ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 13-09-2019

By blogger on ಶುಕ್ರವಾರ, ಸೆಪ್ಟೆಂಬರ್ 13, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 13-09-2019 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ:- 74/2019 ಕಲಂ. 143,147,323,144,504,506, ಸಂ. 149 ಐಪಿಸಿ ಮತ್ತು ಕಲಂ. 3(1)ಡಿ,   ಛಿ/ಣ ಕಚಿ ಂಛಿಣ-1989:- ದಿನಾಂಕ; 13/09/2019 ರಂದು 8-15 ಪಿಎಮ್ ಕ್ಕೆ ಶ್ರೀ ಹೊನ್ನಪ್ಪ ತಂ. ಗಂಗಪ್ಪ ತಿಪ್ಪಯ್ಯನೊರ ವಃ 18 ವರ್ಷ ಜಾಃ ಬೇಡರು(ಪ.ಪಂ) ಸಾಃ ನಾಗಲಾಪೂರ ತಾ;ಜಿ; ಯಾದಗಿರಿ ಹೇಳಿಕೆ ನೀಡಿದ್ದರ ಸಾರಾಂಶವೆನೆಂದರೆ, ಮೇಲಿನ ವಿಳಾಸದವನಿದ್ದು ಟಂಟಂ ಅಟೋ ಚಾಲಕನಾಗಿ ಕೆಲಸ ಮಾಡಿಕೊಂಡು ಉಪಜೀವನ ಮಾಡುತ್ತೇನೆ. ದಿನಾಂಕ.11/09/2019 ರಂದು ಮೊಹರಂ ಕೊನೆಯದಿನದಂದು ನಮ್ಮ ಗ್ರಾಮದಲ್ಲಿ ಮಸೀದಿ ಹತ್ತಿರ ಅಲಾಯಿ ದೇವರ ಕುಣಿಯ ಹತ್ತಿರ ಅಗ್ಗಿ ಸುತ್ತಲು ನಾನು ಮತ್ತು ನಮ್ಮೂರಿನ ಈತರರು ಅಂದರೆ ನಮ್ಮ ಜಾತಿಯವರು ಹಾಗೂ ಈತರೆ ಜಾತಿಯವರೆಲ್ಲರೂ ಕೂಡಿಕೊಂಡು ಅಲಾಯಿ ಪದ ಹಾಡುತ್ತಾ ಹೆಜ್ಜೆ ಹಾಕುತ್ತಾ ಕುಣಿಯುತ್ತಿರುವಾಗ ಕಬ್ಬಲಿಗ ಜನಾಂಗದ ಕೆಲವರು ನನ್ನ ಕಾಲು ಪದೇ ಪದೇ ತುಳಿಯುತ್ತಿದ್ದರು ಆಗ ಅವರ ಪೈಕಿ ರವಿ ತಂ. ಸಣ್ಣ ಬುಗ್ಗಪ್ಪ ಈರಪ್ಪನೊರ ಜಾಃ ಕಬ್ಬಲಿಗ ಈತನಿಗೆ ಯಾಕೆ ಪದೇ ಪದೇ ನನ್ನ ಕಾಲು ತುಳಿಯುತ್ತಿದ್ದಿರಿ ನನ್ನ ಕಾಲು ತುಳಿದರೆ ನಾನು ಹೇಗೆ ಹಜ್ಜೆ ಹಾಕುವುದು ಅಂತಾ ಅಂದಾಗ ಅವನು ನನ್ನ ಸಂಗಡ ತಕರಾರು ಮಾಡಿದ್ದನು ಆಗ ನಾನು ಮೊಹರಂ ನೋಡಲು ಬಂದಿದ್ದ ನಮ್ಮ ಮನೆಯವರಿಗೆ ತಿಳಿಸಿದಾಗ ಮಾತಿಗೆ ಮಾತು ಬೆಳೆದು  ನಮಗೂ ಮತ್ತು  ಕಬ್ಬಲಿಗ ಜನಾಂಗದವರಿಗೂ ತಕರಾರು ಆಗಿದ್ದು ನಂತರ ಈ ವಿಷಯದ ಬಗ್ಗೆ ಊರಲ್ಲಿ ಹಿರಿಯವರು ನ್ಯಾಯ ಪಂಚಾಯತಿ ಮಾಡಿ ಸಮಸ್ಯೆ ಬಗೆಹರಿಸಿದ್ದರು. ನಂತರ ನಾನು ನಿನ್ನೆ ದಿನಾಂಕ;12/09/2019 ರಂದು ನಾನು ನನ್ನ ಟಂಟಂದಲ್ಲಿ ಪ್ಯಾಸೆಂಜರುಗಳನ್ನು ತುಂಬಿಕೊಂಡು ನಾಗಲಾಪೂರದಿಂದ ಯಾದಗಿರಿಗೆ ಮದ್ಯಾಹ್ನ 1-00 ಗಂಟೆ ಸುಮಾರಿಗೆ ಗಂಜ ಹತ್ತಿರ ಇರುವ ಇಂದಿರಾ ಕ್ಯಾಂಟಿನ ಮುಂದುಗಡೆ ಬಂದು ಪ್ಯಾಸೆಂಜರಗಳಿಗೆ ಇಳಿಸಿ ಗಂಜದಲ್ಲಿರುವ ಒಂದು ಗ್ಯಾರೆಜ್ದಲ್ಲಿ ಟಂಟಂದ ಅಯಿಲ್ ಚೆಂಜ್ ಮಾಡಿಸುತ್ತಿರುವಾಗ ಆಗ ನಮ್ಮೂರಿನ ರವಿ ತಂದೆ ಸಣ್ಣಬುಗ್ಗಪ್ಪ ಈರಪ್ಪನೊರ ಜಾಃ ಕಬ್ಬಲಿಗ ಈತನು ತಮ್ಮ ಟಂಟಂದಲ್ಲಿ ಬಂದನು ಅವನ ಸಂಗಡ ಇನ್ನೂ ನಾಲ್ಕು ಜನರಿದ್ದು ಮುಖಕ್ಕೆ ದಸ್ತಿ ಕಟ್ಟಿಕೊಂಡಿದ್ದರು. ಆಗ ರವಿ ಈತನು ಲೇ ಮಗನೇ ಹೊನ್ನ್ಯಾ ಮೊಹರಂದಲ್ಲಿ ಜಗಳಾ ಮಾಡುತ್ತಿ ಅಂತಾ ಅಂದಾಗ ನಾನು ಅವನಿಗೆ ಯಾಕೆ ಅಂತಾ ಕೇಳಿದ್ದಕ್ಕೆ ಅವನ ಸಂಗಡ ಇನ್ನೂ ನಾಲ್ಕು ಜನರು ಮುಖಕ್ಕೆ ದಸ್ತಿ ಕಟ್ಟಿಕೊಂಡವರು ಅವರಲ್ಲಿ ರವಿ ಮಾತ್ರ ದಸ್ತಿ ಕಟ್ಟಿಕೊಂಡಿರಲಿಲ್ಲಾ. ಆಗ ನಮ್ಮೂರಿನ ರವಿ ಈತನು ಇದೇ ಬ್ಯಾಡ ಸೂಳೇ ಮಗ ಮೊಹರಂದಲ್ಲಿ ನಮ್ಮ ಸಂಗಡ ಜಗಳ ಮಾಡಿದ್ದು ಇವನಿಗೆ ಇವತ್ತು ಜೀವ ಸಹಿತ ಬಿಡಬೇಡಿರಿ ಅಂತಾ ಅಂದನು ಆಗ ನಾನು ಯಾಕೆ ಬೈಯುತ್ತಿರಿ ಊರಲ್ಲಿ ಹಿರಿಯರು ಇದರ ಬಗ್ಗೆ ನ್ಯಾಯ ಪಂಚಾಯತಿ ಮಾಡಿದರೂ ಕೂಡಾ ಮತ್ತೆ ಯಾಕೆ ನನ್ನ ಸಂಗಡ ಜಗಳಾ ಮಾಡುತ್ತಿ ಅಂತಾ ಅಂದಾಗ ಅವನ ಸಂಗಡ ಇದ್ದವರು ಏನ್ ನ್ಯಾಯಾ ಪಂಚಾಯತಿ ಮಾಡತ್ತಾರಲೆ ಸೂಳೆ ಮಗನೇ ಇವತ್ತು ನಿನ್ನ ಸೊಕ್ಕ ಅಡಗಿಸ್ತಿವಿ ಅಂತಾ ಅಂದವರೆ ಅವರಲ್ಲಿ ರವಿ ಈತನು ನನಗೆ ಕೈಯಿಂದ ಕಪಾಳಕ್ಕೆ ಹೊಡೆದು ಕಾಲಿನಿಂದ ನನ್ನ ಪಕ್ಕೆಗೆ ಒದ್ದಾಗ  ಅವನ ಸಂಗಡ ಇದ್ದ ನಾಲ್ಕು ಜನರ ಪೈಕಿ ಒಬ್ಬನು ನನಗೆ ಕೈ ಮುಷ್ಟಿ ಮಾಡಿ ಹೊಟ್ಟೆಗೆ ಗುದ್ದಿದ್ದು ಇನ್ನೋಬ್ಬನೂ ತಲೆಯ ಎಡಗಡೆ ಕೈ ಮುಷ್ಟಿ ಮಾಡಿ ಗುದ್ದಿದ್ದು, ರವಿ ಈತನು ಈ ಸೂಳೆ ಮಗನಿಗೆ ಎಷ್ಟು ಸೊಕ್ಕ ನಮ್ಮ ಸಂಗಡ ಜಗಳ ಮೊಹರಂದಲ್ಲಿ ಮಾಡ್ತಾನಾ ಇನ್ನೊಂದು ಸಲ ನಮ್ಮ ತಂಟೆಗೆ ಬರದ ಹಾಗೆ ಹೊಡೆಯಿರಿ ಅಂತಾ ಅವರಿಗೆ ಕುಮ್ಮಕ್ಕು ನೀಡಿದಾಗ ಆಗ ಇನ್ನೊಬ್ಬನೂ ಕಾಲಿನಿಂದ ನನಗೆ ಬೆನ್ನಿಗೆ ಎಡಗೈ ರಟ್ಟೆಗೆ ಒದ್ದನು, ಆಗ ಇನ್ನೋಬ್ಬನು ನನಗೆ ನೆಲಕ್ಕೆ ಹಾಕಿ ಕಾಲಿನಿಂದ ಹೊಟ್ಟೆಗೆ, ಕಾಲುಗಳಿಗೆ ಒದ್ದನು, ಆಗ ನಾನು ಚೀರಾಡುತ್ತಿರುವಾಗ ಅಲ್ಲೆ ಬೇರೆ ಬೇರೆ ಊರಿಂದ ಬಂದವರು ಮತ್ತು ಊರಿಗೆ ಹೋಗಲು ನಿಂತಿದ್ದ ಜನರು ಜಗಳ ಬಿಡಿಸಿರುತ್ತಾರೆ. ನನಗೆ ಹೊಡೆ ಬಡೆ ಮಾಡಿದವರ ಪೈಕಿ ನಮ್ಮ ಊರಿನ ರವಿ ತಂ. ಸಣ್ಣಬುಗ್ಗಪ್ಪ ಈರಪ್ಪನೊರ ಪರಿಚಯವಿದ್ದು ಉಳಿದವರು ಮುಖಕ್ಕೆ ದಸ್ತಿ ಕಟ್ಟಿಕೊಂಡಿದ್ದರಿಂದ ಅವರನ್ನು ಗುತರ್ಿಸಲು ಆಗಿರುವುದಿಲ್ಲಾ ಅವರ ಹೆಸರುಗಳ ಗೊತ್ತಾಗಿರುವುದಿಲ್ಲಾ 20-30 ವರ್ಷದ ಒಳಗಿನವರಿದ್ದು ನಂತರ ನಾನು ನಮ್ಮ ತಂದೆ ಗಂಗಪ್ಪನಿಗೆ ಪೋನ ಮಾಡಿದಾಗ ಆಗ ನನ್ನ ತಂದೆ ಮತ್ತು ನಮ್ಮ ಕಾಕ ಸಾಬಣ್ಣ ತಂ.ಯಲ್ಲಪ್ಪ, ನಮ್ಮ ಅಣ್ಣ ಪರಶುರಾಮ ತಂ. ಗಂಗಪ್ಪ ಕೂಡಿಕೊಂಡು ಯಾದಗಿರಿ ಬಂದು ನನಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಆಗ ನಾನು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ಪೊಲೀಸರು ಬಂದು ನನಗೆ ವಿಚಾರಿಸಲು, ಪೊಲೀಸರಿಗೆ ನಾನು ನಮ್ಮ ಹಿರಿಯರಿಗೆ ವಿಚಾರಿಸಿ ನಂತರ ಠಾಣೆಗೆ ಬಂದು ಪಿರ್ಯಾಧಿ ನೀಡುತ್ತೆನೆ ಅಂತಾ ತಿಳಿಸಿದ್ದರಿಂದ, ಇಂದು ದಿನಾಂಕ;13/09/2019 ರಂದು ತಡವಾಗಿ ಠಾಣೆಗೆ ಬಂದು ಪಿರ್ಯಾಧಿ ಹೇಳಿಕೆೆ ನೀಡುತ್ತಿದ್ದು ಕಾರಣ ನನಗೆ ಹೊಡೆಬಡೆ ಮಾಡಿ ಜಾತಿ ನಿಂದನೆ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಿರಿ ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.74/2019 ಕಲಂ.143.147.323,114,504,506 ಸಂ.149 ಐಪಿಸಿ ಮತ್ತು ಕಲಂ. 3(1)ಡಿ, ಛಿ/ಣ ಕಚಿ ಂಛಿಣ-1989 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!