ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 30-09-2019

By blogger on ಸೋಮವಾರ, ಸೆಪ್ಟೆಂಬರ್ 30, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 30-09-2019 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 135/2019  ಕಲಂ 279,337,338 ಐಪಿ.ಸಿ:-ದಿನಾಂಕ 30-09-2019 ರಂದು 2-15 ಪಿ.ಎಮ್ ಕ್ಕೆ  ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರಿಂದ ಆಸ್ಪತ್ರೆಗೆ ಬೇಟಿ ಕೊಟ್ಟು ಅಫಘಾತದಲ್ಲಿ ಗಾಯ ಹೊಂದಿ ಉಪಚಾರ ಪಡೆಯುತ್ತಿದ್ದ ಶ್ರೀ ಮಲ್ಲೇಶಪ್ಪಾ ತಂದೆ ಭೀಮಣ್ಣಾ ಜಾಳಿ ವಯಾ:40 ಉ: ಗ್ರಾಮ ಸಹಾಯಕ (ಕಂದಾಯ ಇಲಾಖೆ) ಜಾ: ಕಬ್ಬಲಿಗ ಸಾ: ಹೋನಗೇರಾ ಇವರು ಹೇಳಿಕೆ ನೀಡಿದ್ದು ಅದರ ಸಾರಾಂಶವೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು, ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕ ಅಂತಾ ಕೆಲಸ ಮಾಡಿಕೊಂಡು ಉಪಜೀವಿಸುತ್ತೆನೆ. ಹೀಗಿರುವಾಗ ದಿನಾಂಕ 30-09-2019 ರಂದು ಮಧ್ಯಾಹ್ನ ಸುಮಾರಿಗೆ ನಾನು ನನ್ನ ಮಗನಾದ ಸಾಬರೆಡ್ಡಿ ವಯಾ; 18 ವರ್ಷ ಇಬ್ಬರೂ ಕೂಡಿ ನಮ್ಮ ಮೋಟಾರ ಸೈಕಲ್ ನಂ: ಕೆ.ಎ-33/ವ್ಹಿ-7115 ನೆದ್ದರ ಮೇಲೆ ನಮ್ಮೂರಿನಿಂದ ಯಾದಗಿರಿಗೆ ಹೋಗುವ ಸಲುವಾಗಿ ಹೊರಟೇವು. ಮಧ್ಯಾಹ್ನ 1 ಗಂಟೆ ಸುಮಾರಿಗೆ ನಮ್ಮ ಗ್ರಾಮ ದಾಟಿ ಹೊನ್ನಯ್ಯಾ ತಾತನ ಗುಡಿಯ ಸಮೀಪ  ಬೀಮಣ್ಣಾ ಉಪ್ಪಾರ ಇವರ ಹತ್ತಿರ ಬರುತ್ತಿದ್ದಂತೆ ಅದೇ ವೇಳಗೆ ಎದರುಗಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-28/ಎಫ್-1829 ನೇದ್ದು ಇದರ ಚಾಲಕನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷ್ಯತ ನದಿಂದ ಓಡಿಸಿಕೊಂಡು ಬಂದು ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿದನು. ಆಗ ನಾವಿಬ್ಬರೂ ಮೋಟಾರ ಸೈಕಲ್ ಸಮೇತ ಕೆಳಗಡೆ ಬಿದ್ದೆವು. ನಂತರ ಸ್ವಲ್ಪ ಸುಧಾರಿಸಿಕೊಂಡು ನೋಡಲಾಗಿ ನನ್ನ ಬಲತೊಡೆಗೆ ಭಾರಿ ಗುಪ್ತಗಾಯವಾಗಿ ತೊಡೆ ಮುರಿದಂತಾಗಿತ್ತು. ಮತ್ತು ಬಲಮೊಳಕಾಲು ಕೆಳಗಡೆ ರಕ್ತಗಾಯವಾಗಿತ್ತು. ಅಲ್ಲದೇ ಬಲಗೈ ಬೆರಳುಗಳಿಗೆ ರಕ್ತಗಾಯವಾಗಿತ್ತು. ನನ್ನ ಮಗನಾದ ಸಾಬರೆಡ್ಡಿ ಇತನಿಗೂ ಕೂಡಾ ಬಲತೊಡೆಗೆ ಭಾರಿ ಗುಪ್ತಗಾಯವಾಗಿ ತೊಡೆ ಮುರಿದಂತಾಗಿತ್ತು. ನಂತರ ಬಸ್ಸಿನ ಚಾಲಕನ ಹೆಸರು ಸಂಗಮೇಶ ತಂದೆ ಮಲ್ಲಿಕಾಜರ್ುನ ಲೊಂಡಗೇ ಅಂತಾ ಗೊತ್ತಾಯಿತು. ನಂತರ ಗಾಯಹೊಂದಿಗ ನನಗೂ ಹಾಗೂ ನನ್ನ ಮಗನಾದ ಸಾಬರೆಡ್ಡಿ ಇಬ್ಬರಿಗೂ ನಮ್ಮ ಗ್ರಾಮದ ಬಸಣ್ಣಾ ತಂದೆ ಹಣಮಂತ ಕಟಕಟಿ ಇತನು ತನಬ್ನ ಅಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಈ ಘಟನೆಗೆ ಕಾರಣನಾಗಿದ್ದು ಈ ಬಗ್ಗೆ ಬಸ್ಸಿನ ಚಾಲಕ ಸಂಗಮೇಶ ತಂದೆ ಮಲ್ಲಿಕಾಜರ್ುನ ಲೊಂಡಗೇ ಇತನ ವಿರುದ್ದ ಕಾನೂನು ಪ್ರಕಾಸ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಮರಳಿ 3-30 ಪಿ.ಎಮ್ ಕ್ಕೆ ಠಾಣೆಗೆ ಬಂದು ಹೇಳಿಕೆ ಸಾರಾಂಶದ ಮೇಳಿಂದ ಠಾಣೆ ಗುನ್ನೆ ನಂ: 135/2019 ಕಲಂ 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 136/2019 ಕಲಂ: 279, 338 ಐಪಿಸಿ:-ದಿನಾಂಕ 29/09/2019 ರಂದು ಸಾಯಂಕಾಲ 5-30 ಗಂಟೆಗೆ ಆರೋಪಿತನು ತನ್ನ ಲಾರಿ ಟ್ಯಾಂಕರ ನಂ ಕೆ.ಎ-36-9940 ನೆದ್ದರಲ್ಲಿ ಬೂದಿಯನ್ನು ತುಂಬಿಕೊಂಡು ಶಕ್ತಿನಗರದಿಂದ ಮಳಖೇಡಕ್ಕೆ ಹೋಗಿ ಅಲಲಿ ಬೂದಿ ಖಾಲಿ ಆಗದ ಕಾರಣ ಮರಳಿ ಶಕ್ತಿ ನಗರಕ್ಕೆ ಬರುವಾಗ ಬಾಚವಾರ ಕ್ರಾಸ್ ದಾಟಿದ ನಂತರ ತನ್ನ ಟ್ಯಾಂಕರ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗಿ ಸೌದಾಗರ ತಾಂಡಾ ಕ್ರಾಸ್ ಹತ್ತಿರ ಡಿವೈಡರಕ್ಕೆ ಹೊಡೆದು ಪಲ್ಟಿ ಮಾಡಿ ಅಪಘಾತ ಮಾಡಿದ್ದರಿಂದ ಆರೋಪಿತನಿಗೆ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದಗಾಯಗಳು ಆಗಿರುತ್ತವೆ, ಅಂತಾ ಗುನ್ನೆ ದಾಖಲಾಗಿರುತ್ತದೆ. 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 134/2019  ಕಲಂ 279, 337, 427 ಐಪಿ.ಸಿ:-ದಿನಾಂಕ 30-09-2019 ರಂದು 9-30 ಎ.