ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 05-11-2019
ಯಾದಗಿರಿ ನಗರ ಪೊಲೀಸ್ ಠಾಣೆ:- ಗುನ್ನೆ ನಂ: 103/2019 ಕಲಂ 78(3) ಕೆ.ಪಿ ಎಕ್ಟ್ ;- ದಿನಾಂಕ.05/12/2019 ರಂದು 1-00 ಪಿಎಂಕ್ಕೆ ಶ್ರೀ ಕೃಷ್ಣ ಸುಬೇದಾರ ಪಿ.ಎಸ್.ಐ(ಅ.ವಿ) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆಯನ್ನು ತಮ್ಮ ಜ್ಞಾಪನಾ ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ.05/12/2019 ರಂದು 10-50 ಎಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿಯ ವಿರಶೈವ ಕಲ್ಯಾಣ ಮಂಟಪ ಹತ್ತಿರ ಯಾರೋ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಅಂಕಿಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ನಾನು ಸಿಬ್ಬಂದಿಯವರಿಗೆ ಮತ್ತು ಪಂಚರಿಗೆ ಬರಮಾಡಿಕೊಂಡು ಮಾಹಿತಿ ತಿಳಿಸಿ ಸಿಬ್ಬಂದಿಯವರು ಹಾಗೂ ಇಬ್ಬರೂ ಪಂಚರನ್ನು ಕರೆದುಕೊಂಡು ದಾಳಿ ಕುರಿತು ಠಾಣೆಯಿಂದ 11-20 ಎ.ಎಂಕ್ಕೆ ಹೋರಟು ಸ್ಥಳಕ್ಕೆ ಹೋಗಿ ನೋಡಿ ಖಾತ್ರಿ ಪಡಿಸಿಕೊಂಡು 11-45 ಎಎಂಕ್ಕೆ ದಾಳಿ ಮಾಡಿ ಹಿಡಿದು ಅವರ ಹೆಸರು ವಿಚಾರಿಲಾಗಿ 1) ಮಂಜೂರ ಅಹೆಮದ ತಂ. ಅಬ್ದುಲ ಹಕ್ ವಃ 46 ಜಾಃ ಮುಸ್ಲಿಂ ಉಃ ಕಾಯಿಪಲ್ಲೆ ವ್ಯಾಪಾರ ಸಾಃ ಹಿರೇ ಅಗಸಿ ಯಾದಗಿರಿ. 2) ತಾಯಪ್ಪ ತಂದೆ ಶರಣಪ್ಪ ಮಡಿವಾಳ ವಃ 29 ಜಾಃ ಮಡಿವಾಳ ಉಃ ಕುಲ ಕಸುಬು ಸಾಃ ಹಿರೆಅಗಸಿ ಯಾದಗಿರಿ. ಅಂತಾ ತಿಳಿಸಿದ್ದು ಸದರಿಯವನಿಗೆ ಪೊಲೀಸರು ಚೆಕ್ ಮಾಡಲು 1) 2400-00 ರೂ ನಗದು ಹಣ. 2) ಒಂದು ಮಟಕಾ ಚೀಟಿ ಅಂ.ಕಿ.00=00 ರೂ. 3) ಒಂದು ಬಾಲಪೆನ ಅಂ.ಕಿ.00=00 ರೂ. ಸಿಕ್ಕಿದ್ದು, ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ನಮ್ಮ ತಾಬೆಗೆ ತೆಗೆದುಕೊಂಡು. ಜಪ್ತಿ ಪಂಚನಾಮೆಯನ್ನು 11-45 ಎ.ಎಂ ದಿಂದ 12-45 ಪಿ.ಎಂ ದವರೆಗೆ ಮುಗಿಸಿ ನಂತರ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಯಾದಗಿರಿ ನಗರ ಪೊಲೀಸ್ ಠಾಣೆಗೆ 1-00 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರ ನೀಡಿ, ಜಪ್ತಿ ಪಂಚನಾಮೆ, ಮುದ್ದೆ ಮಾಲು ಮತ್ತು ಆರೋಪಿಯನ್ನು ಹಾಜರುಪಡಿಸುತ್ತಿದ್ದು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಕ್ರಮ ಕೈಕೊಳ್ಳಲು ಸೂಚಿಸಿದ್ದರ ಮೇಲಿಂದ 3-30 ಪಿಎಂಕ್ಕೆ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಠಾಣೆ ಗುನ್ನೆ ನಂ.103/2019 ಕಲಂ.78(3) ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಗ್ರಾ ಪೊಲೀಸ್ ಠಾಣೆ. ಗುನ್ನೆ ನಂ:- ಗುನ್ನೆ ನಂ: 158/19 ಕಲಂ 78 (3) ಕೆ.ಪಿ ಎಕ್ಟ ;- ದಿನಾಂಕ 05-12-2019 ರಂದು 5-30 ಪಿ.ಎಮ್ ಕ್ಕೆ ಶ್ರೀ ವೀರಣ್ಣಾ ಎಸ್.ಮಗಿ ಪಿ.ಎಸ್.ಐ (ಕಾಸು) ಯಾದಗಿರಿ ಗ್ರಾಮಿಣ ಠಾಣೆರವರು ಒಬ್ಬ ಆರೋಪಿ. ಮದ್ದೆಮಾಲನ್ನು ಜಪ್ತಿಪಂಚನಾಮೆ ಸಮೇತ ಠಾಣೆಗೆ ತಂದು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ಮಧ್ಯಾಹ್ನ 3 ಪಿ.