ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 21-01-2020

By blogger on ಮಂಗಳವಾರ, ಜನವರಿ 21, 2020



                          ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 21-01-2020 

 ಗುರಮಠಕಲ ಪೊಲೀಸ್ ಠಾಣೆ ಗುನ್ನೆ ನಂ:-.14/2020 ಕಲಂ:363, 342, 392, 323, 324, 504, 506 ಐಪಿಸಿ;-ದಿನಾಂಕ 15.01.2020 ರಂದು ಬೆಳಿಗ್ಗೆ 9:30 ಗಂಟೆಯ ಸುಮಾರಿಗೆ ಫಿರ್ಯಾದಿಯು ಚಿನ್ನಾಕಾರ ಗೇಟ್ನಲ್ಲಿದ್ದಾಗ ಆರೋಪಿತನು ಫಿರ್ಯಾದಿಗೆ ಲಿಫ್ಟ್ ಕೊಡುವುದಾಗಿ ಹೇಳಿ ಅಪಹರಿಸಿಕೊಂಡು ಹೋಗಿ, ಆತನ ಫೋನ್ ಕಸಿದುಕೊಂಡು ಆತನಿಗೆ ಕೂಡಿ ಹಾಕಿ, ಜೀವದ ಬೆದರಿಕೆ ಹಾಕಿದ್ದು ಅಲ್ಲದೇ ಆತನ ಇಬ್ಬರು ಮಕ್ಕಳಿಗೆ ಅವಾಚ್ಯವಾಗಿ ಬೈದು, 5 ಲಕ್ಷ ರೂ.ಗಳು ಕೊಡದಿದ್ದರೆ ಜೀವಂತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು, ಕೈಯಿಂದ ಹೊಡೆ-ಬಡೆ ಮಾಡಿ, ಕೈಗೆ ಚೈನ್ ಸುತ್ತಿಕೊಂಡು ಮುಖಕ್ಕೆ ಗುದ್ದಿದ್ದು, ಹಾಗೂ ಫೀರ್ಯಾದಿಯ ಮಗನಲ್ಲಿದ್ದ 5 ಸಾವಿರ ರೂಪಾಯಿಗಳನ್ನು ಬಲವಂತವಾಗಿ ಜೀವದ ಬೆದರಿಕೆ ಹಾಕಿ ಕಸಿದುಕೊಂಡ ಬಗ್ಗೆ ಫಿರ್ಯಾದಿಯು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 14/2020 ಕಲಂ: 363, 342, 392, 323, 324, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಗುರಮಠಕಲ ಪೊಲೀಸ್ ಠಾಣೆ ಗುನ್ನೆ ನಂ:- 15/2020 ಕಲಂ: 78() ಕೆ.ಪಿ. ಆಕ್ಟ್:- ಇಂದು ದಿನಾಂಕ 21.01.2020  ರಂದು ಮಧ್ಯಾಹ್ನ 3.45ಗಂಟೆಗೆ ಆರೋಪಿತನು ಗುರುಮಠಕಲ ಪಟ್ಟಣ ಕಾಕಲವಾರ ಕ್ರಾಸ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಅಕ್ರಮ ಮಟಕಾ ಜೂಜಾಟ ಅಂಕಿ ಸಂಖ್ಯೆ ಬರೆದುಕೊಂಡು ಸಾರ್ವಜನಿಕರಿಗೆ 1/- ರೂ ಗೆ 80/- ರೂ ಮಟಕಾ ಬರೆಯಿಸಿದರೆ ಕೊಡುವುದಾಗಿ ಹೇಳಿ ಅವರಿಂದ ಹಣ ಸಂಗ್ರಹಿಸುತ್ತಿದ್ದಾಗ ಫೀರ್ಯಾದಿ ಹಾಗೂ  ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಸದರಿ ಆರೋಪಿತನ ವಶದಲ್ಲಿದ್ದ 1]ನಗದು ಹಣ 2800/-, 2)ಮಟಕಾ ಅಂಕಿ ಸಂಖ್ಯೆ ಬರೆದುಕೊಂಡ ಚೀಟಿ, 3] ಒಂದು ಬಾಲ ಪೆನ್ ಅ.