ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 28-01-2020
ಯಾದಗಿರ ನಗರ ಠಾಣೆ ಗುನ್ನೆ ನಂ:-. ಗುನ್ನೆ ನಂ.14/2020 ಕಲಂ: 392 ಐಪಿಸಿ:- ಇಂದು ದಿನಾಂಕ 28/01/2020 ರಂದು ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ಫಿಯರ್ಾದಿ ಶ್ರೀ ಮಲ್ಲಿಕಾಜರ್ುನ ತಂದೆ ಮಾಳಪ್ಪ ದಿವಳೇರ ವಯಾ 25 ವರ್ಷ, ಜಾ|| ಕುರಬರು ಉ|| ಜೆ.ಸಿ.ಬಿ ಡ್ರೈವರ್ ಸಾ|| ಹೈಯಾಳ (ಬಿ) ತಾ||ವಡಗೇರಾ, ಜಿ|| ಯಾದಗಿರಿ ಇವರು ಠಾಣೆಗೆ ಬಂದು ನೀಡಿದ ಹೇಳಿಕೆಯ ದೂರಿನ ಸಾರಾಂಶ ವೇನೆಂದರೆ, ಸುಮಾರು 6 ತಿಂಗಳುಗಳಿಂದ ನಾನು ಹಾಗೂ ನಮ್ಮ ದೊಡ್ಡಪ್ಪನ ಮಗನಾದ ರೇವಣಸಿದ್ದಪ್ಪ ತಂದೆ ಮಲ್ಲಪ್ಪ ಅಣಿಬೇರ ಸಾ|| ಪರಸನಳ್ಳಿ ತಾ|| ಸುರಪೂರ ಇಬ್ಬರು ಮೈಸೂರಿನ ಅಮೃತ ಕಂಪನಿಯ ಮಾಲಿಕನಲ್ಲಿ ಜೆ.ಸಿ.ಬಿ ಕೆಲಸ ಮಾಡಿಕೊಂಡು ಇದ್ದೇವೆ. ಆಗಾಗ ನಾವು ನಮ್ಮೂರಿಗೆ ಹೋಗಿ ಬಂದು ಮಾಡುತ್ತೇವೆ.
ಹೀಗಿದ್ದು ನಿನ್ನೆ ದಿನಾಂಕ 27/01/2020 ರಂದು ರಾತ್ರಿ 02-00 ಗಂಟೆಯ ಸುಮಾರಿಗೆ ನಾನು ಹಾಗೂ ನಮ್ಮ ದೊಡ್ಡಪ್ಪನ ಮಗನಾದ ರೇವಣಸಿದ್ದಪ್ಪ ತಂದೆ ಮಲ್ಲಪ್ಪ ಅಣಿಬೇರ ಇಬ್ಬರು ಕೂಡಿ ಬಸವ ಸಾಗರ ಎಕ್ಸ್ಪ್ರೆಸ್ ರೈಲಿನ ಮೂಲಕ ಮೈಸೂರಿನಿಂದ ಯಾದಗಿರಿಗೆ ಬಂದು ಇಳಿದುಕೊಂಡೆವು. ನಂತರ ರೈಲ್ವೆ ಸ್ಟೇಷನ್ ದಿಂದ ಹೊಸಾ ಬಸ್ ನಿಲ್ದಾಣಕ್ಕೆ ಇಬ್ಬರು ನಡೆದುಕೊಂಡು ಬಂದಾಗ ದಿನಾಂಕ 27/01/2020 ರ ಮಧ್ಯ ರಾತ್ರಿ 02-30 ಗಂಟೆಯಾಗಿತ್ತು. ಹೊಸಾ ಬಸ್ ನಿಲ್ದಾಣದ ಕೆಳಗಿನ ಗೇಟ್ದಿಂದ ಬಸ್ ನಿಲ್ದಾಣದ ಒಳಗಡೆ ಹೋಗುವಾಗ, ಗೇಟ್ ಹತ್ತಿರ ಯಾರೋ ಇಬ್ಬರು ಮೋಟರ್ ಸೈಕಲ್ ಮೇಲೆ ಬಂದು ನಮಗೆ ಲೇ ಬೋಸಡಿ ಮಕ್ಕಳೆ ನಮಗೆ ನೋಡಿ ಏನೋ ಬೈಯಕತ್ತಿರಿ ಅಂತಾ ಅಂದವರೆ, ನನಗೆ ಹಾಗೂ ರೇವಣಸಿದ್ದಪ್ಪನಿಗೆ ಕಪಾಳಕ್ಕೆ ಒಂದೇಟು ಹೊಡೆದರು. ಆಗ ನಾವು ಯಾಕೆ ಸುಮ್ಮನೆ ಹೊಡೆಯುತ್ತೀರಿ ಅಂತಾ ಅಂದರು ಕೇಳದೆ ಮೋಟರ್ ಸೈಕಲ್ ಚಾಲಕನು ನನ್ನಲ್ಲಿ ಇದ್ದ ಒಂದು 5000/- ರೂಪಾಯಿ ಮತ್ತು ಓಪ್ಪೊ ಪೋನ್, ಕಸೆದುಕೊಂಡನು. ಇನ್ನೊಬ್ಬನು ರೇವಣಸಿದ್ದಪ್ಪನ ಕೊರಳಲ್ಲಿ ಇದ್ದ 2 ತೊಲೆಯ ಬೆಳ್ಳಿ ಚೈನ್, ಅ.ಕಿ 800/- ರೂ|| ನೇದ್ದು, ಕಿತ್ತಿಕೊಂಡು ಹೋದರು. ನಾನು ಅಳುತ್ತ ಅವರ ಬೆನ್ನು ಅತ್ತಿದಾಗ ದೂರಿನಿಂದ ನಮ್ಮ ಮೊಬೈಲ್ ಬಿಸಾಕಿ ಅಲ್ಲಿಂದ ಮೋಟರ್ ಸೈಕಲ್ ಮೇಲೆ ಹೋದರು. ಲೈಟಿನ ಬೆಳಕಿನಲ್ಲಿ ಮೋಟರ್ ಸೈಕಲ್ ನೋಡಲಾಗಿ ಎಫ್.ಜೆಡ್ ಕಂಪನಿಯ ನಂ- ಟಿ.