ಎಮ್ ಸುಮಾರಿಗೆ ರಾಮಸಮುದ್ರ ಗ್ರಾಮದ ಮಸ್ಕನಳ್ಳಿ ಗ್ರಾಮದ ಕಡೆಗೆ ಹೋಗುವ ದಾರಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾವನೋ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಮಟಕಾ ಜೂಜಾಟದಲ್ಲಿ ತೊಡಗಿದ್ದಾನೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಅಲ್ಲಿಗೆ ದಾಳಿ ಮಾಡುವ ಸಲುವಾಗಿ ಇಬ್ಬರೂ ಪಂಚರಾದ 1) ಶ್ರೀ ಮಹೇಶ ತಂದೆ ಬುಗ್ಗಪ್ಪಾ ಗುಂಗೇರಿ ವ ಯಾ: 47 ಉ: ಹೊಟೇಲ್ ಕೆಲಸ ಜಾ: ಕಬ್ಬಲಿಗೇರ ಸಾ: ಚಕ್ಕರ ಕಟ್ಟಾ ಯಾದಗಿರಿ ಮತ್ತು 2) ಶ್ರೀ ದೇವಪ್ಪಾ ತಂದೆ ಶಿವಪ್ಪಾ ಸಿದ್ದಿ ವಯಾ:30 ಉ: ಕೂಲಿ ಜಾ: ಹರಿಜನ ಸಾ: ಇಂದಿರಾ ನಗರ ಯಾದಗಿರಿ ಇವರನ್ನು ಠಾಣೆಗೆ ಬರಮಾಡಿಕೊಂಡು ಅವರಿಗೂ ಮಾಹಿತಿ ನೀಡಿ ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರಾದ ಶ್ರೀ ಪ್ರಭುಗೌಡ ಪಿಸಿ-361 ಹಾಗೂ ಮಲ್ಲಪ್ಪಾ ಪಿಸಿ-136 ಇವರಿಗೂ ಸಹ ಮಾಹಿತಿ ನೀಡಿ ಎಲ್ಲರೂ ಠಾಣೆಯ ಸಕರ್ಾರಿ ಜೀಪಿನಲ್ಲಿ ಠಾಣೆಯಿಂದ 3-15 ಪಿ.ಎಂ.ಕ್ಕೆ ಹೊರಟೆವು. 3-40 ಪಿ.ಎಂ.ಕ್ಕೆ ರಾಮಸಮುದ್ರ ಗ್ರಾಮ ತಲುಪಿ, ಗ್ರಾಮದ ಹೊರಗಡೆ ಸ್ವಲ್ಪ ದೂರಲ್ಲಿ ನಮ್ಮ ಜೀಪನ್ನು ನಿಲ್ಲಿಸಿ ಎಲ್ಲರೂ ಸ್ವಲ್ಪ ಮುಂದಕ್ಕೆ ನಡೆದುಕೊಂಡು ಮರೆಯಲ್ಲಿ ನಿಂತು ನೋಡಲಾಗಿ ಗ್ರಾಮದ ಮಸ್ಕನಳ್ಳಿ ಗ್ರಾಮದ ಕಡೆಗೆ ಹೋಗುವ ದಾರಿಯ ಹತ್ತಿರ ಒಬ್ಬ ಮನುಷ್ಯನು ಕ್ಯಯಲ್ಲಿ ಪೆನ್ನು ಮತ್ತು ಪೇಪರ ಹಿಡಿದುಕೊಂಡು ನಿಂತು ಒಂದು ರೂಪಾಯಿಗೆ ಎಂಭತ್ತು ಗೆದ್ದು ಮಜಾ ಮಾಡಿರಿ ಇದು ಒಳ್ಳೆಯ ಅವಕಾಶವಿದೆ ಅಂತಾ ಕೂಗಾಡುತ್ತಾ ಸಾರ್ವಜನಿ ಕರಿಗೆ ಮಟಕಾ ಜೂಜಾಟ ಆಡಲು ಪ್ರೇರೆಪಿಸುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಆ ವ್ಯಕ್ತಿಯನ್ನು ಹಿಡಿದುಕೊಂಡು ಆತನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮರೆಪ್ಪಾ ತಂದೆ ಮಹಾದೇವಪ್ಪಾ ದುಗನೂರ ವಯಾ: 30 ಉ:ಒಕ್ಕಲುತನ ಜಾ: ಬೇಡರ್ ಸಾ: ರಾಮಸಮುದ್ರ ತಾಜಿ:ಯಾದಗಿರಿ ಅಂತಾ ಹೇಳಿದಾಗ ಆತನ ಅಂಗ ಜಡ್ತಿ ಮಾಡಲಾಗಿ ಆತನ ಹತ್ತಿರ ಜೂಜಾಟಕ್ಕೆ ಉಪಯೋಗಿಸಿದ ಒಂದು ಬಾಲ್ ಪೆನ್ನು, ಒಂದು ಮಟಕಾ ಅಂಕಿ ಸಂಖ್ಯೆಗಳು ಬರೆದ ಚೀಟಿ ಮತ್ತು ನಗದು ಹಣ ರೂ. 850/-ರೂ ಸಿಕ್ಕವು ಸದರಿ ಜಪ್ತಿ ಪಂಚನಾಮೆ ಯನ್ನು ಇಂದು ದಿನಾಂಕ 05-12-2019 ರಂದು 4 ಪಿ.ಎಂ. ದಿಂದ 5 ಪಿ.ಎಂ.ದ ವರೆಗೆ ಮಾಡಿ ಮುಗಿಸಿ ಮುಂದಿನ ಕ್ರಮಕ್ಕಾಗಿ ಠಾಣೆಗೆ ತಂದು ಹಾಜರುಪಡಿಸಿದ್ದು ಜಪ್ತಪಂಚನಾಮೆ ಆಧಾರದ ಮೇಲಿಂದ ಠಾಣೆ ಗುನ್ನೆ ನಂ 158/2019 ಕಲಂ 78(3) ಕೆ.ಪಿ.ಎಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಸ್ಶೆದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 128/2019 ಕಲಂ. 279,337,338 ಐಪಿಸಿ ;- ದಿನಾಂಕ 05-12-2019 ರಂದು 3-15 ಪಿ ಎಂ ಕ್ಕೆ ಪಿಯರ್ಾದಿ ಧರ್ಮರಾಜ ತಂದೆ ಹಣಮಂತ ಕೂಡ್ಲಿಗಿ ವಯಾ|| 48 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಕಣೆಕಲ್ ಇತನು ಠಾಣೆಗೆ ಹಾಜರಾಗಿ ಪಿಯರ್ಾಧು ನೀಡಿದ ಸಾರಂಶವೆನೆಂದರೆ ದಿನಾಂಕ: 04-12-2019 ರಂದು ಬೆಳಿಗ್ಗೆ 08-30 ಗಂಟೆಗೆ ರಮೇಶ ಇತನು ಸೈದಾಪೂರದ ಸಿದ್ದಗಂಗಾ ಪೆಟ್ರೊಲ್ ಬಂಕ ಹತ್ತಿರ ಮೋಟರ ಸೈಕಲ್ ನಂ.ಕೆಎ-33.ವಿ-5806 ನೇದ್ದರ ಮೇಲೆ ಹೋಗುತ್ತಿರುವಾಗ ಹೊಂದಿನಿಂದ ಮಹೇಶ ಕೊಂಡಾಪೂರ ಇತನು ತನ್ನ ಮೋಟರ ಸೈಕಲ್ ನಂ.ಕೆಎ-33ಯು-6941 ನೇದ್ದರ ಮೋಟರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತಪಡಿಸಿದ್ದು ಅಪಘಾತದಲ್ಲಿ ರಮೇಶ ಇತನಿಗೆ ಬಲಗಾಲಿಗೆ ತರಚಿದ ಗಾಯಗಳು ಆಗಿದ್ದು ಹಾಗೂ ತಲೆಗೆ ಒಳಗೆ ಭಾರೀ ಗುಪ್ತಗಾಯಗಳಾಗಿ ಮೂಗಿನಿಂದ ರಕ್ತ ಬಂದಿದ್ದು ಇರುತ್ತದೆ ಕಾರಣ ಮೋಟರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ ಅಪಘಾತಪಡಿಸಿದ ಮಹೇಶ ಕೊಂಡಾಪೂರ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.
