ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 02-09-2019

By blogger on ಮಂಗಳವಾರ, ಸೆಪ್ಟೆಂಬರ್ 3, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ  02-09-2019

ಗೋಗಿ ಪೊಲೀಸ್ ಠಾಣೆ :- ಗುನ್ನೆ ನಂ 97/2019  ಕಲಂ: 302, 201 ಐಪಿಸಿ :- ದಿನಾಂಕ 02/09/2019 ರಂದು 10.05 ಎ.ಎಂ ಕ್ಕೆ ಅಜರ್ಿದಾರರಾದ ಶ್ರೀ ಮಹಾದೇಬಪ್ಪ ತಂದೆ ಮಾನಿಂಗಯ್ಯ ನಾಟಿಕಾರ ವಯ:26 ಜಾ: ಹರಿಜನ ಉ: ಕೂಲಿ ಸಾ: ಖಾನಾಪೂರ ಎಸ್.ಕೆ ಹಾ.ವ ಬೂದನೂರ ಇವರು ಠಾಣೆಗೆ ಹಾಜರಾಗಿ ಅಜರ್ಿ ನಿಡಿದ್ದು, ಸದರ ಅಜರ್ಿಯ ಸಾರಂಶವೆನಂದರೆ, ನನ್ನ ತಂದೆ ತಾಯಿಗೆ ಮೂರು ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಇರುತ್ತೇವೆ. ಅದರಂತೆ ನಮ್ಮದು ಸ್ವಂತ ಊರು, ಖಾನಾಪೂರ ಇದ್ದು, ನನ್ನ ತಾಯಿಯ ತವರು ಮನೆ ಬೂದನೂರ ಆಗಿರುತ್ತದೆ. ಈಗ ಹತ್ತು ವರ್ಷ ದಿಂದ ದುಡುದು ತಿನ್ನಲು ಬೂದನೂರ ಗ್ರಾಮಕ್ಕೆ ಬಂದು ಇದ್ದೇವು, ನನ್ನ ದೊಡ್ಡ ಅಣ್ಣ ತೀರಿದ ಮೇಲೆ ಇನ್ನೊಬ್ಬ ಅಣ್ಣನಾದ ಮಲ್ಲಿಕಾಜರ್ುನ ತಂದೆ ಮಾನಿಂಗಪ್ಪ ಈತನ ಹೆಂಡತಿ ಸಂಗೀತಾ ಇವಳು ನಗನೂರ ಪಂಚಾಯತಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರಿಂದ ಅವಳು ಅಲ್ಲೆ ಖಾನಾಪೂರದಲ್ಲಿ ಮನೆ ಮಾಡಿಕೊಂಡು ಇದ್ದಾಳೆ, ನನ್ನ ಅಣ್ಣನಾದ ಮಲ್ಲಿಕಾಜರ್ುನ ಈತನು ಹೆಂಡತಿಯ ಹತ್ತಿರ ಹೊಗುವದು ಬರುವದು ಮಾಡುತ್ತಾ ಬೂದನೂರದಲ್ಲಿಯೇ ಇರುತ್ತಿದ್ದನು. ಹೀಗೆ ಇದ್ದು, ನಿನ್ನೆ ದಿನಾಂಕ: 01/09/2019 ರಂದು ಸಾಯಂಕಾಲದ ವೇಳೆ ನನ್ನ ಅಣ್ಣ ಮಲ್ಲಿಕಾಜರ್ುನ ಈತನು ಚಾಮನಾಳ ಸಂತೆಗೆ ಹೋಗಿ ಮರಳಿ ಮನೆಗೆ ಬಂದು ನಂತರ ಸಾಯಂಕಾಲ ಏಳರ ಮೇಲೆ ಮನೆಯಲ್ಲಿ ಊಟ ಮಾಡಿ ಹೊರಗಡೆ ಊರ ಒಳಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೊದನು. ಆಗ ನಾವು ಮನೆಯಲ್ಲಿ ಊಟ ಮಾಡಿ ಮಲಗಿ ಕೊಳ್ಳಲು ತಯಾರಾದಾಗ ಇನ್ನು ಹೊರಗಡೆ ಹೊದ ಮಲ್ಲಿಕಾಜರ್ುನ ಮನೆಗೆ ಬರಲಿಲ್ಲ. ಊರಲ್ಲಿ ಮೊಹರಂ ಗುದ್ದಲಿ ಹಾಕುತ್ತಾರೆ ಅದನ್ನು ಮುಗಿಸಿಕೊಂಡು ಬರಬಹುದು ಅಂತಾ ನಾವು ಮನೆಯಲ್ಲಿ ಮಲಗಿಕೊಂಡೆವು, ಬೆಳಿಗ್ಗೆ ಇಂದು ಸುಮಾರು ಎಳು ಗಂಟೆಯ ಸುಮಾರಿಗೆ ನಮ್ಮ ಓಣಿಯಲ್ಲಿ ಸುದ್ದಿಯಾಗಿ ನನ್ನ ಅಣ್ಣ ಮಲ್ಲಿಕಾಜರ್ುನ ಈತನಿಗೆ ನಮ್ಮುರ ಶಾಲೆಯ ಕೋಣೆಯ ಮುಂದಿನ ಕಟ್ಟಿಮೇಲೆ ಕೋಲೆ ಮಾಡಿ ಸಾಯಿಸಿದ್ದಾರೆ ಅಂತಾ ಸುದ್ದಿ ಏದ್ದಾಗ ನಾನು ಮತ್ತು ನನ್ನ ಕುಟುಂಬದವರು ನಮ್ಮ ಓಣಿಯ ಜನ ಕೂಡಿ ಶಾಲೆಯ ಹತ್ತಿರ ಬಂದು ನೋಡಲಾಗಿ ನನ್ನ ಅಣ್ಣ ಮಲ್ಲಿಕಾಜರ್ುನ ಈತನಿಗೆ ಭಾರಿ ರಕ್ತ ಮಾಡಿ ಕೋಲೆ ಮಾಡಿ ಸಾಯಿಸಿದ್ದು ಕಂಡುಬಂದಿರುತ್ತದೆ. ಮೃತ ದೇಹವನ್ನು ನೋಡಲಾಗಿ ನನ್ನ ಅಣ್ಣ ಮಲ್ಲಿಕಾಜರ್ುನನ ವಯಸ್ಸು 34 ಈತನಿಗೆ, ಯಾರೋ ವ್ಯಕ್ತಿಗಳು, ಯಾವುದೊ ಉದ್ದೇಶಕ್ಕಾಗಿ ಕೋಲೆ ಮಾಡಿ ಸಾಯಿಸಿದ್ದು ಕಂಡು ಬಂದಿರುತ್ತದೆ. ಈ ಘಟನೆಯು ದಿನಾಂಕ: 01/09/2019 ರ ಮತ್ತು 02/09/2019 ರ ದಿನದ ಮಧ್ಯ ರಾತ್ರಿಯ ವೇಳೆಯಲ್ಲಿ ಜರುಗಿರಬಹುದು.ಆದ್ದರಿಂದ ನನ್ನ ಅಣ್ಣನಿಗೆ ಕೋಲೆ ಮಾಡಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 97/2019 ಕಲಂ: 302, 201 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.   
