ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 15-10-2019

By blogger on ಮಂಗಳವಾರ, ಅಕ್ಟೋಬರ್ 15, 2019




ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 15-10-2019
ಶಹಾಪೂರ ಪೊಲೀಸ್ ಠಾಣೆ :- ಗುನ್ನೆ ನಂಬರ 255/2019 ಕಲಂ 279, 304(ಎ) ಐ.ಪಿ.ಸಿ;- ದಿನಾಂಕ 15/10/2019 ರಂದು ಬೆಳಗಿನ ಜಾವ 01-00 ಗಂಟೆಗೆ ಫಿರ್ಯಾದಿ ಶ್ರೀಮತಿ ಭೀಮವ್ವ ಗಂಡ ಭೀಮರಾಯ ತೆಲಗರ ವಯ 65 ವರ್ಷ ಜಾತಿ ಕಬ್ಬಲಿಗ ಉಃ ತರಕಾರಿ ವ್ಯಾಪಾರ ಸಾಃ ಗಂಗಾನಗರ ಶಹಾಪೂರ. ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ತನ್ನ ಮೊಮ್ಮಗ ಯಲ್ಲಪ್ಪ ತಂದೆ ತಿಮ್ಮಯ್ಯ ರಾಮಸ್ವಾಮಿ ವಯ 25 ವರ್ಷ ಜಾತಿ ಕಬ್ಬಲಿಗ ಈತನು ಶಹಾಪೂರ ಹೊಸ್ ಬಸ್ ನಿಲ್ದಾಣದ ಎದರುಗಡೆ ಇರುವ ರಮೇಶ ದೋರನಳ್ಳಿ ಈತನ ಟೀ ಪಾಯಿಂಟ್ದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದನು.
        ಹೀಗಿರುವಾಗ ನಿನ್ನೆ ದಿನಾಂಕ 14/10/2019 ರಂದು ಯಲ್ಲಪ್ಪನು ಟೀ ಪಾಯಿಂಟ್ದಲ್ಲಿ ಕೆಲಸ ಮುಗಿಸಿಕೊಂಡು ತಿಪ್ಪನಳ್ಳಿಯಲ್ಲಿರುವ ಬೀಗರ ಮನೆಗೆ ತನ್ನ ಸಿಟಿ-100 ಮೋಟರ್ ಸೈಕಲ್ ನಂಬರ ಇರಲಾರದ್ದು ಚೆಸ್ಸಿ ನಂ
MD2A18AZ1GWE06497ನೇದ್ದರ ಮೇಲೆ ಹೋಗುತಿದ್ದಾಗ ಶಹಾಪೂರ-ವಿಭೂತಿಹಳ್ಳಿ ರೋಡಿನ ಮೇಲೆ ರಾತ್ರಿ  8-30 ಗಂಟೆಗೆ ವಿಭೂತಿಹಳ್ಳಿ ಗ್ರಾಮದ ಹತ್ತಿರ ಇರುವ ವೆಲ್-ಕಮ್  ಬೋಡ್ ದಾಟಿ ತನ್ನ ಮೋಟರ ಸೈಕಲ್ ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಸ್ಕಿಡ್ಡಾಗಿ ಬಿದ್ದು ರೋಡಿನ ಬದಿಗೆ ಇರುವ ಸಿಮೇಂಟ್ದ ಗೂಟ್ಗಲ್ಲಿಗೆ ಬಡಿದು ಎಡಕಪಾಳಕ್ಕೆ ಭಾರಿ ರಕ್ತಗಾಯವಾಗಿ ಭಾವು ಬಂದು ಹಲ್ಲುಗಳು ಮುರಿದಂತೆ ಆಗಿ ಕಿವಿಗಳಿಂದ ರಕ್ತ ಸೋರಿದ್ದು ಉಪಚಾರ ಕುರಿತು ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತ ರಾತ್ರಿ 09-15 ಗಂಟೆಯ ಸುಮಾರಿಗೆ ಟೀ ಪಾಯಿಂಟ್ ಮಾಲಿಕ ರಮೇಶನಿಂದ ಸುದ್ದಿ ಗೊತ್ತಾಗಿ ಫಿಯರ್ಾದಿಯವರು ರಾತ್ರಿ 9-30 ಗಂಟೆಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಭೇಟಿ ಮಾಡಿ ತನ್ನ ಮೊಮ್ಮಗನಿಗೆ ನೋಡಲು ಹೋದಾಗ ಮೃತ ಪಟ್ಟಿರುತ್ತಾನೆ ಅಂತ ವೈದ್ಯಾಧಿಕಾರಿಗಳಿಂದ ವಿಷಯ ಗೊತ್ತಾಗಿರುತ್ತದೆ.
