ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 25-09-2019

By blogger on ಗುರುವಾರ, ಸೆಪ್ಟೆಂಬರ್ 26, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 25-09-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 77/2019 ಕಲಂ; 409,420,465,ಐಪಿಸಿ:-ದಿನಾಂಕ; 25/09/2019 ರಂದು 1-30 ಪಿಎಮ್ ಕ್ಕೆ ಪಿರ್ಯಾಧಿ ಶ್ರೀ ನೇರ್ಯಾ ಚವ್ಹಾಣ ತಂ. ತುಕ್ಯಾ ವಃ 38 ಜಾಃ ಲಂಬಾಣಿ ಉಃ ಶಾಖಾ ವ್ಯವಸ್ಥಾಪಕರು ಸಾಃ ಗೌಡಗೇರಾ ತಾಂಡಾ ತಾಃಜಿಃ ಯಾದಗಿರಿ ಹಾಃವಃ ಶ್ರೀರಾಮ ಸಿಟಿ ಯೂನಿಯನ್ ಫೈನಾನ್ಸ ತಹಸೀಲ ಆಫೀಸ್ ಎದುರುಗಡೆ ಯಾದಗಿರಿ ರವರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ್ದರ ಸಾರಾಂವೆನೆಂದರೆ,  ನಾನು ಶ್ರೀರಾಮ ಸಿಟಿ ಯೂನಿಯನ್ ಫೈನಾನ್ಸ ಯಾದಗಿರದಲ್ಲಿ ದಿನಾಂಕ. 30/07/2019 ರಿಂದ ಇಲ್ಲಿಯವರೆಗೆ ಶಾಖಾ ವ್ಯವಸ್ಥಾಪಕರು ಅಂತಾ ಕೆಲಸ ಮಾಡುತ್ತಿದ್ದೆನೆ. ನಾನು ಬರುವುದಕ್ಕಿಂತ ಮುಂಚಿತವಾಗಿ ಶರಣಭುಪಾಲರೆಡ್ಡಿ ಎಂಬುವವರು ಶಾಖಾ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್-2018 ರಿಂದ ಜೂಲೈ-2019 ಸಾಲಿನಲ್ಲಿ ಶ್ರೀರಾಮ ಸಿಟಿ ಯೂನಿಯನ್ ಫೈನಾನ್ಸದಲ್ಲಿಯ ಹಣಕಾಸಿನ ವ್ಯಾಹಾರದಲ್ಲಿ ಏರುಪೇರು ಕಂಡು ಬಂದಿದ್ದರಿಂದ ನಮ್ಮ  ಮೇಲಾದಿಕಾರಿಗಳು ಫೈನಾನ್ಸದಲ್ಲಿಯ ಎಲ್ಲಾ ದಾಖಲಾತಿಗಳನ್ನು ಚೆಕ್ ಮಾಡಿ ಅಡಿಟ ರೀಪೋರ್ಟ ತಯ್ಯಾರಿಸಿದಾಗ ಪೈನಾನ್ಸದಲ್ಲಿ ಕೆಲಸ ಮಾಡುತ್ತಿದ್ದ ಹಿಂದಿನ ಶಾಖಾ ವ್ಯವಸ್ಥಾಪಕರಾದ ಶರಣಭುಪಾಲರೆಡ್ಡಿ ಮತ್ತು ಸಿಬ್ಬಂದಿಯವರು ಕೆಲಸ ಮಾಡುವ ಸಮಯದಲ್ಲಿ ಗ್ರಾಹಕರಿಂದ ಪಡೆದುಕೊಂಡ ಹಣವನ್ನು ತಮ್ಮ ಸ್ವಂತಕ್ಕಾಗಿ ಬಳಸಿಕೊಂಡು ಕಂಪ್ಯೂಟರ ಬಿಲ್ ಕೊಡದೆ ಖಾಸಗಿಯಾಗಿ ರಸೀದಿಗಳಲ್ಲಿ ಹಣವನ್ನು ತುಂಬಿದಂತೆ ಬರೆದು ಹಾಗೂ ಕೆಲವರು ಹಾಗೆ ನೆಟವರ್ಕ ಪ್ರಾಬ್ಲಮ್ ಇರುತ್ತದೆ ನಂತರ ಬಿಲ್ ಪಡೆದುಕೊಂಡು ಹೋಗುವಂತೆ ಹೇಳಿ ಗ್ರಾಹಕರಿಗೆ ಕಳುಹಿಸಿಕೊಟ್ಟು ನಂತರ ಫೈನಾನ್ಸಗೆ ಹಣ ತುಂಬದೆ ತಮ್ಮ ಸ್ವಂತ ಲಾಬಕ್ಕಾಗಿ ಹಣ ಬಳಸಿಕೊಂಡಿದ್ದು ಕಂಡು ಇರುತ್ತದೆ. 