ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 15-09-2019

By blogger on ಭಾನುವಾರ, ಸೆಪ್ಟೆಂಬರ್ 15, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 15-09-2019 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 57/2019  ಕಲಂ 279,  337, 338 ಐಪಿಸಿ:-ದಿನಾಂಕ 15/09/2019 ರಂದು ಸಾಯಂಕಾಲ 5 ಪಿ.ಎಂ.ಕ್ಕೆ  ಯಾದಗಿರಿ ಜಿಜಿಎಚ್ ನಿಂದ ಆರ್.ಟಿ.ಎ ಎಮ್.ಎಲ್.ಸಿ ಅಂತಾ ಪೋನ್ ಮೂಲಕ ಮಾಹಿತಿ ನೀಡಿದ್ದರಿಂದ ಆಸ್ಪತ್ರೆಗೆ ಬಂದು ವಿಚಾರಿಸಲಾಗಿ ಆಸ್ಪತ್ರೆಯಲ್ಲಿ ಗಾಯಾಳುಗಳು ಉಪಚಾರ ಹೊಂದುತ್ತಿದ್ದು ಆಗ ಆಸ್ಪತ್ರೆಯಲ್ಲಿ ಇದ್ದ ಗಾಯಾಳು ಪಿಯರ್ಾದಿ ಶ್ರೀಮತಿ ಅಮೀನಾಬಿ  ಗಂಡ ಮಹಮದ್ ಮೌಲಾನಾ  ಲದಾಪ್  ವಯ; 60 ವರ್ಷ, ಜಾ;ಮುಸ್ಲಿಂ, ಉ;ಮನೆಗೆಲಸ, ಸಾ;ಅಜೀಜ್ ಕಾಲೋನಿ, ಯಾದಗಿರಿ ಇವರು ತಮ್ಮದೊಂದು ಹೇಳಿಕೆ ಫಿಯರ್ಾದು ನೀಡಿದ್ದರ ಸಾರಾಂಶವೇನೆಂದರೆ ನಾನು ಮನೆಗೆಲಸ  ಮಾಡಿಕೊಂಡು ಉಪಜೀವಿಸುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ 14/09/2019 ರಂದು ಸಾಯಂಕಾಲದ ಸುಮಾರಿಗೆ ನಾನು ಮತ್ತು ನನ್ನ ಗಂಡ ಮಹ್ಮದ್ ಮೌಲಾನಾ ವಯ;70 ವರ್ಷ,  ನನ್ನ ನಾದಿನಿ ಜೈನಬಿ ಗಂಡ ಶರೀಫ್ಸಾಬ ಗಾದಿವಾಲೆ, ನನ್ನ ಮೊಮ್ಮಗ ಮಹ್ಮದ್ ಪಾಜೀಲ್ ಸೇರಿಕೊಂಡು ಅರಿಕೇರಾ(ಕೆ) ಗ್ರಾಮದಲ್ಲಿ ನಮ್ಮ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದ ಕಾರಣ ನಮ್ಮದೇ ಆಟೋ ನಂಬರ ಕೆಎ-33, ಎ-5354 ನೇದ್ದನ್ನು ತೆಗೆದುಕೊಂಡು ಹೋಗಿದ್ದು ಇರುತ್ತದೆ. ಆಟೋವನ್ನು ನನ್ನ ಗಂಡನು ಚಾಲನೆ ಮಾಡಿಕೊಂಡು ಬಂದಿದ್ದು ಇರುತ್ತದೆ. ಇಂದು ದಿನಾಂಕ 15/09/2019 ರಂದು ಬೆಳಿಗ್ಗೆ  11  ಗಂಟೆ ಸುಮಾರಿಗೆ ಕಾರ್ಯಕ್ರಮ ಮುಗಿಸಿಕೊಂಡು ಅರಿಕೇರಾ(ಕೆ) ಗ್ರಾಮದಿಂದ ಯಾದಗಿರಿಗೆ ಮರಳಿ ಅದೇ ಆಟೋದಲ್ಲಿ ಹೊರಟೆವು. ಬರುವಾಗ ಮಾರ್ಗ ಮದ್ಯೆ ರಾಮಸಮುದ್ರ ದಾಟಿದ ಮುಂಡರಗಿ ಗ್ರಾಮದ ಹತ್ತಿರ ನನ್ನ ಗಂಡನು ಬೇಗ ಹೋದರಾಯಿತು ಅಂತಾ ಆಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೊರಟಾಗ ಅದೇ ಸಮಯಕ್ಕೆ ರಸ್ತೆ ಬದಿಯಲ್ಲಿಂದ ಒಂದು ದನವು ಹಠಾತ್ತನೆ ರಸ್ತೆ ಬಂದಾಗ ನನ್ನ ಗಂಡನು ದನಕ್ಕೆ ಡಿಕ್ಕಿ ಆಗುತ್ತೆಂದು ಒಮ್ಮೊಲೆ ಕಟ್ ಹೊಡೆದಾಗ ಆಟೋದ ಮೇಲಿನ ತನ್ನ ಚಾಲನೆ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಆಟೋವನ್ನು ಪಲ್ಟಿ ಮಾಡಿದನು ಸದರಿ ಅಪಘಾತದಲ್ಲಿ ನನಗೆ ಎಡಭುಜಕ್ಕೆ ಒಳಪೆಟ್ಟು, ಎರಡು ಮೊಣಕಾಲುಗಳಿಗೆ ತರಚಿದ ರಕ್ತಗಾಯವಾಗಿರುತ್ತವೆ. ಆಟೋದಲ್ಲಿದ್ದ ನನ್ನ ಮೊಮ್ಮಗ ಮಹಮದ್ ಪಾಜೀದ್ ಈತನಿಗೆ ತಲೆಗೆ ರಕ್ತಗಾಯ ಮತ್ತು ಎಡಕಾಲಿನ ಪಾದದ ಮೇಲೆ ಬಾರೀ ರಕ್ತಗಾಯವಾಗಿದ್ದು ಇರುತ್ತದೆ ಹಾಗೂ ನಾದಿನಿ ಜೈನಬಿ ಇವರಿಗೆ ತಲೆಗೆ ಗುಪ್ತಗಾಯ, ಎಡಗೈಗೆ, ಎಡಗಾಲಿಗೆ ತರಚಿದ ಗಾಯಗಳಾಗಿದ್ದು ಇರುತ್ತದೆ. ಆಟೋ ಚಾಲನೆ ಮಾಡುತ್ತಿದ್ದ ನನ್ನ ಗಂಡ ಮಹ್ಮದ್ ಮೌಲಾನಾ ಇವರಿಗೆ ತಲೆಗೆ, ಎಡಭುಜಕ್ಕೆ ರಕ್ತಗಾಯ, ಎಡಗಾಲಿನ ತೊಡೆಗೆ, ಮೊಣಕಾಲು ಕೆಳಗೆ ಗುಪ್ತಗಾಯವಾಗಿದ್ದು ಇರುತ್ತದೆ. ಸದರಿ ಅಪಗಾತವು ಇಂದು ದಿನಾಂಕ 15/09/2019 ರಂದು 12 ಪಿ.ಎಂ.ದ ಸುಮಾರಿಗೆ ಹೈದ್ರಾಬಾದ್-ಯಾದಗಿರಿ  ಮುಖ್ಯ ರಸ್ತೆ ಮೇಲೆ ಮುಂಡರಗಿ ಗ್ರಾಮದ ಹತ್ತಿರ ಜರುಗಿದ್ದು ಇರುತ್ತದೆ. ಈ ಘಟನೆ ಬಗ್ಗೆ ನಾನು ಜೈನಬಿ ಮಕ್ಕಳಾದ ಗುಲಾಮ ದಸ್ತಗಿರ, ಮಹಮದ್ ಶಾಲಂ ಇವರಿಗೆ ಪೋನ್ ಮಾಡಿ ಘಟನೆ ಬಗ್ಗೆ ತಿಳಿಸಿರುತ್ತೇನೆ ಸ್ವಲ್ಪ ಸಮಯದ ನಂತರ ಘಟನಾ ಸ್ಥಳಕ್ಕೆ ಗುಲಾಮ ದಸ್ತಗಿರ ಹಾಗೂ ಮಹ್ಮದ್ ಶಾಲಂ ಇಬ್ಬರು ಬಂದು ನಮಗೆ ಅಪಘಾತದ ಬಗ್ಗೆ ವಿಚಾರಿಸಿರುತ್ತಾರೆ. ಆಗ ಸ್ಥಳಕ್ಕೆ 108 ಅಂಬುಲೆನ್ಸ್ ಬಂದಾಗ ನಮಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿರುತ್ತಾರೆ. ನನ್ನ ಗಂಡನಿಗೆ ಉಪಚಾರ ನೀಡಿದ ಯಾದಗಿರಿ ಸಕರ್ಾರಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ  ಆಸ್ಪತ್ರೆಗೆ  ಹೋಗಲು ತಿಳಿಸಿದ್ದು ಇರುತ್ತದೆ.    ಹೀಗಿದ್ದು ಈ ಘಟನೆಯು ಇಂದು ದಿನಾಂಕ 15/09/2019 ರಂದು 12-30 ಪಿ.ಎಂ.ಕ್ಕೆ  ಹೈದ್ರಾಬಾದ್-ಯಾದಗಿರಿ  ಮುಖ್ಯ ರಸ್ತೆ ಮೇಲೆ ಬರುವ ಮುಂಡರಗಿ ಗ್ರಾಮದ ಹತ್ತಿರ ಮುಖ್ಯ ರಸ್ತೆಯ ಮೇಲೆ ಆಟೋ ನಂಬರ ಕೆಎ-33, ಎ-5354 ನೇದ್ದನ್ನು ನನ್ನ ಗಂಡನು  ಅತೀವೇಗ ಮತ್ತು ಅಲಕ್ಷ್ಯತನದಿಂದ ಜರುಗಿದ್ದು ಈ ಘಟನೆಯ ಬಗ್ಗೆ ನಮ್ಮ ಮನೆಯ ಹಿರಿಯರಲ್ಲಿ ವಿಚಾರಿಸಿ ತಡವಾಗಿ ಪಿಯರ್ಾದು ನೀಡುತ್ತಿದ್ದು  ಕಾನೂನಿನ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಪಡೆದುಕೊಂಡು ಮರಳಿ ಪೊಲೀಸ್ ಠಾಣೆಗೆ 6-30 ಪಿ.ಎಂ.ಕ್ಕೆ ಬಂದು  ಪಿಯರ್ಾದಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 57/2019 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.  


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 58/2019  ಕಲಂ 279,  337, 338 ಐಪಿಸಿ:-ದಿನಾಂಕ 15/09/2019 ರಂದು ಸಾಯಂಕಾಲ 4-30 ಪಿ.ಎಂ. ಸುಮಾರಿಗೆ ಯಾದಗಿರಿ ನಗರದ ಲುಂಬಿನಿ ಗಾರ್ಡನ್ ಹತ್ತಿರ ಬರುವ ಸಭಾ ಕಾಲೇಜು  ಮುಂದಿನ ಮುಖ್ಯ ರಸ್ತೆ ಮೇಲೆ ಈ ಕೇಸಿನ ಫಿಯರ್ಾದಿ ಮತ್ತು ಆರೋಪಿತ ಇಬ್ಬರು ಸೇರಿಕೊಂಡು ಮೋಟಾರು ಸೈಕಲ್ ನಂಬರ ಕೆಎ-32, ಇ.ಎಸ್-5009 ನೇದ್ದರ ಮೇಲೆ ಯಾದಗಿರಿ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದ ಕಡೆಯಿಂದ ಅಂಬೇಡ್ಕರ್ ನಗರದ ಕಡೆಗೆ ಹೊರಟಾಗ ಆರೋಪಿತ ಗಾಯಾಳು ನೂರಂದ ಈತನು ಮೋಟಾರು ಸೈಕಲ್ನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ  ನಡೆಸಿಕೊಂಡು ಹೋಗುತ್ತಿದ್ದಾಗ ರಸ್ತೆ ಮೇಲೆ ಹಠಾತ್ತನೆ ದನವೊಂದು ಅಡ್ಡ ಬಂದಾಗ ಮೋಟಾರು ಸೈಕಲ್ ನೆದ್ದರ  ಬ್ರೇಕ್  ಒಮ್ಮೊಲೆ ಹಾಕಿದಾಗ  ಮೋಟಾರು ಸೈಕಲ್ ಚಾಲನೆ ಮೇಲಿನ ನಿಯಂತ್ರಣ ತಪ್ಪಿ ಸ್ಕಿಡ್ಡಾಗಿ ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ಪಿಯರ್ಾದಿಗೆ ಹಣೆಗೆ, ಮುಖಕ್ಕೆ , ಸೊಂಟಕ್ಕೆ ತರಚಿದ ರಕ್ತಗಾಯಗಳಾಗಿದ್ದು ಮತ್ತು ಮೋಟಾರು ಸೈಕಲ್ ಸವಾರ ನೂರಂದ ಈತನಿಗೆ ಹಣೆಗೆ, ತಲೆಗೆ ಭಾರೀ ರಕ್ತಗಾಯವಾಗಿ ಬೇವುಶ್ ಆಗಿರುತ್ತಾನೆ ಈ ಘಟನೆಯು ನೂರಂದ ಈತನ ಅತೀವೇಗ ಮತ್ತು ಅಲಕ್ಷ್ಯತನದಿಂದ ಜರುಗಿದ್ದು ಆತನ ಮೇಲೆ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಇರುತ್ತದೆ.  
                                                                                        

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 103/2019  ಕಲಂ: 143,147,148,323,324,307,504,506  ಸಂಗಡ 149 ಐಪಿಸಿ:-ದಿನಾಂಕ 15/09/2019 ರಂದು 12-15 ಪಿ ಎಮ್ ಕ್ಕೆ ಫಿರ್ಯದಿ ಅಜರ್ಿದಾರರಾದ ಶ್ರೀ ಬಸನಗೌಡ ತಂದೆ ಸಿದ್ರಾಮಪ್ಪಗೌಡ ರಾಮತೀರ್ಥ ವಯಾ|| 55 ಜಾ|| ಲಿಂಗಾಯತ ರಡ್ಡಿ ಉ|| ಒಕ್ಕಲುತನ ಸಾ|| ವಂದಗನೂರ ತಾ|| ಸುರಪುರ ರವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಧಿ ಅಜರ್ಿ ಸಾರಾಂಶವೇನಂದರೆ ನನ್ನ ತಮ್ಮನಾದ ಭೀಮನಗೌಡ ತಂದೆ ಸಿದ್ರಾಮಪ್ಪಗೌಡ ರಾಮತೀರ್ಥ ಈತನು ನಮ್ಮೂರ ರಾಮಣ್ಣ ಮಾಸ್ತರ ಇವರ ಹೊಲವನ್ನು ಪಾಲಿಗೆ ಮಾಡಿದ್ದು ಸದರಿಯವನು ಪಾಲಿಗೆ ಮಾಡಿದ ಹೊಲದ ಕೆಳಗೆ ನಮ್ಮ ಜನಾಂಗದ ಚಂದ್ರಶೇಖರ ತಂದೆ ಸೋಮನಗೌಡ ಬೆನಕಪ್ಪಗೋಳ ಈವರ ಹೊಲವಿದ್ದು ಸದರಿಯವರು ತಮ್ಮ ಹೊಲಕ್ಕೆ ನೀರು ತೆಗೆದುಕೊಳ್ಳುವ ವಿಷಯದಲ್ಲಿ ನಮ್ಮ ತಮ್ಮನ್ನೊಂದಿಗೆ ತಕರಾರು