ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 03-10-2019
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 81/2019 ಕಲಂ. 304(ಎ)ಐಪಿಸಿ:-ದಿನಾಂಕ.03/10/2019 ರಂದು 2-30 ಪಿಎಂಕ್ಕೆ ಶ್ರೀಮತಿ ಜಸಿಂಟಾ ವಮರ್ಾ ಗಂಡ ಜಾನ್ ವಮರ್ಾ ವಃ 45 ವರ್ಷ, ಜಾಃ ಕ್ರಿಶ್ಚಿಯನ್ ಸಾಃ ಮನೆ ನಂ.3-8-35 ಗಂಗಾನಿವಸ ರಸ್ತೆ ಬೆರೊನಕಿಲ್ಲಾ ರಾಯಚೂರ ಆದ ನಾನು ಈ ಮೂಲಕ ದೂರು ಸಲ್ಲಿಸುವುದೆನೆಂದರೆ, ನನ್ನ ಗಂಡನಾದ ದಿವಂಗತ ಜಾನ ವಮರ್ಾ ತಂ. ಪಿಎಸ್ ವಮರ್ಾ ವಃ 50 ಜಾಃ ಕ್ರಿಶ್ಚಿಯನ್ ಉಃ ಎಲೆಕ್ಟ್ರಿಷಿಯನ್ ಕೆಲಸ ಸಾಃ ಮನೆ ನಂ.3-8-35 ಗಂಗಾನಿವಸ ರಸ್ತೆ ಬೆರುನಕಿಲ್ಲಾ ರಾಯಚೂರ ಈತನು ಸುಮಾರು 10 ವರ್ಷಗಳಿಂದ ಯಾದಗಿರಿ ನಗರದಲ್ಲಿರುವ ಡಾನ್ ಬೋಸ್ಕೋ ಶಿಕ್ಷಣ ಸಂಸ್ಥೆಯಲ್ಲಿ ದಕ್ಷತೆಯಿಂದ ಎಲೆಕ್ಟ್ರೀಷಿಯನ್ ಕೆಲಸ ಮಾಡಿಕೊಂಡು ಬಂದಿರುತ್ತಾರೆ. ನಮಗೆ ಎರಡು ಜನ ಮಕ್ಕಳಿದ್ದು ಅವರ ಹೆಸರು 1. ವಿಲಿಯಂ ವಮರ್ಾ ವಃ 24, 2.ಸೈಮನ್ ವಮರ್ಾ ವಃ 20 ಅಂತಾ ಇಬ್ಬರೂ ಗಂಡು ಮಕ್ಕಳಿರುತ್ತಾರೆ. ಹೀಗಿರುವಾಗ ದಿನಾಂಕ.09/09/2019 ರಂದು ನನ್ನ ಗಂಡ ಜಾನ್ ವಮರ್ಾ ಮತ್ತು ಅವರ ಸ್ನೇಹಿತನಾದ ಕುಮಾರ ತಂ. ಕೃಷ್ಣಮೂತರ್ಿ ಇವರು ಕೆಲಸ ಮಾಡಲು ಯಾದಗಿರಿಯ ಡಾನ್ಬೋಸ್ಕೋ ಶಿಕ್ಷಣ ಸಂಸ್ಥೆಗೆ ಹೋಗಿದ್ದು ದಿನಾಂಕ.11/09/2019 ರಂದು ಮೂರು ದಿವಸದವರೆಗೆ ಅಲ್ಲಿಯೇ ಕೆಲಸ ಮಾಡಿದ್ದು ದಿನಾಂಕ.11/09/2019 ರಂದು 2 ಪಿಎಂ ಸುಮಾರಿಗೆ ನನ್ನ ಗಂಡನ ಸ್ನೇಹಿತರಾದ ಚಾಂದಪಾಶಾ ಮತ್ತು ಪಾಶಾ ಎಂಬುವರು ನಮ್ಮ ಮನೆಗೆ ಬಂದು ನಿನ್ನ ಗಂಡ ಜಾನ್ ವಮರ್ಾ ಈತನು ಯಾದಗಿರಿಯ ಡಾನ್ಬೋಸ್ಕೂ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯತ್ ಕೆಲಸ ಮಾಡುತ್ತಿದ್ದಾಗ ಅಂದಾಜು ಮದ್ಯಾಹ್ನ 1 ಗಂಟೆ ಸುಮಾರಿಗೆ ಸಂಸ್ಥೆಯವರ ನಿರ್ಲಕ್ಷತನದಿಂದ ಕರೆಂಟ ಶಾಕ ಹೊಡೆದು ಮೃತಪಟ್ಟಿರುತ್ತಾನೆ ಅಂತಾ ಅವನ ಸಂಗಡ ಕೆಲಸಕ್ಕೆ ಹೋಗಿದ್ದ ಕುಮಾರ ಈತನು ಪೋನ ಮಾಡಿ ನಮಗೆ ತಿಳಿಸಿರುತ್ತಾನೆ ಅಂತಾ ತಿಳಿಸಿದರು. ನಂತರ ನನ್ನ ಮಕ್ಕಳಾದ ವಿಲಿಯಂ ವಮರ್ಾ, ಸೈಮನ್ ವಮರ್ಾ, ಸ್ನೇಹಿತರು ಯಾದಗಿರಗೆ ಡಾನಬೋಸ್ಕೋ ಸಂಸ್ಥೆಗೆ ಬಂದು ಅಲ್ಲಿ ವಿಚಾರಿಸಲು ನನ್ನ ಗಂಡನನ್ನು ಸಕರ್ಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದಾಗ ನನ್ನ ಮಕ್ಕಳು ಆಸ್ಪತ್ರೆಗೆ ಹೊಗಿ ವೈದ್ಯಾದಿಕಾರಿಗಳಿಗೆ ವಿಚಾರಿಸಲು ನನ್ನ ಗಂಡ ಜಾನ ವಮರ್ಾ ಈತನು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ. ಆಗ ನನ್ನ ಮಕ್ಕಳು ಡಾನ್ ಬೋಸ್ಕೋ ಶಾಲೆಯ ಫಾದರಗಳಾದ ಜಾರ್ಜ ಮತ್ತು ಜಾಲಿ ಜಾಕಬ್ ಇವರಿಗೆ ವಿಚಾರಿಸಿದಾಗ ನೀವು ಪೊಲೀಸ್ ಠಾಣೆಗೆ ದೂರು ಕೊಡಬೇಡಿರಿ ನಿಮಗೆ ಬರುವ ಎಲ್ಲಾ ಪರಿಹಾರವನ್ನು ಕೊಡುತ್ತೇವೆ ನಿಮಗೆ ಯಾವುದೆ ಅನ್ಯಾಯ ಮಾಡುವುದಿಲ್ಲಾ ನೀವು ಶವವನ್ನು ಪೊಸ್ಟ ಮಾರ್ಟಮ್ ಮಾಡಿಸದೆ ಹಾಗೆಯೇ ತೆಗೆದುಕೊಂಡು ಹೋಗಿರಿ ನಾವು ನಿಮಗೆ ಎಲ್ಲಾ ರೀತಿಯ ಸೌಲತ್ತನ್ನು ಮಾಡುತ್ತೇವೆ ಅಂತಾ ತಿಳಿಸಿದರು ಆಗ ನನ್ನ ಮಕ್ಕಳು ನನ್ನ ಗಂಡನ ಮೃತ ದೇಹವನ್ನು ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ರಾಯಚೂರಗೆ ತೆಗೆದುಕೊಂಡು ಬಂದರು. ದಿನಾಂಕ.12/09/2019 ರಂದು ನಮ್ಮ ಸಂಪ್ರಾದಾಯದ ಪ್ರಕಾರ ಮೃತ ದೇಹವನ್ನು ರಾಯಚೂರಿನ ಕ್ಯಾಥೋಲಿಕ್ ಚರ್ಚನಲ್ಲಿ ಸಂಸ್ಕಾರ ಮಾಡಿದ್ದು ಇರುತ್ತದೆ. ನಂತರ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ದಿನಾಂಕ.25/09/2019 ರಂದು ನಾನು ನನ್ನ ಮಕ್ಕಳು ಹಾಗೂ ಪರಿಚಯಸ್ಥರೊಂದಿಗೆ ಯಾದಗಿರಿಯ ಡಾನಭೊಸ್ಕೋ ಶಿಕ್ಷಣ ಸಂಸ್ಥೆಗೆ ಬಂದು ಅಲ್ಲಿದ್ದ ಐದು ಜನ ಫಾದರಗಳಾದ 1. ಮ್ಯಾಥಿವ್ 2.ಜಾರ್ಜ, 3.ಜಾಲಿ ಜಾಕಬ್ 4.ಜಾರ್ಜ ಕುಲಸಾಮಿ 5.ಶರಣಪ್ಪ ಸಿ. ಅಮರಾಪೂರ ಇವರುಗಳಿಗೆ ಬೇಟಿಯಾಗಿ ನನ್ನ ಗಂಡ ಮೃತಪಟ್ಟಿದ್ದರ ಬಗ್ಗೆ ವಿಚಾರಿಸಿ ನೀವು ಹೇಳಿದಂತೆ ನಾವು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಿಲ್ಲಾ ಪೊಸ್ಟ ಮಾರ್ಟಮ್ ಸಹ ಮಾಡಿಸಿರುವುದಿಲ್ಲಾ ಅಂದು ನೀವು ಹೇಳಿದ ಹಾಗೆ ಕೇಳಿರುತ್ತೇವೆ ನಮಗೆ ಅನ್ಯಾಯವಾಗಿದೆ ಪರಿಹಾರ ಮತ್ತು ಇನ್ನೀತರ ಸೌಲಭ್ಯಗಳನ್ನು ಒದಗಿಸಿರಿ ಅಂತಾ ಕೇಳಿಕೊಂಡೆವು ಆದರೆ, ಅಲ್ಲಿದ್ದ ಅವರ್ಯಾರು ನಮ್ಮ ಬೇಡಿಕೆಗೆ ಸ್ಪಂದಿಸದೆ ನಾವು ನಿಮಗೆ ಯಾವುದೆ ಪರಿಹಾರ, ಸೌಲಭ್ಯ ನೀಡುವುದಿಲ್ಲಾ. ನೀವು ಏನು ಮಾಡುತ್ತಿರೋ ಮಾಡಿಕೊಳ್ಳಿ ಅಂತಾ ಏರು ಧ್ವನಿಯಲ್ಲಿ ಹೇಳಿದರು. ಇದರಿಂದ ನಾವು ಕಂಗಾಲಾಗಿ ಮರಳಿ ರಾಯಚೂರಗೆ ಹೋಗಿ ನಮ್ಮ ಕುಟುಂಬ ಮತ್ತು ಹಿತೈಸಿಗಳೊಂದಿಗೆ ವಿಚಾರಿಸಿ ಇಂದು ತಮ್ಮ ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ದು ನನ್ನ ಗಂಡ ಜಾನ್ ವಮರ್ಾ ಈತನ ಸಾವು ಸಂಸ್ಥೆಯ ಮೇಲ್ಕಂಡವರ ನಿರ್ಲಕ್ಷ್ಯತನದಿಂದ ಜರುಗಿದ್ದು ಕಾರಣ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ.81/2019 ಕಲಂ. 304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ:- 29/2019 ಕಲಂ: 498(ಎ), 323, 504, 506, 354 ,114 ಸಂ/ 149 ಐ.ಪಿ.ಸಿ:- ದಿನಾಂಕ: 03.10.2019 ರಂದು ಮದ್ಯಾಹ್ನ 2.30 ಪಿ.ಎಂಕ್ಕೆ ಪಿರ್ಯಾಧಿ ಶ್ರೀಮತಿ ಯಾಸೀನ್ ಬೇಗಂ ಗಂಡ ಎಂ.ಡಿ ಪಾಶಾ ಖುರೇಶಿ ವಯಾ-24 ಉ-ಮನೆಕೆಲಸ ಸಾ-ಜಿನರಲಾ ನಾರಾಯಣಪೇಟ್ ಹಾ.ವ. ಮೈಲಾಪೂರ ಅಗಸಿ ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದು ಏನೆಂದರೆ 5 ವರ್ಷಗಳ ಹಿಂದೆ ಜಿನರಲ್ಲಾ ಗ್ರಾಮದ ಎಂ.ಡಿ ಪಾಶಾ ಎಂಬುನೊಂದಿಗೆ ಮದುವೆಯಾಗಿದ್ದು 2 ಜನ ಗಂಡು ಮಕ್ಕಳಿರುತ್ತಾರೆ. ಮದುವೆಯಾಗಿ 1 ವರ್ಷ ಮಾತ್ರ ಚೆನ್ನಾಗಿ ನೋಡಿಕೊಂಡು ನಂತರ ನನ್ನ ಗಂಡ ಹಾಗು ಗಂಡನ ಮನೆಯವರು ನನಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಡಲು ಹತ್ತಿದ್ದರು. ನನ್ನ ಗಂಡ ನನ್ನ ಅತ್ತೆಯ ಮಾತು ಕೇಳಿ ಹೊಡೆಬಡೆ ಮಾಡುವುದು ಬೇರೆ ಹೆಣ್ಣು ಮಕ್ಕಳ ಸಂಗಡ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿರುತ್ತಾನೆ. ನೀನು ಸರಿ ಇಲ್ಲ ನನ್ನ ತಮ್ಮನಿಗೆ ಮತ್ತೊಂದು ಮದುವೆ ಮಾಡುತ್ತೇವೆ ಎಂದು