ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 25-10-2019

By blogger on ಶುಕ್ರವಾರ, ಅಕ್ಟೋಬರ್ 25, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 25-10-2019
ಸೈದಾಪೂರ ಪೊಲೀಸ್ ಠಾಣೆ :- 111/2019 ಕಲಂ. 279.337,338,304(ಎ) ಐಪಿಸಿ;- ದಿನಾಂಕ:  11-10-2019 ರಂದು ಮದ್ಯಾಹ್ನ 01-30 ಗಂಟೆಗೆ ರಾಯಚೂರ ಸುರಕ್ಷ ಆಸ್ಪತ್ರೆಯಿಂದ ಎಮೆಲ್ ಸಿ ಬಂದಿದ್ದು  ಎಮೆಲ್ ಸಿ ಕುರಿತು ಆಸ್ಪತ್ರೆಗೆ ಭೆಟಿ ನೀಡಿ ಅಲ್ಲಿ ಉಪಚಾರ ಪಡೆಯುತಿದ್ದ ಗಾಯಾಳುಗಳನ್ನು ವಿಚಾರಿಸಿ ಅವರಲ್ಲಿ ವೆಂಕಟೇಶ ತಂದೆ ಮಾರೆಪ್ಪ ಇವರು ಹೆಳಿಕೆ ನೀಡಿದ ಸಾರಂಶವೆನೆಂದರೆ ದಿನಾಂಕ: 10-10-2019 ರಂದು ರಾತ್ರಿ 08-00 ಗಂಟೆಗೆ ಸಾವೂರ- ಆನೂರ(ಕೆ) ಮುಖ್ಯ ರಸ್ತೆಯ ಮೇಲೆ ಆನೂರ(ಕೆ) ಗ್ರಾಮದ ಬ್ರಿಜ್ ಹತ್ತಿರ ಕಾರ್ಯಕ್ರಮದ ನಿಮಿತ್ತ ಆನೂರ(ಕೆ) ಗ್ರಾಮಕ್ಕೆ ಹೊಗುವಾಗ ಕಾರ ಚಾಲಕನು ತಾನು ನಡೆಸುವ ಕಾರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸುತಿದ್ದು ರೋಡಿನ ಮೇಲೆ ಕಾಡು ಹಂದಿ ಅಡ್ಡ ಬಂದಿದ್ದರಿಂದ ಕಾರನ್ನು ಒಮ್ಮಲೆ ಬೆಕ್ ಮಾಡಿದ್ದಿಂದ ಕಾರು ರೀಡನ ಪಕ್ಕದ ಬ್ರೀಜ್ ಗೆ ಗುದ್ದಿ ಅಪಘಾತವಾಗಿರುತ್ತದೆ ಅಫಘಾತದಲ್ಲಿ ಕಾರಿನಲ್ಲಿದ್ದವರಿಗೆ ಭಾರಿ ಗುಪ್ತಗಾಯ ಮತ್ತು ಸಣ್ಣಪುಟ್ಟ ಗಾಯಗಳಾಗಿರುತ್ತವೆ ಅಂತಾ ಪಿಯರ್ಾಧಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ  ಅಪಘಾತದಲ್ಲಿ ಗಾಯಂಗೊಂಡ  ಕಲ್ಲಪ್ಪ ತಂದೆ ಮಲ್ಲಪ್ಪ ವ|| 30 ವರ್ಷ ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಸಾವೂರ ಇತನು ದಿನಾಂಕ: 24-10-2019 ರಂದು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಲ್ಲಿ ಮೃತಪಟ್ಟಿರುತ್ತಾನೆ 
    
ಕೋಡೇಕಲ್ ಪೊಲೀಸ್ ಠಾಣೆ :ಲ್ಗುನೆನ ನಂ. 54/2019 ಕಲಂ:78() ಕೆ ಪಿ ಆಕ್ಟ ;- ದಿನಾಂಕ 24.10.2019 ರಂದು 5:30 ಪಿಎಮ್ ಕ್ಕೆ ಪಿಎಸ್ಐ ಸಾಹೇಬರು ರವರು ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರ ಹಾಗೂ ತಾವು ಪೂರೈಸಿದ ಮಟಕಾ ಜೂಜಾಟದ ಅಸಲ ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ,  ದಿನಾಂಕ: 24.10.2019 ರಂದು 2:20 ಪಿ.