1. ಶರಣಭೂಪಾಲರೆಡ್ಡಿ ಹಿಂದಿನ ಶಾಖಾ ವ್ಯವಸ್ಥಾಪಕರು ಹಾಗೂ ಶ್ರೀರಾಮ ಸಿಟಿ ಯೂನಿಯನ್ ಫೈನಾನ್ಸದಲ್ಲಿಯ ಕೆಲಸ ಮಾಡುತ್ತಿದ್ದ ಸಿಬ್ಬಂದಿಯವರಾದ 2. ಶಿವರಾಜಕುಮಾರ ತಂ. ಅನಂತಯ್ಯಾ ಸಾಃ ರಾಜೀವ ಗಾಂಧಿನಗರ ಯಾದಗಿರಿ 3. ನಿಖಿಲ್ ಕುಮಾರ ತಂ. ಪ್ರಲ್ಹಾದರಾವ್ ಕುಲ್ಕಣರ್ಿ ಸಾಃ ಕುಮನೂರ ತಾಃ ವಡಗೇರಾ ರವರು ಕೂಡಿಕೊಂಡು ಶರಣಭೂಪಾಲರೆಡ್ಡಿ ರವರೊಂದಿಗೆ ಶಾಮಿಲಾಗಿದ್ದು ಶ್ರೀರಾಮ ಸಿಟಿ ಯೂನಿಯನ್ ಫೈನಾನ್ಸದಲ್ಲಿ ಗ್ರಾಹಕರು ಹಣವನ್ನು ತುಂಬಿದ ಬಗ್ಗೆ ಪೈನಾನ್ಸಗೆ ಬೇಬಾಕಿ ರಸೀದಿ ಕೊಡುವಂತೆ ದೂರುಗಳನ್ನು ಸಲ್ಲಿಸಿದ್ದು ಅದನ್ನು ಲೆಕ್ಕಿಸದೆ ಗ್ರಾಹಕರು ಹಣ ತುಂಬಿದ ಬಗ್ಗೆ ಸಿಬ್ಬಂದಿಯವರಿಗೆ ವಿಚಾರ ಮಾಡದೇ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸದೆ ಹಾಗೂ ಮೇಲಾಧಿಕರಿಗಳಿಗೆ ಇದರ ಬಗ್ಗೆ ವಿಷಯ ತಿಳಿಸದೆ ಮೋಸದ ವ್ಯವಹಾರದಲ್ಲಿ ಶಾಮಿಲಾಗಿದ್ದು ಇರುತ್ತದೆ. ಶರಣಭುಪಾಲರೆಡ್ಡಿರವರು ಶಾಖಾ ವ್ಯವಸ್ಥಾಪಕರಾಗಿದ್ದ ಸಮಯದಲ್ಲಿ ಈ ಮೇಲ್ಕಂಡ ಸಿಬ್ಬಂದಿಯವರು ಗ್ರಾಹಕರಿಗೆ ಕಂಪ್ಯೂಟರ ಬಿಲ್ ಕೊಡದೆ ಹಣ ತುಂಬಿರುವ ಬಗ್ಗೆ ರಸೀದಿಗಳನ್ನು ಕೊಟ್ಟಿದ್ದು ಮತ್ತು ಕೆಲವು ಗ್ರಾಹಕರಿಗೆ ರಸೀದಿಗಳನ್ನು ಕೂಡಾ ಕೊಡದೆ ನೆಟವರ್ಕ ಪ್ರಾಬ್ಲಮ್ ಇರುತ್ತದೆ ನಂತರ ರಸೀದಿಯನ್ನು ಪಡೆದುಕೊಂಡು ಹೋಗುವಂತೆ ಹೇಳಿ ಕಳುಹಿಸಿಕೊಟ್ಟಿದ್ದು ಗ್ರಾಹಕರು ತುಂಬಿದ ಹಣವನ್ನು ಕೂಡಾ ಪೈನಾನ್ಸಗೆ ತುಂಬದೆ ತಮ್ಮ ಸ್ವಂತಕ್ಕಾಗಿ ಬಳಸಿಕೊಂಡು ಮೋಸ ಮಾಡಿದ್ದು ಮತ್ತು ಶಿವರಾಜಕುಮಾರ ರವರು ಫೈನಾನ್ಸ ಸಾಲದ ಹಣ ಕಟ್ಟದೆ ಇರುವ ಗ್ರಾಹಕರಿಂದ ಎಂಟು ದ್ವೀಚಕ್ರ ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಫೈನಾನ್ಸಗೆ ನೀಡಿರುವುದಿಲ್ಲಾ. ವಾಹನಗಳು ಎಲ್ಲಿರುತ್ತವೆ ಎಂಬುವುದರ ಬಗ್ಗೆ ತಿಳಿಸಿರುವುದಿಲ್ಲಾ. ಶರಣಭೂಪಾಲರೆಡ್ಡಿ ಹಾಗೂ ಈ ಮೇಲಿನ ಸಿಬ್ಬಂದಿಯವರಿಗೆ ತಾವು ಬಳಸಿಕೊಂಡ ಹಣ ಮತ್ತು ವಾಹನಗಳು ತೆಗೆದುಕೊಂಡು ಫೈನಾನ್ಸಗೆ ತುಂಬುವಂತೆ ಹಲವಾರು ಬಾರಿ ತಿಳಿಸಿದರೂ ಕೂಡಾ ಇಲ್ಲಿಯವರೆಗೆ ಹಣ ಮತ್ತು ವಾಹನಗಳನ್ನು ನೀಡಿರುವುದಿಲ್ಲಾ. ಶರಣಭೂಪಾಲರೆಡ್ಡಿ ಹಾಗೂ ಈ ಮೇಲಿನ ಸಿಬ್ಬಂದಿಯವರು ಈ ಕೆಳಗಿನಂತೆ ಹಣ ತಮ್ಮ ಸ್ವಂತಕ್ಕಾಗಿ ಬಳಸಿಕೊಂಡು ಶ್ರೀರಾಮ ಸಿಟಿ ಯೂನಿಯನ್ ಫೈನಾನ್ಸಗೆ ಒಟ್ಟು ಹಣ 6,28,333/- ರೂ. ಹಾಗೂ ಎಂಟು ದ್ವೀ ಚಕ್ರವಾಹನಗಳು ಕಿಮ್ಮತ್ತು 3,76,470/- ರೂ. ಫೈನಾನ್ಸಗೆ ಜಮಾ ತೋರಿಸದೆ ತಮ್ಮ ಸ್ವಂತಕ್ಕೆ ಬಳಸಿಕೊಂಡು ಮೋಸ ಮಾಡಿರುತ್ತಾರೆ. 1. ಶರಣಭುಪಾಲರೆಡ್ಡಿ ಹಿಂದಿನ ಶಾಖಾವ್ಯವಸ್ಥಾಪಕರು ಶ್ರೀರಾಮ ಸಿಟಿ ಯೂನಿಯನ್ ಫೈನಾನ್ಸ: ರವರು ಈ ಕೆಳಕಂಡ ಸಿಬ್ಬಂದಿಯವರೊಂದಿಗೆ ಶಾಮಿಲಾಗಿ ಈಕೆಳಗಿನಂತೆ ಸಿಬ್ಬಂದಿಯವರು ಗ್ರಾಹಕರಿಂದ ಹಣ ಪಡೆದುಕೊಂಡು ತಮ್ಮ ಸ್ವಂತಕ್ಕಾಗಿ ಬಳಸಿಕೊಂಡು ಮೋಸ ಮಾಡಿದ್ದು ಇರುತ್ತದೆ. 2. ಶಿವರಾಜಕುಮಾರ ತಂದೆ ಅನಂತಯ್ಯಾ ಸಾಃರಾಜೀವ ಗಾಂಧಿನಗರ ಯಾದಗಿರಿ ಃ- ಇವರು ಗ್ರಾಹಕರಿಂದ 4,43,046/- ರೂ.ಎಂಟು ದ್ವೀಚಕ್ರ ವಾಹನಗಳು ಸ್ವಂತಕ್ಕಾಗಿ ಬ:ಳಸಿಕೊಂಡ ವಾಹನಗಳ ಕಿಮ್ಮತ್ತು 3,76,470/-  ಒಟ್ಟು 8,19,516/-ರೂ ಬಳಸಿಕೊಂಡಿದ್ದು ಇರುತ್ತದೆ. 3. ನಿಖಿಲ್ ಕುಮಾರ ತಂದೆ ಪ್ರಲ್ಹಾದರಾವ್ ಕುಲ್ಕಣರ್ಿ ಸಾಃ ಕುಮನೂರ ತಾಃವಡಗೇರಾ ಃ- ರವರು  ಗ್ರಾಹಕರಿಂದ 1,85,287/-ರೂ. ಬಳಸಿಕೊಂಡಿದ್ದು ಇರುತ್ತದೆ. ಈ ಮೇಲಿನಂತೆ ಒಟ್ಟು ಹಣ 6,28,333/- ರೂ. ಹಾಗೂ ಎಂಟು ದ್ವೀ ಚಕ್ರವಾಹನಗಳು ಕಿಮ್ಮತ್ತು 3,76,470/- ರೂ ತಮ್ಮ ಸ್ವಂತಕ್ಕೆ ಬಳಸಿಕೊಂಡು ಮೋಸ ಮಾಡಿರುತ್ತಾರೆ. ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.77/2019 ಕಲಂ. 409,465,420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 104/2019 ಕಲಂ.341.323,324,504,506, ಐಪಿಸಿ:-ದಿನಾಂಕ: 25-09-2019 ರಂದು ಬೆಳಿಗ್ಗೆ 10-00 ಗಂಟೆಗೆ ಪಿಯರ್ಾಧಿದಾರನಾದ ಬನ್ನಪ್ಪಗೌಡ ತಂದೆ ಶರಣಪ್ಪಗೌಡ ಶಿವರೆಡ್ಡಿಯನೋರ ವ|| 55 