ಸ್ಶೆದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 129/2019 ಕಲಂ. 279,337,338 ಐಪಿಸಿ ;- ದಿನಾಂಕ 05-12-2019 ರಂದು ಸಾಯಂಕಾಲ 06-45 ಗಂಟೆಗೆ ಸರಕಾರಿ ಆಸ್ಪತ್ರೆ ಸೈದಾಪೂರದಿಂದ ಒಂದು ಎಮ್.ಎಲ್ ಸಿ ಇದೆ ಅಂತಾ ಪೊನ್ ಮೂಲಕ ತಿಳಿಸಿದ ಮೇರೆಗೆ ಸೈದಾಪೂರ ಸರಕಾರಿ ಆಸ್ಪತ್ರೆಗೆ ಭೆಟಿ ನೀಡಿ ಅಲ್ಲಿ ಗಾಯಾಳುಗಳನ್ನು ವಿಚಾರಿಸಿ ಅವರಲ್ಲಿ ಶಂಕ್ರಪ್ಪ ತಂದೆ ಮಲ್ಲಪ್ಪ ಗುಡಸಲಿ ವಯಾ|| 40 ವರ್ಷ ಜಾ|| ಕುರಬರ ಉ|| ಕೂಲಿಕೆಲಸ ಸಾ|| ಬಳಿಚಕ್ರ ತಾ|| ಜಿ|| ಯಾದಗಿರಿ ಇತನ ಹೆಳಿಕೆ ನೀಡಿದ ಸಾರಂಶವೆನೆಂದರೆ ದಿನಾಂಕ: 05-12-2019 ರಂದು ಸಾಯಂಕಾಲ 06-30 ಗಂಟೆಗೆ ಸೈದಾಪೂರ ನಾರಯಣಪೇಟ ಮುಖ್ಯ ರಸ್ತೆಯ ಮೇಲೆ ಸೌರಮ್ಮ ಆಯಿ ಗುಡಿಯ ಹತ್ತಿ ನಾನು ಮತ್ತು ವೀರೇಶ ಇಬ್ಬರು ಮೋಟರ ಸೈಕಲ್ ನಂ.ಕೆಎ-04 ಜೆಎಫ್-3745 ನೇದ್ದರ ಮೇಲೆ ಹೋಗುತ್ತಿರುವಾಗ ನಮ್ಮ ಎದುರಿನಿಂದ ಮೋಟರ ಸೈಕಲ ಚಾಲಕನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತಡಪಸಿದ್ದು ಆತನ ಮೋಟರ ಸೈಕಲ್ ನಂ.ಕೆಎ-33 ಯು-9702 ಅಂತಾ ಇರುತ್ತದೆ ಮತ್ತು ನಮ್ಮ ಹಿಂದೆ ಬರುವ ಮೋಟರ ಸೈಕಲಗೂ ಕೂಡ ಡಿಕ್ಕಿ ಪಡಿಸಿದ್ದು ಅಪಘಾತದಲ್ಲಿ ನಮಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳು ಆಗಿದ್ದರಿಂದ ಉಪಚಾರ ಕುರಿತು ಸೈದಾಪೂರ ಸರಕಾರಿ ಆಸ್ಪತ್ರೆಗೆ ತಂದೆ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 89/2019 ಕಲಂ:420 ಐಪಿಸಿ ಮತ್ತು ಕಲಂ: 78 (3) ಕೆ.ಪಿ ಎಕ್ಟ;- ದಿನಾಂಕ: 05/12/2019 ರಂದು 4-15 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 05/12/2019 ರಂದು ಮದ್ಯಾಹ್ನ ಸಮಯ 2-15 ಪಿಎಮ್ ಕ್ಕೆ ನಾನು ಮತ್ತು ಸಿಬ್ಬಂದಿಯವರಾದ ಶ್ರೀ ಪ್ರಕಾಶ ಹೆಚ್.ಸಿ 18, ಶ್ರೀ ಗುಂಡಪ್ಪ ಹೆಚ್.ಸಿ 37 ಹಾಗೂ ಸಾಬರೆಡ್ಡಿ ಪಿಸಿ 290 ರವರು ಠಾಣೆಯಲ್ಲಿದ್ದಾಗ ನನಗೆ ಬಾತ್ಮಿ ಬಂದಿದ್ದೇನಂದರೆ ವಡಗೇರಾ ಗ್ರಾಮದ ಕೆಂಚಮ್ಮ ಗುಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಹೊರಟು ಸಮಯ 2-35 ಪಿಎಮ್ ಕ್ಕೆ ವಡಗೇರಾ ಗ್ರಾಮದ ಕೆಂಚಮ್ಮ ಆಯಿ ದೇವರ ಗುಡಿಯಿಂದ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಮರೆಯಾಗಿ ನಿಂತು ನೋಡಲಾಗಿ ಕೆಂಚಮ್ಮ ಆಯಿ ಗುಡಿ ಮುಂದಗಡೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಬರೆಸಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ಚೀಟಿಗಳನ್ನು ಬರೆದುಕೊಂಡು ಅವರಿಗೆ ಒಂದು ಚೀಟಿ ಮೇಲೆ ಬರೆದುಕೊಟ್ಟು