ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 29-11-2019

By blogger on ಗುರುವಾರ, ನವೆಂಬರ್ 28, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 29-11-2019
ಶಹಾಪೂರ ಪೊಲೀಸ್ ಠಾಣೆ :- ಗುನ್ನೆ ನಂ 296/2019 ಕಲಂ ಮಹಿಳೆ ಕಾಣೆ:- ದಿನಾಂಕ 28/11/2019 ರಂದು 6-30 ಗಂಟೆಗೆ ಪಿಯರ್ಾದಿ ಶ್ರೀ ಬಸವರಾಜ ತಂದೆ ನಾಗಪ್ಪ ನಾಸಿಗೆರಿ ವ|| 32 ಜಾ|| ಬೇಡರ ಉ|| ಒಕ್ಕಲುತನ ಸಾ|| ಹೊಸ ಗೌಡೂರ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ದಿನಾಂಕ 27/112019 ರಂದು ಬೆಳಿಗ್ಗೆ 11-00 ಗಂಟೆಗೆ ನಮ್ಮ ಬರಮಪ್ಪನ ಹೊಲದಲ್ಲಿ ಕೆಲಸ ಇದ್ದ ಪ್ರಯುಕ್ತ ನಾನು ಹೊಲಕ್ಕೆ ಹೋದೆನು. ನನ್ನ ಹೆಂಡತಿ ಗಂಗಾದೇವಿ ಮನೆಯಲ್ಲಿ ಇದ್ದಳು ನಂತರ ನನ್ನ ತಾಯಿ ಬುತ್ತಿ ತೆಗೆದುಕೊಂಡು ಬರಮಪ್ಪನ ಹೊಲಕ್ಕೆ ಬಂದಳು,  ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಸಾಯಂಕಾಲ 6-00 ಗಂಟೆ ಮನೆಗೆ ಬಂದಾಗ ಮನೆಯಲ್ಲಿ ನನ್ನ ಹೆಂಡತಿ ಗಂಗಾದೇವಿ ಕಾಣಲಿಲ್ಲಾ ಅದೆ ಸಮಯಕ್ಕೆ ಮನೆಗೆಬಂದ ನನ್ನ ತಮ್ಮ ಮಹಾದೇವಪ್ಪನಿಗೆ ವಿಚಾರಿಸಲಾಗಿ ತಿಳಿಸಿದ್ದೆನೆಂದರೆ, ನಾನು ಏತ್ತುಗಳನ್ನು ಮೇಯಿಸಿಕೊಂಡು ಮದ್ಯಾಹ್ನ 3-30 ಗಂಟೆಗೆ ನಾನು ಮನೆಗೆ ಬಂದಾಗ ನನ್ನ ಅತ್ತಿಗೆ ಗಂಗಾದೇವಿಯು ಮನೆಯಲ್ಲಿ ಇದ್ದಳು ನಂತರ 4-00 ಗಂಟೆಯ ಸುಮಾರಿಗೆ ನಾನು ಹೋರಗಡೆ ಊರಲ್ಲಿ ಹೋದೆನು ನನ್ನ ಅತ್ತಿಗೆ ಗಂಗಾದೇವಿಯು ಮನೆಯಲ್ಲಿ ಇದ್ದಳು ನಂತರ ನಾನು ಈಗ ಬಂದಿರುತ್ತೆನೆ ಅಂತ ತಿಳಿಸಿದನು. ಆಗ ನಾನು ಮತ್ತು ನನ್ನ ತಾಯಿ ನೀಲಮ್ಮ ಹಾಗೂ ನನ್ನ ತಮ್ಮ ಮಹಾದೇವಪ್ಪ, ನನ್ನ ಚಿಕ್ಕಪ್ಪ ರಂಗಪ್ಪ ತಂದೆ ಹಣಮಂತ್ರಾಯ ನಾಸಿಗೆರಿ ಎಲ್ಲರು ಕೂಡಿ ಗ್ರಾಮದಲ್ಲಿ ಹುಡುಕಾಡಲಾಗಿ ಕಾಣಲಿಲ್ಲ ನಂತರ ನಮ್ಮೂರ ವೆಂಕುಬಾ ತಂದೆ ರಂಗಪ್ಪ ತೆಗ್ಗಳ್ಳಿ ಈತನು ತಿಳಿಸಿದೆನೆಂದರೆ, ನಾನು ನಮ್ಮ ಹೊಸಗೌಡೂರ ಕ್ರಾಸ್ ಹತ್ತಿರ ಇದ್ದಾಗ ಸಾಯಂಕಾಲ 5-00 ಗಂಟೆಯ ಸುಮಾರಿಗೆ ನಿನ್ನ ಹೆಂಡತಿ ಗಂಗಾದೇವಿ ಈಕೆಯು ಟೊಣ್ಣೂರ-ಕೊಳ್ಳೂರ ಗ್ರಾಮದ ಕಡೆಗೆ ರಸ್ತೆಯ ಮೇಲೆ ನಡೆದುಕೊಂಡು ಹೋಗುವದನ್ನು ನಾನು ನೋಡಿದೆನು ಗಂಗಾದೇವಿಯು ಕೆಂಪು ಚೂಡಿದಾರ ಹಾಕಿದ್ದಳು ಅಂತ ತಿಳಿಸಿದನು. ಆಗ ನಾನು ನಮ್ಮ ಮಾವ ಶಿವಪ್ಪ ತಂದೆ ರಂಗಪ್ಪ ಇರಬಿಗೆರಾ ಇವರಿಗೆ ಗಂಗಾದೇವಿ ಮನೆಯಲ್ಲಿ ಕಾಣಿಸುತ್ತಿಲ್ಲ ಹುಡುಕಾಡಿದರು ಸಿಕ್ಕಿರುವದಿಲ್ಲಾ ಅಂತ ತಿಳಿಸಿದೆನು. ನನ್ನ ಮಾವ ಶಿವಪ್ಪ ತಂದೆ ರಂಗಪ್ಪ ಮತ್ತು ನನ್ನ ಅತ್ತೆ ರೇಣುಕಮ್ಮ ಗಂಡ ಶಿವಪ್ಪ ಇವರು ಊರಿಗೆ ಬಂದು ವಿಚಾರಿಸಿದ್ದು ಇರುತ್ತದೆ. ನಾವು ಗಂಗಾದೇವಿಗೆ ಹುಡುಕಾಡಲಾಗಿ ಸಿಕ್ಕಿರುವದಿಲ್ಲಾ. ಗಂಗಾದೇವಿಯು 4-00 ಗಂಟೆ ರಿಂದ 6-00 ಗಂಟೆಯ ಅವದಿಯಲ್ಲಿ ಮನೆಯಿಂದ ಹೋದವಳು ಮರಳಿ ಮನೆಗೆ ಬರದೆ ಕಾಣೆಯಾಗಿದ್ದಾಳೆ, ಹುಡುಕಾಡಲಾಗಿ ಸಿಗದೆ ಇದ್ದುದ್ದರಿಂದ ಇಂದು ದಿನಾಂಕ 28/11/2019 ರಂದು ತಡವಾಗಿ ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಕಾರಣ ನನ್ನ ಹೆಂಡತಿ ಗಂಗಾದೇವಿ ಗಂಡ ಬಸವರಾಜ ನಾಸಿಗೇರಿ ವ|| 21 ಜಾ|| ಬೇಡರ ಉ|| ಮನೆಕೆಲಸ ಸಾ|| ಹೊಸಗೌಡೂರ ಇವಳು ಕಾಣೆಯಾಗಿರುವ ಬಗ್ಗೆ ಕಾನೂನು ಕ್ರಮಕೈಕೊಂಡು ನನ್ನ ಹೇಂಡತಿಗೆ ಹುಡುಕಿಕೊಡಲು ಮಾನ್ಯರಲ್ಲಿ ವಿನಂತಿ. ಅಂತ ಅಜರ್ಿ ಸಲ್ಲಿಸಿದ್ದು ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 296/2019 ಕಲಂ ಮಹಿಳೆ ಕಾಣೆ ನೇದ್ದರಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ.

ಶಹಾಪೂರ ಪೊಲೀಸ್ ಠಾಣೆ :- ಯು.ಡಿ.ಆರ್ ನಂ 39/2019 ಕಲಂ 174 ಸಿ.ಆರ್.ಪಿ.ಸಿ;- ದಿನಾಂಕ 28/11/2019 ರಂದು ಬೆಳಗಿನ ಜಾವ 05-00 ಗಂಟೆಗೆ ಫಿಯರ್ಾದಿ ಶ್ರೀಮತಿ ಪ್ರೇಮಾ ಗಂಡ ಶಿವಪ್ಪ ತೆಳಗೇರಿ ವಯ 40 ವರ್ಷ ಜಾತಿ ಪ.ಜಾತಿ (ಮಾದಿಗ) ಉಃ ಹೊಲ ಮನೆ ಕೆಲಸ ಸಾಃ ಹತ್ತಿಗೂಡುರ ತಾಃ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ  ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಹತ್ತಿಗೂಡುರ ಸೀಮಾಂತರದಲ್ಲಿ ತನ್ನ ಮಾವ ಮೃತ ಮಲ್ಲಪ್ಪ ತೆಳಗೇರಿ ಇವರ ಹೆಸರಿನಲ್ಲಿ ಒಂದು ಎಕರೆ ಜಮೀನು ಇದ್ದು ಸದರಿ ಜಮೀನು ತನ್ನ ಗಂಡ ಶಿವಪ್ಪ ತಂದೆ ಮಲ್ಲಪ್ಪ ತೆಳಗೇರಿ ಇವರು ಸಾಗುವಳಿ ಮಾಡಿಕೊಂಡು ಒಕ್ಕಲುತನ ಕೆಲಸ ಮಾಡಿಕೊಂಡಿದ್ದರು. ಅಂದಾಜು ಒಂದು ವರ್ಷದ ಹಿಂದೆ ತನ್ನ ಗಂಡನವರು, ಮಗಳು ಗೀತಾ ಇವಳ ಮದುವೆ ಮಾಡುವ ಕಾಲಕ್ಕೆ ಕೈಗಡ ಸಾಲ ಮಾಡಿ ಮದುವೆ ಮಾಡಿಕೊಟ್ಟಿದ್ದರು. ಈ ವರ್ಷ ಹೊಲದಲ್ಲಿ ಹತ್ತಿ ಬೆಳೆ ಇದ್ದು, ಬೀಜ, ಗೊಬ್ಬರ ಮತ್ತು ಕ್ರಿಮಿನಾಶಕ ಔಷದಿಯ ಸಲುವಾಗಿ ಪುನಃ  ಸಾಲ ಮಾಡಿದ್ದು, ಅಂದಾಜು ಒಟ್ಟು 2 ಲಕ್ಷ ರೂಪಾಯಿ  ಸಾಲಮಾಡಿಕೊಂಡಿದ್ದು,  ಈ ವರ್ಷ ಹೊಲದಲ್ಲಿನ  ಹತ್ತಿ ಬೆಳೆ ಚನ್ನಾಗಿ  ಇರದ ಕಾರಣ ಮಾಡಿದ ಸಾಲ ಹೇಗೆ ಹಿಂದುರುಗಿಸಬೇಕು ಜೀವನ ಸಾಕಾಗಿದೆ  ಅಂತ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಚಿಂತೆ ಮಾಡುತಿದ್ದನು, ಆಗ ತನ್ನ ಗಂಡನಿಗೆ ಈ ವರ್ಷ ಹೋದರೆ ಹೋಗಲಿ, ಮುಂದಿನ ವರ್ಷ ಸಾಲ ತಿರಿಸಿದರಾಯಿತು ಅಂತ ಬುದ್ದಿ ಹೇಳಿ ಸಾಮಾಧಾನ ಪಡಿಸಿದ್ದರು.