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ  ಸಾ|| ನೀಲಹಳ್ಳಿ ತಾ|| ಜಿ|| ಯಾದಗಿರಿ ಇತನು ಠಾಣೆಗೆ ಹಾಜರಾಗಿ ಹೇಳಿಕೆ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 25-09-2019 ರಂದು ಬೆಳಿಗ್ಗೆ 08-00 ಗಂಟೆಗೆ ಹುಸೇನಸಾಬ ಇತನ ಮನೆಯ ಹತ್ತಿರ ಆರೊಪಿತನು ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ ರಕ್ತಗಾಯ ಮಾಡಿ ಎದೆಯ ಮೇಲಿನ ಅಂಗಿ ಹಿಡಿದು ಅಡ್ಡಗಟ್ಟಿ ನಿಲ್ಲಿಸಿ ಜೀವದ ಬೇದರಿಕೆ ಹಾಕಿದ ಬಗ್ಗೆ   ಪಿಯರ್ಾಧಿ ಸಾರಂಶ ಇರುತ್ತದೆ.
                                                                               
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 105/2019 ಕಲಂ.341.323,324,504,506, ಸಂಗಡ 34 ಐಪಿಸಿ  :- ದಿನಾಂಕ: 25-09-2019 ರಂದು ಮದ್ಯಾಹ್ನ 04-00 ಗಂಟೆಗೆ ಪಿಯರ್ಾಧಿದಾರನಾದ ಹುಸೇನಸಾಬ ತಂದೆ ಖಾಸಿಂಅಲಿ  ವ|| 28 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ  ಸಾ|| ನೀಲಹಳ್ಳಿ ತಾ|| ಜಿ|| ಯಾದಗಿರಿ ಇತನು ಠಾಣೆಗೆ ಹಾಜರಾಗಿ ಹೇಳಿಕೆ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 25-09-2019 ರಂದು ಬೆಳಿಗ್ಗೆ 09-00 ಗಂಟೆಗೆ ಹುಸೇನಸಾಬ ಇತನ ಮನೆಯ ಹತ್ತಿರ ಆರೊಪಿತರು ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆ ಬಡೆ ಮಾಡಿ ರಕ್ತಗಾಯ ಮಾಡಿ ಎದೆಯ ಮೇಲಿನ ಅಂಗಿ ಹಿಡಿದು ಅಡ್ಡಗಟ್ಟಿ ನಿಲ್ಲಿಸಿ ಜೀವದ ಬೇದರಿಕೆ ಹಾಕಿದ ಬಗ್ಗೆ  ಪಿಯರ್ಾಧಿ ಸಾರಂಶ ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 184/2019 ಕಲಂ: 87 ಕೆ.ಪಿ.ಕಾಯ್ದೆ:- ದಿನಾಂಕ: 25/09/2019 ರಂದು  5-45 ಪಿ.ಎಂ.ಕ್ಕೆ ಎಸ್ ಹೆಚ್ಡಿಕರ್ತವ್ಯದಲ್ಲಿದ್ದಾಗಶ್ರೀ ಆನಂದರಾವ್ಎಸ್.ಎನ್ ಪಿ.ಐ ಸಾಹೇಬರು 9 ಜನಆರೋಪಿತರೊಂದಿಗೆಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆಇಂದು ದಿನಾಂಕ:25-09-2019 ರಂದು 3 ಪಿ.ಎಮ್ ಸುಮಾರಿಗೆಠಾಣೆಯಲ್ಲಿದ್ದಾಗಸೂರಪೂರ ಪೊಲೀಸ್ಠಾಣೆ ವ್ಯಾಪ್ತಿಯ ಹುಣಸಿಹೊಳೆ ಗ್ರಾಮದ ಲಕ್ಷ್ಮಿ ಹೊಟೇಲ ಪಕ್ಕದಲ್ಲಿರುವ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಕೆಲವು ಜನರುಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾ ಬಾತ್ಮಿ ಬಂದ ಮೇರೆಗೆ, ನಾನು  ಹಾಗೂ ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಚಂದ್ರಶೇಖರ ಹೆಚ್ಸಿ-134 2) ಶ್ರೀ  ಮನೋಹರ ಹೆಚ್ಸಿ-105 3) ಸುಭಾಸ ಸಿಪಿಸಿ-174 4) ಸೋಮಯ್ಯಾ ಸಿಪಿಸಿ-235 ಹಾಗೂ ಜೀಪ್ ಚಾಲಕ 5)ಮಹಾಂತೇಶ ಎ.ಪಿ.ಸಿ-48 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರೂ ಪಂಚರಾದ 1) ಶ್ರೀ ಮೌನೇಶತಂದೆರಾಮಣ್ಣ ಬೋವಿ ವಯಾ:32 ವರ್ಷ ಉ:ಸಮಾಜ ಸೇವೆ ಜಾತಿ:ಕಬ್ಬಲಿಗ ಸಾ:ತಿಂಥಣಿ2) ಶ್ರೀ ಮಾನಪ್ಪತಂದೆ ಬೀಮಣ್ಣ ಮಲ್ಲಿಬಾವಿ ವಯಾ;36 ವರ್ಷ ಉ:ಒಕ್ಕಲುತನ ಜಾತಿ:ಕುರುಬರ ಸಾ:ಹುಣಸಿಹೊಳೆ ಇವರನ್ನು ಬರಮಾಡಿಕೊಂಡು ಸದರಿಯವರಿಗೂ ವಿಷಯ ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 3-15 ಪಿ.ಎಮ್ ಕ್ಕೆ ಸಕರ್ಾರಿಜೀಪ್ ನಂಬರ ಕೆ.ಎ 33 ಜಿ 0238 ನೇದ್ದರಲ್ಲಿ ಹೊರಟು 4 ಪಿ.ಎಮ್ ಕ್ಕೆ ಹುಣಸಿಹೊಳೆ ಗ್ರಾಮದಅಂಬೇಡ್ಕರಕಟ್ಟೆಯ ಹತ್ತಿರ ಹೋಗಿ ಜೀಪ ನಿಲ್ಲಿಸಿ  ಎಲ್ಲರೂ ಕೆಳಗೆ ಇಳಿದು ಮರೆಯಾಗಿ ಹೋಟೆಲ ಹತ್ತಿರ ಹೋಗಿ ನಿಂತು ನೋಡಲು ಹೋಟೆಲ ಪಕ್ಕದಲ್ಲಿರುವ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಕೆಲವು ಜನರು ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೆಲೆಅವರ ಮೇಲೆ 4-10 ಪಿ.ಎಮ್ ಕ್ಕೆ ದಾಳಿಮಾಡಿ ಹಿಡಿಯಲಾಗಿಒಟ್ಟು 9 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ಶಿವಶಂಕರ ತಂದೆ ಮಲ್ಲಪ್ಪ ಕಾಂಬಳೆ ವಯಾ:41 ವರ್ಷ ಉ:ಒಕ್ಕಲುತನ ಜಾತಿ:ಹರಿಜನ ಸಾ:ಹುಣಸಿಹೊಳೆ ಇವನ ಹತ್ತಿರ 400=00 ರೂಗಳು ದೊರೆತವು 2) ನಾಗರಾಜತಂದೆ ಸೋಮಯ್ಯಾಗುರಗುಂಟಾ ವ:25 ವರ್ಷ ಉ:ಗೌಂಡಿ ಜಾತಿ:ಹರಿಜನ ಸಾ:ಹುಣಸಿಹೊಳೆ  ಇವನ ಹತ್ತಿರ 240=00 ರೂಗಳು ದೊರೆತವು 3) ಹಣಮಂತತಂದೆ ಪರಮಣ್ಣಕಕ್ಕೇರಿ ವಯಾ:35 ವರ್ಷ ಉ:ಡ್ರೈವರ ಜಾತಿ:ಬೇಡರ ಸಾ:ಹುಣಸಿಹೊಳೆ ಇವನ ಹತ್ತಿರ 650=00 ರೂಗಳು ದೊರೆತವು 4) ಮಾನಯ್ಯಾತಂದೆ ಹಣಮಂತ್ರಾಯ ಹೂಗಾರ ವಯಾ:40 ವರ್ಷ ಉ:ಒಕ್ಕಲುತನ ಜಾತಿ:ಹೂಗಾರ ಸಾ:ಹುಣಸಿಹೊಳೆ ಇವನ ಹತ್ತಿರ 360=00 ರೂಗಳು ದೊರೆತವು 5) ಹಣಮಂತತಂದೆ ಶಂಕ್ರೆಪ್ಪಕಟ್ಟಿಮನಿ ವಯಾ:50 ವರ್ಷ ಉ:ಒಕ್ಕಲುತನ ಜಾತಿ:ಹರಿಜನ ಸಾ:ಹುಣಸಿಹೊಳೆ ಇವನ ಹತ್ತಿರ 440=00 ರೂಗಳು ದೊರೆತವು 6) ನಾಗಣಗೌಡತಂದೆ ಬಾಲನಗೌಡ ಮಾಲೀ ಪಾಟೀಲ ವಯಾ:47 ವರ್ಷ ಉ:ಒಕ್ಕಲುತನ ಜಾತಿ:ಲಿಂಗಾಯತ ಸಾ:ಹುಣಸಿಹೊಳೆ ಇವನ ಹತ್ತಿರ 620=00 ರೂಗಳು ದೊರೆತವು 7) ಬೀಮರಾಯತಂದೆ ಹಣಮಂತ್ರಾಯ ಶೇಳ್ಳಗಿ ವಯಾ:25 ವರ್ಷ ಉ:ಡ್ರೈವರ ಜಾತಿ:ಕುರುಬರ ಸಾ:ಹುಣಸಿಹೊಳೆ ಇವನ ಹತ್ತಿರ 580=00 ರೂಗಳು ದೊರೆತವು 8) ಹಣಮಂತ್ರಾಯತಂದೆ ಸೋಮಣ್ಣಜುಮ್ಮರ ವಯಾ:38 ವರ್ಷ ಉ:ಒಕ್ಕಲುತನ ಜಾತಿ:ಬೇಡರ ಸಾ:ಹುಣಸಿಹೊಳೆ  ಇವನ ಹತ್ತಿರ 250=00 ರೂಗಳು ದೊರೆತವು 9) ಮಾನಯ್ಯಾತಂದೆ ನಿಂಗಪ್ಪ ಮಳ್ಳಳ್ಳಿ ವಯಾ:60 ವರ್ಷ ಉ:ಒಕ್ಕಲುತನ ಜಾತಿ:ಕುರುಬರ ಸಾ:ಹುಣಸಿಹೊಳೆ ಇವನ ಹತ್ತಿರ 300=00 ರೂಗಳು ದೊರೆತವು  ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ ಹಾಗೂ ಕಣದಲ್ಲಿದ್ದ 600/- ರೂ,ಗಳು ಹೀಗೆ ಒಟ್ಟು 4440=00 ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನು 4-10 ಪಿ.ಎಮ್.ದಿಂದ 5-10 ಪಿ.ಎಮ್ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿಜಪ್ತಿಪಂಚನಾಮೆ, 9 ಜನಆರೋಪಿತರನ್ನು ಮತ್ತು ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದುಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲು ವರದಿ ನಿಡಿದ್ದರ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ. 
