ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 01-10-2019

By blogger on ಮಂಗಳವಾರ, ಅಕ್ಟೋಬರ್ 1, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 01-10-2019 

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:-75/2019 ಕಲಂ: 279,304(ಎ):- ದಿನಾಂಕ: 01/10/2019 ರಂದು 9 ಎಎಮ್ ಕ್ಕೆ ಶ್ರೀಮತಿ ರಾಮವ್ವ ಗಂಡ ಶರಣಪ್ಪ ಎಡವಲಿ, ವ:50, ಜಾ:ಬುಡ್ಗಜಂಗಮ, ಉ:ಮನೆಕೆಲಸ ಸಾ:ಆಶ್ರಯ ಕಾಲೋನಿ ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದೇನಂದರೆ ನನ್ನ ಮೂರನೇ ಮಗನಾದ ಕು:ವಿಜಯ ತಂದೆ ಶರಣಪ್ಪ ಈತನಿಗೆ ತುಮಕೂರಿನಲ್ಲಿ ಕನ್ಯೆ ನೋಡಬೇಕೆಂದು ನಿನ್ನೆ ದಿನಾಂಕ: 30/09/2019 ರಂದು ನಾನು ಮತ್ತು ನನ್ನ ಹಿರಿ ಮಗ ಶಿವಾನಂದ ತಂದೆ ಶರಣಪ್ಪ ಎಡವಲಿ ವ:26 ಈತನೊಂದಿಗೆ ಮೋಟರ್ ಸೈಕಲ್ ನಂ. ಕೆಎ 32 ಇಆರ್ 8849 ನೇದ್ದರ ಮೇಲೆ ತುಮಕೂರು ಗ್ರಾಮಕ್ಕೆ ಬಂದು ಅಲ್ಲಿ ನನ್ನ ಮಗ ವಿಜಯ ಈತನಿಗೆ ಕನ್ಯೆ ನೋಡುವ ಕಾರ್ಯಕ್ರಮ ಮುಗಿಸಿಕೊಂಡು ಸಾಯಂಕಾಲ ತುಮಕೂರನಿಂದ ಮರಳಿ ಶಹಾಪೂರಕ್ಕೆ ಮೋಟರ್ ಸೈಕಲ್ ಮೇಲೆ ಹೊರಟೇವು. ಮೋಟರ್ ಸೈಕಲನ್ನು ನನ್ನ ಮಗ ಶಿವಾನಂದ ಚಲಾಯಿಸುತ್ತಿದ್ದನು. ಸಾಯಂಕಾಲ 4 ಗಂಟೆ ಸುಮಾರಿಗೆ ಸಂಗಮ-ಹತ್ತಿಗೂಡುರು ಮೇನ ರೋಡ ಕೊಂಕಲ್ ಗ್ರಾಮದ ಅಬ್ದುಲಬಾಷಾ ದಗರ್ಾದ ಹತ್ತಿರ ಹೋಗುತ್ತಿದ್ದಾಗ ನನ್ನ ಮಗ ಶಿವಾನಂದ ಈತನು ಮೋಟರ್ ಸೈಕಲ್ ಅನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೊರಟಾಗ ಒಮ್ಮಲೇ ಕಾಡ ಹಂದಿ ಮೋಟರ್ ಸೈಕಲಗೆ ಅಡ್ಡ ಬಂದಾಗ ಶಿವಾನಂದನು ಅದಕ್ಕೆ ಗುದ್ದಿ, ಮೋಟರ್ ಸೈಕಲದಿಂದ ಸಿಡಿದು ರಸ್ತೆ ಪಕ್ಕದಲ್ಲಿಯ ಕಲ್ಲಿನ ಮೇಲೆ ಬಿದ್ದಾಗ ಶಿವಾನಂದನ ತೆಲೆ ಹಿಂಭಾಗ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ತೀವ್ರ ರಕ್ತಸ್ರಾವವಾಗಲಾರಂಭಿಸಿತ್ತು. ಅಲ್ಲದೆ ಆತನ ಎಡ ಭುಜಕ್ಕೆ ತರಚಿದ ಗಾಯವಾಗಿತ್ತು. ನನಗೆ ಬೆನ್ನಿಗೆ ಮತ್ತು ಬಲಗೈ ನಡುವಿನ ಬೆರಳಿಗೆ ತರಚಿದ ಗಾಯಗಳಾಗಿದ್ದವು. ಅಲ್ಲಿಯೇ ದಾರಿ ಮೇಲೆ ಹೋಗುತ್ತಿದ್ದ ಯಾರೋ ನಮಗೆ ನೋಡಿ 108 ಅಂಬ್ಯುಲೇನ್ಸಗೆ ಕರೆ ಮಾಡಿ, ಅಂಬ್ಯುಲೇನ್ಸ ತರಿಸಿದ್ದರಿಂದ ನನ್ನ ಮಗ ಶಿವಾನಂದನಿಗೆ ಉಪಚಾರ ಕುರಿತು ಅಂಬ್ಯುಲೇನ್ಸನಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಕ್ಕೆ ತಂದು ತೋರಿಸಿದಾಗ ಇಲ್ಲಿನ ವೈದ್ಯಾಧಿಕಾರಿಗಳು ನೋಡಿ ತುಂಬಾ ಸಿರಿಯಸ್ ಇದೆ ನೀವು ಬೇಗನೆ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿರಿ ಎಂದು ಹೇಳಿದಾಗ ತಕ್ಷಣ ನನ್ನ ಮಗನಿಗೆ ಅಂಬ್ಯುಲೇನ್ಸನಲ್ಲಿ ಹಾಕಿಕೊಂಡು ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೊರಟೇವು. ದಾರಿಯಲ್ಲಿ ವಾಡಿ ಹತ್ತಿರ ಹೋಗುತ್ತಿದ್ದಾಗ ರಾತ್ರಿ 7-30 ಗಂಟೆ ಸುಮಾರಿಗೆ ನನ್ನ ಮಗ ಶಿವಾನಂದನು ಮೃತಪಟ್ಟನು. ಮೃತನ ಶವವನ್ನು ಮರಳಿ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಗೆ ತಂದು ಹಾಕಿರುತ್ತೇವೆ. ನಿನ್ನೆ ರಾತ್ರಿಯಾಗಿದ್ದರಿಂದ ಮತ್ತು ನಮ್ಮ ಹಿರಿಯರು ಯಾರೂ ಇಲ್ಲದ್ದರಿಂದ ಇಂದು ದಿನಾಂಕ: 01/10/2019 ರಂದು ನಮ್ಮ ಹಿರಿಯರಿಗೆ ವಿಚಾರಣೆ ಮಾಡಿಕೊಂಡು ಠಾಣೆಗೆ ಬಂದು ಫಿರ್ಯಾಧಿ ಕೊಡಲು ತಡವಾಗಿರುತ್ತದೆ. ಕಾರಣ ನನ್ನ ಮಗ ಶಿವಾನಂದ ಈತನು ಮೋಟರ್ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೊರಟಾಗ ಒಮ್ಮಲೇ ಮೋಟರ್ ಸೈಕಲಗೆ ಕಾಡ ಹಂದಿ ಅಡ್ಡ ಬಂದಿದ್ದರಿಂದ ಅದಕ್ಕೆ ಗುದ್ದಿ, ಮೋಟರ್ ಸೈಕಲ್ ಮೇಲಿಂದ ಸಿಡಿದು ರಸ್ತೆ ಪಕ್ಕದಲ್ಲಿಯ ಕಲ್ಲಿನ ಮೇಲೆ ಬಿದ್ದಿದ್ದರಿಂದ ತೆಲೆ ಹಿಂಭಾಗ ಕಲ್ಲು ಬಡಿದು ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ರಕ್ತಸ್ರಾವವಾಗಿ ಹೆಚ್ಚಿನ ಉಪಚಾರಕ್ಕೆ ಒಯ್ಯವಾಗ ದಾರಿಯಲ್ಲಿ ಮೃತಪಟ್ಟಿರುತ್ತಾನೆ. ಈ ಬಗ್ಗೆ ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 75/2019 ಕಲಂ: 279,304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.  

