ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 02-10-2019

By blogger on ಬುಧವಾರ, ಅಕ್ಟೋಬರ್ 2, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 02-10-2019 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 137/2019 ಕಲಂ 143, 147, 148, 323, 324, 504, 506 ಸಂ 149 ಐಪಿಸಿ:-ದಿನಾಂಕ 02-10-2019 ರಂದು ಬೆಳಿಗ್ಗೆ 7-00 ಗಂಟೆಗೆ ಫಿರ್ಯಾದಿ ಮತ್ತು ಅವನ ಮನೆಯವರು ತಮ್ಮ ಮನೆ ಮುಂದೆ ಇರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಫಿರ್ಯಾಧಿ ಮನೆ ಮುಂದೆ ಬಂದು ಅವಾಚ್ಯವಾಗಿ ಬೈದು ನಾವು ಹಿಂದೆ ಕೊಟ್ಟಿದ್ದ ಸಾಲ ಕೊಡು ಇಲ್ಲದಿದ್ದರೆ ನಿಮ್ಮ ಹೊಲ ನಮ್ಮ ಹೆಸರಿಗೆ ಮಾಡು ಅಂತಾ ಜಗಳ ತೆಗೆದು ಕಟ್ಟಿಗೆಯಿಂದ, ಕಲ್ಲಿನಿಂದ, ಕೈಯಿಂದ ಹೊಡೆಬಡೆ ಮಾಡಿ ರಕ್ತಗಾಯ, ಗುಪ್ತಗಾಯ ಮಾಡಿ ಜೀವದ ಭಯ ಹಾಕಿದ ಬಗ್ಗೆ. ಪ್ರಕರಣ ದಾಖಲು ಮಾಡಿದ್ದು ಇರುತ್ತದೆ. 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 152/2019 ಕಲಂ 447, 143, 147, 323, 324, 354, 504, 506 ಸಂ. 149 ಐಪಿಸಿ:-ದಿನಾಂಕ 02.10.2019 ರಂದು ಬೆಳಿಗ್ಗೆ 11.00 ಗಂಟೆ ಸುಮಾರಿಗೆ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಪಿರ್ಯಾಧಿ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಕಡಲಿ ಬೀಜ ಬಿತ್ತುತ್ತಿದ್ದಾಗ ಪಿರ್ಯಾದಿದಾರರು ಕೇಳಲು ಹೋದಾಗ ಆರೋಪಿತರು ಅವಾಚ್ಯವಾಗಿ ಬೈದು ಬಡಿಗೆಯಿಂದ, ಕಲ್ಲಿನಿಂದ ಹೊಡೆದು ರಕ್ತಾಯಪಡಿಸಿ, ಕೈಯಿಂದ ಹೊಡೆದು ಗುಪ್ತಪೆಟ್ಟು ಮಾಡಿ ಮಾನಭಂಗಕ್ಕೆ ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ. 