ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 15-01-2020

By blogger on ಬುಧವಾರ, ಜನವರಿ 15, 2020

                         
                         ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 15-01-2020 
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 02/2020 ಕಲಂ 498(ಎ), 504 ಐಪಿಸಿ ಮತ್ತು 3()(ಖ)(ಖ)(ಘ) ಖಅ/ಖಖಿ ಕ.ಂ. ಂಅಖಿ;- ಫಿಯರ್ಾದಿ ಮತ್ತು ಆರೋಪಿ ಪ್ರೀತಿಸಿ ದಿನಾಂಕ:19/05/2018 ರಂದು ಶಹಾಪುರದ ಸಬ್ ರಜಿಸ್ಟ್ರಾರ ಕಛೇರಿಯಲ್ಲಿ ಮದುವೆ ಮಾಡಿಕೊಂಡು ಬೆಂಗಳೂರಿಗೆ ಹೋಗಿದ್ದು ಮದುವೆಯಾದ ಒಂದು ತಿಂಗಳ ನಂತರ ಆರೋಪಿತನು ನಿನ್ನ ಜಾತಿ ಬೇರೆ, ನನ್ನ ಜಾತಿ ಬೇರೆ, ನೀನು ಕೀಳು ಜಾತಿಯವಳು ಇದ್ದಿ, ನಮ್ಮ ಮದುವೆಗೆ ಸಮಾಜ ಒಪ್ಪುವದಿಲ್ಲ ಅಂತಾ ಇತ್ಯಾದಿಯಾಗಿ ನನ್ನೊಂದಿಗೆ ಜಗಳ ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲು ಪ್ರಾರಂಭಸಿರುತ್ತಾನೆ. ದಿನಾಂಕ:10/11/2019 ರಂದು ಮುಂಜಾನೆ 10 ಗಂಟೆ ಸುಮಾರಿಗೆ ಆರೋಪಿತನು ಫಿಯರ್ಾದಿಗೆ ಎಲೇ ಹೊಲೆಯ ಸೂಳೀ, ನಿನ್ನಿಂದ ನನಗೆ ಸಾಕಾಗಿದೆ, ನಿನ್ನಿಂದ ನನ್ನ ಸಂಸಾರ ಹಾಳಾಗಿದೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ನೀನು ಇಲ್ಲೇ ಇರು ನಾನು ಎಲ್ಲಿಯಾದರೂ ಹೋಗುತ್ತೇನೆ ಅಂತಾ ಹೇಳಿ ಹೋಗಿದ್ದು ಸದರಿ ಆರೋಪಿತನ ವಿರುಧ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದು ಇರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 03/2020 ಕಲಂ: 279 304(ಎ), ಐಪಿಸಿ & 187 ಐ.ಎಂ.ವ್ಹಿ ಆಕ್ಟ;- ದಿನಾಂಕ 15/01/2020 ರಂದು 6:30 ಪಿ.