕರು ಓಡಿ ಹೋಗಿದ್ದು, ಮಟಕಾ ಬರೆದುಕೊಳ್ಳುತ್ತಿರುವ ವ್ಯಕ್ತಿಯನ್ನು ಹಿಡಿದು, ಅವನ ಹೆಸರು, ವಿಳಾಸ ವಿಚಾರಿಸಿಲಾಗಿ ಅವನು ತನ್ನ ರಂಗಪ್ಪ ತಂದೆ ಬೀಮಣ್ಣ ಬಿಲ್ಲಾವ್ ವಯಾ:27 ವರ್ಷ ಉ:ಒಕ್ಕಲುತನ ಜಾತಿ:ಮಾದಿಗ ಸಾ:ರತ್ತಾಳ ತಾ:ಸುರಪುರ ಅಂತಾ ತಿಳಿಸಿದನು. ಸದರಿಯವನು ತಾನು ಮಟಕಾ ಬರೆದುಕೊಂಡು ಸಾರ್ವಜನಿಕರಿಂದ ಪಡೆದುಕೊಂಡ ಹಣವನ್ನು ಬೈರಿಮಡ್ಡಿ ಗ್ರಾಮದ ನಾಗಪ್ಪ ಬಳ್ಳಾರಿ ಈತನಿಗೆ ಕೊಡುತ್ತಿರುವದಾಗಿ ತಿಳಿಸಿದನು. ಸದರಿಯವನ  ಅಂಗ ಶೋಧನೆ ಮಾಡಲು ಅವನ ಹತ್ತಿರ 1340/- ರೂ ಗಳು ನಗದು ಹಣ, ಒಂದು ಮಟಕಾ ನಂಬರ್ ಬರೆದ ಚೀಟಿ, ಒಂದು ಬಾಲ್ ಪೆನ್ನು ದೊರೆತಿದ್ದು, ಸದರಿಯವುಗಳನ್ನು ಪಂಚರ ಸಮಕ್ಷಮ ಸ್ಥಳದಲ್ಲಿಯೇ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 07-30 ಎ.ಎಮ್. ದಿಂದ 8-30 ಎ.ಎಮ್. ದವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಆರೋಪಿತನೊಂದಿಗೆ ಬಂದು ಜಪ್ತಿಪಂಚನಾಮೆ ಮತ್ತು ಮುದ್ದೆಮಾಲನ್ನು  ಹಾಜರುಪಡಿಸಿ ಆದೇಶ ನೀಡಿದ್ದು  ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ 
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 33/2020 ಕಲಂ  87 ಕೆ.ಪಿ. ಕಾಯ್ದೆ:- ಇಂದು ದಿನಾಂಕ: 30/01/2020 ರಂದು03-45 ಪಿ.ಎಮ್. ಕ್ಕೆ ಶ್ರೀ ಚೇತನ್ ಪಿ.ಎಸ್.ಐ (ಕಾ&ಸೂ) ಸುರಪೂರ  ಪೊಲೀಸ್ಠಾಣೆರವರು3ಜನ ಆರೋಪಿತರೊಂದಿಗೆಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ಠಾಣೆಗೆ ಬಂದು ವರದಿ ನೀಡಿದ್ದು, ಸಾರಾಂಶವೆನೆಂದರೆ , ಇಂದು ದಿನಾಂಕ:30-01-2020 ರಂದು01-35 ಪಿ.ಎಂ. ಸುಮಾರಿಗೆ ಸುರಪೂರ ಪೊಲೀಸ್ಠಾಣಾ ವ್ಯಾಪ್ತಿಯಕನರ್ಾಳದ ಸೀಮಾಂತರದ ಇಚಲಪದಿ ಹಳ್ಳದ ಹತ್ತಿರಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಮೇಲೆ ಹೇಳಿದ ಆರೋಪಿತರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವಾಗ ದಾಳಿ ಮಾಡಿ3ಜನಆರೋಪಿತರೊಂದಿಗೆಠಾಣೆಗೆ ಬಂದು ವರದಿ ನಿಡಿದ್ದರ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 341 448 354 504 506(2) ಐಪಿಸಿ:-ದಿನಾಂಕ:30/01/2020 ರಂದು 18.30 ಗಂಟೆಗೆ ಠಾಣೆಯ ಕೋರ್ಟ ಪಿಸಿ-404 ಅಜಮೀರ ರವರು ಠಾಣೆಗೆ ಬಂದು ಮಾನ್ಯ ಜೆ.ಎಂ.ಎಫ್.ಸಿ ಕೋರ್ಟ ಶೋರಾಪುರ ರವರ ಖಾಸಗಿ ದೂರು ನಂ.53/2019 ನೇದ್ದನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ ಆರೋಪಿತನು ಹುಣಸಗಿಯ ಯುಕೆಪಿ ಕ್ಯಾಂಪಿನಲ್ಲಿರುವ ಪಿಯರ್ಾದಿ ಮನೆಗೆ ಅಕ್ರಮ ಪ್ರವೇಶ ಮಾಡಿ ಬಂದು ಪಿಯರ್ಾದಿಗೆ ಅವಾಚ್ಯ ಶಬ್ದಗಳಿಂದಾ ಬೈದು ತಡೆದು ನಿಲ್ಲಿಸಿ  ಕೈಯಿಂದಾ ಹೊಡೆಬಡೆ ಮಾಡಿ ಜೀವದ ಬೆದರಿಕೆಯನ್ನು ಇರುತ್ತದೆ ಈ ಬಗ್ಗೆ ಹುಣಸಗಿ ಠಾಣೆಗೆ ಹೋಗಿ ದೂರು ಕೊಟ್ಟರು ದೂರು ಪಡೆದು ಕೊಂಡಿರುವದಿಲ್ಲಾ ಅಂತಾ ಇತ್ಯಾದಿ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ.
ಕೋಡೆಕಲ ಪೊಲೀಸ್ ಠಾಣೆ ಗುನ್ನೆ ನಂ:- 09/2020 ಕಲಂ:78() ಕೆ ಪಿ ಆಕ್ಟ:- ನಿನ್ನೆ ದಿನಾಂಕ 29.01.2020 ರಂದು 4:15 ಪಿಎಮ್ ಕ್ಕೆ ಪಿಎಸ್ಐ ಸಾಹೇಬರು ರವರು ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರ ಹಾಗೂ ತಾವು ಪೂರೈಸಿದ ಮಟಕಾ ಜೂಜಾಟದ ಅಸಲ ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ,  ಇಂದು ದಿನಾಂಕ 29.01.2020 ರಂದು 4:15 ಪಿಎಮ್ಕ್ಕೆ ಬಾಷುಮಿಯಾ ಪಿಎಸ್ಐ ಕೊಡೆಕಲ್ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರ ಹಾಗೂ ತಾವು ಪೂರೈಸಿದ ಮಟಕಾ ಜೂಜಾಟದ ಅಸಲು ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿದ್ದು. ಅದರ ಸಾರಾಂಶವೆನೆಂದರೆ, ಇಂದು ದಿನಾಂಕ: 29.01.2020 ರಂದು 1.00 ಪಿ.