ಎಮ್ ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಕಕ್ಕೇರಾ ಪಟ್ಟಣದ ವಾಲ್ಮೀಕಿ ವೃತ್ತದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕಲ್ಯಾಣಿ ಮಟಕಾ ಎಂಬುವವ ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಿದ್ದು. ಸದರಿ ದಾಳಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಯಲ್ಲಪ್ಪ ಹೆಚ್ಸಿ-117 ರವರಿಗೆ ತಿಳಿಸಿದ್ದು ಯಲ್ಲಪ್ಪ ಹೆಚ್ಸಿ ರವರು ಪಂಚರನ್ನಾಗಿ 1) ಹಣಮಂತ್ರಾಯ ತಂದೆ ಕನಕಪ್ಪ ದೊರಿ ಸಾ: ಕೊಡೇಕಲ್ಲ  2) ಸಂಗಯ್ಯ ತಂದೆ ಬಸಯ್ಯ ಹಿರೇಮಠ ಸಾ:ಕೊಡೇಕಲ್ಲ  ಇವರನ್ನು  2:30 ಪಿಎಮ್ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು ಸದರಿಯವರಿಗೆ ವಿಷಯ ತಿಳಿಸಿ ಮಟಕಾ ಜುಜಾಟದ ಜಪ್ತಿ ಪಂಚನಾಮೆಗೆ ಪಂಚರಾಗಲು ಕೋರಿಕೊಂಡಿದ್ದು ಅದಕ್ಕೆ ಒಪ್ಪಿಕೊಂಡ ಮೇರೆಗೆ ಸಿಬ್ಬಂದಿಯವರಾದ ಯಲ್ಲಪ್ಪ ಹೆಚ್ಸಿ-117  ಬಸನಗೌಡ ಹೆಚ್ಸಿ-100, ರವರನ್ನು ಮತ್ತು  ಪಂಚರೊಂದಿಗೆ ಠಾಣೆಯಿಂದ 2:35 ಪಿಎಮ್ ಕ್ಕೆ ಬಿಟ್ಟು 3:15 ಪಿಎಮ್ಕ್ಕೆ ಕಕ್ಕೇರಾ ಉಪ ಠಾಣೆಗೆ ತಲುಪಿ ಅಲ್ಲಿನ ಸಿಬ್ಬಂದಿಯವರಾದ ಎಎಸ್ಐ ಬಸನಗೌಡ ಮತ್ತು ಪ್ರಕಾಶ ಹೆಚ್ಸಿ-143 ಲಿಂಗಪ್ಪ ಪಿಸಿ-216 ರವರಿಗೆ ಕರೆದು ಅವರಿಗೆ ವಿಷಯ ತಿಳಿಸಿ ನಮ್ಮ ಜೋತೆಗೆ ಜೀಪಿನಲ್ಲಿ ಕೂಡಿಸಿಕೊಂಡು ಬಾತ್ಮಿ ಬಂದ ಸ್ಥಳವಾದ ಕಕ್ಕೇರಾ ಪಟ್ಟಣದ ವಾಲ್ಮೀಕಿ ವೃತ್ತದ ಹತ್ತಿರ ಹೋಗಿ  ಸ್ವಲ್ಪ ದೂರದಲ್ಲಿ 3:20 ಪಿಎಮ್ ಕ್ಕೆ ತಲುಪಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಜೀಪಿನಿಂದ ಎಲ್ಲರು ಕೆಳಗೆ ಇಳಿದು ಮರೆಮರೆಯಾಗಿ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲಾಗಿ   ವಾಲ್ಮೀಕಿ ವೃತ್ತದ ಹತ್ತಿರ ಶಾಂತಪುರ ಕ್ರಾಸ್ ಬಲಶೆಟ್ಟಿಹಾಳ ಮುಖ್ಯ ರಸ್ತೆಯ ಪಕ್ಕದಲ್ಲಿ  ಸಾರ್ವಜನಿಕ ಸ್ಥಳದಲ್ಲಿ  ಒಬ್ಬನು ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಕರೆದು ಬರ್ರಿ ಒಂದು ರೂ.