ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 26-09-2019
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 78/2019 ಕಲಂ ಕಲಂ.323,324,506,504 ಸಂ.34 ಐಪಿಸಿ ಮತ್ತು 3()()(ತ) ಎಸ್ಸಿ/ಎಸ್ಟಿ ಆಕ್ಟ್:- ದಿನಾಂಕ; 26/09/2019 ರಂದು 1-00 ಪಿಎಮ್ ಕ್ಕೆ ಮಾನ್ಯ ಆರಕ್ಷಕ ಉಪ-ಅಧಿಕ್ಷಕರು ಯಾದಗಿರಿ ರವರ ಕಾಯರ್ಾಲಯದಿಂದ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಯಾದಗಿರಿ ರವರಿಂದ ವಸೂಲಾದ ಪಿಸಿ ನಂ.01/2019 ನೇದ್ದನ್ನು ಪ್ರಕರಣ ದಾಖಲಿಸಿಕೊಂಡು ಮಾನ್ಯ ಆರಕ್ಷಕ ಉಪ-ಅಧಿಕ್ಷಕರು ಯಾದಗಿರಿ ರವರಗೆ ಮುಂದಿನ ತನಿಖೆ ಕುರಿತು ಸಲ್ಲಿಸುವಂತೆ ಸೂಚಿಸಿದ್ದು ಸದರಿ ಪಿರ್ಯಾಧಿ ಕಾಶಿನಾಥ ತಂದೆ ದಿ. ಹಣಮಂತ ಕಣೇಕಲ ಸಾ; ಕೋಟಗಾರವಾಡಿ ಯಾದಗಿರಿ ರವರ ಪಿರ್ಯಾಧಿ ಸಾರಾಂಶವೆನೆಂದರೆ, ಯಾದಗಿರಿ ನಗರದ ನಿವಾಸಿಯಾಗಿದ್ದು ನಾನು ಎಸ್.ಸಿ(ಹೊಲೆಯ) ಜಾತಿಗೆ ಸೇರಿದವನಾಗಿದ್ದು ಕೋಟಗಾರವಾಡದಲ್ಲಿ ಒಕ್ಕಲುತನ ಮಾಡಿಕೊಂಡು ನನ್ನ ಹೆಂಡತಿ ಮಕ್ಕಳು ನನ್ನ ತಾಯಿಯೊಂದಿಗೆ ಉಪಜೀವನಸಾಗಿಸುತ್ತಿದ್ದೇನೆ. ಯಾದಗಿರಿ (ಬಿ) ಗ್ರಾಮದ ಸವರ್ೆ ನಂ.145 ವಿಸ್ತೀರ್ಣ 1 ಎಕರೆ ಈ ಜಮೀನು ನಮ್ಮ ಪೂರ್ವಜರ ಆಸ್ತಿಯಾಗಿದ್ದು ನಮ್ಮ ತಂದೆಯ ಹೆಸರಿನಲ್ಲಿದ್ದು ನಮ್ಮ ತಂದೆಯವರು ಮೃತ ಪಟ್ಟ ನಂತರ ನನ್ನ ಹೆಸರಿಗೆ ವಗರ್ಾವಣೆ ಮಾಡಿಕೊಳ್ಳಲು ತಹಸಿಲ್ದಾರರ ಕಾಯರ್ಾಲಯದಲ್ಲಿ 2011 ರಲ್ಲಿ ಅಜರ್ಿ ಸಲ್ಲಿಸಿದ್ದೆ ಆಗ ಆರೋಪಿ ನಂ.1 ರವರು ಆ ಜಮೀನಿನ ಹತ್ತಿರ ನನ್ನದು 38 ಗುಂಟೆ ಜಮೀನು ಇರುತ್ತದೆ ಅಂತಾ ತಕರಾರು ಸಲ್ಲಿಸಿದರು. ನಂತರ ಸಹಾಯಕ ಆಯುಕ್ತರಲ್ಲಿ ಪ್ರಕರಣ ವಗರ್ಾವಣೆ ಆಯಿತು. ವಿಚಾರಣೆ ನಂತರ ಮಾನ್ಯ ಸಹಾಯಕ ಆಯುಕ್ತರು ಆರೋಪಿತರ ತಕರಾರನ್ನು ತಳ್ಳಿ ಹಾಕಿ ನನ್ನ ಹೆಸರಿಗೆ ವಗರ್ಾವಣೆ ಮಾಡುವಂತೆ ಆದೇಶಿಸಿರುತ್ತಾರೆ ಆದೇಶ ದಿನಾಂಕ;30/11/2017 ರಂದು ಆದೇಶ ಸಂ/ಕಂ/ತಿಪ/624/2016-17 ಇರತ್ತದೆ. ಇದಾದ ನಂತರ ನಾನು ಪಾರ್ಮ ನಂ.10 ತತ್ಕಾಲ್ ಪೋಡಿಗಾಗಿ ಅಜರ್ಿ ಸಲ್ಲಿಸಿರುತ್ತೇನೆ ಇಲ್ಲಿಯೂ ಕೂಡಾ ಆರೋಪಿ ನಂ.1 ಮತ್ತು 3 ರವರು ತಕರಾರು ಮಾಡಿ ನನಗೆ ಯಾವುದೇ ರೀತಿಯಿಂದ ಪಾರ್ಮ ನಂ.10 ಆಗದಂತೆ ಭೂ ಮಾಪನ ಇಲಾಖೆರವರಿಗೆ ರಾಜಕೀಯ ಫ್ರಭಾವ ಭೀರಿ ಅವರ ಮೇಲೆ ಒತ್ತಡ ಹೇರಿರುತ್ತಾರೆ ಹಾಗೂ ನನ್ನ ಜಮೀನಿನಲ್ಲಿ ನಾನು ಒಂದು ಕೋಣೆ ಕಟ್ಟಿಕೊಂಡು ವಾಸಿಸುತ್ತಿದ್ದಾಗ ಇಲ್ಲಿಗೆ ಆರೋಪಿ ನಂ.1 ರ ಮಕ್ಕಳು ಬಂದು ನನಗೆ ಇಲ್ಲಿ ಏಕೆ ಮನೆ ಕಟ್ಟಿಕೊಂಡಿದ್ದೀಯಾ ಅಂತಾ ನನಗೆ ಬೆದರಿಕೆ ಹಾಕಿ ಹೋಗಿರುತ್ತಾರೆ. ಸದರಿ ಕೋಣೆ ಕಟ್ಟಲು ನಗರಸಭೆಯಿಂದ ನನಗೆ ವಿನಾ ಕಾರಣ ತೊಂದರೆ ನೀಡಿದರು. ದಿನಾಂಕ; 19/01/2019 ರಂದು ಆರೋಪಿ ನಂ.1 ರವರು ಲೇ ಬೋಸಡೀ ಮಗನೇ ಮತ್ತು ಲೇ ಹೊಲೆಯ ಜಾತಿ ಸುಳೇ ಮಗನೇ ಎಂದು ನನ್ನ ಎದೆಯ ಮೇಲಿನ ಕಾಲರ ಅಂಗಿ ಹಿಡಿದು ನನ್ನನ್ನು ತಳ್ಳಿ ಮತ್ತು 2 ಮತ್ತು 3 ರವರು ನನ್ನ ತಾಯಿ ಮತ್ತು ನನ್ನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿರುತ್ತಾರೆ. ಅದೇ ರೀತಿಯಾಗಿ ಆರೋಪಿ ನಂ.1 ರಿಂದ 3 ರವರು ಪ್ರಬಲ ರಾಜಕೀಯ ವ್ಯಕ್ತಿಗಳಿದ್ದು ಅದೇ ರೀತಿಯಾಗಿ ಹಣ ಬಲದಿಂದ ನಿನ್ನನ್ನು ಖಲಾಸ ಮಾಡಿ ಬೀಡುತ್ತೇವೆಂದು ಹೋದರು. ನಂತರ ಕೆಲ ದಿನಗಳ ಮೇಲೆ ನನ್ನ ಮೇಲೆ ಹಲ್ಲೆ ಮಾಡಲು ಬೇರೆ ಬೇರೆ ವ್ಯಕ್ತಿಗಳನ್ನು ಕಳಿಸಿದ್ದು ಇರುತ್ತದೆ ಮೇಲೆ ಹೇಳಿದ ಆರೋಪಿ ನಂ.1 ರಿಂದ 3 ರವರು ಸತತವಾಗಿ ನನಗೆ ಬೆದರಿಕೆ ಹಾಕಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಂದಿರುತ್ತಾರೆ ಇದನ್ನು ತಾಳಲಾರದೇ ನಾನು ದಿನಾಂಕ; 19/01/2019 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು ತದನಂತರ ಅಪರಿಚಿತ ವ್ಯಕ್ತಿಗಳು ನನ್ನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ನಂತರ ನಾನು ಎಮ್.ಎಲ್.ಸಿ ಮಾಡಿಸಿರುತ್ತೇನೆ. ತದನಂತರ ದಿನಾಂಕ; 23/01/2019 ರಂದು ಮಾನ್ಯ ಜಿಲ್ಲಾಧಿಕಾರಿಗಳಿಗೇ ಹಾಗೂ ಎಸ್.ಪಿ ರವರಿಗೆ ದೂರು ನೀಡಿರುತ್ತೇನೆ ಅವರುಗಳು ಯಾವುದೇ ಕ್ರಮ ಕೈಕೊಳ್ಳದೇ ಇದ್ದಾಗ ಅವರ ವಿರುದ್ದ ಇವತ್ತು ನಾಳೆ ಕೇಸು ಮಾಡುತ್ತೇವೆ ಅಂತಾ ಹಾರಿಕೆ ಉತ್ತರ ನೀಡುತ್ತಾ ಬಂದಿರುತ್ತಾರೆ. ಪ್ರತಿ ತಿಂಗಳು ನನ್ನನ್ನು ಡಿ.ವೈ.ಎಸ್.ಪಿ ಮತ್ತು ಸಿ.ಪಿ.ಐ ಕಛೇರಿಗೆ ಕರಿಸಿ ನೋಡೋಣಾ ಮಾಡೋಣಾ ಎನ್ನುತ್ತಾ ಕಾಲಹರಣ ಮಾಡಿದರು. ತದನಂತರ ನನ್ನ ಜಮೀನು ಪಾರ್ಮ ನಂ.10 ಮಾಡಿಕೊಳ್ಳಲು ನಾನು ಕಛೇರಿಗೆ ಅಲೆದಾಡುತ್ತಾ ಇರುವಾಗ ಮೇಲಿನ ಆರೋಪಿ ನಂ.1 ರಿಂದ 3 ರವರು ತಮ್ಮ ಪ್ರಭಾವ ಭೀರಿ ಪಾರ್ಮ ನಂ.10 ಆಗದ ಹಾಗೆ ತಡೆದರು. ದಿನಾಂಕ; 26/02/2019 ರಂದು ಮಾನ್ಯ ಜಿಲ್ಲಾಧಿಕಾರಿ ರವರ ಕಛೇರಿಯ ಮುಂದೆ ಉಪವಾಸ ಸತ್ಯಾಗ್ರಹ ಕುಳಿತುಕೊಂಡೆನು ನಾಲ್ಕು ದಿನಕ್ಕೆ ಎ.ಡಿ.ಎಲ್.ಆರ್ ಸ್ಥಳಕ್ಕೆ ನನಗೆ ಆಶ್ವಾಸನೆ ಕೊಟ್ಟು 10 ದಿನದಲ್ಲಿ ಪಾರ್ಮ ನಂ.10 ಮಾಡಿಕೊಡುತ್ತೇನೆಂದು ಹೇಳಿದ್ದರಿಂದ ಧರಣಿ ವಾಪಾಸ ಪಡೆದಿರುತ್ತೇನೆ. ಮೌಲಾಲಿ ತಂದೆ ಸಾಬಣ್ಣ ಅನಪೂರ ಇವರು ಪ್ರಬಲ ರಾಜಕಾರಣಿ ಇದ್ದು ಇವರು ನನ್ನ ಮೇಲೆ ಗುಂಡಾಗಿರಿ, ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಿದ್ದಾರೆ ನಾನೊಬ್ಬ ದಲಿತನಿದ್ದು ನನ್ನ ಮೇಲೆ ತನ್ನ ಪ್ರಭಾವ ಭೀರಿ ಇಲ್ಲಿಯವರೆಗೆ ನನ್ನನ್ನು ಮಾನಸಿಕ ಮತ್ತು ದೈಹಿಕ ಕಿರುಕುಳ ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ. ಮೋಹನ ಬಾಬು ತಂದೆ ಮಲ್ಲಪ್ಪ ಭೋಯಿ, ಮೋಹನಲಾಲ ಸೋಲಂಕಿ ಮಾರವಾಡಿ ಇವರು ಕೂಡಾ ರಾಜಕೀಯ ಪ್ರಭಾವಿ ವ್ಯಕ್ತಿಗಳಿದ್ದು ನನ್ನ ಆಸ್ತಿಯನ್ನು ಕಬಳಿಸುವ ಸಲುವಾಗಿ ನಿರಂತರವಾಗಿ ಮಾನಸಿಕ & ದೈಹಿಕ ಕಿರುಕುಳ ನೀಡುತ್ತಿದಾರೆ. ಅಂತಾ ಕೊಟ್ಟ ಖಾಸಗಿ ಪಿರ್ಯಾಧಿಯ ಮೇಲಿಂದ ಠಾಣೆಯ ಗುನ್ನೆ ನಂ.78/2019 ಕಲಂ.323,324,506,504 ಸಂ.34 ಐಪಿಸಿ ಮತ್ತು 3()()(ತ) ಎಸ್ಸಿ/ಎಸ್ಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 60/2019 ಕಲಂ 279, 337, 338 ಐಪಿಸಿ:-ದಿನಾಂಕ 26/09/2019 ರಂದು ಬೆಳಿಗ್ಗೆ 11-15 ಎ.ಎಂ.ಕ್ಕೆ ಯಾದಗಿರಿ ಜಿಜಿಎಚ್ ನಿಂದ ಆರ್.ಟಿ.ಎ/ಎಮ್.ಎಲ್.ಸಿ ಅಂತಾ ಪೋನ್ ಮಾಡಿ ವಿಷಯ ತಿಳಿಸಿದ್ದರಿಂದ ವಿಚಾರಣೆಗೆ ಹೊರಟು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲಾಗಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು ಈ ಘಟನೆಯ ಪ್ರತ್ಯಕ್ಷ ಸಾಕ್ಷಿದಾರರಾದ ಶ್ರೀ ಸಂಗಣ್ಣಗೌಡ ತಂದೆ ಬಸಲಿಂಗಪ್ಪಗೌಡ ಪೊಲೀಸ್ ಪಾಟೀಲ್ ವಯ;33 ವರ್ಷ, ಜಾ;ಲಿಂಗಾಯತ್, ಉ;ಒಕ್ಕುಲುತನ, ಸಾ;ಕನ್ಯಾಕೊಳ್ಳುರ, ತಾ;ಶಹಾಫುರ, ಜಿ;ಯಾದಗಿರಿ ಇವರು ಆಸ್ಪತ್ರೆಯಲ್ಲಿ ಹಾಜರಿದ್ದು ಈ ಘಟನೆಯ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದರ ಸಾರಾಂಶವೇನೆಂದರೆ ನಾನು ಒಕ್ಕುಲುತನ ಮಾಡಿಕೊಂಡು ಉಪಜೀವಿಸುತ್ತೇನೆ. ಯಾದಗಿರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನನ್ನ ವಯಕ್ತಿಕ ಕೆಲಸವಿದ್ದ ಕಾರಣ ಇಂದು ಯಾದಗಿರಿಗೆ ಬಂದಾಗ ಹಳೆ ಬಸ್ ನಿಲ್ದಾಣದಲ್ಲಿ ನನ್ನ ಸ್ನೇಹಿತನಾದ ಶ್ರೀ ಶರಣಗೌಡ ತಂದೆ ಬಸನಗೌಡ ಮಾಲೀಪಾಟೀಲ್ ಸಾ;ಯಾದಗಿರಿ ಇವರು ಸಿಕ್ಕಾಗ ಮಾತನಾಡುತ್ತಾ ನಾನು ಡಿಸಿ ಕಛೇರಿ ಕಡೆಗೆ ಹೊರಟಿದ್ದೇನೆ ಅಂತಾ ಹೇಳಿದಾಗ ನನ್ನ ಸ್ನೇಹಿತ ಶರಣಗೌಡ ಇವರು ನಾನು ಬರುತ್ತೇನೆ ನನ್ನದು ಆ ಕಡೆ ಕೆಲಸವಿದೆ ಅಂತಾ ನನ್ನ ಮೋಟಾರು ಸೈಕಲ್ ಮೇಲೆ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡಾಗ ನಾನು ಮೋಟಾರು ಸೈಕಲನ್ನು ನಡೆಸಿಕೊಂಡು ಯಾದಗಿರಿ ಹಳೆ ಬಸ್ ನಿಲ್ದಾಣದಿಂದ ಯಾದಗಿರಿ ಡಿಸಿ ಕಛೇರಿ ಕಡೆಗೆ ಹೊರಟೆನು. ಮಾರ್ಗ ಮದ್ಯೆ ವಿಕಾಸ್ ಪೆಟ್ರೋಲ್ ಬಂಕ್ ಹತ್ತಿರ ನನಗೆ ಪೋನ್ ಬಂದಾಗ ಮೋಟಾರು ಸೈಕಲನ್ನು ರಸ್ತೆ ಬದಿಗೆ ನಿಲ್ಲಿಸಿ ಮೊಬೈಲನಲ್ಲಿ ಮಾತನಾಡುತ್ತಾ ನಿಂತಿದ್ದಾಗ ಅದೇ ಸಮಯಕ್ಕೆ ಯಾದಗಿರಿ ಡಿಸಿ ಕಚೇರಿ ರಸ್ತೆ ಕಡೆಯಿಂದ ಡಾನ್ ಬೋಸ್ಕೋ ಶಾಲೆಯ ಕಡೆಗೆ ಒಬ್ಬ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬರುತ್ತಿರುವಾಗ ಅದೇ ಸಮಯಕ್ಕೆ ಒಂದು ಅಂಬಾಸಿಡರ್ ಸಕರ್ಾರಿ ಕಾರ್ ನೇದ್ದರ ಚಾಲಕನು ಕೂಡ ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿಕೊಂಡು ಡಾನ್ ಬೋಸ್ಕೋ ಶಾಲೆಯ ಕಡೆಯಿಂದ ಡಿಸಿ ಕಚೇರಿ ಕಡೆಗೆ ಹೊರಟಿದ್ದಾಗ ನಾವಿಬ್ಬರು ನೋಡು ನೋಡುತ್ತಿದ್ದಂತೆ ಮೋಟಾರು ಸೈಕಲ್ ಸವಾರ ಮತ್ತು ಕಾರ್ ಚಾಲಕನ ನಿರ್ಲಕ್ಷ್ಯತನದಿಂದ ಎರಡು ವಾಹನಗಳು ಒಂದಕ್ಕೊಂದು ಎದುರು-ಬದರು ಜೋರಾಗಿ ಡಿಕ್ಕಿಕೊಟ್ಟುಕೊಂಡು ಅಪಘಾತ ಮಾಡಿಕೊಂಡಿರುತ್ತಾರೆ ಆಗ ಅಪಘಾತದ ರಭಸಕ್ಕೆ ಕಾರ್ ಸ್ವಲ್ಪ ಮುಂದೆ ಹೋದಾಗ ಅದೇ ಸಮಯಕ್ಕೆ ರಸ್ತೆ ಮೇಲೆ ಬರುತ್ತಿದ್ದ ಒಂದು ಆಟೋ ನೇದ್ದಕ್ಕೆ ತಗುಲಿದಾಗ ಆಟೋದಲ್ಲಿದ್ದ ಕುಳಿತಿದ್ದ ಒಬ್ಬ ವ್ಯಕ್ತಿಗೆ ಕೂಡ ಹಣೆಗೆ ತರಚಿದ ರಕ್ತಗಾಯವಾಗಿರುತ್ತದೆ ಆಗ ನಾವಿಬ್ಬರು ಘಟನಾ ಸ್ಥಳಕ್ಕೆ ಓಡೋಡಿ ಬಂದು ನೋಡಲಾಗಿ ಮೋಟಾರು ಸೈಕಲ್ ಮೇಲಿದ್ದ ವ್ಯಕ್ತಿ ನಮಗೆ ಈ ಮೊದಲೇ ಪರಿಚಯ ಇರುವ ಶ್ರೀ ನಿಂಗಯ್ಯ ತಂದೆ ಯಂಕಯ್ಯ ಇಳಿಗೇರ ಸಾ;ರಾಜನಕೊಳ್ಳುರ ಈತನು ಇದ್ದು ಸದರಿ ಅಪಘಾತದಲ್ಲಿ ನಿಂಗಯ್ಯ ಇವರಿಗೆ ಬಲಗಾಲಿನ ತೊಡೆಗೆ, ಮೊಣಕಾಲು ಕೆಳಗೆ, ಪಾದದ ಹಿಮ್ಮಡಿಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಅಲ್ಲಲ್ಲಿ ಮುರಿದಿದ್ದು, ಟೊಂಕಕ್ಕೆ ಭಾರೀ ಒಳಪೆಟ್ಟಾಗಿದ್ದು ಹಣೆಗೆ, ತಲೆಗೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ. ನಿಂಗಯ್ಯನಿಗೆ ವಿಚಾರಿಸಲು ತನ್ನ ಕೆಲಸದ ನಿಮಿತ್ಯ ಬಂದಾಗ ಈ ಸ್ಥಳದಲ್ಲಿ ಘಟನೆ ಜರುಗಿದ್ದರ ಬಗ್ಗೆ ತಿಳಿಸಿದ್ದು ನಿಂಗಯ್ಯನ ಮೋಟಾರು ಸೈಕಲ್ ಸ್ಥಳದಲ್ಲಿದ್ದು ಅದರ ನಂಬರ್ ಇರುವುದಿಲ್ಲ, ಮೋಟಾರು ಸೈಕಲ್ ನೇದ್ದರ ಚೆಸ್ಸಿ ನಂಬರ ನೋಡಲಾಗಿ ಒಃಐಊಂಖ058ಎ9ಊ06536 ನೇದ್ದು ಇರುತ್ತದೆ. ಅಪಘಾತದಲ್ಲಿ ಬಾಗಿಯಾದ ಅಂಬಾಸಿಡರ್ ಸಕರ್ಾರಿ ಕಾರ್ ನಂಬರ ಕೆಎ-33, ಜಿ-0073 ಅಂತಾ ಇರುತ್ತದೆ ಅದರ ಚಾಲಕನಿಗೆ ನೋಡಲು ಆತನಿಗೂ ಕೂಡ ಸದರಿ ಅಪಘಾತದಲ್ಲಿ ಬಲಗಾಲಿನ ತೊಡೆಗೆ, ಮೊಣಕಾಲು ಕೆಳಗೆ ಬಾರೀ ಗುಪ್ತಗಾಯವಾಗಿರುತ್ತದೆ. ಕಾರ್ ಚಾಲಕನ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಶಿವಕುಮಾರ ತಂದೆ ಕಾಶಪ್ಪ ಇಳಿಗೇರ ಸಾ;ಯಾದಗಿರಿ ಅಂತಾ ತಿಳಿಸಿರುತ್ತಾನೆ. ಆಟೋದಲ್ಲಿ ಕುಳಿತಿದ್ದ ವ್ಯಕ್ತಿಗೆ ವಿಚಾರಿಸಿದ್ದು ತನ್ನ ಹೆಸರು ಉದಯ ತಂದೆ ಮಾರ್ಕಪ್ಪ ಕ್ಯಾಸಪನಳ್ಳೇರ ಸಾ;ಠಾಣಗುಂದಿ ಅಂತಾ ತಿಳಿಸಿರುತ್ತಾನೆ. ಈ ಘಟನೆಯ ಬಗ್ಗೆ ನಿಂಗಯ್ಯ ಇವರ ಮನೆಯವರಿಗೆ ಪೋನ್ ಮಾಡಿ ವಿಷಯ ತಿಳಿಸಿ ಯಾದಗಿರಿಗೆ ಬರಲು ಹೇಳಿರುತ್ತೇನೆ. ಸದರಿ ಅಪಘಾತವು ಇಂದು ದಿನಾಂಕ 26/09/2019 ರಂದು ಸಮಯ ಅಂದಾಜು 10-30 ಎ.ಎಂ.ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ವಿಕಾಸ್ ಪೆಟ್ರೋಲ್ ಬಂಕ್ ಹತ್ತಿರ ಮುಂದಿನ ಮುಖ್ಯ ರಸ್ತೆ ಮೇಲೆ ಜರುಗಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 26/09/2019 ರಂದು 10-30 ಎ.ಎಂ ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆ ಮೇಲೆ ಬರುವ ವಿಕಾಸ್ ಪೆಟ್ರೋಲ್ ಬಂಕ್ ಹತ್ತಿರ ಮುಖ್ಯ ರಸ್ತೆಯ ಮೇಲೆ ಮೋಟಾರು ಸೈಕಲ್ ಚೆಸ್ಸಿ ನಂಬರ ಒಃಐಊಂಖ058ಎ9ಊ06536 ನೇದ್ದರ ಸವಾರ ನಿಂಗಯ್ಯ ಹಾಗೂ ಕಾರ್ ನಂಬರ ಕೆಎ-33, ಜಿ-0073 ನೇದ್ದರ ಚಾಲಕ ಶಿವಕುಮಾರ ಇವರ ಅತೀವೇಗ ಮತ್ತು ಅಲಕ್ಷ್ಯತನದಿಂದ ಘಟನೆ ಜರುಗಿದ್ದು ಈ ಬಗ್ಗೆ ಪಿಯರ್ಾದು ನೀಡುತ್ತಿದ್ದು ಅವರಿಬ್ಬರ ಮೇಲೆ ಕಾನೂನಿನ ಮುಂದಿನ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಪಿಯರ್ಾದು ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 12-45 ಪಿ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 60/2019 ಕಲಂ 279, 337, 338 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 148/2019 ಕಲಂ 302 ಐಪಿಸಿ:-ದಿನಾಂಕ 25.09.2019 ರಂದು ಸುಮಾರು ರಾತ್ರಿ 7 ಗಂಟೆಗೆ ಫಿರ್ಯಾದಿಯು ತನ್ನ ಗಂಡನಾದ ಮೃತನಿಗೆ ಫೋನ್ ಮಾಡಿ ಊಟ ಮಾಡಿಯಾಗಲಿ,ಇಲ್ಲವೇ ಪಾಕೆಟ್ ತೆಗೆದುಕೊಂಡು ಚಪೆಟ್ಲಾಗೆ ಹೋಗುತ್ತೇನೆ ಅಂತಾ ತಿಳಿಸಿದ. ಸ್ವಲ್ಪ ಸಮಯದ ನಂತರ ಫೋನ್ ಮಾಡಿದಾಗ ಮಳೆ ಬರುತ್ತಿದೆ ಹಾಗೂ ಮೊಬೈಲ್ ಚಾಜರ್್ ಇಳಿದಿದೆ ಅಂತಾ ತಿಳಿಸಿದ. ನಂತರ ಫೋನ್ ಮಾಡಿದಾಗ ಅವರು ಉತ್ತರಿಸಲೇ ಇಲ್ಲ. ಅದಾದ ನಂತರ ರಾತ್ರಿ 1 ಗಂಟೆಯ ಸುಮಾರಿಗೆ ಮೃತನ ಅಣ್ಣ ಜಗದೀಶ ವಾಹನದಲ್ಲಿ ಫೀರ್ಯಾದಿಯ ಮನೆಗೆ ಬಂದಿದ್ದು ಆ ಮೇಲೆ ಎಲ್ಲಾರು ಸೇರಿ ಚಪೆಟ್ಲಾಗೆ ಹೊರಟು ಚಪೆಟ್ಲಾ ಊರು ಇನ್ನು ದೂರ ಇದ್ದಾಗ ಯದ್ಲಾಪೂರ ಗ್ರಾಮದ ಗೇಟಿನ ಹತ್ತಿರ ವಾಹನಗಳು ಮತ್ತು ಜನರು ನಿಂತಿದ್ದನ್ನು ಕಂಡು ಫಿರ್ಯಾದಿಯು ತಮ್ಮ ವಾಹನವನ್ನು ಅಲ್ಲಿಯೇ ನಿಲ್ಲಿಸಿದ ಕಾರಣ ಫಿರ್ಯಾದಿಗೆ ಸಂಶಯವಾಗಿದ್ದು ಜಗದೀಶ ವಾಹನದಿಂದ ಇಳಿಯುತ್ತಲೆ ಗಡಿಬಿಡಿಯಿಂದ ಮಹೇಶ ಅಂತ ಚೀರುತ್ತ ಹೋಗಿದ್ದು ಫೀರ್ಯಾದಿಯು ಕೂಡ ಅಲ್ಲಿ ಹೋಗಿ ನೋಡಿದಾಗ ಫಿರ್ಯಾದಿದಾರಳ ಗಂಡ ಮಹೇಶನ ದೇಹ ಗುರುಮಠಕಲ್-ಸೇಡಂ ರಸ್ತೆಯ ಎಡಭಾಗ ರಸ್ತೆಯ ಮೇಲೆ ಗುರುಮಠಕಲ್ ಕಡೆಗೆ ಮುಖ ಮಾಡಿ ಬೆನ್ನು ಮೇಲೆ ಮಾಡಿ ಬಿದ್ದಿತ್ತು. ದೇಹದ ಕೆಳಗೆ ಎಡಗೈ ಮತ್ತು ಬಲಗಾಲು ಮಡಿಚಿತ್ತು. ರಸ್ತೆಗೆ ರಕ್ತ ಹರಿದಿದ್ದು ಕಾಣಿಸಿತು. ಚಪ್ಪಲಿ ಬೇರೆ-ಬೇರೆ ಕಡೆ ಬಿದ್ದಿದ್ದವು. ಮೋಟಾರು ಸೈಕಲ್ ಪಕ್ಕದಲ್ಲಿ ಸೇಡಂ ಕಡೆ ಇಂಜಿನ ಭಾಗವಿತ್ತು. ನನ್ನ ಗಂಡನ ಸಾವು ನೈಸಗರ್ಿಕ ಸಾವಲ್ಲ ಅವರ ದೇಹ ಮತ್ತು ಮೋಟಾರು ಸೈಕಲ್ನನ್ನು ವೀಕ್ಷಿದಾಗ ಯಾರೋ ಕೊಲೆ ಮಾಡಿರುವರ ಬಗ್ಗೆ ಸಂಶಯ ಬರುತ್ತದೆ ವಗೈರೆ ಅಂತಾ ಫಿರ್ಯಾದಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 148/2019 ಕಲಂ 302 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 186/2019 ಕಲಂ: 87 ಕೆ.ಪಿ.ಕಾಯ್ದೆ:- ದಿನಾಂಕ: 26/09/2019 ರಂದು 3-45 ಪಿ.ಎಂ.ಕ್ಕೆ ಎಸ್ ಹೆಚ್ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಆನಂದರಾವ್ ಎಸ್.ಎನ್ ಪಿ.ಐ ಸಾಹೇಬರು 5 ಜನ ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆಇಂದು ದಿನಾಂಕ:26-09-2019 ರಂದು 1 ಪಿ.ಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ಸೂರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ದಾಳ ಗ್ರಾಮದ ಲಾಡ್ಲೇ ಪಟೇಲ ತಂದೆ ಮಹ್ಮದ ಪಟೇಲ ಇವರ ಬಿದ್ದ ಮನೆಯ ಪಕ್ಕದ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ನಾನು ಹಾಗೂ ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮನೋಹರ ಹೆಚ್ಸಿ-105 2) ಸುಭಾಸ ಸಿಪಿಸಿ-174 3) ಸೋಮಯ್ಯಾ ಸಿಪಿಸಿ-235 4) ಶ್ರೀ ದೇವಿಂದ್ರಪ್ಪ ಸಿಪಿಸಿ-184 5) ಶ್ರೀ ಶರಣು ಸಿಪಿಸಿ-224 6) ಶ್ರೀ ವಿರೇಶ ಸಿಪಿಸಿ-374 ಹಾಗೂ ಜೀಪ್ ಚಾಲಕ 5)ಮಹಾಂತೇಶ ಎ.ಪಿ.ಸಿ-48 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರೂ ಪಂಚರಾದ 1) ಶ್ರೀ ಹೊನ್ನಪ್ಪ ತಂದೆ ಗೋಪಾಲಪ್ಪ ಹುದ್ದಾರ ವಯಾ:28 ವರ್ಷ ಉ:ಒಕ್ಕಲುತನ ಜಾತಿ:ಕುರುಬರ ಸಾ:ಅಲ್ದಾಳ 2) ಶ್ರಿ ಆದಪ್ಪ ತಂದೆ ತಿಪ್ಪಣ್ಣ ಜಂಬಲದಿನ್ನಿ ವಯಾ:55 ವರ್ಷ ಉ:ಒಕ್ಕಲುತನ ಜಾತಿ:ಕುರುಬರ ಸಾ:ಅಲ್ದಾಳ ಇವರನ್ನು ಬರಮಾಡಿಕೊಂಡು ಸದರಿಯವರಿಗೂ ವಿಷಯ ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 1-15 ಪಿ.ಎಮ್ ಕ್ಕೆ ಸಕರ್ಾರಿ ಜೀಪ್ ನಂಬರ ಕೆ.ಎ 33 ಜಿ 0238 ನೇದ್ದರಲ್ಲಿ ಹೊರಟು 01-55 ಪಿ.ಎಮ್ ಕ್ಕೆ ಅಲ್ದಾಳ ಗ್ರಾಮದ ಮಜೀದಿ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ಲಾಡ್ಲೆ ಪಟೇಲ ಇವರ ಬಿದ್ದ ಮನೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಮನೆಯ ಪಕ್ಕದಲ್ಲಿರುವ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 2 ಪಿ.ಎಮ್ ಕ್ಕೆ ದಾಳಿಮಾಡಿ ಹಿಡಿಯಲಾಗಿ ಒಟ್ಟು 5 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ಬಸವರಾಜ ತಂದೆ ಚಿನ್ನಪ್ಪ ವಜ್ಜಾಪೂರ ವಯಾ:34 ವರ್ಷ ಉ:ಒಕ್ಕಲುತನ ಜಾತಿ:ಕುರುಬರ ಸಾ:ಅಲ್ದಾಳ ಇವನ ಹತ್ತಿರ 1100=00 ರೂಗಳು ದೊರೆತವು 2) ಸಿದ್ದಣ್ಣ ತಂದೆ ಚಂದ್ರಾಮ ಯಳಮೇಲಿ ವಯಾ:25 ವರ್ಷ ಉ:ಕುರುಬರ ಉ:ಒಕ್ಕಲುತನ ಸಾ:ಅಲ್ದಾಳ ಇವನ ಹತ್ತಿರ 1200=00 ರೂಗಳು ದೊರೆತವು 3) ವಿರುಪಾಕ್ಷ ತಂದೆ ಸಾಯಬಣ್ಣ ಸಕ್ರೆಪೂರ ವಯಾ:35 ವರ್ಷ ಜಾತಿ:ಕುರುಬರ ಉ:ಕೂಲಿ ಸಾ:ಅಲ್ದಾಳ ಇವನ ಹತ್ತಿರ 860=00 ರೂಗಳು ದೊರೆತವು 4) ಮಾಳಪ್ಪ ತಂದೆ ಶಿವಣ್ಣ ಹುಲಕಲ್ ವಯಾ:30 ವರ್ಷ ಉ:ಒಕ್ಕಲುತನ ಜಾತಿ:ಕುರುಬರ ಸಾ:ಅಲ್ದಾಳ ಇವನ ಹತ್ತಿರ 1400=00 ರೂಗಳು ದೊರೆತವು 5) ಲಾಡ್ಲೆಪಟೇಲ ತಂದೆ ಹಸನಸಾಬ ಪಟೇಲ ವಯಾ:55 ವರ್ಷ ಉ:ಒಕ್ಕಲುತನ ಜಾತಿ:ಮುಸ್ಲಿಂ ಸಾ:ಅಲ್ದಾಳ ಇವನ ಹತ್ತಿರ 940=00 ರೂಗಳು ದೊರೆತವು ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ ಹಾಗೂ ಕಣದಲ್ಲಿದ್ದ 500/- ರೂ,ಗಳು ಹೀಗೆ ಒಟ್ಟು 6000=00 ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 2 ಪಿ.ಎಮ್.ದಿಂದ 3 ಪಿ.ಎಮ್ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ, 5 ಜನ ಆರೋಪಿತರನ್ನು ಮತ್ತು ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲುಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ನಿಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ.:- 74/2019 ಕಲಂ: 32, 34 ಕೆ.ಇ ಎಕ್ಟ್ 1965:- ದಿನಾಂಕ: 26/09/2019 ರಂದು 8-15 ಪಿಎಮ್ ಕ್ಕೆ ಶ್ರೀ ಮಹಾದೇವಪ್ಪ ಬಿ. ದಿಡ್ಡಿಮನಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು ಮತ್ತು ಜಪ್ತಿ ಪಂಚನಾಮೆ ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಈ ಮೂಲಕ ನಿಮಗೆ ವರದಿ ಕೊಡುವುದೇನಂದರೆ ಇಂದು ದಿನಾಂಕ: 26/09/2019 ರಂದು ಸಾಯಂಕಾಲ ನಾನು ಮತ್ತು ರಾಜಕುಮಾರ ಹೆಚ್.