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 153/2019 ಕಲಂ.143, 147, 148, 323, 324, 354, 504, 506 ಸಂಗಡ 149 ಐಪಿಸಿ:-ದಿನಾಂಕ 02.10.2019 ರಂದು ಸಮಯ ಬೆಳಿಗ್ಗೆ 11:00 ಗಂಟೆಗೆ ಫಿರ್ಯಾದಿ ಮತ್ತು ಗಾಯಾಳುದಾರರು ಚಂಡ್ರಕಿ ಸಿಮಾಂತರದ ಹೊಲದ ಸವರ್ೇ ನಂ: 56 ಜಮೀನು ವಿಸ್ತಿರ್ಣ 6 ಎಕ್ಕರೆ 29 ಗುಂಟೆ ಜಮೀನು ಪೈಕಿ ಫಿರ್ಯಾದಿ ಹಾಗೂ ಗಾಯಾಳುದಾರರ ಪಾಲಿಗೆ 4 ಎಕ್ಕರೆ ಜಮೀನು ಬಂದಿದ್ದು ಉಳಿದ 2 ಎಕ್ಕರೆ 29 ಗುಂಟೆ ಜಮೀನು ಆರೋಪಿ ಚಂದಮ್ಮ ಹಾಗೂ ಆಕೆಯ ಮಕ್ಕಳ ಪಾಲಿಗೆ ಇರುತ್ತದೆ. ಆದರೆ ಸದರಿ 6 ಎಕ್ಕರೆ 29 ಗುಂಟೆ ಜಮೀನು ಆರೋಪಿ ಚಂದಮ್ಮಳ ಹೆಸರಿನಲ್ಲಿ ಇರುತ್ತದೆ. ಅದಕ್ಕಾಗಿ ಆರೋಪಿತರು ಫಿರ್ಯಾದಿ ಮತ್ತು ಗಾಯಾಳುದಾರರ ಪಾಲಿಗೆ ಇದ್ದ ಜಮೀನನ್ನು ಬಿಟ್ಟು ಕೊಡುವಂತೆ ಕೇಳಿದಕ್ಕೆ ಫಿರ್ಯಾದಿ ಮತ್ತು ಗಾಯಾಳುದಾರರು ಯಾದಗಿರಿ ಕೊಟರ್್ನಲ್ಲಿ ಸಿವಿಲ್ ಕೇಸ್ ಮಾಡಿದ್ದು ಅದು ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುತ್ತದೆ. ಇಂದು ಬೆಳೀಗ್ಗೆ 11:00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಗಾಯಾಳುದಾರರು ತಮ್ಮ ಪಾಲಿಗೆ ಇದ್ದ ಜಮೀನಿನಲ್ಲಿ ಬಿತ್ತನೆ ಮಾಡುತ್ತಿದ್ದಾಗ ಆರೋಪಿತರು ಅಲ್ಲಿಗೆ ಹೋಗಿ ಅವರೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಕಲ್ಲಿನಿಂದ ಹೊಡೆ-ಬಡೆ ಮಾಡಿ ರಕ್ತಗಾಯ ಹಾಗೂ ಗುಪ್ತಗಾಯಗೊಳಿಸಿದ್ದು ಅದಕ್ಕೆ ಫಿರ್ಯಾದಿಯ ಹೆಂಡತಿಗೆ ಕೈ ಹಿಡಿದು ಎಳೆದು ಮಾನಭಂಗ ಮಾಡಲು ಯತ್ನಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 153/2019 ಕಲಂ.143, 147, 148, 323, 324, 354, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 154/2019 ಕಲಂ: 78() ಕೆ.ಪಿ. ಆಠ್ಟಿ್:- ದಿನಾಂಕ 02.10.2019  ರಂದು ಮಧ್ಯಾಹ್ನ 2.30 ಗಂಟೆಗೆ ಆರೋಪಿ ಶರಣಪ್ಪ ತಂದೆ ಸಾಬಣ್ಣ ಕಂದೂರ ಈತನು ಬಸ್ ನಿಲ್ದಾಣದ ಹತ್ತಿರ ಇರುವ ಹನುಮಾನ ದೇವಸ್ಥಾನದ ಮುಂದೆ ಕೈ ಬೋರವೇಲ್ ಹತ್ತಿರ ರೋಡಿನ ಮೇಲೆ ಅಕ್ರಮ ಮಟಕಾ ಜೂಜಾಟ ಅಂಕಿ ಸಂಖ್ಯೆ ಬರೆದುಕೊಂಡು ಸಾರ್ವಜನಿಕರಿಗೆ 1/- ರೂ ಗೆ 80/- ರೂ ಮಟಕಾ ಬರೆಯಿಸಿದರೆ ಕೊಡುವುದಾಗಿ ಹೇಳಿ ಅವರಿಂದ ಹಣ ಸಂಗ್ರಹಿಸುತ್ತಿದ್ದಾಗ ಫೀರ್ಯಾದಿ ಹಾಗೂ  ಮತ್ತು ಪಂಚರ ಸಮಕ್ಷಮದಲ್ಲಿ ಸಮಯ ಮದ್ಯಾಹ್ನ 3.00 ಗಂಟೆಗೆ ದಾಳಿ ಮಾಡಿ ಸದರಿ ಆರೋಪಿತನ ವಶದಲ್ಲಿದ್ದ 1]ನಗದು ಹಣ 2000/-, 2]ಕಾರಬನ್ ಕಂಪನಿಯ ಮೊಬೈಲ್ ಪೊನ್ ಅ.