ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 29-08-2019

By blogger on ಗುರುವಾರ, ಆಗಸ್ಟ್ 29, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 29-08-2019

ಯಾದಗಿರಿ ನಗರ ಪೊಲೀಸ್ ಠಾಣೆ :- ಗುನ್ನೆ ನಂಬರ 70/2019 ಕಲಂ.341,323,332,353,504,506 ಐಪಿಸಿ ಮತ್ತು 3(1)ಆರ್.ಎಸ್ ಎಸ್.ಸಿ/ಎಸ್.ಟಿ ಪಿಎ ಆ್ಯಕ್ಟ-1989:- ದಿನಾಂಕ.29/08/2019 ರಂದು 2-30 ಪಿಎಂಕ್ಕೆ ಅಜರ್ಿದಾರರಾದ ಶ್ರೀ ವಿಠೋಭಾ ಸಿಹೆಚ್.ಸಿ.86 ಯಾದಗಿರಿ ನಗರ ಪೊಲೀಸ್ ಠಾಣೆ ಮಾನ್ಯರಲ್ಲಿ ಸಲ್ಲಿಸುವ ದೂರು ಅಜರ್ಿ ಏನೆಂದರೆ, ನಾನು ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ನಾಲ್ಕು ವರ್ಷಗಳಿಂದ ಪೊಲೀಸ್ ಮುಖ್ಯಪೇದೆ ಅಂತಾ ಅಪರಾದ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ಯಾದಗಿರಿ ನಗರ ಠಾಣೆಯ ರೌಡಿಶೀಟರನಾದ ವಿಶ್ವನಾಥ ತಂ. ದೊಡ್ಡಪ್ಪಗೌಡ ಸಾಃ ಪಟೇಲವಾಡಿ ಯಾದಗಿರಿ ಈತನು ನನಗೆ ನಾಲ್ಕು ವರ್ಷಗಳಿಂದ ಪರಿಚಯವಿದ್ದು ಅವನಿಗೆ ನನ್ನ ಹೆಸರು ವಿಳಾಸ ಜಾತಿ ಬಗ್ಗೆ ಗೊತ್ತಿರುತ್ತದೆ. ಹೀಗಿದ್ದು ನಿನ್ನೆ ದಿನಾಂಕ.28/08/2019 ರಂದು ನಾನು ಯಾದಗಿರಿ ನಗರದಲ್ಲಿ ಮಾನ್ಯರವರ ಆಧೇಶದಂತೆ ಕರ್ತವ್ಯದಲ್ಲಿ ಪೆಟ್ರೊಲಿಂಗ ಮಾಡುತ್ತಾ ಗಾಂಧಿಚೌಕದ ನ್ಯಾಶನಲ್ ಹೊಟೆಲ್ ಮುಂದೆ ರಾತ್ರಿ 8:00 ಗಂಟೆ ಸುಮಾರಿಗೆ ಬಂದಾಗ ಅಲ್ಲಿ ನಮ್ಮ ಠಾಣೆಯಲ್ಲಿಯ ರೌಡಿಶೀಟರನಾದ ವಿಶ್ವನಾಥ ತಂ. ದೊಡ್ಡಪ್ಪಗೌಡ ಸಾಃ ಪಟೇಲವಾಡಿ ಯಾದಗಿರಿ ಈತನು ನನಗೆ ಏರು ದ್ವನಿಯಲ್ಲಿ ಏನು ಮಾಡುತ್ತಿರುವೆ ವಿಠ್ಠಲ್ ಯಾದಗಿರದಲ್ಲಿ ನಿಮ್ಮ ಪೊಲೀಸ ಸೂಳೆಮಕ್ಕಳದು ಬಹಳವಾಗಿದೆ ಅಂತಾ ಬೈದನು. ಆಗ ನಾನು ಏಕೆ ವಿನಾಃ ಕಾರಣ ಬೈಯುತ್ತಿ ಸೀದಾ ಮಾತನಾಡು ನಾನು ಕರ್ತವ್ಯದ ಮೇಲಿದ್ದೆನೆ ನಾನು ಹೋಗಬೇಕು ನನ್ನ ಜೊತೆ ಯಾಕೆ ಕಿರಿಕಿರಿ ಮಾಡುತ್ತಿರುವಿ ಅಂತಾ ಹೇಳಿದಾಗ  ಅವನು ನನಗೆ, ನಿನಗೇನು ಸೀದಾ ಮಾತನಾಡುವುದು ಮಗನೇ ನೀನೇನು ದೊಡ್ಡ ಡ್ಯೂಟಿ ಮಾಡುತ್ತಿ ನೀ ಹೊಲ್ಯಾ ಸೂಳೆ ಮಗನೇ ಇದ್ದಿ ನನಗೆ ಗೊತ್ತಿದೆ ನಾನು ಈ ಏರಿಯಾದ ದಾದಾ ಇದ್ದು ನನಗೆ ತೀರುಗಿ ಮಾತನಾಡುತ್ತಿ ಅಂದಾಗ, ಆಗ ನಾನು ಕರ್ತವ್ಯಕ್ಕೆ ಹೋಗಬೆಕೆನ್ನುತ್ತಿದ್ದಾಗ ಎಲ್ಲಿ ಹೋಗುತ್ತಿ ನಿಲ್ಲು ಮಗನೆ ಅಂತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದು ನನಗೆ ತಡೆದು ನಿಲ್ಲಿಸಿ ಜಗ್ಗಾಡಿ ಕೈ ಮುಷ್ಠಿ ಮಾಡಿ ಹೊಟ್ಟೆಗೆ ಹೊಡೆದು ಬಾರಿ ಗುಪ್ತಪೆಟ್ಟು ಮಾಡಿ, ಕಾಲಿನಿಂದ ಒದ್ದನು. ನಂತರ ಲೇ ಹೊಲ್ಯಾ ಸೂಳೇ ಮಗನೇ ನಿನ್ನದು ಬಹಳ ಆಗಿದೆ ನನ್ನ ಮಾತು ಕೇಳುವುದಿಲ್ಲಾ ಇವತ್ತು ನಿನ್ನನ್ನು ಜೀವದಿಂದ ಬಿಡುವುದಿಲ್ಲಾ ಅಂತಾ ಜೀವ ಬೆದರಿಕೆ ಹಾಕುತ್ತ ಒದರಾಡತೊಡಗಿದನು ಅಲ್ಲೆ ಜಗಳವನ್ನು ನೋಡುತ್ತಿದ್ದ ಮಲ್ಲು ಪೂಜಾರಿ, ಶಾಮಸುಂದರ ತಂದೆ ಸುರೇಶ ರವರು ಹಾಗೂ ಅಷ್ಟರಲ್ಲಿ ಅಲ್ಲಿಗೆ ಬಂದ ನಮ್ಮ ಠಾಣೆಯ ಸಿಬ್ಬಂದಿ ಜನರಾದ ಶಿವಶಂಕರ ಹೆಚ್.ಸಿ. 175, ಸಾಬರೆಡ್ಡಿ ಪಿಸಿ-379 ರವರು ಬಂದು ಜಗಳಾ ಬಿಡಿಸಿದ್ದು ಇರುತ್ತದೆ. ಕಾರಣ ಸದರಿ ವಿಶ್ವನಾಥ ತಂದೆ ದೊಡ್ಡಪ್ಪಗೌಡ ಈತನು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೈಯಿಂದ ಹೊಟ್ಟೆಗೆ ಹೊಡೆದು ಬಾರೀ ಗುಪ್ತಪೆಟ್ಟುಪಡಿಸಿ ಜಾತಿ ನಿಂದನೆ ಮಾಡಿ, ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಬಗ್ಗೆ ನಮ್ಮ ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಅಜರ್ಿ ಕೊಟ್ಟಿದ್ದು ಕಾರಣ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.70/2019 ಕಲಂ.332,353,341,323,504,506, ಐಪಿಸಿ ಮತ್ತು 3(1)ಆರ್.ಎಸ್ ಎಸ್.ಸಿ/ಎಸ್.ಟಿ ಪಿಎ ಆ್ಯಕ್ಟ-1989 ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
  
ಗುರಮಠಕಲ್ ಪೊಲೀಸ್ ಠಾಣೆ :- ಗುನ್ನೆ ನಂಬರ 142/2019 ಕಲಂ: 279, 337, 338 ಐಪಿಸಿ ಸಂ. 187ಐ.ಎಂ.ವಿ ಆಠ್ಟಿ್:- ದಿನಾಂಕ 28.08.2019 ರಂದು ಬೆಳಿಗ್ಗೆ 10.30 ರಿಂದ 11.45 ರ ಅವಧಿಯಲ್ಲಿ ಪಿರ್ಯಾಧಿ ಮತ್ತು ಆತನ ಮಗ ಇಬ್ಬರೂ ಕೂಡಿಕೊಂಡು ತಮ್ಮ ಮೋಟರ ಸೈಕಲ ನಂ. ಕೆಎ-33-ಡಬ್ಲು-5294 ನೆದ್ದರಲ್ಲಿ ಕುಳಿತುಕೊಂಡು ಗಂಗಾ ಕಲ್ಯಾಣ ಯೋಜನೆಯಲ್ಲಿ ಮಂಜೂರಾದ ಮೋಟರ ತರಲು ಯಾದಗಿರಿಗೆ ಹೋಗುತ್ತಿದ್ದಾಗ ಪಸಪೂಲ ಗೇಟಗೆ ತಿರುವಿನಲ್ಲಿ ಯಾದಗಿರಿ ಕಡೆಯಿಂದ ಬರುತ್ತಿದ್ದ  ಕಾರ ನಂ. ಕೆಎ-33-ಎಂ-1767 ನೆದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟರ ಸೈಕಲಗೆ ಜೋರಾಗಿ ಡಿಕ್ಕಿಕೊಟ್ಟು ಅಪಘಾತಪಡಿಸಿ ಕಾರನ್ನು ಸ್ಥಳದಲ್ಲಿ ನಿಲ್ಲಿಸಿ ಓಡಿ ಹೋಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಪಿರ್ಯಾಧಿಗೆ ಮತ್ತು ಆತನ ಮಗನಿಗೆ ಭಾರಿ ರಕ್ತಗಾಯ ಗುಪ್ತಪೆಟ್ಟಾದ ಬಗ್ಗೆ ಅಪರಾಧ. 

ಗೋಗಿ ಪೊಲೀಸ್ ಠಾಣೆ :- ಗುನ್ನೆ ನಂಬರ 95/2019 ಕಲಂ: 143, 147, 148, 323, 324, 354, 504, 506 ಸಂ.149 ಐಪಿಸಿ:-ದಿನಾಂಕ 29/08/2019 ರಂದು 06.10 ಪಿ.ಎಂ ಕ್ಕೆ ಅಜರ್ಿದಾರರಾದ ಶ್ರೀ. ಗಂಗಾರಾಮ ತಂದೆ ಸೋಮಲಾ ಚವ್ಹಾಣ ವಯಾ: 56 ಉ:ಒಕ್ಕಲುತನ ಜಾ: ಲಂಬಾಣಿ ಸಾ: ಚಂದಾಪೂರ ಕೆಳಗಿನ ತಾಂಡಾ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಅಜರ್ಿ ನಿಡಿದ್ದು, ಸದರ ಅಜರ್ಿಯ ಸಾರಂಶವೆನಂದರೆ, ನಾನು ಗಂಗಾರಾಮ ತಂದೆ ಸೋಮಲಾ ಚವ್ಹಾಣ ವಯಾ: 56 ಉ:ಒಕ್ಕಲುತನ ಜಾ: ಲಂಬಾಣಿ ಸಾ: ಚಂದಾಪೂರ ಕೆಳಗಿನ ತಾಂಡಾ ತಾ: ಶಹಾಪೂರ ಜಿ: ಯಾದಗಿರಿ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುವದೇನಂದರೆ, ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನಾನು ಒಕ್ಕಲುತನ ಜೊತೆಗೆ ಕೆಲವೊಂದು ಸಣ್ಣ ಸಣ್ಣ ಕೆಲಸಗಳನ್ನು ಗುತ್ತಿಗೆ ಹಿಡಿದು ಮಾಡಿಸುತ್ತೇನೆ. ಅದರಿಂದ ಮೇಲಿನ ತಾಂಡಾದ ತಿಪ್ಪಣ್ಣ ತಂದೆ ಧರ್ಮಣ್ಣ ಚವ್ಹಾಣ ಈತನು ನಮ್ಮ ಕೆಲಸ ಈತನು ಮಾಡುತ್ತಿದ್ದಾನೆ ಅಂತಾ ತಿಪ್ಪಣ್ಣ ಮತ್ತು ಅವರ ಮನೆಯವರು ನಮ್ಮ ವಿರುದ್ಧ ಸಿಟ್ಟು ಮಾಡಿಕೊಂಡಿದ್ದರು. ಹೀಗಿದ್ದು, ದಿನಾಂಕ:27/08/219 ರಂದು ಸಾಯಂಕಾಲ 07.00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಸೊಸೆ ದೇವಿಬಾಯಿ ಗಂಡ ಶಿವು ಚವ್ಹಾಣ ವಯಾ:28 ವರ್ಷ ಇಬ್ಬರು ಮನೆಯ ಮುಂದೆ ಮಾತಾಡುತ್ತಾ ಕುಳಿತಿರುವಾಗ ಚಂದಾಪೂರ ಮೇಲಿನ ತಾಂಡಾದವರಾದ 1) ತಿಪ್ಪಣ್ಣ ತಂದೆ ಧರ್ಮಣ್ಣ ಚವ್ಹಾಣ ವ:38 ಜಾ: ಲಂಬಾಣಿ 2) ಕುಮಾರ ತಂದೆ ಧರ್ಮಣ್ಣ ಚವ್ಹಾಣ ವ:32 ಉ: ಕೂಲಿ ಜಾ: ಲಂಬಾಣಿ 3) ಸುನೀತಾವಾಯಿ ಗಂಡ ತಿಪ್ಪಣ್ಣ ಚವ್ಹಾಣ ವ:34 ಉ: ಮನೆಗೆಲಸ 4) ಸವಿತಾ ಗಂಡ ಕುಮಾರ ಚವ್ಹಾಣ ವ:28 5) ಗೋಪಾಲ ತಂದೆ ನಾರಾಯಣ ಚವ್ಹಾಣ ವ:45 ಸಾ: ಎಲ್ಲರೂ ಚಂದಾಪೂರ ಕೆಳಗಿನ ತಾಂಡಾ ತಾ: ಶಹಾಪೂರ ಇವರೆಲ್ಲರೂ ಕೂಡಿ ಬಂದವರೆ, ಒಮ್ಮಿಂದೊಮ್ಮಲೆ ತಿಪ್ಪಣ್ಣ ಮತ್ತು ಕುಮಾರ ಇವರುಗಳು ಸೂಳೆ ಮಗನೆ ಪುನಾದಲ್ಲಿ ಇರಬೇಕು ಇಲ್ಯಾಕ ಬಂದು ನಮಗೆ ಮೂಲ ಆಗಿದೆ, ರಂಡಿ ಮಗನೆ ಅಂತಾ ಅವಾಚ್ಯವಾಗಿ ಬೈದು, ನನಗೆ ಕೈಯಿಂದ ಕಪಾಳಕ್ಕೆ ಮತ್ತು ಹಣೆಗೆ ಹೊಡೆದು ಕೆಳಗೆ ಕೆಡವಿ ಕಾಲಿನಿಂದ ನನ್ನ ಬೆನ್ನಿಗೆ ಒದೆಯುತ್ತಿದ್ದಾಗ, ನನ್ನ ಸೋಸೆಯಾದ ದೇವಿಬಾಯಿ ಇವಳು ಬಿಡಿಸಿಕೊಳ್ಳಲು ಬಂದಗಾ ಗೊಪಾಲ, ಸುನೀತಾಬಾಯಿ ಮತ್ತು ಸವಿತಾ ಇವರುಗಳು ಕೈಯಿಂದ ದೇವಿಬಾಯಿಗೆ ಹೊಡೆಯತೊಡಗಿದರು. ಆಗ ಕುಮಾರ ಈತನು ಒಂದು ಬಡಿಗೆಯಿಂದ ನನ್ನ ಸೊಸೆಯಾದ ದೇವಿಬಾಯಿಗೆ ಎರಡು ತೊಡಗಳಿಗೆ ಹೊಡೆದು ರಕ್ತ ಕಂಡುಗಟ್ಟಿದ ಗುಪ್ತ ಗಾಯ ಮಾಡಿದನು. ಮತ್ತು ಅದೆ ಬಡೆಗಿಯಿಂದ ಕಪಾಳಕ್ಕೆ ಚುಚ್ಚಿ ಬಲ ಕಪಾಳಕ್ಕೆ ತರಚಿದ ರಕ್ತಗಾಯ ಮಾಡಿದನು. ಆಗ ಕುಮಾರ, ಗೊಪಾಲ ಇವರು ಕೂಡಿ ನನ್ನ ಸೊಸೆಗೆ ಮಾನ ಹಾನಿ ಮಾಡುವ ಉದ್ದೇಶದಿಂದ ಕೈ ಹಿಡಿದು ಎಳೆದು, ಕೆಳಗೆ ಕೆಡವಿ ಕಾಲಿನಿಂದ ತೊಡೆಯ ಸಂದಿಗೆ ಒದ್ದಿದ್ದಾರೆ, ಅಷ್ಟರಲ್ಲಿ ಅಲ್ಲಿಗೆ ಬಂದ ಸೊಮ್ಲು ತಂದೆ ವಾಲು ರಾರೋಡ ಮತ್ತು ಧರ್ಮಣ್ಣ ತಂದೆ ಸೋಮ್ಲು ರಾಠೊಡ ಇವರುಗಳು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಆಗ ಮೇಲೆ ಬರೆಯಿಸಿದ ಜನರು ಮಕ್ಕಳೆ ಇನ್ನೊಮ್ಮೆ ನಮ್ಮ ಕೆಲಸಕ್ಕೆ ಅಡ್ಡ ಬಂದರೆ ನಿಮಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ. ನಂತರ ನಾವು ನಮ್ಮ ಸೊಸೆಗೆ ಶಹಾಪೂರ ಆಸ್ಪತ್ರೆಗೆ ದಾಖಲಿಸಿ ಉಪಚಾರ ಮಾಡಿಸಿ, ತದನಂತರ ಕಲಬುರಗಿಯ ಭರತ ಕೋಣಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ಸೇರಿಸಿ ಇಂದು ಠಾಣೆಗೆ ಬಂದಿರುತ್ತೇನೆ. ಕಾರಣ ನಾನು ನಮ್ಮ ತಾಂಡಾಕ್ಕೆ ಬಂದು ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಇರುವದನ್ನು, ಸಹಿಸದ ಮೇಲಿನ 5 ಜನರು ನಮಗೆ ಹೊಡೆ ಬಡೆ ಮಾಡಿ ಬೈದು ನಮ್ಮ ಸೊಸೆಗೆ ಕೈ ಹಿಡಿದು ಎಳೆದು ಕೆಳಗೆ ಕೆಡವಿ ತೊಡಿ ಸಂದಿಗೆ ಒದ್ದು ಗುಪ್ತ ಪೆಟ್ಟು ಮಾಡಿ, ನಮಗೆ ಜೀವದ ಭಯ ಹಾಕಿದ ಮೇಲಿನ 5 ಜನರ ಮೇಲೆ ಕಾನೂನು ಕ್ರಮ ಜರುಗಿಸ ಬೇಕು ಅಂತಾ ವಿನಂತಿ. ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 95/2019 ಕಲಂ: 143, 147, 148, 323, 324, 354, 504, 506 ಸಂ.149 ಐಪಿಸಿ  ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 
 