ಮೋಸ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಸಮಯ 2-40 ಪಿಎಮ್ ಕ್ಕೆ ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು, ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಲ್ಲಪ್ಪ ತಂದೆ ಈದೆಪ್ಪ ನಸಲವಾಯಿ, ವ:28, ಜಾ:ಕುರುಬರ, ಉ:ಒಕ್ಕಲುತನ ಸಾ:ವಡಗೇರಾ ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ 1) ಮಟಕಾ ಅಂಕಿಗಳನ್ನು ಬರೆದ ಒಂದು ಚೀಟಿ ಅ:ಕಿ:00=00, 2) ನಗದು ಹಣ 1170/- ರೂ., 3) ಒಂದು ಬಾಲ ಪೆನ್ನ ಅ:ಕಿ:00=00 ಮತ್ತು 4) ಒಂದು ಮೊಬೈಲ್ ಅ:ಕಿ: 200=00 ಹೀಗೆ ಒಟ್ಟು 1370/- ರೂ. ಮುದ್ದೇಮಾಲನ್ನು ನಾವು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ತಮ್ಮ ತಾಬಾಕ್ಕೆ ಪಡೆದುಕೊಂಡಿದ್ದು ಇರುತ್ತದೆ. ನಂತರ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೇಮಾಲನ್ನು ಹಾಜುರುಪಡಿಸಿ ಜಪ್ತಿ ಪಂಚನಾಮೆ ಮತ್ತು ವರದಿ ಸಲ್ಲಿಸುತ್ತಿದ್ದು, ಪ್ರಕರಣ ದಾಖಲ ಮಾಡಿಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 89/2019 ಕಲಂ:420 ಐಪಿಸಿ ಮತ್ತು ಕಲಂ: 78 (3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ:- 66/2019 ಕಲಂ 323, 324, 504, 506, 354, 447 ಸಂಗಡ 34 ಐಪಿಸಿ;- ದಿನಾಂಕ: 05.12.2019 ರಂದು 4:00 ಪಿಎಮ್ ಕ್ಕೆ ಪಿರ್ಯಾಧಿ ಶ್ರೀಮತಿ.ಮಲ್ಲಮ್ಮ ಗಂಡ ಪರಮಣ್ಣ ಹೆಳವರ ವ: 48 ವರ್ಷ ಜಾ: ಹೆಳವರ ಉ: ಕೂಲಿಕೆಲಸ ಸಾ: ಕಕ್ಕೇರಾ ತಾ: ಸುರಪೂರ ರವರು ಠಾಣೆಗೆ ಖುದ್ದಾಗಿ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿರ್ಯಾಧಿ ಅಜರ್ಿಯನ್ನು ತಂದು ಹಾಜರ ಪಡಿಸಿದ್ದು ಸದರ ಅಜರ್ಿಯ ಸಾರಾಂಶವೆನೆಂದರೆ ನನ್ನ ಗಂಡನು ತೀರಿಕೊಂಡಿದ್ದು ನಾನು ನನ್ನ ಮಗ ಶಿವು ಇತನೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಉಪ ಜೀವಿಸುತ್ತೇನೆ. ಕಕ್ಕೇರಾ ಸಿಮಾಂತರದಲ್ಲಿ ಸವರ್ೇ ನಂ:728 ರಲ್ಲಿ ನಮ್ಮದೊಂದು 1 ಎಕರೆ ಜಮೀನು ಇದ್ದು. ನಮ್ಮ ಹೊಲಕ್ಕೆ ಹೆಳವರ ಹೊಲ ಅಂತಾ ಹೆಸರು ಇದ್ದು. ನಮ್ಮ ಈ ಹೊಲಕ್ಕೆ ಹೊಂದಿಯೇ ನಮ್ಮ ಹೊಲದ ಪಶ್ಚಿಮಕ್ಕೆ ನರಸಿಂಹಮೂತರ್ಿ ತಂದೆ ರಾಮಮೂತರ್ಿ ಮನ್ನೆ ರವರ ಜಮೀನು ಇದ್ದು ಅವರು ತಮ್ಮ ಜಮೀನಿನಲ್ಲಿ ಬಿದಿರು ಬೆಳೆದಿದ್ದು. ನಾವು ನಮ್ಮ ಜಮೀನಿನಲ್ಲಿ ಭತ್ತ ಬೆಳೆಯುತ್ತೇವೆ ನರಸಿಂಹಮೂತರ್ಿ ರವರು ತಮ್ಮ ಜಮೀನಿನಲ್ಲಿ ಹಚ್ಚಿದ ಬಿದಿರು ದೊಡ್ಡದಾಗಿ ನಮ್ಮ ಹೊಳದೊಳಗೆ ನೆರಳು ಬಿಳುತ್ತಿದ್ದು. ಅಲ್ಲದೇ ನಮ್ಮ ಹೊಲದೊಳಗೆ ಬಾಗಿದ್ದು. ನಾನು ಮತ್ತು ನನ್ನ ಮಗ ಅವರಿಗೆ ಹಲವಾರು ಬಾರಿ ನೀವು ಹಚ್ಚಿದ ಬಿದಿರಿನ ನೆರಳು ನಮ್ಮ ಹೊಲದಲ್ಲಿ ಬಿದ್ದು ನಮ್ಮ ಹೊಲದಲ್ಲಿಯ ಬೆಳೆ ಬೆಳೆಯತಿಲ್ಲಾ. ಬಿದರನ್ನು ಕಡಿದುಕೊಳ್ಳಿರಿ ಅಂತಾ ಹೇಳುತ್ತಾ ಬಂದಿದ್ದು ಆದರೂ ಕೂಡಾ ಅವರು ತಮ್ಮ ಹೊಲದಲ್ಲಿಯ ಬಿದಿರು ಕಡಿದುಕೊಳ್ಳದೆ ಇದ್ದು. ನಾವು ಕಡಿದುಕೊಳ್ಳರಿ ಅಂತಾ ಹೇಳಿದಾಗಗೆಲ್ಲಾ ನಮ್ಮ ಜೊತೆಗೆ ಜಗಳಕ್ಕೆ ಬರುತ್ತಿದ್ದು ನಾನು ಹೆಣ್ಣು ಮಗಳು ಇದ್ದುದರಿಂದ ಸುಮ್ಮನೇ ಇರುತ್ತಿದ್ದನು
ಹೀಗಿರುವಾಗ ಇಂದು ದಿನಾಂಕ:05.12.2019 ರಂದು ಮದ್ಯಾಹ್ನ 12;15 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಗ ಶಿವು ಇಬ್ಬರೂ ಕೂಡಿ ತಳ್ಳಳರ ದೊಡ್ಡಿಯ ಮಾನಪ್ಪ ತಂದೆ ಬಲವಂತ್ರಾಯ ತಳ್ಳಿಳೆರ್ ಇವರಟ್ಯಾಕ್ಟರದಿಂದ ನಮ್ಮ ಹೊಲ ಭತ್ತ ನಾಟಿ ಮಾಡಲು ಪಟ್ಲರ್ ಹೊಡೊಸುತ್ತಿದ್ದಾಗ ನಮ್ಮ ಪಕ್ಕದ ಹೊಲದಲ್ಲಿ ನರಸಿಂಹಮೂತರ್ಿ ತಂದೆ ರಾಮಮೂತರ್ಿ ಮನ್ನೆ ಅವರ ಮಗ ರಾಮುಮೂತರ್ಿ ತಂದೆ ನರಸಿಂಹಮೂತರ್ಿ ಹಾಗೂ ಅವರ ಮೊಮ್ಮಗ ತೇಜು ತಂದೆ ರಾಮಮೂತರ್ಿ ಮನ್ನಾ ಇವರೆಲ್ಲರೂ ತಮ್ಮ ಹೊಲದಲ್ಲಿ ಇದ್ದು ನಾನು ಅವರಿಗೆ ಎಪ್ಪಾ ನಾನು ಬಡವಳಿದ್ದೇನೆ ಇದ್ದು ಒಂದು ಎಕರೆ ಜಮೀನಿನಲ್ಲಿ ಏನು ಬಿತ್ತಿದರೂ ನಿಮ್ಮ ಬಿದರಿನ ನೆರಳು ಬಿದ್ದು ಏನು ಬೆಳಿಯುತ್ತಿಲ್ಲಾ ದಯಾಮಾಡಿ ನಿಮ್ಮ ಬಿದಿರನ್ನು ಕಡಿದುಕೊಳ್ಳಲಿರಿ ಅಂತಾ ಅಂದಿದ್ದು ಅದಕ್ಕೆ ಈ ಮೂರು ಜನರು ಸಿಟ್ಟಾಗಿ ನಮ್ಮ ಹೊಲದೋಳಗೆ ಅತೀಕ್ರಮ ಪ್ರವೇಶ ಮಾಡಿ ನಮ್ಮ ಹತ್ತಿರ ಬಂದವರೇ ನನಗೆ ಏ ಸೂಳಿ ನಿನ್ನ ಸೊಕ್ಕು ಬಹಳ ಆಗಿದೆ. ಇವತ್ತು ನಿನಗೆ ಬಿಡುವದಿಲ್ಲಾ ಅಂದವರೇ ಅವರಲ್ಲಿಯ ನರಸಿಂಹಮೂತರ್ಿ ಇತನು ನನಗೆ ಅಲ್ಲಿಯೇ ಬಿದ್ದಿದ್ದ ಬಡಿಗೆಯನ್ನು ತೆಗೆದುಕೊಂಡು ನನ್ನ ಬಲಗೈ ಮೊಳ ಕೈ ಮೇಲೆ ಬೆನ್ನಿನ ಬಲಬಾಜುವಿಗೆ ಬಲಗಾಲ ಮೊಳಕಾಲ ಮೇಲೆ ಹೊಡೆದು ಒಳಪೆಟ್ಟು ಮಾಡಿದ್ದು. ರಾಮಮೂತರ್ಿ ತಂದೆ ನರಸಿಂಗಮೂತರ್ಿ ಇತನು ನನ್ನ ಕೈ ಹಿಡಿದು ಜಗ್ಗಾಡಿ ಕೂದಲು ಹಿಡಿದು ಎಳಿದಾಡಿ ಮಾನಭಂಗ ಪಡಿಸಲು ಪ್ರಯತನ್ನಿಸಿದ್ದು. ತೇಜು ತಮದೆ ರಾಮಮೂತರ್ಿ ಇತನು ಈ ಸೂಳಿಗೆ ಬಿಡಬ್ಯಾಡರಿ ಅಂತಾ ಅನ್ನುತ್ತಿದ್ದು ಆಗ ನನ್ನ ಮಗ ಶಿವು ಇತನು ಬಿಡಿಸಲು ಬಂದಾಗ ತೇಜು ಇತನು ಕುತ್ತಿಗೆಯ ಬಲ ಬಾಜುವಿಗೆ ಕೈಯಿಂದ ಚೂರಿ ತೆರಚಿದ ಗಾಯ ಮಾಡಿದ್ದು. ನರಸಿಂಗಮೂತರ್ಿಯು ತನ್ನ ಕೈಯಲ್ಲಿಯ ಬಡಿಗೆಯಿಂದ ನನ್ನ ಮಗನ ಬಲಗೈ ಹಸ್ತದ ಮೇಲೆ ಹೊಡೆದು ಗುಪ್ತಗಾಯ ಮಾಡಿದ್ದು. ಆಗ ನಾವು ಚಿರಾಡಲು ನಮ್ಮ ಹೊಲದಲ್ಲಿ ಪಟ್ಲರ್ ಹೊಡೆಯುತ್ತಿದ್ದ ಮಾನಪ್ಪ ತಂದೆ ಬಲವಂತ್ರಾಯ ತಳ್ಳಿಳರ್ ಹಾಗೂ ಅದೆ ವೇಳೆಗೆ ಅಲ್ಲಿಂದಲೇ ಹೋಗುತ್ತಿದ್ದ ಪಾರ್ವತಿ ಗಂಡ ಮಾಣಿಕಪ್ಪ ಹೆಳವರ ಮತ್ತು ಅಲ್ಲಿಯೇ ಮನೆ ಇರುವ ಯಲ್ಲಪ್ಪ ತಂದೆ ಗುಡದಪ್ಪ ಹೆಳವರ, ಗಂಗಮ್ಮ ಗಂಡ ಹಣಮಂತ್ರಾಯ ಹೆಳವರ ಇವರೆಲ್ಲರೂ ಬಂದು ನೋಡಿ ಬಿಡಿಸಿದ್ದು. ಹೋಗುವಾಗ ಮೂರು ಜನರು ನನಗೆ ಮತ್ತು ನನ್ನ ಮಗನಿಗೆ ಸೂಳೆ ಮಕ್ಕಳೇ ಇವತ್ತು ನಮ್ಮ ಕೈಯಲ್ಲಿ ಉಳಿದಿರಿ ಇನ್ನೂಂದು ಸಲ ಸಿಕ್ಕಾಗ ಜೀವಂತ ಬಿಡುವದಿಲ್ಲಾ ಎಂದು ಜೀವದ ಬೇದರಿಕೆ ಹಾಕಿ ಹೋಗಿದ್ದು ಕಾರಣ ಮೇಲೆ ನಮೂದಿಸಿದ ಮೂರು ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಪಿರ್ಯಾಧಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 66/2019 ಕಲಂ 323, 324, 504, 506, 354, 447 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡ್ಡಿದ್ದು
ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ:- 67/2019 ಕಲಂ 341, 323, 324, 504, 506, ಸಂಗಡ 34 ಐಪಿಸಿ;- ದಿನಾಂಕ: 05.12.2019 ರಂದು 5:30 ಪಿಎಮ್ ಕ್ಕೆ ಪಿರ್ಯಾಧಿ :ಶ್ರೀ. ರಾಮಮೂತರ್ಿ ತಂದೆ ನರಸಿಂಹಮೂತರ್ಿ ಮನ್ನೆ ವ:48 ವರ್ಷ ಉ: ಒಕ್ಕಲುತನ ಜಾ: ಹಿಂದು ಕಮ್ಮ ಸಾ: ಕಕ್ಕೇರಾ ಯುಕೆಪಿ ಕ್ಯಾಂಪ್ ತಾ: ಸುರಪೂರ ರವರು ಠಾಣೆಗೆ ಖುದ್ದಾಗಿ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿರ್ಯಾಧಿ ಅಜರ್ಿಯನ್ನು ತಂದು ಹಾಜರ ಪಡಿಸಿದ್ದು ಸದರ ಅಜರ್ಿಯ ಸಾರಾಂಶವೆನೆಂದರೆ ಕಕ್ಕೇರಾ ಸಿಮಾಂತರದ ಸವರ್ೇ ನಂ:700/1 ನೇದ್ದರಲ್ಲಿ ನಮ್ಮದು 4 ಎಕರೆ 36 ಗುಂಟೆ ಜಮೀನು ಇದ್ದು ನನ್ನ ಈ ಹೊಲದ ಹೆಸರು ನಾಸೇರ ಹೊಲ ಅಂತ ಇದ್ದು. ನಮ್ಮ ಹೊಲದ ಸುತ್ತಲು ಬಿದಿರು ಹಚ್ಚಿದ್ದು ನಮ್ಮ ಹೊಲದ ಪಶ್ಚಿಮಕ್ಕೆ ಹೊಂದಿ ಮಲ್ಲಮ್ಮ ಗಂಡ ಪರಮಣ್ಣ ಹೆಳವರ ರವರ ಜಮೀನು ಇದ್ದು. ನಮ್ಮ ಹೊಲದಲ್ಲಿ ಹಚ್ಚಿದ ಬಿದಿರಿನ ನೆರಳು ತಮ್ಮ ಹೊಲದಲ್ಲಿ ಬಿಳುತ್ತಿದ್ದು ಇದರಿಂದ ಬೆಳೆ ಬೆಳೆಯುತ್ತಿಲ್ಲಾ ಬಿದಿರನ್ನು ಕಡಿದುಕೊಳ್ಳಿರಿ ಅಂತಾ ಮಲ್ಲಮ್ಮಳು ನನಗೆ ಹೇಳಿದ್ದು ನಾನು ಅವರಿಗೆ ಆಯಿತು ಬೇಸಿಗೆ ಬರಲಿ ನಿಮ್ಮ ಹೊಲದ ಕಡೆಗೆ ಬಾಗಿದ ಬಿದಿರನ್ನು ಕಡಿದುಕೊಳ್ಳತ್ತೇನೆ ಅಂತಾ ಅಂದಿದ್ದು. ಮಲ್ಲಮ್ಮಳು ಈಗಲೇ ಕಡಿದುಕೊಳ್ಳಬೇಕು ಅಂತಾ ಅಂದಿದ್ದು. ಹೀಗಿರುವಾಗ ಇಂದು ದಿನಾಂಕ:05.12.2019 ರಂದು ಬೆಳಗ್ಗೆ ನಾನು ಮತ್ತು ನನ್ನ ಮಗ ತೇಜು ಇಬ್ಬರೂ ನಮ್ಮ ಹೊಲದಲ್ಲಿ ಕೆಲಸ ಮಾಡಿ ಮನೆಗೆ ಹೋಗಲು ನಮ್ಮ ಹೊಲದ ಹತ್ತಿರದ ರಸ್ತೆಯ ಮೇಲೆ ಮದ್ಯಾಹ್ನ 12:45 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ತಮ್ಮ ಹೊಲದ ಕಡೆಯಿಂದ ನಮ್ಮ ಹೊಲದ ಪಕ್ಕದ ಮಲ್ಲಮ್ಮ ಗಂಡ ಪರಮಣ್ಣ ಹೆಳವರ ಮತ್ತು ಅವರ ಮಗ ಶಿವು ತಂದೆ ಪರಮಣ್ಣ ಹೆಳವರ ಇವರಿಬ್ಬರೂ ಬರುತ್ತಿದ್ದು