ಕಿ-00, ಹೀಗೆ ಒಟ್ಟು2800/-ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಸದರಿ ವರದಿ ಹಾಗೂ ಪಂಚನಾಮೆಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದ ನಂತರ ಠಾಣಾ ಗುನ್ನೆ ನಂ: 15/2020 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು. /-             ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 09/2020 ಕಲಂ 143, 147, 114, 447 ಸಂ 149 ಐಪಿಸಿ:-ದಿನಾಂಕ 25-07-2019 ರಂದು ಬೆಳಿಗ್ಗೆ 10-00 ಗಂಟೆಗೆ ಆರೋಪಿತರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಫಿರ್ಯಾಧಿಯ ಹೊಲದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಫಿರ್ಯಾಧಿಯ ಹೊಲ ಸಾಗುವಳಿ ಮಾಡುವದಕ್ಕೆ ಇಬ್ಬರೂ ಆರೋಪಿತರು ಉಳಿದ ಐದು ಜನ ಆರೋಪಿತರಿಗೆ ಪ್ರಚೋದನೆ ನೀಡಿದ್ದರಿಂದ ಉಳಿದ ಆರೋಪಿತರು ಫಿರ್ಯಾಧಿಯ ಹೊಲವನ್ನು ಸಾಗುವಳಿ ಮಾಡಿ ಬೆಳೆಯನ್ನು ಬಿತ್ತಿ ರಾಶಿ ಮಾಡಿಕೊಂಡಿರುತ್ತಾರೆ ಅಂತಾ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 10/2020 ಕಲಂ 143, 147, 341, 323, 336, 504, 506 ಸಂ 149 ಐಪಿಸಿ:-ದಿನಾಂಕ 18/01/2020 ರಂದು ಫಿರ್ಯಾಧಿಯ ತಮ್ಮನು ನಡೆದುಕೊಂಡು ಮನೆಗೆ ಹೋಗುವಾಗ ಆರೋಪಿತನು ಮೋಟಾರ ಸೈಕಲ್ ಅವನ ಎದುರುಗಡೆ ಕಟ್ ಹೊಡೆದಿದ್ದರಿಂದ ಫಿರ್ಯಾಧಿ ತಮ್ಮನು ಮೋರಿಯಲ್ಲಿ ಬಿದ್ದುದರಿಂದ ಬಾಯಿ ಮಾತಿನ ತಕರಾರು ಆಗಿತ್ತು, ನಂತರ ಆರೋಪಿತರೆಲ್ಲರೂ ಕೂಡಿಕೊಂಡು ರಾತ್ರಿ 9-30 ಗಂಟೆಗೆ ಫಿರ್ಯಧೀಯ ತಮ್ಮನ ಮನೆಯ ಮೇಲೆ ಕಲ್ಲು ತೂರಾಡಿದ್ದರು, ಅದಕ್ಕೆ ಆರೋಪಿತರನ್ನು ಠಾಣೆಗೆ ಕರೆಯಿಸಿ ವಿಚಾರಣೆ ಮಡಿರಿ ಅಂತಾ ಅಜರ್ಿ ಕೊಟ್ಟಿದ್ದರು, ಇಂದು ದಿನಾಂಕ 21-01-2020 ರಂದು ಸಾಯಂಕಾಲ 7-00 ಗಂಟೆಗೆ ಫಿರ್ಯಾಧಿಯು ತನ್ನ ಮೋಟಾರ ಸೈಕಲ್ ಮೇಲೆ ತಮ್ಮೂರಿಗೆ ಹೋಗುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಫಿರ್ಯಾಧಿಯ ಹೊಲದ ಹತ್ತಿರ ಫಿರ್ಯಾಧಿಯನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಡಿ ಜೀವದ ಭಯ ಹಾಕಿದ ಬಗ್ಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 16/2020 ಕಲಂ: 87 ಕೆಪಿ ಆಕ್ಟ :- ಕೇಸಿನ ಸಂಕ್ಷಿಪ್ತ ಸಾರಾಂಶ;- ಇಂದು ದಿನಾಂಕ: 21.01.2020 ರಂದು 0.30 ಘಂಟೆಗೆ ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ಏವೂರ ಗ್ರಾಮದ ಜಟ್ಟಿಂಗೇಶ್ವರ ಗುಡಿಯ ಮುಂದುಗಡೆ ಲೈಟಿನ ಬೆಳಕಿನಲಿ,್ಲ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33 