ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 29-09-2019

By blogger on ಭಾನುವಾರ, ಸೆಪ್ಟೆಂಬರ್ 29, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 29-09-2019 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 151/2019 ಕಲಂ: 323, 324, 420, 504, 506 ಸಂಗಡ 34 ಐಪಿಸಿ:-ದಿನಾಂಕ 29.09.2019 ರಂದು ಸಂಜೆ 4:00 ಗಂಟೆ ಮಾನ್ಯ ಆರಕ್ಷಕ ವೃತ್ತ ನಿರೀಕ್ಷಕರು ಗುರುಮಠಕಲ್ ರವರ ಜ್ಞಾಪನ ಪತ್ರ ಸಂಖ್ಯೆ 332/ನ್ಯಾ.ಉ.ಪ್ರ/ಗು.ವೃ/2019 ದಿನಾಂಕ 27.09.2019 ನೇದ್ದರೊಂದಿಗೆ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂಖ್ಯೆ 61/2019 ನೇದ್ದು ಲಗತ್ತಿಸಿದ್ದು ವಸೂಲಾಗಿದ್ದು ಅದನ್ನು ಸ್ವೀಕರಿಕೊಂಡು ಅವಲೋಕಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆನೇಂದರೆ ದಿನಾಂಕ 30.06.2019 ರಂದು ಸಂಜೆ 5:30 ಗಂಟೆಯಿಂದ ರಾತ್ರಿ 8:30 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾಧಿದಾರರಿಗೆ ಅವಾಚ್ಯವಾಗಿ ನಿಂದಿಸಿ ಊರಿನ ಗುಡಿಯ ಹಣವನ್ನು ಪಡೆದು ಈಗ ಕೊಡುವದಿಲ್ಲ ಏನು ಮಾಡ್ಕೋಳ್ತಿ ಅಂತಾ ಮೋಸ ಮಾಡಿರುತ್ತಾನೆಂದು ತಮ್ಮ ನ್ಯಾಯವಾದಿ ಮುಖಾಂತರ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ನ್ಯಾಯಾಲಯದಲ್ಲಿ ಖಾಸಗಿ ಫಿರ್ಯಾದಿ ಸಲ್ಲಿಸಿರುತ್ತಾನೆ ಅಂತಾ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 151/2019 ಕಲಂ: 323, 324, 420, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.  