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 111/19 ಕಲಂ: 143, 147, 323, 324, 504, 506 ಸಂಗಡ 149 ಐಪಿಸಿ:-ದಿನಾಂಕ 01/10/2019 ರಂದು 04.00 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ರೇಣುಕಾ  ಗಂಡ ಸಕ್ರೆಪ್ಪ ಘೋಸಿ ವಯಾ: 20 ವರ್ಷ ಜಾತಿ: ಕುರುಬ ಉ: ಹೊಲಮನೆಗೆಲಸ  ಸಾ: ಚಿಗರಿಹಾಳ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನನಗೆ ಸುಮಾರು 4 ವರ್ಷಗಳ ಹಿಂದೆ ನಮ್ಮೂರಿನ ಹಣಮಂತ್ರಾಯ ಘೋಸಿ ಇವರ ಮಗನಾದ ಸಕ್ರೆಪ್ಪನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನನಗೆ ಇನ್ನೂ ಮಕ್ಕಳಾಗಿರುವುದಿಲ್ಲ. ನಾನು ಮಹಾನಮಿ ಹಬ್ಬಕ್ಕೆಂದು ಇದ್ದೂರಿನ ನನ್ನ ತವರು ಮನೆಗೆ ಬಂದಿರುತ್ತೇನೆ.  ಹೀಗಿದ್ದು ಇಂದು ದಿನಾಂಕ:-01.10.2019 ರಂದು ಬೆಳಿಗ್ಗೆ 10.00 ಗಂಟೆಗೆ ನಾನು ನಮ್ಮ ಮನೆಯ ಅಂಗಳದಲ್ಲಿದ್ದಾಗ ನನ್ನ ಗಂಡನಾದ ಸಕ್ರೆಪ್ಪ ಘೋಸಿ ಈತನು ನಮ್ಮ ಮನೆಗೆ ಬಂದು ನನಗೆ ಎಲೇ ಬೋಸಡಿ ನಡೆ ನಮ್ಮ ಮನೆಗೆ ಹೋಗೊಣ ಅಂತಾ ಹೊಲಸು ಶಬ್ದಗಳಿಂದ ಬೈಯುತ್ತಿರುವಾಗ ನಾನು ಮಹಾನಮಿ ಹಬ್ಬ ಮುಗಿಯುವರೆಗೂ ಬರುವುದಿಲ್ಲ ಅಂತಾ ಅಂದಾಗ ನನ್ನ ಗಂಡನು ಎಲಾ ಸೂಳಿ ಮಗಳ ನನಗೆ ಎದುರು ಮಾತಾಡುತ್ತಿ ಇವತ್ತು ನಿನಗೆ ಬಿಡುವುದಿಲ್ಲ ಅಂತಾ ಬೈದಾಡುವ  ಶಬ್ದ ಕೇಳಿ ನಮ್ಮ ಗಂಡನ ಮನೆಯವರಾದ 1) ಸಕ್ರೆಪ್ಪ ತಂದೆ ಹಣಮಂತ್ರಾಯ ಘೋಸಿ 2) ಮಾಳಪ್ಪ ತಂದೆ ಹಣಮಂತ್ರಾಯ ಘೋಸಿ 3) ಭೀಮಣ್ಣ ತಂದೆ ಹಣಮಂತ್ರಾಯ ಘೋಸಿ 4) ಭೀರಪ್ಪ ತಂದೆ ಹಣಮಂತ್ರಾಯ ಘೋಸಿ 5) ದೇವೆಂದ್ರಪ್ಪ ತಂದೆ ಭೀಮಣ್ಣ ಘೋಸಿ 6) ಮಲ್ಲಮ್ಮ ಗಂಡ ಮಾಳಪ್ಪ ಘೋಸಿ ಹಾಗೂ 7) ನಿಂಗಮ್ಮ ಗಂಡ ಹಣಮಂತ್ರಾಯ ಘೋಸಿ ಇವರೆಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಮನೆಯ ಅಂಗಳದಲ್ಲಿ ಬಂದವರೇ ಈ ಸೂಳೆ ಮಕ್ಕಳದು ಸೊಕ್ಕು ಬಹಳ ಆಗಿದೆ ಅಂತಾ ನಿಮಗೆ ಇವತ್ತು ಜೀವ ಸಹಿತನ ಬಿಡುವುದಿಲ್ಲ ಅಚಿತಾ ಅಚಿದು ಎಲ್ಲರೂ ಕೂಡಿ ನನಗೆ ಹೊಟ್ಟೆಗೆ ಬೆನ್ನಿಗೆ ಎರಡು ತೊಡೆಗೆ ಕೈಯಿಂದ ಹೊಡೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚಿರಾಡುವಾಗ  ಅಣ್ಣನಾದ ಹೊನ್ನಯ್ಯ  ಈತನು ಯಾಕೆ ನಮ್ಮ ತಂಗಿಗೆ ಹೊಡೆಯುತ್ತಿದ್ದಿರಿ ಅಂತಾ ಅಂದಿದ್ದಕ್ಕೆ ನನ್ನ ಗಂಡನಾದ ಸಕ್ರೆಪ್ಪ ಈತನು ಅಲ್ಲೆ ಬಿದ್ದಿದ್ದ ಕಲ್ಲಿನಿಂದ ಅಣ್ಣನ ತಲೆಯ ಹಿಂಬಾಗಕ್ಕೆ ಹೊಡೆದು ರಕ್ತಗಾಯ ಮಾಡಿ ಹಾಗೂ ಎಡಕೈ ಮುಷ್ಠೀ ಹತ್ತಿರ ಹೊಡೆದು ಗುಪ್ತಗಾಯ ಮಾಡಿದ್ದು, ಅಲ್ಲದೇ  ಇನ್ನೊಬ್ಬ ಅಣ್ಣನಾದ ಮಲ್ಲಿಕಾಜರ್ುನ ಈತನು ಬಂದು ಜಗಳ ಬಿಡಿಸಲು ಬಂದಾಗ ಆತನಿಗೂ ಮೈದುನಾದ ಮಾಳಪ್ಪ ಘೋಸಿ ಈತನು ಈ ಸೂಳೆ ಮಗನದ್ದು ಸೊಕ್ಕು ಬಹಳ ಇದೆ ಕಲ್ಲಿನಿಂದ ಎಡಕೈ ಕಿರುಬೆರಳಿನ ಹತ್ತಿರ ಹೊಡೆದು ರಕ್ತಗಾಯ ಮಾಡಿ  ಅದೇ ರೀತಿ ನಮ್ಮ ತಾಯಿಯಾದ ತಿಪ್ಪಮ್ಮ ಇವಳಿಗೂ ಕೂಡಾ ಮಲ್ಲಮ್ಮ ಗಂಡ ಮಾಳಪ್ಪ ಹಾಗೂ ನಿಂಗಮ್ಮ ಗಂಡ ಹಣಮಂತ್ರಾಯ ಇಬ್ಬರೂ ಕೂಡಿ ಸೀರೆ ಹಿಡಿದು ಎಳೆದಾಡಿ ಹೊಟ್ಟೆಗೆ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದ್ದು.  