ಜಿ 0074 ನೇದ್ದರಲ್ಲಿ ಸದರ ಜಟ್ಟಿಂಗೇಶ್ವರ ಗುಡಿಯ ಪಕ್ಕದಲ್ಲಿ ಮರೆಯಾಗಿ ನಿಂತು ಆರೋಪಿತರು ಜೂಜಾಟ ಆಡುವ ಬಗ್ಗೆ ಖಚಿತಪಡಿಸಿಕೊಂಡು 01.20 ಎಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 08 ಜನ ಆರೋಪಿತರು ಸಿಕ್ಕಿದ್ದು  ಮತ್ತು ಒಟ್ಟು 17500/- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳು ಸಿಕ್ಕಿದ್ದು ಸದರಿಯವುಗಳನ್ನು 01.20 ಎ.ಎಂ ದಿಂದ  02.20 ಎ.ಎಂದವರಗೆ ಪಂಚರ ಸಮಕ್ಷಮ ವಶಪಡಿಸಿಕೊಂಡು ಠಾಣೆಗೆ 03.00 ಎ.ಎಮ್ ಕ್ಕೆ ಬಂದು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ್ದು ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು 10-00  ಎಎಮ್ ಕ್ಕೆ ಸದರಿ ವರದಿ ಆಧಾರದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 16/2020 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 107 ಸಿ.ಆರ್.ಪಿ.ಸಿ :- ದಿನಾಂಕ:21/01/2020 ರಂದು 19.45 ಗಂಟೆಗೆ ಠಾಣೆಯ  ಶ್ರೀಶೈಲ್ ಹೆಚ್.ಸಿ-181  ರವರು ಠಾಣೆಗೆ ಬಂದು ಒಂದು ಲಿಖಿತ ದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ:21/01/2020 ರಂದು  ನಾನು ಅಜರ್ಿ ವಿಚಾರಣೆಗೆಂದು ಬಲಶೆಟ್ಟಿಹಾಳ ಗ್ರಾಮಕ್ಕೆ  ಹೋದಾಗ ಗ್ರಾಮದಲ್ಲಿ ಸ್ಥಳಿಯ ವಿದ್ಯಮಾನಗಳಿಂದಾ ಮತ್ತು ಪೊಲೀಸ ಬಾತ್ಮಿದಾರರಿಂದಾ ತಿಳಿದು ಬಂದಿದ್ದೇನೆಂದರೆ, ಗ್ರಾಮದ ಪರಮಣ್ಣ ತಂದೆ ಮರಲಿಂಗಪ್ಪ ಚಲುವಾದಿ ಮತ್ತು ಸಂಗಡಿಗರು ಮತ್ತು ದ್ಯಾಮನಾಳ ಗ್ರಾಮದ  ಅಬ್ದುಲ್ರಹಿಮಾನ ತಂದೆ ಹಬೀಬಸಾಬ ತಾಳಿಕೋಟಿ ಮತ್ತು ಸಂಗಡಿಗರ ಮದ್ಯ ಬಲಶೆಟ್ಟಿಹಾಳ ಸೀಮೆಯ ಹೊಲ ಸವರ್ೆ ನಂ.33 ರಲ್ಲಿ ಕಬ್ಜಾದ ಬಗ್ಗೆ ತಕರಾರು ಸುಮಾರು ದಿನಗಳಿಂದಾ ಇದ್ದು ಸದರಿ ಹೊಲದ ಕಬ್ಜಾದ ವಿಷಯದಲ್ಲಿ ತಮ್ಮ ತಮ್ಮಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ಹಾನಿ, ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವ ಹೆಚ್ಚಾಗಿ ಕಂಡು ಬಂದಿರುತ್ತದೆ. ಕಾರಣ ಮೇಲ್ಕಂಡವರ ಮೇಲೆ ಮುಂಜಾಗೃತಾ ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆ ಸದರಿಯವರ ವಿರುದ್ದ ಕಲಂ:107 ಸಿ.ಆರ್.ಪಿ.ಸಿ ಪ್ರಕಾರ ಮುಂಜಾಗೃತೆ ಕ್ರಮ ಕೈಕೊಂಡಿದ್ದು ಇದೆ;



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!