ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 14-11-2019

By blogger on ಬುಧವಾರ, ನವೆಂಬರ್ 13, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 14-11-2019
ಯಾದಗಿರಿ ನಗರ ಪೊಲೀಸ್ ಠಾಣೆ ;- 92/2019 ಕಲಂ 78(3) ಕೆ.ಪಿ ಎಕ್ಟ್  ;- ದಿನಾಂಕ.13/11/2019 ರಂದು 5-30 ಪಿಎಂಕ್ಕೆ ಮಾನ್ಯ ಸಿ.ಪಿ.ಐ ಸಾಹೆಬರು ಯಾಧಗಿರಿ ರವರು ಠಾಣೆಗೆ ಹಾಜರಾಗಿ ಒಂದು ಜಪ್ತಿ ಪಂಚನಾಮೆ ಹಾಗೂ ಜ್ಞಪನಾ ಪತ್ರವನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 13/11/2019 ರಂದು ಸಮಯ 03-40 ಗಂಟೆಗೆ ನಾನು ಯಾದಗಿರಿ ವೃತ್ತ ಕಛೇರಿಯಲ್ಲಿದ್ದಾಗ ಯಾದಗಿರಿ ನಗರದ ಗಾಂಧಿ ನಗರ ತಾಂಡಾದ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಯಾದಗಿರಿ ನಗರದ ಹನುಮಾನ ದೇವಸ್ಥಾನ ಇನ್ನು ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಮರೆಯಾಗಿ ನೋಡಲು ಅಲ್ಲಿ ಹನುಮನಾನ ದೇವರ ಗುಡಿ ಮುಂದಗಡೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇವೆ ಮಟಕಾ ಬರೆಸಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದಾಗ ಸಮಯ 04-10 ಗಂಟಗೆ ದಾಳಿ ಮಾಡಿ ಹಿಡಿದಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮನೋಜ ತಂದೆ ರಾಮು ರಾಠೋಡ ವ|| 43 ವರ್ಷ ಜಾ|| ಲಂಬಾಣಿ ಉ|| ರಿಯಲ್ ಎಸ್ಟೇಟ್ ಕಮೀಷನ್ ಏಜೆಂಟ ಸಾ|| ಗಾಂಧಿ ನಗರ ತಾಂಡಾ ಯಾದಗಿರಿ ಅಂತಾ ತಿಳಿಸಿದ್ದು ಸದರಿಯವನ ಹತ್ತಿರ ಎರಡು ಮಟಕಾ ಚೀಟಿ ಅ.ಕಿ|| 00=00 2] ನಗದು ಹಣ 4200/- ರೂಪಾಯಿಗಳು 3] ಒಂದು ಬಾಲ ಪೆನ್ ಅ.ಕಿ|| 00=00 ಮತ್ತು ಅಲ್ಲಿ ಆಡಲು ಬಂದ ಜನರಿಗೆ ಹಿಡಿದು ವಿಚಾರಿಸಲಾಗಿ ಅದರಲ್ಲಿ 2] ಶಿವಮಾನಪ್ಪ ತಂದೆ ತಿಪ್ಪಣ್ಣ ಮಡಿವಾಳ ವ|| 45 ವರ್ಷ ಜಾ|| ಅಗಸರ ಉ|| ಖಾಸಗಿ ಕೆಲಸ ಸಾ|| ಹಾಲಗೇರಾ ಹಾ.