        ಕಾರಣ ಯಲ್ಲಪ್ಪ ಈತನು ತನ್ನ ಸಿಟಿ -100 ಮೋಟರ ಸೈಕಲ್ನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ತಿಪ್ಪನಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ಹೋಗುತಿದ್ದಾಗ  ಮೋಟರ್ ಸೈಕಲ್ ಸ್ಕಿಡ್ಡಾಗಿ ಬಿದ್ದ ಪರಿಣಾಮ ಭಾರಿಗಾಯ, ಪೆಟ್ಟು ಹೊಂದಿ ಮೃತ ಪಟ್ಟಿರುತ್ತಾನೆ ಸದರಿಯವನ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿಯವರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 255/2019 ಕಲಂ 279, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ :- ಗುನ್ನೆ ನಂ 256/2019. ಕಲಂ 78 (3) ಕೆ.ಪಿ.ಆಕ್ಟ;- ದಿನಾಂಕ: 15-10-2019 ರಂದು 6:10 ಪಿ.ಎಮ್.ಕ್ಕೆ  ಆರೋಪಿತನು ಗಂಗಾನಗರದ ಬೋರವೆಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ   ಸಾರ್ವಜನಿಕರಿಂದ ಹಣ ಪಡೆದುಕೊಂಡು  ಒಂದು ರೂಪಾಯಿಗೆ 80 ರೂ ಬರುತ್ತದೆ. ದೈವದ ಆಟಾ ಆಡಿರಿ ಎಂದು ಕೂಗಿ ಕರೆಯುತ್ತಾ ಮಟಕಾ ನಂಬರ ಬರೆದುಕೊಳ್ಳುತ್ತಿರುವಾಗ ಫಿಯಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿಮಾಡಿ ಹಿಡಿದು ಅವರಿಂದ 1)  ನಗದು ಹಣ 720/- 2) ಒಂದು ಬಾಲ್ ಪೆನ್ .ಕಿ.00=00 3) ಒಂದು ಮಟಕಾ ಚೀಟಿಗಳು ಅ.ಕಿ. 00=00  ಜಪ್ತಿ ಪಡಿಸಿಕೊಂಡು ಮರಳಿ ಠಣೆಗೆ ಬಂದು ಕ್ರಮ ಜರುಗಿಸಿದ್ದು ಇದೆ.
  
ಯಾದಗಿರಿ ಗ್ರಾ ಪೊಲೀಸ್ ಠಾಣೆ :- ಗುನ್ನೆ ನಂ: 140/2019  ಕಲಂ 379  ಐಪಿ.ಸಿ;-
ದಿನಾಂಕ 15-10-2019 ರಂದು 9-30 ಎ.ಎಮ್ ಕ್ಕೆ ಶ್ರೀ ವೀರಣ್ಣಾ ಎಸ್ ಮಗಿ ಪಿ.ಎಸ್.ಐ (ಕಾಸು) ಯಾದಗಿರಿ ಗ್ರಾಮೀಣ ಠಾಣೆರವರು ಒಂದು ಉಸುಕು ತುಂಬಿದ ಟ್ರ್ಯಾಕ್ಟರನ್ನು ಜಪ್ತಿಪಂಚನಾಮೆಯೊಂದಿಗೆ ಠಾಣೆಗೆ ಬಂದು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ  ಇಂದು ದಿನಾಂಕ 15-10-2019 ರಂದು ಬೆಳಗ್ಗೆ 7 ಗಂಟೆಗೆತಮಗೆ ಖಚಿತ ಮಾಹಿತಿ ಬಂದಿದ್ದೆನೆಂದರೆ ಯಾರೋ ಗೌಡಗೇರಾ ಹಳ್ಳದಲ್ಲಿ ಟ್ರ್ಯಾಕ್ಟರದಲ್ಲಿ ಕಳ್ಳತನದಿಂದ ಉಸುಕು ತುಂಬಿಕೊಂಡು ಬಳಿಚಕ್ರ ಕಡೆಯಿಂದ ಯಾದಗಿರಿ ಕಡೆಗೆ ಅನಧಿಕೃತವಾಗಿ ಸಾಗಾಣಿಗೆ ಮಾಡುತ್ತಿದ್ದಾರೆ ಅಂತಾ ಭಾತ್ಮೀ ಬಂದಿದ್ದರಿಂದ ಕೂಡಲೇ ಇಬ್ಬರು ಪಂಚರಾದ ಶ್ರೀ ದೇವಪ್ಪ ತಂದೆ ಶಿವಪ್ಪ ಸಿದ್ದಿ ವಯ: 24 ಜಾ: ಮಾದಿಗ ಉ: ಕೂಲಿ ಸಾ: ಇಂದಿರಾನಗರ ಯಾದಗಿರಿ ಮತ್ತು ಶ್ರೀ ನಿಂಗಪ್ಪ ತಂದೆ ದೊಡ್ಡ ಸಾಬಣ್ಣ ದೊಡ್ಡ ಸಾಬಣ್ಣನವರ ವಯ: 38 ಜಾ: ಹರಿಜನ ಉ:ಕೂಲಿ ಸಾ: ಅಂಬೇಡ್ಕರ್ ಚೌಕ್ ಯಾದಗಿರಿ ಇವರನ್ನು ಠಾಣೆಗೆ ಬರಮಾಡಿಕೊಂಡು ಅವರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಿ ಅವರಿಗೂ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಶ್ರೀ ಪ್ರಭುಗೌಡ ಪಿ.ಸಿ- 361 ಮತ್ತು ಶ್ರೀ ಮಹೇಶ ಪಿ.ಸಿ-358 ಇವರೊಂದಿಗೆ ಸಕರ್ಾರಿ ಜೀಪಿನಲ್ಲಿ  ಠಾಣೆಯಿಂದ ಬೆಳಗಿನ 7-15 ಗಂಟೆ ಸುಮಾರಿಗೆ ಹೊರಟು ಆರ್ ಹೊಸಳ್ಳಿ ಗೇಟ ತಲುಪಿ ಮರೆಯಲ್ಲಿ ಜೀಪು ನಿಲ್ಲಿಸಿ ಎಲ್ಲರೂ ಬಳಿಚಕ್ರ ಕಡೆಯಿಂದ ಬರುವ ವಾಹನಗಳನ್ನು ಗಮನಿಸುತ್ತಾ ನಿಂತಾಗ 7-45 ಎ.ಎಮ್ ಸುಮಾರಿಗೆ ಬಳಿಚಕ್ರ ಕಡೆಯಿಂದ ಒಂದು ಟ್ರ್ಯಾಕ್ಟರ ಬಂದಿದ್ದು ನಾವು ಅದಕ್ಕೆ ಕೈ ಸನ್ನೆ ಮಾಡಿ ನಿಲ್ಲಿಸಲು ಹೇಳಿದಾಗ ಅದರ ಚಾಲಕನು ಟ್ರ್ಯಾಕ್ಟರ ನಿಲ್ಲಿಸಿ ಕೂಡಲೇ ಅಲ್ಲಿಂದ ನಮ್ಮ ಕೈಗೆ ಸಿಗದೇ ಅಡವಿಯಲ್ಲಿ ಓಡಿ ಹೋದನು. ನಂತರ ಟ್ರ್ಯಾಕ್ಟರ ನಂಬರ ನೋಡಲಾಗಿ ಅದಕ್ಕೆ ನೊಂದಣಿ ನಂಬರ ಇರಲಿಲ್ಲಾ. ಟ್ರ್ಯಾಕ್ಟರದ ಇಂಜೀನ ನಂಬರ S3251H72241 ಮತ್ತು ಇದರ ಚಸ್ಸಿ ನಂ: MEA8CCA1DH213706 ಅಂತಾ ಇದ್ದು ಟ್ರೈಲಿಯ ನೊಂದಣೀ ನಂಬರ ಇರಲಿಲ್ಲಾ. ಟ್ರೈಲಿಯಲ್ಲಿ ಉಸುಕು ತುಂಬಿದ್ದು ಇತ್ತು. ನಂತರ ಈ ಟ್ರ್ಯಾಕ್ಟರದ ಓಡಿ ಹೋದ ಚಾಲಕನ ಹೆಸರು