ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 12-01-2020

By blogger on ಭಾನುವಾರ, ಜನವರಿ 12, 2020


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 12-01-2020 
ಯಾದಗಿರಿ ಗ್ರಾ ಪೊಲೀಸ್ ಠಾಣೆ:- 05/2020 ಕಲಂ 447,427,324, 504, 506  ಐಪಿಸಿ;- ದಿನಾಂಕ 12-01-2020 ರಂದು 10-25 ಎ.ಎಮ್ ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಲಿ ಶ್ರೀ ರಾಮಪ್ರಕಾಶ ತಂದೆ ಶ್ರೀ ಶಿವಸಾಯಿ ಯಾಧವ ವಯಾ; 25 ಉ: ಹಿತಾಚಿ ಆಪರೇಟರ ಸಾ: ಲಖನಾಹಟ್ ತಾ: ಬಾದವಪೂರ ಜಿಲ್ಲಾ: ಬಸ್ತಿ ಉತ್ತರಪ್ರದೇಶ ರಾಜ್ಯ ಹಾ:ವ: ಹಳಗೇರಾ ಮೈಲಾರಲಿಂಗೇಶ್ವರ ಖ್ವಾರಿ ತಾ:ಜಿ: ಯಾದಗಿರಿ ಇವರು ಹೇಳಿಕೆಯನ್ನು ನೀಡಿದ್ದು ಅದರ ಸಾರಂಶವೆನೆಂದರೆ ದಿನಾಂಕ 11-01-2020 ರಂದು ನಾನು ಬೆಳಗ್ಗೆಯವರಗೆ ಖ್ವಾರಿಯಲ್ಲಿ ಕೆಲಸ ಮಾಡಿದಾಗ ನಮ್ಮ ಖ್ವಾರಿಯ ಸುಪವೈಜರರಾದ ನಾಗಪ್ಪಾ ಇವರು ನಾಳೆಯಿಂದ ಮೈಲಾಪೂರ ಗ್ರಾಮದಲ್ಲಿ ಮಲ್ಲಯ್ಯನ ಜಾತ್ರೆ ಆರಂಭವಾಗುತ್ತಿದ್ದರಿಂದ ಇವತ್ತು ರಾತ್ರಿ 12 ಗಂಟೆಯವರೆಗೆ ಕೆಲಸ ಮಾಡಬೇಕು ಅಂತಾ ಹೇಳಿದ್ದರಿಂದ ನಾನು ನನ್ನ ಹಿತಾಚಿಯಿಂದ ಖ್ವಾರಿಯಲ್ಲಿದ್ದ ದೊಡ್ಡ ಕಲ್ಲುಗಳನ್ನು ಪುಡಿ ಮಾಡುತ್ತಿದ್ದೆನು. ಆಗ ಸಮಯ ರಾತ್ರಿ 11 ಗಂಟೆಯಾಗಿತ್ತು ಆ ವೇಳೆಯಲ್ಲಿ ಹಳಗೇರಾ ಗ್ರಾಮದ ಮಲ್ಲಣ್ಣಗೌಡ ತಂದೆ ಸಣ್ಣಸಾಹೇಬಗೌಡ ಮಾಲೀಪಾಟೀಲ್ ಇವರು ನಮ್ಮ ಖ್ವಾರಿಯಲ್ಲಿ ಚೀರಾಡಿ ಬೈದಾಡುತ್ತಾ ಅತೀಪ್ರಕ ಪ್ರವೇಶ ಮಾಡಿ ನಮಗೆಲ್ಲರಿಗೆ ಏ ಭೋಸಡಿ ಮಕ್ಕಳೇ ಇಲ್ಲಿ ಏನು ಮಾಡುತ್ತಿದ್ದ್ದಿರಿ ನಿಮ್ಮ ಖ್ವಾರಿಯಿಂದ ನಮ್ಮ ಹೋಲಗಳು ಹಾಳಾಗುತ್ತಿವೆ ಕೆಲಸ ಬಂಧ್ ಮಾಡಿರಿ ಅಂತಾ ಕೈಯಲ್ಲಿ ಕಲ್ಲು ಹಿಡಿದುಕೊಂಡು ಬಂದನು. ಆಗ ನನ್ನ ಜೋತೆಯಲ್ಲಿದ್ದ ನಾಗಪ್ಪಾ ತಂದೆ ಭೀಮರಾಯ ಚಪಾಟಿ ಇತನು ಸುಪರವೈಜರ್ ಅಂತಾ, ಹಾಗೂ ಅಶೋಕ ತಂದೆ ಬಸಣ್ಣಾ ಇವರು ಮ್ಯಾನೇಜರ ಮತ್ತು ಬಸವರಾಜ ತಂದೆ ಗೌರಪ್ಪಾ ಹೆಡಗಿಮುದ್ರಾ ಇವರೆಲ್ಲರೂ ಆತನಿಗೆ ನಾವು ನಮ್ಮ ಖ್ವಾರಿಯಲ್ಲಿಯೇ ಕೆಲಸ ಮಾಡುತ್ತಿದ್ದೆವೆ ಇಲ್ಲಿ ನಿಮ್ಮ ಹೋಲ ಕೂಡಾ ಇಲ್ಲಾ ನಿಮಗೆ ಹೇಗೆ ತೊಂದರೆಯಾಗುತ್ತದೆ ಮೇಲಾಗಿ ನಾವು ಬೇರೆಯವರಿಗೆ ತೊಂದರೆಯಾಗುವಂತಹ ಕೆಲಸ ಮಾಡುತ್ತಿಲ್ಲಾ ಅಂತಾ ಅವರಿಗೆ ತಿಳಿಸಿ ಹೇಳಿದಾಗ ಆತನು ನಮಗೆ ಎದರುಮಾತಾಡುತ್ತಿರಿ ಭೋಸಡಿ ಮಕ್ಕಳೆ ಅಂತಾ  ತಮ್ಮ ಕೈಯ್ಯಲ್ಲಿದ್ದ ಕಲ್ಲಿನಿಂದ ಹಿತಾಚಿ ಮಶೀನಕ್ಕೆ ಜೋರಾಗಿ ಹೋಡೆದಾಗ ಅದರ ಗ್ಲಾಸುಗಳು ಒಡೆದು ಕಲ್ಲಿನ ಏಟು ನನ್ನ ತೆಲೆಗೆ ಬಿದ್ದು ನನ್ನ ಎಡಗಡೆ ತೆಲೆಗೆ ರಕ್ತಗಾಯವಾಯಿತು. ಆಗ ನಾವೇಲ್ಲರೂ ಹೀಗೇಲ್ಲಾ ಮಾಡುವುದು ಸರಿಯಲ್ಲಾ ಅಂತಾ ಅಂದಾಗ ಮಕ್ಕಳೇ ನಮಗೆ ಎದುರು ಮಾತಾಡುತ್ತಿರಿ ಅಂತಾ ಮತ್ತೆ ಕಲ್ಲಿನಿಂದ ಹಿತಾಚಿ ಮಶಿನಕ್ಕೆ ಹೊಡೆದು ನಾಲ್ಕು ಕಡೆಯ ಗ್ಲಾಸುಗಳು ಒಡೆದು ಹೋದವು, ಆದರೂ ಕೂಡಾ ನಾನು ನನ್ನಷ್ಟಕ್ಕೆ ಕೆಲಸ ಮಾಡುವಾಗ ಮಲ್ಲಣಗೌಡ ಇತನು ಮತ್ತೊಂದು ಕಲ್ಲಿನಿಂದ ಜೋರಾಗಿ ನನಗೆ ಹೊಡೆದಾಗ ಆ ಕಲ್ಲು ನನ್ನ ಬಲರಟ್ಟೆಗೆ ಬಡಿದು ಗುಪ್ತಗಾಯವಾಯಿತು. ಆದರೂ ನಮ್ಮ ಖ್ವಾರಿಯಲ್ಲಿದ್ದ ನಾಗಪ್ಪಾ ತಂದೆ ಭೀಮರಾಯ ಚಪಾಟಿ ಇತನು ಸುಪರವೈಜರ್ ಅಂತಾ, ಹಾಗೂ ಅಶೋಕ ತಂದೆ ಬಸಣ್ಣಾ ಇವರು ಮ್ಯಾನೇಜರ ಮತ್ತು ಬಸವರಾಜ ತಂದೆ ಗೌರಪ್ಪಾ ಹೆಡಗಿಮುದ್ರಾ ಎಲ್ಲರೂ ಕೂಡಿ ಆತನಿಗೆ ಸಮುಜಾಯಿಸಿ ಕಳಿಸುತ್ತಿದ್ದಾಗ ಆತನು ಇನ್ನೊಮ್ಮೇ ಸಿಗರು ಸೂಳೆ ಮಕ್ಕಳೇ ನಿಗೆ ಒಬ್ಬೊಬ್ಬರಿಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿ ಹೋದನು. ನಂತರ ನಾನು ಇಂದು ಬೇಳಗ್ಗೆ ನಾನು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೆನೆ. ಈ ರೀತಿಯಾಗಿ ನಮ್ಮ ಕ್ವಾರಿಯಲ್ಲಿ ಅತೀಕ್ರಮ ಪ್ರವೇಶ ಮಾಡಿ ಕಲ್ಲಿನಿಂದ ನನಗೆ ಹೊಡೆದು ರಕ್ತಗಾಯ, ಗುಪ್ತಗಾಯಗೊಳಿಸಿದ್ದು ಮತ್ತು ಕಲ್ಲಿನಿಂದ ನಮ್ಮ ಹಿತಾಚಿ ಮಶೀನಕ್ಕೆ ಹೊಡೆದು ಗ್ಲಾಸ ಒಡೆದು ಲುಕ್ಸಾನ ಮಾಡಿದ್ದಲ್ಲದೇ ನಮಗೆ ಅವಾಚ್ಯವಾಗಿ ಬೈದು ಜೀವದ ಭಯ ಹಾಕಿದ ಹಳಗೇರಾ ಗ್ರಾಮದ ಮಲ್ಲಣ್ಣಗೌಡ ತಂದೆ ಸಣ್ಣಸಾಹೇಬಗೌಡ ಮಾಲೀಪಾಟೀಲ ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ: 05/2020 ಕಲಂ 447, 427, 324, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು. 


ಶಹಾಪೂರ ಪೊಲೀಸ್ ಠಾಣೆ. ಗುನ್ನೆ ನಂ:- 16/2020. ಕಲಂ 87 ಕೆ.ಪಿ.ಆಕ್ಟ;- ದಿನಾಂಕ: 12-01-2020 ರಂದು 3:35 ಗಂಟೆಗೆ ಹಳಿಸಗರ ಸಗರ ಏರಿಯಾದ ಹತ್ತಿರ ಶಿರವಾಳ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಇಸ್ಪೀಟ ಜೂಜಾಟ ಆಡುತ್ತಿದ್ದಾಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಅವರಿಂದ ಒಟ್ಟು 3250 ರೂ. ನಗದು ಹಣ ಮತ್ತು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯು ಅ ಸಂಜ್ಞೇಯ ವಾಗಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 6:00 ಪಿ.ಎಮ್.ಕ್ಕೆ ಠಾಣೆ ಗುನ್ನೆ ನಂ. 16/2020 ಕಲಂ.87 ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಇಸಿಕೊಂಡು ತನಿಖೆ ಕೈಗೊಂಡೆಎನು.


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 15/2020 ಕಲಂ 279,  338 ಐಪಿಸಿ  ;- ದಿನಾಂಕ:12/01/2020 ರಂದು 01:00 ಪಿ.ಎಂ. ಕ್ಕೆ ಠಾಣೆಯಎಸ್.ಹೆಚ್ಡಿಕರ್ತವ್ಯದಲ್ಲಿದ್ದಾಗ ಶ್ರೀ ಭೀಮಪ್ಪತಂದೆ ಹಣಮಂತ ಬಂಕೂರ ಸಾ|| ಮಂಡಗಳ್ಳಿ ತಾ|| ಶಹಾಪೂರಇವರುಠಾಣೆಗೆ ಹಾಜರಾಗಿಒಂದುಕನ್ನಡದಲ್ಲಿಟೈಪ್ ಮಾಡಿಸಿದ ದೂರುಅಜರ್ಿಯ ಸಾರಾಂಶವೆನೆಂದರೆಇಂದು ದಿನಾಂಕ; 12-01-2020 ರಂದು ಮುಂಜಾನೆ 10:00 ಎ.ಎಂ ಕ್ಕೆ ನಮ್ಮದೊಡ್ಡಮ್ಮ ಶಾಂತಮ್ಮ ಮತ್ತು ನಮ್ಮತಮ್ಮ ಮರೆಪ್ಪತಂದೆ ಹಣಮಂತ ಬಂಕೂರಇಬ್ಬರುಕೂಡಿರೇಶನ್ತಗೆದುಕೊಂಡು ಬರಲು ಹಿರೊ ಮೋಟರ ಸೈಕಲ್ ನಂ. ಕೆಎ-33 ವಾಯ್-3870 ನೇದ್ದರ ಮೇಲೆ ಶಾರದಳ್ಳಿ ಗ್ರಾಮಕ್ಕೆ ಹೊಗುತ್ತೇವೆಎಂದು ಹೇಳಿ ಹೊರಟರು, ನಾನು ಮತ್ತು ನನ್ನ ಗೆಳೆಯನಾದ ಶಿವರಾಯ ತಂದೆ ನಿಂಗಪ್ಪಗುಡಿಮನಿ ಇಬ್ಬರುಕೂಡಿ ಸುರಪೂರದಲ್ಲಿ ಕೆಲಸ ವಿದ್ದಕಾರಣಅವರ ಮೋಟರ ಸೈಕಲ್ ಹಿಂದೆ ಶಾರದಳ್ಳಿ ಕ್ರಾಸ್ ಹತ್ತಿರ ಹೊಗುತ್ತಿದ್ದಾಗ 10:20 ಎ.