ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 18-09-2019

By blogger on ಬುಧವಾರ, ಸೆಪ್ಟೆಂಬರ್ 18, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 18-09-2019 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 128/2019 ಕಲಂ 143, 147, 120(ಬಿ) ಸಂ 149 ಐಪಿಸಿ ಮತ್ತು 3(1) (ದಚಿ) (ಂ) (ಅ) (ಆ) ,3(1) (ಡಿ) () ಖಅ/ಖಖಿ ಕಂ ಂಅಖಿ-1989:- ದಿನಾಂಕ 18/09/2019 ರಂದು ಸಾಯಂಕಾಲ 4-00 ಗಂಟೆಗೆ ಅಜರ್ಿ ಫಿರ್ಯಾಧಿಯನ್ನು ಅಜರ್ಿದಾರರು ಹಾಜರಪಡಿಸಿದ್ದು, ಅದರ ಸಾರಾಂಶವೆನೆಂದರೆ ನಾನು ಶಿವಪ್ಪ ತಂದೆ ಮರಗಪ್ಪ ಕೊಳ್ಳಿ, ವಯಾ|| 55 ವರ್ಷ, ಜಾತಿ|| ಮಾದಿಗ, ಉ|| ಒಕ್ಕಲುತನ, ಸಾ|| ಹೊನಗೇರಾ ಗ್ರಾಮ ನಮ್ಮ ಸಮಾಜದ ಪರವಾಗಿ ತಮ್ಮ ಗಮನಕ್ಕೆ ತರಬಯಸುವದೆನೆಂದರೆ, ಯಾದಗಿರ ತಾಲ್ಲೂಕಿನ ಹೊನಗೇರಾ ಗ್ರಾಮದಲ್ಲಿ ಇದೇ ತಿಂಗಳ 10 ನೇ ತಾರೀಖಿನಂದು ನಡೆದ ಮೊಹರಂ ಹಬ್ಬದಲ್ಲಿ ನಮ್ಮೂರಿನ ಕಬ್ಬಲಿಗ ಹಾಗೂ ಇತರೆ ಸವಣರ್ಿಯ ಸಮುದಾಯದವರು ಕೂಡಿ ನಮ್ಮ ಮಾದಿಗ ಸಮಾಜದವರು ಮೊಹರಂ ಹಬ್ಬವನ್ನು ನೋಡಲು ಹೋದಾಗ ನಮ್ಮವರಿಗೆ ಹೊಡೆದಿರುತ್ತಾರೆ. ಈ ಸಂಬಂಧ ಯಾದಗಿರ ನಗರದ ಮಾದಿಗ ಸಮಾಜದ ಹಿರಿಯರ ಸಮ್ಮುಖದಲ್ಲಿ ರಾಜಿ ಸಂದಾನ ಮಾಡಿದ್ದು ಇರುತ್ತದೆ. ಅದರಂತೆ ನಾವು ರಾಜಿಯಾಗಿ ಊರಿಗೆ ಹೋಗಿದ್ದೆವು. ತದನಂತರ ಗ್ರಾಮದ ಸವಣರ್ಿಯವರಾದ ಕಬ್ಬಲಿಗ ಹಾಗೂ ಇನ್ನಿತರ ಸಮುದಾಯದವರು ಕೂಡಿ ದಿನಾಂಕಃ 16/09/2019 ರಂದು ಬೆಳಗ್ಗೆ 1100 ಗಂಟೆಯ ಸುಮಾರಿಗೆ ನಮ್ಮೂರಿನ ಹನುಮಾನ ದೇವಾಲಯದಲ್ಲಿ ಸೇರಿ ತಮ್ಮದೇ ಆಂತರಿಕ ಸಭೆ ಮಾಡಿ ದಿನಾಂಕಃ 16/09/2019 ರಿಂದ ಹೊನಗೇರಾ ದಿಂದ ಯಾದಗಿರಗೆ ತೆರಳುವ ಆಟೋ ಮತ್ತು ಇನ್ನಿತರ ವಾಹನಗಳಲ್ಲಿ ನಮ್ಮ ಮಾದಿಗ ಸಮಾಜದವರಿಗೆ ಆಟೋದಲ್ಲಿ ಹತ್ತಿಸಿಕೊಳ್ಳುತ್ತಿಲ್ಲ, ಅಂಗಡಿಗಳಲ್ಲಿ ಪ್ರವೇಶ ಇಲ್ಲ, ಕುಡಿಯುವ ನೀರು ಸಹ ಬಿಡುತ್ತಿಲ್ಲಾ, ದಿನಸಿಯ ವ್ಯವಹಾರ, ಹಿಟ್ಟಿನ ಗಿರಣಿ, ಖಾರಾ ಕುಟ್ಟುವ ಗಿರಣಿ ನಮ್ಮ ಮಾದಿಗ ಸಮಾಜದವರಿಗೆ ಬಹಿಷ್ಕರಿಸಿ ಇಂದಿನ ನಾಗರಿಕ ಸಮಾಜ ತಲೆ ತೆಗ್ಗಿಸುವಂತಹ ಅಮಾನವಿಯ ಕೃತ್ಯ ವೆಸಗುತ್ತಿದ್ದಾರೆ. ಈ ಗ್ರಾಮವು ಯಾದಗಿರ ನಗರಕ್ಕೆ ಹತ್ತಿರವಾಗಿದ್ದು ಅಸ್ಪಶ್ಯತೆ ತಾಂಡವ ಆಡುತ್ತಿದೆ. ಮಾದಿಗ ಸಮಾಜದ ಹಲವರಿಗೆ ಹೊಡೆದಿದ್ದು, ಮಾದಿಗ ಸಮಾಜದವರು ಜೀವಭಯದಲ್ಲಿ ಜೀವನ ಸಾಗಿಸುವಂತಹ ವಾತಾವರಣ ನಿಮರ್ಾಣವಾಗಿದೆ. ಮಾದಿಗ ಹೆಣ್ಣುಮಕ್ಕಳ ಮೇಲೆ ಸಹ ಹಲ್ಲೆ ಮಾಡಿರುತ್ತಾರೆ. ಗ್ರಾಮದ ಸವಣರ್ಿಯರು ನಮ್ಮ ಮೇಲೆ ಯಾವ ಸಮಯದಲ್ಲಿ ಏನು ಮಾಡುತ್ತಾರೆ ಎಂಬುವದು ತಿಳಿಯದಂತಾಗಿದೆ. ಆದರಿಂದ ತಾವುಗಳು ಈ ನಮ್ಮ ಮಾದಿಗರ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಮುಖಾಂತರ ಗ್ರಾಮಕ್ಕೆ ಭೇಟಿ ನೀಡಿ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ಗ್ರಾಮದಲ್ಲಿ ಮಾದಿಗ ಸಮಾಜಕ್ಕೆ ಸೂಕ್ತ ಪೊಲೀಸ ಬಂದೋಬಸ್ತು ನೀಡಿ ನಮಗೆ ನಿರ್ಭಯವಾಗಿ ಜೀವಿಸುವಂತೆ ವಾತಾವರಣ ನಿಮರ್ಾಣ ಮಾಡಿಕೊಡಬೇಕು ಅಂತಾ ನೀಡಿದ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 128/2019 ಕಲಂ 143, 147, 120(ಬಿ) ಸಂ 149 ಐಪಿಸಿ ಮತ್ತು 3(1) (ದಚಿ) (ಂ) (ಅ) (ಆ) ,3(1) (ಡಿ) () ಖಅ/ಖಖಿ ಕಂ ಂಅಖಿ-1989 ನೆದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 150/2019.ಕಲಂ 279.337,304(ಎ) ಐ.ಪಿ.ಸಿ. ಮತ್ತು 187 ಐ.ಎಂ.ವಿ.ಯಾಕ್ಟ:- ದಿನಾಂಕ 16/06/2019 ರಂದು 4.00 ಪಿ.ಎಮ್ ಕ್ಕೆ ಅಜರ್ಿದಾರರಾದ ಶ್ರೀ ಮಲ್ಲಪ್ಪ ತಂದೆ ನಿಂಗಪ್ಪ ಟರಕಿ ವ|| 34ವರ್ಷ ಜಾ|| ಕುರುಬರ ಉ|| ಕೂಲಿ ಸಾ|| ದಿವಳಗುಡ್ಡ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 15/06/2019 ರಂದು 4.00 ಪಿಎಮ್ ಸುಮಾರಿಗೆ ನಾನು ನನ್ನ ವೈಯಕ್ತಿಕ ಕೆಲಸದ ನಿಮಿತ್ಯ ಹತ್ತಿಗುಡೂರ ಹತ್ತಿರದ ದೇವದುರ್ಗ ಕ್ರಾಸಿಗೆ ಬಂದು ನನ್ನ ಕೆಲಸ ಮುಗಿಸಿಕೊಂಡು ನಂತರ ಮರಳಿ ನಮ್ಮೂರಾದ ದಿವಳಗುಡ್ಡ ಗ್ರಾಮಕ್ಕೆ ನನ್ನ ಟಂ ಟಂ ಅಟೋ ನಂ ಕೆಎ 33 ಎ 9261 ನೇದ್ದನ್ನು ನಾನು ನಡೆಸಿಕೊಂಡು ಹೋಗುತ್ತಿದ್ದಾಗ ದೇವದುರ್ಗ ಕ್ರಾಸಿನಲ್ಲಿ ನನಗೆ ಪರಿಚಯವಿರುವ ಬಿಜಾಸ್ಪೂರ ಗ್ರಾಮದ ಹಣಮಂತ ತಂದೆ ತಿಮ್ಮಪ್ಪ ದೇವಿಕೇರಿ ವ|| 58ವರ್ಷ ಈತನು ನನ್ನ ಅಟೋಗೆ ಕೈ ಮಾಡಿ ಬಿಜಾಸ್ಪೂರ ವರೆಗೂ ಬರುತ್ತೇನೆ ಅಂದಿದ್ದಕ್ಕೆ ನಾನು ನನ್ನೊಂದಿಗೆ ನನ್ನ ಅಟೋದಲ್ಲಿ ಹಣಮಂತನಿಗೆ ಕರೆದುಕೊಂಡು ಹೋಗುತ್ತಿದ್ದಾಗ 6.00 ಪಿಎಂ ಸುಮಾರಿಗೆ ಶಹಾಪೂರ ಸುರಪೂರ ರಸ್ತೆಯ ಮಂಡಗಳ್ಳಿ ಪೆಟ್ರೋಲ್ ಪಂಪ ಹತ್ತಿರ ಇರುವ ರೋಡ ಹಂಪನ್ನು ನಿಧಾನವಾಗಿ ದಾಟುತ್ತಿದ್ದಾಗ ಹಿಂದಿನಿಂದ ಲಾರಿ ನಂ ಕೆಎ 16 ಸಿ 8417 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ನಮ್ಮ ಟಂ ಟಂ ಅಟೋಕ್ಕೆ ಡಿಕ್ಕಿಪಡಿಸಿದನು. ಆಗ ನಮ್ಮ ಅಟೋ ಪಲ್ಟಿಯಾಗಿ ಬಿದ್ದಿದ್ದು ಅಟೋದಲ್ಲಿ ಕುಳಿತಿದ್ದ ಹಣಮಂತ ತಂದೆ ತಿಮ್ಮಪ್ಪ ದೇವಿಕೇರಿ ಈತನು ಕೆಳಗೆ ಬಿದ್ದಿದ್ದು ಆತನ ಬಲಗೈಗೆ ಭಾರೀ ಒಳಪೆಟ್ಟಾಗಿ ಕೈ ಮುರಿದಂತೆ ಆಗಿದ್ದು, ಗದ್ದಕ್ಕೆ, ಮೂಗಿನ ಹತ್ತಿರ, ಹಣೆಗೆ ತರಚಿದ ರಕ್ತಗಾಯ, ತಲೆಯ ಬಲಗಡೆಗೆ ರಕ್ತಗಾಯ, ಬೆನ್ನಿಗೆ, ಭುಜಕ್ಕೆ ಒಳಪೆಟ್ಟು ಮತ್ತು ಬಲಗಾಲಿಗೆ ಭಾರೀ ಒಳಪೆಟ್ಟಾಗಿದ್ದು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆದರೆ ನನಗೆ ಯಾವುದೇ ಗಾಯಗಳಾಗಿರಲಿಲ್ಲ. ನಂತರ ನಾನು ಮತ್ತು ಅಲ್ಲಿಯೇ ರಸ್ತೆಯ ಮೇಲೆ ಹೋಗುತ್ತಿದ್ದ ನಮ್ಮೂರ ಗುರುರಾಜ ತಂದೆ ಬೀರಪ್ಪ ಕುರಿ ಇಬ್ಬರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ಹಣಮಂತನಿಗೆ ಕರೆದುಕೊಂಡು ಶಹಾಪೂರ ಸಕರ್ಾರಿ ಆಸ್ಪತ್ರೆಗೆ ಬಂದು ಶಹಾಪೂರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಉಪಚಾರ ಕುರಿತು ವೈದ್ಯರ ಸಲಹೆಯ ಮೇರೆಗೆ ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ನಮ್ಮ ಅಟೋಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಲಾರಿ ನಂ ಕೆಎ 16 ಸಿ 8417 ನೇದ್ದರ ಚಾಲಕನು ತನ್ನ ಲಾರಿಯನ್ನು ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು ಆತನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ. ನಾನು ನಿನ್ನೆ ದಿನಾಂಕ 15/06/2019 ರಂದು ಅವಸರದಲ್ಲಿ ಹಣಮಂತನಿಗೆ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ.ಆದ್ದರಿಂದ ಲಾರಿ ನಂ ಕೆಎ 16 ಸಿ 8417 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಾವು ಹೋಗುತ್ತಿದ್ದ ನನ್ನ ಸ್ವಂತ ಟಂ ಟಂ ಅಟೋ ನಂ ಕೆಎ 33 ಎ 9261 ನೇದ್ದಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ಭಾರೀ ಸ್ವರೂಪದ ಗಾಯವಾಗಲು ಕಾರಣನಾದ ಲಾರಿ ಚಾಲಕನ ಮೇಲೆ ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 150/2019 ಕಲಂ 279,338 ಐಪಿಸಿ ಮತ್ತು 187 ಐಎಂವಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ದಿನಾಂಕ: 18/09/2019 ರಂದು 12.00 ಪಿ.ಎಂ ಕ್ಕೆ ಸದರಿ ಪ್ರಕರಣದಲ್ಲಿ ಗಾಯ ಹೊಂದಿದ್ದ ಹಣಮಂತ ತಂದೆ ತಿಮ್ಮಪ್ಪ ದೇವಿಕೇರಿ ವ|| 58ವರ್ಷ ಸಾ|| ಬಿಜಾಸ್ಪೂರ ಈತನ ಮಗನಾದ ತಿಮ್ಮಪ್ಪ ತಂದೆ ಹಣಮಂತ ದೇವಿಕೇರಿ ವ|| 35ವರ್ಷ ಜಾ|| ಪ.ಜಾತಿ ಉ|| ಕೂಲಿ ಸಾ|| ಬಿಜಾಸ್ಪೂರ ತಾ|| ಸುರಪೂರ ಈತನು ಠಾಣೆಗೆ ಬಂದು ಕನ್ನಡದಲ್ಲಿ ಟೈಪ ಮಾಡಿಸಿದ ಒಂದು ಅಜರ್ಿಯನ್ನು ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ಗಾಯಾಳುವಾಗಿದ್ದ ಹಣಮಂತ ತಂದೆ ತಿಮ್ಮಪ್ಪ ದೇವಿಕೇರಿ ಈತನಿಗೆ ಉಪಚಾರಕ್ಕಾಗಿ ಯುನೈಟೆಡ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿದ್ದು ಸಂಪೂರ್ಣ ಚೇತರಿಸಿಕೊಳ್ಳದೇ ಹಣವು ಜಾಸ್ತಿ ಖಚರ್ು ಆಗುತ್ತಿದ್ದುದರಿಂದ ಆಸ್ಪತ್ರೆಯ ಖಚರ್ು ಭರಿಸುವ ಶಕ್ತಿ ಇಲ್ಲವಾದ್ದರಿಂದ ಹಣಮಂತನಿಗೆ ತಮ್ಮ ಬಿಜಾಸ್ಪೂರದ ಮನೆಗೆ ಕರೆದುಕೊಂಡು ಬಂದು ಮನೆಯಲ್ಲಿ ತಕ್ಕಮಟ್ಟಿಗೆ ಔಷದೋಪಚಾರ ಮಾಡಿದ್ದು ಗುಣಮುಖನಾಗದೇ ಇಂದು ದಿನಾಂಕ 18/09/2019 ರಂದು 5.00 ಎಎಂ ಸುಮಾರಿಗೆ ಮನೆಯಲ್ಲಿ ಮೃತಪಟ್ಟಿದ್ದು ಮುಂದಿನ ಕ್ರಮ ಜರುಗಿಸಬೇಕು ಅಂತಾ ನೀಡಿದ ಅಜರ್ಿಯ ಸಾರಾಂಶದ ಆಧಾರದ ಮೇಲಿಂದ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದು ಇರುತ್ತದೆ.
                                                                           

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 101/2019 ಕಲಂ 78 (3) ಕೆ.ಪಿ ಕಾಯ್ದೆ:- ದಿನಾಂಕ: 18-09-2019 ರಂದು 02:45 ಪಿಎಮ್ ಕ್ಕೆ ಪಿ.ಎಸ್.ಐ ಸಾಹೇಬರು ಆನೂರ (ಬಿ) ಗ್ರಾಮದಲ್ಲಿ ಮಟಕಾ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಪ್ರಕಾರ ಅಸಂಜ್ಞೆಯ ಅಫರಾಧವಾಗುತಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪರವಾನಿಗೆ ಕೋರಿ ಪ್ರಕರಣ ದಾಖಲಿಸಿಕೊಳ್ಳಲು ವಿನಂತಿಸಿಕೊಂಡು ನ್ಯಾಯಾಲಯದ ಆದೇಶದಂತೆ ಜಪ್ತಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.101/2019 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 59/2019  ಕಲಂ 279 ಐಪಿಸಿ:-ದಿನಾಂಕ 18/09/2019 ರಂದು ಬೆಳಿಗ್ಗೆ 10 ಎಎಂ.ಕ್ಕೆ  ಪಿಯರ್ಾದಿ ಸಯ್ಯದ್ ಇಬ್ರಾಹಿಂ ತಂದೆ ಸಯ್ಯದ್ ಮಹೀಬೂಬ ಶಿಕಾರಿ  ವಯ;66 ವರ್ಷ, ಜಾ;ಮುಸ್ಲಿಂ, ಉ;ನಿವೃತ್ತ ಸೈನಿಕ, ಸಾ;ಮುಸ್ಲಿಂಪುರ ಯಾದಗಿರಿ ಇವರು ತಮ್ಮದೊಂದು ಅಜರ್ಿ ಫಿಯರ್ಾದು ನೀಡಿದ್ದರ ಸಾರಾಂಶವೇನೆಂದರೆ  ನಾನು ಸಯ್ಯದ್ ಇಬ್ರಾಹಿಂ ತಂದೆ ಸಯ್ಯದ್ ಮಹೀಬೂಬ ಶಿಕಾರಿ  ವಯ;66 ವರ್ಷ, ಜಾ;ಮುಸ್ಲಿಂ, ಉ;ನಿವೃತ್ತ ಸೈನಿಕ, ಸಾ;ಮುಸ್ಲಿಂಪುರ ಯಾದಗಿರಿ ಆಗಿದ್ದು ತಮ್ಮಲ್ಲಿ ಈ ಮೂಲಕ ಪಿಯರ್ಾದು ನೀಡುವುದೇನೆಂದರೆ ನಿನ್ನೆ ದಿನಾಂಕ 17/09/2019 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನನ್ನ ಅಳಿಯನಾದ ಅತ್ತಿಕುರ ರೆಹಮಾನ್ ತಂದೆ ಅಬ್ದುಲ್ ಜಲೀಲ್ ಇವರಿಗೆ ಸೇರಿದ ಕಾರ್ ನಂಬರ ಕೆಎ-33, ಎ-9640 ನೇದ್ದನ್ನು ತೆಗೆದುಕೊಂಡು ರೇಲ್ವೇ ಸ್ಟೇಷನ್ಗೆ ಕೆಲಸದ ನಿಮಿತ್ಯ ಹೋಗಿ ಬರೋಣವೆಂದು ಕೇಳಿದಾಗ ಆಯಿತು ನಡೀರಿ ಅಂತಾ ಕಾರಿನಲ್ಲಿ ಕುಳಿತುಕೊಂಡು ಮುಸ್ಲಿಂಪುರ ದಿಂದ ಹೊರಟೆವು ಆಗ ಮಾರ್ಗ ಮದ್ಯೆ ವಾಟರ್ ಪಂಪ್ ಹೌಸ್ ಹತ್ತಿರ ನನ್ನ ಅಳಿಯ ಅತ್ತಿಕುರ ರೆಹಮಾನ್ ಈತನು ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ರಸ್ತೆ ಮೇಲೆ ಹಠಾತ್ತನೆ ದನವೊಂದು ಬಂದಾಗ ಕಾರಿಗೆ ಒಮ್ಮೊಲೆ  ಬ್ರೇಕ್ ಹಾಕಿದಾಗ ಕಾರ್ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬಲಕ್ಕೆ ಪಲ್ಟಿ ಮಾಡಿದನು. ಸದರಿ ಅಪಘಾತದಲ್ಲಿ ನನಗೆ ಮತ್ತು ನನ್ನ ಅಳಿಯ ಅತ್ತಿಕುರ ರೆಹಮಾನ್ ಈತನಿಗೆ ಯಾವುದೇ ಗಾಯ, ವಗೈರೆ ಆಗಿರುವುದಿಲ್ಲ, ಕಾರಿನ ಬಲಗಡೆ ಎರಡು ಡೋರಗಳು ಜಖಂ ಗೊಂಡಿರುತ್ತವೆ. ಇದೇ ರಸ್ತೆ ಮಾರ್ಗವಾಗಿ ಹೊರಟಿದ್ದ ನಮ್ಮ ಸಂಬಂಧಿ ಮಹ್ಮದ್ ಜಾಫರ್ ತಂದೆ ಇಸ್ಮಾಯಿಲ್ ಲಾಹೋರಿ ಇವರು ಬಂದು ನಮಗೆ ಅಪಘಾತದ ಬಗ್ಗೆ ವಿಚಾರಿಸಿರುತ್ತಾರೆ.  ಈ ಘಟನೆ ಬಗ್ಗೆ ಮನೆಯ ಹಿರಿಯರಲ್ಲಿ ವಿಚಾರಿಸಿ ತಡವಾಗಿ ಇಂದು ದಿನಾಂಕ 18/09/2019 ರಂದು ಠಾಣೆಗೆ ಹಾಜರಾಗಿ ಪಿಯರ್ಾದು ನೀಡುತ್ತಿದ್ದು ಕಾರ್ ಚಾಲಕ ಅತ್ತಿಕುರ ರೆಹಮಾನ್ ಈತನ ವಿರುದ್ದ ಕಾನೂನಿನ ಮುಂದಿನ ಕ್ರಮ ಜರುಗಿಸಿ ಅಂತಾ ವಿನಂತಿ ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 59/2019 ಕಲಂ 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
     
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ.:- 99/2019 ಕಲಂ, 279, 338, ಐಪಿಸಿ ಸಂಗಡ 187 ಐಎಂವಿ ಯಾಕ್ಟ :- ದಿನಾಂಕ: 18/09/2019 ರಂದು 08.15 ಪಿಎಮ್ ಕ್ಕೆ ಶ್ರೀ. ಶ್ರೀ. ಮಲ್ಲಪ್ಪ ತಂದೆ ಭಾಗಪ್ಪ ನಾಯ್ಕೋಡಿ ವಯಾ: 30 ವರ್ಷ ಉ: ಡೈವರ ಜಾ: ಕಬ್ಬಲಿಗ ಸಾ: ಮಹಲ್ ರೋಜಾ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಈ ದೂರು ಅಜರ್ಿ ನೀಡಿದ್ದು, ಸದರಿ ಅಜರ್ಿ ಸಾರಂಶ ಏನಂದರೆ,  ನಮ್ಮ ತಂದೆಯವರಿಗೆ ನಾವು 03 ಜನ ಗಂಡು ಮಕ್ಕಳಿದ್ದು, ನಮ್ಮ ಅಣ್ಣ ಮರೆಪ್ಪ ತಂದೆ ಭಾಗಪ್ಪ ಈತನಿಗೆ ಒಬ್ಬಳು ಮಗಳು ಇರುತ್ತಾಳೆ. ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತಾನೆ.ದಿನಾಂಕ: 15/09/2019 ರಂದು ಸಾಯಂಕಾಲ 06.30 ಪಿಎಂ ಸುಮಾರಿಗೆ ನಮ್ಮ ಅಣ್ಣ ಮರೆಪ್ಪ ತಂದೆ ಭಾಗಪ್ಪ ಈತನು ತಾನು ಸಗರ ಗ್ರಾಮಕ್ಕೆ ಹೋಗಿ ಕ್ರೀಮಿನಾಶಕ ಎಣ್ಣಿ ತಗೆದುಕೊಂಡು ಹೊಲದಲ್ಲಿಯ ಮನೆಗೆ ಹೋಗುತ್ತೇನೆ ಅಂತಾ ಹೇಳಿ ನಮ್ಮ ಪಕ್ಕದ ಹೊಲದವರಾದ ಪರಶುರಾಮ ತಂದೆ ಗೂಳಪ್ಪ ಪೂಜಾರಿ ಇವನೊಂದಿಗೆ ನಮ್ಮ ಮೋಟಾರ ಸೈಕಲ್ ನಂ: ಕೆಎ-33-ವಿ-6678 ನೇದ್ದನ್ನು ತಗೆದುಕೊಂಡು ಹೋಗಿದ್ದನು. ನಂತರ ಅಂದಾಜು 07.40 ಪಿಎಂ ಸುಮಾರಿಗೆ ಪರಶುರಾಮ ಈತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೇನಂದರೆ, ನಾನು ನಿಮ್ಮ ಅಣ್ಣ ಮರೆಪ್ಪನ ಮೋಟಾರ ಸೈಕಲ್ ಮೇಲೆ ಹಿಂದೆ ಕುಳಿತು ಸಗರ ದಿಂದ ನಮ್ಮ ಯಲ್ಲಮ್ಮನ ಗುಡ್ಡದ ಹತ್ತಿರ ಇರುವ ನಮ್ಮ ಹೊಲದಲ್ಲಿಯ ಮನಗೆಳಿಗೆ ಹೋಗುವ ಕುರಿತು ಸಗರ ಎಕ್ಕಿಗಡ್ಡಿ ರೋಡಿನಲ್ಲಿಂದ ಹೋಗುತ್ತಿದ್ದಾಗ ಅಂದಾಜು 07.30 ಪಿಎಂ ಸುಮಾರಿಗೆ ನಿಮ್ಮ ಅಣ್ಣ ಮರೆಪ್ಪ ಈತನು ನಿಮ್ಮ ಮೋಟಾರ ಸೈಕಲ ನಂ: ಕೆಎ-33-ವಿ-6678 ನೇದ್ದನ್ನು ನಿದಾನವಾಗಿ ನಡೆಸಿಕೊಂಡು ಗುಡಗುಂಟಿಯವರ ಗುಡಿಸಲುಗಳ ಸಮೀಪ ಇರುವ ಹಳ್ಳದ ಬ್ರೀಡ್ಜ ಇನ್ನು 100 ಮೀಟರ ದೂರ ಇರುವಾಗ ಎದರುಗಡೆಯಿಂದ ಒಂದು ಮೋಟಾರ್ ಸೈಕಲ್ ಸವಾರ ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುವದನ್ನು ನೋಡಿ ನಿಮ್ಮ ಅಣ್ಣ ಮರೆಪ್ಪನು ನಾವು ಕುಳಿತು ಹೊರಟಿದ್ದ ಮೋಟಾರ್ ಸೈಕಲನ್ನು ಸೈಡಿನಲ್ಲಿ ನಿದಾನಮಾಡಿ ನಿಲ್ಲಿಸಿದನು, ಆದರೂ ಎದುರಿನಿಂದ ಅತೀವೇಗದಿಂದ ಮೋಟಾರ ಸೈಕಲ ನಡೆಸಿಕೊಂಡು ಬಂದ ವ್ಯಕ್ತಿಯು ನಮ್ಮ ಮೋಟಾರ ಸೈಕಲಕ್ಕೆ ಮತ್ತು ಮರೆಪ್ಪನ ಬಲಗಾಲಿಗೆ ಜೋರಾಗಿ ಡಿಕ್ಕಿ ಪಡೆಸಿದ ಆಗ ನಾವು ಕೆಳಗೆ ಬಿದ್ದೆವು, ನನಗೆ ಅಲ್ಲಲ್ಲಿ ಸಣ್ಣ ಪುಟ್ಟ ಒಳಪೆಟ್ಟಾಗಿರುತ್ತವೆ. ಆದರೆ ಮರೆಪ್ಪನ ಬಲಗಾಲಿನ ಮೋಳಕಾಲಿನ ಕೆಳಗೆ ಮುರಿದಂತೆ ಭಾರಿಗಾಯವಾಗಿ, ಬಲಗಾಲಿನ ಹಿಮ್ಮಡಿ ಹತ್ತಿರ ರಕ್ತಗಾಯ ಆಗಿರುತ್ತದೆ. ನೀನು ಬೇಗ ಬಾ ಅಂತಾ ತಿಳಿಸಿದ ಕೂಡಲೆ ನಾನು ಮಲ್ಲಪ್ಪ ತಂದೆ ಮರೆಪ್ಪ ಒಂಟೂರ ಇಬ್ಬರು ಕೂಡಿ ಹೋಗಿ ವಾಹನಗಳ ಲೈಟಿನ ಬೆಳಕಿನಲ್ಲಿ ನೋಡಿ ವಿಚಾರಿಸಿದಾಗ ಅಪಘಾತ ಆದ ಸಮಯದಲ್ಲಿ ಸಗರ ಕಡೆಯಿಂದ ಬಂದ ನಮ್ಮೂರಿನ ರೇವಣಸಿದ್ದ ತಂದೆ ಚಂದಪ್ಪ ನಾಯ್ಕೋಡಿ ಇವರು ಅಪಘಾತ ನೋಡಿದ್ದು, ಪರಶುರಾಮ ಮತ್ತು ರೇವಣಸಿದ್ದ ಇಬ್ಬರು ಕೂಡಿ ನಮ್ಮ ಅಣ್ಣನಿಗೆ ಎಬ್ಬಿಸಿ ಕೂಡಿಸಿದ್ದರು. ನಾವು ಹೋಗಿ ನೋಡಲಾಗಿ ನಮ್ಮ ಅಣ್ಣ ಮರೆಪ್ಪನ ಬಲಗಾಲಿನ ಕೆಳಗೆ ಮುರಿದ ಭಾರಿ ಗಾಯವಾಗಿದ್ದು, ಬಲಗಾಲಿನ ಹಿಮ್ಮಡಿಗೆ ರಕ್ತಗಾಯ ಆಗಿತ್ತು. ಅಪಘಾತ ಮಾಡಿದ ಮೋಟಾರ್ ಸೈಕಲ ನಂಬರ ನೋಡಲಾಗಿ ಬಜಾಜ ಡಿಸ್ಕವರಿ ವಾಹನ ನಂ: ಕೆಎ-33-ಜೆ-9023 ಅಂತಾ ಇದ್ದು ಅದನ್ನು ನಡೆಸಿದವನಿಗೆ ವಿಚಾರಿಸಿದಾಗ ಸದರಿಯವನು ತನ್ನ ಹೆಸರು ರಫಿಕ ತಂದೆ ದಿವಾನಸಾಬ ಸಾ:ಯುಕೆಪಿ ಕ್ಯಾಂಪ ದೊಡ್ಡ ಸಗರ ತಾ:ಶಹಾಪೂರ ಅಂತಾ ತಿಳಿಸಿದನು. ನಾವು ನಮ್ಮ ಅಣ್ಣನ ಕಡೆಗೆ ಲಕ್ಷ ವಹಿಸಿದಾಗ ಅಪಘಾತ ಮಾಡಿದ ರಫೀಕ ತಂದೆ ದಿವಾನಸಾಬ ಈತನು ಜನರಲ್ಲಿ ಮರೆಯಾಗಿ ಹೋಗನು. ನಂತರ ನಾನು ಪರಶುರಾಮ, ಮಲ್ಲಪ್ಪ ಮತ್ತು ರೇವಣಸಿದ್ದ ಎಲ್ಲರು ನಮ್ಮ ಅಣ್ಣನಿಗೆ ಶಹಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತೇವೆ. ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಮೀರಜ ಜಿ.ಎಸ್.ಕುಲ್ಕಣರ್ಿ ಆಸ್ಪತ್ರೆಗೆ ಸೇರಿಕೆ ಮಾಡಿ ತಡವಾಗಿ ಇಂದು ದಿನಾಂಕ:18/09/2019 ರಂದು ಠಾಣೆಗೆ ಬಂದು ಅಜರ್ಿ ಕೊಟ್ಟಿರುತ್ತೇವೆ.ಕಾರಣ ನಮ್ಮ ಅಣ್ಣನು ತನ್ನ ಮೋಟಾರ್ ಸೈಕಲನ್ನು ಸೈಡಿನಲ್ಲಿ ತಗೆದುಕೊಂಡು ನಿಂತಿದ್ದರು ಎದಿರಿನಿಂದ ಮೋಟಾರ್ ಸೈಕಲ್ ನಂ: ಕೆಎ-33-ಜೆ-9023 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿಪಡೆಸಿ ಅಪಘಾತ ಮಾಡಿ ನಮ್ಮ ಅಣ್ಣ ಮರೆಪ್ಪನಿಗೆ ಭಾರಿ ಗಾಯ ಮಾಡಿದ ರಫೀಕ ತಂದೆ ದಿವಾನಸಾಬ ಸಾ; ಸಗರ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 99/2019 ಕಲಂ, 279, 338 ಐಪಿಸಿ ಸಂಗಡ 187 ಐಎಂವಿ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!