  
ಗುರಮಠಕಲ್ ಪೊಲೀಸ್ ಠಾಣೆ :- ಗುನ್ನೆ ನಂ 143/2019 ಕಲಂ 279, 337, 338 ಐಪಿಸಿ:-ದಿನಾಂಕ 02.09.2019 ರಂದು ಮಧ್ಯಾಹ್ನ 12:30 ಗಂಟೆಗೆ ಫಿರ್ಯಾದಿದಾರಳು ಮತ್ತು ಈತರರು ಇಟಕಲ್ ತಾಂಡಾ ದಿಂದ ತಮ್ಮ-ತಮ್ಮ ಕೆಲಸದ ಮೇಲೆ ಟಂ ಟಂ ನಂಬರ್ ಕೆಎ-33-ಎ-9873 ನೇದ್ದಲ್ಲಿ ಕುಳಿತು ಗುರುಮಠಕಲ್ ಕಡೆಗೆ ಬರುತ್ತಿದ್ದಾಗ ಗುರುಮಠಕಲ್ ಪಟ್ಟಣದ ಆರಾಧನ ಶಾಲೆಯ ಹತ್ತಿರ ಕಾಕಲವಾರ-ಗುರುಮಠಕಲ್ ನಡುವೆ ರೋಡಿನ ಮೇಲೆ ಟಂ ಟಂನ ಎದುರಿಗೆ ಗುರುಮಠಕಲ್ ಕಡೆಯಿಂದ ಕಾಕಲವಾರ ಕಡೆಗೆ ಹೋಗುತ್ತಿದ್ದ ಮೋಟಾರು ಸೈಕಲ್ ನಂ: ಎಪಿ-28-ಡಿ.ಎಸ್.-4265 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಟಂ ಟಂ ಬಲಬದಿಗೆ ಗುದ್ದಿ ಮುಂದೆ ಹೋಗಿ ಬಿದ್ದು ಗಾಯಗೊಂಡಿದ್ದು ಸದರಿ ಅಪಘಾತದಲ್ಲಿ ಫಿರ್ಯಾದಿಗೆ ಸಾಧಾ ಸ್ವರೂಪದ ಗುಪ್ತಗಾಯವಾಗಿದ್ದು ಎಪಿ-28-ಡಿ.ಎಸ್.-4265 ನೇದ್ದರ ಚಾಲಕನಿಗೆ ಭಾರಿ ರಕ್ತಗಾಯವಾಗಿದ್ದ ಬಗ್ಗೆ ಫಿರ್ಯಾದಿದಾರಳು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 143/2019 ಕಲಂ 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.  

ಶಹಾಪೂರ ಪೊಲೀಸ್ ಠಾಣೆ :- ಗುನ್ನೆ ನಂ 226/2019. ಕಲಂ 87 ಕೆ.ಪಿ.ಆಕ್ಟ:- ದಿನಾಂಕ: 02-09-2019 ರಂದು 4:50 ಪಿ.ಎಮ್.ಕ್ಕೆ  ಆರೋಪಿತರು ರಸ್ತಾಪೂರ ಗ್ರಾಮದ ಶರಭಲಿಂಗೇಶ್ವರ ದೇವಸ್ಥಾನದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು 52 ಇಒಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದಾಗ  ಫಿಯರ್ಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿಮಾಡಿ 10 ಜನರನ್ನು ಹಿಡಿದು ಅವರಿಂದ 1)  ನಗದು ಹಣ 12350/- 2) 52 ಇಸ್ಪೀಟ ಎಲೆಗಳು ಅ.ಕಿ.00=00 ಗಳನ್ನು  ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ಕ್ರಮ ಜರುಗಿಸಿಸಲು ಸೂಚಿಸಿದ್ದು ಸದರಿ ಅಪರಾಧವು ಅ ಸಂಜ್ಞೇಯವಾಗಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಮಡು ಠಾಣೆ ಗುನ್ನೆ ನಂ.226/2019 ಕಲಂ. 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು. ಇದೆ. 