ಎಮ್ ಕ್ಕೆ ಫಿರ್ಯಾಧೀದಾರರಾದ ಫೈಜಲಖಾನ ತಂದೆ ಯೂಸೂಪಖಾನ ಪಠಾಣ ವಯಾಃ 26 ವರ್ಷ ಜಾಃ ಮುಸ್ಲಿಮ್ ಉಃ ಬಿಜಿನೆಸ್ ಸಾಃ ಗುಂತಕಲ್ ಜಿಲ್ಲಾ: ಅನತಂಪೂರ ಆಂಧ್ರಪ್ರದೇಶ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧೀ ಹೇಳಿಕೆ ಸಲ್ಲಿಸಿದ್ದು ಸಾರಾಂಶನೆಂದರೆ ನನ್ನದೊಂದು ಸ್ವಂತ ಲಾರಿ ಟ್ಯಾಂಕರ ಇದ್ದು ಅದರ ನಂಬರ ಎಪಿ-02-ಟಿಇ-1568  ಅಂತಾ ಇರುತ್ತದೆ. ಆ ಲಾರಿ ಟ್ಯಾಂಕರನ್ನು ಶಿರಾಜೊದ್ದಿನ ತಂದೆ ಮೊದಿನ ಪಟೇಲ ಜಮಾದಾರ ಇತನು ನಡೆಸಿಕೊಂಡು ಇರುತ್ತಾನೆ. ಮತ್ತು ಮತಾಬಸಾಬ ತಂದೆ ಉಸ್ಮಾನಸಾಬ  ಜಮಾದಾರ ಇತನು ಕ್ಲೀನರ ಅಂತಾ ಕೆಲಸ ಮಾಡಿಕೊಂಡು ಇರುತ್ತಾನೆ, ಹೀಗಿರುವಾಗ ದಿನಾಂಕ 29-09-2019 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನಾನು ನಮ್ಮ ಲಾರಿ ಟ್ಯಾಂಕರ ಚಾಲಕನಾದ ಶಿರಾಜೊದ್ದಿನ ತಂದೆ ಮೊದಿನ ಪಟೇಲ ಜಮಾದಾರ ಮತ್ತು ಕ್ಲೀನರ ಮತಾಬಸಾಬ ತಂದೆ ಉಸ್ಮಾನಸಾಬ  ಜಮಾದಾರ ಇಬ್ಬರಿಗೆ ನನ್ನ ಲಾರಿ ಟ್ಯಾಂಕರ ನಂ ಎಪಿ-02-ಟಿಇ-1568 ನೆದ್ದನ್ನು ತೆಗೆದುಕೊಂಡು ರಾಯಚೂರಿಗೆ ಹೋಗಿ ಅಲ್ಲಿಯ ಭಾರತ ಪೆಟ್ರೊಲ್ ಡಿಪೋದಲ್ಲಿ ಪೆಟ್ರೋಲ್ ಮತ್ತು ಡಿಜಲ್ ತುಂಬಿಸಿಕೊಂಡು ಕಲಬುಗರ್ಿಯಲ್ಲಿ ಅನಲೋಡ ಮಾಡಿರಿ ಅಂತಾ ಹೇಳಿದ್ದೆನು, ಆಗ  ನಮ್ಮ ಚಾಲಕ ಶಿರಾಜೊದ್ದಿನ ಮತ್ತು ಕ್ಲೀನರ ಮತಾಬಸಾಬ ಇಬ್ಬರೂ ಕೂಡಿ ಲಾರಿ ಟ್ಯಾಂಕರ ತೆಗೆದುಕೊಂಡು ರಾಯಚೂರಿಗೆ ಹೋಗಿದ್ದರು, ಸಾಯಂಕಾಲದ ಸುಮಾರಿಗೆ ನಮ್ಮ ಲಾರಿ ಟ್ಯಾಂಕರ ಕ್ಲೀನರನಾದ ಮತಾಬಸಾಬ ಇತನು ನನಗೆ ಪೋನ ಮಾಡಿ ಹೇಳಿದ್ದೆನೆಂದರೆ ನಾವು ರಾಯಚೂರ ಭಾರತ ಪೆಟ್ರೋಲ್ ಡಿಪೋದಲ್ಲಿ ಪೇಟ್ರೋಲ್ ಮತ್ತು ಡಿಜಲ್ ತುಂಬಿಕೊಂಡು ಮರಳಿ ಕಲಬುರಗಿಗೆ ಹೋಗುವ ಕುರಿತು ರಾಮಸಮುದ್ರ ಮಾರ್ಗವಾಗಿ ಯಾದಗಿರಿ ಕಡೆಗೆ ಬರುವಾಗ ರಾಮಸಮುದ್ರ ಗ್ರಾಮ ದಾಟಿದ ನಂತರ ಚಾಲಕನು ಲಾರಿ ಟ್ಯಾಂಕರನ್ನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಓಡಿಸಿಕೊಂಡು ಹೋಗುವಾಗ ರಾಮಸಮುದ್ರ-ಮಂಡರಗಿ ರೋಡಿನ ಮೇಲೆ ರಾಮ ಸಮುದ್ರ ದಾಟಿದ ನಂತರ ಶಾಲೆಯ ಎದುರುಗಡೆ ಟ್ಯಾಂಕರ ಪಲ್ಟಿ ಮಾಡಿದನು. ಈ ಅಪಘಾತದಲ್ಲಿ ನನಗೆ ಸಣ್ಣಪುಟ್ಟ ಗಾಯಗಳು ಆಗಿದ್ದರಿಂದ ನಾನು ದವಾಖಾನೆಗೆ ತೋರಿಸಿಕೊಂಡಿರುವುದಿಲ್ಲ, ಚಾಲಕನಾದ ಶಿರಾಜೊದ್ದಿನ ತಂದೆ ಮೊದಿನ ಪಟೇಲ ಜಮಾದಾರ ಇತನ ಎಡಮುಂಡಿಗೆ, ಎಡ ಮೊಳಕೈಗೆ ತರಚಿದ ಗಾಯವಾಗಿರುತ್ತದೆ, ಮತ್ತು ಟೊಂಕಕ್ಕೆ ಗುಪ್ತಗಾಯವಾಗಿರುತ್ತದೆ, ಈ ಅಪಘಾತವು ನಿನ್ನೆ ದಿನಾಂಕ 29/09/2019 ರಂದು ಸಾಯಂಕಾಲ 4-00 ಗಂಟೆಗೆ ನಡೆದಿರುತ್ತದೆ, ನೀವು ಬೇಗನೇ ಸ್ಥಳಕ್ಕೆ ಬನ್ನಿರಿ ಅಂತಾ ಹೇಳಿದ್ದರಿಂದ ನಾನು ಸ್ಥಳಕ್ಕೆ ಬಂದು ನೋಡಲಾಗಿ ಈ ಮೇಲಿನಂತೆ ಘಟನೆಯಿಂದ ನಮ್ಮ ಚಾಲಕ ಮತ್ತು ಕ್ಲೀನರನಿಗೆ ಈ ಮೇಲಿನಂತೆ ಗಾಯಗಳು ಆಗಿದ್ದವು, ಈ ಅಪಘಾತದಲ್ಲಿ ಟ್ಯಾಂಕರನಿಂದ ಸುಮಾರು 60 ಪ್ರತಿಶತದಷ್ಟು ಪೆಟ್ರೋಲ್ ಮತ್ತು ಡಿಜಲ್ ನೆಲದ ಮೇಲೆ ಸೋರಿಕೆಯಾಗಿದ್ದರಿಂದ ಸುಮಾರು 6,00,000/ರೂ ಯಷ್ಟು ನಷ್ಟವಾಗಿರುತ್ತದೆ, ಈ ಅಪಘಾತವು ಚಾಲಕನಾದ ಶಿರಾಜೊದ್ದಿನ ತಂದೆ ಮೊದಿನ ಪಟೇಲ ಜಮಾದಾರ ಇವನ ನಿರ್ಲಕ್ಷತನದಿಂದ ನಡೆದಿದ್ದು ಅವನ ಮೇಲೆ ಕಾನೂನೂ ರೀತಿ ಕ್ರಮ ಕೈಕೊಬೇಕು. ನಾವು ನಮ್ಮೂರಿನಿಂದ ಯಾದಗಿರಿಗೆ ಬಂದು ವಿಚಾರಿಸಿ ಫಿರ್ಯಾಧಿ ನೀಡಲು ತಡವಾಗಿರುತ್ತದೆ ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 134/2019 ಕಲಂ 279, 337, 427 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:-245/2019. ಕಲಂ 379 ಐ.ಪಿ.ಸಿ.ಮತ್ತು ಕಲಂ.44 (1) ಕೆ.ಎಮ್.ಎಮ್.ಸಿ.ಆರ್ ರೂಲ್:- ದಿನಾಂಕ: 30-09-2019 ರಂದು 10:00 ಎ.ಎಮ್.ಕ್ಕೆ ಆರೋಪಿತರು ತಮ್ಮ ಲಾರಿ ನಂಬರ ಕೆ.ಎ.32 ಸಿ. 3659 ನೇದ್ದರಲ್ಲಿ ಸಾವೂರ ಕ್ರಾಸ ಹತ್ತಿರ ರಸ್ತೆಯ ಮೇಲೆ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಸರಕಾರಕ್ಕೆ ಯಾವುದೇ ತೆರಿಗೆ ತುಂಬದೇ ಅಕ್ರಮವಾಗಿ ಸಾಗಿಸುತ್ತಿದ್ದಾಗ ಫಿಯರ್ಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಹೋಗಿ ದಾಳಿಮಾಡಿ ಮರಳು ತುಂಬಿದ ಲಾರಿಯನ್ನು ವಶಪಡಿಸಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರ ಆಧಾರದ ಮೇಲಿಂದ  ಠಾಣೆ ಗುನ್ನೆ ನಂ.245/2019 ಕಲಂ. 