ವ|| ಲಾಡೇಜಗಲ್ಲಿ ಯಾದಗಿರಿ ಅಂತಾ ತಿಳಿಸಿದ್ದು ಸದರಿಯವನ ಹತ್ತಿರ ಒಂದು 1] ಮಟಕಾ ಚೀಟಿ ಅ.ಕಿ|| 00=00 2] ನಗದು ಹಣ 1100/- ರೂಪಾಯಿಗಳು ಮತ್ತು 3] ವಿಲಾಸ ತಂದೆ ಭೀಮಪ್ಪ ಚೊಳ್ಳೇರ ವ|| 29 ವರ್ಷ ಉ|| ಗಾರೆಕೆಲಸ ಸಾ|| ಕ್ರಿಶ್ಚಿಯನ್ ಸಾ|| ಅಬ್ಬೆತುಮಕೂರು ತಾ|| ಯಾದಗಿರಿ ಅಂತಾ ತಿಳಿಸಿದ್ದು ಸದರಿಯವನ ಹತ್ತಿರ 1] ಒಂದು ಮಟಕಾ ಚೀಟಿ ಅ.ಕಿ|| 00=00 2] ನಗದು ಹಣ 1300/- ರೂಪಾಯಿಗಳು ಮತ್ತು 4] ಮಲ್ಲಪ್ಪ ತಂದೆ ಸಾಬಣ್ಣ ಕಚ್ಚೇರ ವ|| 40 ವರ್ಷ ಜಾ|| ಮಾದಿಗ ಉ|| ಗಾರೆ ಕೆಲಸ ಸಾ|| ಹತ್ತಿಕುಣಿ ಅಂತಾ ತಿಳಿಸಿದ್ದು ಸದರಿಯವನ ಹತ್ತಿರ 1] ಒಂದು ಮಟಕಾ ಚೀಟಿ ಅ.ಕಿ|| 00=00 2] ನಗದು ಹಣ 1900/- ರೂಪಾಯಿಗಳು ಮತ್ತು 5] ಸಂತೋಷ ತಂದೆ ಬಾಲುನಾಯಕ ರಾಠೋಡ ವ|| 25 ವರ್ಷ ಜಾ|| ಲಂಬಾಣಿ ಉ|| ಟೈಲ್ಸ್ ವರ್ಕರ್ ಸಾ|| ಉಳ್ಳೆಸುಗೂರು ತಾಂಡಾ ಅಂತಾ ತಿಳಿಸಿದ್ದು ಸದರಿಯವನ ಹತ್ತಿರ 1] ಒಂದು ಮಟಕಾ ಚೀಟಿ ಅ.ಕಿ|| 00=00 2] ನಗದು ಹಣ 2600/- ರೂಪಾಯಿಗಳು ಅಂತಾ ತಿಳಿಸಿದ್ದು, ಹೀಗೆ ಒಟ್ಟು 11,100/- ರೂಪಾಯಿಗಳು, 6 ಮಟಕಾ ಚೀಟಿಗಳು, ಒಂದು ಬಾಲ ಪೆನ್ ವಶಪಡಿಸಿಕೊಂಡಿದ್ದು ಇರುತ್ತದೆ. ನಂತರ ಆರೋಪಿತರುಗಳನ್ನು ಮುದ್ದೆಮಾಲುಗಳೊಂದಿಗೆ, ಜಪ್ತಿ ಪಂಚನಾಮೆಯನ್ನು ಹಾಜರಪಡಿಸಿದ್ದು ಇರುತ್ತದೆ.  ನಂತರ ಮಾನ್ಯ ನ್ಯಾಯಾಲಯಕ್ಕೆ ಪ್ರಕರಣ ದಾಖಲಿಸಿಕೊಳ್ಳಲು  ಪತ್ರದ ಮೂಲಕ ಪಿಸಿ-398 ರವರೊಂದಿಗೆ ಪರವಾನಿಗೆ ಕುರಿತು ಕಳುಹಿಸಿಕೊಟ್ಟಿದ್ದು ಮಾನ್ಯ ನ್ಯಾಯಾಲಯದ ಪರವಾನಿಗೆಯನ್ನು ----- ಪಡೆದುಕೊಂಡಿದ್ದು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.92/2019 ಕಲಂ.78(3)ಕೆಪಿ ಆ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಕೊಂಡು ತನಿಖೆ ಕೈಕೊಂಡೆನು.                                                  

