ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 27-01-2020

By blogger on ಮಂಗಳವಾರ, ಜನವರಿ 28, 2020

                      
                              ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 27-01-2020 

 ಹುಣಸಗಿ ಠಾಣೆ ಗುನ್ನೆ ನಂ:-. 11/2020 ಕಲಂ. 279, 304(ಎ) ಐಪಿಸಿ & 187 ಐಎಂವಿ ಕಾಯ್ದೆ:- ಇಂದು ದಿನಾಂಕ:27/01/2020 ರಂದು ಬೆಳಿಗ್ಗೆ 09.00 ಗಂಟೆಗೆ ಪಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಟೈಪ್ ಮಾಡಿಸಿದ ದೂರು ಕೊಟ್ಟಿದ್ದೇನೆಂದರೆ, ದಿನಾಂಕ:26/01/2020 ರಂದು ತನ್ನ ಮಗನಾದ ಅಂಬ್ರೇಶ ಈತನು ತನ್ನ ಮೋಟರ ಸೈಕಲ್ಲ ನಂ:ಕೆಎ-33 ವ್ಹಿ-4160 ನೇದ್ದರ ಮೇಲೆ ತಮ್ಮೂರಿನಿಂದ ರಾತ್ರಿ ವೇಳೆಯಲ್ಲಿ ಹೆಬ್ಬಾಳ(ಬಿ) ಗ್ರಾಮಕ್ಕೆ ಬರುವಾಗ ಹೆಬ್ಬಾಳ(ಬಿ) ಬಸನಿಲ್ದಾಣ ದಾಟಿ ಹೊರಟಾಗ ಯಾವುದೋ ಒಂದು ವಾಹನದ ಚಾಲಕನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೃತನು ಚಲಾಯಿಸುವ ಮೋಟರ ಸೈಕಲ್ಲಗೆ ಜೋರಾಗಿ ಡಿಕ್ಕಿ ಕೊಟ್ಟದ್ದರಿಂದ ಮೃತನಿಗೆ ಬಲಗಾಲ ಮುರಿದು ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಪಘಾತಪಡಿಸಿದ ವಾಹನ ಚಾಲಕನು ವಾಹನವನ್ನು ನಿಲ್ಲಿಸದೆ ವಾಹನದೊಂದಿಗೆ ಓಡಿ ಹೋದ ಬಗ್ಗೆ ಟೈಪ್ ಮಾಡಿಸಿದ ಅಜರ್ಿ ದೂರಿನ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ.   
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ: 06/2020 ಕಲಂ: ಹೆಣ್ಣುಮಗಳು ಕಾಣೆಯಾದ ಬಗ್ಗೆ:- :- ಇಂದು ದಿನಾಂಕ: 27/01/2020 ರಂದು 1-30 ಪಿಎಮ್ ಕ್ಕೆ ಶ್ರೀ ಕಾಸಿಂಸಾಬ ತಂದೆ ಅಮೀನಸಾಬ ನದಾಫ, ವ:60, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಕರಿಗುಡ್ಡ ತಾ:ದೇವದುರ್ಗ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನಗೆ 8 ಜನ ಹೆಣ್ಣು ಮಕ್ಕಳು ಮತ್ತು 1 ಗಂಡು ಮಗ ಹೀಗೆ ಒಟ್ಟು 9 ಜನ ಮಕ್ಕಳಿರುತ್ತಾರೆ. 6 ಜನ ಹೆಣ್ಣು ಮಕ್ಕಳಿಗೆ ಲಗ್ನ ಮಾಡಿದ್ದು, ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನದು ಮದುವೆ ಮಾಡುವುದು ಉಳಿದಿರುತ್ತದೆ. ಹೀಗಿದ್ದು ನನ್ನ 6 ನೇ ಮಗಳಾದ ಫಾತಿಮಾ ವ:25 ವರ್ಷ ಇವಳಿಗೆ ಈಗ ಸುಮಾರು 5 ವರ್ಷಗಳ ಹಿಂದೆ ಶಹಾಪೂರ ತಾಲೂಕಿನ ಟಿ. ವಡಗೇರಾ ಗ್ರಾಮದ ಗೂಡುಸಾಬ ತಂದೆ ಹುಸೇನಸಾಬ ನದಾಫ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಅವರಿಗೆ ಹಾಲಿ 1) ಸೈನಾಜ ವ:03 ವರ್ಷ ಮತ್ತು 2) ಹಸೇನಸಾಬ ವ:01 ವರ್ಷ ಹೀಗೆ ಎರಡು ಜನ ಮಕ್ಕಳಿರುತ್ತಾರೆ ನನ್ನ ಮಗಳು ಈಗ 5 ತಿಂಗಳ ಗಭರ್ೀಣಿ ಇರುತ್ತಾಳೆ. ನನ್ನ ಮಗಳು-ಅಳಿಯ ಮತ್ತು ಅತ್ತೆ-ಮಾವ ಹಾಗೂ ಅವರ ಕುಟುಂಬದವರು ಎಲ್ಲರೂ ತಮ್ಮ ಹೊಲದಲ್ಲಿ ಪತ್ರಾಸ ಮನೆ ಮಾಡಿಕೊಂಡು ಅಲ್ಲಿಯೇ ವಾಸವಾಗಿರುತ್ತಾರೆ. ಗಂಡ-ಹೆಂಡತಿ ಇಬ್ಬರೂ ಅನ್ಯೋನ್ಯವಾಗಿದ್ದರು. ಆದರೆ ಅವಳ ಅತ್ತೆ ಚಾಂದಬೀ ಮತ್ತು ಮಾವ ಹುಸೇನಸಾಬ ಇವರು ಆಗಾಗ ನನ್ನ ಮಗಳಿಗೆ ಸರಿಯಾಗಿ ನೋಡಿಕೊಳ್ಳದೆ ತ್ರಾಸ ಕೊಡುತ್ತಿರುತ್ತಾರೆ ಅಂತಾ ನನ್ನ ಮಗಳ ನಮ್ಮ ಹತ್ತಿರ ಬಂದಾಗ ಹೇಳುತ್ತಿದ್ದಳು. ಆಗ ನಾವು ಇರಲಿ ಸಂಭಾಳಿಸಿಕೊಂಡು ಜೀವನ ಮಾಡಿಕೊಂಡು ಹೋಗಬೇಕೆಂದು ಸಮಾಧಾನ ಮಾಡಿ ಕಳುಹಿಸುತ್ತಿದ್ದೆವು. ಹೀಗಿದ್ದು ದಿನಾಂಕ: 25/01/2020 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ನನ್ನ ಅಳಿಯನಾದ ಗೂಡುಸಾಬನು ನನಗೆ ಫೋನ ಮಾಡಿ ನಿನ್ನ ಮಗಳು ಫಾತಿಮಾ ನಮ್ಮ ತಂದೆ-ತಾಯಿಯೊಂದಿಗೆ ಜಗಳ ಮಾಡಿ ಮುನಿಸಿಕೊಂಡಿರುತ್ತಾಳೆ. ನೀನು ಬಂದು ಕರೆದುಕೊಂಡು ಹೋಗು ಎಂದು ಹೇಳಿದನು. ಆಗ ನಾನು ಕರೆದುಕೊಂಡು ಬಂದರಾಯಿತು ಎಂದು ನಮ್ಮೂರಿನಿಂದ ದೇವದುರ್ಗಕ್ಕೆ ಬಂದೆನು. ಅಷ್ಟರಲ್ಲಿ ನನ್ನ ಅಳಿಯ ಗೂಡುಸಾಬ ಪುನಃ 10 ಎಎಮ್ ಸುಮಾರಿಗೆ ನನಗೆ ಫೋನ ಮಾಡಿ ನಿನ್ನ ಮಗಳು ಬಯಲು ಕಡೆ ಸಂಡಾಸಕ್ಕೆ ಹೋಗುವುದಾಗಿ ಹೇಳಿ ಹೋದವಳು ಮರಳಿ ಬಂದಿರುವುದಿಲ್ಲ ಅಲ್ಲೆ ಎಲ್ಲಾದರೂ ಊರ ಕಡೆ ಬಂದಾಳೆನ ನೋಡು ಅಂತಾ ಹೇಳಿದ. ಆಗ ನಾನು ಮರಳಿ ನಮ್ಮೂರಿಗೆ ಬಂದು ಮನೆಯಲ್ಲಿ ಹೇಳಿ ನಾನು ಮತ್ತು ನನ್ನ ಅಳಿಯನಾದ ಮಹ್ಮದ ಅಲಿಸಾಬ ಸಾ:ಗಾಣದಾಳ ಮತ್ತು ಇತರರು ಸೇರಿ ಟಿ. ವಡಗೇರಾ, ಹತ್ತಿಗೂಡು, ನಂದ್ಯಾಳ ಮುಂತಾದ ಕಡೆ ಹುಡುಕಾಡಿದೆವು. ಎಲ್ಲಿಯೂ ನನ್ನ ಮಗಳು ಸಿಕ್ಕಿರುವುದಿಲ್ಲ. ಕಾಣೆಯಾದ ನನ್ನ ಮಗಳ ಚಹರೆ ಪಟ್ಟಿ ಈ ಕೇಳಗಿನಂತಿರುತ್ತದೆ. ಎತ್ತರ 5'-1, ಸಾಧಾರಣ ಮೈಕಟ್ಟು, ಸಾದಾಗಪ್ಪು ಬಣ್ಣ, ದುಂಡು ಮುಖ, ಉದ್ದನೆ ಮೂಗು ಇರುತ್ತದೆ. ಕನ್ನಡ ಭಾಷೆ ಮಾತನಾಡುತ್ತಾಳೆ. ಮೈಮೇಲೆ ಅರಸಿನ ಬಣ್ಣದ ಸೀರೆ ಮತ್ತು ಕುಪ್ಪಸ ಧರಿಸಿರುತ್ತಾಳೆ. ಕಾರಣ ನನ್ನ ಮಗಳಾದ ಫಾತಿಮಾ ವ:25 ವರ್ಷ ಇವಳು ಸಂಡಾಸಕ್ಕೆ ಹೋಗುವುದಾಗಿ ಹೇಳಿ ಹೋದವಳು ಮನೆಗೆ ಬರದೆ ಕಾಣೆಯಾಗಿರುತ್ತಾಳೆ. ಸದರಿಯವಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಅಜರ್ಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 06/2020 ಕಲಂ: ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.  