ಎಂ ಕ್ಕೆ ಶ್ರೀ ವಿರೇಶ ತಂದೆ ಮಲ್ಲಪ್ಪ ಗುರಿಕಾರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನಂದರೆ ನನ್ನ ತಂಗಿಯಾದ ರುದ್ರಮ್ಮ ಗುರಿಕಾರ ವ:32 ವರ್ಷ ಇವಳು ಯಣ್ಣಿವಡಗೇರಾ ಪ್ರಾಥಮಿಕ ಶಾಲೆಗೆ ಅಥೀತಿ ಶಿಕ್ಷಕಳಾಗಿ ಕೆಲಸಕ್ಕೆ ಹೋಗುತ್ತಿದ್ದಳು ದಿನಾಂಕ 07/01/2020 ರಂದು ಮುಂಜಾನೆ 9:00 ಗಂಟೆಯ ಸುಮಾರಿಗೆ ನಾನು ನನ್ನ ತಂಗಿಯನ್ನು ಶಾಲೆಗೆ ಬಿಟ್ಟುಬರುವ ಸಲುವಾಗಿ ನಮ್ಮ ಮನೆಯಿಂದ ಮೊಟರ ಸೈಕಲ್  ಮೇಲೆ ಕೂಡಿಕೊಂಡು ಎಣ್ಣಿವಡಗೇರಾಕ್ಕೆ ಹೋರಟ್ಟಿದ್ದೆನು ಅದರಂತೆ ಎಣ್ಣಿವಡಗೇರಾ ಶಾಲೆಗೆ ಅಥೀತಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ನಮ್ಮೂರ ಸಂಗಮೇಶ ಜವಳಗೇರಾ, ಮೈಹಿಬೂಬ ಗಡ್ಡಿ ಹಾಗೂ ನಾಗೇಶ ಅಂಬುರೇ ರವರು ತಮ್ಮ ಮೊಟರ ಸೈಕಲ್ ಗಳ ಮೇಲೆ ಶಾಲೆಗೆ ಹೊಗಲು ಹೊರಟಿದ್ದರು.  ಒಂದು ಗಾಡಿಯ ಮೇಲೆ ಮೈಹಿಬೂಬ ಗಡ್ಡಿ ಹಾಗೂ ನಾಗೇಶ ಅಂಬುರೇ ರವರು ಹೊರಟಿದ್ದರು ಇನ್ನೊಂದು ಮೋಟರ ಸೈಕಲ್ ಮೇಲೆ ಸಂಗಮೇಶ ಜವಳಗೇರಾ ರವರು ಒಬ್ಬರೆ ಹೊರಟಿದ್ದರು ಸಂಗಮೇಶ ಜವಳಗೇರಾ ರವರದ್ದು ಹಿರೋ ಸ್ಪೆಲಂಡರ  ಪ್ರೋ ಮೊಟರ ಸೈಕಲ್ ನಂ ಕೆ.ಎ.28 ಇ.ಕೆ-0293 ನೇದ್ದು ಇದ್ದು ನಾನು ಸಂಗಮೇಶ ಜವಳಗೇರಾ ರವರು ಒಬ್ಬರೆ ಹೋಗುತ್ತಿರುವದನ್ನು ನೋಡಿ ನಮ್ಮ ತಂಗಿ ರುದ್ರಮ್ಮ ಗುರಿಕಾರ ವ:32 ವರ್ಷ ಇವಳನ್ನು ಸಂಗಮೇಶ ಜವಳಗೇರಾ ಇವರ ಮೊಟರ ಸೈಕಲ್ ಮೇಲೆ ಕೂಡಿಸಿ ಕಳುಹಿಸಿಕೊಟ್ಟೆನು ನಂತರ ನಾನು ಮುಂಜಾನೆ 10:00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಇದ್ದಾಗ ನಮ್ಮ ತಂಗಿಯ ಜೊತೆಗೆ ಶಾಲೆಗೆ ಹೊರಟಿದ್ದ ಮೈಹಿಬೂಬ ಗಡ್ಡಿ ರವರು ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ಹಾಗೂ  ನಮ್ಮೂರ ನಾಗೇಶ ಅಂಬೂರೆ ರವರು ನಮ್ಮ ಗಾಡಿಯ ಮೇಲೆ ಹೊರಟ್ಟಿದ್ದು ನಿಮ್ಮ ತಂಗಿ ರುದ್ರಮ್ಮ ಗುರಿಕಾರ ಹಾಗೂ ಸಂಗಮೇಶ ಜವಳಗೇರಾ ರವರು ಕುಳಿತು ಹೊರಟ್ಟಿದ್ದ ಮೋಟರ ಸೈಕಲನ್ನು ಸಂಗಮೇಶ ಜವಳಗೇರಾ ರವರು ತನ್ನ ಮೋಟರ ಸೈಕಲ್ಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಮುಂಜಾನೆ 9:30 ಗಂಟೆಯ ಸುಮಾರಿಗೆ ಎಣ್ಣಿವಡಗೇರಾ ಸೀಮಾಂತರದ ಹಣಮಪ್ಪ ತಂದೆ ಮಲ್ಲಪ್ಪ ಪೂಜಾರಿ ರವರ ಹೊಲದ ಹತ್ತಿರ ಮೋಟರ ಸೈಕಲ್ನ್ನು ಅಪಘಾತ ಪಡಿಸಿ ಸಂಗಮೇಶ ಜವಳಗೇರಾ ಈತನು ಮೋಟರ ಸೈಕಲ್ಲನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಇದರಿಂದ ಮೋಟರ ಸೈಕಲ್ ಹಿಂದೆ ಕುಳಿತಿದ್ದ ನಿಮ್ಮ ತಂಗಿಯು ಡಾಂಬರ ರಸ್ತೆಗೆ ತಲೆ ಕೆಳಗೆ ಮಾಡಿ ಬಿದ್ದಿದ್ದು  ನಿಮ್ಮ ತಂಗಿಗೆ ತಲೆಗೆ ಬಾರಿ ಗುಪ್ತಪೆಟ್ಟಾಗಿದ್ದು ನೀನೂ ಕೂಡಲೆ ಬರಬೇಕು ಅಂತಾ ತಿಳಿಸದನು ನಾನು ಕೂಡಲೆ ಒಂದು ಖಾಸಗಿವಾಹನವನ್ನು ತಗೆದುಕೊಂಡು  ಅಲ್ಲಿಗೆ ಬಂದು ಅಲ್ಲಿ ಇದ್ದ ಮೈಹಿಬೂಬ ಗಡ್ಡಿ ಹಾಗೂ ನಾಗೇಶ ಅಂಬುರೆ ರವರ ಸಹಾಯದಿಂದ ಅದರಲ್ಲಿ ನಮ್ಮ ನಮ್ಮ ತಂಗಿಯನ್ನು ಹಾಕಿಕೊಂಡು ಬಂದು ನನ್ನ ತಂಗಿ ರುದ್ರಮ್ಮಳನ್ನು ಉಪಚಾರ ಕುರಿತು ನಾಲತವಾಡ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿ ನಂತರ ಹೆಚ್ಚಿನ ಉಪಚಾರ ಕುರಿತು ಕುಮಾರೇಶ್ವರ ಆಸ್ಪತ್ರೆ ಬಾಗಲಕೋಟಕ್ಕೆ ಹೋಗಿ ಸೇರಿಕೆ ಮಾಡಿದ್ದು ನಮ್ಮ ತಂಗಿ ರುದ್ರಮ್ಮ ಗುರಿಕಾರ ವ:32 ವರ್ಷ ಇವಳು ದಿನಾಂಕ 07/01/2020 ರಿಂದ 15/01/2020 ರ ವರೆಗೆ ಉಪಚಾರ ಹೊಂದಿ ಇಂದು ದಿನಾಂಕ 15/01/2020 ರಂದು ಮುಂಜಾನೆ 10:15 ರಂದು ಉಪಚಾರ ಫಲಿಸದೆ ಮೃತಪಟ್ಟಿದ್ದು ಇರುತ್ತದೆ ದಿನಾಂಕ 07/01/2020 ರಂದು ನಾಲತವಾಡದ ವೈದ್ಯಾಧಿಕಾರಿಗಳು ನನ್ನ ತಂಗಿಗೆ ಪ್ರಥಮೋಚಾರ ಮಾಡಿ ಅಪಘಾತ ಸ್ಥಳವು ಮುದ್ದೆಬಿಹಾಳ ಪೊಲೀಸ್ ಠಾಣೆಗೆ ಬರುತ್ತದೆ ಎಂದು ನಾಲತವಾಡ ಉಪ ಠಾಣೆಗೆ ಮುಂದಿನ ಕ್ರಮಕ್ಕಾಗಿ ಮಾಹಿತಿ ನೀಡಿದ್ದು ಇಂದು ದಿನಾಂಕ 15/01/2020 ರಂದು ನಮ್ಮ ತಂಗಿಯು ಮೃತಪಟ್ಟಿದ್ದರಿಂದ ಕುಮಾರೇಶ್ವರ ಆಸ್ಪತ್ರೆ ಬಾಗಲಕೋಟ ದಿಂದ ಮುದ್ದೆಬಿಹಾಳ ಪೊಲೀಸ್ ಠಾಣೆಗೆ ಮುಂದಿನ ಕ್ರಮಕ್ಕಾಗಿ ಮಾಹಿತಿ ನೀಡಿದ್ದು ಮುದ್ದೆಬಿಹಾಳ ಪೊಲೀಸ್ರು ಅಪಘಾತ ಸ್ಥಳವು  ನಾರಾಯಣಪೂರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತಿದ್ದೆ ಅಂತಾ ತಿಳಿಸಿದ್ದರಿಂದ ನಾನು ಇಂದು ನಾರಾಯಣಪೂರ ಪೊಲೀಸ್ ಠಾಣೆಗೆ ಬಂದು ಪಿಯರ್ಾದಿ ನೀಡುತ್ತಿದ್ದು ಆದ್ದರಿಂದ ಅಪಘಾತ ಪಡಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲು ತಮ್ಮಲ್ಲಿ ವಿನಂತಿ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 03/2020 ಕಲಂ 279,304(ಎ) ಐಪಿಸಿ ಸಂಗಡ 187 ಐ.ಎಂ.ವಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 12/2020 ಕಲಂ 78(3) ಕೆ.ಪಿ ಎಕ್ಟ್  ;- ದಿನಾಂಕ.15/01/2020 ರಂದು 4-30 ಪಿಎಂಕ್ಕೆ ಶ್ರೀ ಕೃಷ್ಣ ಸುಬೇದಾರ ಪಿ.ಎಸ್.ಐ(ಅ.ವಿ) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆಯನ್ನು ತಮ್ಮ ಜ್ಞಾಪನಾ ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ.15/01/2020 ರಂದು 2-00 ಗಂಟೆ ಪಿಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಲಾಡೇಸಗಲ್ಲಿ ಬೀಟ್ ಸಿಬ್ಬಂದಿ ಶ್ರೀ ಎಮ್.ಹೆಚ್ ಹಣಮರೆಡ್ಡಿ ಹೆಚ್,ಸಿ 171 ರವರು ಯಾದಗಿರಿಯ ಹಳೆಯ ಬಸನಿಲ್ದಾಣದ ಹತ್ತಿರ ಲಾಡೇಸಗಲ್ಲಿಯ ವ್ಯಕ್ತಿಯೋಬ್ಬನು  ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಅಂಕಿಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ನಾನು ಸಿಬ್ಬಂದಿಯವರಿಗೆ ಮತ್ತು ಪಂಚರಿಗೆ ಬರಮಾಡಿಕೊಂಡು ಮಾಹಿತಿ ತಿಳಿಸಿ ಸಿಬ್ಬಂದಿಯವರು ಹಾಗೂ ಇಬ್ಬರೂ ಪಂಚರನ್ನು ಕರೆದುಕೊಂಡು ದಾಳಿ ಕುರಿತು ಠಾಣೆಯಿಂದ 2-35 ಪಿ.ಎಮ್ ಕ್ಕೆ ಹೋರಟು ಸ್ಥಳಕ್ಕೆ ಹೋಗಿ ನೋಡಿ ಖಾತ್ರಿ ಪಡಿಸಿಕೊಂಡು 3-00 ಪಿ.ಎಂಕ್ಕೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಚಾರಿಲಾಗಿ ಅನೀಲ ತಂದೆ ಸುರೇಶ ಮುರೆಡೆ ವಯಾ: 29 ಉ: ಪಾನಶಾಪ ಜಾತಿ: ಮರಾಠ ಸಾ: ಲಾಡೇಸ್ ಗಲ್ಲಿ ಯಾದಗಿರಿ ಅಂತಾ ತಿಳಿಸಿದ್ದು ಸದರಿಯವನಿಗೆ ಚೆಕ್ ಮಾಡಲು 1) 320-00 ರೂ ನಗದು ಹಣ. 2) ಒಂದು ಮಟಕಾ ಚೀಟಿ ಅಂ.ಕಿ.00=00 ರೂ.  3) ಒಂದು ಬಾಲಪೆನ ಅಂ.ಕಿ.00=00 ರೂ. ಸಿಕ್ಕಿದ್ದು, ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ನಮ್ಮ ತಾಬೆಗೆ ತೆಗೆದುಕೊಂಡು. ಜಪ್ತಿ ಪಂಚನಾಮೆಯನ್ನು 3-00ಪಿ.ಎಂ ದಿಂದ 4-00 ಪಿ.