379 ಐ.ಪಿ.ಸಿ. ಮತ್ತು ಕಲಂ 44(1) ಕೆ.ಎಮ್.ಎಮ್.ಸಿ.ಆರ್  ಅಡಿಯಲ್ಲಿ  ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 105/2019 ಕಲಂ: ಮನುಷ್ಯ ಕಾಣೆಯಾದ ಬಗ್ಗೆ.:- ದಿನಾಂಕ: 30/09/2019 ರಂದು 01.30 ಪಿಎಮ್ ಕ್ಕೆ ಶ್ರೀ. ಮಾಳಪ್ಪ ತಂದೆ ಭೀಮರಾಯ ಇಂಗಳಗಿ ವ:40 ವರ್ಷ ಜಾ:ಮಾದಿಗ (ಮಾತಂಗಿ) ಸಾ: ಬೋಯಿ ಕಾಡಂಗೇರಾ ತಾ:ಶಹಾಪೂರ ಜಿ: ಯಾದಗಿರಿ. ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಅಜರ್ಿ ಹಾಜರ ಪಡೆಸಿದ್ದು ಸಾರಾಂಶವೆನೆಂದರೆ, ನನ್ನ ಮಗನಾದ ಕು. ಮಲ್ಲಪ್ಪ ತಂದೆ ಮಾಳಪ್ಪ ವ:20 ವರ್ಷ ವಿದ್ಯಾರ್ಹತೆ: 8 ನೇ ಉ: ಕೂಲಿ ಎತ್ತರ-5.4 ಅಡಿ ಕೆಂಪು ಬಣ್ಣ ಸಾದಾರಣ ಮೈಕಟ್ಟು ಹೊಂದಿದ್ದು, ನನ್ನ ಮಗನು ಸಂಸಾರದ ಅಡಚಣೆಯ ಸುವಾಗಿ 2 ತಿಂಗಳು ಹಿಂದೆ ಕೆಲಸಕ್ಕೆ ಎಂದು ಬೆಂಗಳೂರಿನಲ್ಲಿರುವ ಅವರ ದೊಡ್ಡಪ್ಪನಾದ ಶ್ರೀ. ಅಮಲ್ಲಪ್ಪ ತಂದೆ ಭಿಮರಾಯ ಮತ್ತು ಚಿಕ್ಕಪ್ಪನಾದ ಶ್ರೀ. ನಿಂಗಪ್ಪ ತಂದೆ ಭಿಮರಾಯ ಇವರ ಸುಮಾರು ವರ್ಷಗಳಿಂದ ಬೆಂಗಳೂರಿನ ಅರಕೇರಿ ಬನ್ನೆರುಗಟ್ಟ ರೋಡ ಹುಳಿಮಾವುನಲ್ಲಿಯೇ ಕಟ್ಟಡದ ಕೂಲಿ ಕೆಲಸಕ್ಕೆಂದು ಅಲ್ಲಿಯೆ ಇರುತ್ತಾರೆ. ಕಾರಣ ನನ್ನ ಮಗನು ಕೂಡ ನಮ್ಮ ದೊಡ್ಡಪ್ಪ ಮತ್ತು ಚಿಕ್ಕಪ್ಪರ ಹತ್ತಿರ ನಾನು ಕೂಡ ಕೆಲಸಕ್ಕೆ ಹೊಗುತ್ತೆನೆಂದು ಅವರ ಹತ್ತಿರ ಹೋಗಿ ಅಲ್ಲಿಂದ ಆ ಕೂಲಿ ಕೆಲಸ ಮಾಡಿ ಒಂದು ತಿಂಗಳ ಜೋತೆ ಅವರ ಚಿಕ್ಕಪ್ಪ, ದೊಡ್ಡಪ್ಪರ ಹತ್ತಿರ ಕೂಲಿ ಕೆಲಸ ಮಾಡಿ ಅಲ್ಲಿಂದ ಅವರ ಚಿಕ್ಕಪ್ಪ ಮತ್ತು ದೊಡ್ಡಪ್ಪನವರಿಗೆ ನಾನು ಶಿವಮೊಗ್ಗಕ್ಕೆ ಹೋಗಿ ಅಲ್ಲಿ ಜೆ.ಸಿ.ಬಿ ಚಾಲಕ ಕಲಿಯಕ್ಕೆಂದು ಕೆಲಸಕ್ಕೆ ಸೇರಿ ಅಲ್ಲಿಂದ ನಾಲ್ಕೈದು ದಿವಸಗಳವರೆಗೆ ನಮಗೆ ಮೋಬೈಲ ನಿಂದ ನನ್ನ ಮಗನ ಮೋ.9380126135 ಜೆ.ಸಿ.