ಅಲ್ಲದೇ ನಮ್ಮ ತಂದೆಯಾದ ಚಳಿಗೆಪ್ಪ ತಂದೆ ಅಡಿವೆಪ್ಪ ಈತನಿಗೂ ಕೂಡಾ ಎಲ್ಲರೂ ಕೂಡಿ ಹೊಟ್ಟೆಗೆ ಬೆನ್ನಿಗೆ ಕೈಯಿಂದ ಹೊಡೆದು ಒಳಪೆಟ್ಟು ಮಾಡಿರುತ್ತಾರೆ. ಅವರೆಲ್ಲರೂ ಕೂಡಿ ನಮಗೆ ನೆಲಕ್ಕೆ ಹಾಕಿ ಕಾಲಿನಿಂದ ಮತ್ತು ಕೈಯಿಂದ ಒದೆಯು ಹತ್ತಿದ್ದಾಗ ಅಲ್ಲೆ ನಮ್ಮ ಮನೆಯ ಮುಂದೆ ಹೊರಟಿದ್ದ ಬಸಪ್ಪ ತಂದೆ ತಿಮ್ಮಣ್ಣ ಹಾಗೂ ಶರಣಪ್ಪ ತಂದೆ ಚಳಿಗೆಪ್ಪ ಜಗಲಿ ಇಬ್ಬರು ಬಂದು ನಮಗೆ ಹೊಡೆಯುದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರೆಲ್ಲರೂ ಕೂಡಿ ಸೂಳೆ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿ ಹೋದರು. ನಂತರ ನಮಗೆ ರಕ್ತಗಾಯ ಹಾಗೂ ಒಳಪೆಟ್ಟು ಆಗಿದ್ದರಿಂದ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಸೇರಿಕೆ ಆಗಿ ಅಲ್ಲಿ ಉಪಚಾರ ಪಡೆದುಕೊಂಡು ಠಾಣೆಗೆ ಬಂದು ಪಿರ್ಯಾದಿ ಅಜರ್ಿ ನೀಡಿ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗಿರುತ್ತೇವೆ.  ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 111/2019 ಕಲಂ 143 147 323 324 504 506 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೇನೆ. 

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 106/2019 ಕಲಂ: 323, 324, 504, 506 ಐಪಿಸಿ:-ದಿನಾಂಕ:01/10/2019 ರಂದು 08.20 ಎಎಂ ಕ್ಕೆ ಕಲಬುರಗಿಯ ಸರಕಾರಿ ಆಸ್ಪತ್ರೆಯಿಂದ ಹರ್ಟ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಶ್ರೀ ಈರಣ್ಣ ಹೆಚ್.ಸಿ-120 ರವರಿಗೆ ನೇಮಿಸಿ ಕಳುಹಿಸಿದ್ದು, ಸದರಿ ಹೆಚ್.ಸಿ ರವರು ಕಲಬುರಗಿಯ ಜಿಲ್ಲಾ ಆಸ್ಪತ್ರೆಯ ಬೇಟಿ ಮಾಡಿ ಗಾಯಾಳು ಮಾಳಪ್ಪ ತಂದೆ ರಾಯಪ್ಪ ಬಡಿಗೇರ ವ:23 ವರ್ಷ ಜಾ: ಕುರುಬರ ಉ: ಕುರಿ ಕಾಯುವದು ಸಾ: ಶೆಟ್ಟಿಕೇರಾ ತಾ: ಶಹಾಪೂರ ಜಿ:ಯಾದಗಿರಿ ಈತನ ಹೇಳಿಕೆ ಪಡೆದುಕೊಂಡು ಠಾಣೆೆಗೆ 08.30 ಪಿಎಂ ಕ್ಕೆ ಬಂದು ಸದರಿ ಪಿಯರ್ಾದಿ ಹೇಳಿಕೆ ಹಾಜರ ಪಡೆಸಿದ್ದು, ಅದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ:30/09/2019 ರಂದು 04.00 ಪಿಎಂ ಸುಮಾರಿಗೆ ನಾನು ನಮ್ಮ ಕುರಿಗಳನ್ನು ಮೇಯಿಸುತ್ತಾ ನಮ್ಮೂರಿನ ಶ್ರೀ. ಭೀರಲಿಂಗ ತಂದೆ ಹಣಮಂತ ಜೋಗಿನವರ ಇವರ ಹೊಲದ ಹತ್ತಿರ ಕೆನಾಲ ದಾರಿಯಲ್ಲಿ ಕುರಿ ಕಾಯುತ್ತಾ ಇದ್ದಾಗ ನಮ್ಮ ಊರಿನ ಹಣಮಂತ ತಂದೆ ಭೀಮಣ್ಣ ಸುರಪೂರ ಈತನು ಕೂಡ ತನ್ನ ಕುರಿಗಳನ್ನು ಮೇಯಿಸುತ್ತಾ ಭೀರಲಿಂಗ ತಂದೆ ಹಣಮಂತ ಜೋಗಿನವರ ಇವರ ಹೊಲದಲ್ಲಿ ಕುರಿಗಳನ್ನು ಬಿಟ್ಟಿದ್ದನು. ಆಗ ನಾನು ಸದರಿ ಹಣಮಂತ ಈತನಿಗೆ ಏ ಮಾಮ ಮೋನ್ನೆ ನಿಮ್ಮ ಹೊಲದಲ್ಲಿ ನನ್ನ ಕುರಿಗಳು ಓಡಿ ಬಂದಿದ್ದವು ಅದಕ್ಕೆ ಬೈಯ್ದಿದ್ದಿ, ಇವತ್ತು ನೀನು ಬೆರೆಯವರ ಹೊಲದಲ್ಲಿ ಕುರಿ ಯಾಕೆ ಬಿಟ್ಟಿದಿ ಅಂತಾ ಕೇಳಿದೆ. ಅದಕ್ಕೆ ಹಣಮಂತ ತಂದೆ ಭೀಮಣ್ಣ ಸುರಪೂರ ಈತನು ಸೂಳೆ ಮಗನೆ ನನಗೆ ಕೇಳಲಿಕ್ಕೆ ನೀನ್ಯಾರಲೇ ಬೋಸಡಿ ಮಗನೆ ಅಂತಾ ಅವಾಚ್ಯವಾಗಿ ಬೈಯ ತೊಡಗಿದನು. ಆಗ ನಾನು ಯಾಕೆ ಬೈಯುತ್ತಿ ಅಂತಾ ಅಂದಾಗ ಸೂಳೆ ಮಗನೆ ನನಗೆ ಎದಿರು ಮಾತಾಡುತ್ತೇನಲೆ ಅಂತಾ ತನ್ನ ಕೈಯಲ್ಲಿ ಇದ್ದ ಕೊಡಲಿಯಿಂದ ನನ್ನ ತಲೆಗೆ ಹೊಡೆದು ತಲೆಯ ಮೇಲೆ ಎರಡು ಕಡೆಗೆ ರಕ್ತಗಾಯ ಮಾಡಿದನು. ಆಗ ಅಲ್ಲೆ ಹೊರಟಿದ್ದ ದೇವರಬೀಮ ತಂದೆ ಚಂದಪ್ಪ ಮದ್ರಿಕಿ ಮತ್ತು ನಮ್ಮ ಅಕ್ಕ ಭೀಮಬಾಯಿ ಗಂಡ ಭಿಮಣ್ಣ ಇಲಕಲ ಇವರುಗಳು ನೊಡಿ ಬಿಡಿಸಿಕೊಂಡರು. ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದನು. ಆಗ ಹಣಮಂತ ಈತನು ಮಗನೆ ಇನ್ನೊಮ್ಮೆ ನನ್ನ ತಂಟೆಗೆ ಬಂದರೆ ನಿನಗೆ ಖಲಾಸ್ ಮಾಡುತ್ತೇನೆ ಜೀವದ ಬೇದರಿಕೆ ಹಾಕಿರುತ್ತಾನೆ. ನಾನು ಮನೆಗೆ ಹೊದ ನಂತರ ನಮ್ಮ ಅಣ್ಣನಾದ ಮಲ್ಲಪ್ಪ ತಂದೆ ರಾಯಪ್ಪ ಬಡಗೇರ ಈತನು ನನಗೆ ಶಹಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸರಿಕೆ ಮಾಡಿದ್ದು, ಅಲ್ಲಿಂದ ವೈದ್ಯಾಧಿಖಾರಿಗಳ ಸಲಹೇ ಮೇರೆಗೆ ನಿನ್ನೆ ದಿನಾಂಕ:30/09/2019 ರಂದು ರಾತ್ರಿಯೇ ಕಲಬುರಗಿಯ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ನಾನು ಬೇರೆಯವರ ಹೊಲದಲ್ಲಿ ಕುರಿ ಬಿಡಬಾರದು ಅಂತಾ ಹೇಳಿದ್ದಕ್ಕೆ ನನಗೆ ಅವಾಚ್ಯವಾಗಿ ಬೈಯ್ದು, ಕೊಡಲಿಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿ ಜೀವದ ಬೇದರಿಕೆ ಹಾಕಿದ ಹಣಮಂತ ತಂದೆ ಭೀಮಣ್ಣ ಸುರಪೂರ ವ:35 ವರ್ಷ ಉ: ಕುರಿಕಾಯುವದು, ಜಾ: ಕುರುಬರ ಸಾ: ಶೆಟ್ಟಿಕೇರಾ ಈತನ ಮೇಲೆ ಕಾನೂನು ಕ್ರಮ ಜರುಗಿಸಿರಿ ಅಂತಾ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ: 106/2019 ಕಲಂ: 323, 324, 504, 506 ಐಪಿಸಿ  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 48/2019 ಕಲಂ:78() ಕೆ ಪಿ ಆಕ್ಟ:- ದಿನಾಂಕ 30.09.2019 ರಂದು 4:00 ಪಿಎಮ್ ಕ್ಕೆ ಪಿಎಸ್ಐ ಸಾಹೇಬರು ರವರು ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರ ಹಾಗೂ ತಾವು ಪೂರೈಸಿದ ಮಟಕಾ ಜೂಜಾಟದ ಅಸಲ ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ,  ದಿನಾಂಕ 30.09.2019 ರಂದು 4:00 ಪಿಎಮ್ ಕ್ಕೆ ಪ್ರದೀಪ್ ಬೀಸೆ ಪಿಎಸ್ಐ  ರವರು ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರ ಹಾಗೂ ತಾವು ಪೂರೈಸಿದ ಮಟಕಾ ಜೂಜಾಟದ ಅಸಲು ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ: 30.09.2019 ರಂದು 2:20 ಪಿ.ಎಮ್ ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಕೊಡೇಕಲ್ಲ ಗ್ರಾಮದ ನಾರಾಯಣಪೂರ-ಹುಣಸಗಿ ಮುಖ್ಯ ರಸ್ತೆಯ ಪಕ್ಕದಲ್ಲಿ ಜೈರಾಭೀ ಗಂಡ ರಸೂಲ್ಸಾಬ ಚೌದರಿ ಇವರ ಮಟನ್ ಅಂಗಡಿಯ ಪಕ್ಕದಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕಲ್ಯಾಣಿ ಮಟಕಾ ಎಂಬುವವ ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಿದ್ದು. ಸದರಿ ದಾಳಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಯಲ್ಲಪ್ಪ ಹೆಚ್ಸಿ-117 ರವರಿಗೆ ತಿಳಿಸಿದ್ದು. ಯಲ್ಲಪ್ಪ ಹೆಚ್ಸಿ ರವರು ಪಂಚರನ್ನಾಗಿ 1) ವೆಂಕಟೇಶ ತಂದೆ ದ್ಯಾಮಣ್ಣ ಲಕ್ಕುಂಡಿ ಸಾ: ಯರಕಿಹಾಳ ಹಾ:ವ: ಕೊಡೇಕಲ್ಲ   2) ಸಂಗಯ್ಯ ತಂದೆ ಬಸಯ್ಯ ಹಿರೇಮಠ ಸಾ:ಕೊಡೇಕಲ್ಲ  ಇವರನ್ನು  2:30 ಪಿಎಮ್ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು. ಸದರಿಯವರಿಗೆ ವಿಷಯ ತಿಳಿಸಿ ಮಟಕಾ ಜುಜಾಟದ ಜಪ್ತಿ ಪಂಚನಾಮೆಗೆ ಪಂಚರಾಗಲು ಕೋರಿಕೊಂಡಿದ್ದು ಅದಕ್ಕೆ ಒಪ್ಪಿಕೊಂಡ ಮೇರೆಗೆ ಸಿಬ್ಬಂದಿಯವರಾದ ಬೀಮಾಶಂಕರ ಎಎಸ್ಐ, ಯಲ್ಲಪ್ಪ ಹೆಚ್ಸಿ-117  ರವರನ್ನು ಮತ್ತು  ಪಂಚರೊಂದಿಗೆ ಠಾಣೆಯಿಂದ 2:35 ಪಿಎಮ್ ಕ್ಕೆ ಬಿಟ್ಟು ಬಾತ್ಮಿ ಬಂದ ಸ್ಥಳವಾದ ಕೊಡೇಕಲ್ಲ ಗ್ರಾಮದ ನಾರಾಯಣಪೂರ-ಹುಣಸಗಿ ಮುಖ್ಯ ರಸ್ತೆಯ ಪಕ್ಕದಲ್ಲಿ ಜೈರಾಭೀ ಗಂಡ ರಸೂಲ್ಸಾಬ ಚೌದರಿ ಇವರ ಮಟನ್ ಅಂಗಡಿಯ ಪಕ್ಕದಲ್ಲಿ   ಹೋಗಿ  ಸ್ವಲ್ಪ ದೂರದಲ್ಲಿ 2:40 ಪಿಎಮ್ ಕ್ಕೆ ತಲುಪಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಜೀಪಿನಿಂದ ಎಲ್ಲರು ಕೆಳಗೆ ಇಳಿದು ಮರೆಮರೆಯಾಗಿ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲಾಗಿ  ಸದರ ಜೈರಾಭೀ ಗಂಡ ರಸೂಲ್ಸಾಬ ಚೌದರಿ ಇವರ ಮಟನ್ ಅಂಗಡಿಯ ಪಕ್ಕದಲ್ಲಿ  ಸಾರ್ವಜನಿಕ ಸ್ಥಳದಲ್ಲಿ  ಒಬ್ಬನು ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಕರೆದು ಬರ್ರಿ ಒಂದು ರೂ.