ಕಿ 200/-, 3)ಮಟಕಾ ಅಂಕಿ ಸಂಖ್ಯೆ ಬರೆದುಕೊಂಡ ಚೀಟಿ, 4] ಒಂದು ಬಾಲ ಪೆನ್ ಅ.ಕಿ-00, ಹೀಗೆ ಒಟ್ಟು2200/-ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಸದರಿ ವರದಿ ಹಾಗೂ ಪಂಚನಾಮೆಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದ ನಂತರ ಠಾಣಾ ಗುನ್ನೆ ನಂ: 154/2019 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು. 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 155/2019 ಕಲಂ: 78() ಕೆ.ಪಿ. ಆಠ್ಟಿ್:- ದಿನಾಂಕ 02.10.2019  ರಂದು ಸಂಜೆ 5:00 ಗಂಟೆಗೆ ಆರೋಪಿ ವಿಜಯಕುಮಾರ ಈತನು ಗುರುಮಠಕಲ್ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ನಕ್ಷತ್ರ ಹೊಟೇಲ್ ಮುಂದಿನ ರಸ್ತೆಯ ಮೇಲೆ ಅಕ್ರಮ ಮಟಕಾ ಜೂಜಾಟ ಅಂಕಿ ಸಂಖ್ಯೆ ಬರೆದುಕೊಂಡು ಸಾರ್ವಜನಿಕರಿಗೆ 1/- ರೂ ಗೆ 80/- ರೂ ಮಟಕಾ ಬರೆಯಿಸಿದರೆ ಕೊಡುವುದಾಗಿ ಹೇಳಿ ಅವರಿಂದ ಹಣ ಸಂಗ್ರಹಿಸುತ್ತಿದ್ದಾಗ ಫೀರ್ಯಾದಿದಾರರಾದ ಶ್ರೀವಿಜಯಕುಮಾರ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚಸ ಸಮಕ್ಷಮದಲ್ಲಿ ದಾಳೀ ಮಾಡಿ ಸದರಿ ಆರೋಪಿತನ ವಶದಲ್ಲಿದ್ದ 1]ನಗದು ಹಣ 2060/-, 2] ಮಟಕಾ ಅಂಕಿ ಸಂಖ್ಯೆ ಬರೆದುಕೊಂಡ ಚೀಟಿ, 3] ಒಂದು ಬಾಲ ಪೆನ್ ಅ.ಕಿ-00, ಹೀಗೆ ಒಟ್ಟು 2060/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಸದರಿ ವರದಿ ಹಾಗೂ ಪಂಚನಾಮೆಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದ ನಂತರ ಠಾಣಾ ಗುನ್ನೆ ನಂ: 155/2019 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು.  