ಎಂ ದವರೆಗೆ ಮುಗಿಸಿ ನಂತರ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಯಾದಗಿರಿ ನಗರ ಪೊಲೀಸ್ ಠಾಣೆಗೆ 4-30 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರ ನೀಡಿ, ಜಪ್ತಿ ಪಂಚನಾಮೆ, ಮುದ್ದೆ ಮಾಲು ಮತ್ತು ಆರೋಪಿಯನ್ನು ಹಾಜರುಪಡಿಸುತ್ತಿದ್ದು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಕ್ರಮ ಕೈಕೊಳ್ಳಲು ಸೂಚಿಸಿದ್ದರ ಮೇಲಿಂದ ಪಿಸಿ 398 ರವರು 6-30 ಪಿಎಂಕ್ಕೆ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 6-45 ಪಿ.ಎಮ್ ಕ್ಕೆ ಪರವಾನಿಗೆಯನ್ನು ತಂದು ಹಾಜರುಪಡಿಸಿದ್ದು ನ್ಯಾಯಾಲಯದ ಪರವಾನಿಗೆ ಮೇಲಿಂದ ಠಾಣೆ ಗುನ್ನೆ ನಂ. 12/2020 ಕಲಂ.78(3) ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 16/2020 ಕಲಂ  87 ಕೆ.ಪಿ. ಕಾಯ್ದೆ  ;- ದಿನಾಂಕ: 15/01/2020 ರಂದು 1-30 ಪಿ.ಎಮ್. ಕ್ಕೆ ಶ್ರೀ ಆನಂದರಾವ್ ಪಿ.ಐ  ಸಾಹೇಬರು 6 ಜನ ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ , ಇಂದು ದಿನಾಂಕ:15-01-2020 ರಂದು 11-45 ಎ.ಎಂ. ಸುಮಾರಿಗೆ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ತಿಂಥಣಿ ಗ್ರಾಮದ ಶ್ರೀ ಹನುಮಾನ ದೇವರ  ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಮೇಲೆ ಹೇಳಿದ ಸದರಿ ಆರೋಪಿತರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವಾಗ ದಾಳಿ ಮಾಡಿ 6 ಜನ ಆರೋಪಿತರೊಂದಿಗೆ ಠಾಣೆಗೆ ಬಂದು ವರದಿ ನಿಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ 
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ:- 06/2020 ಕಲಂ 32, 34 ಕೆ.ಇ. ಆ್ಯಕ್ಟ;- ದಿನಾಂಕ 15/01/2020 ರಂದು 8-15 ಪಿ.ಎಂ. ಕ್ಕೆ ಶ್ರೀ ಸದಾಶಿವ ಸೋನಾವಣೆ ಪಿ.ಐ. ಡಿ.ಸಿ.ಐ.ಬಿ ಘಟಕ ಯಾದಗಿರಿ ಇವರು ಠಾಣೆಗೆ ಬಂದು ವರದಿ, ಮುದ್ದೆಮಾಲು, ನಗದು ಹಣ ಮತ್ತು ಒಬ್ಬ ಆರೋಪಿ ತಂದು ಹಾಜರಪಡಿಸಿದ್ದು, ಸದರಿ ವರದಿ ಸಾರಾಂಶವೆನೆಂದರೆ ಇಂದು ದಿನಾಂಕ 15-01-2020 ರಂದು 6-00 ಪಿ.ಎಂ ಕ್ಕೆ ನಾನು  ಡಿ.ಪಿ.