ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 22-11-2019

By blogger on ಶುಕ್ರವಾರ, ನವೆಂಬರ್ 22, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 22-11-2019
ಶಹಾಪೂರ ಪೊಲೀಸ್ ಠಾಣೆ :- ಗುನ್ನೆ ನಂ 289/2019.ಕಲಂಃ 78(3) ಕೆ.ಪಿ.ಆ್ಯಕ್ಟ;- ದಿನಾಂಕ 22/11/2019 ರಂದು 17-30 ಗಂಟೆಗೆ ಸ|| ತ|| ಪಿಯರ್ಾದಿ ಹನುಮರಡ್ಡೆಪ್ಪ ಪಿಐ ಸಾಹೇಬರು ಠಾಣೆಗೆ ಬಂದು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರ ಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 22/11/2019 ರಂದು 14-30 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಕನ್ಯಾಕೊಳ್ಳುರ ಬೆಸ್ ಕ್ರಾಸ್ ಹತ್ತೀರದ ಇರುವ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಒಬ್ಬ ವ್ಯೆಕ್ತಿ ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳೂತ್ತಿದ್ದಾನೆ ಅಂತ ಮಾಹಿತಿ ಬಂದಮೇರೆಗೆ ಠಾಣೆಯ ಹನುಮಂತ ಬಿ, ಪಿ,ಎಸ್,ಐ, ಪ್ರೋಬೇಷನರಿ ಮತ್ತು ಸಿಬ್ಬಂದಿಯವರಾದ ಬಾಬು ಹೆಚ್,ಸಿ,162, ಶರಣಪ್ಪ ಹೆಚ್,ಸಿ,164, ಬೀಮಣ್ಣ ಹೆಚ್,ಸಿ,122, ಭೀಮನಗೌಡ ಪಿ.ಸಿ.402. ಜೀಪ ಚಾಲಕ ನಾಗರೆಡ್ಡಿ ಎ.ಪಿ.ಸಿ.161, ರವರಿಗೆ ಮಾಹಿತಿ ವಿಷಯ ತಿಳಿಸಿ. ಅವರಲ್ಲಿ ಬೀಮನಗೌಡ ಪಿ.ಸಿ.402. ರವರಿಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ತಿಳಿಸಿದ್ದರಿಂದ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವ|| 27 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 49 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು ಕರೆದುಕೊಂಡು ಬಂದು ನನ್ನ ಮುಂದೆ 14-50 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಬಾತ್ಮಿ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೊತೆಯಲ್ಲಿ ಬಂದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು.
        ಮಾನ್ಯ ಡಿವೈ,ಎಸ್,ಪಿ, ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ಸದರಿಯವನ ಮೇಲೆ ದಾಳಿ ಮಾಡಲು ನಾನು ಪಂಚರು ಠಾಣೆಯ ಸಿಬ್ಬಂದಿಯವರು ಠಾಣೆಯ ಜೀಪ ನಂ ಕೆಎ-33-ಜಿ-0138 ನ್ನೆದ್ದರಲ್ಲಿ ಕುಳಿತುಕೊಂಡು ಠಾಣೆಯಿಂದ 15-00 ಗಂಟೆಗೆ ಹೊರಟು ಸದರಿ ಜೀಪನ್ನು ನಾಗರೆಡ್ಡಿ ಎ.ಪಿ.ಸಿ., 161, ಇವರು ಚಾಲಾಯಿಸುತ್ತ ಕನ್ಯಾಕೊಳ್ಳುರ ಬೆಸ್ ಕ್ರಾಸ್ ಹತ್ತೀರದ ಸ್ವಲ್ಪ ದೂರದಲ್ಲಿ 15-10 ಗಂಟೆಗೆ ಹೋಗಿ ಜೀಪನಿಲ್ಲಿಸಿ ಜೀಪಿನಿಂದ ಎಲ್ಲರು ಇಳಿದು ನಡೆದುಕೊಂಡು ಹೋಗಿ ಮನೆಗಳ ಗೋಡೆಯ ಮರೆಯಲ್ಲಿನಿಂತು ನಿಗಾಮಾಡಿ ನೊಡಲಾಗಿ ಕ್ರಾಸ್ ಹತ್ತಿರ  ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ 1 ರೂ ಆಡಿದರೆ 80 ರೂಪಾಯಿ ಬರುತ್ತದೆ ಅಂತ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದನು ಆಗ ನಾವೆಲ್ಲರೂ ಸದರಿಯವನು ಸಾರ್ವಜನಿಕರಿಂದ ಹಣಪಡೆದು ಮಟಕಾ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು 15-20 ಗಂಟೆಗೆ ನಾವೆಲ್ಲರೂ ದಾಳಿ ಮಾಡಿದಾಗ ಸಾರ್ವಜನಿಕರಿಗೆ ಕೂಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವನು ಸಿಕ್ಕಿಬಿದ್ದಿದ್ದು, ಮಟಕಾ ಅಂಕಿಗಳನ್ನು ಬರೆಸಲು ಬಂದ ಜನರು ಓಡಿ ಹೋಗಿರುತ್ತಾರೆ, ನಾನು, ಪಂಚರ ಸಮಕ್ಷಮದಲ್ಲಿ ದಾಳಿಯಲ್ಲಿ ಸಿಕ್ಕ ಸದರಿ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಭೀಮರಾಯ ತಂದೆ ಮಲ್ಲಪ್ಪ ಸರನೊಬತ ವ|| 34 ಜಾ|| ಕುರುಬುರ ಉ|| ಮಟಕಾಬರೆದುಕೊಳ್ಳುವದು ಸಾ|| ಸಲಾದಪೂರ ಅಂತ ಹೇಳಿದನು. ಸದರಿಯವನ ಅಂಗಶೋಧನೆ ಮಾಡಿದಾಗ 1) ನಗದು ಹಣ 1020/- ರೂಪಾಯಿ 2) ಒಂದು ಬಾಲ್ ಪೆನ್ ಅಂ:ಕಿ: 00-00 ರೂ 3) 2 ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಅಂ:ಕಿ: 00-00 ರೂ ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ತಾಬೆಗೆ ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೆಯನ್ನು 15-30 ರಿಂದ 16-30 ರವರೆಗೆ ಜಪ್ತಿ ಪಂಚನಾಮೆಮಾಡಿ. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 17-00 ಗಂಟೆಗೆ ಬಂದು ಜಪ್ತಿ ಪಂಚನಾಮೆ, ಮುದ್ದೆಮಾಲನ್ನು ಮತ್ತು ಒಬ್ಬ ಆರೋಪಿಯನ್ನು ಹಾಜರು ಪಡಿಸಿ 17-30 ಗಂಟೆಗೆ ಒಂದು ವರದಿಯನ್ನು ತಯಾರಿಸಿ ಮುಂದಿನ ಕ್ರಮಕೈಕೊಳ್ಳುವಂತೆ ವರದಿ ಹಾಜರಪಡಿಸಿದ್ದು ಸದರಿ ವರದಿಯ ಸಾರಾಂಶವು ಅಸಂಜ್ಞ ಅಪರಾದ ವಾಗಿದ್ದರಿಂದ ಠಾಣೆಯ ಎನ್,ಸಿ,ನಂ 59/2019 ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ದಾಖಲಿಸಿಕೊಂಡು. ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ರಾಮಪ್ಪ ಪಿ,ಸಿ, 424. ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 18-00 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 289/2019 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ :- ಗುನ್ನೆ ನಂ. 86/2019 ಕಲಂ: 78(3) ಕೆ.ಪಿ.ಆಕ್ಟ್ ;- ದಿನಾಂಕ: 22/11/2019 ರಂದು 4-15 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 22/11/2019 ರಂದು ಸಮಯ 1-15 ಗಂಟೆಗೆ ನಾನು ಮತ್ತು ಸಿಬ್ಬಂದಿಯವರಾದ ಭೋಜು ಎ.ಎಸ್.ಐ, ಪ್ರಕಾಶ ಹೆಚ್.