     
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ.:- 241/2019. ಕಲಂ 379 ಐ.ಪಿ.ಸಿ.ಮತ್ತು ಕಲಂ.44 (1) ಕೆ.ಎಮ್.ಎಮ್.ಸಿ.ಆರ್ ರೂಲ್:- ದಿನಾಂಕ:25-09-2019 ರಂದು 6:50 ಪಿ.ಎಮ್.ಕ್ಕೆ ಆರೋಪಿತರು ತಮ್ಮ ಲಾರಿ ನಂಬರ ಕೆ.ಎ.02 ಡಿ. 4148 ನೇದ್ದರಲ್ಲಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಸರಕಾರಕ್ಕೆ ಯಾವುದೇ ತೆರಿಗೆ ತುಂಬದೇ ಅಕ್ರಮವಾಗಿ ಸಾಗಿಸುತ್ತಿದ್ದಾಗ ಫಿಯರ್ಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಹೋಗಿ ದಾಳಿಮಾಡಿ ಮರಳು ತುಂಬಿದ ಲಾರಿಯನ್ನು ವಶಪಡಿಸಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರ ಆಧಾರದ ಮೇಲಿಂದ  ಠಾಣೆ ಗುನ್ನೆ ನಂ.241/2019 ಕಲಂ. 379 ಐ.ಪಿ.ಸಿ. ಮತ್ತು ಕಲಂ 44(1) ಕೆ.ಎಮ್.ಎಮ್.ಸಿ.ಆರ್  ಅಡಿಯಲ್ಲಿ  ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು. 


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ.:- 185/2019 ಕಲಂ:78 () ಕೆ.ಪಿ.ಕಾಯ್ದೆ:- ದಿನಾಂಕ:25-09-2019 ರಂದು 9-15 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಶರಣಪ್ಪ ಹವಲ್ದಾರ ಪಿಎಸ್ಐ (ಕ್ರೈಂ) ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ಒಬ್ಬ ಆರೋಪಿತನನ್ನು  ಠಾಣೆಗೆ ತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:25-09-2019 ರಂದು 6 ಪಿ.ಎಮ್. ಸುಮಾರಿಗೆ ನಾನು ಠಾಣೆಯ ಸಿಬ್ಬಂದಿಯವರಾದ 1) ಶ್ರೀ ಮನೋಹರ ಹೆಚ್.ಸಿ-105 2) ಚಂದ್ರಾಮ ಸಿಪಿಸಿ-175 3) ದೇವಿಂದ್ರಪ್ಪ ಪಿಸಿ-184 ಇವರೊಂದಿಗೆ ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೇನೆಂದರೆ ಬೋನಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಜಲಾಲ್ಸಾಬ್ ತಂದೆ ಬಡೆಸಾಬ್ ಚೌದರಿ ವಯಾ: 52 ವರ್ಷ ಉ: ಡ್ರೈವರ್ ಸಾ: ದೇವಾಪೂರ ತಾ:ಸುರಪೂರ 2) ಶ್ರೀ ಹುಸನಪ್ಪ ತಂದೆ ಪುತ್ರಪ್ಪ ಬುಗಡಿಕಡ್ಡಿ ವಯಾ:23ವರ್ಷ ಉ:ಕೂಲಿ ಜಾ:ಮಾದಿಗ ಸಾ:ಬೋನಾಳ ತಾ: ಸುರಪುರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಅವರಿಗೆ ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 6-15 ಪಿ.ಎಮ್ ಕ್ಕೆ ಠಾಣೆಯಿಂದ ಒಂದು ಖಾಸಗಿ ವಾಹನದಲ್ಲಿ ಹೊರಟು 7 ಪಿ.ಎಮ್ ಕ್ಕೆ ಬೋನಾಳ ಗ್ರಾಮದ ಹನುಮಾನ ಗುಡಿ ಹತ್ತಿರ ಹೋಗಿ ವಾಹನ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಬಸ್ ನಿಲ್ದಾಣದ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ರಸ್ತೆಯ ಪಕ್ಕದಲ್ಲಿರುವ ಲೈಟಿನ ಕಂಬದ ಬೆಳಕಿನಲ್ಲಿ ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 7-15 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಪರಮಣ್ಣ ತಂದೆ ಮಹಾದೇವಪ್ಪ ಮ್ಯಾಗೇರಿ ವಯಾ:26 ವರ್ಷ ಉ:ಕೂಲಿ ಜಾ:ಮಾದಿಗ ಸಾ:ಬೋನಾಳ ತಾ: ಸುರಪುರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಅವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ  ನಗದು ಹಣ 835=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು ರಸ್ತೆಯ ಪಕ್ಕದಲ್ಲಿರುವ ಲೈಟಿನ ಕಂಬದ ಬೆಳಕಿನಲ್ಲಿ 7-15 ಪಿ.