ಎಸ್ 09 ಇಹೆಚ್ 8995, ಅಂತಾ ಇತ್ತು. ಅವರಿಬ್ಬರು ಸುಮಾರು 25 ರಿಂದ 30 ವರ್ಷದವರಿದ್ದು, ಪ್ಯಾಂಟ್ ಶಟರ್್ ಧಿರಿಸಿದ್ದರು. ಮುಂದೆ ಅವರನ್ನು ನೋಡಿದಲ್ಲಿ ನಾನು ಗುತರ್ಿಸುತ್ತೇನೆ. ನಂತರ ನಾವು ನಮ್ಮ ಮೊಬೈಲ್ ತೆಗೆದುಕೊಂಡು ಅರ್ಜಂಟ್ ಕೆಲಸ ಇದ್ದ ಕಾರಣ ನಮ್ಮೂರಿಗೆ ಹೋದೆವು. ನಡೆದ ವಿಷಯವನ್ನು ಮನೆಯಲ್ಲಿದ್ದ ನಮ್ಮ ದೊಡ್ಡಪ್ಪನ ಮಗನಾದ ದೇವಿಂದ್ರಪ್ಪ ತಂದೆ ಪೂಜಪ್ಪ ಗಿರಿಕೇರ ಸಾ|| ಹೈಯಾಳ(ಬಿ) ಇವರಿಗೆ ತಿಳಿದೆನು. ಆಗ ಅವರು ಈ ಬಗ್ಗೆ ಕೇಸ್ ಮಾಡೋನ ಅಂತಾ ಅಂದಿದ್ದರಿಂದ ಮನೆಯಲ್ಲಿ ವಿಚಾರಣೆ ಮಾಡಿ ಇಂದು ದಿನಾಂಕ 28/01/2020 ರಂದು ನಾನು ಹಾಗೂ ನಮ್ಮ ಅಣ್ಣ ದೇವಿಂದ್ರಪ್ಪ ತಂದೆ ಪೂಜಪ್ಪ ಗಿರಿಕೇರ ಇಬ್ಬರು ಠಾಣೆಗೆ ಬಂದು ದೂರು ನೀಡುತ್ತಿದ್ದು. ನಮಗೆ ಹೊಡೆದು 5000/ ರೂ|| & 2 ತೊಲೆಯ ಬೆಳ್ಳಿಯ ಚೈನ್, ಅ.ಕಿ 800/- ರೂ|| ಒಟ್ಟು ಅ.ಕಿ 5800/- ರೂ|| ನೇದ್ದು ಕಿತ್ತಿಕೊಂಡು ಹೋದವರ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 14/2020 ಕಲಂ 392 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 07/2020 ಕಲಂ: 457,380 ಐಪಿಸಿ:- ಇಂದು ದಿನಾಂಕ: 28/01/2020 ರಂದು 5 ಪಿಎಮ್ ಕ್ಕೆ ಶ್ರೀಮತಿ ಲಲಿತಮ್ಮ ಗಂಡ ಮರೆಪ್ಪ ಕೊಂಬಿನ, ವ:45, ಜಾ:ಹೊಲೆಯ, ಉ:ಕೂಲಿ ಸಾ:ನಾಯ್ಕಲ್ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಮನೆಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ದಿನಾಂಕ: 24/01/2020 ರಂದು ಬೆಳಗ್ಗೆ 10 ಎಎಮ್ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳಾದ ವಿರುಪಾಕ್ಷ ತಂದೆ ಮರೆಪ್ಪ ವ:20 ಮತ್ತು ಶಿವಕುಮಾರ ತಂದೆ ಮರೆಪ್ಪ ವ:16 ವರ್ಷ ಮೂರು ಜನ ಕೂಡಿಕೊಂಡು ನನ್ನ ತವರೂರಾದ ನಾಲವಾರ ಗ್ರಾಮಕ್ಕೆ ಜಾತ್ರೆಗೆ ಹೋಗಿದ್ದು, ಜಾತ್ರೆ ಮುಗಿಸಿಕೊಂಡು ಮರಳಿ ದಿನಾಂಕ: 26/01/2020 ರಂದು ಬೆಳಗ್ಗೆ 8-30 ಎಎಮ್ ಸುಮಾರಿಗೆ ನಮ್ಮೂರಿಗೆ ಬರಬೇಕೆನ್ನುತ್ತಿರುವಾಗ ನಮ್ಮೂರಿನಿಂದ ಭೀಮಾಶಂಕರ ತಂದೆ ಸಾಬಣ್ಣ ಕೊಂಬಿನ ಈತನು ನನಗೆ ಫೋನ ಮಾಡಿ ನಿನ್ನ ಮನೆ ರಾತ್ರಿ ಕಳ್ಳತನವಾಗಿದೆ ನೀನು ಊರಿಗೆ ಬಾ ಎಂದು ಹೇಳಿದ ಆಗ ನಾನು ಮತ್ತು ನನ್ನ ಮಕ್ಕಳು ನಮ್ಮೂರಿಗೆ ಬಂದು ನಮ್ಮ ಮನೆಗೆ ಹೋಗಿ ನೋಡಲಾಗಿ ನಮ್ಮ ಮನೆಯ ಎರಡು ಕೋಣೆಗಳ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಮುರಿದು ಒಳಗಡೆ ಹೋಗಿ ಮನೆಯಲ್ಲಿಟ್ಟದ್ದ ಕಬ್ಬಿಣದ ಪೆಟ್ಟಿಗೆಯ ಕೊಂಡಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದರು. ಕಬ್ಬಿಣದ ಪೆಟ್ಟಿಗೆಯಲ್ಲಿ ನೋಡಲಾಗಿ ಅದರಲ್ಲಿಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕಬ್ಬಿಣದ ಪೆಟ್ಟಿಗೆಯಲ್ಲಿ ನಾವು ಇಟ್ಟಿದ್ದ ನಮ್ಮ ಹಿರಿಯರ ಬಂಗಾರ ನಕಲೆಸ್ ಒಂದು ತೊಲೆ ಅ:ಕಿ: 24,000=00 ರೂ. ಬೆಲೆ ಬಾಳುವುದು ಇರಲಿಲ್ಲ. ದಿನಾಂಕ: 25/01/2020 ರಂದು ರಾತ್ರಿ 10 ಗಂಟೆಯಿಂದ ದಿನಾಂಕ: 26/01/2020 ರ ಬೆಳಗಿನ ಜಾವ 6 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆ ಬೀಗವನ್ನು ಮುರಿದು ಒಳಗಡೆ ಹೋಗಿ ಮನೆಯಲ್ಲಿಟ್ಟಿದ್ದ ಕಬ್ಬಿಣದ ಪೆಟ್ಟಿಗೆ ಬೀಗ ಮುರಿದು ಅದರಲ್ಲಿಟ್ಟ ಬಂಗಾರ ನಕಲೆಸ ಒಂದು ತೊಲೆ ಅ:ಕಿ:24,000=00 ರೂ. ನೇದ್ದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಈ ಬಗ್ಗೆ ಕಾನೂನು ಕ್ರಮ ಜರುಗಿಸಿ, ನಮ್ಮ ಕಳುವಾದ ಬಂಗಾರ ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 07/2020 ಕಲಂ: 457,380 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ 07/2020, ಕಲಂ, 147,447,323,354,504,506 ಸಂಗಡ 149ಐ.ಪಿ.ಸಿ:- ಇಂದು ದಿನಾಂಕ: 28-01-2020 ರಂದು ಸಾಯಂಕಾಲ 06-15 ಗಂಟೆಗೆ ಬಂದಪ್ಪ ಪಿಸಿ-383 ರವರು ನ್ಯಾಯಾಲಯದಿಂದ ಒಂದು ಖಾಸಗಿ ಪಿಯರ್ಾಧಿಯನ್ನು ತಂದು ಹಾಜರುಪಡಿಸಿದ ಸಾರಂಶವೆನೆಂದರೆ ದಿನಾಂಕ 04-01-2020 ರಂದು ಮದ್ಯಾಹ್ನ 3-00 ಗಂಟೆಗೆ ನಾನು ನಮ್ಮ ಹೋಲದಲ್ಲಿ ಮಾದ್ವಾರ ಗ್ರಾಮದ ಸಿಮಾಂತರದಲ್ಲಿ ಬರುವ ಸ,ನಂ 613 ರಲ್ಲಿ ಹತ್ತಿ ಬಿಡಿಸುವಾಗ ನಮ್ಮೂರಿನ 1)ನರಸಪ್ಪ ತಂದೆ ಸಾಬಣ್ಣ 2)ಆಶಮ್ಮ ಗಂಡ ಸಾಬಣ್ಣ 3)ಲಕ್ಷ್ಮೀ ಗಂಡ ನರಸಪ್ಪ 4)ಕೃಷ್ಣಪ್ಪ ತಂದೆ ಸೌರಪ್ಪ ಇವರೆಲ್ಲರೂ ಸೇರಿ ಕೂಡಿಕೊಂಡು ನಮ್ಮ ಹೋಲಕ್ಕೆ ಬಂದು ನಾನು ಹತ್ತಿ ಬಿಡಿಸುವಾಗ ಆರೋಪಿ ನಂ 1 ರವರಾದ ನರಸಪ್ಪ ಇತನು ಬಂದು ಎನಲೇ ಸೂಳೆ ನಿನ್ನ ನೋಡಬಾರದ್ಯಾಕೆ ನಮ್ಮ ಹೋಲದಲ್ಲಿ ಹತ್ತಿ ಬಿಡಿಸುತ್ತಿದ್ಯಾ ಅಂತಾ ಅಂದಿದಲ್ಲದೆ ನಿನ್ನ ಗಂಡ ಎಲ್ಲಿದ್ದಾನೆ ಸೂಳೆ ಮಗಳೆ ಅಂತಾ ಬೈಯುತ್ತಿರುವಾಗ ಆಗ ನಾನು ಆತನಿಗೆ ಯಾಕೆ ಬಯಯುತ್ತಿಯಾ ಅಂತಾ ಕೇಳಿದಾಗ ನಿನೇನು ಚಾಜುಂತಿ ಸೂಳೆ ಮಗಳೆ ಅಂದವನ್ನೆ ಕೈಯಿಂದ ಕಪಾಳೆಕ್ಕೆ ಹೋಡೆದು ಎದೆಗೆ, ಬೆನ್ನಿಗೆ, ಕೈಯಿಂದ ಗುದ್ದಿ ಗುಪ್ತ ಪೆಟ್ಟುಮಾಡಿ ನನ್ನ ಸಿರೇ ಸೇರಗನ್ನು ಜಗ್ಗಿ ಕುಪ್ಪಸ ಹಿಡಿದು ಕೇಳಗೆ ಬಿಳಸಿ ಕಾಲಿನಿಂದ ಸೊಟ್ಟಕ್ಕೆ ಮನಬಂದತ್ತೆ ಒದ್ದನು ಆಗ ಉಳಿದವರು ಆಶಮ್ಮ ಗಂಡ ಸಾಬಣ್ಣ, ಲಕ್ಷ್ಮೀ ಗಂಡ ನರಸಪ್ಪ, ಕೃಷ್ಣಪ್ಪ ತಂದೆ ಸವರಪ್ಪ, ಇವರೇಲ್ಲರು