ಸಿ 18, ಮಾನಪ್ಪ ಪಿಸಿ 247 ರವರು ಠಾಣೆಯಲ್ಲಿದ್ದಾಗ ನನಗೆ ಬಾತ್ಮಿ ಬಂದಿದ್ದೇನಂದರೆ ಗೋನಾಲ ಗ್ರಾಮದ ಹನುಮಾನ ದೇವರ ಗುಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಹೊರಟು ಸಮಯ 2-15 ಗಂಟೆಗೆ ಗೋನಾಲ ಗ್ರಾಮದ ಹನುಮಾನ ದೇವರ ಗುಡಿಯಿಂದ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಮರೆಯಾಗಿ ನಿಂತು ನೋಡಲಾಗಿ ಹನುಮಾನ ದೇವಸ್ಥಾನ ಮುಂದಗಡೆ ಸಾರ್ವಜನಿಕ ಕಟ್ಟೆಯ ಮೇಲೆ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಬರೆಸಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ಚೀಟಿಗಳನ್ನು ಬರೆದುಕೊಳ್ಳುತ್ತಿದ್ದಾಗ ಸಮಯ 2-20 ಗಂಟೆಗೆ ನಾನು ಮತ್ತು ಸಿಬ್ಬಂದಿಯವರು ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಖಾಸಿಂಸಾಬ ತಂದೆ ಕಬೂಲಸಾಬ ಮುಲ್ಲಾ, ವ:31, ಜಾ:ಮುಸ್ಲಿಂ, ಉ:ಖಾಸಗಿ ಕೆಲಸ ಸಾ:ಗೋನಾಲ ತಾ:ವಡಗೇರಾ ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ 1) ಮಟಕಾ ಅಂಕಿಗಳನ್ನು ಬರೆದ ಒಂದು ಚೀಟಿ ಅ.ಕಿ.00=00, 2) ನಗದು ಹಣ 1140/- ರೂ., 3) ಒಂದು ಬಾಲ ಪೆನ್ನ ಅ.ಕಿ.00=00 ಹೀಗೆ ಒಟ್ಟು 1140/- ರೂ. ಮುದ್ದೇಮಾಲನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಘಟನೆ ಸ್ಥಳವು ಹನುಮಾನ ದೇವರ ಗುಡಿ ಮುಂದಗಡೆ ಇರುವ ಸಾರ್ವಜನಿಕ ಕಟ್ಟೆಯ ಮೇಲೆ ಇರುತ್ತದೆ. ನಂತರ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೇಮಾಲನ್ನು ಹಾಜುರುಪಡಿಸಿದ್ದು ಇರುತ್ತದೆ. ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಗುನ್ನೆ ದಾಖಲ ಮಾಡಿಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡು ಅನುಮತಿ ಪಡೆದುಕೊಂಡು ಇಂದು ದಿನಾಂಕ: 22/11/2019 ರಂದು 6-30 ಪಿಎಮ್ ಕ್ಕೆ ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 86/2019 ಕಲಂ:78 (3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

   
ಯಾದಗಿರಿ ಗ್ರಾ ಪೊಲೀಸ್ ಠಾಣೆ :- ಗುನ್ನೆ ನಂ: 156/19  ಕಲಂ 448, 427, 504, 506 ಸಂಗಡ 34 ಐಪಿಸಿ ;- ದಿನಾಂಕ 22-11-2019 ರಂದು 2-30 ಪಿ.ಎಮ್ ಕ್ಕೆ ಕುಮಾರಿ ಲಕ್ಷ್ಮೀ ತಂದೆ ವಿಶ್ವನಾಥರೆಡ್ಡಿ ಮಾಲೀಪಾಟೀಲ್ ವಯಾ: 20 ಉ: ವಿಧ್ಯಾಥರ್ಿ ಜಾ: ಲಿಂಗಾಯತ ಸಾ: ಹೋನಗೇರಾ ತಾ: ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಅದರ ಸಾರಾಂಸವೆನೆಂದರೆ ನಮ್ಮ ಗ್ರಾಮವಾದ ಹೋನಗೇರಾದಲ್ಲಿ 3-42 ಅಳತೆಯ ದೊಡ್ಡಿಯು ನಮ್ಮ  ತಂದೆಯವರ ಹೆಸರಿನಲ್ಲಿರುತ್ತದೆ. ಈ ದೊಡ್ಡಿಗೆ ನಾಲ್ಕು ಕಡೆಗಳಲ್ಲಿ ಕೆತ್ತಿದ ಕಲ್ಲುಗಳ ಗೊಡೆಯಿರುತ್ತದೆ. ನಮ್ಮ ತಂದೆ 2016 ನೇ ಸಾಲಿನಲ್ಲಿ ತೀರಿಕೊಂಡ ಮೇಲೆ ನಮ್ಮ ಅತ್ತೆಯ ಹೆಸರಿನಲ್ಲಿ ಇದ್ದ ಸವರ್ೇ ನಂ: 345 ರ ದೇವಾಸ್ಥಾನ ನಮ್ಮ ಗ್ರಾಮದ ನಿಂಗಪ್ಪಾ ಗುಡಗುಡಿ ಹಾಗೂ ಇತರರು ಬಿಳಿಸಿ ಹಾಳು ಮಾಡಿದ್ದಕ್ಕಾಗಿ ನಮ್ಮ ಅತ್ತೆ ಗಿರೀಜಾಪಾಟೀಲ್ ಇವರು ಯಾದಗಿರಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಕೇಸು ಮಾಡಿಸಿದ್ದು ಅದರ ಎಫ್.ಐ.ಆರ್ ನಂ: 53/2018 ಇರುತ್ತದೆ. ನಾವು ಈಗ ಸುಮಾರು ವರ್ಷಗಳಿಂದ ಯಾದಗಿರಿಯಲ್ಲಿಯೇ ಇರುತ್ತೆವೆ.
      ಹೀಗಿದ್ದು ದಿನಾಂಕ 21-11-2019 ರಂದು ನಮ್ಮ ಗ್ರಾಮದ ನಿಂಗಪ್ಪಾ ತಂದೆ ದೆವಿಂದ್ರಪ್ಪಾ ಗುಡುಗುಡಿ ಇತನು ನಮ್ಮ ದೊಡ್ಡಿಯ ಆರು ಅಡಿಯ ಗೊಡೆಗಳನ್ನು ಬಿಳಿಸಿ ಆಕ್ರಮವಾಗಿ ಕಟ್ಟಡ ನೆಲಸಮ ಮಾಡಲು ಪ್ರಯತ್ನಿಸುತ್ತಿದ್ದಾನೆ ಅಂತಾ ಗೊತ್ತಾಗಿ ನನ್ನ ತಾಯಿಯಾದ ದೇವಮ್ಮಾ ಇವರು ಸದರಿ ನಿಂಗಪ್ಪಾ ಗುಡುಗುಡಿ ಇವರಿಗೆ ಫೋನ ಮಾಡಿ ಕೇಳಿದಾಗ ಅವನು ನಮ್ಮ ತಾಯಿಗೆ ನಿಮ್ಮ ಜ್ಯಾಗೆ ನಿನ್ನ ಗಂಡ 2014 ನೇ ಸಾಲಿನಲ್ಲಿ ನನಗೆ ಮಾರಾಟ ಮಾಡಿದ್ದಾನೆ ಆ ಜ್ಯಾಗೆಯಲ್ಲಿ ನಾನು ಮನೆ ಕಟ್ಟಿತ್ತಿದ್ದೆನೆ ಅಂತಾ ತಿಳಿಸಿದಾಗ ಕೂಡಲೇ ನಾನು ನಮ್ಮ ತಾಯಿ ದೇವಮ್ಮಾ ಇಬ್ಬರೂ ನಿನ್ನೆ ಬೆಳಗಿನ 11 ಗಂಟೆ ಸುಮಾರಿಗೆ ನಮ್ಮೂರಿಗೆ ನಮ್ಮ ಮನೆಯ ಹತ್ತಿರ ಹೋಗಿ ನೋಡಲಾಗಿ ನಿಂಗಪ್ಪಾ ತಂದೆ ದೆವಿಂದ್ರಪ್ಪಾ ಗುಡುಗುಡಿ ಇತನು ನಮ್ಮ ದೊಡ್ಡಿಯ ಆರು ಅಡಿಯ ಗೊಡೆಗಳನ್ನು ಬಿಳಿಸಿ ಆಕ್ರಮವಾಗಿ ಕಟ್ಟಡ ಕಟ್ಟುತ್ತಿದ್ದನು. ಆಗ ನಾನು ನನ್ನ ತಾಯಿ ಅವನಿಗೆ ನಮ್ಮ ಜ್ಯಾಗೆಯಲ್ಲಿ ನಿನೇಕೆ ಮನೆ ಕಟ್ಟಿಕೊಳ್ಳುತ್ತಿದ್ದಿ ಅಂತಾ ನಮ್ಮ ತಾಯಿ ಕೇಳಿದರೇ ಅವನು ಈ ಜ್ಯಾಗೆ ನನ್ನದಿದೆ ನಿನ್ನ ಗಂಡ ನನಗೆ ನಾಲ್ಕೂವರೆ ಲಕ್ಷ್ಯ ರೂಪಾಯಿಗಳಿಗೆ ಮಾರಾಟ ಮಾಡಿದ್ದಾನೆ ಅಂತಾ ಹೇಳಿದಾಗ ನಾವು ಆತನಿಗೆ ಈಗ ಕಟ್ಟುವದು ಬಂದ ಮಾಡು ಆಮೇಲೆ ನಿನ್ನ ಹತ್ತಿರ ದಾಖಲಾತಿ ತೋರಿಸು ಮತ್ತು ಈ ಬಗ್ಗೆ ಊರಿನ ಹಿರಿಯರಿಗೆ ವಿಚಾರಿಸಿದಾಗ ಕಟ್ಟುವಿಯಂತೆ ಅಂತಾ ಹೇಳಿದಾಗ ಅವನು ಯಾವುದೋ ದಾಖಲಾತಿಗಳನ್ನು ತೋರಿಸಿ ಅಂಜಿಸಿ ಜಿವದ ಭಯ ಹಾಕಿ ಇದು ನನ್ನ ಜ್ಯಾಗೆ ಇದೆ ಇಲ್ಲಿ ಯಾರಾದರೂ ಕೇಳಲಿಕ್ಕೆ ಬಂದರೆ ಅವರಿಗೆ ಸುಮ್ಮನೇ ಬಿಡುವುದಿಲ್ಲಾ ಅಂತಾ ಹೆದರಿಸಿದಾಗ ನಾವು ಅಲ್ಲಿಂದ ಮರಳಿ ಬಂದಿರುತ್ತವೆ. ಈ ರೀತಿಯಾಗಿ ನಿಂಗಪ್ಪಾ ಗುಡುಗುಡಿ ಇತನು ಅತೀಕ್ರಮವಾಗಿ ನಮ್ಮ ಜ್ಯಾಗೆಯಲ್ಲಿ ಪ್ರವೇಶ ಮಾಡಿ ನಮ್ಮ ಕಟ್ಟಡ ನೆಲಸಮ ಮಾಡಿ  ನಾಶಪಡಿಸಿದ್ದು ಕೇಳಲು ಹೋದರೇ ನಮಗೆ ದಬಾಯಿಸುತ್ತಿದ್ದಾನೆ. ಮತ್ತು ನಮ್ಮ ಗ್ರಾಮ ಪಂಚಾಯತ ಅಬೀವೃದ್ದಿ ಅಧಿಕಾರಿಗಳಾದ ಶರಣಪ್ಪಾ (ಪಿ.ಡಿ.ಓ) ಇವರು ದಾಖಲಾತಿಗಳನ್ನು ಸರಿಯಾಗಿ ಪರಿಶೀಲನೆ ಮಾಡಿದೇ ನಿಂಗಪ್ಪ ಗುಡಗುಡಿ ಇತನಿಗೆ ಕಟ್ಟಡ ಪರವಾಣಿಗೆಯನ್ನು ನೀಡಿದ್ದು ಇವರಿಬ್ಬರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ: 156/2019 ಕಲಂ 448, 427, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ :-ಗುನ್ನೆ ನಂ. 155/2019 ಕಲಂ 457, 380 ಐಪಿಸಿ;- ದಿನಾಂಕ 20/11/2019 ರಂದು ರಾತ್ರಿ 8-00 ಗಂಟೆಯಿಂದ ದಿನಾಂಕ 21/11/2019 ರಂದು ಬೆಳಿಗ್ಗೆ 6-00 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಮುದ್ನಾಳ-ಯಾದಗಿರಿ ರೋಡಿನ ಹತ್ತಿರ ಬರುವ ಮುದ್ನಾಳ ಗ್ರಾಮದ ಸೀಮೆಯಲ್ಲಿ ಡಾಂಬರ ಪ್ಲ್ಯಾಂಟದಲ್ಲಿ ಹೋಗಿ ಅಲ್ಲಿ ಕೋಣೆಯ ಬಾಗಿಲ ಕೀಲಿಯನ್ನು ಮುರಿದು ಕೋಣೆಯಲ್ಲಿ ಇಟ್ಟಿದ್ದ ಒಂದು ಹೊಂಡಾ ಕಂಪನಿಯ ಜನರೇಟರ ಅಂದಾಜ ಕಿಮ್ಮತ್ತು 22,000/ರೂ ಕಿಮ್ಮತ್ತಿನದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಫಿರ್ಯಾಧಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 155/2019 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ, ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!