ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 24-09-2019
ಗುರುಮಠಕಲ್ ಪೊಲೀಸ್ ಠಾಣೆ :- 147/2019 ಕಲಂ 279, 337 , 304(ಎ) ಐಪಿಸಿ:-ದಿನಾಂಕ 24.09.2019 ರಂದು ಬೆಳಿಗ್ಗೆ 9:45 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಮೃತ ಇಬ್ಬರು ವಾಹನ ಸಂಖ್ಯೆ ಎಮ್.ಹೆಚ್.-30-ಎಲ್-4958 ನೇದ್ದರಲ್ಲಿ ನೀರು ತುಂಬಿಕೊಂಡು ರಿಬ್ಬನಪಲ್ಲಿ ಗ್ರಾಮದಿಂದ ಕಂದಕೂರು ಗ್ರಾಮಕ್ಕೆ ಏರ್ಟೇಲ್ ಕೇಬಲ್ ಹಾಕುವ ಸಂಬಂಧ ಸದರಿ ವಾಹನದಲ್ಲಿ ಹೋಗುತ್ತಿದ್ದಾಗ ಗುಂಜನೂರು ಗೇಟ್ ದಾಟಿದ ನಂತರ ಮೃತ ರಾಜೇಶಕುಮಾರಸಿಂಗ್ ಈತನು ವಾಹವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮಿಂದೊಮ್ಮೆಲೆ ಕಟ್ ಹೊಡೆದು ನಿಯಂತ್ರಿಸಲು ಸಾಧ್ಯವಾಗದೇ ಅಪಘಾತ ಸಂಭವಿಸಿದ್ದು ಸದರಿ ಅಪಘಾತದಲ್ಲಿ ಚಾಲಕ ರಾಜೇಶಕುಮಾರಸಿಂಗ್ನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಮೃತಪಟ್ಟಿದ್ದು ಫಿರ್ಯಾದಿ ಜಿತೇಂದ್ರನಿಗೆ ಸಾಧಾಸ್ವರೂಪದ ರಕ್ತಗಾಯವಾಗಿದ್ದ ಬಗ್ಗೆ ಫಿರ್ಯಾದಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ನಂ: 147/2019 ಕಲಂ 279, 337 , 304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ :- 38/2019 ಕಲಂ 279, 338, 304(ಎ) ಐಪಿಸಿ:- ಮಾನ್ಯರವರಲ್ಲಿ ಈ ಮೇಲ್ಕಾಣಿಸಿದ ವಿಷಯದಲ್ಲಿ ಅರಿಕೆ ಮಾಡಿಕೊಳ್ಳುವುದೇನೆಂದರೆ ದಿನಾಂಕ 02/06/2019 ರಂದು ಬೆಳಿಗ್ಗೆ 10-45 ಎ.ಎಂ.ಕ್ಕೆ ಯಾದಗಿರಿ ಜಿಜಿಎಚ್ನಿಂದ ಪೋನ್ ಮೂಲಕ ಆರ್.ಟಿ.ಎ/ಎಮ್.ಎಲ್.ಸಿ ಅಂತಾ ಮಾಹಿತಿ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳು ಆದೆಪ್ಪ ತಂದೆ ಚನ್ನಪ್ಪ ವಡ್ಡರ ವಯ;27 ವರ್ಷ, ಜಾ;ವಡ್ಡರ, ಸಾ;ಹುಲಕಲ್(ಜೆ), ಹಾ;ವ;ಪಗಲಾಪುರ ಇವರು ಪ್ರಜ್ಞಾವಸ್ಥೆಯಲ್ಲಿ ಇರದ ಕಾರಣ ಆಸ್ಪತ್ರೆಯಲ್ಲಿ ಹಾಜರಿದ್ದ ಗಾಯಾಳುವಿನ ತಾಯಿಯಾದ ಪಿಯರ್ಾದಿ ಶ್ರೀಮತಿ ಕಾಂತಮ್ಮ ಗಂಡ ಚನ್ನಪ್ಪ ವಡ್ಡರ ವಯ;48 ವರ್ಷ, ಜಾ;ವಡ್ಡರ, ಉ;ಕೂಲಿ ಕೆಲಸ, ಸಾ;ಹುಲಕಲ್(ಜೆ), ಹಾ;ವ;ಪಗಲಾಫುರ ತಾ;ಜಿ;ಯಾದಗಿರಿ ಇವರು ತಮ್ಮದೊಂದು ಹೇಳಿಕೆ ಫಿಯರ್ಾದು ನೀಡಿದ್ದನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ಇಂದು ದಿನಾಂಕ 02/06/2019 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಮಗನಾದ ಆದೆಪ್ಪ ಈತನು ತನ್ನ ಸ್ನೇಹಿತನ ಮೋಟಾರು ಸೈಕಲ್ ನಂಬರ ಕೆಎ-33, ಕೆ-9522 ನೇದ್ದನ್ನು ತೆಗೆದುಕೊಂಡು ತನ್ನ ಕೆಲಸದ ನಿಮಿತ್ಯ ಯಾದಗಿರಿಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು ಇರುತ್ತದೆ. ಹೀಗಿದ್ದು ಸ್ವಲ್ಪ ಸಮಯದ ನಂತರ ನಮ್ಮ ಸಂಬಂಧಿಯಾದ ಶ್ರೀ ಹಣಮಂತ ತಂದೆ ಮಾರೆಪ್ಪ ವಡ್ಡರ ಈತನು ನಮ್ಮ ಮನೆಗೆ ಬಂದು ನನಗೆ ತಿಳಿಸಿದ್ದೇನೆಂದರೆ ನಮ್ಮ ಸಂಬಂಧಿ ಶಂಕರ ತಂದೆ ರಂಗಪ್ಪ ವಡ್ಡರ ಈತನು ನನಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ ತಾನು ಮತ್ತು ತನ್ನ ಸ್ನೇಹಿತನಾದ ಸಣ್ಣಮರೆಪ್ಪ ತಂದೆ ಗಿರೆಪ್ಪ ವಡ್ಡರ ಸಾ;ವರ್ಕನಳ್ಳಿ ಇಬ್ಬರು ಯಾದಗಿರಿ ನಗರದ ಕುಬೇರ ಡಾಬಾದ ಹತ್ತಿರ ಮಾತನಾಡುತ್ತಾ ನಿಂತಿದ್ದಾಗ ಅದೇ ಸಮಯಕ್ಕೆ ನಮ್ಮ ಸಂಬಂಧಿಯಾದ ಆದೆಪ್ಪ ತಂದೆ ಚನ್ನಪ್ಪ ವಡ್ಡರ ಈತನು ತನ್ನ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ಹೊರಟಿದ್ದ ದನಕ್ಕೆ ಡಿಕ್ಕಿ ಕೊಟ್ಟು ಸ್ಕಿಡ್ಡಾಗಿ ರಸ್ತೆ ಮೇಲೆ ಬಿದ್ದಾಗ ನಾವಿಬ್ಬರು ಓಡೋಡಿ ಆತನ ಹತ್ತಿರ ಹೋಗಿ ನೋಡಲಾಗಿ ಸದರಿ ಅಪಘಾತದಲ್ಲಿ ಆದೆಪ್ಪನಿಗೆ ತಲೆಗೆ ಬಾರೀ ಗುಪ್ತಗಾಯವಾಗಿ ಎರಡು ಕಿವಿಗಳಿಂದ ರಕ್ತ ಹೊರಬರುತ್ತಿದ್ದು ಹಾಗೂ ಎರಡು ಕೈ ಬೆರಳುಗಳಿಗೆ ತರಚಿದ ರಕ್ತಗಾಯ ಆಗಿದ್ದು ಬೇವುಶ್ ಆಗಿರುತ್ತಾನೆ. ಈತನು ನಡೆಸುತ್ತಿದ್ದ ಮೋಟಾರು ಸೈಕಲ್ ನಂಬರ ಕೆಎ-33, ಕೆ-9522 ನೇದ್ದು ಇದ್ದು ಸದರಿ ಘಟನೆಯು ಇಂದು ದಿನಾಂಕ 02/06/2019 ರಂದು 10-30 ಎ.ಎಂ.