ಎಂ ಸುಮಾರಿಗೆ ನಮ್ಮ ಮುಂದೆ ನಮ್ಮತಮ್ಮ ಮರೆಪ್ಪ ಮತ್ತು ನಮ್ಮದೊಡ್ಡಮ್ಮ ಶಾಂತಮ್ಮಇಬ್ಬರುಕೂಡಿ ಮೋಟರ್ ಸೈಕಲ್ ಮೇಲೆ ಹೊರಟಿದ್ದು, ಸುರಪುರ-ಶಹಾಪೂರ ಮುಖ್ಯರಸ್ತೆಯ ಬಿಜಾಸಾಪೂರಗ್ರಾಮದ ಶಾರದಳ್ಳಿ ಕ್ರಾಸ ಹತ್ತಿರ ಸುರಪೂರಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ತನ್ನ ಬಸ್ನ್ನುಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದು ಶಾರದಳ್ಳಿ ಕ್ರಾಸ್ಕಡೆಗೆ ಹೊಳ್ಳುತಿದ್ದ ನಮ್ಮತಮ್ಮನ ಮೋಟರ್ ಸೈಕಲ್ಗೆ ಡಿಕ್ಕಿಪಡಿಸಿದರ ಪರಿಣಾಮ ಮೋಟರ ಸೈಕಲ್ ಸಮೇತ ನಮ್ಮತಮ್ಮ ಮತ್ತುದೊಡ್ಡಮ್ಮಇಬ್ಬರು ಕೆಳಗೆ ಬಿದ್ದರು. ನಮ್ಮದೊಡ್ಡಮ್ಮ ಶಾಂತಮ್ಮಳಿಗೆ ನೋಡಲಾಗಿ ಅವಳಿಗೆ ಎಡ ಮತ್ತು ಬಲ ಗಾಲ ಮೋಳಕಾಲ ಕೆಳಗೆ ಎರಡು ಕಾಲು ಮುರಿದಂತಾಗಿದ್ದು, ಬಲಗಾ ಮೊಳಕಾಲ ಕೆಳಗೆ ರಕ್ತಗಾಯ ವಾಗಿ, ಬಲ ಕಪಾಳಕ್ಕೆ ತರಚಿದಗಾಯವಾಗಿರುತ್ತದೆ. ನಮ್ಮತಮ್ಮ ಮರೆಪ್ಪನಿಗೆಯಾವುದೇಗಾಯ ವಾಗಿರುವದಿಲ್ಲ. ಬಸ್ ನೋಡಲಾಗಿ ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ-38 ಎಫ್-1126 ಇದ್ದು ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿತನ್ನ ಹೆಸರುಜೈಭೀಮತಂದೆ ಶರಣಪ್ಪ ನೌಬಾದೆ ವ|| 34 ವರ್ಷಜಾ|| ಹೊಲೆಯ ಉ|| ಕೆ.ಎಸ್.ಆರ್.ಟಿ.ಸಿ ಚಾಲಕ ಮತ್ತು ನಿವರ್ಾಹಕ (ಬಿದರಘಟಕ ನಂ.01) ಸಾ|| ಜೋಜ್ನಾತಾ|| ಔರಾಧ ಜಿ|| ಬಿದರ  ಹೇಳಿದನು. ನಂತರ ನಾನು ನಮ್ಮ ದೊಡ್ಡಮ್ಮಳಿಗೆ 108 ವಾಹನದಲ್ಲಿ ಹಾಕಿಕೊಂಡು ಸರಕಾರಿಆಸ್ಪತ್ರೆ ಸುರಪುರಕ್ಕೆತಂದು ಸೇರಿಕೆ ಮಾಡಿದ್ದು, ಉಪಚಾರ ಮಾಡಿಸಿ ವೈದ್ಯಾದಿಕಾರಿಗಳ ಸಲಹೆ ಮೆರೆಗೆ ಹೆಚ್ಚಿನಉಪಚಾರಕುರಿತು ಕಲಬುರಗಿಗೆಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ. ಕಾರಣ ನಮ್ಮ ದೊಡ್ಡಮ್ಮಳಿಗೆ ಅಪಘಾತ ಮಾಡಿದ ಬಸ್ ನಂ. ಕೆಎ-38 ಎಫ್-1126 ನೇದ್ದರ ಚಾಲಕನ ಮೇಲ ಕಾನೂನು ಕ್ರಮಜರಿಗಸಲು ವಿನಂತಿಅಂತಾಅಜರ್ಿ ಸಾರಾಂಶದ ಮೇಲಿಂದಠಾಣಾಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದೆ


ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 11/2020 ಕಲಂ: 379 ಐಪಿಸಿ & 21(3),21(4),22 ಎಂಎಂಆರ್ಡಿಆಕ್ಟ ;- ದಿನಾಂಕ.12/01/2020 ರಂದು 4-45 ಪಿಎಂಕ್ಕೆ ಶ್ರೀ ಲಿಂಗರಾಜ ಭೂ ವಿಜ್ಞಾನಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಾದಗಿರಿ ರವರು ಒಂದು ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ,  ನಾನು ಲಿಂಗರಾಜ ತಂ. ಕುಪ್ಪೇರಾಯ ವಃ29 ಜಾಃ ವಡ್ಡರ ಉಃ ಭೂವಿಜ್ಞಾನಿ ಸಾಃ ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಾದಗಿರಿ ಈ ಮೂಲಕ ದೂರು ಸಲ್ಲಿಸುವುದೆನೆಂದರೆ, ಇಂದು ದಿನಾಂಕ.12/01/2020 ರಂದು ಬೆಳಿಗ್ಗೆ ಮಾನ್ಯ ಎಸ್.ಪಿ. ಸಾಹೇಬರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ಶ್ರೀ ಶರಣಗೌಡ ಶರಣಗೌಡ ನ್ಯಾಮಣ್ಣೊರ ಸಿ.ಪಿ.ಐ ಯಾದಗಿರಿ ವೃತ್ತ, ಶ್ರೀ ಸದಾಶಿವ ಅ ಸೊನೆವಾನೆ ಪಿ.ಐ ಡಿಸಿಐಬಿ ಘಟಕ, ಶಿವರಾಜ ಆರ್.ಎಸ್.ಐ ಡಿ.ಎ.ಆರ್ ಘಟಕ ಯಾದಗಿರಿ, ಲಿಂಗರಾಜ ಭೂ ವಿಜ್ಞಾನಿಗಳು ಗಣಿ ಮತ್ತು ಭೂವಿಜ್ಞಾನಿ ಇಲಾಖೆ ಯಾದಗಿರಿ ಹಾಗೂ ಗೀರಿಶ ಕಂದಾಯ ನಿರೀಕ್ಷಕರು, ಮಲ್ಲಿಕಾಜರ್ುನ ಗ್ರಾಮ ಲೇಕ್ಕಿಗ ಯಾದಗಿರಿ(ಬಿ) ರವರು, ಹಾಗೂ ಪೊಲೀಸ್ ಸಿಬ್ಬಂದಿಯವರಾದ ಹಾಗೂ ಸಾಬರೆಡ್ಡಿ ಪಿಸಿ-379, ಈರಪ್ಪ ಪಿಸಿ-386 ಯಾದಗಿರಿ ನಗರ ಠಾಣೆ ರವರು ಹಾಗೂ ಇಬ್ಬರೂ ಪಂಚರಾದ 1. ಆನಂದ ತಂದೆ ಶರಣಪ್ಪ ಸೂಗುರ ವಃ21 ಜಾಃ ಕಬ್ಬಲಿಗ ಉಃ ಒಕ್ಕಲುತನ ಸಾಃ ಗಂಗಾನಗರ ಯಾದಗಿರಿ. 2. ಯೋಗಿ ತಂದೆ ಲಕ್ಷ್ಮಣ ಯಡ್ಡಳ್ಳಿ ವಃ21 ಜಾಃ ಕಬ್ಬಲಿಗ ಉಃ ಗೌಂಡಿಕೆಲಸ ಸಾಃ ಗಂಗಾನಗರ ಯಾದಗಿರಿ. ಕೂಡಿಕೊಂಡು ಯಾದಗಿರಿ(ಬಿ) ಗ್ರಾಮದ ಬಯಲು ಹನುಮಾನ ಗುಡಿಯ ಹತ್ತಿರ ಬರುವ ಕೆಲವು ಸವರ್ೆ ನಂಬರ ಪಟ್ಟೆದಾರರು ಹಳ್ಳದಿಂದ ನೈಸಗರ್ಿಕ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿರುತ್ತಾರೆ ಅಂತಾ ಮಾಹಿತಿ ಮೇರೆಗೆ ವೃತ್ತ ಕಛೇರಿಯಿಂದ ಸಕರ್ಾರಿ ವಾಹನಗಳಲ್ಲಿ ಹೊರಟು 11-45 ಎಎಂ ಕ್ಕೆ ಬಯಲು ಹನುಮಾನ ಮಂದಿರ ತಲುಪಿ ಎಲ್ಲರು ಗುಡಿಯ ಎದುರುಗಡೆ ನೋಡಲಾಗಿ ಮರಳಿನ ಗುಡ್ಡೆ ಹಾಕಿದ್ದು ಅಲ್ಲಿ ಯಾರು ಇರಲಿಲ್ಲ. ಹಾಜರಿದ್ದ ಕಂದಾಯ ಇಲಾಖೆ ಅಧಿಕಾರಿಗಳಿಂದ ಮತ್ತು ಗ್ರಾಮ ಲೇಕ್ಕಿಗರಿಂದ ಕಂದಾಯ ದಾಖಲೆಗಳ ಮೂಲಕ ಪರೀಶಿಲನೆ ಮಾಡಿದಾಗ ಸವರ್ೆ ನಂಬರ ತಿಳಿದುಕೊಳ್ಳಲಾಗಿ ಯಾದಗಿರಿ (ಬಿ) ಸೀಮಾಂತರದ ಸವರ್ೆ ನಂ.683/1 ಜಮೀನಿದ್ದು ಅದರ ಪಟ್ಟೆದಾರರು ಕಿಶೋರಚಂದ ತಂ. ಚಂಪಾಲಾಲ ಜೈನ್ ಇವರದಾಗಿರುತ್ತದೆ. ಸದರಿ ಜಮೀನಿನಲ್ಲಿ ಮರಳು ಶೇಖರಿಸಿದ್ದನ್ನು ಲಿಂಗಾರಾಜ ಭೂ ವಿಜ್ಞಾನಿರವರು ಅಳತೆ ಮಾಡಿ ನೋಡಲಾಗಿ ಅದರನ್ವಯ ಸದರ ಜಮೀನಿನಲ್ಲಿ 20 ಘನಮೀಟರ ಮರಳು ಶೇಖರಣೆ ಮಾಡಿರುವುದಾಗಿ ಕಂಡು ಬಂದಿತು ಸದರಿ ಮರಳಿನ ಅಂ.ಕಿ.16,000/-ರೂ. ಆಗಿರುತ್ತದೆ. ಸದರಿ ಪಟ್ಟೆದಾರರರು ಸಕರ್ಾರಕ್ಕೆ ಯಾವುದೇ ರಾಜದನ ಪಾವತಿಸದೆ ಅಕ್ರಮವಾಗಿ ಬಯಲು ಹನುಮಾನ ಮಂದಿರ ಪಕ್ಕದ ಹಳ್ಳದಿಂದ ನೈಸಗರ್ಿಕವಾದ ಮರಳನ್ನು ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿರುವುದಾಗಿ ತಿಳಿದು ಬಂದಿತು. ಸದರಿ ಜಮೀನಿನ ಪಂಚನಾಮೆಯನ್ನು 12-00 ಪಿಎಂದಿಂದ 1-00 ಪಿಎಂದವರೆಗೆ ಮಾಡಿ, ಅಲ್ಲಿಂದ ನಂತರ ಪಕ್ಕದಲ್ಲಿರುವ ಜಮೀನಿನಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವುದನ್ನು ನೋಡಲಾಗಿದ್ದು ನಾವೆಲ್ಲರು ಸೇರಿ ಮದ್ಯಾಹ್ನ 1-10 ಪಿಎಂಕ್ಕೆ ತಲುಪಿದೆವು ಸದರಿ ಜಮೀನಿನ ವಿವರಗಳನ್ನು ಕಂದಾಯ ಇಲಾಖೆಯವರಿಂದ ಮತ್ತು ಗ್ರಾಮ ಲೆಕ್ಕಿಗರಿಂದ ಕಂದಾಯ ದಾಖಲೆಗಳ ಮೂಲಕ ಪರೀಶಿಲನೆ ಮಾಡಿದಾಗ ಯಾದಗಿರಿ (ಬಿ) ಸೀಮಾಂತರದ ಸವರ್ೆ ನಂ.686 ಅಂತಾ ತಿಳಿದು ಬಂದಿದ್ದು ಪಟ್ಟೆದಾರರ ಹೆಸರು ಗೊತ್ತಾಗಿರುವುದಿಲ್ಲಾ. ಸದರಿ ಜಮೀನಿನಲ್ಲಿ ಮರಳು ಶೇಖರಿಸಿದ್ದನ್ನು ಲಿಂಗಾರಾಜ ಭೂ ವಿಜ್ಞಾನಿರವರು ಅಳತೆ ಮಾಡಿ ನೋಡಲಾಗಿ ಅದರನ್ವಯ ಸದರ ಜಮೀನಿನಲ್ಲಿ 41 ಘನಮೀಟರ ಮರಳು ಶೇಖರಣೆ ಮಾಡಿರುವುದಾಗಿ ಕಂಡು ಬಂದಿತು ಸದರಿ ಮರಳಿನ ಅಂ.