ನನ್ನ ನಾದಿನಿ ನನಗೆ ಹೊಡೆಬಡೆ ಮಾಡುತ್ತಿದ್ದು ಅಲ್ಲದೇ ನನ್ನ ಮೈದುನ ನನ್ನ ಕೈಹಿಡಿದು ಎಳೆದು ಅಪಮಾನ ಮಾಡಿ ಲೈಂಗಿಂಕ ಕಿರುಕುಳ ಕೊಟ್ಟಿರುತ್ತಾನೆ. ಆತನ ಹೆಂಡತಿ ನನ್ನ ನೆಗಣಿ ಕೂಡ ತನ್ನ ಗಂಡನಿಗೆ ಸಾಥ ಕೊಡುತ್ತಿದ್ದಳು. ದಿನಾಂಕ: 21.09.2019 ರಂದು ಬೆಳಿಗ್ಗೆ 11.30 ಗಂಟೆಗೆ ನನ್ನ ಗಂಡ ಹಾಗು ಅತ್ತೆ , ಮೈದುನ ಕೂಡಿ ಯಾದಗಿರಿಗೆ ನನಗೆ ಕರೆದುಕೊಂಡು ಹೋಗಲು ಬಂದಿದ್ದಾಗ ನನ್ನ ಸಂಬಂಧಿಕರು ಈ ಬಗ್ಗೆ ನ್ಯಾಯಾ ಪಂಚಾಯತಿ ಮಾಡುವಾಗ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು ನನ್ನ ಗಂಡ ನನಗೆ ಹೊಡೆಬಡೆ ಮಾಡಿರುತ್ತಾನೆ, ನನ್ನ ಅತ್ತೆ ಕೂದಲು ಹಿಡಿದು ಜಗ್ಗಾಡಿ ನನ್ನ ಮೈದುನ ಜೀವದ ಬೆದರಿಕೆ ಹಾಕಿದ್ದು ಆದ್ದರಿಂದ ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ದೂರಿನ ಮೇಲಿಂದ ಗುನ್ನೆ ನಂ: 29/2019 ಕಲಂ: 498(ಎ), 323, 504, 506, 354 ,114 ಸಂ/ 149 ಐ.ಪಿ.ಸಿ ನೇದ್ದನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 61/2019 PÀ®A 279 ಐಪಿಸಿ ಸಂಗಡ 3/181, 190(2), 196, 185 ಐಎಂವಿ ಆಕ್ಟ್ :-ದಿನಾಂಕ 03/10/2019 ರಂದು ಸಾಯಂಕಾಲ 7-30 ಪಿ.ಎಂ.ಕ್ಕೆ ಶ್ರೀ ಸಾಯಿಬಣ್ಣ ಮಾನ್ಯ ಎ.ಎಸ್.ಐ ಸಾಹೇಬರು ಸಂಚಾರಿ ಪೊಲೀಸ್ ಠಾಣೆರವರು ಠಾಣೆಗೆ ಬಂದು ತಮ್ಮದೊಂದು ಲಿಖಿತ ವರದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಸಾಯಿಬಣ್ಣ ಎ.ಎಸ್.ಐ ಸಂಚಾರಿ ಪೊಲೀಸ ಠಾಣೆ ಯಾದಗಿರಿಯಾಗಿದ್ದು ತಮಗೆ ಈ ವರದಿ ಮೂಲಕ ಸೂಚಿಸುವುದೆನೆಂದರೆ ಇಂದು ದಿನಾಂಕ: 03/10/2019 ರಂದು ಸಾಯಂಕಾಲ 7 ಪಿ.ಎಂ.ಸುಮಾರಿಗೆ ನಾನು ಯಾದಗಿರಿ ನಗರದ ಸಂಚಾರಿ ಕರ್ತವ್ಯ ಕುರಿತು ನಮ್ಮ ಠಾಣೆಗೆ ಒದಗಿಸಿದ ಸರ್ಕಾರಿ ಜೀಪ್ ನಂ. ಕೆಎ-33, ಜಿ-0227 ನೇದ್ದರಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಶ್ರೀ ಬಸವಂತ ಎ.ಪಿ.