ಎಮ್ ಗಂಟೆಗೆ ನಾನು ಠಾಣೆಯಲ್ಲಿದ್ದಾಗ,  ಅಂಬಾನಗರ ಕಕ್ಕೆರಾದ ವಾಲ್ಮೀಕಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ನಿಂತು ಕಲ್ಯಾಣಿ ಮಟಕಾ ಎಂಬುವ ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ  ಸದರಿ ದಾಳಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಯಲ್ಲಪ್ಪ ಹೆಚ್ಸಿ-117 ರವರಿಗೆ ತಿಳಿಸಿದ್ದು ಯಲ್ಲಪ್ಪ ಹೆಚ್ಸಿ ರವರು ಪಂಚರನ್ನಾಗಿ 1) ಕೃಷ್ಣಪ್ಪ ತಂದೆ ಶಿವನಪ್ಪ ಹೆಬ್ಬಾಳದವರು  2) ವೆಂಕಟೇಶ ತಂದೆ ದ್ಯಾಮಣ್ಣ ಲಂಕುಂಡಿ ಸಾ: ಇಬ್ಬರೂ ಕೊಡೇಕಲ್ಲ  ಇವರನ್ನು  1.15 ಪಿಎಮ್ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು ಸದರಿಯವರಿಗೆ ವಿಷಯ ತಿಳಿಸಿ ಮಟಕಾ ಜುಜಾಟದ ಜಪ್ತಿ ಪಂಚನಾಮೆಗೆ ಪಂಚರಾಗಲು ಕೋರಿಕೊಂಡಿದ್ದು ಅದಕ್ಕೆ ಒಪ್ಪಿಕೊಂಡಿದ್ದು ನಂತರ ನಾನು ಈ ವಿಷಯವನ್ನು ಮಾನ್ಯ ಡಿ.ಎಸ್.ಪಿ ಸಾಹೇಬರು ಸುರಪುರ ಮತ್ತು ಸಿಪಿಐ ಸಾಹೇಬರು ಹುಣಸಗಿ ರವರಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ  ಸಿಬ್ಬಂದಿಯವರಾದ ಯಲ್ಲಪ್ಪ ಹೆಚ್ಸಿ-117, ಬಸನಗೌಡ ಹೆಚ್.ಸಿ.100, ರವರನ್ನು ಕರೆದುಕೊಂಡು ಮತ್ತು  ಪಂಚರೊಂದಿಗೆ ಠಾಣೆಯಿಂದ 1.25  ಪಿಎಮ್ ಕ್ಕೆ ಬಿಟ್ಟು  ಒಂದು ಖಾಸಗಿ ವಾಹನದಲ್ಲಿ  ಕೂಡಿಸಿಕೊಂಡು ಹೊರಟು  ಉಪ ಠಾಣೆ ಕಕ್ಕೆರಾದ ಸಿಬ್ಬಂದಿಯವರಾದ ಸಣಕೇಪ್ಪ ಹೆಚ್.ಸಿ.27,ಮತ್ತು ಸಿದ್ರಾಮಪ್ಪ ಪಿ.ಸಿ.210 ರವರಿಗೆ ಆಯ ಕಟ್ಟು ರೊಡ್ ಕ್ರಾಸ್ ದಲ್ಲಿ ಬಂದು ನಿಲ್ಲಲ್ಲು ಪೊನ್ನಲ್ಲಿ  ತಿಳಿಸಿದ್ದು  1.50 ಪಿ.ಎಮ್.ಕ್ಕೆ ಆಯ ಕಟ್ಟು ರೊಡ್ ಕ್ರಾಸ್ ಹತ್ತಿರ ಹೋದಾಗ ಅಲ್ಲಿ ಉಪ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ.27,ಪಿಸಿ.210 ರವರು ನಿಂತಿದ್ದು ಅವರಿಗೆ ನಮ್ಮ ಜೊತೆಗೆ ವಾಹನದಲ್ಲಿ ಕುಡಿಸಿಕೊಂಡು ಹೋರಟು ವಿಷಯ ತಿಳಿಸಿದ್ದು 2.00 ಪಿ.ಎಮ್ ಸುಮಾರಿಗೆ ಬಾತ್ಮಿ ಬಂದ ಸ್ಥಳದ ಹತ್ತಿರ ತಲುಪಿ ಮರೆಯಲ್ಲಿ ವಾಹನವನ್ನು ನಿಲ್ಲಿಸಿ ವಾಹನದಿಂದ ಎಲ್ಲರೂ ಕೆಳಗೆ ಇಳಿದು ಮರೆಮರೆಯಾಗಿ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲಾಗಿ ಅಂಬಾ ನಗರ ಕಕ್ಕೆರಾದ ವಾಲ್ಮೀಕಿ ವೃತ್ತದ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬನು  ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಕರೆದು ಬರ್ರಿ ಒಂದು ರೂ.ಗೆ 80 ರೂಪಾಯಿ ಕೊಡುತ್ತೆನೆ ಕಲ್ಯಾಣೆ ಮಟಕಾ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಒಂದು ಚೀಟಿಯಲ್ಲಿ ನಂಬರ್ ಬರೆದುಕೊಡುತ್ತಿದ್ದು ಖಾತರಿ ಆದ ಮೇಲೆ ನಾನು ಮತ್ತು ಸಿಬ್ಬಂದಿಯವರು 2.15  ಪಿಎಮ್ ಕ್ಕೆ ಓಡಿ ಹೋಗಿ ದಾಳಿ ಮಾಡಿದ್ದು ಮಟಕಾ ನಂಬರ್ ಬರೆದುಕೊಳ್ಳುವವನನ್ನು ಹಿಡಿದಿದ್ದು  ಮಟಕಾ ನಂಬರ್ ಬರೆಸುವವರು ಓಡಿ ಹೋಗಿದ್ದು  ಹಿಡಿದ  ಮಟಕಾ ನಂಬರ್ ಬರೆದುಕೊಳ್ಳುವವನನ್ನು ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ವೆಂಕಟೇಶ ತಂದೆ ಮಾನಪ್ಪ ಕುರಿ ವ:31 ವರ್ಷ ಉ: ಒಕ್ಕಲುತನ ಜಾ: ಹಿಂದು ಕುರುಬರ ಸಾ:ಅಂಬಾ ನಗರ ಕಕ್ಕೆರಾ ತಾ: ಸುರಪುರ ಅಂತಾ ತಿಳಿಸಿದ್ದು ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವನ ವಶದಲ್ಲಿ  ಒಂದು ಬಾಲ್ ಪಾಯಿಂಟ್ಪೆನ್ನು, ಒಂದು ಅಂಕಿ-ಸಂಖ್ಯೆ ಬರೆದ ಮಟಕಾ ಚೀಟಿ, ಮತ್ತು ನಗದು ಹಣ 970/-  ರೂಪಾಯಿಗಳು ದೊರೆತಿದ್ದು. ಈ ಬಗ್ಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 2.15   ಪಿ.ಎಮ್ ದಿಂದ 3.15 ಪಿಎಮ್ ವರೆಗೆ  ಜರುಗಿಸಿ ಆರೋಪಿ ವೆಂಕಟೇಶ ಕುರಿ ಹಾಗು ಮುದ್ದೇಮಾಲಿನೊಂದಿಗೆ ಠಾಣೆಗೆ 4:15 ಪಿ.ಎಮ್ ಕ್ಕೆ ಬಂದು ಹೆಚ್ಸಿ-09 ರವರಿಗೆ ಪಿಎಸ್ಐ ರವರು ತಾವು ಪೂರೈಸಿದ ಜಪ್ತಿ ಪಂಚನಾಮೆಯನ್ನು ಈ ಜ್ಞಾಪನ ಪತ್ರದೊಂದಿಗೆ ಹಾಜರುಪಡಿಸಿದ್ದು, ಆರೋಪಿತನ ಮೇಲೆ ಮುಂದಿನ ಕ್ರಮ ಜರುಗಿಸಬೆಕು ಅಂತಾ ಇದ್ದು. ಕಾರಣ ಪಿಎಸ್ಐ ಸಾಹೇಬರು ಹಾಜರ ಪಡಿಸಿದ ಸದರಿ ಜಪ್ತಿ ಪಂಚನಾಮೆಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದು ಕಲಂ 78 (3) ಕೆಪಿ ಎಕ್ಟ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಬೇಕಾಗಿರುತ್ತದೆ, ಕಲಂ 78 (3) ಕೆಪಿ ಎಕ್ಟ ಅಸಂಜ್ಞೆಯ ಅಪರಾಧವಾಗಿದ್ದರಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಮಾನ್ಯರು