ಗೆ 80 ರೂಪಾಯಿ ಕಲ್ಯಾಣೆ ಮಟಕಾ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಒಂದು ಚೀಟಿಯಲ್ಲಿ ನಂಬರ್ ಬರೆದುಕೊಡುತ್ತಿದ್ದು ಖಾತರಿ ಆದ ಮೇಲೆ ನಾನು ಮತ್ತು ಸಿಬ್ಬಂದಿಯವರು 2:45 ಪಿಎಮ್ ಕ್ಕೆ ಓಡಿ ಹೋಗಿ ದಾಳಿ ಮಾಡಿದ್ದು. ಮಟಕಾ ನಂಬರ್ ಬರೆದುಕೊಳ್ಳುವವನನ್ನು ಹಿಡಿದಿದ್ದು ಮಟಕಾ ನಂಬರ್ ಬರೆಸುವವರು ಓಡಿ ಹೋಗಿದ್ದು ಮಟಕಾ ನಂಬರ್ ಬರೆದುಕೊಳ್ಳುವವನನ್ನು ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ಮಲ್ಲಣ್ಣ ತಂದೆ ಈರಸಂಗಪ್ಪ ಬಾವೂರು ವ:42 ವರ್ಷ ಜಾ: ನೇಕಾರ ಉ: ಕೂಲಿಕೆಲಸ ಸಾ: ಕೊಡೇಕಲ್ಲ ತಾ: ಹುಣಸಗಿ ಅಂತಾ ತಿಳಿಸಿದ್ದು ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವನ ವಶದಲ್ಲಿ  ಒಂದು ಬಾಲ್ ಪೆನ್ನು, ಒಂದು ಅಂಕಿ-ಸಂಖ್ಯೆ ಬರೆದ ಮಟಕಾ ಚೀಟಿ, ಮತ್ತು ನಗದು ಹಣ 4,865 ರೂಪಾಯಿಗಳು ದೊರೆತಿದ್ದು. ಈ ಬಗ್ಗೆ ಪಂಚರ ಸಮಕ್ಷಮದಲ್ಲಿ  ಜಪ್ತಿ ಪಂಚನಾಮೆಯನ್ನು 2:45 ಪಿ.ಎಮ್ ದಿಂದ 3:45 ಪಿಎಮ್ ವರೆಗೆ  ಜರುಗಿಸಿ ಆರೋಪಿ ಹಾಗು ಮುದ್ದೇಮಾಲಿನೊಂದಿಗೆ ಠಾಣೆಗೆ 4:00 ಪಿ.ಎಮ್ ಕ್ಕೆ ಬಂದು. ತಾವು ಪೂರೈಸಿದ ಜಪ್ತಿ ಪಂಚನಾಮೆಯನ್ನು ಈ ಜ್ಞಾಪನ ಪತ್ರದೊಂದಿಗೆ ಹಾಜರುಪಡಿಸಿದ್ದು, ಆರೋಪಿತನ ಮೇಲೆ ಮುಂದಿನ ಕ್ರಮ ಜರುಗಿಸಬೇಕು.  ಅಂತಾ ಇದ್ದು ಕಾರಣ ಪಿಎಸ್ಐ ಸಾಹೇಬರು ಹಾಜರ ಪಡಿಸಿದ ಸದರಿ ಜಪ್ತಿ ಪಂಚನಾಮೆಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದು ಕಲಂ 78 (3) ಕೆಪಿ ಎಕ್ಟ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಬೇಕಾಗಿದ್ದರಿಂದ  ಕಲಂ 78 (3) ಕೆಪಿ ಎಕ್ಟ ಅಸಂಜ್ಞೆಯ ಅಪರಾಧವಾಗಿದ್ದರಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ನಿನ್ನೆಯ ದಿನ ಹೆಚ್ಸಿ-124 ರವರು ಮಾನ್ಯರು ನ್ಯಾಯಾಲಯಕ್ಕೆ ಪರವಾನಿಗೆಗಾಗಿ ವಿನಂತಿಸಿಕೊಂಡಿದ್ದು. ಇಂದು ದಿನಾಂಕ: 01.10.2019 ರಂದು 5:00 ಪಿ ಎಂ ಕ್ಕೆ  ಪಿಸಿ-251 ಕಜ್ಜಪ್ಪ ರವರು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಬಂದು ಪರವಾನಿಗೆ ಯಾದಿಯನ್ನು ಹಾಜರಪಡಿಸಿದ್ದು. ನಿನ್ನೆ ಪಿಎಸ್ಐ ರವರು ಹಾಜರ ಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪಾನ ಪತ್ರದ ಸಾರಾಂಶದ ಮೇಲಿಂದ ಇಂದು ನಾನು ಸಂಗಪ್ಪ ಹೆಚ್ಸಿ-135 ಠಾಣಾ ಗುನ್ನೆ ನಂ: 48/2019 ಕಲಂ: 78 (111) ಕೆ.ಪಿ. ಎಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ಕೈಗೊಂಡಿದ್ದು ಅದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 246/2019.ಕಲಂ 87 ಆ್ಯಕ್ಟ:- ದಿನಾಂಕ 01/10/2019 ರಂದು 18-00 ಗಂಟೆಗೆ ಸ||ತ|| ಶ್ರೀ ಹನುಮರೆಡ್ಡೆಪ್ಪ ಪಿ.ಐ. ಸಾಹೇಬರು ಠಾಣೆಗೆ ಬಂದು 6 ಜನ ಆರೋಪಿಗಳು, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ 01/10/2019 ರಂದು 14-00 ಗಂಟೆಗೆ ಠಾಣೆಯಲ್ಲಿದ್ದಾಗ ದೋರನಳ್ಳಿ ಗ್ರಾಮದ ಮರೇಮ್ಮ ಗುಡಿಯ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದಿದ್ದು. ನಮ್ಮ ಠಾಣೆಯ ಸಿಬ್ಬಂದಿಯವರಾದ ಹಣಮಂತ ಬಿ. ಪಿ.