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ.:- 247/2019  ಕಲಂ 78[3] ಕೆ.ಪಿ ಆಕ್ಟ:- ದಿನಾಂಕ 02/10/2019  ರಂದು ಸಾಯಂಕಾಲ 18-30 ಗಂಟೆಗೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಹನುಮರೆಡ್ಡೆಪ್ಪ ಆರಕ್ಷಕ ನಿರೀಕ್ಷಕರು, ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ಒಬ್ಬ ವ್ಯಕ್ತಿಯನ್ನು, ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 02/10/2019  ರಂದು ಮದ್ಯಾಹ್ನ 15-20 ಗಂಟೆಗೆ ಠಾಣೆಯಲ್ಲಿದ್ದಾಗ ಹಳಿಸಗರ ಏರಿಯಾದ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಒಬ್ಬ ವ್ಯಕ್ತಿ  ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾಧಿಯವರು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಕೂಡಿ ಠಾಣೆಯ ಸರಕಾರಿ ಜೀಪ್ ನಂಬರ ಕೆಎ-33-ಜಿ-138 ನೇದ್ದರಲ್ಲಿ ದಾಳಿ ಕುರಿತು ಸದರಿ ಸ್ಥಳಕ್ಕೆ ಹೋಗಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ವ್ಯಕ್ತಿಯ ಮೇಲೆ ಪಂಚರ ಸಮಕ್ಷಮದಲ್ಲಿ ಸಾಯಂಕಾಲ 16-25 ಗಂಟೆಗೆ ದಾಳಿ ಮಾಡಿದಾಗ ಸದರಿ ವ್ಯಕ್ತಿ ಸಿಕ್ಕಿದ್ದು, ಹೆಸರು ವಿಳಾಸ ವಿಚಾರಿಸಲು 1) ಜೆಟ್ಟೆಪ್ಪ ತಂದೆ ಮಲ್ಲಪ್ಪ ಹೊಸಮನಿ ವಯ 36 ವರ್ಷ ಜಾತಿ ಕಬ್ಬಲಿಗ ಉಃ ಮಟಕಾ ಅಂಕಿ ಬರೆದುಕೊಳ್ಳುವದು ಸಾಃ ಗಂಗಾ ನಗರ ಹಳಿಸಗರ ತಾಃ ಶಹಾಪೂರ  ಹೇಳಿದ್ದು ಸದರಿಯವನ ಅಂಗಶೋಧನೆ ಮಾಡಿದಾಗ ನಗದು ಹಣ 2100=00 ರೂಪಾಯಿ ಮತ್ತು  ಒಂದು ಬಾಲ್ ಪೆನ್, ಹಾಗೂ ಎರಡು ಮಟಕಾ ಚೀಟಿಗಳಳನ್ನು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 16-30 ಗಂಟೆಯಿಂದ 17-30 ಗಂಟೆಯ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು, ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ದ ವರದಿ ಸಲ್ಲಿಸಿದ್ದು, ಸದರಿ ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಾಲ 19-30 ಗಂಟೆಗೆ  ಠಾಣೆ ಗುನ್ನೆ ನಂಬರ 247/2019  ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ.:- 76/2019 ಕಲಂ: 304(ಎ):- ದಿನಾಂಕ: 02/10/2019 ರಂದು 3 ಪಿಎಮ್ ಕ್ಕೆ ಯಾದಗಿರಿ ಸರಕಾರಿ ಆಸ್ಪತ್ರೆಯಿಂದ ಡೆತ್ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿದಾಗ ಆಸ್ಪತ್ರೆಯಲ್ಲಿ ಮೃತ ಶರಣಪ್ಪನ ತಂದೆಯಾದ ಶ್ರೀ ಮರೆಪ್ಪ ತಂದೆ ನಾಗಲಿಂಗಪ್ಪ ಹೊಸಮನಿ ವ:45, ಜಾ:ಎಸ್.