ಗೆ 80 ರೂಪಾಯಿ ಕಲ್ಯಾಣೆ ಮಟಕಾ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಒಂದು ಚೀಟಿಯಲ್ಲಿ ನಂಬರ್ ಬರೆದುಕೊಡುತ್ತಿದ್ದು ಖಾತರಿ ಆದ ಮೇಲೆ ನಾನು ಮತ್ತು ಸಿಬ್ಬಂದಿಯವರು 3:30 ಪಿಎಮ್ ಕ್ಕೆ ಓಡಿ ಹೋಗಿ ದಾಳಿ ಮಾಡಿದ್ದು ಮಟಕಾ ನಂಬರ್ ಬರೆದುಕೊಳ್ಳುವವನನ್ನು ಹಿಡಿದಿದ್ದು ಮಟಕಾ ನಂಬರ್ ಬರೆಸುವವರು ಓಡಿ ಹೋಗಿದ್ದು ಮಟಕಾ ನಂಬರ್ ಬರೆದುಕೊಳ್ಳುವವನನ್ನು ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ಹುಲಗಪ್ಪ ತಂದೆ ಸೋಮಣ್ಣ ಗೋವಿಂದರ್ ವ:45 ವರ್ಷ ಉ: ಒಕ್ಕಲುತನ ಜಾ: ಹಿಂದೂ ಬೇಡರ ಸಾ: ಕಕ್ಕೇರಾ ತಾ: ಸುರಪೂರ  ಅಂತಾ ತಿಳಿಸಿದ್ದು ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವನ ವಶದಲ್ಲಿ  ಒಂದು ಬಾಲ್ ಪೆನ್ನು, ಒಂದು ಅಂಕಿ-ಸಂಖ್ಯೆ ಬರೆದ ಮಟಕಾ ಚೀಟಿ, ಮತ್ತು ನಗದು ಹಣ 380 ರೂಪಾಯಿಗಳು ದೊರೆತಿದ್ದು. ಈ ಬಗ್ಗೆ ಪಂಚರ ಸಮಕ್ಷಮದಲ್ಲಿ  ಜಪ್ತಿ ಪಂಚನಾಮೆಯನ್ನು 3:30 ಪಿ.ಎಮ್ ದಿಂದ 4:30 ಪಿಎಮ್ ವರೆಗೆ  ಜರುಗಿಸಿ ಆರೋಪಿ ಹಾಗು ಮುದ್ದೇಮಾಲಿನೊಂದಿಗೆ ಠಾಣೆಗೆ 5:30 ಪಿ.ಎಮ್ ಕ್ಕೆ ಬಂದು ನಿಮಗೆ ನಾನು ಪೂರೈಸಿದ ಜಪ್ತಿ ಪಂಚನಾಮೆಯನ್ನು ಈ ಜ್ಞಾಪನ ಪತ್ರದೊಂದಿಗೆ ಹಾಜರುಪಡಿಸಿದ್ದು, ಆರೋಪಿತನ ಮೇಲೆ ಮುಂದಿನ ಕ್ರಮ ಜರುಗಿಸಬೇಕು.  ಅಂತಾ ಇದ್ದು ಕಾರಣ ಪಿಎಸ್ಐ ಸಾಹೇಬರು ಹಾಜರ ಪಡಿಸಿದ ಸದರಿ ಜಪ್ತಿ ಪಂಚನಾಮೆಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದು ಕಲಂ 78 (3) ಕೆಪಿ ಎಕ್ಟ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಬೇಕಾಗಿದ್ದರಿಂದ  ಕಲಂ 78 (3) ಕೆಪಿ ಎಕ್ಟ ಅಸಂಜ್ಞೆಯ ಅಪರಾಧವಾಗಿದ್ದರಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ನಿನ್ನೆಯ ದಿನ ಹೆಚ್ಸಿ-04 ಚಂದ್ರಶೇಖರ ರವರು ಮಾನ್ಯ ನ್ಯಾಯಾಲಯಕ್ಕೆ ಪರವಾನಿಗೆಗಾಗಿ ವಿನಂತಿಸಿಕೊಂಡಿದ್ದು. ಇಂದು ದಿನಾಂಕ: 25.10.2019 ರಂದು 2:15 ಪಿ ಎಂ ಕ್ಕೆ  ಪಿಸಿ-251 ಕಜ್ಜಪ್ಪ ರವರು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಬಂದು ಪರವಾನಿಗೆ ಯಾದಿಯನ್ನು ಹಾಜರಪಡಿಸಿದ್ದು. ನಿನ್ನೆ ಪಿಎಸ್ಐ ರವರು ಹಾಜರ ಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪಾನ ಪತ್ರದ ಸಾರಾಂಶದ ಮೇಲಿಂದ ಇಂದು ನಾನು ಬಸವರಾಜ ಹೆಚ್ಸಿ-09 ಠಾಣೆ ಗುನ್ನೆ ನಂ: 54/2019 ಕಲಂ: 78 (111) ಕೆ.ಪಿ. ಎಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
   