ಕ್ಕೆ ಹೊಸಳ್ಳಿ ಕ್ರಾಸ್- ಗಂಜ್ ಕ್ರಾಸ್ ಮುಖ್ಯ ರಸ್ತೆ ಮೇಲೆ ಬರುವ ಕುಬೇರ ಡಾಬಾದ ಮುಂದಿನ ರಸ್ತೆ ಮೇಲೆ ಜರುಗಿದ್ದು ಈತನಿಗೆ ಉಪಚಾರ ಕುರಿತು ನಾವುಗಳು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು ನೀವು ಕೂಡಲೇ ಆದೆಪ್ಪನ ಮನೆಯವರಿಗೆ ವಿಷಯ ತಿಳಿಸಿ ಅವರಿಗೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬರಬೇಕು ಅಂತಾ ತಿಳಿಸಿರುತ್ತಾನೆ ಆದ್ದರಿಂದ ನಾವು ಬೇಗ ಹೋಗೋಣ ನಡೀರಿ ಅಂದಾಗ ನಾವಿಬ್ಬರು ಒಂದು ಖಾಸಗಿ ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ಈ ಮೇಲೆ ನಮಗೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಹೀಗಿದ್ದು ಇಂದು ದಿನಾಂಕ 02/06/2019 ರಂದು ಬೆಳಿಗ್ಗೆ 10-30 ಎ.ಎಂ. ಕ್ಕೆ ಯಾದಗಿರಿ ನಗರದ ಹೊಸಳ್ಳಿ ಕ್ರಾಸ್-ಗಂಜ್ ಮುಖ್ಯ ರಸ್ತೆ ಮೇಲೆ ಬರುವ ಕುಬೇರ ಡಾಬಾದ ಹತ್ತಿರ ಮುಖ್ಯ ರಸ್ತೆ ಮೇಲೆ ನನ್ನ ಮಗನಾದ ಆದೆಪ್ಪನು ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ದನಕ್ಕೆ ಡಿಕ್ಕಿ ಕೊಟ್ಟು ಸ್ಕಿಡ್ ಮಾಡಿಕೊಂಡು ಅಪಘಾತ ಮಾಡಿಕೊಂಡಿದ್ದು ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 12-15 ಪಿ.ಎಂ.ಕ್ಕೆ ಬಂದು ಫಿಯರ್ಾದು ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 38/2019 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ.
ಸದರಿ ಪ್ರಕರಣದಲ್ಲಿ ದಿನಾಂಕ 24/09/2019 ರಂದು ಪಿಯರ್ಾದಿಯು ಖುದ್ದಾಗಿ ಠಾಣೆಗೆ ಹಾಜರಾಗಿ ಪುರವಣಿ ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ ದಿನಾಂಕ 02/06/2019 ರಂದು ಗಾಯಾಳು ಆದೆಪ್ಪ ಈತನಿಗೆ ರಸ್ತೆ ಅಪಘಾತದಲ್ಲಾದ ಗಾಯಗಳಿಗೆ ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ಉಪಚರಿಸಿದ ನಂತರ ಹೆಚ್ಚಿನ ಉಪಚಾರ ಕುರಿತು ಸಕರ್ಾರಿ ಆಸ್ಪತ್ರೆ ಕಲಬುಗರ್ಿಗೆ ಕರೆದುಕೊಂಡು ಹೋಗಿದ್ದು, ನಂತರ ಅದೇ ದಿನ ದಿನಾಂಕ 02/06/2019 ರಂದು ಸಕರ್ಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಯಾದ ಗಂಗಾ ಆಸ್ಪತ್ರೆಗೆ ಹೆಚ್ಚಿನ ಉಪಚಾರ ಕುರಿತು ಸೇರಿಕೆ ಮಾಡಿದ್ದು, ದಿನಾಂಕ 02/06/2019 ರಿಂದ 08/06/2019 ರ ಸಾಯಂಕಾಲ 8 ಪಿ.ಎಂ.