ರಂಗಪ್ಪಾ ತಂದೆ ಹಣಮಂತ ಕಾಳಾನೋರ ಅಂತಾ ಮತ್ತು ಇದರ ಮಾಲೀಕರ ಹೆಸರು ಹಣಮಂತ ತಂದೆ ರಂಗಪ್ಪಾ ಕಾಳಾನೋರ ಸಾ: ಇಬ್ಬರೂ ಬಳಿಚಕ್ರ ಅಂತಾ ಗೊತ್ತಾಯಿತು. ಸದರಿ ಟ್ರ್ಯಾಕ್ಟರದ ಚಾಲಕ ಮತ್ತು ಮಾಲೀಕರು ಸೇರಿಕೊಂಡು  ಸರಕಾರದ ಪರವಾನಿಗೆ ಪಡೆಯದೇ  ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಟ್ರ್ಯಾಕ್ಟರದಲ್ಲಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಸದರಿ ಉಸುಕಿನಲ್ಲಿ ಶ್ಯಾಂಪಲಿಗಾಗಿ ಒಂದು ಕೆ,ಜಿ ಯಷ್ಟು ಉಸುಕನ್ನು ಶೀಲು ಮಾಡಿಕೊಂಡು ಜಪ್ತಿಪಡಿಸಿಕೊಡಿದ್ದು ಇರುತ್ತದೆ. ಸದರಿ ಉಸುಕಿನ ಅಂದಾಜ ಕಿಮ್ಮತ್ತು 1,000/ರೂ ಆಗುತ್ತದೆ. ಸದರಿ ಜಪ್ತಿಪಂಚನಾಮೆಯನ್ನು ಇಂದು ದಿನಾಂಕ: 15-10-2019 ರಂದು 8 ಎ.ಎಮ್ ದಿಂದ 9 ಎ.ಎಮ್ ದವರೆಗೆ ಮಾಡಿ ಮುಗಿಸಿದ್ದು ಇರುತ್ತದೆ ಅಂತಾ ಜಪ್ತಿಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:140/2019 ಕಲಂ 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
ಯಾದಗಿರಿ ಗ್ರಾ ಪೊಲೀಸ್ ಠಾಣೆ :- ಗುನ್ನೆ ನಂ. 141/2019 ಕಲಂ: 279, 338 ಐಪಿಸಿ;- ದಿನಾಂಕ 14/10/2019 ರಂದು ಸಾಯಂಕಾಲ 7-30 ಗಂಟೆಗೆ ಫಿರ್ಯಾಧಿ ತಂದೆಯಾದ ಮಹಾದೇವಪ್ಪ ಜಲ್ಲಪ್ಪನೊರ ಇವರು ತಮ್ಮ ಹೊಲಕ್ಕೆ ಹೋಗುವ ಕುರಿತು ನಡೆದುಕೊಂಡು ರಾಮಸಮುದ್ರ-ಮುಂಡರಗಿ ರೋಡಿನ ಮೇಲೆ ಫಿರ್ಯಾಧಿ ಹೊಲದ ಹತ್ತಿರ ಹೋಗುತ್ತಿರುವಾಗ ಆರೋಪಿತನು ತನ್ನ ಮೋಟಾರ ಸೈಕಲ್ ನಂ ಕೆ.ಎ-33-ಯು-6622 ನೆದ್ದನ್ನು ಯಾದಗಿರಿ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಮಹಾದೇವಪ್ಪ ಇವರಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಫಿರ್ಯಾಧಿ ತಂದೆಗೆ ಭಾರಿ ರಕ್ತಗಾಯ, ಭಾರಿ ಗುಪ್ತಗಾಯ ಮತ್ತು ತರಚಿದಗಾಯಗಳು ಆಗಿರುತ್ತವೆ, ಅಂತಾ ಗುನ್ನೆ ದಾಖಲಾಗಿರುತ್ತದೆ. 