ವಡಗೇರಾ ಪೊಲೀಸ್ ಠಾಣೆ :- ಗುನ್ನೆ ನಂ. 82/2019 ಕಲಂ: 379 ಐಪಿಸಿ;- ದಿನಾಂಕ: 13/11/2019 ರಂದು 2-30 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಒಂದು ಟ್ರ್ಯಾಕ್ಟರ ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಗೆ ಬಂದು ಸರಕಾರಿ ತಫರ್ೆಯಿಂದ ವರದಿ ಕೊಟ್ಟಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 13/11/2019 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ಪೊಲೀಸ್ ಠಾಣೆಯಲ್ಲಿದ್ದಾಗ ನನಗೆ ಕಂಠಿ ತಾಂಡಾದ ಹಳ್ಳದಲ್ಲಿ ಒಂದು ಟ್ರಾಕ್ಟರ್ದಲ್ಲಿ ಕಳ್ಳತನದಿಂದ ಮರಳನ್ನು ತುಂಬಿ ಸಾಗಿಸುತ್ತಿರುವುದಾಗಿ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರಾದ 1) ಪ್ರಕಾಶ ಹೆಚ್.ಸಿ 18 (ಪಿ) ಮತ್ತು 2) ಶ್ರೀ ಮಹೇಂದ್ರ ಪಿಸಿ 254 ರವರೊಂದಿಗೆ ಸಕರ್ಾರಿ ಜೀಪ ನಂ. ಕೆಎ-33-ಜಿ-115 ನೆದ್ದರಲ್ಲಿ ಹೊರಟು ಕಂಠಿ ತಾಂಡಾದ ಹಳ್ಳದಲ್ಲಿ 1-30 ಪಿಎಮ್ ಕ್ಕೆ ಹೋಗಿ ನೋಡಲಾಗಿ ಹಳ್ಳದಿಂದ ಒಂದು ಟ್ರಾಕ್ಟರದಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರು ಹೋಗಿ ಸದರಿ ಟ್ರಾಕ್ಟರ ನಿಲ್ಲಿಸಲು ಹೋದಾಗ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರ ಪಕ್ಕದ ಹೊಲದಲ್ಲಿ ತಿರುಗಿಸಿಕೊಂಡು ಹೋಗಿ ನಿಲ್ಲಿಸಿ, ಓಡಿ ಹೋದನು. ಅವನ ಹಿಂದೆ ಬೆನ್ನತ್ತಿದರೂ ಸಿಗಲಿಲ್ಲ. ಸದರಿ ಟ್ರ್ಯಾಕ್ಟರ ಚಾಲಕನಿಗೆ ನೋಡಿದಲ್ಲಿ ಗುರುತಿಸುತ್ತೇನೆ. ಟ್ರಾಕ್ಟರ ನೋಡಲಾಗಿ ನಂ. ಕೆಎ 33 ಟಿಎ 6455 ಇದ್ದು, ಟ್ರ್ಯಾಲಿಗೆ ನಂಬರ ಇರುವುದಿಲ್ಲ. ಸದರಿ ಟ್ರ್ಯಾಕ್ಟರ ಟ್ರಾಲಿ ಮರಳು ತುಂಬಿದ್ದು, ಇದರ ಚಾಲಕನು ಅಕ್ರಮವಾಗಿ ಮತ್ತು ಕಳ್ಳತನದಿಂದ ಸರಕಾರಕ್ಕೆ ಯಾವುದೇ ರಾಜಧನ ಪಾವತಿಸದೆ ಮರಳು ಸಾಗಾಣಿಕೆ ಮಾಡುತ್ತಿದ್ದು, ನಾವು ದಾಳಿ ಮಾಡಿದಾಗ ಟ್ರ್ಯಾಕ್ಟರ ಚಾಲಕನು ತಮ್ಮ ಹತ್ತಿರ ರಾಯಲ್ಟಿ ವೈಗೆರೆ ದಾಖಲಾತಿ ಇಲ್ಲದ ಕಾರಣ ಟ್ರ್ಯಾಕ್ಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಸದರಿ ಟ್ರ್ಯಾಕ್ಟರ ಚಾಲಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು ನಿಮಗೆ ದೂರು ನಿಡಿದ್ದು, ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 82/2019 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
    
ವಡಗೇರಾ ಪೊಲೀಸ್ ಠಾಣೆ :- ಗುನ್ನೆ ನಂ. 83/2019 ಕಲಂ: 363,109 ಐಪಿಸಿ ;- ದಿನಾಂಕ: 13/11/2019 ರಂದು 6-30 ಪಿಎಮ್ ಕ್ಕೆ ಶ್ರೀಮತಿ ಜೈತುಂಬಿ ಗಂಡ ದಿ:ಅಜ್ಮೀರಸಾಬ ಅಂಬಿಗೇರ, ವ:40, ಜಾ:ಮುಸ್ಲಿಂ, ಉ:ಕೂಲಿ ಸಾ:ತುಮಕೂರು ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ನನಗೆ 4 ಹೆಣ್ಣು ಮತ್ತು 1 ಗಂಡು ಹೀಗೆ 5 ಜನ ಮಕ್ಕಳಿರುತ್ತಾರೆ. ನನ್ನ ಗಂಡನು ಸುಮಾರು 1 ವರ್ಷದ ಹಿಂದೆ ತೀರಿಕೊಂಡಿರುತ್ತಾನೆ. ನನ್ನ ಮೂರನೆ ಮಗಳಾದ ಆಫ್ರೀನ ಇವಳ ಜನ್ಮ ದಿನಾಂಕ: 01/01/2003 ಆಧಾರ ಕಾರ್ಡ ಪ್ರಕಾರ ಇರುತ್ತದೆ. ಸದರಿ ನನ್ನ ಮಗಳು ನಮ್ಮೂರ ಮಲ್ಲಮ್ಮ ಗಂಡ ಹಣಮಂತರೆಡ್ಡಿ ಹುಬ್ಬಳ್ಳಿ ಮತ್ತು ನಾಗಮ್ಮ ಗಂಡ ಬಸವರಾಜ ಮಡಿವಾಳ ಹಾಗೂ ಇತರರೊಂದಿಗೆ ನಮ್ಮೂರ ನಾಗರಾಜ ಸಾಹುಕಾರ ಇವರ ತೋಟಕ್ಕೆ ಸುಮಾರು ದಿವಸಗಳಿಂದ ಕೂಲಿ ಕೆಲಸಕ್ಕೆ ಹೋಗುತ್ತಿದ್ದಳು. ಸದರಿ ತೋಟದಲ್ಲಿ ಆಂಜನೇಯ ತಂದೆ ಹಣಮಂತ ಸಾ:ಅಮರೇಶ್ವರ ಕ್ಯಾಂಪ ಮಾನವಿ ಈತನು ಟ್ರ್ಯಾಕ್ಟರ ಚಾಲಕ ಎಂದು ಕೆಲಸ ಮಾಡುತ್ತಿದ್ದು, ನನ್ನ ಮಗಳಿಗೆ ಪರಿಚಯ ಇರುತ್ತಾನೆ. ನಾನು ನನ್ನ ಮಗಳಿಗೆ ಕೆಲಸಕ್ಕೆ ಹೋದಾಗ ನೀನು ಯಾರೊಂದಿಗೂ ಜಾಸ್ತಿ  ಮಾತಾಡಬೇಡ ನಿನ್ನ ಪಾಡಿಗೆ ನೀನು ಕೆಲಸ ಮಾಡಿ ಮನೆಗೆ ಬಾ ಎಂದು ಬುದ್ಧಿ ಮಾತು ಹೇಳಿ ಕಳುಹಿಸುತ್ತಿದ್ದೇನು. ಹೀಗಿದ್ದು ದಿನಾಂಕ: 10/11/2019 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನನ್ನ ಮಗಳಾದ ಆಫ್ರೀನ ವ:16 ವರ್ಷ ಇವಳು ನಮ್ಮೂರ ಮಲ್ಲಮ್ಮ ಗಂಡ ಹಣಮಂತರೆಡ್ಡಿ ಹುಬ್ಬಳ್ಳಿ ಇವಳ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊದಳು. ಮಲ್ಲಮ್ಮಳ ಮನೆಗೆ ಹೋದ ನನ್ನ ಮಗಳು ಎಷ್ಟೊತ್ತಾದರು ಮರಳಿ ಮನೆಗೆ ಬರಲಿಲ್ಲ. ಆಗ ನಾನು ಆಜುಬಾಜು ವಿಚಾರಿಸುತ್ತಿದ್ದಾಗ ನಮ್ಮ ಅಣ್ಣನಾದ ಸೈಯದ ಅಲಿ ತಂದೆ ಖಾಸಿಂ ಅಲಿ ಮತ್ತು ಡೊಂಗ್ರಿಸಾಬ ತಂದೆ ಬಾಷುಮಿಯಾ ಅಂಬಿಗೇರ ಇಬ್ಬರೂ ಬಂದು ನನಗೆ ಹೇಳಿದ್ದೇನಂದರೆ 7-30 ಪಿಎಮ್ ಸುಮಾರಿಗೆ ನಿನ್ನ ಮಗಳಾದ ಆಫ್ರಿನ ಇವಳು ಮಲ್ಲಮ್ಮ ಹುಬ್ಬಳಿ ಇವಳ ಮನೆ ಹತ್ತಿರ ಮಾತಾಡುತ್ತಾ ನಿಂತುಕೊಂಡವಳಿಗೆ ಆಂಜನೇಯ ತಂದೆ ಹಣಮಂತ ಸಾ:ಅಮರೇಶ್ವರ ಕ್ಯಾಂಪ ಮಾನವಿ ಈತನು ಬಂದು ಕರದುಕೊಂಡು ಹೋಗುತ್ತಿದ್ದನು. ಇದಕ್ಕೆ ಸದರಿ ಮಲ್ಲಮ್ಮ ಮತ್ತು ನಾಗಮ್ಮ ಇಬ್ಬರೂ ಸೇರಿ ಸಹಾಯ ಮಾಡುತ್ತಿದ್ದರು. ಆಫ್ರೀನ ಇವಳು ನಾನು ಬರಲ್ಲ ಎಂದು ಹೇಳಿದರು ಕೂಡಾ ಕೇಳದೆ ಅವಳಿಗೆ ಆಂಜನೇಯನು ತನ್ನ ಜೊತೆ ಕರೆದುಕೊಂಡು ಹೊದನು ಎಂದು ಹೇಳಿದರು. ಕಾರಣ ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಆಫ್ರೀನ ಇವಳಿಗೆ ಆಂಜನೇಯ ಈತನು ಮಲ್ಲಮ್ಮ ಮತ್ತು ನಾಗಮ್ಮ ಇವರ ಸಹಾಯ ಹಾಗೂ ಪ್ರಚೋದನೆಯಿಂದ ಅಪಹರಿಸಿಕೊಂಡು ಹೋಗಿರುತ್ತಾನೆ. ನನ್ನ ಮಗಳಿಗೆ ನಾವು ಎಲ್ಲಾ ಕಡೆ ಹುಡುಕಾಡಿ ಬಂದು ಫಿರ್ಯಾಧಿ ಕೊಡಲು ತಡವಾಗಿರುತ್ತದೆ. ಕಾರಣ ಅಪ್ರಾಪ್ತ ವಯಸ್ಸಿನ ನನ್ನ ಮಗಳಿಗೆ ಅಪಹರಿಸಿಕೊಂಡು ಹೋದ ಆಂಜನೇಯ ಮತ್ತು  ಅಪಹರಣಕ್ಕೆ ಪ್ರಚೋದನೆ ಕೊಟ್ಟ ಮಲ್ಲಮ್ಮ ಹಾಗೂ ನಾಗಮ್ಮ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ನನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 83/2019 ಕಲಂ: 363,109 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.  



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!