ಎಸ್.ಐ. ಪ್ರೋಬೆಷನರಿ. ಮಲ್ಲಣ್ಣ ಹೆಚ್.ಸಿ.79. ಶರಣಪ್ಪ ಹೆಚ್.ಸಿ.164. ಸತೀಶ ಹೆಚ್.ಸಿ.165. ಸಿದ್ರಾಮಯ್ಯ ಪಿ.ಸಿ. 258. ಬಸವರಾಜ ಪಿ.ಸಿ.346 ಜೀಪಚಾಲಕ ನಾಗರೆಡ್ಡಿ ಎ.ಪಿ.ಸಿ.161, ರವರಿಗೆ ಬಾತ್ಮೀ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೆಕೆಂದು ಹೇಳಿ ನಮ್ಮ ಠಾಣೆಯ ಶರಣಪ್ಪ ಹೆಚ್,ಸಿ, 164 ರವರಿಗೆ ಇಬ್ಬರೂ ಪಂಚರನ್ನು ತಂದು ಹಾಜರು ಪಡಿಸಲು ಹೇಳಿ ಕಳಿಸಿದ್ದು ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರಿಗೆ 14-20 ಗಂಟೆಗೆ ಹಾಜರು ಪಡಿಸಿದ ಮೇರೆಗೆ ಪಂಚರಿಗೆ ಬಾತ್ಮೀ ವಿಷಯ ತಿಳಿಸಿ. ನಮ್ಮ ಜೋತೆಯಲ್ಲಿ ಬಂದು ದಾಳಿಯ ಕಾಲಕ್ಕೆ ಸಹಕರಿಸಿ ಪಂಚರಾಗಲು ಕೇಳಿಕೊಂಡ ಮರೇಗೆ ಪಂಚರಾದಲು ಒಪ್ಪಿಕೊಂಡರು. ಮಾನ್ಯ ಡಿವೈ.ಎಸ್.ಪಿ. ಸಾಹೇಬರು ಸುರಪೂರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಠಾಣೆಯ ಸರಕಾರಿ ಜೀಪ್ ನಂಬರ ಕೆಎ-33-ಜಿ-138 ನೇದ್ದರಲ್ಲಿ ನಾನು ಹಾಗೂ ಮೇಲ್ಕಂಡ ಸಿಬ್ಬಂದಿಯವರು ಮತ್ತು ಪಂಚರು ಠಾಣೆಯಿಂದ 14-30 ಗಂಟೆಗೆ ಹೊರಟೇವು. ವಾಹನವನ್ನು ನಾಗರಡ್ಡಿ ಎ.ಪಿ.ಸಿ 161 ಇವರು ಚಲಾಯಿಸುತಿದ್ದರು. ನೇರವಾಗಿ ದೋರನಳ್ಳಿ ಗ್ರಾಮದ ಮರೇಮ್ಮ ಗುಡಿಯ ಹತ್ತಿರ ಸ್ವಲ್ಪ ದೂರದಲ್ಲಿ 15-00 ಗಂಟೆಗೆ ಹೋಗಿ ಜೀಪ್ ನಿಲ್ಲಿಸಿ ಜೀಪನಿಂದ ಇಳಿದು ಮರೇಮ್ಮ ಗುಡಿಯ ಕಡೆಗೆ ನಡೆದುಕೊಂಡು ಹೋಗಿ 15-10 ಗಂಟೆಗೆ ದೂರದಲ್ಲಿ ನಿಂತು ನೀಗಾ ಮಾಡಿ ನೋಡಲಾಗಿ ಗುಡಿಯ ಎದರುಗಡೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದರು, ಅದರಲ್ಲಿ ಒಬ್ಬನು ಅಂದರಗೆ 50 ರೂಪಾಯಿ ಅಂದರೆ ಮತ್ತೊಬ್ಬನು ಬಾಹರಗೆ 50 ರೂಪಾಯಿ ಅಂತ ಅವರ-ರವರಲ್ಲಿಯೇ ಮಾತನಾಡುತ್ತಾ ಜೂಜಾಟ ಆಡುತ್ತಿದ್ದರು, ಆಗ ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರು ಸದರಿ ಜನರು ಜೂಜಾಟ ಆಡುತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಜೂಜಾಟ ಆಡುತಿದ್ದವರನ್ನು ಸುತ್ತುವರೆದು 15-20 ಗಂಟೆಗೆ ದಾಳಿ ಮಾಡಿದಾಗ  06 ಜನರು ಸಿಕ್ಕಿದು,್ದ ಅವರ ಹೆಸರು ವಿಳಾಸ ವಿಚಾರಿಸಲು ಅವರು ತಮ್ಮ ಹೆಸರು ಒಬ್ಬೊಬ್ಬರಾಗಿ ಈ ಕೇಳಗಿನಂತೆ ಹೇಳಿ ತಮ್ಮ ಹತ್ತಿರ ವಿದ್ದ ಹಣವನ್ನು ಈ ಕೇಳಗಿನಂತೆ ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡಿರುತ್ತದೆ.1] ಮರೆಪ್ಪ ತಾಯಿ ಶರಣಮ್ಮ ಮರಚಲರ್ ವ|| 55 ಜಾ|| ಹೊಲೆಯ ಉ|| ಕೂಲಿಕೆಲಸ ಸಾ||ದೋರನಳ್ಳಿ ಈತನ ಹತ್ತಿರ ನಗದು ಹಣ 400=00 ರೂಪಾಯಿ ಜಪ್ತಿ ಪಡಿಸಿಕೊಳ್ಳಲಾಯಿತು. 2] ಸೊಮಶೇಖರರೆಡ್ಡಿ ತಂದೆ ಮರೆಪ್ಪ ರೆಡ್ಡಿ ವ||28 ಜಾ|| ಹೊಲೆಯ ಉ|| ಕೂಲಿಕೆಲಸ ಸಾ||ದೋರನಳ್ಳಿ ಈತನ ಹತ್ತಿರ ನಗದು ಹಣ 340=00 ರೂಪಾಯಿ ಜಪ್ತಿ ಪಡಿಸಿಕೊಳ್ಳಲಾಯಿತು. 3] ಬಸವರಾಜ ತಂದೆ ಸಂಗಪ್ಪ ಕಂಬಾರ ವ||50 ಜಾ|| ಲಿಂಗಾಯತ ಉ|| ಕೂಲಿಕೆಲಸ ಸಾ||ದೋರನಳ್ಳಿ ಈತನ ಹತ್ತಿರ ನಗದು ಹಣ 300=00 ರೂಪಾಯಿ ಜಪ್ತಿ ಪಡಿಸಿಕೊಳ್ಳಲಾಯಿತು. ರೆಡ್ಡೆಪ್ಪ ತಂದೆ ರಾಯಪ್ಪ ಪೂಜಾರಿ ವ||48 ಜಾ|| ಹೊಲೆಯ ಉ|| ಕೂಲಿಕೆಲಸ ಸಾ|| ದೋರನಳ್ಳಿ ಈತನ ಹತ್ತಿರ ನಗದು ಹಣ 320=00 ರೂಪಾಯಿ ಜಪ್ತಿ ಪಡಿಸಿಕೊಳ್ಳಲಾಯಿತು. 5] ಮರೆಪ್ಪ  ತಂದೆ ರಾಯಪ್ಪ ಅನ್ವರ ವ||58 ಜಾ|| ಹೊಲೆಯ ಉ|| ಕೂಲಿಕೆಲಸ ಸಾ|| ದೋರನಳ್ಳಿ ್ಳ  ಈತನ ಹತ್ತಿರ ನಗದು ಹಣ 250=00 ರೂಪಾಯಿ ಜಪ್ತಿ ಪಡಿಸಿಕೊಳ್ಳಲಾಯಿತು. 