ಕೆಂಭಾವಿ ಪೊಲೀಸ್ ಠಾಣೆ :- ಗುನ್ನೆ ನಕಂ, 115/2019 ಕಲಂ: 32, 34 ಕೆ. ಇ ಯಾಕ್ಟ ;- ದಿನಾಂಕ 15.10.2019 ರಂದು 06.15 ಪಿ.ಎಂ ಕ್ಕೆ ಶ್ರೀ  ವೀರಭದ್ರಯ್ಯ ಎಸ್. ಹಿರೇಮಠ ಸಿಪಿಐ ಹುಣಸಗಿ ವೃತ್ತ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದೆನೆಂದರೆ  ಇಂದು ದಿನಾಂಕ:15/10/2019 ರಂದು 15:00 ಗಂಟೆಗೆ ವೃತ್ತ ಕಛೇರಿಯಲ್ಲಿದ್ದಾಗ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯ ಮುದನೂರ (ಬಿ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ  ಯಾವದೇ ಲೈಸನ್ಸ ಇಲ್ಲದೆ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಭಾತ್ಮಿ ಬಂದ ಮೇರೆಗೆ ನಾನು ಹಾಗೂ ಸಿಬ್ಬಂದಿಯವರಾದ 1] ಬಸವರಾಜ ಪಿಸಿ 173  ಹಾಗು ಜೀಪ ಚಾಲಕ ರಫೀಕ್ ಹೆಚ್.ಜಿ-459 ರವರನ್ನು ಕರೆದುಕೊಂಡು ಮುದನೂರ(ಬಿ) ಕ್ರಾಸ್ಗೆ ಬಂದು ಕೆಂಭಾವಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಶಿವಲಿಂಗಪ್ಪ ಸಿ.ಹೆಚ್.ಸಿ-185 ರವರ ಮುಖಾಂತರ ಪಂಚ ಜನರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವ|| 36 ಜಾ|| ಪ ಜಾತಿ ಉ||ಕೂಲಿ ಸಾ|| ಕೆಂಭಾವಿ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ವ|| 46 ಜಾ|| ಪ ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ:ಕೆಎ 33 ಜಿ 0164 ನೇದ್ದರಲ್ಲಿ ಮುದನೂರ ಕ್ರಾಸ್ನಿಂದ 04:30 ಪಿಎಮ್ಕ್ಕೆ ಹೊರಟು 04:40 ಪಿಎಮ್ಕ್ಕೆ ಮುದನೂರ(ಬಿ) ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರ ತಲುಪಿ ಜೀಪ ನಿಲ್ಲಿಸಿ ಎಲ್ಲರು ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಸದರಿ ಶಾಲೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ  ಸರಾಯಿ ಮಾರಾಟ ಮಾಡುವದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 04:45 ಪಿ.ಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಸರಾಯಿ ಮಾರಾಟ ಮಾಡುವ ವ್ಯಕ್ತಿಯು ಓಡಿಹೋಗಿದ್ದು, ಓಡಿ ಹೋದ ವ್ಯಕ್ತಿಯ ಬಗ್ಗೆ ಬಾತ್ಮಿದಾರರಿಗೆ ವಿಚಾರಿಸಲಾಗಿ ಗಂಗಾರಾಮಸಿಂಗ್ ತಂದೆ ಗುಲಾಮಸಿಂಗ್ ಹಜಾರೆ, ಮುದನೂರ(ಬಿ) ತಾ:ಹುಣಸಗಿ ಅಂತಾ ತಿಳಿಸಿರುತ್ತಾರೆ. ಸದರಿಯವನು ಸ್ಥಳದಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಸರಾಯಿ ಪೌಚ್ಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಪಂಚರ ಸಮಕ್ಷಮದಲ್ಲಿ ಪೌಚ್ಗಳನ್ನು ಪರಿಶೀಲಿಸಿ ನೋಡಲು BAGPIPER Wisky ಯ 180 ಎಮ್ಎಲ್ನ 30 ಪೌಚಗಳು ಇದ್ದು, ಒಂದು ಪೌಚ್ನ ಬೆಲೆ 90.21/-ರೂ.ಗಳು ಇದ್ದು ಒಟ್ಟು 30 ಪೌಚ್ಗಳ ಬೆಲೆ 2,706/-ರೂ.ಗಳು ಕಿಮ್ಮತ್ತು ಆಗುತ್ತಿದ್ದು, ಸದರಿ ಪೌಚ್ಗಳನ್ನು ಇಂದು ದಿನಾಂಕ:15/10/2019 ರಂದು 04:45 ಪಿಎಮ್ದಿಂದ 05:45 ಪಿಎಮ್ದವರೆಗೆ ಪಂಚರ ಸಮಕ್ಷಮ ಜಪ್ತಪಡಿಸಿಕೊಂಡು ಸದರಿ ಸರಾಯಿ ಪೌಚ್ಗಳಲ್ಲಿ ಒಂದು ಸರಾಯಿ ಪೌಚನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ಪಂಚರ ಸಮಕ್ಷಮದಲ್ಲಿ ಪ್ರತ್ಯೇಕವಾಗಿ ಬಿಳಿ ಬಟ್ಟೆಯಲ್ಲಿ ಹೊಲೆದು ಅದರ ಮೇಲೆ ಇಂಗ್ಲೀಷ ಅಕ್ಷರದ  ಏ ಅಂತ ಶೀಲ ಮಾಡಿ ಜಪ್ತಪಡಿಸಿಕೊಂಡಿದ್ದು ಇರುತ್ತದೆ. ಕಾರಣ ಈ ಮೇಲೆ ನಮೂದಿಸಿದ ಮುದ್ದೆಮಾಲು ಸಮೇತ 06:15 ಪಿ.ಎಂಕ್ಕೆ ಕೆಂಭಾವಿ ಪೊಲೀಸ್ ಠಾಣೆಗೆ ಬಂದಿದ್ದು ಸದರಿ ಓಡಿ ಹೋದ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ಈ ಮೂಲಕ ನಿಮಗೆ ಆದೇಶಿಸಿದ್ದರಿಂದ ಠಾಣೆ ಗುನ್ನೆ ನಂ 115/2019 ಕಲಂ 32.34 ಕೆ.ಇ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.. 