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 108/2019 ಕಲಂ.143,147, 341,447,427,323,504,506 ಸಂಗಡ 149 ಐಪಿಸಿ:- ದಿನಾಂಕ: 29-09-2019 ರಂದು ಬೆಳಿಗ್ಗೆ 11-30 ಗಂಟೆಗೆ ಪಿಯರ್ಾಧಿದಾರನಾದ ಬಾಬು ತಂದೆ ಹಣಮಂತ ಬೆಲಸೆ ವ|| 32 ವರ್ಷ ಜಾ|| ಮಾದಿಗ ಉ|| ಕೂಲಿಕೆಲಸ ಸಾ|| ಹೆಗ್ಗಣಗೇರಾ ತಾ|| ಜಿ|| ಯಾದಗಿರಿ ಇತನು ಠಾಣೆಗೆ ಹಾಜರಾಗಿ  ಪಿಯರ್ಾಧಿ ನೀಡಿದ್ದೆನೆಂದರೆ ದಿನಾಂಕ: 27-09-2019 ರಂದು ಮದ್ಯಾಹ್ನ 12-30 ಗಂಟೆಗೆ ಹೆಗ್ಗಣಗೇರಾ ಸಿಮಾಂತರದಲ್ಲಿ ನಮ್ಮ ಹೊಲದಲ್ಲಿ ಆರೋಪಿತರೆಲ್ಲರು ಸೇರಿಕೊಂಡು ನಮ್ಮ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಎತ್ತುಗಳನ್ನು ಹತ್ತಿ ಹೊಲದಲ್ಲಿ ಬಿಟ್ಟು ಬೆಳೆಯನ್ನು ಲುಕ್ಷಾನ ಮಾಡಿ ಎದೆಯ ಮೇಲಿನ ಅಂಗಿ ಹಿಡಿದು ಅಡ್ಡ ಗಟ್ಟಿ ನಿಲ್ಲಿಸಿ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 108/2019 ಕಲಂ: 279,337,338 ಐ.ಪಿ.ಸಿ:- ದಿನಾಂಕ28.09.2019 ರಂದು 07.15 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀ ಶೇಖಪ್ಪ ತಂದೆ ಲಕ್ಷ್ಮಣ ಹೆರಕಲ ವಯಾ: 38 ವರ್ಷ  ಜಾತಿ: ಕುರುಬ ಉ: ಕೂಲಿಕೆಲಸ ಸಾ|| ಬಸವನ ಬಾಗೆವಾಡಿ ಜಿ|| ವಿಜಯಪೂರ ಇವರು  ಠಾಣೆಗೆ ಹಾಜರಾಗಿ ಪಿರ್ಯಾದಿ ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆ  ದಿನಾಂಕ: 28.09.2019 ರಂದು ಬೆಳಿಗ್ಗೆ 10.00 ಘಂಟೆಗೆ ಕೆಂಭಾವಿಯಲ್ಲಿ ಖಾಸಗಿ ಕೆಲಸ ಇದ್ದ ಕಾರಣ ನಾನು ಹಾಗೂ ನನ್ನ ಗೆಳೆಯನಾದ ಹನೀಫ್ ತಂದೆ ಲಾಲಸಾಬ ಮಕಾಶಿ ಸಾ: ಕಾಗೆ ಅಗಸಬಾಳ ತಾ: ಮುದ್ದೆಬಿಹಾಳ ಈತನ ಕವಾಸಕಿ ಕ್ಯಾಲಿಬಾರ ಮೊಟಾರ ಸೈಕಲ್ ನಂ ಕೆ.ಎ-31/ಜೆ-5777 ನೇದ್ದನ್ನು ತೆಗೆದುಕೊಂಡು ಕೆಂಭಾವಿಗೆ ಬಂದು ಕೆಲಸ ಮುಗಿಸಿ ವಾಪಸ್ಸು ಊರಿಗೆ ಹೋಗುವ ಕುರಿತು ಇವತ್ತು ಸಾಯಾಂಕಾಲ 03.30 ಘಂಟೆ ಸುಮಾರಿಗೆ ಐನಾಪೂರ ಕ್ರಾಸ ಸಮೀಪ ಸಿದ್ದನಗೌಡ ತಂದೆ ಶರಣಪ್ಪಗೌಡ ಬಿರಾದಾರ ಇವರ ಹೋಲದ ಹತ್ತಿರ ನಾವು ಮೋಟಾರ ಸೈಕಲ್ ಮೇಲೆ ಹೊಗುವಾಗ ನಮ್ಮ ಎದುರುಗಡೆ ತಾಳಿಕೋಟಿ ರಸ್ತೆ ಕಡೆಯಿಂದ ಒಂದು ಮೋಟಾರ ಸೈಕಲ್ ನೇದ್ದರ ಚಾಲಕನು ಬರುತ್ತಿದ್ದನು, ನಮ್ಮ ಮೊಟಾರ ಸೈಕಲ್ ಚಲಾಯಿಸುತ್ತಿದ್ದ ಹನೀಫ ತಂದೆ ಲಾಲಸಾಬ ಮಕಾಶಿ ಈತನು ತನ್ನ ಮೊಟಾರ ಸೈಕಲ್ನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಎದುರುಗಡೆ ಬರುತ್ತಿದ್ದ ಮೊಟಾರ ಸೈಕಲಿಗೆ ಡಿಕ್ಕಿ ಪಡಿಸಿದಾಗ ಎರಡು ಮೊಟಾರ ಸೈಕಲ್ ಸಮೇತ ಎಲ್ಲರೂ ರಸ್ತೆಯ ಮೇಲೆ ಬಿದ್ದಾಗ  ನನಗೆ ಬಲಕಣ್ಣಿನ ಹುಬ್ಬಿನ ಮೇಲೆ ರಕ್ತಗಾಯ, ಗದ್ದಕ್ಕೆ ರಕ್ತಗಾಯ  ಆಗಿದ್ದು, ನಮ್ಮ ಮೊಟಾರ ಸೈಕಲ್ ಚಲಾಯಿಸುತ್ತಿದ್ದ ಹನೀಫ್ ಈತನಿಗೆ ಗದ್ದಕ್ಕೆ, ಬಲಕಾಲು ಮೊಳಕಾಲಿಗೆ ತರಚಿದ ರಕ್ತಗಾಯ ಆಗಿದ್ದು ಅಲ್ಲದೇ ಹನೀಫ್ ಮಕಾಶಿ ಈತನು ಡಿಕ್ಕಿ ಪಡಿಸಿದ ಮೊಟಾರ ಸೈಕಲ್ ನಂ ನೋಡಲಾಗಿ ಕೆ.ಎ.33/ಜೆ-3615 ನೇದ್ದು ಇದ್ದು ಆತನಿಗೆ ಬಲಕಾಲು ಹಿಂಬಡಿಗೆ, ಗದ್ದಕ್ಕೆ, ಬಲಕೈ ಅಂಗೈಗೆ ರಕ್ತಗಾಯ, ಮತ್ತು ಎಡಬುಜಕ್ಕೆ ಹಾಗೂ ಎಡಕೈ ಮುಷ್ಠಿ ಹತ್ತಿರ ಬಾರೀ ಒಳಪೆಟ್ಟು ಆಗಿ ಬೇವುಸ ಆಗಿ ಬಿದ್ದಿರುತ್ತಾನೆ. ಆತನ ಹೆಸರು ಚಿದಾನಂದ ತಂದೆ ನಾಗಪ್ಪ ಬಸರಿಗಿಡ ಸಾ: ಕೆಂಭಾವಿ ಅಂತಾ ಗೊತ್ತಾಗಿರುತ್ತದೆ. ನಾವೆಲ್ಲರೂ ರಸ್ತೆಯ ಮೇಲೆ ಬಿದ್ದು ಚಿರಾಡುವಾಗ ಅಲ್ಲೆ ಇದ್ದ ಮಲ್ಲಪ್ಪ ತಂದೆ ಬಸಪ್ಪ ದೇವರಮನಿ ಸಾ: ಐನಾಪುರ ರವರು 108  ವಾಹನಕ್ಕೆ ಕರೆ ಮಾಡಿ ಉಪಚಾರ ಕುರಿತು ಪ್ರಾಥಮಿಕ ಆರೊಗ್ಯ ಕೇಂದ್ರ ಕೆಂಭಾವಿಗೆ ಸೇರಿಕೆ ಮಾಡಿರುತ್ತಾನೆ. ವೈದ್ಯರು  ಚಿದಾನಂದ ತಂದೆ ನಾಗಪ್ಪ ಬಸರಿಗಿಡ ಈತನು ಬೇವುಸ ಆಗಿದ್ದರಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ವಾತ್ಸಲ್ಯೆ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು ಇರುತ್ತದೆ. ನಾನು ಕೆಂಭಾವಿ ಆಸ್ಪತ್ರೆಯಲ್ಲಿಯೇ ಉಪಚಾರ ಪಡೆದುಕೊಂಡು ಠಾಣೆಗೆ ಬಂದು ಈ ಪಿರ್ಯಾದಿ ಅಜರ್ಿ ನೀಡಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 108/2019 ಕಲಂ 279.337.338 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು. ಹೀಗಿರುತ್ತಾ ಇಂದು ದಿನಾಂಕ 29.09.2019 ರಂದು 06-30 ಎ.