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 27/2020 ಕಲಂ: 78 () ಕೆ.ಪಿ. ಕಾಯ್ದೆ  :- ಇಂದು ದಿನಾಂಕ: 27/01/2020 ರಂದು 5;30 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಚೇತನ್ ಪಿ.ಎಸ್.ಐ(ಎಲ್&ಒ) ಸಾಹೇಬರು ಒಬ್ಬ ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಹಾಗು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:27/01/2020 ರಂದು 3 ಪಿ.ಎಮ್. ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪಟ್ಟಣದ ಶ್ರೀ ವೆಂಕಟಪ್ಪ ನಾಯಕ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿದ್ದ ಠಾಣೆಯ ಸಿಬ್ಬಂದಿಯವರಾದ 1) ಶ್ರೀ ಪರಮೇಶ ಸಿಪಿಸಿ-142, 3) ಶ್ರೀ ಸೋಮಯ್ಯ ಸಿಪಿಸಿ-235, 3) ಶ್ರೀ ಬಸಪ್ಪ ಸಿಪಿಸಿ-393 ಇವರಿಗೆ ವಿಷಯ ತಿಳಿಸಿ ಸೋಮಯ್ಯಾ ಸಿಪಿಸಿ ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸೋಮಯ್ಯಾ ಸಿಪಿಸಿ ರವರು ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದ್ರಿ ವ|| 56 ವರ್ಷ ಜಾ|| ಮುಸ್ಲಿಂ ಉ|| ಡ್ರೈವರ ಸಾ|| ದೇವಾಪೂರ 2) ಕೃಷ್ಣಪ್ಪ ತಂದೆ ಅಯ್ಯಪ್ಪ ಡೊಳ್ಳ ವ|| 55 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ವೆಂಕಟಾಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಅವರಿಗೆ ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 03:15 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0094 ನೇದ್ದರಲ್ಲಿ ಹೊರಟು 03:50 ಪಿ.ಎಮ್ ಕ್ಕೆ ವೆಂಕಟಪ್ಪ ಸರ್ಕಲ್ ಹತ್ತಿರ ಹೋಗಿ ವಾಹನ ಮರೆಯಾಗಿ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 4 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸಚಿನ್ ತಂದೆ ಯಲ್ಲಪ್ಪ ಹುಲಿಕಲ್ ವಯಾ:30 ವರ್ಷ ಉ:ಡ್ರೈವರ ಜಾತಿ:ಮಾದಿಗ ಸಾ:ಕೃಷ್ಣಾಪೂರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ  ನಗದು ಹಣ 1210=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 4 ಪಿ.ಎಮ್ ದಿಂದ 5 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ. ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂಬರ 28/2020ಕಲಂ 78[3] ಕೆ.ಪಿ ಆಕ್ಟ:- ಇಂದು ದಿನಾಂಕ 27/01/2020 ರಂದು ಸಾಯಂಕಾಲ 18-00  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಹನುಮರೆಡ್ಡೆಪ್ಪ ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ಒಬ್ಬ ವ್ಯಕ್ತಿಯನ್ನು ಹಾಜರ ಪಡಿಸಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 27/01/2020 ರಂದು ಮದ್ಯಾಹ್ನ 14-00 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹೈಯ್ಯಾಳ(ಬಿ) ಗ್ರಾಮದ ಹೈಯ್ಯಾಳಲಿಂಗೇಶ್ವರ ದೇವಸ್ಥಾನದ ಹತ್ತಿರ  ಒಬ್ಬ ವ್ಯಕ್ತಿ  ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾಧಿಯವರು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಕೂಡಿ ಠಾಣೆಯ ಸರಕಾರಿ ಜೀಪ್ ನಂಬರ ಕೆಎ-33-ಜಿ-138 ನೇದ್ದರಲ್ಲಿ ದಾಳಿ ಕುರಿತು  ನೇರವಾಗಿ ಹೈಯ್ಯಾಳ(ಬಿ) ಗ್ರಾಮಕ್ಕೆ ಮದ್ಯಾಹ್ನ 15-30 ಗಂಟೆಗೆ  ಹೋಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿಯ ಮೇಲೆ ಪಂಚರ ಸಮಕ್ಷಮದಲ್ಲಿ  15-35 ಗಂಟೆಗೆ ದಾಳಿ ಮಾಡಿದಾಗ ಸದರಿ ವ್ಯಕ್ತಿ ಸಿಕ್ಕಿದ್ದು, ಹೆಸರು ವಿಳಾಸ ವಿಚಾರಿಸಲಾಗಿ ಭೀಮರಾಯ ತಂದೆ ಮುದಲಿಂಗಪ್ಪ ಹಿರಿಕಲ್ಮನಿ ವಯ 34 ವರ್ಷ ಜಾತಿ ಕುರುಬ ಉಃ ಮಟಕಾ ಅಂಕಿ ಬರೆದುಕೊಳ್ಳುವದು ಸಾಃ ಹೈಯ್ಯಾಳ(ಬಿ) ತಾಃ ಶಹಾಪೂರ ಜಿಃ ಯಾದಗಿರಿ  ಅಂತ ಹೇಳಿದ್ದು ಸದರಿಯವನ ಅಂಗಶೋಧನೆ ಮಾಡಿದಾಗ ನಗದು ಹಣ 550=00 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳು ಮದ್ಯಾಹ್ನ 15-40 ಗಂಟೆಯಿಂದ ಸಾಯಂಕಾಲ 16-40 ಗಂಟೆಯ ಅವಧಿಯಲ್ಲ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ದ ವರದಿ ಸಲ್ಲಿಸಿದ್ದು, ಸದರಿ ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ 12/2020 ಕಲಂ 78(3)  ಕೆ.ಪಿ ಆಕ್ಟ ಅಡಿಯಲ್ಲಿ ನೋಂದಣಿ ಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಾಲ 18-30 ಗಂಟೆಗೆ  ಠಾಣೆ ಗುನ್ನೆ ನಂಬರ 28/2020ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರಮಠಕಲ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ: 16/2020 ಕಲಂ 379 ಐಪಿಸಿ ಮತ್ತು ಕಲಂ 21(3), 21(4), 22 ಎಂ.ಎಂ.ಆರ್.ಡಿ ಆಕ್ಟ್ 1957:-  ಇಂದು ದಿನಾಂಕ 27.01.2020 ರಂದು ಸಾಯಂಕಾಲ 6.45 ಗಂಟೆಗೆ ಪಿರ್ಯಾಧಿಯು ಒಂದು ಜೆ.ಸಿ.ಬ ವಾಹನ ಒಬ್ಬ ಆರೋಪಿ ಹಾಗೂ ಮೂಲ ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದೆನೆಂದರೆ ಗುರುಮಠಕಲ ತಾಲ್ಲೂಕಿನ ಕೊಂಕಲ ಗ್ರಾಮದಲ್ಲಿ ಜಮೀನು ಸವರ್ೆ ನಂ. 837/*/* ನೆದ್ದರಲ್ಲಿನ ನೈಸಗರ್ಿಕ 120ಘನ ಮೀಟರ ಮರಳನ್ನು ಜೆ.ಸಿ.ಬಿ ಯಂತ್ರದ ಸಾಯದಿಂದ ಅಕ್ರಮವಾಗಿ ಕಳ್ಳತನದಿಂದ ಮಾರಾಟ ಮಾಡಿ ಸಕರ್ಾರಕ್ಕೆ ಅಂದಾಜು 1,62,000/-ರೂ ಗಳಷ್ಟು ಲುಕ್ಸಾನ ಮಾಡಿರುತ್ತಾರೆ ಕಾರಣ ನೈಸಗರ್ಿಕ ಮರಳನ್ನು ಕಳ್ಳತನ ಮಾರಾಟ ಮಾಡಿದವರ ಮೇಲೆ ಕಾನೂನು ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲೆ ಠಾಣೆ ಗುನ್ನೆ ನಂ. 16/2020 ಕಲಂ 379 ಐಪಿಸಿ ಮತ್ತು ಕಲಂ 21(3), 21(4), 22 ಎಂ.ಎಂ.ಆರ್.ಡಿ ಆಕ್ಟ್ 1957 ಅಡಿಯಲ್ಲಿ ಪ್ರಕರಣ ದಾಖಸಲಾಗಿದೆ.
ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ:- 03/2020 ಕಲಂ: 498(ಎ), 323, 324 504, 506, ಐ.ಪಿ.ಸಿ:- :-        ಇಂದು ದಿನಾಂಕ 27/01/2020 ರಂದು 7-15 ಪಿ.ಎಂಕ್ಕೆ ಶ್ರೀ ಮತಿ  ಮಹಾಲಕ್ಷ್ಮೀ ಗಂಡ ಮಲ್ಲಿಕಾಜರ್ುನ ಒಡೆಯರ ಉ- ಅಂಗನವಾಡಿಯಲ್ಲಿ ಅಡುಗೆ ಸಹಾಯಕಿ ವ-27 ಜಾ- ಹೊಲೆಯ ಸಾ-ಅಂಬೇಡ್ಕರ ನಗರ ಯಾದಗಿರಿ ಇವರು ಹಾಜರಾಗಿ ಹೇಳಿಕೆ ಪಿಯರ್ಾದಿ ಸಾರಂಶವೆನಂದರೆ         ನಾನು ಅಂಗನವಾಡಿಯಲ್ಲಿ ಅಡುಗೆ ಸಹಾಯಕಿ ಅಂತಾ 8 ವರ್ಷಗಳಿಂದ ಕೆಲಸ ಮಾಡಿಕೊಂಡು ಗಂಡ ಮಕ್ಕಳೊಂದಿಗೆ ಉಪಜೀವಿಸುತ್ತೇನೆ. ನನಗೆ 15 ವರ್ಷಗಳ ಹಿಂದೆ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದು ಇರುತ್ತದೆ. ನನ್ನ ವೈವಾಹಿಕ ಜೀವನದಲ್ಲಿ ಅಜೇಯಕುಮಾರ ವ-14, ಸ್ನೇಹಾ ವ-13, ನಿವೇದಿತಾ ವ-11 , ಶ್ರೀದೇವಿ ವ-7 ದ ಮಕ್ಕಳಿರುತ್ತಾರೆ .ನಾನು ದಿನಾಲು ಅಂಗನವಾಡಿಗೆ ಬೆಳಗ್ಗೆ 9-30 ಎ.ಎಂಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಸಾಯಂಕಾಲ 4 ಪಿ.ಎಂಕ್ಕೆ ಮರಳಿ ಮನೆಗೆ ಬರುತ್ತೇನೆ. 
        ಹೀಗಿದ್ದು ನನ್ನ ಗಂಡ ಮಲ್ಲಿಕಾಜರ್ುನ ಆಗಾಗ ಇತನು ಕುಡಿದು ಬಂದು ನನ್ನಗೆ  ಕುಡಿಯಲಕ್ಕೆ ಹಣ ಕೂಡು ಇಲ್ಲ ಅಂದರೆ ನಿನಗೆ ಸುಮ್ಮನೆ ಬಿಡುವುದಿಲ್ಲ ಅಂತಾ ಜಗಳ ತಗೆದು ರಂಡಿ ಬೋಸಡಿ ನೀನು ಅವನ ಜೋತೆ ಇದ್ದಿ ಇವನ ಜೋತೆ ಇದ್ದಿ ಅಂತಾ ಇಲ್ಲ ಸಲ್ಲದ ಆರೋಪ ಮಾಡವುದು ಮಾಡುತ್ತಿದ್ದನು ನಾನು ನನ್ನ ತವರು ಮನೆಗೆ ಹೋದಾಗ ಈ ವಿಷಯವನ್ನು ನನ್ನ ತಂದೆ ಹಾಗು ತಾಯಿ ಮತ್ತು ನನ್ನ ತಮ್ಮಂದಿರಿಗೆ ನಾನು ತಿಳಿಸಿದಾಗ ಅವರು ನನ್ನ ಮನೆಗೆ ಬಂದು ನನ್ನ ಗಂಡನಿಗೆ ಬುದ್ದಿವಾದ ಹೇಳಿ ಹೆಂಡತಿ ಜೋತೆ ಚನ್ನಾಗಿ ನೋಡಿಕೊಂಡು ಹೋಗಲು ತಿಳುವಳಿಕೆ ನೀಡಿ ಹೋಗಿದ್ದರು. ಆದರೂ ಸಹ ಮತ್ತೆ ನನ್ನ ಗಂಡನು ಕುಡಿದು ಬಂದು ನನಗೆ ಹೊಡೆಬಡೆ ಮಾಡುವುದು ಮಾಡುತ್ತಿದ್ದನು. ಈ ವಿಷಯವನ್ನು  ನನ್ನ ಮನೆಯವರಿಗೆ ತಿಳಿಸಿದಾಗ ನನ್ನ ತಾಯಿ ತಂದೆ ಬಂದು ನನಗೆ ನಿನ್ನ ಗಂಡ ಕುಡುಕ ಇದ್ದಾನೆ ಹೊಂದಾಣಿಕೆ ಮಾಡಿಕೊಂಡು ಹೋಗು ಎಂದು ನನಗೆ ಬುದ್ದಿವಾದ ಹೇಳಿ ಹೋಗಿರುತ್ತಾರೆ. ಆದರೂ ಸಹ ನಾನು ನನ್ನ ಗಂಡನ ಜೊತೆ ಸಂಸಾರ ಮಾಡಿಕೊಂಡು ಹೋಗುತ್ತಿದ್ದೇನೆ. 