ಮಾಡಿ ಆತನೊಂದಿಗೆ ಹಗೆತನ ಸಾಧಿಸುತ್ತಿದ್ದರು. ಹೀಗಿದ್ದು ಇಂದು ದಿನಾಂಕ 15/09/2019 ರಂದು ಬೆಳಿಗ್ಗೆ 08-30 ಗಂಟೆಗೆ ನಮ್ಮ ತಮ್ಮ ಭೀಮನಗೌಡ ಹಾಗು ನಾನು ಮ್ಮು ಇನ್ನೊಬ್ಬ ತಮ್ಮನಾದ ಅಪ್ಪಾಸಾಹೇಬಗೌಡ ಹಾಗು ನಮ್ಮೂರ ಪ್ರಕಾಶ ಕೂಚಬಾಳ ಮಲ್ಲನಗೌಡ ತಂದೆ ನಾನಾಗೌಡ ಪಾಟೀಲ ನಾವೆಲ್ಲರೂ ಮಾತನಾಡುತ್ತಾ ನಮ್ಮೂರ ಮೌನೇಶ್ವರ ಗುಡಿಯ ಹತ್ತಿರ ಕುಳಿತಾಗ ನಮ್ಮೂರ ನಮ್ಮ ಜನಾಂಗದ 1] ಚಂದ್ರಶೇಖರ ತಂದೆ ಸೋಮನಗೌಡ ಬೆನಕಪ್ಪಗೋಳ 2] ಅಪ್ಪಾಸಾಹೇಬಗೌಡ ತಂದೆ ಗೌಡಪ್ಪಗೌಡ ಬೆನಕಪ್ಪಗೋಳ 3] ಗೌಡಪ್ಪಗೌಡ ತಂದೆ ಭೀಮನಗೌಡ ಮಾಡಗಿ 4] ಶಾಂತಗೌಡ ತಂದೆ ಗೌಡಪ್ಪಗೌಡ ಬೆನಕಪ್ಪಗೋಳ 5] ಮಲ್ಲನಗೌಡ ತಂದೆ ಗೌಡಪ್ಪಗೌಡ ಬೆನಕಪ್ಪಗೋಳ ಈ ಎಲ್ಲಾ ಜನರು ಕೈಯಲ್ಲಿ ಕಟ್ಟಿಗೆ, ಕಲ್ಲು ಹಾಗು ಕಬ್ಬಿಣದ ರಾಡು ಹಿಡಿದುಕೊಂಡು ಗುಂಪು ಕಟ್ಟಿಕೊಂಡು ನಮ್ಮ ತಮ್ಮ ಭಿಮನಗೌಡ ಈತನ ಹತ್ತಿರ ಬಂದವರೇ ಎಲ್ಲರೂ ಏನಲೇ ಸೂಳೆ ಮಗನೇ ನಮ್ಮ ಹೊಲಕ್ಕೆ ನೀರು ಬಿಡಲ್ಲಾ ಮಗನೇ ಅಂತ ಅಂದಾಗ ನಮ್ಮ ತಮ್ಮನು ನೀರು ನಿಮ್ಮ ಹೊಲಕ್ಕೆ ಬಿಟ್ಟಿದ್ದೇನೆ ಅಂತ ಅಂದಾಗ ಸದರಿಯವರೆಲ್ಲರೂ ಕೊಲೆ ಮಾಡುವ ಉದ್ದೇಶದಿಂದ ಈ ಸೂಳೇ ಮಗನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಹೊಡೆ-ಬಡೆ ಮಾಡುತ್ತಿದ್ದಾಗ ಅವರಲ್ಲಿಯ ಚಂದ್ರಶೇಖರ ಈತನು ತನ್ನ ಕೈಲ್ಲಿದ್ದ ಕಬ್ಬಿಣದ ರಾಡಿನಿಂದ ಕೊಲೆ ಮಾಡುವ ಉದ್ದೇಶದಿಂದ ನಮ್ಮ ತಮ್ಮ ಭೀಮನಗೌಡ ಈತನ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದನು. ಮತ್ತು ಅಪಾಸಾಹೇಬಗೌಡ ಈತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಬೀಮನಗೌಡ ಈತನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಮಲ್ಲನಗೌಡ ಬೆನಕಪ್ಪಗೋಳ ಈತನು ತನ್ನ ಕ್ದೈಯಲ್ಲಿದ್ದ ಕಲ್ಲಿನಿಂದ ತಮ್ಮ ಬೀಮನಗೌಡ ಈತನ ಎಡಗೈ ಮೊಳಕೈ ಹತ್ತಿರ ಭಲವಾಗಿ ಹೊಡೆದು ಗುಪ್ತಗಾಯ ಪಡಿಸಿದನು. ನಂತರ ನನ್ನ ತಮ್ಮನು ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದಾಗ ಉಳಿದವರು ಕಾಲಿನಿಂದ ಒದೆಯುತ್ತಿದ್ದಾಗ ನಮ್ಮ ತಮ್ಮ ಬೀಮನಗೌಡ ಈತನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನಾನು ಹಾಗು ನನ್ನ ಇನ್ನೊಬ್ಬ ತಮ್ಮ ಅಪ್ಪಾಸಾಹೇಬಗೌಡ ತಂದೆ ಸಿದ್ರಾಮಪ್ಪಗೌಡ, ಪ್ರಕಾಶ ಕೂಚಬಾಳ ಹಾಗು ಮಲ್ಲನಗೌಡ ಪಾಟೀಲ ನಾವೂ ನಾಲ್ಕು ಜನರು ಕೂಡಿ ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡೆವು. ನಂತರ ಸದರಿಯವರೆಲ್ಲರೂ ಹೊಡೆಯುವದನ್ನು ಬಿಟ್ಟು ಇನ್ನು ಮುಂದೆ ನಮಗೆ ನೀರು ಬೀಡದೇ ಹೋದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಕಾರಣ ಹೊಲದ ನೀರು ತೆಗೆದುಕೊಳ್ಳುವ ವಿಷಯದಲ್ಲಿ ಮೇಲ್ಕಾಣಿಸಿದ ಐದು ಜನರು ತಮ್ಮ ಭಿಮನಗೌಡ ಈತನಿಗೆ ಕೊಲೆಮಾಡುವ ಉದ್ದೇಶದಿಂದ ಕಲ್ಲು, ಕಟ್ಟಿಗೆ ಹಾಗು ಕಬ್ಬಿಣದ ರಾಡಿನಿಂದ ಹೊಡೆಬಡೆ ಮಾಡಿ ರಕ್ತಗಾಯ ಹಾಗು ಗುಪ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಕಾರಣ ಸದರ ಐದು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ  ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 103/2019 ಕಲಂ 143 147 148 323 324 307 504 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 104/2019  ಕಲಂ: 143,147,148,341,323,324,307,504,506 ಸಂಗಡ 149 ಐಪಿಸಿ:-ದಿನಾಂಕ 15/09/2019 ರಂದು 12-15 ಪಿ ಎಮ್ ಕ್ಕೆ ಫಿರ್ಯದಿ ಅಜರ್ಿದಾರರಾದ ಅಪ್ಪಾಸಾಹೇಬ ತಂದೆ ಗೌಡಪ್ಪಗೌಡ ಪಾಟೀಲ ವಯಾ|| 45 ಜಾ|| ಲಿಂಗಾಯತ ರಡ್ಡಿ ಉ|| ಒಕ್ಕಲುತನ ಸಾ|| ವಂದಗನೂರ ತಾ|| ಸುರಪುರ ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನಂದರೆ, ನಮ್ಮ ಹೊಲ ಹಾಗು ರಾಮಣ್ಣ ಮಾಸ್ತರ ಇವರ ಹೊಲ ಆಜುಬಾಜು ಇದ್ದು ಸದರ ಹೊಲವನ್ನು ನಮ್ಮ ಜನಾಂಗದ ಭಿಮನಗೌಡ ತಂದೆ ಸಿದ್ರಾಮಪ್ಪಗೌಡ ರಾಮತೀರ್ಥ ಇವರು ಲಿಜಿಗೆ ಹಾಕಿಕೊಂಡಿದ್ದು ನಮ್ಮ ಹೊಲಕ್ಕೆ ನೀರು ಬರಬೇಕಾದರೆ ಭಿಮನಗೌಡ ಈತನು ಪಾಲಿಗೆ ಮಾಡಿದ ರಾಮಣ್ಣ ಮಾಸ್ತರ ಇವರ ಹೊಲದಿಂದ ನೀರು ಬರಬೇಕು ಅದರೆ ಸದರಿಯವನು ನಮಗೆ ನೀರು ಕಡದೇ ವಿನಾಕಾರಣ ನಮ್ಮೊಂದಿಗೆ ಹಗೆತನ ಸಾಧಿಸುತ್ತಿದ್ದನು. ದಿನಾಂಕ 15/09/2019 ರಂದು ಬೆಳಿಗ್ಗೆ 08-30 ಗಂಟೆಗೆ ನಾನು ಹಾಗು ನಮ್ಮ ಸಂಬಂದಿಯಾದ ಯಮನಪ್ಪಗೌಡ ತಂದೆ ಭೀಮನಗೌಡ ಹಾಗು ಚಂದ್ರಶೇಖರ ತಂದೆ ಸೋಮನಗೌಡ ನಾವು ಮೂರು ಜನರು ಕೂಡಿಹೊಲಕ್ಕೆ ಹೋಗುವ ಕುರಿತು ಎತ್ತಿನ ಬಂಡಿ ತೆಗೆದುಕೊಂಡು  ನಮ್ಮೂರ  ಮೌನೇಶ್ವರ ಗುಡಿಯ ಹತ್ತಿರ ಹಾದು ಹೋಗುತ್ತಿದ್ದಾಗ ಅಲ್ಲಿಯೇ ಕುಳಿತಿದ್ದ ಬೀಮನಗೌಡ ರಾಮತೀರ್ಥ ಈತನಿಗೆ ನಮ್ಮ ಹೊಲಕ್ಕೆ ಏಕೇ? ನೀರು ಬಿಡುತ್ತಿಲ್ಲ ಅಂತ ಅಂದಾಗ ಅಲ್ಲಿಯೇ ಕುಳಿತ್ತಿದ್ದ ನಮ್ಮ ಜನಾಂಗದ 1] ಮಲ್ಲಿಕಾಜರ್ುನ ತಂದೆ ಸಿದ್ರಾಮಪ್ಪಗೌಡ ರಾಮತೀರ್ಥ 2] ಸಂಜೀವರಡ್ಡಿ ತಂದೆ ಬಸನಗೌಡ ರಾಮತೀರ್ಥ 3] ಅಪ್ಪಾಸಾಹೇಬಗೌಡ ತಂದೆ ಸಿದ್ರಾಮಪ್ಪಗೌಡ ರಾಮತೀರ್ಥ 4] ಕುಮಾರಗೌಡ ತಂದೆ ಅಪ್ಪಾಸಾಹೇಬಗೌಡ ರಾಮತೀರ್ಥ 5] ಬಸನಗೌಡ ತಂದೆ ಸಿದ್ರಾಮಪ್ಪಗೌಡ ರಾಮತೀರ್ಥ 6] ಭಿಮನಗೌಡ ತಂದೆ ಸಿದ್ರಾಮಪ್ಪಗೌಡ ರಾಮತೀರ್ಥ 7] ಬೀಮನಗೌಡ ತಂದೆ ಅಪ್ಪಾಸಾಬಗೌಡ ರಾಮತೀರ್ಥ ಈ ಎಲ್ಲಾ ಜನರು ಕೈಯಲ್ಲಿ ಕಟ್ಟಿಗೆ, ಕಲ್ಲು ಹಾಗು ಕಬ್ಬಿಣದ ರಾಡು ಹಿಡಿದುಕೊಂಡು ಗುಂಪು ಕಟ್ಟಿಕೊಂಡು ನಮ್ಮ ಹತ್ತಿರ ಬಂದವರೇ ಎಲ್ಲರೂ ಏನಲೇ ಸೂಳೆ ಮಕ್ಕಳೆ  ನಿಮ್ಮ ಹೊಲಕ್ಕೆ ನೀರು ಬಿಡಲ್ಲಾ ಮಕ್ಕಳೆ ಏನೂ ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿರಿ ಅಂತ ಅನ್ನುತ್ತಾ  ಸದರಿಯವರೆಲ್ಲರೂ ಕೊಲೆ ಮಾಡುವ ಉದ್ದೇಶದಿಂದ ಈ ಸೂಳೇ ಮಕ್ಕಳ  ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಹೊಡೆ-ಬಡೆ ಮಾಡುತ್ತಿದ್ದಾಗ ಅವರಲ್ಲಿಯ ಬೀಮನಗೌಡ ರಾಮತೀರ್ಥ ಈತನು ನನಗೆ ಕಬ್ಬಿಣದ ರಾಡಿನಿಂದ ನನಗೆ ತಲೆಗೆ ಹಾಗು ಎಡಗೈ ಮಣಿಕಟ್ಟಿನ ಹತ್ತಿರ ಹೊಡೆದು ರಕ್ತಗಾಯ ಪಡಿಸಿದನು. ಯಮನಪ್ಪಗೌಡ ಈತನಿಗೆ ಸಂಜೀವರಡ್ಡಿ ತಂದೆ ಬಸನಗೌಡ ಈತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಹಾಗು ಬಲಗಡೆ ಮುಂಡಿಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ. ಹಾಗು ನಮ್ಮ ಜೊತೆಯಲ್ಲಿದ್ದ ಚಂದ್ರಶೇಖರ ಈತನಿಗೆ ಬಸನಗೌಡ ತಂದೆ ಸಿದ್ರಾಮಪ್ಪಗೌಡ ಈತನು ಅಲ್ಲಿಯೇ ಬಿದ್ದ ಕಲ್ಲಿನಿಂದ ಎಡಕಿವಿಗೆ ಹೊಡೆದು ರಕ್ತಗಾಯ ಪಡಿಸಿ ಗುಪ್ತಗಾಯ ಪಡಿಸಿರುತ್ತಾನೆ. ನಂತರ ನಾವೆಲ್ಲರೂ  ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದಾಗ ಉಳಿದವರು ಕಾಲಿನಿಂದ ಒದೆಯುತ್ತಿದ್ದಾಗ ಅಲ್ಲಿಯೇ ಇದ್ದ ತಿರುಪತಿ ಸುರಪೂರ,ಹುಲಗಪ್ಪ ಸುರಪೂರ ಮತ್ತು ಗೌಡಪ್ಪ ಸುರಪೂರ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರೆಲ್ಲರೂ ಹೊಡೆಯುವದನ್ನು ಬಿಟ್ಟು ಇನ್ನು ಮುಂದೆ ನೀರು ಬೀಡಬೇಕು ಅಂತ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಕಾರಣ ಹೊಲದ ನೀರು ತೆಗೆದುಕೊಳ್ಳುವ ವಿಷಯದಲ್ಲಿ ಮೇಲ್ಕಾಣಿಸಿದ ಏಳು ಜನರು ಕೊಲೆಮಾಡುವ ಉದ್ದೇಶದಿಂದ ಕಲ್ಲು, ಕಟ್ಟಿಗೆ ಹಾಗು ಕಬ್ಬಿಣದ ರಾಡಿನಿಂದ ಹೊಡೆಬಡೆ ಮಾಡಿ ರಕ್ತಗಾಯ ಹಾಗು ಗುಪ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಕಾರಣ ಸದರ ಐದು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 104/2019 ಕಲಂ 143 147 148 341,323 324 307 504 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!