ಕೋಡೇಕಲ್ ಪೊಲೀಸ್ ಠಾಣೆ :- 55/2019 ಕಲಂ 323 504 506 448  ಖ/ಘ 34 ಕಅ;- ದಿನಾಂಕ 25.10.2019 ರಂದು 5:30 ಪಿಎಮ್ಕ್ಕೆ   ಠಾಣೆಯ ನ್ಯಾಯಾಲಯ ಕರ್ತವ್ಯ ಮಾಡುವ ಪಿಸಿ 251 ಕಜ್ಜಪ್ಪ ರವರು ಮಾನ್ಯ ನ್ಯಾಯಾಲಯದಿಂದ ಮರಳಿ ಠಾಣೆಗೆ ಬಂದು ಮಾನ್ಯ  ಜೆ ಎಂ ಎಫ್ ಸಿ ನ್ಯಾಯಾಲಯ ಸುರಪೂರ ರವರ ನ್ಯಾಯಾಲಯ ಪತ್ರ ನಂ- ನೇದ್ದನ್ನು ಮತ್ತು ಅದರ ಜೊತೆಗೆ ಮಾನ್ಯ ನ್ಯಾಯಲಯದ ಖಾಸಗಿ ಪಿಯರ್ಾದಿ ಸಂಖ್ಯೆ 25/2019 ನೇದ್ದನ್ನು ಠಾಣೆಗೆ ತಂದು ಹಾಜರು ಪಡಿಸಿದ್ದು, ಮಾನ್ಯ ನ್ಯಾಯಲಯವು 156(3) ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ  ಕೈಕೊಂಡು ತನಿಖಾ ವರದಿಯನ್ನು ಸಲ್ಲಿಸಲು ಆದೇಶಿಸಿದ್ದು ಸದರ ಖಾಸಗಿ ಫಿಯರ್ಾದಿ ನಂ-25/2019 ನೇದ್ದರ ಫಿಯರ್ಾದಿದಾರನಾದ ಶ್ರೀ. ರೇವಣಪ್ಪ ತಂದೆ ಹಣಮಂತ್ರಾಯ ನಾಯ್ಕೋಡಿ ವ:70 ವರ್ಷ ಉ; ಒಕ್ಕಲುತನ ಜಾ: ಹಿಂದೂ ಕುರುಬರ ಸಾ: ರಾಜನಕೊಳುರು ತಾ: ಹುಣಸಗಿ ರವರ ಸದರ ಖಾಸಗಿ ಪಿಯರ್ಾದದ ಸಾರಾಂಶವೆನೆಂದರೆ ಆರೋಪಿ ನಂ. 1 ದೇವಪ್ಪ  ಮತ್ತು  ಆರೋಪಿ ನಂ:2  ಗಂಗಪ್ಪ ರವರು ಪಿಯರ್ಾದಿಯ ಮಕ್ಕಳಾಗಿದ್ದು ಆರೋಪಿ ನಂ. 3 ಮಲ್ಲಮ್ಮಳು ಪಿಯರ್ಾದಿಯ ಹೆಂಡತಿ ಆಗಿರುತ್ತಾಳೆ. ಪಿಯರ್ಾದಿ ಮತ್ತು ಆರೋಪಿತರು ರಾಜನಕೊಳೂರ ಗ್ರಾಮದಲ್ಲಿನ ಒಂದೆ ಮುಖ್ಯದ್ವಾರ ಹೊಂದಿರುವ ಬೇರೆ ಬೇರೆ ಕೊಣೆಯುಳ್ಳ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಿರುತ್ತಾರೆ. ಆರೋಪಿ ನಂ. 1 ದೇವಪ್ಪ ಇತನವು  ಒಟ್ಟು 5ಎಮ್ಮಗಳಿದ್ದು ಅವುಗಳನ್ನು ಪಿಯರ್ಾದಿಯವರ ಮನೆಯ ಮುಂದೆ ಕಟ್ಟಲು ಹೋಗಿದ್ದು ಆಗ ಪಿಯರ್ಾದಿಯು ದೇವಪ್ಪನಿಗೆ  ಇಲ್ಲಿಂದ ಎಮ್ಮೆಗಳನ್ನು ಹೊಡೆದುಕೊಂಡು ಹೋಗುವಂತೆ ಹೇಳಿ ವಿನಂತಿಸಿಕೊಂಡರು ಆರೋಪಿತರೆಲ್ಲರು ಎಮ್ಮೆಗಳನ್ನು ಬೇರೆ ಕಡೆ ಕಟ್ಟದೆ ಪಿಯರ್ಾದಿಗೆ ಲೇ ಬದ್ಮಾಶ ಸೂಳೆ ಮಗನೆ ನಿನ್ನ ಸೊಕ್ಕು ಬಹಳವಾಗಿದೆ ಮುದಿ ಸೂಳಿಮಗನೆ ನಾವು ಇದೆ ಜಾಗದಲ್ಲಿ ದನ ಕಟ್ಟುತ್ತೆವೆ ಹೆಚ್ಚಿಗೆ ಬಾಯಿ ತೆಗೆದರೆ ನಿನ್ನ ಜೀವ ತೆಗೆಯುತ್ತೇವೆ ನಿನ್ನನ್ನು ಹುಟ್ಟಿಲ್ಲ ಅನ್ನಿಸುತ್ತೇವೆ. ಎಂದು ಬೈದು ಜಗಳತೆಗೆದು ಕೈಯಿಂದ ಮತ್ತು ಕಟ್ಟಿಗೆಯಿಂದ ಪಿಯರ್ಾದಿಗೆ ಹೊಡೆಯುತ್ತಿದ್ದಾಗ ಪಿಯರ್ಾದಿಯು ಚಿರಾಡಿಕೊಂಡಿದ್ದು ಆಗ ಸಾಕ್ಷಿದಾರರಾದ ರಾಮನಗೌಡ ತಂದೆ ಬಸವಂತ್ರಾಯ ಗುಳಬಾಳ, ಶರಣಯ್ಯ ತಂದೆ ಬಸಲಿಂಗಯ್ಯ ಮಠ, ಸಿದ್ದನಗೌಡ ತಂದೆ ಈರಪ್ಪಗೌಡ ಗುಳಬಾಳ ಸಾ|| ಎಲ್ಲಾರೂ ರಾಜನಕೊಳೂರ ಇವರುಗಳು ಓಡಿ ಜಗಳ ನಡೆದಸ್ಥಳಕ್ಕೆ ಬಂದು ಪಿಯರ್ಾದಿಯನ್ನು ಆರೋಪಿತರಿಂದ ಬಿಡಿಸಿಕೊಂಡರು ಇಲ್ಲದಿದ್ದರೆ ಆರೋಪಿತರು ಪಿಯರ್ಾದಿಗೆ ಇನ್ನೂ ಹೊಡೆ-ಬಡೆ ಮಾಡುತ್ತಿದ್ದರು. ಕಾರಣ ಈ ಬಗ್ಗೆ ಆರೋಪಿತರ ವಿರುದ್ಧ ಕ್ರಮ ಜರುಗಿಸಿ ತನಗೆ ನ್ಯಾಯ ದೊರಕಿಸಿಕೊಡಬೆಕೇಂದು ಪಿಯರ್ಾದಿಯವರ ವಗೈರೆ ಖಾಸಗಿ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 55/2019 ಕಲಂ 323,504, 506, 448  ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು


ಶೋರಾಪೂರ ಪೊಲೀಸ್ ಠಾಣೆ :- 204/2019 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957 ;- ದಿನಾಂಕ:25-10-2019 ರಂದು 8-45 ಎ.ಎಂ. ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀ ಸೋಮಲಿಂಗ ಒಡೆಯರ್ ಪಿ.ಎಸ್.ಐ (ಕಾ&ಸೂ) ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರನೊಂದಿಗೆ ಜಪ್ತಿ ಪಂಚನಾಮೆ ಹಾಜರು ಪಡಿಸಿ ವರದಿ ನೀಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:25-10-2019 ರಂದು 6 ಎ.ಎಮ್ ಸುಮಾರಿಗೆ ನಾನು ಠಾಣೆಯ  ಸಿಬ್ಬಂಧಿಯವರಾದ ಶ್ರೀ ಮನೋಹರ ಹೆಚ್.ಸಿ-105, ಶ್ರೀ ಸುಭಾಸ ಸಿಪಿಸಿ-174, ಶ್ರೀ ಸೋಮಯ್ಯ ಸಿಪಿಸಿ-235 ಎಲ್ಲರೂ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಕನರ್ಾಳ ಸೀಮಾಂತರ ಕೃಷ್ಣಾ ತೀರದಿಂದ ಯಾರೋ ಒಬ್ಬರು ತಮ್ಮ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ರುಕ್ಮಾಪೂರ ಮಾರ್ಗವಾಗಿ ಸುರಪೂರ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಇಬ್ಬರು ಪಂಚರಾದ 1) ಹರೆಪ್ಪ ತಂದೆ ಮಾನಶಯ್ಯ ದೇಸಾಯಿ ವಯಾ:47ವರ್ಷ ಉ:ಒಕ್ಕಲುತನ ಜಾ:ಬೇಡರ ಸಾ: ಕನರ್ಾಳ ತಾ: ಸುರಪುರ 2) ಶ್ರೀ ಮಾನಶಪ್ಪ ತಂದೆ ಹಣಮಯ್ಯ ದೇಸಾಯಿ ವಯ: 50ವರ್ಷ ಉ: ಒಕ್ಕಲುತನ ಜಾ: ಬೇಡರ ಸಾ: ಕನರ್ಾಳ ತಾ: ಸುರಪುರ ಇವರನ್ನು ಠಾಣೆಗೆ 6-15 ಎ.