       ದಿನಾಂಕ 27/01/2020 ರಂದು 8-30 ಎ.ಎಂಕ್ಕೆ ಅಂಗನವಾಡಿಯಲ್ಲಿ ಕೆಲಸಕೆಂದು ಹೋಗಲು ಬೇಗನೆ ಮನೆಯ ಕೆಲಸ ಮುಗಿಸಿಕೊಂಡು ಹೋಗಬೇಕ ಅನ್ನುವಷ್ಟರಲ್ಲಿ ನನ್ನ ಗಂಡ ಮಲ್ಲಿಕಾಜರ್ುನ ಈತನು ಕುಡಿಯಲಕ್ಕೆ ಹಣ ಕೋಡು ಅಂತಾ ರಂಡಿ ಬೋಸಡಿ ಸೂಳಿ ಅಂತಾ ಜಗಳ ತಗೆದಾಗ ಆಗ ನಾನು ನನ್ನ ಹತ್ತಿರ ಹಣ ಇರುವುದಿಲ್ಲ ಅಂದಿದಕ್ಕೆ ಒಲೆಯ ಹತ್ತಿರ ಬಿದ್ದಿದ ಚಮಚ ತಗೆದುಕೊಂಡು ನನ್ನ ಹಣೆಯ ಮೇಲೆಗಡೆ ಹಾಗು ತಲೆಯ ಹಿಂದುಗಡೆ ಮತ್ತು  ಕಪಾಳದ ಮೇಲಗಡೆ ಹೋಡೆದು ರಕ್ತಗಾಯ ಮಾಡಿರುತ್ತಾನೆ . ಆಗ ನಾನು ಚಿರಾಡುವುದು ಕೇಳಿ ಕೈಕಾಸ ತಂದೆ ಭಾಗಪ್ಪ ಮತ್ತು ಶಾಂತಮ್ಮ ಗಂಡ  ಮಲ್ಲಿಕಾಜರ್ುನ ಅನ್ವರ ಇವರು ಬಂದು ಜಗಳ ಬಿಡಿಸಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಯಾದಗಿರಿಗೆ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. 
       ಕಾರಣ ನನ್ನ ಗಂಡ ಮಲ್ಲಿಕಾಜರ್ುನ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾನೆ. ಮತ್ತು ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುತ್ತಾನೆ. ನನ್ನ ಗಂಡ ಮಲ್ಲಿಕಾಜರ್ುನ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಹೇಳಿಕೆಯ ಮೇಲಿಂದ ಠಾಣೆ ಗುನ್ನೆ ನಂ 03/2020 ಕಲಂ 498(ಎ) 323 324 504 506 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 
ಗುರಮಠಕಲ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ. 17/2020 ಕಲಂ. ಮಹಿಳೆ ಕಾಣೆಯಾದ ಬಗ್ಗೆ.:- ದಿನಾಂಕ 25.01.2020 ರಂದು ರಾತ್ರಿ 8:30 ಗಂಟೆಗೆ ಫಿರ್ಯಾದಿದಾರಳಾದ ಶ್ರೀಮತಿ ಲಕ್ಷ್ಮಿ ಗಂಡ ಸಣ್ಣನರಸಿಂಹಲು ಯಾಧವ ಹಾಗೂ ಆಕೆಯ ಮೂರು ಜನ ಮಕ್ಕಳು ಊಟ ಮಾಡಿ ಮನೆಯಲ್ಲಿ ಮಲಗಿದ್ದಾಗ ಫಿರ್ಯಾದಿದಾರಳ ಮಗಳಾದ ವೆಂಕಟಮ್ಮ ತಂದೆ ಸಣ್ಣನರಸಿಂಹಲು ಯಾಧವ ವ|| 19 ವರ್ಷ ಸಾ||ನಾನಾಪೂರ ಏರಿಯಾ, ಗುರುಮಠಕಲ್ ಈಕೆ ಮನೆಯಿಂದ ಕಾಣೆಯಾಗಿದ್ದು ರಾತ್ರಿ 1:00 ಗಂಟೆಯ ಸುಮಾರಿಗೆ ಫಿರ್ಯಾಧಿದಾರಳು ಎದ್ದು ನೋಡಿದಾಗ ತನ್ನ ಪಕ್ಕದಲ್ಲಿ ಮಲಗಿದ್ದ ತನ್ನ ಮಗಳು ವೆಂಕಟಮ್ಮ ಕಾಣಿಸದೇ ಇರುವ ಎಲ್ಲಾ ಕಡೆ ಹುಡುಕಿದರು ಸಿಗದೇ ಇರುವುದರಿಂದ ಇಂದು ದಿನಾಂಕ 27.01.2020 ರಂದು ಠಾಣೆಗೆ ಬಂದು ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 17/2020 ಕಲಂ. ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ. 29/2020 ಕಲಂ 279, 337, 338, 304(ಎ) ಐ.ಪಿ.ಸಿ:- ಇಂದು ದಿನಾಂಕ: 27/01/2020 ರಂದು 7.00 ಪಿ.ಎಂ.