6] ಸಾಬಣ್ಣ ತಂದೆ ಶಿವಪ್ಪ ಕಸನ್ ವ||60 ಜಾ|| ಹೊಲೆಯ ಉ|| ಕೂಲಿಕೆಲಸ ಸಾ|| ದೋರನಳ್ಳಿ ಈತನ ಹತ್ತಿರ ನಗದು ಹಣ 200=00 ರೂಪಾಯಿ ಜಪ್ತಿ ಪಡಿಸಿಕೊಳ್ಳಲಾಯಿತು. ಜೂಜಾಟ ಆಡಿದ 06 ಜನರಿಂದ ವಶಪಡಿಸಿಕೊಂಡ ನಗದು ಹಣ 1820=00 ರೂಪಾಯಿ ಮತ್ತು ಜೂಜಾಟಕ್ಕೆ ಬಳಸಿದ ನೇಲದ ಮೇಲೆ ಇದ್ದ ನಗದು ಹಣ 250/- ರೂಪಾಯಿ ಹೀಗೆ ಒಟ್ಟು ಜೂಜಾಟಕ್ಕೆ ಬಳಸಿದ ನಗದು ಹಣ 2060=00 ರೂಪಾಯಿ ಮತ್ತು ಜೂಜಾಟಕ್ಕೆ ಬಳಸಿದ 52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮದಲ್ಲಿ ಒಂದು ಲಕೋಟೆಯಲ್ಲಿ ಹಾಕಿ ನಾನು, ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ 15-30 ರಿಂದ 16-30 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕತಾಬೆಗೆ ತೆಗೆದುಕೊಂಡೆನು, ಮತ್ತು ಜೂಜಾಟ ಆಡಿದ 06 ಜನರನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ ಇಂದು ದಿನಾಂಕ 01/10/2019 ರಂದು 17-00 ಗಂಟೆಗೆ ಬಂದು 06 ಜನ ಆಪಾಧಿತರು ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ಸರಕಾರದ ಪರವಾಗಿ ವರದಿಯನ್ನು ತಯ್ಯಾರಿಸಿ 18-00 ಗಂಟೆಗೆ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶವು ಅಸಂಜ್ಞಯ ಅಪರಾದ ವಾಗಿದ್ದರಿಂದ ಠಾಣೆಯ ಎನ್,ಸಿ, ನಂ,52/2019 ಕಲಂ 87 ಕೆ.ಪಿ.ಯಾಕ್ಟ ನೋಂದಣಿ ಮಾಡಿಕೊಂಡಿದ್ದು. ಕಲಂ 87 ಕೆ.ಪಿ.ಯಾಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಕೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಕೊಂಡು ಮುಂದಿನ ಕ್ರಮ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ರಾಮಣ್ಣ ಪಿ.ಸಿ.424, ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 18-30 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 246/2019 ಕಲಂ 87 ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ.:-31/2019 ಕಲಂ: 143, 147, 148, 323, 324, 355, 504, 506 ಸಂಗಡ 149 ಐಪಿಸಿ:-ದಿನಾಂಕ:01/10/2019 ರಂದು ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಪಿಯರ್ಾದಿ ಮತ್ತು ಮಾಳಪ್ಪ ತಂದೆ ನೀಲಪ್ಪ, ಲಕ್ಷ್ಮಣ ತಂದೆ ನೀಲಪ್ಪ ಇವರೊಂದಿಗೆ ಅಮ್ಮಾಪೂರ ಎಸ್ಕೆ ಗ್ರಾಮದಲ್ಲಿನ ಅಲೈಪೀರ ಮಸೀದಿಯ ಹತ್ತಿರ ಹೊಲದ ವಿಷಯದಲ್ಲಿ ಬಾಯಿ ಮಾತಿನ ಜಗಳ ನಡೆದಿತ್ತು ಅದೆ ಸಮಯಕ್ಕೆ ಗದ್ದೆಪ್ಪ ಕಂಬಳಿ, ರಾಯಪ್ಪ ಕಂಬಳಿ ಇವರು ಬಂದು ಪಿಯರ್ಾದಿಗೆ  ಲೇ ಸೂಳಿ ನನ್ನ ಮಗನೆ ನಿಮ್ಮದು ಸೊಕ್ಕು ಜಾಸ್ತಿ ಆಗಿದೆ ನಿಮ್ಮನ್ನ ಖಲಾಸ್ ಮಾಡುತ್ತೇವೆ ಎಂದು ಜಗಳ ತೆಗೆದಿದ್ದು, ದೇವಪ್ಪ ಕಂಬಳಿ ಇವರಿಗೆ ರಾಯಪ್ಪ ಕಂಬಳಿ ಇವನು ಒಂದು ಬಡಿಗೆ ತೆಗೆದುಕೊಂಡು ಎಡಗಿನ ಮುಡ್ಡಿಗೆ ಹೊಡೆದಿದ್ದು ದ್ಯಾಮವ್ವ ಕಂಬಳಿ ಇವಳು ಪಿಯರ್ಾದಿಗೆ ಚಪ್ಪಲಿಯಿಂದ ಹೊಡೆದಿದ್ದು ಆಮೇಲೆ ಗದ್ದೆಪ್ಪ ಕಂಬಳಿ ಇವನು ಒಂದು ಅಳತೆಯ ಹಿಡಿಗಲ್ಲಿನಿಂದ ಪಿಯರ್ಾದಿಯ ಹಳ್ಳತ್ತಿಗೆ ಹೊಡೆದು ರಕ್ತಗಾಯ ಪಡೆಸಿದ್ದು ನಮ್ಮ ಮೇಲೆ ಹಲ್ಲೆಮಾಡಿ ಹೊಡೆ-ಬಡೆ ಮಾಡಿ ಜೀವ ಬೇದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಅಂತಾ ಪಿಯರ್ಾದಿಯ ಸಾರಾಂಶ ಇರುತ್ತದೆ.                             