ಸಿ ಹೊಲೆಯ ಉ:ಕೂಲಿ ಸಾ:ಮಡ್ನಾಳ ತಾ:ಶಹಾಪೂರ ಇವರು ಹೇಳಿಕೆ ಫಿರ್ಯಾಧಿ ಕೊಟ್ಟಿದ್ದರ ಸಾರಾಂಶವೇನಂದರೆ ನನ್ನ ಮಗನು ನಮ್ಮೂರ ರಾಯಪ್ಪ, ಪಂಡಿತ ಮತ್ತು ಇತರ ಹುಡುಗರೊಂದಿಗೆ ನಿರಂತರ ಜ್ಯೋತಿ ಕರೆಂಟ್ ವೈರ ಕಂಬ ಹಾಕುವ ಮತ್ತು ತಂತಿ ಎಳೆಯುವ ಕೂಲಿ ಕೆಲಸಕ್ಕೆ ರವಿಂದ್ರನಾಥ ಕಾಂಟ್ರ್ಯಾಕ್ಟರ ಹತ್ತಿರ ಈಗ ಸುಮಾರು 5 ತಿಂಗಳನಿಂದ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಪ್ರತಿ ದಿನದಂತೆ ಇಂದು ದಿನಾಂಕ: 02/10/2019 ರಂದು ವಡಗೇರಾ ತಾಲೂಕಿನ ಬೆಂಡೆಬೆಂಬಳ್ಳಿ ಗ್ರಾಮದಲ್ಲಿ ಕೆಲಸ ನಡೆದಿರುವುದಾಗಿ ಹೇಳಿ ಕೆಲಸಕ್ಕೆ ಹೋದನು. ಅಲ್ಲಿ ಬೆಂಡೆಬೆಂಬಳ್ಳಿ ಗ್ರಾಮದ ಹೊಳೆ ದಂಡೆಗೆ ಹೋಗುವ ದಾರಿ ಹತ್ತಿರ ಇರುವ ಟ್ರಾನ್ಸಫಾರ್ಮರದಿಂದ ಊರೊಳಗೆ ಹೋಗುವ ಕೆಬಲ್ ವೈರಗೆ ಜಂಪ ಕನೆಕ್ಷನ ಕೊಡಬೇಕಾಗಿದ್ದು, ಕಾಂಟ್ರ್ಯಾಕ್ಟರ ರವಿಂದ್ರನಾಥ ಇತನು ಜೆಸ್ಕಾಂದಿಂದ ಎಲ್.ಸಿ ತೆಗೆದುಕೊಂಡಿದ್ದೆನೆ ನೀವು ಟ್ರಾನ್ಸಫಾರ್ಮರ ಕಂಬ ಹತ್ತಿ ಜಂಪ ಹಾಕಿರಿ ಎಂದು ಕೆಲಸಕ್ಕೆ ಹಚ್ಚಿದ್ದು, ನನ್ನ ಮಗನಿಗೆ ಹ್ಯಾಂಡ ಗ್ಲೌಸ್ ಕೂಡಾ ಹಾಕಲು ಕೊಡದೆ ಕಂಬ ಹತ್ತಿ ಕೆಲಸ ಮಾಡಲು ಹೇಳಿದ್ದು, ಮದ್ಯಾಹ್ನ 1 ಪಿಎಮ್ ಕ್ಕೆ ನನ್ನ ಮಗ ಶರಣಪ್ಪನು ಕಂಬ ಹತ್ತಿ ಜಂಪ ಹಾಕುವಾಗ ಕರೆಂಟ್ ಶಾಕ ಹೊಡೆದು ಭಾರಿ ಸುಟ್ಟ ಗಾಯಗಳಾಗಿ ಕಂಬದ ಮೇಲಿಂದ ಬಿದ್ದಿದ್ದು ಉಪಚಾರಕ್ಕೆ ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದಾಗ ಮದ್ಯಹ್ನ 2-15 ಪಿಎಮ್ ಸುಮಾರಿಗೆ ಆಸ್ಪತ್ರೆ ಗೇಟ ಹತ್ತಿರ ಮೃತಪಟ್ಟಿರುತ್ತಾನೆ. ಕಾಂಟ್ರ್ಯಾಕ್ಟರ ರವಿಂದ್ರನಾಥ ಇತನು ಜೆಸ್ಕಾಂದಿಂದ ಎಲ್.ಸಿ ತೆಗೆದುಕೊಳ್ಳದೆ ಮತ್ತು ಹ್ಯಾಂಡ ಗ್ಲೌಸ ಹಾಕಿಕೊಳ್ಳಲು ಕೊಡದೆ ನಿರ್ಲಕ್ಷ ವಹಿಸಿದ್ದರಿಂದ ಈ ಘಟನೆ ಸಂಭವಿಸಿದ್ದು, ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 76/2019 ಕಲಂ: 304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.  



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!