ಸೈದಾಪೂರ ಪೊಲೀಸ್ ಠಾಣೆ :- ಗುನ್ನೆ ನಂ 92/2019 ಕಲಂ.143,147,148,447, 323,324,504,506 ಸಂಗಡ 149 ಐಪಿಸಿ:-ದಿನಾಂಕ: 02-09-2019 ರಂದು ಬೆಳಿಗ್ಗೆ 11-00 ಗಂಟೆಗೆ ಪಿಯರ್ಾಧಿ ದಾರನಾದ ಅಯ್ಯಪ್ಪ ತಂದೆ ಭೀಮಶಪ್ಪ ಮಾಳಪ್ಪನೋರ ವ|| 40 ವರ್ಷ ಜಾ|| ಕುರಬರ ಉ|| ಒಕ್ಕಲುತನ  ಸಾ|| ಕರಣಿಗಿ ತಾ|| ಗುರಮಿಠಕಲ್ ಜಿ|| ಯಾದಗಿರಿ ಇತನು ಠಾಣೆಗೆ ಹಾಜರಾಗಿ  ಹೇಳಿಕೆ ನೀಡಿದ್ದೆನೆಂದರೆ ದಿನಾಂಕ: 01-09-2019 ರಂದು ಬೆಳಿಗ್ಗೆ 09-00 ಗಂಟೆಗೆ ನಮ್ಮ ಕರಣಿಗಿ ಸಿಮಾಂತರದಲ್ಲಿ ನಮ್ಮ ಹೊಲದಲ್ಲಿ ಇರುವಾಗ ಆರೋಪಿತರೆಲ್ಲರು ಸೇರಿಕೊಂಡು ಬಂದು ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆಬಡೆ ಮಾಡಿ ಎದೆಯ ಮೇಲಿನ ಅಂಗಿ ಹಿಡಿದು ಅಡ್ಡ ಗಟ್ಟಿ ನಿಲ್ಲಿಸಿ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ 

ಭೀ.ಗುಡಿ ಪೊಲೀಸ್ ಠಾಣೆ :- ಗುನ್ನೆ ನಂ 102/2019 ಕಲಂ 341, 323, 354, 504, 506 ಸಂಗಡ 34 ಐಪಿಸಿ:- ಮಲ್ಲಾಬಾದಿ ಸೀಮಾಂತರದಲ್ಲಿರುವ ಸವರ್ೆ ನಂ:72 ರಲ್ಲಿ 6 ಎಕರೆ 14 ಗುಂಟೆ ಹೊಲದ ವಿಷಯದಲ್ಲಿ ಫಿಯರ್ಾದಿ ಮತ್ತು ಆರೋಪಿತರ ನಡುವೆ ಸಿವಿಲ್ ವ್ಯಾಜ್ಯ ನಡೆದಿದ್ದು ದಿನಾಂಕ:01/09/2019 ರಂದು 12.30 ಪಿ.ಎಮ್. ಸುಮಾರಿಗೆ ಫಿಯರ್ಾದಿ ಮತ್ತು ಅವಳ ಮಗಳು ಕೂಡಿ ತಮ್ಮ ಮನೆ ದೇವರಾದ ಭೀ.ಗುಡಿಯ ಬಲಭೀಮರಾಯ ದೇವಸ್ಥಾನದ ಕಮಾನ ಹತ್ತಿರ ರೋಡಿನ ಮೇಲೆ ನಡೆದುಕೊಂಡು ಹೊರಟಾಗ ಆರೋಪಿತರು ಬಂದು ತಡೆದು ನಿಲ್ಲಿಸಿ ಎಲೇ ಭೋಸಡಿ ಸಿವಿಲ್ ಕೇಸ್ ವಾಪಸ್ ತಕ್ಕೋ ಅಂತಾ ಹೇಳಿದರೂ ನೀನು ಕೇಳುತ್ತಿಲ್ಲ, ನಿನ್ನ ಸೊಕ್ಕು ಬಹಳವಾಗಿದೆ ಅಂತಾ ಬೈದು ಎಳೆದಾಡಿ ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿಯರ್ಾದಿ ಅಜರ್ಿ.                        

