ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 30-08-2019

By blogger on ಶುಕ್ರವಾರ, ಆಗಸ್ಟ್ 30, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 30-08-2019 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 225/2019 ಕಲಂ 279, 337, 304(ಎ) ಐಪಿಸಿ ಸಂಗಡ 187 ಐ.ಎಂ.ವಿ ಯಾಕ್ಟ:- ದಿನಾಂಕ: 30/082019 ರಂದು 8.45 ಪಿ.ಎಂ.ಕ್ಕೆ ಶಹಾಪುರ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ವಸೂಲಾದ ಪ್ರಯುಕ್ತ ಶಹಾಪುರ ಠಾಣೆಗೆ ಬೇಟಿಕೊಟ್ಟು ಗಾಯಾಳು ಶ್ರೀ ಸುನೀಲ್ ತಂ/ ಚಂದ್ರಶೇಖರ ಪಾಡಮುಕೆ ಸಾ|| ರಂಗಮಪೇಠ ಇವರ ಹೇಳಿಕೆ ಪಡೆದುಕೊಂಡಿದ್ದ ಸದರ ಹೇಳಿಕೆ ಸಾರಾಂಶವೇನೆಂದರೆ, ಇಂದು ದಿನಾಂಕ: 30/08/2019  ರಂದು ನಾನು ಮತ್ತು ನಮ್ಮ ಅಣತಮಕಿಯ ವಸಂತ ತಂ/ ಕೃಷ್ಣಾ ಪಾಡಮುಖೆ ಸಾ|| ರಂಗಮಪೇಠ ಇಬ್ಬರೂ ಕೂಡಿಕೊಂಡು ಮೊಟರ ಸೈಕಲ್ ನಂ. ಕೆಎ-17 ಡಬ್ಲೂ-2153 ನೇದ್ದರಲ್ಲಿ ಶಹಾಪುರಕ್ಕೆ ಬಂದು ಶಹಾಪುರದಲ್ಲಿ ಕೆಲಸ ಮುಗಿಸಿಕೊಂಡು ಮರಳಿ ರಂಗಮಪೇಟಕ್ಕೆ ಹೊರಟಿದ್ದಾಗ ನಮ್ಮೊಂದಿಗೆ ನಮ್ಮೂರ ಮಲ್ಲಿಕಾಜರ್ುನ ಟೊಣಪೆ ಮತ್ತು ಹಣಮಂತ ಮಡಿವಾಳ ಇಬ್ಬರು ಇನ್ನೊಂದು ಮೋಟರ ಸೈಕಲದಲ್ಲಿ ಹೊರಟಿದ್ದು, 7.00 ಪಿ.ಎಂ ಸುಮಾರಿಗೆ ಶಹಾಪುರ-ಹತ್ತಿಗುಡೂರ ಮುಖ್ಯ ರಸ್ತೆಯ ಹತ್ತಿಗುಡೂರ ಕೆ.ಇ.ಬಿ ದಾಟಿ 100 ಮೀಟರ ಅಂತರದಲ್ಲಿ ಹೊರಟಿದ್ದಾಗ ಎದುರಿನಿಂದ ಟಂ.ಟಂ.ಅಟೋ ನಂ. ಕೆಎ-32 ಸಿ-5591 ನೇದ್ದರ ಚಾಲಕನು ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟರ ಸೈಕಲಕ್ಕೆ ಡಿಕ್ಕಿಪಡಿಸಿದ ಪರಿಣಾಮ ನನಗೆ ಸಾಧಾ ಸ್ವರೂಪದ ಗಾಯಗಳಾಗಿದ್ದು, ವಸಂತನಿಗೆ ಭಾರೀ ರಕ್ತಗಾಯವಾಗಿ ಎರಡೂ ಕೈಗಳು ಮುರಿದಂತೆ ಕಂಡು ಬಂದಿದ್ದು, ಅಪಘಾತಪಡಿಸಿದ ಅಟೋ ಚಾಲಕನು ಅಲ್ಲಿಂದ ಓಡಿ ಹೋಗಿದ್ದು, ಸದರಿಯವನಿಗೆ ಇನ್ನೊಮ್ಮೆ ನೋಡಿದಲ್ಲಿ ಗುರುತಿಸುತ್ತೇನೆ. ನಂತರ ಸ್ಥಳಕ್ಕೆ ಬಂದ 108 ವಾಹನದಲ್ಲಿ ನಮ್ಮಿಬ್ಬರಿಗೆ ಹಾಕಿಕೊಂಡು ಶಹಾಪುರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ಉಪಚಾರ ಮಾಡಿದ ವೈಧ್ಯಾಧಿಕಾರಿಗಳು ವಸಂತನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಲು ತಿಳಿಸಿದಾಗ ಮಲ್ಲಿಕಾಜರ್ುನ ಟೊಣಪೆ ಮತ್ತು ಹಣಮಂತ ಮಡಿವಾಳ ಇಬ್ಬರು 108 ವಾಹನದಲ್ಲಿ ಹಾಕಿಕೊಂಡು ಹೋದರು ನಂತರ 8.30 ಪಿ.ಎಂ ಸುಮಾರಿಗೆ ಹುಲಕಲ್ ಹತ್ತಿರ ಹೋಗುತ್ತಿದ್ದಾಗ ವಸಂತನು ತನಗಾದ ಗಾಯಪೆಟ್ಟುಗಳಿಂದ ಮೃತಪಟ್ಟಿದ್ದರಿಂದ ಮೃತ ದೇಹವನ್ನು ಮರಳಿ ಶಹಾಪುರ ಸರಕಾರಿ ಆಸ್ಪತ್ರೆಗೆ ತಂದಿದ್ದು ಇರುತ್ತದೆ.
    ಕಾರಣ ಈ ಅಪಘಾತಕ್ಕೆ ಕಾರಣನಾದ ಟಂ.ಟಂ. ಅಟೋ.ನಂ. ಕೆಎ-32 ಸಿ-5591 ನೇದ್ದರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಹೇಳಿಕೆಯೊಂದಿಗೆ 10.00 ಪಿ.ಎಂ.ಕ್ಕೆ ಠಾಣೆಗೆ ಬಂದು ಸದರ ಫಿಯರ್ಾದಿ ಸಾರಾಂಶದ ಮೇಲಿಂದ  ಠಾಣೆ ಗುನ್ನೆ.ನಂ.225/2019 ಕಲಂ 279, 337, 304(ಎ) ಐಪಿಸಿ ಸಂಗಡ 187 ಐ.ಎಂ.ವಿ ಯಾಕ್ಟ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 96/2019  ಕಲಂ: 143, 147, 323, 354, 504, 506 ಸಂ.149 ಐಪಿಸಿ:-ದಿನಾಂಕ 30/08/2019 ರಂದು 07.45 ಎ.ಎಂ ಕ್ಕೆ ಅಜರ್ಿದಾರರಾದ ಶ್ರೀಮತಿ. ಹೇಮಲಿಬಾಯಿ ಗಂಡ ಗೋಪಾಲ ಚವ್ಹಾಣ ವಯಾ:50 ವರ್ಷ ಉ:ಕೂಲಿ ಜಾ: ಲಂಬಾಣಿ ಸಾ: ಚಂದಾಪೂರ ಕೆಳಗಿನ ತಾಂಡಾ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಅಜರ್ಿ ನಿಡಿದ್ದು, ಸದರ ಅಜರ್ಿಯ ಸಾರಂಶವೆನಂದರೆ, ದಿನಾಂಕ:27/08/219 ರಂದು ಸಾಯಂಕಾಲ 06.45 ಗಂಟೆಯ ಸುಮಾರಿಗೆ ನಾನು ನನ್ನ ಗಂಡ ಗೋಪಾಲ ಇಬ್ಬರು ನಮ್ಮ ಬಾವನ ಮಕ್ಕಳಾದ ತಿಪ್ಪಣ್ಣ ತಂದೆ ಧರ್ಮಣ್ಣ, ಸೊಸೆಯಾದ ಸುನಿತಾಬಾಯಿ ಗಂಡ ತಿಪ್ಪಣ್ಣ ಎಲ್ಲರೂ ಮಾತಾಡುತ್ತಾ ಕುಳಿತುಕೊಂಡಿದ್ದಾಗ, ನಮ್ಮ ತಾಂಡಾದ ಶಿವು ತಂದೆ ಗಂಗಾರಾಮ ಈತನು ವಿಷ ಕುಡಿದು ಸಾಯುತ್ತೇನೆ ಅಂತಾ ಅನ್ನುತ್ತಾ ನಮ್ಮ ಮನೆಯ ಮುಂದಿನಿಂದ ಹೊಲದ ಕಡೆಗೆ ಹೋಗುತ್ತಿದ್ದಾಗ ನಮ್ಮ ಮಗನಾದ ತಿಪ್ಪಣ್ಣ ತಂದೆ ಧರ್ಮಣ್ಣ ಈತನು ಯಾಕೆ ಸಾಯಿತಿನಿ ಅಂತಾ ಹೇಳುತ್ತಿ ಏನಾಗಿದೆ ನಾನು ಕೇಳುತ್ತೇನೆ ನಡೆ ಅಂತಾ ಶಿವಾ ಈತನಿಗೆ ಕರೆದುಕೊಂಡು ಅವರ ಮನೆಯ ಹತ್ತಿರ ಅಂದಾಜು 07.00 ಪಿಎಂ ಸುಮಾರಿಗೆ ಹೋದಾಗ ಶಿವಾನ ತಂದೆಯಾದ 1) ಗಂಗಾರಾಮ ತಂದೆ ಸೋಮಲಾ ಚವ್ಹಾಣ, 2) ದೇವಿಬಾಯಿ ಗಂಡ ಶಿವಾ ಚವ್ಹಾಣ 3) ಧರ್ಮಣ್ಣ ತಂದೆ ಸೋಮಲು ರಾಠೋಡ 4) ರೇಣುಕಾ ಗಂಡ ಧರ್ಮಣ್ಣ ರಾಠೋಡ 5) ಸೋಮ್ಲಾ ತಂದೆ ವಾಲು ರಾಠೋಡ ಇವರುಗಳು ಕೂಡಿ ಬಂದು, ಗಂಗಾರಾಮ ಈತನು ನಮ್ಮ ಸಂಸಾರದ ವಿಷಯದಲ್ಲಿ ನೀವು ಯಾಕ ಅಡ್ಡ ಬಂದಿರಿ ಸೂಳೆ ಮಕ್ಕಳೆ ಅಂತಾ ಬೈಯತೊಡಗಿದರು, ಆಗ ನಮ್ಮ ಮಗ ತಿಪ್ಪಣ್ಣ ಈತನು ನಮಗೆ ಯಾಕೆ ಬೈಯುತ್ತಿ ಅಂತಾ ಗಂಗಾರಾಮನಿಗೆ ಕೇಳಿದಾಗ ಗಂಗಾರಾಮ ಮತ್ತು ಧರ್ಮಣ್ಣ ಇವರುಗಳು ಕೂಡಿ ತಿಪ್ಪಣ್ಣನಿಗೆ ಕೈಯಿಂದ ಹೊಡೆಯತೊಡಗಿದರು, ಆಗ ನಾನು ಮತ್ತು ನನ್ನ ಸೊಸೆ ಸುನಿತಾಬಾಯಿ ಇಬ್ಬರು ಬಿಡಿಸಿಕೊಳ್ಳಲು ಹೊದಾಗ ಶಿವಾ ಈತನು ನನ್ನ ಸೊಸೆಗೆ ದಬ್ಬಿಕೊಟ್ಟು ನಡೆ ರಂಡಿ ನೀನ್ಯಾಕ ಅಡ್ಡ ಬಂದಿದಿ ಅಂತಾ ಬೈಯ್ದಿರುತ್ತಾನೆ. ಗಂಗಾರಾಮ ಈತನು ನನ್ನ ಮಾನ ಹಾನಿ ಮಾಡುವ ಉದ್ದೇಶದಿಂದ ನನಗೆ ಕೈಯಿ ಹಿಡಿದು ಎಳೆದು ಬೋಸಡಿ ಅಂತಾ ಅವಾಚ್ಯವಾಗಿ ಬೈದಿರುತ್ತಾನೆ. ರೇಣುಕಾ ಗಂಡ ಧರ್ಮಣ್ಣ ಮತ್ತು ಸೋಮ್ಲಾ ತಂದೆ ವಾಲು, ಇವರುಗಳು ನನ್ನ ಸೊಸೆಗೆ ಮತ್ತು ನನಗೆ ರಂಡಿ ಬೋಸಡಿ ಅಂತಾ ಬೈದಿರುತ್ತಾರೆ. ಅಷ್ಟರಲ್ಲಿ ಪರಶುರಾಮ ತಂದೆ ಸಕ್ರು ರಾಠೊಡ ಮತ್ತು ಶಾಂತಿಬಾಯಿ ಗಂಡ ರೇವು ನಾಯಕ ಚವ್ಹಾಣ ಇವರುಗಳು ಬಿಡಿಸಿಕೊಂಡರು. ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದರು. ಆಗ ಎಲ್ಲರೂ ಮಕ್ಕಳೆ ಇವತ್ತು ಉಳದಿರಿ ಇನ್ನೊಮ್ಮೆ ನಮ್ಮ ಸಂಸಾರದ ವಿಷಯದಲ್ಲಿ ಅಡ್ಡ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ. ನಾನು ನಮ್ಮ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ:30/08/2019 ರಂದು ಠಾಣೆಗೆ ಬಂದು ದೂರು ಅಜರ್ಿ ನೀಡಿರುತ್ತೇನೆ. ಕಾರಣ ನಾವು ವಿಷ ಕುಡಿಯುತ್ತಿನಿ ಅಂತಾ ಶಿವು ಈತನು ಅಂದದ್ದಕ್ಕೆ ಮಾತನಾಡಿಸಿದರೆ, ನಮಗೆ ಅವಾಚ್ಯವಾಗಿ ಬೈಯ್ದು, ಕೈಯಿಂದ ಹೊಡೆದು, ನನಗೆ ಮಾನ ಹಾನಿ ಮಾಡುವ ಉದ್ದೇಶದಿಂದ ಕೈ ಹಿಡಿದು ಎಳೆದು, ನನಗೆ ನಮ್ಮ ಸೊಸೆ, ಮಕ್ಕಳಿಗೆ ಹೊಡೆದು ನಮಗೆ ಜೀವದ ಭಯ ಹಾಕಿದ ಮೇಲಿನ 6 ಜನರ ಮೇಲೆ ಕಾನೂನು ಕ್ರಮ ಜರುಗಿಸ ಬೇಕು ಅಂತಾ ವಿನಂತಿ. ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 96/2019 ಕಲಂ: 143, 147, 323, 354, 504, 506 ಸಂ.149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
                                                                                          
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 54/2019  ಕಲಂ 279,  338 ಐಪಿಸಿ  ಸಂ.187 ಐಎಂವಿ ಆ್ಯಕ್ಟ್:- ದಿನಾಂಕ 30/08/2019 ರಂದು ಬೆಳಿಗ್ಗೆ 7-45 ಎ.ಎಂ.ಕ್ಕೆ  ಪಿಯರ್ಾದಿ ಶ್ರೀಮತಿ  ಸಪ್ನಾ ಗಂಡ ಹರೀಶ್ ರಾಠೋಡ ವಯ;25 ವರ್ಷ, ಜಾ;ಲಂಬಾಣಿ, ಉ;ಮನೆಗೆಲಸ, ಸಾ;ಗಾಂಧಿನಗರ ತಾಂಡ, ಯಾದಗಿರಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ತಮ್ಮದೊಂದು ಹೇಳಿಕೆ ಫಿಯರ್ಾದು ನೀಡಿದ್ದರ ಸಾರಾಂಶವೇನೆಂದರೆ ನಾನು ಮನೆ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಮ್ಮದೇ ಆದ ಕ್ರೂಜರ್ ಜೀಪ್ ನಂಬರ ಕೆಎ-36, ಎಮ್-2960  ನೇದ್ದು ಇರುತ್ತದೆ. ಈ ಕ್ರೂಜರ್ ಜೀಪನ್ನು ನನ್ನ ಗಂಡನಾದ ಹರೀಶ್ ಈತನು ನಡೆಸಿಕೊಂಡು ಬರುತ್ತಿದ್ದು ದಿನಾಲು ಯಾದಗಿರಿಯಿಂದ ವಾಡಿಗೆ, ವಾಡಿಯಿಂದ ಯಾದಗಿರಿಗೆ  ಪ್ಯಾಸೆಂಜರ ಬಿಡುವುದು, ತರುವುದು ಮಾಡುತ್ತಾ  ಜೀಪನ್ನು ಈತನೇ ಚಾಲನೆ ಮಾಡಿಕೊಂಡು ಬಂದಿರುತ್ತಾನೆ. ಹೀಗಿದ್ದು ಇಂದು ದಿನಾಂಕ 29/08/2019 ರಂದು ಬೆಳಿಗ್ಗೆ ಸುಮಾರಿಗೆ ಎಂದಿನಂತೆ ನನ್ನ ಗಂಡನು ನಮ್ಮ ಜೀಪನ್ನು ತೆಗೆದುಕೊಂಡು ಹೋಗಿದ್ದು ಇರುತ್ತದೆ. ರಾತ್ರಿ ಅಂದಾಜು 11-15 ಪಿ.ಎಂ. ಸುಮಾರಿಗೆ ನಾನು  ಮತ್ತು ನನ್ನ ಮಾವನವರಾದ ಶ್ರೀ ಗಂಗಾರಾಮ ತಂದೆ ಉಮ್ಲಾ ರಾಠೋಡ ಹಾಗೂ ನಮ್ಮ ಭಾವನವರಾದ ಶ್ರೀ ವೆಂಕಟೇಶ ತಂದೆ ಗಂಗಾರಾಮ ಇವರು ನಮ್ಮ ಮನೆಯಲ್ಲಿದ್ದಾಗ ನನ್ನ ಭಾವ ವೆಂಕಟೇಶ ಇವರ ಮೊಬೈಲ್ ನಂಬರಿಗೆ ನಮ್ಮ ಸಂಬಂಧೀಯಾದ ಮಹೇಂದ್ರ ತಂದೆ ಮೋಹನ ಪವಾರ್ ಸಾ;ಗಾಂಧಿನಗರ ತಾಂಡ ಯಾದಗಿರಿ ಈತನು ತಿಳಿಸಿದ ವಿಷಯವನ್ನು ವೆಂಕಟೇಶ ಈತನು ನಮಗೆ ತಿಳಿಸಿದ್ದೇನೆಂದರೆ ಮಹೇಂದ್ರ ಈತನು ಅಲ್ಲಿಪುರ ತಾಂಡಾದಿಂದ ಯಾದಗಿರಿಗೆ ತನ್ನ ಮೋಟಾರು ಸೈಕಲ್ ಮೇಲೆ ಬರುವಾಗ ಮಾರ್ಗ ಮದ್ಯೆ  ವಾಡಿ-ಯಾದಗಿರಿ  ಮುಖ್ಯ ರಸ್ತೆ ಮೇಲೆ ಬರುವ ಆರ್ಯಭಟ್ಟ ಶಾಲೆಯ ಹತ್ತಿರ ತನ್ನ  ಮುಂದೆ ಯಾದಗಿರಿ ಕಡೆಗೆ ಹೊರಟಿದ್ದ ಕ್ರೂಜರ್ ಜೀಪ್ ನಂಬರ ಕೆಎ-36, ಎಮ್-2960 ನೇದ್ದಕ್ಕೆ ತಾನು ನೋಡು ನೋಡುತ್ತಿದ್ದಂತೆ ಯಾದಗಿರಿ ಕಡೆಯಿಂದ ವಾಡಿ ಕಡೆಗೆ ಹೊರಟಿದ್ದ ಒಂದು ಲಾರಿ ಟ್ಯಾಂಕರ್ ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೆ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು  ಕ್ರೂಜರ್ ಜೀಪ್ ನೆದ್ದಕ್ಕೆ ಡಿಕ್ಕಿಕೊಟ್ಟು ಅಪಘಾತ ಮಾಡಿದಾಗ ಅಪಘಾತದ ರಭಸಕ್ಕೆ ಕ್ರೂಜರ್ ಜೀಪ್ ರಸ್ತೆಯ ಬದಿಗೆ ಇರುವ ತಗ್ಗಿನಲ್ಲಿ ಹೋಗಿ ಬಿದ್ದಿತು ಆಗ ತಾನು ಮೋಟಾರು ಸೈಕಲ್ ನಿಲ್ಲಿಸಿ ಜೀಪ್ ಹತ್ತಿರ ಹೋಗಿ ನೋಡಲಾಗಿ ಜೀಪಿನಲ್ಲಿ ಜನರು ಯಾರು ಇರಲಿಲ್ಲ ಚಾಲಕ ಮಾತ್ರ ಇದ್ದು ಆತ ನಮ್ಮ ಸಂಬಂಧಿ ಹರೀಶ್ ತಂದೆ ಗಂಗಾರಾಮ ರಾಠೋಡ ಈತನು ಇದ್ದು ಸದರಿ ಅಪಘಾತದಲ್ಲಿ ಈತನಿಗೆ ತಲೆಯ ಎಡಭಾಗಕ್ಕೆ ಭಾರೀ ರಕ್ತಗಾಯ, ಎಡಗಣ್ಣಿನ ಹತ್ತಿರ, ತುಟಿಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಅಲ್ಲದೇ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದು  ಅಪಘಾತ ಪಡಿಸಿದ ಲಾರಿ ಟ್ಯಾಂಕರ್ ಸ್ಥಳದಲ್ಲಿದ್ದು ಅದರ ನಂಬರ ಕೆಎ-51, 7209 ನೇದ್ದು ಇದ್ದು ಅದರ ಚಾಲಕ ನಮ್ಮನ್ನು ನೋಡಿ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಆತನನ್ನು ನಾನು ಮತ್ತೆ ನೋಡಿದರೆ ಗುತರ್ಿಸುತ್ತೇನೆ ಈ ಅಪಗಾತವು ಇಂದು ದಿನಾಂಕ 29/08/2019 ರಂದು ರಾತ್ರಿ 11 ಪಿ.ಎಂ. ಸುಮಾರಿಗೆ ಜರುಗಿದ್ದು ಅದೇ ವೇಳೆಗೆ ಯಾದಗಿರಿ ಜಿಲ್ಲೆ ಪೊಲೀಸ್ ಹೈವೆ ಪೆಟ್ರೋಲ್ ವಾಹನ ಘಟನಾ ಸ್ಥಳಕ್ಕೆ ಬಮದು ನಮಗೆ ವಿಚಾರಿಸಿ ನಂತರ  ಸ್ಥಳಕ್ಕೆ 108 ಅಂಬುಲೆನ್ಸ್ ಕರೆಯಿಸಿ ಹರೀಶ್ ಈತನಿಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕಳಿಸಿಕೊಡುತ್ತಿದ್ದು ತಾನು ಕೂಡ ಅಂಬುಲೆನ್ಸ್ ನಲ್ಲಿ ಹರೀಶ್ ಈತನ ಸಂಗಡ ಬರುತ್ತಿದ್ದು ನೀವುಗಳು ಕೂಡಲೇ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬರಬೇಕು ಅಂತಾ ತಿಳಿಸಿರುತ್ತಾನೆ ಆಗ ನಮಗೆ ಗಾಬರಿಯಾಗಿ ನಡೀರಿ ನಾವು ಕೂಡಲೇ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಹೋಗೋಣ ಅಂತಾ ತಯಾರಾಗಿ ಎಲ್ಲರೂ ಸೇರಿಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಗಂಡನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅರೆ ಪ್ರಜ್ಞಾವಸ್ಥೆಯಲ್ಲಿದ್ದು  ನಮಗೆ ಮಹೇಂದ್ರ ಈತನು ಈ ಮೇಲೆ ತಿಳಿಸಿದಂತೆ ಘಟನೆ ಜರುಗಿದ್ದು ನಿಜವಿರುತ್ತದೆ. ಸದರಿ ಘಟನೆಯ ಬಗ್ಗೆ ಮನೆಯ ಹಿರಿಯರಲ್ಲಿ ವಿಚಾರಿಸಿ ಬೆಳಿಗ್ಗೆ ಕೇಸು ಕೊಡುವ ಬಗ್ಗೆ ತಿಳಿಸುವುದಾಗಿ ಯಾದಗಿರಿ ಸಂಚಾರಿ ಪೊಲಿಸರು ಆಸ್ಪತ್ರೆಗೆ ಬಂದಾಗ ಅವರಿಗೆ ಹೇಳಿದ್ದು ಇರುತ್ತದೆ. ನನ್ನ ಗಂಡನಿಗೆ ಯಾದಗಿರಿಯ ಸಕರ್ಾರಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಗೆ ಕಳಿಸಿದ್ದು ಇರುತ್ತದೆ.        ಹೀಗಿದ್ದು ಈ ಘಟನೆ ಬಗ್ಗೆ ನಮ್ಮ ಮನೆಯಲ್ಲಿನ  ಹಿರಿಯರು ಕೇಸು ಕೊಡು ಅಂತಾ ಹೇಳಿ ಕಳಿಸಿದ್ದರಿಂದ ನಾನು ಇಂದು ದಿನಾಂಕ 30/08/2019 ರಂದು ಬೆಳಿಗ್ಗೆ ತಡವಾಗಿ ನಿಮ್ಮ ಠಾಣೆಗೆ ನಾನು ಖುದ್ದಾಗಿ ಹಾಜರಾಗಿ ನನ್ನ ಹೇಳಿಕೆಯನ್ನು ನೀಡುತ್ತಿದ್ದು ನನ್ನ ಗಂಡನು ನಡೆಸುತ್ತಿದ್ದ ಕ್ರೂಜರ್ ಜೀಪ್ ನಂಬರ ಕೆಎ-36, ಎಮ್-7209 ನೇದ್ದಕ್ಕೆ ಲಾರಿ ಟ್ಯಾಂಕರ್ ನಂಬರ ಕೆಎ-51, 7209 ನೆದ್ದರ  ಚಾಲಕ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಘಟನೆ ಜರುಗಿದ್ದು ಮತ್ತು ಅಪಘಾತ ಪಡಿಸಿ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಆತನ ಮೇಲೆ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 54/2019 ಕಲಂ 279, 338 ಐಪಿಸಿ ಸಂಗಡ 187 ಐಎಂವಿ ಆ್ಯಕ್ಟ್  ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.  

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 100/2019 ಕಲಂ: 279,337.338,304 (ಎ) ಐಪಿಸಿ:-ದಿನಾಂಕ: 30.08.2019  ರಂದು 05.45 ಪಿಎಮ್ಕ್ಕೆ ಶ್ರೀ ಕೊದಂಡರಾಜು  ತಂದೆ ವಾಸುದೇವ ನಾಯಕ ದೊರಿ ವಯಾ|| 38 ಜಾ|| ಬೇಡರ ಉ|| ಒಕ್ಕಲುತನ ಸಾ|| ಪರಸನಳ್ಳಿ ತಾ: ಸುರಪೂರ  ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನೆಂದರೆ, ಇಂದು ದಿನಾಂಕ 30.08.2019  ರಂದು ಪಿರ್ಯಾದಿ ಇತರೇ ಸಾರ್ವಜನಿಕರೊಂದಿಗೆ ಶಹಾಪೂರದಿಂದ ಕೆಂಭಾವಿಗೆ ಬರುವ ಕುರಿತು 04.15 ಪಿ.ಎಮ್ ಕಕೆ ಬಸ್ ನಂ ಕೆ.ಎ.33/ಎಪ್-0224 ನೇದ್ದರಲ್ಲಿ ಶಹಾಪೂರದಿಂದ ಕೆಂಭಾವಿಗೆ ಬರುತ್ತಿದ್ದಾಗ ಶಹಾಪೂರ-ಸಿಂದಗಿ ಮುಖ್ಯ ರಸ್ತೆಯ ಹಮೀದಸಾಬ ನಾಯ್ಕೋಡಿ ಇವರ ಹೋಲದ ಹತ್ತಿರ ಆರೋಪಿತನು ತನ್ನ ಬಸ್ ನಂ ಕೆ.