 
ಕೆಂಭಾವಿ ಪೊಲೀಸ್ ಠಾಣೆ :- ಗುನ್ನೆ ನಂ 117/2019 ಕಲಂ: 78(3) ಕೆಪಿ ಯಾಕ್ಟ;- ದಿನಾಂಕ: 15.10.2019  ರಂದು 04.30 ಪಿ.ಎಮ್ ಕ್ಕೆ ಘಂಟೆಗೆ ಶ್ರೀ ಅಜರ್ುನಪ್ಪ ಪಿಎಸ್ಐ ಕೆಂಭಾವಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ ಇಂದು ದಿನಾಂಕ: 15/10/2019 ರಂದು 2.00 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಮುದನೂರ (ಬಿ) ಗ್ರಾಮದ ಜೇಡರ ದಾಸಿಮಯ್ಯನ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ನಾನು ಠಾಣೆಯ ಸಿಬ್ಬಂದಿಯವರಾದ ಶಿವಲಿಂಗಪ್ಪ ಹೆಚ್ ಸಿ 185, ಶಿವಪ್ಪ ಹೆಚ್ಸಿ 136 ಮತ್ತು ಭೀರಪ್ಪ ಪಿಸಿ 195  ರವರಿಗೆ ಕರೆದು ಬಾತ್ಮಿ ವಿಷಯ ತಿಳಿಸಿ ಭೀರಪ್ಪ ಪಿಸಿ 195 ರವರಿಂದ ಇಬ್ಬರು ಪಂಚರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ  ವ|| 36 ಜಾ|| ಪರಿಶಿಷ್ಟ ಜಾತಿ ಉ|| ಕೂಲಿ ಸಾ|| ಕೆಂಭಾವಿ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ವ|| 46 ಜಾ|| ಪ.ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಠಾಣೆಗೆ 02.30 ಪಿಎಮ್ ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ ಹೊರಟು ಮುದನೂರ (ಬಿ) ಗ್ರಾಮಕ್ಕೆ 3.00 ಪಿಎಮ್ಕ್ಕೆ ಹೋಗಿ ದಾಸಿಮಯ್ಯನ ಗುಡಿಯ ಪಕ್ಕದಲ್ಲಿ  ಮರೆಯಾಗಿ ನಿಂತು ನೋಡಲಾಗಿ ಸದರಿ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 03.05 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಮಕ್ಬೂಲ ತಂದೆ ಅಬ್ದುಲಸಾಬ ಅಗತಿರ್ಥ ವ|| 32 ಜಾ|| ಮುಸ್ಲಿಂ ಉ|| ಕೂಲಿಕೆಲಸ ಸಾ|| ಮುದನೂರ (ಬಿ) ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 1360/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು  ಇವುಗಳನ್ನು 03.05 ಪಿಎಮ್ದಿಂದ 04.05 ಪಿಎಮ್ದವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡು ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 04.30 ಪಿಎಮ್ಕ್ಕೆ ಠಾಣೆಗೆ ಬಂದಿದ್ದು ಸದರಿ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ಆದೇಶಿಸಲಾಗಿದೆ ಅಂತ ವರದಿ ನೀಡಿದ್ದು ಇರುತ್ತದೆ. ಸದರಿ ವರದಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 09.00 ಪಿ.ಎಮ್ ಕ್ಕೆ ಠಾಣಾ ಗುನ್ನೆ ನಂಬರ 117/2019 ಕಲಂ 78[3] ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ :- ಗುನ್ನೆ ನಂ, 116/2019 ಕಲಂ: 87 ಕೆಪಿ ಆಕ್ಟ  ;- ದಿನಾಂಕ: 15.10.2019 ರಂದು 01.45 ಪಿ.