ಇವರಿಬ್ಬರೂ ನಮಗೆ ತಡೆದು ನಿಲ್ಲಿಸಿ ಸೂಳೆ ಮಕ್ಕಳೆ ನೀವು ನಮ್ಮ ಹೊಲದ ಕಡೆ ಬಾಗಿದ ಬಿದಿರು ಕಡಿದುಕೊಳ್ಳುತ್ತಿಲ್ಲಾ ನಮ್ಮ ಹೊಲಾ ನಿಮ್ಮ ಬಿದಿರಿನ ನೆರಳು ಬಿದ್ದು ಬೆಳೆಯುತ್ತಿಲ್ಲಾ ಸೂಳೆಯಾ ಮಕ್ಕಳೆ ಇವತ್ತು ನಿಮಗೆ ಬಿಡುವದಿಲ್ಲಾ ಅಂತಾ ಅಂದವರೆ ಅವರಲ್ಲಿಯ ಮಲ್ಲಮ್ಮಳು ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ಎಡಗಣ್ಣಿನ ಹುಬ್ಬಿನ ಹತ್ತಿರ ಹೊಡೆದು ಕಂದುಗಟ್ಟಿದ ಗಾಯ ಮಾಡಿದ್ದು ಹಾಗೂ ಇನ್ನುಂದು ಕಲ್ಲನ್ನು ತೆಗೆದುಕೊಂಡು ಜೋರಾಗಿ ಬೀಸಿದ್ದು ಆ ಕಲ್ಲು ನನ್ನ ಎಡಗೈ ಹಸ್ತದ ಮೇಲ್ಬಾಗದಲ್ಲಿ ಬಡಿದು ಒಳಪೆಟ್ಟಾಗಿದ್ದು ಆಗ ಬಿಡಿಸಲು ಬಂದ ನನ್ನ ಮಗ ತೇಜುವಿಗೆ ಶಿವು ಇತನು ಕೈಯಿಂದ ನೂಕಿ ದಬ್ಬಿಕೊಟ್ಟಿದ್ದು. ಇದರಿಂದ ನನ್ನ ಮಗನು ನೆಲಕ್ಕೆ ಬಿದ್ದಾಗ ಕೈಯಿಂದ ನನ್ನ ಮಗನ ಕುತ್ತಿಗೆಯ ಮೇಲೆ ಎಡ ಕಪಾಳದ ಮೇಲೆ ಹೊಡೆದಿದ್ದು ಆಗ ನಾನು ಮತ್ತು ನನ್ನ ಮಗ ಚೀರಾಡಲು ಅಲ್ಲಿಂದಲೇ ಹೋಗುತ್ತಿದ್ದ ಗಂಗಮ್ಮ ಹಡಪದ ಮತ್ತು ಪರಮಣ್ಣ ತಂದೆ ನಂದಪ್ಪ ಡೋಳ್ಳಿನ್, ಮೌನೇಶ ಕವಾಸ ರವರು ಬಂದು ನೋಡಿ ಬಿಡಿಸಿದು ಈ ಹೋಗುವಾಗ ಅವರಿಬ್ಬರೂ ನಮಗೆ ಸೂಳೆ ಮಕ್ಕಳೇ ಇವತ್ತು ನಮ್ಮ ಕೈಯಲ್ಲಿ ಉಳಿದಿರಿ ಇನ್ನೂಂದು ಸಲ ಸಿಕ್ಕಾಗ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿ ಹೋಗಿದ್ದು ಈ ಘಟನೆಯಲ್ಲಿ ನನ್ನ ಮಗನಿಗೆ ಅಷ್ಟೇನು ಪೆಟ್ಟಾಗಿರುವದಿಲ್ಲ ಉಪಚಾಕ್ಕಾಗಿ ಹೋಗುವದಿಲ್ಲಾ ಕಾರಣ ಮೇಲೆ ನಮೂದಿಸಿದ ಎರಡು ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ಅಂತಾ ಪಿರ್ಯಾಧಿ ಅಜರ್ಿಯ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 67/2019 ಕಲಂ 341, 323, 324, 504, 506, ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡ್ಡಿದ್ದು
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 301/2019 ಕಲಂ 392, ಐ.ಪಿ.ಸಿ;- ದಿನಾಂಕ 05/12/2019 ರಂದು 00-45 ಎ.ಎಮ್.ಕ್ಕೆ ಫಿಯರ್ಾದಿ ಶ್ರೀ ಅನ್ವರ ಪಶಾ ತಂದೆ ಅಮೀರ ಜಾನ್ ಸಾಃ ಖಾದ್ರಿಯಾ ಮಸೀದಿ ಹತ್ತಿರ ಮಹಿಬೂಬ ನಗರ ಶಿರಾ ತಾಃ ಶಿರಾ ಜಿಃ ತುಮಕೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿ ನೀಡಿದ ಸಾರಾಂಶವೆನೆಂದರೆ, ಲಾರಿ ಡ್ರೈವರ ಕೆಲಸ ಮಾಡಿಕೊಂಡು ಉಪ ಜೀವನ ಸಾಗಿಸುತ್ತಿರುತ್ತೆನೆ. ನನಗೆ ಪರಿಚಯವಿದ್ದ ನಮ್ಮ ಪಕ್ಕದ ಏರಿಯಾದ ಗಾಡಿವಾನ್ ಮೊಹಲ್ಲಾದ ಸೈಯದ ನಯಾಜ್ ಅಹ್ಮದ ತಂದೆ ಶಫಿ ಅಹ್ಮದ ಇವರ ಲಾರಿ ನಂ ಕೆಎ-51-ಎ-6566 ನೇದ್ದರ ಮೇಲೆ ಅಂದಾಜು 5-6 ತಿಂಗಳಿನಿಂದ ಡ್ರೈವರ ಕೆಲಸ ಮಾಡಿಕೊಂಡಿರುತ್ತೆನೆ.