ಸೇರಿ ನನಗೆ ಮನಬಂದತ್ತೆ ಹೋಡೆಯುತ್ತಿರುವಾಗ ನಾನು ಬೀಡಪ್ಪೋ ಅಂತ ಕೂಗಾಡಿದರು ಬೀಡದೆ ಸಿರೇಯ ಸಿರೇಯ ಸೇರಗನ್ನು ಹೀಡಿದು ಎಲ್ಲರು ಎಳೆದಾಡಿ ನನಗೆ ಮಾನಭಂಗ ಮಾಡಲು ಪ್ರಯತ್ನ ಮಾಡಿ ಲೇ ಸೂಳೆ, ರಂಡಿ, ನೀನು ಬಹಾಳ ಭೋಸಡಿ ಇದ್ದಿದಲೇ ನಿಂದು ಊರಲ್ಲಿ ಬಹಳ ಸೋಕ್ಕಾಗಿದೆ ಇವತ್ತು ನನ್ನ ಕೈಯಾಗ ಸಿಕ್ಕಿದಿ ಮಗಳೆ ನಿನ್ನ ಗಂಡ ಇವತ್ತು ಸಿಕ್ಕಿಲ್ಲಾ ಇವತ್ತು ನಿನ್ನ ಗಂಡ ಸಿಕ್ಕರೆ ಅವನನ್ನು ಕೂಡಾ ಬಿಡುವುದಿಲ್ಲಾ ಎಂದು ಬೈಯುತ್ತಾ ಇವತ್ತು ನಿನ್ನ ಜೀವ ಖಲಾಸ ಮಾಡುತ್ತೆನೆ ಅಂತಾ ಜೀವದ ಬೇದರಿಕೆ ಹಾಕುತ್ತಿರುವಾಗ ಜಗಳವನ್ನು ನೋಡಿ ಮುಖಪ್ಪ ತಂದೆ ಸಾಬಣ್ಣ, ಮತ್ತು ಮಲ್ಲಪ್ಪ ತಂದೆ ಬುಗಣ್ಣ ಸೇರಿ ಜಗಳ ಬೀಡಿಸಿಕೊಂಡರು ಇಲ್ಲದಿದ್ದರೆ ನನಗೆ ಇನ್ನು ಹೋಡೆ ಬಡೆ ಮಾಡುತ್ತಿದ್ದನು. ಕಾರಣ ನನಗೆ ಅವಾಚ್ಯವಾಗಿ ಬೈದು ಕೈಯಿಂದ ಹೋಡೆದು ಸೀರೆಯ ಸೇರಗು ಹೀಡಿದು ಎಳದಾಡಿ ಮಾನ ಭಂಗಮಾಡಲು ಪ್ರಯತ್ನಮಾಡಿ ಜೀವದ ಬೇದರಿಕೆ ಹಾಕಿದವರಾದ ನರಸಪ್ಪ ತಂದೆ ಸಾಬಣ್ಣ, ಆಶಮ್ಮ ಗಂಡ ಸಾಬಣ್ಣ, ಲಕ್ಷ್ಮೀ ಗಂಡ ನರಸಪ್ಪ, ಕೃಷ್ಣಪ್ಪ ತಂದೆ ಸವರಪ್ಪ, ಇವರ ಮೇಲೆ ಸೂಕ್ತ ಕಾನುನೂ ಕ್ರಮ ಜರುಗಿಸಿ ಶೀಕ್ಷೆ ಗುರಿಪಡಿಸಿಬೇಕೆಂದು ಸೈದಾಪೂರ ಪೊಲೀಸ್ ಠಾಣೆಯವರಿಗೆ ಮೌಖಿಕವಾಗಿ ದೂರು ಕೋಟ್ಟರೆ ಇಲ್ಲಿಯವರೆಗೆ ಆರೋಪಿತರ ವಿರುದ್ದ ಯಾವುದೇ ಕ್ರಮ ಜರುಗಿಸದೆ ಇದ್ದುದರಿಂದ್ದ ಈ ಖಾಸಗಿ ಪಿಯರ್ಾದಿಯನ್ನು ಮಾನ್ಯ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- ಕಲಂ, 32, 34 ಕೆ.ಇ ಆ್ಯಕ್ಟ್ :- ಇಂದು ದಿನಾಂಕ: 28/01/2020 ರಂದು 07.45 ಪಿಎಮ್ ಕ್ಕೆ ಶ್ರೀ ಸೋಮಲಿಂಗ ಒಡೆಯರ ಪಿಎಸ್.ಐ ಗೋಗಿ ಪೊಲೀಸ ಠಾಣೆ ರವರು ಮಾನ್ಯ ಸಿಪಿಐ ಸಾಹೇಬರು ಶಹಾಪೂರ ರವರ ಮಾರ್ಗದರ್ಶನದಲ್ಲಿ ಅಬಕಾರಿ ದಾಳಿಯಿಂದ ಮರಳಿ ಬಂದು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದು, ಸದರಿ ಜಪ್ತಿ ಪಂಚನಾಮೆ ಸಾರಾಂಶವೆನೆಂದರೆ, ಮಹಲ್ ರೋಜಾ ಯಲ್ಲಮ್ಮನ ಗುಡ್ಡದ ಕ್ರಾಸ್ದ ಸಾರ್ವಜನಿಕ ಸ್ಥಳದಲ್ಲಿ 5-35 ಪಿಎಂ ಕ್ಕೆ ದಾಳಿ ಮಾಡಬೇಕೆನ್ನುವಷ್ಟರಲ್ಲಿ ಆರೋಪಿತನು ಮಧ್ಯವನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದು, ಮಧ್ಯವನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡಿದ್ದು, ಜಪ್ತಿಪಡಿಕೊಂಡ ಮುದ್ದೇಮಾಲು, ಜಪ್ತಿ ಪಂಚನಾಮೆ ಜೋತೆಯಲ್ಲಿ ಠಾಣೆಗೆ ಬಂದು ಒಂದು ವರದಿಯನ್ನು ಕೊಟ್ಟು ಮುಂದಿನ ಕ್ರಮ ಕುರಿತು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ನಂ: 08/2020 ಕಲಂ, 32, 34 ಕೆ.ಇ ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 28/2020 ಕಲಂ 379 ಐ.ಪಿ.ಸಿ. ಮತ್ತು ಕಲಂ. 44(1) ಕೆ,ಎಮ್,ಎಮ್,ಸಿ,ಆರ್.ಆಕ್ಟ 1994:- ಇಂದು ದಿನಾಂಕ:28-01-2020 ರಂದು 6 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ವೆಂಕಟೇಶ, ಆರಕ್ಷಕ ಉಪ ಅಧೀಕ್ಷಕರು, ಸುರಪೂರ ಉಪ-ವಿಭಾಗ ಸಾಹೇಬರು ಮೂರು ಮರಳು ತುಂಬಿದ ಟ್ಯಾಕ್ಟರಗಳೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ನಿಡಿದ್ದು ಸಾರಾಂಶವೆನೆಂದರೆ, ದಿನಾಂಕ:28-01-2020 ರಂದು ಬೆಳಿಗ್ಗೆ 02 ಗಂಟೆ ಸುಮಾರಿಗೆ ನಾನು ಸಿಬ್ಬಂಧಿಯವರಾದ 1) ಶ್ರೀ ಉಮಾಕಾಂತ ಹೆಚ್ಸಿ-192 ಸುರಪುರ ಪೊಲೀಸ್ ಠಾಣೆ 2) ದೇವಿಂದ್ರಪ್ಪ ಸಿಪಿಸಿ-184 ಸುರಪೂರ ಪೊಲೀಸ್ ಠಾಣೆ 3) ಶ್ರೀ ಯಲ್ಲಾಲಿಂಗ್ ಸಿಪಿಸಿ-249 ಭೀಮರಾಯನ ಗುಡಿ ಪೊಲೀಸ್ ಠಾಣೆ, 4) ಶ್ರೀ ರಾಘವೇಂದ್ರ ಸಿಪಿಸಿ-339 ಹಾಗೂ 5) ಜೀಪ ಚಾಲಕನಾದ ಶ್ರೀ ಚಂದಪ್ಪಗೌಡ ಎ.ಪಿ.ಸಿ 143, ರವರೊಂದಿಗೆ ಸುರಪೂರದ ಗಾಂದಿ ಚೌಕ ಹತ್ತಿರ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಮಾಹಿತಿ ತಿಳಿದು ಬಂದಿದ್ದೆನೆಂದರೆ ತಿಂಥಣಿ ಬ್ರಿಡ್ಜ್ ಕಡೆಯಿಂದ ಯಾರೋ ತಮ್ಮ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂಧಿಯಾದ ಶ್ರೀ ಉಮಾಕಾಂತ ಹೆಚ್ಸಿ ಈತನಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಉಮಾಕಾಂತ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದ್ರಿ ವ|| 56 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ ಸಾ|| ದೇವಾಪೂರ 2) ಕೃಷ್ಣಪ್ಪ ತಂದೆ ಅಯ್ಯಪ್ಪ ಡೊಳ್ಳ ವ|| 55 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ವೆಂಕಟಾಪೂರ ಇವರನ್ನು ಬೆಳಿಗ್ಗೆ 02:30 ಗಂಟೆಗೆ ಪಂಚರನ್ನಾಗಿ ಗಾಂದಿ ಚೌಕ ಹತ್ತಿರ ಬರಮಾಡಿಕೊಂಡು ಬಂದಿದ್ದು, ಸದರಿ ಪಂಚರು ಮತ್ತು ಸಿಬ್ಬಂಧಿಯವರಿಗೆ ವಿಷಯ ತಿಳಿಸಿ ಇಬ್ಬರು ಪಂಚರಿಗೆ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಎಲ್ಲಾ ಸಿಬ್ಬಂಧಿಯವರು ನಮ್ಮ ಸಕರ್ಾರಿ ಜೀಪ ನಂಬರ ಕೆಎ-33 ಜಿ-0253 ನೇದ್ದರಲ್ಲಿ ಕುಳಿತುಕೊಂಡು ಗಾಂಧಿಚೌಕದಿಂದ ಬೆಳಿಗ್ಗೆ 02:45 ಗಂಟೆ ಸುಮಾರಿಗೆ ಹೊರಟು ಬೆಳಿಗ್ಗೆ 03:45 ಗಂಟೆ ಸುಮಾರಿಗೆ ಬಂಡೊಳ್ಳಿ ಕ್ರಾಸ ಹತ್ತಿರ ತಿಂಥಣಿ ಬ್ರಿಜ್ಕಡೆಗೆ ಹೋಗುತ್ತಿರುವಾಗ ತಿಂಥಣಿ ಬ್ರಿಡ್ಜ್ ಕಡೆಯಿಂದ ಮೂರು ಟ್ಯಾಕ್ಟರಗಳ ಚಾಲಕರು ತಮ್ಮ ಟ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ಬಂಡೊಳ್ಳಿ ಕ್ರಾಸ ಹತ್ತಿರ ನಾವು ನಮ್ಮ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸಿಬ್ಬಂಧಿಯವರ ಸಹಾಯದಿಂದ ಸದರಿ ಟ್ಯಾಕ್ಟರಗಳ ಚಾಲಕರಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಮೂರು ಟ್ಯಾಕ್ಟರ ಚಾಲಕರು ನಮ್ಮ ಪೊಲೀಸ್ ಜೀಪನ್ನು ನೋಡಿ ತಮ್ಮ ಮೂರು ಟ್ಯಾಕ್ಟರಗಳನ್ನು ನಮ್ಮಿಂದ ಸ್ವಲ್ಪ ಅಂತರದ ರೋಡಿನ ಸೈಡಿನಲ್ಲಿ ನಿಲ್ಲಿಸಿ ಕೆಳಗೆ ಇಳಿದು ರಸ್ತೆಯ ಪಕ್ಕದಲ್ಲಿ ಓಡಿ ಹೋದರು. ನಂತರ ನಾನು ಪಂಚರ ಸಮಕ್ಷಮ ಸದರಿ ಟ್ಯಾಕ್ಟರಗಳ ಹತ್ತಿರ ಹೋಗಿ ಪರೀಶಿಲಿಸಿ ನೋಡಲು ಅವು ಈ ಕೆಳಗಿನಂತಿರುತ್ತವೆ. 1) ಒಂದು ಸ್ವರಾಜ್ಯ ಕಂಪನಿ ಟ್ಯಾಕ್ಟರ ನಂಬರ ಕೆಎ-36 ಟಿಬಿ-8992 ಇದ್ದು ಅದರಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆ. 2) ಒಂದು ಮಹಿಂದ್ರ ಕಂಪನಿಯ ಕೆಂಪು ಬಣ್ಣದ ಟ್ಯಾಕ್ಟರ ನಂಬರ: ಕೆಎ-36 ಟಿಸಿ-7698 ಇದ್ದು ಅದರಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆ. 3) ಒಂದು ಸ್ವರಾಜ್ಯ ಕಂಪನಿಯ ಟ್ಯಾಕ್ಟರ ನಂಬರ ಕೆಎ-36 ಟಿಬಿ-3083 ಇದ್ದು ಅದರಲ್ಲಿ 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆೆ. ಹೀಗೆ ಒಟ್ಟು ಮೂರು ಟ್ಯಾಕ್ಟರದಲ್ಲಿಯ ಒಟ್ಟು 06 ಘನ ಮೀಟರ ಮರಳು ಇದ್ದು ಅದರ ಅ.ಕಿ 4800/- ರೂಗಳು ಆಗುತ್ತದೆ. ಸದರಿ ಮರಳು ತುಂಬಿದ ಮೂರು ಟ್ಯಾಕ್ಟರಗಳನ್ನು ಪಂಚರ ಸಮಕ್ಷಮ ಬೆಳಿಗ್ಗೆ 04 ಗಂಟೆಯಿಂದ ಬೆಳಿಗ್ಗೆ 05 ಗಂಟೆಯವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆ ಬರೆದುಕೊಂಡು ಟ್ಯಾಕ್ಟರಗಳನ್ನು ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಮೂರು ಟ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 4,800/- ರೂ.ಗಳ ಕಿಮ್ಮತ್ತಿನ ಅಂದಾಜು 06 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಮೂರು ಮರಳು ತುಂಬಿದ ಟ್ಯಾಕ್ಟರಗಳನ್ನು ಖಾಸಗಿ ಚಾಲಕರ ಸಹಾಯದಿಂದ ಠಾಣೆಗೆ ಬೆಳಿಗ್ಗೆ 06 ಗಂಟೆಗೆ ತಂದು ಒಪ್ಪಿಸಿ ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 29/2020 ಕಲಂ 379 ಐ.ಪಿ.ಸಿ. ಮತ್ತು ಕಲಂ. 44(1) ಕೆ,ಎಮ್,ಎಮ್,ಸಿ,ಆರ್.ಆಕ್ಟ 1994:- ಇಂದು ದಿನಾಂಕ:28-01-2020 ರಂದು 02:30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಚೇತನ್ ಪಿ.ಎಸ್.ಐ (ಕಾ&ಸೂ)ಸುರಪೂರ ಪೊಲೀಸ್ ಠಾಣೆ ರವರು ಒಂದು ಮರಳು ತುಂಬಿದ ಟ್ಯಾಕ್ಟರನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ನಿಡಿದ್ದು ಸಾರಾಂಶವೆನೆಂದರೆ, ದಿನಾಂಕ:28-01-2020 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಯಾರೋ ಒಬ್ಬ ವ್ಯಕ್ತಿಯು ತಮ್ಮ ಟ್ಯಾಕ್ಟರದಲ್ಲಿ ಹೇಮನೂರ ಸೀಮಾಂತರದ ಕೃಷ್ಣಾ ನಧಿ ಪಾತ್ರದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ಲಕ್ಷ್ಮಿಪೂರ ಕ್ರಾಸ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಠಾಣೆಯಲ್ಲಿದ್ದ ಸಿಬ್ಬಂಧಿಯವರಾದ ಶ್ರೀ ಸೋಮಯ್ಯ ಸಿಪಿಸಿ-235, ಬಸಪ್ಪ ಸಿಪಿಸಿ-393 ಇವರಿಗೆ ವಿಷಯ ತಿಳಿಸಿ ಸೋಮಯ್ಯ ಸಿಪಿಸಿ ರವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಸೋಮಯ್ಯಾ ಸಿಪಿಸಿ ರವರು ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದ್ರಿ ವ|| 56 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ ಸಾ|| ದೇವಾಪೂರ 2) ಕೃಷ್ಣಪ್ಪ ತಂದೆ ಅಯ್ಯಪ್ಪ ಡೊಳ್ಳ ವ|| 55 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ವೆಂಕಟಾಪೂರ ಇವರನ್ನು ಬೆಳಿಗ್ಗೆ 11:45 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿ ಪಂಚರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಸಿಬ್ಬಂಧಿಯವರು ಕೂಡಿಕೊಂಡು ನಮ್ಮ ಸಕರ್ಾರಿ ಜೀಪ ನಂಬರ ಕೆಎ-33 ಜಿ-0094 ನೇದ್ದರಲ್ಲಿ ಕುಳಿತುಕೊಂಡು ಮಧ್ಯಾಹ್ನ 12 ಗಂಟೆ ಸುಮಾರಿಗೆ ಠಾಣೆಯಿಂದ ಹೊರಟು ಮಧ್ಯಾಹ್ನ 12:30 ಗಂಟೆ ಸುಮಾರಿಗೆ ಲಕ್ಷ್ಮಿಪೂರ ಕ್ರಾಸ ಹತ್ತಿರ ಹೋಗಿ ಜೀಪ ನಿಲ್ಲಿಸಿ ನಿಂತುಕೊಂಡಿದ್ದು ಅಂದಾಜು ಮಧ್ಯಾಹ್ನ 12:45 ಗಂಟೆ ಸುಮಾರಿಗೆ ಲಕ್ಷ್ಮಿಪೂರ ಗ್ರಾಮದ ಕಡೆಯಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ನಾನು ಸಿಬ್ಬಂಧಿಯವರ ಸಹಾಯದಿಂದ ಟ್ಯಾಕ್ಟರ ಚಾಲಕನಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಟ್ಯಾಕ್ಟರ ಚಾಲಕನು ಟ್ಯಾಕ್ಟರನ್ನು ಸೈಡಿಗೆ ನಿಲ್ಲಿಸಿದ್ದು, ಟ್ಯಾಕ್ಟರ ಚಾಲಕನಿಗೆ ವಿಚಾರಿಸಲು ಅವನು ತನ್ನ ಹೆಸರು ಹಣಮಂತ ತಂದೆ ಮಲ್ಲಪ್ಪ ಗಣಪೂರ ವಯಾ:28 ವರ್ಷ ಉ:ಟ್ಯಾಕ್ಟರ ಚಾಲಕ ಜಾತಿ:ಕಬ್ಬಲಿಗ ಸಾ: ರತ್ತಾಳ ಅಂತಾ ತಿಳಿಸಿ ಸದರಿವನು ಸುಮಾರು 8 ದಿವಸಗಳ ಹಿಂದೆ ಬಸವರಾಜ ನಗನೂರ ಈತನಿಂಗ ಖರಿದಿ ಮಾಡಿದ್ದು ಇನ್ನು ಹೆಸರು ವಗರ್ಾವಣೆಯಾಗಿರುವದಿಲ್ಲ ಅಂತಾ ತಿಳಿಸಿದಾಗ ನಾವು ಸದರಿ ಮರಳು ತುಂಬಿದ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರ ಮಾಡಲು ಅವನು ನನ್ನ ಹತ್ತಿರ ಯಾವುದೆ ದಾಖಲಾತಿಗಳು ಇರುವದಿಲ್ಲ ತಿಳಿಸಿ ಅಲ್ಲಿಂದ ಒಡಿಹೋದನು. ನಾವು ಸದರಿ ಟ್ಯಾಕ್ಟರನ್ನು ಪಂಚರ ಸಮಕ್ಷಮ ಪರೀಶಿಲಿಸಿ ನೋಡಲು ಒಂದು ಸ್ವರಾಜ್ಯ ಕಂಪನಿ ಟ್ಯಾಕ್ಟರ ಇದ್ದು ಅದರ ಇಂಜಿನ ನಂಬರ 39.1354/ಆಇ003189ಂ ಹಾಗೂ ಚೆಸ್ಸಿ ನಂಬರ: ಘಘಿಖಿಇ31419041548 ಇದ್ದು ಅದರ ಟ್ರಾಲಿಗೆ ನಂಬರ ಇರುವದಿಲ್ಲ. ಸದರಿ ಟ್ಯಾಕ್ಟರದಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆ. ಸದರಿ ಮರಳು ತುಂಬಿದ ಟ್ಯಾಕ್ಟರನ್ನು ಪಂಚರ ಸಮಕ್ಷಮ ಮಧ್ಯಾಹ್ನ 01 ಗಂಟೆಯಿಂದ ಮದ್ಯಾಹ್ನ 02 ಗಂಟೆಯವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ಟ್ಯಾಕ್ಟರನ್ನು ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಟ್ಯಾಕ್ಟರ ಚಾಲಕನು ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 1600/- ರೂ.ಗಳ ಕಿಮ್ಮತ್ತಿನ ಅಂದಾಜು 02 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಮರಳು ತುಂಬಿದ ಟ್ಯಾಕ್ಟರನ್ನು ಖಾಸಗಿ ಚಾಲಕರ ಸಹಾಯದಿಂದ ಠಾಣೆಗೆ ಮದ್ಯಾಹ್ನ 02:30 ಗಂಟೆಗೆ ತಂದು ಒಪ್ಪಿಸಿ ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 30/2020 ಕಲಂ 87 ಕೆ.ಪಿ.ಕಾಯ್ದೆ:- ಇಂದು ದಿನಾಂಕ: 28/01/2020ರಂದು05-30 ಪಿ.ಎಮ್. ಕ್ಕೆ ಶ್ರೀ ಚೇತನ್ ಪಿ.ಎಸ್.ಐ (ಕಾ&ಸೂ) ಸುರಪೂರ ಪೊಲೀಸ್ಠಾಣೆರವರು 5ಜನಆರೋಪಿತರೊಂದಿಗೆಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ಠಾಣೆಗೆ ಬಂದುವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:28-01-2020ರಂದು03-45ಪಿ.ಎಂ. ಸುಮಾರಿಗೆ ಸುರಪೂರಪೊಲೀಸ್ ಠಾಣಾ ವ್ಯಾಪ್ತಿಂ ುಹೇಮ ನೂರಗ್ರಾಮದಶ್ರೀ ಬಸವಣ್ಣದೇವರಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಮೇಲೆ ಹೇಳಿದ ಆರೋಪಿತರು ದುಂಡಾಗಿಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವಾಗ ದಾಳಿ ಮಾಡಿ 5ಜನ ಆರೋಪಿತರೊಂದಿಗೆಠಾಣೆಗೆ ಬಂದು ವರದಿ ನಿಡಿದ್ದರ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ
Hello There!If you like this article Share with your friend using