ಎ.33/ಎಪ್-0224 ನೇದ್ದನ್ನು ಅತಿವೇಗ  ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಒಮ್ಮೇಲೆ ಬಲಭಾಗಕ್ಕೆ ಕಟ್ ಮಾಡಿದಾಗ ಸದರಿ ಬಸ್ಸಿನ ಜ್ವಾಂಟ್ ಕಟ್ಟಾಗಿ ಬಸ್ಸು ಎರಡು ಪಲ್ಟಿಯಾಗಿ ಬಿದ್ದಿದ್ದು ಸದರಿ ಬಸ್ಸಿನಲ್ಲಿದ್ದ ನನಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲ ಆದರೇ ಸದರಿ ಬಸ್ಸಿನಲ್ಲಿದ್ದ 1) ಕೆಂಚಪ್ಪ ತಂದೆ ಭೀಮರಾಯ ಪೂಜಾರಿ ಸಾ; ಯಾಳಗಿ ಈತನಿಗೆ ಬಲಮೇಲಕಿನ ಮೇಲೆ ಬಾರೀ ರಕ್ತಗಾಯ ಮೂಗಿಗೆ ಮತ್ತು ಬಾಯಿಗೂ ಸಹ ಭಾರೀ ರಕ್ತಗಾಯ ಆಗಿ ತಲೆಗೆ ರಕ್ತಗಾಯ ಆಗಿ ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಬರುತ್ತಿರುವಾಗ ದಾರಿ ಮದ್ಯೆ ಮೃತಪಟ್ಟಿರುತ್ತಾನೆ ಅದರಂತೆ ಪದ್ಮಾವತಿ @ ಪೆದ್ದಮ್ಮ ಗಂಡ ಶಿವಮಾನಯ್ಯ ಇವಳಿಗೆ ತಲೆಗೆ ಬಾರೀ ಗುಪ್ತಗಾಯ ಆಗಿದ್ದು ಸದರಿಯವಳನ್ನು 108 ವಾಹನದ ಮೂಲಕ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಪುರಕ್ಕೆ ತಂದು ಸೇರಿಕೆ ಮಾಡುವಷ್ಟರಲ್ಲಿ ಸದರಿ ಎರಡು ಜನರು ಮೃತಪಟ್ಟಿದ್ದು ಇರುತ್ತದೆ. ಅಲ್ಲದೇ ಸದರಿ ಬಸ್ ಚಾಲಕ ದಾವಲಸಾಬ ತಂದೆ ಖಾಸಿಮಸಾಬ ಯರಗಲ್ ಈತನಿಗೆ ಸಹ ಹಣೆಗೆ, ಗದ್ದಕ್ಕೆ, ಎಡಕೈ ಮಣಕಟ್ಟಿಗೆ ಭಾರೀ ರಕ್ತಗಾಯಾಗಿ ಮುರಿದಂತೆ ಆಗಿದ್ದು, ಹಾಗೂ ಬಲಗೈ ತೋರು ಬೆರಳು ಕತ್ತರಿಸಿದ್ದು ಎದೆಗೆ ಭಾರೀ ರಕ್ತಗಾಯ ಆಗಿರುತ್ತದೆ. ಸದರಿವನಿಗೂ ಸಹ ಸರಕಾರಿ ಆಸ್ಪತ್ರೆ ಶಹಾಪುರಕ್ಕೆ ಕರೆದುಕೊಂಡು ಹೊಗುವಷ್ಟರಲ್ಲಿ ದಾರಿ ಮದ್ಯ ಮೃತಪಟ್ಟಿರುತ್ತಾನೆ. ಅಲ್ಲದೇ ಸದರಿ ಅಪಘಾತದಲ್ಲಿ ಸುಮಾರು 8-9 ಜನರಿಗೂ ಸಹ ಭಾರೀ ಹಾಗೂ ಸಾದಾ ರಕ್ತಗಾಯಗಳು ಆಗಿದ್ದು ಇರುತ್ತದೆ. ಸದರಿ ಘಟನೆಗೆ ಕೆ.ಎಸ್.ಆರ್.ಟಿ.ಸಿ ಬಸ್ ನಂಬರ ಕೆಎ-33/ಎಪ್-0224  ನೇದ್ದರ ಚಾಲಕ ಮೃತ ದಾವಲಸಾಬ ತಂದೆ ಖಾಸಿಮಸಾಬ ಯರಗಲ್ ಸಾ; ಮುದನೂರ(ಬಿ) ಈತನ ಅತೀವೇಗ ಹಾಗು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 100/2019 ಕಲಂ 279,337.338.304[ಎ] ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!