ಎಮ್ ಕ್ಕೆ ಶ್ರೀ ಅಜರ್ುನಪ್ಪ ಪಿ ಎಸ್ ಐ ಕೆಂಭಾವಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ ಇಂದು ದಿನಾಂಕ: 15/10/2019 ರಂದು 11.00 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ತೆಗ್ಗೆಳ್ಳಿ ಗ್ರಾಮದ ಮಸೀದಿ ಹತ್ತಿರದ ಬಯಲು ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ನಾನು ಹಾಗು ಠಾಣೆಯ ಸಿಬ್ಬಂದಿಯವರಾದ 1) ಸತ್ಯನಾರಾಯಣ ಎಎಸ್ಐ 2) ಬಲರಾಮ ಹೆಚ್ ಸಿ 146 3) ಅಣವೀರಪ್ಪ ಪಿಸಿ 212 4) ಶಿವಶರಣಪ್ಪ ಪಿಸಿ 188 5) ಚಂದಪ್ಪ ಪಿಸಿ 316 6) ಮಹೇಶ ಪಿಸಿ 309 7) ಮಲ್ಲಿನಾಥಗೌಡ ಪಿಸಿ 362 ಹಾಗು ಜೀಪ ಚಾಲಕ ಬೀರಪ್ಪ ಪಿಸಿ 195 ರವರಿಗೆ ಕರೆದು ಬಾತ್ಮಿ ವಿಷಯ ತಿಳಿಸಿ ಪಂಚ ಜನರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವ||37 ಜಾ||  ಉ|| ಕೂಲಿ ಸಾ|| ಕೆಂಭಾವಿ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ವ|| 47 ಜಾ|| ಪ ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಠಾಣೆಯ ಬೀರಪ್ಪ ಪಿಸಿ 195 ಇವರ ಮುಖಾಂತರ ಠಾಣೆಗೆ ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33 ಜಿ 0074 ನೇದ್ದರಲ್ಲಿ ಠಾಣೆಯಿಂದ 11-30 ಎಎಮ್ಕ್ಕೆ ಹೊರಟು 12 ಪಿಎಮ್ ಕ್ಕೆ ತೆಗ್ಗೆಳ್ಳಿ ಗ್ರಾಮದ ಮಸೀದಿ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಎಲ್ಲರು ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಮಸೀದಿಯ ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅದರಲ್ಲಿ ಒಬ್ಬನು ರಾಣಿ ಬಹಾರ ಅಂತ ಇನ್ನೊಬ್ಬ ರಾಣಿ ಅಂದರ ಅಂತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 12-15 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 08 ಜನರು ಸಿಕ್ಕಿದ್ದು 05 ಜನರು ಓಡಿ ಹೋಗಿದ್ದು ಸಿಕ್ಕವರ  ಹೆಸರು ವಿಳಾಸ ವಿಚಾರಿಸಲಾಗಿ 1) ಸಾಯಬಣ್ಣ ತಂದೆ ಚಂದಪ್ಪ ಪಾಸೋಡಿ ವ|| 30 ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ತೆಗ್ಗೆಳ್ಳಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 4500/- ರೂ ಸಿಕ್ಕಿದ್ದು ಅದರಂತೆ 2) ನಿಂಗಪ್ಪ ತಂದೆ ಜುಮ್ಮಣ್ಣ ಬೆಳ್ಳಿ ವಯಾ|| 26 ಜಾ|| ಕುರಬರ ಉ|| ಒಕ್ಕಲುತನ ಸಾ|| ತೆಗ್ಗೆಳ್ಳಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 800/- ರೂ ಸಿಕ್ಕಿದ್ದು ಅದರಂತೆ 3) ಚಂದ್ರಪ್ಪ ತಂದೆ ಸಿದ್ರಾಮಪ್ಪ ದೊಡಮನಿ ವಯಾ|| 52 ಜಾ|| ಪ.