ಹೀಗಿರುವಾಗ ದಿನಾಂಕ 02/12/2019 ರಂದು ಬೆಂಗಳೂರದ ಯಲಹಂಕದಲ್ಲಿರುವ ಗ್ರೀನ್ ವಮ್ರ್ಸ ಯಕೋ ಸಲುಷನ್ ಕಂಪನಿಯಿಂದ ಮಲ್ಟಿ ಲೇಯರ್ಡ ಪ್ಲಾಸ್ಟೀಕ್ ವೇಸ್ಟನ್ನು ನಮ್ಮ ಲಾರಿ ನಂ ಕೆಎ-51-ಎ-6566 ರಲ್ಲಿ ಲೋಡಮಾಡಿಕೊಂಡು ದಿನಾಂಕ 03/12/2019 ರಂದು ಸಾಯಂಕಾಲ ಯಲಹಂಕದಿಂದ ಕಲಬುರಗಿ ಜಿಲ್ಲೆಯ ವಾಡಿಗೆ ಡಿಲೆವರಿ ಕುರಿತು ಬರುತಿದ್ದೆನು. ದಿನಾಂಕ 04/12/2019 ರಂದು ರಾತ್ರಿ 11-45 ಗಂಟೆಯ ಸುಮಾರಿಗೆ ಸುರಪೂರ-ಹತ್ತಿಗೂಡುರ ರೋಡಿನಲ್ಲಿ ದೇವದುರ್ಗ ಕ್ರಾಸ್ ಇನ್ನೂ ಅರ್ಧ ಕಿ.ಮೀ ದೂರದಲ್ಲಿರುವಾಗ ಒಂದು ಸಣ್ಣ ಬ್ರೀಡ್ಜ್ ಹತ್ತಿರ ಬರುತಿದ್ದಾಗ ಇಬ್ಬರೂ ವ್ಯಕ್ತಿಗಳು ಒಂದು ಮೋಟರ್ ಸೈಕಲ್ ಮೇಲೆ ಬಂದು ಅಡ್ಡಗಟ್ಟಿ ನನ್ನ ವಾಹನ ನಿಲ್ಲಿಸಿದ್ದು, ಅವರು ತಮ್ಮ ಮುಖಕ್ಕೆ ಕಪ್ಪು ಬಟ್ಟೆಯ ಮುಖವಾಡ ಹಾಕಿಕೊಂಡು ನನ್ನ ಹತ್ತಿರ ಬಂದರು. ಅದರಲ್ಲಿ ಒಬ್ಬ ವ್ಯಕ್ತಿ ಚಾಕು ತೋರಿಸಿ ಹಣ ಕೊಡು ಇಲ್ಲದಿದ್ದರೆ ಖಲಾಸ್ ಮಾಡುತ್ತೆವೆ ಅಂತ ಬೆದರಿಕೆ ಹಾಕಿದನು. ನನ್ನ ಹತ್ತಿರ ಹಣವಿಲ್ಲ ಅಂತ ಹೇಳಿದಾಗ ಆತನೆ ನನ್ನ ಕಿಸೆ ಚೆಕ್ ಮಾಡಿ ಶಟರ್್ ಕಿಸೆಯಲ್ಲಿದ್ದ 200 ರೂಪಾಯಿ ಕಿತ್ತಿಕೊಂಡು ಹೋದರು. ಇಬ್ಬರೂ ವ್ಯಕ್ತಿಗಳು ಅಂದಾಜು 20 ರಿಂದ 25 ವಯಸ್ಸಿನ ಆಸುಪಾಸಿನವರಿದ್ದು, ಇಬ್ಬರೂ ವ್ಯಕ್ತಿಗಳು ಕೆಂಪು ಬಣ್ಣದ ಶರ್ಟ ಹಾಕಿಕೊಂಡಿದ್ದು ನನಗೆ ಚಾಕು ತೋರಿಸಿ ಹಣ ಕಿತ್ತಿಕೊಂಡ ವ್ಯಕ್ತಿ ಸಾಧಾರಣ ಮೈಕಟ್ಟಿನವನಿದ್ದನು, ಇನ್ನೊಬ್ಬ ವ್ಯಕ್ತಿ ಸದೃಡ ಮೈಕಟ್ಟಿನವಿರುತ್ತಾನೆ.
ಈ ಘಟನೆಯು ದಿನಾಂಕ 04/12/2019 ರಂದು ರಾತ್ರಿ 11-45 ಗಂಟೆಯಿಂದ 11-55 ಗಂಟೆಯ ಅವಧಿಯಲ್ಲಿ ಸುರಪೂರದಿಂದ ಹತ್ತಿಗೂಡುರ ಕಡೆಗೆ ಬರುತಿದ್ದಾಗ ಸುರಪೂರ-ಹತ್ತಿಗೂಡುರ ರೋಡಿನ ಮೇಲೆ ದೇವದುರ್ಗ ಕ್ರಾಸ್ ಇನ್ನೂ ಅರ್ಧ ಕಿ.ಮೀ ಅಂತರದಲ್ಲಿ ಸಣ್ಣ ಬ್ರೀಡ್ಜ ಹತ್ತಿರ ಆಗಿರುತ್ತದೆ. ಸದರಿ ಘಟನೆಯಲ್ಲಿ ಇಬ್ಬರೂ ವ್ಯಕ್ತಿಗಳು ಮುಖವಾಡ ಧರಿಸಿದ್ದರಿಂದ ಅವರ ಮುಖ ಕಂಡಿರುವುದಿಲ್ಲ ಭಯದಲ್ಲಿ ಮೋಟರ ಸೈಕಲ್ ನಂಬರ ನೋಡಿರುವದಿಲ್ಲ ಆದರೆ ಮೋಟರ ಸೈಕಲ್ ಸಿಲ್ವರ್ ಮತ್ತು ಕಪ್ಪು ಬಣ್ಣ ಮಿಶ್ರಿತ ಮೋಟರ ಸೈಕಲ್ ಇರುತ್ತದೆ. ಕಾರಣ ನನಗೆ ಚಾಕು ತೋರಿಸಿ ಬೆದರಿಕೆ ಹಾಕಿ ನನ್ನಿಂದ 200 ರೂಪಾಯಿ ಹಣ ಕಿತ್ತಿಕೊಂಡು ಹೋದ ಇಬ್ಬರೂ ಅಪರಿಚಿತ ವ್ಯಕ್ತಿಗಳ ವಿರುದ್ದ ಕ್ರಮ ಕೈಕೊಳ್ಳಲು ವಿನಂತಿ ಅಂತ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 301/2019 ಕಲಂ 392 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ.
Hello There!If you like this article Share with your friend using