ಓ ದಲ್ಲಿದ್ದಾಗ ಮಾನ್ಯ ಎಸ.ಪಿ ಸಾಹೇಬರು ಯರಗೋಳ ಗ್ರಾಮದಲ್ಲಿ ಅಂಗಡಿಯಲ್ಲಿ ಸರಾಯಿ ಮಾಡುತ್ತಿದ್ದಾರೆ ಅಂತಾ ಭಾತ್ಮಿ ಬಂದ ಮೇರೆಗೆ ಮಾನ್ಯ ಎಸ.ಪಿ ಸಾಹೇಬರ ಮಾರ್ಗದರ್ಶನದಲ್ಲಿ ನಾನು ಸದಾಶಿವ ಸೊನಾವಣೆ ಪಿ.ಐ ಡಿ.ಸಿ.ಐ.ಬಿ ಮತ್ತು ಶಿವರಾಜ ಆರ್.ಎಸ.ಐ ಡಿ.ಎ.ಆರ್ ಹಾಗೂ ಸಿಬ್ಬಂದಿ ಜನರಾದ ಮಹಾಂತೇಶ ಕೋನಾಡಿ ಎ.ಪಿ.ಸಿ-95 ಹಾಗೂ ಇತರರು ಕೂಡಿಕೊಂಡು ಸರಕಾರಿ ಜೀಪ ನಂ ಕೆಎ- 33 ಜಿ-127 ನೇದ್ದರಲ್ಲಿ ಕುಳಿತುಕೊಂಡು ಮಾನ್ಯರವರ ಆದೇಶದಂತೆ 6-15 ಪಿ.ಎಮ ಕ್ಕೆ ಯಾದಗಿರಿ ಬಿಟ್ಟು ಯರಗೋಳ ಗ್ರಾಮಕ್ಕೆ 6-50 ಪಿ.ಎಮ ಕ್ಕೆ  ಯರಗೋಳ ಗ್ರಾಮಕ್ಕೆ ತಲುಪಿ ಮಲ್ಲಣ್ಣ ತಂದೆ ನಿಂಗಾರಡ್ಡಿ ಮಾನೇಗಾರ ಸಾ:ಯರಗೋಳ ಈತನು  ತನ್ನ ಅಂಗಡಿಯಲ್ಲಿ ಮುಂದೆ ಅನಧಿಕೃತವಾಗಿ  ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದನು. ಸದರಿಯವನಿಗೆ ಹಿಡಿದುಕೊಂಡು ಅವನಿಗೆ ನಿನ್ನ ಹತ್ತಿರ ಮಾರಾಟ ಮಾಡಲಿಕ್ಕೆ ಲೈಸನ್ಸ ಸರಕಾರದಿಂದ ಪರವಾನಿಗೆ ಪಡೆದುಕೊಂಡಿಯಾ ಅಂತಾ ಕೇಳಲಾಗಿ ಸದರಿಯವನು ಯಾವದೇ ರೀತಿ ಅನುಮತಿ ಇಲ್ಲದೇ ನಾನು ಅನಧೀಕೃತವಾಗಿ ಮಧ್ಯ ಮಾರಾಟ ಮಡುತ್ತಿದ್ದೇನೆ ಅಂತಾ ಅನ್ನಲು ಸದರಿಯವನಿಗೆ ಸ್ಥಳದಲ್ಲಿ ಹಿಡಿದುಕೊಂಡು ಅವನ ಹತ್ತಿರ ಇದ್ದ 4500/ರೂ ಹಾಗೂ 12085/ರೂ ಕಿಮ್ಮತ್ತಿನ ವಿವಧ ನಮೂನೆಯ ಮಧ್ಯದ ಬಾಟಲಿ ಮತ್ತು ಪಾಕೇಟಗಳನ್ನು ವಶಪಡಿಸಿಕೊಂಡ ಮಧ್ಯದ ಬಾಟಲಿ & ಪಾಕೇಟಗಳು ಹಾಗೂ ಸದರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಮುಂದಿನ ಕ್ರಮಕ್ಕಾಗಿ ತಮ್ಮ ಬಳಿಗೆ ಒಪ್ಪಿಸಲಾಗಿದೆ. ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 06/2020 ಕಲಂ 32, 34 ಕೆ.ಈ. ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ:- 07/2020 ಕಲಂ 32, 34 ಕೆ.ಇ. ಆ್ಯಕ್ಟ;- ದಿನಾಂಕ 15/01/2020 ರಂದು 8-30 ಪಿ.ಎಂ. ಕ್ಕೆ ಶ್ರೀ ಸದಾಶಿವ ಸೋನಾವಣೆ ಪಿ.ಐ. ಡಿ.ಸಿ.ಐ.ಬಿ ಘಟಕ ಯಾದಗಿರಿ ಇವರು ಠಾಣೆಗೆ ಬಂದು ವರದಿ, ಮುದ್ದೆಮಾಲು, ನಗದು ಹಣ ಮತ್ತು ಒಬ್ಬ ಆರೋಪಿ ತಂದು ಹಾಜರಪಡಿಸಿದ್ದು, ಸದರಿ ವರದಿ ಸಾರಾಂಶವೆನೆಂದರೆ ಇಂದು ದಿನಾಂಕ 15-01-2020 ರಂದು 6-00 ಪಿ.