ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 06-10-2019

By blogger on ಶನಿವಾರ, ಅಕ್ಟೋಬರ್ 5, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 06-10-2019 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 189/2019 ಕಲಂ. 323,341,324,504,506 ಸಂ.34 ಐಪಿಸಿ:-ದಿನಾಂಕ:05-10-2019 ರಂದು 8-30 ಪಿ.ಎಂ. ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಸರಕಾರಿ ಆಸ್ಪತ್ರೆ ಸುರಪುರದಲ್ಲಿ ಎಮ್ಎಲ್ಸಿ ಇದೆ ಅಂತಾ ಬಾತ್ಮಿ ಬಂದ ಮೇರೆಗೆ ಆಸ್ಪತ್ರೆಗೆ 08:45 ಪಿ.ಎಮ್ಕ್ಕೆ ಬೇಟಿ ನೀಡಿದ್ದು ಆಸ್ಪತ್ರೆಯಲ್ಲಿ ಉಪಚಾರ ಪಡಿಯುತ್ತಿದ್ದ ಭೀಮರಾಯ ತಂದೆ ಮಲ್ಲಪ್ಪ ತಿಪ್ಪನಟಗಿ ವಯಾ:30 ವರ್ಷ ಜಾತಿ:ಕುರುಬ ಸಾ:ಟಿ ಬೊಮ್ಮನಹಳ್ಳಿ ತಾ:ಸುರಪೂರ ಈತನು ಒಂದು ಗಣಕೀಕರಿಸಿದ ದೂರು ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ದಿನಾಂಕ:05-10-2019 ರಂದು ನಾನು ನಮ್ಮ ಅಳಿಯನಾದ ಬೀಮರಾಯ ತಂದೆ ಹಣಮಂತ್ರಾಯ ನಾವಿಬ್ಬರೂ ಕೂಡಿಕೊಂಡು ಜಮೀನಿನ ಕೆಲಸಕ್ಕೆ ಹೋಗಿದ್ದೆವು. ಮಧ್ಯಾಹ್ನ 4 ಗಂಟೆ ಸುಮಾರಿಗೆ ನಾವು ಹೊಲದಲ್ಲಿರುವಾಗ ನಮ್ಮ ಗ್ರಾಮದವರಾದ 1) ಲಂಕೆಪ್ಪ ತಂದೆ ರಾಮರಾಯಗೌಡ ಮಾಲಿ ಪಾಟೀಲ 2) ಹಣಮಂತ್ರಾಯ ತಂದೆ ನಿಂಗಪ್ಪಗೌಡ ಮಾಲಿ ಪಾಟೀಲ ಇವರಿಬ್ಬರೂ ಕೂಡಿಕೊಂಡು ನಮ್ಮ ಜಮೀನಿನಲ್ಲಿ ಹತಿ ಬೆಳೆಯಲ್ಲಿ ಎತ್ತಿನ ಗಾಡಿಯನ್ನು ಹೊಡೆದುಕೊಂಡು ಬರುತ್ತಿದ್ದರು ನಾನು ಮತ್ತು ನನ್ನ ಅಳಿಯನಾದ ಬೀಮರಾಯ ತಂದೆ ಹಣಮಂತ್ರಾಯ ವಾಗಣಗೇರಿ ಇಬ್ಬರು ಹೋಗಿ ಅವರಿಗೆ ಗಾಡಿಯನ್ನು ನಿಲ್ಲಿಸಿ ಈ ರೀತಿ ಬಂಡೆ ಹೊಡೆದುಕೊಂಡು ಹೋದರೆ ನಮ್ಮ ಜಮೀನಿನಲ್ಲಿ ಬೆಳೆದ ಹತ್ತಿ ಬೆಳೆ ನಾಶವಾಗುತ್ತದೆ ಎಂದೆವು ಅವರು ಅವರ ಗಾಡಿಯಿಂದ ಇಳಿದು ಎಲೇ ಬೊಸಡಿ ಸುಳೆ ಮಕ್ಕಳೆ ನಾವು ಇದೆ ಹೊಲದಲ್ಲಿ ಹೊಡೆದುಕೊಂಡು ಹೋಗುತ್ತವೆ ನಿವೇನು ಶಂಟಾ ಕಿತ್ತುಕೊಳ್ಳುತ್ತಿರಿ ಅಂತಾ ಅಂದನು ಆಗ ನಾವು ಗುಂಡಾಗಿರಿ ಮಾಡುತ್ತಿರಿ ಏನು ಅಂತಾ ಕೇಳಿದಾಗ ಲಂಕೇಪ್ಪಗೌಡ ತಂದೆ ರಾಮರಾಯಗೌಡ ಮಾಲೀ ಪಾಟೀಲ ಈತನು ನನ್ನ ಎದೆಯ ಮೇಲೆ ಅಂಗಿ ಹಿಡಿದು ಕೈಯಿಂದ ಎದೆಗೆ ಹೊಡೆದು ಕಾಲಿನಿಂದ ಒದ್ದನು. ಆಗ ನಮ್ಮ ಅಳಿಯ ಬೀಮರಾಯ ವಾಗಣಗೇರಿ ಇವನು ಬೀಡಿಸಲು ಬಂದಾಗ ಹಣಮಂತ್ರಾಯ ತಂದೆ ನಿಂಗಪ್ಪಗೌಡ ಮಾಲೀ ಪಾಟೀಲ ಈತನು ಅವನಿಗೆ ನುಕಿಸಿಕೊಟ್ಟು ಅವನು ಓಡಿ ಹೊಗುತ್ತಿರುವಾಗ ಅವನನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಅಲ್ಲೆ ಬಿದ್ದ ಒಂದು ಬಡಿಗೆಯಿಂದ ಆತನ ಬೆನ್ನಿಗೆ ಹೊಡೆದು ನಮ್ಮ ತಂಟೆಗೆ ಬಂದರೆ ಖಲಾಸ ಮಾಡುತ್ತೆವೆ ಅಂತಾ ಚಿರಾಡುವಾಗ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಬಸವರಾಜ ತಂದೆ ನಂದಪ್ಪ  ಇವರು ಬಂದು ಜಗಳ ಬಿಡಿಸಿದ್ದು ಇರುತ್ತದೆ ಆಗ ಅವರು ಇವತ್ತು  ಜೀವ ಸಹಿತ ಉಳದಿರಿ ಇನ್ನೊಮ್ಮೆ ಸಿಕ್ಕರೆ ಖಲಾಸ ಮಾಡುತ್ತೆವೆ ಅಂತಾ ಜೀವದ ಬೇದರಿಕೆ ಹಾಕಿ ಹೊರಟು ಹೋಗಿದ್ದು ಇರುತ್ತದೆ.ನನಗೆ ನನ್ನ ಅಳಿಯನಿಗೆ ಅವಾಚ್ಯ ಬೈದು ಕೈಯಿಂದ ಬಡಿಗೆಯಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿದ ಮೇಲೆ ಹೇಳಿದ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜೀಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 82/2019 ಕಲಂ.143,147,341,153,336,120(ಬಿ) ಸಂ.149 ಐಪಿಸಿ:-ದಿನಾಂಕ.06/10/2019 ರಂದು 00:06 ಗಂಟೆಗೆ ದೂರು ಅರ್ಜಿದಾರನಾದ ಶ್ರೀ ಹಣಮಂತ ತಂದೆ ಯಲ್ಲಪ್ಪ ಇಟಗಿ ವಃ 41 ಜಾಃ ಮಾದಿಗ ಉಃ ಬಿ.ಜೆ.ಪಿ ನಗರ ಮಂಡಲ ಅದ್ಯಕ್ಷರು ಮತ್ತು ನಗರಸಭೆ ಸದಸ್ಯರು ಸಾಃ ಗಾಂಧಿಗನರ ಯಾದಗಿರಿ ರವರು ಠಾಣೆಗೆ ಬಂದು ಒಂದು ಅರ್ಜಿ ಸಲ್ಲಿಸಿದ್ದರ ಸಾರಾಂಸವೆನಂದರೆ, ದಿನಾಂಕ 05/10/2019 ರಂದು  ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರರವರು ಯಾದಗಿರಿ ಜಿಲ್ಲೆಯಲ್ಲಿ  ಪ್ರವಾಹ ಪರಿಹಾರ ಕಾರ್ಯಗಳ ಹಾಗೂ ಅಬೀವೃದ್ದಿ ಕಾರ್ಯಕ್ರಮಗಳ ಪರೀಸಶಿಲನೆ ಕುರಿತು ಸುರಪೂರ ತಾಲೂಕಿನಲ್ಲಿ ಪ್ರವಾಸ ಕೈಕೊಂಡು ನಂತರ ಯಾದಗಿರಿ  ಜಿಲ್ಲಾಧಿಕಾರಿಗಳ ಕಛೆರಿಯಲ್ಲಿ ಸಭೆ ಕುರಿತು ಸಾಯಂಕಾಲ 5-30 ಗಂಟೆ ಸುಮಾರಿಗೆ ಯಾದಗಿರಿ ನಗರದ ಸುಭಾಸ ಚೌಕದಲ್ಲಿ ಬರುತ್ತಿರುವಾಗ 15-20 ಜನರು ಸೇರಿ ದೊಂಬಿ ಮಾಡುವ ಉದ್ದೇಶಕ್ಕಾಗಿ ಒತ್ತಾಯ ಪೂರ್ವಕವಾಗಿ ಜನರನ್ನು ಉದ್ರೇಕಿಸುತ್ತಾ ಮಾನ್ಯ ಮುಖ್ಯಮಂತ್ರಿಗಳ ಕಾನ್ವೆ ವಾಹನವನ್ನು ಈತರರ ದೈಹಿಕ ಸುರಕ್ಷತೆಗೆ ಅಪಾಯವುಂಟಾಗುವ ರೀತಿಯಲ್ಲಿ ತಡೆದು ಗುರುಮಿಠಕಲ್ ಯುತ್ ಜೆ.ಡಿ.ಎಸ್ ಗೆ ಜಯವಾಗಲೀ ಅಂತಾ ಕೂಗುತ್ತಾ  ಕೈಯಲ್ಲಿ ಕಪ್ಪು ಬಾವುಟ ಹಿಡಿದು ರಸ್ತೆ ತಡೆ ಮಾಡುತ್ತಿರುವಾಗ ಪೊಲೀಸರು ಬಂದು ಸದರಿಯವರನ್ನು ಅಲ್ಲಿಂದ ಚದುರಿಸಿ ಕಳುಹಿಸಿದ್ದು ಇರುತ್ತದೆ ಅದರಲ್ಲಿ ಒಬ್ಬನ ಹೆಸರು ಶಿವುಕುಮಾರ ತಂದೆ ಹಣಮಂತ ಚವ್ಹಾಣ ಅಂತಾ ಗೊತ್ತಾಗಿದ್ದು ಉಳಿದವರ ಹೆಸರು ಗೊತ್ತಾಗಿರುವುದಿಲ್ಲಾ ನೋಡಿದಲ್ಲಿ ಗುರ್ತಿಸುತ್ತೇನೆ. ಈ ಮೇಲಿನ ಘಟನೆಗೆ ಕಾರಣಿ ಕರ್ತರಾದ ಶರಣಗೌಡ ತಂದೆ ನಾಗಣ್ಣಗೌಡ ಕಂದಕೂರ ರಾಜ್ಯ ಯುವ ಜೆ.ಡಿ.ಎಸ್. ಪ್ರಧಾನ ಕಾರ್ಯದರ್ಶಿ ಇವರ ಅಪರಾದಿಕ ಒಳಸಂಚಿನಿಂದ ಶಿವುಕುಮಾರ ಮತ್ತು ಈತರರು ಮಾನ್ಯ ಮುಖ್ಯ ಮಂತ್ರಿಗಳ ಕಾನ್ವೆ ವಾಹನ ತಡೆದು ನಿಲ್ಲಿಸಿ ಈ ಮೇಲಿನಂತೆ ಅಪರಾದ ಮಾಡಿದ್ದು  ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.82/2019 ಕಲಂ.143,147,341,336,153, 120(ಬಿ),ಸಂ.149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!