ಸಿ 179, ಮಹೇಂದ್ರ ಪಿಸಿ 254 ಎಲ್ಲರೂ ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ಗೋಡಿಹಾಳ ಗ್ರಾಮದ ಸುರೇಶ ಈತನ ಗ್ಯಾರೇಜ್ ಹತ್ತಿರ ಖಾಲಿ ಸ್ಥಳದಲ್ಲಿ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರಿಗೆ ಅಕ್ರಮವಾಗಿ ಕ್ವಾಟರ ಪೌಚುಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ದಾಳಿ ಬಗ್ಗೆ ತಿಳಿಸಿ, ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 115 ನೇದ್ದರಲ್ಲಿ ಕರೆದುಕೊಂಡು ಹೊರಟು 6-20 ಪಿ.ಎಮ್ ಕ್ಕೆ ಗೋಡಿಹಾಳ ಗ್ರಾಮದಲ್ಲಿ ಹನುಮಾನ ದೇವರ ಗುಡಿ ಹತ್ತಿರ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಗ್ರಾಮದಲ್ಲಿ ಹೋಗಿ ಕರೆಮ್ಮ ದೇವಿ ಗುಡಿಯನ್ನು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಖಾಲಿ ಸ್ಥಳದಲ್ಲಿ ಒಬ್ಬನು 50/- ರೂ. ಗೆ ಒಂದು ಪೌಚು ಕುಡಿಯಿರಿ ಎಂದು ಕೂಗಿ ಕರೆದು ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು 6-30 ಪಿಎಮ್ ಕ್ಕೆ ಅವನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿಯಬೇಕೆನ್ನುವಷ್ಟರಲ್ಲಿ ಅವನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದನು. ಅಲ್ಲಿದ್ದ ಪೊಲೀಸ್ ಬಾತ್ಮಿದಾರರಿಗೆ ಅವನ ಹೆಸರು ವಿಳಾಸ ಕೇಳಲಾಗಿ ಬಸವರಾಜ ತಂದೆ ಸಿದ್ದಲಿಂಗಪ್ಪ ಬೆನಕಲ್ ವ:54, ಜಾ:ಲಿಂಗಾಯತ, ಉ:ಒಕ್ಕಲುತನ ಸಾ:ಗೋಡಿಹಾಳ ತಾ:ವಡಗೇರಾ ಎಂದು ಹೇಳಿದರು. ಸದರಿ ವ್ಯಕ್ತಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ನೋಡಲಾಗಿ ಒಂದು ಕಾಟನ ಬಾಕ್ಸದಲ್ಲಿ 90 ಎಮ್.ಎಲ್ ದ ಓರಿಜಿನಲ್ ಚಾಯ್ಸ್ ವ್ಹಿಸ್ಕಿ ಪೌಚುಗಳು ಇದ್ದು, ಎಣಿಕೆ ಮಾಡಿ ನೋಡಲಾಗಿ 90 ಎಮ್.ಎಲ್ ದ ಒಟ್ಟು 138 ಪೌಚುಗಳು ಇದ್ದು, ಒಟ್ಟು 90*138= 12 ಲೀಟರ್ 420 ಎಮ್.ಎಲ್ ಮದ್ಯ ಆಗುತ್ತಿದ್ದು, ಸದರಿ ಪೌಚುಗಳ ಮೇಲೆ ಎಮ್.ಆರ್.ಪಿ ಬೆಲೆ 30.32*138=4184. 16=00 ರೂ. ಗಳು ಆಗುತ್ತಿದ್ದು, ಸದರಿಯವುಗಳಲ್ಲಿಂದ ರಸಾಯನಿಕ ಪರೀಕ್ಷೆ ಕುರಿತು ಒಂದು ಪೌಚನ್ನು ಪ್ರತ್ಯೇಕ ಪಡೆದುಕೊಂಡು ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಘಆಉ ಅಂತಾ ಅರಗಿನಿಂದ ಸೀಲ್ ಮಾಡಿ ಜಪ್ತಿ ಮಾಡಿಕೊಂಡು 6-30 ಪಿಎಮ್ ದಿಂದ 7-30 ಪಿಎಮ್ ದವರೆಗೆ ಪಂಚನಾಮೆ ಜರುಗಿಸಿ, 8-15 ಪಿಎಮ್ ಕ್ಕೆ ಮುದ್ದೆಮಾಲಿನೊಂದಿಗೆ ಪೊಲೀಸ ಠಾಣೆಗೆ ಬಂದು ಜಪ್ತಿ ಪಂಚನಾಮೆ ಪ್ರಿಂಟ ಹಾಕಿ ವರದಿ ತಯಾರಿಸಿ, ಕೊಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 74/2019 ಕಲಂ: 32, 34 ಕೆ.ಇ ಎಕ್ಟ್ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ.:- 102/2019 ಕಲಂ, 498(ಎ), 323, 504, 506 ಸಂ: 149 ಐಪಿಸಿ:-ದಿನಾಂಕ:26/09/2019 ರಂದು 12.10 ಪಿಎಮ್ ಕ್ಕೆ ಅಜಿದಾರರಾದ ಶ್ರೀಮತಿ. ಭೀಮಬಾಯಿ ಗಂಡ ಕೆಂಚಪ್ಪ ಮಯೂರ ವಯಾ: 22 ವರ್ಷ ಉ:ಮನೆಗೆಲಸ ಜಾ: ಕುರುಬರ ಸಾ: ಮೊರಟಗಿ ತಾ; ಸಿಂದಗಿ ಹಾ: ವ: ಕಕ್ಕಸಗೇರಾ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕಂಪೂಟರದಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರ ಪಡೆಸಿದ್ದು ಸದರಿ ಅಜರ್ಿ ಸಾರಂಶದ ಏನಂದರೆ, ನಮ್ಮ ತಂದೆಗೆ 5 ಜನ ಗಂಡು ಮಕ್ಕಳಿರುತ್ತಾರೆ. ನಾವು ಇಬ್ಬರು ಹೆಣ್ಣು ಮಕ್ಕಳು ಇರುತ್ತೇವೆ. ನಮ್ಮ ಅಕ್ಕಳಿಗೆ ವನದುಗರ್ಾ ಕ್ಕೆ ಕೊಟ್ಟಿದ್ದು ನನಗೆ ಮೋರಟಗಿ ಗ್ರಾಮದ ಕೆಂಚಪ್ಪ ತಂದೆ ಭೀಮಣ್ಣ ಮಯೂರ ಇವರೊಂದಿಗೆ 01/05/2016 ರಂದು ಮದುವೆ ಆಗಿದ್ದು ಇರುತ್ತದೆ. ಮದುವೆ ಆದಾಗಿನಿಂದ ಒಂದು ವರ್ಷ ವರೆಗೆ ಸರಿಯಾಗಿ ನೋಡಿಕೊಂಡ ನನ್ನ ಗಂಡ ಮತ್ತು ಅವರ ಮನೆಯವರು ನಂತರದಲ್ಲಿ ನನಗೆ ಸುಮ್ಮ ಸುಮ್ಮನೆ ಯಾಸಿ ಮಾತನಾಡುವದು, ನಿನಗೆ ಅಡುಗೆ ಸರಿಯಾಗಿ ಮಾಡಲು ಬರುವದಿಲ್ಲ ಅಂತ ನನಗೆ ಬೈಯುವದು ಮತ್ತು ಮಾನಸಿಕವಾಗಿ ಹಿಂಸೆ ಮಾಡುವದು ಮಾಡ ತೊಡಗಿದರು. ಆದರೂ ನಾನು ಸಹಿಸಿಕೊಂಡು ಇದ್ದೇನು.ನಾನು ನಮ್ಮ ಊರಿಗೆ ಬಂದಾಗ ನನ್ನ ಗಂಡ ಮತ್ತು ಅವರ ಮನೆಯವರು ನನಗೆ ಮಾನಸಿಕವಾಗಿ ಹಿಂಸೆ ಮಾಡುತ್ತಿದ್ದ ಬಗ್ಗೆ, ಮತ್ತು ವಿನಾಃ ಕಾರಣ ನಮಗೆ ಬೈಯುತ್ತಿದ್ದ ಬಗ್ಗೆ ನಮ್ಮ ಮನೆಯಲ್ಲಿ ನಮ್ಮ ತಾಯಿ ಮಾಳಮ್ಮ ಗಂಡ ಮಾರ್ಥಂಡಪ್ಪ, ಅಣ್ಣ ನಿಂಗಪ್ಪ ತಂದೆ ಮಾರ್ಥಂಡಪ್ಪ, ಅಯ್ಯಪ್ಪ ತಂದೆ ಮಾರ್ಥಂಡಪ್ಪ, ನಮ್ಮ ಓಣಿಯವರಾದ ರಂಗಣ್ಣ ತಂದೆ ಪಿಡ್ಡಣ್ಣ ದೇಸಾಯಿ ಇವರುಗಳ ಮುಂದೆ ನನಗೆ ನನ್ನ ಗಂಡ ಮತ್ತು ಮನೆಯವರು ತೊಂದರೆ ಕೊಟ್ಟ ಬಗ್ಗೆ ಹೇಳಿದ್ದೇನು, ಆಗ ಅವರೆಲ್ಲರು ಕೂಡಿ, ನನಗೆ ಗಂಡನ ಮನೆಯಲ್ಲಿ ಹೊಂದಾಣಿಕೆಯಾಗಿ ಇರಬೇಕು ಅಂತಾ ಹೇಳಿದ್ದರು, ಅದರಂತೆ ನಾನು ಸುಮ್ಮನೆ ನನ್ನ ಗಮಡನ ಮನೆಯವರಿಂದ ಬೈಯಿಸಿಕೊಂಡು ಇದ್ದೆನು.
ಹೀಗಿದ್ದು ಈಗ್ಗೆ ಸುಮಾರು 6 ತಿಂಗಳ ಹಿಂದೆ ನನ್ನ ಗಂಡನಾದ 1) ಕೆಂಚಪ್ಪ ತಂದೆ ಭೀಮಣ್ಣ ಮಯೂರ 2) ಮಾಳಪ್ಪ ತಂದೆ ಭೀಮಣ್ಣ ಮಯುರ 3) ಅಮೋಗಸಿದ್ದ ತಂದೆ ಭೀಮಣ್ಣ ಮಯುರ 4) ಯಲ್ಲಾಲಿಂಗ ತಂದೆ ಭಿಮಣ್ಣ ಮಯುವ 5) ರಾವೂತ ತಂದೆ ಭೀಮಣ್ಣ ಮಯುರ 6) ತಂಗೆಮ್ಮ ಗಂಡ ಭೀಮಣ್ಣ 7) ಶ್ರೀಶೈಲ್ ತಂದೆ ಚಂದ್ರಾಮ 8) ಸಿದ್ದಪ್ಪ ತಂದೆ ಚಂದ್ರಾಮ 9) ಭಾಗಮ್ಮ ಗಂಡ ಶ್ರೀಶೈಲ 10) ಭೀಮಣ್ಣ ತಂದೆ ಚಂದ್ರಾಮ ಮಯೂರ 11) ರತ್ನಮ್ಮ ಗಂಡ ಸಿದ್ದಪ್ಪ ಮಯುರ ಜಾ: ಕುರುಬರ ಸಾ: ಎಲ್ಲರೂ ಮೋರಟಗಿ ಇವರೆಲ್ಲರೂ ಕೂಡಿ ನನಗೆ ಪ್ರತಿ ದಿನ ನಿನು ಕೆಲಸ ಮಾಡುವದಿಲ್ಲ, ಅಡಿಗಿ ಸರಿಯಾಗಿ ಮಾಡುವದಿಲ್ಲ ರಂಡಿ ಸೂಳಿ ಅಂತಾ ಅವಾಚ್ಯವಾಗಿ ಬೈಯುವದು, ಹೊಡೆಯುವದು ಮಾಡತೊಡಗಿದರು,ಆಗ ನಾನು, ನೀವು ಹೀಗೆ ಹೊಲಸು ಮಾತನಡ ಬ್ಯಾಡದು ಅಂತಾ ಹೇಳಿದರೆ ನನ್ನ ಗಂಡನಾದ ಕೆಂಚಪ್ಪ ಈತನು ನನಗೆ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಹೊಡೆ ಬಡೆ ಮಾಡಿರುತ್ತಾನೆ, ವಿನಾಕಾರಣ ನನ್ನ ಮೇಲೆ ಸಂಶಯ ಮಾಡುವದು ಪ್ರತಿ ದಿನ ಹೊಡೆಯುವದು ಮಾಡಿದ್ದಾರೆ. ನಾನು ಈಗ ಸುಮಾರು 6 ತಿಂಗಳ ಹಿಂದೆ ಹೆರಿಗೆಗೆ ಅಂತಾ ನಮ್ಮೂರಾದ ಕಕ್ಕಸಗೆರಾ ಗ್ರಾಮಕ್ಕೆ ಬಂದಿರುತ್ತೇನೆ. ನನಗೆ ಒಂದು ಗಂಡು ಮಗು ಆಗಿದ್ದು ಈಗ 3 ನೇ ತಿಂಗಳ ಮಗು ಇರುತ್ತದೆ.ಹೀಗಿದ್ದು ನಾವು ನನ್ನ ಗಂಡನಿಗೆ ಮತ್ತು ಮನೆಯವರಿಗೆ ಬರಲು ಹೇಳಿದಾಗ ಕೂಡ ನನ್ನ ಗಂಡ ನನಗೆ ಅವಾಚ್ಯವಾಗಿ ಬಯುತ್ತಿದ್ದಾರೆ. ದಿನಾಂಕ: 20/09/2019 ರಂದು 11.30 ಎಎಂ ಸುಮಾರಿಗೆ, ನನ್ನ ಗಂಡನಾದ ಕೆಂಚೆಪ್ಪ ಈತನು ನಮ್ಮೂರಾದ ಕಕ್ಕಸಗೇರಾ ಗ್ರಾಮಕ್ಕೆ ಬಂದು ನಮ್ಮ ಮನೆಯ ಮುಂದೆ ಬಂದಾಗ ನಾವು ಒಳಗೆ ಕರೆದರು ಬರದೆ ಮನೆಯ ಮುಂದೆ ನಿಂತು, ನನಗೆ ಮತ್ತು ನನ್ನ ತಾಯಿಗೆ ರಂಡಿ ಬೋಸಡಿ ಅಂತಾ ಬೈಯ್ದು ನನಗೆ, ಮತ್ತು ನಮ್ಮ ಮನೆಯವರಿಗೆ ನೀವು ಯಾರು ಪೋನ ಮಾಡಿ ಬರ್ರಿ, ಅಂತಾ ಕರೆಯಬ್ಯಾಡರಿ ಸೂಳೆರೆ ಅಂತಾ ಬೈಯ್ದು ನನಗೆ ಹೊಡೆಯಲು ಬಂದಾಗ ನಮ್ಮ ಊರಿನವರಾದ 1) ಪರಶುರಾಮ ತಂದೆ ತಿಮ್ಮಯ್ಯ 2) ಭೀಮಣ್ಣ ತಂದೆ ರಾಮಣ್ಣ ಸುರಪೂರ ಇವರುಗಳು ನೋಡಿ ಬಿಡಿಸಿಕೊಂಡಿರುತ್ತಾರೆ. ಆಗ ನನ್ನ ಗಂಡ ಕೆಂಚಪ್ಪ ಈತನು, ನನಗೆ ನೀನೇನಾದರು ನಮ್ಮ ಊರಿಗೆ ನಿನ್ನ ಮಗುವಿಗೆ ಕರೆದುಕೊಂಡು ಬಂದರೆ ನಿನಗೆ ಮತ್ತು ನಿನ್ನ ಮಗುವಿಗೆ ಖಲಾಸ್ ಮಾಡುತ್ತೇನೆ ಅಂತಾ ಜೀವದ ಭಯ ಹಾಕಿ ಹೋಗಿರುತ್ತಾರೆ. ನಾನು ನಮ್ಮ ಮನೆಯಲ್ಲಿ ವಿಚಾರ ಮಾಡಿ ಇಂದು ದಿನಾಂಕ:25/09/2019 ರಂದು ನಮ್ಮ ಅಣ್ಣನಾದ ನಿಂಗಪ್ಪ ತಂದೆ ಮಾರ್ಥಮಡಪ್ಪ ಮತ್ತು ನಮ್ಮ ಸಂಬಂದಿಕಾರದ ಹಣಮಂತ್ರಾಯ ತಂದೆ ತಿಪ್ಪಣ್ಣಗೌಡ ಉದ್ದಾರ ಸಾ: ರಾಜಾಪೂರ ಇವರೊಂದಿಗೆ ಠಾಣೆಗೆ ಬಂದು ಅಜರ್ಿ ನೀಡುತ್ತಿದ್ದೇನೆ.