ಎಂ.ಕ್ಕೆ ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರು ಸಿಬ್ಬಂಧಿಯೊಂದಿಗೆ ಎಲ್ಲರೂ ಠಾಣೆಯ ಜೀಪ ನಂಬರ ಕೆಎ-33 ಜಿ-0094 ನೇದ್ದರ ವಾಹನದಲ್ಲಿ 6-30 ಎ.ಎಂ.ಕ್ಕೆ ಹೊರಟು ರುಕ್ಮಾಪೂರ ಕ್ರಾಸ ಹತ್ತಿರ ಮುಖ್ಯ ರಸ್ತೆಯಲ್ಲಿ 7 ಎ.ಎಂ.ಕ್ಕೆ ಹೋಗಿ ನಿಂತುಕೊಂಡಾಗ ಅದೆ ಸಮಯಕ್ಕೆ ಕನರ್ಾಳ ಕಡೆಯಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ಕೈ ಮಾಡಿ ನಿಲ್ಲಿಸಲು ಸದರಿ ಚಾಲಕನು ನಮ್ಮ ಪೊಲೀಸ್ ಜೀಪನ್ನು ನೋಡಿ ತನ್ನ ಟ್ಯಾಕ್ಟರನ್ನು ಸ್ವಲ್ಪ ಅಂತರದ ಹಿಂದುಗಡೆ ರೋಡಿನ ಸೈಡಿಗೆ ನಿಲ್ಲಿಸಿ ಕೆಳಗೆ ಇಳಿದು ಓಡಿ ಹೊದನು. ನಂತರ ನಾವು ಸದರಿ ಟ್ಯಾಕ್ಟರ ಹತ್ತಿರ ಹೋಗಿ ಟ್ಯಾಕ್ಟರನ್ನು ಪರೀಶಿಲಿಸಿ ನೋಡಲು ಒಂದು ಸ್ವರಾಜ್ಯ ಕಂಪನಿಯ ಟ್ಯಾಕ್ಟರ ಇದ್ದು ಅದಕ್ಕೆ  ನಂಬರ ಇರುವದಿಲ್ಲ. ಅದರ ಇಂಜಿನ ನಂಬರ 39.1357/ಖಂಆ02929, ಚೆಸ್ಸಿ ನಂಬರ ಒಃಓಂಕ48ಂಆಏಖಿಆ02199 ನೇದ್ದು, ಟ್ರಾಲಿಗೆ ನಂಬರ ಇರುವದಿಲ್ಲ. ಅದರಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅ.ಕಿ 1600/- ರೂಗಳು ಆಗುತ್ತದೆ. ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲಿಕನು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಟ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 7 ಎ.ಎಮ್ ದಿಂದ 8 ಎ.ಎಮ್ ದ ವರೆಗೆ ಕೈಗೊಂಡಿದ್ದು ಇರುತ್ತದೆ. ಆದ್ದರಿಂದ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಮರಳು ತುಂಬಿದ ಟ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಹಾಜರು ಪಡಿಸಿದ್ದು ಟ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ನಿಡಿದ ಮೇರೆಗೆ  ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.                              


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!