ಸಿ-87 ಕೂಡಿಕೊಂಡು ಯಾದಗಿರಿ ನಗರದ ವಾಲ್ಮೀಕಿ ಸರ್ಕಲ್ ಹತ್ತಿರ ಕರ್ತವ್ಯದ ಮೇಲಿರುವಾಗ ಯಾದಗಿರ ಹಳೆ ಬಸ್ ನಿಲ್ದಾಣದ ಕಡೆಯಿಂದ ಚಿತ್ತಾಪುರ ರಸ್ತೆ ಕಡೆಗೆ ಒಂದು ಲಾರಿ ನಂಬರ ಕೆಎ-32, ಬಿ-6954 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬರುತ್ತಿರುವದನ್ನು ಕಂಡು ಸದರಿ ವಾಹನಕ್ಕೆ ಕೈ ಮಾಡಿ ನಿಲ್ಲಿಸಿ ನೋಡಲು ಲಾರಿಯಿಂದ ಇಳಿದ ಲಾರಿ ಚಾಲಕನು ಮದ್ಯಪಾನ ಮಾಡಿದ ಅಮಲಿನಲ್ಲಿದ್ದು, ಲಾರಿ ಚಾಲಕನ ಹೆಸರು, ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಹಣಮಪ್ಪ ತಂದೆ ಗ್ಯಾನಪ್ಪ ಬಡಿಗ್ಯಾ ವಯ;24 ವರ್ಷ, ಜಾ;ಎಸ್.ಟಿ, ಉ;ಲಾರಿ ನಂ.ಕೆಎ-32, ಬಿ-6954 ನೇದ್ದರ ಚಾಲಕ, ಸಾ;ತೇರಿಬಾವಿ, ತಾ;ಲಿಂಗಸೂಗುರ, ಜಿ;ರಾಯಚೂರು ಅಂತಾ ತಿಳಿಸಿದ್ದು, ಚಾಲಕನು ಮದ್ಯಪಾನ ಮಾಡಿದ್ದು ಕಂಡು ಬಂದಿದ್ದರಿಂದ ಆತನಿಗೆ ನಮ್ಮ ಹತ್ತಿರವಿದ್ದ ಬ್ರೀತ್ ಎನಲೇಜರ್ (ಆಲ್ಕೋಹಾಲ್ ) ಯಂತ್ರದ ಸಹಾಯದಿಂದ ಕುಡಿತದ ಬಗ್ಗೆ ಪರೀಕ್ಷಿಸಿದ್ದು ಚಾಲಕನು ಮದ್ಯಪಾನ ಸೇವನೆ ಮಾಡಿದ್ದರ ಬಗ್ಗೆ ಸಾಬೀತಾಗಿದ್ದು ಇರುತ್ತದೆ. ಸದರಿ ಲಾರಿಯ ದಾಖಲಾತಿಗಳನ್ನು ಹಾಜರುಪಡಿಸಲು ಚಾಲಕನಿಗೆ ಸೂಚಿಸಿದಾಗ ಲಾರಿಯ ಇನ್ಸುರೆನ್ಸ್, ಚಾಲನ ಪರವಾನಿಗೆ ಪ್ರಮಾಣ ಪತ್ರ, ವಾಯು ಮಾಲಿನ್ಯ ಪ್ರಮಾನ ಪತ್ರ, ಇರುವುದಿಲ್ಲ ಅಂತಾ ತಿಳಿಸಿರುತ್ತಾನೆ. ಸದರಿ ವಾಹನವನ್ನು ಚಾಲಕನ ಸಮೇತ ಮತ್ತು ಬ್ರೀತ್ ಎನಲೇಜರ್ ನಿಂದ ಪರೀಕ್ಷಿಸಿದ ರಸೀದಿ ಮೂಲ ಪ್ರತಿಯೊಂದಿಗೆ ಮುಂದಿನ ಕ್ರಮ ಕುರಿತು ತಮ್ಮ ಮುಂದೆ ಹಾಜರು ಪಡಿಸಿದ್ದು ಇರುತ್ತದೆ. ಸದರಿ ಲಾರಿ ನಂ.ಕೆಎ-32, ಬಿ-6954 ನೆದ್ದರ ಚಾಲಕನ ಮೇಲೆ ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ. ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 61/2019 ಕಲಂ 279 ಐಪಿಸಿ ಸಂಗಡ 3/181, 190(2), 196, 185 ಐಎಂವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
Hello There!If you like this article Share with your friend using