        ಹೀಗಿರುವಾಗ ದಿನಾಂಕ 27/11/2019 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಫಿಯರ್ಾದಿಯವರು ತಮ್ಮ ಮನೆಯಲ್ಲಿ ಮಗ ಅರುಣಕುಮಾರನಿಗೆ ಊಟಕ್ಕೆ ಬಡಿಸುತಿದ್ದಾಗ  ತನ್ನ ಗಂಡನಿಗೂ ಊಟಕ್ಕೆ ಕರೆದಿದ್ದು ಹಸಿವು ಇಲ್ಲ ಅಂತ ರೂಮಿನಲ್ಲಿ ಮಲಗಿಕೊಳ್ಳಲು ಹೋಗಿದ್ದು ನಂತರ ರಾತ್ರಿ  8-35 ಗಂಟೆಯ ಸುಮಾರಿಗೆ ವಾಂತಿ ಮಾಡಿಕೊಳ್ಳುತಿದ್ದಾಗ ವಿಚಾರಿಸಿದ್ದು ಸಾಲದ ಬಾಧೆಯಿಂದ ವಿಷಸೇವನೆ ಮಾಡಿರುತ್ತೆನೆ ಅಂತ ಹೇಳಿದ್ದು, ಆಗ ಫಿಯರ್ಾದಿಯವರು ತನ್ನ ಗಂಡನಿಗೆ ಉಪಚಾರ ಕುರಿತು ಒಂದು ಆಟೋದಲ್ಲಿ ಹಾಕಿಕೊಂಡು ಶಹಾಪೂರ ಸರಕಾರಿ ಆಸ್ಪತ್ರೆಗೆ ತರುತಿದ್ದಾಗ ರಾತ್ರಿ 10-30 ಗಂಟೆಗೆ ಶಹಾಪೂರ ಸರಕಾರಿ ಆಸ್ಪತ್ರೆಯ ಮೇನ್ ಗೇಟ್ ಹತ್ತಿರ ತನ್ನ ಗಂಡ ಶಿವಪ್ಪ ಇವರು ಮೃತ ಪಟ್ಟಿದ್ದು, ನಂತರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ವೈದ್ಯಾಧಿಕಾರಿಗಳು ಪರೀಕ್ಷೆ ಮಾಡಿ ಮೃತ ಪಟ್ಟಿರುತ್ತಾನೆ ಅಂತ ರಾತ್ರಿ 10-35 ಗಂಟೆಗೆ ತಿಳಿಸಿರುತ್ತಾರೆ. ತನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವುದಿಲ್ಲ ತನ್ನ ಗಂಡನು,  ಸಾಲದಬಾಧೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವನೆ ಮಾಡಿ ಆತ್ಮಹತ್ಯ ಮಾಡಿಕೊಂಡು ಮೃತ ಪಟ್ಟಿರುತ್ತಾನೆ ಈ ಬಗ್ಗೆ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ  ಯು.ಡಿ.ಆರ್ ನಂ 39/2019 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

ಗುರಮಿಠಕಲ ಪೊಲೀಸ್ ಠಾಣೆ :- ಗುನ್ನೆ ನಂ. 170/2019 ಕಲಂ 279, 337, 338 ಐಪಿಸಿ ಸಂ. 187 ಐ.ಎಂ.ವಿ ಆಕ್ಟ್ ;- ದಿನಾಂಕ 28.11.2019 ರಂದು ಬೆಳಿಗ್ಗೆ 11.30 ಎ.ಎಂ ಕ್ಕೆ ಎಂ.ಎಲ್.ಸಿ ಪೋನ ಮಾಹಿತಿ ಮೇರೆಗೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು 5 ವರ್ಷದ ಬಾಲಕನಿದ್ದು ಆತನ ಪೋಷಕರಾದ ಶ್ರೀಮತಿ ನರಸಮ್ಮ ಇವರು ಹೇಳಿಕೆ ನೀಡಿದ್ದೆನೆಂದರೆ ಇಂದು ಬೆಳಿಗ್ಗೆ 10.30 ಎ.ಎಂ ಕ್ಕೆ ನಾನು ಮೊಮ್ಮಗ ಮನೋಜ ಇಬ್ಬರೂ ಹೊಲಕ್ಕೆ ಹೋಗುತ್ತಿದ್ದಾಗ ಆರೋಪಿತನು ತನ್ನ ಅಟೋ ನಂ. ಕೆಎ-33-ಎ9226 ನೆದ್ದರ ಚಾಲಕನು ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿ ಅಟೋ ನಿಲ್ಲಿಸದೇ ಓಡಿ ಹೋಗುತ್ತಿದ್ದಾಗ ಅಟೋವನ್ನು ಬೆನ್ನು ಹತ್ತಿ ಹಿಡಿದಿದ್ದು ಚಾಲಕನು ಓಡಿ ಹೋಗಿರುತ್ತಾನೆ ಆತನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಪಿರ್ಯಾಧಿ ಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!