ಪರವಾನಿಗೆ ನೀಡಲು ಕಲಂ 78 (3) ಕೆಪಿ ಎಕ್ಟ ಅಸಂಜ್ಞೆಯ ಅಪರಾಧವಾಗಿದ್ದರಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ನಿನ್ನೆಯ ದಿನ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದ ಹೆಚ್ಸಿ-9 ಬಸವರಾಜ ರವರು ಮಾನ್ಯರು ನ್ಯಾಯಾಲಯಕ್ಕೆ ಪರವಾನಿಗೆಗಾಗಿ ವಿನಂತಿಸಿಕೊಂಡಿದ್ದು. ಇಂದು ದಿನಾಂಕ: 30.01.2020 ರಂದು 3:00 ಪಿ ಎಂ ಕ್ಕೆ  ಪಿಸಿ-251 ಕಜ್ಜಪ್ಪ ರವರು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಬಂದು ಪರವಾನಿಗೆ ಯಾದಿಯನ್ನು ಹಾಜರಪಡಿಸಿದ್ದು. ನಿನ್ನೆ ಪಿಎಸ್ಐ ರವರು ಹಾಜರ ಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪಾನ ಪತ್ರದ ಸಾರಾಂಶದ ಮೇಲಿಂದ ಇಂದು ನಾನು ಪ್ರಕಾಶ ಹೆಚ್ಸಿ-143 ಠಾಣಾ ಗುನ್ನೆ ನಂ: 09/2020 ಕಲಂ: 78 (111) ಕೆ.ಪಿ. ಎಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಕೋಡೆಕಲ್ಲ ಪೊಲೀಸ್ ಠಾಣೆ ಗುನ್ನೆ ನಂ:- 10/2020 ಕಲಂ:87 ಕೆ ಪಿ ಆಕ್ಟ:- ಇಂದು ದಿನಾಂಕ: 30..01.2020 ರಂದು 4:30 ಪಿ ಎಂ ಕ್ಕೆ  ಪಿ,ಎಸ್,ಐ ಸಾಹೇಬರು ಕೊಡೆಕಲ್ ಪೊಲೀಸ್ ಠಾಣೆ ರವರು  ಠಾಣೆಗೆ ಹಾಜರಾಗಿ ತಾವು ಪೂರೈಸಿದ ಇಸ್ಪಿಟ್ ಜೂಜಾಟ ಜಪ್ತಿ ಪಂಚನಾಮೆ ಹಾಗು ಜ್ಞಾಪನಾ ಪತ್ರವನ್ನು ಹಾಜಪಡಿಸಿದ್ದರ  ಸಾರಾಂಶವೆನೆಂದರೆ   ಇಂದು ದಿನಾಂಕ: 30.01.2020 ರಂದು 2:00  ಪಿ ಎಂ ಕ್ಕೆ  ನಾನು ಕೊಡೇಕಲ ಪೊಲೀಸ್ ಠಾಣೆಯಲ್ಲಿದ್ದಾಗ. ಕೊಡೇಕಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಜನಕೊಳುರು ಸೀಮಾಂತಯರದ ಬಸವರಾಜ ಮೇಟಿ ರವರ ಹೊಲದ ಹತ್ತಿರದ ಹಳ್ಳದ ದಂಡೆಯ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಅಂದರ್ ಬಾಹರ್ ಎಂಬುವ ಇಸ್ಪೇಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಹೆಚ್ ಸಿ-117 ಯಲ್ಲಪ್ಪ ರವರಿಗೆ ದಾಳಿ ಕುರಿತು ಇಬ್ಬರಿಗೆ ಪಂಚರನ್ನಾಗಿ ಕರೆದುಕೊಂಡು ಬರಲು ತಿಳಿಸಿದ್ದು ಹೆಚ್ ಸಿ-117 ಯಲ್ಲಪ್ಪ ರವರು 2-15 ಪಿ ಎಂ ಕ್ಕೆ ಪಂಚರನ್ನಾಗಿ 1) ಶ್ರೀ ಖಾದರಸಾಬ ತಂದೆ ಮಹ್ಮದಸಾಬ ನಗನೂರು  2) ಶ್ರೀ. ಬಬ್ರುವಾಹನ ತಂದೆ ಸಂಗಪ್ಪ ನಗನೂರು ಸಾ: ಇಬ್ಬರೂ ಕೊಡೆಕಲ್ಲ ತಾ: ಹುಣಸಗಿ ರವರಿಗೆ ಠಾಣೆಗೆ ಕರೆದುಕೊಂಡು ಬಂದಿದ್ದು ಸದರಿ ಪಂಚರಿಗೆ ವಿಷಯ ತಿಳಿಸಿ ನಮ್ಮ ಜೊತೆಗೆ ಬಂದು ದಾಳಿಮಾಡುವಾಗ ಹಾಜರಿದ್ದು ಪಂಚನಾಮೆಗೆ ಪಂಚರಾಗಲು ಕೋರಿಕೊಂಡು ಈ ವಿಷಯವನ್ನು ಮಾನ್ಯ ಡಿ ಎಸ್ ಪಿ  ಸಾಹೇಬರು ಸುರಪೂರ, ಸಿ.ಪಿ.ಐ.ಸಾಹೇಬರು ಹುಣಸಗಿ ರವರಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಹೆಚ್ ಸಿ 117 ಯಲ್ಲಪ್ಪ, ಹೆಚ್.ಸಿ.100 ಬಸನಗೌಡ, ಪಿಸಿ-132 ವೆಂಕಟೇಶ, ಪಿಸಿ-08 ಚಂದಪ್ಪ, ಪಿಸಿ-423 ಸಿದ್ರಾಮರೆಡ್ಡಿ ಮತ್ತು ಪಂಚರೊಂದಿಗೆ ಒಂದು ಖಾಸಗಿ ವಾಹನದಲ್ಲಿ ಕುಳಿತು ಎಲ್ಲರು ಠಾಣೆಯಿಂದ  2:30 ಪಿ ಎಂಕ್ಕೆ ಹೊರಟು ಬಾತ್ಮಿ ಬಂದ ಸ್ಥಳದ ಸಮೀಪ 3:00  ಪಿಎಂ ಕ್ಕೆ ತಲುಪಿ ವಾಹನದಿಂದ ಇಳಿದು ಎಲ್ಲರೂ ಕೂಡಿ ನಡೆದುಕೊಂಡು ಮರೆಮರೆಯಾಗಿ ಹೋಗಿ 5-10 ನಿಮಿಷ ನಿಂತು ನೋಡಲಾಗಿ ಸದರಿ ಬಸವರಾಜ ಮೇಟಿ ರವರ ಹೊಲದ ಹತ್ತಿರದ ಹಳ್ಳದ ದಂಡೆಯ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ 08 ಜನರು ದುಂಡಾಗಿ ಕುಳಿತು ಅಂದರ ಬಾಹರ್ ಎಂಬುವ ಇಸ್ಪೆಟ್ ಜೂಜಾಟ ಆಡುತ್ತಿದ್ದು ಖಚಿತ   ಪಡಿಸಿಕೊಂಡು 3:10 ಪಿ ಎಂಕ್ಕೆ  ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ 5 ಜನರನ್ನು ಹಿಡಿದು ವಶಕ್ಕೆ ತೆಗೆದುಕೊಂಡಿದ್ದು 3 ಜನರು ಓಡಿಹೊಗಿದ್ದು  ಸದರಿ ಸಿಕ್ಕ ಐದು ಜನ ಜೂಜುಕೋರರ ಹೆಸರು 1) ಸಿದ್ದ ಬಸಯ್ಯ ತಂದೆ ಪರತಯ್ಯ ಹಿರೇಮಠ ವ:39 ವರ್ಷ ಉ: ಡ್ರೈವರ್ ಜಾ: ಹಿಂದೂ ಜಂಗಮ ಸಾ: ರಾಜನಕೊಳೂರು ತಾ: ಹುಣಸಗಿ  2) ರಾಮನಗೌಡ  ತಂದೆ ಬಸವಂತ್ರಾಯ ಬಂಟನೂರು ವ:28 ವರ್ಷ ಉ:ಚಾಲಕ ಜಾ: ಲಿಂಗಾಯತ ರೆಡ್ಡಿ ಸಾ: ರಾಜನಕೊಳುರು ತಾ: ಹುಣಸಗಿ 3) ಸಿದ್ದಪ್ಪ ತಂದೆ ಮಲ್ಲಪ್ಪ ಮಾದರ ವ:42 ವರ್ಷ ಉ: ಕೂಲಿಕೆಲಸ ಜಾ:ಮಾದರ ಸಾ:ರಾಜನಕೊಳೂರು ತಾ: ಹುಣಸಗಿ 4) ಮಲ್ಲಪ್ಪ ತಂದೆ ಅಮರಪ್ಪ ಕುರಿ ವ:38 ವರ್ಷ ಉ: ಒಕ್ಕಲುತನ ಜಾ:ಕುರುಬರ ಸಾ: ಬೈಲಕುಂಟಿ ತಾ: ಹುಣಸಗಿ 5) ಮುರಗೇಶ ತಂದೆ ಮಲ್ಲಯ್ಯ ಹಿರೇಮಠ ವ:40 ವರ್ಷ ಉ: ಒಕ್ಕಲುತನ ಜಾ: ಜಂಗಮ ಸಾ; ರಾಜನಕೊಳರೂ ತಾ: ಹುಣಸಗಿ ಇದ್ದು ಸಿಕ್ಕ ಆರೊಪಿತರಿಗೆ ಓಡಿಹೊದವರ ಹೆಸರು ವಿಳಾಸದ ಬಗ್ಗೆ ವಿಚಾರಿಸಲಾಗಿ ಸದರಿಯವರು ಓಡಿಹೊದವರ ಹೆಸರು 1) ರಾಯಪ್ಪ ತಂದೆ ಪಿರಪ್ಪ ಮೇಟಿ ವ:28 ವರ್ಷ ಜಾ: ಕುರುಬರ ಉ: ಒಕ್ಕಲುತನ ಸಾ;ರಾಜನಕೊಳೂರು 2) ಬಸವರಾಜ ತಂದೆ ಹಣಮಂತ್ರಾಯ ತೀರ್ಥ ವ:25 ವರ್ಷ ಜಾ: ಬೇಡರ ಸಾ; ರಾಜನಕೊಳೂರು 3) ಬಸ್ಸು ತಂದೆ ತಿಪ್ಪಣ್ಣ ಕವಲ್ದಾರ ವ;25 ವರ್ಷ  ಜಾ; ಬೇಡರ ಉ: ಒಕ್ಕಲುತನ ಸಾ: ರಾಜನಕೊಳುರು ಅಂತಾ ತಿಳಿಸಿದ್ದು  ಈ ಬಗ್ಗೆ 3:10 ಪಿ ಎಂ ದಿಂದ 4:10 ಪಿ ಎಂ ವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಜೂಜುಕೋರರ ವಶದಿಂದ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 2350/- ರೂ  ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿ ಮುದ್ದೇಮಾಲು ಮತ್ತು 5 ಜನ ಆರೋಪಿತರೊಂದಿಗೆ 4:30 ಪಿ.ಎಮ್ ಕ್ಕೆ ಠಾಣೆಗೆ ಬಂದು ತಾವು ಪೂರೈಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪನ ಪತ್ರದೊಂದಿಗೆ ನನಗೆ ಹಾಜರಪಡಿಸುತ್ತಿದ್ದು, ಈ ಬಗ್ಗೆ ಆರೋಪಿತರ ಮೇಲೆ ಸೂಕ್ತ ಕಾನೂನು  ಕ್ರಮ ಕೈಕೊಳ್ಳಲು ಸೂಚಿಸಿದ್ದರಿಂದ  ಸದರ ಪಿ.ಎಸ್.ಐ. ರವರು ಹಾಜರು ಪಡಿಸಿದ ಜಪ್ತಿ  ಪಂಚನಾಮೆ ಮತ್ತು ಜ್ಞಾಪನಾ ಪತ್ರದ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ: 10/2020 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ೆ.
ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 04/2020 ಕಲಂ 78[3] ಕೆಪಿ ಯ್ಯಾಕ್ಟ:-   ಇಂದು ದಿನಾಂಕ 30/01/2020 ರಂದು 4 ಪಿಎಮ್ ಕ್ಕೆ  ಮುಡಬೂಳ ಗ್ರಾಮದ ವಾಲ್ಮೀಕಿ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ವಿಶ್ವರಾಧ್ಯ ಹಿರೇಮಠ ಈತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ, ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ವಿಚಾರಿಸಿದಾಗ ಮಟಕಾ ಚಿಟ್ಟಿ ಹಾಗೂ ಹಣವನ್ನು ಬಸಲಿಂಗಪ್ಪ ಹುಲಕಲ್ ಸಾ:ಮುಡಬೂಳ ಈತನಿಗೆ ಕೊಡುವದಾಗಿ ತಿಳಿಸಿದ್ದರಿಂದ ಆರೋಪಿತನಿಗೆ ವಶಕ್ಕೆ ತೆಗೆದುಕೊಂಡು ಅವನಿಂದ 1) ನಗದು ಹಣ ರೂಪಾಯಿ 12350=00, 2) ಒಂದು ಮಟಕಾ ನಂಬರ ಬರೆದ ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 4.15 ಪಿಎಮ್ ದಿಂದ 5.15 ಪಿಎಮ್ ಅವಧಿಯವರೆಗೆ ಜಪ್ತಿಪಡಿಸಿಕೊಂಡು 6 ಪಿಎಮ್ ಕ್ಕೆ ಠಾಣೆಗೆ ಬಂದು ವರದಿ ತಯಾರಿಸಿ ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 7 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ 04/2020 ಕಲಂ 78[3] ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
 ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 05/2020 ಕಲಂ 78[3] ಕೆಪಿ ಯ್ಯಾಕ್ಟ:- ಇಂದು ದಿನಾಂಕ 30/01/2020 ರಂದು 6.50 ಪಿ.ಎಮ್ ಕ್ಕೆ ಭೀ.ಗುಡಿಯ ಕೋರಿಕೆ ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸಾಹಿಲ್ ಶೇಖ್ ಈತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ, ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ 1) ನಗದು ಹಣ ರೂಪಾಯಿ 2400=00, 2) ಒಂದು ಮಟಕಾ ನಂಬರ ಬರೆದ ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 7 ಪಿಎಮ್ ದಿಂದ 8 ಪಿಎಮ್ ಅವಧಿಯವರೆಗೆ ಜಪ್ತಿಪಡಿಸಿಕೊಂಡು 8.30 ಪಿ.ಎಮ್ ಕ್ಕೆ ಠಾಣೆಗೆ ಬಂದು ವರದಿ ತಯಾರಿಸಿ ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 9.30 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ 05/2020 ಕಲಂ 78[3] ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!