ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 30-10-2019

By blogger on ಮಂಗಳವಾರ, ಅಕ್ಟೋಬರ್ 29, 2019

                             
                                ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 30-10-2019.

ಸೈದಾಪೂರ ಪೊಲೀಸ್ ಠಾಣೆ :-  ಗುನ್ನೆ ನಂ. 114/2019 ಕಲಂ.341 143,323,354,,504,506  ಸಂಗಡ 149 ಐಪಿಸಿ :- ದಿನಾಂಕ: 21-10-2019 ರಂದು ಬೆಳಿಗ್ಗೆ 11-00 ಗಂಟೆಗೆ ಪಿಯರ್ಾಧಿದಾರಳಾದ  ಮಿನಾಕ್ಷಿ ಗಂಡ ರವಿಂದ್ರ ಭಾಗಮ್ಮನೋರ ವ|| 38 ವರ್ಷ ಜಾ|| ಬೇಡರು ಉ|| ಕೂಲಿಕೆಲಸ  ಸಾ|| ಗೌಡಗೇರಾ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿಯರ್ಾಧಿ ನೀಡಿದ್ದೆನೆಂದರೆ ದಿನಾಂಕ: 20-10-2019 ರಂದು ಬೆಳಿಗ್ಗೆ 08-30 ಗಂಟೆಗೆ ನಮ್ಮ ಮನೆಯ ಮುಂದೆ ಇರುವಾಗ ಆರೋಪಿತರು ಬಂದು ಅವಾಚ್ಯವಾಗಿ ರಂಡಿ ಮಕ್ಕಳೆ ಸೂಳಿ ಮಕ್ಕಳೆ ಅಂತಾ ಬೈದು ಕೈಯಿಂದ ಹೊಡೆ ಬಡೆ ಮಾಡಿ ವೇಲ್ ಮತ್ತು ಸೀರೆ ಸೆರಗು ಹಿಡಿದು ಜಗ್ಗಾಡಿ ಅವಮಾನ ಮಾಡಿ ಅಡ್ಡಗಟ್ಟಿ ನಿಲ್ಲಿಸಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ :- 115/2019 ಕಲಂ. 8 ಪೊಕ್ಸೊ ಮತ್ತು 341 143,323,354,,504,506  ಸಂಗಡ 149 ಐಪಿಸಿ  ;- ದಿನಾಂಕ: 21-10-2019 ರಂದು ಸಾಯಂಕಾಲ 06-00 ಗಂಟೆಗೆ ಪಿಯರ್ಾಧಿದಾರಳಾದ  ಪ್ರಿಯಾ ತಂದೆ ಯಂಕೊಬಾ ಗೌರಯ್ಯನೋರ ವ||  16 ವರ್ಷ ಜಾ|| ಬೇಡರು ಉ|| 10ನೇ ತರಗತಿ ವಿಧ್ಯಾಭ್ಯಾಸ ಸಾ|| ಗೌಡಗೇರಾ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ ಪಿಯರ್ಾಧಿ ತಂದು ಹಾಜರು ಪಡಿಸಿದ ಸಾರಂಶವೆನೆಂದರೆ ದಿನಾಂಕ: 17-10-2019 ರಂದು ಮದ್ಯಾಹ್ನ 12-30 ಗಂಟೆಗೆ ನಮ್ಮ ಮನೆಯ ಮುಂದೆ ಇರುವಾಗ ಆರೋಪಿತನು ಪಿಯರ್ಾಧಿದಾರಳಿಗೆ ರೊಕ್ಕ ಕೊಡತಿನಿ ಬಾ ಅಂತಾ ಹೇಳಿದ್ದು ಬರದಿಲ್ಲ ಅಂದಾಗ ಆರೋಪಿತನು ವೇಲು ಹಿಡಿದು ಜಗ್ಗಿ ಹೋಗಿದ್ದು ದಿನಾಂಕ:18-10-2019 ರಂದು ಬೆಳಿಗ್ಗೆ ಆರೋಪಿಯ ಮನೆಯ ಮುಂದೆ ಹೋಗಿ ಯಾಕೆ ನಮ್ಮ ಮಗಳಿಗೆ ವೇಲು ಹಿಡಿದು ಜಗ್ಗಾಡಿದಿ ಅಂತಾ ಕೇಳಿದ್ದಕ್ಕೆ ಆರೋಪಿತರೆಲ್ಲರು ಸೇರಿ  ಅವಾಚ್ಯವಾಗಿ ರಂಡಿ ಮಕ್ಕಳೆ ಸೂಳಿ ಮಕ್ಕಳೆ ಅಂತಾ ಬೈದು ಕೈಯಿಂದ ಹೊಡೆ ಬಡೆ ಮಾಡಿ ಸೀರೆ ಸೆರಗು ಹಿಡಿದು ಜಗ್ಗಾಡಿ ಅವಮಾನ ಮಾಡಿ ಅಡ್ಡಗಟ್ಟಿ ನಿಲ್ಲಿಸಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ :- ಗುನ್ನೆ ನಂ. 116/2019 ಕಲಂ. 279.337,338,304(ಎ) ಐಪಿಸಿ ಮತ್ತು 187 ಐಎಮವಿ ಕಾಯ್ದೆ   ;- ದಿನಾಂಕ: 22-10-2019 ರಂದು ಮದ್ಯರಾತ್ರಿ 12-30 ಗಂಟೆಗೆ ಪಿಯರ್ಾಧಿದಾರನಾದ ಗೋವಿಂದ ತಂದೆ ಉಮ್ಲಾ ಚೌಹಾಣ ವ|| 32 ವರ್ಷ ಜಾ|| ಲಮಾಣಿ ಉ|| ಒಕ್ಕಲುತನ ಸಾ|| ಬಳಿಚಕ್ರ ತಾಂಡ ಇತನು ಠಾಣೆಗೆ ಹಾಜರಾಗಿ ಹೇಳಿಕೆ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 21-10-2019 ರಂದು ರಾತ್ರಿ 09-00 ಗಂಟೆಗೆ ನಮ್ಮ ಅಣ್ಣ ಠಾಕ್ರ್ಯಾ ಮತ್ತು ನಮ್ಮ ತಾಂಡದ ಜನರು ಕೂಡಿ ಬದ್ದೆಪಲ್ಲಿ ತಾಂಡಕ್ಕೆ ಮದುವೆ ಕಾರ್ಯಕ್ರಮಕ್ಕೆ ನಮ್ಮೂರಿನಿಂದ ಆಟೋದಲ್ಲಿ ಯಾದಗಿರಿ -ರಾಯಚೂರ ಮುಖ್ಯ ರಸ್ತೆಯ ಮೇಲೆ ಬಳಿಚಕ್ರ ಗ್ರಾಮದ ಶಂಕರಗೌಡ ಇವರ ಹೊಲದ ಹತ್ತಿರ ಹೋಗುತ್ತಿರುವಾಗ ಎದುರಿನಿಂದ ಅಂದರೆ ರಾಯಚೂರ ಕಡೆಯಿಂದ ಲಾರಿ ಚಾಲಕನು ತಾನು ನಡೆಸುವ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಮ್ಮ ತಾಂಡದವರು ಹೋಗುವ ಆಟೊಕ್ಕೆ ಅಪಘಾತಪಡಿಸಿದ್ದರಿಂದ ಆಟೋದಲ್ಲಿದ್ದವರಿಗೆ ಗಾಯಗಳಾಗಿ ನಮ್ಮ ಅಣ್ಣ ಠಾಕ್ರ್ಯಾ ಮತ್ತು ಚೆನ್ಯ ಇಬ್ಬರು ಮೃತಪಟಿದ್ದು ಉಳಿದವರಿಗೆ ಸಾದಾ ಮತ್ತು ತಿವ್ರ ಸ್ವರೂಪದ ಗಾಯಗಳು ಆಗಿರುತ್ತವೆ ಅಪಘಾತಪಡಿಸಿ ಲಾರಿ ಚಾಲಕನಿ ಲಾರಿ ಬಿಟ್ಟು ಓಡಿ ಹೋಗಿರುತ್ತಾನೆ ಅವನ ಹೆಸರು ವಿಳಾಸ ಗೊತ್ತಿರುವದಿಲ್ಲ ಲಾರಿ ನಂ.ಕೆಎ-22 ಸಿ-5157 ನೇದ್ದರ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.

ಭೀ ಗುಡಿ ಪೊಲೀಸ್ ಠಾಣೆ :- ಗುನ್ನೆ ನಂ. 113/2019 ಕಲಂ 379 ಐಪಿಸಿ;- ದಿನಾಂಕ: 21/10/2019 ರಂದು 6.30 ಪಿ.ಎಂ.ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಮರಳು ತುಂಬಿದ ಒಂದು ಟ್ರಾಕ್ಟರ್ ಮತ್ತು ಜಪ್ತಿಪಂಚನಾಮೆಯೊಂದಿಎ ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ಇಂದು ದಿನಾಂಕ 21/10/2019 ರಂದು 4.30 ಪಿ.ಎಮ್ ಕ್ಕೆ ಬಿದರಾಣಿ ಕ್ರಾಸ್ ಹತ್ತಿರ ಹೊರಟಾಗ ಹುರಸಗುಂಡಗಿ ಕಡೆಯಿಂದ ಒಂದು ಮರಳು ತುಂಬಿದ ಟ್ರಾಕ್ಟರ್ ನಂ:ಕೆಎ-33, ಟಿಎ-8466 ಅದರಲ್ಲಿ ಅಂದಾಜು 2000/- ರೂ ಕಿಮ್ಮತ್ತಿನ ಮರಳು ತುಂಬಿಕೊಂಡು ಬಂದಾಗ ಟ್ರಾಕ್ಟರ್ ಚಾಲಕ ನಮಗೆ ನೋಡಿ ಓಡಿ ಹೋಗಿದ್ದು ಇರುತ್ತದೆ. ಆರೋಪಿತನು ಹುರಸಗುಂಡಗಿ ಸೀಮಾಂತರದ ಭೀಮಾ ನದಿಯಿಂದ ಮರಳನ್ನು ಕಳ್ಳತನದಿಂದ ಲೋಡ ಮಾಡಿಕೊಂಡು ಬಿದರಾಣಿ ಕಡೆ ಹೊರಟಿದ್ದು ಇರುತ್ತದೆ. ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಕೈಕೊಂಡು ಮರಳು ಸಮೇತ ಟ್ರಾಕ್ಟರ್ನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದರಿಂದ ಭೀ.ಗುಡಿ ಠಾಣೆ ಗುನ್ನೆ ನಂ. 113/2019 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ಕೆಂಭಾವಿ ಪೊಲೀಸ್ ಠಾಣೆ:- ಗುನ್ನೆ ನಂ 121/2019 ಕಲಂ: ಮಹಿಳೆ ಕಾಣೆಯಾದ ಬಗ್ಗೆ;- ದಿ: 21/10/19 ರಂದು 5.30 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ಶ್ರೀಕಾಂತ ತಂದೆ ದೆವೀಂದ್ರಪ್ಪ ಕೂಡಲಗಿ ವಯಸ್ಸು 20 ಜಾತಿ: ಹಿಂದೂ ಗಾಣಿಗ   ಉ: ವಿದ್ಯಾಥರ್ಿ  ಸಾ: ಮುದನೂರ [ಕೆ] ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ ನಾವು ಒಟ್ಟು ಮೂರು ಜನ ಮಕ್ಕಳಿದ್ದು ಅವರಲ್ಲಿ ದೊಡ್ಡವಳು ರೇಣುಕಾ ಇದ್ದು ಸದರಿಯವಳಿಗೆ ಇದ್ದ ಊರಿನಲ್ಲಿಯೇ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಇನ್ನೊಬ್ಬ ನನ್ನ ಅಕ್ಕಳಾದ ಶಿವಲೀಲಾ ಇವಳಿಗೆ ಸುಮಾರು ನಾಲ್ಕು ತಿಂಗಳ ಹಿಂದೆ ಇಂಡಿ ತಾಲೂಕಿನ ಅರ್ಚನಾಳ ಗ್ರಾಮದ ಪರಮೇಶ್ವರ ತಂದೆ ಶರಣಪ್ಪ ಬಿರಾದಾರ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಸುಮಾರು ಎರಡು ತಿಂಗಳವರೆಗೆ ಸದರಿ ನನ್ನ ಅಕ್ಕ ಶಿವಲೀಲಾ ಇವಳು ತನ್ನ ಗಂಡನ ಮನೆಯಲ್ಲಿಯೇ ಇದ್ದು  ಹೀಗಿದ್ದು ದಿನಾಂಕ 23/09/2019 ರಂದು ನಮ್ಮ ಮುದನೂರ ಗ್ರಾಮದ ಜಾತ್ರೆ ಇದ್ದ ನಿಮಿತ್ಯ ನಮ್ಮ ಊರಿಗೆ ಬಂದಿದ್ದಳು. ಹೀಗಿದ್ದು ದಿನಾಂಕ 06/10/2019 ರಂದು ಮದ್ಯಾಹ್ನ 03-45 ಗಂಟೆಯ ಸುಮಾರಿಗೆ ನಾವೆಲ್ಲರೂ ಮನೆಯಲ್ಲಿದ್ದಾಗ ನಮ್ಮ ಅಕ್ಕ ಶಿವಲೀಲಾ ಇವಳು ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಎಲ್ಲಿಗೋ ಹೋಗಿದ್ದು ಅವರ ಗೆಳತಿಯರ ಹತ್ತಿರ ಹೋಗಿರಬಹುದು ಅಂತ ನಾವು ಸುಮ್ಮನಿದ್ದೆವು. ಮದ್ಯಾಹ್ನ ಹೋದವಳು ಸಾಯಂಕಾಲವಾದರೂ ಮನೆಗೆ ಬರದೇ ಇದ್ದಾಗ ನಾನು ಹಾಗು ನನ್ನ ತಾಯಿಯಾದ ಶಾಂತಮ್ಮ ಎಲ್ಲರೂ ಕೂಡಿ ಅವಳ ಗೆಳತಿಯರ ಮನೆಗೆ ಹೋಗಿ ವಿಚಾರಿಸಿದರು ಎಲ್ಲಿಯೂ ಸಿಗಲಿಲ್ಲ ನಂತರ ನಾವು ಗಾಬರಿಯಾಗಿ ನಮ್ಮ ಸಂಬಂದಿಕರಲ್ಲಿ ಪೋನ ಮಾಡಿ ವಿಚಾರಿಸಲು ಎಲ್ಲಿಯೂ ಬಂದಿರುವದಿಲ್ಲ ಅಂತ ತಿಳಿಸಿದರು. ಕಾರಣ ಕಾಣೆಯಾದ ನನ್ನ ಅಕ್ಕಳಾದ ಶಿವಲೀಲಾ ಇವಳ ಪತ್ತೆ ಕುರಿತು ನಮ್ಮ ಸಂಬಂದಿಕರ ಊರುಗಳಿಗೆ ಹೋಗಿ ವಿಚಾರಿಸಿದರು ಎಲ್ಲಿಯೂ ಸಿಗಲಿಲ್ಲವಾದ್ದರಿಂದ ಇಂದು ತಡವಾಗಿ ಠಾಣೆಗೆ ಹಾಜರಾಗಿ ಕಾಣೆಯಾದ ನನ್ನ  ಅಕ್ಕ ಶಿವಲೀಲಾ ಇವಳನ್ನು ಹುಡುಕಿಕೊಡಬೇಕು ಅಂತ ಈ ಫಿಯರ್ಾದಿ ಅಜರ್ಿ ಸಲ್ಲಿಸಿದ್ದು ಇರುತ್ತದೆ.  ನನ್ನ ಅಕ್ಕ ಶಿವಲೀಲಾ ಗಂಡ ಪರಮೇಶ್ವರ ಬಿರಾದಾರ   ಇವರ ಚಹರೆ ಪಟ್ಟಿ ದುಂಡು ಮುಖ, ಸಾದಗಪ್ಪು ಬಣ್ಣ, ನೀಟಾದ ಮೂಗು, ಸಾದಾರಣ ಮೈಕಟ್ಟು, ಎತ್ತರ 5 ಫೀಟ್ 2 ಇಂಚ ,ಇದ್ದು ಸದರಿಯವಳು ಮನೆಯಿಂದ ಹೋಗುವಾಗ  ಗುಲಾಬಿ ಬಣ್ಣದ ಚೂಡಿದಾರ ಉಟ್ಟುಕೊಂಡು ಹೋಗಿದ್ದು  ಇರುತ್ತದೆ ಎಂಬ ಇತ್ಯಾದಿ ವಿವರದ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 121/19 ಕಲಂ: ಮಹಿಳೆ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಯಿತು.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!