ದ ವರೆಗೆ ಚಿಕಿತ್ಸೆ ಕೊಡಿಸಿದ್ದು ತದನಂತರ ಆರೋಗ್ಯದಲ್ಲಿ ಚೇತರಿಕೆ ಕಾಣದ ಕಾರಣ ಅಲ್ಲಿನ ವೈದ್ಯರು ಬೇರೆ ಕಡೆಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಮರಳಿ ಮತ್ತೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದು, ನಂತರ ಮರುದಿನ ದಿನಾಂಕ 09/06/2019 ರಂದು ಬೆಳಿಗ್ಗೆ ಯಾದಗಿರಿ ಸಕರ್ಾರಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ಉಪಚಾರಕ್ಕಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆ ಕರೆದುಕೊಂಡು ಹೋಗಲು ತಿಳಿಸಿದಾಗ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದು, ನಂತರ ರಾಯಚೂರಿನ ರಿಮ್ಸ್ ಆಸ್ಪತ್ರೆ ವೈದ್ಯರು ಮತ್ತೆ ಬಳ್ಳಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಾಗ ಪಿಯರ್ಾದಿಯವರು ತಾವು ಬಡವರು ಇದ್ದ ಕಾರಣ ಆಸ್ಪತ್ರೆಯ ಖಚರ್ಿಗೆ ಹಣ ಹೊಂದಿಸಿಕೊಂಡು ಹೋದರಾಯಿತು ಅಂತಾ ಗಾಯಾಳು ಆದೆಪ್ಪನಿಗೆ ಮರಳಿ ಪಗಲಾಫುರ ಗ್ರಾಮದ ತಮ್ಮ ಮನೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ. ದಿನಾಂಕ 10/06/2019 ರಂದು ಬೆಳಿಗ್ಗೆ 4 ಎ.ಎಂ. ದ ಸುಮಾರಿಗೆ ಆದೆಪ್ಪನು ರಸ್ತೆ ಅಪಘಾತದಲ್ಲಾದ ಗಾಯದ ಭಾದೆಯಿಂದ ಚೇತರಿಸಿಕೊಳ್ಳದೇ ಮೃತಪಟ್ಟಿದ್ದು ಇರುತ್ತದೆ. ನಂತರ ಮೃತದೇಹವನ್ನು ತಮಗೆ ಕಾನೂನು ಬಗ್ಗೆ ಅರಿವು ಇಲ್ಲದಿದ್ದರಿಂದ ದಿನಾಂಕ 10/06/2019 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಪಗಲಾಫುರ ಗ್ರಾಮದ ಸಾರ್ವಜನಿಕ ಸ್ಮಶಾನ ಜಾಗೆಯಲ್ಲಿ ಶವಸಂಸ್ಕಾರ ಮಾಡಿದ್ದು ಇರುತ್ತದೆ. ಆದೆಪ್ಪನು ರಸ್ತೆ ಅಪಘಾತದಲ್ಲಿ ಆದ ಗಾಯಗಳ ಬಾದೆಯಿಂದ ಉಪಚಾರ ಹೊಂದುತ್ತಾ ಮೃತಪಟ್ಟಿದ್ದರಿಂದ ತಮ್ಮ ಮಗನ ಮರಣದ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎನ್ನುವ ಬಗ್ಗೆ ಈಗ ತಡವಾಗಿ ತಿಳಿದು ಬಂದಿದ್ದರಿಂದ ಇಂದು ದಿನಾಂಕ 24/09/2019 ರಂದು ಠಾಣೆಗೆ ಬಂದು ತಮ್ಮ ಮಗ ಆದೆಪ್ಪನಿಗೆ ದಿನಾಂಕ 02/06/2019 ರಂದು ರಸ್ತೆ ಅಪಘಾತದಲ್ಲಾದ ಗಾಯಗಳ ಬಾದೆಯಿಂದ ದಿನಾಂಕ 10/06/2019 ರಂದು ಬೆಳಗಿನ ಜಾವ 4 ಎ.ಎಂ.ಕ್ಕೆ ಮೃತಪಟ್ಟಿರುತ್ತಾನೆ ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತ್ಮಿಂತಾ ಪುರವಣಿ ಹೇಳಿಕೆ ಸಾರಾಂಶದ ಮೇಲಿಂದ ಸದರಿ ಪ್ರಕರಣದಲ್ಲಿ ಕಲಂ 304 [ಎ] ಐಪಿಸಿ ಅಳವಡಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಸೈದಾಪೂರ ಪೊಲೀಸ್ ಠಾಣೆ :- 103/2019 ಕಲಂ. 323, 324, 166 ಸಂಗಡ 34 ಐಪಿಸಿ:-ದಿನಾಂಕ: 24-09-2019 ರಂದು ರಾತ್ರಿ 07-30 ಗಂಟೆಗೆ ಒಂದು ಖಾಸಗಿ ಪಿಯರ್ಾಧಿ ವಸೂಲಾದ ಸಾರಂಶವೆನೆಂದರೆ ಬಾಬು ತಂದೆ ಬುಗ್ಗಪ್ಪ ಗಡ್ಡಿಮೋಳ ವ|| 65 ವರ್ಷ ಸಾ|| ಕುಂಟಿಮರಿ ತಾ|| ಗುರಮಿಠಕಲ್ ಜಿ|| ಯಾದಗಿರಿ ಇತನಿಗೆ ದಿನಾಂಕ: 27-06-2019 ರಂದು ರಾತ್ರಿ 09-00 ಗಂಟೆಗೆ ಮನೆಯಲ್ಲಿ ಇರುವಾಗ ಆತನ ಮಗ ಆರೋಪಿ ಬುಗ್ಗಪ್ಪ ಇತನು ಆತನಿಗೆ ಹೊಡೆ ಬಡೆ ಮಾಡಿದ್ದು ಸರಕಾರಿ ಆಸ್ಪತ್ರೆ ಯಾದಗಿರಿಗೆ ಸೆರಿಕೆಗಾಗಿದ್ದು ಪೊಲೀಸ ಕೇಸು ಮಾಡಿದಾಗ ಪೊಲಿಸರು ಬಂದಿದ್ದು ಆದರೆ ಕೇಸು ಮಾಡಿರುವದಿಲ್ಲ ಕರ್ತವ್ಯದಲ್ಲಿ ಗುರುತರವಾದ ನಿರ್ಲಕ್ಷತನ ಮಾಡಿರುತ್ತಾರೆ ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.
ಸೈದಾಪೂರ ಪೊಲೀಸ್ ಠಾಣೆ :- 102/2019 ಕಲಂ.109,147,323,324,325,354,341,504,506, ಸಂಗಡ 149ಐಪಿಸಿ:-ದಿನಾಂಕ: 24-09-2019 ರಂದು ಸಾಯಂಕಾಲ 05-00 ಗಂಟೆಗೆ ಬಂದಪ್ಪ ಪಿಸಿ 383 ರವರು ಒಂದು ಖಾಸಗಿ ಪಿಯರ್ಾಧಿಯನ್ನು ತಂದು ಹಾಜರುಪಡಿಸಿದ ಸಾರಂಶವೆನೆಂದರೆ ನಾನು ಮುನಿರಾಬೇಗಂ ಗಂಡ ಮಹ್ಮದ ಮಾಲಾನಾ ವ|| 25 ವರ್ಷ ಉ|| ಮನೆಕೆಲಸ ಸಾ|| ಯಲಸತ್ತಿ ತಾ|| ಗುರಮಿಠಕಲ್ ಜಿ|| ಯಾದಗಿರಿ ಇದ್ದು ನಾನು ದಿನಾಂಕ: 01-09-2019 ರಂದು ಮನೆಯಲ್ಲಿರುವಾಗ ಆರೋಪಿತರು ಬಂದು ಅವಾಚ್ಯವಾಗಿ ಬೈದು ಕೈಯಿಂದ ಹಲ್ಲೆ ಮಾಡಿ ಸೀರೆ ಹಿಡಿದು ಜಗ್ಗಾಡಿ ಅವಮಾನ ಮಾಡಲು ಪ್ರಯತ್ನ ಮಾಡಿ, ನಿನಗೆ ಜೀವ ಸಹಿತಿ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ :- 240/2019.ಕಲಂ 420,504,506,34 ಐ.ಪಿ.ಸಿ:- ದಿನಾಂಕ 24/09/2019 ರಂದು 5.00 ಪಿಎಂ ಕ್ಕೆ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಹುಲಿಗೆಪ್ಪ ಪಿ.ಸಿ 344 ರವರು ಕೋರ್ಟ ಕರ್ತವ್ಯದಿಂದ ಠಾಣೆಗೆ ಬಂದು ಪಿಯರ್ಾದಿ ಶ್ರೀಮತಿ ಫರಿದಾಬೇಗಂ ಗಂಡ ಫರೀದ ಅಹ್ಮದ ಖುರಾನಬುಡ್ಡಿ ವ|| 59 ಉ|| ಮನೆಗೆಲಸ ಸಾ|| ಆಸರಮೊಹಲ್ಲಾ ಶಹಾಪೂರ ತಾ|| ಶಹಾಪೂರ ಇವರು ಮಾನ್ಯ ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಲಯ ಶಹಾಪೂರ ರವರಲ್ಲಿ ಕನ್ನಡದಲ್ಲಿ ಸಲ್ಲಿಸಿದ ಖಾಸಗಿ ದೂರು ಸಂಖ್ಯೆ 60/2019 ನೇದ್ದನ್ನು ತಂದು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ, ಶಹಾಪೂರ ನಗರದ ರಾಕಂಗೇರಾ ಸೀಮಾಂತರದ ಸವರ್ೆ ನಂ 102 ರಲ್ಲಿನ ನಿವೇಶನ ಸಂಖ್ಯೆ 13-36 ನೇದ್ದು ಪ್ಲಾಟ್ ಅಳತೆ 30*180 ಉದ್ದಳತೆಯ ಪ್ಲಾಟನ್ನು ಆರೋಪಿತರಾದ ಶಾರದಾ ಗಂಡ ಬಸನಗೌಡ ಪಾಟೀಲ್ ವ|| 55 ಉ|| ಮನೆಗೆಲಸ ಸಾ|| ಶಹಾಪೂರ ಇವರು ಕಬ್ಜಾದಾರ ಮಾಲೀಕರಾಗಿ ಫಿಯರ್ಾದಿಗೆ ಮಾರಾಟ ಮಾಡಿದ್ದು ಫಿಯರ್ಾದಿಯು ದಿನಾಂಕ 26/09/2006 ರಂದು 81,000/- ರೂಪಾಯಿ ಕೊಟ್ಟು ಶಹಾಪೂರ ಉಪನೊಂದಣಿ ಕಾಯರ್ಾಲಯದಲ್ಲಿ ನೊಂದಣಿ ಮಾಡಿಸಿಕೊಂಡಿದ್ದು ನೊಂದಣಿ ಮಾಡಿಸುವಾಗ ಆರೋಪಿ ಸೈಯದ ಅಮೀನುದ್ದೀನ ತಂದೆ ಸೈಯದ ಹುಸೇನಿ ಬಾರಾಮಣಿ ವ|| 58 ಉ|| ವ್ಯಾಪಾರ ಸಾ|| ಆಸತಮೊಹಲ್ಲಾ ಶಹಾಪೂರ ಈತನು ಸಾಕ್ಷಿದಾರನಾಗಿ ಸಹಿ ಮಾಡಿದ್ದು ನೊಂದಣಿ ಮಾಡಿಸಿಕೊಂಡ ನಂತರ ಸದರಿ ಪ್ಲಾಟನ್ನು ಫಿಯರ್ಾದಿಯು ದಿನಾಂಕ 25/05/2007 ರಂದು ಶಹಾಪೂರ ಪುರಸಭೆಯಲ್ಲಿ ಮ್ಯುಟೇಶನ್ ಮಾಡಿಸಿಕೊಂಡಿದ್ದು ಅದರಂತೆ ಫಿಯರ್ಾದಿಯು ಸದರಿ ಪ್ಲಾಟಿನ ಮಾಲಿಕ ಕಬ್ಜಾದಾರಳಾಗಿದ್ದು ಆದರೆ ಫಿಯರ್ಾದಿಯು ದಿನಾಂಕ 01/09/2019 ರಂದು 10.00 ಎಎಂ ಸುಮಾರಿಗೆ ರಾಕಂಗೇರಾ ಹತ್ತಿರದ ಪ್ಲಾಟ ನಂ 13-36 ನೇದ್ದರ ಅಳತೆ 30*180 ನೇದ್ದನ್ನು ಖಾಸಗಿಯಾಗಿ ಅಳತೆ ಮಾಡಿ ಗುರುತು ಹಾಕಬೇಕು ಅಂತಾ ಪ್ಲಾಟಿನ ಸ್ಥಳಕ್ಕೆ ಹೋಗಿ ಅಳತೆ ಮಾಡಿಸಲಾಗಿ ಉಪನೊಂದಣಿ ಕಾಯರ್ಾಲಯದಲ್ಲಿ ನೊಂದಣಿ ಮಾಡಿಸಿದ ಪ್ರಕಾರ 30*180 ಉದ್ದಳತೆಯ ಜಾಗವು ಅಲ್ಲಿ ಇಲ್ಲದಿರುವುದು ಕಂಡು ಬಂದಿದ್ದು ಆರೋಪಿತರು ಮಾರಾಟ ಮಾಡಿದಂತೆ ಸದರಿ ಪ್ಲಾಟ ಸರಿಯಾದ ಸ್ಥಳದಲ್ಲಿ ಇಲ್ಲದಿದ್ದರೂ ಮೋಸ ಮಾಡುವ ಉದ್ದೇಶದಿಂದ ಫಿಯರ್ಾದಿಗೆ ಪ್ಲಾಟ ಮಾರಾಟ ಮಾಡಿರುತ್ತಾರೆ. ಹೀಗಿದ್ದು ದಿನಾಂಕ 14/09/2019 ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಫಿಯರ್ಾದಿಯು ಸಾಕ್ಷಿದಾರರಾದ ಅಲ್ಲಾವುದ್ದೀನ ತಂದೆ ಮಹ್ಮದ ಲಾಡ್ಲೆ ಮತ್ತು ಚೈನಾರಾಮ @ ಸೇನಾರಾಮ ತಂದೆ ವಸ್ತಾರಾಮ ಪಟೇಲ್ ಸಾ|| ಇಬ್ಬರೂ ಶಹಾಪೂರ ಇವರೊಂದಿಗೆ ಶಹಾಪೂರ ನಗರದ ಹೊಸ ಬಸ್ ನಿಲ್ದಾಣದಲ್ಲಿ ಮಾತನಾಡುತ್ತ ನಿಂತಿದ್ದಾಗ ಆರೋಪಿತರಿಬ್ಬರೂ ಅಲ್ಲಿಗೆ ಬಂದು ಫಿಯರ್ಾದಿಗೆ ಲೇ ಬೋಸಡಿ ನಿನಗೆ ಸೊಕ್ಕು ಜಾಸ್ತಿಯಾಗಿದೆ ನಮ್ಮ ಪ್ಲಾಟಿನ ಬಗ್ಗೆ ಜನರ ಮುಂದೆ ಹೇಳಿ ನಮ್ಮ ರಿಯಲ್ ಎಸ್ಟೇಟ ವ್ಯಾಪಾರ ಕೆಡಿಸಲು ಪ್ರಯತ್ನಿಸುತ್ತಿಯಾ ಅಂತಾ ಅಂದು ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದು ಸದರಿ ಆರೋಪಿತರ ಮೇಲೆ ಕ್ರಮ ಜರುಗಿಸಬೇಕು ಅಂತಾ ಖಾಸಗಿ ಪಿಯರ್ಾದಿ ಇದ್ದು ಸದರಿ ಖಾಸಗಿ ಪಿಯರ್ಾದಿ ಆಧಾರದ ಮೇಲೆ ಆರೋಪಿತರ ವಿರುದ್ದ ಗುನ್ನೆ ನಂ 240/2019 ಕಲಂ 420.504.506 ಸಂ 34 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಹುಣಸಗಿ ಪೊಲೀಸ್ ಠಾಣೆ :- 85/2019 ಕಲಂ 87 ಕೆ.ಪಿ ಯಾಕ್ಟ:- ದಿನಾಂಕ:24/09/2019 ರಂದು 15.50 ಗಂಟೆಯ ಸುಮಾರಿಗೆ ಆರೋಪಿತರು ಬಲಶೆಟ್ಟಿಹಾಳ ಸೀಮಾಂತರದ ಗೆದ್ದಲಮರಿ ರೋಡಿನ ದಂಡೆಗೆ ಒಂದು ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಗುಂಪಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಶೀಭದ ಇಸ್ಲೀಟ್ ಜೂಜಾಟವನ್ನು ಆಡುತ್ತಿದ್ದಾಗ ಪಿಯರ್ಾದಿ ಮತ್ತು ಎ.ಎಸ್.ಐ (ಎಸ್) ಎ.ಎಸ್.ಐ (ಎಂಹೆಚ್) ಸಿಬ್ಬಂದಿಯವರಾದ ಹೆಚ್.ಸಿ- 130 133 178 67 ಪಿಸಿ-233 292 ರವರೊಂದಿಗೆ ದಾಳಿ ಮಾಡಿ 6 ಜನರಿಗೆ ಹಿಡಿದುಕೊಂಡಿದ್ದು, ಆರೋಪಿತರಿಂದ ಮತ್ತು ಖಣದಿಂದಾ ಒಟ್ಟು 1910=00 ರೂ ನಗದು ಹಣ, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.
Hello There!If you like this article Share with your friend using