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ.:- 32/2019 ಕಲಂ: 323, 324, 504 ಸಂಗಡ 34 ಐಪಿಸಿ:-ಪಿಯರ್ಾದಿ ಮತ್ತು ಆರೋಪಿತರ ಮದ್ಯ ಅಮ್ಮಾಪೂರ ಎಸ್.ಕೆ ಗ್ರಾಮದ ಸೀಮಾಂತರದಲ್ಲಿರುವ ಹೊಲ ಸವರ್ೆ.ನಂ:27 ವಿಸ್ತೀರ್ಣ 2ಎಕರೆ 11ಗುಂಟೆ ಜಮೀನು, ಹೊಲ ಸವರ್ೆ.ನಂ:49 ವಿಸ್ತೀರ್ಣ 3ಎಕರೆ 23 ಗುಂಟೆ ಹೊಲದ ಪಾಲಿನ ವಿಷಯಕ್ಕೆ ಸಂಬಂದಿಸಿದಂತೆ ಸಿವಿಲ್ ವ್ಯಾಜ್ಯಯು ಸದ್ಯ ಮಾನ್ಯ ನ್ಯಾಯಾಲಯದ ವಿಚಾರಣೆಯಲ್ಲಿದ್ದು ಪಾಲಿನ ವಿಷಯಕ್ಕೆ ಸಂಬಂದಿಸಿದಂತೆ ಅವರ ನಡುವೆ ಆವಾಗ ಆವಾಗ ತಂಟೆ ತಕರಾರರು ನಡೆಯುತ್ತಾ ಬಂದಿದ್ದು ಇರುತ್ತದೆ. ದಿನಾಂಕ:01/10/2019 ರಂದು ಮುಂಜಾನೆ 9:00 ಗಂಟೆಯ ಸುಮಾರಿಗೆ ಆರೋಪಿತರು ನೀಲಪ್ಪ ತಂದೆ ಮಾಳಪ್ಪ ಕಂಬಳಿ ಇವರೊಂದಿಗೆ ತಾವುಗಳು ತಮ್ಮ ಹೊಲದಲ್ಲಿ ಬೆಳೆದ ಸಜ್ಜೆ ಕಟಾವು ಮಾಡಿದ ವಿಷಯವನ್ನು ಪಿಯರ್ಾದಿಯವರಿಗೆ ಹೇಳಿರುತ್ತಾರೆ ಎಂದು ಅಮ್ಮಾಪೂರ ಎಸ್ಕೆ ಗ್ರಾಮದ ಅಲೈಪೀರ ಮಸೀದಿಯ ಹತ್ತಿರ ಬಾಯಿ ಮಾತಿನ ಜಗಳ ಮಾಡುತ್ತಿದ್ದರು ಅಲ್ಲಿಯೇ ಇದ್ದ ಪಿಯರ್ಾದಿಗೆ ಆರೋಪಿತರು ಲೇ ಸೂಳಿ ನನ್ನ ಮಗನೆ ನಿಮಗೆ ಸೊಕ್ಕು ಜಾಸ್ತಿ ಆಗೆದ ನಾವು ನಿಮಗೆ ಹೊಲದಲ್ಲಿ ಪಾಲು ಕೊಡುವುದಿಲ್ಲ ಎಂದು ಅಲ್ಕಾ ಶಬ್ದಗಳಿಂದ ಬೈದು ಜಗಳ ತೆಗೆದು ಪಿಯರ್ಾದಿಯೊಂದಿಗೆ ಹಣಮಪ್ಪ ಕಂಬಳಿ, ದೇವಪ್ಪ ಕಂಬಳಿ ಇವರುಗಳು ತಕ್ಕೆ ಕುಸ್ತಿಗೆ ಬಿದ್ದು ಹಣಮಪ್ಪ ಕಂಬಳಿ ಈತನು ಬಡಿಗೆಯಿಂದ ಮೈಕೆಗೆ ಹೊಡೆದು ಬಲ ಮುಂಗೈಗೆ, ಹೊಟ್ಟೆಗೆ ಒಳಪೆಟ್ಟು ಮಾಡಿದ್ದು ಮತ್ತು ದೇವಪ್ಪ ಕಂಬಳಿ ಈತನು ಕೈಯಿಂದ ಹೊಡೆ ಮಾಡಿದ್ದು ಮತ್ತು ನಿಂಗಪ್ಪ ಕಂಬಳಿ, ಹಣಮವ್ವ ಕಂಬಳಿ  ಸೂಳಿ ಮಕ್ಕಳೆ ನಿಮ್ಮದು ಸೊಕ್ಕು ಜಾಸ್ತಿ ಆಗೆದ ಎಂದು ಬೈದಿದ್ದು ನಿಂಗಪ್ಪ ಕಂಬಳಿಯು ಕೈಯಿಂದ ಹೊಡೆ-ಬಡೆ ಮಾಡಿದ್ದು ಅವರುಗಳ ವಿರುದ್ಧ ಸೂಕ್ತವಾದ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ ಅಂತಾ ನೀಡಿದ ಹೇಳಿಕೆಯ ಸಾರಾಂಶ ಇರುತ್ತದೆ.   


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!