ಎಮ್ ಕ್ಕೆ ವಿಜಯಪೂರದ ಸರಕಾರಿ ಆಸ್ಪತ್ರೆಯ ಉಕ್ಕಡ ಠಾಣೆಯಿಂದ ಸದರಿ ಪ್ರಕರಣದಲ್ಲಿಯ ಆರೋಪಿತನಾದ ಹನೀಫ್ ತಂದೆ ಲಾಲಬಂದಿ ಮಕಾಶಿ ವಯಾ: 45 ಜಾತಿ: ಮುಸ್ಲಿಂ ಉ: ಕೂಲಿಕೆಲಸ ಸಾ: ಕಾಗೆ ಅಗಸಬಾಳ ತಾ: ಮುದ್ದೆಬಿಹಾಳ ಈತನು ಉಪಚಾರ ಕುರಿತು ವಿಜಯಪೂರ ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ಉಪಚಾರ ಫಲಕಾರಿಯಾಗದೇ ವಿಜಯಪೂರದ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಇಂದು ದಿನಾಂಕ 29.09.2019 ರಂದು 04.35  ಎ.ಎಮ್ ಕ್ಕೆ ಮೃತಪಟ್ಟಿರುತ್ತಾನೆ ಅಂತ ಡೆತ್ ಎಮ್ ಎಲ್ ಸಿ ವಸೂಲಾಗಿದ್ದು ಇರುತ್ತದೆ. ಕಾರಣ ಸದರಿ ಪ್ರಕರಣದಲ್ಲಿ ಕಲಂ 304[ಎ] ಐಪಿಸಿ ನೇದ್ದನ್ನು ಅಳವಡಿಸಿಕೊಳ್ಳಲು ಅನುಮತಿ ನೀಡಲು ಮಾನ್ಯರವರಲ್ಲಿ ವಿನಂತಿಸಿಕೊಂಡಿದ್ದು ಇರುತ್ತದೆ. 

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 86/2019 ಕಲಂ. 279 304(ಎ) ಐಪಿಸಿ:- ಮೃತನು ದಿನಾಂಕ:29/09/2019 ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ   ಕಲ್ಲದೇವನಳ್ಳಿಯಿಂದಾ ಮೋಟಾರ್ ಸೈಕಲ್ ನಂ.ಕೆಎ-59 ಇ-6533 ನೇದ್ದನ್ನು ನಡೆಯಿಸಿಕೊಂಡು ಅರಕೇರಾ (ಜೆ)ಗೆ ಬರುವಾಗ, ಕಚಕನೂರ-ಅರಕೇರಾ(ಜೆ) ರೋಡಿನ ಮೇಲೆ  ಮಾರ್ಗ ಮದ್ಯ ಯಡಳ್ಳಿ ಹೈಸ್ಕೂಲ ಹತ್ತಿರ ಇರುವ ರೋಡ ಜಂಪಗಳನ್ನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ರೋಡ ಜಂಪ ಜಿಗಿಸಿ ರೋಡಿನ ಬಲಬಾಗದ ಹಂಪ್ ಸಿಗ್ನಲ್ ಕಂಬಕ್ಕೆ ಡಿಕ್ಕಿಹೊಡೆದುಕೊಂಡು ತನ್ನಷ್ಟಕ್ಕೆ ತಾನೇ ಅಪಘಾತ ಮಾಡಿಕೊಂಡು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತಾ ಇತ್ಯಾದಿ ಹೇಳಿಕೆಯನ್ನು ಮೃತನ ತಂದೆ ಠಾಣೆಗೆ ಹಾಜರಾಗಿ ಕೊಟ್ಟಿದ್ದರ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಲಾಗಿದೆ.  


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!