ಕ್ಕೆ ಶ್ರೀ ನಂದಣ್ಣ ತಂ/ ಪಿಡ್ಡನಾಯಕ ಪಾಟೀಲ್ ಸಾ|| ಕಕ್ಕೇರಿ ಹಾ.ವ|| ಮಡಿವಾಳೇಶ್ವರ ನಗರ ಶಹಾಪುರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶ ಏನೆಂದರೆ, ಇಂದು ದಿನಾಂಕ: 27/01/2020 ರಂದು ಮಧ್ಯಾಹ್ನ 2.00 ಪಿ.ಎಂ.ಕ್ಕೆ ನನ್ನ ಕಿರಿಯ ಮಗ ಮನೋಜ ಮತ್ತು ಅವನ ಗೆಳೆಯರಾದ ವೀರೇಶ ತಂ/ ಪ್ರಭುಸ್ವಾಮಿ ಹಿರೇಮಠ ಮತ್ತು ಹೈಮದ ತಂ/ ನಜೀರ್ ಖುರೇಶಿ 3 ಜನರು ಕೂಡಿ ಶಹಾಪುರಕ್ಕೆ ಹೋಗುತ್ತೇವೆ ಅಂತಾ ಹೇಳಿ ಪಲ್ಸರ್ ಮೋಟರ ಸೈಕಲ್ ನಂ. ಕೆಎ-33 ಯು-7473 ನೇದ್ದರಲ್ಲಿ ಕುಳಿತು ಹೋದರು. ಮಧ್ಯಾಹ್ನ 3.45 ಪಿ.ಎಂ. ಸುಮಾರಿಗೆ ನನ್ನ ಮಗ ಮನೋಜನ ಗೆಳೆಯನಾದ ಹೈಮದ ಖುರೇಶಿ ಇವನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾವು ಮೂರು ಜನರು ನನ್ನ ಮೋಟರ ಸೈಕಲದಲ್ಲಿ ಕುಳಿತು ಶಹಾಪುರ ಕಡೆಗೆ ಹೊರಟಿದ್ದಾಗ  3.30 ಪಿ.ಎಂ. ಸುಮಾರಿಗೆ ಹತ್ತಿಗುಡೂರ-ಶಹಾಪುರ ಮುಖ್ಯ ರಸ್ತೆಯಲ್ಲಿರುವ ವಿಭೂತಿಹಳ್ಳಿ ಹಿಲ್ಟೌನ್ ದಾಬಾದ ಸಮೀಪದ ಕೆನಾಲ ಹತ್ತಿರ ಹೊರಟಿದ್ದಾಗ ವೀರೇಶನು ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಾ ಮುಂದೆ ಹೊರಟಿದ್ದ ಒಂದು ವಾಹನಕ್ಕೆ ಓವರ ಟೇಕ್ ಮಾಡಲು ಹೋದಾಗ ವಿರೇಶನ ನಿಯಂತ್ರಣ ತಪ್ಪಿ ಮೋಟರ ಸೈಕಲ್ ಪಲ್ಟಿಯಾಗಿ ರೋಡಿನ ಪಕ್ಕದಲ್ಲಿ ಬಿದ್ದ ಪರಿಣಾಮ ನಿಮ್ಮ ಮಗ ಮನೋಜನಿಗೆ ರೋಡಿನ ಪಕ್ಕದಲ್ಲಿದ್ದ ಗೂಟಗಲ್ಲಿಗೆ ತಲೆ ಬಡೆದು ತಲೆಗೆ ಬಾರೀ ರಕ್ತಗಾಯ, ಎಡಗಣ್ಣಿಗೆ ಒಳಪೆಟ್ಟಾಗಿ ಬಾವು ಬಂದಿರುತ್ತದೆ, ಮುಗು, ಬಾಯಿ, ಕಿವಿಯಿಂದ ರಕ್ತ ಬರುತ್ತಿದೆ ಮತ್ತು ಎಡ ಮೊಳಕಾಲ ಕೆಳಗೆ ಮುರಿದು ಭಾರೀ ರಕ್ತಗಾಯವಾಗಿರುತ್ತದೆ. ನನಗೆ ಬಲರಟ್ಟೆಗೆ ಮತ್ತು ಬುಜಕ್ಕೆ ತರಚಿದಗಾಯ, ಎಡಗೈ ಮೊಣಕೈ ಹತ್ತಿರ ಕಟ್ಟಾದ ರಕ್ತಗಾಯ, ಎಡ ಮೊಣಕಾಲ ಮೇಲೆ ಭಾರೀ ರಕ್ತಾಯವಾಗಿರುತ್ತದೆ ವೀರೇಶ ಹಿರೇಮಠ ಇವನಿಗೆ ಎಡ ಕಪಾಳಕ್ಕೆ ತರಚಿದಗಾಯ, ಎಡರಟ್ಟೆಗೆ ಭಾರೀ ಒಳಪೆಟ್ಟು, ಎಡ ಎದೆಗೆ ಒಳಪೆಟ್ಟು, ಎಡಗಾಲ ತೊಡೆಯ ಹತ್ತಿರ ಒಳಪೆಟ್ಟಾಗಿರುತ್ತದೆ. ಘಟನೆ ಸ್ಥಳಕ್ಕೆ ಬಂದ ಮಲ್ಲಪ್ಪ ತಂ/ ಬಸವರಾಜ ಬೊಮ್ಮನಳ್ಳಿ ಸಾ|| ದಿಗ್ಗಿ ಅಗಸಿಯ ಹತ್ತಿರ ಶಹಾಪೂರ ಈತನು ನಮ್ಮನ್ನು 108 ವಾಹನದಲ್ಲಿ ಹಾಕಿಕೊಂಡು ಶಹಾಪುರಕ್ಕೆ ಹೊರಟಿದ್ದಾನೆ ಅಂತಾ ಹೇಳಿದಾಗ ನಾನು ಮತ್ತು ನನ್ನ ಪಿಡ್ಡನಾಯಕ, ನನ್ನ ಹೆಂಡತಿ ಮಾನಂದ 3 ಜನರು ಕೂಡಿಕೊಂಡು 4.30 ಪಿ.ಎಂ.ಕ್ಕೆ ಶಹಾಪುರ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗನಿಗೆ ಮೇಲ್ಕಾಣಿಸಿದಂತೆ ಗಾಯಗಳಾಗಿದ್ದವು ಉಪಚಾರ ಮಾಡಿದ ವೈಧ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಹೋಗಲು ತಿಳಿಸಿದರಿಂದ ನನ್ನ ಮಗನಿಗೆ 108 ವಾಹನದಲ್ಲಿ ಹಾಕಿಕೊಂಡು ಹೋಗುತ್ತಿದ್ದಾಗ 5.30 ಪಿ.ಎಂ ಸುಮಾರಿಗೆ ಜೇವಗರ್ಿ ಹತ್ತಿರ ಇದ್ದಾಗ ನನ್ನ ಮಗ ಮನೋಜನು ಮೃತಪಟ್ಟಿರುತ್ತಾನೆ. ನನ್ನ ಮಗನ ಮೃತ ದೇಹವನ್ನು ಮರಳಿ ಶಹಾಪುರ ಸರಕಾರಿ ಆಸ್ಪತ್ರೆಗೆ ತಂದು ಆಸ್ಪತ್ರೆಯ ಮರ್ಚರಿ ಕೋಣೆಯಲ್ಲಿ ಹಾಕಿರುತ್ತೇನೆ. ಕಾರಣ ಈ ಅಪಘಾತಕ್ಕೆ ಕಾರಣನಾದ ಪಲ್ಸರ್ ಮೋಟರ ಸೈಕಲ್.ನಂ. ಕೆಎ-33 ಯು-7473 ನೇದ್ದರ ಚಾಲಕ ವೀರೇಶ ತಂ/ ಪ್ರಭುಸ್ವಾಮಿ ಹಿರೇಮಠ ಸಾ|| ಚಾಮನಾಳ ತಾ|| ಶಹಾಪುರ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 29/2020 ಕಲಂ 279, 337, 338, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.       
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ 02/2020174 (ಸಿ) ಸಿ.ಆರ್.ಪಿ.ಸಿ : ಇಂದು ದಿನಾಂಕ: 27/01/2020 ರಂದು 6-30 ಪಿಎಮ್ ಕ್ಕೆ ಶ್ರೀ ಕಾಸಿಂಸಾಬ ತಂದೆ ಅಮೀನಸಾಬ ನದಾಫ, ವ:60, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಕರಿಗುಡ್ಡ ತಾ:ದೇವದುರ್ಗ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನಗೆ 8 ಜನ ಹೆಣ್ಣು ಮಕ್ಕಳು ಮತ್ತು 1 ಗಂಡು ಮಗ ಹೀಗೆ ಒಟ್ಟು 9 ಜನ ಮಕ್ಕಳಿರುತ್ತಾರೆ. 6 ಜನ ಹೆಣ್ಣು ಮಕ್ಕಳಿಗೆ ಲಗ್ನ ಮಾಡಿದ್ದು, ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನದು ಮದುವೆ ಮಾಡುವುದು ಉಳಿದಿರುತ್ತದೆ. ಹೀಗಿದ್ದು ನನ್ನ 6 ನೇ ಮಗಳಾದ ಫಾತಿಮಾ ವ:25 ವರ್ಷ ಇವಳಿಗೆ ಈಗ ಸುಮಾರು 5 ವರ್ಷಗಳ ಹಿಂದೆ ಶಹಾಪೂರ ತಾಲೂಕಿನ ಟಿ. ವಡಗೇರಾ ಗ್ರಾಮದ ಗೂಡುಸಾಬ ತಂದೆ ಹುಸೇನಸಾಬ ನದಾಫ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಅವರಿಗೆ ಹಾಲಿ 1) ಸೈನಾಜ ವ:03 ವರ್ಷ ಮತ್ತು 2) ಹಸೇನಸಾಬ ವ:01 ವರ್ಷ ಹೀಗೆ ಎರಡು ಜನ ಮಕ್ಕಳಿರುತ್ತಾರೆ ನನ್ನ ಮಗಳು ಈಗ 5 ತಿಂಗಳ ಗಭರ್ೀಣಿ ಇರುತ್ತಾಳೆ. ಟಿ. ವಡಗೇರಾ ಗ್ರಾಮದ ಪಕ್ಕದಲ್ಲಿ ತಮ್ಮ ಹೊಲದಲ್ಲಿ ಪತ್ರಾಸ ಮನೆ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತಾರೆ. ಕೆಲವು ದಿನಗಳ ವರೆಗೆ ಗಂಡ ಹೆಂಡತಿ ಇಬ್ಬರೂ ಅನ್ಯೋನ್ಯವಾಗಿದ್ದರು. ಆದರೆ ಇತ್ತಿಚ್ಚೆಗೆ ಮಗಳಿಗೆ ಅವಳ ಗಂಡ ಗೂಡುಸಾಬ, ಅತ್ತೆ ಚಾಂದಬೀ ಮತ್ತು ಮಾವ ಹುಸೇನಸಾಬ ಹಾಗೂ ಮೈದುನ ಸೈಯದ ತಂದೆ ಹುಸೇನಸಾಬ ಇವರು ವಿನಾಕಾರಣ ನನ್ನ ಮಗಳಿಗೆ ತ್ರಾಸ ಕೊಡುವುದು ಮಾಡುತ್ತಿದ್ದರು. ನನ್ನ ಮಗಳು ನಮ್ಮ ಹತ್ತಿರ ಬಂದಾಗ ತನಗೆ ತ್ರಾಸ ಕೊಡುತ್ತಿದ್ದ ಬಗ್ಗೆ ನಮ್ಮ ಮುಂದೆ ಹೇಳುತ್ತಿದ್ದಳು. ಆಗ ನಾವು ಇರಲಿ ಸಂಭಾಳಿಸಿಕೊಂಡು ಹೋಗು ಎಂದು ಬುದ್ದಿ ಮಾತು ಹೇಳಿ ಕಳುಹಿಸುತ್ತಿದ್ದೆವು. ಹೀಗಿದ್ದು ದಿನಾಂಕ: 25/01/2020 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ನನ್ನ ಅಳಿಯನಾದ ಗೂಡುಸಾಬನು ನನಗೆ ಫೋನ ಮಾಡಿ ನಿನ್ನ ಮಗಳು ಫಾತಿಮಾ ನನ್ನ ತಂದೆ-ತಾಯಿಯೊಂದಿಗೆ ಬಾಯಿ ಮಾತಿನ ಜಗಳ ಮಾಡಿಕೊಂಡು ಮುನಿಸಿಕೊಂಡಿರುತ್ತಾಳೆ. ನೀನು ಬಂದು ಕರೆದುಕೊಂಡು ಹೋಗು ಎಂದು ಹೇಳಿದನು. ಆಗ ನಾನು ತವರು ಮನೆಗೆ ಕರೆದುಕೊಂಡು ಬಂದರಾಯಿತು ಎಂದು ನಮ್ಮೂರಿನಿಂದ ದೇವದುರ್ಗಕ್ಕೆ ಬಂದು ಅಲ್ಲಿಂದ ಟಿ. ವಡಗೇರಾಕ್ಕೆ ಹೋಗಬೇಕೆನ್ನುತ್ತಿರುವಾಗ ಬೆಳಗ್ಗೆ 10 ಗಂಟೆಗೆ ಪುನಃ ನನ್ನ ಅಳಿಯ ಗೂಡುಸಾಬ ಫೋನ ಮಾಡಿ ನಿನ್ನ ಮಗಳು ಬಯಲು ಕಡೆ ಸಂಡಾಸಕ್ಕೆ ಹೇಳಿ ಹೋದಳು ಮರಳಿ ಮನೆಗೆ ಬಂದಿರುವುದಿಲ್ಲ ಅಂತಾ ಹೇಳಿದನು. ಆಗ ನಾನು ಮತ್ತು ನನ್ನ ಅಳಿಯನಾದ ಮಹ್ಮದ ಅಲಿಸಾಬ ಸಾ:ಗಾಣದಾಳ ಮತ್ತು ಇತರರು ಸೇರಿ ಟಿ. ವಡಗೇರಾ ಗ್ರಾಮಕ್ಕೆ ಬಂದು ವಿಚಾರಿಸಿ, ಗ್ರಾಮದ ಸುತ್ತ ಅಲ್ಲಲ್ಲಿ ಹುಡುಕಾಡಿದರು, ಹತ್ತಿಗೂಡು, ನಂದ್ಯಾಳ ಮುಂತಾದ ಕಡೆ ಹುಡುಕಾಡಿದೆವು. ಎಲ್ಲಿಯೂ ನನ್ನ ಮಗಳು ಸಿಗಲಿಲ್ಲ. ಆಗ ಇಂದು ದಿನಾಂಕ: 27/01/2020 ರಂದು ವಡಗೇರಾ ಠಾಣೆಯಲ್ಲಿ ಕಾಣೆಯಾದ ದೂರು ಕೊಟ್ಟಿದ್ದು, ಪ್ರಕರಣ ದಾಖಲಾಗಿರುತ್ತದೆ. ನಂತರ ಇಂದು ಮದ್ಯಾಹ್ನ 3-30 ಪಿಎಮ್ ಸುಮಾರಿಗೆ ಟಿ. ವಡಗೇರಾ ಊರ ಹತ್ತಿರ ಹೋಗಿ ಹುಡುಕಾಡುತ್ತಿದ್ದಾಗ ಟಿ. ವಡಗೇರಾ ಗ್ರಾಮದ ನಬಿಲಾಲ ತಂದೆ ಮಹ್ಮದ ಹನಿಫ ಇವರ ಹೊಲದಲ್ಲಿರುವ ಬಾವಿಯಲ್ಲಿ ಯಾರದೋ ಹೆಣ್ಣು ಮಗಳ ಶವ ಬೋರಲಾಗಿ ತೇಲುತ್ತಿದೆ ಅಂತಾ ಗೊತ್ತಾಗಿ ನಾನು ಮತ್ತು ನಮ್ಮ ಸಂಬಂಧಿಕರು ಹೋಗಿ ನೋಡಲಾಗಿ ಬಾವಿಯಲ್ಲಿ ತೇಲುತ್ತಿರುವ ಹೆಣವು ನನ್ನ ಮಗಳು ಫಾತಿಮಾಳದೆ ಇತ್ತು. ನಾವು ಸಂಬಂಧಿಕರು ಸೇರಿ ಹೆಣವನ್ನು ಬಾವಿಯಿಂದ ಹೊರಗೆ ತೆಗೆದು ನೋಡಿದೆವು. ನನ್ನ ಮಗಳು ಫಾತಿಮಾ ಬಾವಿಯಲ್ಲಿ ಬಿದ್ದು ಮೃತಪಟ್ಟಿರಬಹುದು ಅಥವಾ ಅವಳಿಗೆ ಏನಾದರೂ ಆಗಿರಬಹುದು. ನನ್ನ ಮಗಳ ಸಾವಿನಲ್ಲಿ ನಮಗೆ ಸಂಶಯವಿದ್ದು, ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ನನ್ನ ಮಗಳ ಶವವು ಯಾದಗಿರಿ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಸೇರಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ. 02/2020 ಕಲಂ: 174 (ಸಿ) ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.   


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!