ಎಮ್ ದಿಂದ 8-15 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ನಿಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ.;- 107/2019 ಕಲಂ: 78(3) ಕೆಪಿ ಯಾಕ್ಟ:- ದಿನಾಂಕ: 25.09.2019 ರಂದು 17.15 ಘಂಟೆಗೆ ಶ್ರೀ ರಾಜಶೇಖರ ಎ.ಎಸ್.ಐ ಕೆಂಭಾವಿ ಪೊಲೀಸ್ ಠಾಣೆ ರವರು ವರದಿ ಸಲ್ಲಿಸಿದ ಸಾರಾಂಶವೆನೆಂದರೆ ಇಂದು ದಿನಾಂಕ: 25.09.2019 ರಂದು 15.00 ಗಂಟೆಗೆ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಮುನೀರ ಬೊಮ್ಮನಳ್ಳಿ ಗ್ರಾಮದ ರೇವಣಸಿದ್ದೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ನಾನು ಠಾಣೆಯ ಸಿಬ್ಬಂದಿಯವರಾದ ಅರುಣ ಪಿ.ಸಿ-212, ಚಂದಪ್ಪ ಪಿ.ಸಿ-316 ಮತ್ತು ಶಂಕರಗೌಡ ಹೆಚ್.ಸಿ-33 ರವರಿಗೆ ಕರೆದು ಬಾತ್ಮಿ ವಿಷಯ ತಿಳಿಸಿ ಅರುಣ ಪಿಸಿ-212 ರವರಿಂದ ಇಬ್ಬರು ಪಂಚರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ  ವ|| 36 ಜಾ|| ಪರಿಶಿಷ್ಟ ಜಾತಿ ಉ|| ಕೂಲಿ ಸಾ|| ಕೆಂಭಾವಿ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ವ|| 46 ಜಾ|| ಪ.ಜಾತಿ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಠಾಣೆಗೆ 15.15 ಗಂಟೆಗೆ ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ ಹೊರಟು ಕರಡಕಲ ಗ್ರಾಮಕ್ಕೆ 15.45 ಗಂಟೆಗೆ ಹೋಗಿ ಮುನೀರ ಬೊಮ್ಮನಳ್ಳಿ ಗ್ರಾಮದ ರೇವಣಸಿದ್ದೇಶ್ವರ ಗುಡಿಯ ಪಕ್ಕದಲ್ಲಿ ಮರೆಯಾಗಿ ನಿಂತು ನೋಡಲಾಗಿ ಸದರಿ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 15.50 ಗಂಟೆಗೆ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ದೌವಲಸಾಬ ತಂದೆ ಮಾಬುಸಾಬ ನಾಯ್ಕೋಡಿ ವ|| 37 ಜಾ|| ಮುಸ್ಲಿಂ ಉ|| ಕೂಲಿಕೆಲಸ  ಸಾ|| ದೊರನಳ್ಳಿ ತಾ: ಸುರಪೂರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 450/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಇವುಗಳನ್ನು 15.50 ಘಂಟೆಯಿಂದ 16.50 ಗಂಟೆಯವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡೆನು. ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು ಮುದ್ದೆಮಾಲು ಸಮೇತ 17.15 ಘಂಟೆಗೆ  ಠಾಣೆಗೆ ಬಂದಿದ್ದು ಸದರಿ ಆರೋಪಿತನ ವಿರುದ್ದ ಮುಂದಿನ ಕ್ರಮ ಜರುಗಿಸಲು ಆದೇಶಿಸಲಾಗಿದೆ ಅಂತ ವರದಿ ನೀಡಿದ್ದು ಇರುತ್ತದೆ. ಸದರಿ ವರದಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 22.15 ಗಂಟೆಗೆ ಠಾಣಾ ಗುನ್ನೆ ನಂಬರ 107/2019 ಕಲಂ 78 (3) ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!