ಭೀ.ಗುಡಿ ಪೊಲೀಸ್ ಠಾಣೆ :- 100/2019 ಕಲಂ 341, 323, 504, 506 ಸಂಗಡ 34 ಐಪಿಸಿ:- ಅರಳಹಳ್ಳಿ ಸೀಮಾಂತರದಲ್ಲಿರುವ ಸವರ್ೆ ನಂ:16 ರಲ್ಲಿ 15 ಎಕರೆ 03 ಗುಂಟೆ ಹೊಲದ ವಿಷಯದಲ್ಲಿ ಫಿಯರ್ಾದಿ ಮತ್ತು ಆರೋಪಿತರ ನಡುವೆ ತಕರಾರು ಇದ್ದು ಇಂದು ದಿನಾಂಕ:29/08/2019 ರಂದು ಮುಂಜಾನೆ 9.30 ಗಂಟೆ ಸುಮಾರಿಗೆ ಫಿಯರ್ಾದಿ ಮತ್ತು ಅವಳ ಮಗ ಕೂಡಿ ತಮ್ಮ ಹೊಲಕ್ಕೆ ನಡೆದುಕೊಂಡು ಹೊರಟಾಗ ಆರೋಪಿತರು ಬಂದು ತಡೆದು ನಿಲ್ಲಿಸಿ ಲೇ ಭೋಸಡಿ ಮಕ್ಕಳೇ ಈ ನಮ್ಮ ಜಮೀನಿನಲ್ಲಿ ಬಂದರೆ ನಿಮ್ಮಿಬ್ಬರಿಗೆ ಅರಳಹಳ್ಳಿ ಸೀಮೆ ದಾಟಿ ಹೋಗದಂತೆ ಇಲ್ಲೇ ಜಮೀನಿನಲ್ಲೇ ಜೀವಂತ ಕೊಂದು ಹಾಕುತ್ತೇವೆ ಅಂತಾ ಬೈದು ಜೀವದ ಬೆದರಿಕೆ ಹಾಕಿ ಕೈಯಿಂದ ಹೊಡೆಬಡೆ ಮಾಡಿದ ಬಗ್ಗೆ ಫಿಯರ್ಾದಿ ಅಜರ್ಿ. 

ಭೀ.ಗುಡಿ ಪೊಲೀಸ್ ಠಾಣೆ :- 101/2019 ಕಲಂ 279 ಐ.ಪಿ.ಸಿ:- ದಿನಾಂಕ:24/08/2019 ರಂದು ಸಾಯಂಕಾಲ 4.30 ಗಂಟೆ ಸುಮಾರಿಗೆ ಫಿಯರ್ಾದಿಯು ಆರೋಪಿತನ ಕಾರ್ ನಂ:ಎಮ್ಹೆಚ್-14, ಎಫ್.ಸಿ-3682 ನೇದ್ದರಲ್ಲಿ ಕುಳಿತು ಜೇವಗರ್ಿಗೆ, ಅಣಬಿ-ಮುಡಬೂಳ ರೋಡ ಮೇಲೆ ಬಲ ತಿರುವಿನಲ್ಲಿ ವೆಂಕಟರಾಯನ ಹಳ್ಳದ ಹತ್ತಿರ ಹೊರಟಾಗ ಆರೋಪಿ ಅಶೋಕ ಈತನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದ ಕಾರ್ ಚಾಲಕನ ನಿಯಂತ್ರಣ ತಪ್ಪಿ ರೋಡಿನ ಬಲಭಾಗದಲ್ಲಿ ಪಲ್ಟಿಯಾಗಿ ಅಪಘಾತವಾಗಿರುತ್ತದೆ. ಸದರಿ ಅಪಘಾತದಲ್ಲಿ ಯಾರಿಗೂ ಯಾವುದೇ ಗಾಯ ವಗೈರೆ ಆಗಿರುವದಿಲ್ಲ. ಕಾರ್ ಡ್ಯಾಮೇಜ್ ಆಗಿರುತ್ತದೆ. ಕಾರಣ ಸದರಿ ಆರೋಪಿತನ ವಿರುಧ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿಯರ್ಾದಿ 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!