ಎಂ ಕ್ಕೆ ನಾನು  ಡಿ.ಪಿ.ಓ ದಲ್ಲಿದ್ದಾಗ ಮಾನ್ಯ ಎಸ.ಪಿ ಸಾಹೇಬರು ಯರಗೋಳ ಗ್ರಾಮದಲ್ಲಿ ಅಂಗಡಿಯಲ್ಲಿ ಸರಾಯಿ ಮಾಡುತ್ತಿದ್ದಾರೆ ಅಂತಾ ಭಾತ್ಮಿ ಬಂದ ಮೇರೆಗೆ ಮಾನ್ಯ ಎಸ.ಪಿ ಸಾಹೇಬರ ಮಾರ್ಗದರ್ಶನದಲ್ಲಿ ನಾನು ಸದಾಶಿವ ಸೊನಾವಣೆ ಪಿ.ಐ ಡಿ.ಸಿ.ಐ.ಬಿ ಮತ್ತು ಶಿವರಾಜ ಆರ್.ಎಸ.ಐ ಡಿ.ಎ.ಆರ್ ಹಾಗೂ ಸಿಬ್ಬಂದಿ ಜನರಾದ ಮಹಾಂತೇಶ ಕೋನಾಡಿ ಎ.ಪಿ.ಸಿ-95 ಹಾಗೂ ಇತರರು ಕೂಡಿಕೊಂಡು ಸರಕಾರಿ ಜೀಪ ನಂ ಕೆಎ- 33 ಜಿ-127 ನೇದ್ದರಲ್ಲಿ ಕುಳಿತುಕೊಂಡು ಮಾನ್ಯರವರ ಆದೇಶದಂತೆ 6-15 ಪಿ.ಎಮ ಕ್ಕೆ ಯಾದಗಿರಿ ಬಿಟ್ಟು ಯರಗೋಳ ಗ್ರಾಮಕ್ಕೆ 6-50 ಪಿ.ಎಮ ಕ್ಕೆ  ಯರಗೋಳ ಗ್ರಾಮಕ್ಕೆ ತಲುಪಿ ಮಲ್ಲಣ್ಣ ತಂದೆ ನಿಂಗಾರಡ್ಡಿ ಮಾನೇಗಾರ ಸಾ:ಯರಗೋಳ ಈತನ ಅಂಗಡಿ ಮೇಲೆ ದಾಳಿ ಮಾಡಿದ ನಂತರ ಅದೇ ಗ್ರಾಮದ ಬಸವರಾಜ ತಂದೆ ಚಂದಯ್ಯ ಕಟ್ಟಿಮನಿ ಎಂಬುವನು ಕೂಡಾ ಕಿರಾಣಿ ಅಂಗಡಿಯ ಮುಂದೆ ಅನಧಿಕೃತವಾಗಿ  ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬರಲು ಅಲ್ಲಿಯೂ ಸಹ 7-15 ಪಿ.ಎಮ ಕ್ಕೆ  ದಾಳಿ ಮಾಡಿ ಅವನಿಗೂ ಸಹ ವಿಚಾರಿಸಲಾಗಿ ಅವನಿಗೂ ಸಹ ಮಾರಾಟ ಮಾಡಲಿಕ್ಕೆ ಲೈಸನ್ಸ ಸರಕಾರದಿಂದ ಪರವಾನಿಗೆ ಪಡೆದುಕೊಂಡಿಯಾ ಅಂತಾ ಕೇಳಲಾಗಿ ಸದರಿಯವನು ಯಾವದೇ ರೀತಿ ಅನುಮತಿ ಇಲ್ಲದೇ ನಾನು ಅನಧೀಕೃತವಾಗಿ ಮಧ್ಯ ಮಾರಾಟ ಮಡುತ್ತಿದ್ದೇನೆ ಅಂತಾ ಅನ್ನಲು ಸದರಿಯವನಿಗೆ ಸ್ಥಳದಲ್ಲಿ ಹಿಡಿದುಕೊಂಡು ಅವನ ಹತ್ತಿರ ಇದ್ದ 4395/ರೂ ಕಿಮ್ಮತ್ತಿನ ವಿವಧ ನಮೂನೆಯ ಮಧ್ಯದ ಬಾಟಲಿ ಮತ್ತು ಪಾಕೇಟಗಳನ್ನು ವಶಪಡಿಸಿಕೊಂಡ ಮಧ್ಯದ ಬಾಟಲಿ & ಪಾಕೇಟಗಳು ಮತ್ತು  ಸದರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಮುಂದಿನ ಕ್ರಮಕ್ಕಾಗಿ ತಮ್ಮ ಬಳಿಗೆ ಒಪ್ಪಿಸಲಾಗಿದೆ. 
. ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 07/2020 ಕಲಂ 32, 34 ಕೆ.ಈ. ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!