ಬಿ ಕಲಿಯಲು ಕೆಲಸಕ್ಕೆ ಸೇರಿದ ಬಗ್ಗೆ ಮಾತನಾಡುವುದೇ ಬಂದ ಆಗಿ ಅಲಿಂದ ನಾವು ನನ್ನ ಮಗನಿಗೆ ಪೋನ ಮಾಡಿದರೆ ಅಲ್ಲಿಂದ ನನ್ನ ಮಗನ ಮೋಬೈಲ್ ಸ್ವೀಚ್ ಆಫ್. ಆಗಿರುತ್ತದೆ. ಒಂದು ತಿಂಗಳಾಯಿತು ನನ್ನ ಮಗನ ಸಂಪರ್ಕವು ಇಲ್ಲ ಮೋಬೈಲ್ ಕೂಡಾ ಇಲ್ಲ ಇದರಿಂದ ನನ್ನ ಮತ್ತು ನಮ್ಮ ಮನೆಯವರೆಲ್ಲರಿಗೂ ತುಂಬಾ ಗಾಬರಿಯಾಗಿದೆ. ನನ್ನ ಮಗನಿಗೆ ಎನಾಗಿದೇ ಎಂದು ದಿಕ್ಕು ತೋಚದಂತಾಗಿದೆ. ಮೋಹರಂ ಹಬ್ಬಕ್ಕೆ ಬರುತ್ತೇನೆಂದು ಹೇಳಿ ನನ್ನ ಮಗನು ಅಲ್ಲಿಂದ 01 ತಿಂಗಳವರೆಗೆ ನನ್ನ ಮಗನ ಸುಳಿವೆ ಸಿಗದಂತಾಗಿದೆ. ಆದ ಕಾರಣ ದಯಾಳುಗಳಾದ ತಾವುಗಳು ನನ್ನ ಮಗನ ಬಗ್ಗೆ ವಿಚಾರಣೆ ಮಾಡಿ ನನ್ನ ಮಗನಿಗೆ ಏನಾಗಿದೆ ಕಾಣೆಯಾಗಿದ್ದಾನೋ ಅಥವಾ ಮತ್ತಿನೆದಾದರೂ ಅನಾಹುತವಾಗಿದೆಯೋ ಎಂಬುದನ್ನು ಪತ್ತೆ ಮಾಡಿ ನಮಗೆ ಮಾಹಿತಿಯನ್ನು ನೀಡಿ ಮತ್ತು ಕಾಣೆಯಾಗಿದ್ದರೆ, ನನ್ನ ಮಗನನ್ನು ನಮ್ಮ ಜೋತೆ ಸೇರಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಪೊಲೀಸ್ ಠಾಣೆ ಗುನ್ನೆ ನಂ: 105/2019 ಕಲಂ: ಮನುಷ್ಯ ಕಾಣೆಯಾದ ಬಗ್ಗೆ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪುರ ಪೊಲೀಸ್ ಠಾಣೆ ಗುನ್ನೆ ನಂ.:- 187/2019 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957:- ದಿನಾಂಕ:30-09-2019 ರಂದು 10-15 ಪಿ.ಎಂ. ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀ ಶರಣಪ್ಪ ಹವಾಲ್ದಾರ ಪಿ.ಎಸ್.ಐ. (ಅ.ವಿ.) ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರನೊಂದಿಗೆ ಜಪ್ತಿ ಪಂಚನಾಮೆ ಹಾಜರು ಪಡಿಸಿ ವರದಿ ನೀಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:30-09-2019 ರಂದು 7 ಪಿ.ಎಮ್ ಸುಮಾರಿಗೆ ನಾನು ಠಾಣೆಯ  ಸಿಬ್ಬಂಧಿಯವರಾದ ಶ್ರೀ ಮನೋಹರ ಹೆಚ್ಸಿ-105, ಶ್ರೀ ಸೋಮಯ್ಯಾ ಸಿಪಿಸಿ-235, ಶ್ರೀ ಸುಭಾಶ ಪಿಸಿ-174 ಇವರೆಲ್ಲರೂ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಶೇಳ್ಳಗಿ ಸೀಮಾಂತರ ಕೃಷ್ಣಾ ತೀರದಿಂದ ಯಾರೋ ಒಬ್ಬರು ತಮ್ಮ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಕವಡಿಮಟ್ಟಿ ಮಾರ್ಗವಾಗಿ ಮಂಗಿಹಾಳ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಜಲಾಲಸಾಬ ತಂದೆ ಬಡೆಸಾಬ ಚೌದರಿ ವಯಾ:50 ಉ: ಡ್ರೈವರ ಜಾತಿ: ಮುಸ್ಲಿಂ ಸಾ:ದೇವಾಪೂರ 2) ಶ್ರಿ ಪರಶುರಾಮ ತಂದೆ ಭೀಮಣ್ಣ ಗುಡ್ಡಕಾಯ ವಯಾ;26ವರ್ಷ ಉ:ಕೂಲಿ ಜಾ:ಬೇಡರ ಸಾ:ಕುಂಬಾರಪೇಠ ಇವರನ್ನು ಠಾಣೆಗೆ 7-15 ಪಿ.ಎಂ.ಕ್ಕೆ ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರು ಸಿಬ್ಬಂಧಿಯೊಂದಿಗೆ ಎಲ್ಲರೂ ಒಂದು ಖಾಸಗಿ ವಾಹನದಲ್ಲಿ 07-30 ಪಿ.ಎಂ.ಕ್ಕೆ ಹೊರಟು 8-15 ಪಿ.ಎಂ.ಕ್ಕೆ ಮಂಗಿಹಾಳ ಗ್ರಾಮದ ಹಳ್ಳದ ಹತ್ತಿರ ಮುಖ್ಯ ರಸ್ತೆಯಲ್ಲಿ ನಿಂತುಕೊಂಡಾಗ ಕವಡಿಮಟ್ಟಿ ಕಡೆಯಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ಕೈ ಮಾಡಿ ನಿಲ್ಲಿಸಿಸಲು ಸದರಿ ಚಾಲಕನು ನಮ್ಮ ಪೊಲೀಸ್ ಡ್ರೆಸನ್ನು ನೋಡಿ ತನ್ನ ಟ್ಯಾಕ್ಟರನ್ನು ಸೈಡಿಗೆ ನಿಲ್ಲಿಸಿ ಕೆಳಗೆ ಇಳಿದು ಓಡಿ ಹೊದನು. ಸದರಿ ಟ್ಯಾಕ್ಟರನ್ನು ಪರೀಶಿಲಿಸಲು ನೋಡಲು ಒಂದು ಮಹೇಂದ್ರ  ಕಂಪನಿಯ ಟ್ಯಾಕ್ಟರ ಇದ್ದು ಅದರ ನಂಬರ ಕೆಎ-33 ಟಿಎ-8168 ನೇದ್ದು, ಟ್ರಾಲಿಗೆ ನಂಬರ ಇರುವದಿಲ್ಲ. ಅದರಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅ.ಕಿ 1600/- ರೂಗಳು ಆಗುತ್ತದೆ. ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲಿಕನು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಟ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ಜೀಪಿನ ಲೈಟಿನ ಬೆಳಕಿನಲ್ಲಿ 8-15 ಪಿ.ಎಮ್ ದಿಂದ 9-15 ಪಿ.ಎಮ್ ದ ವರೆಗೆ ಕೈಗೊಂಡಿದ್ದು ಇರುತ್ತದೆ. ಆದ್ದರಿಂದ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಮರಳು ತುಂಬಿದ ಟ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಹಾಜರು ಪಡಿಸಿದ್ದು ಟ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ನಿಡಿದ ಮೇರೆಗೆ  ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!