ಹುಣಸಗಿ ಪೊಲೀಸ್ ಠಾಣೆ :- ಗುನ್ನೆ ನಂ 76/2019 ಕಲಂ 87  ಕೆ.ಪಿ ಯಾಕ್ಟ:- ದಿನಾಂಕ:02/09/2019 ರಂದು 16.10 ಗಂಟೆಯ ಸುಮಾರಿಗೆ ಆರೋಪಿತರು ರಘುನಾಥಪುರ ಕ್ಯಾಂಪಿನ ರೋಡಿನ ದಂಡೆಗೆ ಒಂದು ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಗುಂಪಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಶೀಭದ ಇಸ್ಲೀಟ್ ಜೂಜಾಟವನ್ನು ಆಡುತ್ತಿದ್ದಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಹೆಚ್.ಸಿ- 130 181 184 16 10(ಬಿ) ಪಿಸಿ-248, 233, 292, 87 ರವರೊಂದಿಗೆ ದಾಳಿ ಮಾಡಿ 15 ಜನರಿಗೆ ಹಿಡಿದುಕೊಂಡಿದ್ದು, ಆರೋಪಿತರಿಂದ ಮತ್ತು ಖಣದಿಂದಾ ಒಟ್ಟು 3360=00 ರೂ ನಗದು ಹಣ, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ. 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ :-ಗುನ್ನೆ ನಂ 55/2019 ಕಲಂ 279, 337, 304(ಎ)  ಐಪಿಸಿ:-ದಿನಾಂಕ  02/09/2019   ರಂದು ಸಾಯಂಕಾಲ 7-30 ಪಿ.ಎಂ. ದ ಸುಮಾರಿಗೆ ಯಾದಗಿರಿ ನಗರ ಚಿತ್ತಾಪುರ ಮುಖ್ಯ ರಸ್ತೆ ಮೇಲೆ ಬರುವ ಸಕರ್ಾರಿ ಪದವಿ ಪೂರ್ವ ಕಾಲೇಜು  ಹತ್ತಿರ  ಮುಖ್ಯ ರಸ್ತೆ ಮೇಲೆ   ಈ ಕೇಸಿನ ಮೃತನಾದ ರಮೇಶ ಈತನು ತನ್ನ ಮೋಟಾರು ಸೈಕಲ್ ನಂಬರ ಕೆಎ-33, ಕೆ-6095 ನೇದ್ದರ ಹಿಂಬದಿ ಸೀಟಿನ ಮೇಲೆ ಈ ಕೇಸಿನ ಗಾಯಾಳು ಗೋಪಾಲ ಈತನಿಗೆ ಕೂಡಿಸಿಕೊಂಡು ಯಾದಗಿರಿ ನಗರದ ಸುಭಾಷ್ ವೃತ್ತದ ಕಡೆಯಿಂದ ತಮ್ಮ ಉಮ್ಲಾನಾಯಕ ತಾಂಡಾದ ಕಡೆಗೆ ಹೊರಟಿದ್ದಾಗ ಮಾರ್ಗ ಮದ್ಯೆ ಮೃತ ರಮೇಶ ಈತನು ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಮೇಲೆ ಹೊರಟಿದ್ದ ದನಕ್ಕೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಮೋಟಾರು ಸೈಕಲ್ ನಡೆಸುತ್ತಿದ್ದ ಮೃತ ರಮೇಶನಿಗೆ ಸದರಿ ಅಪಘಾತದಲ್ಲಿ ತಲೆಯ ಹಿಂಭಾಗಕ್ಕೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯವಾಗಿ ಎರಡು ಕಿವಿಗಳಿಂದ ರಕ್ತ ಹೊರಬಂದಿದ್ದು, ಅಲ್ಲಲ್ಲಿ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಹಿಂಬದಿ ಸವಾರ ಗೋಪಾಲ ಈತನಿಗೆ ಕೂಡ ಎಡಗಾಲು ಪಾದದ ಮೇಲೆ ತರಚಿದ ರಕ್ತಗಾಯಗಳಾಗಿದ್ದು ಇರುತ್ತದೆ. ಈ ಘಟನೆಯು ಮೃತ ರಮೇಶ ಈತನ ಅತೀವೇಗ ಮತ್ತು ಅಲಕ್ಷ್ಯತನದಿಂದ ಜರುಗಿದ್ದು ಆತನ ಮೇಲೆ ಮುಂದಿನ ಕಾನೂನಿನ ಸೂಕ್ತ ಕ್ರಮ ಜರುಗಿಸಲು  ವಿನಂತಿ ಅಂತಾ ಹೇಳಿಕೆ ಪಿಯರ್ಾದು ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 55/2019 ಕಲಂ 279, 337, 304(ಎ) ಐಪಿಸಿ  ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡಿದ್ದು ಇರುತ್ತದೆ. ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!