ಕಾರಣ ನನಗೆ ಅಡಿಗೆ ಮಾಡಲು ಬರುವದಿಲ್ಲ ಅಂತಾ ಮತ್ತು ನನ್ನ ಮೇಲೆ ಸಂಶಯ ಮಾಡುತ್ತ ನನ್ನ ಗಂಡನಾದ ಕೆಂಚಪ್ಪ ಮತ್ತು ಮನೆಯವರು ನನಗೆ ಅವಾಚ್ಯವಾಗಿ ಬೈಯ್ದು, ಕೈಯಿಂದ ಹೊಡೆಬಡೆ ಮಾಡಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಮಾಡಿದ್ದು, ಅವರೆಲ್ಲರ ಮೇಲೂ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 102/2019 ಕಲಂ, 498(ಎ), 323, 504, 506 ಸಂ: 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ.;- 103/2019 ಕಲಂ, 32, 34 ಕೆ.ಇ ಆ್ಯಕ್ಟ್ :-ದಿನಾಂಕ: 26/09/2019 ರಂದು 06.30 ಪಿಎಮ್ ಕ್ಕೆ ಶ್ರೀ. ಸುರೇಶ ಬಾಬು ಪಿಎಸ್.ಐ ಗೋಗಿ ಪೊಲೀಸ ಠಾಣೆ. ರವರು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದು ಸದರಿ ಜಪ್ತಿ ಪಂಚನಾಮೆ ಸಾರಾಂಶವೆನೆಂದರೆ, ನಡಿಹಾಳ ಗ್ರಾಮದ ರಾಮಲಿಂಗಪ್ಪ ದಾಬಾ ಹತ್ತಿರ ರೋಡಿನ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ 04:45 ಪಿಎಂ ಕ್ಕೆ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಅಕ್ರಮವಾಗಿ ಮಧ್ಯದ ಬಾಟಲಿಗಳನ್ನು ಮಾರಾಟ ಮಾರುತ್ತಿರುವ ದನ್ನು ನೋಡಿ ಕಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರೋಂದಿಗೆ ದಾಳಿ ಮಾಡಿದ್ದು ದಾಳಿಯಲ್ಲಿ ಆರೋಪಿತನು ಪರಾರಿ ಆಗಿ ತಪ್ಪಿಸಿಕೊಂಡು ಮದ್ಯವನ್ನು, ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು , ಸದರಿ ಮುದ್ದೆಮಾಲನ್ನು ಜಪ್ತಿ ಪಡಿಸಿಕೊಂಡಿದ್ದು, ಜಪ್ತಿಪಡಿಕೊಂಡ ಮುದ್ದೇಮಾಲು, ಪಂಚನಾಮೆ ಮತ್ತು ವರದಿಯನ್ನು ಕೊಟ್ಟು ಮುಂದಿನ ಕ್ರಮ ಕುರಿತು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ನಂ: 103/2019 ಕಲಂ, 32, 34 ಕೆ.ಇ ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 149/2019 ಕಲಂ 279, 337, 304(ಎ) ಐಪಿಸಿ:-ದಿನಾಂಕ 26.09.2019 ರಂದು ಸಂಜೆ 7:15 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಮೃತ ಇಬ್ಬರು ತಮ್ಮ ಕುರಿಗಳನ್ನು ಅಡವಿಯಲ್ಲಿ ತರಬಿ ಅಲ್ಲಿ ನರಸಪ್ಪ ಎಂಬಾತನಿಗೆ ಬಿಟ್ಟು ರಾತ್ರಿಯ ಊಟ ಮಾಡಿ ಬುತ್ತಿ ತರುವ ಸಲುವಾಗಿ ಸಿಂದಗಿ-ಕೊಡಂಗಲ್ ಮುಖ್ಯ ರಸ್ತೆಯ ಮಾರ್ಗವಾಗಿ ಚಿನ್ನಾಕಾರ ಗ್ರಾಮಕ್ಕೆ ಹೋಗುತ್ತಿದ್ದಾ ಧರ್ಮಪೂರ ಕಡೆಯಿಂದ ಮೊಟಾರು ಸೈಕಲ್ ನಂ: ಕೆಎ-33-ಕೆ-6932 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಪಕ್ಕದಲ್ಲಿ ಹೋಗುತಿದ್ದ ಮೃತ ಮಲ್ಲಪ್ಪನಿಗೆ ಅಪಘಾತಪಡಿಸಿ ಮುಂದೆ ಹೋಗಿ ಮೋಟಾರು ಸೈಕಲ್ ಹಾಕಿಕೊಂಡು ಬಿದ್ದರಿಂದ ಆರೋಪಿನಿಗೆ ಸಾಧಾ ಸ್ವರೂಪದ ಗಾಯಗಳಾಗಿದ್ದು ಮೃತ ಮಲ್ಲಪ್ಪನಿಗೆ ತಲೆಗೆ ಹಿಂಬದಿಯಲ್ಲಿ ಭಾರಿ ರಕ್ತಗಾಯವಾಗಿ ಕಿವಿಯಲ್ಲಿ ರಕ್ತ ಸೋರಿದ್ದರಿಂದ ಮಲ್ಲಪ್ಪನು ಚಿಕಿತ್ಸೆ ಕುರಿತು ಗುರುಮಠಕಲ್ ಸರಕಾರಿ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗುತ್ತಿದ್ದಾಗ ಆಸ್ಪತ್ರೆಯ ಮುಂದೆಯೇ 108 ಆಂಬುಲೆನ್ಸ್ನಲ್ಲಿ ಮೃತಪಟ್ಟಿದ್ದು ಆ ಬಗ್ಗೆ ಫಿರ್ಯಾದಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 149/2019 ಕಲಂ 279, 337, 304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
Hello There!If you like this article Share with your friend using