ಕಿ.32,800/-ರೂ. ಆಗಿರುತ್ತದೆ. ಸದರಿ ಪಟ್ಟೆದಾರರರು ಸಕರ್ಾರಕ್ಕೆ ಯಾವುದೇ ರಾಜದನ ಪಾವತಿಸದೆ ಅಕ್ರಮವಾಗಿ ಬಯಲು ಹನುಮಾನ ಮಂದಿರ ಪಕ್ಕದ ಹಳ್ಳದಿಂದ ನೈಸಗರ್ಿಕವಾದ ಮರಳನ್ನು ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿರುವುದಾಗಿ ತಿಳಿದು ಬಂದಿತು. ಸದರಿ ಜಮೀನಿನ ಪಂಚನಾಮೆಯನ್ನು 1-10 ಪಿಎಂದಿಂದ 2-00 ಪಿಎಂದವರೆಗೆ ಮಾಡಿ ಅಲ್ಲಿಂದ ನಂತರ ಪಕ್ಕದಲ್ಲಿರುವ ಜಮೀನಿನಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವುದನ್ನು ನೋಡಲಾಗಿದ್ದು ನಾವೆಲ್ಲರು ಸೇರಿ ಮದ್ಯಾಹ್ನ 2-10 ಪಿಎಂಕ್ಕೆ ತಲುಪಿದೆವು ಸದರಿ ಜಮೀನಿನ ವಿವರಗಳನ್ನು ಕಂದಾಯ ಇಲಾಖೆೆಯವರಿಂದ ಮತ್ತು ಗ್ರಾಮ ಲೆಕ್ಕಿಗರಿಂದ ಕಂದಾಯ ದಾಖಲೆಗಳ ಮೂಲಕ ಪರೀಶಿಲನೆ ಮಾಡಿದಾಗ ಯಾದಗಿರಿ (ಬಿ) ಸೀಮಾಂತರದ ಸವರ್ೆ ನಂ.693/1 ಅಂತಾ ತಿಳಿದು ಬಂದಿದ್ದು ಪಟ್ಟೆದಾರರ  ಹೆಸರು ಮಹಮ್ಮದ ಖಾಸಿಂ ತಂ. ಅಲೀಸಾಬ ಯಾದಗಿರಿ ಸದರಿ ಜಮೀನಿನಲ್ಲಿ ಮರಳು ಶೇಖರಿಸಿದ್ದನ್ನು ಲಿಂಗಾರಾಜ ಭೂ ವಿಜ್ಞಾನಿರವರು ಅಳತೆ ಮಾಡಿ ನೋಡಲಾಗಿ ಅದರನ್ವಯ ಸದರ ಜಮೀನಿನಲ್ಲಿ 73 ಘನಮೀಟರ ಮರಳು ಶೇಖರಣೆ ಮಾಡಿರುವುದಾಗಿ ಕಂಡು ಬಂದಿತು ಸದರಿ ಮರಳಿನ ಅಂ.ಕಿ.58,400/-ರೂ. ಆಗಿರುತ್ತದೆ. ಸದರಿ ಪಟ್ಟೆದಾರರರು ಸಕರ್ಾರಕ್ಕೆ ಯಾವುದೇ ರಾಜದನ ಪಾವತಿಸದೆ ಅಕ್ರಮವಾಗಿ ಬಯಲು ಹನುಮಾನ ಮಂದಿರ ಪಕ್ಕದ ಹಳ್ಳದಿಂದ ನೈಸಗರ್ಿಕವಾದ ಮರಳನ್ನು ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿರುವುದಾಗಿ ತಿಳಿದು ಬಂದಿತು. ಸದರಿ ಜಮೀನಿನ ಪಂಚನಾಮೆಯನ್ನು 2-10 ಪಿಎಂದಿಂದ 3-00 ಪಿಎಂದವರೆಗೆ ಮಾಡಿ ಅಲ್ಲಿಂದ ನಂತರ ಪಕ್ಕದಲ್ಲಿರುವ ಜಮೀನಿನಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವುದನ್ನು ನೋಡಲಾಗಿದ್ದು ನಾವೆಲ್ಲರು