ಜಾತಿ ಉ|| ಕೂಲಿ ಸಾ|| ತೆಗ್ಗೆಳ್ಳಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 350/- ರೂ ಸಿಕ್ಕಿದ್ದು ಅದರಂತೆ 4) ಸಿದ್ದಪ್ಪ ತಂದೆ ಯಮನಪ್ಪ ಹಳ್ಳಿ ವಯಾ|| 40 ಜಾ|| ಕುರುಬರ ಉ|| ಒಕ್ಕಲುತನ ಸಾ|| ತೆಗ್ಗೆಳ್ಳಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 2500/- ರೂ ಸಿಕ್ಕಿದ್ದು ಅದರಂತೆ 5) ಹಳ್ಳೆಪ್ಪ ತಂದೆ ಹಣಮಂತ್ರಾಯ ಬೈಚಬಾಳ ವಯಾ|| 30 ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ತೆಗ್ಗೆಳ್ಳಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 450/- ರೂ ಸಿಕ್ಕಿದ್ದು ಅದರಂತೆ 6) ಬಸವರಾಜ ತಂದೆ ನಾಗಪ್ಪ ವಡಗೇರಿ ವಯಾ|| 25 ಜಾ|| ಬೇಡರ ಉ|| ಕೂಲಿ ಸಾ|| ಶಖಾಪುರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 400/- ರೂ ಸಿಕ್ಕಿದ್ದು ಅದರಂತೆ 7) ಗುರುರಾಜ ತಂದೆ ಅಮರಪ್ಪಗೌಡ ಬಿರಾದಾರ ವಯಾ|| 30 ಜಾ|| ಬೇಡರ ಉ|| ಒಕ್ಕಲುತನ ಸಾ|| ಶಖಾಪುರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 490/- ರೂ ಸಿಕ್ಕಿದ್ದು ಅದರಂತೆ 8) ಭೀಮಣ್ಣ ತಂದೆ ಸಾಹೇಬಗೌಡ ಬಿರಾದಾರ ವಯಾ|| 36 ಜಾ|| ಬೇಡರ ಉ|| ಅಟೋ ಚಾಲಕ ಸಾ|| ಶಖಾಪುರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 600/- ರೂ ಸಿಕ್ಕಿದ್ದು ಅದರಂತೆ ಸಿಕ್ಕ ಜನರಿಂದ ಓಡಿ ಹೋದವರ ಬಗ್ಗೆ ಅವರ ಹೆಸರು ವಿಳಾಸ ಕೇಳಿ ತಿಳಿಯಲಾಗಿ 1] ಆನಂದ ತಂದೆ ರಾಯಪ್ಪ ಪಾಸೋಡಿ ವಯಾ|| 28 ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ತೆಗ್ಗೆಳ್ಳಿ 2] ಶರಣಬಸವ ತಂದೆ ಮಹಾದೇವಪ್ಪ ಹಣಮಂತದೇವರ ಪೂಜಾರಿ ವಯಾ|| 33 ಜಾ|| ಉಪ್ಫಾರ ಉ|| ಕೂಲಿ ಸಾ|| ತೆಗ್ಗೆಳ್ಳಿ 3) ಸಿದ್ದಪ್ಪ ತಂದೆ ಹಣಮಂತ್ರಾಯಗೌಡ ವಾಗಣಗೇರಿ ವಯಾ|| 32 ಜಾ|| ಕುರುಬರ ಉ|| ಒಕ್ಕಲುತನ ಸಾ|| ತೆಗ್ಗೆಳ್ಳಿ 4) ಸಿದ್ದಪ್ಪ ತಂದೆ ಪರಮಣ್ಣ ಕುಪ್ಪಿಗುಡ್ಡ ವಯಾ|| 28 ಜಾ|| ಉಪ್ಪಾರ ಉ|| ಕೂಲಿ ಸಾ|| ತೆಗ್ಗೆಳ್ಳಿ 5) ಯಂಕಪ್ಪ ತಂದೆ ನಿಂಗಪ್ಪ ಬಡಿಗೇರ ವಯಾ|| 28 ಜಾ|| ಬೇಡರ ಉ|| ಕೂಲಿ ಸಾ|| ತೆಗ್ಗೆಳ್ಳಿ ಅಂತ ತಿಳಿಸಿದ್ದು ಇರುತ್ತದೆ. ಅದರಂತೆ ಕಣದಲ್ಲಿ 1000/- ರೂ ಸಿಕ್ಕಿದ್ದು ಹೀಗೆ ಒಟ್ಟು 11090/- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳನ್ನು 12-15 ಪಿ.ಎಂ ದಿಂದ 01-15 ಪಿ.ಎಂ ದವರಗೆ ಪಂಚರ ಸಮಕ್ಷಮ ವಶಪಡಿಸಿಕೊಂಡಿದ್ದು ಅದೆ. ಕಾರಣ ಮೇಲೆ ನಮೂದಿಸಿದ ಆರೋಪಿತರನ್ನು ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 1-45 ಪಿ.ಎಂಕ್ಕೆ ಠಾಣೆಗೆ ಬಂದಿದ್ದು ಸದರಿ ಆರೋಪಿತರ ವಿರುದ್ದ ಮುಂದಿನ ಕ್ರಮ ಜರುಗಿಸಲು ಆದೇಶಿಸಲಾಗಿದೆ  ಅಂತಾ ವರದಿಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು 7.40 ಪಿಎಮ್ ಕ್ಕೆ ಸದರಿ ವರದಿ ಆಧಾರದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 116/2019 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!