ಸೇರಿ ಮದ್ಯಾಹ್ನ 3-10 ಪಿಎಂಕ್ಕೆ ತಲುಪಿದೆವು ಸದರಿ ಜಮೀನಿನ ವಿವರಗಳನ್ನು ಕಂದಾಯ ಇಲಾಖೆಯವರಿಂದ ಮತ್ತು ಗ್ರಾಮ ಲೆಕ್ಕಿಗರಿಂದ ಕಂದಾಯ ದಾಖಲೆಗಳ ಮೂಲಕ ಪರೀಶಿಲನೆ ಮಾಡಿದಾಗ ಯಾದಗಿರಿ (ಬಿ) ಸೀಮಾಂತರದ ಸವರ್ೆ ನಂ.679/3 ಅಂತಾ ತಿಳಿದು ಬಂದಿದ್ದು ಪಟ್ಟೆದಾರರ ಹೆಸರು ರವಿಕಾಂತ ತಂ. ಚಂದ್ರಕಾಂತ ಪಂಚಮಗಿರಿ ಯಾದಗಿರಿ ಸದರಿ ಜಮೀನಿನಲ್ಲಿ ಮರಳು ಶೇಖರಿಸಿದ್ದನ್ನು ಲಿಂಗಾರಾಜ ಭೂ ವಿಜ್ಞಾನಿರವರು ಅಳತೆ ಮಾಡಿ ನೋಡಲಾಗಿ ಅದರನ್ವಯ ಸದರ ಜಮೀನಿನಲ್ಲಿ 19 ಘನಮೀಟರ ಮರಳು ಶೇಖರಣೆ ಮಾಡಿರುವುದಾಗಿ ಕಂಡು ಬಂದಿತು ಸದರಿ ಮರಳಿನ ಅಂ.ಕಿ.15,200/-ರೂ. ಆಗಿರುತ್ತದೆ. ಸದರಿ ಪಟ್ಟೆದಾರರರು ಸಕರ್ಾರಕ್ಕೆ ಯಾವುದೇ ರಾಜದನ ಪಾವತಿಸದೆ ಅಕ್ರಮವಾಗಿ ಬಯಲು ಹನುಮಾನ ಮಂದಿರ ಪಕ್ಕದ ಹಳ್ಳದಿಂದ ನೈಸಗರ್ಿಕವಾದ ಮರಳನ್ನು ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿರುವುದಾಗಿ ತಿಳಿದು ಬಂದಿತು. ಸದರಿ ಜಮೀನಿನ ಪಂಚನಾಮೆಯನ್ನು 3-10 ಪಿಎಂದಿಂದ 4-00 ಪಿಎಂದವರೆಗೆ ಮಾಡಿ ಮುಕ್ತಯಗೊಳಿಸಿದ್ದು ಇರುತ್ತದೆ. 
ಕಾರಣ ಈ ಮೇಲೆ ತಿಳಿಸಲಾದ ಸವರ್ೆ ನಂ.683/1, ಸವರ್ೆ ನಂ.686, ಸವರ್ೆ ನಂ.693/1, ಸವರ್ೆ ನಂ.679/3 ಪಟ್ಟೆದಾರರುಗಳು ಸಕರ್ಾರಕ್ಕೆ ಯಾವುದೇ ರಾಜದನ ಪಾವತಿಸದೆ ಒಟ್ಟು 153 ಘನ ಮೀಟರ ಮರಳು ಅಂ.ಕಿ.1,22,400/-ರೂ. ಕಿಮ್ಮತ್ತಿನ ನೈಸಗರ್ಿಕವಾದ ಮರಳನ್ನು ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿರುವುದು ಕಂಡು ಬಂದಿರುತ್ತದೆ. ಕಾರಣ ಅರೋಪಿತರ ವಿರುದ್ದ ಕಾನುನೂ ಕ್ರಮ ಕೈಕೊಳ್ಳಲು ಜಪ್ತಿ ಪಂಚನಾಮೆಯನ್ನು ತಮ್ಮ ವರದಿಯೊಂದಿಗೆ ಒಪ್ಪಿಸಿದ್ದು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.11/2020 ಕಲಂ.379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಡಿ.ಆರ್ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!